ಇಟಗಿ ಶ್ರೀ ಮೂಕಾಂಬಿಕೆ ಹಾಡು
ಮುಡಿಸಿದರೂ ಮಲ್ಲಿಗೆಯಾ
ಇಟಗಿ ಭೀಮಾಂಭಿಕೆಗೆ
ಭೂವಿಲೋಕ ಬೆಳಗುವ
ಭಾಗ್ಯದ ದೇವಿಗೆ
ಮುಡಿಸಿದರೂ ಮಲ್ಲಿಗೆಯಾ
ಹನುಮಮ್ಮಳ ಗರ್ಭದಲ್ಲಿ
ಜನಿಸಿದ ಶಿವಶಕ್ತಿಗೆ
ಸೋಮಣ್ಣನ ಮಗಳಾಗಿ
ಧರೆಗಿಳಿದ ತಾಯಿಗೆ
ಮುಡಿಸಿದರೂ ಮಲ್ಲಿಗೆಯಾ
ಧರ್ಮದ ಮನೆತನದಿ
ಮುತ್ತಾದ ಶ್ರೀದೇವಿಗೆ
ಹಾಲುಮತದ ಕೀರ್ತಿಯ
ಬೆಳಗಿದ ಶಕ್ತಿಗೆ
ಮುಡಿಸಿದರೂ ಮಲ್ಲಿಗೆಯಾ
ನಾಗಲಿಂಗ ಶರೀಫರಿಗೆ
ಬುತ್ತಿ ಉಣಿಸಿ ತೃಪ್ತಿಪಡಿಸಿದೆ
ಅನ್ನಪೂರ್ಣೀ ಅವತಾರ
ತಾಳಿದ ದೇವಿಗೆ
ಮುಡಿಸಿದರೂ ಮಲ್ಲಿಗೆಯಾ
ಕೂತಬಾಳ ಗುರುಸಿದ್ಧನ ಮಡದಿ
ಹಿಲಿಬ್ಯಾನಿಯಿಂದ ಬಳಲಿದಾಗ
ಕರ್ಪೂರ ತಿನ್ನಿಸಿ
ಬೇನೆ ಕಳೆದ ತಾಯಿಗೆ
ಮುಡಿಸಿದರೂ ಮಲ್ಲಿಗೆಯಾ
ರುದ್ರಭಟ್ಟ ಬ್ರಾಹ್ಮಣನು
ಬಡತನದಿ ಬೆಂದುಬರಲು
ತುಳಸಿ ಪೂಜೆ ಮಾಡಿಸಿ
ಸಿರಿವಂತ ಲಕ್ಷ್ಮೀಗೆ
ಮುಡಿಸಿದರೂ ಮಲ್ಲಿಗೆಯಾ
ಎಚ್ಚರವ್ವ ಪಂಪಣ್ಣ
ಬೇಡಿ ಬರಲು ಸಂತಾನ
ನೂಲುವ ಕದಿಯ ನೀಡಿ
ಮಗು ಕೊಟ್ಟ ಮಾತೆಗೆ
ಮುಡಿಸಿದರೂ ಮಲ್ಲಿಗೆಯಾ
ಮಳೆಯನ್ನು ತರಿಸಿದವಳು
ಮನುಕುಲದಿ ನೆಲೆಸಿದವಳು
ಭೂಮಾತೆಯ ರೂಪದಲ್ಲಿ
ಭವಗೆ ಕಳೆದ ದೇವಿಗೆ
ಮುಡಿಸಿದರೂ ಮಲ್ಲಿಗೆಯಾ
ನಂಬಿ ಬಂದ ಭಕುತರಿಗೆ
ಕರವ ಹಿಡಿದು ನಡೆಸುವವಳು
ನೆನೆದವರ ಮನದಲ್ಲಿ
ಇರುವಂತ ತಾಯಿಗೆ
ಮುಡಿಸಿದರೂ ಮಲ್ಲಿಗೆಯಾ
***********************************************************************************
ಮಂಗಳಾರುತಿ:
ಜ್ಞಾನಪೂರ್ಣಮ್ ಜಗಂ ಜ್ಯೋತಿ
ನಿರ್ಮಲವಾದ ಮನವೇ ಕರ್ಪೂರದಾರುತಿ
ಅನುದಿನ ಗುರುವಿನ ಅನುರಾಗ ಭಕ್ತಿಯಲಿ
ಜನನ ಮರಣರಹಿತ ಜಂಗಮಗೆ ಬೆಳಗಿರಿ ।।ಪ।।
ನಾನೀನೆಂಬುದು ಬಿಡಿರೋ ನರಕವೇ ಪ್ರಾಪ್ತಿ
ಜ್ಞಾನಿ ಒಳನಾಡಿರೋ ಸ್ವಾನುಭ ಒದಸುಖ
ತಾನಕ್ಕೆ ಸಾಲದು ಅನುಭವ ಲಿಂಗಕ್ಕೆ
ಮನವೊಪ್ಪಿ ಬೆಳಗಿರಿ
ಹುಟ್ಟಿ ಬರುವುದು ದುರ್ಲಭವೋ
ಕೊಟ್ಟಾನು ಶಿವನಮಗೆ ಮಾಡಿದ ಫಲದಿಂದ
ಹುಟ್ಟಿದ ಮಗನೆಸರು ಶಿವ ಎಂದು ಕರೆಯಿರಿ ।।ಪ ।।
ಜ್ಞಾನಪೂರ್ಣಮ್ ಜಗಂ ಜ್ಯೋತಿ
***********************************************************************************
ಪ್ರಾರ್ಥನೆ :
ನಿನ್ನೊಲುಮೆ ನಮಗಿರಲಿ ತಂದೆ
ಕೈ ಹಿಡಿದು ನೀ ನಡೆಸು ಮುಂದೆ ।।
ನಿನ್ನ ಈ ಮಕ್ಕಳನ್ನು ಪ್ರೇಮದಲಿ ನೀ ನೋಡು
ಈ ಶಾಲೆ ಎಂದೆಂದೂ ನಗುವಂತೆ ನೀ ಮಾಡು
ನಂಬಿದರೆ ಭಯವಿಲ್ಲ ನಂಬದಿರೆ ಬಾಳೆಲ್ಲ
ಅಂಬಿಗನೆ ನೀ ನಡೆಸು ಈ ಬಾಳ ನೌಕೆ
ಯಾವ ನೋವೇ ಬರಲಿ ಎದೆಗುಂದದಿರಲಿ
ಸತ್ಯ ಮಾರ್ಗದಿ ನಡೆವ ಶಕ್ತಿ ಕೊಡು ತಂದೆ ।।ಪ ।।
ಕಾನನದ ಸುಮವೊಂದು ಸೌರಭವ ತಾ ಸೂಸಿ
ಸಫಲತೆಯ ಪಡೆವಂತೆ ಮಾಡೆನ್ನ ತಂದೆ
ಸಿರಿಯೂ ಸಂಪದ ಬೇಡ ಯಾವ ವೈಭವ ಬೇಡ
ನಿನ್ನ ಕರುಣೆಯು ಒಂದೇ ಸಾಕೆಮಗೆ ತಂದೆ ।।ಪ।।
ಓಂ ಗಜಾನನ ವಿಘ್ನಹರಣ
ಸಕಲ ಪಾಪ ವಿಮೋಚನಾ।।
ಸರ್ವಕಾರ್ಯ ಸುಮಂಗಲ
ಕಾರ್ಯಪಾವನ ನಿರ್ಮಲಾ
ಶುಭರ್ಶಿವಾದವೇ ಜ್ಞಾನಕೆ
ನಿತ್ಯ ನೂತನ ಉಜ್ವಲ ।।ಪ ।।
ವಿದ್ಯೆಯಾಗರ ಬುದ್ಧಿ ಸಾಗರ
ಜ್ಞಾನದೀಪ ವಿದ್ಯಾಧರ
ಆದರ್ಶವೈ ನಿನ್ನ ಸದ್ಗುಣ
ಸಕಲ ಕಾರ್ಯಕೆ ಕಾರಣ।।ಪ ।।
ಕಾರ್ಯಸಿದ್ಧಿ ವಿನಾಯಕ
ಶೌರ್ಯ ಬುದ್ಧಿ ಪ್ರದಾಯಕ
ಸೌಮ್ಯಮೂರುತಿ ಶುಭಕರ
ಶರಣು ಶರಣು ಲಂಬೋದರ ।। ಪ ।।
No comments:
Post a Comment