Monday, July 19, 2021

ಸ್ತೋತ್ರಗಳು


 ಓಂ ಭೂರ್ಭವ ಸ್ವಹ 

ತತ್ಸ ವಿದುರ ವರಣ್ಯಂ ಭರ್ಗೋದೇವ್ 

ಶ್ಯದಿಮಹಿ ದಿಯೋಯಾನ ಪ್ರಚೋದಯಾತ್ ।। 


ಓಂ ಸರ್ವಮಂಗಲ ಮಾಂಗಲ್ಯಮ್ ಶಿವೆ 

ಸರ್ವಾತ್ ಸಾಧಿಕೆ ಶರಣ್ಯೇ 

ತ್ರಯಂಬಿಕೆ ಗೌರಿ ನಾರಾಯಣೇ ನಮೋಸ್ತುತೇ ।।


ಶ್ರೀ ಗಜಾನನ ಭೂತ ಗಣಾದಿ ಸೇವಿತಂ 

ಕಪಿತ್ ಜಂಬೂ ಫಲಸಾರ ಭಕ್ಷಿತಂ 

ಉಮಾ ಸುತಂ ಶೋಕ ವಿನಾಶ ಕಾರಣಂ 

ನಮಾಮಿ ವಿಘ್ನೇಶ್ವರ ಪಾದ ಪಂಕಜಂ ।।




Saturday, February 29, 2020

ಶ್ರೀ ಮೊರಾರ್ಜಿ ದೇಸಾಯಿ

ಜನ್ಮ ದಿನದ ಅಂಗವಾಗಿ ಅವರ ಕಿರು ಪರಿಚಯ:  

ಮೊರಾರ್ಜಿ ದೇಸಾಯಿ ಮೊರಾರ್ಜಿ (29 ಫೆಬ್ರವರಿ 1896 - 10 ಏಪ್ರಿಲ್ 1995) ಒಬ್ಬ ಭಾರತೀಯ ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು ಮತ್ತು 1977 ರಿಂದ 1979 ರವರೆಗೆ ಭಾರತದಲ್ಲಿ 4 ನೇ ಪ್ರಧಾನಿಯಾಗಿ(ಜನತಾ ಪಾರ್ಟಿ) ಸರ್ಕಾರಕ್ಕೆ ಸೇವೆ ಸಲ್ಲಿಸಿದರು. ರಾಜಕಾರಣದಲ್ಲಿ ಅವರ ಸುದೀರ್ಘ ವೃತ್ತಿಜೀವನದ ಅವಧಿಯಲ್ಲಿ, ಅವರು ಹಲವಾರು ಪ್ರಮುಖ ಹುದ್ದೆಗಳನ್ನು ಸರ್ಕಾರದಲ್ಲಿ ಹೊಂದಿದ್ದರು: ಮುಂಬಯಿ ರಾಜ್ಯದ ಮುಖ್ಯಮಂತ್ರಿ, ಗೃಹ ಸಚಿವ, ಹಣಕಾಸು ಸಚಿವ ಮತ್ತು ಭಾರತದ ಉಪ ಪ್ರಧಾನ ಮಂತ್ರಿ. ಅಂತರರಾಷ್ಟ್ರೀಯ ಸನ್ನಿವೇಶದಲ್ಲಿ, ದೇಸಾಯಿ ತಮ್ಮ ಶಾಂತಿ ಕ್ರಿಯಾವಾದಕ್ಕಾಗಿ ಅಂತಾರಾಷ್ಟ್ರೀಯ ಖ್ಯಾತಿಯನ್ನು ಪಡೆದಿದ್ದಾರೆ ಮತ್ತು ಎರಡು ಪ್ರತಿಸ್ಪರ್ಧಿ ದಕ್ಷಿಣ ಏಷ್ಯಾದ ರಾಜ್ಯಗಳು, ಪಾಕಿಸ್ತಾನ ಮತ್ತು ಭಾರತ ನಡುವೆ ಶಾಂತಿ ಆರಂಭಿಸಲು ಪ್ರಯತ್ನಗಳನ್ನು ಮಾಡಿದ್ದಾರೆ. 1974 ರಲ್ಲಿ ಭಾರತದ ಮೊದಲ ಪರಮಾಣು ಸ್ಫೋಟವಾದ ನಂತರ, ದೇಸಾಯಿ ಚೀನಾ ಮತ್ತು ಪಾಕಿಸ್ತಾನದೊಂದಿಗೆ ಸ್ನೇಹ ಸಂಬಂಧವನ್ನು ಪುನಃಸ್ಥಾಪಿಸಲು ಸಹಾಯ ಮಾಡಿದರು ಮತ್ತು 1971 ರ ಇಂಡೋ-ಪಾಕಿಸ್ತಾನಿ ಯುದ್ಧದಂತಹ ಸಶಸ್ತ್ರ ಸಂಘರ್ಷವನ್ನು ತಪ್ಪಿಸಲು ಪ್ರತಿಜ್ಞೆ ಮಾಡಿದರು.  

ಆರಂಭಿಕ ಜೀವನ 

ಮೊರಾರ್ಜಿ ದೇಸಾಯಿ ಅವರು 1896 ರ ಫೆಬ್ರುವರಿ 29 ರಂದು ಮುಂಬಯಿ ಪ್ರೆಸಿಡೆನ್ಸಿ (ಈಗ ಗುಜರಾತ್ನಲ್ಲಿ) ನ ಬಲ್ಸೇರಿ ಜಿಲ್ಲೆಯ ಭಾಡೆಲಿ ಗ್ರಾಮದಲ್ಲಿ ಜನಿಸಿದರು. ಎಂಟು ಮಕ್ಕಳು ಅತ್ಯಂತ ಹಿರಿಯರು. ಅವರ ತಂದೆ ಶಾಲೆಯ ಶಿಕ್ಷಕರಾಗಿದ್ದರು. ದೇಸಾಯಿ ಸೌರಾಷ್ಟ್ರದಲ್ಲಿರುವ ಕುಂಡ್ಲಾ ಶಾಲೆಯಲ್ಲಿ ತನ್ನ ಪ್ರಾಥಮಿಕ ಶಾಲಾ ಶಿಕ್ಷಣಕ್ಕೆ ಒಳಗಾದರು, ಸಾವರ್ಕುಂಡ್ಲಾ ಈಗ ಜೆ.ವಿ. ಮೋದಿ ಶಾಲೆ ಎಂದು ಕರೆಯುತ್ತಾರೆ ಮತ್ತು ನಂತರ ಬಲ್ ಅವಾ ಬಾಯ್ ಹೈಸ್ಕೂಲ್, ವಲ್ಸಾದ್ ಸೇರಿದರು. ಮುಂಬೈಯ ವಿಲ್ಸನ್ ಕಾಲೇಜ್ನಿಂದ ಪದವೀಧರರಾದ ನಂತರ, ಅವರು ಗುಜರಾತ್ನಲ್ಲಿ ನಾಗರಿಕ ಸೇವೆಗೆ ಸೇರಿದರು. ಅಲ್ಲಿ 1927-28ರ ಗಲಭೆಗಳ ಸಮಯದಲ್ಲಿ ಹಿಂದುಗಳ ಮೇಲೆ ಮೃದುವಾಗಿ ಹೋಗುವ ಅಪರಾಧವೆಂದು ಪರಿಗಣಿಸಲ್ಪಟ್ಟು ಮೇ 1930 ರಲ್ಲಿ ಗೋಧ್ರಾದ ಜಿಲ್ಲಾಧಿಕಾರಿಯಾಗಿ ದೇಸಾಯಿ ರಾಜೀನಾಮೆ ನೀಡಿದರು. ದೇಸಾಯಿ ನಂತರ ಮಹಾತ್ಮಾ ಗಾಂಧಿಯವರ ಸ್ವಾತಂತ್ರ್ಯ ಹೋರಾಟದಲ್ಲಿ ಸೇರಿದರು ಮತ್ತು ಭಾರತದಲ್ಲಿ ಬ್ರಿಟಿಷ್ ಆಳ್ವಿಕೆಯ ವಿರುದ್ಧ ನಾಗರಿಕ ಅಸಹಕಾರ ಚಳವಳಿಯಲ್ಲಿ ಸೇರಿಕೊಂಡರು. ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಅವರು ಅನೇಕ ವರ್ಷಗಳ ಕಾಲ ಜೈಲಿನಲ್ಲಿದ್ದರು ಮತ್ತು ಅವರ ಚೂಪಾದ ನಾಯಕತ್ವದ ಕೌಶಲ್ಯ ಮತ್ತು ಕಠಿಣ ಚೈತನ್ಯದಿಂದಾಗಿ ಅವರು ಸ್ವಾತಂತ್ರ್ಯ ಹೋರಾಟಗಾರರ ನಡುವೆ ನೆಚ್ಚಿನವರಾಗಿದ್ದರು ಮತ್ತು ಗುಜರಾತ್ ಪ್ರದೇಶದಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ನ ಪ್ರಮುಖ ನಾಯಕರಾಗಿದ್ದರು. 1934 ಮತ್ತು 1937 ರಲ್ಲಿ ಪ್ರಾಂತೀಯ ಚುನಾವಣೆಗಳು ನಡೆದಾಗ, ದೇಸಾಯಿ ಅವರು ಮುಂಬಯಿ ಪ್ರೆಸಿಡೆನ್ಸಿಯ ಕಂದಾಯ ಸಚಿವ ಮತ್ತು ಗೃಹ ಸಚಿವರಾಗಿ ಆಯ್ಕೆಯಾದರು.  

ಭಾರತದ ಪ್ರಧಾನಿ (1977-79) 

ತುರ್ತು ಪರಿಸ್ಥಿತಿಯನ್ನು ಎತ್ತಿಹಿಡಿಯಲು ಇಂದಿರಾ ಗಾಂಧಿಯವರು ನಿರ್ಧರಿಸಿದ ನಂತರ ಸಾಮಾನ್ಯ ಚುನಾವಣೆ ನಡೆಯಿತು. ಜನತಾ ಪಾರ್ಟಿ ಚುನಾವಣೆಯಲ್ಲಿ ಜಯ ಸಾಧಿಸಿತು ಮತ್ತು ಮೊರಾರ್ಜಿ ದೇಸಾಯಿ ಪ್ರಧಾನಿಯಾದರು. ದೇಸಾಯಿ ನೆರೆಹೊರೆಯ ಮತ್ತು ವಿರೋಧಿ ಪಾಕಿಸ್ತಾನದೊಂದಿಗೆ ಸಂಬಂಧವನ್ನು ಸುಧಾರಿಸಲು ಕೆಲಸ ಮಾಡಿದರು. 1962 ರ ಯುದ್ಧದ ನಂತರ ಮೊದಲ ಬಾರಿಗೆ ಚೀನಾದೊಂದಿಗಿನ ಸಾಮಾನ್ಯ ಸಂಬಂಧಗಳನ್ನು ಮರುಸ್ಥಾಪಿಸಿತು. ಅವರು ಜಿಯಾ-ಉಲ್-ಹಕ್ ಅವರೊಂದಿಗೆ ಸಂವಹನ ನಡೆಸಿದರು ಮತ್ತು ಸೌಹಾರ್ದ ಸಂಬಂಧಗಳನ್ನು ಸ್ಥಾಪಿಸಿದರು. ಚೀನಾದೊಂದಿಗೆ ರಾಜತಾಂತ್ರಿಕ ಸಂಬಂಧಗಳನ್ನು ಪುನಃ ಸ್ಥಾಪಿಸಲಾಯಿತು. ಅವರ ಸರ್ಕಾರ ತುರ್ತು ಪರಿಸ್ಥಿತಿಯಲ್ಲಿ ಸಂವಿಧಾನಕ್ಕೆ ತಿದ್ದುಪಡಿ ಮಾಡಿತು.  

ಸಾವು 

ಮೊರಾರ್ಜಿ ದೇಸಾಯಿ ಅವರು 1980 ರ ಸಾರ್ವತ್ರಿಕ ಚುನಾವಣೆಯಲ್ಲಿ ಹಿರಿಯ ರಾಜಕಾರಣಿಯಾಗಿ ಜನತಾ ಪಕ್ಷಕ್ಕೆ ಪ್ರಚಾರ ಮಾಡಿದರು ಆದರೆ ಚುನಾವಣೆಯಲ್ಲಿ ಸ್ವತಃ ಸ್ಪರ್ಧಿಸಲಿಲ್ಲ. ನಿವೃತ್ತಿಯಲ್ಲಿ ಅವರು ಮುಂಬೈಯಲ್ಲಿ ವಾಸಿಸುತ್ತಿದ್ದರು ಮತ್ತು 1995 ರಲ್ಲಿ 99 ನೇ ವಯಸ್ಸಿನಲ್ಲಿ ನಿಧನರಾದರು. ಅವರ ಕೊನೆಯ ವರ್ಷಗಳಲ್ಲಿ ಅವರ ಪೀಳಿಗೆಯ ಸ್ವಾತಂತ್ರ್ಯ ಹೋರಾಟಗಾರನಾಗಿ ಅವರು ಹೆಚ್ಚು ಗೌರವವನ್ನು ಹೊಂದಿದ್ದರು. ಮೊರಾರ್ಜಿ ದೇಸಾಯಿ ಮಹಾತ್ಮ ಗಾಂಧಿಯವರ ತತ್ವಗಳ ಮತ್ತು ನೈತಿಕತೆಯ ಕಟ್ಟುನಿಟ್ಟಾದ ಅನುಯಾಯಿಯಾಗಿದ್ದರು.  

ಸಾಮಾಜಿಕ ಸೇವೆ 

ಮೊರಾರ್ಜಿ ದೇಸಾಯಿಯವರು ಗಾಂಧಿಯ ಅನುಯಾಯಿಯಾಗಿದ್ದರು, ಸಾಮಾಜಿಕ ಕಾರ್ಯಕರ್ತರು, ಸಂಸ್ಥಾಪಕ ಬಿಲ್ಡರ್ ಮತ್ತು ಉತ್ತಮ ಸುಧಾರಕರಾಗಿದ್ದರು. ಅವರು ಗುಜರಾತ್ ವಿದ್ಯಾಪೀಠದ ಚಾನ್ಸಲರ್ ಆಗಿದ್ದರು. ಪ್ರಧಾನ ಮಂತ್ರಿಯಾಗಿದ್ದ ತಮ್ಮ ಅವಧಿಯಲ್ಲಿ ಅವರು ಅಕ್ಟೋಬರ್ ತಿಂಗಳಲ್ಲಿ ವಿದ್ಯಾಪೀಠಕ್ಕೆ ಭೇಟಿ ನೀಡುತ್ತಿದ್ದರು.  

ವೈಯಕ್ತಿಕ ಜೀವನ ಮತ್ತು ಕುಟುಂಬ 

ಮೊರಾರ್ಜಿ ದೇಸಾಯಿ ಅವರು 15 ನೇ ವಯಸ್ಸಿನಲ್ಲಿ 1911 ರಲ್ಲಿ ಗುಜ್ರಬೆನ್ರನ್ನು ಮದುವೆಯಾದರು. ಅವರ ಮಗ ಕಾಂತಿ ದೇಸಾಯಿ ಮತ್ತು ಜಗದೀಪ್ ದೇಸಾಯಿ ಮತ್ತು ಭಾರತ್ ದೇಸಾಯಿ ಮೊಮ್ಮಕ್ಕಳು. ಮಧುಕೇಶ್ವರ್ ದೇಸಾಯಿ, ಅವರ ಶ್ರೇಷ್ಠ-ಮೊಮ್ಮಗ ಜಗದೀಪ್ ದೇಸಾಯಿಯವರ ಮಗ ಪ್ರಸ್ತುತ ಬಿಜೆಪಿಯ ಯುವ ವಿಭಾಗವಾದ ಭಾರತೀಯ ಜನತಾ ಯುವಮೋರ್ಚಾದ ರಾಷ್ಟ್ರೀಯ ಉಪಾಧ್ಯಕ್ಷರಾಗಿದ್ದಾರೆ. ಭಾರತ್ ದೇಸಾಯಿಯ ಮಗ ವಿಶಾಲ್ ದೇಸಾಯಿ ಅವರು ಬರಹಗಾರ ಮತ್ತು ಚಲನಚಿತ್ರ ನಿರ್ಮಾಪಕರಾಗಿದ್ದಾರೆ    

ಕೃಪೆ: ವಿಕಿಪೀಡಿಯ 

Sunday, February 9, 2020

ಹೂವಾಡಗಿತ್ತಿ

ಹೂವನು ಮಾರುತ ಹೂವಾಡಗಿತ್ತಿ
ಹಾಡುತ ಬರುತಿಹಳು
‘ಘಮಘಮ ಹೂಗಳು ಬೇಕೇ’ ಎನ್ನುತಹಾಡುತ ಬರುತಿಹಳು

ಬಿಳುಪಿನ ಮಲ್ಲಿಗೆ ಹಳದಿಯ ಸಂಪಿಗೆ
ಹಸುರಿನ ಹೊಸ ಮರುಗ;
ಹಾಕಿ ಕಟ್ಟಿರುವೆ ಬೇಕೇ ಎನುತ
ಹಾಡುತ ಬರುತಿಹಳು
ಹೊಸ ಸೇವಂತಿಗೆ ಹೊಸ ಇರುವಂತಿಗೆ
ಅರಸಿನ ತಾಳೆಯಿದೆ;
ಅಚ್ಚ ಮಲ್ಲೆಯಲಿ ಪಚ್ಚ ತೆನೆಗಳು
ಸೇರಿದ ಮಾಲೆಯಿದೆ
ಕಂಪನು ಚೆಲ್ಲುವ ಕೆಂಪು ಗುಲಾಬಿ
ಅರಳಿದ ಹೊಸ ಕಮಲ;
ಬಿಳುಪಿನ ಜಾಜಿ ಅರಳಿದ ಬಿಳಿ ಕಮಲ
ಬಗೆ ಬಗೆ ಹೂಗಳು ಬೇಕೇ ಎನುತ
ಹಾಡುತ ಬರುತಿಹಳು

ಸಾಹಿತ್ಯ: ಪ್ರೊ।। ಎಂ.ವಿ. ಸೀತಾರಾಮಯ್ಯ

Friday, August 16, 2019


K.G.F Chapter-1

1. ಸಲಾಂ ರಾಕೀ ಭಾಯ್     

ಚಲನೆ ಕಾ ಹುಕುಂ    
ರುಕನೇ ಕಾ ಹುಕುಂ    
ಜಿಂದಗಿ ಫೆ ಹುಕುಂ    
ಮೌತ್ ಫೆ ಹುಕುಂ   
ಬಂದೂಕ್ ಫೆ ಹುಕುಂ    
ದುಷ್ಮನ್ ಫೆ ಹುಕುಂ    
ಲೆಹ್ರೋನ್ ಫೆ ಹುಕುಂ    
ಮುಂಬೈ ಫೆ ಹುಕುಂ    

ಜಾನ್ ಮುಂಬೈ ಕಾ ಜಾನ್ ಮುಂಬೈ ಕಾ ಜಾನ್ ಮುಂಬೈ ಕಾ ಜಾನ್ ರೇ    
ಇವನ ಕಣ್ಣಲ್ಲಿ ಕಣ್ಣು ಇಡಬೇಡ ಸಿಡಿಲು ಬಡಿಯುತ್ತೆ ಬಾಗ್ ರೇ    
ಆಗ್ ತೂಫಾನ್ ಜಬ್ಬಿ ಮಿಲ್ತಾ ಹೈ ಐಸಾ ಬಾರುದು  
ಪೈದಾ ಹೋತಾ ಹೈ ಹೇ ಖುದಾ ಜರಾ ದೇಖೊ    
ಆಳೋಕೆ ಬಂದ್ರೆ ಸುಲ್ತಾನು ಇವನೇ ಅಡ್ಡಡ್ಡ ಬಂದ್ರೆ ಸೈತಾನು   
ಇವನೇ ಹೇ ಖುದಾ ಜರಾ ರೋಖೋ    
ಅಡಗಿದ್ದೋನು ಕಬ್ಜ ಭುಗಿಲೆದ್ದೋನು ಕಬ್ಜ    
ಮುಂಬೈ ಕಿ ಗಲಿಯಾ ಭೀ ಗಾಬ್ರಾಕೆ ಯು ಭೋಲೇಂಗೆ ಸಾಲಾ    
ಸಲಾಂ ರಾಕೀ ಭಾಯ್ ರಾಕ್ ರಾಕ್ ರಾಕಿ    
ಸಲಾಂ ರಾಕೀ ಭಾಯ್    
ಸಲಾಂ ರಾಕೀ ಭಾಯ್ ಸಲಾಂ ರಾಕೀ ಭಾಯ್    
ಇಲಾಕ ತೇರಾ ಭಾಯ್ ತು ಹೈ ಸಬಕಾ ಭಾಯ್     
ಬೆರಳ ಹಿಡಿದು ನಡೆಸಿದ  ಮೊದಲ ಮಾತು ಕಲಿಸಿದ ಅವಳ ಮಾತೆ ವೇದ   
 ಬೆಂಕಿ ಜೊತೆಗೆ ಪಳಗಿದ ಹಠವ ಹೊತ್ತು ತಿರುಗಿದ ಪಣವ ತೊಟ್ಟ ಯೋಧ    
ತಡೆಯೋಕೆ ಇವನನ್ನ ತರಬೇಕು ಎಲ್ಲಿಂದ ಸೈನ್ಯನಾ    
ತಡೆಯೋಕೇ ಸಾಧ್ಯಾನಾ ಧುಮ್ಮುಕ್ಕಿ ಬರುವಂತ ಅಲೆಯನ್ನ    
ಚೇರ್ಬಿ ಜ್ಯಾದಾ ಹೈ ಹಾತ್ ಲೋಹಾ ಹೈ    
ಡರ್ ಕೋ ಬೇಚೆಂಗೇ ಜಾನ್ ಘಂಟಾ ಹೈ   
ಹಟ್ ಜರಾ ಖತ್ರಾ ಹೈ    
ಅಡಗಿದ್ದೋನು ಕಬ್ಜ ಭುಗಿಲೆದ್ದೋನು ಕಬ್ಜ    
ಮುಂಬೈ ಕಿ ಗಲಿಯಾ ಭೀ ಗಾಬ್ರಾಕೆ ಯು ಭೋಲೇಂಗೆ ಸಾಲಾ     
ಸಲಾಂ ರಾಕೀ ಭಾಯ್ ರಾಕ್ ರಾಕ್ ರಾಕಿ    
ಸಲಾಂ ರಾಕೀ ಭಾಯ್    
ಸಲಾಂ ರಾಕೀ ಭಾಯ್ ಸಲಾಂ ರಾಕೀ ಭಾಯ್    
ಇಲಾಕ ತೇರಾ ಭಾಯ್ ತು ಹೈ ಸಬಕಾ ಭಾಯ್      

2. ಗರ್ಭದಿ ನನ್ನಿರಿಸಿ     

ಗರ್ಭದಿ ನನ್ನಿರಿಸಿ ಊರಲಿ ನಡೆಯುತಿರೆ ತೇರಲಿ ಕುಳಿತಂತೆ ಅಮ್ಮ    
ಗುಮ್ಮ ಬಂತೆನಿಸಿ ಹೆದರಿ ನಿಂತಾಗ ನಿನ್ನ ಸೆರಗೆ ಕಾವಲು ಅಮ್ಮ    
ಕಾಣದ ದೇವರಿಗೆ ಕೈಯಾ ನಾ ಮುಗಿಯೇ ನಿನಗೆ ನನ್ನುಸಿರೇ ಆರತಿ.     

ನೆರೆ ಬಂದ ಊರಲಿ ಸೆರೆ ಸಿಕ್ಕ ಮೂಖರ ಕಂಡ ಕನಸೆ ಕಣ್ಣ ಹಂಗಿಸಿದೆ    
ನೆತ್ತರು ಹರಿದರು ನೆಮ್ಮದಿ ಕಾಣದ ಭಯವ ನೀಗುವ ಕೈ ಬೇಕಾಗಿದೆ     
ಕಾಣದ ದೇವರನು ನಿನ್ನಲಿ ಕಂಡಿರುವೆ ನೀನೇ ಭರವಸೆಯು ನಾಳೆಗೆ.

Wednesday, July 3, 2019

ಕಿಂದರಿಜೋಗಿ (1989)

ಕೊಟ್ಟಳೋ ಕೊಟ್ಟಳಮ್ಮ 

ಚಲನ ಚಿತ್ರ: ಕಿಂದರಿಜೋಗಿ (1989)
ನಿರ್ದೇಶನ: ವಿ. ರವಿಚಂದ್ರನ್
ಸಾಹಿತ್ಯ & ಸಂಗೀತ: ಹಂಸಲೇಖ  
ಗಾಯನ: ಎಸ್.ಪಿ.ಬಾಲಸುಬ್ರಹ್ಮಣ್ಯಂ, ಎಸ್. ಜಾನಕಿ 
ನಟನೆ: ವಿ. ರವಿಚಂದ್ರನ್, ಜೂಹಿ ಚಾವ್ಲಾ 

ಗ :  ಕೊಟ್ಟಳೋ ಕೊಟ್ಟಳಮ್ಮ ಮುದ್ದು ಮನಸು ಕೊಟ್ಟಳಮ್ಮ,
       ಹೆಸರು ಕೇಳದೆ, ತನ್ನ ಹೆಸರು ಹೇಳದೆ..
       ನನ್ನ ಹೆಸರು ಕೇಳದೆ, ತನ್ನ ಹೆಸರು ಹೇಳದೆ..
       ಆರತಿ.. ಭಾರತಿ... ರಾಧಿಕಾ... ಅಂಬಿಕಾ...
       ಮೀನಾಕುಮಾರಿಯೋ...  ಕೃಷ್ಣಾಕುಮಾರಿಯೋ.....
       ಲತಾ ಮಂಗೇಶ್ಕರೋ...  ಉಷಾ ಮಂಗೇಶ್ಕರೋ... ಯಾವುದೋ....
       ಕೊಟ್ಟಳೋ ಕೊಟ್ಟಳಮ್ಮ ಮುದ್ದು ಮನಸು ಕೊಟ್ಟಳಮ್ಮ,
       ಹೆಸರು ಕೇಳದೆ, ತನ್ನ ಹೆಸರು ಹೇಳದೆ..
       ನನ್ನ ಹೆಸರು ಕೇಳದೆ, ತನ್ನ ಹೆಸರು ಹೇಳದೆ..
ಹೆ :  ಮೂಗಿನ ಮೇಲೆಯೇ ಕನ್ನಡಕ ಇದೆ,
       ನಿನಗೆ ಕಾಣದೆ, ಕೈಗೆ ಎಟುಕದೆ
       ಬೆಣ್ಣೆಯ ಮುದ್ದೆಯು ಕೈಲಿ ಕೂತಿದೆ,
      ನೋಡಬಾರದೇ, ತುಪ್ಪ ಹುಡುಕದೆ..
ಗ : ಡಿಂಪಲ್ ಕಪಾಡಿಯ, ರಜನಿ...  ರಂಜಿನಿ...  ರಾಗಿಣಿ...  ಪದ್ಮಿನಿ..
     ಸಿಂಪಲ್ ಕಪಾಡಿಯ...  ಜಮುನಾ...  ಯಮುನಾ..  ಭಾವನಾ...  ಕಲ್ಪನಾ...
     ಭವ್ಯಾ... ದಿವ್ಯಾ... ಕಾವ್ಯಾ... ಸಂಧ್ಯಾ... ರಮ್ಯಾ.. ಸೌಮ್ಯಾನಾ 
      ಕೊಟ್ಟಳೋ ಕೊಟ್ಟಳಮ್ಮ ಮುದ್ದು ಮನಸು ಕೊಟ್ಟಳಮ್ಮ,
       ಹೆಸರು ಕೇಳದೆ, ತನ್ನ ಹೆಸರು ಹೇಳದೆ..
       ನನ್ನ ಹೆಸರು ಕೇಳದೆ, ತನ್ನ ಹೆಸರು ಹೇಳದೆ..
ಹೆ :  ಹುಡುಕುವ ಕೂಸದು ಕಂಕುಳಲ್ಲಿದೆ,
      ಊರು ಸುತ್ತದೆ ನೋಡಬಾರದೇ..
     ರನ್ನದ ಚಿನ್ನದ ಚೆಲುವ ಚೆನ್ನಿಗ,
     ಹೆಸರು ಹೇಳದೆ, ಹೃದಯ ದೊರಕದೆ..
ಗ : ಅಂಬಾ ಭವಾನಿಯೇ... ಲಕ್ಷ್ಮೀ... ಸೀತಾ...  ರಾಧಾ...  ಗೀತಾ...
     ರೋಜೀ ...  ಓ ಮಾರಿಯಾ...  ವಹೀದಾ....  ಜಹೀದಾ...  ಜೂಲೀ...  ಡಾಲೀ...
     ತುಂಗೇ... ಭದ್ರೇ... ಕಪಿಲಾ... ಸರಯೂ... ಸಿಂಧೂ.. ಗಂಗೇನಾ... 
ಹೆ:  ಗೆದ್ದನೋ ಗೆದ್ದನಮ್ಮ, ಗಂಗೆ ಮನಸ ಕದ್ದನಮ್ಮ,
     ಕಿಂದರಿಜೋಗಿ, ನನ್ನ ಹೆಸರನು ಕೂಗಿ..
     ನನ್ನ ಕಿಂದರಿಜೋಗಿ, ಈ ಗಂಗೆಯ ಜೋಗಿ..
ಗ :  ಕೊಟ್ಟಳೋ ಕೊಟ್ಟಳಮ್ಮ ಮುದ್ದು ಮನಸ ಕೊಟ್ಟಳಮ್ಮ,
       ಅಂತರಗಂಗೆ, ನನ್ನ ಪ್ರೇಮದ ಗಂಗೆ..
       ಬಾ ಬಾರೆಲೇ ಹಿಂಗೆ, ಈ ಹುಡುಗನು  ಹಿಂಗೇ ..... 
*********************************************************************************

ಬಂದಾ ಬಂದಾ ಕಿಂದರಿಜೋಗಿ

ಗಾಯನ : ಸಾಹಿತ್ಯ ಮತ್ತು ಸಂಗೀತ: ಹಂಸಲೇಖ  

ದುಮ್ ದುಮ್ ದೋಮ್ ದುಮ್ ದುಮ್ ದೋಮ್
ದೋಮ್  ದೋಮ್  ದುಮ್ ದುಮ್ ದೋಮ್  ತಕತತಕಟಾತೋಮ್
ತಕತತಕಟಾತೋಮ್ ತಕತತಕಟಾತೋಮ್
ಬಂದಾ ಬಂದಾ ಬಂದಾ ಬಂದಾ ಕಿಂದರಿಜೋಗಿ ..ಓ.. ಕಿಂದರಿ ಜೋಗಿ 
ಬಂದಾ ಬಂದಾ ಬಂದಾ ಬಂದಾ ಕಿಂದರಿಜೋಗಿ ..ಓ.. ಕಿಂದರಿ ಜೋಗಿ 
ಕೋಟು ಅಮೆರಿಕಾ.. ಪ್ಯಾಂಟು ಸೌತ್ ಆಫ್ರಿಕಾ 
ಹ್ಯಾಟು ಅಂಟಾರ್ಟಿಕಾ ಬಾಡಿ ಕರ್ನಾಟಕ 
ಬಂದಾ ಬಂದಾ ಬಂದಾ ಬಂದಾ ಕಿಂದರಿಜೋಗಿ ..ಓ.. ಕಿಂದರಿ ಜೋಗಿ 
ಬಂದಾ ಬಂದಾ ಬಂದಾ ಬಂದಾ ಕಿಂದರಿಜೋಗಿ ..ಓ.. ಕಿಂದರಿ ಜೋಗಿ 
ಮೊನ್ನೆ ಬ್ರಹ್ಮನಾ ಮನೇಲಿ ಪುಸ್ತಕ ಮಸ್ತಕ ಕದ್ದುಕೊಂಡು ಹೋಗಿ  ಬಿಟ್ಟರೋ 
ಈ ಕಿಂದರಿ ಜೋಗಿ ಓಡಿ ಹೋಗಿ ವಿಷ್ಣುವ ಕೂಗಿ ಮೀನಿನ ವೇಷ ಹಾಕಿಸಿ ಬಂದ
ಮೀನಾದ ವಿಷ್ಣು ವೇದಗಳ ತಂದಾ 
ಮೊನ್ನೆ ಶಿವನು ಮರೆತು ಯಾರಿಗೋ ಭಕ್ತನಿಗೆ ಸಾಯದಂಥ ವರ ಕೊಟ್ಟನು 
ಈ ಕಿಂದರಿ ಜೋಗಿ ಓಡಿ ಪಾರ್ವತಿಗೆ ಹೇಳಿ ಚಾಮುಂಡಿ ವೇಷ ಹಾಕಿಸಿ ಬಂದಾ 
ಮಹಿಷಾಸುರನ ಕೊಂದ ಚಾಮುಂಡಿಯಿಂದ  ವರ ತಂದಾ 
ಬಾಷೆಗೆ ತಪ್ಪನು ಅನ್ಯಾಯ ಒಪ್ಪನು ಕೋಟಿಗೆ ಒಬ್ಬನು 
ಜೋಗಿ ಓ ಜೋಗಿ ಜೋಗಿ ... 
ಬಂದಾ ಬಂದಾ ಬಂದಾ ಬಂದಾ ಕಿಂದರಿಜೋಗಿ ..ಓ.. ಕಿಂದರಿ ಜೋಗಿ
ಬಂದಾ ಬಂದಾ ಬಂದಾ ಬಂದಾ ಕಿಂದರಿಜೋಗಿ ..ಓ.. ಕಿಂದರಿ ಜೋಗಿ 
ಮೊನ್ನೆ ಸೋಮನಾ ಹಳ್ಳಿಯಾ ಊರಲ್ಲಿ ಒಮ್ಮೆಲೇ ಹೆಗ್ಗಣದ ಕಾಟ ಕಾಡಿತೋ
ಈ ಕಿಂದರಿ ಜೋಗಿ ಓಡಿ ಹೋಗಿ ಗೌಡರಿಗೆ ಹೇಳಿ ಪೀಪಿಯ ಊದಿ ಇಲಿಗಳ ಕೊಂದ 
ಗೌಡ ಮಾತು ಕೊಟ್ಟ ಕಡೆಗೆ ನೀತಿ ಬಿಟ್ಟ 
ತನ್ನ ಪೀಪಿಯ ಊದುತ ಮೋಡಿಯಾ ಮಾಡುತ ಉರಿನಾಚೆ ಕಡೆ ಹೊರಟನು 
ಆ ಹಳ್ಳಿಯ ಮಕ್ಕಳು ಆಡೋ ಮಕ್ಕಳು ಹಾಲ್ಕುಡಿಯೋ ಮಕ್ಕಳು 
ಜೋಗಿಯ ಹಿಂದೆ ಸಾಲು ಹೊರಟರು ಮಕ್ಕಳನ್ನು ಬಿಟ್ಟರು ಕಳೆದುಕೊಂಡು ಹೊಂಟರೋ.. 
ಊರಾಚೆ ಬೆಟ್ಟವೋ ಬೆಟ್ಟದಾಗೇ ಬಾಗಿಲೋ 
ಸ್ವರ್ಗವೋ ಜೋಗಿ ಓ ಜೋಗಿ ಜೋಗಿ 
ಬಂದಾ ಬಂದಾ ಬಂದಾ ಬಂದಾ ಕಿಂದರಿಜೋಗಿ ..ಓ.. ಕಿಂದರಿ ಜೋಗಿ 
ಬಂದಾ ಬಂದಾ ಬಂದಾ ಬಂದಾ ಕಿಂದರಿಜೋಗಿ ..ಓ.. ಕಿಂದರಿ ಜೋಗಿ 
ಕೋಟು ಅಮೆರಿಕಾ.. ಪ್ಯಾಂಟು ಸೌತ್ ಆಫ್ರಿಕಾ 
ಹ್ಯಾಟು ಅಂಟಾರ್ಟಿಕಾ ಬಾಡಿ ಕರ್ನಾಟಕ 
ಬಂದಾ ಬಂದಾ ಬಂದಾ ಬಂದಾ ಕಿಂದರಿಜೋಗಿ ..ಓ.. ಕಿಂದರಿ ಜೋಗಿ 
ಬಂದಾ ಬಂದಾ ಬಂದಾ ಬಂದಾ ಕಿಂದರಿಜೋಗಿ ..ಓ.. ಕಿಂದರಿ ಜೋಗಿ
ಧೀಮ್ ಧೀಮ್ ಧೀಮ್ ತಾಕಿಟತೋಮ್
ಧೀಮ್ ಧೀಮ್ ಧೀಮ್ ತಾಕಿಟತೋಮ್
*********************************************************************************

ಆಗಲಂತೇ ಉಗಲಂತೇ

ಸಾಹಿತ್ಯ & ಸಂಗೀತ: ಹಂಸಲೇಖ 
ಗಾಯನ: ಎಸ್.ಪಿ.ಬಾಲಸುಬ್ರಹ್ಮಣ್ಯಂ, ಎಸ್. ಜಾನಕಿ

ಗಂಡು : ಆಗಲಂತೇ ಊಗಲಂತೇ ತಂದನಾನಿ ತಂದನಾನಿ ತಂದನಾನಿ ತಂದನಾನಿ ನಾನಿನೋ 
ಹೆಣ್ಣು :  ಆಗಲಂತೇ ಊಗಲಂತೇ ತಂದನಾನಿ ತಂದನಾನಿ ತಂದನಾನಿ ತಂದನಾನಿ ನಾನಿನೋ 
ಗಂಡು : ಕಳ್ಳಿ ಕಳ್ಳಿ ಕಡವಾರಳ್ಳಿ ಕಾಮನ ವಯಸೇಷ್ಟು 
ಹೆಣ್ಣು : ಅಯ್ಯೋ ಮಾಮ  ಅಯ್ಯೋ ಮಾಮ ಅಂಬೆಗಾಲೂ ಅಂಬೆಗಾಲೂ 
ಗಂಡು : ಮಳ್ಳಿ ಮಳ್ಳಿ ಮೊಳಮಾರಳ್ಳಿ ಮಂಚಕೇ ಕಾಲೆಷ್ಟೂ
ಹೆಣ್ಣು : ಅಯ್ಯೋ ಮಾಮ ಚಂದಮಾಮ ಮೂರೇ ಕಾಲು ಮತ್ತೊಂದು ಕಾಲು 
ಗಂಡು : ಆಗಲಂತೇ ಊಗಲಂತೇ 
ಹೆಣ್ಣು : ಅಪ್ಪನು ಬೆರೆವನೂ ಬೆರೆತರೇ ಬಾಗಿಲಿಗೇ ಬೀಗ 
          ಅಳಿಯನು ಸತ್ತರೂ ಸೇರನು ಹೇಳೋ ದೊರೆ ಈಗ 
ಗಂಡು : ಅಪ್ಪ ಅಪ್ಪ ಅಂದರೇ ನೀನು ತುಟಿಯ ದಡಗಳು ಸೇರಿಕೊಳ್ಳುವುದೂ 
           ಅಯ್ಯ ಅಯ್ಯ ಅಂದರೇ ಈಗ ಎರಡು ಕೊನೆಗಳು ದೂರ ಉಳಿವವೂ 
ಹೆಣ್ಣು :  ಆಗಲಂತೇ ಊಗಲಂತೇ ತಂದನಾನಿ ತಂದನಾನಿ ತಂದನಾನಿ ತಂದನಾನಿ ನಾನಿನೋ 
ಗಂಡು :  ಆಗಲಂತೇ ಊಗಲಂತೇ ತಂದನಾನಿ ತಂದನಾನಿ ತಂದನಾನಿ ತಂದನಾನಿ ನಾನಿನೋ 
             ಕಳ್ಳಿ ಕಳ್ಳಿ ಕಡವಾರಳ್ಳಿ ಕಾಮನ ವಯಸೇಷ್ಟು 
ಹೆಣ್ಣು : ಅಯ್ಯೋ ಮಾಮ  ಅಯ್ಯೋ ಮಾಮ ಅಂಬೆಗಾಲೂ ಅಂಬೆಗಾಲೂ 
ಕೋರಸ್ : ತಂದಾನಾನನೋ  ತಂದನನನನಾ  
               ತಂದಾನಾನನೋ  ತಂದನನನನಾ  
ಹೆಣ್ಣು : ಕುಂತರೇ ಕೊಟ್ಟರೇ ಅಳಿಸುವ ಘಟ್ಟಿಗನೂ ಯಾರೋ 
          ಅತ್ತರೂ ಬಿಡದಲೇ ಹೊಸೆಯುವ ಶೆಟ್ಟಿಯದೂ ಯಾರೋ 
ಗಂಡು : ಅಯ್ಯೋ ನೋವು ಬಳೆಗಳ ಶೆಟ್ಟಿ ಎದುರು ಕುಂತಾಗ ಹಿಡಿಸದಿದ್ದಾಗ 
           ಅಹ್ಹ ಆಹ್ಹಾ ಸುಖ ಎನಿಸದು ಯಮ್ಮಿ ಹಸ್ತದೊಳಗಡೇ ಬಳೆಯೂ ಹೋದಾಗ 
ಹೆಣ್ಣು :  ಆಗಲಂತೇ (ಊಗಲಂತೇ) ತಂದನಾನಿ (ತಂದನಾನಿ) ತಂದನಾನಿ (ತಂದನಾನಿ ನಾನಿನೋ)
ಗಂಡು : ಆಗಲಂತೇ (ಊಗಲಂತೇ) ತಂದನಾನಿ (ತಂದನಾನಿ) ತಂದನಾನಿ (ತಂದನಾನಿ ನಾನಿನೋ)  
             ಕಳ್ಳಿ ಕಳ್ಳಿ ಕಡವಾರಳ್ಳಿ ಕಾಮನ ವಯಸೇಷ್ಟು 
ಹೆಣ್ಣು : ಅಯ್ಯೋ ಮಾಮ  ಅಯ್ಯೋ ಮಾಮ ಅಂಬೆಗಾಲೂ ಅಂಬೆಗಾಲೂ 
ಗಂಡು : ಮಳ್ಳಿ ಮಳ್ಳಿ ಮೊಳಮಾರಳ್ಳಿ ಮಂಚಕೇ ಕಾಲೆಷ್ಟೂ
ಹೆಣ್ಣು : ಅಯ್ಯೋ ಮಾಮ ಚಂದಮಾಮ ಮೂರೇ ಕಾಲು ಮತ್ತೊಂದು ಕಾಲು 
*********************************************************************************

ಹಾಲಕ್ಕಿ ಕೂಗಾಯಿತೋ

ಸಾಹಿತ್ಯ & ಸಂಗೀತ: ಹಂಸಲೇಖ 
ಗಾಯನ: ಎಸ್.ಪಿ.ಬಾಲಸುಬ್ರಹ್ಮಣ್ಯಂ, ಎಸ್. ಜಾನಕಿ

ಕೋರಸ್: ಹಾಲಕ್ಕಿ ಕೂಗಯೈತೋ  ಕುಡುಗೋಲು ಸಜ್ಜಾಯಿತೋ 
               ಕೋಳಿಗೆ ಕಾಯದೇ ಪ್ರಳಯ ಮಾಡದೇ 
               ಬಾ ಬಾರೋ ಸೂರಪ್ಪನೇ ಮಾಭಾರತನೋಡಪ್ಪನೇ.. 
               ಓಓಓಓಓ... ಉಮ್ ಉಮ್ ಓಓಓಓಓ... ಉಮ್ ಉಮ್ 
              ವರ್ಷದ ಅಷ್ಟೂ ದಿನ (ಉಮ್ ಉಮ್ ) ಬರ್ತನೆಯಿದ್ದೇಯಣ್ಣಾ (ಉಮ್ ಉಮ್ )
              ಲೋಕದ ಈ ಕದನ (ಉಮ್ ಉಮ್ ) ನೋಡ್ತಾನೇ ಇದ್ದಿಯಣ್ಣಾ (ಉಮ್ ಉಮ್ )
              ಕೊನೆ ಮಾಡೋ ಈ ದಿನಾ (ಆ..ಆ..)  ಇಲ್ಲದಿದ್ದರೇ  ಈ ಜನ (ಆ..ಆ..) 
              ಒಂದಲ್ಲ ಒಂದು ದಿನ (ಆ..ಆ..) ಗಡಿಪಾರು ನಿನ್ನನಾ .. (ಆ..ಆ..) 
             ಪಬಪ್ಪ ಪಪ್ಪಪ ಪಬಪ್ಪ ಪಪ್ಪಪ ಪಬಪ್ಪ ಪಪ್ಪಪ ಪಬಪ್ಪ ಪಪ್ಪಪ ಪಪ 
             ಪಬಪ್ಪ ಪಪ್ಪಪ ಪಬಪ್ಪ ಪಪ್ಪಪ ಪಬಪ್ಪ ಪಪ್ಪಪ ಪಬಪ್ಪ ಪಪ್ಪಪ ಪಪ 
ಮಗು : ಹೊರಟಿತೋ  ಹೊರ ಹೊರಟಿತೋ ಸೂರಪ್ಪನ ಬಿಳಿ ಅಶ್ವವೂ 
           (ತರಿಗಡದಿಗಡತೋಮ್ ಆಹ್ಹಾ...) 
           ನಡುಗಿತೋ ನಡು ನಡುಗಿತೋ ಕರ ಪುಟದಲಿ ಇಡೀ ವಿಶ್ವವೂ 
           ತೆಗೆದರೋ ಹಣ ತೆಗೆದರೋ ಬಲಿಗೊಡಲಿಯಾ ಗಡಪಾಡಿಯಾ 
           (ತರಿಗಡದಿಗಡತೋಮ್ ಆಹ್ಹಾ...) 
           ನಡೆದರೋ ನಡೆ ನಡೆದರೋ ಬಡಿದಾಡಲೂ ಬಡ ಜೋಗಿಯ
           ಧಿಮೀ ಧಿಮೀ ಧಿಮೀ ಧಿಮೀ ಧಿಮೀ ಧಿಮೀ ಧಿಮೀ ಧಿಮೀ ಧಿಮೀ  
           ಧಿಮೀ ಧಿಮೀ ಧಿಮೀ ಧಿಮೀ ಧಿಮೀ ಧಿಮೀ ಧಿಮೀ ಧಿಮೀ ಧಿಮೀ
           ಓಓಓಓಓ... ಆಆಆಅ....  ದುಂದುಮ್  ದುಂದುಮ್  ದುಂದುಮ್
          ದುಂದುಮ್  ದುಂದುಮ್  ದುಂದುಮ್  ದುಂದುಮ್  ದುಂದುಮ್
          ದುಮತಕಟತಕಟತಕಟತೋಮ್  ದುಮತಕಟತಕಟತಕಟತೋಮ್
ಗಂಡು : ಸಂಜೀವಿನೀ ಶಿಖರ ಅಂಗೈಯಲಿ ತಂದೇ ಏಳೇಳೂ ಸಾಗರ ಹಾರಿದೆ ಉಸಿರಿಗೇ
            ಏಳಯ್ಯ ಮೇಲಕೇ ತಿಳಿಸಯ್ಯ ಲೋಕಕೆ
            ರಾಮ ಭಂಟನೇ ಊರ ನೆಂಟನೇ ಏಳೋ ಮಾರುತೀ
            ನಿನ್ನ ನಿಂದನೇ ಮಾಡೋ ಜನಕೇ ಮೆರೆಸೋ ಕೀರುತೀ
            ನೀ ದೇವರೆಯಾದರೇ ಈ ಗೆದ್ದರೇ ಆಗದು
           ನೀ ರಕ್ಷಕನಾದರೇ ಕುಳಿತಿದ್ದರೇ ಸಾಗದು
           ಸಂಜೀವಿನೀ ಶಿಖರ ಅಂಗೈಯಲಿ ತಂದೇ ಏಳೇಳೂ ಸಾಗರ ಹಾರಿದೆ ಉಸಿರಿಗೇ
           ಏಳಯ್ಯ ಮೇಲಕೇ (ಆಆಆಹಾ ಆಆಆಹಾ )ತಿಳಿಸಯ್ಯ ಲೋಕಕೆ (ಆಆಆಹಾ ಆಆಆಹಾ )
ಮಗು : ಎದ್ದನೋ ಮೇಲ ಎದ್ದನೋ ಸಿಡಿದೆದ್ದನೋ ನಮ್ಮ ಹನುಮನೋ
ಕೋರಸ್ : ರಾಮ ರಾಮ ರಾಮ ರಾಮ ರಾಮ ರಾಮ  ರಾಮ ರಾಮ  ರಾಮ ರಾಮ
ಮಗು : ತೆರೆದನೋ ತೆರೆ ತೆರೆದನೋ ಕಣ್ಣತೆರೆದನೋ ಘನ ಮಹಿಮನೋ
ಕೋರಸ್ : ರಾಮ ರಾಮ ರಾಮ ರಾಮ ಜೈ ಜೈ ಹನುಮನೇ  ಜೈ ಜೈ ಹನುಮನೇ
                ಜೈ ಜೈ ಹನುಮನೇ  ಜೈ ಜೈ ಹನುಮನೇ
               ಡೂಮ್ ಡೂಮ್ ಡೂಮ್ ದುಂತನಕನ ಡೂಮ್ ಡೂಮ್ ಡೂಮ್ ದುಂತನಕನ
               ಡೂಮ್ ಡೂಮ್ ಡೂಮ್ ದುಂತನಕನ ಡೂಮ್ ಡೂಮ್ ಡೂಮ್ ದುಂತನಕನ 
ಹೆಣ್ಣು :ಅಣ್ಣ ಸತ್ತರೇ  ಹುಣ್ಣಿಮೆ ನಿಲ್ಲದು ಡೂಮ್ ಡೂಮ್ ಡೂಮ್ ದುಂತನಕನ ಡೂಮ್ 
         ಅಕ್ಕ ಸತ್ತರೇ ಅಮವ್ಯಾಸೆ ನಿಲ್ಲದು ಡೂಮ್ ಡೂಮ್ ಡೂಮ್ ದುಂತನಕನ ಡೂಮ್  
          ಆ ಹುಣ್ಣಿಮೆ ಹೋಗಲೂ ಅಮವ್ಯಾಸೆ ಕಾಯದೂ
          ಅಮವ್ಯಾಸೆ ಹೋಗಲೂ ಆ ಹುಣ್ಣಿಮೆ ಕಾಯದೂ
          ಆಕಳು ಕಪ್ಪಾದರೇ ಹಾಲು ಕಪ್ಪಾಗದು ಅಪ್ಪನು ಮಣ್ಣು ತಿಂದರೇ ಮಕ್ಕಳ ತಪ್ಪಾಗದೂ
          ನಮ್ಮೂರ ದ್ಯಾವರಿದೂ (ಆಆಆ) ಈ ಹೆಗಲ ಹೊರೆಯಿದೂ (ಆಆಆ)
ಕೋರಸ್ :    ಆಆಆ... ಆಆಆ...   ಆಆಆ...   ಆಆ..ಆಆ..ಆಆ..ಆಆ..ಆಆ..ಆಆ..ಆಆ..ಆಆ..
ಹೆಣ್ಣು : ಎದ್ದನೋ ಮೇಲ ಎದ್ದನೋ ಸಿಡಿದೆದ್ದನೋ ನಮ್ಮ ಹನುಮನೋ 
ಕೋರಸ್ : ರಾಮ ರಾಮ ರಾಮ ರಾಮ ರಾಮ ರಾಮ  ರಾಮ ರಾಮ  ರಾಮ ರಾಮ
ಹೆಣ್ಣು  : ತೆರೆದನೋ ತೆರೆ ತೆರೆದನೋ ಕಣ್ಣತೆರೆದನೋ ಘನ ಮಹಿಮನೋ
ಕೋರಸ್ : ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ
ಹೆಣ್ಣು: ಜೈ ಜೈ ರಾಮ ಸೀತಾದಾಸ (ಜೈ ಜೈ ರಾಮ ಜೈ ಜೈ ರಾಮ)
         ಜೈ ಜೈ ರಾಮ ಸೀತಾದಾಸ (ಜೈ ಜೈ ರಾಮ ಜೈ ಜೈ ರಾಮ)
         ಜೈ ಜೈ ಮಾರುತಿ ಜೈ ಜೈ ಮಾರುತಿ  (ಜೈ ಜೈ ರಾಮ ಜೈ ಜೈ ರಾಮ)
         ಜೈ ಜೈ ಮಾರುತಿ ಜೈ ಜೈ ಮಾರುತಿ  (ಜೈ ಜೈ ರಾಮ ಜೈ ಜೈ ರಾಮ) 
ಗಂಡು: ಹೆಗಲ ಮೇಲೆ ದೇವರಿರಲೀ ಸಿಡಿಲ ಮರಿಗಳೇ 
           ಎದೆಯ ಒಳಗೇ ಪ್ರೇಮವಿರಲೀ ಅರಳು ಹೂಗಳೇ 
           ಈ ಹಾಡು ನಿಮ್ಮದೂ ಈ ನಾಡು ನಿಮ್ಮದೂ 
           ಈ ಮಣ್ಣನಾಳುವ ಸೌಭಾಗ್ಯ ನಿಮ್ಮದೂ     
           ನಿಮ್ಮ ಬದುಕಿಗೇ ನೀವೇ ರಾಜರೂ ನಿಮ್ಮ ಎದುರಿಗೇ ಯಾರು ನಿಲ್ಲರೂ 
           ಈ ಮೂಢ ಜನರಿಗೇ ನಿಮ್ಮ ಶಕ್ತಿ ತಿಳಿಸಿರಿ 
ಕೋರಸ್ : ಪೀಪ್ಪಿಪಿ ಪೀಪ್ಪಿಪಿ ಪೀಪ್ಪಿಪಿ ಪೀಪ್ಪಿಪಿ ಪೀಪ್ಪಿಪಿ ಪೀಪ್ಪಿಪಿ  ಮಾರುತಿ ಜೈ ಮಾರುತಿ 
               ಪೀಪ್ಪಿಪಿ ಪೀಪ್ಪಿಪಿ ಪೀಪ್ಪಿಪಿ ಪೀಪ್ಪಿಪಿ ಪೀಪ್ಪಿಪಿ ಮಾರುತಿ ಜೈ ಮಾರುತಿ 
               ಮಾರುತಿ ಮಾರುತಿ ಮಾರುತಿ ಮಾರುತಿ ಮಾರುತಿ ಮಾರುತಿ ಮಾರುತಿ 
              ಗೂಡ ಸೇರಲೆಂದೂ ಹೊಂಟನೋ ಕಪೀಶ 
             ಘಲಿರೋ ಘಲಿರೋ ಘಲಿರೋ ಎಂಬೋ ಗೆಜ್ಜೆಯ ನಾದದಲಿ 
             ಢಮರು ಢಮರು ಢಮರು ಎಂಬೋ ಡೊಳ್ಳಿನ ಮೇಳದಲಿ 
             ಘಲಿರೋ ಘಲಿರೋ ಘಲಿರೋ ಎಂಬೋ ಗೆಜ್ಜೆಯ ನಾದದಲಿ 
             ಢಮರು ಢಮರು ಢಮರು ಎಂಬೋ ಡೊಳ್ಳಿನ ಮೇಳದಲಿ 
ಗಂಡು : ಮಾರುತಿ ರಾಯ ಹೇಳೋ ಉಪಾಯ ಬೇಗನೇ ತೋರೋ ನಿನ್ನಯ ಮಾಯ
            ಕರುಣಿಸೋ ನಮಗೇ ಬೇರೇ ಲೋಕವಾ ಜೈ ಹನುಮಾ (ಜೈ ಹನುಮಾ)(ಜೈ ಹನುಮಾ)
            ಈಗಲೇ ತೋರೋ ನಿನ್ನ ಮಹಿಮಾ (ನಿನ್ನ ಮಹಿಮಾ ) (ನಿನ್ನ ಮಹಿಮಾ ) 
            ಬರಿ ರೋಷ ದ್ವೇಷ ಇಲ್ಲಿ ಉಸಿರಾಟ ಕಷ್ಟ ಇಲ್ಲೀ 
            ಸಾಕಾಗಿ ಹೋಯಿತೋ ಇಂಥ ಬದುಕು ಈ ಕಲಿಯುಗದಲ್ಲಿ   
            (ಆಆ ಆಆ ಆಆ ಆಆ  ಆಆ ಆಆ ಆಆ ಆಆ ಆಆ ಆಆ ಆಆ ಆಆ ಆಆ ಆಆ )
********************************************************************************

ಗಂಗೆ ಬಾರೇ ತುಂಗೆ ಬಾರೇ

ಸಾಹಿತ್ಯ & ಸಂಗೀತ: ಹಂಸಲೇಖ 
ಗಾಯನ: ಎಸ್.ಪಿ.ಬಾಲಸುಬ್ರಹ್ಮಣ್ಯಂ, ಎಸ್. ಜಾನಕಿ

ಗಂಡು : ಗಂಗೆ ಬಾರೇ ತುಂಗೇ ಬಾರೇ ಬಾರೇ ನೀರೇ ದಾಹ ತೀರೇ
            ಗಂಗೆ ಬಾರೇ ತುಂಗೇ ಬಾರೇ ಬಾರೇ ನೀರೇ ದಾಹ ತೀರೇ
ಕೋರಸ್ : ಮಾರುತಪ್ಪ ಯಾವನೊಪ್ಪ ನೀರೂ ಕೇಳೋನು
                ಒಂಟಿ ಬಾವಿ ಊರಿನಲ್ಲಿ  ದಾಹ ಅನ್ನನೋ
                ಮಾರುತಪ್ಪ ಯಾವನೊಪ್ಪ ನೀರೂ ಕೇಳೋನು
                ಒಂಟಿ ಬಾವಿ ಊರಿನಲ್ಲಿ  ದಾಹ ಅನ್ನನೋ
ಗಂಡು : ಗಂಗೆ ಬಾರೇ ತುಂಗೇ ಬಾರೇ ಬಾರೇ ನೀರೇ ದಾಹ ತೀರೇ
ಹೆಣ್ಣು : ಲ್ಲಲಾ ಲ್ಲಲಾ ಲ್ಲಲಾ ಲ್ಲಲಾ ಲ್ಲಲಾ ಲ್ಲಲಾ ಲ್ಲಲಾ ಲ್ಲಲಾ
ಹೆಣ್ಣು : ರಾಮನೂರಿನಲ್ಲಿ ಇಂದು ರಾಮನವಮಿಯೂ
          ಪಾನಕ ಮಜ್ಜಿಗೆ ಬಿಟ್ಟೂ ಯಾಕೇ ಕುಂತೇಯೋ
ಗಂಡು : ನೀರು ಮಜ್ಜಿಗೆ ಇಲ್ಲಿ ನೂರು ಗೌಡರೂ
            ನಾನು ನೀನೂ ಎಂದುಕೊಂಡು ಮಣ್ಣಿಗೇ ಹೋಯ್ದರೂ
            ಗಂಗೆ ಬಾರೇ ತುಂಗೇ ಬಾರೇ ಬಾರೇ ನೀರೇ ದಾಹ ತೀರೇ
ಕೋರಸ್ :ನೀರಿಗೆಂದೂ ಬಣ್ಣ ಬಾರದೂ ಪ್ರೀತಿಗೆಂದೂ ಕಣ್ಣು ಕಾಣದೂ
              ಕಣ್ಣಿನಲ್ಲಿ ಪ್ರೀತಿ ಬಂದರೇ ಪ್ರೇಮಿಗಳೇ ಮಾತೇ ಕೇಳರು
              ಮಾರುತಪ್ಪ ಯಾವನೊಪ್ಪ ಹೆಣ್ಣು ನೋಡೋನು
              ಹಳದಿ ಕಣ್ಣಿನೂರಿನಲ್ಲಿ ಕಣ್ಣು ಹಾಕೋನೂ
             ಲ್ಲಲಾ ಲ್ಲಲಾ ಲ್ಲಲಾ ಲ್ಲಲಾ ಲ್ಲಲಾ ಲ್ಲಲಾ ಲ್ಲಲಾ ಲ್ಲಲಾ
ಗಂಡು : ಯಾವ ಉರೆ ನಿಂದು                ಹೆಣ್ಣು : ನಾನಿದ್ದ ಊರೇ ನಂದೂ
ಗಂಡು : ಏನೇ ಹೆಸರು ನಿಂದು               ಹೆಣ್ಣು : ನಾ ಹೇಳಬಾರದಿಂದೂ
ಗಂಡು : ಹೇಳಿದರೇ ಗಂಟು ಹೋಗದೂ ನಾಚಿದರೇ ನಂಟು ಸೇರದೂ 
ಹೆಣ್ಣು : ಕೈಯ್ ಬಿಡು ಕಿಂದರಿ ಜೋಗೀ ಕಂಡು ಹಿಡಿಯೋ ಹೆಸರ ಕೂಗಿ
ಗಂಡು : ಹೇಳೂ ಬಾ ಗಿಳಿ ಬಾ ಬಳಿ ಬಾ
ಹೆಣ್ಣು : ಲ್ಲಲಾ ಲ್ಲಲಾ ಲ್ಲಲಾ ಲ್ಲಲಾ ಲ್ಲಲಾ ಲ್ಲಲಾ ಲ್ಲಲಾ ಲ್ಲಲಾ
ಗಂಡು : ಮಾರುತಪ್ಪಾ ಯಾವಳಪ್ಪಾ ಹೀಗೇ ಬಂದಳೋ 
           ನೀರು ಕೊಟ್ಟು ಜೀವ ಹೊತ್ತು ಕೊಂಡು ಹೋದಳು 
ಕೋರಸ್ : ಲ್ಲಲಾ ಲ್ಲಲಾ ಲ್ಲಲಾ ಲ್ಲಲಾ ಲ್ಲಲಾ ಲ್ಲಲಾ ಲ್ಲಲಾ ಲ್ಲಲಾ
ಗಂಡು :ಗಂಗೆ ಬಾರೇ...  ತುಂಗೇ ಬಾರೇ..  ಬಾರೇ ನೀರೇ... ದಾಹ ತೀರೇ
ಗಂಡು : ನೀರೂ ಕೊಟ್ಟೇ ನೀನು ನೀರಾಗಿ ಹೋದೆ ನಾನು 
            ಕಣ್ಣು ಬಿಟ್ಟೇ ನೀನೂ ಕಲ್ಲಾಗಿ ಹೋದೇ ನಾನೂ 
           ನೋಡಿದರೇ ಆಸೆ ತೀರದೂ ಹೇಳಿದರೇ ಮಾತು ಬಾರದೂ 
           ಹಾಡಿದರೇ ರಾಗ ಸಾಲದು ಸೇರಿದರೇ ಜೀವ ನಿಲ್ಲದೂ 
          ಪ್ರಿತಿಸೂ ಗಿಳಿ ಬಾ ಬಳಿ ಬಾ ಪ್ರಿತಿಸೂ ಗಿಳಿ ಬಾ ಬಳಿ ಬಾ 
          ಗಂಗೆ ಬಾರೇ...  ತುಂಗೇ ಬಾರೇ..  ಬಾರೇ ನೀರೇ... ದಾಹ ತೀರೇ   
         ಬಾರೇ ನೀರೇ... ದಾಹ ತೀರೇ 
********************************************************************************

ಚೆಂಡಿನ ಬಾಲೇ

ಸಾಹಿತ್ಯ & ಸಂಗೀತ: ಹಂಸಲೇಖ 
ಗಾಯನ: ಎಸ್.ಪಿ.ಬಾಲಸುಬ್ರಹ್ಮಣ್ಯಂ, ಎಸ್. ಜಾನಕಿ

ಗಂಡು : ಚೆಂಡಿನ ಬಾಲೇ ದಿಂಡೂ ಹೂವಿನ ಮಾಲೇ
            ಈ ಬೀರುಸೇ ನಿಂಗೇ ಬೀರುಸು ಕಣ್ಣವ್ವೋ  ಹೊಯ್
ಹೆಣ್ಣು : ತೋಳಿಂದ ಮ್ಯಾಗಡೇ ಕುಬುಸವಾದರೇ
          ಊರಾಗಿನ ಹೈಕಳೂ ಕೆಡ್ತಾವೂ ಓ ದೊರೇ
          ಬೀಡು ಬೀಡು ತರ ತರ ಶೋಕಿ ಬೀಡು  
ಗಂಡು : ಕ್ವಾಟೇ ಮರಿಯೋವಳೇ ಓಯ್ ಕ್ವಾಗಲೇ ದ್ವನಿಯೊವಳೇ
            ಈ ಬೀರುಸೇ ನಿಂಗೇ ಬೀರುಸು ಕಣ್ಣವ್ವೋ  ಹೊಯ್
ಹೆಣ್ಣು : ಮೊಣಕಾಲಿನ ಮ್ಯಾಗಡೆ ಸೀರೇವಾದರೇ
           ಊರಾಗೆ ಮಳೆಬೆಳೆ ಆದವೂ ದೊರೆ              
           ಬೀಡು ಬೀಡು ತರ ತರ ಶೋಕಿ ಬೀಡು   
ಗಂಡು : ಹೀಲು ಮೆಟ್ಟು ಕಾಲ್ಗಿಟ್ಟು ಸರಕ್ಕನ್ ಬಂದವಳೇ ಲಲಲನನನಾ ಜಗಜಗನಾ
            ಜಂಪರ್ ಉಟ್ಟು ಕುದುರೇ ಜುಟ್ಟು ಗಿರಿಕೀ ಕೊಟ್ಟವಳೇ ತರತರನಾ ನರನರನಾ
ಹೆಣ್ಣು : ಕೆಸರಾಗೋ ಕಾಲಿಗೇ ಕುಸರಿಯಾತಕೋ ಬೇವರಾಡೋ ಮೈಯಿಗೇ ಪುನುಗೂಯಾತಕೋ
         ಏರೋ ಕಟ್ಟೋಕೇ ಬದು ನೀರೋ ಕಟ್ಟೋಕೇ ಕೈಕಾಲಿಗೇ ಸೋಕಿಯಾತಕೋ
         ಸೀಮೆಗೇ ಇಲ್ಲದೋನೇ  ಕಿರುನಾಲಿಗೇ ನಿಲ್ಲೋದನೇ ನನ್ನ ಸಿಂಗಾರ ನೀನೇ ಕಣ್ಣಪ್ಪೋ ಹೊಯ್
ಗಂಡು : ಹಂಗಾರೇ ನಡಿಯವೋ ತೋಪಿಗೆ ಹೋಗಮ್ಮೋ ಸಿಂಗಾರ ಶೋಕಿಯಾ ದೂರ ಮಾಡೋಮ್ಮಾ
            ನಡಿ ನಡಿ ತೋಪಿನ ದಾರಿ ಹಿಡೀ....
ಕೋರಸ್ : ಗುರೂ ಗುರು ಗುರೂ ಗುರು ಗುರೂ ಗುರು  ಚೋರ್ ಗುರು ನೀನು ಗುರು ಏನ್ ಗುರೂ
              ಊರೊಳಗೇ ಬಿಂಕಾನಾ ಊರಾಚೆ ಜಂಭಾನ ದಂಡ ಹಾಕಬೇಕೂ ಇವರಿಗೇ
              ಓದಿಕೊಂಡ ಪ್ಯಾಟಿಕೊಂಡ ಹಳ್ಳಿಗೆ ಬಂದ ಅಲೆ ಎಸೆದಾ ಇದು ಹೊಸದಾ
             ನೀತಿಯೋಳು ನ್ಯಾಯವಂತ ತೋಪಿಗೆ ಬಂದಾ ಪದ ಎಸೆದಾ ಮತ್ತೇ ಕೋಸೆದಾ
ಹೆಣ್ಣು :    ಸರಪಂಚರೇ ಕ್ಷಮೀಸಿರಿ ಪ್ರೀತಿ ಮಾಡೇವು
ಗಂಡು : ಪರವಾನಿಗೆ ಕೊಟ್ಟರೇ ಊರ ಬಿಟ್ಟೇವೂ
ಕೋರಸ್ : ಹಾಕೀರಿ ದಂಡ ಇವ್ ಪುಂಡರ ಗಂಡ ಇಡೀ ನಮ್ಮೂರಿನ ಮಾಲೆಯ ಕಂದ ಹೊಯ್
               ಪ್ರೀತಿ ಮಾಡಪ್ಪಾ ನಿನ್ನ ಪದವ ಹಾಡಪ್ಪಾ ಬರಿ ಕಣದಾಗೇ ಮೂಳಗಬೇಡಪ್ಪಾ ಹೊಯ್
               ನಮ್ಮೂರಿನ ಹನುಮನೂ ಬೀದಿಗೆ ಬಿದ್ದೋನೇ ಉಳಿಸೀಳಿಸೇ ಹೋದರೇ ಊರು ಸುಟ್ಟತ್ತಾನೇ
               ನಡಿ ನಡಿ ಗುಡಿ ಕಡೇ ನಡಿ ನಡಿ
ಗಂಡು : ರಾಮನ ಬಾಣ ಈ ಮಕ್ಕಳ ಸೈನ್ಯ ನೀವಿದ್ದರೇ ನಂಗೇನೂ ಬೇಕಿಲ್ಲಾ ಹೊಯ್..
            ನೀವೆಲ್ಲರೂ ಎದ್ದರೇ ಲೋಕ ಬಗ್ಗೋದೂ ಆವಾಗಲೇ ಮಕ್ಕಳ ರಾಜ್ಯ ಹುಟ್ಟೋದೂ
            ಜೈ ಜವಾನೀ  ಜೈ ಕಿಸಾನೀ  ಜೈ ಪುಟಾಣೀ
  *******************************************************************************

ರಾಮನ ಭಂಟ 

ಸಾಹಿತ್ಯ & ಸಂಗೀತ: ಹಂಸಲೇಖ 
ಗಾಯನ: ಎಸ್.ಪಿ.ಬಾಲಸುಬ್ರಹ್ಮಣ್ಯಂ, ಮಂಜುಳಗುರುರಾಜ, ಹಂಸಲೇಖ  

ಗಂಡು : ಲೋಕ ನೋಡಲೆಂದೂ ಹೊಂಟನೋ ಕಪೀಶ
           ಘಲಿರೂ ಘಲಿರೂ ಘಲಿರೂ ಎಂಬೋ ಗೆಜ್ಜೆಯ ನಾದದಲೀ
           ಢಮರು ಢಮರು ಢಮರು ಎಂಬೋ ಡೊಳ್ಳಿನ ಮೇಳದಲೀ 
           ರಾಮನ ಭಂಟ ಊರಿಗೇ ನೆಂಟ
ಹೆಣ್ಣು : ಸಾಗರಗುಂಟ ಲಂಕೇಗೆ ಹೊಂಟ
ಗಂಡು : ಚೂಡಾಮಣಿಯ  ನೀಡಿ ಬರೋಕೇ.. ಜೈ ಹನುಮಾ
ಕೋರಸ್ : ಜೈ ಹನುಮಾ ಜೈ ಹನುಮಾ
ಗಂಡು : ಓ.. ತೊಳೆಸಿದ ಲಂಕೆ ದೊರೆಯ ಜನುಮಾ
ಕೋರಸ್ : ಆಹಾ ಜನುಮ ಆಹಾ ಜನುಮ
ಹೆಣ್ಣು : ಜೈ ಗಡುವಾ
ಎಲ್ಲರೂ : ಜೈ ಗಡವಾ ಜೈ ಗಡವಾ
ಹೆಣ್ಣು : ಓ.. ಇಳಿಸಿದ ಅಸುರ ಕತಿಯ ಗರ್ವ
ಕೋರಸ್ : ಆಹಾ.. ಗರ್ವ  ಆಹಾ.. ಗರ್ವ
ಗಂಡು : ಮರ ಬುಡದ ಗಿಡದ ಮೇಲೆ 
ಹೆಣ್ಣು : ಕಪಿರಾಯ ಇವನ ಲೀಲೆ
ಇಬ್ಬರು : ಮುಂಬಾಳೆ ಮಾವು ಸೇಬು ಇವನ ಕೊರಳಿಗೆ ಮಾಲೆ
ಗಂಡು : ರಾಮನ ಭಂಟ ಊರಿಗೇ ನೆಂಟ
ಹೆಣ್ಣು : ಸಾಗರಗುಂಟ ಲಂಕೇಗೆ ಹೊಂಟ
ಇಬ್ಬರು: ಚೂಡಾಮಣಿಯ  ನೀಡಿ ಬರೋಕೇ..
ಇಬ್ಬರು : ಜೈ ಮಾರುತೀ ಜೈ ಮಾರುತೀ ಜೈ ಮಾರುತೀ ಜೈ ಮಾರುತೀ
ಗಂಡು : ಶಕುತಿಯಲಿ ಇವ ಮಹಾವೀರ
ಹೆಣ್ಣು : ಭಕುತಿಯಲಿ ಇವ ಕುಂಬಾರ
ಗಂಡು : ಮೆದುಳಲಿ ಇವ ಮಂದಾತ್ಮಾ
ಹೆಣ್ಣು : ಸೇವೆಯಲ್ಲಿ  ಪರಮಾತ್ಮಾ...
ಇಬ್ಬರು : ಇವನೊಲಿದರೇ  ಇವನೊಲಿದರೇ  ಭೂತ ಪ್ರೇತ ಪಿಡೇ ಇರದೂ
             ನಮಗೀವ ನಿಜ ದೈವ 
ಗಂಡು : ಲೋಕ ನೋಡಲೆಂದೂ ಹೊಂಟನೋ ಕಪೀಶ
           ಘಲಿರೂ ಘಲಿರೂ ಘಲಿರೂ ಎಂಬೋ ಗೆಜ್ಜೆಯ ನಾದದಲೀ
           ಢಮರು ಢಮರು ಢಮರು ಎಂಬೋ ಡೊಳ್ಳಿನ ಮೇಳದಲೀ
           ರಾಮನ ಭಂಟ ಊರಿಗೇ ನೆಂಟ
ಹೆಣ್ಣು : ಬಾಲಗೊಂಚಿ ದಾರಿಗೇ ಚಾಚೀ
ಗಂಡು : ಭೀಮನ ಜಂಭ ಇಳಿಸಿದ ಹುಂಭ
ಹೆಣ್ಣು : ಮಾರುತಿ ಅಲ್ಲದೇ ದೇವ ಯೋಗಿಯೋ
ಗಂಡು : ಜೈ ಹನುಮಾ..
ಕೋರಸ್ : ಜೈ ಹನುಮಾ ಜೈ ಹನುಮಾ
ಗಂಡು : ಓ..ಜಯಸಿದ ನರನ ಏಳು ಜನುಮ
ಕೋರಸ್ : ಆಹಾ ಜನುಮ ಆಹಾ ಜನುಮ
ಹೆಣ್ಣು : ನರನಾದಿ ಮೂಲ ಇವನೋ
ಗಂಡು : ಹರನಾದಿ ಭಕುತ ಇವನೋ
ಇಬ್ಬರು : ರಾಮಾಯಣದಲಿ ಹನುಮನೊಂದು ಸುಂದರ ಕಾಂಡ
ಕೋರಸ್ : ಲೋಕ ನೋಡಲೆಂದೂ ನಿಂತನೋ ಕಪೀಶ
           ನಿಂತರೇ ನಿಂತರೇ ಕಾಯಿದೇ ಎಂಬೋ ಮೂಢರ ಊರಿನಲೀ
           ದೇವರಿಗಿಂತಲೂ ದೊಡ್ಡವರೆಂಬೋ ಮೂರ್ಖರ ಮಧ್ಯದಲೀ
           ಲೋಕ ನೋಡಲೆಂದೂ ಕುಂತನೋ ಕಪೀಶ
           ಹುಂಬರು ಶುಂಭರೂ ಆರುತಿ ಎತ್ತೋ ಮಾರುತಿ ಜಾತ್ರೆಯಲೀ
           ಬೀದೀಲಿ ಕೂರುತ ಕಣ್ಣನು ಬಿಟ್ಟನೋ ಹಬ್ಬದ ರಾತ್ರಿಯಲೀ
ಗಂಡು : ದ್ವೇಷವೇ ಇಲ್ಲಿ ಉಸಿರಾಟ     ಹೆಣ್ಣು : ದೇಶವೆಲ್ಲಾ ಹೊಡೆದಾಟ
ಗಂಡು : ಪಾರ್ಟಿಗೆ ಇಲ್ಲಿ ಸೆಣೆಸಾಟ      ಹೆಣ್ಣು : ಸೀಟಿಗಾಗಿ ಕಾದಾಟ
ಇಬ್ಬರು : ಇದು ಮುಗಿಯದ ಬಗೆಹರೆಯದ ಪಾಪ ಅರಿಯದಿರುವ ಜನರ ದಿನನಿತ್ಯದ ಗೋಳಾಟ
ಹೆಣ್ಣು : ಒಂದೇ ನೆಲದಲ್ಲಿ ಒಂದು ಮತವಿಲ್ಲ
ಗಂಡು : ಹಿಂದೆ ಬೆನ್ನ ಇರಿಯುವ ಕಥೆ ಹೊಸದಲ್ಲ
ಹೆಣ್ಣು : ವಿದ್ಯೆ ವಿಜ್ಞಾನ ನಮಗೆ ಬೇಕಿಲ್ಲಾ
ಗಂಡು : ಮುಂದೇ ಬರಬೇಕು ಎಂಬ ಛಲವಿಲ್ಲಾ
ಹೆಣ್ಣು : ಇದು ನಮಗೆ ತಿಳಿಯದಿರಲು
ಗಂಡು : ಒಳ ತಿರಳು ದೊರಕದಿರಲೂ
ಇಬ್ಬರು : ಈ ಹಳ್ಳಿ ಗಿಳ್ಳಿ ಒಂದುಗೂಡುವ ಶುಭದಿನವಿಲ್ಲಾ
ಗಂಡು : ಇದು ಹಳ್ಳಿ
ಕೋರಸ್ : ಇದು ಹಳ್ಳಿ .. ಇದು ಹಳ್ಳಿ    
ಇಬ್ಬರು : ದೇಶದ ಬೆನ್ನೆಲಬೇ ಹಳ್ಳಿ 
ಕೋರಸ್ : ಇದು ಹಳ್ಳಿ .. ಇದು ಹಳ್ಳಿ 
ಇಬ್ಬರು : ಬರಿ ರೋಷ ದ್ವೇಷದಿಂದ ಬಡತನ ಬೇಗೆಯಿಂದ
             ಇಡೀ ದೇಶವನ್ನೇ ಸುಡಲು ಹೊರಟ ಬೆಂಕಿಯ ಕೊಳ್ಳಿ
ಕೋರಸ್ : ಹನುಮಾಪುರದಲೀ ಎರಡೇ ಪಾರ್ಟಿ ಆ ಪಾರ್ಟಿಗೆ ಪಾರ್ಟಿ ಪೈಪೋಟಿ
                ಅಲ್ಲೇ ರಕುತದ ಓಕುಳಿಯಾಟ ಅಲ್ಲಿನ ಜನಗಳ ಗತಿ ಗೋಳಾಟ
*******************************************************************************

ಊರು ಉದ್ದಾರ ಮಾಡಿತ್ತಿನಂಥಾ 

ಸಾಹಿತ್ಯ ಮತ್ತು ಸಂಗೀತ: ಹಂಸಲೇಖ 
ಗಾಯನ: ಎಸ್.ಪಿ.ಬಾಲಸುಬ್ರಹ್ಮಣ್ಯಂ, ಎಸ್. ಜಾನಕಿ

ಕೋರಸ್ : ಜನಗಳೋ ಜನಗಳೋ ಇವರು ಕೆಟ್ಟ ಜನಗಳೋ
                ಜನಗಳೋ ಜನಗಳೋ ಇವರು ಕೆಟ್ಟ ಜನಗಳೋ
                ಜನಗಳೋ ಜನಗಳೋ ಇವರು ಕೆಟ್ಟ ಜನಗಳೋ
                ಜನಗಳೋ ಜನಗಳೋ ಇವರು ಕೆಟ್ಟ ಜನಗಳೋ
ಮಗು : ಊರು ಉದ್ದಾರ ಮಾಡ್ತಿನಂತ ಹೋದರೆಲ್ಲಾ ಎತ್ತಹೊದರಣ್ಣಾ...  
ಗಂಡು : ಎಕ್ಕುಟ ಹೊದರಣ್ಣಾ...
ಮಗು : ಪಾಪನನ್ನ ಮಗ ಮನಷ್ಯನ ಬುದ್ದಿ ಹೇಳೋದೆರೆಲ್ಲಾ ಎತ್ತಹೊದರಣ್ಣಾ...
ಗಂಡು : ಎಕ್ಕುಟ ಹೊದರಣ್ಣಾ...  ಮನುಷ್ಯ ಹಾವು ಹಲ್ಲಿ ಚೇಳಿಗಿಂತಲೂ ವಿಷ ವಿಷ ವಿಷ
            ಮನುಷ್ಯ ತೋಳ ಸಿಂಹ ಹುಲಿಗಿಂತಲೂ ಕ್ರೂರಾ ಕ್ರೂರಾ ಕ್ರೂರಾ
ಮಗು : ಊರು ಉದ್ದಾರ ಮಾಡ್ತಿನಂತ ಹೋದರೆಲ್ಲಾ ಎತ್ತಹೊದರಣ್ಣಾ...  
ಗಂಡು : ಎಕ್ಕುಟ ಹೊದರಣ್ಣಾ...  
ಮಗು : ಪಾಪನನ್ನ ಮಗ ಮನಷ್ಯನ ಬುದ್ದಿ ಹೇಳೋದೆರೆಲ್ಲಾ ಎತ್ತಹೊದರಣ್ಣಾ...
ಗಂಡು : ಎಕ್ಕುಟ ಹೊದರಣ್ಣಾ...  
ಗಂಡು : ಅದೇನೋ ಜನಗಳೋ ಅದ್ಯಾಕ ಹಂಗೇ ಆಡ್ತಾರೂ   
ಹೆಣ್ಣು : ಅದ್ಯಾಕ ಹಂಗೇ ಆಡ್ತಾರೂ
ಗಂಡು : ಊರು ಕಟ್ಟತ್ತಾರೆ ಕೇರಿ ಕಟ್ಟತ್ತಾರೆಮನೆ ಕಟ್ಟತ್ತಾರೆ
           ಬಾಳೋದಕ್ಕೋ ಕೋಳಿ ಕಚ್ಚಾಟ
ಹೆಣ್ಣು : ಅದ್ಯಾನ ಮನುಷ್ಯರೋ ಅದ್ಯಾಕ ಹಂಗ ಮಾಡ್ತಾರೋ
ಗಂಡು : ಅದ್ಯಾಕ ಹಂಗ ಮಾಡ್ತಾರೋ
ಹೆಣ್ಣು : ನೆಲ ಉಳುತ್ತಾರೇ ಕಳೆ ಕೀಳ್ತಾರೆ ಬೆಳೆ ತಟ್ಟತ್ತಾರೇ ತಿನ್ನೊದಕ್ಕೋ ನಾಯಿ ಕಚ್ಚಾಟ
ಗಂಡು : ಮಾತಿನಲ್ಲಿ ಹಸುಳೆಯೋ ಬಾಯಿ ಬಿಟ್ರೇ ಮೊಸಳೆಯೋ ನರವಾನರೋ
ಹೆಣ್ಣು : ಈ ನರವಾನರೋ
ಗಂಡು : ತಾನಾಗಿ ಸುಮ್ಮಕೇ ಇರನೋ ಇರಲು ಬಿಡನೋ
ಮಗು : ಊರು ಉದ್ದಾರ ಮಾಡ್ತಿನಂತ ಹೋದರೆಲ್ಲಾ ಎತ್ತಹೊದರಣ್ಣಾ...  
ಗಂಡು : ಎಕ್ಕುಟ ಹೊದರಣ್ಣಾ...
ಮಗು : ಪಾಪನನ್ನ ಮಗ ಮನಷ್ಯನ ಬುದ್ದಿ ಹೇಳೋದೆರೆಲ್ಲಾ ಎತ್ತಹೊದರಣ್ಣಾ...
ಗಂಡು : ಎಕ್ಕುಟ ಹೊದರಣ್ಣೋ...
ಹೆಣ್ಣು : ಅದೇನ್ ಬುದ್ದಿನೋ ಅದ್ಯಾಕ್ ಹಿಂಗ್  ಆಡ್ತಾರೋ
ಗಂಡು : ಅದ್ಯಾಕ್ ಆಡ್ತಾರೋ
ಹೆಣ್ಣು : ಪ್ರೀತಿ ಅಂತಾರೇ ಪ್ರೀತಿ ಮಧ್ಯಕ್ಕೇ ಜಾತಿ ತರ್ತಾರೇ
          ಧರ್ಮಾತ್ಮರನೇ ಶಿಲುಬೆಗೇ ಇಡ್ತಾರೇ
ಗಂಡು : ಅದೇನ್ ಕರ್ಮಾನೋ ಅದ್ಯಾಕ್ ಹಿಂಗ್ ಮಾಡ್ತಾರೋ
ಹೆಣ್ಣು : ಅದ್ಯಾಕ್ ಹಿಂಗ್ ಮಾಡ್ತಾರೋ
ಗಂಡು : ಸತ್ಯ ಅಂತಾರೇ ಸತ್ಯ ಹೇಳಿದರೇ ಹತ್ಯಾ ಮಾಡ್ತಾರೇ
            ಮಹಾತ್ಮರಿಗೇ ಗುಂಡನ್ನ ಇಕ್ತಾರೇ
ಹೆಣ್ಣು : ಒಳ್ಳೆತನ ಅರ್ಧ ಭಾಗ ಕೆಟ್ಟತನ ಮಿಕ್ಕ ಭಾಗ ಹಾಗೂ ಅಲ್ಲ
ಗಂಡು : ಇವನೂ ಹೀಗೂ ಅಲ್ಲ
ಹೆಣ್ಣು : ಭೂಮಿಗೇ ಇವನೇಕೆ ಗೆಳೆಯಾ ಇವನೇ ಪ್ರಳಯಾ
ಗಂಡು : ಊರು ಉದ್ದಾರ ಮಾಡ್ತಿನಂತ ಹೋದರೆಲ್ಲಾ ಎತ್ತಹೊದರಣ್ಣಾ...  
ಹೆಣ್ಣು  : ಎಕ್ಕುಟ ಹೊದರಣ್ಣಾ...
ಮಗು : ಹಹ್ಹಹ್ಹ .. ಪಾಪನನ್ನ ಮಗ ಮನಷ್ಯನ ಬುದ್ದಿ ಹೇಳೋದೆರೆಲ್ಲಾ ಎತ್ತಹೊದರಣ್ಣಾ...
ಹೆಣ್ಣು :  ಎಕ್ಕುಟ ಹೊದರಣ್ಣೋ...
ಗಂಡು:  ಮನುಷ್ಯ ಹಾವು ಹಲ್ಲಿ ಚೇಳಿಗಿಂತಲೂ ವಿಷ ವಿಷ ವಿಷ
ಹೆಣ್ಣು :  ಮನುಷ್ಯ ತೋಳ ಸಿಂಹ ಹುಲಿಗಿಂತಲೂ ಕ್ರೂರಾ ಕ್ರೂರಾ ಕ್ರೂರಾ
ಮಗು : ಊರು ಉದ್ದಾರ ಮಾಡ್ತಿನಂತ ಹೋದರೆಲ್ಲಾ ಎತ್ತಹೊದರಣ್ಣಾ...  
ಗಂಡು : ಎಕ್ಕುಟ ಹೊದರಣ್ಣಾ...  
ಮಗು : ಪಾಪನನ್ನ ಮಗ ಮನಷ್ಯನ ಬುದ್ದಿ ಹೇಳೋದೆರೆಲ್ಲಾ ಎತ್ತಹೊದರಣ್ಣಾ...
ಗಂಡು : ಎಕ್ಕುಟ ಹೊದರಣ್ಣೋ ...  
ಕೋರಸ್ : ಜನಗಳೋ ಜನಗಳೋ ಇವರು ಕೆಟ್ಟ ಜನಗಳೋ
                ಜನಗಳೋ ಜನಗಳೋ ಇವರು ಕೆಟ್ಟ ಜನಗಳೋ
                ಜನಗಳೋ ಜನಗಳೋ ಇವರು ಕೆಟ್ಟ ಜನಗಳೋ
                ಜನಗಳೋ ಜನಗಳೋ ಇವರು ಕೆಟ್ಟ ಜನಗಳೋ
*******************************************************************************

ಖದೀಮ ಕಳ್ಳರು (1982)


ಕತ್ತಲು ತುಂಬಿದೆ 

ಚಲನ ಚಿತ್ರ: ಖದೀಮ ಕಳ್ಳರು (1982)
ನಿರ್ದೇಶನ: ವಿಜಯ್  ಸಂಗೀತ : ಶಂಕರ್-ಗಣೇಶ್ 
ಸಾಹಿತ್ಯ : ಚಿ.ಉದಯಶಂಕರ್ 
ಗಾಯನ : ಎಸ್.ಜಾನಕೀ 
ನಟನೆ: ಅಂಬರೀಷ್, ಪ್ರಭಾಕರ್, ರವಿಚಂದ್ರನ್ 

ಕತ್ತಲು ತುಂಬಿದೆ ಭಯವನು ತಂದಿದೇ
ದಾರಿಯ ಕಾಣದೇ ಹೆದರುತ ನಡುಗಿದೇ
ಓ... ಅಪಾಯ ಬಾ... ಹತ್ತಿರಾ ಇನ್ನೂ ಹತ್ತಿರಾ
ಕತ್ತಲು ತುಂಬಿದೆ ಭಯವನು ತಂದಿದೇ
ದಾರಿಯ ಕಾಣದೇ ಹೆದರುತ ನಡುಗಿದೇ
ಹೇಹೇಹೇಹೇಹೇಹೇಹೇಹೇಹೇಹೇಹೇಹೇ
ಎಲ್ಲಿಗೆ ಹೋಗಲಿ ಯಾರನ್ನೂ ನೋಡಲೀ
ಮನಸಿನ ಕಳವಳ ಯಾರಿಗೇ ಹೇಳಲೀ
ನಿದ್ದೆಯು ಕಣ್ಣಲ್ಲಿ ಆತುರಾ ಎದೆಯಲಿ
ಬೆವರಿನ ಹನಿಗಳು ಜಾರಿವೇ ಮೊಗದಲೀ
ಹೂವನ್ನು ಇನ್ನೆಂದು ನಾ ಬಿಟ್ಟು ಇರಲಾರೇ
ನಿನ್ನಿಂದ ಈ ಜೀವ ಬಿಡಲಾರೇ... ಬಾ
ಕತ್ತಲು ತುಂಬಿದೆ ಭಯವನು ತಂದಿದೇ
ದಾರಿಯ ಕಾಣದೇ ಹೆದರುತ ನಡುಗಿದೇ
(ಓ.ಓಓಓ .. ಅಪಾಯ.. ಅಪಾಯ) ಬಾ... ಹತ್ತಿರಾ ಇನ್ನೂ ಹತ್ತಿರಾ  
ಕತ್ತಲು ತುಂಬಿದೆ ಭಯವನು ತಂದಿದೇ
ದಾರಿಯ ಕಾಣದೇ ಹೆದರುತ ನಡುಗಿದೇ
ಚೆಲುವನ ಸ್ನೇಹಕೆ ಒಲವಿನ ಮಾತಿಗೆ 
ಅರಿಯದೇ ನನ್ನನ್ನೇ ನೀಡಿದೇ ಕಾಣಿಕೆ 
ಸಿರಿಯನು ನೂಕಿದೇ ಗೆಳೆಯನ ಸೇರಿದೆ 
ಸ್ವರ್ಗವ ನೋಡಿದ ಹರುಷದಿ ತೇಲಿದೆ.. 
ನಾ ಕಂಡ ಆನಂದ ಮಣ್ಣಲ್ಲಿ ಮಣ್ಣಾಯ್ತು 
ಎದುರಲ್ಲಿ ಯಮರಾಯ ಬಂದಂತೇ ಕನಸಾಯ್ತು.. ಬಾ.. 
ಕತ್ತಲು ತುಂಬಿದೆ ಭಯವನು ತಂದಿದೇ
ದಾರಿಯ ಕಾಣದೇ ಹೆದರುತ ನಡುಗಿದೇ
(ಓ.ಓಓಓ .. ಅಪಾಯ.. ಅಪಾಯ) ಬಾ... ಹತ್ತಿರಾ ಇನ್ನೂ ಹತ್ತಿರಾ  
ಕತ್ತಲು ತುಂಬಿದೆ ಭಯವನು ತಂದಿದೇ
ದಾರಿಯ ಕಾಣದೇ ಹೆದರುತ ನಡುಗಿದೇ
********************************************************************************

ಚೆಲುವೇ ಬಾ ಬಾ ಬಾ 

ಸಾಹಿತ್ಯ : ಚಿ.ಉದಯಶಂಕರ್
ಗಾಯನ : ಎಸ್.ಪಿ.ಬಾಲಸುಬ್ರಹ್ಮಣ್ಯಂ 

ಸುಬಿಯಾ ಸುಬಿಯಾ ಸುಬಿಯಾ ಸುಬಿಯಾ ಸುಬಿಸುಬಿಯಾ
ಸುಬಿಯಾ ಸುಬಿಯಾ ಸುಬಿಯಾ ಸುಬಿಯಾ ಸುಬಿಸುಬಿಯಾ ತರರಪ್ಪಪ್ಪಾ
ಚೆಲುವೇ  ಬಾ..ಬಾ.. ಬಾ...ಬಾ..
ಗೆಳತೀ ಬಾ...ಬಾ ... ಬಾ.... ಬಾ...
ಇಂದು ಈ ನಿನ್ನಾ ಹೊನ್ನ ಮೈ ಬಣ್ಣಾ
ಇಂದು ಈ ನಿನ್ನಾ ಹೊನ್ನ ಮೈ ಬಣ್ಣಾ
ಕಂಡು ಸೋತು ಹೋದೇ ಚಿನ್ನಾ
ಬಂದೇ ಸೇರಲೆಂದೇ ನಿನ್ನಾ
ಕಂಡು ಸೋತು ಹೋದೇ ಚಿನ್ನಾ
ಬಂದೇ ಸೇರಲೆಂದೇ ನಿನ್ನಾ
ಚೆಲುವೇ  ಬಾ..ಬಾ.. ಬಾ...ಬಾ..
ಗೆಳತೀ ಬಾ...ಬಾ ... ಬಾ.... ಬಾ...  
ಇಂದು ಈ ನಿನ್ನಾ ಹೊನ್ನ ಮೈ ಬಣ್ಣಾ
ಇಂದು ಈ ನಿನ್ನಾ ಹೊನ್ನ ಮೈ ಬಣ್ಣಾ
ಕಂಡು ಸೋತು ಹೋದೇ ಫಿಫ್ಟಿ
ಬಂದೇ ಕೆಳದೆಂದು ಫಿಫ್ಟಿ
ಕಂಡು ಸೋತು ಹೋದೇ ಫಿಫ್ಟಿ
ಬಂದೇ ಕೆಳದೆಂದು ಫಿಫ್ಟಿ 
ಪಬಬಪಪಪಪ  ಪೆಬಬಪಪಪಪ  ನಿದಮ ಪಪ 
(ಪಬಬಪಪಪಪ  ಪೆಬಬಪಪಪಪ ನಿದಮ ಪಪ)
ನಿದಮ ಪಗಸರಿ ಸನಿದನಿದನಿ ನಿದನಿ ನಿದನಿ 
(ನಿದಮ ಪಗಸರಿ ಸನಿದನಿದನಿ ನಿದನಿ ನಿದನಿ )
ದನಿಸ (ದನಿಸ ) ನಿಸಗ (ನಿಸಗ) ಗಮಗ ಗಮಗ 
(ಗಮಗ ಗಮಗ )ಸಸನಿ (ಪಪಮ) ಮಾಗನಿಸ ಗಮನಿ  
ದರಿಸರಿಸರಿಗಮ  ದರಿಸರಿಸರಿಗಮ  ದರಿಸರಿಸಗ 
ಕಮಲಗಳು ಈ ನಯನಗಳು ಹವಳಗಳು ಈ ಅಧರಗಳು 
ನಿನ್ನಂಥ ಹೆಣ್ಣ ಕಾಣೇನೂ ಸುಂದರಿ ನಿನ್ನನ್ನು ಬಿಟ್ಟು ಹೋಗೆನು
ಶಬರಿಬಾಬಾರಿಬಾಬಾ 
ಕಮಲಗಳು ಈ ನಯನಗಳು ಹವಳಗಳು ಈ ಅಧರಗಳು 
ನಿನ್ನಂಥ ಹೆಣ್ಣ ಕಾಣೇನೂ ಸುಂದರಿ ನಿನ್ನನ್ನು ಬಿಟ್ಟು ಹೋಗೆನು
ನೋಟವು ಮಿಂಚಿನ ಹಾಗೇ ಅದೇನೂ ಚೆಂದವೋ 
ಆಟವು ಜಿಂಕೆಯ ಹಾಗೇ ಅದೇನೂ ಅಂದವೋ ಹ್ಹಾಂ 
ನೋಟವು ಮಿಂಚಿನ ಹಾಗೇ ಅದೇನೂ ಚೆಂದವೋ 
ಆಟವು ಜಿಂಕೆಯ ಹಾಗೇ ಅದೇನೂ ಅಂದವೋ 
ಚೆಲುವೇ  ಬಾ..ಬಾ.. ಬಾ...ಬಾ..
ಗೆಳತೀ ಬಾ...ಬಾ ... ಬಾ.... ಬಾ...  
ಇಂದು ಈ ನಿನ್ನಾ ಹೊನ್ನ ಮೈ ಬಣ್ಣಾ
ಇಂದು ಈ ನಿನ್ನಾ ಹೊನ್ನ ಮೈ ಬಣ್ಣಾ
ಕಂಡು ಸೋತು ಹೋದೇ ಫಿಫ್ಟಿ
ಬಂದೇ ಕೆಳದೆಂದು ಫಿಫ್ಟಿ
ಕಂಡು ಸೋತು ಹೋದೇ ಫಿಫ್ಟಿ
ಬಂದೇ ಕೆಳದೆಂದು ಫಿಫ್ಟಿ 
ಕಂಡು ಸೋತು ಹೋದೇ ಚಿನ್ನಾ
ಬಂದೇ ಸೇರಲೆಂದೇ ನಿನ್ನಾ
ಹೊಳೆಯುತಿದೆ ಬಾ ಎನ್ನುತಿದೇ ಕರಗಳನು ಆಹ್ಹಾ ಕೆಣುಕುತಿದೆ 
ನಿನ್ನನ್ನು ನೋಡುವ ಆಸೆಯೂ ಮೆಲ್ಲನೇ ಕೈಯಿಂದ ಮುಟ್ಟೋ ಆಸೆಯೋ 
ಶಬರಬರಬರಬರಬ  
ಹೊಳೆಯುತಿದೆ ಬಾ ಎನ್ನುತಿದೇ ಕರಗಳನು ಆಹ್ಹಾ ಕೆಣುಕುತಿದೆ 
ಹ್ಹಾಂ ..  ನಿನ್ನನ್ನು ನೋಡುವ ಆಸೆಯೂ ಮೆಲ್ಲನೇ ಕೈಯಿಂದ ಮುಟ್ಟೋ ಆಸೆಯೋ 
ಕಾಣದೇ ಹೋಯಿತೇ ಅಯ್ಯೋ ಅದೇನೋ ಮಾಯೆವೋ  
ಬಲ್ಲನೇ ಠಕ್ಕನೇ ನಾನು  ಇದ್ಯಾರ ಮೋಸವೋ 
ಕಾಣದೇ ಹೋಯಿತೇ ಅಯ್ಯೋ ಅದೇನೋ ಮಾಯೆವೋ  
ಬಲ್ಲನೇ ಠಕ್ಕನೇ ನಾನು  ಇದ್ಯಾರ ಮೋಸವೋ 
ಚೆಲುವೇ  ಬಾ..ಬಾ.. ಬಾ...ಬಾ..
ಗೆಳತೀ ಬಾ...ಬಾ ... ಬಾ.... ಬಾ...
ಇಂದು ಈ ನಿನ್ನಾ ಹೊನ್ನ ಮೈ ಬಣ್ಣಾ
ಇಂದು ಈ ನಿನ್ನಾ ಹೊನ್ನ ಮೈ ಬಣ್ಣಾ
ಕಂಡು ಸೋತು ಹೋದೇ ಚಿನ್ನಾ
ಬಂದೇ ಸೇರಲೆಂದೇ ನಿನ್ನಾ
ಕಂಡು ಸೋತು ಹೋದೇ ಚಿನ್ನಾ
ಬಂದೇ ಸೇರಲೆಂದೇ ನಿನ್ನಾ
ಕಂಡು ಸೋತು ಹೋದೇ ಫಿಫ್ಟಿ  
ಬಂದೇ ಕೆಳದೆಂದು ಫಿಫ್ಟಿ
ಕಂಡು ಸೋತು ಹೋದೇ ಫಿಫ್ಟಿ
ಬಂದೇ ಕೆಳದೆಂದು ಫಿಫ್ಟಿ 
ಲಲ್ಲಲ್ಲಲಾ 
********************************************************************************

ಆಸೆಯಿಂದ ಪ್ರೀತಿಯಿಂದ

ಸಾಹಿತ್ಯ : ಚಿ.ಉದಯಶಂಕರ್
ಗಾಯನ : ಎಸ್.ಪಿ.ಬಾಲಸುಬ್ರಹ್ಮಣ್ಯಂ

ಆಸೆಯಿಂದ ಪ್ರೀತಿಯಿಂದ ನನ್ನದು ಎಂಬ ಭಾವನೆಯಿಂದ
ನೋಡಿದರೇ ಸಾಕು ಕೈಯಲ್ಲಿ ಮುಟ್ಟಿದರೆ ಸಾಕು
ಆಸೆಯಿಂದ ಪ್ರೀತಿಯಿಂದ ನನ್ನದು ಎಂಬ ಭಾವನೆಯಿಂದ
ನೋಡಿದರೇ ಸಾಕು ಕೈಯಲ್ಲಿ ಮುಟ್ಟಿದರೆ ಸಾಕು
ಇಂದೇಕೆ ನನ್ನ ಮೇಲೆ ಈ ಕೋಪವೂ 
ನನ್ನಲ್ಲಿ ಏನಿಂಥ ಬಿಗುಮಾನವೂ 
ಇಂದೇಕೆ ನನ್ನ ಮೇಲೆ ಈ ಕೋಪವೂ 
ನನ್ನಲ್ಲಿ ಏನಿಂಥ ಬಿಗುಮಾನವೂ 
ಜೊತೆಯಲ್ಲಿ ಇರುವಾಗ ಈ ಮೌನವೂ ಹ್ಹಾಂ..  
ಸರಿಯಲ್ಲಾ ಈ ನಿನ್ನ ಹುಡುಗಾಟವೂ 
ಒಲವಿಂದ ಬಾ ಚಿನ್ನಾ ತೋಳಿಂದ ಬಳಸೆನ್ನಾ 
ಒಲವಿಂದ ಬಾ ಚಿನ್ನಾ ತೋಳಿಂದ ಬಳಸೆನ್ನಾ 
ಕಣ್ಣಲ್ಲಿ ಕಣ್ಣ ಬೆರೆಸುತ ನನ್ನಾ ನೋಡಿದರೇ ಸಾಕು 
ಹೂ ನಗೆ ಚೆಲ್ಲಿದರೆ ಸಾಕೂ 
ಆಸೆಯಿಂದ...  ರಪ್ಪಪ್ಪಾಪ್ಪಪ್ಪಪ್ಪಪ್ಪಾ
ಪ್ರೀತಿಯಿಂದ ರಪ್ಪಪ್ಪಾಪ್ಪಪ್ಪಪ್ಪಪ್ಪಪ್ಪಾ
ನನ್ನದು ಎಂಬ ಭಾವನೆಯಿಂದ ನೋಡಿದರೇ ಸಾಕು
ಕೈಯಲ್ಲಿ ಮುಟ್ಟಿದರೆ ಹಹ್ಹಹ್ಹಾ 
ತಂಗಾಳಿ ಮೈ ಸೋಕಿ ಚಳಿಯಾಗಿದೆ 
ಈ ಒಂಟಿ ಬಾಳಿನ್ನೂ ಸಾಕಾಗಿದೇ 
ಸಂಗಾತಿ ನಿನಗಿಂದು ಏನಾಗಿದೇ 
ಹೂವಂಥ ಮನಸೇಕೆ ಕಲ್ಲಾಗಿದೇ 
ಈ ದೂರ ನಮಗೇಕೆ ಈ ವಿರಹ ಇನ್ನೇಕೇ 
ಓಡುತ ಬಂದು ಬಳಿಯಲಿ ನಿಂದು 
ಪ್ರೇಮದ ಮಾತಾಡು ಪ್ರೀತಿಯ ಕಾಣಿಕೆಯಾ ನೀಡು 
ಆಸೆಯಿಂದ...  ತರತರತರತರ
ಪ್ರೀತಿಯಿಂದ ತರತರತರತರ
ನನ್ನದು ಎಂಬ ಭಾವನೆಯಿಂದ ನೋಡಿದರೇ ಸಾಕು
ಕೈಯಲ್ಲಿ ಮುಟ್ಟಿದರೆ ಹ್ಹುಹ್ಹು 
ಬೇರೊಂದು ಹೂವೇಕೋ ಹೂ ಬಳ್ಳಿಗೆ 
ಶೃತಿ ಏಕೆ ಕೋಗಿಲೆಯ ಸಂಗೀತಕೆ  ಹ್ಹಾಹ್ಹಾ 
ಬೇರೊಂದು ಹೂವೇಕೋ ಹೂ ಬಳ್ಳಿಗೆ 
ಶೃತಿ ಏಕೆ ಕೋಗಿಲೆಯ ಸಂಗೀತಕೆ  
ನೀ ಚೆಲುವೆ ಈ ಒಡವೇ ಇನ್ನೇತಕೇ 
ಬಂಗಾರಿ ಬಂಗಾರ ನಿನಗೇತಕೆ 
ನಮ್ಮೊಲವೇ ಆಭರಣ ಆನಂದ ಈ ಮಿಲನ 
ನಮ್ಮೊಲವೇ ಆಭರಣ ಆನಂದ ಈ ಮಿಲನ 
ಎಂದಿಗೂ ಹೀಗೆ ನಾವ್ ಒಂದಾಗಿ 
ಬಾಳಿದರೇ ಸಾಕು ಬೇರೆ ಇನ್ನೇನು ಬೇಕೂ 
ಆಸೆಯಿಂದ...  ತರತರತರತರ
ಪ್ರೀತಿಯಿಂದ ರರರರರ
ನನ್ನದು ಎಂಬ ಭಾವನೆಯಿಂದ ನೋಡಿದರೇ ಸಾಕು
ಕೈಯಲ್ಲಿ ಮುಟ್ಟಿದರೆ ಹ್ಹಹ್ಹಹ್ಹ 
********************************************************************************

ಎಂಥ ಚೆನ್ನ ನಿನ್ನ ಮೊರೆ


ಸಾಹಿತ್ಯ : ಚಿ.ಉದಯಶಂಕರ್
ಗಾಯನ : ಎಸ್.ಪಿ.ಬಾಲಸುಬ್ರಹ್ಮಣ್ಯಂ, ಎಸ್.ಜಾನಕಿ 

ಕೋರಸ್ :  ಹೈ... ಹೈ... ಹೈ .... ಲಲಲ್ಲಲ್ಲಲ್ಲಾ 
ಹೆಣ್ಣು : ಎಂಥ ಚೆನ್ನ ನಿನ್ನ ಮೋರೆ ಓ ರಂಗಣ್ಣಾ 
          ಎಂಥ ಚೆನ್ನ ನಿನ್ನ ಮೋರೆ ಓ ರಂಗಣ್ಣಾ (ಹೊಯ್ )
          ಕಣ್ಣಿಗಿಂತ ಮೂಗು ಚೆನ್ನಾ ಮೂಗಿಗಿಂತ ಬಾಯಿ ಚೆನ್ನಾ 
          ಇಂಥ ಅಂದವ ಕಂಡಿಲ್ಲಾ ಓ ನನ್ನ ರಾಜಾ ಆಸೆ ತಡೆಯೋಕೇ ಆಗಲ್ಲಾ 
ಗಂಡು : ಅಯ್ಯಯ್ಯಯ್ಯೊ  ಎಂಥ ಚೆನ್ನ ನಿನ್ನ ಮೋರೆ ಓ ಗಂಗಮ್ಮಾ 
          ಎಂಥ ಚೆನ್ನ ನಿನ್ನ ಮೋರೆ ಓ ಗಂಗಮ್ಮಾ 
          ಕಣ್ಣಿಗಿಂತ ಮೂಗು ಚೆನ್ನಾ ಮೂಗಿಗಿಂತ ಬಾಯಿ ಚೆನ್ನಾ 
          ಇಂಥ ಅಂದವ ಕಂಡಿಲ್ಲಾ ಓ ನನ್ನ ರಾಣಿ ಆಸೆ ತಡೆಯೋಕೇ ಆಗಲ್ಲಾ 
ಕೋರಸ್ : ಆ ಆ ಆ ಅ ಅ ಅ ಆ ಆ ಆ ಅ ಅ ಅ 
ಹೆಣ್ಣು : ಅಲ್ಲಿ ಇಲ್ಲಿ ಹೋಗಲಾರೇ ಇನ್ನೆಂದು ಬಿಟ್ಟು ನಿನ್ನನ್ನು 
          ಪ್ರಾಣಕ್ಕಿಂತಾ ಹೆಚ್ಚು ನೀನು ನನ್ನಾಣೆ ನಂಬು ನನ್ನನ್ನೂ 
          ಅಲ್ಲಿ ಇಲ್ಲಿ ಹೋಗಲಾರೇ ಇನ್ನೆಂದು ಬಿಟ್ಟು ನಿನ್ನನ್ನು 
          ಪ್ರಾಣಕ್ಕಿಂತಾ ಹೆಚ್ಚು ನೀನು ನನ್ನಾಣೆ ನಂಬು ನನ್ನನ್ನೂ 
ಗಂಡು : ಓ.. ನಿನ್ನ ಮಾತು ಮೀರಲ್ಲಾ ಇನ್ನೂ ಹೀಗೆ ಮಾಡಲ್ಲಾ 
           ನಿನ್ನ ಮಾತು ಮೀರಲ್ಲಾ ಇನ್ನೂ ಹೀಗೆ ಮಾಡಲ್ಲಾ 
           ಭೀತಿಯ ನೀ ಬೀಡೆ ಮುದ್ದು ಗಂಗಮ್ಮಾ ಗಂಗಮ್ಮಾ 
           ಭೀತಿಯ ನೀ ಬೀಡು ಮುದ್ದು ಗಂಗಮ್ಮಾ 
ಹೆಣ್ಣು : ಎಂಥ ಚೆನ್ನ ನಿನ್ನ ಮೋರೆ ಓ ರಂಗಣ್ಣಾ 
ಗಂಡು : ಅಯ್ಯಯ್ಯಯ್ಯೊ  ಎಂಥ ಚೆನ್ನ ನಿನ್ನ ಮೋರೆ ಓ ಗಂಗಮ್ಮಾ 
ಹೆಣ್ಣು :  ಕಣ್ಣಿಗಿಂತ ಮೂಗು ಚೆನ್ನಾ ಮೂಗಿಗಿಂತ ಬಾಯಿ ಚೆನ್ನಾ 
ಗಂಡು : ಇಂಥ ಅಂದವ ಕಂಡಿಲ್ಲಾ ಓ ನನ್ನ ರಾಣಿ ಆಸೆ ತಡೆಯೋಕೇ ಆಗಲ್ಲಾ  ಆಗಲ್ಲಾ 
ಗಂಡು : ಲಲಲಲ್ಲಲ್ಲಾ ಲಲ್ಲಲ್ಲಲ್ಲಾ    ಹೆಣ್ಣು : ಲಲಲಲ್ಲಲ್ಲಾ 
ಗಂಡು : ಡಡಡಟಣಣಾ  ಇಬ್ಬರೂ : ಲಾಲಾಲಾಲಾ 
ಗಂಡು : ತೋಳವೊಂದು ತಿನ್ನಲೆಂದೂ ಓಡೋಡಿ ಬಂತು ಹಿಂದೆನೇ 
            ಬೇಟೆ ಆಡೋ ಸಮಯವಲ್ಲಾ  ನಾ ಹೀಗೆ ಬಂದೇ ಓ ಹೆಣ್ಣೇ 
            ತೋಳವೊಂದು ತಿನ್ನಲೆಂದೂ ಓಡೋಡಿ ಬಂತು ಹಿಂದೆನೇ 
            ಬೇಟೆ ಆಡೋ ಸಮಯವಲ್ಲಾ  ನಾ ಹೀಗೆ ಬಂದೇ ಓ ಹೆಣ್ಣೇ 
ಹೆಣ್ಣು :  ಇನ್ನು ಚಿಂತೆ ಬೇಕಿಲ್ಲಾ ಯಾರ ಭಯವೂ ನಮಗಿಲ್ಲಾ 
           ಇನ್ನು ಚಿಂತೆ ಬೇಕಿಲ್ಲಾ ಯಾರ ಭಯವೂ ನಮಗಿಲ್ಲಾ 
           ಸೇರುವ ಊರನು ಬಾರೋ ರಂಗಣ್ಣಾ ಹೇ.. 
           ಸೇರುವ ಊರನು ಬಾರೋ ರಂಗಣ್ಣಾ 
ಗಂಡು :ಎಂಥ ಚೆನ್ನ ನಿನ್ನ ಮೋರೆ ಓ ಗಂಗಮ್ಮಾ 
ಹೆಣ್ಣು : ಎಂಥ ಚೆನ್ನ ನಿನ್ನ ಮೋರೆ ಓ ರಂಗಣ್ಣಾ 
ಗಂಡು :  ಕಣ್ಣಿಗಿಂತ ಮೂಗು ಚೆನ್ನಾ ಮೂಗಿಗಿಂತ ಬಾಯಿ ಚೆನ್ನಾ 
ಗಂಡು :  ಇಂಥ ಅಂದವ ಕಂಡಿಲ್ಲಾ ಓ ನನ್ನ ರಾಜಾ ಆಸೆ ತಡೆಯೋಕೇ ಆಗಲ್ಲಾ 
             ಅರೆರೆರೆರೇ ಅಹ್ಹಹ್ಹಹ್ಹಾ ಅಹ್ಹಹ್ಹಾ ಹೊಯ್ ಹೊಯ್ ಹೊಯ್ 
ಕೋರಸ್ : ಡ ಡ ಡ ಡ ಡ ಡ ಡ ಡ ಡ ಡ ಡ ಡ ಡ ಡ ಡ ಡ ಡ ಡ ಡ 
ಗಂಡು :  ಕಣ್ಣಿಗಿಂತ ಮೂಗು ಚೆನ್ನಾ   ಹೆಣ್ಣು : ಮೂಗಿಗಿಂತ ಬಾಯಿ ಚೆನ್ನಾ 
ಗಂಡು : ಬಾಯಿಗಿಂತ ಮೂಗು ಚೆನ್ನಾ  ಹೆಣ್ಣು : ಮೂಗಿಗಿಂತ ಬಾಯಿ ಚೆನ್ನಾ 
ಗಂಡು :  ಕಣ್ಣಿಗಿಂತ ಮೂಗು ಚೆನ್ನಾ   ಹೆಣ್ಣು : ಮೂಗಿಗಿಂತ ಬಾಯಿ ಚೆನ್ನಾ 
ಗಂಡು :  ಕಣ್ಣಿಗಿಂತ ಮೂಗು ಚೆನ್ನಾ   ಹೆಣ್ಣು : ಮೂಗಿಗಿಂತ ಬಾಯಿ ಚೆನ್ನಾ 
ಗಂಡು : ಬಾಯಿಗಿಂತ ಮೂಗು ಚೆನ್ನಾ  ಹೆಣ್ಣು : ಮೂಗಿಗಿಂತ ಬಾಯಿ ಚೆನ್ನಾ 
 ಗಂಡು :  ಕಣ್ಣಿಗಿಂತ ಮೂಗು ಚೆನ್ನಾ   ಹೆಣ್ಣು : ಮೂಗಿಗಿಂತ ಬಾಯಿ ಚೆನ್ನಾ 
********************************************************************************

ಸ್ವರ್ಗ ಇಲ್ಲಿದೇ 

ಸಾಹಿತ್ಯ : ಚಿ.ಉದಯಶಂಕರ್
ಗಾಯನ : ಎಸ್.ಜಾನಕಿ  

ಕೋರಸ್ :  ಪಬಬಪ.. ಪಬರರ  ಪಬಬಪ.. ಪಬರರ  
                ಪಬಬಪ.. ಪಬರರ  ಪಬಬಪ.. ಪಬರರ 
ಹೆಣ್ಣು : ಸ್ವರ್ಗ ಇಲ್ಲಿದೇ ನೋಡು ನಿನ್ನ ಕೂಗಿದೆ ಲಲ್ಲಲ್ಲಲಾ ಲಲ್ಲಲ್ಲಲಾ 
          ಸ್ವರ್ಗ ಇಲ್ಲಿದೇ ನೋಡು ನಿನ್ನ ಕೂಗಿದೆ
          ನೆಮ್ಮದಿ ಶಾಂತಿ ತುಂಬಿದೆ ಅಲ್ಲಿ ನಿನಗೆ ತಿಳಿಯದೇ 
          ಇನ್ನೂ ಚಿಂತೇ ಏನಿದೇ    
          ಸ್ವರ್ಗ ಇಲ್ಲಿದೇ ನೋಡು ನಿನ್ನ ಕೂಗಿದೆ
ಕೋರಸ್ : ಹೇ ಹೇ ಹೇ ಹೇ ಹೇ ಹೇಹೇಹೇ 
               ಹೇ ಹೇ ಹೇ ಹೇ ಹೇ ಹೇಹೇಹೇ 
ಹೆಣ್ಣು : ಹಣ್ಣಿನ ಸಿಪ್ಪೇಯ ತೆಗೆಯುವ ಹಾಗೇ ಚರ್ಮ ಸುಲಿಯಲೇ ಅಹ್ಹಹ್ಹಹ್ಹಾ 
          ಹಣ್ಣಿನ ಸಿಪ್ಪೇಯ ತೆಗೆಯುವ ಹಾಗೇ ಚರ್ಮ ಸುಲಿಯಲೇ 
          ಸ್ವರ್ಗ ಇಲ್ಲಿದೇ ನೋಡು ನಿನ್ನ ಕೂಗಿದೆ
          ನೆಮ್ಮದಿ ಶಾಂತಿ ತುಂಬಿದೆ ಅಲ್ಲಿ ನಿನಗೆ ತಿಳಿಯದೇ 
          ಇನ್ನೂ ಚಿಂತೇ ಏನಿದೇ    
          ಸ್ವರ್ಗ ಇಲ್ಲಿದೇ ನೋಡು ನಿನ್ನ ಕೂಗಿದೆ
ಹೆಣ್ಣು : ಸ್ವರ್ಗದ ಕಡೆಗೆ ಜಾರುವ ಬಗೆಯ ಹೀಗೆಯೇ ತಿಳಿದಿಕೋ 
          ಹೇ..  ಸ್ವರ್ಗದ ಕಡೆಗೆ ಜಾರುವ ಬಗೆಯ ಹೀಗೆಯೇ ತಿಳಿದಿಕೋ 
          ಮೂರೇ ನಿಮಿಷದ ಕಥೆಯ ಮುಗಿಸುವೇ ಜಾಣ ತಡೆದುಕೋ 
          ಮೂರೇ ನಿಮಿಷದ ಕಥೆಯ ಮುಗಿಸುವೇ ಜಾಣ ತಡೆದುಕೋ 
ಕೋರಸ್ : ಸ್ನೇಹದಿಂದ ಜೀವಾ (ಹ್ಹ )ಬೇರೆಯಾಗಿ ಮಾಡಿ (ಹ್ಹ )
              ಪ್ರಾಣ ಪಕ್ಷಿ ಹಾರಿ (ಹ್ಹ ) ಹೋಗುವಂತೇ ಮಾಡಿ (ಹ್ಹ )
ಹೆಣ್ಣು : ನಿನ್ನಾ ಕೊಲ್ಲುವೇ ಸ್ವರ್ಗದ ಬಳಿಗೆ ನೂಕುವೇ ಹೇ..ಹೇ..ಹೇ.. 
          ಸ್ವರ್ಗ ಇಲ್ಲಿದೇ ನೋಡು ನಿನ್ನ ಕೂಗಿದೆ
          ನೆಮ್ಮದಿ ಶಾಂತಿ ತುಂಬಿದೆ ಅಲ್ಲಿ ನಿನಗೆ ತಿಳಿಯದೇ 
          ಇನ್ನೂ ಚಿಂತೇ ಏನಿದೇ    
          ಸ್ವರ್ಗ ಇಲ್ಲಿದೇ ನೋಡು ನಿನ್ನ ಕೂಗಿದೆ
********************************************************************************