Thursday, December 12, 2013

ಮೊಗ್ಗಿನ ಮನಸು (2008)

ಮಳೆ ಬರುವ ಹಾಗಿದೆ

ಚಲನಚಿತ್ರ : ಮೊಗ್ಗಿನ ಮನಸು (2008) 
ಗಾಯಕರು : ಶ್ರೇಯಾ ಘೋಷಾಲ್ 
ನಟಿಸಿದವರು : ರಾಧಿಕಾ ಪಂಡಿತ್, ಯಶ್ ಮತ್ತು ಇತರರು 
ಸಂಗೀತ : ಮನೋ ಮೂರ್ತಿ 
ಸಾಹಿತ್ಯ : ಜಯಂತ್ ಕಾಯ್ಕಿಣಿ 
ನಿರ್ದೇಶಕರು : ಶಶಾಂಕ್ 


ಮಳೆ ಬರುವ ಹಾಗಿದೆ ಮನವೀಗ ಹಾಡಿದೆ
ಹೃದಯದಲ್ಲಿ ಕೂತು ನೀನು ನನ್ನ ಕೇಳಬೇಕಿದೆ
ಸವಿಗನಸು ಕಾಡಿದೆ ನಸುನಗುವು ಮೂಡಿದೆ
ಕಾಣದಂತೆ ನಿಂತು ನೀನು ನನ್ನ ನೋಡಬೇಕಿದೆ

ನಿನ್ನ ನಗುವಿನಲ್ಲೇ ನನ್ನ ನಸುಕು
ನಿನ್ನ ರೂಪವಿರಿಸಿ ಬಂದು ನಲಿದಾಡಿದೆ ಬೆಳಕು
ಗೆಳೆಯ ನೀನು ಬಳಿಯೇ ಅನುಕ್ಷಣವು ಬೇಕಾಗಿದೆ
ದಿನಕೆ ನೂರು ಬಾರಿ ನೀನು ಪ್ರೀತಿ ಹೇಳಬೇಕಿದೆ

ಎದೆಯ ಬಾಗಿಲಲ್ಲೇ ನಿನ್ನ ಸುಳಿವು
ಸಣ್ಣ ಆಸೆಯಲ್ಲೇ ನಮ್ಮ ಸಹವಾಸದ ನಲಿವು
ಇನಿಯ ನಮ್ಮ ಒಲವು ಮೆರವಣೆಗೆ ಹೊರಟಾಗಿದೆ
ಮರೆತ ಹಾಗೆ ಚೂರು ನಟಿಸಿ ನಿನ್ನ ಕಾಡಬೇಕಿದೆ....

********************************************************************************


ಐ ಲವ್ ಯೂ

ಸಾಹಿತ್ಯ: ಶಶಾಂಕ್ 
ಗಾಯನ: ಸೋನು ನಿಗಮ್  


I Love You......ಓ....
I Love You......

ನೂರಾರು ಪ್ರೀತಿ ಮಾತು
ನೂರಾರು ಸಾರಿ ಆಡಿ
ನೀನೇನೆ ಜೀವ ಎಂದು
ನೂರಾರು ಆಣೆ ಮಾಡಿ
ಕಾರಣವೇ ಹೇಳದೆ ಏಕೆ
ನನ್ನ ಬಿಟ್ಟು ಹೋದೆ
ನೀನೆಲ್ಲೇ ಹೋದರು ಏನು
ನೀನನ್ನ ಮರೆತರು ಏನು
ನೀನೇನೆ ಮಾಡಿದರೇನು
ನಿನ್ನನ್ನೇ ಮರೆಯುವೆಯೇನು
ನಿನ್ನಲ್ಲೇ ನಾನು ಅವಿತು ಕುಳಿತಿಲ್ಲವೇನು....

ನೀನು ಇರದೇ ಬದುಕುವುದನ್ನು ಕಲಿಯೋ ಸಾಹಸದಲ್ಲಿ
ನಿನ್ನ ನೆನಪೆ ಎದುರು ನಿಂತು ಸೋತಿಹೆ ನಾನು ಇಲ್ಲಿ
ಬಿಟ್ಟು ಹೋದ ಆ ಘಳಿಗೆ ನೆನೆದು ನೆನೆದು ಈ ಘಳಿಗೆ
ಜಾರುವ ಕಂಬನಿ ಜಾರಲು ಬಿಟ್ಟು ಸುಮ್ಮನೆ ಹಾಗೆ ಕೂತಿರುವೆ......

ನನ್ನೆದೆ ಗುಡಿಯ ನಂದಾದೀಪ ಆರಿಸಿ ಹೋದೆ ನೀನು
ಕತ್ತಲೆ ಕೋಣೆಯ ಒಳಗೂ ನಿನ್ನ ನೆನಪಲೆ ಬೆಂದೆ ನಾನು
ದೂರ ಹೋದೆ ನೀನೆಂದು ದೂರಲಾರೆ ನಿನ್ನೆಂದು
ನಿನ್ನ ನೆನಪ ಬಂಧನದಲ್ಲೇ ಸಾಯೋವರೆಗು ಕಾಯುವೆನು.....

*********************************************************************************

ಓ ನನ್ನ ಮನವೇ

ಸಾಹಿತ್ಯ: ವಿ. ನಾಗೇಂದ್ರ ಪ್ರಸಾದ್ 
ಗಾಯಕರು: ಸೋನು ನಿಗಮ್ 

ಓ ನನ್ನ ಮನವೇ ಏನಾದೆ ನೀನು
ಮಾತೆಲ್ಲ ಮರೆತು ಮೂಕಾದೆ ಏನು
ಈ ಕಂಗಳಲ್ಲಿ ನೀರಾದೆಯೇನು
ಈ ಒಂದು ನಿಜವೇ ಸುಳ್ಲಾಗದೆನು
ಎದೆ ಬಿರಿಯೋ ನೋವು ಭ್ರಮೆಯಾಗದೆನು
ಮುನ್ನಡೆದ ಸಮಯ ಹಿಂದಿರುಗದೇನು
 ಓ ನನ್ನ ಮನವೇ ಮಾತಾಡೆಯೇನು

ಸಾಗರದ ಒಡಲೇ ಬರಿದಾಯಿತೇಕೆ
ಇಬ್ಬನಿ ಹೊಳಪೆ ಚೂಪಯಿತೇಕೆ
ಮುಸ್ಸಂಜೆ ಬಾನು ರಂಗಿಲ್ಲವೇಕೆ
ತಂಗಾಳಿ ಸೋಕೆ ತಂಪಿಲ್ಲವೇಕೆ
ಚಂದಿರನ ಮೊಗದಿ ಕಂಬನಿ ಹನಿಯೇಕೆ
ಹೀಗೇಕೆ ಹೀಗೇಕೆ ಭಾವಗಳೇ
ಅದಲು ಬದಲಾಯಿತೇಕೆ
ಓ ನನ್ನ ಮನವೇ ಮಾತಾಡೆಯೇನು

ಕಣ್ಣಳತೆ ದೂರ ಬರಿ ಕವಲುದಾರಿ
ಎದೆಯಾಳದಲ್ಲಿ ತಲ್ಲಣದ ಭೇರಿ
ಆಸೆಗಳ ಮೇಲೆ ಬಿಸಿ ಉಸಿರ ಲಾವ
ಕನಸೇನೆ ಇರದೆ ಕುರುಡಾದ ಭಾವ
ಕತ್ತಲೆಯ ಕಾನನದಿ ನಿಂತಿರುವೆ
ನಾನೀಗ ನಾನೀಗ ನಾನೀಗ
ಹೊರಬರುವ ದಾರಿ ಹುಡುಕೋದು ಹೇಗೆ
 ಓ ನನ್ನ ಮನವೇ ಮಾತಾಡೆಯೇನು

ಓ ನನ್ನ ಮನವೇ ಏನಾದೆ ನೀನು
ಮಾತೆಲ್ಲ ಮರೆತು ಮೂಕಾದೆ ಏನು
ಈ ಕಂಗಳಲ್ಲಿ ನೀರಾದೆಯೇನು
ಈ ಒಂದು ನಿಜವೇ ಸುಳ್ಲಾಗದೇನು
ಎದೆ ಬಿರಿಯೋ ನೋವು ಭ್ರಮೆಯಾಗದೇನು
ಮುನ್ನಡೆದ ಸಮಯ ಹಿಂದಿರುಗದೇನು
ಓ ನನ್ನ ಮನವೇ ಮಾತಾಡೆಯೇನು

*********************************************************************************

ಗೆಳೆಯ ಬೇಕು

ಸಾಹಿತ್ಯ: ಜಯಂತ್ ಕಾಯ್ಕಿಣಿ 
ಗಾಯಕರು: ಕೆ. ಎಸ್. ಚಿತ್ರಾ, ಪ್ರಿಯಾ ಹಿಮೇಶ್ 


ಯಾರಿಗೋ ಏನೇನೋ ನೀಡುವ ದೇವನೆ,
ನನ್ನಯ ಮನವಿ ಸಲ್ಲಿಸಾಲೇನು..
ಬೆಚ್ಚನೆ ಭಾವ ಮೂಡಿಸುತಿರುವ,
ಮನಸಿನ ಆಸೆ ಕೇಳುವೆ ಏನು..
ನಾನು ಈಗ ಪ್ರೀತಿಯಲ್ಲಿ ಬೀಳಬೇಕು..
ನನಗೂ ಒಬ್ಬ ಗೆಳೆಯ ಬೇಕು..
ಇದ್ದಲ್ಲಿ ಇದ್ದಹಾಗೆ ಸದ್ದೇನೆ ಆಗದಂತೆ
ಹೃದಯ ಕದ್ದು ಹೋಗಬೇಕು..
ನಾನು ಈಗ ಪ್ರೀತಿಯಲ್ಲಿ ಬೀಳಬೇಕು..
ನನಗೂ ಒಬ್ಬ ಗೆಳೆಯ ಬೇಕು.. 

ನೆನೆದಾಗೆಲ್ಲ ಹಾಗೇನೇ ಓದಿ ಬರಬೇಕು..
ಕಾಡಾಗೆಲ್ಲ ಮುತ್ತಿನ ಗಂಧ ತೆರಬೇಕು..
ಮತ್ತೆ ಮತ್ತೆ ಬರಬೇಕು ಹುಚ್ಚು ಸಂದೇಶ..
ಕದ್ದು ಮುಚ್ಚಿ ಓದೋಕೆ ಹೆಚ್ಚಿ ಸಂತೋಷ..
ಮುನಿಸು ಬಂದಾಗೆಲ್ಲ ಅವನೇ ಕ್ಷಮಿಸು ಅನಬೇಕು..
ಚಂದಿರನ ತಟ್ಟೆಯಲ್ಲಿ ಸೇರಿ ತಿನಬೇಕು..
ಎಲ್ಲಾರು ಜಾತ್ರೆಯಲ್ಲಿ ತೇರನ್ನೇ ನೋಡುವಾಗ,
ಅವನು ನನ್ನೇ ನೋಡಬೇಕು.. ಕಾಡುವಂತ ಗೆಳೆಯ ಬೇಕು..
ಎಂದು ನನ್ನ, ಹಿಂದೆ ಮುಂದೆ ಸುಲಿಯಬೇಕು..
ನಾನು ಈಗ ಪ್ರೀತಿಯಲ್ಲಿ ಬೀಳಬೇಕು..
ನನಗೂ ಒಬ್ಬ ಗೆಳೆಯ ಬೇಕು.. 

ಇದ್ದಹಾಗೆ ನೀ ನನಗೆ ಚಂದಾ ಅನಬೇಕು..
ಯಾಕೋ ಬೇಜಾರಾದಾಗ ಸುಮ್ಮನಿರಬೇಕು..
ಮುದ್ದು ನಗೆಯ ಹೂವನ್ನು ಮೂಡಿಸಬರಬೇಕು..
ಎಲ್ಲೋ ಮರೆತ ಹಾಡನ್ನು ಹೆಕ್ಕಿ ತರಬೇಕು..
ಮಳೆಯ ತೀರದಲ್ಲಿ ಅವನು ನನಗೆ ಕಾಧಾಂತೆ..
ಕನ್ನಡಿಯಲ್ಲಿ ಬೆನ್ನ ಹಿಂದೆ ಅವನೇ ನಿಂತಂತೆ..
ಗುಟ್ಟಾಗಿ ಹೃದಯದಲ್ಲಿ ಪ್ರೀತಿಯ
ಖಾತೆಯೊಂದ ಜಂಟಿಯಾಗಿ ತೆರೆಯಬೇಕು..
ದೇವರಂಥ ಗೆಳೆಯ ಬೇಕು..
ಹೇಳದೆನೆ ಅವನಿಗೆಲ್ಲ ತಿಳಿಯಬೇಕು.. 

ಯಾರಿಗೋ ಏನೇನೋ ನೀಡುವ ದೇವನೆ,
ನನ್ನಯ ಮನವಿ ಸಲ್ಲಿಸಾಲೇನು..
ಬೆಚ್ಚನೆ ಭಾವ ಮೂಡಿಸುತಿರುವ,
ಮನಸಿನ ಆಸೆ ಕೇಳುವೆ ಏನು..
ನಾನು ಈಗ ಪ್ರೀತಿಯಲ್ಲಿ ಬೀಳಬೇಕು..
ನನಗೂ ಒಬ್ಬ ಗೆಳೆಯ ಬೇಕು..
ಇದ್ದಲ್ಲಿ ಇದ್ದಹಾಗೆ ಸದ್ದೇನೆ ಆಗದಂತೆ
ಹೃದಯ ಕದ್ದು ಹೋಗಬೇಕು..
ನಾನು ಈಗ ಪ್ರೀತಿಯಲ್ಲಿ ಬೀಳಬೇಕು..
ನನಗೂ ಒಬ್ಬ ಗೆಳೆಯ ಬೇಕು..


*********************************************************************************

No comments:

Post a Comment