ಹಾರುತಿದೆ ನೋಡಿದಿರಾ ಈ ಹಕ್ಕಿ
ರಣಹದ್ದಿಗೆ ಬೆಚ್ಚಿ,
ತನ್ನ ಸಿಹಿ-ಕಹಿಗಳನ್ನು ಮೆಲುಕುಹಾಕುತ್ತಾ
ರೆಕ್ಕೆಗಳ ಬಿಚ್ಚಿ,
ಬಂಧು-ಬಳಗ, ಸ್ನೇಹಿತರನ್ನು
ಶಾಶ್ವತವೆಂದು ನೆಚ್ಚಿ,
ದೇವನ ಸೃಷ್ಟಿ-ಸೌಂದರ್ಯವನ್ನು
ಒಳಗೊಳಗೆ ಮೆಚ್ಚಿ,
ಮನಸು ಹೇಳಿತು ಇದೆಲ್ಲಾ
ಕ್ಷಣಿಕವೆಂದು ಚುಚ್ಚಿ ಚುಚ್ಚಿ,
ನಿಜವನ್ನಿರಿತು ಸುಮ್ಮನಾಗಿ
ಗೂಡಿನೊಳಗೆ ಬೆನ್ನು ಹಚ್ಚಿ...
No comments:
Post a Comment