Thursday, December 12, 2013

ಪರಿಚಯ (2009)


ಕುಡಿ ನೋಟವೇ

ಚಲನ ಚಿತ್ರ : ಪರಿಚಯ (2009)
ಸಾಹಿತ್ಯ: ಜಯಂತ್ ಕಾಯ್ಕಿಣಿ 
ಸಂಗೀತ: ಜೆಸ್ಸಿ ಗಿಫ್ಟ್ 
ಗಾಯಕರು : ಶ್ರೇಯಾ ಘೋಷಾಲ್, ಶಾನ್
ನಿರ್ದೇಶನ: ಕೆ. ಸಂಜಯ್ 
ನಟರು : ತರುಣ್ ಚಂದ್ರ, ರೇಖಾ, ಸಿಂಧು (HP)


ಕುಡಿ ನೋಟವೇ ಮನಮೋಹಕ
ಒಡನಾಟವೇ ಬಲು ರೋಚಕ
ಹುಡುಕಾಟವೇ ರೋಮಾಂಚಕ ಆ ಆ .....

ನೀ ಬಂದು ಹೋದ ಜಾಗ ಉಸಿರಾಡಿದೆ ಉಸಿರಾಡಿದೆ
ಬೆರಳೆಲ್ಲ ಓಲೆ ಗೀಚಿ ಮಸಿಯಾಗಿದೆ ಮಸಿಯಾಗಿದೆ
ಕನಸೊಂದು ಕುಲುಕುತ ಕೈಯ
ತುಸು ದೂರ ಚಲಿಸಿದೆ ಎಲ್ಲೋ
ಮನವೀಗ ಮರೆಯುತ ಮೈಯ
ಗುರುತನ್ನೇ ಅರಸಿದೆ ಎಲ್ಲೋ
ನಿನ್ನ ಕಂಡಾಗಲೇ ಜೀವ ಮೂಕ

ಅನುರಾಗಕ್ಕೀಗ ಮಾತೆ ಮಿತಿಯಾಗಿದೆ ಮಿತಿಯಾಗಿದೆ
ಜೊತೆಯಾದ ಮೇಲೆ ಪ್ರೀತಿ ಅತಿಯಾಗಿದೆ ಅತಿಯಾಗಿದೆ
ಮರೆಮಾಚಿ ಕರೆಯಲು ನೀನು
ಮನಸಾರೆ ಪರವಶ ನಾನು
ನೆನಪಾಗಿ ಸುಳಿಯಲು ನೀನು
ನವಿರಾದ ಪರಿಮಳವೇನು
ನೀನೆ ಈ ಜೀವದ ಭಾವಲೋಕ ಆ ಆ...

ಕುಡಿನೋಟವೇ.......

*********************************************************************************

ನಡೆದಾಡುವ ಕಾಮನಬಿಲ್ಲು

ಸಾಹಿತ್ಯ : ಕವಿರಾಜ್  
ಗಾಯಕರು : ಕೇಕೆ, ರಾಜಲಕ್ಷ್ಮಿ 


ನಡೆದಾಡುವಾ ಕಾಮನ ಬಿಲ್ಲು,
ಉಸಿರಾಡುವಾ ಗೊಂಬೆಯೂ ಇವಳು,
ಸಿಗಲಾರಳು ಹೋಲಿಕೆಗಿವಳು,
ಏನೆಂದರು ಸುಂದರ ಸುಳ್ಳು..!! 

ನಡೆದಾಡುವಾ ಕಾಮನ ಬಿಲ್ಲು,
ಉಸಿರಾಡುವಾ ಗೊಂಬೆಯೂ ಇವಳು,
ಸಿಗಲಾರಳು ಹೋಲಿಕೆ ಗಿವಳು,
ಏನೆಂದರು ಸುಂದರ ಸುಳ್ಳು..!! 
ನಡೆದಾಡುವಾ ಕಾಮನ ಬಿಲ್ಲು..... 


ನಕ್ಕರೆ ಸೇರಿದ ಹಾಗೆ, ಸಾವಿರ ಶುಭಶಕುನ..
ಮಾತಿನ ಲಹರಿಯೇ ಒಂದು, ಸುಂದರ ಸವಿಗಾನ..
ನಕ್ಕರೆ ಸೇರಿದ ಹಾಗೆ, ಸಾವಿರ ಶುಭಶಕುನ..
ಮಾತಿನ ಲಹರಿಯೇ ಒಂದು, ಸುಂದರ ಸವಿಗಾನ..
ಬೆಳ್ಳಿಮೋಡ ಇವಳ ಮನಸ್ಸು ಮನಸ್ಸು,
ಮಿಂಚುಬಳ್ಳಿ ಅಂದದ ಮುನಿಸೂ..
ಸ್ವರ್ಗದಲ್ಲೂ ಇರದ ಸೊಗಸು ಸೊಗಸು..
ಮಾರುತ್ತಾಳೆ ಮಾಯದ ಕನಸು..
ಪದೇ ಪದೇ ಪದೇ ಪದೇ ಅರೆರೆ..,
ಮರುಳಾದೆ ನೋಡಿ, ಇವಳೆಂತಾ ಮೋಡಿ..!!! 

ನಡೆದಾಡುವಾ ಕಾಮನ ಬಿಲ್ಲು,
ಉಸಿರಾಡುವಾ ಗೊಂಬೆಯೂ ಇವಳು.., 

ದೀಪದ ಕಣ್ಣುಗಳಲ್ಲಿ, ಹುಣ್ಣಿಮೆ ಪ್ರತಿ ಕ್ಷಣವೂ,
ಕೆನ್ನೆಯ ದಿನ್ನೆಗಳಲ್ಲಿ, ಮುಗಿಯದ ಮುಂಜಾವು..,
ದೀಪದ ಕಣ್ಣುಗಳಲ್ಲಿ, ಹುಣ್ಣಿಮೆ ಪ್ರತಿ ಕ್ಷಣವೂ,
ಕೆನ್ನೆಯ ದಿನ್ನೆಗಳಲ್ಲಿ, ಮುಗಿಯದ ಮುಂಜಾವು..,
ಹೆಜ್ಜೆಹಾಕು ಇವಳ ಲಯಕೆ ಲಯಕ್ಕೆ,
ಭೂಮಿಗುನು ಪುಳಕದ ಜಳಕ,
ಬಾನಿನಿಂದ ಕೆಳಗೆ ಇಣುಕಿ ಇಣುಕಿ,
ದೇವರಿಗೂ ನೋಡುವ ತವಕ..
ಸವಿ ಸವಿ ಸವಿ ಸವಿ ಅಹ್ಹಾ..
ಈ ಹುಡುಗಿ ಜೇನು, ಶರಣಾದೆ ನಾನು..!!! 

ನಡೆದಾಡುವಾ ಕಾಮನ ಬಿಲ್ಲು,
ಉಸಿರಾಡುವಾ ಗೊಂಬೆಯೂ ಇವಳು,
ಸಿಗಲಾರಳು ಹೋಲಿಕೆ ಗಿವಳು,
ಏನೆಂದರು ಸುಂದರ ಸುಳ್ಳು..!!
ನಡೆದಾಡುವಾ ಕಾಮನ ಬಿಲ್ಲು...,

********************************************************************************

ಅಂಬಾರಿ - ಆಕಾಶ ನೀನೆ ನೀಡೊಂದು ಗೂಡು

ಚಿತ್ರ : ಅಂಬಾರಿ 
ನಟರು : ಯೋಗೀಶ್, ಸುಪ್ರೀತಾ 
ಗಾಯಕರು : ಸೋನು ನಿಗಮ್ 

ಆಕಾಶ ನೀನೆ ನೀಡೊಂದು ಗೂಡು
ಬಂತೀಗ ಪ್ರೀತಿ ಹಾರಿ
ತಂಗಾಳಿ ನೀನೆ ನೀಡೊಂದು ಹಾಡು
ಕಂಡಿತು ಕಾಲು ದಾರಿ
ಒಂದಾದ ಜೀವ ಹೂವಾಗುವಂತೆ ಎಂದು ಕಾಪಾಡಲಿ
ಪ್ರೀತಿಯ ಅಂಬಾರಿ

ಕಣ್ಣಿನಲ್ಲಿ ಕಣ್ಣಿರೆ ಲೋಕವೆಲ್ಲ ಹೂ ಹಂದರ
ಭಾವವೊಂದೇ ಆಗಿರೆ ಬೇಕೇ ಬೇಕು ಭಾಷಾಂತರ
ಎದೆಯಿಂದ ಹೊರ ಹೋಗೋ ಉಸಿರೆಲ್ಲ ಕನಸಾಗಲಿ
ಈ ಪ್ರೀತಿ ಜೊತೆಯಲ್ಲಿ ಒಂದೊಂದು ನನಸಾಗಲಿ
ಕೊನೆಯಿಲ್ಲದ ಕುಶಲೋಪರಿ ಪ್ರೀತಿಯ ಅಂಬಾರಿ

ಕಾಣದಂತ ಹೊಸ್ತಿಲು ದೂರದಿಂದ ಬಾ ಎಂದಿದೆ
ಪೆದ್ದು ಮುದ್ದು ಜೋಡಿಗೆ ಸಿಕ್ಕ ಪ್ರೀತಿ ಸೊಗಸಾಗಿದೆ
ಆ ಸೂರ್ಯ ಸರಿದಾಗ ಈ ಪ್ರೇಮ ರೋಮಾಂಚನ
ಮುಸ್ಸಂಜೆ ಕವಿದಾಗ ಈ ಪ್ರೇಮ ನೀಲಾಂಜನ
ಮುಂದರಿಯುವ ಕಾದಂಬರಿ ಪ್ರೀತಿಯ ಅಂಬಾರಿ




ಬಿರುಗಾಳಿ (2009)

ಹೂವಿನ ಬಾಣದಂತೆ ಯಾರಿಗೂ

ಚಲನಚಿತ್ರ : ಬಿರುಗಾಳಿ (2009)
ಸಾಹಿತ್ಯ: ಜಯಂತ್ ಕಾಯ್ಕಿಣಿ 

ಗಾಯಕರು : ಶ್ರೇಯಾ ಘೋಷಾಲ್  
ಸಂಗೀತ: ಅರ್ಜುನ್ ಜನ್ಯ 
ನಟರು : ಚೇತನ್, ಸಿತಾರ, ತಾರಾ



ಹೂವಿನ ಬಾಣದಂತೆ ಯಾರಿಗೂ ಕಾಣದಂತೆ
ಹಾಡಿನ ಸಾಲಿನಲ್ಲಿ ಮೂಡುವ ಪ್ರಾಣದಂತೆ
ಚೇತನವಾದೆ ನೀನು.....

ಹೂವಿನ ಬಾಣದಂತೆ ಯಾರಿಗೂ ಕಾಣದಂತೆ
ಹಾಡಿನ ಸಾಲಿನಲ್ಲಿ ಮೂಡುವ ಪ್ರಾಣದಂತೆ
ಶೀತಲವಾದೆ ನೀನೆ ನೀನು
ನೂತನಳಾದಂತೆ ನಾನೇ ನಾನು
ನೀ ಬಂದ  ಮೇಲೆ ಬಾಕಿ ಮಾತೇನು ಆ ....

ಸಾಲದು ಇಡೀ ದಿನ ಜರೂರಿ ಮಾತಿಗೆ
ಕಾದಿದೆ ಸದಾ ಮನ ಅಪಾರ ಪ್ರೀತಿಗೆ.... ಓ
ಮಾಡಬೇಕಿಲ್ಲ ಆಣೆ ಗೀಣೆ
ಸಾಕು ನೀನೀಗ ಬಂದರೇನೆ
ಅಗೋಚರ... ಅಗೋಚರ
ನಾ ಕೇಳಬಲ್ಲೆ ನಿನ್ನ ಇಂಚರ.....

ಪ್ರೀತಿಯ ನಿರೂಪಣೆ ಇದೀಗ ಮಾಡಿದೆ
ಕಾಯಿಸಿ ಸತಾಯಿಸಿ ಅದೇಕೆ ಕಾಡಿದೆ.... ಓ
ಸ್ಪಪ್ನವ ತಂದ ನೌಕೆ ನೀನು
ಸುಪ್ತವಾದಂತೆ ತೀರ ನಾನು
ಅನಾಮಿಕ... ಅನಾಮಿಕ....
ಈ ಯಾಣಕ್ಕೀಗ ನೀನೆ ನಾವಿಕ....


*********************************************************************************

ಮಧುರ ಪಿಸುಮಾತಿಗೆ 


ಸಾಹಿತ್ಯ: ಜಯಂತ್ ಕಾಯ್ಕಿಣಿ 
ಗಾಯಕರು: ಮೋಹಿತ್ ಚೌಹಾಣ್, ಶಮಿತಾ ಮಲ್ನಾಡ್ 



ಮಧುರ ಪಿಸುಮಾತಿಗೆ
ಅಧರ ತುಸು ಪ್ರೀತಿಗೆ
ಇರುವಲ್ಲಿಯು ಇರಲಾರದೆ
ಬರುವಲ್ಲಿಯು ಬರಲಾರದೆ
ಸೋತೆ ನಾನು ನಿನ್ನ ಪ್ರೀತಿಗೆ ಓ....
ಚೂರಾದೆ ಒಂದೆ ಭೇಟಿಗೆ


ಕಂಪಿಸುತ ಪರದಾಡುವೆನು ಅಭಿಲಾಷೆಯ ಕರೆಗೆ
ದಾರಿಯನೆ ಬರಿ ನೋಡುವೆನು ನೀ ಕಾಣುವವರೆಗೆ
ನಿನ್ನದೇ ಪರಿಮಳ ನಿನ್ನಯ ನೆನಪಿಗೆ ಏನಿದು ಕಾತರ
ಬಾರಿ ಬಾರಿ ನಿನ್ನ ಭೇಟಿಗೆ....ಓ....
ಸೋತೆ ನಾನು ನಿನ್ನ ಪ್ರೀತಿಗೆ....


ನೋಡಿದರೆ ಮಿತಿ ಮೀರುತಿದೆ ಮನಮೋಹಕ ಮಿಡಿತ
ಆಳದಲಿ ಅತಿಯಾಗುತಿದೆ ಅಪರೂಪದ ಸೆಳೆತ
ನಿನ್ನದೇ ಹೆಸರಿದೆ ಕನಸಿನ ಊರಿಗೆ
ಕುಣಿಯುತ ಬಂದೆನು ಭಿನ್ನವಾದ ನಿನ್ನ ಧಾಟಿಗೆ....ಓ....
ಸೋತೆ ನಾನು ನಿನ್ನ ಪ್ರೀತಿಗೆ.....


********************************************************************************


ಇಂತಿ ನಿನ್ನ ಪ್ರೀತಿಯ (2008)

ಒಂದೊಂದೇ ಬಚ್ಚಿಟ್ಟ ಮಾತು

ಚಲನಚಿತ್ರ: ಇಂತಿ ನಿನ್ನ ಪ್ರೀತಿಯ
ಸಾಹಿತ್ಯ: ಯೋಗರಾಜ್ ಭಟ್ 
ಗಾಯಕರು: ರಾಜೇಶ್ ಕೃಷ್ಣನ್, ರಕ್ಷಾ ಅರವಿಂದ್ 
ಸಂಗೀತ: ಸಾಧು ಕೋಕಿಲ 
ನಟರು: ಶ್ರೀನಗರ ಕಿಟ್ಟಿ, ಸೋನು, ಭಾವನ

ಒಂದೊಂದೇ ಬಚ್ಚಿಟ್ಟ ಮಾತು
ಒಂದೊಂದಾಗಿ ಕೂಡಿಟ್ಟ ಕವನ
ನನ್ನಿಂದ ನಾ ದೂರ ನಿಂತು
ನಾ ಕಂಡೆ ಮಾತಾಡೋ ಮೌನ
ಸೋಲುವುದು ಹೃದಯ ಹೀಗೇಕೆ
ತಿಳಿತಿಳಿದು ನಗುವೆ ನೀನೇಕೆ
ಮಾತಾಡು ಓ ಮೌನ
ಮಾತಾಡು ಹೇ ಹೇ ಹೇ ......


ಸುಳ್ಳು ಸುಳ್ಳೇ ಮುನಿಸು ಆ ನೂರು ಕಳ್ಳ ಕನಸು
ಆ ಮುಸ್ಸಂಜೆ ಮತ್ತಲ್ಲಿ ಮುತ್ತಿಟೋರ್ಯಾರು
ಕೆನ್ನೆ ನಿಂದ ಮುತ್ತು ನಂದ?
ಬಗೆ ಹರಿಯದ ಒಗಟು ಇದು....

ಹೋ...ಮೊದಲು ಅಪ್ಪಿಕೊಂಡ ಆ ಮಧುರ ಮೌನದೊಳಗೆ
ಬಿಸಿ ಉಸಿರಲಿ ಮೊದಲು ಹೆಸರ ಪಿಸುಗುಟ್ಟಿದ್ಯಾರು
ಈ ವಿರಹದಲಿ ಅಡಗಿದೆಯೋ ಸನಿಹ
ಸನಿಹದಲಿ ಯಾಕಿದೆ ವಿರಹ ಹೇಳುವೆಯ?

ಸಣ್ಣ ತಪ್ಪಿಗಾಗಿ ಮಾತು ಸತ್ತುಹೋಗಿ
ಆ ಮಂಕಾದ ರಾತ್ರಿಲಿ ಬಿಕ್ಕಳಿಸಿದ್ಯಾರು?
ತಪ್ಪು ನಿಂದ ತಪ್ಪು ನಂದ ಕೊನೆಗಾಣದ ಒಗಟು ಇದು

ಮುಂಜಾನೆ ನಿದ್ರೇಲಿ ನಾ ಹೇಳಲಾರದ ಕನಸ
ನೀ ಸಿಕ್ಕಾಗ ಮಾತಾಡೋ ಮಾತೆಲ್ಲ ಬೇರೆ
ಈ ಸುಳ್ಳನ್ನು ಕಲಿಸುವುದೇ ಕನಸು
ಅದನ್ಯಾಕೆ ಬಯಸಿದೆ ಮನಸು ಹೇಳುವೆಯ?



***************************************************************************************

ಮಧುವನ ಕರೆದರೆ 


ಗಾಯಕರು : ವಾಣಿ ಹರಿಕೃಷ್ಣ 
ಸಾಹಿತ್ಯ: ಜಯಂತ್ ಕಾಯ್ಕಿಣಿ 


ಮಧುವನ ಕರೆದರೆ
ತನು ಮನ ಸೆಳೆದರೆ
ಶರಣಾಗು ನೀನು ಆದರೆ ...

ಬಿರುಗಾಳಿಯಲ್ಲಿ ತೇಲಿ
ಹೊಸ ಘಳಿಗೆ ಬಂದಿದೆ
ಕನಸೊಂದು ಮೈಯ ಮುರಿದು
ಬಾ ಬಳಿಗೆ ಎಂದಿದೇ
ಶರಣಾಗು ಆದರೆ ಸೆರೆ ಆಗು ಆದರೆ

ಮಧುವನ ...

ಕಂಗಳಲಿ  ಕನಸಿನ ಕುಲುಮೆ
ಹೊಳೆಯುತಿದೆ ಜೀವದ ಒಲುಮೆ
ಬೆಳಕಲ್ಲಿ ನೋಡು ಆದರೆ.......

ಮೈಯೆಲ್ಲಾ ಚಂದ್ರನ ಗುರುತು
ಹೆಸರೆಲ್ಲೊ ಹೋಗಿದೆ ಮರೆತು
ನಾನ್ಯಾರು ಹೇಳು ಆದರೆ

ಮಧುವನ ...

ಮನಸಿನ ಹಸಿ ಬಣ್ಣಗಳಲ್ಲಿ
ನೀನೆಳೆವಾ ರೇಖೆಗಳಲ್ಲಿ
ನಾ ಮೂಡಬೇಕು ಆದರೇ.....
ಎದುರಿದ್ದು ಕರೆಯುವೆ ಏಕೆ
ಜೊತೆಯಿದ್ದು ಮರೆಯುವೆ ಏಕೆ

ನಿನ್ನೊಲವು ನಿಜವೆ ಆದರೆ.....



ನೀ ಬರೆದ ಕಾದಂಬರಿ (1985)


ನೀ ಮೀಟಿದ ನೆನಪೆಲ್ಲವು

ಚಲನಚಿತ್ರ : ನೀ ಬರೆದ ಕಾದಂಬರಿ (1985)
ಗಾಯನ : ಎಸ್. ಪಿ. ಬಾಲಸುಬ್ರಹ್ಮಣ್ಯಂ  
ಸಾಹಿತ್ಯ : ಆರ್. ಎನ್. ಜಯಗೋಪಾಲ್  
ಸಂಗೀತ : ವಿಜಯಾನಂದ್ 
ನಿರ್ದೇಶನ: ದ್ವಾರಕೀಶ್ 
ನಟನೆ: ವಿಷ್ಣುವರ್ಧನ್, ಭವ್ಯಾ, ಸಿ. ಆರ್. ಸಿಂಹ 

ನೀ ಮೀಟಿದ ನೆನಪೆಲ್ಲವು ಎದೆ ತುಂಬಿ ಹಾಡಾಗಿದೆ
ಇಂದೇತಕೊ ನಾನಿನ್ನಲಿ ಬೆರೆವಂತ ಮನಸಾಗಿದೆ
ಈ ಬಂಧನ ಬಹು ಜನ್ಮದ ಕಥೆ ಎಂದು ಮನ ಹೇಳಿದೆ
ಈ ಬಂಧನ ಬಹು ಜನ್ಮದ ಕಥೆ ಎಂದು ಮನ ಹೇಳಿದೆ

ನೀ ಮೀಟಿದ ನೆನಪೆಲ್ಲವು ಎದೆ ತುಂಬಿ ಹಾಡಾಗಿದೆ

ಬಾಳಲ್ಲಿ ನೀ ಬರೆದೆ ಕಣ್ಣೀರ ಕಾದಂಬರಿ
ಕಲ್ಲಾದ ಹೃದಯಕ್ಕೆ ಏಕಾದೆ ನೀ ಮಾದರಿ
ಉಸಿರಾಗುವೆ ಎಂದ ಮಾತೆಲ್ಲಿದೆ
ಸಿಹಿ ಪ್ರೇಮವೆ ಇಂದು ವಿಶವಾಗಿದೆ
ಹುಸಿ ಪ್ರೀತಿಯ ನಾ ನಂಬಿದೆ
ಮಳೆ ಬಿಲ್ಲಿಗೆ ಕೈ ಚಾಚಿದೆ
ಒಲವೆ ಚೆಲುವೆ ನನ್ನ ಮರೆತು ನಗುವೆ

ನೀ ಮೀಟಿದ ನೆನಪೆಲ್ಲವು ಎದೆ ತುಂಬಿ ಹಾಡಾಗಿದೆ

ಹಗಲೇನು ಇರುಳೇನು ಮನದಾಸೆ ಮರೆಯಾಗಿದೆ
ಸಾವೇನು ಬದುಕೇನು ಏಕಾಂಗಿ ನಾನಾಗಿರೆ
ನಾ ಬಾಳುವೆ ಕಂದ ನಿನಗಾಗಿಯೆ
ಈ ಜೀವನ ನಿನ್ನ ಸುಖಕಾಗಿಯೆ
ನನ್ನಾಸೆಯ ಹೂವಂತೆ ನೀ
ಇರುಳಲ್ಲಿಯೂ ಬೆಳಕಂತೆ ನೀ
ನಗುತ ಇರು ನೀ ನನ್ನ ಪ್ರೀತಿ ಮಗುವೆ

ನೀ ಮೀಟಿದ ನೆನಪೆಲ್ಲವು ಎದೆ ತುಂಬಿ ಹಾಡಾಗಿದೆ
ಇಂದೇತಕೊ ನಾನಿನ್ನಲಿ ಬೆರೆವಂತ ಮನಸಾಗಿದೆ
ಈ ಬಂಧನ ಬಹು ಜನ್ಮದ ಕಥೆ ಎಂದು ಮನ ಹೇಳಿದೆ
ಈ ಬಂಧನ ಬಹು ಜನ್ಮದ ಕಥೆ ಎಂದು ಮನ ಹೇಳಿದೆ



****************************************************************************************

ಕೃಷ್ಣನ್ ಲವ್ ಸ್ಟೋರಿ (2010)


ಸಂತೆಯಲ್ಲಿ ನಿಂತರೂನು

ಚಲನಚಿತ್ರ : ಕೃಷ್ಣನ್ ಲವ್ ಸ್ಟೋರಿ (2010)
ಗಾಯಕರು : ಸೋನು ನಿಗಮ್, ಲಕ್ಷ್ಮಿ 
ನಟರು : ಅಜಯ್, ರಾಧಿಕಾ ಪಂಡಿತ್ 
ನಿರ್ದೇಶಕರು : ಶಶಾಂಕ್ 
ಸಾಹಿತ್ಯ : ಜಯಂತ್ ಕಾಯ್ಕಿಣಿ 
ಸಂಗೀತ : ವಿ. ಶ್ರೀಧರ್ 

ಸಂತೆಯಲ್ಲಿ ನಿಂತರೂನು ನೋಡು ನೀನು ನನ್ನನೆ
ನಾನು ಮಾತ್ರ ಕೇಳುವಂತೆ ಕೂಗು ನೀನು ನನ್ನನೆ
ಕಣ್ಣ ಕಟ್ಟಿ ಬಿಟ್ಟರೂನು ಈಗ ಕಾಣಬಲ್ಲೆ ನಿನ್ನನೆ
ಸೇರಬಲ್ಲೆ ನಿನ್ನನೆ ನಾನು ಮಾತ್ರ ಬಲ್ಲೆ ನಿನ್ನನೆ

ಲ ಲ ಲ ......

ಹೃದಯವೆ ಬಯಸಿದೆ ನಿನ್ನನೆ
ತೆರೆಯುತ ಕನಸಿನ ಕಣ್ಣನೆ
ದಿನವಿಡೀ ನಿನ್ನಯ ನೆನಪಲೆ ಬೇಯುವೆ
ಸೆಳೆತಕೆ ಸೋಲುತ ನಾ ಸನಿಹಕೆ ಕಾಯುವೆ

ಜೀವಗಳ ಭಾಷೆಯಿದು ಬೇಕೆ ಅನುವಾದ
ಭಾವಗಳ ದೋಚುವುದು ಚೆಂದ ಅಪರಾಧ
ಯಾರಿಗೂ ಹೇಳದ ಮಾಹಿತಿ ನೀಡು
ಖಾತರಿ ಇದ್ದರು ಕಾಯಿಸಿ ನೋಡು
ನಿನ್ನಿಂದ ನನ್ನ ನೀನೆ ಕಾಪಾಡು.... ಹೃದಯವೆ....

ಕಣ್ಣಿನಲೆ ದಾರಿಯಿದೆ ನನ್ನ ಸಲುವಾಗಿ
ಮೆಲ್ಲಗೆನೆ ಕೈಯ ಹಿಡಿ ನನ್ನ ಬಲವಾಗಿ
ನನ್ನಯ ತೋಳಲಿ ನೀನಿರೆ ಇಂದು
ಸಾವಿಗೂ ಹೇಳುವೆ ನಾಳೆ ಬಾ ಎಂದು
ಆಗಲೇ  ಬೇಡ ದೂರ ಎಂದೆಂದೂ.... ಹೃದಯವೆ.....


*******************************************************************************


ಮೋಸ ಮಾಡಲೆಂದೇ

ಸಾಹಿತ್ಯ: ಶಶಾಂಕ್ 
ಗಾಯನ: ಕೈಲಾಶ್ ಖೇರ್ 

ಮೋಸ ಮಾಡಲೆಂದೇ ನೀನು ಬಂದೆಯಾ
ಪ್ರೀತಿ ಹೆಸರ ಹೇಳಿ ಎದುರು ನಿಂತೆಯ
ನಕ್ಕ ಹಾಗೆ ನಟನೆ ಮಾಡಿ ಕಾದೆಯ
ನಗುವ ಸದ್ದಿನಲ್ಲೇ ಹೃದಯ ಒಡೆದೆಯ
ನಂಬೋದೆ ಪ್ರೀತಿ ಅನ್ನೋ..
ಲೆಕ್ಕಾನೆ ತಪ್ಪು ಎಂಬ ....೨
ಪಾಠನ ಹೇಳಬಂದೆಯ.......
ಹೋದರೆ ಹೋಗೆ ನೀ ದೂರ...
ನನ್ನಿಂದ ದೂರನೇ ದೂರ....
ಮೋಸ ಮಾಡಲೆಂದೇ

ನಾ ರಾಶಿ ರಾಶಿ ಕನಸ ಕೂಡಿಸಿದ್ದೆ
ನೀ ಅದರ ಮೇಲೆ ಬೆಂಕಿ ಸುರಿದು ಹೋದೆ...
ಪ್ರಿತಿಸೋದಂದ್ರೆ ಏನು ಮಕ್ಕಳ ಆಟ ಏನು .....೨
ಸಾಕೆಂದು ಎದ್ದು ಹೋಗೋಕೆ
ಎಲ್ಲಾನು ಒಳ್ಳೆದಾದ್ರೆ... ಮೋಸಕ್ಕೆ ಮೋಸ ಅಂತ ....೨
ನೋವನ್ನು ನೀಡಿ ಹೋದೆಯಾ....
ಹೋದರೆ ಹೋಗೆ ನೀ ದೂರ.... ನನ್ನಿಂದ ದೂರನೇ ದೂರ...
ಮೋಸ ಮಾಡಲೆಂದೇ

ಸಾ.... ವೇನೆ ಇರದ ಪ್ರೀತಿ ಮಾತನಾಡಿ
ಸೋಲೆಂಬ ಸುಳಿಗೆ ನೂಕಿ ಹೊದೆಯಲ್ಲೇ....
ನೋವನ್ನು ನುಂಗೋ ವಿಧ್ಯೆ ಕಲಿಸಿಹೊದೆ ನೀನು ......೨
ಏನೆಂದು ನಿನ್ನ ಕರೆಯಲಿ
ನೀನೇನೆ ಎಲ್ಲ ಅಲ್ಲ.... ನಿನ್ನಿಂದಲೇ ನಾನು ಅಲ್ಲ ............೨
ನೀನಿಲ್ದೆ ನಾನು ಬಾಳುವೆ ....
ಹೋದರೆ ಹೋಗೆ ನೀ ದೂರ.... ನನ್ನಿಂದ ದೂರನೇ ದೂರ...

ಮೋಸ ಮಾಡಲೆಂದೇ


*********************************************************************************

ನೀ ಆಡದ ಮಾತು 

ಸಾಹಿತ್ಯ: ಜಯಂತ್ ಕಾಯ್ಕಿಣಿ   
ಗಾಯನ: ರಾಜೇಶ್ ಕೃಷ್ಣನ್     


ನೀ ಆಡದ ಮಾತು ನನ್ನಲಿದೆ
ನನ್ನಯ ಮೌನ ನಿನ್ನಲಿದೆ
ಮಂದಹಾಸ ಎಲ್ಲ ಹೇಳಿದೆ
ಅಂದ ಮೇಲೆ ಬಾಕಿ ಏನಿದೆ 

ಒಲವಾಗಿ ಹೋಗಿರುವಾಗ
ಸವಿ ಮಾತು ಸೋಲುವುದೇಕೆ
ಜೋತೆಯಾಗಿ ನೀನಿರುವಾಗ
ಸಮಯಾನೆ ಸಾಲದು ಏಕೆ
ಕರೆ ಕೇಳಿದರೆ ಸ್ವರ ಕಂಪಿಸಿದೆ
ಬರಿಗಾಲಿನಲ್ಲಿ ಓಡಿ ಓಡಿ ಬಂದೆ
ಮಂದಹಾಸ ಎಲ್ಲ ಹೇಳಿದೆ 

ನೀ ಆಡದ ಮಾತು ನನ್ನಲಿದೆ
ನನ್ನಯ ಮೌನ ನಿನ್ನಲಿದೆ
ಮಂದಹಾಸ ಎಲ್ಲ ಹೇಳಿದೆ
ಅಂದ ಮೇಲೆ ಬಾಕಿ ಏನಿದೆ 

ಎಲ್ಲೆ ನಾನಿನ್ನ ಹೆಸರನ್ನು ಕಂಡಾಗ
ನಿನ್ನನ್ನೆ ಕಂಡಂತೆ ಖಾಸಾ ಸಂತಸ
ಹೀಗೆ ನೀ ನನ್ನ ಬಳಿಯಲೇ ಸುಳಿವಾಗ
ದೂರಾನೆ ನಿಲೋದು ಒಂದು ಸಾಹಸ
ಸದಾ ನಿನ್ನದೆ ಧ್ಯಾನ ಈ ಜೀವದಲೀಗ
ಕಣ್ಣಲ್ಲು ನಿಂದೇನೆ ಬಾಯಾರಿಕೆ
ಬಾ ಬೇಗ ಅಭಿಸಾರಕೆ 

ನೀ ಆಡದ ಮಾತು ನನ್ನಲಿದೆ
ನನ್ನಯ ಮೌನ ನಿನ್ನಲಿದೆ
ಮಂದಹಾಸ ಎಲ್ಲ ಹೇಳಿದೆ
ಅಂದ ಮೇಲೆ ಬಾಕಿ ಏನಿದೆ 

ನಿನ್ನ ಹೊರತೀಗ ನನಗೇನು ತಿಳಿದಿಲ್ಲ
ಹೇಳುತ್ತ ನಾನಾದೆ ಇನ್ನು ಭಾವುಕ
ನೀನು ಕಣ್ಣುಜ್ಜಿ ಮತೊಮ್ಮೆ ನೋಡೀಗ
ಈಗಂತು ಈ ಲೋಕ ಇನ್ನು ಮೋಹಕ
ಪ್ರತಿಯೊಂದು ಕ್ಷಣದಲ್ಲು ತಂಗಾಲಿ ಅಲೆಯಲ್ಲು
ಒಂದಾಗಿ ಗೀಚೋಣ ನಾವೀಗಲೆ ಈ ಪ್ರೆಮದ ದಾಖಲೆ 

ನೀ ಆಡದ ಮಾತು ನನ್ನಲಿದೆ
ನನ್ನಯ ಮೌನ ನಿನ್ನಲಿದೆ
ಮಂದಹಾಸ ಎಲ್ಲ ಹೇಳಿದೆ
ಅಂದ ಮೇಲೆ ಬಾಕಿ ಏನಿದೆ 
ಒಲವಾಗಿ ಹೋಗಿರುವಾಗ
ಸವಿ ಮಾತು ಸೋಲುವುದೇಕೆ
ಜೋತೆಯಾಗಿ ನೀನಿರುವಾಗ
ಸಮಯಾನೆ ಸಾಲದು ಏಕೆ
ಕರೆ ಕೇಳಿದರೆ ಸ್ವರ ಕಂಪಿಸಿದೆ
ಬರಿಗಾಲಿನಲ್ಲಿ ಓಡಿ ಓಡಿ ಬಂದೆ 


********************************************************************************

ಒಂದು ಸಣ್ಣ ಆಸೆ

ಸಾಹಿತ್ಯ: ಶಶಾಂಕ್ 
ಗಾಯನ: ದೀಪಕ್ ದೊಡ್ಡೇರ


ಒಂದು ಸಣ್ಣ ಆಸೆ ಬದುಕ ನುಂಗಿತೇ
ಪ್ರೀತಿ ಬಯಸಿ ಹೃದಯ ತಪ್ಪು ಮಾಡಿತೇ
ಕಂಡ ಕನಸು ಕಣ್ಣಿನ್ನಲ್ಲೆ ಕರಗಿತೇ
ಯಾವ ಶಾಪ ಬೆನ್ನ ಬಿಡದೆ ಕಾಡಿದೆ
ಹುದುಗಲಾರದಂತ ನೋವು ಎದೆಯಲಿ
ತುಂಬಿ ಕಣ್ಣ ನೀರೆ ಸೋಜಿಯಾಗಿದೆ 

ಒಂದು ಸಣ್ಣ ಆಸೆ ಬದುಕ ನುಂಗಿತೇ
ಪ್ರೀತಿ ಬಯಸಿ ಹೃದಯ ತಪ್ಪು ಮಾಡಿತೇ 

ಮನದಿ ತುಂಬಿರೋ ಅಂಧಾಕಾರಕೆ ಬೆದರಿ ಈಗ ಮಾತು ಸತ್ತಿದೇ
ಬೇರು ಮುರಿದಿರೋ ಮರದ ಮನಸಿನ ಭಾವದಂತೆ ಜೀವ ನರಳಿದೆ
ಹಾರಲೆಂದು ಹೊರಟ ಜೋಡಿ ಹಕ್ಕಿಗೆ ದೈವವೇನೆ ಕಲ್ಲು ಬೀಸಿ ಕೂತಿದೆ 

ಒಂದು ಸಣ್ಣ ಆಸೆ ಬದುಕ ನುಂಗಿತೇ
ಪ್ರೀತಿ ಬಯಸಿ ಹೃದಯ ತಪ್ಪು ಮಾಡಿತೇ 

ಮರೆವೆನೆಂದರು ಮರೆಯಲಾಗದೆ ಮನಸೆ ಈಗ ವ್ಯಗ್ರವಾಗಿದೆ
ಸುಳಿಯ ಸುತ್ತಲು ತಾನೆ ತಿರುಗುತ ಸಿಲುಕಲೆಂದು ಪ್ರಾಣ ಕಾದಿದೆ
ಮನದ ಹಸಿಯ ಗೋಡೆ ಮೇಲೆ ಗೀಚಿದಾ ಗಾಯವೀಗ ಮಾಯದಂತೆ ಕಾಡಿದೆ 

ಒಂದು ಸಣ್ಣ ಆಸೆ ಬದುಕ ನುಂಗಿತೇ
ಪ್ರೀತಿ ಬಯಸಿ ಹೃದಯ ತಪ್ಪು ಮಾಡಿತೇ
ಕಂಡ ಕನಸು ಕಣ್ಣಿನ್ನಲ್ಲೆ ಕರಗಿತೇ
ಯಾವ ಶಾಪ ಬೆನ್ನ ಬಿಡದೆ ಕಾಡಿದೆ
ಹುದುಗಲಾರದಂತ ನೋವು ಎದೆಯಲಿ
ತುಂಬಿ ಕಣ್ಣ ನೀರೆ ಸೋಜಿಯಾಗಿದೆ


********************************************************************************

Monday, January 14, 2013

''ಸಂಕ್ರಾಂತಿ''

ಅಕ್ಕರೆಯ ಒಲವಿನಲ್ಲಿ
ಸಕ್ಕರೆಯಂತ ಸವಿ ಇರಲಿ
ಆ ಸವಿ ಸುಖವನ್ನು ಹೊತ್ತು ತರುವ
''ಸಂಕ್ರಾಂತಿ'' ನಿಮ್ಮದಾಗಲಿ...
''ಸಂಕ್ರಾಂತಿ ಹಬ್ಬದ ಹಾರ್ಧಿಕ ಶುಭಾಶಯಗಳು''