Monday, April 29, 2019

ಚಿನ್ನದ ಗೊಂಬೆ (1964)

ಸೇವಂತಿಗೆ ಚೆಂಡಿನಂತೆ

ಚಲನ ಚಿತ್ರ: ಚಿನ್ನದ ಗೊಂಬೆ (1964)
ನಿರ್ದೇಶನ: 
ಸಂಗೀತ : ಟಿ.ಜಿ.ಲಿಂಗಪ್ಪ 
ಸಾಹಿತ್ಯ: ವಿಜಯನಾರಸಿಂಹ 
ಗಾಯನ : ಸೂಲಾಮಂಗಲಂ ರಾಜಲಕ್ಷ್ಮೀ
ನಟನೆ: 

ಸೇವಂತಿಗೆ ಚೆಂಡಿನಂತ ಮುದ್ದು ಕೋಳಿ
ತಾಯಿ ಮಡಿಲಿನಲ್ಲಿ  ಬೀಡು  ಬಿಟ್ಟ ಮುದ್ದು ಕೋಳಿ ...
ಸೇವಂತಿಗೆ ಚೆಂಡಿನಂತ ಮುದ್ದು ಕೋಳಿ
ತಾಯಿ ಮಡಿಲಿನಲ್ಲಿ  ಬೀಡು  ಬಿಟ್ಟ ಮುದ್ದು ಕೋಳಿ ... 
ಅಮ್ಮನಿತ್ತದೇ ಅಮೃತ ಎನ್ನುವ ಕೋಳಿ... 
ಅಮ್ಮನಿತ್ತದೇ ಅಮೃತ ಎನ್ನುವ ಕೋಳಿ...  
ಒಳ್ಳೆ ನಲ್ಮೆ ಇಂದ ಬೆಳೆದು ಬಂದ ಮುದ್ದು ಕೋಳಿ  ... 
ಸೇವಂತಿಗೆ ಚೆಂಡಿನಂತ ಮುದ್ದು ಕೋಳಿ
ತಾಯಿ ಮಡಿಲಿನಲ್ಲಿ  ಬೀಡು ಬಿಟ್ಟ ಮುದ್ದು ಕೋಳಿ 
ತಾಯಿ ತೊರೆದು ಘಳಿಗೆ ಕೂಡಾ ಆಗಲಲಾರದು 
ತನ್ನ ಸೋದರರ  ಮರೆತು ಬಿಟ್ಟು ಮೆರೆಯಲಾರದು ..  
ತಾಯಿ ತೊರೆದು ಘಳಿಗೆ ಕೂಡಾ ಆಗಲಲಾರದು 
ತನ್ನ ಸೋದರರ  ಮರೆತು ಬಿಟ್ಟು ಮೆರೆಯಲಾರದು ..  
ಜಾಣ ಮರಿ ಮುದ್ದು ಕೋಳಿ ಮಾತನಾಡದು...  
ಜಾಣ ಮರಿ ಮುದ್ದು ಕೋಳಿ ಮಾತನಾಡದು...  
ತನ್ನ ಸಾಕಿದವರ ಬಿಟ್ಟು ದೂರ ಓಡಿ ಹೋಗದು ... 
ಸೇವಂತಿಗೆ ಚೆಂಡಿನಂತ ಮುದ್ದು ಕೋಳಿ
ತಾಯಿ ಮಡಿಲಿನಲ್ಲಿ  ಬೀಡು ಬಿಟ್ಟ ಮುದ್ದು ಕೋಳಿ ...
ಪ್ರೇಮವಿರುವ ಮನೆಯ ಅದುವೇ ನಿತ್ಯ ಸುಂದರ 
ಆ ಪ್ರೇಮಭರಿತ ಹೃದಯವದು ದೇವಮಂದಿರ ...  
ಪ್ರೇಮವಿರುವ ಮನೆಯ ಅದುವೇ ನಿತ್ಯ ಸುಂದರ 
ಆ ಪ್ರೇಮಭರಿತ ಹೃದಯವದು ದೇವಮಂದಿರ ...  
ದೇವನವನೆ ಪ್ರೇಮರೂಪಾ ದಯಾಸಾಗರ ...  
ದೇವನವನೆ ಪ್ರೇಮರೂಪಾ ದಯಾಸಾಗರ ...  
ಆ ದೈವರಕ್ಷೆ ಕಾವುದೆಲ್ಲಾ ಪ್ರೇಮ ದೀವರ...  
ಸೇವಂತಿಗೆ ಚೆಂಡಿನಂತ ಮುದ್ದು ಕೋಳಿ
ತಾಯಿ ಮಡಿಲಿನಲ್ಲಿ  ಬೀಡು ಬಿಟ್ಟ ಮುದ್ದು ಕೋಳಿ ...
ಸೇವಂತಿಗೆ ಚೆಂಡಿನಂತ ಮುದ್ದು ಕೋಳಿ
ತಾಯಿ ಮಡಿಲಿನಲ್ಲಿ  ಬೀಡು ಬಿಟ್ಟ ಮುದ್ದು ಕೋಳಿ ... 
----------------------------------------------------------------------------------------------------------------------

ಸಂಗೀತ : ಟಿ.ಜಿ.ಲಿಂಗಪ್ಪ 
ಸಾಹಿತ್ಯ:ಆರ್.ಏನ್.ಜಯಗೋಪಾಲ್  
ಗಾಯನ : ಎಸ್.ಜಾನಕೀ 

ಓಓಓ... ಓಓಓ...
ನೋಡಲ್ಲಿ ಮೆರವಣಿಗೆ ನೂತನ ದಂಪತಿಗಳಿಗೆ
ಕಣ್ಣು ಕಣ್ಣು ಒಂದಾಗಿವೇ ಕಾರಣವಾ ನೀ ಬಲ್ಲೆಯಾ
ನೋಡಲ್ಲಿ ಮೆರವಣಿಗೆ ನೂತನ ದಂಪತಿಗಳಿಗೆ
ಕಣ್ಣು ಕಣ್ಣು ಒಂದಾಗಿವೇ ಕಾರಣವಾ ನೀ ಬಲ್ಲೆಯಾ
ಕುಳಿತಿಹಳು ನಾಚುತೆ  ಹೆಣ್ಣು ಕೆನ್ನೆಗಳು ಕೆಂಪನೆ ಹಣ್ಣು
ಕುಳಿತಿಹಳು ನಾಚುತೆ  ಹೆಣ್ಣು ಕೆನ್ನೆಗಳು ಕೆಂಪನೆ ಹಣ್ಣು
ಕುಡಿ ನೋಟ ಬೀರುವ ಕಣ್ಣು ಕಥೆಯೊಂದ ಹೇಳಿದೆ
ಕಾದಿಹಳು ಸುಮಬಾಲೆ ಕಟ್ಟಿಹಳು ಆಸೆಯ ಮಾಲೆ
ಕಾದಿಹಳು ಸುಮಬಾಲೆ ಕಟ್ಟಿಹಳು ಆಸೆಯ ಮಾಲೆ
ಚೆನ್ನಾ ನಿನ್ನಾಸೆ ಏನೋ ಹೇಳಯ್ಯಾ
ನೋಡಲ್ಲಿ ಮೆರವಣಿಗೆ ನೂತನ ದಂಪತಿಗಳಿಗೆ
ಕಣ್ಣು ಕಣ್ಣು ಒಂದಾಗಿವೇ ಕಾರಣವಾ ನೀ ಬಲ್ಲೆಯಾ
ಹನುಮಣ್ಣನ ಪೂಜೆಯೋ  ಬೇಕು ಏಕಾಂಗಿ ಬಾಳಿದು ಸಾಕೋ
ಹನುಮಣ್ಣನ ಪೂಜೆಯೋ  ಬೇಕು ಏಕಾಂಗಿ ಬಾಳಿದು ಸಾಕೋ 
ಆಸೆಯ ತಾರಾಮರ ಕಂಡು ಜೊತೆಯಾಗೇ ಜೋಕೆ 
ಆಸೆಗೆ  ಎಲ್ಲೆಯೂ ಇಲ್ಲ ಪ್ರೇಮದಲಿ ಪಾಪವಿಲ್ಲಾ 
ಆಸೆಗೆ  ಎಲ್ಲೆಯೂ ಇಲ್ಲ ಪ್ರೇಮದಲಿ ಪಾಪವಿಲ್ಲಾ 
ಏಕೋ ಈ ಮೌನ ನೀನೇ ಹೇಳಯ್ಯಾ 
ನೋಡಲ್ಲಿ ಮೆರವಣಿಗೆ ನೂತನ ದಂಪತಿಗಳಿಗೆ
ಕಣ್ಣು ಕಣ್ಣು ಒಂದಾಗಿವೇ ಕಾರಣವಾ ನೀ ಬಲ್ಲೆಯಾ
----------------------------------------------------------------------------------------------------------------------
ಚಿನ್ನದ ಗೊಂಬೆ (೧೯೬೪)
ಸಂಗೀತ : ಟಿ.ಜಿ.ಲಿಂಗಪ್ಪ ಸಾಹಿತ್ಯ: ವಿಜಯನಾರಸಿಂಹ ಗಾಯನ : ಪಿ.ಬಿ.ಎಸ್,  ಎಸ್.ಜಾನಕೀ 
ಗಂಡು : ಓಹೋಹೋ ಹೋ  ಓಹೋಹೋ ಹೋ  ಓಹೋಹೋ ಹೋ  ಹೊಯ್
ಹೆಣ್ಣು :  ಓಹೋಹೋ ಹೋ  ಓಹೋಹೋ ಹೋ  ಓಹೋಹೋ ಹೋ 
ಗಂಡು : ಹೂಂಹೂಂಹೂಂ ಹೂಂಹೂಂಹೂಂ ಹೂಂ    
ಹೆಣ್ಣು :  ಹೂಂಹೂಂಹೂಂ ಹೂಂಹೂಂಹೂಂ ಹೂಂ    
           ತಾವರೆ ಹೂ ಕೆರೆಯಲಿ ಸಂಜೆವೆಣ್ಣ ಚೆಲುವಲಿ 
           ತಾವರೆ ಹೂ ಕೆರೆಯಲಿ ಸಂಜೆವೆಣ್ಣ ಚೆಲುವಲಿ 
           ಮೀಯಲೆಂದು ನಾ ಬಂದೆ ಬಂದನಾರೋ ನನ್ನ ಹಿಂದೆ 
           ಮೀಯಲೆಂದು ನಾ ಬಂದೆ ಬಂದನಾರೋ ನನ್ನ ಹಿಂದೆ 
           ಯಾರವರಾಯ ಆ.. ಚೆನ್ನಿಗರಾಯ 
           ಯಾರವರಾಯ ಆ.. ಚೆನ್ನಿಗರಾಯ 
ಗಂಡು : ಮಲ್ಲಿಗೆಯ ಮೊಗದಲಿ ಮುಖ ಮಲ್ಲಿನ ಆ ತುಟಿಯಲಿ  
           ಮಲ್ಲಿಗೆಯ ಮೊಗದಲಿ ಮುಖ ಮಲ್ಲಿನ ಆ ತುಟಿಯಲಿ  
           ಕೆಂಪ ಬಣ್ಣ ತಂದವನು ಕೊಡುಗೆಯೊಂದ  ಇತ್ತವನು 
           ಕೆಂಪ ಬಣ್ಣ ತಂದವನು ಕೊಡುಗೆಯೊಂದ ಇತ್ತವನು 
           ಆ.. ಚೆಲುವಯ್ಯ ಅವ್ ಪಿಡಿವನಿ  ಕೈಯ್ 
           ಆ.. ಚೆಲುವಯ್ಯ ಅವ್ ಪಿಡಿವನಿ  ಕೈಯ್ 
ಹೆಣ್ಣು : ಮಂದಹಾಸ ಬೀರುವಾ ಬಂದ ನಿದ್ದೆ ಕೆಡಿಸುವಾ
ಗಂಡು : ಓಹೋಹೋ ಓಹೋಹೋ ಓಹೋಹೋ
ಹೆಣ್ಣು : ಮಂದಹಾಸ ಬೀರುವಾ ಬಂದ ನಿದ್ದೆ ಕೆಡಿಸುವಾ
          ಒಂಟಿಯಾದ ಎನಗೆ ತರುವ ಕಣ್ಣೀರ...  
          ಅವ್ ತರುಣಿ ಮನವ ಕಲಕಿ ಬಿಡುವ ಕಣ್ಣಾರ  (ಓ.. ಓಹೋ )        
          ಯಾರವರಾಯ ಆ.. ಚೆನ್ನಿಗರಾಯ 
          ಯಾರವರಾಯ ಆ.. ಚೆನ್ನಿಗರಾಯ 
ಗಂಡು : ಸಮಯ ನೋಡಿ ಬಂದನೇ ಸರಸಕಾಗಿ ಕರೆವನೇ 
ಹೆಣ್ಣು : ಹೂಂ ಹೂಂ ಹೂಂ ಹೂಂ ಹೂಂ ಹೂಂ ಹೂಂ ಹೂಂ           
ಗಂಡು : ಸಮಯ ನೋಡಿ ಬಂದನೇ ಸರಸಕಾಗಿ ಕರೆವನೇ 
           ಅಂಗಲಾಚಿ ನಾಚಿಕೊಂಡು ನಿಂತಿಹನೇ... 
           ನಿನ್ನ ಕೈಯ ಬಳೆ ಝಣದಲ್ಲಿ ಇರುತಾನೇ  (ಹ್ಹಾಂ ಆ..)
           ಆ.. ಚೆಲುವಯ್ಯ ಅವ್ ಪಿಡಿವನಿ  ಕೈಯ್ 
           ಆ.. ಚೆಲುವಯ್ಯ ಅವ್ ಪಿಡಿವನಿ  ಕೈಯ್ 
  
ಇಬ್ಬರು : ಮೇಳ ತಾಳ ವಾದ್ಯಗಳ ವೇದ ಮಂತ್ರ ಘೋಷದಲಿ ...  
            ಮೇಳ ತಾಳ ವಾದ್ಯಗಳ ವೇದ ಮಂತ್ರ ಘೋಷದಲಿ ...  
             ಹಾರ ಹಾಸಿ ದಂಪತಿ ನಾವಾಗೋಣಾ.. 
             ಆ... ಗುಂಗಿನಲ್ಲಿ ಕಾಲ ಚಕ್ರ ತಳ್ಳೋಣ   
            ನಾವು ಹಾರಾಡುವಾ ಎಂದೂ ಒಂದಾಗುವಾ 
            ಹಾರಾಡುವಾ ಎಂದೂ ಒಂದಾಗುವಾ 
           ತಾನಿ ತನ್ನಿ ತಂದಾನಿ  ತಾನಿ ತನ್ನಿ ತಂದಾನಿ
           ತಾನಿ ತನ್ನಿ ತಂದಾನಿ  ತಾನಿ ತನ್ನಿ ತಂದಾನಿ
           ತಾನಿ ತನ್ನಿ ತಂದಾನಿ  ತಾನಿ ತನ್ನಿ ತಂದಾನಿ
----------------------------------------------------------------------------------------------------------------------
ಚಿನ್ನದ ಗೊಂಬೆ (೧೯೬೪)
ಸಂಗೀತ : ಟಿ.ಜಿ.ಲಿಂಗಪ್ಪ ಸಾಹಿತ್ಯ: ವಿಜಯನಾರಸಿಂಹ ಗಾಯನ : ಎಸ್.ಜಾನಕೀ 
ಮಣ್ಣಲಿ ಕಲೆಯಾ ರೂಪಿಸುವೆ
ಏನ್ ಒಲವಿಗೆ ಕಳಶವ ನಾ ನೀಡುವೆ
ಮಣ್ಣಲಿ ಕಲೆಯಾ ರೂಪಿಸುವೆ
ಏನ್ ಒಲವಿಗೆ ಕಳಶವ ನಾ ನೀಡುವೆ
ತಿಂಗಳ ಬೆಳಕನು ನಾಚಿಸುವ
ತಿಂಗಳ ಬೆಳಕನು ನಾಚಿಸುವ ಕಂಗಳ ಕಾಂತಿಯ ಇದಕಿವೆ
ಮಣ್ಣಲಿ ಕಲೆಯಾ ರೂಪಿಸುವೆ....
ಚಂದದ ಚಂದಿರ ವದನವಿರೇ
ಹೊಂದಾವರೆ ಹೋಲುವ ಕಂಗಳಿರೆ 
ಚಂದದ ಚಂದಿರ ವದನವಿರೇ
ಹೊಂದಾವರೆ ಹೋಲುವ ಕಂಗಳಿರೆ 
ನವಿಲಿನ ಗರಿಗಳ ಎಳೆಯಿಂದ
ನವಿಲಿನ ಗರಿಗಳ ಎಳೆಯಿಂದ ಕಣ್ ಎವೆಯನು ನಾ ಕೂಡಿಸುವೆ 
ಕಣ್ ಎವೆಯನು ನಾ ಕೂಡಿಸುವೆ
ಮಣ್ಣಲಿ ಕಲೆಯಾ ರೂಪಿಸುವೆ...
ಗೋಪುರದಲ್ಲಿದೆ ಗುಡಿ ಘಂಟೆ
ಕಿವಿ ಕೇಳಲು ಕಾದಿದೆ ಗುಡಿಸಲಲಿ ಆಆಆ.....
ಗೋಪುರದಲ್ಲಿದೆ ಗುಡಿ ಘಂಟೆ
ಕಿವಿ ಕೇಳಲು ಕಾದಿದೆ ಗುಡಿಸಲಲಿ
ಪ್ರೇಮವ ಮೈತ್ರಿಯ ಕರೆಯಲ್ಲೇ
ಪ್ರೇಮವ ಮೈತ್ರಿಯ ಕರೆಯಲ್ಲೇ ನಾ ಮೈಮನ ಮರೆತೇ ಅವನಲ್ಲೇ 
ನಾ ಮೈಮನ ಮರೆತಿಹೆ ಅವನಲ್ಲೇ
ಮಣ್ಣಲಿ ಕಲೆಯಾ ರೂಪಿಸುವೆ ಏನ್ ಒಲವಿಗೆ ಕಳಶವ ನಾ ನೀಡುವೆ
ಮಣ್ಣಲಿ ಕಲೆಯಾ ರೂಪಿಸುವೆ
-------------------------------------------------------------------------------------------------------------------------
ಚಿನ್ನದ ಗೊಂಬೆ (೧೯೬೪) -ಗೂಡಿನಲ್ಲಿ ಒಂದು ಬಾನಾಡಿ
ಸಂಗೀತ : ಟಿ.ಜಿ.ಲಿಂಗಪ್ಪ ಸಾಹಿತ್ಯ: ಆರ್.ಏನ್.ಜಯಗೋಪಾಲ, ಗಾಯನ :ಪಾಣಿಗ್ರಹಿ 
ಗೂಡಿನಲಿ ಒಂದು ಬಾನಾಡಿ ಅದು ಹಾಡುತಲಿ ಇರೇ ಮರೆದಾಡಿ
ಗೂಡಿನಲಿ ಒಂದು ಬಾನಾಡಿ ಅದು ಹಾಡುತಲಿ ಇರೇ ಮರೆದಾಡಿ
ತನ್ನಯ ಗೂಡಿನಲಿ ಮರಿಗಳ ಜೊತೆಗೂಡಿ ಬಾಳಿತು ಹಾಯಾಗಿ ಹಾರಾಡಿ
ಗೂಡಿನಲಿ ಒಂದು ಬಾನಾಡಿ ಅದು ಹಾಡುತಲಿ ಇರೇ ಮರೆದಾಡಿ
ಹಾಲನು ಹೋಲುವ ಕುಟುಂಬದಲಿ ಬಂದು ನೆಲೆಸಿತಮ್ಮಾ ಒಂದು ಕುಲಗೇಡಿ
ಹಾಲನು ಹೋಲುವ ಕುಟುಂಬದಲಿ ಬಂದು ನೆಲೆಸಿತಮ್ಮಾ ಒಂದು ಕುಲಗೇಡಿ
ಆ ಕುಲಗೇಡಿಯ ಸಂಚಿನಲಿ.. ಇಂದು ನೋಂದಿತಮ್ಮಾ ಸಣ್ಣ ಬಾನಾಡಿ
ಗೂಡಿನಲಿ ಒಂದು ಬಾನಾಡಿ ಅದು ಹಾಡುತಲಿ ಇರೇ ಮರೆದಾಡಿ
ಕಣ್ಣೀರ ಕರೆದು ತೊಳಲಾಡಿ ಗೂಡ ತೋರೆಯತಮ್ಮಾ ತಂಗಿ ಒಡಗೂಡಿ 
ಅಣ್ಣನ ಹಿಂದೆ ಬಾಡಿದ ಸುಮದಂತೆ ನಡೆಯಿತಮ್ಮಾ ಹೆಣ್ಣು ಬಾನಾಡಿ 
ನಡೆಯಿತಮ್ಮಾ ಹೆಣ್ಣು ಬಾನಾಡಿ
ಗೂಡಿನಲಿ ಒಂದು ಬಾನಾಡಿ ಅದು ಹಾಡುತಲಿ ಇರೇ ಮರೆದಾಡಿ
ಗಂಟು ತಾನಿರಲು ಬರುವುದು ನಂಟು ನೆಂಟರು ಬಂದರೆ ಭೇದವು ಉಂಟು 
ಗಂಟು ತಾನಿರಲು ಬರುವುದು ನಂಟು ನೆಂಟರು ಬಂದರೆ ಭೇದವು ಉಂಟು 
ಬೇಧಕು ಮನಸಿನ ಖೇದಕು ಗಂಟು ಓರೆನೋಡೇ ಪ್ರೇಮ ತಾನುಂಟು 
ಗೂಡಿನಲಿ ಒಂದು ಬಾನಾಡಿ ಅದು ಹಾಡುತಲಿ ಇರೇ ಮರೆದಾಡಿ
ಗೂಡಿನಲಿ.....
-------------------------------------------------------------------------------------------------------------------------
ಚಿನ್ನದ ಗೊಂಬೆ (೧೯೬೪)
ಸಂಗೀತ : ಟಿ.ಜಿ.ಲಿಂಗಪ್ಪ ಸಾಹಿತ್ಯ:ಆರ್.ಏನ್.ಜಯಗೋಪಾಲ್  ಗಾಯನ : ಪಿ.ಬಿ.ಎಸ್.
ಓಹೋಹೋ.. ಓಹೋಹೋ..ಓಹೋಹೋಹೋಹೋ..  ಹೊಯ್ ಬುರ್ರಾಆ
ಹೊನ್ನಾಸೆ ಉಳುವಗೇ ದಯೆಯಿಲ್ಲಾ ಕಲ್ಲು ಮನಸೆಲ್ಲಾ
ಎಂದು ಹೆಣ್ಣಾಸೆ ಉಳ್ಳವಂಗೆ ಕಂಗಳಿಲ್ಲಾ ಮೋಹವೊಂದೇ ಬಲ್ಲಾ
ಹೊನ್ನಾಸೆ ಉಳುವಗೇ ದಯೆಯಿಲ್ಲಾ ಕಲ್ಲು ಮನಸೆಲ್ಲಾ
ಎಂದು ಹೆಣ್ಣಾಸೆ ಉಳ್ಳವಂಗೆ ಕಂಗಳಿಲ್ಲಾ ಮೋಹವೊಂದೇ ಬಲ್ಲಾ
ಬಕತಲೇ ಭಾವನಿಗೇ ಹೂವೇತಕೇ... ಒಹೋಹೋ ... 
ಬಕತಲೇ ಭಾವನಿಗೇ ಹೂವೇತಕೇ ಮಲ್ಲೇ ಹೂವೇತಕೆ 
ಚ್ಯುತೆಯೊಳ ಚಿಂತೆಯಾಕೆ ಹುಲಿಗೇತಕೆ ಕೊಲ್ಲು ಹುಲಿಗೇತಕೆ 
ಕೋಗಿಲೆಗೆ ಗಿಡುಗ ಎಣೆಯಾಗದೂ 
ಕೋಗಿಲೆಗೆ ಗಿಡುಗ ಎಣೆಯಾಗದೂ ಪಕ್ಕ ಜೊತೆಯಾಗದೂ 
ನೀಚ ಭಾವನೆ ಮನದಲಿ ಬರಲಾಗದೂ ಅದು ತರವಾಗದು 
ಹೊನ್ನಾಸೆ ಉಳುವಗೇ ದಯೆಯಿಲ್ಲಾ ಕಲ್ಲು ಮನಸೆಲ್ಲಾ
ಎಂದು ಹೆಣ್ಣಾಸೆ ಉಳ್ಳವಂಗೆ ಕಂಗಳಿಲ್ಲಾ ಮೋಹವೊಂದೇ ಬಲ್ಲಾ
ಬಾನಿಗೆ ಚಂದಿರವೇ  ಸೊಬಗಲ್ಲವೇ... ಓಹೋಹೋ..
ಬಾನಿಗೆ ಚಂದಿರವೇ  ಸೊಬಗಲ್ಲವೇ. ಅವ್ ದೊರೆಯಲ್ಲವೇ
ಮಾನವೇ ಸುಂದರಿಗೆ ಮೆರುಗಲ್ಲವೇ ಅದು ಚೆಲುವಲ್ಲವೇ 
ರೆಕ್ಕೆ ಬಲಿತ ಹಕ್ಕಿ ಹಾರಾಡದೇ...  
ರೆಕ್ಕೆ ಬಲಿತ ಹಕ್ಕಿ ಹಾರಾಡದೇ ಹಾಡಿ ನಲಿದಾಡದೇ
ಅದ ಬಂಧಿಸಲು ಪಂಜರದೇ  ತಾ ನೋಯದೇ ನೊಂದು ತಾ ಸಾಯದೇ
ಹೊನ್ನಾಸೆ ಉಳುವಗೇ ದಯೆಯಿಲ್ಲಾ ಕಲ್ಲು ಮನಸೆಲ್ಲಾ
ಎಂದು ಹೆಣ್ಣಾಸೆ ಉಳ್ಳವಂಗೆ ಕಂಗಳಿಲ್ಲಾ ಮೋಹವೊಂದೇ ಬಲ್ಲಾ
ಓಹೋಹೋ ಓಹೋಹೋ ಓಹೋಹೋ ಹೋ .... 
------------------------------------------------------------------------------------------------------------------------
No comments:
Powered by Blogger.

No comments:

Post a Comment