ಹಾಡು : ಬಾರಿಸು ಕನ್ನಡ ಡಿಂಡಿಮವ
ರಚನೆ : ಕುವೆಂಪು
ಗಾಯನ : ಶಿವಮೊಗ್ಗ ಸುಬ್ಬಣ್ಣ
ಓ ಕರ್ನಾಟಕ ಹೃದಯಶಿವ
ಬಾರಿಸು ಕನ್ನಡ ಡಿಂಡಿಮವ
ಸತ್ತಂತಿಹರನು ಬಡಿದೆಚ್ಚರಿಸು
ಕಚ್ಚಾಡುವರನು ಕೂಡಿಸಿ ಒಲಿಸು
ಹೊಟ್ಟೆಯ ಕಿಚ್ಚಿಗೆ ಕಣ್ಣೀರ್ ಸುರಿಸು
ಒಟ್ಟಿಗೆ ಬಾಳುವ ತೆರದಲಿ ಹರಸು
ಬಾರಿಸು ಕನ್ನಡ ಡಿಂಡಿಮವ
ಚೈತ ಶಿವೇತರ ಕೃತಿ ಕೃತಿಯಲ್ಲಿ
ಮೂಡಲಿ ಮಂಗಳ ಮತಿ ಮತಿಯಲ್ಲಿ
ಕವಿ ಋಷಿ ಸಂತರ ಆದರ್ಶದಲಿ
ಸರ್ವೋದಯವಾಗಲಿ ಸರ್ವರಲಿ
ಬಾರಿಸು ಕನ್ನಡ ಡಿಂಡಿಮವ