Sunday, August 26, 2018

ಯಾವ ಮೋಹನ ಮುರಳಿ ಕರೆಯಿತು

ರಚನೆ: ಎಂ. ಗೋಪಾಲಕೃಷ್ಣ ಅಡಿಗ 
ಗಾಯನ: ರತ್ನಮಾಲಾ ಪ್ರಕಾಶ್, ರಾಜು ಅನಂತಸ್ವಾಮಿ & ಸಂಗೀತ ಕಟ್ಟಿ 
ಸಂಗೀತ: ಮನೋಮೂರ್ತಿ

ಯಾವ ಮೋಹನ ಮುರಳಿ ಕರೆಯಿತು
ದೂರ ತೀರಕೆ ನಿನ್ನನು ?
ಯಾವ ಬೃಂದಾವನವು ಸೆಳೆಯಿತು
ನಿನ್ನ ಮಣ್ಣಿನ ಕಣ್ಣನು ? //ಪ//

ಹೂವು ಹಾಸಿಗೆ ಚಂದ್ರ ಚಂದನ,
ಬಾಹು ಬಂಧನ, ಚುಂಬನ ;
ಬಯಕೆ ತೋಟದ ಬೇಲಿಯೊಳಗೆ
ಕರಣಗಳದೀ ರಿಂಗಣ; //೧//

ಸಪ್ತ ಸಾಗರದಾಚೆ ಎಲ್ಲೊ..
ಸುಪ್ತ ಸಾಗರ ಕಾದಿದೆ
ಮೊಳೆಯದೆಲೆಗಳ ಮೂಕ ಮರ್ಮರ
ಇಂದು ಇಲ್ಲಿಗೂ ಹಾಯಿತೆ? //೨//

ವಿವಶವಾಯಿತು ಪ್ರಾಣ - ಹಾ: !!
ಪರವಶವು ನಿನ್ನೀ ಚೇತನ;
ಇರುವುದೆಲ್ಲವ ಬಿಟ್ಟು
ಇರದುದರೆಡೆಗೆ ತುಡಿವುದೇ ಜೀವನ? //೩//

ಯಾವ ಮೋಹನ ಮುರಳಿ ಕರೆಯಿತು
ಇದ್ದಕಿದ್ದಲೇ ನಿನ್ನನು?
ಯಾವ ಬೃಂದಾವನವು ಚಾಚಿತು
ತನ್ನ ಮಿಂಚಿನ ಕೈಯನು? //೪//

ಯಾವ ಮೋಹನ ಮುರಳಿ ಕರೆಯಿತು
ದೂರ ತೀರಕೆ ನಿನ್ನನು....




Saturday, August 25, 2018

ಅಣ್ಣ ತಂಗಿ (2005)

ಚಲನಚಿತ್ರ: ಅಣ್ಣ ತಂಗಿ (2005)
ಗಾಯಕರು: ಎಸ್. ಪಿ. ಬಾಲಸುಬ್ರಮಣ್ಯಂ, ಕೆ. ಎಸ್. ಚಿತ್ರಾ 
ಸಾಹಿತ್ಯ & ಸಂಗೀತ: ಹಂಸಲೇಖ 
ನಟನೆ: ಶಿವರಾಜಕುಮಾರ್, ರಾಧಿಕಾ, ದೀಪು 
ನಿರ್ದೇಶನ: ಓಂ ಸಾಯಿ ಪ್ರಕಾಶ್. 


ಅಣ್ಣ ತಂಗಿಯರ ಈ ಬಂಧ
ಜನುಮ ಜನುಮದ ಅನುಬಂಧ
ಅಣ್ಣ ತಂಗಿಯರ ಈ ಬಂಧ
ಜನುಮ ಜನುಮದ ಅನುಬಂಧ
ಜೀವಕ್ಕೆ ಕೊರಳು, ದೇಹಕ್ಕೆ ನೆರಳು
ನಾವಾಗಲೆಂದು ಹರಸುತಿದೆ
ಈ ರಕ್ಷಾ ಬಂಧನ....//೨ ಸಲ //

ನೀ ಹುಟ್ಟಿ ಬಂದ ಶುಭದಿನವೇ
ಈ ರಾಖಿ ಹಬ್ಬ ಬಂದಿತ್ತು..
ಸೋದರಿಕೆಯೊಂದು ವರವೆಂದು
ಈ ರಾಖಿ ಸಾಕ್ಷಿ ಹೇಳಿತ್ತು...

ತಂಗಿಯು ಹುಟ್ಟಿದಾಕ್ಷಣ ಅಣ್ಣನ
ಪದವಿ ಹುಟ್ಟಿತು
ತಂಗಿಯು ಹುಟ್ಟಿದಾಕ್ಷಣ ಅಣ್ಣನ
ಪದವಿ ಹುಟ್ಟಿತು
ಗಂಡಿಗೆ ಗೌರವದ ಧರೆ ಏರಿತ್ತು...

ಮುದ್ಧಾಗಿ ನೀನು ಅಣ್ಣ ಅಣ್ಣ
ಅನ್ನೋದೇ ನನಗೆ ಓಂಕಾರ..
ನನ್ನ ಆಯುವೆಲ್ಲ ನಿನಗಾಗಿ ತಾನೆ .
ಧೀರ್ಘಾಯುಷ್ಮಾನ ಭವಃ... //ಪ //

ದೇವರುಗಳೆಲ್ಲ ಧರೆಗಿಳಿದು
ಮಡಿ ತುಂಬ ವರವ ತುಂಬಿದರು...
ಈ ಅಣ್ಣನೆಂಬ ವರ ಸಾಕು
ನಾ ಒಲ್ಲೆ ಎನುವೆ ಕೈ ಮುಗಿದು....

ಅಣ್ಣ ಅನ್ನೋ ಕೂಗಲಿ
ಎಲ್ಲ ದೇವರಿರುವನು...
ಅಣ್ಣ ಅನ್ನೋ ಕೂಗಲಿ
ಎಲ್ಲ ದೇವರಿರುವನು...
ಜನುಮಕೆ ಒಬ್ಬ ಅಣ್ಣ ಸಾಕೆನುವೆನರು....

ತವರಾಗಿ ನೀನು ತಂಗಿ ತಂಗಿ
ಅನ್ನೋದೇ ನನಗೆ ಶ್ರೀರಕ್ಷೆ...
ಎದೆಯಾದೆ ನೀನು ಹೆಗಲಾದೇ ನೀನು
ಭ್ರಾತೃದೇವೋ ಭವಃ... //ಪ//

ಅಣ್ಣ ತಂಗಿಯರ ಈ ಬಂಧ
ಜನುಮ ಜನುಮದ ಅನುಬಂಧ
ಅಣ್ಣ ತಂಗಿಯರ ಈ ಬಂಧ
ಜನುಮ ಜನುಮದ ಅನುಬಂಧ
ಜೀವಕ್ಕೆ ಕೊರಳು, ದೇಹಕ್ಕೆ ನೆರಳು
ನಾವಾಗಲೆಂದು ಹರಸುತಿದೆ
ಈ ರಕ್ಷಾ ಬಂಧನ....
ಈ ರಕ್ಷಾ ಬಂಧನ....

ಭ್ರಾತೃತ್ವ ಮತ್ತು ಸಹೋದರತೆಯ ಸಂಕೇತವಾದ ರಾಖಿ

ಎಲ್ಲರಿಗೂ ರಕ್ಷಾ ಬಂಧನದ ಶುಭಾಶಯಗಳು... 


Wednesday, August 15, 2018

ವಿಶ್ವ ಮಾನವ ಗೀತೆ - ಓ ನನ್ನ ಚೇತನ

ಹಾಡು: ಓ ನನ್ನ ಚೇತನ 
ರಚನೆ: ರಾಷ್ಟ್ರಕವಿ ಕುವೆಂಪು 
ಗಾಯನ: ಶ್ರೀ ಮೈಸೂರು ಅನಂತಸ್ವಾಮಿ 
ಸಂಗ್ರಹ: ಭಾವ ಸಂಗಮ 

ಓ ನನ್ನ ಚೇತನ,
ಆಗು ನೀ ಅನಿಕೇತನ!

ರೂಪರೂಪಗಳನು ದಾಟಿ,
ನಾಮಕೋಟಿಗಳನು ಮೀಟಿ,
ಎದೆಯ ಬಿರಿಯೆ ಭಾವ ದೀಟಿ,
ಓ ನನ್ನ ಚೇತನ,
ಆಗು ನೀ ಅನಿಕೇತನ!

ನೂರು ಮತದ ಹೊಟ್ಟ ತೂರಿ,
ಎಲ್ಲ ತತ್ವದಲ್ಲೆ ಮೀರಿ,
ನಿರ್ದಿಗಂತವಾಗಿ ಏರಿ,
ಓ ನನ್ನ ಚೇತನ,
ಆಗು ನೀ ಅನಿಕೇತನ!

ಎಲ್ಲಿಯೂ ನಿಲ್ಲದಿರು;
ಮನೆಯನೆಂದೂ ಕಟ್ಟದಿರು ;
ಕೊನೆಯನೆಂದೂ ಮುಟ್ಟದಿರು;
ಓ ಅನಂತವಾಗಿರು!
ಓ ನನ್ನ ಚೇತನ,
ಆಗು ನೀ ಅನಿಕೇತನ!

ಅನಂತ ತಾನ್ ಅನಂತವಾಗಿ,
ಆಗುತಿಹನು ನಿತ್ಯಯೋಗಿ;
ಅನಂತ ನೀ ಅನಂತವಾಗು;
ಆಗು, ಆಗು, ಆಗು, ಆಗು,
ಓ ನನ್ನ ಚೇತನ,
ಆಗು ನೀ ಅನಿಕೇತನ!

Tuesday, August 14, 2018

ನಿತ್ಯೋತ್ಸವ

ರಚನೆ: ಕೆ ಎಸ್ ನಿಸಾರ್ ಅಹ್ಮದ್ 
ಸಂಗೀತ: ಮೈಸೂರು ಅನಂತಸ್ವಾಮಿ 
ಗಾಯನ: ಶಾರದಾ ಭಗವತ್ತುಲ, ರವಿ ಮೂರೂರ 

ಜೋಗದ ಸಿರಿ ಬೆಳಕಿನಲ್ಲಿ ತುಂಗೆಯ ತೆನೆ ಬಳುಕಿನಲ್ಲಿ,
ಸಹ್ಯಾದ್ರಿಯ ಲೋಹದದಿರ ಉತ್ತುಂಗದ ನಿಲುಕಿನಲ್ಲಿ,
ನಿತ್ಯ ಹರಿದ್ವರ್ಣವನದ ತೇಗ ಗಂಧ ತರುಗಳಲ್ಲಿ,
ನಿತ್ಯೋತ್ಸವ ತಾಯಿ, ನಿತ್ಯೋತ್ಸವ ನಿನಗೆ....

ಇತಿಹಾಸದ ಹಿಮದಲ್ಲಿನ ಸಿಂಹಾಸನ ಮಾಲೆಯಲ್ಲಿ,
ಗತ ಸಾಹಸ ಸಾರುತಿರುವ ಶಾಸನಗಳ ಸಾಲಿನಲ್ಲಿ,
ಓಲೆ ಗರಿಯ ಸಿರಿಗಳಲ್ಲಿ, ದೇಗುಲಗಳ ಭಿತ್ತಿಗಳಲಿ,
ನಿತ್ಯೋತ್ಸವ ತಾಯಿ, ನಿತ್ಯೋತ್ಸವ ನಿನಗೆ....

ಹಲವೆನ್ನದ ಹಿರಿಮೆಯೆ, ಕುಲವೆನ್ನದ ಗರಿಮೆಯೆ,
ಸದ್ವಿಕಾಸಶೀಲ ನುಡಿಯ ಲೋಕಾವೃತ ಸೀಮೆಯೆ,
ಈ ವತ್ಸರ ನಿರ್ಮತ್ಸರ ಮನದುದಾರ ಮಹಿಮೆಯೆ,
ನಿತ್ಯೋತ್ಸವ ತಾಯಿ, ನಿತ್ಯೋತ್ಸವ ನಿನಗೆ....




Saturday, July 28, 2018

ಬಾರಿಸು ಕನ್ನಡ ಡಿಂಡಿಮವ

ಹಾಡು : ಬಾರಿಸು ಕನ್ನಡ ಡಿಂಡಿಮವ 
ರಚನೆ : ಕುವೆಂಪು 
ಗಾಯನ : ಶಿವಮೊಗ್ಗ ಸುಬ್ಬಣ್ಣ 

ಬಾರಿಸು ಕನ್ನಡ ಡಿಂಡಿಮವ 
ಓ ಕರ್ನಾಟಕ ಹೃದಯಶಿವ 
ಬಾರಿಸು ಕನ್ನಡ ಡಿಂಡಿಮವ 

ಸತ್ತಂತಿಹರನು ಬಡಿದೆಚ್ಚರಿಸು 
ಕಚ್ಚಾಡುವರನು ಕೂಡಿಸಿ ಒಲಿಸು 
ಹೊಟ್ಟೆಯ ಕಿಚ್ಚಿಗೆ ಕಣ್ಣೀರ್ ಸುರಿಸು 
ಒಟ್ಟಿಗೆ ಬಾಳುವ ತೆರದಲಿ ಹರಸು 

ಬಾರಿಸು ಕನ್ನಡ ಡಿಂಡಿಮವ  

ಚೈತ ಶಿವೇತರ ಕೃತಿ ಕೃತಿಯಲ್ಲಿ 
ಮೂಡಲಿ ಮಂಗಳ ಮತಿ ಮತಿಯಲ್ಲಿ 
ಕವಿ  ಋಷಿ ಸಂತರ ಆದರ್ಶದಲಿ 
ಸರ್ವೋದಯವಾಗಲಿ ಸರ್ವರಲಿ 

ಬಾರಿಸು ಕನ್ನಡ ಡಿಂಡಿಮವ 


ಉಳಿದವರು ಕಂಡಂತೆ - ಘಟ್ಟದ ಅಂಚಿದಾಯೇ

ಚಲನಚಿತ್ರ : ಉಳಿದವರು ಕಂಡಂತೆ   
ಗಾಯಕರು : ವಿಜಯ್ ಪ್ರಕಾಶ್, ಬಿ. ಅಜನೀಶ್ ಲೋಕನಾಥ್.   
ನಟನೆ : ರಕ್ಷಿತ್ ಶೆಟ್ಟಿ, ಕಿಶೋರ್, ಯಜ್ಞಾ ಶೆಟ್ಟಿ, ತಾರಾ     

ಘಟ್ಟದ ಅಂಚಿದಾಯೇ, ತೆಂಕಾಯಿ ಬತ್ತ್ ತೂಯೆ,   
ಆಲೆನ ತೆಲ್ಕೆದ ಪೊರ್ಲುಗು ತಾದಿ ನಾಡಿಯೇ. 

ಘಾಟಿಯಾ ಇಳಿದು, ತೆಂಕಣ ಬಂದೂ,   
ಅವಳಾ ನೋಡಿ ನಿಂತನೂ..
ಕಡಲ ಬೀಸೋ ಗಾಳಿಗವಳು ಮಾತನಾಡಲೂ,     
ಕೇಳದ ಪಿಸುಮಾತಿಗಿವನು ಮರುಳನಾದನೂ..
ನಗ್ ನಗ್ತಾ ನನ್ನಾ ಮನಸಾ
ಎತ್ಕಂಡು ಒಯ್ತವಳಲ್ಲೋ,
ಅಯ್ಯಯ್ಯಯ್ಯೋ ನಗ್ತಾವ್ಳೋ(೨ ಸಲ). 

ಮನದ ಹಿಂದಾರಿಲಿ ಬರದೇ ಕವಲು,   
ಆ ಕವಲು ದಾರಿಗೆ ಕಾವಲಾ ?,
ಮರುಭೂಮಿಯಲಿ ಹೆಜ್ಜೆಯ ಗುರುತು,   
ಆ ಗುರುತೇ ನಿನ್ನಯ ನೆರಳಾ ?

ಮನಸಾ ಬಿಚ್ಚಿಟ್ಟವನ, ಬರೆಯಲು ಮೌನದ ಕವನಾ,   
ಪದಗಳೆ ಇಲ್ಲದ ಸಾಲ, ಇಳಿಸಲು ಹಾಳೆಯ ಮೇಳ.
ಸೇರಲು ರಂಗು ಮಾಸಿತು ಶಾಹಿಯ ಗೀಚನೂ.. 

ವೇಷಧಾರಿ: ಅಕ್ಕ ಎಯಿನ ಮೀನು ಉಂಡು.
ಯಜ್ಞ:  ಭೂತಾಯಿ, ಬಂಗುಡೆ.
ವೇಷಧಾರಿ: ಭೂತಾಯಿ ದಾನೆ ಫ಼್ರೆಶಾ ?
ಯಜ್ಞ: ಅನ್ದ್. ತೂಲೆ. 

ಸಮಯ ಸಾಗುವ ಗತಿಯ,   
ತಡೆಯುವ ಪರಿಯಾ, ನಾ ಕಾಣೆನೂ,
ಕಳೆವಾ ಸನಿಹದ ಕ್ಷಣವಾ,   
ಮೌನದ ಸ್ವರವಾ ಕೂಡಿಡುವೆನೂ. 
ಶ್ರಾವಣ ಕಳೆದೂ, ಮರಳನು ಅಳೆದೂ,   
ದೂರವ ಸವಿದು ಕೂತನೂ..
ಕಡಲ ಬೀಸೋ ಗಾಳಿಗವಳು ಮಾತನಾಡಲೂ,   
ಕೇಳದ ಪಿಸುಮಾತಿಗಿವನು ಮರುಳನಾದನೂ.
ನಗ್ ನಗ್ತಾ ನನ್ನಾ ಮನಸಾ
ಎತ್ಕಂಡು ಒಯ್ತವಳಲ್ಲೋ,
ಅಯ್ಯಯ್ಯಯ್ಯೋ ನಗ್ತಾವ್ಳೋ(೨). 

ಘಟ್ಟದ ಅಂಚಿದಾಯೇ, ತೆಂಕಾಯಿ ಬತ್ತ್ ತೂಯೆ,   
ಆಲೆನ ತೆಲ್ಕೆದ ಪೊರ್ಲುಗು ತಾದಿ ನಾಡಿಯೇ.


Saturday, July 16, 2016

ನೀ ಹಿಂಗ ನೋಡಬ್ಯಾಡ ನನ್ನ

ರಚನೆ: ವರಕವಿ "ದ.ರಾ.ಬೇಂದ್ರೆ "
ಗಾಯನ: ರಾಜಕುಮಾರ್ ಭಾರತಿ


ಅಂ ಅಂ....  ಅಂ .... ಅಂ... ಅಂ....
ನೀ ಹೀಂಗ ನೋಡಬ್ಯಾಡ ನನ್ನ
ನೀ ಹೀಂಗ ನೋಡಿದರೆ ನನ್ನ
ತಿರುಗಿ ನಾ ಹ್ಯಾಂಗ ನೋಡಲೇ ನಿನ್ನ !

ನೀ ಹೀಂಗ ನೋಡಬ್ಯಾಡ ನನ್ನ
ನೀ ಹೀಂಗ ನೋಡಿದರೆ ನನ್ನ
ತಿರುಗಿ ನಾ ಹ್ಯಾಂಗ ನೋಡಲೇ ನಿನ್ನ !

ದಾರೀಲೆ ನೆನೆದೆ.. ಕೈ ಹಿಡಿದೆ ನೀನು
ತಣ್ಣಾಗ ಅಂತ ನಾ ತಿಳಿದು..
ಬಿಡವಲ್ಲಿ ಇನ್ನೂನು ಬೂದಿ ಮುಚ್ಚಿದ ಕೆಂಡಾ ಇದಂತಾ ಹೊಳೆದು
ಮುಗಿಲಿನ ಕಪ್ಪರಿಸಿ ನೆಲಕ ಬಿದ್ದರಾ ನೆಲಕ ನೆಲಿ ಎಲ್ಲಿನ್ನ ?
ಆ ಗಾದಿಮಾತು ನಂಬಿ ನಾನು ದೇವರಂತ ತಿಳಿದಿಯೇನ ನೀ ನನ್ನ ?


ನೀ ಹೀಂಗ ನೋಡಬ್ಯಾಡ ನನ್ನ
ನೀ ಹೀಂಗ ನೋಡಿದರೆ ನನ್ನ
ತಿರುಗಿ ನಾ ಹ್ಯಾಂಗ ನೋಡಲೇ ನಿನ್ನ !

ಇಬ್ಬನಿ ತೊಳೆದರು ಹಾಲು ಮೆತ್ತಿದಾ ಕವಳ ಕಾಂಟೆಯಾ ಹಣ್ಣು
ಹೊಳೆ ಹೊಳೆವ ಹಾಂಗ ಕಣ್ಣಿರುವ ಹೆಣ್ಣ ಹೇಳು ನಿನ್ನವೇನ ಈ ಕಣ್ಣು?
ದಿಲಿಲಾಗಿ ಅನ್ನತದ ಜೀವ ನಿನ್ನ ಕಣ್ಣಾರೆ ಕಂಡು ಒಮ್ಮಿಗಿಲ
ಹುಣ್ಣಿಮೆ ಚಂದಿರನ ಹೆಣಾ ಬಂತು ಮುಗಿಲಾಗ ತೇಲತಾ  ಹಗಲ

ನೀ ಹೀಂಗ ನೋಡಬ್ಯಾಡ ನನ್ನ
ನೀ ಹೀಂಗ ನೋಡಿದರೆ ನನ್ನ
ತಿರುಗಿ ನಾ ಹ್ಯಾಂಗ ನೋಡಲೇ ನಿನ್ನ !

ನಿನ್ನ ಕಣ್ಣಿನ್ಯಾಗ ಕಾಲೂರಿ ಮಳೆಯು ನಡ-ನಡಕ ಹುಚ್ಚು ನಗಿ ಯಾಕ?
ಹನಿಒಡೆಯಲಿಕ್ಕ ಬಂದಂತ ಮೋಡ ತಡೆದ್ಹಾಂಗ ಗಾಳಿಯಾ ನೆವಕ
ಅತ್ತಾರೆ ಅತ್ತು ಬಿಡು ಹೊನಲು ಬರಲಿ ನಕ್ಕ್ಯಾಕೆ ಮರಸತೀ ದುಃಖ
ಎದೆ ಬಡಿಸಿ ಕೆಡವು ಬಿರಿಗಣ್ಣು ಬ್ಯಾಡ ತುಟಿ ಕಚ್ಚಿ ಹಿಡಿಯದಿರು ಬಿಕ್ಕ

ನೀ ಹೀಂಗ ನೋಡಬ್ಯಾಡ ನನ್ನ
ನೀ ಹೀಂಗ ನೋಡಿದರೆ ನನ್ನ
ತಿರುಗಿ ನಾ ಹ್ಯಾಂಗ ನೋಡಲೇ ನಿನ್ನ !

ನೀ ಹೀಂಗ ನೋಡಬ್ಯಾಡ ನನ್ನ
ನೀ....  ಹೀಂಗ ನೋಡಿದರೆ ನನ್ನ
ತಿರುಗಿ ನಾ ಹ್ಯಾಂಗ ನೋಡಲೇ ನಿನ್ನ !
ಅಂ ಅಂ....  ಅಂ .... ಅಂ... ಅಂ....