-: ಭಕ್ತಿ ಗೀತೆ :-
ಪೂಜಿಸಲೆಂದೇ ಹೂಗಳ ತಂದೆ
ದರುಶನ ಕೋರಿ ನಾ ನಿಂದೆ।। ತೆರೆಯೋ
ಬಾಗಿಲನು ರಾಮ ।।ಪೂಜಿಸಲೆಂದೇ ।।
ಮೋಡದ ಮೇಲೆ ಚಿನ್ನದ ನೀರು
ಚೆಲ್ಲುತ ಸಾಗಿದೆ ಹೊನ್ನಿನ ತೇರು
ಮಾಣಿಕ್ಯದಾರುತಿ ಉಷೆ ತಂದಿಹಳು
ತಾಮ ಸವರನ್ನು ಸ್ವಾಮಿ ತೆರೆಯೋ
ಬಾಗಿಲನು ರಾಮ ।।ಪೂಜಿಸಲೆಂದೇ।।
ಒಲಿದರು ಚೆನ್ನ ಮುನಿದರೂ ಚೆನ್ನ
ನಿನ್ನಾಸರೆಯ ಬಾಳಿಗೆ ಚೆನ್ನ
ನಾ ನಿನ್ನ ಪಾದದ ಧೂಳಾದರು ಚೆನ್ನ
ಸ್ವೀಕರಿಸು ನನ್ನ ಸ್ವಾಮಿ ತೆರೆಯೋ
ಬಾಗಿಲನು ರಾಮ್ ।।ಪೂಜಿಸಲೆಂದೇ।।
**********************************************************************************
-: ಭಕ್ತಿ ಗೀತೆ :-
ನಿನ್ನ ನೋಡಲೆರೆಡು ಕಣ್ಣು ನನಗೆ ಸಾಲದಮ್ಮ
ಇನ್ನು ಇನ್ನು ನೋಡುವಾಸೆ ತುಂಬಿತಮ್ಮ
ಇನ್ನು ಕೋಟಿ ಜನುಮ ಬರಲಿ ನನಗೆ ಸಾಲದಮ್ಮ ।।೧।।
ಅಭಯ ಹಸ್ತ ನೋಡಿ ಜೀವ ಕುಣಿಯಿತಮ್ಮ
ನಿನ್ನ ಪಾದ ಕಮಲದಲ್ಲಿ ಶಿರವು ಬಾಗಿತಮ್ಮ
ಎಂಥ ಶಕ್ತಿ ನಿನ್ನಲಿದೆ ಶಾರದಮ್ಮ
ನಿನ್ನ ನೋಡುವಾಸೆ ನನಗೆ ಬಂದಿತಮ್ಮ ।।೨।।
ರತ್ನದಂಥ ಮಾತುಗಳನು ಆಡಿಸಮ್ಮ
ಒಳ್ಳೆ ರಾಗ ಭಾವ ಭಕ್ತಿ ಹಾಡಿಸಮ್ಮ
ಅಲ್ಲಿ ಇಲ್ಲಿ ಓಡೋ ಆಸೆ ನಮ್ಮದಮ್ಮ
ಬೇಗ ಬಂದು ನೆಲೆಸು ಇಲ್ಲಿ ಶಾರದಮ್ಮ
ಬೇರೆ ಏನು ಬೇಕು ಎಂದು ಕೇಳೆನಮ್ಮ
ನಮ್ಮ ನೆನಪಿಗೆ ತಂತಿ ಮಾಡಿ ನುಡಿಸು ಶಾರದಮ್ಮ ।।೩।।
**********************************************************************************
-: ಭಕ್ತಿ ಗೀತೆ :-
ತಾಯಿ ಶಾರದೆ ಲೋಕ ಪೂಜಿತೆ
ಜ್ಞಾನದಾತೆ ನಮೋಸ್ತುತೇ
ಪ್ರೇಮದಿಂದಲಿ ಸಲಹು ಮಾತೇ
ನೀಡು ಸನ್ಮತಿ ಸೌಖ್ಯದಾತೆ ।।
ಅಂಧಕಾರವ ಓಡಿಸು
ಜ್ಞಾನ ಜ್ಯೋತಿಯ ಬೆಳಗಿಸು
ಹೃದಯ ಮಂದಿರದಲ್ಲಿ ನೆಲೆಸು
ಚಿಂತೆಯ ಅಳಿಸು ಶಾಂತಿಯ ಉಳಿಸು ।।
ನಿನ್ನ ಮಡಿಲಿನ ಮಕ್ಕಳಮ್ಮ ನಿನ್ನ ನಂಬಿದ ಕಂದರಮ್ಮ
ನಿನ್ನ ಕರುಣೆಯ ಬೆಳಗಲಮ್ಮ ನಮ್ಮ ಕೋರಿಕೆ ಆಲಿಸಮ್ಮ
ಒಳ್ಳೆ ಮಾತುಗಳಾಡಿಸು ಒಳ್ಳೆ ಕೆಲಸವ ಮಾಡಿಸು
ಒಳ್ಳೆ ದಾರಿಯಲೆಮ್ಮ ನಡೆಸು
ವಿದ್ಯೆಯ ಕಲಿಸು ಆಸೆ ಪೊರೈಸು ।।೨।।
**********************************************************************************
-: ಗುರು ರಾಘವೇಂದ್ರ ಭಕ್ತಿ ಗೀತೆ :-
ರಾಯರ ಕಂಡಿರಾ ಶ್ರೀ ರಾಘವೇಂದ್ರನ ಕಂಡಿರಾ
ಮಂತ್ರಾಲಯದಲ್ಲಿ ವಾಸಿಪರಿವರು
ಮೂಲ ರಾಮನ ಪೂಜಿಪರಿವರು
ಭಕ್ತರ ಸಲಹುವ ರಾಯರು ಇವರು
ಮುಕ್ತಿಯ ಪಡಿಸುವ ಗುರುಗಳು ಇವರು ।।೧।।
ಪ್ರಥಮದಲ್ಲಿ ಪ್ರಹ್ಲಾದರಾಯರು
ದ್ವೀತಿಯದಲ್ಲಿ ಶ್ರೀ ವ್ಯಾಸರಾಯರು
ಶ್ರೇಷ್ಠ ಪುರಂದರ ಭಕ್ತರು ಇವರು
ರಾಯರ ಕಂಡಿರಾ ಶ್ರೀ ರಾಘವೇಂದ್ರನ ಕಂಡಿರಾ।।೨।।
**********************************************************************************
-: ಭಕ್ತಿ ಗೀತೆ :-
ಫಕ್ಕೀರೇಶ ಬಂದಾನ ಬಾಗಿಲಲಿ ನಿಂತಾನ
ಮುತ್ತಿನ ಆರುತಿ ಎತ್ತಿ ಬಾ ಎಂದು ಕರೆಯಿರಿ
ಬಾ ಎಂದು ಕರೆಯಿರಿ ಬಾಲೆಯರು ಬನ್ನಿರೆ
ಪನ್ನೀರ ತನ್ನಿರಿ ಪಾದವ ತೊಳೆಯಿರಿ ।।ಪ।।
ಹರಗುರುವು ಬಂದಾನ ಹಜರತ್ ಬಂದಾನ
ಶಿರಹಟ್ಟಿ ಫಕ್ಕಿರೇಶ ಬಾಗಿಲಿಗೆ ಬಂದಾನ
ಮನೆ ಹಸನ ಮಾಡಿರೆ ತೋರಣದ ಕಟ್ಟಿರೆ
ಬಾ ಎಂದು ಮನೆಗೆ ಕರೆಯಿರಿ ಚರಣ ತೊಳೆದು ಪೂಜಿಸಿರೆ ।।೧।।
ಶಿವನ ಅವತಾರಿ ಅವನು ಶಿರಹಟ್ಟಿ ಫಕ್ಕೀರೇಶ
ಶ್ರೀ ಫಕ್ಕೀರೇಶನಿಗೆ ನಮಿಸಿ ಪತ್ರಿಪುಷ್ಪವ ಧರಿಸಿ
ಭಸ್ಮ ಗಂಧವ ಹಚ್ಚಿ ಕರ್ಪೂರದಾರುತಿ ಬೆಳಗಿರೆ ।।೨।।
ಮಾಂಗಲ್ಯ ಸ್ಥಿರವಾಗಿ ಎಂದೆಂದೂ ಬೆಳಕಾಗಿ
ವಂಶದ ಕುಡಿ ಚಿಗುರಿ ಬಾಳು ಹಸನಾಗಿ
ಎಂದೆಂದೂ ಆರದ ನಂದಾದೀಪವು ತನಗಾಗಿ
ಇರುವಂತೆ ಹರಸೆಂದು ವರವನ್ನು ಬೇಡೋಣ ।।೩।।
**********************************************************************************
-: ಭಕ್ತಿ ಗೀತೆ :-
ಮೃಡಹರಿ ಹಯಮುಖ ರೋಡೆಯೊಳೆ ನಿನ್ನಯಾ
ಅಡಿಗಡಿಗೆರಗುವೆ ಅಮ್ಮ ಬ್ರಹ್ಮನರಾಣೆ
ಕೊಡುಬೇಗ ದಿವ್ಯಮತಿ ಸರಸ್ವತಿ
ಕೊಡುಬೇಗ ದಿವ್ಯಮತಿ ।।ಪ।।
ಇಂದಿರ ರಮಣರ ಹಿರಿಯ ಸೊಸೆಯು
ನೀನು ಬಂದೆನ್ನ ವದನದಲಿ ಸಿಂಧು
ನಾಮವ ನುಡಿಸಿ ಕೊಡುಬೇಗ ದಿವ್ಯಮತಿ
ಸರಸ್ವತಿ ಕೊಡುಬೇಗ ದಿವ್ಯಮತಿ ।।೧।।
ಅಖಿಲ ವಿದ್ಯಾಭಿಮಾನಿ ಅಜನ ಪಟ್ಟದರಾಣಿ
ಸುಖವಿತ್ತು ಪಾಲಿಸೆ ಸುಜನ ಶಿರೋಮಣಿ
ಕೊಡುಬೇಗ ದಿವ್ಯಮತಿ ಸರಸ್ವತಿ
ಕೊಡುಬೇಗ ದಿವ್ಯಮತಿ ।।೨।।
ಪತಿತ ಪಾವನೆ ನೀನು ಗತಿಯೆಂದು
ನಂಬಿದೆ ಸತತ ಪುರಂದರ ವಿಠಲನ
ಆರಾಧಿಸೆ ಕೊಡುಬೇಗ ದಿವ್ಯಮತಿ
ಸರಸ್ವತಿ ಕೊಡುಬೇಗ ದಿವ್ಯಮತಿ ।।೩।।
**********************************************************************************
No comments:
Post a Comment