ಗಜಮುಖದ ಗಣಪ ನೀನೆ
ನಿಜದೈವ ರೂಪ ನೀನೆ
ಈ ಜಗದ ನಾಯಕ ನೀನೆ
ನಿನಗೆ ನನ್ನ ವಂದನೆ ।।ಪ ।।
ನಂದಿ ಬೃಂಗಿ ಷಣ್ಮುಖರಲ್ಲಿ
ಬೆಳೆದೆ ನೀನು ಕೈಲಾಸದಲ್ಲಿ
ವೇದವೆಲ್ಲ ನಿನ್ನ ಮುಖದಲ್ಲಿ
ಬೆಳಗು ನೀನು ಲೋಕದಲ್ಲಿ ।।೧।।
ಭಾರತ ಖಂಡ ದೇವನಾಗಿ
ಅಖಿಲಾಂಡ ನಾಯಕನಾಗಿ ।।೨।।
ಗಜಮುಖದ ಗಣಪ ನೀನೆ
ನಿಜದೈವ ರೂಪ ನೀನೆ
ಈ ಜಗದ ನಾಯಕ ನೀನೆ
ನಿನಗೆ ನನ್ನ ವಂದನೆ ।।ಪ ।।