Saturday, September 4, 2021

ಶ್ರೀ ಗಣೇಶ ಭಕ್ತಿಗೀತೆಗಳು

 : ಶ್ರೀ ಗಣೇಶ ಭಕ್ತಿಗೀತೆ:

 

ಎಂದೆಂದೂ ಗಣಪನ ಭಜಿಸಿ ಪಾವನರಾಗಿ 

ಮುಂದೆಂದೂ ಕಾಂಡ ಸುಖವ ಕಾಣುವರಾಗಿ 

ನೊಂದವರು ಬಂದಿಹೆವು ಬೀ ಸಲಹು ಎಂದು 

 

ಸಾವಿರ ಜನುಮವೇ ಬರಲಿ ಎಂದಿಗೂ ನಾನು 

ನಿನ್ನಯ ಭಕ್ತನಾಗಿ ಎಂದಿಗೂ ನಾನು 

ಓಹೋ ಓಹೋ ಓಹೋ .. 


ನಿನ್ನ ಧ್ಯಾನ ಮಾಡುವೆ 

ಭಕ್ತಿಯಿಂದ ಭಜಿಸುವೆ 

ಒಲವಿಂದ ನಿನ್ನ ನೋಡಿ ಹಾಡುವೆ 

ಕುಣಿಯುವೆ ನಲಿಯುವೆ ।।ಎಂದೆಂದೂ ।।


**********************************************************************************

 : ಶ್ರೀ ಗಣೇಶ ಭಕ್ತಿಗೀತೆ:


ಲಂಬೋದರ ಪ್ರಭು ಅಂಬಾಸುತ 

ಪಾಹಿಗಣನಾಥ ಧರೆಗೆ ಬಾ.. ।।ಪ।।


ದೇವಾ ನಿನ್ನ ಸನ್ನಿಧಿಗೆ 

ವರವನ್ನು ಬೇಡಲು ಬಂದಿಹೆವು 

ಅಜ್ಞಾನವ ಕಳೆದು ನೀ 

ಜ್ಞಾನವ ನೀಡು ಬಾ... ।।೧।।


ಭವ ಬಂಧನದಲಿ ಕುಳಿತಿಹೆವು 

ನಿನ್ನಯ ಚರಣಕೆ ಎರಗಿಹೆವು 

ನಮ್ಮಯ ತಪ್ಪನು ಮನ್ನಿಸಿ 

ಕಾಯು ಬಾ... ।।೨।।


ಹಕ್ಕಿಯ ಗೂಡನು ಸೇರುತಿದೆ

ನಿನ್ನಯ ಧ್ಯಾನ ಮಾಡುತಿದೆ 

ತಮಂಧದ ಬಾನಲಿ ತೇಲಿದೆ 

ಎನ್ನಮನ... ।।೩।।


**********************************************************************************

 : ಶ್ರೀ ಗಣೇಶ ಭಕ್ತಿಗೀತೆ:


ಮೊದಲಿಗೆ ಬಾಗ್ವೆವು ಗಣಪ 

ಮೊದಲಿಗೆ ಒಯ್ಯಬ್ಯಾಡೊ ।।ಪ ।


ಪದರಾಗ ಬಿದ್ದೆವು ನಿನಗ 

ನಡಮುರಿದು ಬೀಳದಾಂಗ 

ಸದರದಿಂದ ಕಷ್ಟವನ್ನು ಪರ 

ಹರಿಸಿ ಪಾರ ಮಾಡೋ ।।೧।।


ಬುದ್ಧಿ ಕೊಡುವ ಸ್ವಾಮಿಯು ನೀನು 

ಶುದ್ಧ ಬುದ್ಧಿ ಗೇಡಿಯು ನಾವು

ಇದ್ಧ ಬುದ್ಧಿಯಿಂದ ನಮ್ಮ

ಗೆದ್ದು ಬರುವಹಾಂಗ ಮಾಡೋ ।।೨।।


ವೇದಶಾಸ್ತ್ರ ಬಲ್ಲವರಿಲ್ಲ 

ವಾದ ಮಾಡಿ ಗೊತ್ತೆ ಇಲ್ಲ 

ನಾದಗೇಡಿ ಹುಡುಗರನ್ನು 

ಹೋದಲ್ಲೆಲ್ಲ ಕೈ ಬಿಡಬ್ಯಾಡ ।।೩।।


ಕೂಡಿದಂತ ಈ ಸಭೆಯೊಳಗ 

ಕಾಡಬೇಡ ತಂದೆ ಎನ್ನ 

ಕೂಡಿದಂತ ಮಂದಿ ಮುಂದ 

ಮಾಡಬೇಡ ಮಾನಹಾನಿ ।।೪।।


**********************************************************************************

 : ಶ್ರೀ ಗಣೇಶ ಭಕ್ತಿಗೀತೆ:


ಪಾರ್ವತಿ ನಂದನಾ...  ಪಾರ್ವತಿ ನಂದನಾ...

ವಿಘ್ನ ವಿನಾಶಕ ಭಕ್ತಿ ಜನ ಪೋಷಕ 

ಕರುಣೆ ತೋರಯ್ಯಾ...  ।।ಪ।।


ಚೌತಿಯ ದಿನದ ಹಬ್ಬಕೆ ಬಾರೋ ಗಣಪ 

ಗರಿಕೆ ಪತ್ರಿ ನೀಡುವೆ ನಿನಗೆ ಬೆನಕ 

ಆನೆ ಮುಖದ ಗಣಪಯ್ಯ ಇಲಿಯನ್ನೇರಿ 

ಬಾರಯ್ಯ ಭಕುತ ಬಾಂಧವನೇ ।।೧।।


ಪಾಶ ಅಂಕುಶಕರ 

ಶಿವಗಣ ನಾಯಕಸುರ

ಲಂಬೋದರನೇ ಬಾರಯ್ಯ 

ಲಕುಮಿಕರನೇ ಬಾರಯ್ಯ 

ಪ್ರಥಮ ಪೂಜಿಪನೇ ।।೨।।


ಸೊಂಡಿಲ ಗಣಪ ಸೊಂಡಿಲ ಏರಿ ಬಾರಾ

ನಿನ್ನಯ ದರುಶನ ಭಾಗ್ಯವ ನಮಗೆ ತಾರಾ 

ನೀನೆ ನಮಗೆ ದಿಕ್ಕಯ್ಯ ಮರದ ಕಿವಿಯ 

ಗಣಪಯ್ಯ ಕರಣ ಗುಣಸದನ ।।೩।।


ಪಾರ್ವತಿ ನಂದನಾ... ಪಾರ್ವತಿ ನಂದನಾ...  

ವಿಘ್ನ ವಿನಾಶಕ ಭಕ್ತಿ ಜನ ಪೋಷಕ 

ಕರುಣೆ ತೋರಯ್ಯಾ...  ।।ಪ।।


**********************************************************************************

No comments:

Post a Comment