Monday, April 29, 2019

ಬಂಗಾರದ ಜಿಂಕೆ (1980)

ಒಲುಮೆ ಸಿರಿಯಾ

ಚಲನ ಚಿತ್ರ: ಬಂಗಾರದ ಜಿಂಕೆ (1980)
ನಿರ್ದೇಶನ: 
ಸಾಹಿತ್ಯ : ದೊಡ್ಡರಂಗೇಗೌಡ 
ಸಂಗೀತ : ವಿಜಯಭಾಸ್ಕರ್ 
ಗಾಯನ : ಎಸ್.ಪಿ.ಬಾಲಸುಬ್ರಹ್ಮಣ್ಯಂ
ನಟನೆ: ವಿಷ್ಣುವರ್ಧನ್, ಭಾರತಿ 

ಒಲುಮೆ ಸಿರಿಯಾ ಕಂಡು ಬಯಕೆ ಸಿಹಿಯಾ ಉಂಡು
ಪ್ರೀತಿ ಮಾತಾಡಿದೆ ಬಾಳು ರಂಗಾಗಿದೆ 
ಒಲುಮೆ ಸಿರಿಯಾ ಕಂಡು ಬಯಕೆ ಸಿಹಿಯಾ ಉಂಡು
ಪ್ರೀತಿ ಮಾತಾಡಿದೆ ಬಾಳು ರಂಗಾಗಿದೆ 
ಚೆಂದಾಗಿ ಕೂಡಿದ ಸುಂದರ ಸಮಯ ಕನಸಾಗಿದೆ
ಓಡೋಡಿ ನಲಿದ ಸೊಂಪಾದ ಗಾನವ ಮರೆತಾಗಿದೆ
ಚೆಂದಾಗಿ ಕೂಡಿದ ಸುಂದರ ಸಮಯ ಕನಸಾಗಿದೆ
ಓಡೋಡಿ ನಲಿದ ಸೊಂಪಾದ ಗಾನವ ಮರೆತಾಗಿದೆ
ಮಾತಾಡದೇ ..ಬಳಿಬಾರದೇ ..
ಮಾತಾಡದೇ ..ಬಳಿಬಾರದೇ .. ನನ್ನಿಂದ ನೀ ದೂರ ಹೋದೆ
ಒಲುಮೆ ಸಿರಿಯಾ ಕಂಡು ಬಯಕೆ ಸಿಹಿಯಾ ಉಂಡು
ಪ್ರೀತಿ ಮಾತಾಡಿದೆ ಬಾಳು ರಂಗಾಗಿದೆ
ನೂರಾರು ಜನ್ಮದ ಅನುಬಂಧ ನಮ್ಮದು ಅರಿವಾಗದೇ
ಒಂದಾಗಿ ಹಾಡಿದ ರಾಗದ ದಾಟಿಯು ನೆನಪಾಗದೇ
ನೂರಾರು ಜನ್ಮದ ಅನುಬಂಧ ನಮ್ಮದು ಅರಿವಾಗದೇ
ಒಂದಾಗಿ ಹಾಡಿದ ರಾಗದ ದಾಟಿಯು ನೆನಪಾಗದೇ
ಬೇರಾಗದೇ... ದೂರಾಗದೇ...
ಬೇರಾಗದೇ... ದೂರಾಗದೇ....ನನ್ನನ್ನು ನೀ ಸೇರು ಇಂದೇ
ಒಲುಮೆ ಸಿರಿಯಾ ಕಂಡು ಬಯಕೆ ಸಿಹಿಯಾ ಉಂಡು
ಪ್ರೀತಿ ಮಾತಾಡಿದೆ ಬಾಳು ರಂಗಾಗಿದೇ

********************************************************************************

ಒಲುಮೆ ಸಿರಿಯಾ... 

 ಸಾಹಿತ್ಯ : ದೊಡ್ಡರಂಗೇಗೌಡ 
ಗಾಯನ : ಎಸ್.ಪಿ.ಬಾಲು ಮತ್ತು ವಾಣಿಜಯರಾಂ 

ಹೆಣ್ಣು : ಒಲುಮೆ ಸಿರಿಯಾ ಕಂಡು (ಲಾಲಾಲಾ ) ಬಯಕೆ ಸಿಹಿಯಾ ಉಂಡು (ಲಾಲಾಲಾ )
          ಪ್ರೀತಿ ಮಾತಾಡಿದೆ (ಲಲಲಲಾ  ) ಬಾಳು ರಂಗಾಗಿದೆ (ಲಲಲಲಾ )
ಗಂಡು : ಒಲುಮೆ ಸಿರಿಯಾ ಕಂಡು (ಲಾಲಾಲಾ ) ಬಯಕೆ ಸಿಹಿಯಾ ಉಂಡು (ಲಾಲಾಲಾ )
          ಪ್ರೀತಿ ಮಾತಾಡಿದೆ (ಲಲಲಲಾ  ) ಬಾಳು ರಂಗಾಗಿದೆ (ಲಲಲಲಾ )
ಹೆಣ್ಣು : ಮುಂಗಾರು ಕಾಣದೆ ಕಾಡಿನ ನವೀಲು ತಾನಾಡದು
ಗಂಡು : ನಿನ್ನನೂ ಕೂಡದೇ ನನ್ನ ಹೃದಯ ನಿನದಾಗದು
ಹೆಣ್ಣು :  ಹಗಲಲಿ ಇರುಳಲಿ .. ಹಗಲಲಿ ಇರುಳಲಿ ಇರುವೆನು ನಿನ್ನ ಜೊತೆ 
ಗಂಡು: ಒಲುಮೆ ಸಿರಿಯ ಕಂಡು, ಬಯಕೆ ಸಿಹಿಯ ಉಂಡು
ಹೆಣ್ಣು: ಪ್ರೀತಿ ಮಾತಾಡಿದೆ ಬಾಳು ರಂಗಾಗಿದೆ
ಗಂಡು : ನೂರಾರು ಜನುಮದ ಅನುಬಂಧ ನಮ್ಮದು ಅರಿವಾಗಿದೆ
ಹೆಣ್ಣು : ಒಂದಾಗಿ ಹಾಡಿದ ರಾಗದ ಧಾಟಿಯು ನೆನಪಾಗಿದೆ
ಗಂಡು : ಬೇರಾಗದೇ... ದೂರಾಗದೇ...
            ಬೇರಾಗದೇ... ದೂರಾಗದೇ... ನನ್ನನ್ನು ನೀ ಸೇರು ಇಂದೇ 
ಹೆಣ್ಣು  : ಒಲುಮೆ ಸಿರಿಯ ಕಂಡು, ಬಯಕೆ ಸಿಹಿಯ ಉಂಡು
ಗಂಡು : ಪ್ರೀತಿ ಮಾತಾಡಿದೆ ಬಾಳು ರಂಗಾಗಿದೆ
ಹೆಣ್ಣು : ಬಂಗಾರ ಜಿಂಕೆಯು ಬೇಕೆಂಬ ಆಸೆಯೂ ಬೆಳೆದಿದೆ...
ಗಂಡು: ಮಂದಾರ ಪುಷ್ಪವ ಮುಡಿಯೇ ನೀನೆಂದು ಬಯಸಿದೆ
ಹೆಣ್ಣು : ಚೆಲುವನು... ನಲಿವನು ...
          ಚೆಲುವನು... ನಲಿವನು ... ಮರೆಯೇನು ಎಂದೆದಿಗೂ 
ಗಂಡು : ಒಲುಮೆ ಸಿರಿಯ ಕಂಡು, 
ಹೆಣ್ಣು : ಬಯಕೆ ಸಿಹಿಯ ಉಂಡು
ಗಂಡು : ಪ್ರೀತಿ ಮಾತಾಡಿದೆ.. 
ಹೆಣ್ಣು :  ಲಾ.. ಲಾ.. ಲಾ..  ಬಾಳು ರಂಗಾಗಿದೆ 
ಗಂಡು  : ಲಾ.. ಲಾ.. ಲಾ..
********************************************************************************

ಸಂಗಾತಿಯು ಬಳಿ ಬಾರದೇ

ಸಾಹಿತ್ಯ : ದೊಡ್ಡರಂಗೇಗೌಡ
ಗಾಯನ : ವಾಣಿಜಯರಾಂ 

ಆಹ್ಹಾಆಆ.. ಆಹ್ಹಾಆಆ... ಆಹ್ಹಾಆಆ.. ಆಹ್ಹಾಆಆ... 
ಸಂಗಾತಿಯು ಬಳಿ ಬಾರದೇ ಈ ಜೀವನ ಬರಡಾಗಿದೆ 
ಮನಸೆಲ್ಲಾ ತೂಗಾಡಿದೇ ನನ್ನ ಕನಸೆಲ್ಲಾ ಚೂರಾಗಿದೇ 
ಸಂಗಾತಿಯು ಬಳಿ ಬಾರದೇ ಈ ಜೀವನ ಬರಡಾಗಿದೆ 
ಮನಸೆಲ್ಲಾ ತೂಗಾಡಿದೇ ನನ್ನ ಕನಸೆಲ್ಲಾ ಚೂರಾಗಿದೇ 
ಹೊನ್ನಿಗೆಂದು ಬೆಲೆಯೇ ಕೊಡದೇ ಪ್ರೀತಿ ಮಾಡಿದೇ 
ನಲ್ಮೆ ಹಿರಿಮೆ ಬಯಸಿ ನಾನು ರಾಗಾ ಮೀಟಿದೆ 
ಈ ಜೀವಾ ನಿನ್ನದೂ ಈ ಭಾವಾ ನಿನ್ನದೂ 
ಈ ಜೀವಾ ನಿನ್ನದೂ ಈ ಭಾವಾ ನಿನ್ನದೂ 
ನಮ್ಮೆಲ್ಲಾ ಮಿಲನ ಚೆಲುವಾಗದೇ 
ಸಂಗಾತಿಯು ಬಳಿ ಬಾರದೇ ಈ ಜೀವನ ಬರಡಾಗಿದೆ 
ಮನಸೆಲ್ಲಾ ತೂಗಾಡಿದೇ ನನ್ನ ಕನಸೆಲ್ಲಾ ಚೂರಾಗಿದೇ 
ಉಕ್ಕಿ ಹರಿವಾ ಒಲುಮೆ ಒಂದೂ ನಿನ್ನ ಮೆಚ್ಚಿದೇ 
ರೆಪ್ಪೆ ಮುರಿವಾ ಹರೆಯ ಕಂಡೂ ಆಸೇ ಹೆಚ್ಚಿದೆ 
ಈ ತನುವೂ ನಿನ್ನದೂ ಈ ಮನವೂ ನಿನ್ನದೂ 
ಈ ತನುವೂ ನಿನ್ನದೂ ಈ ಮನವೂ ನಿನ್ನದೂ 
ನನ್ನೆಲ್ಲಾ ಕನಸು ನನಸಾಗದೇ 
ಸಂಗಾತಿಯು ಬಳಿ ಬಾರದೇ ಈ ಜೀವನ ಬರಡಾಗಿದೆ 
ಮನಸೆಲ್ಲಾ ತೂಗಾಡಿದೇ ನನ್ನ ಕನಸೆಲ್ಲಾ ಚೂರಾಗಿದೇ 
ಹೂವಿಗಿಂದೂ ಬೇಕೇ ಬೇಕು ದುಂಬಿ ಆಸರೇ 
ಎಲ್ಲಾ ಹೆಣ್ಣೂ ಬಯಸೋದೊಂದೇ ಪ್ರೀತಿಯ ತೋರೆ 
ಸಂತೋಷ ಪಡದೇ ಸಂಬಂಧ ತರದೇ 
ಸಂತೋಷ ಪಡದೇ ಸಂಬಂಧ ತರದೇ 
ನನ್ನೆಲ್ಲಾ ಬದುಕು ಕುರುಡಾಗಿದೇ 
ಸಂಗಾತಿಯು ಬಳಿ ಬಂದರೇ ಈ ಜೀವನ ಬಂಗಾರವೇನೇ...   
********************************************************************************

ಕೆಣಕಿರುವೇ 

ಸಾಹಿತ್ಯ : ದೊಡ್ಡರಂಗೇಗೌಡ 
ಗಾಯನ : ವಾಣಿಜಯರಾಂ 

ಯವ್ವಿ ಯವ್ವಿ ಯವ್ವಿ ಯವ್ವಿ ಯವ್ವಿ ಯವ್ವಿ
ಯವ್ವಿ ಯವ್ವಿ ಯವ್ವಿ ಯವ್ವಿ ನೀ ಕೆಣಕಿರುವೇ ಚುಮ್ಮಕ ಚುಮ್ಮಾನಾ...
ಕಂಡಿರುವೇ ಜುಮ್ಮಕ ಜುಮ್ಮ ನೀ
ಕೆಣಕಿರುವೇ ಚುಮ್ಮಕ ಚುಮ್ಮಾನಾ ಕಂಡಿರುವೇ
ಜುಮ್ಮಕ ಜುಮ್ಮ ಕುಣಿಯಲು ನಾ ಮಣಿಯೇನು ನಾ
ಯಾಕೋ ಕಣ್ಣೋಟ ಚೆಲ್ಲಾಟ
ಯವ್ವಿ ಯವ್ವಿ ಯವ್ವಿ ಯವ್ವಿ ನೀ ಕೆಣಕಿರುವೇ ಚುಮ್ಮಕ ಚುಮ್ಮಾನಾ...
ಕಂಡಿರುವೇ ಜುಮ್ಮಕ ಜುಮ್ಮ  ಕುಣಿಯಲು ನಾ ಮಣಿಯೇನು ನಾ
ಯಾಕೋ ಕಣ್ಣೋಟ ಚೆಲ್ಲಾಟ ಯವ್ವಿ ಯವ್ವಿ ಯವ್ವಿ ಯವ್ವಿ
ಕೀಟಲೇ ಮಾಡುತ ನೋಟವ ಬೀರುತ ಸ್ನೇಹವ ಬಯಸಿರುವೇ
ಸಾವಿರ ಆಸೆಯ ನಾಲಿಗೇ ಚಾಚುತ ಪ್ರೀತಿಗೆ ಕರೆದಿರುವೇ ಹ್ಹಾಂ ...
ಕೀಟಲೇ ಮಾಡುತ ನೋಟವ ಬೀರುತ ಸ್ನೇಹವ ಬಯಸಿರುವೇ
ಸಾವಿರ ಆಸೆಯ ನಾಲಿಗೇ ಚಾಚುತ ಪ್ರೀತಿಗೆ ಕರೆದಿರುವೇ
ಹೆಣ್ಣಿನ ಸಂಗ ಬೇಡಿ.. ಹ್ಹಾಂ  ಸುಮ್ಮನೇ ಕಾಡಿ ಕಾಡಿ 
ಇಲ್ಲದೇ ಮೋಡಿ ಮಾಡಿ ಸಲ್ಲದ ದಾಹ ಮೂಡಿ 
ಕೈಯ್ ಹಿಡಿವೇ ಮೈಯ್ ಮರೆತೆ ನಲ್ಲಾ 
ಯವ್ವಿ ಯವ್ವಿ ಯವ್ವಿ ಯವ್ವಿ ನೀ ಕೆಣಕಿರುವೇ ಚುಮ್ಮಕ ಚುಮ್ಮಾನಾ...
ಕಂಡಿರುವೇ ಜುಮ್ಮಕ ಜುಮ್ಮ
ಹತ್ತಿರ ಸೆಳೆಯುತ ಮುತ್ತನು ಬೀರುತ ಮತ್ತಿಗೆ ಇಳಿದಿರುವೇ
ಮೆತ್ತಗೆ ನಡೆಯುತ ಸುತ್ತಲೂ ನೋಡುತ ಹೊತ್ತನು ಮರೆತಿರುವೇ.. ಹ್ಹ ಹ್ಹಾಂ
ಹತ್ತಿರ ಸೆಳೆಯುತ ಮುತ್ತನು ಬೀರುತ ಮತ್ತಿಗೆ ಇಳಿದಿರುವೇ
ಮೆತ್ತಗೆ ನಡೆಯುತ ಸುತ್ತಲೂ ನೋಡುತ ಹೊತ್ತನು ಮರೆತಿರುವೇ
ಒಲ್ಲದ ಪ್ರೇಮ ಹುಟ್ಟಿ ಮೆಲ್ಲಗೇ ಕೆನ್ನೇ ಮುಟ್ಟಿ 
ನಂಬಿಕೆ ದಾರಿ ಮೀರೀ ದುಂಬಿಯ ಹಾಗೇ ಹಾರೀ 
ನೀತಿ ತೊರೆವೇ ಭೀತಿ ಹಿಡಿವೆಯಲ್ಲಾ
ಯವ್ವಿ ಯವ್ವಿ ಯವ್ವಿ ಯವ್ವಿ ನೀ ಕೆಣಕಿರುವೇ ಚುಮ್ಮಕ ಚುಮ್ಮಾನಾ...
ಕಂಡಿರುವೇ ಜುಮ್ಮಕ ಜುಮ್ಮ ನೀ  ಕುಣಿಯಲು ನಾ ಮಣಿಯೇನು ನಾ
ಯಾಕೋ ಕಣ್ಣೋಟ ಚೆಲ್ಲಾಟ
ಯವ್ವಿ ಯವ್ವಿ ಯವ್ವಿ ಯವ್ವಿ ನೀ ಕೆಣಕಿರುವೇ ಚುಮ್ಮಕ ಚುಮ್ಮಾನಾ...
ಕಂಡಿರುವೇ ಜುಮ್ಮಕ ಜುಮ್ಮ ನೀ  ಕೆಣಕಿರುವೇ ಚುಮ್ಮಕ ಚುಮ್ಮಾನಾ...
ಕಂಡಿರುವೇ ಜುಮ್ಮಕ ಜುಮ್ಮ
********************************************************************************

ಸ್ವರ್ಣ ಗೌರಿ (1962)

ಸ್ವರ್ಣ ಗೌರಿ (1962)

ನುಡಿಮನ ಶಿವಗುಣ 

ನಟವರ ಗಂಗಾಧರ 

ಬಾರೆ ನೀ ಚೆಲುವೆ 

ಈ ಲೀಲಾ ವಿಲಾಸ 

ಬಾರಾ ಚಂದ್ರಮ 

ಜಯ ಗೌರಿ ಜಗದೀಶ್ವರಿ 

ಹಾಡಲೇನು ಮನದಾಸೆ 

ಬಂತು ನವ ಯೌವ್ವನ 

ಓ ಜನನಿ ಕಲ್ಯಾಣಿ 

ನ್ಯಾಯವಿದೇನಮ್ಮಾ 

ಲಾಲಿ ಲಾಲಿ ಬಾಲ ಮುಕುಂದ

ಸ್ವರ್ಣ ಗೌರಿ(೧೯೬೨)...............ನಟವರ ಗಂಗಾಧರ
ಸಾಹಿತ್ಯ : ಡಾ.ಎಸ್.ಕೆ.ಕರೀಂಖಾನ್ ಸಂಗೀತ : ಎಂ.ವೆಂಕಟರಾಜು ಗಾಯನ : ಡಾ.ಎಂ.ಬಾಲಮುರಳಿಕೃಷ್ಣ
ನಟವರ ಗಂಗಾಧರ... ನಟವರ ಗಂಗಾಧರ
ಉಮಾಶಂಕರನೀ ಲೀಲಾ  ವಿನೋದ ವಿಹಾರ
ನಟವರ ಗಂಗಾಧರ
ಜನನ ಮರಣೊಂದು ಚದುರಂಗವಾಗಿ ಜನರೇ ಕಾಯಾಗಿ
ನೀನೇ ಕಲಿಯಾಗಿ ರಣರಂಗ ಸಾಗಿ.....ಆ.......
ನೀನೇ ಕಲಿಯಾಗಿ ರಣರಂಗ ಸಾಗಿ
ನಗುವೇ ನೀ ತೂಗಿ... ನಗುವೇ ನೀ ತೂಗಿ
ನಟವರ ಗಂಗಾಧರ 
ತೋರಿನಲವಿಂದ ನೀ ಬಾಳಿನಂದ
ಭ್ರಮೆಯ ತುಂಬಿಡುವೆ ದಾರಿ ಕವಲಾಗಿ
ಮನಮಾರುವಾಗ ಪ್ರಭುವೇ ಮುಂದಿಡುವೆ
ಪ್ರಭುವೇ ಮುಂದಿರುವೆ
ನಟವರ ಗಂಗಾಧರ
ಉಮಾಶಂಕರನೀ ಲೀಲಾ  ವಿನೋದ ವಿಹಾರ
ನಟವರ ಗಂಗಾಧರ
-------------------------------------------------------------------------------------------------------------------
ಸ್ವರ್ಣ ಗೌರಿ (೧೯೬೨) ...................ಬಾರಾ ಚಂದ್ರಮ
ಸಾಹಿತ್ಯ : ಡಾ.ಎಸ್.ಕೆ.ಕರೀಂಖಾನ್ ಸಂಗೀತ : ಎಂ.ವೆಂಕಟರಾಜು ಗಾಯನ : ಡಾ.ಪಿ.ಬಿ.ಶ್ರೀನಿವಾಸ ಮತ್ತು ಎಸ್.ಜಾನಕಿ
ಹೆಣ್ಣು : ಮೂಡಿ ಸಾವಿರ ದಳದಿ ಕಾಯುತಿರುವೆನು ನಿನ್ನ
          ಪ್ರೇಮ ಸಾರದ ಮಧುವ ಸವಿಯಲಾರೆನು ಮುನ್ನ
          ಈ ಅಲೆಯ ಸಂಕೋಲೆ ಕಳಚಿ ಬರಲಾರೆನು
          ನಲವಿಂದ ಮಂಚಾರಿ ನೀ ನೊಲಿದು ಬಾರೆನ್ನ... ಆಆಆ
         ಬಾರಾ ಚಂದ್ರಮ (ಹುಂಹುಂ ) ಚೆನ್ನಾರ ಚೆಲುವ ಬಾರಾ
        ಕಣ್ಣಾಸೆ ತುಂಬಿ ತಾರಾ ಈ ಮೋದ ವಿನೋದ ಮನಕಾ ಮೋದ
ಗಂಡು : ಬಾರೇ ಓ ಸುಮ (ಹುಂಹುಂ )ಕಣ್ಣಾರೆ ಕಂಡೆ ಭಾಮ
            ನಿನ್ನಂಗ ರಂಗ ಸೀಮ ಈ ಮೋದ ವಿನೋದ ಮನಕಾ ಮೋದ
ಹೆಣ್ಣು :  ಬಾರಾ ಚಂದ್ರಮ              
ಹೆಣ್ಣು :  ನಾನೇನು ಬಲ್ಲೆ ಮರಯಾದ ಮೇಲೆ  ತೋರೆಯುವೆ ನೀ ಅನುರಾಗವ
ಗಂಡು :  ಓಓಓಓ ತಾರೇರು ನನ್ನ ಚೆಲುವೇರು ಮುನ್ನ ನೀ ನೀಡು ಆ ಸುರಭೋಗವ
             ಮುನಿಸೇನು ಮೋಹಿನಿ ಕುಣಿದಾಡೋ ಕಾಮಿನಿ
            ಈ ಮೋದ ವಿನೋದ ಮನಕಾ ಮೋದ  ಬಾರೇ ಓ ಸುಮ
ಗಂಡು :  ಬಾರೇ ಓ ಸುಮಾ
ಗಂಡು : ಮನರಾಣಿ ನೀನೇ ಅನುವಾಗು ಜಾಣೆ ಸಾಕಿನ್ನು ಈ ಬಿಗುಮಾನವು
ಹೆಣ್ಣು : ಓಓಓ ... ಬರಲಾರೆ ನಾನು ಬಳಿಸಾರು ನೀನು  ಈ ಬಂಧನ ಅನುಗಾಲವು
          ಮುದಮೋಹ ತಾಳುವ ಸುರಲೀಲೆಯಾಡುವ
         ಈ ಮೋದ ವಿನೋದ ಮನಕಾ ಮೋದ
         ಬಾರಾ ಚಂದ್ರಮ ಚೆನ್ನಾರ ಚೆಲುವ ಬಾರಾ
          ಕಣ್ಣಾಸೆ ತುಂಬಿ ತಾರಾ ಈ ಮೋದ ವಿನೋದ ಮನಕಾ ಮೋದ
ಹೆಣ್ಣು :  ಬಾರಾ ಚಂದ್ರಮ        ಗಂಡು : ಬಾರೇ ಓ ಸುಮ
--------------------------------------------------------------------------------------------------------------------------
ಸ್ವರ್ಣಗೌರಿ (೧೯೬೨)........................ಬಾರೇ ನೀ ಚೆಲುವೆ
ಸಾಹಿತ್ಯ : ಡಾ.ಎಸ್.ಕೆ.ಕರೀಂಖಾನ್ ಸಂಗೀತ : ಎಂ.ವೆಂಕಟರಾಜು ಗಾಯನ : ಡಾ.ಪಿ.ಬಿ.ಶ್ರೀನಿವಾಸ್
ಬಾರೇ ನೀ ಚೆಲುವೆ ನಿನ್ನೊಲವು ನಲವು ಮಕರಂದ
ಬಾರೇ ನೀ ಚೆಲುವೆ ನಿನ್ನೊಲವು ನಲವು ಮಕರಂದ
ನಿನ್ನೊಲವು ಚೆಲುವು ಮನಕಂದ
ಬಾರೇ ನೀ ಚೆಲುವೆ
ನಾರಿ ಶೃಂಗಾರವಾಹಿನಿಯೇ
ನಾರಿ ಶೃಂಗಾರವಾಹಿನಿಯೇ
ಮಧುರ ಮಂದಾರ ಮೋಹಿನಿಯೆ
ಲಲಿತ ಸುಂದರ ರಮಣೀಯೆ
ವಿಲಾಸವ ತೋರು ವಿನೋದವ ಬೀರು
ವನರಾಣಿ ಕಲವಾಣಿ ಚಿಂತಾಮಣಿ
ಬಾರೇ ನೀ ಚೆಲುವೆ
ಮೇಘಮಾಲೆಯೇ ಮುಂಗುರುಳು
ಮೇಘಮಾಲೆಯೇ ಮುಂಗುರುಳು
ಕಮಲ ಸಮ್ಮೊಹ ಕಣ್ಣಿನೊಲು
ನಿನ್ನ ವಾಹನ ಗಿರಿಸಾಲು
ಸುಹಾಸಿನಿ ನೀರೆ ಸುಮೋದವ ತೋರೆ
ವನರಾಣಿ ಕಲವಾಣಿ ಚಿಂತಾಮಣಿ
ಬಾರೇ ನೀ ಚೆಲುವೆ
ಮೌನವಿನ್ನೇಕೆ ಓ ರಮಣಿ
ಮೌನವಿನ್ನೇಕೆ ಓ ರಮಣಿ
ಮನವ ಸೋತೇನು ಲಾಲಿಸು ನೀ
ಒಲಿದು ಬಾರೆ ಸುಮವೇಣಿ
ಪರಾಗವ ಬೀರು ಸರಾಗವ ತೋರು
ವನರಾಣಿ ಕಲವಾಣಿ ಚಿಂತಾಮಣಿ
ಬಾರೇ ನೀ ಚೆಲುವೆ ನಿನ್ನೊಲವು ನಲವು ಮಕರಂದ
ಬಾರೇ ನೀ ಚೆಲುವೆ ನಿನ್ನೊಲವು ನಲವು ಮಕರಂದ
ನಿನ್ನೊಲವು ಚೆಲುವು ಮನಕಂದ
ಬಾರೇ ನೀ ಚೆಲುವೆ
------------------------------------------------------------------------------------------------------------
ಸ್ವರ್ಣ ಗೌರಿ (೧೯೬೨)......................ಜಯಗೌರಿ ಜಗದೀಶ್ವರಿ
ಸಾಹಿತ್ಯ : ಡಾ.ಎಸ್.ಕೆ.ಕರೀಂಖಾನ್ ಸಂಗೀತ : ಎಂ.ವೆಂಕಟರಾಜು ಗಾಯನ : ಎಸ್.ಜಾನಕಿ ಮತ್ತು ಚಿತ್ತರಂಜನ್
ಆ.....ಆ......ಆ.......ಆಆಆ............
ಜಯಗೌರೀ ಜಗದೀಶ್ವರೀ ಜಯಗೌರೀ ಜಗದೀಶ್ವರೀ
ಕಾವುದೆನ್ನ ಕಲಾಸಾಗರೀ...  ಜಯಗೌರೀ ಜಗದೀಶ್ವರೀ
ಸುಮಧುರಗಾನ ಸುಲಲಿತತಾಣ
ಸುಮಧುರಗಾನ ಸುಲಲಿತತಾಣ
ಬೇಡುವೆನಾ ಸುಧಾಮಯಿದಾನ
ಧಿಮಿಕಿಟತಾಳ ಸ್ವರಾವಳಿ ಮೇಳ
ಧಿಮಿಕಿಟತಾಳ ಸ್ವರಾವಳಿ ಮೇಳ
ಮಂಜುಳ ಮಂಗಳ ನಾದನಿ
ಜಯಗೌರೀ ಜಗದೀಶ್ವರೀ
ಲಯಭಯಹಾರೇ ಕರುಣೆಯ ತೋರೆ
ವರವೀಯೆ ನಿರಾಮಯೆ ಮಾಯೆ
ಲಯಭಯಹಾರೇ ಕರುಣೆಯ ತೋರೆ
ವರವೀಯೆ ನಿರಾಮಯೆ ಮಾಯೆ
ಪರಶಿವಜಾಯೆ ಪ್ರಭಾವದಿ ಕಾಯೆ
ಪರಶಿವಜಾಯೆ ಪ್ರಭಾವದಿ ಕಾಯೆ
ತಾಯೆ ಮಾಯೆ ದೇವಿಯೆ
ಜಯಗೌರೀ ಜಗದೀಶ್ವರೀ.... ಜಯಗೌರೀ ಜಗದೀಶ್ವರೀ
ಗಮಗಮ ದನಿದನಿ ನಿ ಗಪಮ ಗಪಮ 
ಜಯಗೌರೀ ಜಗದೀಶ್ವರೀ
ಆ.......ಆ...........
ಜಯಗೌರೀ ಜಗದೀಶ್ವರೀ ಜಗದೀಶ್ವರೀ
ಜಗದೀಶ್ವರೀ ಜಗದೀಶ್ವರೀ ಜಗದೀಶ್ವರೀ
--------------------------------------------------------------------------------------------------------------------------
ಸ್ವರ್ಣಗೌರಿ (1962)...........................ನುಡಿಮನ ಶಿವಗುಣ 
ಸಾಹಿತ್ಯ : ಡಾ.ಎಸ್.ಕೆ.ಕರೀಂಖಾನ್ ಸಂಗೀತ : ಎಂ.ವೆಂಕಟರಾಜು ಗಾಯನ: ಡಾ.ಪಿ.ಬಿ.ಶ್ರೀನಿವಾಸ್ ಮತ್ತು ಪಿ.ಸುಶೀಲ 
ಹೆಣ್ಣು : ಓಂಕಾರ ನಾದಸ್ವರೂಪ ಬಾಲೇಂದುಭೂಷಣ ಕಲಾಪ
          ನಿಗಮ ಭುವನದೀಪ ನಟರಾಜ ನಮಾಮಿ ನಟರಾಜ ನಮಾಮಿ
ಪಿ.ಬಿ.ಶ್ರೀ : ನುಡಿಮನ ಶಿವಗುಣ ಸಂಕೀರ್ತನ
               ನುಡಿಮನ ಶಿವಗುಣ ಸಂಕೀರ್ತನ
               ನಿಜಪದ ಪಾವನ ನೋಡಿ ಪಾಡುವೆನ
               ನಿಜಪದ ಪಾವನ ನೋಡಿ ಪಾಡುವೆನ
               ನುಡಿಮನ ಶಿವಗುಣ ಸಂಕೀರ್ತನ
ಪಿ.ಸುಶೀಲ:  ನಾಟ್ಯಲೀಲ ನಟನಾಲೋಲ ನೀನೇ ಭಾವರಸಾಲ
                 ನೀನೇ ಭಾವರಸಾಲ
ಪಿ.ಬಿ.ಶ್ರೀ : ನಾಟ್ಯಲೀಲ ನಟನಾಲೋಲ ನೀನೇ ಭಾವರಸಾಲ
               ನೀನೇ ಭಾವರಸಾಲ
ಪಿ.ಸುಶೀಲ: ಕುಣಿಸುವಾ ಮನ ತಣಿಸುವ ಕುಣಿಸುವಾ ಮನ ತಣಿಸುವ
                ಕಮನೀಯ ಕಾಮಹರದೇವ
                ನುಡಿಮನ ಶಿವಗುಣ ಸಂಕೀರ್ತನ
ಪಿ.ಬಿ.ಶ್ರೀ : ನಾದಸಾರ ನಿಗಮಾಕಾರ ನೀನೇ ಗಾನವಿಹಾರ
               ನೀನೇ ಗಾನವಿಹಾರ
ಪಿ.ಸುಶೀಲ: ನಾದಸಾರ ನಿಗಮಾಕಾರ ನೀನೇ ಗಾನವಿಹಾರ
               ನೀನೇ ಗಾನವಿಹಾರ
ಪಿ.ಬಿ.ಶ್ರೀ: ಪ್ರಚನ ನೀ ಮಧುವಚನ ನೀ
ಪಿ.ಸುಶೀಲ: ಪ್ರಚನ ನೀ ಮಧುವಚನ ನೀ
ಇಬ್ಬರೂ :  ನವರಾಗ ತಾಳ ಲಯ ತಾನಾ
              ನುಡಿಮನ ಶಿವಗುಣ ಸಂಕೀರ್ತನ
              ನಿಜಪದ ಪಾವನ ನೋಡಿ ಪಾಡುವೆನ
              ನಿಜಪದ ಪಾವನ ನೋಡಿ ಪಾಡುವೆನ
              ನುಡಿಮನ ಶಿವಗುಣ ಸಂಕೀರ್ತನ
ಪಿ.ಬಿ.ಶ್ರೀ : ಗಮದನಿಸನಿದಪ ನಿದಪಮಗಪಮರಿಸ ಗರಿಗರಿಸನಿಪ................
------------------------------------------------------------------------------------------------------------------------
ಸ್ವರ್ಣಗೌರಿ (1962)...........................ಓ ಜನನೀ ಕಲ್ಯಾಣಿ!
ಸಾಹಿತ್ಯ : ಡಾ.ಎಸ್.ಕೆ.ಕರೀಂಖಾನ್ ಸಂಗೀತ : ಎಂ.ವೆಂಕಟರಾಜು ಗಾಯನ: ಎಸ್.ಜಾನಕಿ 
ಓ ಜನನೀ ಕಲ್ಯಾಣಿ! ಪತಿಯ ಪರಿಪಾಲಿಸಮ್ಮ ಭವಾನಿ
ನೀನೆ ಗತಿ ದಾಯಿನಿ....  ಓ ಜನನೀ ಕಲ್ಯಾಣಿ!
ಮನದಾನಂದ ಮನೋಹರ ಬಾಳು..
ವಿಧಿ ತಂದ ವಿಯೋಗದ ಗೋಳು
ಮನದಾನಂದ ಮನೋಹರ ಬಾಳು..
ವಿಧಿ ತಂದ ವಿಯೋಗದ ಗೋಳು
ಮತಿಯು ಮರುಳಾಗಿ ಗತಿ ಹೀನಳಾಗಿ
ಬಂದೆ ನೀ ಲಾಲಿಸಮ್ಮ ಶರ್ವಾಣಿ
ಕರುಣಿ ಕಾತ್ಯಾಯಿನಿ....  ಓ ಜನನೀ ಕಲ್ಯಾಣಿ!
ಸುಖ ಸಂತೋಷ ವಿನೋದವ ಕಾಣೆ..
ಪತಿಸೇವಾ ಪರಾಜಿತೆ ನಾನೆ
ಸುಖ ಸಂತೋಷ ವಿನೋದವ ಕಾಣೆ..
ಪತಿಸೇವಾ  ಪರಾಜಿತೆ ನಾನೆ
ಪತಿಯ ಸುಖಕಾಗಿ ಸವಿಬಾಳಿಗಾಗಿ
ಬಲಿಯು ನಾನಾದೆನಮ್ಮ ಸುವ್ವಾಲಿ
ನಲಿಯೆ ನಾರಯಣಿ ಓ ಜನನೀ ಕಲ್ಯಾಣಿ!  ಪತಿಯ ಕಾಪಾಡಮ್ಮ
ಪತಿಯ ಕಾಪಾಡಮ್ಮ....  ಕಾಪಾಡಮ್ಮ....    |
------------------------------------------------------------------------------------------------------------------------
ಸ್ವರ್ಣಗೌರಿ (1962)...........................ನ್ಯಾಯವಿದೇನಮ್ಮ?
ಸಾಹಿತ್ಯ : ಡಾ.ಎಸ್.ಕೆ.ಕರೀಂಖಾನ್ ಸಂಗೀತ : ಎಂ.ವೆಂಕಟರಾಜು ಗಾಯನ: ಎಸ್.ಜಾನಕಿ 
ನ್ಯಾಯವಿದೇನಮ್ಮ?  ಧರ್ಮವಿದೇನಮ್ಮ?
ಬಂದಿಹೆ ನಿನ್ನ ಚರಣದೊಳೆನ್ನ ಬಿನ್ನಹ ಕೇಳಮ್ಮ
ನಿರಾದಾರಿ ಯಾದೆ ನನ್ನ ಜೀವನ ನೋಡಮ್ಮ
ನ್ಯಾಯವಿದೇನಮ್ಮ?  ಧರ್ಮವಿದೇನಮ್ಮ?
ಬಂದಿಹೆ ನಿನ್ನ ಚರಣದೊಳೆನ್ನ ಬಿನ್ನಹ ಕೇಳಮ್ಮ
ನಿರಾದಾರಿ ಯಾದೆ ನನ್ನ ಜೀವನ ನೋಡಮ್ಮ
ನ್ಯಾಯವಿದೇನಮ್ಮ?  ಧರ್ಮವಿದೇನಮ್ಮ?
ತವ ಚರಣ ನಂಬಿ ನಿಜಕರಣ ತುಂಬಿ ಭರದಿಂದ ಚಿಮ್ಮಿ ಬಂದೆನೆ
ಮಣ್ಣಾಯಿತೆನ್ನ ಸವಿಬಾಳ ಬಣ್ಣ ಜಗದಂಬೆ ಕುಂದಿ ನೊಂದೆನೆ
ಗತಿ ನೀನೆ ತೋರಮ್ಮ ವರದಾನ ನೀಡಮ್ಮಾ!
ಚಿದಾನಂದ ಮಾಯೆ ನಿನ್ನ ಮೌನ ವಿದೇನಮ್ಮಾ?
ನ್ಯಾಯವಿದೇನಮ್ಮ?  ಧರ್ಮವಿದೇನಮ್ಮ?
ಪತಿದೇವ ಸತಿಯ ಜೀವ ಮುಡಿಯ ಕುಸುಮದಾನ
ನಿಜ ಯೌವನ್ನ ಸುಖ ಬಂದನ ಮಧುರ ಜೀವ ಮಾನ
ಹಣೆಯ ಚಂದನವು ಸುಮನ ಮನ ಮೋಹನ ಜಾಣ
ಪತಿ ದೇವನ ತೋರಿಸು ನೀ  ಬಿಡು ಬಿಗುಮಾನ
ಆಣೆ ಇದೆ ಜನನಿ ನೀ ಆಲಿಸು ಭವಾನಿ!
ಧಗಧಗಧಗವೆನೆ ಪ್ರಳಯ ಜ್ವಾಲೆಯೆ ಜಗವ ತುಂಬಲೀ!
ಸುರವನ ಗಿರಿಗುಡುಗಾಡಿ ಧರಣಿ ಬಿರುದಿ ನುಂಗಿ ನಗಲೀ!
ನದಿ ನದಾಳಿ ಹೊಮ್ಮಿ ಲೋಕದೊಳ್ ನಾಶವನ್ನೆ ತರಲೀ!
ಮೃಡಾನಿ ಲಾಲಿಸು ನೀ, ಬಳಿಸಾರಿದೆ ನಾ ಜನನೀ!
ಚಂಡ ಮುಂಡ ದೈತ್ಯಾದಿ ನಾಷಿನಿ ಶುಂಭ ನಿಶುಂಬ ನಿಶೂದಿನಿ
ಕರುಣೆ ತೋರು ಜನನಿ ಕರುಣೆ ತೋರು ಜನನಿ
ಜನನೀ!   ಜನನೀ!  ಜನನೀ!
------------------------------------------------------------------------------------------------------------------------
ಸ್ವರ್ಣಗೌರಿ (1962)..........................ಕನಲಿ ಕಾದಂತ ಕಾಲನ
ಸಾಹಿತ್ಯ : ಡಾ.ಎಸ್.ಕೆ.ಕರೀಂಖಾನ್ ಸಂಗೀತ : ಎಂ.ವೆಂಕಟರಾಜು ಗಾಯನ: ಎಸ್.ಜಾನಕಿ
ಕನಲಿ ಕಾದಂತ ಕಾಲನ ಕರುಣೆ ಕೋರಿ
ವಿಧಿಗೆ ಇದಿರಾಡಿ ಮೃತನಾದ ಪತಿಯ ಲಬ್ಧ ಜೀವಿತ ಮಾಡಿ
ವರಗಳ ಸಾರಿಕುಂದಿ ಮಿರಿಯೆ ಸಾವಿತ್ರಿ ನಿಜ ಸತಿ ಧರ್ಮ ಮಹಿಮಾ...
ಅ ಅ ಅ ಅ ಅ ಅ ಆ ಆ ಆ ಅ ಅ ಅ ಆ
ನಿಜ ಪತಿಯ ಅತ್ತೆ-ಮಾವರ ಜನನೀ-ಜನಕರನು..
ತನ್ನ ಸಕಲ ಕುಲವನು
ಘನವೆನೆ ಉದ್ದರಿಸಿದಳು ಜನವರಾ..
ಸಾವಿತ್ರಿ ಜನ್ಮ ಚರಿತ್ರೆಯ ಕೇಳೂ
ಅ ಅ ಅ ಅ ಆ
-------------------------------------------------------------------------------------------------------------------------
ಸ್ವರ್ಣಗೌರಿ (1962)...........................ವಿಮಲ ನೀಲ ಜಲದೊಳೇನು
ಸಾಹಿತ್ಯ : ಡಾ.ಎಸ್.ಕೆ.ಕರೀಂಖಾನ್ ಸಂಗೀತ : ಎಂ.ವೆಂಕಟರಾಜು ಗಾಯನ: ಎಸ್.ಜಾನಕಿ
ವಿಮಲ ನೀಲ ಜಲದೊಳೇನು
ಅಲೆಯ ಕಲಕಲ ಮೇಲಾ
ಒಲವನರಿಯನೆ ಮನದೊಳೇನು
ನಲಿವದ ಸಮಯ ಲೀಲಾ
ಈ ಲೀಲಾ ವಿಲಾಸ ವಿನೊದ ಕಾಣೆನು..
ಆನಂದ ಬಾನು ತುಂಬಿ ಜೇನು ತಂದನೆನು? |೨|
ಈ ಲೀಲಾ ವಿಲಾಸ!
ಗಾಳಿ ತೇಲಿ ಮಂದಾರ ಮಾಲಿ..
ಮನವು ಕೇಳಿ ಮಕರಂದ ಲಾಲಿ |೨|
ಮಧುರ ರಾಗ ಅನುರಾಗ ತಾಳಿ |೨|
ನೂತನ.. ಭಾವನ
ಏನೊ ಈ ಮಾಯೆ ಕಾಣೆನಾ!
ಆನಂದ ಬಾನು ತುಂಬಿ ಜೇನು ತಂದನೆನು?
ಈ ಲೀಲಾ ವಿಲಾಸ!
ಸುಮವಿಗಾನ ವನಮೊಹ ಜಾಲ..
ಮೊರೆಯೆ ಗಂಗಾ ನವರಾಗ ಮಾಲ |೨|
ಬೆಳಗುತಾನೆ ನಿಜರೂಪ ಲೀಲ |೨|
ಕಾಣಲೇ.. ಕಾಣನು
ಏನೊ ಈ ಮಾಯೆ ಕಾಣೆನಾ!
ಆನಂದ ಬಾನು ತುಂಬಿ ಜೇನು ತಂದನೆನು?
ಈ ಲೀಲಾ ವಿಲಾಸ!
ಮಧು ವಸಂತ ನೀ ತೋರು ನಾಮ..
ಆರವದನ ನಯನಾಭಿ ರಾಮ
ಮಧು ವಸಂತ ನೀ ತೋರು ನಾಮ
ಗುಂಡಗಳಿರ ಇವನಾರು ಕಾಮ?
ಕಾಣಿರಾ.. ಕೇಳಿರಾ
ಏನೊ ಈ ಮಾಯೆ ಕಾಣೆನಾ!
ಆನಂದ ಬಾನು ತುಂಬಿ ಜೇನು ತಂದನೆನು?
ಈ ಲೀಲಾ ವಿಲಾಸ ವಿನೊದ ಕಾಣೆನು
ಆನಂದ ಬಾನು ತುಂಬಿ ಜೇನು ತಂದನೆನು?
ಈ ಲೀಲಾ ವಿಲಾಸ!
-----------------------------------------------------------------------------------------------------------------------
ಸ್ವರ್ಣಗೌರಿ (1962)..........................ಹಾಡಲೇನು ಮನದಾಸೆ
ಸಾಹಿತ್ಯ : ಡಾ.ಎಸ್.ಕೆ.ಕರೀಂಖಾನ್ ಸಂಗೀತ : ಎಂ.ವೆಂಕಟರಾಜು ಗಾಯನ:ಎಸ್.ಜಾನಕಿ
ಆ ಆ ಆ ಆ ಆ  ಹಾಡಲೇನು.. ಮನದಾಸೆ.. ನಾನು
ಕನಸು ಕಂಡೇನು ನಾನು.. ಹಾಡಲೇನು ಮನದಾಸೆ ನಾನು
ಕನಸು ಕಂಡೇನು.. ನಾನು ಹಾಡಲೇನು
ಅನುರಾಗದಿನ ಲತೆಯಾಗಿಹೆನೆ..
ಪ್ರಿಯಮಾಮರನ ಜೊತೆಗೂಡಿದೆನೆ
ಅನುರಾಗದಿನ ಲತೆಯಾಗಿಹೆನೆ..
ಪ್ರಿಯಮಾಮರನ ಜೊತೆಗೂಡಿದೆನೆ
ನವ ವಸಂತನು ಬಂದನೆ
ಆಶಾ ಕುಸುಮ ನಲಿದಾಡುವಾಗ
ಆಶಾ ಕುಸುಮ ನಲಿದಾಡುವಾಗ ಗಾಳಿ ಬೀಸಿತೆನೆ.....
ಹಾಡಲೇನು ಮನದಾಸೆ ನಾನು
ಕನಸು ಕಂಡೇನು.. ನಾನು ಹಾಡಲೇನು
ಮಧು ಚಂದಿರನ ನಾ ಕೋರಿದೆನೆ..
ಮುದ ತಾಳುತಲಿ ಅದ ನೋಡಿದೆನೆ |
ಮಧು ಚಂದಿರನ ನಾ ಕೋರಿದೆನೆ..
ಮುದ ತಾಳುತಲಿ ಅದ ನೋಡಿದೆನೆ |
ವಿಧಿ ವಿಲಾಸವ ಅರಿಯೆನೆ
ಮಧುರ ಸಾರ ಕನಸಳಿಯಿತೀಗ
ಮಧುರ ಸಾರ ಕನಸಳಿಯಿತೀಗ
ಕಣ್ಣ ತೆರೆದೇನೆ ಕಥೆಯ ಕಾಣೇನೆ!
-------------------------------------------------------------------------------------------------------------------------
ಸ್ವರ್ಣಗೌರಿ (1962)...........................ಬಂತು ನವಯೌವ್ವನ
ಸಾಹಿತ್ಯ : ಡಾ.ಎಸ್.ಕೆ.ಕರೀಂಖಾನ್ ಸಂಗೀತ : ಎಂ.ವೆಂಕಟರಾಜು ಗಾಯನ: ಎಸ್.ಜಾನಕಿ
ಹೆಣ್ಣು : ಬಂತು ನವಯೌವ್ವನ  ತುಂಬಿ ಸಂಜೀವನ
         ಬಂತು ನವಯೌವ್ವನ..ನೋಡೆನ್ನ ಜಾಣ ತುಂಬಿ ಸಂಜೀವನ
         ನಿನ್ನ ಸರಿಕಾಣೆನ  ಚೆಲ್ವ ಮನ ಮೋಹನ
         ಸುಂದರ ನಂದನ ನನ್ನ ಸಂತೋಷನ
         ಬಂತು ನವಯೌವ್ವನ..ನೋಡೆನ್ನ ಜಾಣ ತುಂಬಿ ಸಂಜೀವನ
ಸಂಗಡಿಗರು:  ಮಲ್ಲಿಗೆ ನಗುವನು ತಾರ ಹುಣ್ಣಿಮೆ ಚಂದಿರ ಬಾರ
                    ಮಲ್ಲಿಗೆ ನಗುವನು ತಾರ ಹುಣ್ಣಿಮೆ ಚಂದಿರ ಬಾರ
ಹೆಣ್ಣು : ಬಂತು ನವಯೌವ್ವನ..ನೋಡೆನ್ನ ಜಾಣ ತುಂಬಿ ಸಂಜೀವನ
ಹೆಣ್ಣು :  ಮೌನ ಬಿಡು ರನ್ನ ಸವಿ ಬಾಳ ಮಧು ಚೆನ್ನ
          ಜೇನಾಗಿ ಬಾರೆನ್ನ ರಾಜ ರಾಜ ರಾಜ!
          ರೂಪು ಯೌವನ.. ಬೋಗ  ಜೀವನ
          ರೂಪು ಯೌವನ.. ಬೋಗ  ಜೀವನ ಬೇಕೆ ಜಾಣ?
          ಬಂತು ನವಯೌವ್ವನ..ನೋಡೆನ್ನ ಜಾಣ ತುಂಬಿ ಸಂಜೀವನ
ಹೆಣ್ಣು : ಬಾರದಿನ್ನೆಂದು ಈ ಪ್ರಣಯ ಸುಖವೊಂದು
          ಒಂದಾಡಿ ಕೂಡೆನ್ನ ಮಾರ ನೀರ ಧೀರ
ಸಂಗಡಿಗರು:  ನಿರುಪಮ ಬಂದನ ಮನಹರ ಚತುರ ಬಾರ ಸುಂದರ 
                    ನಿರುಪಮ ಬಂದನ ಮನಹರ ಚತುರ ಬಾರ ಸುಂದರ
ಹೆಣ್ಣು : ಬಾರದಿನ್ನೆಂದು ಈ ಪ್ರಣಯ ಸುಖವೊಂದು
          ಒಂದಾಡಿ ಕೂಡೆನ್ನ ಮಾರ ನೀರ ಧೀರ
          ಗಾನ ನರ್ತನ.. ರಾಗ ರಂಜನ
          ಗಾನ ನರ್ತನ.. ರಾಗ ರಂಜನ ಬೇಕೆ ಜಾಣ?
          ಬಂತು ನವಯೌವ್ವನ..  ನೋಡೆನ್ನ ಜಾಣ ತುಂಬಿ ಸಂಜೀವನ
ಸಂಗಡಿಗರು: ಮಲ್ಲಿಗೆ ನಗುವನು ತಾರ ಹುಣ್ಣಿಮೆ ಚಂದಿರ ಬಾರ
                  ಮಲ್ಲಿಗೆ ನಗುವನು ತಾರ ಹುಣ್ಣಿಮೆ ಚಂದಿರ ಬಾರ
                  ಮಲ್ಲಿಗೆ ನಗುವನು ತಾರ ಹುಣ್ಣಿಮೆ ಚಂದಿರ ಬಾರ 
-------------------------------------------------------------------------------------------------------------------------
ಸ್ವರ್ಣಗೌರಿ (1962)
ಸಾಹಿತ್ಯ : ಡಾ.ಎಸ್.ಕೆ.ಕರೀಂಖಾನ್ ಸಂಗೀತ : ಎಂ.ವೆಂಕಟರಾಜು ಗಾಯನ:  ಪಿ.ಲೀಲಾ 
ಲಾಲಿ ಲಾಲಿ ಬಾಲ ಮುಕುಂದ ಲಾಲಿಸು ಜೋಗುಳ ಆನಂದ ಕಂದ
ಲಾಲಿ ಲಾಲಿ ಬಾಲ ಮುಕುಂದ ಲಾಲಿಸು ಜೋಗುಳ ಆನಂದ ಕಂದ
ಲಾಲಿ ಲಾಲಿ ಲಾಲಿ ಚ್ಚು..ಚ್ಚು..ಚ್ಚು
ಮನಗಳ ದೀಪ ಆಶಾರೂಪ ಮಾತಾಪಿತರ ಆಶಾಪ್ರಕಾಶ
ಕೀರ್ತಿಸು ಗಂಧ ಓ ಮುದ್ದು ಕಂದ
ಕೀರ್ತಿಸು ಗಂಧ ಓ ಮುದ್ದು ಕಂದ
ಮಧುರಾನಂದ ಈ ಅನುಬಂಧ 
ಲಾಲಿ ಲಾಲಿ ಲಾಲಿ ಚ್ಚು..ಚ್ಚು..ಚ್ಚು
ಅರಮನೆಯಾಗಲಿ ಗುಡಿಸಲೆಯಾಗಲಿ 
ಮೆರೆಯುವೆ ಆಗಿ ಆನಂದ ಜ್ಯೋತಿ
ಅರಮನೆಯಾಗಲಿ ಗುಡಿಸಲೆಯಾಗಲಿ 
ಮೆರೆಯುವೆ ಆಗಿ ಆನಂದ ಜ್ಯೋತಿ
ಸಿರಿತನ ತಂದರು ಬಡತನ ಬಂದರೂ 
ಸಿರಿತನ ತಂದರು ಬಡತನ ಬಂದರೂ 
ಉಳಿವಂತ ಆಸ್ತಿ ನಿನ್ನಯ ಪ್ರೀತಿ 
ಲಾಲಿ ಲಾಲಿ ಲಾಲಿ ಚ್ಚು..ಚ್ಚು..ಚ್ಚು
ಮಾಲೀಕ ಆಸೆಯ ಸುಮಸಂತಾನ
ಮಾತೆಯ ಪದವೇ ಮಾನ್ಯ ಸಮ್ಮಾನ
ಮಮತೆಯ ಮಡಿಲೇ ನಿನ್ನಯ ಸ್ಥಾನ  
ಮಮತೆಯ ಮಡಿಲೇ ನಿನ್ನಯ ಸ್ಥಾನ 
ಮಾತೆಗೆ ಮಾನ ನಿನ್ನ ಉತ್ಸಾನ
ಲಾಲಿ ಲಾಲಿ ಬಾಲ ಮುಕುಂದ ಲಾಲಿಸು ಜೋಗುಳ ಆನಂದ ಕಂದ
ಲಾಲಿ ಲಾಲಿ ಲಾಲಿ ಚ್ಚು..ಚ್ಚು..ಚ್ಚು
--------------------------------------------------------------------------------------------------------------------------
No comments:
Powered by Blogger.

ಲಾಕಪ್ ಡೆತ್ (1994)

ಲಾಕಪ್ ಡೆತ್ (1994)

ಲಾಕಪ್ ಡೆತ್ ಚಿತ್ರದ ಹಾಡುಗಳು 
ಬಂತು ಬಂತು ಕರೆಂಟ್ ಬಂತು

ಓ.. ಪುಟ್ಟನಂಜ ನೀನು ನಮ್ಮೂರ  

ಕಚ್ಚಿಕೊಂಡೋಣ ಬಾರೋ 

ಜನುಮಾ ನಮಗಿರುವುದು ಒಂದೇ 

ಲಾಕಪ್ ಡೆತ್ (೧೯೯೪)
ಸಂಗೀತ ಮತ್ತು ಸಾಹಿತ್ಯ : ಹಂಸಲೇಖ  ಗಾಯಾನ: ಎಸ್ಪಿ.ಬಿ.ಬಾಲು, ಎಸ.ಜಾನಕಿ
ಕೋರಸ್ : ಹಾಯ್ ಹಾಯ್ ಹಾಯ್ ಹಾಯ್ ಹಾಯ್
                ಬಂತು ಬಂತು ಕರೆಂಟ್ ಬಂತು
               ಬಂತು ಬಂತು ಕರೆಂಟ್ ಬಂತು
               ಯವ್ವನಾ ರಾತ್ರಿಯಲಿ ಕಣ್ಣಿನ ದೀಪದಲಿ ಈ ಗುಂಡಿಗೆ ಗೂಡಿನಲಿ
               ಬಂತು ಬಂತು ಕರೆಂಟ್ ಬಂತು
              ಬಂತು ಬಂತು ಕರೆಂಟ್ ಬಂತು
ಹೆಣ್ಣು : ನಂದು ಕುಂದದ ಟೀನೇಜು, ನಂದು ನಂದದ ವೋಲ್ಟೇಜು 
          ಚಂದ ಚಂದ ಮಾಮ ನಿಂತುಕೊಂಡತಾ ರೋಮ... 
ಕೋರಸ್ : ಹಾಯ್  ಹಾಯ್ ಹಾಯ್ ಹಾಯ್  ಡಾರ್ಲಿಂಗ್   ಹಾಯ್ ಹಾಯ್ ಹಾಯ್ 
ಹೆಣ್ಣು : ನನಗೆ ದಿನವೂ ಎಂಗೇಜು ಹಂಗು ಆಗದು ಮ್ಯಾರೇಜು
          ಅಂದಕೂಡಲೇ ರಾಮ್ ನಿಂಗು ಬಂತ ಪ್ರೇಮ
ಗಂಡು :  ನವಿಲೇ ನವಿಲೇ ಸಿಟಿ ನವಿಲೇ ಗರಿಯ ತೆರೆಯಲಾರೆಯಾ
ಹೆಣ್ಣು : ನವಿಲಾಟ ನೋಡೋದು ಹಿಂದೆಯಲ್ಲಾ ಬಾರಯ್ಯಾ
ಗಂಡು : ಹೇ ಜಿಂಕೆ ಜಿಂಕೆ ಜಿಗಿ ಜಿಂಕೆ ನನ್ನ ಮೇಲೆ ಹಾರೆಯಾ
ಹೆಣ್ಣು : ಜಿಂಕೆ ಜಿಗಿತಾ ನೋಡೋದು ಮಲಗಿ ಅಲ್ಲ ಏಳಯ್ಯಾ
          ಲೈನ್ ಹೊಡೆಯೋ ಕಲೆ ಇಲ್ಲಾ ಪ್ಲಾನ್ ಮಾಡಿ ತಲೆ ಇಲ್ಲ ನಿಂಗೆ ಹೆಣ್ಣೇ ಒಲಿಯಲ್ಲ
          ಬಂತು ಬಂತು ಕರೆಂಟ್ ಬಂತು ಬಂತು ಬಂತು ಕರೆಂಟ್ ಬಂತು
          ಯವ್ವನಾ ರಾತ್ರಿಯಲಿ ಕಣ್ಣಿನ ದೀಪದಲಿ ಈ ಗುಂಡಿಗೆ ಗೂಡಿನಲಿ
           ಬಂತು ಬಂತು ಕರೆಂಟ್ ಬಂತು ಬಂತು ಬಂತು ಕರೆಂಟ್ ಬಂತು
ಕೋರಸ್ : ಹೇ .. ಪಿತಾಪಿತಾಪಿತಾ ಪಿತಾಪು,  ಲಕಲಕ ಲವ್ವಿಗೇ ಲಾಕ್ ಹಾಕು
              ಹನಿ ಹನಿ ಮೂನಿಗೇ ಸೈನ್ ಹಾಕು  ಒಳ್ಳೇ ಯಂತ್ರ ನೀನು ಹೈಜಾಕು
             ಕಿಸೆಯಲಿ ಝಣ ಝಣ ಕೈಹಾಕು  ಒಳ್ಳೇ ಹಣ್ಣು ಇದು ಬಾಯಿ ಹಾಕು
             ಜಗದ ಸನ್ಯಾಸಿ ಸೋಂಬೇರಿ,  ನೀನು  ಹೂಂ ಅಂದ್ರೆ ಸಂಸಾರಿ ಆಆಆ...
ಹೆಣ್ಣು : ವರ್ಣ ಬೇಧ ಹೋಗಿಲ್ಲಾ.. ಮೇಲು ಕೇಳು ಮರೆತಿಲ್ಲಾ
         ಒಂಟಿ ಹುಡುಗಿ ಹಿಂದೆ ಕಳ್ಳರೆಲ್ಲಾ ಒಂದೇ..
ಕೋರಸ್ : ಹಾಯ್  ಹಾಯ್ ಹಾಯ್ ಹಾಯ್  ಡಾರ್ಲಿಂಗ್   ಹಾಯ್ ಹಾಯ್ ಹಾಯ್ 
ಹೆಣ್ಣು : ಹೇ ಜಾತಿ ಜಾತಿ ಸೇರಲ್ಲಾ.. ಭಾಷೆ ಭಾಷೆ ಬೇರೆಯೋಲ್ಲಾ
          ಹುಡುಗಿ ಅಂದ್ರೆ ಮಂದಿ,  ಜಾತಿ ಗೀತಿ ಚಿಂದಿ
ಗಂಡು: ಮಿಂಚೆ ಮಿಂಚೆ ಮರಿ ಮಿಂಚೆ, ಮಿಂಚೇ ಹಂಚಿ ನೀಡೆಯಾ
ಹೆಣ್ಣು : ಮಿಂಚನು ಮುಟ್ಟಿದರೆ ಸುಟ್ಟು ಹೋಗಲಾರೆಯಾ
ಗಂಡು: ರತಿಯೇ ರತಿಯೇ ನವ ರತಿಯೇ ಸ್ವಾತಿ ಮುತ್ತ ನೀಡೆಯಾ
ಹೆಣ್ಣು: ರತಿ ಕಾಟ ಸೋಕಿದರೆ ಮಂಚ ಹಿಡಿಯಲಾರೆಯಾ
         ಟಚ್ ಕೊಟ್ರೇ ಪೆಚ್ಚಾಗತಿ, ಕಿಸ್ಸು ಕೊಟ್ರೆ ಪುಸ್ಸಗಾತಿ.. (ಅಯ್ಯೋ)
         ಫ್ಯೂಸ್ ಹೋದರೇ ಲೈನ್ ಆಗತೀ...
ಕೋರಸ್ : ಬಂತು ಬಂತು ಕರೆಂಟ್ ಬಂತು ಬಂತು ಬಂತು ಕರೆಂಟ್ ಬಂತು
               ಯವ್ವನಾ ರಾತ್ರಿಯಲಿ ಕಣ್ಣಿನ ದೀಪದಲಿ ಈ ಗುಂಡಿಗೆ ಗೂಡಿನಲಿ
               ಬಂತು ಬಂತು ಕರೆಂಟ್ ಬಂತು ಬಂತು ಬಂತು ಕರೆಂಟ್ ಬಂತು
------------------------------------------------------------------------------------------------------------------------
ಲಾಕಪ್ ಡೆತ್ (೧೯೯೪)
ಸಂಗೀತ ಮತ್ತು ಸಾಹಿತ್ಯ : ಹಂಸಲೇಖ  ಗಾಯಾನ: ಎಸ್ಪಿ.ಬಿ.ಬಾಲು, ಕೆ.ಎಸ.ಚಿತ್ರಾ 
ಓಓಓಓಓಓಓ..... ಓಓಓಓಓಓಓ.....
ಹೆಣ್ಣು : ಓ.. ಪುಟ್ಟನಂಜ ನೀನು ನಮ್ಮೂರ ಹೊಕ್ಕಲುಂಜ
ಗಂಡು : ಓ.. ಪುಟ್ಟನಂಜಿ ನೀನು ನಮ್ಮೂರ ಪೂಕ್ಕಳಂಜಿ
ಹೆಣ್ಣು : ಸುತ್ತಾಲೂ ಹೆಂಗಸರೇ ಗೊತ್ತಾಗಿ ಹಂಗಿಸಾರೆ  ಮುದ್ದಾಟ ಬಯಲಲ್ಲಿ
ಗಂಡು : ಒಹ್ ಪುಟ್ಟನಂಜಿ  ಓಹೋಹೋ ಪುಟ್ಟನಂಜಿ
ಹೆಣ್ಣು:  ನಾನು ಸಂಜೇಲಿ ಕಾಯುತಿನೀ  ನಾನು ಮುಂಜಾನೆ ಕೂಗುತೀನಿ
ಗಂಡು : ಓ.. ಪುಟ್ಟನಂಜಿ ನೀನು ನಮ್ಮೂರ ಪೂಕ್ಕಳಂಜಿ
ಹೆಣ್ಣು : ಓ.. ಪುಟ್ಟನಂಜ ನೀನು ನಮ್ಮೂರ ಹೊಕ್ಕಲುಂಜ 
ಗಂಡು : ತಾಳ ನಂಜಿ ತಾಳ ಒಡಬ್ಯಾಡ  ಮರೆಯೊಳಗೆ ಮುದ್ದುಮಾಡ
ಹೆಣ್ಣು : ಕೇಳ್ ನಂಜ ಕೇಳ್ ಕಾಡಬ್ಯಾಡ ಬಿಸಿಲೊಳಗೆ ಬಿಸಿಬ್ಯಾಡ
ಗಂಡು : ತಾಳ ನಂಜಿ ತಾಳ ಅಂಜಬೇಡಾ ಬಿಸಿ ಮೈಯ್ ಕಾಸಬ್ಯಾಡ
ಹೆಣ್ಣು : ನಮ್ಮೂರು ನಿಯಮಗಳ ತವರು ಪಂಚಾಯ್ತಿ ಬಾಯಿಗಳು ಜೋರು
         ಗುಲ್ಲಾದರೇ ಗಡಿಪಾರು, ಪಾರು ಪಾರು ಮಾಡು ಪಾರು
ಗಂಡು : ಗುಟ್ಟೇನೈತೆ ನಾನು ನೀನು ಪ್ರೀತಿ ಮಾಡುತೀವಿ
ಹೆಣ್ಣು :  ಬೀದಿಮೇಲೆ ಹಾಡಿಕೂಡಿ ಕೆಟ್ಟಾಗುತ್ತಿವಿ
ಗಂಡು : ತಪ್ಪೇನೈತಿ ನಾಳೆ ನಾವೂ ಮದುವೆ ಆಗುತೀವಿ
ಹೆಣ್ಣು : ಮದುವೆ ಮಾತ್ರ ಬೀದಿಲಿದ್ರೆ ಊರು ಗೆಲ್ಲುತೀವಿ
ಗಂಡು : ಓ.. ಪುಟ್ಟನಂಜಿ ನೀನು ನಮ್ಮೂರ ಪೂಕ್ಕಳಂಜಿ
ಹೆಣ್ಣು : ಓ.. ಪುಟ್ಟನಂಜ ನೀನು ನಮ್ಮೂರ ಹೊಕ್ಕಲುಂಜ
ಗಂಡು : ಎಲ್ಲಾರೂ ನಮ್ಮವರೂ ತುಂಟಾಟ ಮೆಚ್ಚುವರು ತಪ್ಪಾದರೂ ತಿದ್ದುತ್ತಾರೇ
ಹೆಣ್ಣು : ಓ.. ಪುಟ್ಟನಂಜ ನೀನು ನಮ್ಮೂರ ಹೊಕ್ಕಲುಂಜ 
          ನಾನು ಮುಂಜಾನೆ ಕೂಗುತೀನಿ
ಗಂಡು : ಇಂದು ಸಂಜೇನೆ ಕಾಯುತಿನೀ
ಹೆಣ್ಣು : ಓ.. ಪುಟ್ಟನಂಜ ನೀನು ನಮ್ಮೂರ ಹೊಕ್ಕಲುಂಜ 
ಗಂಡು : ಓ.. ಪುಟ್ಟನಂಜಿ ನೀನು ನಮ್ಮೂರ ಪೂಕ್ಕಳಂಜಿ
ಹೆಣ್ಣು : ಪ್ಪಿ ಪ್ಪಿ ಪ್ಪಿ ಪ್ಪಿ ಪ್ಪಿ... ಓಓಓಓಓಓಓ
ಗಂಡು : ಹೇ ನಂಜಿ ಈ ಮರದಿಂದೆ ಮರೆ ಆಯ್ತೆ ಬಾ ಬಾ
ಹೆಣ್ಣು : ಅಯ್ಯೋ ಜಾಲಿಮರದ ನೆರಳ ಎಲ್ಲಾ ಕಾಣತೈತೆ
ಗಂಡು : ಕಾಡೋರ ಮೆಚ್ಚುತ್ತಿರಿ ನೀವು  ಹಂಗಾಗಿ ಹೆಚ್ಚುತಿವಿ ನಾವು
           ಕಲ್ಲಹಾಕದೆ ಕೋಲೆತ್ತದೆ ಹಾರುತೈತ ಹಾವು
ಹೆಣ್ಣು : ಹಾಲು ನೀರು ಹಾಕುತೀವಿ ಹಾವು ದೇವರಂತ
ಗಂಡು : ಹಾವು ಹಾನಿ  ಮಾಡದಂತೆ ಪ್ರೀತಿ ಪೂಜೆಯಂತ
ಹೆಣ್ಣು : ಬೆಂಕಿ ಹಾಕಿ ಹಾಡುತೀವಿ ಕಾಮ ಸಾಯಲಂತ
ಗಂಡು : ಕಾಮ ಹೋಗಿ ಪ್ರೀತಿಯಾಗಿ ಜನ್ಮ ತಾಳಿತಂತ
ಹೆಣ್ಣು : ಓ.. ಪುಟ್ಟನಂಜ ನೀನು ನಮ್ಮೂರ ಹೊಕ್ಕಲುಂಜ
ಗಂಡು : ಓ.. ಪುಟ್ಟನಂಜಿ ನೀನು ನಮ್ಮೂರ ಪೂಕ್ಕಳಂಜಿ
ಹೆಣ್ಣು : ಸುತ್ತಲೂ ಹೆಂಗಸರೇ ಗೊತ್ತಾಗಿ ಹಂಗಿಸಿದರೇ ಮುದ್ದಾಟ ಬಯಲಲ್ಲಿ
ಗಂಡು : ಓಹೋ .. ಪುಟ್ಟನಂಜಿ  ಓಹೋಹೋ .. ಪುಟ್ಟನಂಜಿ
           ನಾನು ಸಂಜೇನೆ ಕಾಯುತಿನೀ
ಹೆಣ್ಣು : ನಾನು ಮುಂಜಾನೆ ಕೊಕ್ಕುಕ್ಕೂಕ್ಕೂ
--------------------------------------------------------------------------------------------------------------------------
ಲಾಕಪ್ ಡೆತ್ (೧೯೯೪)
ಸಂಗೀತ ಮತ್ತು ಸಾಹಿತ್ಯ : ಹಂಸಲೇಖ  ಗಾಯಾನ: ಕೆ.ಎಸ.ಚಿತ್ರಾ
ಓಓಓಓಓಓ... ಹೂಂ  ಹೂಂ ಹೂಂ ಹೂಂ ಓಓಓಓಓಓ...
ಕಚ್ಚಿ ಕೊಂಡಾಡೋಣ ಬಾರೋ ಓ ಹುಡುಗ ಓ ಹುಡುಗ..
ಮುಚ್ಚಿಕೊಂಡಾಡೋಣ ಬಾರೋ ಓ ಹುಡುಗ ಓ ಹುಡುಗ
ಬಾಯಿಗೆ ಬಾಯಿಯ ಬೀಗವ ಏರಿಸಿ.... ಓ...
ಕಚ್ಚಿ ಕೊಂಡಾಡೋಣ ಬಾರೋ ಓ ಹುಡುಗ ಓ ಹುಡುಗ..
ಮುಚ್ಚಿಕೊಂಡಾಡೋಣ ಬಾರೋ ಓ ಹುಡುಗ ಓ ಹುಡುಗ
ಸಿಹಿಯೆಲ್ಲಾ ಇಟ್ಟುಕೊಂಡು ಹುಳಿಯೆಲ್ಲ ಬಿಟ್ಟುಕೊಂಡು
ಮಾವಿನ ತೋಪಿನ ತುಂಬಾ ಉರುಳು ಉರುಳಾಡೋಣ
ಎದರು ಬಂದರು ಗಲ್ಲ ನಡುವೆ ಗಾಳಿ ಇಲ್ಲಾ..
ಆಲೆಮನೆಯ ಬೆಲ್ಲ ತುಟಿಯ ಮೇಲೆ ನಲ್ಲ
ಘಮ ಘಮ ಗಂಧ ಚಿಲಿಪಿಲಿ ರಾಗ ಕಚ್ಚುಕೊಂಡಿರುವಾಗ
ಥಕ ಥಕ ಆಸೆ ಮಿಕ ಮಿಕ ಕಣ್ಣು ಬಿಚ್ಚಿಕೊಂಡಿರುವಾಗ
ಕಚ್ಚಿ ಕೊಂಡಾಡೋಣ ಬಾರೋ ಓ ಹುಡುಗ ಓ ಹುಡುಗ..
ಮುಚ್ಚಿಕೊಂಡಾಡೋಣ ಬಾರೋ ಓ ಹುಡುಗ ಓ ಹುಡುಗ
ಹೇ.. ಹೇ.. ಹೇ.. ಹೇ.. ಹೇ.. ಹೇ.. ಹೇ.. ಹೇ.. ಹೇ..
ತಂಗಾಳಿ ತಬಕ್ಕೊಂಡು ಬೆಳದಿಂಗಳ ಮಲಕೊಂಡು
ಉರಿ ಬಂಡೆ ಉತ್ತೋ ಬಿತ್ತೋ ಅನುಕಡೆ ನೋಡೋಣ
ನಾನು ಸೋತರೆ ನೀನು ನೀನು ಸೋತರೆ ನಾನು
ಆಟ ನಡೆಯಬೇಕು ಯಾರು ಗೆದ್ದರೇನು
ಮನಸಿಗೆ ಮನಸು ಮಾತಿಗೆ ಮಾತು ನೆಚ್ಚಿಕೊಂಡಿರುವಾಗ
ಉಸಿರಿಗೆ ಉಸಿರು ಹೆಸರಿಗೆ ಹೆಸರು ಹಚ್ಚಿಕೊಂಡಿರುವಾಗ
ಕಚ್ಚಿ ಕೊಂಡಾಡೋಣ ಬಾರೋ ಓ ಹುಡುಗ ಓ ಹುಡುಗ..
ಮುಚ್ಚಿಕೊಂಡಾಡೋಣ ಬಾರೋ ಓ ಹುಡುಗ ಓ ಹುಡುಗ
ಬಾಯಿಗೆ ಬಾಯಿಯ ಬೀಗವ ಏರಿಸಿ.... ಓ...
ಕಚ್ಚಿ ಕೊಂಡಾಡೋಣ ಬಾರೋ ಓ ಹುಡುಗ ಓ ಹುಡುಗ..
ಮುಚ್ಚಿಕೊಂಡಾಡೋಣ ಬಾರೋ ಓ ಹುಡುಗ ಓ ಹುಡುಗ 
----------------------------------------------------------------------------------------------------------------------
ಲಾಕಪ್ ಡೆತ್ (೧೯೯೪)
ಸಂಗೀತ ಮತ್ತು ಸಾಹಿತ್ಯ : ಹಂಸಲೇಖ  ಗಾಯಾನ: ಎಸ್.ಪಿ.ಬಾಲು 
ಜನುಮಾ... ನಮಗಿರುವುದು ಒಂದೇ ಜನುಮಾ...
ಈ ಜನುಮದಲಿರಲಿ ಧರ್ಮ...
ಉಳಿಸು ಧರ್ಮ  (ರುರುರುರುರೂರ್...)
ಅಳಿಸು ಅಧರ್ಮ (ರುರುರುರುರೂರ್...)
ಗೆಲುವು ಸೋಲೂ ನಿನದೇ ಕೊನೆ ತೀರ್ಮಾನ ....
ಪ್ರಭು ನೀನೆ... ಪ್ರಜೆ ನೀನೆ ...
ಬೂಟು ತೊಟ್ಟ ಭೂತಗಳ ಆಚೆ ಅಟ್ಟಬೇಕು
ಹಾಳು ಬಿದ್ದ ಬೇರುಗಳನ್ನು ಕೀಳಬೇಕು
ಧೀನರನ್ನು ಮುಟ್ಟದಂತ ಕೋಟೆ ಕಟ್ಟಬೇಕು..
ಕೋಟೆಯಡಿ ಭಕ್ಷಕರನ್ನು ಮುಚ್ಚಬೇಕು
ನಾವು ಕೇಳದೇ ನ್ಯಾಯ ದಕ್ಕದು
ನಾವೂ ಕಾಯದೇ ನ್ಯಾಯ ಬಾಳದು
ಪಡೆಯೋ ಪಡೆಯ ಪಾತ್ರ ನಿನದು..
ಪ್ರಭು ನೀನೆ... ಪ್ರಜೆ ನೀನೆ ...
ಜನುಮಾ... ನಮಗಿರುವುದು ಒಂದೇ ಜನುಮಾ...
ಈ ಜನುಮದಲಿರಲಿ ಧರ್ಮ...
ಉಳಿಸು ಧರ್ಮ  (ರುರುರುರುರೂರ್...)
ಅಳಿಸು ಅಧರ್ಮ (ರುರುರುರುರೂರ್...)
ಗೆಲುವು ಸೋಲೂ ನಿನದೇ ಕೊನೆ ತೀರ್ಮಾನ ....
ಪ್ರಭು ನೀನೆ... ಪ್ರಜೆ ನೀನೆ ...
ಭೂಜು ಹಿಡಿದ ಕತ್ತಲೆಯ ಧೂಳು ಕೊಡವಬೇಕು
ತಾತಾನಿತ್ತ  ತಪ್ಪುಗಳನ್ನು ತಿದ್ದಬೇಕು
ಮಾರಿಕೊಳ್ಳೋ ಮಂತ್ರಿಗಳ ಮಾನ ಬಿಚ್ಚಬೇಕು
ಜಾರಿಕೊಳ್ಳು ದಾರಿಗಳನು ಮುಚ್ಚಬೇಕು
ನಾವು ಏಳದೇ ಊರು ಏಳದು
ನಾವೂ ಸಾಯದೇ ಸ್ವರ್ಗ ಕಾಣದು
ಅಳಿಸಿ ಉಳಿಸು ಕಾರ್ಯ ನಿನದು
ಪ್ರಭು ನೀನೆ... ಪ್ರಜೆ ನೀನೆ ...
ಜನುಮಾ... ನಮಗಿರುವುದು ಒಂದೇ ಜನುಮಾ...
ಈ ಜನುಮದಲಿರಲಿ ಧರ್ಮ...
ಉಳಿಸು ಧರ್ಮ  (ರುರುರುರುರೂರ್...)
ಅಳಿಸು ಅಧರ್ಮ (ರುರುರುರುರೂರ್...)
ಗೆಲುವು ಸೋಲೂ ನಿನದೇ ಕೊನೆ ತೀರ್ಮಾನ ....
ಪ್ರಭು ನೀನೆ... ಪ್ರಜೆ ನೀನೆ ...

ಪರೋಪಕಾರಿ (1970)

ಪರೋಪಕಾರಿ (1970)
ಪರೋಪಕಾರಿ ಚಿತ್ರದ ಹಾಡುಗಳು 
ಗುಟ್ಟೊಂದು ಹೇಳುವೆ ಪುಟಾಣಿ ಮಕ್ಕಳೇ 

ಹೋದರೆ ಹೋಗು ನನಗೇನು 

ಐಸ್ ಕ್ರೀಮ್ ಬೇಕೇ ಐಸ್ ಕ್ರೀಮ್ 

ಜೋಕೆ ನಾನು ಬಳ್ಳಿಯ ಮಿಂಚು 

ಕಣ್ಣು ರಪ್ಪೆ ಒಂದಾನೊಂದು ಮರೆವುದೇ 

ಪರೋಪಕಾರಿ (1970) - ಗುಟ್ಟೊಂದು ಹೇಳುವೆ 
ಸಂಗೀತ : ಉಪೇಂದ್ರಕುಮಾರ್ ಸಾಹಿತ್ಯ : ಚಿ. ಉದಯಶಂಕರ್ ಗಾಯನ : ಡಾ. ಪಿ. ಬಿ. ಶ್ರೀನಿವಾಸ್ 
ಗುಟ್ಟೊಂದು ಹೇಳುವೆ ಪುಟಾಣಿ ಮಕ್ಕಳೆ
ಗುಟ್ಟೊಂದು ಹೇಳುವೆ ಪುಟಾಣಿ ಮಕ್ಕಳೆ
ಕೊಟ್ಟಿದ್ದು ತನಗೆ ಬಚ್ಚಿಟ್ಟಿದು ಪರರಿಗೆ
ಗುಟ್ಟೊಂದು ಹೇಳುವೆ ಪುಟಾಣಿ ಮಕ್ಕಳೆ
ಕೊಟ್ಟಿದ್ದು ತನಗೆ ಬಚ್ಚಿಟ್ಟಿದು ಪರರಿಗೆ
ಗುಟ್ಟೊಂದು ಹೇಳುವೆ ಪುಟಾಣಿ ಮಕ್ಕಳೆ
ಹಣವು ಹೇಳಿದಂತೆ ನೀನೆಂದು ಕೇಳಬೇಡ
ಹಣವು ಹೇಳಿದಂತೆ ನೀನೆಂದು ಕೇಳಬೇಡ
ದಾಸನಾಗಿ ಧನಕೆ ನೀನೆಂದು ಬಾಳಬೇಡ
ದಾಸನಾಗಿ ಧನಕೆ ನೀನೆಂದು ಬಾಳಬೇಡ
ಗುಟ್ಟೊಂದು ಹೇಳುವೆ ಪುಟಾಣಿ ಮಕ್ಕಳೆ
ಕೊಟ್ಟಿದ್ದು ತನಗೆ ಬಚ್ಚಿಟ್ಟಿದು ಪರರಿಗೆ
ಗುಟ್ಟೊಂದು ಹೇಳುವೆ ಪುಟಾಣಿ ಮಕ್ಕಳೆ
ನಿಜವ ಕೇಳು ಜಗದಿ ಅನಾಥರಾರು ಇಲ್ಲ
ನಿಜವ ಕೇಳು ಜಗದಿ ಅನಾಥರಾರು ಇಲ್ಲ
ತಂದೆಯಾಗಿ ಮೇಲೆ ಆ ದೇವನಿರುವನಲ್ಲ
ತಂದೆಯಾಗಿ ಮೇಲೆ ಆ ದೇವನಿರುವನಲ್ಲ
ತಂದೆಯಾಗಿ ಮೇಲೆ ಆ ದೇವನಿರುವನಲ್ಲ
ಗುಟ್ಟೊಂದು ಹೇಳುವೆ ಪುಟಾಣಿ ಮಕ್ಕಳೆ
ಕೊಟ್ಟಿದ್ದು ತನಗೆ ಬಚ್ಚಿಟ್ಟಿದು ಪರರಿಗೆ
ಗುಟ್ಟೊಂದು ಹೇಳುವೆ ಪುಟಾಣಿ ಮಕ್ಕಳೆ
ದೇವನೊಬ್ಬನಿರುವ ಅವನೆಲ್ಲ ನೋಡುತಿರುವ
ದೇವನೊಬ್ಬನಿರುವ ಅವನೆಲ್ಲ ನೋಡುತಿರುವ
ಅವನ ನೆರಳಲಿರುವ ನಾವೆಲ್ಲ ಒಂದೇ ಎನುವ
ಅವನ ನೆರಳಲಿರುವ ನಾವೆಲ್ಲ ಒಂದೇ ಎನುವ
ಗುಟ್ಟೊಂದು ಹೇಳುವೆ ಪುಟಾಣಿ ಮಕ್ಕಳೆ
ಕೊಟ್ಟಿದ್ದು ತನಗೆ ಬಚ್ಚಿಟ್ಟಿದು ಪರರಿಗೆ
ಗುಟ್ಟೊಂದು ಹೇಳುವೆ ಪುಟಾಣಿ ಮಕ್ಕಳೆ
ನೆಹರು ಗಾಂಧಿಯಂತೆ ನಿಮ್ಮಲ್ಲಿ ಯಾರು ಇಹರು 
ನೆಹರು ಗಾಂಧಿಯಂತೆ ನಿಮ್ಮಲ್ಲಿ ಯಾರು ಇಹರು 
ಝಾನ್ಸಿರಾಣಿ ಲಕ್ಷ್ಮಿ ಕಸ್ತೂರಿಬಾಯಿ ಯಾರು
ಝಾನ್ಸಿರಾಣಿ ಲಕ್ಷ್ಮಿ ಕಸ್ತೂರಿಬಾಯಿ ಯಾರು
ಗುಟ್ಟೊಂದು ಹೇಳುವೆ ಪುಟಾಣಿ ಮಕ್ಕಳೆ
ಕೊಟ್ಟಿದ್ದು ತನಗೆ ಬಚ್ಚಿಟ್ಟಿದು ಪರರಿಗೆ
ಗುಟ್ಟೊಂದು ಹೇಳುವೆ ಪುಟಾಣಿ ಮಕ್ಕಳೆ
ಕೊಟ್ಟಿದ್ದು ತನಗೆ ಬಚ್ಚಿಟ್ಟಿದು ಪರರಿಗೆ
ಗುಟ್ಟೊಂದು ಹೇಳುವೆ ಪುಟಾಣಿ ಮಕ್ಕಳೆ
-------------------------------------------------------------------------------------------------------------------------
ಪರೋಪಕಾರಿ (1970) - ಹೋದರೆ ಹೋಗೂ ನನಗೇನೂ
ಸಾಹಿತ್ಯ: ಆರ್ ಎನ್.ಜಯಗೊಪಾಲ್ ಸಂಗೀತ: ಉಪೇಂದ್ರಕುಮಾರ್ ಗಾಯನ: ಪಿ.ಬಿ.ಶ್ರೀನಿವಾಸ್ ಮತ್ತು ಎಸ್.ಜಾನಕಿ
ಗಂಡು : ಹೋದರೆ ಹೋಗೂ ನನಗೇನೂ
           ಹೋದರೆ ಹೋಗೂ ನನಗೇನೂ ಕೋಪದಿ ತಾಪದಿ ಫಲವೇನೂ
           ಬಲ್ಲೇ ನಿನ್ನಾ ಈ ವೇಷಾ  ಏಕೇ ನನ್ನಲ್ಲಿ ಈ ರೋಷಾ
           ಓ ಲೀಲಾವತೀ..ಓ ಮೈನಾವತೀ..ಓ ಯಾರೋವತೀ..
ಗಂಡು : ಈ ದಾರಿಯು ಬರೀ ಕಲ್ಲೂ ಬರೀ ಮುಳ್ಳು ಬಲ್ಲೆಯೇನು
           ಈ ಕಾಡಲಿ ಕಳ್ಳರಂತೇ ಕಾಕರಂತೇ ತಿಳಿಯೇ ನೀನು
           ಒಂಟಿಯಾದ ಹೆಣ್ಣು ಬಂಗಾರದಂಥಾ ಹಣ್ಣು
          ಒಂಟಿಯಾದ ಹೆಣ್ಣು ಬಂಗಾರದಂಥಾ ಹಣ್ಣು  ಇಲ್ಲಿ ನಿನ್ನ ಗತಿಯು ಏನೂ..
ಹೆಣ್ಣು : ಏಯ್ ನನ್ನನು ಕಾಡಿ ಫಲವಿಲ್ಲಾ  ಹೆದರುವ ಹೆಣ್ಣು ನಾನಲ್ಲಾ
          ಬಲ್ಲೇ ನಿನ್ನಾ ತುಂಟಾಟ  ಏಕೆ ನನ್ನಲ್ಲಿ ಪುಂಡಾಟ
          ಓ ರಾಜ್ ಕುಮಾರ್.. ಓ ಕಿಶೋರ್ ಕುಮಾರ್.. ಓ ಯಾರೋ ಕುಮಾರ್....
ಹೆಣ್ಣು :  ಗಂಡೆಂದರೆ ಬರೀ ಡಂಭ ಮಹಾ ಜಂಭ ಜಾತಿಯಂತೇ
           ಮಾತೆಲ್ಲವೂ ಬರೀ ಪೊಳ್ಳು ಮಹಾ ಸುಳ್ಳು ಕಂತೆಯಂತೇ
           ಕಳ್ಳಕಾಕರೆಲ್ಲಾ ಇಲ್ಲಾರು ಇಲ್ಲಿ ಇಲ್ಲಾ
           ಕಳ್ಳಕಾಕರೆಲ್ಲಾ ಇಲ್ಲಾರು ಇಲ್ಲಿ ಇಲ್ಲಾ ಇಲ್ಲಿ ನಿಂತ ನೀನೇ ಎಲ್ಲಾ ಹಾ...
ಗಂಡು : ಹೋದರೆ ಹೋಗೂ.ನನಗೇನೋ
ಗಂಡು : ನೀ ಬೀರಿದಾ ಕಲ್ಲು ಕೂಡಾ ಹೂವ ಮಾಲೆ ಆಯಿತಂತೆ
           ನೀ ಬೈದರೆ ಬಿಸಿ ಮಾತು ಜೇನ ಸವಿಯ ಹೊಂದಿತಂತೆ
ಹೆಣ್ಣು : ಭಂಢತನ ಸಾಕು ಇನ್ನೆಷ್ಟು ಹೇಳಬೇಕೂ
          ಭಂಢತನ ಸಾಕು ಇನ್ನೆಷ್ಟು ಹೇಳಬೇಕೂ
          ನಿನ್ನ ದಾರಿ ನೋಡಿಕೊಂಡು ಹೋಗು...
ಗಂಡು : ಹೋದರೆ ಹೋಗೂ ನನಗೇನೂ ಕೋಪದಿ ತಾಪದಿ ಫಲವೇನೂ
ಹೆಣ್ಣು :  ಬಲ್ಲೇ ನಿನ್ನಾ ತುಂಟಾಟ ಏಕೆ ನನ್ನಲ್ಲಿ ಪುಂಡಾಟ
           ಓ ರಾಜ್ ಕುಮಾರ್.. (ಓ ಲೀಲಾವತೀ)
          ಓ ಯಾರೋ ಕುಮಾರ್..(ಓ ಯಾರೋವತೀ.)
----------------------------------------------------------------------------------------------------------------------
ಪರೋಪಕಾರಿ (1970) - ಕಣ್ಣು ರೆಪ್ಪೆ ಒಂದನೊಂದು ಮರೆವುದೇ
ಸಾಹಿತ್ಯ : ಉಪೇಂದ್ರಕುಮಾರ್ ಸಂಗೀತ : ಅರ್.ಎನ್.ಜಯಗೋಪಾಲ್ ಗಾಯನ : ಪಿ.ಬಿ.ಶ್ರೀನಿವಾಸ್, ಎಸ್.ಜಾನಕಿ
ಗಂಡು : ಊ..ಊ ..ಆ.. ಆ.. ಕಣ್ಣು ರೆಪ್ಪೆ ಒಂದನೊಂದು ಮರೆವುದೇ
            ಕಣ್ಣು ರೆಪ್ಪೆ ಒಂದನೊಂದು ಮರೆವುದೇ
           ಅವು ಎಂದಾದರೂ ಅಗಲಿ ಬೇರೆ ಇರುವುದೇ
ಹೆಣ್ಣು : ಲಾಲ ಲಾಲ ಲಾಲ ಲಾಲ ಲಾಲಲ
           ಅವು ಎಂದಾದರೂ ಒಂದನೊಂದು ಮರೆವುದೇ
          ಹೂವು ಗಂಧ ಬೇರೆ ಬೇರೆ ಇರುವುದೇ
ಇಬ್ಬರೂ : ಲಾಲ ಲಾಲ ಉ ಊ ಹೂ..
ಹೆಣ್ಣು : ಎಂದೋ ಎಲ್ಲೋ ನಮ್ಮ ಮಿಲನ ಆಯಿತು
          ಎಂದೋ ಎಲ್ಲೋ ನಮ್ಮ ಮಿಲನ ಆಯಿತು
ಗಂಡು : ಹೇಗೋ ಏನೋ ಒಲವು ಮೂಡಿ ಬೆಳೆಯಿತು
ಹೆಣ್ಣು : ತನುಮನಗಳು ಎಲ್ಲಾ ನಿನ್ನ ವಶವಾಯಿತು
ಗಂಡು : ತನುಮನಗಳು ಎಲ್ಲಾ ನಿನ್ನ ವಶವಾಯಿತು
ಗಂಡು : ನನ್ನಾ ನಿನ್ನ    ಹೆಣ್ಣು : ಊ..ಹೂ..ನನ್ನಾ ನಿನ್ನ   ಗಂಡು : ಆ..ಆ...
ಇಬ್ಬರೂ : ನನ್ನಾ ನಿನ್ನ ಪ್ರೇಮ ಬೆಸುಗೆ ಬಿಡುವುದೇ
ಕಣ್ಣು ರೆಪ್ಪೆ ಒಂದನೊಂದು ಮರೆವುದೇ
ಗಂಡು : ಊರು ಕೇರಿ ಒಂದು ಪ್ರೇಮ ಕೇಳದು   ಹೆಣ್ಣು : ಆ..ಆ..ಆ‌ಅ
ಗಂಡು : ಊರು ಕೇರಿ ಒಂದು ಪ್ರೇಮ ಕೇಳದು
ಹೆಣ್ಣು : ಜಾತಿ ಗೀತಿ ಹೆಸರು ಕೂಡ ತಿಳಿಯದು
ಗಂಡು : ಕುಲ ನೆಲ ಸಿರಿ ಏನೋ ಎಂತೋ ಅದು ನೋಡದು
ಹೆಣ್ಣು : ಕುಲ ನೆಲ ಸಿರಿ ಏನೋ ಎಂತೋ ಅದು ನೋಡದು
ಹೆಣ್ಣು : ಮನ ಮನ     ಗಂಡು : ಮನ ಮನ
ಇಬ್ಬರೂ : ಮನ ಮನ ಮಾತನೊಂದೆ ಅರಿವುದು
ಗಂಡು : ಕಣ್ಣು ರೆಪ್ಪೆ ಒಂದನೊಂದು ಮರೆವುದೇ
           ಅವು ಎಂದಾದರೂ ಅಗಲಿ ಬೇರೆ ಇರುವುದೇ
ಹೆಣ್ಣು :  ಹೂವು ಗಂಧ ಬೇರೆ ಬೇರೆ ಇರುವುದೇ
           ಅವು ಎಂದಾದರೂ ಒಂದನೊಂದು ಮರೆವುದೇ
ಇಬ್ಬರೂ : ಲಾಲ ಲಾಲ ಉ ಊ ಹೂ..
--------------------------------------------------------------------------------------------------------------------------
ಪರೋಪಕಾರಿ (1970)
ಸಾಹಿತ್ಯ : ಉಪೇಂದ್ರಕುಮಾರ್ ಸಂಗೀತ : ಅರ್.ಎನ್.ಜಯಗೋಪಾಲ್ ಗಾಯನ : ಎಲ್.ಆರ್.ಈಶ್ವರಿ 
ಜೋಕೆ.... ನಾನು ಬಳ್ಳಿಯ ಮಿಂಚು ಕಣ್ಣು ಕತ್ತಿಯ ಅಂಚು
ಬಲೆಗೆ ಬಿದ್ದಾಗ ನೀ ಅರಿವೇ ಈ ಸಂಚೂ....         
ಜೋಕೆ.... ನಾನು ಬಳ್ಳಿಯ ಮಿಂಚು ಕಣ್ಣು ಕತ್ತಿಯ ಅಂಚು
ಬಲೆಗೆ ಬಿದ್ದಾಗ ನೀ ಅರಿವೇ ಈ ಸಂಚೂ....        
ಸೊಂಟಾ ಬಳುಕುವಾಗ ಉಯ್ಯಾಲೆ ಆಡುವಾಗ ಉಲ್ಲಾಸ ಪಡು ನೀ ಆಗ...
ತುಂಟು ನಗೆಯ ಬಾಣ ನೆಟ್ಟಾಗ ನಿಂಗೆ ಜಾಣ ನೀನೆನ್ನ ಬಂಧಿ ಆವಾಗ ...
ಸೊಂಟಾ ಬಳುಕುವಾಗ ಉಯ್ಯಾಲೆ ಆಡುವಾಗ ಉಲ್ಲಾಸ ಪಡು ನೀ ಆಗ...
ತುಂಟು ನಗೆಯ ಬಾಣ ನೆಟ್ಟಾಗ ನಿಂಗೆ ಜಾಣ ನೀನೆನ್ನ ಬಂಧಿ ಆವಾಗ ...
ಚೆಂದಾದ ಕೆಂದುಟಿ ಜೇನ ಹೀರುವ ದುಂಬಿ ಆಗು ಬಾ..
ಆದರೇ ನಂತರಾ ಮತ್ತು ಬಂದರೇ ನಿಧಾನ ನಿಧಾನ ....
ಜೋಕೆ.... ನಾನು ಬಳ್ಳಿಯ ಮಿಂಚು ಕಣ್ಣು ಕತ್ತಿಯ ಅಂಚು
ಬಲೆಗೆ ಬಿದ್ದಾಗ ನೀ ಅರಿವೇ ಈ ಸಂಚೂ....          
ಏನು ಹುಡುಕುವೆ ನೀನು ನನ್ನಂದ ನೋಡೆಯೇನು ನನಗಿಂತ ರತಿ ಬೇಕೇನು..
ಹೆಜ್ಜೆ ಇಡುವಾ ಮುನ್ನ ನೀ ನೋಡು ಒಮ್ಮೆ ನನ್ನ..ಸನ್ನೆಯ ತಿಳಿ ಓ ಚೆನ್ನಾ ...
ಏನು ಹುಡುಕುವೆ ನೀನು ನನ್ನಂದ ನೋಡೆಯೇನು ನನಗಿಂತ ರತಿ ಬೇಕೇನು..
ಹೆಜ್ಜೆ ಇಡುವಾ ಮುನ್ನ ನೀ ನೋಡು ಒಮ್ಮೆ ನನ್ನ..ಸನ್ನೆಯ ತಿಳಿ ಓ ಚೆನ್ನಾ ...
ಎಚ್ಚರಾ  ಎಚ್ಚರಾ ದೀಪವಾರಿದೆ ಕತ್ತಲಾಗಿದೆ
ಬಲ್ಲೆಯಾ ಜಾಲದಿ ತಪ್ಪಿ ಓಡುವ ವಿಧಾನ ವಿಧಾನ
ಜೋಕೆ.... ನಾನು ಬಳ್ಳಿಯ ಮಿಂಚು ಕಣ್ಣು ಕತ್ತಿಯ ಅಂಚು
ಬಲೆಗೆ ಬಿದ್ದಾಗ ನೀ ಅರಿವೇ ಈ ಸಂಚೂ....   
ಜೋಕೆ.... ಲಲ್ಲಲಾ ಲ್ಲಾಲ್ಲಲ್ಲಲಾ    
-------------------------------------------------------------------------------------------------------------------------
ಪರೋಪಕಾರಿ (1970)
ಸಾಹಿತ್ಯ: ಆರ್ ಎನ್.ಜಯಗೊಪಾಲ್ ಸಂಗೀತ: ಉಪೇಂದ್ರಕುಮಾರ್ ಗಾಯನ: ಪಿ.ಬಿ.ಶ್ರೀನಿವಾಸ್ 
ಐಸ್ ಕ್ರೀಮ್ ಬೇಕೇ ಐಸ್ ಕ್ರೀಮ್
ಐಸ್ ಕ್ರೀಮ್ ಬೇಕೇ ಐಸ್ ಕ್ರೀಮ್
ಮುಟ್ಟಿ ಒಮ್ಮೆ ಬಾಯಲಿಟ್ಟು ನೋಡಿರಿ ಲೊಟ್ಟೆ ಹೊಡೆದು
ಲೊಟ್ಟೆ ಹೊಡೆದು ಹಣ ಕೊಟ್ಟು ಹೋಗಿರಿ
ಐಸ್ ಕ್ರೀಮ್ ಬೇಕೇ ಐಸ್ ಕ್ರೀಮ್ 
ಐಸ್ ಕ್ರೀಮ್ ಐಸ್ ಕ್ರೀಮ್ ಐಸ್ ಕ್ರೀಮ್ ಐಸ್ ಕ್ರೀಮ್
ಅಳುವ ಮಕ್ಕಳ.. ಆಹೂಂ  ನಗಿಸಿ ನಲಿಸುವ..  ಆಹ್ಹಹ
ಅಳುವ ಮಕ್ಕಳ ನಗಿಸಿ ನಲಿಸುವ ಬಣ್ಣಬಣ್ಣದ ಐಸ್ ಕ್ರೀಮ್
ತರುಣರಿದನು ಕಣ್ಣು ಮುಚ್ಚಿ ತಿನ್ನಲು ಮರೆಯಲಾಗದ ಸ್ವೀಟ್ ಡ್ರಿಮ್
ಓ.. ವಾಟ್ ಎ ಫೈನ್ ಡ್ರೀಮ್ 
ಯುವತಿ ಒಮ್ಮೆ ಇದ ಬಾಯಲಿಟ್ಟರೇ ಮೈಯೆಲ್ಲಾ ಬರಿ ಜುಮ್ ಜುಮ್
ಬೊಕ್ಕು ತಲೆಯ ತಾತಯ್ಯ ತಿಂದರೇ ಬೊಚ್ಚು ಬಾಯೆಲ್ಲ ಘಮ್ ಘಮ್
ಐಸ್ ಕ್ರೀಮ್ ಬೇಕೇ ಐಸ್ ಕ್ರೀಮ್ 
ಯುಡಲಲ್ಲಿಈ.ಹೀ ... ಯುಡಲಲ್ಲಿಈ.ಹೀ 
ಓಟು ಬೇಟೆಗೆ ಓಟ್ ಫಾರ್ ಐಸ್ ಕ್ರೀಮ್  
ಓಟು ಬೇಟೆಗೆ ಎಲ್ಲ ಪಾರ್ಟಿಯು ಉಪಯೋಗಿಸುವುದೇ  ಈ ಐಸ್ 
ಹಚ್ಚಿ ಹಾಕಿಯಜಮಾನರ ಮರ್ಜಿಗೆ ಎಲ್ಲ ಹಚ್ಚುವುದು ಈ ಐಸ್ 
ಮೂರನೇ ಮಡದಿ... ಮೂರನೇ ಮಡದಿ ಮೆಚ್ಚಬೇಕು ತಗೋ ಐಸ್
ಮೆತ್ತಗೆ ಇದನು ಉಪಯೋಗಿಸು 
ಸಿಡುಕ ಗಂಡನ ನಗಿಸು ಒಡವೆಯ ಗಿಟ್ಟಿಸಬೇಕೇ ಹೂಂ ತಗೋ ಐಸ್ 
ಐಸ್ ಕ್ರೀಮ್ ಬೇಕೇ ಐಸ್ ಕ್ರೀಮ್ 
ಐಸ್ ಕ್ರೀಮ್ ಐಸ್ ಕ್ರೀಮ್ ಐಸ್ ಕ್ರೀಮ್ ಐಸ್ ಕ್ರೀಮ್
ಸೋತು ಸೊರಗಿದ ವೀರ ತೆಗೆದುಕೋ ಗೆಲ್ಲಲಿದನು ತಿನ್ನಬೇಕು 
ತಿನ್ನಬೇಕಪ್ಪಾ... ತಿಂದಮೇಲೆ ಉಲ್ಲಾಸದಿಂದಾ ಅವನನ್ನು ಬಡಿಯಬೇಕು  
ಫಟಾ ಫಟ್   ಫಟಾ ಫಟ್  ಫಟಾ ಫಟ್ಫ ಫಟ್ 
ಚೆಲುವೆ ಗಮನವ ಸೆಳೆಯ ಮಾತಲಿ ಸ್ವಲ್ಪ ಬಳಸಲೇ...  ಬೇಕು 
ಎಲ್ಲೇ ಇರಲಿ  ಜನಪ್ರಿಯತೆ ಗಳಿಸಿ ಈ  ಐಸ್ ಹಚ್ಚಲೇಬೇಕು 
ಸಾರೀ ನಾ ನಿಜ ಹೇಳ್ತಾ ಇದ್ದೀನಿ .. ಈ ಐಸ್ ಹಚ್ಚೇ ಹಚ್ಚಬೇಕು 
ಐಸ್ ಕ್ರೀಮ್ ತಗೋ ಐಸ್ ಕ್ರೀಮ್
ಮುಟ್ಟಿ ಒಮ್ಮೆ ಬಾಯಲಿಟ್ಟು ನೋಡಿರಿ
ಲೊಟ್ಟೆ ಹೊಡೆದು ಹಣ ಕೊಟ್ಟು ಹೋಗಿರಿ
ಐಸ್ ಕ್ರೀಮ್ ಬೇಕೇ ಐಸ್....  ಕ್ರೀಮ್...   
No comments:
Powered by Blogger.

ಪ್ರಳಯಾಂತಕ (1984)

ಪ್ರಳಯಾಂತಕ (1984)

ಪ್ರಳಯಾಂತಕ ಚಿತ್ರದ ಹಾಡುಗಳು 
ಮುಂದೆ ನೀ ಹೋದಾಗ ಹಿಂದೆ ನಾ ಬರುವೆ 

ಏನೋ ಹೊಸ ಉಲ್ಲಾಸ ಸಂತೋಷ 

ರಾತ್ರಿ ಬಂದರೇ ಏನೋ ತೊಂದರೆ 

ನಾಳೆ ಮನೆಗೆ ಬರುವೆ ನನ್ನಾ ಆಸೆ ಏನು ಎಂದು ನುಡಿದೆ 

ನಾಳೆ ಬರುವೆ ನನ್ನೇ ಕೊಡುವೆ 

ಮುಂದೆ ನೀ ಹೋದಾಗ ಹಿಂದೆ ನಾ ಬರುವೆ (ಹೆಣ್ಣು) 

ಪ್ರಳಯಾಂತಕ (1984) -ಮುಂದೆ ನೀ ಹೋದಾಗ ಹಿಂದೆ ನಾ ಬರುವೆ
ಸಂಗೀತ: ಶಂಕರ್-ಗಣೇಶ್ ಸಾಹಿತ್ಯ: ಚಿ.ಉದಯಶಂಕರ್ ಹಾಡಿದವರು: ಎಸ್.ಪಿ.ಬಿ. 
ಹ್ಹಹ್ಹಾ.. ಹ್ಹೂಂ ... ಹ್ಹಹ್ಹಾ.. ಹ್ಹೂಂ ... ಹ್ಹೂಂ ...
ಮುಂದೆ ನೀ ಹೋದಾಗ ಹಿಂದೆ ನಾ ಬರುವೆ..ಹೇಹೇ ಹೇಹೇಹೇ
ಮುಂದೆ ನೀ ಹೋದಾಗ ಹಿಂದೆ ನಾ ಬರುವೆ ಚಿನ್ನ
ನಾರೀಮಣಿ ಚಿಂತಾಮಣಿ ಕಟ್ಟೂವೆನ ಕರೀಮಣಿ
ಮನಸಲ್ಲಿ ಚಿಂತೆ ಮಾಡಬೇಡಮ್ಮ ಇಂಥ ಜೋಡಿ ಈ ಊರಲ್ಲೇ ಇಲ್ಲಮ್ಮ
ಏನಿದೂ ಗೌರಮ್ಮ ಕಣ್ಣಲೀ ಕಾಡಿಗೆ ಯಾರು ಹಚ್ಚಿದ ಕಾಡಿಗೆ ನಾನು ಹಚ್ಚಿದ ಕಾಡಿಗೆ
ಮುಂದೆ ನೀ ಹೋದಾಗ ಹಿಂದೆ ನಾ ಬರುವೆ
ರೇಶಿಮೆ ಸೀರೆ ಉಟ್ಟು ಕೈತುಂಬ ನೆರಿಗೆ ಇಟ್ಟು
ರೇಶಿಮೆ ಸೀರೆ ಉಟ್ಟು ಕೈತುಂಬ ನೆರಿಗೆ ಇಟ್ಟು ನಡುವಲ್ಲಿ ಸಿಕ್ಕಿಸುವೆಯೆ ಜಯಮ್ಮ
ಅದು ನೆರಿಗೆಯಲ್ಲ ನನ್ನ ಮನಸು ಕೇಳಮ್ಮ
ಏನಿದೂ ಗೌರಮ್ಮ ಕಣ್ಣಲೀ ಕಾಡಿಗೆ ಯಾರು ಹಚ್ಚಿದ ಕಾಡಿಗೆ ನಾನು ಹಚ್ಚಿದ ಕಾಡಿಗೆ
ಮುಂದೆ ನೀ ಹೋದಾಗ ಹಿಂದೆ ನಾ ಬರುವೆ
ಮಳೆಯಲಿ ನೆಂದಾಗ ಮರದಡಿಯಲಿ ನಿಂತಾಗ
ಮಳೆಯಲಿ ನೆಂದಾಗ ಮರದಡಿಯಲಿ ನಿಂತಾಗ ಹಿತವಾಗಿ ನಡುಗುವೆಯೆ ಗಂಗಮ್ಮ
 ಅದು ನಡುಕವಲ್ಲ ಮೈಯ ಮಿಂಚು ಕೇಳಮ್ಮ
ಏನಿದೂ ಗೌರಮ್ಮ ಕಣ್ಣಲೀ ಕಾಡಿಗೆ ಯಾರು ಹಚ್ಚಿದ ಕಾಡಿಗೆ ನಾನು ಹಚ್ಚಿದ ಕಾಡಿಗೆ
ಮುಂದೆ ನೀ ಹೋದಾಗ ಹಿಂದೆ ನಾ ಬರುವೆ
ಹ್ಹಾಂಹ್ಹಾಂ .. ಹೇಹೇ ... ಹೇಹೇ ... ಹ್ಹಾಂ.. ಹ್ಹಾಂಹ್ಹಾಂ
ಕತ್ತಲೆಯು ಬಂದಾಗ ಮೆತ್ತೆಯಲಿ ಇರುವಾಗ
ಕತ್ತಲೆಯು ಬಂದಾಗ ಮೆತ್ತೆಯಲಿ ಇರುವಾಗ ದಿಂಬನ್ನು ಅಪ್ಪುವೆಯ ಹೊನ್ನಮ್ಮ
ಅದು ದಿಂಬಲ್ಲ ನನ್ನ ಮೈಯ್ಯ ಕೇಳಮ್ಮ
ಏನಿದೂ ಹೊಯ್ ಹೊಯ್ ಏನಿದೂ ಗೌರಮ್ಮ ಕಣ್ಣಲೀ ಕಾಡಿಗೆ
 ಯಾರು ಹಚ್ಚಿದ ಕಾಡಿಗೆ ನಾನು ಹಚ್ಚಿದ ಕಾಡಿಗೆ
ಮುಂದೆ ನೀ ಹೋದಾಗ ಹಿಂದೆ ನಾ ಬರುವೆ
ಹಿಂದೆ ನಾ ಬರುವೆ ಮುಂದೆ ನೀ ಹೋದಾಗ
ಹ್ಹಾಂ ... ಕುರುಕೂರು.. ಹ್ಹಾಂ ...  ಪುರ್ರ್ರ್ಯಾಬಾ ..
--------------------------------------------------------------------------------------------------------------------------
ಪ್ರಳಯಾಂತಕ (1984) -ಏನೋ ಹೊಸ ಉಲ್ಲಾಸ ಸಂತೋಷ
ಸಂಗೀತ: ಶಂಕರ್-ಗಣೇಶ್ ಸಾಹಿತ್ಯ: ಚಿ.ಉದಯಶಂಕರ್ ಹಾಡಿದವರು: ಎಸ್.ಪಿ.ಬಿ. 
ಏನೋ ಹೊಸ ಉಲ್ಲಾಸ ಸಂತೋಷ ಇಂದು ನನ್ನಲ್ಲಿ ನೋಡು
ಏನೋ ಹೊಸ ಉಲ್ಲಾಸ ಸಂತೋಷ ಇಂದು ನನ್ನಲ್ಲಿ ನೋಡು
ನನ್ನ ತನುವು ಆಡಿದೆ ನನ್ನ ಮನವು ಇಂದು ಆನಂದ ಆನಂದ ಎಂದು ನಲಿದಿದೆ ಕುಣಿದಿದೆ ನೋಡು
ಏನೋ ಹೊಸ ಉಲ್ಲಾಸ ಸಂತೋಷ ಇಂದು ನನ್ನಲ್ಲಿ ನೋಡು...  ಓವ್ 
ಏನೋ ಹೊಸ ಉಲ್ಲಾಸ ಸಂತೋಷ ಇಂದು ನನ್ನಲ್ಲಿ ನೋಡು 
ಅಹ್ಹಹ್ಹ... ಹ್ಹ ಹ್ಹ ಹ್ಹ ಹ್ಹ .. ಹ್ಹ ಹ್ಹ 
ಪ್ರೀತಿಯ ತೊರೆಯ ಸ್ನೇಹದಿ ಸೇರೆಯ ನನ್ನನ್ನು ನೀನೀಗ 
ರಾತ್ರಿಯ ವೇಳೆಯ ವಿರಹವ ತಾಳೆನು ಪ್ರೇಯಸಿ ಬಾ ಬೇಗ 
ಪ್ರೀತಿಯ ತೊರೆಯ ಸ್ನೇಹದಿ ಸೇರೆಯ ನನ್ನನ್ನು ನೀನೀಗ 
ರಾತ್ರಿಯ ವೇಳೆಯ ವಿರಹವ ತಾಳೆನು ಪ್ರೇಯಸಿ ಬಾ ಬೇಗ 
ಕಾಮಿನಿ ಭಾಮಿನಿ ಪ್ರೇಯಸಿ ಮೋಹಿನಿ ಚೆಲುವೇ ಒಲವೇ ಅಯ್ಯೋಯ್ಯೋ ಅಳುವೇ 
ಏನೋ ಹೊಸ ಉಲ್ಲಾಸ ಸಂತೋಷ ಇಂದು ನನ್ನಲ್ಲಿ ನೋಡು 
ಏನೋ ಹೊಸ ಉಲ್ಲಾಸ ಸಂತೋಷ ಇಂದು ನನ್ನಲ್ಲಿ ನೋಡು 
ನನ್ನ ತನುವು ಆಡಿದೆ ನನ್ನ ಮನವು ಇಂದು ಆನಂದ ಆನಂದ ಎಂದು ನಲಿದಿದೆ ಕುಣಿದಿದೆ ನೋಡು
ಏನೋ ಹೊಸ ಉಲ್ಲಾಸ ಸಂತೋಷ ಇಂದು ನನ್ನಲ್ಲಿ ನೋಡು...  ಅಹ್ಹಹ್ಹಹ್ಹಹ್ಹ  
ಏನೋ ಹೊಸ ಉಲ್ಲಾಸ ಸಂತೋಷ ಇಂದು ನನ್ನಲ್ಲಿ ನೋಡು...  
ಎಲ್ಲಿಗೋ ಬಂದೆವು ಏನೇನೋ ಕಂಡೆವು ಏತಕೆ ಹೀಗಾಯ್ತು .. ಹೀಗಾಯ್ತು 
ಭೀತಿಯ ತರುವ ಭೂತದ ಆಟವು ಈ ಕ್ಷಣ ಏನಾಯ್ತು.. ಏನಾಯ್ತು 
ಎಲ್ಲಿಗೋ ಬಂದೆವು ಏನೇನೋ ಕಂಡೆವು ಏತಕೆ ಹೀಗಾಯ್ತು .. 
ಭೀತಿಯ ತರುವ ಭೂತದ ಆಟವು ಈ ಕ್ಷಣ ಏನಾಯ್ತು.. 
ನೋಡುವ ಕಣ್ಣಿಗೆ ಏತಕೆ ಈ ಭ್ರಮೆ ಕುಡಿದಾ ಅಮಲು ತಂದಾ ದಿಗಿಲು 
ಏನೋ ಹೊಸ ಉಲ್ಲಾಸ ಸಂತೋಷ ಇಂದು ನನ್ನಲ್ಲಿ ನೋಡು 
ಏನೋ ಹೊಸ ಉಲ್ಲಾಸ ಸಂತೋಷ ಇಂದು ನನ್ನಲ್ಲಿ ನೋಡು 
ನನ್ನ ತನುವು ಆಡಿದೆ ನನ್ನ ಮನವು ಇಂದು ಆನಂದ ಆನಂದ ಎಂದು ನಲಿದಿದೆ ಕುಣಿದಿದೆ ನೋಡು
ಏನೋ ಹೊಸ ಉಲ್ಲಾಸ ಸಂತೋಷ ಇಂದು ನನ್ನಲ್ಲಿ ನೋಡು...  
ಏನೋ ಹೊಸ ಉಲ್ಲಾಸ ಸಂತೋಷ ಇಂದು ನನ್ನಲ್ಲಿ ನೋಡು...  
--------------------------------------------------------------------------------------------------------------------------
ಪ್ರಳಯಾಂತಕ (1984) -ರಾತ್ರಿ ಬಂದರೇ ಏನೋ ತೊಂದರೇ
ಸಂಗೀತ: ಶಂಕರ್-ಗಣೇಶ್ ಸಾಹಿತ್ಯ: ಚಿ.ಉದಯಶಂಕರ್ ಹಾಡಿದವರು: ಎಸ್.ಪಿ.ಬಿ. ಎಸ್.ಜಾನಕೀ 
ಹೆಣ್ಣು : ಅಹ್.. ಹ್ಹಹ್ಹಹ್
ಗಂಡು : ರಾತ್ರಿ ಬಂದರೆ ಏನೋ ತೊಂದರೆ ಶಾಂತಿ ನೆಮ್ಮದಿ ನೀನು ಇದ್ದರೆ
            ನಿನ್ನ ಬಿಟ್ಟು ಒಂಟಿಯಾಗಿ ಬಾಳಲಾರೆನು ಮಂಚದಲ್ಲಿ ಹೊರಳಿ ಹೊರಳಿ ನರಳಲಾರೆನು
            ವಿರಹ ಗೀತೆ ಇನ್ನು ಎಂದು ಹಾಡಲಾರೆನು
ಹೆಣ್ಣು : ರಾತ್ರಿ ಬಂದರೆ ಏನೋ ತೊಂದರೆ ಶಾಂತಿ ನೆಮ್ಮದಿ ನೀನು ಇದ್ದರೆ
            ನಿನ್ನ ಬಿಟ್ಟು ಒಂಟಿಯಾಗಿ ಬಾಳಲಾರೆನು ಮಂಚದಲ್ಲಿ ಹೊರಳಿ ಹೊರಳಿ ನರಳಲಾರೆನು
            ವಿರಹ ಗೀತೆ ಇನ್ನು ಎಂದು ಹಾಡಲಾರೆನು
ಗಂಡು : ನಲ್ಲೆ ಒಲವಿಂದ ನಿನ್ನಾ ತೋಳಿಂದ ನನ್ನನ್ನು ಅಪ್ಪಬಾರದೇ ನೀನು 
            ಸಂತೋಷ ನೀಡಲಾರೆಯಾ ಇನ್ನೂ
           ನಲ್ಲೆ ಒಲವಿಂದ ನಿನ್ನಾ ತೋಳಿಂದ ನನ್ನನ್ನು ಅಪ್ಪಬಾರದೇ ನೀನು
            ಸಂತೋಷ ನೀಡಲಾರೆಯಾ ಇನ್ನೂ
ಹೆಣ್ಣು : ನಿನ್ನಾಸೆ ಕಣ್ಣಲ್ಲಿ ನಾನು ಕಂಡೆನು ನಿನ್ನ ಪ್ರೀತಿ ಕಂಡಿಗ ಸೋತು ಹೋದೆನು
          ನಿನ್ನ ಸೆರೆಲೆಂದು ನಲ್ಲ ಇಲ್ಲಿ ನಿಂತೆನು
ಗಂಡು : ರಾತ್ರಿ ಬಂದರೆ (ಹ್ಹಾ) ಏನೋ ತೊಂದರೆ (ಹ್ಹಹ್ಹಾ) ಶಾಂತಿ ನೆಮ್ಮದಿ (ಆಆ )ನೀನು ಇದ್ದರೆ
ಹೆಣ್ಣು : ನಿನ್ನ ಬಿಟ್ಟು ಒಂಟಿಯಾಗಿ ಬಾಳಲಾರೆನು ಮಂಚದಲ್ಲಿ ಹೊರಳಿ ಹೊರಳಿ ನರಳಲಾರೆನು
ಗಂಡು : ವಿರಹ ಗೀತೆ ಇನ್ನು ಎಂದು ಹಾಡಲಾರೆನು
ಹೆಣ್ಣು : ರಾತ್ರಿ ಬಂದರೆ ಏನೋ ತೊಂದರೆ
ಗಂಡು : ಶಾಂತಿ ನೆಮ್ಮದಿ ನೀನು ಇದ್ದರೆ
ಹೆಣ್ಣು : ಮಾತು ಸಾಕಿನ್ನು ನೋಡು ನನ್ನನ್ನೂ ಕೆಂಪಾದ ಕೆನ್ನೆ ಕಾಣೆಯಾ ನೀನು 
          ಮುತ್ತೊಂದ ನೀಡಲಾರೆಯಾ ಇನ್ನೂ .. (ಹ್ಹೂಂ )
          ಮಾತು ಸಾಕಿನ್ನು ನೋಡು ನನ್ನನ್ನೂ ಕೆಂಪಾದ ಕೆನ್ನೆ ಕಾಣೆಯಾ ನೀನು 
          ಮುತ್ತೊಂದ ನೀಡಲಾರೆಯಾ ಇನ್ನೂ 
ಗಂಡು : ಮುತ್ತಿನಲ್ಲೇ ಸಿಂಗಾರ ಈಗ ಮಾಡುವೇ(ಹುಹ್ಹೂಹೂ) ಮತ್ತು ಬರುವ ಚೆಲ್ಲಾಟ ನೋಡು ಆಡುವೆ (ಆ)
           ನೀನೇ ಆಗ ಇನ್ನು ಬೇಕು ಎಂದು ಹೇಳುವೇ 
ಹೆಣ್ಣು : ರಾತ್ರಿ ಬಂದರೆ (ಹ್ಹಾ) ಏನೋ ತೊಂದರೆ (ಹ್ಹ) ಶಾಂತಿ ನೆಮ್ಮದಿ (ಆ )ನೀನು ಇದ್ದರೆ
ಗಂಡು : ಹೇ.. ನಿನ್ನ ಬಿಟ್ಟು ಒಂಟಿಯಾಗಿ ಬಾಳಲಾರೆನು (ಅಹ್ಹ) ಮಂಚದಲ್ಲಿ ಹೊರಳಿ ಹೊರಳಿ ನರಳಲಾರೆನು
ಹೆಣ್ಣು  : ವಿರಹ ಗೀತೆ ಇನ್ನು ಎಂದು ಹಾಡಲಾರೆನು
ಹೆಣ್ಣು : ರಾತ್ರಿ ಬಂದರೆ (ಅಹ್ಹಹ್ ) ಲಲಲಲ್ಲಲ್ಲಾ
ಗಂಡು : ಶಾಂತಿ ನೆಮ್ಮದಿ ಲಲ್ಲಲ್ಲಾ
 -------------------------------------------------------------------------------------------------------------------------
ಪ್ರಳಯಾಂತಕ (1984) -ನಾಳೆ ಮನೆಗೆ ಬರುವೆ
ಸಂಗೀತ: ಶಂಕರ್-ಗಣೇಶ್ ಸಾಹಿತ್ಯ: ಚಿ.ಉದಯಶಂಕರ್ ಹಾಡಿದವರು: ಎಸ್.ಪಿ.ಬಿ. 
ಹೇಹೇ ... ತೂರುತ್ತುರೂತ್ತೂ... ತೂರುತ್ತುರೂತ್ತೂ....ತ್ತೂ
ತೂರುತ್ತುರೂತ್ತೂ....  ತರತ್ತತ್ತ..ತ್ತಾ  ರಪರಪ ರಪರಪ್ ರಪಾ
ರಪರಪ ರಪರಪ್ ರಪಾ
ನಾಳೆ ಮನೆಗೆ ಬರುವೆ ನನ್ನಾ ಆಸೆ ಏನು ಎಂದು ನುಡಿವೇ
ನಾಳೆ ಮನೆಗೆ ಬರುವೆ ನನ್ನಾ ಆಸೆ ಏನು ಎಂದು ನುಡಿವೇ
ಚಿನ್ನ ಅಲ್ಲಿ ನಿನ್ನಂದ ಕಂಡು ಕಂಡು ನಾ ನಲಿವೆ
ಚಿನ್ನ ಅಲ್ಲಿ ನಿನ್ನಂದ ಕಂಡು ಕಂಡು ನಾ ನಲಿವೆ
ನಾಳೆ ಮನೆಗೆ ಬರುವೆ ನನ್ನಾ ಆಸೆ ಏನು ಎಂದು ನುಡಿವೇ.. ಹ್ಹಾ.. 
ಬಂಗಾರದಂತ ನಿನ್ನ ಮೈಯ್ ಹೊನ್ನ ಬಣ್ಣ ಕಂಡು ಅಹಾ ಎನುವೆ ನಾನು
ಬಂಗಾರದಂತ ನಿನ್ನ ಮೈಯ್ ಹೊನ್ನ ಬಣ್ಣ ಕಂಡು ಅಹಾ ಎನುವೆ ನಾನು 
ಪ್ರೀತಿ...  ಮಾತು ಆಡಿ  ಪ್ರೇಮ ಲೋಕವ ನಾನು ತೋರುವೇ  ಹೊಯ್ 
ಸ್ವರ್ಗದಾ ಸುಖ ಹೊಯ್ ಹೊಯ್ ನೀನು ಕಾಣುವೇ.. ಹೊಯ್
ನಾಳೆ ಮನೆಗೆ ಬರುವೆ ನನ್ನಾ ಆಸೆ ಏನು ಎಂದು ನುಡಿವೇ
ಚಿನ್ನ ಅಲ್ಲಿ ನಿನ್ನಂದ ಕಂಡು ಕಂಡು ನಾ ನಲಿವೆ 
ಚಿನ್ನ ಅಲ್ಲಿ ನಿನ್ನಂದ ಕಂಡು ಕಂಡು ನಾ ನಲಿವೆ..  ಹೈ.. ಹೋ  
ನಾಳೆ ಮನೆಗೆ ಬರುವೆ ನನ್ನಾ ಆಸೆ ಏನು ಎಂದು ನುಡಿವೇ.. ಏಯ್ .. 
ಮಾತಿನ್ನು ಯಾಕೆ ಅಲ್ಲಿ ಬಾರೆ ಆನಂದವೇನು ಎಂದು ನೀನೇ ನೋಡುವಂತೆ  
ಮಾತಿನ್ನು ಯಾಕೆ ಅಲ್ಲಿ ಬಾರೆ ಆನಂದವೇನು ಎಂದು ನೀನೇ ನೋಡುವಂತೆ  
ಹೀಗೆ ಬಾಳೋ ಆಸೆ ಬಂದು ನಿಲ್ಲುವೇ ಹೊಯ್ ಹೊಯ್ ನನ್ನಾ ಅಪ್ಪುವೇ ಅಹ್ಹಹ್ಹಹಾ
ಮತ್ತು ಏರಲು ಹೊಯ್ ಮುತ್ತು ಕೇಳುವೆ... ಹ್ಹಾ..  
ನಾಳೆ ಮನೆಗೆ ಬರುವೆ ನನ್ನಾ ಆಸೆ ಏನು ಎಂದು ನುಡಿವೇ
ಚಿನ್ನ ಅಲ್ಲಿ ನಿನ್ನಂದ ಕಂಡು ಕಂಡು ನಾ ನಲಿವೆ 
ಚಿನ್ನ ಅಲ್ಲಿ ನಿನ್ನಂದ ಕಂಡು ಕಂಡು ನಾ ನಲಿವೆ 
ನಾಳೆ ಮನೆಗೆ ಬರುವೆ ನನ್ನಾ ಆಸೆ ಏನು ಎಂದು ನುಡಿವೇ.. ಹ್ಹಾ..
ತ ತ ತ ತ ತ ತ 
--------------------------------------------------------------------------------------------------------------------------
ಪ್ರಳಯಾಂತಕ (1984) - ನಾಳೆ ಬರುವೆ ನನ್ನೇ ಕೊಡುವೆ
ಸಂಗೀತ: ಶಂಕರ್-ಗಣೇಶ್ ಸಾಹಿತ್ಯ: ಚಿ.ಉದಯಶಂಕರ್ ಹಾಡಿದವರು: ಮಲೇಷಿಯಾ ವಾಸುದೇವನ್ 
ಹೇ.....ತೂರುತ್ತುತ್ತೂ.. ತೂರುತ್ತುತ್ತೂ.. ತೂರುತ್ತುತ್ತೂ.. ತೂರುರೂರೂ..
ಪಬಪಪ   ಪಪ  ಪಪ  ಪಬಪಪ ಪಪ ಪಪ  ಪಬಪ  ಪಬಪ  ಪಬಪ  ಪಬ ಹೇ..
(ಲಾಲ ಲಾಲ ಲಾಲ ಲಾಲ ಲಾಲ ಲಾಲ ಲಾಲ ಲಾಲ ಲಾಲ ಲಾಲ ಲಾಲ )
ನಾಳೆ ಬರುವೆ ನನ್ನೇ ಕೊಡುವೇ ನಿಧಾನಿಸು ಈಗ ನಿಧಾನಿಸು
ನೆನ್ನೆ ಯಾಕೆ ನೋಡಲಿಲ್ಲ ನನ್ನಾ ಮೊನ್ನೆ ಯಾಕೆ ಕೇಳಲಿಲ್ಲ ಚಿನ್ನಾ
ನನ್ನಂಥ ಗಂಡಿಲ್ಲ ನನ್ನಂತೆ ಯಾರಿಲ್ಲ.. ಹೇ..
ನಾಳೆ ಬರುವೆ ನನ್ನೇ ಕೊಡುವೇ ನಿಧಾನಿಸು ಈಗ ನಿಧಾನಿಸು
ನೆನ್ನೆ ಯಾಕೆ ನೋಡಲಿಲ್ಲ ನನ್ನಾ .. ಕೂರ್ ಕೂರ್..  ಮೊನ್ನೆ ಯಾಕೆ ಕೇಳಲಿಲ್ಲ ಚಿನ್ನಾ.. ಹ್ಹಾ..
ನನ್ನಂಥ ಗಂಡಿಲ್ಲ ನನ್ನಂತೆ ಯಾರಿಲ್ಲ.. ಹಹ್ಹಹೇಹೇ ...
(ತೂರೂರು ತೂರೂರು ತೂರೂರು ತೂರೂರು ತೂರೂತೂರೂ ತೂರೂತೂರೂ ರು )
ಪ್ರೇಮದ ಮಾತು ಬಲ್ಲೆ ಸ್ನೇಹದ ರೀತಿ ಬಲ್ಲೇ ಹ್ಹಾ
ಪ್ರೇಮದ ಮಾತು ಬಲ್ಲೆ ಸ್ನೇಹದ ರೀತಿ ಬಲ್ಲೇ  ನಿನ್ನ ಮನಸ್ಸನ್ನು ನಾ ಬಲ್ಲೆ ಅಂದೇನೇ 
ಕಂಡ ಕನಸನು ನಾ ಹೇಳುವೇ ಗೊತ್ತೇನೆ ಕಣ್ಣಿನಲ್ಲೇ ಪ್ರೇಮಗೀತೆ ಹಾಡಬಲ್ಲೆ ನಾ 
ಈ ಕ್ಷಣ ನಿಂತಲ್ಲಿಯೇ ಇರುವೆ ನಾ ಸುಖವನು ಗೆಳತಿಯೇ ತೋರಲೇನು 
ಹೇ... ನಾಳೆ ಬರುವೆ ನನ್ನೇ ಕೊಡುವೇ ನಿಧಾನಿಸು ಈಗ ನಿಧಾನಿಸು
ನೆನ್ನೆ ಯಾಕೆ ನೋಡಲಿಲ್ಲ ನನ್ನಾ  ಹ್ಹಾ... ಮೊನ್ನೆ ಯಾಕೆ ಕೇಳಲಿಲ್ಲ ಚಿನ್ನಾ
ನನ್ನಂಥ ಗಂಡಿಲ್ಲ ನನ್ನಂತೆ ಯಾರಿಲ್ಲ
(ಲಾಲಾ ಲಲಲ್ಲ ಲಾಲಾ ಲಲಲ್ಲ ಲಾಲಾ ಲಲಲ್ಲ ಲಾಲಾ ಲಲಲ್ಲ )
ದೀಪವು ಆರೋ ವೇಳೆ ಸೇರುವ ನಾವು ನಾಳೆ ... ಹ್ಹಾ 
ದೀಪವು ಆರೋ ವೇಳೆ ಸೇರುವ ನಾವು ನಾಳೆ ನಲ್ಲೆ ಹೊಸ ಆಟ ಆಡುವೇ ಇನ್ನೇನೂ  
ನಿನ್ನ ಹೊಸ ಆಸೆ ಪೊರೈಸುವೆ ಸಾಕೇನು ಇಂಥ ಚೆನ್ನ ಇನ್ನು ಬೇಕು ಎನಬೇಡ ಆಗ
ಈಗಲೇ ನಾ ಹೇಳುವೆ ಸರಸದ ಹರುಷವಾ ನುಡಿಯಲಿ ಹೇಳಲಾರೇ ಹೇ.. 
ನಾಳೆ ಬರುವೆ ಹೇಹೇ ನನ್ನೇ ಕೊಡುವೇ ಹೇಯ್ ನಿಧಾನಿಸು ಈಗ ನಿಧಾನಿಸು ..
ನೆನ್ನೆ ಯಾಕೆ ನೋಡಲಿಲ್ಲ ಹ್ಹಾ.. ನನ್ನಾ ಮೊನ್ನೆ ಯಾಕೆ ಕೇಳಲಿಲ್ಲ ಚಿನ್ನಾ.. ಕೂರ್
ನನ್ನಂಥ ಗಂಡಿಲ್ಲ ನನ್ನಂತೆ ಯಾರಿಲ್ಲ... ಹೇಹೇ ..
--------------------------------------------------------------------------------------------------------------------------
ಪ್ರಳಯಾಂತಕ (1984) -ಮುಂದೆ ನೀ ಹೋದಾಗ ಹಿಂದೆ ನಾ ಬರುವೇ
ಸಂಗೀತ: ಶಂಕರ್-ಗಣೇಶ್ ಸಾಹಿತ್ಯ: ಚಿ.ಉದಯಶಂಕರ್ ಹಾಡಿದವರು: ಮಂಜುಳಾ
ಹಹ್ಹ ... ಹೊಯ್  ಹಹ್ಹ ... ಹೇಹೇ
ಮುಂದೆ ನೀ ಹೋದಾಗ ಹಿಂದೆ ನಾ ಬರುವೇ..  ಹೈಯ್  ಹೈಯ್  ಹೈಯ್ ಹೈಯ್
ಮುಂದೆ ನೀ ಹೋದಾಗ ಹಿಂದೆ ನಾ ಬರುವೇ ಚಿನ್ನ ಮದ್ದು ಮಣಿ ಮುದ್ದು ಮಣಿ ಕೆಟ್ಟೆ ನೀ ಗುಂಡುಮಣಿ
ಮನಸಲಿ ಚಿಂತೆ ಮಾಡಬೇಡಯ್ಯಾ ನೀ ಕುಂಟುವಂತೆ ಮಾಡುವೇನೋ ತಾಳಯ್ಯ
ಏನಿದು ಪುಟ್ಟಪ್ಪ ಕಣ್ಣಲ್ಲಿ ಹೆದರಿಕೆ ಯಾರ ಕಂಡು ಹೆದರಿಕೆ ನಮ್ಮ ಕಂಡು ಹೆದರಿಕೆ
ಮುಂದೆ ನೀ ಹೋದಾಗ ಹಿಂದೆ ನಾ ಬರುವೇ
(ಹೊಯ್ ಹೊಯ್ ಹೊಯ್ ಹೊಯ್ ಹೊಯ್ ಹೊಯ್ )
ಪ್ಯಾಂಟನು ಹಾಕಿಕೊಂಡು ಜೋಬಲಿ ಕೈ ಇಟ್ಟುಕೊಂಡು
ಪ್ಯಾಂಟನು ಹಾಕಿಕೊಂಡು ಜೋಬಲಿ ಕೈ ಇಟ್ಟುಕೊಂಡು ಬಿರಬಿರನೇ ನಡೆಯುವೆಯಾ ಪುಟ್ಟಮ್ಮಾ  
ಅದು ನಡಿಗೆಯಲ್ಲ ಹೆದರಿಕೆ ಓಟ ಕೇಳಪ್ಪ 
(ಏನಿದು ಪುಟ್ಟಪ್ಪ ಕಣ್ಣಲ್ಲಿ ಹೆದರಿಕೆ... ಹೊಯ್ ಹೊಯ್) ಯಾರ ಕಂಡು ಹೆದರಿಕೆ ನಮ್ಮ ಕಂಡು ಹೆದರಿಕೆ
ಮುಂದೆ ನೀ ಹೋದಾಗ ಹಿಂದೆ ನಾ ಬರುವೇ ಚಿನ್ನ
ಹೊಯ್ ಹೊಯ್ ಹೊಯ್ ಹೊಯ್ (ಹೊಯ್ ಹೊಯ್ ಹೊಯ್ ಹೊಯ್ ಹೊಯ್ ಹೊಯ್ 
ಹೊಯ್ ಹೊಯ್ ಹೊಯ್ ಹೊಯ್ ಹೊಯ್ ಹೊಯ್ )
ಮಳೆಯಲಿ ನೆಂದಾಗ ಮರದಡಿಯಲ್ಲಿ ನಿಂತಾಗ
ಮಳೆಯಲಿ ನೆಂದಾಗ ಮರದಡಿಯಲ್ಲಿ ನಿಂತಾಗ ಹಿತವಾಗಿ ನಡುಗುವೆಯ ಕಿಟ್ಟಪ್ಪ 
ಅದು ಛಳಿಗೆ ಅಲ್ಲ ಭಯಕೆ ನನಗೆ ಗೊತ್ತಪ್ಪ 
(ಏನಿದು ಪುಟ್ಟಪ್ಪ ಕಣ್ಣಲ್ಲಿ ಹೆದರಿಕೆ (ಆಆ )ಯಾರ ಕಂಡು ಹೆದರಿಕೆ ನಮ್ಮ ಕಂಡು ಹೆದರಿಕೆ)
ಮುಂದೆ ನೀ ಹೋದಾಗ ಹಿಂದೆ ನಾ ಬರುವೇ ಚಿನ್ನ
ಹೊಯ್ ಹೊಯ್ ಹೊಯ್ ಹೊಯ್ (ಹೊಯ್ ಹೊಯ್ ಹೊಯ್ ಹೊಯ್ ಹೊಯ್ ಹೊಯ್
ಹೊಯ್ ಹೊಯ್ ಹೊಯ್ ಹೊಯ್ ಹೊಯ್ ಹೊಯ್ )
ಹ್ಹಹ್ಹಾ... ಹ್ಹೋ ಹ್ಹೋ ... ಹೊಯ್ ಹೊಯ್ .. ಅಹ್ಹಹ್ಹಹ್ಹಹ್ಹ...
ಕತ್ತಲೆ ಬಂದಾಗ ಮೆತ್ತೆಯಲಿ ಇರುವಾಗ
ಕತ್ತಲೆ ಬಂದಾಗ ಮೆತ್ತೆಯಲಿ ಇರುವಾಗ ಒಮ್ಮೊಮ್ಮೆ ಬೆಚ್ಚುವೆಯೋ ರಂಗಪ್ಪ 
ಅದು ನಮ್ಮ ಕಂಡು ಭಯಕ್ಕೆ ತಾನೇ ಹೇಳಪ್ಪಾ 
ಏನಿದು ಅರೆರೇ ... (ಪುಟ್ಟಪ್ಪ ಕಣ್ಣಲ್ಲಿ ಹೆದರಿಕೆ ಯಾರ ಕಂಡು ಹೆದರಿಕೆ ನಮ್ಮ ಕಂಡು ಹೆದರಿಕೆ)
ಮುಂದೆ ನೀ ಹೋದಾಗ ಹಿಂದೆ ನಾ ಬರುವೇ
ಹಿಂದೆ ನಾ ಹೋದಾಗ ಮುಂದೆ ನೀ  ಬರುವೇ
(ಹೊಯ್ ಹೊಯ್ ಹೊಯ್ ಹೊಯ್ ಹೊಯ್ ಹೊಯ್ )
--------------------------------------------------------------------------------------------------------------------------
No comments:
Powered by Blogger.

ಸಂಗ್ರಾಮ (1987)

ಸಂಗ್ರಾಮ (1987)

ಸಂಗ್ರಾಮ ಚಿತ್ರದ ಹಾಡುಗಳು 
ವಂದನೆ ವಂದನೆ ವಂದನೆ ನೂರು ವಂದನೆ ವಂದನೆ ವಂದನೆ

ದಂಡಂ ದಶಗುಣಂ ಈ ಭೂಮಿ ಮೇಲೆ ಯಾರು ದಾದಾ ಇಲ್ಲ 

ಸರಸಕೆ ಬಾರೋ ಓ ಪ್ರಿಯಕರನೇ 

ಅದೇನದು ಅದೇನದು ಐಸ್ ಐಸ್ 

ಸಂಗ್ರಾಮ (1987) - ವಂದನೆ ವಂದನೆ
ಸಂಗೀತ ಹಾಗು ಸಾಹಿತ್ಯ, : ಹಂಸಲೇಖ  ಹಾಡಿರುವವರು: ಎಸ್.ಪಿ.ಬಾಲಸುಬ್ರಮಣ್ಯಂ, ಎಸ್.ಜಾನಕಿ 
 ಕೋರಸ್ : ಪಬಪಪ್ಪಾ ಪಬಪಪ್ಪಾ ಪಬಪಪ್ಪಾ ಪಬಪಪ್ಪಾ ಪಬಪಪ್ಪಾಪ್ಪಾ
                ಪಬಪಪ್ಪಾ ಪಬಪಪ್ಪಾ ಪಬಪಪ್ಪಾ ಪಬಪಪ್ಪಾ ಪಬಪಪ್ಪಾ ಪ್ಪಾ
ಗಂಡು : ವಂದನೆ ವಂದನೆ ವಂದನೆ
            ನೂರು ವಂದನೆ ವಂದನೆ ವಂದನೆ ಕೋಟಿ ವಂದನೆ ವಂದನೆ ವಂದನೆ
            ಹಾಡಿಗೊಂದು ತಾಳ ಸಿಕ್ಕಿದೆ ಬಾಳಿಗೊಂದು ಅರ್ಥ ಸಿಕ್ಕಿದೆ
            ಸಂಗಾತಿ ಬಾ ವಸಂತ ಬಂದಿದೆ ಭೂಮಿಗೆ ಸಂಕ್ರಾಂತಿ ತಂದಿದೆ
            ಉಲ್ಲಾಸ ಉಯ್ಯಾಲೆ ಆಡಿದೆ ಸಂಗೀತ ಇಲ್ಲಿ ಲಾಸ್ಯವಾಡಿದೆ
           ವಂದನೆ ವಂದನೆ ವಂದನೆ (ಲಾಲಾ) ನೂರು ವಂದನೆ ವಂದನೆ ವಂದನೆ  (ಲಾಲಾ)
          ಕೋಟಿ ವಂದನೆ ವಂದನೆ ವಂದನೆ (ಲಾಲಾ)
          ಹಾಡಿಗೊಂದು ತಾಳ ಸಿಕ್ಕಿದೆ.. ಹ್ಹಾ...  ಬಾಳಿಗೊಂದು ಅರ್ಥ ಸಿಕ್ಕಿದೆ...  ಯ್ಯಾ... ...
ಗಂಡು : ಇದೇನಿದೂ ... ವಿಶೇಷವೋ ನಿನ್ನ ಕಿರುನಗೆ ನನ್ನನ್ನ ನಗಿಸಿದೆ
            ಈ ನನ್ನ ಗೆಲುವಿಗೆ ಆಧಾರವಾಗಿದೆ
ಹೆಣ್ಣು :  ಇದೇನಿದೂ ... ಅನ್ಯಾಯವೋ ಪ್ರೀತಿಯೆಂದರೆ ಆ ನಗುವು ಮಾತ್ರವೆ
           ನಗಿಸುವ ಬಲ ಈ ಪ್ರೀತಿಗಿಲ್ಲವೆ
ಗಂಡು : ನೀನು ನಕ್ಕರೆ ಮೂರು ಲೋಕವನ್ನು ಗೆಲ್ಲಬಲ್ಲೆನೆ
            ನೀನು ಸಿಕ್ಕರೆ ಪ್ರೇಮಲೋಕವನ್ನು ಕಟ್ಟಬಲ್ಲೆನೆ
ಇಬ್ಬರು : ರಾಜ ರಾಣಿಯಂತೆ ನಾವು ನಮ್ಮ ಊರಿಗೆ ನಿಮ್ಮ ಪ್ರೀತಿ ಒಂದೆ ರಕ್ಷೆ ನಮ್ಮ ಬಾಳಿಗೆ
ಗಂಡು : ವಿಷಾದ ವಿಯೋಗ ದುರಾಸೆ ನಿರಾಸೆ ಇಲ್ಲಿಲ್ಲ ಬನ್ನಿ ಬನ್ನಿ ಬನ್ನಿ ಬನ್ನಿಬನ್ನಿ ಬನ್ನಿ
ಹೆಣ್ಣು :   ವಂದನೆ ವಂದನೆ ವಂದನೆ (ಲಾಲಾ) ನೂರು ವಂದನೆ ವಂದನೆ ವಂದನೆ  (ಲಾಲಾ)
          ಕೋಟಿ ವಂದನೆ ವಂದನೆ ವಂದನೆ (ಲಾಲಾ)
ಗಂಡು :  ಹಾಡಿಗೊಂದು ತಾಳ ಸಿಕ್ಕಿದೆ.. ಹೇ ..  ಬಾಳಿಗೊಂದು ಅರ್ಥ ಸಿಕ್ಕಿದೆ......
ಕೋರಸ್ : ಪಬಪಪ್ಪಾ ಪಬಪಪ್ಪಾ ಪ ಪಬಪಪ್ಪಾ ಪಬಪಪ್ಪಾ ಪ
ಗಂಡು : ನೀ ಆಲಿಸೂ ... ಓ ಗೆಳೆಯನೆ ಕಡಲಿಗಾದರು ಬಾ ತೀರವೊಂದಿದೆ
            ಎಲ್ಲ ಕಷ್ಟಕೂ ಬಾ ಅಂತ್ಯವೊಂದಿದೆ
ಹೆಣ್ಣು : ಸಂಗಾತಿಯೇ... ನೀ ಆಲಿಸು ನಿನ್ನ ಆಸೆಗೆ ನಾ ರೆಕ್ಕೆಯಾಗುವೆ
          ಬಾಳಿನುದ್ದಕು ನಾ ಜೋಡಿಯಾಗುವೆ
ಗಂಡು : ಮೇಲೆ ಹಾರುವ ಹಾರಿ ಹಾರಿ ನಾವು ಗುರಿಯ ಸೇರುವ
           ಅಂತ್ಯ ಎಲ್ಲಿದೆ ಎಲ್ಲಿ ಇದ್ದರೇನು ಕಂಡು ಹಿಡಿಯುವ
ಇಬ್ಬರು : ಸೋಲು ನಮ್ಮ ಬಾಳಿನಲ್ಲಿ ಸೋತು ಓಡಿದೆ
             ಗೆಲುವು ನಮ್ಮ ಬಾಳಿನಲ್ಲಿ ಹೆಜ್ಜೆ ಹಾಕಿದೆ
ಗಂಡು : ವಿಷಾದ ವಿಯೋಗ ದುರಾಸೆ ನಿರಾಸೆ ಇಲ್ಲಿಲ್ಲ ಬನ್ನಿ ಬನ್ನಿ ಬನ್ನಿ ಬನ್ನಿ ಬನ್ನಿ ಬನ್ನಿ
           ವಂದನೆ ವಂದನೆ ವಂದನೆ (ಲಾಲಾ) ನೂರು ವಂದನೆ ವಂದನೆ ವಂದನೆ  (ಲಾಲಾ)
          ಕೋಟಿ ವಂದನೆ ವಂದನೆ ವಂದನೆ (ಲಾಲಾ)
ಹೆಣ್ಣು ::  ಹಾಡಿಗೊಂದು ತಾಳ ಸಿಕ್ಕಿದೆ.. ಹೇ ..  ಬಾಳಿಗೊಂದು ಅರ್ಥ ಸಿಕ್ಕಿದೆ......
ಗಂಡು : ಸಂಗಾತಿ ಬಾ ವಸಂತ ಬಂದಿದೆ         ಹೆಣ್ಣು : ಭೂಮಿಗೆ ಸಂಕ್ರಾಂತಿ ತಂದಿದೆ         
ಗಂಡು : ಉಲ್ಲಾಸ ಉಯ್ಯಾಲೆ ಆಡಿದೆ             ಹೆಣ್ಣು : ಸಂಗೀತ ಇಲ್ಲಿ ಲಾಸ್ಯವಾಡಿದೆ           
ಕೋರಸ್ :  ಲಾಲಲ ಲಾಲಲ ಲಾಲಲ ಲಾಲಲ ಲಾಲಲ ಲಾಲಲ ಲಾಲಲ 
--------------------------------------------------------------------------------------------------------------------------
ಸಂಗ್ರಾಮ (1987) - ದಂಡಂ ದಶಗುಣಂ ಈ ಭೂಮಿ ಮೇಲೆ ಯಾರು ದಾದಾ ಅಲ್ಲ
ಸಂಗೀತ ಹಾಗು ಸಾಹಿತ್ಯ, : ಹಂಸಲೇಖ ಹಾಡಿರುವವರು: ಎಸ್.ಪಿ.ಬಿ.,
ಕೋರಸ್ :  ದಂಡಂ ದಶಗುಣಂ..  ದಂಡಂ ದಶಗುಣಂ
ಗಂಡು : ಈ ಭೂಮಿ ಮೇಲೆ ಯಾರು ದಾದಾ ಅಲ್ಲ ನಾನೇ ದಾದಾ ಅನ್ನೋರು ಇಲ್ಲಿ ನಿಲ್ಲೋದಿಲ್ಲಾ
           ಈ ಭೂಮಿ ಮೇಲೆ ಯಾರು ದಾದಾ ಅಲ್ಲ ನಾನೇ ದಾದಾ ಅನ್ನೋರು ಇಲ್ಲಿ ನಿಲ್ಲೋದಿಲ್ಲಾ
           ಹಿಂಸೆಯನ್ನ ಮಾಡೋದ್ ತಪ್ಪು ಹಿಂಸೆಯನ್ನ ಸಹಿಸೋದ ತಪ್ಪು
           ಕಳ್ಳ ಕೊರಮ ಕೇಡಿ ರೌಡಿ ಮುಖ ಮೂತಿ ನೋಡಬೇಡಿ ಮುಲಾಜಿಲ್ಲದೇ ಮುಂದೆ ನುಗ್ಗಿ
           ಇಕ್ಕು ಮರಿ (ದಂಡಂ ದಶಗುಣಂ )  ಸೊಕ್ಕು ಮುರಿ (ದಂಡಂ ದಶಗುಣಂ )
ಕೋರಸ್ : ಕೊಕ್ಕರೇ ಕೊಕ್ಕೋ ಕೊಕ್ಕರೇ ಕೊಕ್ಕೋ
ಗಂಡು : ಓಟು ಕೊಟ್ಟು ನಾವು ಕೇಳಿದ್ದೇನೂ ಸೀಟು ಹತ್ತಿ ಇವರೂ ಮಾಡಿದ್ದೇನೂ 
           ಬಾಷಣದಲ್ಲೇ ಹೊಟ್ಟೆಗೇ ಬೆಂಕಿ ಇಟ್ಟರು ನೋಡು 
          ಬಡವರಿಗಿಲ್ಲಿ ಅನ್ನ ಕೊಡದೇ ಸುಟ್ಟರು ನೋಡು 
         ಓದಿ ಓದಿ ಜೇಬು ಖಾಲಿ ಆಯ್ತು ಜಾಬು ಕೇಳಿ ಅವಮಾನ ಆಯ್ತು  
         ಕೆಲಸಗಳೆಲ್ಲ ಖಾಲಿ ಇದ್ರೂ ಏನಾಗೋಯ್ತು.. ಹ್ಹಾಂ .. 
        ಲಂಚ ಮಂಚ ಕೊಟ್ಟೋರಿಗೆಲ್ಲ ಹಂಚಿದ್ದಾಯಿತು ಹೋ.. ರಾ.. ಟ ನಮ್ಮ ಗುರಿ ತಾನೇ 
        ಮುಂದಿಟ್ಟ ಹೆಜ್ಜೆ ಹಿಂದಿಟ್ಟೋರುಂಟೇ ಗುರಿ ಇಟ್ಟ ಮೇಲೆ ಕಣ್ಮುಚ್ಚೋರುಂಟೇ 
        ಕಳ್ಳ ಕೊರಮ ಕೇಡಿ ರೌಡಿ ಮುಖ ಮೂತಿ ನೋಡಬೇಡಿ ಮುಲಾಜಿಲ್ಲದೇ ಮುಂದೆ ನುಗ್ಗಿ
       ಇಕ್ಕು ಮರಿ (ದಂಡಂ ದಶಗುಣಂ) ಸೊಕ್ಕು ಮುರಿ (ದಂಡಂ ದಶಗುಣಂ) 
ಗಂಡು : ದೇಶದಲ್ಲಿ ಎಲ್ಲೂ ಶಾಂತಿ ಇಲ್ಲ ಸ್ತ್ರೀ ಕುಲಕೆ ಇಲ್ಲಿ ರಕ್ಷಣೆ ಇಲ್ಲ 
           ಕಾನೂನೆಂಬ ಮಾತುಗಳಲ್ಲಿ ಜೀವ ಇಲ್ಲ ದುಡಿಮೆ ಎಂಬ ಬೆವರಿಗೆ ಇಲ್ಲಿ ಬೆಲೆಯೇ ಇಲ್ಲ 
          ಸ್ನೇಹದಲ್ಲಿ ಬಾ ಒಗ್ಗಟ್ಟಿರಲಿ ತೋಳಿನಲ್ಲಿ ಅದು ಛಲವಾಗಿರಲಿ 
          ನ್ಯಾಯ ಇದ್ರೇ ಹಿಂದೆ ಸರಿದು ತಲೆ ಬಾಗೋಣ ಅನ್ಯಾಯಕ್ಕೆ ಯಾರೇ ಬರಲಿ ಸದೆ ಬಡಿಯೋಣ 
         ಸಂಗ್ರಾಮ ನಮ್ಮ ಗುರಿ ತಾನೇ 
         ಮುಂದಿಟ್ಟ ಹೆಜ್ಜೆ ಹಿಂದಿಟ್ಟೋರುಂಟೇ ಗುರಿ ಇಟ್ಟ ಮೇಲೆ ಕಣ್ಮುಚ್ಚೋರುಂಟೇ 
        ಕಳ್ಳ ಕೊರಮ ಕೇಡಿ ರೌಡಿ ಮುಖ ಮೂತಿ ನೋಡಬೇಡಿ ಮುಲಾಜಿಲ್ಲದೇ ಮುಂದೆ ನುಗ್ಗಿ
        ಇಕ್ಕು ಮರಿ (ದಂಡಂ ದಶಗುಣಂ) ಸೊಕ್ಕು ಮುರಿ (ದಂಡಂ ದಶಗುಣಂ) 
        ಈ ಭೂಮಿ ಮೇಲೆ ಯಾರು ದಾದಾ ಅಲ್ಲ ನಾನೇ ದಾದಾ ಅನ್ನೋರು ಇಲ್ಲಿ ನಿಲ್ಲೋದಿಲ್ಲಾ
        ಈ ಭೂಮಿ ಮೇಲೆ ಯಾರು ದಾದಾ ಅಲ್ಲ ನಾನೇ ದಾದಾ ಅನ್ನೋರು ಇಲ್ಲಿ ನಿಲ್ಲೋದಿಲ್ಲಾ
        ಹಿಂಸೆಯನ್ನ ಮಾಡೋದ್ ತಪ್ಪು ಹಿಂಸೆಯನ್ನ ಸಹಿಸೋದ ತಪ್ಪು
        ಕಳ್ಳ ಕೊರಮ ಕೇಡಿ ರೌಡಿ ಮುಖ ಮೂತಿ ನೋಡಬೇಡಿ ಮುಲಾಜಿಲ್ಲದೇ ಮುಂದೆ ನುಗ್ಗಿ
        ಇಕ್ಕು ಮರಿ (ದಂಡಂ ದಶಗುಣಂ )  ಸೊಕ್ಕು ಮುರಿ (ದಂಡಂ ದಶಗುಣಂ )
        ಇಕ್ಕು ಮರಿ (ದಂಡಂ ದಶಗುಣಂ )  ಸೊಕ್ಕು ಮುರಿ (ದಂಡಂ ದಶಗುಣಂ )
--------------------------------------------------------------------------------------------------------------------------
ಸಂಗ್ರಾಮ (1987) - ಸರಸಕೆ ಬಾರೋ ಓ ಪ್ರಿಯಕರನೇ
ಸಂಗೀತ ಹಾಗು ಸಾಹಿತ್ಯ, : ಹಂಸಲೇಖ ಹಾಡಿರುವವರು: ಎಸ್.ಪಿ.ಬಿ., ಎಸ್.ಜಾನಕಿ
ಹೆಣ್ಣು : ಸರಸಕೆ ಬಾರೋ ಓ ಪ್ರಿಯಕರನೇ...  ಈ ಅಂತಃಪುರದ ರಾಜನು ನೀನೇ...
          ಮಲ್ಲಿಗೆಯ ಮಂಚವಿದೆ ಮಾಗಿರುವ ಹಣ್ಣು ಇದೆ ಪ್ರೀತಿಸೋ..  ಹೆಣ್ಣು ಇದೆ
ಗಂಡು : ಹ್ಹಾಂಹ್ಹಾಂಹ್ಹಾಂಹ್ಹಾಂ (ಹಣ್ಣು ಇದೆ ).ಹೋಹೋಹೊಹೋ ಹೆಣ್ಣು ಇದೆ (ಹ್ಹೂಂಹ್ಹೂಂಹ್ಹೂಂಹ್ಹೂಂ)
            ಅವಸರ ಪುರದ ಆತುರದವಳೇ...  ಈ ಹಗಲಿನವೇಳೆ ಏನಿದು ರಗಳೇ
            ನಾಚಿಕೆಯ ಬಿಟ್ಟವಳೇ ಮೇನಕೆಯ ಮೊಮ್ಮಗಳೇ ಬೇಡ ಮರಿ.. ದೂರ ಸರಿ..
           (ಆಆಆ)  ಬೇಡ ಮರಿ (ಆಆಆ) ದೂರ ಸರಿ (ಆಆಆ)
ಹೆಣ್ಣು : ಮನಸು ಮನಸುಗಳು ಸೇರಿ ಕೊಂಡಿರಲು ಮಂಚ ಸೇರಿಸಲು ಏನು
ಗಂಡು : ಮಂಚ ಸೇರಿದರು ನಾವು ಸೇರುವುದು ಸಾಧ್ಯವಿಲ್ಲ ತಿಳಿ ನೀನು
ಹೆಣ್ಣು : ಹೆಣ್ಣು ಗೆಲ್ಲದಾ...  ವಿಷಯವ್ಯಾವುದು   ಗಂಡು : ನಿನ್ನ ಮುಂದಿನ..  ರಾಗವ್ಯಾವುದು 
ಹೆಣ್ಣು : ಹೆಣ್ಣು ಒಲಿಯುವಾಗ ನಾರಿ            ಗಂಡು : ನಾರಿ ಎಲ್ಲಿ  ನಿನ್ನ ಸ್ಯಾರೀ
ಹೆಣ್ಣು : ಸ್ಯಾರೀ ಸೀನಿದಲ್ಲ ಸಾರೀ             ಗಂಡು : ಸಾರಿ ಸಾರಿ ವೇರಿ ವೇರಿ ಸಾರಿ
ಹೆಣ್ಣು : ರೇಪು ಸೀನಿದೂ ಹೇಯ್ ಕದಲಬಾರದು
ಗಂಡು : ಕದಲದಿದ್ದರೇ...  ಮಾನ ಉಳಿಯದು
ಹೆಣ್ಣು :  ಮಲ್ಲಿಗೆಯ ಮಂಚವಿದೆ ಮಾಗಿರುವ ಹಣ್ಣು ಇದೆ ಪ್ರೀತಿಸೋ ಹೆಣ್ಣು ಇದೆ (ನಾ  ನಾ ನಾ ನಾ ನಾ)
            ಹೆಣ್ಣು ಇದೇ (ಹ್ಹಾ.. ಹ್ಹಾ..ಹ್ಹಾ ) ಹಣ್ಣು ಇದೆ ( ಹೋ... ಹೋ.. ಹೋ.. )
ಗಂಡು : ಅವಸರಪುರದ  ಆತುರದವಳೇ .. (ಹ್ಹಾ ) ಈ ಹಗಲಿನವೇಳೆ ಏನಿದು ರಗಳೇ (ಹ್ಹಾ.. ಹ್ಹಾ.. ಹ್ಹಹ್ಹಹ್ಹಹ್ಹಾ )
ಹೆಣ್ಣು : ಸೀತೆಯನ್ನು ಶ್ರೀರಾಮ ಗೆದ್ದ ನನ್ನನ್ನೂ ನೀನು ಗೆಲ್ಲು
ಗಂಡು : ಶಿವನು ಕೊಟ್ಟ ಆ ಬಿಲ್ಲು ನೀನು ಬರಬೇಡ ದೂರ ನಿಲ್ಲೂ
ಹೆಣ್ಣು : ಹೇ... ಬಾರೋ ಜರಿಗಿಸು....  ಈ ಬಿಲ್ಲನೇರಿಸೂ
ಗಂಡು : ಸಾಕು ನಿಲ್ಲಿಸು...  ಈ ಭಂಗಿ ಬದಲಿಸು
ಹೆಣ್ಣು : ಬಾರೋ ನನ್ನ ವೀರ ನೀನು               ಗಂಡು : ಹಾಡಿ ಹೋಗಳಬೇಡ ನೀನು
ಹೆಣ್ಣು : ನನ್ನ ಪಂಚಪ್ರಾಣ ನೀನು                  ಗಂಡು : ಪ್ರಾಣ ತಗೆದ ಪ್ರಾಣಿ ನೀನು
ಹೆಣ್ಣು : ಬಾರೋ ಪ್ರೀತಿಸು...  ಆಸೆ ತೀರಿಸು   ಗಂಡು: ಸಾಕು ನಿಲ್ಲಿಸು ಈ ತೇರು ಹೊರಡಿಸು
ಹೆಣ್ಣು :  ಮಲ್ಲಿಗೆಯ ಮಂಚವಿದೆ ಮಾಗಿರುವ ಹಣ್ಣು ಇದೆ ಪ್ರೀತಿಸೋ ಹೆಣ್ಣು ಇದೆ (ಅರೆರೆರೇ ..ಹ್ಹಾ.. ಹ್ಹಾ )
           ಹಣ್ಣು ಇದೇ (ಹ್ಹಾ ..ಹ್ಹಾ.. ಹ್ಹಾ )  ಹೆಣ್ಣು ಇದೆ (ಹ್ಹಾ ..ಹ್ಹಾ. ಹ್ಹಾ ..ಹ್ಹಾ.. ಹ್ಹಾ )
           ಸರಸಕೆ ಬಾರೋ ಓ ಪ್ರಿಯಕರನೇ... (ಹ್ಹಾ ..ಹ್ಹಾ. ಹ್ಹಾ ..ಹ್ಹಹ್ಹಹ್ಹ )
          ಈ ಅಂತಃಪುರದ ರಾಜನು ನೀನೇ... (ಹೋಹೋಹೋ ಹ್ಹಹ್ಹಹ್ಹಾ.. )
--------------------------------------------------------------------------------------------------------------------------
ಸಂಗ್ರಾಮ (1987) - ಅದೇನದು ಅದೇನದು ಐಸ್ ಐಸ್
ಸಂಗೀತ ಹಾಗು ಸಾಹಿತ್ಯ, : ಹಂಸಲೇಖ ಹಾಡಿರುವವರು:  ಎಸ್.ಜಾನಕಿ, ಹಂಸಲೇಖ 
ಹೆಣ್ಣು : ಅಹ್ಹಹ್ಹಹ್ಹಹಹ... ಹೇ.. ಉಹ್ಹಹ್ಹಹಹ ಹ್ಹೂಂಹ್ಹೂಂಹ್ಹೂಂ   
          ಅದೇನದು ಅದೇನದು ಐಸ್ ಐಸ್
          ಹೇ.. ಅದೇನದು ಅದೇನದು ಐಸ್ ಐಸ್ ಅದೇನದು ಹುಡುಗಿಗಿಂಥ ನೈಸ್ ನೈಸ್
          ಕರಗೋದುದು ನಿನ್ನ ಕರಿಗಿಸೋದಿದು ಹರಿಯೋದದು ನಿನ್ನ ತೇಲಿಸೋದಿದು  
          ಅದೇನದು ಅದೇನದು ಐಸ್ ಐಸ್  ಅದೇನದು ಹುಡುಗಿಗಿಂಥ ನೈಸ್ ನೈಸ್
ಹೆಣ್ಣು : ಬೆಂಕಿ ಇಲ್ಲದ ಊರಿಗ್ಹೋದರೇ ನನ್ನ ಮುಟ್ಟಿದವರೇ ಎಲ್ಲ ತಣ್ಣಗಾದರು
          ಮಳೆಯೂ ಸುರಿಯದ ಹಳ್ಳಿಗೋದರೇ ಐಸು ಗೆಡ್ಡೆ ಎಂದು ನನ್ನ ಅರೆದು ಕುಡಿದರೂ
          ಅಯ್ಯೋ ಅಯ್ಯೋ ನಿನ್ನಾ ಕಥೆ ಏನು ಮಹರಾಯ
          ಯಾವ ಊರು ನಿಂದು ಬೇಗ ಹೇಳು ಮಹನೀಯ
ಗಂಡು : ಮಳೆಯೂ ಸುರಿಯದ ಊರು ನನ್ನದೂ (ಅಯ್ಯ).. ಇಲ್ಲ
           ಬೆಂಕಿ ಇಲ್ಲದಾ ಊರು ನನ್ನದು (ಅಯ್ಯ) ಇಲ್ಲ ಇಲ್ಲ
 ಹೆಣ್ಣು : ಎರಡು ಇಲ್ಲದಾ ಬರಗಾಲದೂರಿದು ಅದ್ಯಾಕಿಂಗೆ ಆಡ್ತಿಯಯ್ಯ ಮನ್ಸ ನರಮನ್ಸ  
          ಐಸಿನ್ ಜತೆ ಆಟ ಆಡೋ ವಯ್ಸಾ ನಡುವಯ್ಸಾ
ಹೆಣ್ಣು : ಈಜು ಬಾರದೆ ನೀರಿಗಿಳಿದರೆ ಕೈಯಿ ಕಾಲು ಬೀಸಬೇಕು ಮೇಲೆ ತೇಲಲು
          ನೀರಿಗಿಳಿದರೂ ಈಜದಿದ್ದರೇ ಮೂರೇ ನಿಮಿಷ ಸಾಕು ಐಸುಗಡ್ಡೆ ಆಗಲೂ
          ಅಯ್ಯೋ ಅಯ್ಯೋ ನಿನ್ನ ಕಥೆ ಏನು ಮಹರಾಯ
          ಮುಳುಗುತಿಯ ತೇಲುತಿಯ ಹೇಳು ಮಹನೀಯಾ
ಗಂಡು : ತೇಲುತಿನಿ ಮೇಲೆ ನಾನು (ಅಯ್ಯ ) ಇಲ್ಲ ಮುಳುಗುತೀನಿ ಒಳಗೆ ನಾನು (ಅಯ್ಯ) ಇಲ್ಲ ಇಲ್ಲ
           ಎರಡು ಆಗದಾ ಬರಿ ವೀಲು ನೋಡಿದು... ಅಯ್ಯೋ
ಹೆಣ್ಣು : ಅದೇನದು ಅದೇನದು ಐಸ್ ಐಸ್ ಅದೇನದು ಹುಡುಗಿಗಿಂಥ ನೈಸ್ ನೈಸ್
--------------------------------------------------------------------------------------------------------------------------
No comments:
Powered by Blogger.

ಅಸಂಭವ (1986)

ಅಸಂಭವ (1986)

ಅಸಂಭವ ಚಿತ್ರದ ಹಾಡುಗಳು 
ಜೀವ ಬಂದ ಬೊಂಬೆಯೋ ನಕ್ಕು ನಿಂತ ರಂಭೆಯೋ 

ಯಾರಿಗೆ ಬಂತು ಎಲ್ಲಿಗೆ ಬಂತು ನಲವತ್ತೇಳರ ಸ್ವಾತಂತ್ರ್ಯ

ನಿನ್ನಂಥ ಕತೆಗಾರ ಯಾರಿಲ್ಲ, ನೀ ಬರೆದಂತೇ  ಆಡೋರು  ನಾವೇಲ್ಲಾ 

ಚಿನ್ನ ಚೀನಾ ಬೇಡ ಚಿನ್ನ ಯಾಕೆ ಹೀಗೆ ಕಾಡ್ತಿ ನನ್ನ 

ಹುಬ್ಳಿ ಸೀರೆ ರವಿಕೆ ಖಣ ತಂದೀವ್ನಿ 

ನಿನ್ನ ಹೊತ್ತುವಳು ಹೊತ್ತು ಹೆತ್ತವಳು 

ಅಸಂಭವ (1986) - ಜೀವ ಬಂದ ಬೊಂಬೆಯೊ 
ಸಂಗೀತ: ಶಂಕರ್-ಗಣೇಶ್ ರಚನೆ: ಆರ್.ಎನ್.ಜಯಗೋಪಾಲ್  ಗಾಯನ: ಕೆ.ಜೆ.ಯೇಸುದಾಸ್, ವಾಣಿ ಜಯರಾಂ
ಗಂಡು: ಜೇವ ಬಂದ ಬೊಂಬೆಯೋ ನಕ್ಕು ನಿಂತ ರಂಭೆಯೊ
           ನಿನ್ನ ಕಣ್ಣ ಮಿಂಚಲಿ ನನ್ನೆದೆ  ಹಾಡಿದೆ ಪ್ರೇಮದೆ ಈ ದಿನ
ಹೆಣ್ಣು: ಸುತ್ತಮುತ್ತ ಎಲ್ಲೆಡೆ ನಿನ್ನ ರೂಪ ಕಂಡೇ ನಾ
         ನಿನ್ನ ನಗೆ ಅಲೆಯಲಿ ಈ ಮನ ಹಾಡುತ ತೇಲಿದೆ ಈ ದಿನ
ಗಂಡು: ನೀ ಯಾವುದೋ ಶಿಲ್ಪಿಯ ಕಲ್ಪನೆ ಈ ದೇವಿಗೆ ಮಾಡುವೆ ವಂದನೆ
ಹೆಣ್ಣು: ನೀ ವೈಣಿಕ ನಾ ವೀಣೆಯೊ ನೀ ಮೀಟಿದೆ ನಾ ಹಾಡಿದೆ
ಗಂಡು: ನಂಗಾಗಿ ಹುಟ್ಟಿ ನೀ ಬಂದೆಯೊ ಹೂಮಾಲೆ ಕಟ್ಟಿ ನೀ ತಂದೆಯೊ
ಹೆಣ್ಣು: ತಂದೆ ನಾನು ನನ್ನನೆ
ಗಂಡು: ಜೇವ ಬಂದ ಬೊಂಬೆಯೋ ನಕ್ಕು ನಿಂತ ರಂಭೆಯೊ
ಹೆಣ್ಣು: ನಿನ್ನ ನಗೆ ಅಲೆಯಲಿ ಈ ಮನ  ಹಾಡುತ ತೇಲಿದೆ ಈ ದಿನ
ಹೆಣ್ಣು: ನೀ ಧೈರ್ಯದೆ ಗೆದ್ದೆಯೋ ನನ್ನನೇ ನಾ ಆ ಕ್ಷಣ ಸೇರಿದೆ ನಿನ್ನನೇ
ಗಂಡು: ನಾ ಬಂಧಿಯು ಆ ಕಣ್ಣಲಿ ಮನೆ ಮಾಡಿದೆ ನೀ ನನ್ನಲಿ
ಹೆಣ್ಣು: ನೀನಾದೆ ದೀಪ ಈ ಬಾಳಿಗೆ ನೀತಂದೆ ಗೀತೆ ಈ ಹಾಡಿಗೆ
ಗಂಡು: ನೀನೇ ಪ್ರೀತಿ ಪಲ್ಲವಿ
ಹೆಣ್ಣು: ಸುತ್ತಮುತ್ತ ಎಲ್ಲೆಡೆ ನಿನ್ನ ರೂಪ ಕಂಡೆ ನಾ
ಗಂಡು: ನಿನ್ನ ಕಣ್ಣ ಮಿಂಚಲಿ ನನ್ನೆದೆ ಹಾಡಿದೆ ಪ್ರೇಮದೆ ಈ ದಿನ
------------------------------------------------------------------------------------------------------------------------
ಅಸಂಭವ (1986) - ಯಾರಿಗೆ ಬಂತು? ಎಲ್ಲಿಗೆ ಬಂತು?
ಸಾಹಿತ್ಯ : ಸಿದ್ಧಲಿಂಗಯ್ಯ ಸಂಗೀತ : ಶಂಕರ್-ಗಣೇಶ್ ಗಾಯನ : ರಮೇಶ್, ಕೋರಸ್ 
ಗಂಡು : ಯಾರಿಗೆ ಬಂತು ಎಲ್ಲಿಗೆ ಬಂತು ನಲವತ್ತೇಳರ ಸ್ವಾತಂತ್ರ್ಯ
           ಯಾರಿಗೆ ಬಂತು ಎಲ್ಲಿಗೆ ಬಂತು ನಲವತ್ತೇಳರ ಸ್ವಾತಂತ್ರ್ಯ
           ಜನಗಳ ತಿನ್ನುವ ಬಾಯಿಗೆ ಬಂತು ಲೂಟಿಗಾರರ ಜೇಬಿಗೆ ಬಂತು
           ಜನಗಳ ತಿನ್ನುವ ಬಾಯಿಗೆ ಬಂತು ಲೂಟಿಗಾರರ ಜೇಬಿಗೆ ಬಂತು
           ಮಹಡಿಮನೆಗಳ ಸಾಲಿಗೆ ಬಂತು  ಕೋಟ್ಯಾಧೀಶರ ಕೋಣೆಗೆ ಬಂತು
           ನಲವತ್ತೇಳರ ಸ್ವಾತಂತ್ರ್ಯ
ಕೋರಸ್ : ನಲವತ್ತೇಳರ ಸ್ವಾತಂತ್ರ್ಯ
               ಯಾರಿಗೆ ಬಂತು ಎಲ್ಲಿಗೆ ಬಂತು ನಲವತ್ತೇಳರ ಸ್ವಾತಂತ್ರ್ಯ
                ನಲವತ್ತೇಳರ ಸ್ವಾತಂತ್ರ್ಯ
ಗಂಡು : ಪೋಲೀಸರ ಬೂಟಿಗೆ ಬಂತು  ಮಾಲೀಕರ ಚಾಟಿಗೆ ಬಂತು
            ಪೋಲೀಸರ ಬೂಟಿಗೆ ಬಂತು  ಮಾಲೀಕರ ಚಾಟಿಗೆ ಬಂತು
            ಬಂದೂಕದ ಗುಂಡಿಗೆ ಬಂತು  ನಲವತ್ತೇಳರ ಸ್ವಾತಂತ್ರ್ಯ
ಕೋರಸ್ : ಯಾರಿಗೆ ಬಂತು ಎಲ್ಲಿಗೆ ಬಂತು ನಲವತ್ತೇಳರ ಸ್ವಾತಂತ್ರ್ಯ
               ನಲವತ್ತೇಳರ ಸ್ವಾತಂತ್ರ್ಯ
ಗಂಡು : ಅಧಿಕಾರ ಗದ್ದುಗೆ ಮೇಲೆ ವರ್ಷಗಟ್ಟಲೇ ಚರ್ಚೆಗೇ ಕೂತು  
           ಅಧಿಕಾರ ಗದ್ದುಗೆ ಮೇಲೆ ವರ್ಷಗಟ್ಟಲೇ ಚರ್ಚೆಗೇ ಕೂತು 
           ಬಡವರ ಬೆವರ ರಕ್ತವ ಕುಡಿದು ಹೇಳಲೇ ಇಲ್ಲ ಸ್ವಾತಂತ್ರ್ಯ 
ಕೋರಸ್ : ಯಾರಿಗೆ ಬಂತು ಎಲ್ಲಿಗೆ ಬಂತು ನಲವತ್ತೇಳರ ಸ್ವಾತಂತ್ರ್ಯ ಹ್ಹಾ
               ನಲವತ್ತೇಳರ ಸ್ವಾತಂತ್ರ್ಯ
ಗಂಡು : ಸಾವಿರಾರು ಜನ ಗೋರಿಯಾದರು ಲಕ್ಷ ಲಕ್ಷ ಜನ ಗಲ್ಲಿಗೇರಿದರು
            ರೈತ ಕಾರ್ಮಿಕನು ರಕ್ತವ ಕೊಟ್ಟನು 
           ಬಡವರ ಮನೆಗೆ ಬರಲಿಲ್ಲ ಬೆಳಕಿನ ಕಿರಣ ತರಲಿಲ್ಲ
           ಬಡವರ ಮನೆಗೆ ಬರಲಿಲ್ಲ ಬೆಳಕಿನ ಕಿರಣ ತರಲಿಲ್ಲ
           ಗೋಳಿನ ಕಡಲನು ಬತ್ತಿಸಲಿಲ್ಲ ಸಮತೆಯ ಹೂವನು ಅರಳಿಸಲಿಲ್ಲ
          ನಲವತ್ತೇಳರ ಸ್ವಾತಂತ್ರ್ಯ 
ಕೋರಸ್ : ಯಾರಿಗೆ ಬಂತು ಎಲ್ಲಿಗೆ ಬಂತು ನಲವತ್ತೇಳರ ಸ್ವಾತಂತ್ರ್ಯ
               ನಲವತ್ತೇಳರ ಸ್ವಾತಂತ್ರ್ಯ
-------------------------------------------------------------------------------------------------------------------------
ಅಸಂಭವ (1986) - ನಿನ್ನಂಥ ಕತೆಗಾರ ಯಾರಿಲ್ಲ
ಸಂಗೀತ : ಶಂಕರ್-ಗಣೇಶ್ ಸಾಹಿತ್ಯ : ಆರ್.ಏನ್.ಜಯಗೋಪಾಲ್  ಗಾಯನ : ಕೆ.ಜೆ.ಏಸುದಾಸ್ 
ದೈವ ಎನ್ನುವುರು ಉಂಟು, ಕಲ್ಲು ಎನ್ನವುರು ಉಂಟು
ಕಂಡು ಕಾಣದಂತೆ ತಿಳಿದು ತಿಳಿಯದಂತೆ...ಹೇಹೇ...
ನೀ ಇರುವೇ... ಓ... ಅಹ್ಹಹ  ನೀ  ಬಲು ಜಾಣನು
ನಿನ್ನಂಥ ಕತೆಗಾರ ಯಾರಿಲ್ಲ, ನೀ ಬರೆದಂತೇ  ಆಡೋರು  ನಾವೇಲ್ಲಾ
ನಿನ್ನ ಹುಡುಗಾಟವು ನಮ್ಮ ಹೋರಾಟವು ಕೊನೆ ಏನೋ ಬಲ್ಲೋರು ಇಲ್ಲಾ...
ನಿನ್ನಂಥ ಕತೆಗಾರ ಯಾರಿಲ್ಲ, ನೀ ಬರೆದಂತೇ  ಆಡೋರು  ನಾವೇಲ್ಲಾ
ನಿನ್ನ ಹುಡುಗಾಟವು ನಮ್ಮ ಹೋರಾಟವು ಕೊನೆ ಏನೋ ಬಲ್ಲೋರು ಇಲ್ಲಾ...
ನಿನ್ನಂಥ ಕತೆಗಾರ ಯಾರಿಲ್ಲ, 
ಮೈಮುಚ್ಚೆ ಗೆಣ್ಣೂದ್ದ ಬರೀ ಬಟ್ಟೆಗೆ ಕಡು ಹೆಣುಗಾಟ ಬಾಳೆಲ್ಲಾ ಇಲ್ಲೀ ... 
ಹಸಿದಾಗ ಗತಿಯಿಲ್ಲ ಹಿಡಿ ಕೂಳಿಗೆ ಈ ನಡುಬೀದಿ ಮನೆಯಂತೇ ಇಲ್ಲೀ 
ನಿಂಗೇತಕೆ ಇಂಥ ಚೆಲ್ಲಾಟವೂ ಕಣ್ಣೀರನು ಕಂಡು ಉಲ್ಲಾಸವೂ
ಇದಕ್ಕಿಂತ ಅನ್ಯಾಯ ಬೇರಿಲ್ಲವೋ
ನಿನ್ನಂಥ ಕತೆಗಾರ ಯಾರಿಲ್ಲ, ನೀ ಬರೆದಂತೇ  ಆಡೋರು  ನಾವೇಲ್ಲಾ
ನಿನ್ನ ಹುಡುಗಾಟವು ನಮ್ಮ ಹೋರಾಟವು ಕೊನೆ ಏನೋ ಬಲ್ಲೋರು ಇಲ್ಲಾ...
ನಿನ್ನಂಥ ಕತೆಗಾರ ಯಾರಿಲ್ಲ, 
ಎಲ್ಲಾರು ಕೊನೆಯಲ್ಲಿ ಬರುವಲ್ಲಿಗೆ ನೀ ನನ್ನೇಕೆ ಮೊದಲಿಲ್ಲಿ ಬಿಟ್ಟೇ 
ನಿನ್ನಂತೆ ನನ್ನನ್ನು ಶಿಲೆ ಮಾಡದೇ ನೀ ನಂಗೇಕೇ ಹೃದಯವ  ಕೊಟ್ಟೇ
ತಾಯೆನ್ನುವಾ ಪ್ರೀತಿ ಪ್ರತಿರೂಪವಾ ನಾ ಕಾಣದೇ  ಹೋದೇ ಆ ದೈವವಾ
ನನ್ನಲ್ಲಿ ನಿನಗಿಂತ ಛಲವೇತಕೋ..
ನಿನ್ನಂಥ ಕತೆಗಾರ ಯಾರಿಲ್ಲ, ನೀ ಬರೆದಂತೇ  ಆಡೋರು  ನಾವೇಲ್ಲಾ
ನಿನ್ನ ಹುಡುಗಾಟವು ನಮ್ಮ ಹೋರಾಟವು ಕೊನೆ ಏನೋ ಬಲ್ಲೋರು ಇಲ್ಲಾ...
ಆಆಆಅ.... ಲಲಲಲಲ... ಲಾರರಿರ ಲಲಲಲಲ 
--------------------------------------------------------------------------------------------------------------------------
ಅಸಂಭವ (1986) - ಚಿನ್ನ ಚಿನ್ನ ಬೇಡ ಚಿನ್ನ ಯಾಕೆ ಹೀಗೆ ಕಾಡ್ತಿ ನನ್ನ 
ಸಂಗೀತ: ಶಂಕರ್-ಗಣೇಶ್ ರಚನೆ: ಆರ್.ಎನ್.ಜಯಗೋಪಾಲ್ ಗಾಯನ: ರಮೇಶ ವಾಣಿಜಯರಾಂ 
ಗಂಡು : ಹೊಯ್ ಚಿನ್ನ ಚಿನ್ನ (ಹ್ಹಾ )  ಬೇಡ ಚಿನ್ನ  (ಹ್ಹಾ ) ಯಾಕೆ ಹೀಗೆ (ಹ್ಹೂಂ ) ಕಾಡ್ತಿ ನನ್ನ (ಆಹಾ)
            ಹೃದಯವಿದು ಕರಗದು ಈ ಗೋಳಿನಲಿ ನೆಂಟತನ ಹೇಳದಿರು ನನ್ನ ಬಳಿ 
            ಕೂಲಿ ಕೊಟ್ಟು ತಾಳಿ ಕಟ್ಟು ಅನ್ನೋ ಹೆಣ್ಣು ನೀನೇನಾ 
           ಆಸೆ ಪಟ್ಟು ನೀತಿ ಕೆಟ್ಟು ನೊಂದು ಗಂಡು ನಾನೇನು 
ಹೆಣ್ಣು : ಬೇಡ ಬೇಡ (ಹ್ಹಾ)  ಹಾಗನ್ಬೇಡ (ಹೊಯ್) ನಾನೇ ಹೆಂಡತಿ (ಹ್ಹಹ್ಹ) ನೀನೇ ಗಂಡ (ಹ್ಹ) 
          ಓ ಗೆಳೆಯಾ ಈ ಹೃದಯ ಸೆಳೆದಿರುವೇ ನಿನಗಾಗಿ ಹಗಲಿರುಳು ಜಪಿಸಿರುವೇ 
          ನೆಂಟತನ ಬೇಡವೆನ್ನೋ ತುಂಟತನ ನಿಂಗೇಕೆ 
          ಆಸೆ ಪಡೋ ಹೆಣ್ಣಾ ದೂಡೋ ಕಲ್ಲು ಮನ ಹೀಗೆಕೆ 
ಗಂಡು : ಬೇಡ ನಂಗೇ ಜೋಡಿ ಕೈಗೇ ಹಾಕೋ ಬೇಡಿ..  ಅಹ್ಹಹ್ಹಹ್ಹಾ  
           ಬೇಡ ನಂಗೇ ಜೋಡಿ ಕೈಗೇ ಹಾಕೋ ಬೇಡಿ.
           ಸ್ವಚ್ಛಂದ ಹಾರೋ ಹಕ್ಕಿ ನಾ ನಿನ್ನ ಕಾಟಕ್ಕೆ ಸಿಕ್ಕಿ... ಅಹ್ಹಹ್ಹ      
           ಆಗೋಲ್ಲ ನಿನ್ನಯ ಗಂಡ ಈ ನಿನ್ನ ಯತ್ನವು ದಂಡ 
ಹೆಣ್ಣು : ಸಂಗಾತಿ ನಾ ನಿನ್ನಾ ಬಾಳಿಗೆ (ಅಹ್ಹಹ್ಹ) ನಾ ಕಾದಿಹ ಇದೋ ತಾಳಿಗೇ 
          ಮೀಸೆ ಹೊತ್ತ ಗಂಡೇ ನಿಂಗೆ ಆಸೆ ಇಲ್ಲವೇ 
ಗಂಡು : ಹೇ ಚಿನ್ನ ಚಿನ್ನ (ಹ್ಹಾ )  ಬೇಡ ಚಿನ್ನ  (ಹ್ಹಾ ) ಯಾಕೆ ಹೀಗೆ (ಹ್ಹೂಂ ) ಕಾಡ್ತಿ ನನ್ನ (ಆಹಾ)
ಹೆಣ್ಣು : ಬೇಡ ಬೇಡ (ಹೊಯ್)  ಹಾಗನ್ಬೇಡ (ಹ್ಹಾ ) ನಾನೇ ಹೆಂಡತಿ (ಹ್ಹಹ್ಹ) ನೀನೇ ಗಂಡ (ಹ್ಹಹೊಯ್  ) 
ಹೆಣ್ಣು : ಬ್ರಹ್ಮ ಎಂದೋ ನನ್ನ ನಿನ್ನ ಜೋಡಿ ಮಾಡಿ ಬಿಟ್ಟ ಚೆನ್ನ ಈಗ ಬೇಡ ಎಂದರಾಯಿತೇ.. ಅಹ್ಹಹ್  
 ಗಂಡು : ಗಂಟು ಬಿದ್ದೆಯಲ್ಲೇ ನೀನು ಅಂಟು ಜಾಡ್ಯದಂತೆ ಇನ್ನು ಮದುವೆ  ಅಂದ್ರೆ ಸುಮ್ಮನಾಯಿತೇ .. ಹ್ಹ 
ಹೆಣ್ಣು : ಏಕೇ ಇಂಥ ಕೋಪ ಹ್ಹಾ... ಹೆಣ್ಣೇ ಮನೆಗೇ ದೀಪ 
ಗಂಡು : ಏಕೆ ಆಸೆ ನನ್ನಲ್ಲಿ ಗಂಡೇ ಇಲ್ವೇ ಊರಲ್ಲಿ 
ಹೆಣ್ಣು : ಇದ್ರೇ ಮನಸು ಕಟ್ಟು ತಾಳಿ ಮಾತನಾಡದೇ 
ಗಂಡು : ಚಿನ್ನ ಚಿನ್ನ (ಹ್ಹ) ಆಯ್ತು ಇನ್ನಾ (ಹ್ಹೂಂ) ನೀನೇ ಹೆಂಡ್ತಿ (ಅಹ್ಹಹ್ ) ನಾನೇ ಗಂಡ (ಆಹ್ಹಾ)
ಹೆಣ್ಣು : ಓ ಗೆಳೆಯಾ ಈ ಹೃದಯ ಸೆಳೆದಿರುವೇ (ಅಹ್ಹಹ್ಹ) ನಿನಗಾಗಿ ಹಗಲಿರುಳು ಜಪಿಸಿರುವೇ 
ಗಂಡು : ಮಾತು ಕೊಟ್ಟು ತಾಳಿ ಕಟ್ಟೋ ಮುಗ್ದ ಗಂಡು ನಾನಮ್ಮಾ 
ಹೆಣ್ಣು : ಆಸೆ ಪಟ್ಟು ಹಿಡಿದು ಪಟ್ಟು ಗೆದ್ದ ಹೆಣ್ಣು ನಾನಯ್ಯ
ಹೆಣ್ಣು : ಹ್ಹಾ... (ಹ್ಹಾ)  ಒಹೋ (ಹೇಹೇ)  
--------------------------------------------------------------------------------------------------------------------------
ಅಸಂಭವ (1986) - ಹುಬ್ಳಿ ಸೀರೆ ರವಿಕೆ ಖಣ ತಂದೀವ್ನಿ ಕಣೆ ನೋಡು ಬಾ
ಸಂಗೀತ: ಶಂಕರ್-ಗಣೇಶ್ ರಚನೆ: ಆರ್.ಎನ್.ಜಯಗೋಪಾಲ್ ಗಾಯನ: ರಮೇಶ,  ವಾಣಿಜಯರಾಂ
ಗಂಡು : ಹುಬ್ಳಿ ಸೀರೆ ರವಿಕೆ ಖಣ ತಂದೀವ್ನಿ ಕಣೆ ನೋಡುಬಾ...
           ಮಂಗಳೂರ ಮಲ್ಗೆ ಸೊಂಪಾಗೈತೆ ತಂಪಾಗ ನಕ್ಕು ಹತ್ರಾ ಬಾ..
           ರಾತ್ರಿ ಹೀಗೆ ಜಾರೋಗತೈತೆ...  ರಾಂಗ್ ಮಾಡಬೇಡ ಬೇಗ ಬಾ.. ಅಹ್ಹಹ್ಹ
ಹೆಣ್ಣು : ಹುಬ್ಳಿ ಸೀರೆ ರವಿಕೆ ಖಣ ಯಾಕೆ ತಂದೆ ನಂಗೊತ್ತು...
          ಮಂಗಳೂರು ಮಲ್ಲಿಗೇ ಮೂಡಿಸಿ ನನ್ನಾ ತಾಜಾ ಮಾಡೋ ಮಸಲತ್ತು
          ರಾತ್ರಿಯೆಲ್ಲ ಒಂಟಿಯಾಗಿ...  ಇರಬೇಕು ನೀನು ಈವತ್ತು...
ಗಂಡು : ನಾ ನಿನ್ನ ಕಂಡಾಗ ನನ್ನಾಸೆ ಕರೆದಿದೆ ನಿನ್ನಿಂದ ಒಂದನ್ನ ಕೇಳೋಕೆ ಬಯಸಿದೆ
ಹೆಣ್ಣು : ನೀನಾಡೋ ಮಾತನೆಲ್ಲ ನಾ ಬಲ್ಲೆ...  ಹೀಗೇಕೆ ಕಾದು ನಿಲ್ಲೂ ನೀ ಇಲ್ಲೇ
ಗಂಡು : ಈ ಜೀವ ನಿಲ್ಲೋದಿಲ್ಲ ಈ ದೇಹ ತಾಳೋದಿಲ್ಲ
           ಈ ದೂರ ಬೇಕಾಗಿಲ್ಲ ನೀನಿಲ್ದೆ ಬಾಳೇ ಇಲ್ಲ
ಹೆಣ್ಣು : ಮತ್ತೇಕೆ ನೀನು ಹೀಗೆ ಮಾಡಿದೆ ಮರ್ಯಾದೆ ಹೋಗೋ ಹಾಗೆ ಆಡಿದೆ
ಗಂಡು : ಹುಬ್ಳಿ ಸೀರೆ (ಹ್ಹ) ರವಿಕೆ ಖಣ (ಹ್ಹೂಹೂ ) ತಂದೀವ್ನಿ ಕಣೆ ನೋಡುಬಾ...
           ಮಂಗಳೂರ ಮಲ್ಗೆ ಸೊಂಪಾಗೈತೆ ತಂಪಾಗ ನಕ್ಕು ಹತ್ರಾ ಬಾ..
ಹೆಣ್ಣು : ರಾತ್ರಿಯೆಲ್ಲ ಒಂಟಿಯಾಗಿ...  ಇರಬೇಕು ನೀನು ಈವತ್ತು... ಹೂ....  
ಹೆಣ್ಣು  ನೀ ತಂದ ಮಲ್ಲಿಗೆ ಹೂವು ಇಲ್ಲೆಲ್ಲಾ ಉದುರಿದೆ ನಿನ್ನಾಟ ಕೆನ್ನೇಲಿ ಕೆಂಪನು ತಂದಿದೆ
ಗಂಡು :  ಹೀಗೇನೆ ನಮ್ಮಾಟ ಸಾಗಲಿ ನಮಗಾಗಿ ಕಾಲದೋಟ ನಿಲ್ಲಲಿ
ಹೆಣ್ಣು  :  ಈ ತೋಳು ಕೇಳೋದಿಲ್ಲ ಈ ಹೂವು ತಾಳೋದಿಲ್ಲ
            ಈ ದಾಹ ತಿರೋದಿಲ್ಲ ಇನ್ನಂತೂ ನಿದ್ದೆ ಇಲ್ಲ
ಗಂಡು : ಅಮ್ಮಯ್ಯ ಹೌದು ನಾನು ಒಪ್ಪುವೆ ಬಾ ನೀನು ಒಮ್ಮೆ ನಾ ಅಪ್ಪುವೇ
ಹೆಣ್ಣು : ಹುಬ್ಳಿ ಸೀರೆ (ಹೊಯ್ ಹೊಯ್ )  ರವಿಕೆ ಖಣ (ಹ್ಹಾ ಹ್ಹಾ) ಯಾಕೆ ತಂದೆ ನಂಗೊತ್ತು...
          ಮಂಗಳೂರು ಮಲ್ಲಿಗೇ ಮೂಡಿಸಿ ನನ್ನಾ ತಾಜಾ ಮಾಡೋ ಮಸಲತ್ತು... ಅಹ್ಹಹ್ಹಹ್ಹಹ್ಹ...
ಗಂಡು : ರಾತ್ರಿ ಹೀಗೆ ಜಾರೋಗತೈತೇ ...  ರಾಂಗ್ ಮಾಡಬೇಡ ಬೇಗ ಬಾ..
ಇಬ್ಬರು : ಲಲಲಲ್ಲಲಲಾ  ಲಲಲಲ್ಲಲಲಾ  ಲಲಲಲ್ಲಲಲಾ  ಅಹ್ಹಹ್ಹಹ್ಹ
--------------------------------------------------------------------------------------------------------------------------
ಅಸಂಭವ (1986) - ನಿನ್ನ ಹೊತ್ತವಳು ಹೊತ್ತು ಹೆತ್ತವಳು
ಸಂಗೀತ: ಶಂಕರ್-ಗಣೇಶ್ ರಚನೆ: ಆರ್.ಎನ್.ಜಯಗೋಪಾಲ್ ಗಾಯನ: ಪಿ.ಸುಶೀಲಾ 
ನಿನ್ನ ಹೊತ್ತವಳು ಹೊತ್ತು ಹೆತ್ತವಳು ಹೆಣ್ಣಲ್ಲವೇನೋ ಪಾಪಿ
ತಾಯಿ ತಂಗಿಯಲಿ ಮೋಹ ದಾಹದೇ ಮೃಗವಾದೇ ಕಾಮ ರೂಪಿ
ನಿನ್ನ ಹೊತ್ತವಳು ಹೊತ್ತು ಹೆತ್ತವಳು ಹೆಣ್ಣಲ್ಲವೇನೋ ಪಾಪಿ
ತಾಯಿ ತಂಗಿಯಲಿ ಮೋಹ ದಾಹದೇ ಮೃಗವಾದೇ ಕಾಮ ರೂಪಿ
ಅಬಲೆ ಹೆಣ್ಣಾ ಕೋಪ ನಿನ್ನಾ ಸುಡುವ ಶಾಪ
ಅಬಲೆ ಹೆಣ್ಣಾ ಕೋಪ ನಿನ್ನಾ ಸುಡುವ ಶಾಪ
ಎಚ್ಚರ ಬರದಿರು ಹತ್ತಿರ ಈ ಕಾಳಿಯು ಕುಡಿವಳು ನೆತ್ತರ
ಹೆಣ್ಣಿನ ಮೋಹದಲಿ ಆ ರಾವಣ ಹಾಳಾದ ಕಾಮದ ದಾಹದಲಿ ಆ ಇಂದ್ರನು ತಾ ಬಿದ್ದ
ಹೆಣ್ಣಿನ ಮೋಹದಲಿ ಆ ರಾವಣ ಹಾಳಾದ ಕಾಮದ ದಾಹದಲಿ ಆ ಇಂದ್ರನು ತಾ ಬಿದ್ದ
ನಾರಿ ಒಲಿದರೆ ಸಂಗಾತಿ ಆಗುವಳು ಅವಳು ಮುನಿದರೆ ಹೆಮ್ಮಾರಿ ಆವಳು
ನೀ ಬಯಸೋ ಹೆಣ್ಣಿನ ಅಂಗ ನೀ ಹುಟ್ಟಿದೆ ಅಲ್ಲೇ ತಿಳಿಯೋ
ಆ ಮರ್ಮ ಸ್ಥಾನವೇ ಜಗದಾ ನಿಜ ಜನ್ಮ ಸ್ಥಾನವು ತಿಳಿಯೋ
ಹೆಣ್ಣಿನ ನರ್ತಕೇ ಜ್ವಾಲೇ ಪ್ರಳಯಾಗ್ನಿಯೂ ಆಗಿದೆ ಇಲ್ಲಿ
ಎಚ್ಚರ ಬರದಿರು ಹತ್ತಿರ ಈ ಕಾಳಿಯು ಕುಡಿವಳು ನೆತ್ತರ
ನಿನ್ನ ಹೊತ್ತವಳು ಹೊತ್ತು ಹೆತ್ತವಳು ಹೆಣ್ಣಲ್ಲವೇನೋ ಪಾಪಿ
ತಾಯಿ ತಂಗಿಯಲಿ ಮೋಹ ದಾಹದೇ ಮೃಗವಾದ ಕಾಮ ರೂಪಿ
ಸೊಕ್ಕಿದ ರಕ್ಕಸರ ಕೊಂದಳು ರಣಚೆಂಡಿ ರುಂಡದ  ಮಾಲೆಯನೇ ಅಣಿದಳು ಚಾಮುಂಡಿ 
ಸೊಕ್ಕಿದ ರಕ್ಕಸರ ಕೊಂದಳು ರಣಚೆಂಡಿ ರುಂಡದ  ಮಾಲೆಯನೇ ಅಣಿದಳು ಚಾಮುಂಡಿ 
ಆ ದಿವ್ಯ ಶಕ್ತಿಯ ಪ್ರತಿರೂಪ ನಾನೀಗ ನಿನ್ನಂಥ ಪಾಪಿಯ ಕೊನೆಯೆಂದು ನೋಡಿಕೋ 
ಈ ಶಕ್ತಿಯ ನಿಜ ಅವತಾರ ಲಯ ಸೃಷ್ಟಿಗೆ ಇದು ನಾಂದಿ 
ಈ ಕೋಪದ ತಾಪಕ್ಕೆ ಸಿಕ್ಕಿ ನೀನಾಗುವೆ ಹಿಡಿ ಬೂದಿ  
ಸಾವೋ ಒಂದೇ ಸತ್ಯ ಆಸೆ ಎಂದೂ ಮಿಥ್ಯ 
ಕೊಲ್ಲುವೇ ನಿನ್ನನ್ನೂ ಕೊಲ್ಲುವೇ ಕುಡಿಯುವೆ ನೆತ್ತರ ಕುಡಿಯುವೇ 
--------------------------------------------------------------------------------------------------------------------------
1 comment:
ನಿನ್ನಂಥ ಕತೆಗಾರ ಹಾಡು ಹಾಕಿ .

Powered by Blogger.

ನಾನು ನನ್ನ ಹೆಂಡ್ತೀರು (1999)

ನಾನು ನನ್ನ ಹೆಂಡ್ತೀರು (1999)

ನಾನು ನನ್ನ ಹೆಂಡ್ತಿಯರು ಚಿತ್ರದ ಹಾಡುಗಳು 
ನನ್ನೊಳು ಸಿಕ್ಕರೇ ಸಕ್ಕರೇ ಕಣ್ಣೆದುರು ನಿಂತರೆ ಅಪ್ಸರೆ 

ಈ ಜಗವೇ ನಮದು ನಮದು 

ರೆಡಿ ಒನ್ ಟೂ ತ್ರೀ ಕ್ಕೂ ಕ್ಕೂ ಕ್ಕೂ ಒನ್ ಟ್ರಕ್ಕು ಮ್ಯೂಜಿಕ್ಕು 

ಗಪ್ ಚಿಪ್ ಗಪ್ ಚಿಪ್ ಗಪ್ ಚಿಪ್ ಅಂತ ಬಾರೆ ನನ್ ಪಕ್ಕ್ 

ಈ ಭೂಮಿಗೆ ಮೊದಲು ಮೊದಲು ದೇವರು ಬಂದ 

ನಾನು ನನ್ನ ಹೆಂಡ್ತಿಯರು ನಾನು ನನ್ನ ಡಾರ್ಲಿಂಗ್ಸು  

ನಾನು ನನ್ನ ಹೆಂಡ್ತೀರು (1999) - ನನ್ನೋಳು ನಕ್ಕರೆ
ಸಂಗೀತ: ವಿ ರವಿಚಂದ್ರನ್ ಚಿತ್ರಗೀತೆ : ಕೆ. ಕಲ್ಯಾಣ್  ಹಾಡಿರುವವರು: ಎಸ್.ಪಿ.ಬಾಲಸುಬ್ರಮಣ್ಯಂ, ಚಿತ್ರ
ಗಂಡು : ನನ್ನೋಳು ನಕ್ಕರೆ (ಅಹ್ಹಹ್ಹ) ಸಕ್ಕರೆ ಕಣ್ಣೆದುರು ನಿಂತರೆ ಅಪ್ಸರೆ
            ದಿನ ನಕ್ಕು ನಕ್ಕು ಕನಸಿಕ್ಕುತಾಳೆ ಚತುರೆ ಇವಳಿದ್ದಲ್ಲೆಲ್ಲ ನಾ ಮರೆಯಬೇಕು ನಿದಿರೆ
            ಅರೆರೆರೆ ಮರೆತು ಮರೆತು ಎಲ್ಲ ಮರೆತು ಹಾಯಾಗಿರುವೆ ಮೂರು ಹೊತ್ತು
           ನಿನ್ನ ಹೊರತು ಬೇರೆ ಏನು ನನ್ ಪ್ರೀತೀಗ್ ಗೊತ್ತು
           ಅರೆರೆರ ನಂಗು ನಿಂಗು ಹಂಗು ಹಿಂಗು ಯಾರ ಹಂಗು ಇಲ್ಲ ರಂಗು
           ಸುತ್ತ ಮುತ್ತ ನಿನ್ನ ಹೊರತು ಬೇರೆ ಏನ್ ಗೊತ್ತು
ಹೆಣ್ಣು : ನಮ್ಮೋರು ಎಂದರೆ ದೇವರೆ, ಶ್ರೀರಾಮ ಎಂದರೆ ಅವರೇ 
ಗಂಡು : ಬೊಗಸೆ ಕಣ್ಣೋಳು ಬೊಗಸೇಲಿ ಸಿಕ್ಕರೆ ಜಗವೇ ಸಿಕ್ಕಿದರೂ  ಬಿಡುವಷ್ಟು ಅಕ್ಕರೆ
ಇಬ್ಬರು :   ಹೀಗೆ ತಾನೆ ಪ್ರೀತಿ ಮಾಡೋರ್ ಪ್ರೀತಿಸ್ತಾರೆ
ಹೆಣ್ಣು : ಅದು ಎಷ್ಟು ಕಲೆಗಾರ ಕನಸೊಂದಾದರೆ ನಿನ್ನ ತುಂಟು ಪ್ರೀತೀಗೆ ಸರಿಸಾಟಿ ದೊರೆ
ಗಂಡು : ಅರೆರೆರೆ ತುಂಟಿ ತುಂಟಿ ಮಾತಲ್ ಶುಂಠಿ ಮನಸು ಮಾತ್ರ ಜೇನು ಬುಟ್ಟಿ
            ನಿನ್ನ ಪ್ರೀತಿಗಾಗಿ ಬರುವೆ ಮತ್ತೆ ನಾ ಹುಟ್ಟಿ
ಹೆಣ್ಣು : ನಾವೆ ತುಂಟ ತುಂಟಿ ಯಾರು ಸಾಟಿ ತುಂಟು ತನವೆ ನಮ್ಮ ಜಂಟಿ
          ನಿಮ್ಮ ಪ್ರೀತಿಗಾಗಿ ಬರುವೆ ಮತ್ತೆ ನಾ ಹುಟ್ಟಿ
          ನಮ್ಮೋರು ಎಂದರೆ ತೊಂದರೆ (ಅಹ್ಹಹ್ಹ)  ನಗುವಲ್ಲೆ ಸೋಲಿಸೋ ಚೋರರೆ
ಹೆಣ್ಣು : ಸುಮ್ನೆ ನಿಮ್ಮಿಷ್ಟ ನನಗಿಷ್ಟ ಎಂದರೆ ಒಂದು ನಿಮಿಷಾನು ಬಿಡಲಾರರು ಈ ದೊರೆ
ಇಬ್ಬರ : ಹೀಗೆ ತಾನೆ ಪ್ರೀತಿ ಮಾಡೋರ್ ಪ್ರೀತಿಸ್ತಾರೆ
ಗಂಡು : (ಅಹ್ಹಹ್ಹ) ಅದು ಎಷ್ಟು ಚೆಲುವೇ‍ರ ನಗು ಒಂದಾದರೆ ನಿನ್ನ ಸಣ್ಣ ನಗುವಿಗೆ ಸರಿಸಾಟಿ ಚತುರೆ
ಹೆಣ್ಣು : ಅರೆರೆರೆ ಸಂಡೇ ಮಂಡೇ ಅಂತ ನೋಡ್ದೆ ಮೀನ ಮೇಷ ಅಂತ ಕೂರ್ದೆ
          ರೀ ರೀ ಏನ್ರಿ ಕೊಡ್ತೀರೇನ್ರಿ ಕನಸಲ್ ಕೇಳಿದ್ದು
ಗಂಡು : ಅರೆರೆರೆ ಯಾವ ವಾರ ಯಾವ ಮಾಸ ಯಾವ ಸಮಯ ಆದರೆ ಏನು
            ಲೇ ಲೇ ಲೇ ನೀನು ಅಂದ್ರೆ ಲೋಕಾನೆ ನಿಂದು
           ನನ್ನೋಳು ಒಲಿದರೆ, ಶಾಂತಲೆ ಕುಂತಲ್ಲೆ ಅವಳನು ಕುಣಿಸಲೇ 
--------------------------------------------------------------------------------------------------------------------------
ನಾನು ನನ್ನ ಹೆಂಡ್ತೀರು (1999) - ಈ ಜಗವೇ ನಮದೂ ನಮದೂ
ಸಂಗೀತ: ವಿ ರವಿಚಂದ್ರನ್ ಚಿತ್ರಗೀತೆ : ಕೆ. ಕಲ್ಯಾಣ್ ಹಾಡಿರುವವರು: ಎಲ್.ಏನ್.ಶಾಸ್ತ್ರಿ, ಚಿತ್ರಾ 
ಗಂಡು : ಹೇಹೇಹೇ ... ಓಓಓ ...
            ಈ ಜಗವೇ ನಮದೂ.. ನಮದೂ ಈ ಜೀವ ನಿಮದೂ ನಿಮ್ಮದೂ
            ನಾ ಕಾಣೋ ಕನಸು ನಿಮ್ಮದೂ ಕೊಡುವೇ ಎಲ್ಲಾ ಎಲ್ಲಾ ಹೃದಯದಿಂದ 
ಹೆಣ್ಣು : ನಿಮ್ಮೂರು ಹೇಗಿದೆ ಜಾಣ ನಿಮ್ಮೋರು ನಿನ್ನ ಹಾಗೇನಾ 
ಗಂಡು : ನಮ್ಮೂರು ಕೋಟಿಗೆ ಒಂದು ನಮ್ಮೋರು ಪ್ರೀತಿಲಿ ಮುಂದೂ 
ಹೆಣ್ಣು : ಓಓಓ ... ಮಾತಿಗೆ ನಡೆಯೋರು ಹೆಚ್ಛಂತೆ  ನಿಮ್ಮ ನೆಲದಲ್ಲಿ 
ಗಂಡು : ನಮ್ಮಲ್ಲಿ ಎಲ್ಲಾರು ದಿನ ಹಾಡೋದು ಒಮ್ಮನಸಿನಿಂದಾನೇ... ಓಓಓ  
           ಈ ಜಗವೇ ನಮದೂ.. ನಮದೂ ಈ ಜೀವ ನಿಮದೂ ನಿಮ್ಮದೂ...
ಹೆಣ್ಣು : ರಸಿಕ ರಸಿಕತೆಯಲ್ಲಿ ಏನಾರೂ ಹೊಸತನ ಹೇಳಿ 
ಗಂಡು : ನಮ್ಮಿಂದಲೇ ರಸಿಕತೆಯ ರಸಿಕತೆಯಿಂದಲೇ ನಾವೂ 
ಹೆಣ್ಣು : ಆಅಅ ... ರಸಿಕರ ಯಜಮಾನ ನಿಮ್ಮೂರ ಸಿಟಿ ಎಲ್ಲುಂಟು 
ಗಂಡು : ನಾವೂ ಪ್ರೀತಿಲಿ ಆ ಎವರೆಷ್ಟು ನಮ್ಮೂರು ಸಿಗದಷ್ಟು ಮೇಲುಂಟು 
            ಈ ಜಗವೇ ನಮದೂ.. ನಮದೂ ಈ ಜೀವ ನಿಮದೂ ನಿಮ್ಮದೂ
            ನಾ ಕಾಣೋ ಕನಸು ನಿಮ್ಮದೂ ಕೊಡುವೇ ಎಲ್ಲಾ ಎಲ್ಲಾ ಹೃದಯದಿಂದ 
--------------------------------------------------------------------------------------------------------------------------
ನಾನು ನನ್ನ ಹೆಂಡ್ತೀರು (1999) - ರೆಡಿ ಒನ್ ಟೂ ಥ್ರೀ ಕ್ಕೂ ಕ್ಕೂ ಕ್ಕೂ
ಸಂಗೀತ: ವಿ ರವಿಚಂದ್ರನ್ ಚಿತ್ರಗೀತೆ : ಕೆ. ಕಲ್ಯಾಣ್ ಹಾಡಿರುವವರು: ಗುರುಕಿರಣ, ಎಲ್.ಏನ್.ಶಾಸ್ತ್ರಿ
ಲಾ ಲಾ ಲಾ ಲಾ ಹೇ ಹೇ ಲಾ ಲಾ ಲಾ ಲಾ ಹ್ಹಾಂ
ತುರುತುತು ತುರುತುತು ತುರುತುತು
ರೆಡಿ ಒನ್ ಟೂ ಥ್ರೀ ಕ್ಕೂ ಕ್ಕೂ ಕ್ಕೂಒನ್ ಟ್ರಿಕ್ಕೂ ಮ್ಯೂಸಿಕ್ ಹ್ಯಾಟ್ರಿಕ್
ನನ್ನ ಹಾರ್ಟಿನ್ ಮ್ಯೂಜಿಕ್ ಎಲ್ಲಾ ಹಾರ್ಟಗು ಟಾನಿಕ್ಕು
ನಾ ನೀಡುವ ಕಿಕ್ಕು ಬೌನ್ಸ್ ಆಗದ ಚೆಕ್ಕು ನಾ ಹಾಕುವ ಲುಕ್ಕೂ ಬ್ರೇಕಿಲ್ಲದಾ ಬೈಕೂ
ಈ ರೀಮಿನ ದಿಕ್ಕು ಒಂದಿದ್ದರೇ ಸಾಕು ಸಿಕ್ಕೋರಿಗೆ ಲಕ್ಕು ಈ ಪ್ರೀತಿಯ ಬುಕ್ಕು
ಅಬ್ಬ ಕಾಂತೆಯರ ಕಣ್ಣಿದು ಆಯಸ್ಕಾಂತ ಪಟ
ಎದೆಯಲಿ ತೋಮ್ ತೋಮ್ ತರಿಗಿಡ ತರಿಗಿಡತಾ ತರಿಗಿಡತಾ ತರಿಗಿಡತಾ
ಇವರೇ ಕನಸೇ ಧೀಮ್ ಧೀಮ್ ಕಾಗುಣಿತ
ಮತ್ತ ಧೀಮ್ ಧೀಮ್ ತೋಮ್ ಕುಣಿತ ತಧಿಂತಾ ತಧಿಂತಾ ಹೇ ತಧಿಂತಾ
ಇವರಾ ತಕ್ಕತಕ್ಕ ತಕತಕ ಸೆಳೆತ ತಾತ್ತಾಧಿಮಿ ಧಿಮಿ ಧೀಮ್ ಧನ ಕುಣಿತ
ಬಲಗೈಗೊಬ್ಬಳು ನಾಧೀರ್ ಧಿನ್ನ ನಾಧಿರ ಧಿನ್ನ
ಎಡಗೈಗೊಬ್ಬಳು ನಡುವು ಸಣ್ಣ ನಡಿಗೆ ಸಣ್ಣ
ಕಣ್ಣಿಗಳಿಗೊಬ್ಬಳು ತಳಾಂಗುಧಿನ ತಳಾಂಗುಧಿನ
ತುಟಿಗಳಿಗೊಬ್ಬಳು  ಜೇಣಂಗೇನ ಇದು ನಂಗೇನಾ
ಕಿಂದರಿಗಂತೂ ತಲೆಯೇ ನಿಲಂದು ಹೆಜ್ಜೆಗೊಬ್ಬರು ಸುಂದ್ರಿಯರೂ
ಕಾಮಿಗಳಿಗೂ ಕಣ್ಣೇ ಕಾಣದು ತಪಸಿಗೊಬ್ರು ಮೇನಕೆಯರು
ಇಂಥಾ ಶ್ರೀರಾಮಚಂದ್ರನ ಎಂದೂ ದೇಹ ಮನಸಿಗೆ ಒಬ್ಬಳೇ ಹೆಂಡ್ರು
ನಾಧೀರ್ ಧೀನ್ನ್  ನಾಧೀರ್ ಧೀನ್ನ್  ನಾಧೀರ್ ಧೀನ್ನ್
ನಾಧೀರ್ ಧೀನ್ನ್  ನಾಧೀರ್ ಧೀನ್ನ್  ನಾಧೀರ್ ಧೀನ್ನ್
ತುರುತುತು  ತುರುತುತು ನಾಧೀರ್ ಧೀನ್ನ್
ತುರುತುತು  ತುರುತುತು ನಾಧೀರ್ ಧೀನ್ನ್
ರೆಡಿ ಒನ್ ಟೂ ಥ್ರೀ ಕ್ಕೂ ಕ್ಕೂ ಕ್ಕೂಒನ್ ಟ್ರಿಕ್ಕೂ ಮ್ಯೂಸಿಕ್ ಹ್ಯಾಟ್ರಿಕ್ 
ಇವಳ ಅಂಗ ಒಂದು ಧಿಮಿತಕ್ಕ ಮೃದಂಗ ಇವಳ ಅಂತರಂಗ ನೋಡಿದರೆ ಪತಂಗ 
ಇವಳು ಮೋಹನರಾಗದ ಮೋಹಿನಿ ಸರಿಗಮ ದದ ಪಗರಿದ 
ಹಂಸ ನಂದಿಗೆ ನರ್ತಿನಿ ಸಗಮ ದನಿಸಾ ನಿದ ಮಗರಿಸ 
ರನ್ನ ಜನ್ನ ಕವಿ ಪಂಪನಿಗೂ ಸರ್ವಜ್ಞನಿಗೂ ಸರಸದ ರಾಗವಿದೆ 
ಕಲ್ಯಾಣಿ ರಾಗ ಕಲ್ಯಾಣಿಗೆ ನಿರಿಗಮ ದನಿ ಸನಿದಪ ಮಗರಿಸ 
ಶಿವರಂಜಿನಿ ಈ ರಂಜಿನಿಗೆ ಸರಿಗಪ ಪದ ದದ ಪಗರಿಸ 
ಅಧರಂ ಮಧುರಂ ಮಧುರಾತಿ ಮಧುರಂ 
ಕಾಮ ಮರ್ಧಿನಿ ಕಾಮಿನಿಗೆ ಸರಿಗಮ ಪದನಿಸ ದಪ ಮಗರಿಸ 
ಅಖಿಲಂ ಸಕಲಂ ಚಲಲ ಸಲಲಂ ಈ ರಾಗ ನನ್ನ ಶ್ರೀಮತಿಗೇ 
ರತ್ತಿ ಪದನಿಸ ಮರಿಗರಿಸ ಕರ್ನಾಟಕ ಸಂಗೀತದ ಆಣೆ 
ನನಗೊಬ್ಬಳೇ ಹೆಂಡ್ತಿ ಕನ್ನಡಾದಾಣೆ 
--------------------------------------------------------------------------------------------------------------------------
ನಾನು ನನ್ನ ಹೆಂಡ್ತೀರು (1999) - ಬಾರೇ ಬಾರೇ ಬಾರೇ ಚಿನ್ನ ಬಾರೇ ನನ್ನ ಚಿನ್ನ
ಸಂಗೀತ: ವಿ ರವಿಚಂದ್ರನ್ ಚಿತ್ರಗೀತೆ : ಕೆ. ಕಲ್ಯಾಣ್ ಹಾಡಿರುವವರು: ಎಸ್.ಪಿ.ಬಿ. ಚಿತ್ರಾ
ಗಂಡು : ಗಪ್ ಚಿಪ್ ಗಪ್ ಚಿಪ್ ಗಪ್ ಚಿಪ್ ಅಂತ ಬಾರೇ ನನ್ನ ಪಕ್ಕ
ಹೆಣ್ಣು : ಗಪ್ ಚಿಪ್ ಗಪ್ ಚಿಪ್ ಗಪ್ ಚಿಪ್ ಅಂತ ಬಂದೇ ನಿನ್ ಪಕ್ಕ
ಕೋರಸ್ : ಹೂಂಹೂಂಹೂಂಹೂಂಹೂಂಹೂಂಹೂಂಹೂಂ
ಗಂಡು : ಬಾರೇ.....  ಬಾರೇ ... ಬಾರೇ ಚಿನ್ನ ಬಾರೇ ನನ್ನ ಚಿನ್ನ
           ಅಪ್ಪ ಅಮ್ಮ ಆಗೋಣ ಬಾ ಆಗೋಣ ಬಾ ಅಮ್ಮಮ್ಮಮ್ಮ
ಹೆಣ್ಣು : ಚಂದಮಾಮ ಚಂದಮಾಮ ಕದ್ದು ನೋಡ್ತಾವ್ನೆ
          ಅಯ್ಯೋ ಮಾಮ ದಯಮಾಡಿಸು ದಯಮಾಡಿಸಿ ದಯಮಾಡಿಸು
ಹೆಣ್ಣು : ಹೋಹೋಹೊ ಹೂಂಹೂಂಹೂಂ
ಗಂಡು : ಅಕ್ಕ ಪಕ್ಕ ಯಾರು ಕದ್ದು ನೋಡೋರ್ ಇಲ್ಲ
           ತಕ್ಕ ಥೈಯ್ಯ ಥಕ್ಕ ನಿಂದೇ ರಾತ್ರಿ ಎಲ್ಲಾ ಹೂಂ ...
           ಇಲ್ಲಿ ಯಾರು ಇಲ್ಲ ಈಗಲೇ ಬಾ ಬಾರೇ ಬಾರೇ ತಾರೇ ಮುತ್ತನ್ನು
ಹೆಣ್ಣು : ಇಲ್ಲಿ ಯಾರು ಇಲ್ಲ ಅಂದರೂ ಅಲ್ಲಿ  ಓರೆಯಾಗಿ ತಾರೆ ನಿಂತರೂ
ಗಂಡು :ಓ.. ತಾರೇ ಕಳಚಿಕೋ... ಓ ತಾರೇ  ಬಂದುಕೋ
           ನಮ್ಮ ದಾರಿ ಕಾಯದೇ ನಿನ್ನ ದಾರಿ ನೋಡಿಕೋ
          ಆ ತಾರೆ ಹೊತ್ತ ಜೇನಧಾರೆ ಬೇಗ ತಾರೆ ನನ್ನ ಧ್ರುವತಾರೆ ಮಿನುಗುತಾರೆ
          ತಾರೆ ತಾರೆ ತಾರೆ ತಾರೆ ತಾರೆ ಮನಸಾರೆ
         ಚಂದ್ರ ಇಲ್ಲ ತಾರೆ ಇಲ್ಲ ಒಂದೇ ಸಾರೇ ತಾರೆ ಎಲ್ಲಾ
ಹೆಣ್ಣು : ಹೇಹೇಹೇಹೇ.. ಹೇ  ಹೂಂ
ಗಂಡು : ಅಕ್ಕಪಕ್ಕ ಯಾರು ಕದ್ದು ನೋಡೋರಿಲ್ಲ ಥಕ್ಕ ಥೈಯ್ಯಾ ಥಕ್ಕ ನಮ್ದೇ ರಾತ್ರಿ ಎಲ್ಲಾ
           ಯಾವ್ ತಾರೆ ಇಲ್ಲ ಕಾಯದೆ ಈಗ್ಯಾರು ತಾರೆ ಯಾರು ನೋಡ್ತಿಲ್ಲ   
ಹೆಣ್ಣು : ನೀ ತಾರೆ ಎಂದಾ ಕೂಡಲೇ ಪಾರಿವಾಳ ಬಂತು ಓಡಿಸೋ ನಲ್ಲ
ಗಂಡು : ಪಾರಿವಾಳ ಬಚ್ಚಿಕೋ ಕಣ್ಣೆರಡು ಮುಚ್ಚಿಕೋ
            ಶಿವಪೂಜೆ ಕರಡಿಯೇ ತಾರೇ ಬಾಚಿಕೋ
            ಅಯ್ಯೋ ಪಾಪ ಅನಿಸೋದಿಲ್ವಾ  ನಾವು ಇನ್ನೂ ಪಾಪಾ ಮಾಡಿಲ್ಲ ಹ್ಹಹ್ಹಹ್ಹ ಟೈಮ್ ಬಂದಿಲ್ಲ
ಹೆಣ್ಣು : ಪಾಪಾ ಪಾಪಾ  ಪಬಪಪ್ಪ ಪಬಪಪ್ಪಪಾ   ಪಾರಿವಾಳ ಹೋಯ್ತು
           ಅಪ್ಪ ಅಮ್ಮ ಆಗೋಣ ಬಾ ಆಗೋಣ ಬಾ ಹೊಸ ಲಾಲಿ ಹಾಡೋಣ ಬಾ
ಗಂಡು : ಬಾರೇ ಚಿನ್ನ ಅಪ್ಪ ಅಮ್ಮ ಆಟ ಆಡೋಣ ಅಮ್ಮಮ್ಮ ಆಡೋಣ ಬಾ ಆಡೋಣ ಬಾ ಅಮ್ಮಮ್ಮಮ್ಮ       
--------------------------------------------------------------------------------------------------------------------------
ನಾನು ನನ್ನ ಹೆಂಡ್ತೀರು (1999) - ಈ ಭೂಮಿಗೆ ಮೊದಲು
ಸಂಗೀತ: ವಿ ರವಿಚಂದ್ರನ್ ಚಿತ್ರಗೀತೆ : ಕೆ. ಕಲ್ಯಾಣ್ ಹಾಡಿರುವವರು: ಎಲ್.ಏನ್.ಶಾಸ್ತ್ರಿ
ಹೆಣ್ಣು : ಲಾಲಿ ಲಾಲಿ ಸುವ್ವಲಾಲಿ ಸುವ್ವಲಾಲಿ ಜೋ ಜೋ ಜೋ
         ಲಾಲಿ ಲಾಲಿ  ಸುವ್ವಲಾಲಿ ಸುವ್ವಲಾಲಿ  ಜೋ ಜೋ ಜೋ
          ನನ್ನ ರಾಜ ನೀನೇ ರಾಜ ಅಪ್ಪಿಕೊಳ್ಳು ಓ ರಾಜ
          ನನ್ನ ಕನಸಿನ ರಾಜ ನೀನು ಬಾರೋ ಮಹಾರಾಜ
ಗಂಡು : ಈ ಭೂಮಿಗೆ ಮೊದಲು ಮೊದಲು...
            ಈ ಭೂಮಿಗೆ ಮೊದಲು ಮೊದಲು ದೇವರು ಬಂದ ಆನಂತರ ತನ್ನ ಬದಲು ತಾಯಿಯ ತಂದ
ಹೆಣ್ಣು :  ತಾಯಿಯು ಎಲ್ಲಡೆ ಇರಲು ಸಾಧ್ಯವೇ ಇಲ್ಲ ಅದಕ್ಕೆಂದೇ ದೇವರು ತಂದ ಮಕ್ಕಳನೆಲ್ಲ
ಮಗು : ಏಬಿಸಿಡಿ ಏಬಿಸಿಡಿ ಹೇಳಿಕೊಡಿ ಓ ಮಮ್ಮಿ  ಏಬಿಸಿಡಿ ಕಲಿತ ಮೇಲೆ ಆಟ ಹೇಳಿ ಕೊಡಿ ಮಮ್ಮಿ
ಹೆಣ್ಣು : ಆಟ ಪಾಠ ಊಟ ನೋಟ ಎಲ್ಲಾ ನಿನ್ನ ಇಷ್ಟನೋ ನಿನ್ನ ಎಲ್ಲಾ ಇಷ್ಟಾಗಳೂ ನನಗೆ ಇಷ್ಟನೋ
ಹೆಣ್ಣು : ನಿನ್ನ ಹೆತ್ತವಳು ಯಾರೋ ನಾ ಕಾಣೇ ತಂದೇ ನೆರಳಿಲ್ಲದೆ ಬಂದೋನೆ
ಗಂಡು : ನಿನ್ನಿಂದಲೇ ಮನೆ ಬೆಳದಿಂಗಳು ಎಲ್ಲೋ ಚೆಂದಾಗಿರಲಿ ನಿನ್ನ ಹೆತ್ತವಳು
ಹೆಣ್ಣು : ಲಾಲಿ ತೂಗೋ ಹಾಡಿದು ಯಾವ ಪುಣ್ಯಾನೋ  ನಿನ್ನ ನೆನಪೇ ಜೋ  ನನ್ನಾ ಉಸಿರೇ ಜೋ
ಗಂಡು : ಸಾಕೋಳ ಒಬ್ಬಳು ಹೆತ್ತೋಳ ಒಬ್ಬಳು ಹೀಗೆ ಋಣಾನುಬಂಧನಾವು ಅಂದುಕೊಳ್ಳದೇ
            ತಾನೇ ನಡಿಯೋ ಪ್ರೀತಿ ಸಂಬಂಧ
ಹೆಣ್ಣು : ಇಂಥ ಎಲ್ಲ ಸಂಬಂಧದ ಸುತ್ತ ನಮ್ಮ ಅನುಬಂಧ ಯಾವ ದೈವ ತಂದ ನಮ್ಮ ಇಂಥ ಆನಂದ
ಹೆಣ್ಣು : ಹೆತ್ತು ಹೊತ್ತು ಕೂರುವ ಭಾರವಿಲ್ಲದೇ ತಾಯ್ತನ ಕೊಟ್ಟೇ ನೀ ಏನೂ ಕೇಳದೆ
ಗಂಡು : ಲಾಲಿ ಸುವ್ವಲಾಲಿ ಮನೆ ತುಂಬಿ ಹೋಗಿದೆ ಇದ್ದ ನಿರಾಸೆಯ ಮಾತೆಲ್ಲಿದೆ
ಹೆಣ್ಣು : ಈ ನನ್ನ ಕರುಳ ಹಾಡಿದು        ಗಂಡು : ನೆರಳಾಯ್ತಮ್ಮಾ
ಹೆಣ್ಣು : ಕನಸೇ ಕಂದ ಜೋ ... ಸೊಗಸೇ ಚೆಂದ ಜೋ
          ಸರಿಗಮ ಪದನಿನಿ ನೀನೇ ನನ್ನ ಬಾಳಿಗೆ   ಸನಿದಪ ಮಗರಿಸ ಸರಿಸರಿ ಬಾ ಹೀಗೆ
ಇಬ್ಬರು : ಸರಿ ಸರಿ ಸರಿ ಸಮ ಸಮಗಮ ನಾವಿಲ್ಲಿ ಆನಂದ ನಂದನವನ ನಮ್ಮ ಮನೆಯಲ್ಲಿ
ಗಂಡು : ಈ ಭೂಮಿಗೆ ಮೊದಲು ಮೊದಲು
            ಈ ಭೂಮಿಗೆ ಮೊದಲು ಮೊದಲು ದೇವರು ಬಂದ ಆನಂತರ ತನ್ನ ಬದಲು ತಾಯಿಯ ತಂದ
--------------------------------------------------------------------------------------------------------------------------
ನಾನು ನನ್ನ ಹೆಂಡ್ತೀರು (1999) - ನಾನು ನನ್ನ ಹೆಂಡ್ತೀರು  ನಾನು ನನ್ನ ಡಾರ್ಲಿಂಗ್ಸು
ಸಂಗೀತ: ವಿ ರವಿಚಂದ್ರನ್ ಚಿತ್ರಗೀತೆ : ಕೆ. ಕಲ್ಯಾಣ್ ಹಾಡಿರುವವರು: ಎಸ್.ಪಿ.ಬಿ. ಚಿತ್ರಾ
ಗಂಡು : ನಾನು ನನ್ನ ಹೆಂಡ್ತೀರು  ನಾನು ನನ್ನ ಡಾರ್ಲಿಂಗ್ಸು
            ಡೇ ಅಂಡ್ ನೈಟು ಸಿಂಗಿಂಗ್ಸು ಟಚಿಂಗ್ಸು ತಲೆ ತಿರುಗಿಂಗ್ಸು ಪ್ರೇಮಾ.... ಸೌಂದರ್ಯಾ....
ಹೆಣ್ಣು : ನಾವು ನಮ್ಮ ಯಜಮಾನ್ರು ನಾವು ನಮ್ಮ ಡಾರ್ಲಿಂಗ್ಸು
            ಡೇ ಅಂಡ್ ನೈಟು ಡ್ಯಾನ್ಯಸಿಂಗು  ಟಚಿಂಗ್ಸು ಮೈ ಮರೆಸಿಂಗು
            ರವಿ ಚಂದ್ರ ರಾತ್ರಿ ಹಗಲು ನಿದ್ದೆ ಕೆಡಿಸಿದ್ದು
ಗಂಡು : ರನ್ನ ಪೊನ್ನ ಕವಿ ಸರ್ವಜ್ಞನು ಮಾಸ್ತಿ ದ.ರಾ.ಬೇಂದ್ರೆ ರತ್ನನು
           ಮತ್ತೆ ಹುಟ್ಟಿ ಹಿಡಿಯಬೇಕು ಪೆನ್ನನು ಕಂಡು ನಮ್ಮ ಜೋಡಿಯನ್ನು
ಹೆಣ್ಣು : ನಮ್ಮ ಬಂಧ ಎಲ್ಲೂ ಬೆಲ್ಲ                  ಇಬ್ಬರು : ಕಾಳಿದಾಸ ಹಬ್ಬ ಮಾಡುವ
ಗಂಡು : ಓಹೋಹೋ... ಓಹೋಹೋ ಹೇಹೇಹೇಹೇ ಓಹೋಹೋ...
            ನಾನು ನನ್ನ ಹೆಂಡ್ತೀರು  ನಾನು ನನ್ನ ಡಾರ್ಲಿಂಗ್ಸು
ಇಬ್ಬರು : ಡೇ ಅಂಡ್ ನೈಟು ಸಿಂಗಿಂಗ್ಸು ಟಚಿಂಗ್ಸು ತಲೆ ತಿರುಗಿಂಗ್ಸು
ಗಂಡು :  ಪ್ರೇಮಾ.... ಸೌಂದರ್ಯಾ....
ಗಂಡು : ಅಂಗ ಅಂಗ ಸೇರಿ ಅಂತರಂಗವೇ       ಹೆಣ್ಣು : ನಮ್ಮ ಅಂತರಂಗ ನಿಮ್ಮದಲ್ಲವೇ  
ಗಂಡು : ಕಾಣೋದೆಲ್ಲ ಕೈಗೇ ಸಿಗುವ ಕಾಲವೇ   ಹೆಣ್ಣು : ನಮ್ಮ ಕಾಲ ಮರೆಯೋಲ್ಲವೇ 
ಗಂಡು : ಮುತ್ತು ಹವಳ...      ಹೆಣ್ಣು : ನಾನಾ... ಅವಳಾ 
ಗಂಡು : ನನ್ನೆರಡು ಕಣ್ಗಳು ನೀವು
            ಓಹೋಹೋಹೊಹೋ ಹೊಹೋ  ಹೇಹೇಹೇಹೇ ಓಹೋಹೋಹೊಹೋ  
ಗಂಡು : ನಾನು ನನ್ನ ಹೆಂಡ್ತೀರು  ನಾನು ನನ್ನ ಡಾರ್ಲಿಂಗ್ಸು
ಇಬ್ಬರು :  ಡೇ ಅಂಡ್ ನೈಟು ಸಿಂಗಿಂಗ್ಸು ಟಚಿಂಗ್ಸು ತಲೆ ತಿರುಗಿಂಗ್ಸು
ಗಂಡು : ಪ್ರೇಮಾ.... ಸೌಂದರ್ಯಾ....
ಹೆಣ್ಣು : ನಾವು ನಮ್ಮ ಯಜಮಾನ್ರು ನಾವು ನಮ್ಮ ಡಾರ್ಲಿಂಗ್ಸು
ಇಬ್ಬರು :  ಡೇ ಅಂಡ್ ನೈಟು ಡ್ಯಾನ್ಯಸಿಂಗು  ಟಚಿಂಗ್ಸು ಮೈ ಮರೆಸಿಂಗು
ಹೆಣ್ಣು : ರವಿ ಚಂದ್ರ ರಾತ್ರಿ
ಇಬ್ಬರು : ಹಗಲು ನಿದ್ದೆ ಕೆಡಿಸಿದ್ದು