Monday, April 29, 2019

ಹೃದಯ ಸಂಗಮ (1972)

ಹೃದಯ ಸಂಗಮ (1972)
ಹೃದಯ ಸಂಗಮ ಚಿತ್ರದ ಹಾಡುಗಳು
ನೀ ತಂದ ಕಾಣಿಕೆ

ನಡೆ ನಡೆ ಮನವೇ

ಏನೋ ಕುರುಡು ಭಾವನೆ

ಯಾರು ನೀ ಯಾರು

ಗಂಧದ ನೀರಿಗ್ಯೋಲೆ

ನೀ ತಂದ ಕಾಣಿಕೆ - ಎಸ್.ಜಾನಕೀ

ಹೃದಯ ಸಂಗಮ (1972)
ಸಾಹಿತ್ಯ: ಗೀತಪ್ರಿಯ ಸಂಗೀತ: ವಿಜಯಭಾಸ್ಕರ್ ಹಾಡಿದವರು: ಪಿ.ಬಿ.ಶ್ರೀನಿವಾಸ್
ನಡೆ ನಡೆ ನಡೆ ನಡೆ ನಡೆ ಮನವೆ
 ನವ ಜೀವನದಾ ಕಡೆಗೆ
ನಮ್ಮಯ ಜೊತೆಯಲಿ ನಡೆ ಜಗವೆ
ನವ ಸಾಧನೆಯಾ ಕಡೆಗೆ
ನಡೆ ನಡೆ ನಡೆ ನಡೆ ನಡೆ ಮನವೆ ನವ ಜೀವನದ ಕಡೆಗೆ
ಆ ದಿನ ಕಂಡೆ, ಬೇರೆ ಪ್ರಪಂಚ
ಆ ದಿನ ಕಂಡೆ ಬೇರೆ ಪ್ರಪಂಚ ಈ ದಿನ ಪ್ರೇಮ ಪ್ರಪಂಚ
ಎಲ್ಲರು ಜೊತೆಯಲಿ ಬಾಳುತಲಿದ್ದರೆ ಮುಳ್ಳೂ ಹೂವಿನ ಮಂಚ
ಆಹಾ, ಮುಳ್ಳೂ ಹೂವಿನ ಮಂಚ
ನಡೆ ನಡೆ ನಡೆ ನಡೆ ನಡೆ ಮನವೆ ನವ ಜೀವನದಾ ಕಡೆಗೆ
ಜೀವನವನ್ನೇ, ಹುಡುಕುತ ಅಂದು
ಜೀವನವನ್ನೇ ಹುಡುಕುತ ಅಂದು ದೂರ ದೂರಕೆ ನಡೆದೆ
ಅದುವೆ ನನ್ನನು ಹುಡುಕಲು ಇಂದು ನಿಜ ಜೀವನ ನಾ ಪಡೆದೆ
ಒಹೊ, ನಿಜ ಜೀವನ ನಾ ಪಡೆದೆ
ನಡೆ ನಡೆ ನಡೆ ನಡೆ ನಡೆ ಮನವೆ  ನವ ಜೀವನದಾ ಕಡೆಗೆ
ಸುಖವೇನಿದ್ದರು, ಪಂಜರದಲ್ಲಿ
ಸುಖವೇನಿದ್ದರು ಪಂಜರದಲ್ಲಿ ಅಲ್ಲಿನ ಬಾಳು ಬಾಳಲ್ಲ
ಕನಸಿನ ಲೋಕವ ನನಸಲಿ ಕಂಡರೆ ಆಗಲೆ ಸುಂದರ ಜಗವೆಲ್ಲ
ಒಹೊ, ಆಗಲೆ ಸುಂದರ ಜಗವೆಲ್ಲ
ನಡೆ ನಡೆ ನಡೆ ನಡೆ ನಡೆ ಮನವೆ ನವ ಜೀವನದಾ ಕಡೆಗೆ
------------------------------------------------------------------------------------------------------------------------
ಹೃದಯ ಸಂಗಮ (೧೯೭೨)
ರಚನೆ: ಆರ್. ಏನ್. ಜಯಗೋಪಾಲ್   ಸಂಗೀತ: ವಿಜಯ್ ಭಾಸ್ಕರ್   ಗಾಯಕರು: ಪಿ. ಬಿ. ಶ್ರೀನಿವಾಸ್, ಎಸ್. ಜಾನಕಿ 
ಗಂ: ನೀ ತಂದ ಕಾಣಿಕೆ ನಗೆಹೂವ ಮಾಲಿಕೆ, ನಗೆ ಹೂವ ಮಾಲಿಕೆ
       ನಾ ತಂದ ಕಾಣಿಕೆ ಅನುರಾಗ ಮಾಲಿಕೆ, ಅದಕಿಲ್ಲ ಹೋಲಿಕೆ
ಹೆ: ನೀ ತಂದ ಕಾಣಿಕೆ ನಗೆಹೂವ ಮಾಲಿಕೆ, ನಗೆ ಹೂವ ಮಾಲಿಕೆ
     ನಾ ತಂದ ಕಾಣಿಕೆ ಅನುರಾಗ ಮಾಲಿಕೆ, ಅದಕಿಲ್ಲ ಹೋಲಿಕೆ 
ಗಂ: ಕಣ್ಣಲ್ಲೆ ಬರೆದೆ ಒಲವಿನ ಪೀಠಿಕೆ, ಪೂರೈಸ ಬಂದ ಮನಸಿನ ಬೇಡಿಕೆ
       ಕಣ್ಣಲ್ಲೆ ಬರೆದೆ ಒಲವಿನ ಪೀಠಿಕೆ, ಪೂರೈಸ ಬಂದ ಮನಸಿನ ಬೇಡಿಕೆ 
ಹೆ: ಮೈಮರೆತು ನಿಂತೇ ಆ ನಿನ್ನ ನೋಟಕೆ
     ಮೈಮರೆತು ನಿಂತೇ ಆ ನಿನ್ನ ನೋಟಕೆ
     ನಾ ಹಾಡಿ ಕುಣಿದೆ ನಿನ್ನೆದೆ ತಾಳಕೆ  ಆ ಆ ಆ ಆ ಹಾ ಹಾ.....
ಗಂ: ನೀ ತಂದ ಕಾಣಿಕೆ ನಗೆಹೂವ ಮಾಲಿಕೆ, ನಗೆ ಹೂವ ಮಾಲಿಕೆ
ಹೆ: ನಾ ತಂದ ಕಾಣಿಕೆ ಅನುರಾಗ ಮಾಲಿಕೆ, ಅದಕಿಲ್ಲ ಹೋಲಿಕೆ 
ಗಂ: ಕರೆದೆ ನನ್ನಾ ಕನಸಿನ ತೀರಕೆ, ಆಸೆಯ ಹೂಗಳು ಅರಳಿಹ ತೋಟಕೆ
       ಕರೆದೆ ನನ್ನಾ ಕನಸಿನ ತೀರಕೆ, ಆಸೆಯ ಹೂಗಳು ಅರಳಿಹ ತೋಟಕೆ
ಹೆ: ಈ ಬಾಳ ಗುಡಿಗೆ ನೀನಾದೆ ದೀಪಿಕೆ 
     ಬೆಳಕಾಗಿ ನಿಂದೇ ನೀ ಎನ್ನ ಜೀವಕೆ ಆ ಆ ಆ ಆ ಹಾ ಹಾ.....
ಗಂ: ನೀ ತಂದ ಕಾಣಿಕೆ ನಗೆಹೂವ ಮಾಲಿಕೆ, ನಗೆ ಹೂವ ಮಾಲಿಕೆ
       ನಾ ತಂದ ಕಾಣಿಕೆ ಅನುರಾಗ ಮಾಲಿಕೆ, ಅದಕಿಲ್ಲ ಹೋಲಿಕೆ
ಹೆ: ನೀ ತಂದ ಕಾಣಿಕೆ ನಗೆಹೂವ ಮಾಲಿಕೆ, ನಗೆ ಹೂವ ಮಾಲಿಕೆ
      ನಾ ತಂದ ಕಾಣಿಕೆ ಅನುರಾಗ ಮಾಲಿಕೆ, ಅದಕಿಲ್ಲ ಹೋಲಿಕೆ
----------------------------------------------------------------------------------------------------------------------
ಹೃದಯ ಸಂಗಮ (೧೯೭೨)
ರಚನೆ: ಆರ್. ಏನ್. ಜಯಗೋಪಾಲ್   ಸಂಗೀತ: ವಿಜಯ್ ಭಾಸ್ಕರ್   ಗಾಯಕರು: ಎಸ್. ಜಾನಕಿ
ಏನೋ ಕುರುಡು ಭಾವನೆ ಯಾವ ಗುರಿಯ ಸಾಧನೆ
ನಾಗರಿಕ ಜನತೆಗೆ ಎಂಥ ಆತ್ಮ ವಂಚನೆ
ಏನೋ ಕುರುಡು ಭಾವನೆ
ಅಂಟು ರೋಗ ಅನುಕರಣೆ ಆಧುನಿಕತೆ ಎನಿಸಿತೇ
ಅಂಟು ರೋಗ ಅನುಕರಣೆ ಆಧುನಿಕತೆ ಎನಿಸಿತೇ
ಭಾರತಾಂಬೆ ಸಂತತಿ ಕಾಣದೇನು ಜಾಗೃತಿ
ಏನೋ ಕುರುಡು ಭಾವನೆ ಯಾವ ಗುರಿಯ ಸಾಧನೆ
ನಾಗರಿಕ ಜನತೆಗೆ ಎಂಥ ಆತ್ಮ ವಂಚನೆ
ಏನೋ ಕುರುಡು ಭಾವನೆ
ಅಂದವಾದ ಹೂವಿಗೆ ರಂಗು ಬಳೆವುದೇತಕೆ
ಅಂದವಾದ ಹೂವಿಗೆ ರಂಗು ಬಳೆವುದೇತಕೆ
ನಮ್ಮತನದ ಹಿರಿಮೆಗೆ ಪರರ ಹಂಗು ಏತಕೆ.. 
ಏನೋ ಕುರುಡು ಭಾವನೆ ಯಾವ ಗುರಿಯ ಸಾಧನೆ
ನಾಗರಿಕ ಜನತೆಗೆ ಎಂಥ ಆತ್ಮ ವಂಚನೆ
ಏನೋ ಕುರುಡು ಭಾವನೆ
ನಮ್ಮ ದಿವ್ಯ ಸಂಸ್ಕೃತಿ ಕಂಡಿತೇ ಅಧೋಗತಿ
ನಮ್ಮ ದಿವ್ಯ ಸಂಸ್ಕೃತಿ ಕಂಡಿತೇ ಅಧೋಗತಿ
ಬೇರೆಯಾಗಿ ರೀತಿ ನೀತಿ ಇದುವೆ ಏನು ಪ್ರಗತಿ 
ಏನೋ ಕುರುಡು ಭಾವನೆ ಯಾವ ಗುರಿಯ ಸಾಧನೆ
ನಾಗರಿಕ ಜನತೆಗೆ ಎಂಥ ಆತ್ಮ ವಂಚನೆ...
------------------------------------------------------------------------------------------------------------------------
ಹೃದಯ ಸಂಗಮ (೧೯೭೨)
ರಚನೆ: ಚಿ.ಉದಯಶಂಕರ ಸಂಗೀತ: ವಿಜಯ್ ಭಾಸ್ಕರ್   ಗಾಯಕರು: ಎಲ್.ಆರ್.ಈಶ್ವರಿ 
ಯಾರು..  ನೀ...  ಯಾರು
ಎಲ್ಲಿದೆ ಮನಸು  ಕಾಣುತಿರುವೆಯಾ ಕನಸು
ನೀ ಯಾರೆಂದು ಯೋಚಿಸು ಯೋಚಿಸು ..
ಯಾರು..  ನೀ...  ಯಾರು
ಬಳಸಿ ನನ್ನನು ತೋಳಿನಲಿ ರಂಗು ತಂದೆ ಈ ಕೆನ್ನೆಯಲಿ
ಬಳಸಿ ನನ್ನನು ತೋಳಿನಲಿ ರಂಗು ತಂದೆ ಈ ಕೆನ್ನೆಯಲಿ
ತುಟಿಗಳ ಮೇಲೆ ತುಟಿಗಳ ಲೀಲೆ 
ಮಿಂಚು ಮೈಯ್ಯಲ್ಲಿ ಸಂಚು ಕಣ್ಣಲ್ಲಿ 
ಮರೆತೇ ಏನು ಎಲ್ಲಾ... 
ಯಾರು..  ನೀ...  ಯಾರು 
ಸೆರೆಯ ವಾಸಕೆ ಬೆದರಿದೆಯಾ
ಚಿಂತೆ ಏನಿದು ಹೇಳುವೆಯಾ
ಸೆರೆಯ ವಾಸಕೆ ಬೆದರಿದೆಯಾ
ಚಿಂತೆ ಏನಿದು ಹೇಳುವೆಯಾ
ಪುರುಷ ಸಿಂಹಕೇ ಹೆದರಿಕೆ ಏಕೇ 
ರೋಷ ಬಂದಾಗ ಕೆರಳಿ ನಿಂತಾಗ 
ದುರುಳರೆಲ್ಲಾ ನಾಶ 
ಯಾರು..  ನೀ...  ಯಾರು
ಎಲ್ಲಿದೆ ಮನಸು  ಕಾಣುತಿರುವೆಯಾ ಕನಸು
ನೀ ಯಾರೆಂದು ಯೋಚಿಸು ಯೋಚಿಸು ..
ಯಾರು..  ನೀ...  ಯಾರು
--------------------------------------------------------------------------------------------------------------------------
ಹೃದಯ ಸಂಗಮ (೧೯೭೨)
ರಚನೆ: ಗೀತಪ್ರಿಯ  ಸಂಗೀತ: ವಿಜಯ್ ಭಾಸ್ಕರ್   ಗಾಯಕರು: ಮಹೇಶ, ಅಂಜಲಿ 
ಗಂಧಾದ  ನೆರಿಗಿಯವಳೇ  ಬೆಂಗಳೂರಿನ ರವಿಕೆಯೊಳೇ
ಗಂಧಾದ  ನೆರಿಗಿಯವಳೇ  ಬೆಂಗಳೂರಿನ ರವಿಕೆಯೊಳೇ
ಕಿರು ಗೆಜ್ಜೆ ಜಾರಯಾವು ಸಣ್ಣ ಮಲಾಲಾಗೆ
ಗಂಧಾದ  ನೆರಿಗಿಯವಳೇ  ಬೆಂಗಳೂರಿನ ರವಿಕೆಯೊಳೇ
ಗಂಧಾದ  ನೆರಿಗಿಯವಳೇ  ಬೆಂಗಳೂರಿನ ರವಿಕೆಯೊಳೇ
ಕಿರು ಗೆಜ್ಜೆ ಜಾರಯಾವು ಸಣ್ಣ ಮಲಾಲಾಗೆ
ದೊಡ್ದಾನೆ ದ್ಯಾವ್ವವ್ವಾ ಅಡ್ಡೆ ಮೇಲೆ ಬರುವಾಗ 
ದೊಡ್ದಾನೆ ದ್ಯಾವ್ವವ್ವಾ ಅಡ್ಡೆ ಮೇಲೆ ಬರುವಾಗ
ಹೂವಿನೊವನ ಮಾರಿಯಂದ ಹೆಗಲೇರಿ
ಗಂಧಾದ  ನೆರಿಗಿಯವಳೇ  ಬೆಂಗಳೂರಿನ ರವಿಕೆಯೊಳೇ
ಗಂಧಾದ  ನೆರಿಗಿಯವಳೇ  ಬೆಂಗಳೂರಿನ ರವಿಕೆಯೊಳೇ
ಕಿರು ಗೆಜ್ಜೆ ಜಾರಯಾವು ಓಹೋಹೋ
-------------------------------------------------------------------------------------------------------------------------
ಹೃದಯ ಸಂಗಮ (೧೯೭೨)
ರಚನೆ: ಆರ್. ಏನ್. ಜಯಗೋಪಾಲ್   ಸಂಗೀತ: ವಿಜಯ್ ಭಾಸ್ಕರ್   ಗಾಯಕರು: ಎಸ್. ಜಾನಕಿ
ನೀ ತಂದ ಕಾಣಿಕೆ ನಗೆಹೂವ ಮಾಲಿಕೆ, ನಗೆ ಹೂವ ಮಾಲಿಕೆ
ನಾ ತಂದ ಕಾಣಿಕೆ ಅನುರಾಗ ಮಾಲಿಕೆ, ಅನುರಾಗ ಮಾಲಿಕೆ
ಕಣ್ಣಲ್ಲೆ ಬರೆದೆ ಒಲವಿನ ಪೀಠಿಕೆ,
ಪೂರೈಸ ಬಂದೇ  ಮನಸಿನ ಬೇಡಿಕೆ
ಕಣ್ಣಲ್ಲೆ ಬರೆದೆ ಒಲವಿನ ಪೀಠಿಕೆ,
ಪೂರೈಸ ಬಂದೇ ಮನಸಿನ ಬೇಡಿಕೆ 
ಮೈಮರೆತು ನಿಂತೇ ಆ ನಿನ್ನ ನೋಟಕೆ
ನಾ ಹಾಡಿ ಕುಣಿದೆ ನಿನ್ನೆದೆ ತಾಳಕೆ
ನೀ ತಂದ ಕಾಣಿಕೆ ನಗೆಹೂವ ಮಾಲಿಕೆ, ನಗೆ ಹೂವ ಮಾಲಿಕೆ
ನಾ ತಂದ ಕಾಣಿಕೆ ಅನುರಾಗ ಮಾಲಿಕೆ, ಅನುರಾಗ ಮಾಲಿಕೆ
ನೆನಪಿನ ಸುಳಿಗೆ ಕವಿಯಿತು ಇರುಳು
ಮರೆಯಿತೇ ನಿನ್ನಾ ಕರದಾ ಕೊರಳು
ನೆನಪಿನ ಸುಳಿಗೆ ಕವಿಯಿತು ಇರುಳು
ಮರೆಯಿತೇ ನಿನ್ನಾ ಕರದಾ ಕೊರಳು
ಬಾರದ ತುಟಿಗೇ ಅಂದಿನ ಹಾಡು 
ನೀನಿಲ್ಲದ ಬಾಳು ಮರಳಿನ ಕಾಡು 
ನೀ ತಂದ ಕಾಣಿಕೆ ನಗೆಹೂವ ಮಾಲಿಕೆ, ನಗೆ ಹೂವ ಮಾಲಿಕೆ
ನಾ ತಂದ ಕಾಣಿಕೆ ಅನುರಾಗ ಮಾಲಿಕೆ, ಅನುರಾಗ ಮಾಲಿಕೆ
ಅನುರಾಗ...  
--------------------------------------------------------------------------------------------------------------------------
No comments:
Powered by Blogger.

No comments:

Post a Comment