ಮೋಡದ ಮರೆಯಲ್ಲಿ
ಅವಳ ಇಣುಕು ನೋಟ,
ಒಂದಿಷ್ಟು ಜುಟ್ಟು ಜಟರಿನ
ಮಳೆ ಹೀಗೆ.....
ಆ ದಿನಗಳು ನೆನಪಾಗುತ್ತವೆ,
ಅವಳ ನೆನಪುಗಳಿಲ್ಲದಾ ರಾತ್ರಿ
ಪಾಳ್ಯದ ಕಾವಲುಗಾರನ ಕನಸಿನಲ್ಲಿ...!
ಮೋಡದ ಮರೆಯಲ್ಲಿ
ಅವಳ ಇಣುಕು ನೋಟ,
ಒಂದಿಷ್ಟು ಜುಟ್ಟು ಜಟರಿನ
ಮಳೆ ಹೀಗೆ.....
ಆ ದಿನಗಳು ನೆನಪಾಗುತ್ತವೆ,
ಅವಳ ನೆನಪುಗಳಿಲ್ಲದಾ ರಾತ್ರಿ
ಪಾಳ್ಯದ ಕಾವಲುಗಾರನ ಕನಸಿನಲ್ಲಿ...!
ಮೌನ ಮಾತಾಗಿ ಜೀವ
ಪಡೆದು ಅವಳುಸಿರಿನೊಳು
ಬೆರೆಯುವಷ್ಟರಲ್ಲಿ ...
ನನ್ನೊಳಗಿನ ನೆನಪುಗಳು
ಸತ್ತು ಹೋಗಿದ್ದವು..................!
ಸಮುದ್ರದಲ್ಲಿ ಎದ್ದ ಅಲೆಗಳು ಕಡಲಿಗೆ ಬಂದು ತಲುಪುವದಿಲ್ಲ
ನಮ್ಮ ಜೀವನದಲ್ಲಿ ಕಂಡಂತಹ ಎಲ್ಲ ಕನಸುಗಳು ನನಸಾಗುವುದಿಲ್ಲ
ಕನಸು ನನಸಾಗಲಿಲ್ಲವೆಂದು ನಿರಾಶಾವಾದಿಯಾಗಿ ಕೊರಗಬೇಡ
ನಿರಾಶೆಗಳ ಕೆಸರಿಲ್ಲಿಯೇ ಆಶಾವಾದಿಯೆಂಬ ಕಮಲವಾಗುವುದು
ಮರೆಯಬೇಡ ಆಗ ಬಂದಾವು, ನಿನ್ನ ಸುತ್ತ, ಗಿರಕಿ ಹೊಡೆದಾವು,
ಆ ಹೊಸ ದುಂಬಿಗಳು....
ಇಲ್ಲಿ ನೋಡೆ ನೀನೇ ತುಂಬಿರುವ ನನ್ನ ಕಣ್ಣ ತುಂಬ.. :-)
ಹಾರುತಿದೆ ನೋಡಿದಿರಾ ಈ ಹಕ್ಕಿ
ರಣಹದ್ದಿಗೆ ಬೆಚ್ಚಿ,
ತನ್ನ ಸಿಹಿ-ಕಹಿಗಳನ್ನು ಮೆಲುಕುಹಾಕುತ್ತಾ
ರೆಕ್ಕೆಗಳ ಬಿಚ್ಚಿ,
ಬಂಧು-ಬಳಗ, ಸ್ನೇಹಿತರನ್ನು
ಶಾಶ್ವತವೆಂದು ನೆಚ್ಚಿ,
ದೇವನ ಸೃಷ್ಟಿ-ಸೌಂದರ್ಯವನ್ನು
ಒಳಗೊಳಗೆ ಮೆಚ್ಚಿ,
ಮನಸು ಹೇಳಿತು ಇದೆಲ್ಲಾ
ಕ್ಷಣಿಕವೆಂದು ಚುಚ್ಚಿ ಚುಚ್ಚಿ,
ನಿಜವನ್ನಿರಿತು ಸುಮ್ಮನಾಗಿ
ಗೂಡಿನೊಳಗೆ ಬೆನ್ನು ಹಚ್ಚಿ...
ಮತ್ತೆಂದಾದರೂ ದೊರೆತೀತೆ ಆ ನಿನ್ನ
ಬೆಳದಿಂಗಳಾ ಹೇಳು ಚಂದಿರಾ,
ತಂಪಾದ ಕಿರಣಗಳಿಂದ ಈ ಜಗವಾಗಿದೆ
ದೇವ ಮಂದಿರಾ,
ಎಲ್ಲಿ ನೋಡಿದರಲ್ಲಿ ಕಣ್ಣಿಗೆ ಕಾಣುತಿದೆ
ಬಂಗಾರದಂಥ ಹಂದಿರಾ,
ಮಾತೆಯ ಮಗುವಿಗೆ ನಿನ್ನ ತೋರಿಸುತ್ತ
ಉಣಿಸುವುದಂತೂ ಅವಳಿಗೆ ಸುಂದರಾ,
ಹುಣ್ಣೆಮೆಯ ದಿನ ಆನಂದಾಕ್ಷಣ, ಕವಿಗಳಿಗೆ
ಸ್ಪೂರ್ತಿ ನೀನೇ ಕರುಣಾಕರಾ,
ಹರನ ಕೆಂಜೆಡೆಯಲಿ ನೀ ಶೋಭಿಸಿದಾಗಲೇ
ಆಗುವ ನಾದವೇ ಚಂದ್ರಶೇಖರಾ,
ಮನದಲ್ಲಿ ಕಟ್ಟಿದೆ ನನ್ನವಳಿಗಾಗಿ ಗೋಪುರ,
ತುಸು ಸಮಯ ಕಳೆದೆನು ಅವಳಿಗಾಗಿ ಆತುರ,
ಬರಲಿಲ್ಲ ಅವಳು ತಂದಿತ್ತು ನನಗೆ ಬೇಸರ,
ಅಷ್ಟರೊಳಗೆ ಮುಳುಗಿದ ಆ ಬಾನ ನೇಸರ,
ಚಿಂತಿಸುತ ಹೊರಟೆ ಮನೆಯ ಕಡೆಗೆ ಸರಸರ.
ದೇವರು ಕನಸು ಸೃಷ್ಟಿಸಿದ,
ಕನಸಿನಲ್ಲಿ ಆಸೆ ತುಂಬಿದ,
ಆಸೆಯಲ್ಲಿ ಪ್ರೀತಿ ಇಟ್ಟ,
ಈ ಪ್ರೀತಿಯ ಹುಡುಗಾಟಕ್ಕಾಗಿ,
ಹಗಲು ರಾತ್ರಿಯ ನಡುವೆಯೇ,
ಮತ್ತೇ ಕನಸುಗಳನ್ನೇ ಸೃಷ್ಟಿಸಿದ.