ನಾ ಅರ್ಪಿಪೆ ಶಾರದೆಗೆ ವರನೀಡು ಭಕ್ತರಿಗೆ
ಕೊಡು ನಮಗೆ ಸುಜ್ಞಾನ ಕಳೆ ಎಲ್ಲ ಅಜ್ಞಾನ
ಭವರೋಗ ಕಳೆದು ನೀ ಹರಿಸಮ್ಮ ನಮ್ಮ ನೀ ।।ಪ।।
ನಿರ್ಮಲವಾದ ಮನಸ್ಸಿನಿಂದ ನಿನ್ನ ಬೇಡುವೆ
ನೀನು ದಯವ ಬೀರದೆ ಹೋದರೆ ನಾನು ಬೆದರುವೆ
ಕಣ್ ಬಿಟ್ಟು ನೋಡುವಾನೆ ನಮ್ಮ ಕಷ್ಟವ
ಧರೆಗೆ ಬಂದು ನೆಲೆಸು ತಾಯಿ ಎಂದು
ಬೇಡುವಾ ನಾ ಎಂದು ಬೇಡುವಾ... ।।೧।।
ಶುಕ್ರವಾರದಿ ಶಾರದೆ ನಿನ್ನ ಪೂಜೆಗೈವೆವು
ಸತ್ಯ ಧರ್ಮ ನೀತಿ ನಿನ್ನ ಪಾದ ಕಮಲವು
ನಮ್ಮ ಹೃದಯ ಮಂದಿರದಲ್ಲಿ ಬಂದು ನೆಲೆಸು
ಅಂಧಕಾರ ನೀಗಿ ಜ್ಞಾನ ಜ್ಯೋತಿ ಬೆಳಗಿಸು
ನೀ ಜ್ಯೋತಿ ಬೆಳಗಿಸು ।।೨।।
ನಿನ್ನ ಮಡಿಲಿನ ಮಕ್ಕಳನ್ನು ಎತ್ತಿ ಆಡಿಸು
ಒಳ್ಳೆ ಮಾತು ಒಳ್ಳೆ ಕೆಲಸ ನೀನು ಕಲಿಸು
ವಿದ್ಯಾ ಬುದ್ಧಿ ಕಳಿಸಿ ನಮ್ಮ ಆಸೆ ಪೂರೈಸು
ನಮ್ಮ ಬಾಳ ಬಂಧನದಲ್ಲಿ ದಾರಿ ತೋರಿಸು
ನೀ ದಾರಿ ತೋರಿಸು ।।೩।।
**********************************************************************************
ನಿನ್ನ ನೆನೆವಾಗ ಗಣಪ ನನ್ನ ಮನದಾಗ
ಸುಂದರ ನಿನ್ನ ಮೂರುತಿಯನ್ನ ಕಾಣುವುದ್ಯಾವಾಗ ।।ಪ।।
ಅಗಲಿದ ನಿನ್ನ ಹುಡುಕುತ ಬಂದೆ
ಭಕ್ತಿಯ ಕಾಣಿಕೆ ನಾ ತಂದೆ
ನಿನ್ನನ್ನು ಕಂಡು ಸಂತಸಗೊಂಡು
ಎನ್ನನ್ನು ಹರಿಸೋ ನೀ ತಂದೆ ।।೧।।
ಮಾಯಾಮೋಹ ಜಗದೊಳು ತುಂಬಿರೆ
ನಿನ್ನಯ ಒಲುಮೆ ಇರಬೇಕು
ನಿನ್ನನ್ನು ಕಂಡು ನಡೆಯುವ ಜನಕೆ
ಸದ್ಗತಿಯನ್ನು ಕೊಡಬೇಕು ।।೨।।
ತಂದೆಯು ನೀನು ತಾಯಿಯು ನೀನು
ನಿನ್ನನ್ನು ಸ್ಮರಿಸುತ ನಾ ಬಂದೆ
ನಿನ್ನನ್ನು ಕಂಡು ಸಂತಸಗೊಂಡು
ಎನ್ನನ್ನು ಹರಿಸೋ ನೀ ತಂದೆ ।।ಪ।।
**********************************************************************************
ಬಾರೋ ಗೆಳೆಯ ಗಣಪತಿ
ನೀಡು ನಮಗೆ ಶುಭಮತಿ
ಇಲಿಯು ಬರಲಿ ಆಡುತಲಿರಲಿ
ನೀನು ಬೇಕು ಜೊತೆಯಲ್ಲಿ ।।ಪ।।
ಎಲ್ಲಿ ಕೋಮಲ ತಾವರೆ
ಮುದ್ದು ತಂಗಿ ಲಕ್ಷ್ಮೀ ಬಾರೆ
ಕೂಡಿ ಶಾಲೆಗೆ ಹೋಗುವಾ
ಪ್ರೀತಿಯ ವಿದ್ಯೆ ಕಲಿಯುವಾ ।।೧।।
ಭಾರತಿ ನಮೋ ಭಗವತಿ
ಅಕ್ಕ ಬಾರೆ ಸರಸ್ವತಿ
ವೀಣೆ ನವಿಲು ನಮಗೆ ನೀಡು
ನೀನು ನಗುತ ಓಡು ಓಡು ।।೨।।
ಬಾರೋ ಗೆಳೆಯ ಗಣಪತಿ
ನೀಡು ನಮಗೆ ಶುಭಮತಿ
ಇಲಿಯು ಬರಲಿ ಆಡುತಲಿರಲಿ
ನೀನು ಬೇಕು ಜೊತೆಯಲ್ಲಿ ।।ಪ।।
**********************************************************************************
ನೀ ತಂದೆ ದೇವಾ ನೀ ತಾಯಿ ದೇವಾ
ನೇ ಎನ್ನ ಬಂಧು ಬಳಗೆಲ್ಲಾ ದೇವಾ ।।ಪ।।
ನಡೆಯಲ್ಲಿ ಸತ್ಯ ನಾ ನಡೆಯುವಂತೆ
ನುಡಿಯಲ್ಲಿ ಸತ್ಯ ನಾ ನುಡಿಯುವಂತೆ
ವರ ನೀಡು ತಂದೆ ಎನಗೊಂದೆ ಚಿಂತೆ
ಪರರಿಂದ ಮರೆತು ನೀ ಶಕ್ತನಂತೆ ।।೧।।
ಜಗಕ್ಕೆಲ್ಲಾ ಅನ್ನ ಜಗಕ್ಕೆಲ್ಲಾ ನೀರು
ಜಗಕ್ಕೆಲ್ಲಾ ಸೌಖ್ಯ ಸೌಭಾಗ್ಯ ತೋರು
ಜಗದಲ್ಲಿ ಜಗಳ ಹೆಡೆಯಾಡದಂತೆ
ಜಗದೊಡೆಯ ಕಾಯೋ ಜಗಪಾಲನಂತೆ ।।೨।।
ನಾನಾತ್ಮ ಅರಳಿ ನಾ ಬೆರೆಯುವಂತೆ
ನಿನ್ನಂತೆ ಪರರ ನಾ ಅರಿಯುವಂತೆ
ನಿನ್ನನ್ನು ಅನುದಿನವು ನಾ ಸ್ಮರಿಸುವಂತೆ
ನನ್ನೊಡೆಯ ಕಾಯೋ ನೀ ಕಾಯುವಂತೆ ।।೩।।
ನೀ ತಂದೆ ದೇವಾ ನೀ ತಾಯಿ ದೇವಾ
ನೇ ಎನ್ನ ಬಂಧು ಬಳಗೆಲ್ಲಾ ದೇವಾ ।।ಪ।।
**********************************************************************************
: ಲಿಂಗಾಷ್ಟಕಂ :
ಬ್ರಹ್ಮ ಮುರಾರಿ ಸುರಾರ್ಚಿತ ಲಿಂಗಂ
ನಿರ್ಮಲ ಭಾಷಿತ ಶೋಭಿತ ಲಿಂಗಂ
ಜನ್ಮಜ ದುಃಖ ವಿನಾಶಕ ಲಿಂಗಂ
ತತ್ಪ್ರಣಮಾಮಿ ಸದಾಶಿವ ಲಿಂಗಂ
ದೇವಮುನಿ ಪ್ರವರಾರ್ಚಿತ ಲಿಂಗಂ
ಕಾಮದಹನ ಕರುಣಾಕರ ಲಿಂಗಂ
ರಾವಣದರ್ಪ ವಿನಾಶಕ ಲಿಂಗಂ
ತತ್ಪ್ರಣಮಾಮಿ ಸದಾಶಿವ ಲಿಂಗಂ
ಸರ್ವಸುಗಂಧ ಸುಲೇಪಿತ ಲಿಂಗಂ
ಬುದ್ಧಿವಿವರ್ಧನ ಕಾರಣ ಲಿಂಗಂ
ಸಿದ್ಧಸುರಾಸುರ ವಂದಿತ ಲಿಂಗಂ
ತತ್ಪ್ರಣಮಾಮಿ ಸದಾಶಿವ ಲಿಂಗಂ
ಕನಕಮಹಾಮಣಿ ಭೂಷಿತ ಲಿಂಗಂ
ಫಣಿಪತಿವೇಷ್ಟನ ಶೋಭಿತ ಲಿಂಗಂ
ದಕ್ಷಸುಯಜ್ಞ ವಿನಾಶನ ಲಿಂಗಂ
ತತ್ಪ್ರಣಮಾಮಿ ಸದಾಶಿವ ಲಿಂಗಂ
ಕುಂಕುಮ ಚಂದನ ಲೇಪಿತ ಲಿಂಗಂ
ಪಂಕಜ ಹಾರ ಸುಶೋಭಿತ ಲಿಂಗಂ
ಸಂಚಿತ ಪಾಪ ವಿನಾಶಕ ಲಿಂಗಂ
ತತ್ಪ್ರಣಮಾಮಿ ಸದಾಶಿವ ಲಿಂಗಂ
ದೇವಗಣಾವತಿ ಸೇವಿತ ಲಿಂಗಂ
ಭಾವೈರ್ಭಕ್ತಿ ಭೀರೇವಚ ಲಿಂಗಂ
ದಿನಕರ ಕೋಟಿ ಪ್ರಭಾಕರ ಲಿಂಗಂ
ತತ್ಪ್ರಣಮಾಮಿ ಸದಾಶಿವ ಲಿಂಗಂ
ಅಷ್ಟದಳೋಪರಿ ವೇಷ್ಟಿತ ಲಿಂಗಂ
ಸರ್ವ ಸಮುದ್ಬವ ಕಾರಣ ಲಿಂಗಂ
ಅಷ್ಟ ದರಿದ್ರ ವಿನಾಶಕ ಲಿಂಗಂ
ತತ್ಪ್ರಣಮಾಮಿ ಸದಾಶಿವ ಲಿಂಗಂ
ಸುರುಗುರು ಸುರವರ ಪೂಜಿತ ಲಿಂಗಂ
ಸುರವನ ಪುಷ್ಪ ಸದಾರ್ಚಿತ ಲಿಂಗಂ
ಪರಮಪದಂ ಪರಮಾತ್ಮಕ ಲಿಂಗಂ
ತತ್ಪ್ರಣಮಾಮಿ ಸದಾಶಿವ ಲಿಂಗಂ
**********************************************************************************
ಶಿವಲಿಂಗ ಪೂಜೆ ಸಂಭ್ರಮವ ನೋಡು
ಬಡಹಳ್ಳಿ ಗುರುವಿನಲ್ಲಿ ಶಿವಭಕ್ತಿಗಾಗಿ
ಕಣ್ ಬಿಟ್ಟು ನೋಡು ಚೆನ್ನವೀರ ಶರಣರಲ್ಲಿ ।।ಪ।।
ಆಚಾರ್ ಪ್ರಭೆಯು ಪ್ರಾಚಾರ್ಯವಾಯ್ತು
ಈ ಭೂಮಿ ತಾಯಿಯಿಂದಾ
ಆಚಾರದಲಿ ಶಿವಲಿಂಗ ಧ್ಯಾನ
ಪಂಚಾಚಾರ್ಯರಿಂದ ।।೧।।
ಕಾಯಕ್ಕೆ ಬೇಕು ಕಾಯಕವು ಬೇಕು
ಬಸವಣ್ಣ ತೋರ ಬಂದ
ಕಾಯದಲಿ ಮಾಯಾ ಗಲ್ಲಗಲ್ಲಲಿಕೆ ನೋಡು
ಮಹಾದೇವ ಪ್ರಭುಗಳಿಂದ ।।೨।।
ಶಿವಧರ್ಮದೇಳ್ಗೆ ಬಂಜರ ಬಾಳ್ಗೆ
ಕಲಬುರ್ಗಿ ಶರಣ ಬಂದ
ಶಿವತತ್ವ ಸಿದ್ಧಿ ಗುರು ಚರರ ಬುದ್ಧಿ
ಹಾನಗಲಧೀಶರಿಂದ ।।೩।।
ಸಂಗೀತ ಸುಧೆಯು ಮನೆಮನೆಗೆ ಬಂತು
ಪುಟ್ಟರಾಜ ಗವಾಯಿಗಳಿಂದ
ಸದ್ಗತಿಯು ಬೇಗ ದೊರೆಯುವ ನೋಡು
ಚಿಕ್ಕ ಮಣ್ಣೂರೇಶನಿಂದ ।।೪।।
**********************************************************************************
ಪಂಢರಾಪುರವೆಂಬ ದೊಡ್ಡ ಶಹರ
ಅಲ್ಲಿ ವಿಠೋಬನೆಂಬ ದೊಡ್ಡ ಸಾಹುಕಾರ ।।೨ ಸಲ।।
ವಿಠೋಬನಿರುವುದು ನದಿ ತೀರಾ,
ಅಲ್ಲಿ ಪಂಡರಿ ಭಜನೆಯ ವ್ಯಾಪಾರ ।।೨ ಸಲ।।
ಜೈ ಜೈ ವಿಠಲ ಪಾಂಡುರಂಗ ನಮ್ಮ ಜಯಾಧಿ
ವಿಠಲ ಪಾಂಡುರಂಗ ।।೨ ಸಲ।।
ಭಕ್ತಿ ಪೋಷಕ ಪಾಂಡುರಂಗ, ನಮ್ಮ
ಮುಕ್ತಿ ಪ್ರದಾಯಕ ಪಾಂಡುರಂಗ ।।೨ ಸಲ।।
ತಂದೆ ತಾಯಿಯು ಪಾಂಡುರಂಗ, ನಮ್ಮ
ಬಂಧು-ಬಳಗವು ಪಾಂಡುರಂಗ ।।೨ ಸಲ।।
ಬನ್ನಿ ಹೋಗೋಣ ನಾವೆಲ್ಲಾ, ನಮ್ಮ
ಪಂಡರೀನಾಥನ ದರುಶನಕೆ ।।೨ ಸಲ।।
ದಾನ ಧರ್ಮಗಳ ಮಾಡೋಣಾ, ನಮ್ಮ
ಪಾಪ ಕರ್ಮಗಳ ತೊಳೆಯೋಣ ।।೨ ಸಲ।।
**********************************************************************************
ಆರುತಿ ಕರುಣೆ ಮೂರುತಿಗೆ
ಬೆಳಗುವೆ ಶ್ರೀ ಜಗದಾಂಬಿಕೆಗೆ ।।ಪ।। ೨ ಸಲ ।।
ಲೋಕೈಕ ಮಾತೆಯ ಸ್ಮರಿಸುತಲಿ
ಏಕೈಕ ವರವನು ಬೇಡುತಲಿ ।। ೨ ಸಲ।।
ಬಂದಿರೆ ಪಾಲಿಸೋ ಕುಸುಮವಂಥಾ
ಲಾಲಿಸು ಹೆಮ್ಮೆಯ ಮರೆಯೊನಂದಾ ।।೨ ಸಲ।।
ಪುತ್ಥಳಿ ಹರಿವಂತ ದೋಣಿರುವ
ಮರಕಂಠ ಮಣಿಯಂತೆ ಶೋಭಿಸುವ ।।೨ ಸಲ।।
ಮುತ್ತಿನ ಆರುತಿ ಬೆಳಗುವೆನು
ಕುಂಕುಮ ಭಾಗ್ಯವ ಬೇಡುವೆನು ।।೨ ಸಲ।।
**********************************************************************************
ಗಣಪ ಗಣಪ ಬಾರೋ
ವಿದ್ಯಾ ಬುದ್ಧಿ ಕೊಡು
ಮಕ್ಕಳ ಬಾಳಿಗೆ ಮಕ್ಕಳ ಬಾಳಿಗೆ ।।ಪ।।
ಹೂವಿಗೂ ಹಣ್ಣಿಗೂ ನೀನೆ ದೇವರು
ನೋವಿಗೂ ನಲಿವಿಗೂ ನೀನೆ ದೇವರು ।।
ಓ ಗಣಪ ಊರೇನೇ ಅಂದರೂ ನೀ ನನ್ನ ದೇವರು
ಜಗಕೆ ಮುಕ್ಕೋಟಿ ದೇವರು ನೀ ನನ್ನ ದೇವರು ।।
**********************************************************************************
ಗಣಪ ಬರುವೆಯಾ ಬೆಳಕ ತರುವೆಯಾ
ನಮ್ಮ ಬಾಳಿನಲಿ ಗಣಪನೇ ನಮ್ಮ ಬಾಳಿನಲಿ
ನಾ ನಿನ್ನ ಸೇವೆಯನು ಮನಸಾರೆ
ಮಾಡುವೆನು ಏಳೇಳು ಜನ್ಮದಲ್ಲಿ
ನಾ ನಿನ್ನ ಭಕ್ತನಾಗಿರುವೆ ।।ಪ।।
ಮೂರು ಲೋಕದ ಮುಕ್ಕಣ್ಣ ನಿನ್ನ ತಂದೆ ಶಂಕರನು
ತಂದೆಯ ಕೋಪಕೆ ನೀ ಮಡಿದು
ಮರಳಿ ಜನ್ಮವ ನೀ ಪಡೆದೆ
ಆನೆಯ ಮುಖವ ನೀನೊತ್ತು
ಗಜಾನನಾಗಿ ನೀ ಬಂದೆ ನಮ್ಮ ಬಾಳಿನಲಿ
ಗಣಪನೇ ನಮ್ಮ ಬಾಳಿನಲಿ ।।೧।।
ಮೂಷಕನಾದರೆ ನಾ ನಿನ್ನ ಜೊತೆಯಲಿರುವೆ
ಅನುದಿನವು, ಭಾದ್ರಪ ಚೌತಿಯ ದಿನದಂದು
ಭೂಮಿಗಿಳಿದು ನೀ ಬರುವೆ, ಹೋಳಿಗೆ
ತುಪ್ಪದ ನೈವೇಧ್ಯ ನಾ ಮಾಡಿ ನಿನಗೆ ಪೂಜಿಸುವೆ
ಬಾರೋ ಧರೆಗಿಳಿದು ಗಣಪನೆ
ಬಾರೋ ಧರೆಗಿಳಿದು ।।೨।।
**********************************************************************************
ಶರಣು ಸಿದ್ಧಿ ವಿನಾಯಕ
ಶರಣು ವಿದ್ಯೆ ಪ್ರದಾಯಕ
ಶರಣು ಪಾರ್ವತಿ ತನಯಮೂರುತಿ
ಶರಣು ಮೂಷಿಕ ವಾಹನ ।।ಪ।।
ನಿಖಿಲ ನೇತ್ರನೇ ದೇವಸುತನೇ
ನಾಗಭೂಷಣ ಪ್ರಿಯನೇ
ತಟಿಲತಾಂಕಿತ ಕೋಮಲಾಂಗನೇ
ಕರ್ಣಕುಂಡಲಧಾರಣೆ ।।೧।।
ಭಟ್ಟ ಮುಕ್ತಿಯ ಪದಕ ಹಾರನೆ
ಬಾಹು ಹಸ್ತ ಚತುಷ್ಟನೇ
ಪಕ್ಷಿವಾಹನ ಶ್ರೀ ಪುರಂದರ
ವಿಠಲ ನಾ ನಿಜ ದಾಸನೆ।।೨।।
**********************************************************************************
ಗಣಪತಿ ಎನ್ನ ಪಾಲಿಸೋ ಗಂಭೀರ
ಪಾರ್ವತಿ ನಂದನ ಸುಂದರ ವದನ
ಶರಣಾದಿ ಶುರವಂದ್ಯ ಶಿರಬಾಗುವ
ನಾ ಆದಿ ಪೂಜಿಪ ನೀನು ।।ಪ।।
ಮೋದಕ ಬೇಕಿರಲಿ ಮೊದಲಿನಲಿ
ಸದಾಮನ ನಿಲ್ಲಿಸೋ
ಪಂಕಜನಯನ ಶ್ರೀ ವೆಂಕಟರಮಣ
ವಿಠಲನ ಕಿಂಕರ ನೆನೆಸೆನ್ನ ಶಂಕರ
ತನಯನ ।।೧।।
**********************************************************************************
ಶ್ರೀ ಶಾರದಾ ಮಾತಾಯಿಯೇ
ಶೃಂಗೇರಿ ಪುರದ ವಾಸಿಯೇ
ನಾ ನಿನ್ನ ಪಾದವ ಬೇಡುವೆ
ತೋರಿಸು ಕೃಪೆಯ ದೇವಿಯೇ ।।ಪ।।
ಹಣೆಯಲಿ ಕುಂಕುಮ ತಲೆಯಲಿ ಕಿರೀಟ
ಕೈಯಲ್ಲಿ ಹಿಡಿದಾ ವೀಣೆಯಾ
ನಡುನೀರಿನಲ್ಲಿ ಕೈ ಬಿಡಬೇಡ
ಸರಿಯಾದ ದಡವ ಸೇರಿಸು ।।
**********************************************************************************