ಹೂವಿನ ಬಾಣದಂತೆ ಯಾರಿಗೂ
ಚಲನಚಿತ್ರ : ಬಿರುಗಾಳಿ (2009)ಸಾಹಿತ್ಯ: ಜಯಂತ್ ಕಾಯ್ಕಿಣಿ
ಗಾಯಕರು : ಶ್ರೇಯಾ ಘೋಷಾಲ್
ಸಂಗೀತ: ಅರ್ಜುನ್ ಜನ್ಯ
ನಟರು : ಚೇತನ್, ಸಿತಾರ, ತಾರಾ
ಹೂವಿನ ಬಾಣದಂತೆ ಯಾರಿಗೂ ಕಾಣದಂತೆ
ಹಾಡಿನ ಸಾಲಿನಲ್ಲಿ ಮೂಡುವ ಪ್ರಾಣದಂತೆ
ಚೇತನವಾದೆ ನೀನು.....
ಹೂವಿನ ಬಾಣದಂತೆ ಯಾರಿಗೂ ಕಾಣದಂತೆ
ಹಾಡಿನ ಸಾಲಿನಲ್ಲಿ ಮೂಡುವ ಪ್ರಾಣದಂತೆ
ಶೀತಲವಾದೆ ನೀನೆ ನೀನು
ನೂತನಳಾದಂತೆ ನಾನೇ ನಾನು
ನೀ ಬಂದ ಮೇಲೆ ಬಾಕಿ ಮಾತೇನು ಆ ....
ಸಾಲದು ಇಡೀ ದಿನ ಜರೂರಿ ಮಾತಿಗೆ
ಕಾದಿದೆ ಸದಾ ಮನ ಅಪಾರ ಪ್ರೀತಿಗೆ.... ಓ
ಮಾಡಬೇಕಿಲ್ಲ ಆಣೆ ಗೀಣೆ
ಸಾಕು ನೀನೀಗ ಬಂದರೇನೆ
ಅಗೋಚರ... ಅಗೋಚರ
ನಾ ಕೇಳಬಲ್ಲೆ ನಿನ್ನ ಇಂಚರ.....
ಪ್ರೀತಿಯ ನಿರೂಪಣೆ ಇದೀಗ ಮಾಡಿದೆ
ಕಾಯಿಸಿ ಸತಾಯಿಸಿ ಅದೇಕೆ ಕಾಡಿದೆ.... ಓ
ಸ್ಪಪ್ನವ ತಂದ ನೌಕೆ ನೀನು
ಸುಪ್ತವಾದಂತೆ ತೀರ ನಾನು
ಅನಾಮಿಕ... ಅನಾಮಿಕ....
ಈ ಯಾಣಕ್ಕೀಗ ನೀನೆ ನಾವಿಕ....
*********************************************************************************

ಮಧುರ ಪಿಸುಮಾತಿಗೆ
ಸಾಹಿತ್ಯ: ಜಯಂತ್ ಕಾಯ್ಕಿಣಿ
ಗಾಯಕರು: ಮೋಹಿತ್ ಚೌಹಾಣ್, ಶಮಿತಾ ಮಲ್ನಾಡ್
ಮಧುರ ಪಿಸುಮಾತಿಗೆ
ಅಧರ ತುಸು ಪ್ರೀತಿಗೆ
ಇರುವಲ್ಲಿಯು ಇರಲಾರದೆ
ಬರುವಲ್ಲಿಯು ಬರಲಾರದೆ
ಸೋತೆ ನಾನು ನಿನ್ನ ಪ್ರೀತಿಗೆ ಓ....
ಚೂರಾದೆ ಒಂದೆ ಭೇಟಿಗೆ
ಕಂಪಿಸುತ ಪರದಾಡುವೆನು ಅಭಿಲಾಷೆಯ ಕರೆಗೆ
ದಾರಿಯನೆ ಬರಿ ನೋಡುವೆನು ನೀ ಕಾಣುವವರೆಗೆ
ನಿನ್ನದೇ ಪರಿಮಳ ನಿನ್ನಯ ನೆನಪಿಗೆ ಏನಿದು ಕಾತರ
ಬಾರಿ ಬಾರಿ ನಿನ್ನ ಭೇಟಿಗೆ....ಓ....
ಸೋತೆ ನಾನು ನಿನ್ನ ಪ್ರೀತಿಗೆ....
ನೋಡಿದರೆ ಮಿತಿ ಮೀರುತಿದೆ ಮನಮೋಹಕ ಮಿಡಿತ
ಆಳದಲಿ ಅತಿಯಾಗುತಿದೆ ಅಪರೂಪದ ಸೆಳೆತ
ನಿನ್ನದೇ ಹೆಸರಿದೆ ಕನಸಿನ ಊರಿಗೆ
ಕುಣಿಯುತ ಬಂದೆನು ಭಿನ್ನವಾದ ನಿನ್ನ ಧಾಟಿಗೆ....ಓ....
ಸೋತೆ ನಾನು ನಿನ್ನ ಪ್ರೀತಿಗೆ.....
********************************************************************************
ಧನ್ಯವಾದಗಳು, ಅದು 'ಶೀತಲವಾದಂತೆ ' ಅಲ್ಲ , ಚೇತನವಾದಂತೆ
ReplyDelete