Saturday, July 28, 2018

ಉಳಿದವರು ಕಂಡಂತೆ - ಘಟ್ಟದ ಅಂಚಿದಾಯೇ

ಚಲನಚಿತ್ರ : ಉಳಿದವರು ಕಂಡಂತೆ   
ಗಾಯಕರು : ವಿಜಯ್ ಪ್ರಕಾಶ್, ಬಿ. ಅಜನೀಶ್ ಲೋಕನಾಥ್.   
ನಟನೆ : ರಕ್ಷಿತ್ ಶೆಟ್ಟಿ, ಕಿಶೋರ್, ಯಜ್ಞಾ ಶೆಟ್ಟಿ, ತಾರಾ     

ಘಟ್ಟದ ಅಂಚಿದಾಯೇ, ತೆಂಕಾಯಿ ಬತ್ತ್ ತೂಯೆ,   
ಆಲೆನ ತೆಲ್ಕೆದ ಪೊರ್ಲುಗು ತಾದಿ ನಾಡಿಯೇ. 

ಘಾಟಿಯಾ ಇಳಿದು, ತೆಂಕಣ ಬಂದೂ,   
ಅವಳಾ ನೋಡಿ ನಿಂತನೂ..
ಕಡಲ ಬೀಸೋ ಗಾಳಿಗವಳು ಮಾತನಾಡಲೂ,     
ಕೇಳದ ಪಿಸುಮಾತಿಗಿವನು ಮರುಳನಾದನೂ..
ನಗ್ ನಗ್ತಾ ನನ್ನಾ ಮನಸಾ
ಎತ್ಕಂಡು ಒಯ್ತವಳಲ್ಲೋ,
ಅಯ್ಯಯ್ಯಯ್ಯೋ ನಗ್ತಾವ್ಳೋ(೨ ಸಲ). 

ಮನದ ಹಿಂದಾರಿಲಿ ಬರದೇ ಕವಲು,   
ಆ ಕವಲು ದಾರಿಗೆ ಕಾವಲಾ ?,
ಮರುಭೂಮಿಯಲಿ ಹೆಜ್ಜೆಯ ಗುರುತು,   
ಆ ಗುರುತೇ ನಿನ್ನಯ ನೆರಳಾ ?

ಮನಸಾ ಬಿಚ್ಚಿಟ್ಟವನ, ಬರೆಯಲು ಮೌನದ ಕವನಾ,   
ಪದಗಳೆ ಇಲ್ಲದ ಸಾಲ, ಇಳಿಸಲು ಹಾಳೆಯ ಮೇಳ.
ಸೇರಲು ರಂಗು ಮಾಸಿತು ಶಾಹಿಯ ಗೀಚನೂ.. 

ವೇಷಧಾರಿ: ಅಕ್ಕ ಎಯಿನ ಮೀನು ಉಂಡು.
ಯಜ್ಞ:  ಭೂತಾಯಿ, ಬಂಗುಡೆ.
ವೇಷಧಾರಿ: ಭೂತಾಯಿ ದಾನೆ ಫ಼್ರೆಶಾ ?
ಯಜ್ಞ: ಅನ್ದ್. ತೂಲೆ. 

ಸಮಯ ಸಾಗುವ ಗತಿಯ,   
ತಡೆಯುವ ಪರಿಯಾ, ನಾ ಕಾಣೆನೂ,
ಕಳೆವಾ ಸನಿಹದ ಕ್ಷಣವಾ,   
ಮೌನದ ಸ್ವರವಾ ಕೂಡಿಡುವೆನೂ. 
ಶ್ರಾವಣ ಕಳೆದೂ, ಮರಳನು ಅಳೆದೂ,   
ದೂರವ ಸವಿದು ಕೂತನೂ..
ಕಡಲ ಬೀಸೋ ಗಾಳಿಗವಳು ಮಾತನಾಡಲೂ,   
ಕೇಳದ ಪಿಸುಮಾತಿಗಿವನು ಮರುಳನಾದನೂ.
ನಗ್ ನಗ್ತಾ ನನ್ನಾ ಮನಸಾ
ಎತ್ಕಂಡು ಒಯ್ತವಳಲ್ಲೋ,
ಅಯ್ಯಯ್ಯಯ್ಯೋ ನಗ್ತಾವ್ಳೋ(೨). 

ಘಟ್ಟದ ಅಂಚಿದಾಯೇ, ತೆಂಕಾಯಿ ಬತ್ತ್ ತೂಯೆ,   
ಆಲೆನ ತೆಲ್ಕೆದ ಪೊರ್ಲುಗು ತಾದಿ ನಾಡಿಯೇ.


Saturday, July 16, 2016

ನೀ ಹಿಂಗ ನೋಡಬ್ಯಾಡ ನನ್ನ

ರಚನೆ: ವರಕವಿ "ದ.ರಾ.ಬೇಂದ್ರೆ "
ಗಾಯನ: ರಾಜಕುಮಾರ್ ಭಾರತಿ


ಅಂ ಅಂ....  ಅಂ .... ಅಂ... ಅಂ....
ನೀ ಹೀಂಗ ನೋಡಬ್ಯಾಡ ನನ್ನ
ನೀ ಹೀಂಗ ನೋಡಿದರೆ ನನ್ನ
ತಿರುಗಿ ನಾ ಹ್ಯಾಂಗ ನೋಡಲೇ ನಿನ್ನ !

ನೀ ಹೀಂಗ ನೋಡಬ್ಯಾಡ ನನ್ನ
ನೀ ಹೀಂಗ ನೋಡಿದರೆ ನನ್ನ
ತಿರುಗಿ ನಾ ಹ್ಯಾಂಗ ನೋಡಲೇ ನಿನ್ನ !

ದಾರೀಲೆ ನೆನೆದೆ.. ಕೈ ಹಿಡಿದೆ ನೀನು
ತಣ್ಣಾಗ ಅಂತ ನಾ ತಿಳಿದು..
ಬಿಡವಲ್ಲಿ ಇನ್ನೂನು ಬೂದಿ ಮುಚ್ಚಿದ ಕೆಂಡಾ ಇದಂತಾ ಹೊಳೆದು
ಮುಗಿಲಿನ ಕಪ್ಪರಿಸಿ ನೆಲಕ ಬಿದ್ದರಾ ನೆಲಕ ನೆಲಿ ಎಲ್ಲಿನ್ನ ?
ಆ ಗಾದಿಮಾತು ನಂಬಿ ನಾನು ದೇವರಂತ ತಿಳಿದಿಯೇನ ನೀ ನನ್ನ ?


ನೀ ಹೀಂಗ ನೋಡಬ್ಯಾಡ ನನ್ನ
ನೀ ಹೀಂಗ ನೋಡಿದರೆ ನನ್ನ
ತಿರುಗಿ ನಾ ಹ್ಯಾಂಗ ನೋಡಲೇ ನಿನ್ನ !

ಇಬ್ಬನಿ ತೊಳೆದರು ಹಾಲು ಮೆತ್ತಿದಾ ಕವಳ ಕಾಂಟೆಯಾ ಹಣ್ಣು
ಹೊಳೆ ಹೊಳೆವ ಹಾಂಗ ಕಣ್ಣಿರುವ ಹೆಣ್ಣ ಹೇಳು ನಿನ್ನವೇನ ಈ ಕಣ್ಣು?
ದಿಲಿಲಾಗಿ ಅನ್ನತದ ಜೀವ ನಿನ್ನ ಕಣ್ಣಾರೆ ಕಂಡು ಒಮ್ಮಿಗಿಲ
ಹುಣ್ಣಿಮೆ ಚಂದಿರನ ಹೆಣಾ ಬಂತು ಮುಗಿಲಾಗ ತೇಲತಾ  ಹಗಲ

ನೀ ಹೀಂಗ ನೋಡಬ್ಯಾಡ ನನ್ನ
ನೀ ಹೀಂಗ ನೋಡಿದರೆ ನನ್ನ
ತಿರುಗಿ ನಾ ಹ್ಯಾಂಗ ನೋಡಲೇ ನಿನ್ನ !

ನಿನ್ನ ಕಣ್ಣಿನ್ಯಾಗ ಕಾಲೂರಿ ಮಳೆಯು ನಡ-ನಡಕ ಹುಚ್ಚು ನಗಿ ಯಾಕ?
ಹನಿಒಡೆಯಲಿಕ್ಕ ಬಂದಂತ ಮೋಡ ತಡೆದ್ಹಾಂಗ ಗಾಳಿಯಾ ನೆವಕ
ಅತ್ತಾರೆ ಅತ್ತು ಬಿಡು ಹೊನಲು ಬರಲಿ ನಕ್ಕ್ಯಾಕೆ ಮರಸತೀ ದುಃಖ
ಎದೆ ಬಡಿಸಿ ಕೆಡವು ಬಿರಿಗಣ್ಣು ಬ್ಯಾಡ ತುಟಿ ಕಚ್ಚಿ ಹಿಡಿಯದಿರು ಬಿಕ್ಕ

ನೀ ಹೀಂಗ ನೋಡಬ್ಯಾಡ ನನ್ನ
ನೀ ಹೀಂಗ ನೋಡಿದರೆ ನನ್ನ
ತಿರುಗಿ ನಾ ಹ್ಯಾಂಗ ನೋಡಲೇ ನಿನ್ನ !

ನೀ ಹೀಂಗ ನೋಡಬ್ಯಾಡ ನನ್ನ
ನೀ....  ಹೀಂಗ ನೋಡಿದರೆ ನನ್ನ
ತಿರುಗಿ ನಾ ಹ್ಯಾಂಗ ನೋಡಲೇ ನಿನ್ನ !
ಅಂ ಅಂ....  ಅಂ .... ಅಂ... ಅಂ....


Friday, December 13, 2013

-: ಸುಮಧುರ ಭಾವಗೀತೆಗಳು :-


ವಿಶ್ವ ವಿನೂತನ

ವಿಶ್ವ ವಿನೂತನ ವಿದ್ಯಾ ಚೇತನ
ಸರ್ವ ಹೃದಯ ಸಂಸ್ಕಾರಿ ಜಯಭಾರತಿ

ಕರುನಾಡ ಸರಸ್ವತಿ ಗುಡಿಗೋಪುರ ಸುರಶಿಲ್ಪ ಕಲಾಕೃತಿ
ಕೃಷ್ಣೆ ತುಂಗೆ ಕಾವೇರಿ ಪವಿತ್ರಿತ ಮನೋಹಾರಿ 

ಗಂಗ ಕದಂಬ ರಾಷ್ಟ್ರಕೂಟ ಚಾಲುಕ್ಯ ಹೊಯ್ಸಳ ಬಲ್ಲಾಳ
ಹಕ್ಕಬುಕ್ಕ ಪುಲಿಕೇಶಿ ವಿಕ್ರಮರ ಚೆನ್ನಮ್ಮಾಜಿಯ ವೀರಶ್ರೀ 

ಅರಿವೇ ಗುರುನುಡಿ ಜ್ಯೋತಿರ್ಲಿಂಗ ದಯವೇ ಧರ್ಮದ ಮೂಲತರಂಗ
ವಿಶ್ವಭಾರತಿಗೆ ಕನ್ನಡದಾರತಿ ಮೊಳಗಲಿ ಮಂಗಳ ಜಯಭೇರಿ 

ಕವಿ:- ಚೆನ್ನವೀರ ಕಣವಿ
   ********************************************************************************* 

ಮೂಡಲ ಮನೆಯ...

ಮೂಡಲ ಮನೆಯ ಮುತ್ತಿನ ನೀರಿನ
ಎರಕಾವ ಹೊಯ್ದ, ನುಣ್ಣನೆ ಎರಕಾವ ಹೊಯ್ದ ||
ಬಾಗಿಲು ತೆರೆದು ಬೆಳಕು ಹರಿದು  ಜಗವೆಲ್ಲಾ ತೊಯ್ದ ,
ದೇವಾನು ಜಗವೆಲ್ಲಾ ತೊಯ್ದ

ಎಲೆಗಳ ಮೇಲೆ ಹೂಗಳ ಒಳಗೆ
ಅಮೃತದ ಬಿಂದು, ಕಂಡವು ಅಮೃತದ ಬಿಂದು
ಯಾರಿರಿಸಿಹರು ಮುಗಿಲಿನ ಮೇಲಿಂದ
ಇಲ್ಲಿಗೆ ಇದ ತಂದು, ಈಗ ಇಲ್ಲಿಗೆ ಇದ ತಂದು
ಗಿಡಗಂಟೆಗಳ ಕೊರಳೊಳಗಿಂದ ಹಕ್ಕಿಗಳ
ಹಾಡು ಹೊರಟಿತು, ಹಕ್ಕಿಗಳ ಹಾಡು

ಗಂಧರ್ವ ಸೀಮೆಯಾಯಿತು ಕಾಡಿನ ನಾಡು
ಕ್ಷಣದೊಳು, ಕಾಡಿನ ನಾಡು 

ಕವಿ:- ದ. ರಾ. ಬೇಂದ್ರೆ 

*******************************************************************************

ಹುಚ್ಚು ಕೊಡಿ ಮನಸು...

ಹುಚ್ಚು ಕೊಡಿ ಮನಸು ಅದು ಹದಿನಾರರ ವಯಸು ||
ಮಾತು ಮಾತಿಗೆಕೋ ನಗು ಮರು ಗಳಿಗೆಯೇ ಮೌನ
ಕನ್ನಡಿ ಮುಂದಷ್ಟು ಹೊತ್ತು ಬರೆಯದಿರುವ ಕವನ
ಸೇರೆಗು ತೀದಿದಷ್ಟು ಸುಕ್ಕು ಹಠ ಮಾಡುವ ಕೂದಲು
ನಿರಿಯೇಕೋ ಸರಿಯಾಗದು ಮತ್ತೆ ಒಳಗೆ ಹೋದಳು
ಕೆನ್ನೆ ಕೊಂಚ ಕೆಂಪಾಯಿತೆ ತುಟಿಗೆ ಬಣ್ಣ ಹೆಜ್ಜೆ
ನಗುತ ಅವಳ ಚೇಡಿಸುತಿದೆ ಗಲ್ಲದ ಕರಿ ಮಚ್ಚೆ
ಬರಿ ಹಸಿರು ಬರಿ ಹೂವು ಎದೆಯಲೆಷ್ಟೋ ಹೆಸರು
ಯಾವ ಮಧುವೆ ದಿಬ್ಬಣವೋ ಸುಮ್ಮನೆ ನಿಟ್ಟುಸಿರು 

ಕವಿ:- ಹೆಚ್. ಎಸ್. ವೆಂಕಟೇಶಮೂರ್ತಿ

***************************************************************************** 

ಕುರುಡು ಕಾಂಚಾಣ... 

ಕುರುಡು ಕಾಂಚಣ ಕುಣಿಯುತ್ತಲಿತ್ತು
ಕಾಲಿಗೆ ಬಿದ್ದವರ ತುಳಿಯುತ್ತಲಿತ್ತು ||
ಬಾಣನ್ತಿಯೆಲುಬ ಸಾ ಬಾನದ ಬಿಳುಪಿನ
ಕಾಣದ ಕಿರುಗೆಜ್ಜೆ ಕಾಲಾಗ ಇತ್ತು
ಸಣ್ಣ ಕಂದಮ್ಮಗಳ ಕಣ್ಣಿನ ಕವಡಿಯ
ತಣ್ಣನ್ನ ಜೋಮಾಲೆ ಕೊರಳೊಳಗಿತ್ತು
ಬಡವರ ಒಡಲಿನ ಬಡಬಾ ನೆಲದಲ್ಲಿ
ಸುಡು ಸುಡು ಪಂಜು ಕೈಯೋಳಗಿತ್ತೋ
ಕಂಬನಿ ಕುಡಿಯುವ ಹುಂಬ ಬಾಯಿಲಿ ಮೈ
ದುಂಬಿಯಂತುಧೋ ಉಧೋ ಎನ್ನುತ್ತಲಿತ್ತೋ
ಕೂಲಿ ಕುಂಬಳಿಯವರ ಪಾಲಿನ ಮೈದೊಗಲ
ಧೂಳಿಯ ಭಂಡಾರ ಹನಿಯೊಳಗಿತ್ತೋ
ಗುಡಿಯೊಳಗೆ ಗಣ ನಾಮ ಹಡಿಯೊಳಗ ತನನ
ಅಂಗಡಿಯೊಳಗೆ ಝಾಣನ ನುಡಿಗೊಡುತಿತ್ತೋ
ಹ್ಯಾಂಗಾರೆ ಕುಣಿಕುಣಿದು ಮಂಗಾಟ ನಡೆದಾಗ
ಅಂಗಾತ ಬಿತ್ತೋ ಹೆಗಲಲ್ಲಿ ಎತ್ತೋ 

ಕವಿ:- ದ.ರಾ. ಬೇಂದ್ರೆ

******************************************************************************* 

ಯುಗ ಯುಗಾದಿ ಕಳೆದರೂ...

ಯುಗ ಯುಗಾದಿ ಕಳೆದರೂ
ಯುಗಾದಿ ಮರಳಿ ಬರುತಿದೆ
ಹೊಸ ವರುಷಕೆ ಹೊಸ ಹರುಷವ
ಹೊಸೆತು ಹೊಸೆತು ತರುತಿದೆ ||

ಹೊಂಗೆ ಹೂವ ತೊಂಗಳಲಿ
ಭೃಂಗದ ಸಂಗೀತ ಕೇಳಿ
ಮತ್ತೆ ಕೇಳ ಬರುತಿದೆ
ಬೇವಿನ ಕಹಿ ಬಾಳಿನಲ್ಲಿ
ಹೂವಿನ ನಸುಗಂಪು ಸೂಸಿ
ಜೀವ ಕಳೆಯ ತರುತಿದೆ

ವರುಷಕೊಂದು ಹೊಸತು ಜನ್ಮ
ಹರುಷಕೊಂದು ಹೊಸತು ನೆಲೆಯು
ಅಖಿಲ ಜೀವ ಜಾತಕೆ
ಒಂದೇ ಒಂದು ಜನ್ಮದಲ್ಲಿ
ಒಂದೇ ಬಾಲ್ಯ ಒಂದೇ ಹರಯ
ನಮಗದಷ್ಟೇ ಏತಕೋ ?

ನಿದ್ದೆಗೊಮ್ಮೆ ನಿತ್ಯ ಮರಣ ಎದ್ದ
ಸಾಲ ನವೀನ ಜನನ
ನಮಗೆ ಏಕೆ ಬಾರದೋ?
ಎಲೆ ಸನತ್ಕುಮಾರ ದೇವ ಎಲೆ
ಸಾಹಸಿ ಚಿರಂಜೀವ
ನಿನಗೆ ಲೀಲೆ ಸೇರದೋ 

ಕವಿ:- ದ.ರಾ. ಬೇಂದ್ರೆ

*******************************************************************************

ಮುಗಿಲ ಮಾರಿಗೆ ರಾಗ...

ಮುಗಿಲ ಮಾರಿಗೆ ರಾಗ ರತಿಯ
ನಂಜ ಏರಿತ್ತ   ಆಗ ಸಂಜೆ ಆಗಿತ್ತ ||

ನೆಲದ ಅಂಚಿಗೆ ಮಂಜಿನ ಮುಸುಕು ಹ್ಯಾಂಗೋ ಬಿದ್ದಿತ್ತ
ಗಾಳಿಗೆ ಮೇಲಕ್ಕೆದ್ದಿತ್ತ
ಬಿದಿಗೆ ಚಂದ್ರನ ಚೊಗಚಿ ನಗಿವು ಮೆಲ್ಲಗ ಮೂಡಿತ್ತ
ಮ್ಯಾಲಕ ಬೆಳ್ಳಿನ ಕೂಡಿತ್ತ
ಇರುಳು ಹರಳಿನ ಅರಳು ಮಲ್ಲಿಗೆ ಜಾಲಿಗೆ ಹಂಗಿತ್ತ
ಸುಸ್ಯಾವ ಚಿಕ್ಕಿ ಅತ್ತಿತ್ತ
ಬೊಗಸಿಗಣ್ಣಿನ ಬಯಕೆಯ ಹೆಣ್ಣು ನೀರಿಗೆ ಹೋಗಿತ್ತ
ತಿರುಗಿ ಮನೀಗೆ ಸಾಗಿತ್ತ
ಕಾಲು ಬೇಕ್ಕಿನ್ಹಾಂಗ ಭಾವಿ ಹಾದಿ ಕಾಳಾಗ ಕುಳಿತಿತ್ತ
ಎರಗಿ ಹಿಂದಕ್ಕುಳಿತಿತ್ತ
ಮಳ್ಳ ಗಾಳಿ ಸುಳಿ ಕಳ್ಳ ಕೈಲೆ ಸೆರಗನು ಹಿಡಿದಿತ್ತ
ಮತ ಮತ ಬೆರಗಿಲೆ ಬಿಡತಿತ್ತ
ಒಂದ ಮನದ ಗಿಳಿ ಹಿಂದ ನೆಳ್ಳಿಗೆ ಬೆನ್ನಿಲೆ ಬರಲಿತ್ತ
ತನ್ನ ಮೈಮನ ಮರೆತಿತ್ತ 

ಕವಿ:- ದ. ರಾ. ಬೇಂದ್ರೆ 

*******************************************************************************

ಬಣ್ಣದ ತಗಡಿನ ತುತ್ತೂರಿ...

ಬಣ್ಣದ ತಗಡಿನ ತುತ್ತೂರಿ
ಕಾಸಿಗೆ ಕೊಂಡನು ಕಸ್ತೂರಿ
ಸ-ರಿ-ಗ-ಮ-ಪ-ಡ-ನಿ-ಸ ಊದಿದನು
ಸ-ನಿ-ದ-ಪ-ಮ-ಗ-ರಿ-ಸ ಊದಿದನು || 

ತನಗೇ ತುತ್ತೂರಿ ಇದೆಯೆಂದ
ಬೇರಾರಿಗೂ ಅದು ಇಲ್ಲೆಂದ
ಕಸ್ತೂರಿ ನಡೆದನು ಬೀದಿಯಲಿ
ಜಂಭದ ಕೋಳಿಯ ರೀತಿಯಲಿ
ತುತ್ತೂರಿ ಊದುತ ಕೊಳದ ಬಳಿ
ನಡೆದನು ಕಸ್ತುರಿ ಸಂಜೆಯಲಿ
ಜಾರಿತು ನೀರಿಗೆ ತುತ್ತೂರಿ
ಗಂಟಲು ಕಟ್ಟಿತು ನೀರೂರಿ
ಸ-ರಿ-ಗ-ಮ ಊದಲು ನೋಡಿದನು
ಗ-ಗ-ಗ-ಗ ಸದ್ದನು ಮಾಡಿದನು
ಬಣ್ಣವು ನೀರಿನ ಪಾಲಾಯ್ತು
ಜಂಭದ ಕೋಳಿಗೆ ಗೋಳಾಯ್ತು 

ಕವಿ:- ಜಿ. ಪಿ. ರಾಜರತ್ನಂ

*******************************************************************************

ಎಲ್ಲಾದಾರು ಇರು

ಗಾಯನ: ಡಾ. ರಾಜ್ ಕುಮಾರ್ 
ಸಂಗೀತ: ಸಿ. ಅಶ್ವಥ್ 

ಎಲ್ಲಾದರು ಇರು ಎಂತಾದರು ಇರು ||೨||    
ಎಂದೆಂದಿಗೂ ನೀ ಕನ್ನಡವಾಗಿರು    
ಕನ್ನಡವೇ ಸತ್ಯ, ಕನ್ನಡವೇ ನಿತ್ಯ     
ಕನ್ನಡ ಗೋವಿನ ಓ ಮುದ್ದಿನ ಕರು ||೨||    
ಕನ್ನಡತನ ಒಂದಿದ್ದರೆ, ಅಮ್ಮಗೆ ಕಲ್ಪತರು    
ಕನ್ನಡವೇ ಸತ್ಯ, ಕನ್ನಡವೇ ನಿತ್ಯ     

ಎಲ್ಲಾದರು ಇರು ಎಂತಾದರು ಇರು    
ಎಂದೆಂದಿಗೂ ನೀ ಕನ್ನಡವಾಗಿರು     

ನೀ ಮೆಟ್ಟುವ ನೆಲ, ಅದೆ ಕರ್ನಾಟಕ    
ನೀನೇರುವ ಮಲೆ ಸಹ್ಯಾದ್ರಿ    
ನೀ ಮೆಟ್ಟುವ ನೆಲ, ಅದೆ ಕರ್ನಾಟಕ    
ನೀನೇರುವ ಮಲೆ ಸಹ್ಯಾದ್ರಿ    

ನೀ ಮುಟ್ಟುವ ಮರ ಶ್ರೀಗಂಧದ ಮರ ||೨||    
ನೀ ಕುಡಿಯುವ ನೀರ್ ಕಾವೇರಿ     

ಪಂಪನ ಓದುವ ನಿನ್ನಾ ನಾಲಗೆ    
ಕನ್ನಡವೇ ಸತ್ಯ    
ಕುಮಾರವ್ಯಾಸನ ಆಲಿಪ ಕಿವಿಯದು    
ಕನ್ನಡವೇ ನಿತ್ಯ     

ಎಲ್ಲಾದರು ಇರು ಎಂತಾದರು ಇರು    
ಎಂದೆಂದಿಗೂ ನೀ ಕನ್ನಡವಾಗಿರು     
ಹರಿಹರ ರಾಘವರಿಗೆ ಎರಗುವ ಮನ    
ಹಾಳಾಗಿಹ ಹಂಪೆಗೆ ಕೊರಗುವ ಮನ    
ಹರಿಹರ ರಾಘವರಿಗೆ ಎರಗುವ ಮನ    
ಹಾಳಾಗಿಹ ಹಂಪೆಗೆ ಕೊರಗುವ ಮನ    
ಬೆಳ್ಗೊಳ ಬೇಲೂರ್‍ಗಳ ನೆನೆಯುವ ಮನ    
ಮಲೆನಾಡಿಗೆ ಹೊಂಪುಳಿ ಹೋಗುವ ಮನ     

ಕಾಜಾಣಕೆ ಗಿಳಿ, ಕೋಗಿಲೆ ಇಂಪಿಗೆ    
ಮಲ್ಲಿಗೆ ಸಂಪಿಗೆ ಕೇದಗೆ ಸೊಂಪಿಗೆ    
ಕಾಜಾಣಕೆ ಗಿಳಿ, ಕೋಗಿಲೆ ಇಂಪಿಗೆ    
ಮಲ್ಲಿಗೆ ಸಂಪಿಗೆ ಕೇದಗೆ ಸೊಂಪಿಗೆ    
ಮಾವಿನ ಹೊಂಗೆಯ ತಳಿರಿನ ತಂಪಿಗೆ     
ರೋಮಾಂಚನಗೊಳುವಾ ತನು ಮನ    
ಕನ್ನಡವೇ ಸತ್ಯ, ಕನ್ನಡವೇ ನಿತ್ಯ     

ಎಲ್ಲಾದರು ಇರು ಎಂತಾದರು ಇರು    
ಎಂದೆಂದಿಗು ನೀ ಕನ್ನಡವಾಗಿರು    
ಎಲ್ಲಿದ್ದರೆ ಏನ್ ಎಂತಿದ್ದರೆ ಏನ್    
ಎಲ್ಲಿದ್ದರೆ ಏನ್ ಎಂತಿದ್ದರೆ ಏನ್    
ಎಂದೆಂದಿಗು ತಾನ್ ಕನ್ನಡವೇ ಸತ್ಯ ಕನ್ನಡವೇ ನಿತ್ಯ    

ಅನ್ಯವೆನಲದೆ ಮಿಥ್ಯ

ಕವಿ:- ಕುವೆಂಪು 
*******************************************************************************

-: ಹಚ್ಚೇವು ಕನ್ನಡದ ದೀಪ :-


ಹಚ್ಚೇವು ಕನ್ನಡದ ದೀಪ ಕರುನಾಡ ದೀಪ
ಸಿರಿ ನುಡಿಯ ದೀಪ ಒಲವೆತ್ತಿ ತೋರುವ ದೀಪ

ಬಹುದಿನಗಳಿಂದ ಮೈಮರೆವೆಯಿಂದ ಕೂಡಿರುವ ಕೊಳೆಯ ಕೊಚ್ಚೇವು
ಎಲ್ಲೆಲ್ಲಿ ಕನ್ನಡದ ಕಂಪು ಸೂಸಲು ಕರಣ ಚಾಚೇವು

ನಡುನಾಡೆ ಇರಲಿ ಗಡಿನಾಡೆ ಇರಲಿ ಕನ್ನಡದ ಕಳೆಯ ಕೆಚ್ಚೇವು
ಮರೇತೇವು  ಮರವ ತರದೇವು ಮನವ ಎರದೇವು ಒಲವ ಹಿರಿನೆನಪಾ
ನರನರವನೆಲ್ಲ ಹುರಿಗೊಳಿಸಿ ಹೊಸದು ಹಚ್ಚೇವು ಕನ್ನಡದ ದೀಪ

ಕಲ್ಪನೆಯ ಕಣ್ಣು ಹರಿವನಕೆ ಸಾಲು ದೀಪಗಳ ಬೆಳಕ ಬೀರೇವು
ಹಚ್ಚಿರುವ ದೀಪದಲಿ ತಾಯರೂಪ ಅಚ್ಚಳಿಯದಂತೆ ತೋರೇವು
ಒಡಲೊಳಲ ಕೆಚ್ಚಿನ ಕಿಡಿಗಳನ್ನು ಗಡಿನಾಡಿನಾಚೆ ತೋರೇವು
ಹಮ್ಮಿರಲು ಪ್ರೀತಿ ಎಲ್ಲಿಹುದು ಭೀತಿ ನಾಡೊಲವ ನೀತಿ ಹಿಡಿನೆನಪಾ
ಮನೆಮನೆಗಳಲ್ಲಿ ಮನಮನಗಳಲ್ಲಿ ಹಚ್ಚೇವು ಕನ್ನಡದ ದೀಪ

ನಮ್ಮವರು ಗಳಿಸಿದ ಹೆಸರುಳಿಸಲು ಎಲ್ಲಾರು ಒಂದುಗೂಡೇವು
ನಮ್ಮೆದೆಯ ಮಿಡಿಯುವೀ ಮಾತಿನಲ್ಲಿ ಮಾತೆಯನು ಪೂಜೆಮಾಡೇವು
ನಮ್ಮುಸಿರು ತೀಡುವೀ ನಾಡಿನಲ್ಲಿ ಮಾಂಗಲ್ಯಗೀತೆ ಹಾಡೇವು
ತೊರೆದೇವು ಮರುಳ ಕಡದೇವು ಇರುಳ ಪಡದೇವು ತಿರುಳ ಹಿರಿನೆನಪಾ
ಕರುಳೆಂಬ ಕುಡಿಗೆ ಮಿಂಚನ್ನೆ ಮುಡಿಸಿ ಹಚ್ಚೇವು ಕನ್ನಡದ ದೀಪ. 

ಕವಿ - ಡಿ. ಎಸ್. ಕರ್ಕಿ 

-: ಅನ್ವೇಷಣೆ :-


ಎಲ್ಲೋ ಹುಡುಕಿದ ಇಲ್ಲದ ದೇವರ
ಕಲ್ಲು ಮುಳ್ಳುಗಳ ಗುಡಿಯೊಳಗೆ,
ಇಲ್ಲೇ ಇರುವ ಪ್ರೀತಿ ಸ್ನೇಹಗಳ
ಗುರುತಿಸದಾದೆನು ನಮ್ಮೊಳಗೆ,

ಎಲ್ಲಿದೆ ಬಂಧನ, ಎಲ್ಲಿದೆ ನಂದನ
ಎಲ್ಲಾ ಇವೆ ಈ ನಮ್ಮೊಳಗೇ,
ಒಳಗಿನ ತಿಳಿಯನು ಕಲಕದೆ
ಇದ್ದರೆ ಅಮೃತದ ಸವಿಯು ನಾಲಿಗೆಗೆ,

ಹತ್ತಿರವಿದ್ದರೂ ದೂರ ನಿಲ್ಲುವೆವು,
ನಮ್ಮ ಹಮ್ಮಿನ ಕೋಟೆಯಲಿ,
ಎಷ್ಟು ಕಷ್ಟವೋ ಹೊಂದಿಕೆಯೆಂಬುದು
 ನಾಲ್ಕು ದಿನದ ಈ ಬದುಕಿನಲಿ

ಕವಿ - ಜಿ. ಎಸ್. ಶಿವರುದ್ರಪ್ಪ 


Thursday, December 12, 2013

ಮೊಗ್ಗಿನ ಮನಸು (2008)

ಮಳೆ ಬರುವ ಹಾಗಿದೆ

ಚಲನಚಿತ್ರ : ಮೊಗ್ಗಿನ ಮನಸು (2008) 
ಗಾಯಕರು : ಶ್ರೇಯಾ ಘೋಷಾಲ್ 
ನಟಿಸಿದವರು : ರಾಧಿಕಾ ಪಂಡಿತ್, ಯಶ್ ಮತ್ತು ಇತರರು 
ಸಂಗೀತ : ಮನೋ ಮೂರ್ತಿ 
ಸಾಹಿತ್ಯ : ಜಯಂತ್ ಕಾಯ್ಕಿಣಿ 
ನಿರ್ದೇಶಕರು : ಶಶಾಂಕ್ 


ಮಳೆ ಬರುವ ಹಾಗಿದೆ ಮನವೀಗ ಹಾಡಿದೆ
ಹೃದಯದಲ್ಲಿ ಕೂತು ನೀನು ನನ್ನ ಕೇಳಬೇಕಿದೆ
ಸವಿಗನಸು ಕಾಡಿದೆ ನಸುನಗುವು ಮೂಡಿದೆ
ಕಾಣದಂತೆ ನಿಂತು ನೀನು ನನ್ನ ನೋಡಬೇಕಿದೆ

ನಿನ್ನ ನಗುವಿನಲ್ಲೇ ನನ್ನ ನಸುಕು
ನಿನ್ನ ರೂಪವಿರಿಸಿ ಬಂದು ನಲಿದಾಡಿದೆ ಬೆಳಕು
ಗೆಳೆಯ ನೀನು ಬಳಿಯೇ ಅನುಕ್ಷಣವು ಬೇಕಾಗಿದೆ
ದಿನಕೆ ನೂರು ಬಾರಿ ನೀನು ಪ್ರೀತಿ ಹೇಳಬೇಕಿದೆ

ಎದೆಯ ಬಾಗಿಲಲ್ಲೇ ನಿನ್ನ ಸುಳಿವು
ಸಣ್ಣ ಆಸೆಯಲ್ಲೇ ನಮ್ಮ ಸಹವಾಸದ ನಲಿವು
ಇನಿಯ ನಮ್ಮ ಒಲವು ಮೆರವಣೆಗೆ ಹೊರಟಾಗಿದೆ
ಮರೆತ ಹಾಗೆ ಚೂರು ನಟಿಸಿ ನಿನ್ನ ಕಾಡಬೇಕಿದೆ....

********************************************************************************


ಐ ಲವ್ ಯೂ

ಸಾಹಿತ್ಯ: ಶಶಾಂಕ್ 
ಗಾಯನ: ಸೋನು ನಿಗಮ್  


I Love You......ಓ....
I Love You......

ನೂರಾರು ಪ್ರೀತಿ ಮಾತು
ನೂರಾರು ಸಾರಿ ಆಡಿ
ನೀನೇನೆ ಜೀವ ಎಂದು
ನೂರಾರು ಆಣೆ ಮಾಡಿ
ಕಾರಣವೇ ಹೇಳದೆ ಏಕೆ
ನನ್ನ ಬಿಟ್ಟು ಹೋದೆ
ನೀನೆಲ್ಲೇ ಹೋದರು ಏನು
ನೀನನ್ನ ಮರೆತರು ಏನು
ನೀನೇನೆ ಮಾಡಿದರೇನು
ನಿನ್ನನ್ನೇ ಮರೆಯುವೆಯೇನು
ನಿನ್ನಲ್ಲೇ ನಾನು ಅವಿತು ಕುಳಿತಿಲ್ಲವೇನು....

ನೀನು ಇರದೇ ಬದುಕುವುದನ್ನು ಕಲಿಯೋ ಸಾಹಸದಲ್ಲಿ
ನಿನ್ನ ನೆನಪೆ ಎದುರು ನಿಂತು ಸೋತಿಹೆ ನಾನು ಇಲ್ಲಿ
ಬಿಟ್ಟು ಹೋದ ಆ ಘಳಿಗೆ ನೆನೆದು ನೆನೆದು ಈ ಘಳಿಗೆ
ಜಾರುವ ಕಂಬನಿ ಜಾರಲು ಬಿಟ್ಟು ಸುಮ್ಮನೆ ಹಾಗೆ ಕೂತಿರುವೆ......

ನನ್ನೆದೆ ಗುಡಿಯ ನಂದಾದೀಪ ಆರಿಸಿ ಹೋದೆ ನೀನು
ಕತ್ತಲೆ ಕೋಣೆಯ ಒಳಗೂ ನಿನ್ನ ನೆನಪಲೆ ಬೆಂದೆ ನಾನು
ದೂರ ಹೋದೆ ನೀನೆಂದು ದೂರಲಾರೆ ನಿನ್ನೆಂದು
ನಿನ್ನ ನೆನಪ ಬಂಧನದಲ್ಲೇ ಸಾಯೋವರೆಗು ಕಾಯುವೆನು.....

*********************************************************************************

ಓ ನನ್ನ ಮನವೇ

ಸಾಹಿತ್ಯ: ವಿ. ನಾಗೇಂದ್ರ ಪ್ರಸಾದ್ 
ಗಾಯಕರು: ಸೋನು ನಿಗಮ್ 

ಓ ನನ್ನ ಮನವೇ ಏನಾದೆ ನೀನು
ಮಾತೆಲ್ಲ ಮರೆತು ಮೂಕಾದೆ ಏನು
ಈ ಕಂಗಳಲ್ಲಿ ನೀರಾದೆಯೇನು
ಈ ಒಂದು ನಿಜವೇ ಸುಳ್ಲಾಗದೆನು
ಎದೆ ಬಿರಿಯೋ ನೋವು ಭ್ರಮೆಯಾಗದೆನು
ಮುನ್ನಡೆದ ಸಮಯ ಹಿಂದಿರುಗದೇನು
 ಓ ನನ್ನ ಮನವೇ ಮಾತಾಡೆಯೇನು

ಸಾಗರದ ಒಡಲೇ ಬರಿದಾಯಿತೇಕೆ
ಇಬ್ಬನಿ ಹೊಳಪೆ ಚೂಪಯಿತೇಕೆ
ಮುಸ್ಸಂಜೆ ಬಾನು ರಂಗಿಲ್ಲವೇಕೆ
ತಂಗಾಳಿ ಸೋಕೆ ತಂಪಿಲ್ಲವೇಕೆ
ಚಂದಿರನ ಮೊಗದಿ ಕಂಬನಿ ಹನಿಯೇಕೆ
ಹೀಗೇಕೆ ಹೀಗೇಕೆ ಭಾವಗಳೇ
ಅದಲು ಬದಲಾಯಿತೇಕೆ
ಓ ನನ್ನ ಮನವೇ ಮಾತಾಡೆಯೇನು

ಕಣ್ಣಳತೆ ದೂರ ಬರಿ ಕವಲುದಾರಿ
ಎದೆಯಾಳದಲ್ಲಿ ತಲ್ಲಣದ ಭೇರಿ
ಆಸೆಗಳ ಮೇಲೆ ಬಿಸಿ ಉಸಿರ ಲಾವ
ಕನಸೇನೆ ಇರದೆ ಕುರುಡಾದ ಭಾವ
ಕತ್ತಲೆಯ ಕಾನನದಿ ನಿಂತಿರುವೆ
ನಾನೀಗ ನಾನೀಗ ನಾನೀಗ
ಹೊರಬರುವ ದಾರಿ ಹುಡುಕೋದು ಹೇಗೆ
 ಓ ನನ್ನ ಮನವೇ ಮಾತಾಡೆಯೇನು

ಓ ನನ್ನ ಮನವೇ ಏನಾದೆ ನೀನು
ಮಾತೆಲ್ಲ ಮರೆತು ಮೂಕಾದೆ ಏನು
ಈ ಕಂಗಳಲ್ಲಿ ನೀರಾದೆಯೇನು
ಈ ಒಂದು ನಿಜವೇ ಸುಳ್ಲಾಗದೇನು
ಎದೆ ಬಿರಿಯೋ ನೋವು ಭ್ರಮೆಯಾಗದೇನು
ಮುನ್ನಡೆದ ಸಮಯ ಹಿಂದಿರುಗದೇನು
ಓ ನನ್ನ ಮನವೇ ಮಾತಾಡೆಯೇನು

*********************************************************************************

ಗೆಳೆಯ ಬೇಕು

ಸಾಹಿತ್ಯ: ಜಯಂತ್ ಕಾಯ್ಕಿಣಿ 
ಗಾಯಕರು: ಕೆ. ಎಸ್. ಚಿತ್ರಾ, ಪ್ರಿಯಾ ಹಿಮೇಶ್ 


ಯಾರಿಗೋ ಏನೇನೋ ನೀಡುವ ದೇವನೆ,
ನನ್ನಯ ಮನವಿ ಸಲ್ಲಿಸಾಲೇನು..
ಬೆಚ್ಚನೆ ಭಾವ ಮೂಡಿಸುತಿರುವ,
ಮನಸಿನ ಆಸೆ ಕೇಳುವೆ ಏನು..
ನಾನು ಈಗ ಪ್ರೀತಿಯಲ್ಲಿ ಬೀಳಬೇಕು..
ನನಗೂ ಒಬ್ಬ ಗೆಳೆಯ ಬೇಕು..
ಇದ್ದಲ್ಲಿ ಇದ್ದಹಾಗೆ ಸದ್ದೇನೆ ಆಗದಂತೆ
ಹೃದಯ ಕದ್ದು ಹೋಗಬೇಕು..
ನಾನು ಈಗ ಪ್ರೀತಿಯಲ್ಲಿ ಬೀಳಬೇಕು..
ನನಗೂ ಒಬ್ಬ ಗೆಳೆಯ ಬೇಕು.. 

ನೆನೆದಾಗೆಲ್ಲ ಹಾಗೇನೇ ಓದಿ ಬರಬೇಕು..
ಕಾಡಾಗೆಲ್ಲ ಮುತ್ತಿನ ಗಂಧ ತೆರಬೇಕು..
ಮತ್ತೆ ಮತ್ತೆ ಬರಬೇಕು ಹುಚ್ಚು ಸಂದೇಶ..
ಕದ್ದು ಮುಚ್ಚಿ ಓದೋಕೆ ಹೆಚ್ಚಿ ಸಂತೋಷ..
ಮುನಿಸು ಬಂದಾಗೆಲ್ಲ ಅವನೇ ಕ್ಷಮಿಸು ಅನಬೇಕು..
ಚಂದಿರನ ತಟ್ಟೆಯಲ್ಲಿ ಸೇರಿ ತಿನಬೇಕು..
ಎಲ್ಲಾರು ಜಾತ್ರೆಯಲ್ಲಿ ತೇರನ್ನೇ ನೋಡುವಾಗ,
ಅವನು ನನ್ನೇ ನೋಡಬೇಕು.. ಕಾಡುವಂತ ಗೆಳೆಯ ಬೇಕು..
ಎಂದು ನನ್ನ, ಹಿಂದೆ ಮುಂದೆ ಸುಲಿಯಬೇಕು..
ನಾನು ಈಗ ಪ್ರೀತಿಯಲ್ಲಿ ಬೀಳಬೇಕು..
ನನಗೂ ಒಬ್ಬ ಗೆಳೆಯ ಬೇಕು.. 

ಇದ್ದಹಾಗೆ ನೀ ನನಗೆ ಚಂದಾ ಅನಬೇಕು..
ಯಾಕೋ ಬೇಜಾರಾದಾಗ ಸುಮ್ಮನಿರಬೇಕು..
ಮುದ್ದು ನಗೆಯ ಹೂವನ್ನು ಮೂಡಿಸಬರಬೇಕು..
ಎಲ್ಲೋ ಮರೆತ ಹಾಡನ್ನು ಹೆಕ್ಕಿ ತರಬೇಕು..
ಮಳೆಯ ತೀರದಲ್ಲಿ ಅವನು ನನಗೆ ಕಾಧಾಂತೆ..
ಕನ್ನಡಿಯಲ್ಲಿ ಬೆನ್ನ ಹಿಂದೆ ಅವನೇ ನಿಂತಂತೆ..
ಗುಟ್ಟಾಗಿ ಹೃದಯದಲ್ಲಿ ಪ್ರೀತಿಯ
ಖಾತೆಯೊಂದ ಜಂಟಿಯಾಗಿ ತೆರೆಯಬೇಕು..
ದೇವರಂಥ ಗೆಳೆಯ ಬೇಕು..
ಹೇಳದೆನೆ ಅವನಿಗೆಲ್ಲ ತಿಳಿಯಬೇಕು.. 

ಯಾರಿಗೋ ಏನೇನೋ ನೀಡುವ ದೇವನೆ,
ನನ್ನಯ ಮನವಿ ಸಲ್ಲಿಸಾಲೇನು..
ಬೆಚ್ಚನೆ ಭಾವ ಮೂಡಿಸುತಿರುವ,
ಮನಸಿನ ಆಸೆ ಕೇಳುವೆ ಏನು..
ನಾನು ಈಗ ಪ್ರೀತಿಯಲ್ಲಿ ಬೀಳಬೇಕು..
ನನಗೂ ಒಬ್ಬ ಗೆಳೆಯ ಬೇಕು..
ಇದ್ದಲ್ಲಿ ಇದ್ದಹಾಗೆ ಸದ್ದೇನೆ ಆಗದಂತೆ
ಹೃದಯ ಕದ್ದು ಹೋಗಬೇಕು..
ನಾನು ಈಗ ಪ್ರೀತಿಯಲ್ಲಿ ಬೀಳಬೇಕು..
ನನಗೂ ಒಬ್ಬ ಗೆಳೆಯ ಬೇಕು..


*********************************************************************************

ಅಮೃತಧಾರೆ (2005)





ಚಲನಚಿತ್ರ : ಅಮೃತಧಾರೆ (2005)
ನಿರ್ದೇಶಕರು : ನಾಗತಿಹಳ್ಳಿ ಚಂದ್ರಶೇಖರ್ 
ಸಾಹಿತ್ಯ: ನಾಗತಿಹಳ್ಳಿ ಚಂದ್ರಶೇಖರ್ 
ಸಂಗೀತ: ಮನೋಮೂರ್ತಿ 
 ಗಾಯಕರು : ಹೆಚ್. ಜಿ. ಚೈತ್ರಾ 
ನಟಿಸಿದವರು : ಧ್ಯಾನ್, ರಮ್ಯಾ


ಹುಡುಗ ಹುಡುಗ ಓ ನನ್ನ ಮುದ್ದಿನ ಹುಡುಗ
ಮುದ್ ಮಾಡೋಕು ಕಂಜೂಸು ಬುದ್ಧಿ ಬೇಕ?
ಹನಿಮೂನಲ್ಲು ಧ್ಯಾನ ಏಕಾಂತದಲ್ಲೂ ಮೌನ
ಏನು ಚೆಂದ ಹತ್ತಿರ ಬಾ ಹುಡುಗಾ....

ಮುತ್ತಿನ ಹೊದಿಕೆ ಸುತ್ತಲು ಹೊದಿಸಿ
ಅಪ್ಪಿಕೋ ಬಾರೋ ನನ್ನನ್ನ
ಚುಮು ಚುಮು ಚಳಿಗೆ ಬಿಸಿ ಬಿಸಿ ಬಯಕೆ
ಬೆಚ್ಚಗೆ ಇರಿಸೋ ನನ್ನನ್ನ
ಕತ್ತಲೆಯೊಳಗೆ ಕಣ್ಣಾಮುಚ್ಚಾಲೆ
ಅಪ್ಪಿಕೋ ಬಾರೋ ನನ್ನನ್ನ
ಉರುಳಿಸು ಬಾರೋ ಕೆರಳಿಸು ಬಾರೋ
ನರಳಿಸು ಬಾರೋ ನನ್ನನ್ನ...

ಶೋ ಮಿ ಲವ್, ಶೋ ಮಿ ಲೈಫ್,
ಶೋ ಮಿ ಎವರಿಥಿಂಗ್ ಇನ್ ಲೈಫ್
ಟೇಕ್ ಮಿ ಆನ್ ಅ ಹಾಲಿಡೇ,
ಶೋ ಮಿ ಸಮಥಿಂಗ್ ಎವರಿಡೇ
ಮೇಕ್ ಮಿ ಸ್ಮೈಲ್ ಅಂಡ್ ಮೇಕ್ ಮಿ ಸ್ಮೈಲ್,
ಮೇಕ್ ಮಿ ಸ್ಮೈಲ್ ಫಾರ್ ಅ ವ್ಹೈಲ್
ಮೇಕ್ ಮೈ ಡ್ರೀಮ್ಸ್ ಕಮ್ ಟು ಲೈಫ್,
ಶೋ ಮಿ ಹೌ ಯು ಲವ್ ಯುವರ್ ವೈಫ್...

ಪೋಲಿಯ ಮಾತು ಯಾರಿಗೆ ಬೇಕು
ಈ ಕ್ಷಣ ಪ್ರೀತಿಯ ಮಾಡೋಣ
ಮಂಚಕೆ ಹಾರಿ ಮಗುವನು ಹೀರಿ
ದಾಹವ ನೀಗಿ ಸುಖಿಸೋಣ
ಊರನು ಬಿಟ್ಟು ಊರಿಗೆ ಬಂದು
ಪ್ರೀತಿಯ ತೇರನು ಎಳೆಯೋಣ
ಮಧುವೆ  ಆಯ್ತು ಮನವೊಂದಾಯ್ತು
ಮುದ್ದಿನ ಮಗುವನು ಪಡೆಯೋಣ....

ಹುಡುಗ ಹುಡುಗ ಓ ನನ್ನ ಮುದ್ದಿನ ಹುಡುಗ
ಮುದ್ದ್ ಮಾಡೋಕು ಕಂಜೂಸು ಬುದ್ಧಿ ಬೇಕಾ...

********************************************************************************

ನೀ ಅಮೃತಧಾರೆ

ಸಾಹಿತ್ಯ: ನಾಗತಿಹಳ್ಳಿ ಚಂದ್ರಶೇಖರ್ 
ಗಾಯನ: ಹರೀಶ್ ರಾಘವೇಂದ್ರ, ಸುಪ್ರಿಯ ಆಚಾರ್ಯ 

ನೀ ಅಮೃತಧಾರೆ ಕೋಟಿ ಜನುಮ ಜೊತೆಗಾತಿ
ನೀ ಅಮೃತಧಾರೆ ಇಹಕು ಪರಕು ಸಂಗಾತಿ
ನೀ ಇಲ್ಲವಾದರೆ ನಾ ಹೇಗೆ ಬಾಳಲೀ?....

ಹೇ! ಪ್ರೀತಿ ಹುಡುಗ ಕೋಟಿ ಜನುಮ ಜೊತೆಗಾರ
ಹೇ! ಪ್ರೀತಿ ಹುಡುಗ ನನ್ನ ಬಾಳ ಕಥೆಗಾರ
ನೀ ಇಲ್ಲವಾದರೆ ನಾ ಹೇಗೆ ಬಾಳಲೀ?
ಹೇ! ಪ್ರೀತಿ ಹುಡುಗಾ...

ನೆನಪಿದೆಯೆ ಮೊದಲ ನೋಟ?
ನೆನಪಿದೆಯೆ ಮೊದಲ ಸ್ಪರ್ಶ?
ನೆನಪಿದೆಯೆ ಮತ್ತನು ತಂದ
ಆ ಮೊದಲ ಚುಂಬನಾ?
ನೆನಪಿದೆಯೆ ಮೊದಲ ಕನಸು?
ನೆನಪಿದೆಯೆ ಮೊದಲ ಮುನಿಸೂ?
ನೆನಪಿದೆಯೆ ಕಂಬನಿ ತುಂಬಿ-
ನೀನಿಟ್ಟ ಸಾಂತ್ವನ?
ನೀ ಇಲ್ಲವಾದರೆ ನಾ ಹೇಗೆ ಬಾಳಲೀ?

ನೀ ಅಮೃತಧಾರೆ, ಕೋಟಿ ಜನುಮ ಜೊತೆಗಾತೀ
ನೀ ಅಮೃತಧಾರೆ, ಇಹಕು ಪರಕು ಸಂಗಾತಿ
ನೀ ಅಮೃತಧಾರೆ ..

ನೆನಪಿದೆಯೆ ಮೊದಲ ಸರಸ?
ನೆನಪಿದೆಯೆ ಮೊದಲ ವಿರಸಾ..?
ನೆನಪಿದೆಯೆ ಮೊದಲು ತಂದ ಸಂಭ್ರಮದ ಕಾಣಿಕೆ?
ನೆನಪಿದೆಯೆ ಮೊದಲ ಕವನ?
ನೆನಪಿದೆಯೆ ಮೊದಲ ಪಯಣಾ?
ನೆನಪಿದೆಯೆ ಮೊದಲ ದಿನದ ಭರವಸೆಯ ಆಸರೆ?
ನೀ ಇಲ್ಲವಾದರೆ ನಾ ಹೆಗೆ ಬಾಳಲೀ?

ಹೇ! ಪ್ರೀತಿ ಹುಡುಗ ಕೋಟಿ ಜನುಮ ಜೊತೆಗಾರ
ನೀ ಅಮೃತಧಾರೆ ಇಹಕು ಪರಕು ಸಂಗಾತಿ
ನೀ ಇಲ್ಲವಾದರೆ ನಾ ಹೇಗೆ ಬಾಳಲೀ?
ನೀ ಅಮೃತಧಾರೆ!

*********************************************************************************

ಗೆಳತಿ ಗೆಳತಿ

ಸಾಹಿತ್ಯ: ನಾಗತಿಹಳ್ಳಿ ಚಂದ್ರಶೇಖರ್
ಗಾಯನ: ರಾಜೇಶ್ ಕೃಷ್ಣನ್, ನಂದಿತಾ


ಗೆಳತಿ ಗೆಳತಿ
ಕ್ಷೇಮವೆ? ಸೌಖ್ಯವೆ?
ಬಾಳು ಪೂರ್ಣವಾಯಿತೆ?
ಜೀವ ಧನ್ಯವಾಯಿತೆ?

ಗೆಳೆಯ ಗೆಳೆಯ
ಬಾಳಿನ ಯಾತ್ರೆಯು..
ದೂರ ದಾರಿಗಂತಕೆ
ದಿವ್ಯವಾಗಿ ಸಾಗಲಿ ಗೆಳೆಯ!
ಜೀವವನ್ನು ತೇಯುವೆ!
ಹೂವಿನಂತೆ ಹಾಸುವೆ!
ನೋಯದಂತೆ ಕಾಯುವೆ!
ನಾಳೆಯೆಂಬ ಮಿಥ್ಯಯೊ
ಕಳೆದುದೂ ಚರಿತ್ರೆಯೊ
ಪ್ರೀತಿಯೊಂದೆ ಸತ್ಯವೋ
ಗೆಳತಿ ಗೆಳತಿ
 ಕ್ಷೇಮವೆೆ? ಸೌಖ್ಯವೆ?
ಬಾಳು ಪೂರ್ಣವಾಯಿತೆ?
ಜೀವ ಧನ್ಯವಾಯಿತೆ?
ಗೆಳೆಯ ಗೆಳೆಯ
ಬಾಳಿನ ಯಾತ್ರೆಯು..
ದೂರ ದಾರಿಗಂತಕೆ
ದಿವ್ಯವಾಗಿ ಸಾಗಲಿ ಗೆಳೆಯಾ!

********************************************************************************

ಗಿಳಿಯು ಪಂಜರದೊಳಿಲ್ಲ

ಸಾಹಿತ್ಯ: ಶ್ರೀ ಪುರಂದರದಾಸರು 
ಗಾಯನ: ಸಿ. ಅಶ್ವಥ್ 


ಗಿಳಿಯು ಪಂಜರದೊಳಿಲ್ಲ ರಾಮ ರಾಮ! |೨|
ಬರಿದೆ ಪಂಜರವಾಯಿತಲ್ಲ ರಾಮ ರಾಮ! |೨|
ಕಿಳಿಯು ಪಂಜರದೊಳಿಲ್ಲ ರಾಮ ರಾಮ! |೨|
ಅತ್ತ ಕೇಳೆ ಎನ್ನ ಮಾತು ಚಿಕ್ಕದೊಂದು ಗಿಳಿಯ ಸಾಕಿ
ಅತ್ತ ನಾನಿಲ್ಲದ ವೇಳೆ ಬೆಕ್ಕು ಕೊಂಡು ಹೋಯಿತಯ್ಯೋ |೨| ರಾಮ! ರಾಮಾ

ಗಿಳಿಯು ಪಂಜರ ದೊಳಿಲ್ಲ ರಾಮ ರಾಮ
ಅ ಅ ಅ ಅ ಅ ಆ
ಒಂಬತ್ತು ಬಾಗಿಲ ಮನೆಯಲ್ಲಿ ತುಂಬಿದ ಸಂದಣಿ ಇರಲು
ಕಂಬ ಮುರಿದು ಡಿಂಬಬದ್ದು ಅಂಬರಕ್ಕೆ ಹಾರಿತಯ್ಯೋ |೨|
ರಾಮ! ರಾಮಾ
ಗಿಳಿಯು ಪಂಜರ ದೊಳಿಲ್ಲಾ
ಅ ಅ ಅ ಅ ಅ ಅ ಅ ಆ

********************************************************************************

ಭೂಮಿಯೆ ಹಾಸಿಗೆ

ಸಾಹಿತ್ಯ: ನಾಗತಿಹಳ್ಳಿ ಚಂದ್ರಶೇಖರ್ 
ಗಾಯನ: ರಾಮ್ ಪ್ರಸಾದ್, ನಂದಿತಾ  


ಭೂಮಿಯೆ ಹಾಸಿಗೆ  ಗಗನವೆ ಹೊದಿಕೆ
ಕಣ್ತುಂಬ ನಿದ್ರೆ ಬಡವನಿಗೆ
ಮೆತ್ತೆನೆ ಹಾಸಿಗೆ ಸುಖದ ಸುಪ್ಪತ್ತಿಗೆ
ಬಾರದೊ ನಿದ್ರೆ ಧನಿಕನಿಗೆ |೨|

ಏಳು ಶ್ರೀ ಸಾಮಾನ್ಯ ಏಳಯ್ಯ ಬೆಳಗಾಯಿತು
ಏಳು ನೀ ಸದ್‍ಗೃಹಿಣಿ ಏಳಮ್ಮ ಬೆಳಗಾಯಿತು
ಹಾಲು, ಪೇಪರ್ ನವರು ನಿನ್ನ ದರುಶನಕೆ ಕಾದಿಹರು
ಸ್ಕೂಲು ವ್ಯಾನು ಬಂದು ನಿನ್ನ ಕಂದನಿಗೆ
ಕಾಯ್ದಿಹುದು ಬೆಳಗಿನಾಟಕೆಂದು!

ನಿಂಗೆ ಥೇಟರ್ ತೆಗೆದಿಹುದು
ದಿನ ಭವಿಷ್ಯದಲ್ಲಿ ನಿನಗೆ ಧನಲಾಭ ಬರದಿಹುದು
ಏಳು ಶ್ರೀ ಸಾಮಾನ್ಯಾ ಎದ್ದೇಳು!

                                                                                                   ಭೂಮಿಯೆ ಹಾಸಿಗೆ ಗಗನವೆ ಹೊದಿಕೆ
ಕಣ್ತುಂಬ ನಿದ್ರೆ ಬಡವನಿಗೆ
ಮೆತ್ತೆನೆ ಹಾಸಿಗೆ ಸುಖದ ಸುಪ್ಪತ್ತಿಗೆ
ಬಾರದೊ ನಿದ್ರೆ ದನಿಕನಿಗೆ

ಕನ್ನಡಾಂಬೆ ಸುಪ್ರಜಾ ನೀರೆ
ಸೂರ್ಯ ಬಂದಾಯ್ತು ಕಣ್ಣು ಬಿಡು

ಬೆಡ್ ಕಾಪಿ ಕುಡಿದಾಯ್ತೆ
ವಾಕಿಂಗು ಮುಗಿಸುಬಿಡು

ಉದ್ದುದ ಕ್ಯೂ ನಿಂತು ಲೈಟ್ ಬಿಲ್ಲು ಕಟ್ಟಿಬಿಡು
ಬಸ್ಸು .... ಅಮೂಲ್ಯ ವೋಟನ್ನು ಹಾಕಿಬಿಡು

ಭೂಮಿಯೆ ಹಾಸಿಗೆ ಗಗನವೆ ಹೊದಿಕೆ
ಕಣ್ತುಂಬ ನಿದ್ರೆ ಬಡವನಿಗೆ
ಮೆತ್ತೆನೆ ಹಾಸಿಗೆ ಸುಖದ ಸುಪ್ಪತ್ತಿಗೆ
ಬಾರದೊ ನಿದ್ರೆ ದನಿಕನಿಗೆ |೨|

********************************************************************************

ಮನೆ ಕಟ್ಟಿ ನೋಡು

ಸಾಹಿತ್ಯ: ನಾಗತಿಹಳ್ಳಿ ಚಂದ್ರಶೇಖರ್ 
ಗಾಯನ: ರಾಜು ಅನಂತಸ್ವಾಮಿ, ನಂದಿತಾ


ಮನೆ ಕಟ್ಟಿ ನೋಡು ಒಮ್ಮೆ ಮನೆ ಕಟ್ಟಿ ನೋಡು
ಮನೆ ಕಟ್ಟಿ ನೋಡು ಒಮ್ಮೆ ಮನೆ ಕಟ್ಟಿ ನೋಡು |ಕೋರಸ್|
ಮದುವೆ ಮಾಡಿ ನೋಡು ಒಂದು ಮದುವೆ ಮಾಡಿ ನೋಡು
ಮನೆ ಕಟ್ಟಿ ನೋಡು ಒಮ್ಮೆ ಮನೆ ಕಟ್ಟಿ ನೋಡು |ಕೋರಸ್|
ಮದುವೆ ಮಾಡಿ ನೋಡು ಒಂದು ಮದುವೆ ಮಾಡಿ ನೋಡು
ಮದುವೆಯಾಗಿ ಮನೆಕಟ್ಟೋದು ಎಲ್ಲಾ ಜನರ ಪಾಡು!

ಮನೆ ಕಟ್ಟಿ ನೋಡು ಒಮ್ಮೆ ಮನೆ ಕಟ್ಟಿ ನೋಡು
ಮಹಾನಗರದಲ್ಲಿ ಒಂದು ಮನೆ ಕಟ್ಟಿ ನೋಡು

ತುಂಡು ಭೂಮಿಗ್ ಇಲ್ಲಿ ಚಿನ್ನಕ್ಕಿಂತ ರೇಟು ರೇಟು!
ಗಲ್ಲಿ ಗಲ್ಲಿಗೊಂದು ರಿಯಲ್ ಎಸ್ಟೇಟು
ತುಂಡು ಭೂಮಿಗ್ ಇಲ್ಲಿ ಚಿನ್ನಕ್ಕಿಂತ ರೇಟು
ಗಲ್ಲಿ ಗಲ್ಲಿಗೊಂದು ರಿಯಲ್ ಎಸ್ಟೇಟು
ಲಕ್ಷ ಕೊಟ್ಟ್ರು ಇಲ್ಲ ಥರ್ಟಿ-ಫಾರ್ಟಿ ಸೈಟೂ
ತೂರಿಬಂತು ಅಂಡರ್ವರ್ಲ್ಡ್ ನ ಗುಂಡಿನೇಟು!

ಮನೆ ಕಟ್ಟಿ ನೋಡು ಒಮ್ಮೆ ಮನೆ ಕಟ್ಟಿ ನೋಡು
ಮನೆ ಕಟ್ಟಿ ನೋಡು ಒಮ್ಮೆ ಮನೆ ಕಟ್ಟಿ ನೋಡು |ಕೋರಸ್|
ಮಹಾನಗರದಲ್ಲಿ ಒಂದು ಮನೆ ಕಟ್ಟಿ ನೋಡು

ಸಾಲ ಸೋಲಾ ಮಾಡಿ ಸೈಟು ಕೊಳ್ಳುತ್ತಾರೆ
ಕಷ್ಟ ಪಟ್ಟು ಕಂತು ಗಿಂತು ಕಟ್ಟುತ್ತಾರೆ |೨|
ನಕಲಿ ಕಾಗ್ದಾ ನಂಬಿ ಮೋಸ ಹೋಗುತ್ತಾರೆ
ನೆತ್ತಿಮೇಲೆ ಸೂರಿಗಾಗಿ ಹುಡ್ಕುತ್ತಾರೆ

ಮನೆ ಕಟ್ಟಿ ನೋಡು ಒಮ್ಮೆ ಮನೆ ಕಟ್ಟಿ ನೋಡು
ಮನೆ ಕಟ್ಟಿ ನೋಡು ಒಮ್ಮೆ ಮನೆ ಕಟ್ಟಿ ನೋಡು |ಕೋರಸ್|
ಮಹಾನಗರದಲ್ಲಿ ಒಂದು ಮನೆ ಕಟ್ಟಿ ನೋಡು

ಮಿಡ್ಲು-ಕ್ಲ್ಯಾಸು ಮನೆ ಕಟ್ಟೊದು ಭಾರಿ ಕಷ್ಟ ಕಷ್ಟ!
ಕಬ್ಣ ಸೀಮೆಂಟ್ ಕಳ್ಳ ಲೆಕ್ಕ ಬರಿ ನಷ್ಟ
ಮಿಡ್ಲು-ಕ್ಲ್ಯಾಸು ಮನೆ ಕಟ್ಟೊದು ಭಾರಿ ಕಷ್ಟ
ಕಬ್ಣ ಸೀಮೆಂಟ್ ಕಳ್ಳ ಲೆಕ್ಕ ಬರಿ ನಷ್ಟ
ಜಲ್ಲಿ ಮರಳು ನಲ್ಲಿ ಸ್ವಿಚ್ಚು ತರ್ಲೇಬೇಕು
ಕಿಟ್ಕಿ ಬಾಗ್ಲು ನಿಲ್ಸೋಹೊತ್ಗೆ ಸಾಕೋ ಸಾಕು!

ಮನೆ ಕಟ್ಟಿ ನೋಡು ಒಮ್ಮೆ ಮನೆ ಕಟ್ಟಿ ನೋಡು
ಮನೆ ಕಟ್ಟಿ ನೋಡು ಒಮ್ಮೆ ಮನೆ ಕಟ್ಟಿ ನೋಡು |ಕೋರಸ್|
ಮದುವೆ ಮಾಡಿ ನೋಡು ಒಂದು ಮದುವೆ ಮಾಡಿ ನೋಡು
ಮನೆ ಕಟ್ಟಿ ನೋಡು ಒಮ್ಮೆ ಮನೆ ಕಟ್ಟಿ ನೋಡು |ಕೋರಸ್|
ಮದುವೆ ಮಾಡಿ ನೋಡು ಒಂದುಮದುವೆ ಮಾಡಿ ನೋಡು
ಮದುವೆಯಾಗಿ ಮನೆಕಟ್ಟೋದು ಎಲ್ಲಾ ಜನರ ಪಾಡು!
ಮನೆ ಕಟ್ಟಿ ನೋಡು ಒಮ್ಮೆ ಮನೆ ಕಟ್ಟಿ ನೋಡು
ಮಹಾನಗರದಲ್ಲಿ ಒಂದು ಮನೆ ಕಟ್ಟಿ ನೋಡೂ!

********************************************************************************