Tuesday, July 2, 2019

ಬೆಂಕಿಯಲ್ಲಿ ಅರಳಿದ ಹೂ (1983)

ತಾಳಿ ಕಟ್ಟುವ ಶುಭ ವೇಳೆ 

ಚಲನ ಚಿತ್ರ: ಬೆಂಕಿಯಲ್ಲಿ ಅರಳಿದ ಹೂ (1983) 
ನಿರ್ದೇಶನ: ಕೆ. ಬಾಲಚಂದ್ರ
ರಚನೆ: ಚಿ.ಉದಯಶಂಕರ್ 
ಸಂಗೀತ: ಎಂ.ಎಸ್.ವಿಶ್ವನಾಥನ್ 
ಗಾಯನ: ಎಸ್. ಪಿ. ಬಾಲಸುಬ್ರಹ್ಮಣ್ಯಂ
ನಟನೆ: ಸುಹಾಸಿನಿ, ಪವಿತ್ರಾ, ರಾಜೀವ್, ಶರತ್ ಬಾಬು,  ಜೈ ಜಗದೀಶ್ 

ತಾಳಿ ಕಟ್ಟುವ ಶುಭ ವೇಳೆ ಕೈಯಲ್ಲಿ ಹೂವಿನ ಮಾಲೆ
ಹೆ ಹೇ ಹೆ.. ಲ ಲಾ ಲ.. ಹುಂ ಹೂಂ ಹುಂ.. ರ ರಾ ರ..
ತಾಳಿ ಕಟ್ಟುವ ಶುಭ ವೇಳೆ ಕೈಯಲ್ಲಿ ಹೂವಿನ ಮಾಲೆ
ಯಾರಿಗೆ ಯಾರೆಂದು ವಿಧಿ ಬರೆದಿರುವ ಎಂದೋ.. ಹೆ ಹೆ
ಯಾರಿಗೆ ಯಾರೆಂದು ವಿಧಿ ಬರೆದಿರುವ ಎಂದೋ
ತಾಳಿ ಕಟ್ಟುವ ಶುಭ ವೇಳೆ ಕೈಯಲ್ಲಿ ಹೂವಿನ ಮಾಲೆ
ನಾನೊಬ್ಬ ವಿಕಟಕವಿ, ಕೇಳಿ ಈ ಒಂದು ಕಥೆ  
ಒಂದು ದೊಡ್ಡ ಕಾಡು.. ಅಲ್ಲಿ ಒಂದು ದೊಡ್ಡ ಆಲದ ಮರ
ಅಕ್ಕ ತಂಗಿ ಗಿಳಿಗಳು ಎರಡು ಪಕ್ಕದಿ ಕುಳಿತಿರಲು
ರೆಕ್ಕೆಯ ಬಡಿಯುತ ಹಾರುತ ಬಂದವು ಗಿಳಿಗಳು ಇನ್ನೆರಡು
ಅವೆರಡು ಗಂಡು ಗಿಳಿಗಳು.
ತಂಗಿಯ ಅಂದ ಕಂಡ ಗಿಳಿಗಳು ಪ್ರೀತಿಯ ತೋರುತಿವೆ
ಒಂದನು ಕಂಡು ಹೆಣ್ಣರಗಿಣಿಯು ಆಸೆಯ ಹೇಳುತಿದೆ
ಮನಸು ಒಂದಾಯಿತು, ಒಲವೂ ಅರಳಿತು. 
"ಚಿನ್ನ, ರನ್ನ, ನೀನೇ ನನ್ನ ಪ್ರಾಣ"  ||ತಾಳಿ ಕಟ್ಟುವ ಶುಭ ವೇಳೆ||

ತಾಳವು ಮೇಳವು ಮಂಗಳ ವಾದ್ಯವು ಕಾಡನು ತುಂಬಿತಮ್ಮ
ಪುಷ್ಪ ವಿಮಾನದಿ ಮದುವೆಯ ಉಡುಗೊರೆ ಭೂಮಿಗೆ ಇಳಿಯಿತಮ್ಮ
"Your attention please, Singapore Airlines announcing 
the arrival of Flight S253, Thank You"
ಅಂದದ ಹೆಣ್ಣಿನ ಚೆಂದದ ಬೆರಳು ವೀಣೆಯ ಮೀಟಿತಮ್ಮ .. ಟಿಯಮ್.....
ಸಿಂಗಾರಿ ಧರಿಸಿದ ಬಂಗಾರ ಗೆಜ್ಜೆಯು ಘಲಘಲ ಕುಣಿಯಿತಮ್ಮ 
||ತಾಳಿ ಕಟ್ಟುವ ಶುಭ ವೇಳೆ||

ಕಾಡಲ್ಲಿ ಮೇಯುವ ಗೋವುಗಳೆಲ್ಲ ಹರಸಿ ಹೋದವಮ್ಮ
ಪುಟಾಣಿ ಮೊಲಗಳು ಕೈಯನು ಕುಲುಕಿ ಶುಭವನು ಕೋರಿತಮ್ಮ
“Wish you wish you happy life  Happy happy married life
Wish you joy.. wish you joy..”
ಜಿಂಕೆಯು ಒಂದು ಸಡಗರದಿಂದ ಮಂತ್ರವ ಹೇಳಿತಮ್ಮ
“ಮಾಂಗಲ್ಯಂ ತಂತುನಾನೇನ ಮಮ ಜೀವನ ಹೇತು ನಾ 
ಕಂಠೇ ಭದ್ರಾಣಿ ಶುಭದೇ ತ್ವಂಜೀವ ಶರದಶ್ಚಂ”
ನೂರಾರು ವರುಷ ಬಾಳಿರಿ ಎಂದು ಆನೆಯು ಹಾಡಿತಮ್ಮ  
||ತಾಳಿ ಕಟ್ಟುವ ಶುಭ ವೇಳೆ||

ಮಾಲೆಯ ಹಾಕಿದ ಗಿಣಿಗಳು ಅಂದು ಆನಂದ ಹೊಂದಿತಮ್ಮ
ಮದುವೆಯ ಮಾಡಿದ ಅರಗಿಳಿ ಮೌನದಿ ದೂರದಿ ನಿಂತಿತಮ್ಮ
ತಪ್ಪಾಗಿ ತಿಳಿದು ಬೆಪ್ಪಾದ ಗಂಡು ಗಿಳಿ ಕಣ್ ಕಣ್ ಬಿಟ್ಟಿತಮ್ಮ
ಅದು ತನ್ನಂತೆ ಏನು ನಡೆಯದು ಎಂಬ ಸತ್ಯವ ಅರಿಯಿತಮ್ಮ 
||ತಾಳಿ ಕಟ್ಟುವ ಶುಭ ವೇಳೆ||
********************************************************************************

ಮುಂದೆ ಬನ್ನಿ ಇನ್ನೂ ಮುಂದೆ ಬನ್ನಿ 

ಸಂಗೀತ: ಎಂ.ಎಸ್.ವಿಶ್ವನಾಥನ್
ರಚನೆ: ಚಿ.ಉದಯಶಂಕರ್  
ಗಾಯನ: ಎಸ್. ಪಿ. ಬಾಲಸುಬ್ರಹ್ಮಣ್ಯಂ

ಹೋಗೂ.. ರೈಟ್...  ರೈಟ್...
ಮುಂದೆ ಬನ್ನಿ ಇನ್ನೂ ಮುಂದೆ ಬನ್ನಿ ಅಹ್
ಮುಂದೆ ಬನ್ನಿ ಇನ್ನೂ ಮುಂದೆ ಬನ್ನಿ 
ಬೇರೆ ಯಾರು ಈ ಮಾತನ್ನು ಹೊಳೋದಿಲ್ಲಾ..
ಅರೇ, ಮುಂದೇ ತಳ್ಳೋ ಜನರೇ ಹೆಚ್ಚು ಊರೆಲ್ಲೆಲ್ಲಾ..
ಅರೇ, ಬೇರೆ ಯಾರು ಈ ಮಾತನ್ನು ಹೊಳೋದಿಲ್ಲಾ.. 
ಮುಂದೆ ತಳ್ಳೋ ಜನರೇ ಹೆಚ್ಚು ಊರೆಲ್ಲೆಲ್ಲಾ..
ಮುಂದೆ ಬನ್ನಿ  ಇನ್ನಾದರೂ ಜೀವನದಲ್ಲಿ ಮುಂದೆ ಬನ್ನೀ... 
ಮುಂದೆ ಬನ್ನಿ ಇನ್ನೂ ಮುಂದೆ ಬನ್ನಿ...
ಬದುಕು ಒಂದು ಬಸ್ಸಿನಂತೆ ನಿಲ್ಲದಂತೆ ಸಾಗಿದೇ.. 
ವಿಧಿಯೇ ಅದರ ಡ್ರೈವರ್ ಆಗಿ ಕಾಣದಂತೆ ಕೂತಿದೆ
ಆಅಹ್... ಟಿಕೆಟ್  ಟಿಕೆಟ್  ಕಮ್-ಆನ್ ಟಿಕೆಟ್  ಟಿಕೆಟ್
ಬೇಕು ಎನ್ನೋ ದಾರಿಯಲ್ಲಿ ಎಂದೂ ಮುಂದೆ ಸಾಗದು 
ನೀನೋ ಹೇಳೋ ಜಗದಲ್ಲಿ ಬಸ್ಸು ಎಂದು ನಿಲ್ಲದು
ಮುಂದಕ್ಕೆ ಬನ್ನಿ ಎಂದು ಕೂಗೋರು ಇಲ್ಲಾ..ಆಹ್ಹಾ.. 
ನನ್ನಂಥ ಕಂಡಕ್ಟರ್..ರೂ ಇದ್ದರೂ ಕಾಣಲ್ಲಾ...
ಹೇ.. ಹೇ.. ಹೇ.. ನನ್ನಂಥ ಕಂಡಕ್ಟರ್..ರೂ ಇದ್ದರೂ ಕಾಣಲ್ಲಾ...
ಮುಂದೆ ಬನ್ನಿ ಕಮಾನ್ ಕಮಾನ್ ಮುಂದೆ ಬನ್ನಿ 
ಬೇರೆ ಯಾರು ಈ ಮಾತನ್ನು ಹೊಳೋದಿಲ್ಲಾ..
ಅರೇ, ಹಿಂದೆ ತಳ್ಳೋ ಜನರೇ ಹೆಚ್ಚು ಊರೆಲ್ಲೆಲ್ಲಾ.. 
ಮುಂದೆ ಬನ್ನಿ ಇನ್ನಾದರೂ ಜೀವನದಲ್ಲಿ ಮುಂದೆ ಬನ್ನೀ...
ರೈಟ್ಲ ರೈಟ್ ಲಕ್ಷ ಲಕ್ಷ ಇದ್ದೊರೆಲ್ಲಾ ಕಾರಿನಲ್ಲೇ ಹೋಗೋದು
ಅಲ್ಪ ಸ್ವಲ್ಪ ಗಳಿಸೋರೆನೆ  ಬಸ್ಸಿನಲ್ಲಿ ಕೂಡೋದು
ಚಿಲ್ಲರೆ ಕೊಡಿ ಸರಿಯಾದ ಚಿಲ್ಲರೆ ಕೊಡಿ ಪ್ಲೀಸ್...
ಎಲ್ಲೋ ಜಗಳ ಎಲ್ಲೋ ಕದನ ಕಲ್ಲು ಇಲ್ಲೇ ಬೀಳೋದು..
ಯಾರ ಕೋಪ ಯಾರ ಮೇಲೋ ನ್ಯಾಯ ಯಾರ ಕೇಳೋದು
ನಿಮ್ಮ ದುಡ್ಡಲ್ಲೇ ನಮ್ಮ ವಾಹನ ಓಡೋದು ಆಹಾ... 
ನೀವೇನೇ ತೆರಿಗೆ ಹೆಚ್ಚಿ ಅಯ್ಯೋ ಅನ್ನೋದು..
ಹಾಂ..  ಹಾಂ... ನೀವೇನೇ ತೆರಿಗೆ ಹೆಚ್ಚಿ ಅಯ್ಯೋ ಅನ್ನೋದು..
ಮುಂದೆ ಬನ್ನಿ ಇನ್ನೂ ಮುಂದೆ ಬನ್ನಿ ಅಹ್ಹಹ್ಹಹ್ ...
ಆಯಿಯೇ ಸಾಬ್ ತಷರೀಫ್ ರಖಿಯೇ...
ನಿಮ್ಮ ಊರೂ ಯಾವುದೆಂದೂ ಇಲ್ಲಿ ಯಾರು ಕೇಳರು 
ಇಲ್ಲಿ ಯಾಕೆ ಬಂದೆ ಎಂದು ಇಲ್ಲಿ ಯಾರೀ ತಳ್ಳರು
ಮುಂದೆ ಬನ್ನಿ..

ನಿನ್ನ ಭಾಷೆ ಯಾವುದೆಂದು ಯಾರು ಚಿಂತೆ ಮಾಡರು 
ಹೊಂದಿಕೊಂಡು ಬಾಳೋದನ್ನ ಇಲ್ಲಿ ಎಲ್ಲ ಬಲ್ಲರು
ಕನ್ನಡ ನಾಡಿನಲ್ಲಿ ಕನ್ನಡ ಮಾತಾಡೂ... 
ಆಹ್ಹಾಹಾ.. ನಿನ್ನ ಮನೇಲಿ ನಿನ್ನ ಬಾಷೆ ಮಾತಾಡೂ...
ಹೇಹೇಹೇ ... ನಿನ್ನ ಮನೇಲಿ ನಿನ್ನ ಬಾಷೆ ಮಾತಾಡೂ... 
ಮುಂದೆ ಬನ್ನಿ ಇನ್ನೂ ಮುಂದೆ ಬನ್ನಿ 
ಬೇರೆ ಯಾರು ಈ ಮಾತನ್ನು ಹೊಳೋದಿಲ್ಲಾ..
ಅರೇ ... ಹಿಂದೆ ತಳ್ಳೋ ಜನರೇ ಹೆಚ್ಚು ಊರೆಲ್ಲೆಲ್ಲಾ.. 
ಮುಂದೆ ಬನ್ನಿ  ಇನ್ನಾದರೂ ಜೀವನದಲ್ಲಿ ಮುಂದೆ ಬನ್ನೀ...
ಟಿಕೆಟ್.. ಟಿಕೆಟ್.. ಕಮ್-ಆನ್ ಕಮ್-ಆನ್  ಟಿಕೆಟ್.. ಟಿಕೆಟ್..
ಚಿಲ್ಲರೇ ಕೋಡಿ ಪ್ಲೀಸ್ ಸರಿಯಾದ ಚಿಲ್ಲರೇ ಕೋಡಿ 
ಮುಂದೆ ಬನ್ನಿ ಇನ್ನೂ ಮುಂದೆ ಬನ್ನಿ
********************************************************************************

ಬೆಂಕಿಯಲ್ಲಿ ಅರಳಿದ ಹೂವು ನಾನಮ್ಮಾ..   

ಸಂಗೀತ: ಎಂ.ಎಸ್.ವಿಶ್ವನಾಥನ್ 
ರಚನೆ: ಚಿ.ಉದಯಶಂಕರ್  
ಗಾಯನ : ವಾಣಿ ಜಯರಾಂ.

ಬೆಂಕಿಯಲ್ಲಿ ಅರಳಿದ ಹೂವು ನಾನಮ್ಮ
ನನ್ನ ಅಂತರಂಗ ಬಲ್ಲವರೂ ಇಲ್ಲಮ್ಮಾ..
ಬೆಂಕಿಯಲ್ಲಿ ಅರಳಿದ ಹೂವು ನಾನಮ್ಮ
ನನ್ನ ಅಂತರಂಗ ಬಲ್ಲವರೂ ಇಲ್ಲಮ್ಮಾ..
ಮಿಂಚುವ ಗುಡುಗುವ ಮೇಘಗಳೇ... ಮಳೆಯನು ಕೊಡುವುದು ತಿಳಿಯಮ್ಮಾ..
ಮಿಂಚುವ ಗುಡುಗುವ ಮೇಘಗಳೇ... ಮಳೆಯನು ಕೊಡುವುದು ತಿಳಿಯಮ್ಮಾ..
ಮಳೆಯನು ಕೊಡುವುದು ತಿಳಿಯಮ್ಮಾ..
ಬೆಂಕಿಯಲ್ಲಿ ಅರಳಿದ ಹೂವು ನಾನಮ್ಮ
ಕಾಲಿಗೆ ಮುಳ್ಳನು ಚುಚ್ಚಿದರೇ ಕಂಬನಿ ಮಿಡಿವುದೆ ಕಣ್ಣುಗಳು
ಕಾಲಿಗೆ ಮುಳ್ಳನು ಚುಚ್ಚಿದರೇ ಕಂಬನಿ ಮಿಡಿವುದೆ ಕಣ್ಣುಗಳು
ವೇದನೆ ಮನಸನು ಹಿಂಡಿದರೆ ಸಂಕಟ ಪಡುವುದೇ ನಯನಗಳು
ದಾರಿಯ ತೋರುವ ದೀಪಗಳೇ ಅರಳಿದ ಸುಂದರ ಕಣ್ಣುಗಳು
ದಾರಿಯ ತೋರುವ ದೀಪಗಳೇ ಅರಳಿದ ಸುಂದರ ಕಣ್ಣುಗಳು
ಆ ಕಣ್ಣೇ ಬಲ್ಲದು ತಾನಲ್ಲಿ ಮರೆಯಾಗದಾಗಿದ ನೋವುಗಳು
ಬೆಂಕಿಯಲ್ಲಿ ಅರಳಿದ ಹೂವು ನಾನಮ್ಮ
ಗುಡಿಯಲ್ಲಿರುವ ಮೂರ್ತಿಯು ಕಪ್ಪಗೆ ಕಾಣುವ ಶಿಲೆ ತಾನೇ
ಗುಡಿಯಲ್ಲಿರುವ ಮೂರ್ತಿಯು ಕಪ್ಪಗೆ ಕಾಣುವ ಶಿಲೆ ತಾನೇ
ಕಲ್ಲು ಏನುತಾ ಪೂಜಿಸಿದರೆ ದೂರಕೆ ಹೋಗುವರುಂಟೇನೇ...
ಬಿಲ್ಲಿಗೆ ಹೂಡಿಸೆಳೆಯದೆಯೇ  ಯಾರನು ಕೊಲ್ಲವು ಬಾಣಗಳು..
ಬಿಲ್ಲಿಗೆ ಹೂಡಿಸೆಳೆಯದೆಯೇ  ಯಾರನು ಕೊಲ್ಲವು ಬಾಣಗಳು..
ಕಾರಣವಿಲ್ಲದೆ ಕಿಡಿಯಾದಿ ಬಾರದು ಎಂದು ಮಾತುಗಳು
ಬೆಂಕಿಯಲ್ಲಿ ಅರಳಿದ ಹೂವು ನಾನಮ್ಮ
ನನ್ನ ಅಂತರಂಗ ಬಲ್ಲವರೂ ಇಲ್ಲಮ್ಮಾ..
ಬೆಂಕಿಯಲ್ಲಿ ಅರಳಿದ ಹೂವು ನಾನಮ್ಮ
ನನ್ನ ಅಂತರಂಗ ಬಲ್ಲವರೂ ಇಲ್ಲಮ್ಮಾ.. 
********************************************************************************

ಹೋಗೂ ಎನ್ನಲು ನೀ ಯಾರೂ 

ರಚನೆ: ಚಿ.ಉದಯಶಂಕರ್ 
ಸಂಗೀತ: ಎಂ.ಎಸ್.ವಿಶ್ವನಾಥನ್ 
ಗಾಯನ: ಎಸ್. ಪಿ. ಬಾಲಸುಬ್ರಹ್ಮಣ್ಯಂ

ಹೋಗೂ...  ಹೋಗೂ ಎನ್ನಲು ನೀ ಯಾರೂ ...
ಹೋಗೂ ಎನ್ನಲು ನೀ ಯಾರೂ ... ಹೋಗೂ ಎನ್ನಲು ನೀ ಯಾರೂ ...
ಹೋಗೂ ಎನ್ನಲು ನೀ ಯಾರೂ
ಹೋಗೂ ಎನ್ನಲು ನೀ ಯಾರೂ ಇರುವೆ ಎನ್ನಲ್ಲೂ ನಾ ಯಾರೂ ...
ಭೂಮಿಗೆ ತಂದವ ಮೇಲಿರುವಾ... 
ಭೂಮಿಗೆ ತಂದವ ಮೇಲಿರುವಾ... ಈ ಮಾತನು ಕೇಳಿ ನಗುತಿರುವಾ..
ಹೋಗೂ ಎನ್ನಲು ನೀ ಯಾರೂ  ಇರುವೆ ಎನ್ನಲ್ಲೂ ನಾ ಯಾರೂ ...
ಲಾಲ... ಹಾಂ.. ಹಾಂ..  ಹಾ...ಹಾ.. ಇರುವೇ ಎನ್ನಲು ನಾ ಯಾರು  
ಅಪ್ಪ ಅಮ್ಮನ ಕಾಡಿ ಬೇಡಿ ಭೂಮಿಗೆ ಬಂದೇನೇ ನಾನೂ...
ಅಪ್ಪ ಅಮ್ಮನ ಕಾಡಿ ಬೇಡಿ ಭೂಮಿಗೆ ಬಂದೇನೇ ನಾನೂ...
ಅಣ್ಣನ ಆಣತಿ ಕೇಳಿದ ಮೇಲೆ ಹುಟ್ಟಿದೆಯೇನೆ ನೀನೂ...  ಆಹಾಂ ...!
ಹಣವಿದ್ದರೆ ಬಂಧುಗಳೆಲ್ಲಾ ಹೋದರೆ ಯಾರು ಇಲ್ಲಾ... ತಂಗೀ...
ಹೋಗು ಎನ್ನಲು ನೀ ಯಾರೂ...ಇರುವೆ ಎನ್ನಲ್ಲೂ ನಾ ಯಾರೂ ...
ಹಾಂ.. ಹಾಂ..  ಹಾ...ಹಾ.. ಇರುವೇ ಎನ್ನಲು ನಾ ಯಾರು... ನಾ ಯಾರು ... ಅಹ್ಹಹ್ಹಹ್ಹ    
ಅರಿಯದ ವಿಷಯವ ತಿಳಿಯುವ ಹಾಗೆ ಹೇಳುವುದೇ ಸಿದ್ಧಾಂಥ.....ಆಆಆ
ಅರಿಯದ ವಿಷಯವ ತಿಳಿಯುವ ಹಾಗೆ ಹೇಳುವುದೇ ಸಿದ್ಧಾಂಥ.....
ಯಾರಿಗೂ ಏನು ತಿಳಿಯದ ಹಾಗೇ ನುಡಿಯುವುದೇ...  ವೇದಾಂತ
ನೀ ಏನೇ ಮಾಡಿದರೇನೇ ಅಕ್ಕ ಆಗುವೆ ಏನೇ..  ನನಗೆ...
ಅಹ್ ಅಹ್ಹಹ್   ಹೋಗೂ ಎನ್ನಲು ನೀ ಯಾರೂ  ಇರುವೇ..  ಎನ್ನಲು ನಾ ಯಾರೂ ...
ಭೂಮಿಗೆ ತಂದವ ಮೇಲಿರುವಾ... ಆಆಆ 
ಭೂಮಿಗೆ ತಂದವ ಮೇಲಿರುವಾ... ಈ ಮಾತನು ಕೇಳಿ ನಗುತಿರುವಾ..
ಹೋಗೂ ಎನ್ನಲು ನೀ ಯಾರೂ  ಇರುವೆ ಎನ್ನಲ್ಲೂ ನಾ ಯಾರೂ ... 
ಹಾಂ.. ಹಾಂ..  ಆಆಆ ..ಲಾಲ್ ಲಾಲ್  ಇರುವೇ ಎನ್ನಲು ನಾ ಯಾರು  
********************************************************************************

ಪ್ರೇಮದ ಗೀತೆಯ ಹಾಡುವ 

ರಚನೆ: ಚಿ.ಉದಯಶಂಕರ್ 
ಸಂಗೀತ: ಎಂ.ಎಸ್.ವಿಶ್ವನಾಥನ್ 
ಗಾಯನ : ವಾಣಿ ಜಯರಾಂ

ಪ್ರೇಮದ ಗೀತೆಯ ಹಾಡುವ ಕಾಲ ಮುಗಿದಾಯ್ತು
ಜೋಗುಳ ಹಾಡುವ ಕಾಲವು ಹತ್ತಿರ ಬಂದಾಯ್ತು
ಪ್ರೇಮದ ಗೀತೆಯ ಹಾಡುವ ಕಾಲ ಮುಗಿದಾಯ್ತು
ಜೋಗುಳ ಹಾಡುವ ಕಾಲವು ಹತ್ತಿರ ಬಂದಾಯ್ತು
ಅಹ ಹಾಹಾ ಹೊ ಲಾಲಿ ಲಾಲಿ ಹಾಡು ಲಾಲಿ ಲಾಲಿ
ಓಹೋಹೋ  ಲಾಲಿ ಲಾಲಿ ಹಾಡು ಲಾಲಿ ಲಾಲಿ
ಪ್ರೇಮದ ಗೀತೆಯ ಹಾಡುವ ಕಾಲ ಮುಗಿದಾಯ್ತು
ಜೋಗುಳ ಹಾಡುವ ಕಾಲವು ಹತ್ತಿರ ಬಂದಾಯ್ತು
ಅಮಾವಾಸೆಯ ಇರುಳಲಿ ಚಂದ್ರನ ತಂದಂತೆ 
ನಿನ್ನೀ ಬಾಳಲ್ಲಿ ಚೆಲ್ಲಿದ ಅವನು ಚಂದ್ರಿಕೆ
ಅಮಾವಾಸೆಯ ಇರುಳಲಿ ಚಂದ್ರನ ತಂದಂತೆ 
ನಿನ್ನೀ ಬಾಳಲ್ಲಿ ಚೆಲ್ಲಿದ ಅವನು ಚಂದ್ರಿಕೆ
ಅರಿಷಿಣ ಕುಂಕುಮ ಭಾಗ್ಯವ ನಿನಗೆ ನೀಡಿದ 
ಸರಸವನಾಡುವ ನೆಪದಲಿ ಮಡಿಲ ತುಂಬಿದ
ಅಹ ಹಾಹಾ ಹೊ ಲಾಲಿ ಲಾಲಿ ಹಾಡು ಲಾಲಿ ಲಾಲಿ
ಓಹೋಹೋ  ಲಾಲಿ ಲಾಲಿ ಹಾಡು ಲಾಲಿ ಲಾಲಿ
ಪ್ರೇಮದ ಗೀತೆಯ ಹಾಡುವ ಕಾಲ ಮುಗಿದಾಯ್ತು
ಜೋಗುಳ ಹಾಡುವ ಕಾಲವು ಹತ್ತಿರ ಬಂದಾಯ್ತು
ಪ್ರೇಮ ಕಂಗಳಿ ಸಾವಿರ ಕನಸ ಕಂಡವು 
ನಿನ್ನ ಬಾಳಲಿ ಆ ಕನಸೂ ನನಸಾದವೂ
ದೊರೆಯಿತು ತಂಗಿ ನಿನಗೆ ಬಯಸದ ಭಾಗ್ಯವೂ 
ನಿನ್ನೀ ನಗುವೇ ನನ್ನ ಬದುಕಿನ ದೀಪವೂ
ಅಹಹಾಹಾ ಹೊ ಲಾಲಿ ಲಾಲಿ ಹಾಡು ಲಾಲಿ ಲಾಲಿ
ಓಹೋಹೋ  ಲಾಲಿ ಲಾಲಿ ಹಾಡು ಲಾಲಿ ಲಾಲಿ 
ಶಿವನು ಪಾರ್ವತೀ ಕೈಲಾಸದಲೇ ಇರಬೇಕು 
ಅವರ ಆನಂದದ ಸಾಕ್ಷಿಗೆ ಷಣ್ಮುಖ ಬರಬೇಕು
ಶಿವನು ಪಾರ್ವತೀ ಕೈಲಾಸದಲೇ ಇರಬೇಕು 
ಅವರ ಆನಂದದ ಸಾಕ್ಷಿಗೆ ಷಣ್ಮುಖ ಬರಬೇಕು
ಗಂಗೆಯು ಶಿವನ ಜಟೆಯ ಸ್ನೇಹ ಬಿಡಬೇಕು 
ಜಾರುತ ದೂರಕೆ ಶಾಂತಿಯ ಅರಸುತಲಿರಬೇಕು 
ಓಹೋಹೋ  ಲಾಲಿ ಲಾಲಿ ಹಾಡು ಲಾಲಿ ಲಾಲಿ
ಅಹ ಹಾಹಾ ಹೊ ಲಾಲಿ ಲಾಲಿ ಹಾಡು ಲಾಲಿ ಲಾಲಿ
ಪ್ರೇಮದ ಗೀತೆಯ ಹಾಡುವ ಕಾಲ ಮುಗಿದಾಯ್ತು
ಜೋಗುಳ ಹಾಡುವ ಕಾಲವು ಹತ್ತಿರ ಬಂದಾಯ್ತು
ಅಹ ಹಾಹಾ ಹೊ ಲಾಲಿ ಲಾಲಿ ಹಾಡು ಲಾಲಿ ಲಾಲಿ 
ಓಹೋಹೋ  ಲಾಲಿ ಲಾಲಿ ಹಾಡು ಲಾಲಿ ಲಾಲಿ
********************************************************************************

1 comment:

  1. Titanium White Fennec: Fennec - etching - etching
    Fenn of Tithi-titanium, Fenn of Tithi-titanium, man titanium bracelet Fenn titanium tools of Tithi-titanium, Fenn of Tithi-titanium, Fenn of Tithi-titanium, Fenn titanium watch band of titanium ingot Tithi-titanium, Fenn ford edge titanium of Tithi-titanium, Fenn of Tithi-titanium, Fenn of Tithi-titanium

    ReplyDelete