Saturday, October 13, 2012

-:ಚಂದಿರಾ:-

 ಮತ್ತೆಂದಾದರೂ ದೊರೆತೀತೆ ಆ ನಿನ್ನ 
       ಬೆಳದಿಂಗಳಾ  ಹೇಳು ಚಂದಿರಾ, 
ತಂಪಾದ ಕಿರಣಗಳಿಂದ ಈ ಜಗವಾಗಿದೆ 
                            ದೇವ ಮಂದಿರಾ, 
    ಎಲ್ಲಿ ನೋಡಿದರಲ್ಲಿ ಕಣ್ಣಿಗೆ ಕಾಣುತಿದೆ 
                  ಬಂಗಾರದಂಥ ಹಂದಿರಾ, 
ಮಾತೆಯ ಮಗುವಿಗೆ ನಿನ್ನ ತೋರಿಸುತ್ತ 
   ಉಣಿಸುವುದಂತೂ ಅವಳಿಗೆ ಸುಂದರಾ, 
ಹುಣ್ಣೆಮೆಯ ದಿನ ಆನಂದಾಕ್ಷಣ, ಕವಿಗಳಿಗೆ 
                 ಸ್ಪೂರ್ತಿ ನೀನೇ ಕರುಣಾಕರಾ, 
ಹರನ ಕೆಂಜೆಡೆಯಲಿ ನೀ ಶೋಭಿಸಿದಾಗಲೇ 
              ಆಗುವ ನಾದವೇ ಚಂದ್ರಶೇಖರಾ,

No comments:

Post a Comment