Monday, April 29, 2019

ಬಂಗಾರದ ಜಿಂಕೆ (1980)

ಒಲುಮೆ ಸಿರಿಯಾ

ಚಲನ ಚಿತ್ರ: ಬಂಗಾರದ ಜಿಂಕೆ (1980)
ನಿರ್ದೇಶನ: 
ಸಾಹಿತ್ಯ : ದೊಡ್ಡರಂಗೇಗೌಡ 
ಸಂಗೀತ : ವಿಜಯಭಾಸ್ಕರ್ 
ಗಾಯನ : ಎಸ್.ಪಿ.ಬಾಲಸುಬ್ರಹ್ಮಣ್ಯಂ
ನಟನೆ: ವಿಷ್ಣುವರ್ಧನ್, ಭಾರತಿ 

ಒಲುಮೆ ಸಿರಿಯಾ ಕಂಡು ಬಯಕೆ ಸಿಹಿಯಾ ಉಂಡು
ಪ್ರೀತಿ ಮಾತಾಡಿದೆ ಬಾಳು ರಂಗಾಗಿದೆ 
ಒಲುಮೆ ಸಿರಿಯಾ ಕಂಡು ಬಯಕೆ ಸಿಹಿಯಾ ಉಂಡು
ಪ್ರೀತಿ ಮಾತಾಡಿದೆ ಬಾಳು ರಂಗಾಗಿದೆ 
ಚೆಂದಾಗಿ ಕೂಡಿದ ಸುಂದರ ಸಮಯ ಕನಸಾಗಿದೆ
ಓಡೋಡಿ ನಲಿದ ಸೊಂಪಾದ ಗಾನವ ಮರೆತಾಗಿದೆ
ಚೆಂದಾಗಿ ಕೂಡಿದ ಸುಂದರ ಸಮಯ ಕನಸಾಗಿದೆ
ಓಡೋಡಿ ನಲಿದ ಸೊಂಪಾದ ಗಾನವ ಮರೆತಾಗಿದೆ
ಮಾತಾಡದೇ ..ಬಳಿಬಾರದೇ ..
ಮಾತಾಡದೇ ..ಬಳಿಬಾರದೇ .. ನನ್ನಿಂದ ನೀ ದೂರ ಹೋದೆ
ಒಲುಮೆ ಸಿರಿಯಾ ಕಂಡು ಬಯಕೆ ಸಿಹಿಯಾ ಉಂಡು
ಪ್ರೀತಿ ಮಾತಾಡಿದೆ ಬಾಳು ರಂಗಾಗಿದೆ
ನೂರಾರು ಜನ್ಮದ ಅನುಬಂಧ ನಮ್ಮದು ಅರಿವಾಗದೇ
ಒಂದಾಗಿ ಹಾಡಿದ ರಾಗದ ದಾಟಿಯು ನೆನಪಾಗದೇ
ನೂರಾರು ಜನ್ಮದ ಅನುಬಂಧ ನಮ್ಮದು ಅರಿವಾಗದೇ
ಒಂದಾಗಿ ಹಾಡಿದ ರಾಗದ ದಾಟಿಯು ನೆನಪಾಗದೇ
ಬೇರಾಗದೇ... ದೂರಾಗದೇ...
ಬೇರಾಗದೇ... ದೂರಾಗದೇ....ನನ್ನನ್ನು ನೀ ಸೇರು ಇಂದೇ
ಒಲುಮೆ ಸಿರಿಯಾ ಕಂಡು ಬಯಕೆ ಸಿಹಿಯಾ ಉಂಡು
ಪ್ರೀತಿ ಮಾತಾಡಿದೆ ಬಾಳು ರಂಗಾಗಿದೇ

********************************************************************************

ಒಲುಮೆ ಸಿರಿಯಾ... 

 ಸಾಹಿತ್ಯ : ದೊಡ್ಡರಂಗೇಗೌಡ 
ಗಾಯನ : ಎಸ್.ಪಿ.ಬಾಲು ಮತ್ತು ವಾಣಿಜಯರಾಂ 

ಹೆಣ್ಣು : ಒಲುಮೆ ಸಿರಿಯಾ ಕಂಡು (ಲಾಲಾಲಾ ) ಬಯಕೆ ಸಿಹಿಯಾ ಉಂಡು (ಲಾಲಾಲಾ )
          ಪ್ರೀತಿ ಮಾತಾಡಿದೆ (ಲಲಲಲಾ  ) ಬಾಳು ರಂಗಾಗಿದೆ (ಲಲಲಲಾ )
ಗಂಡು : ಒಲುಮೆ ಸಿರಿಯಾ ಕಂಡು (ಲಾಲಾಲಾ ) ಬಯಕೆ ಸಿಹಿಯಾ ಉಂಡು (ಲಾಲಾಲಾ )
          ಪ್ರೀತಿ ಮಾತಾಡಿದೆ (ಲಲಲಲಾ  ) ಬಾಳು ರಂಗಾಗಿದೆ (ಲಲಲಲಾ )
ಹೆಣ್ಣು : ಮುಂಗಾರು ಕಾಣದೆ ಕಾಡಿನ ನವೀಲು ತಾನಾಡದು
ಗಂಡು : ನಿನ್ನನೂ ಕೂಡದೇ ನನ್ನ ಹೃದಯ ನಿನದಾಗದು
ಹೆಣ್ಣು :  ಹಗಲಲಿ ಇರುಳಲಿ .. ಹಗಲಲಿ ಇರುಳಲಿ ಇರುವೆನು ನಿನ್ನ ಜೊತೆ 
ಗಂಡು: ಒಲುಮೆ ಸಿರಿಯ ಕಂಡು, ಬಯಕೆ ಸಿಹಿಯ ಉಂಡು
ಹೆಣ್ಣು: ಪ್ರೀತಿ ಮಾತಾಡಿದೆ ಬಾಳು ರಂಗಾಗಿದೆ
ಗಂಡು : ನೂರಾರು ಜನುಮದ ಅನುಬಂಧ ನಮ್ಮದು ಅರಿವಾಗಿದೆ
ಹೆಣ್ಣು : ಒಂದಾಗಿ ಹಾಡಿದ ರಾಗದ ಧಾಟಿಯು ನೆನಪಾಗಿದೆ
ಗಂಡು : ಬೇರಾಗದೇ... ದೂರಾಗದೇ...
            ಬೇರಾಗದೇ... ದೂರಾಗದೇ... ನನ್ನನ್ನು ನೀ ಸೇರು ಇಂದೇ 
ಹೆಣ್ಣು  : ಒಲುಮೆ ಸಿರಿಯ ಕಂಡು, ಬಯಕೆ ಸಿಹಿಯ ಉಂಡು
ಗಂಡು : ಪ್ರೀತಿ ಮಾತಾಡಿದೆ ಬಾಳು ರಂಗಾಗಿದೆ
ಹೆಣ್ಣು : ಬಂಗಾರ ಜಿಂಕೆಯು ಬೇಕೆಂಬ ಆಸೆಯೂ ಬೆಳೆದಿದೆ...
ಗಂಡು: ಮಂದಾರ ಪುಷ್ಪವ ಮುಡಿಯೇ ನೀನೆಂದು ಬಯಸಿದೆ
ಹೆಣ್ಣು : ಚೆಲುವನು... ನಲಿವನು ...
          ಚೆಲುವನು... ನಲಿವನು ... ಮರೆಯೇನು ಎಂದೆದಿಗೂ 
ಗಂಡು : ಒಲುಮೆ ಸಿರಿಯ ಕಂಡು, 
ಹೆಣ್ಣು : ಬಯಕೆ ಸಿಹಿಯ ಉಂಡು
ಗಂಡು : ಪ್ರೀತಿ ಮಾತಾಡಿದೆ.. 
ಹೆಣ್ಣು :  ಲಾ.. ಲಾ.. ಲಾ..  ಬಾಳು ರಂಗಾಗಿದೆ 
ಗಂಡು  : ಲಾ.. ಲಾ.. ಲಾ..
********************************************************************************

ಸಂಗಾತಿಯು ಬಳಿ ಬಾರದೇ

ಸಾಹಿತ್ಯ : ದೊಡ್ಡರಂಗೇಗೌಡ
ಗಾಯನ : ವಾಣಿಜಯರಾಂ 

ಆಹ್ಹಾಆಆ.. ಆಹ್ಹಾಆಆ... ಆಹ್ಹಾಆಆ.. ಆಹ್ಹಾಆಆ... 
ಸಂಗಾತಿಯು ಬಳಿ ಬಾರದೇ ಈ ಜೀವನ ಬರಡಾಗಿದೆ 
ಮನಸೆಲ್ಲಾ ತೂಗಾಡಿದೇ ನನ್ನ ಕನಸೆಲ್ಲಾ ಚೂರಾಗಿದೇ 
ಸಂಗಾತಿಯು ಬಳಿ ಬಾರದೇ ಈ ಜೀವನ ಬರಡಾಗಿದೆ 
ಮನಸೆಲ್ಲಾ ತೂಗಾಡಿದೇ ನನ್ನ ಕನಸೆಲ್ಲಾ ಚೂರಾಗಿದೇ 
ಹೊನ್ನಿಗೆಂದು ಬೆಲೆಯೇ ಕೊಡದೇ ಪ್ರೀತಿ ಮಾಡಿದೇ 
ನಲ್ಮೆ ಹಿರಿಮೆ ಬಯಸಿ ನಾನು ರಾಗಾ ಮೀಟಿದೆ 
ಈ ಜೀವಾ ನಿನ್ನದೂ ಈ ಭಾವಾ ನಿನ್ನದೂ 
ಈ ಜೀವಾ ನಿನ್ನದೂ ಈ ಭಾವಾ ನಿನ್ನದೂ 
ನಮ್ಮೆಲ್ಲಾ ಮಿಲನ ಚೆಲುವಾಗದೇ 
ಸಂಗಾತಿಯು ಬಳಿ ಬಾರದೇ ಈ ಜೀವನ ಬರಡಾಗಿದೆ 
ಮನಸೆಲ್ಲಾ ತೂಗಾಡಿದೇ ನನ್ನ ಕನಸೆಲ್ಲಾ ಚೂರಾಗಿದೇ 
ಉಕ್ಕಿ ಹರಿವಾ ಒಲುಮೆ ಒಂದೂ ನಿನ್ನ ಮೆಚ್ಚಿದೇ 
ರೆಪ್ಪೆ ಮುರಿವಾ ಹರೆಯ ಕಂಡೂ ಆಸೇ ಹೆಚ್ಚಿದೆ 
ಈ ತನುವೂ ನಿನ್ನದೂ ಈ ಮನವೂ ನಿನ್ನದೂ 
ಈ ತನುವೂ ನಿನ್ನದೂ ಈ ಮನವೂ ನಿನ್ನದೂ 
ನನ್ನೆಲ್ಲಾ ಕನಸು ನನಸಾಗದೇ 
ಸಂಗಾತಿಯು ಬಳಿ ಬಾರದೇ ಈ ಜೀವನ ಬರಡಾಗಿದೆ 
ಮನಸೆಲ್ಲಾ ತೂಗಾಡಿದೇ ನನ್ನ ಕನಸೆಲ್ಲಾ ಚೂರಾಗಿದೇ 
ಹೂವಿಗಿಂದೂ ಬೇಕೇ ಬೇಕು ದುಂಬಿ ಆಸರೇ 
ಎಲ್ಲಾ ಹೆಣ್ಣೂ ಬಯಸೋದೊಂದೇ ಪ್ರೀತಿಯ ತೋರೆ 
ಸಂತೋಷ ಪಡದೇ ಸಂಬಂಧ ತರದೇ 
ಸಂತೋಷ ಪಡದೇ ಸಂಬಂಧ ತರದೇ 
ನನ್ನೆಲ್ಲಾ ಬದುಕು ಕುರುಡಾಗಿದೇ 
ಸಂಗಾತಿಯು ಬಳಿ ಬಂದರೇ ಈ ಜೀವನ ಬಂಗಾರವೇನೇ...   
********************************************************************************

ಕೆಣಕಿರುವೇ 

ಸಾಹಿತ್ಯ : ದೊಡ್ಡರಂಗೇಗೌಡ 
ಗಾಯನ : ವಾಣಿಜಯರಾಂ 

ಯವ್ವಿ ಯವ್ವಿ ಯವ್ವಿ ಯವ್ವಿ ಯವ್ವಿ ಯವ್ವಿ
ಯವ್ವಿ ಯವ್ವಿ ಯವ್ವಿ ಯವ್ವಿ ನೀ ಕೆಣಕಿರುವೇ ಚುಮ್ಮಕ ಚುಮ್ಮಾನಾ...
ಕಂಡಿರುವೇ ಜುಮ್ಮಕ ಜುಮ್ಮ ನೀ
ಕೆಣಕಿರುವೇ ಚುಮ್ಮಕ ಚುಮ್ಮಾನಾ ಕಂಡಿರುವೇ
ಜುಮ್ಮಕ ಜುಮ್ಮ ಕುಣಿಯಲು ನಾ ಮಣಿಯೇನು ನಾ
ಯಾಕೋ ಕಣ್ಣೋಟ ಚೆಲ್ಲಾಟ
ಯವ್ವಿ ಯವ್ವಿ ಯವ್ವಿ ಯವ್ವಿ ನೀ ಕೆಣಕಿರುವೇ ಚುಮ್ಮಕ ಚುಮ್ಮಾನಾ...
ಕಂಡಿರುವೇ ಜುಮ್ಮಕ ಜುಮ್ಮ  ಕುಣಿಯಲು ನಾ ಮಣಿಯೇನು ನಾ
ಯಾಕೋ ಕಣ್ಣೋಟ ಚೆಲ್ಲಾಟ ಯವ್ವಿ ಯವ್ವಿ ಯವ್ವಿ ಯವ್ವಿ
ಕೀಟಲೇ ಮಾಡುತ ನೋಟವ ಬೀರುತ ಸ್ನೇಹವ ಬಯಸಿರುವೇ
ಸಾವಿರ ಆಸೆಯ ನಾಲಿಗೇ ಚಾಚುತ ಪ್ರೀತಿಗೆ ಕರೆದಿರುವೇ ಹ್ಹಾಂ ...
ಕೀಟಲೇ ಮಾಡುತ ನೋಟವ ಬೀರುತ ಸ್ನೇಹವ ಬಯಸಿರುವೇ
ಸಾವಿರ ಆಸೆಯ ನಾಲಿಗೇ ಚಾಚುತ ಪ್ರೀತಿಗೆ ಕರೆದಿರುವೇ
ಹೆಣ್ಣಿನ ಸಂಗ ಬೇಡಿ.. ಹ್ಹಾಂ  ಸುಮ್ಮನೇ ಕಾಡಿ ಕಾಡಿ 
ಇಲ್ಲದೇ ಮೋಡಿ ಮಾಡಿ ಸಲ್ಲದ ದಾಹ ಮೂಡಿ 
ಕೈಯ್ ಹಿಡಿವೇ ಮೈಯ್ ಮರೆತೆ ನಲ್ಲಾ 
ಯವ್ವಿ ಯವ್ವಿ ಯವ್ವಿ ಯವ್ವಿ ನೀ ಕೆಣಕಿರುವೇ ಚುಮ್ಮಕ ಚುಮ್ಮಾನಾ...
ಕಂಡಿರುವೇ ಜುಮ್ಮಕ ಜುಮ್ಮ
ಹತ್ತಿರ ಸೆಳೆಯುತ ಮುತ್ತನು ಬೀರುತ ಮತ್ತಿಗೆ ಇಳಿದಿರುವೇ
ಮೆತ್ತಗೆ ನಡೆಯುತ ಸುತ್ತಲೂ ನೋಡುತ ಹೊತ್ತನು ಮರೆತಿರುವೇ.. ಹ್ಹ ಹ್ಹಾಂ
ಹತ್ತಿರ ಸೆಳೆಯುತ ಮುತ್ತನು ಬೀರುತ ಮತ್ತಿಗೆ ಇಳಿದಿರುವೇ
ಮೆತ್ತಗೆ ನಡೆಯುತ ಸುತ್ತಲೂ ನೋಡುತ ಹೊತ್ತನು ಮರೆತಿರುವೇ
ಒಲ್ಲದ ಪ್ರೇಮ ಹುಟ್ಟಿ ಮೆಲ್ಲಗೇ ಕೆನ್ನೇ ಮುಟ್ಟಿ 
ನಂಬಿಕೆ ದಾರಿ ಮೀರೀ ದುಂಬಿಯ ಹಾಗೇ ಹಾರೀ 
ನೀತಿ ತೊರೆವೇ ಭೀತಿ ಹಿಡಿವೆಯಲ್ಲಾ
ಯವ್ವಿ ಯವ್ವಿ ಯವ್ವಿ ಯವ್ವಿ ನೀ ಕೆಣಕಿರುವೇ ಚುಮ್ಮಕ ಚುಮ್ಮಾನಾ...
ಕಂಡಿರುವೇ ಜುಮ್ಮಕ ಜುಮ್ಮ ನೀ  ಕುಣಿಯಲು ನಾ ಮಣಿಯೇನು ನಾ
ಯಾಕೋ ಕಣ್ಣೋಟ ಚೆಲ್ಲಾಟ
ಯವ್ವಿ ಯವ್ವಿ ಯವ್ವಿ ಯವ್ವಿ ನೀ ಕೆಣಕಿರುವೇ ಚುಮ್ಮಕ ಚುಮ್ಮಾನಾ...
ಕಂಡಿರುವೇ ಜುಮ್ಮಕ ಜುಮ್ಮ ನೀ  ಕೆಣಕಿರುವೇ ಚುಮ್ಮಕ ಚುಮ್ಮಾನಾ...
ಕಂಡಿರುವೇ ಜುಮ್ಮಕ ಜುಮ್ಮ
********************************************************************************

No comments:

Post a Comment