Monday, April 29, 2019

ಗೌರಿ ಗಣೇಶ (1991)

ಗೌರಿ ಗಣೇಶ (1991)

ಗೌರಿ ಗಣೇಶ ಚಿತ್ರದ ಹಾಡುಗಳು 
ಮಾತಿನಲ್ಲೇ ಗೆಲ್ಲಬಲ್ಲೆ ಜಗವನ್ನೇ 

ಒಂದು ಊರಲ್ಲಿ ಒಬ್ಬ ಚೆಲುವೆಯು 

ನಿಮ್ಮ ಮಗುವು ನಗುತಿರುವ 

ಡ್ಯಾಡಿ ಡ್ಯಾಡಿ ಡ್ಯಾಡಿ 

ಗೌರಿ ಗಣೇಶ (೧೯೯೧) - ಮಾತಿನಲ್ಲೇ ಗೆಲ್ಲಬಲ್ಲೆ ಜಗವನ್ನೇ 
ಸಂಗೀತ : ರಾಜನ್ ನಾಗೇಂದ್ರ, ಸಾಹಿತ್ಯ : ಶ್ಯಾಮಸುಂದರ ಕುಲಕರ್ಣಿ ಗಾಯನ : ರಾಜೇಶ ಕೃಷ್ಣನ 
ಮಾತಿನಲ್ಲೇ ಗೆಲ್ಲಬಲ್ಲೆ ಜಗವನ್ನೇ
ಚಾಟಿ ಇಲ್ಲದೆ ಆಡಿಸಬಲ್ಲೆ ಬುಗುರಿಯನ್ನೇ
ನನ್ನಯ ಜಾಲಕೆ ಬೀಳುವ ಜನರ ನಾ ಬಿಡುವೆನೆ
ಮಾತಿನಲ್ಲೇ ಗೆಲ್ಲಬಲ್ಲೆ ಜಗವನ್ನೇ
ಚಾಟಿ ಇಲ್ಲದೆ ಆಡಿಸಬಲ್ಲೆ ಬುಗುರಿಯನ್ನೇ
ಮೋಡಿ ಹಾಕಿ ಬದುಕಬಲ್ಲೆ ಬಿತ್ತಿ ಊಟ ಗಿಟ್ಟಿಸಬಲ್ಲೆ
ಸುಳ್ಳಿಗೆ ಸಂಚಿಗೆ ತಕ್ಕ ಕಾಲ ಕಂತ್ರಿ ಜನರ ಬುದ್ದಿ ಬಲ್ಲೆ
ಮಂಕಬೂದಿ ಎರಚಬಲ್ಲೆ ಮಡ್ಡಿಗೆ  ಒಡ್ದುವೆ ನನ್ನ ಗಾಳ
ಮೋಸವು ದ್ವೇಷಕ್ಕೆ ದ್ವೇಷವು ನಿಮ್ಮಾಣೆ ನಾ ಸತ್ಯ ಹೇಳುವೇ
ಮಾತಿನಲ್ಲೇ ಗೆಲ್ಲಬಲ್ಲೆ ಜಗವನ್ನೇ
ಚಾಟಿ ಇಲ್ಲದೆ ಆಡಿಸಬಲ್ಲೆ ಬುಗುರಿಯನ್ನೇ
ಮೋಸವೊಂದೇ ಧ್ಯೇಯವಲ್ಲ ಬಿಟ್ಟಿ ಸಿಕ್ಕರೇ ನಾ ಬಿಡೋದಿಲ್ಲ 
ಬಿಟ್ಟರೆ ಸಿಕ್ಕಾನು ಇಂಥ ಜಾಣ ಲೋಕಕೆಲ್ಲ ಒಬ್ಬನೇ ಧೀರ 
ಬುದ್ದಿವಂತ ಲಂಬೋಧರ ಶೆಟ್ಟಿಗೆ ಬಿಟ್ಟಲೇ ಪಟ್ಟಣ 
ಛಾನ್ಸಗೇ ಕಾಯುವೇ ಬಾಣವ ಹೂಡುವೇ ಸಿಕ್ಕಾಗ ಸಿಕ್ಕಷ್ಟು ನೀಡುವೇ 
ಮಾತಿನಲ್ಲೇ ಗೆಲ್ಲಬಲ್ಲೆ ಜಗವನ್ನೇ
ಚಾಟಿ ಇಲ್ಲದೆ ಆಡಿಸಬಲ್ಲೆ ಬುಗುರಿಯನ್ನೇ
ನನ್ನಯ ಜಾಲಕೆ ಬೀಳುವ ಜನರ ನಾ ಬಿಡುವೆನೆ
ಮಾತಿನಲ್ಲೇ ಗೆಲ್ಲಬಲ್ಲೆ ಜಗವನ್ನೇ
ಚಾಟಿ ಇಲ್ಲದೆ ಆಡಿಸಬಲ್ಲೆ ಬುಗುರಿಯನ್ನೇ
--------------------------------------------------------------------------------------------------------------------------
ಗೌರಿ ಗಣೇಶ (೧೯೯೧) - ಒಂದು ಊರಲ್ಲಿ ಒಬ್ಬ ಚೆಲುವೆಯು
ಸಂಗೀತ : ರಾಜನ್ ನಾಗೇಂದ್ರ, ಸಾಹಿತ್ಯ : ಸು.ರುದ್ರಮೂರ್ತಿ ಶಾಸ್ತ್ರಿ ಗಾಯನ : ಅತ್ರಿ 
ಒಂದು ಊರಲ್ಲಿ ಒಬ್ಬ ಚೆಲುವೆಯು ಆ ಚೆಲುವೇ ಹೆಸರು ಗೌರಿ
ತಾಯಿ ಇಲ್ಲದೆ ಮಲತಾಯಿ ಸೆರೆಯಲಿ ಬೆಳೆಯುತ್ತಿದ್ದಾಳಾ ನಾರಿ
ಪಾಪದ ಹುಡುಗಿಗೆ ರೂಪವಾಯಿತು ಶಾಪ ಹೂವಿಗೆ ತಟ್ಟಿತು ಬೇಸಿಗೆಯ ತಾಪ
ಅಪ್ಪನ ಮುತ್ತಿತು ಬಂದು ಮೃತ್ಯು ಕೂಪ ತೋರಿದಳು ಮಲತಾಯಿ ರಾಕ್ಷಸಿ ರೂಪ
ಗೌರಿ ಪ್ರಾಯ ದುಷ್ಟ ತಾಯ್ ಕಣ್ಣ್ ಕುಕ್ಕಲೂ ಅವಳ ಶೀಲ ಮಾರುವಂಥ ಸಂಚು ನಡೆಯಲು
ಗೌರಿ ಪ್ರಾಯ ದುಷ್ಟ ತಾಯ್ ಕಣ್ಣ್ ಕುಕ್ಕಲೂ ಅವಳ ಶೀಲ ಮಾರುವಂಥ ಸಂಚು ನಡೆಯಲು
ನೀತಿ ತಪ್ಪದ ಹೆಣ್ಣು ಅವಳು ಅನ್ಯಾಯ ತಾಳದೆ ನೊಂದಳು
ಶೀಲವತಿಯ ತನ್ನ ಮನೆಯ ತೊರೆದಳು ಗೂಡು ಸಿಕ್ಕದಂತ ಹಕ್ಕಿಯಾದಳು
ಸ್ನೇಹಿತೆ ಒಬ್ಬಳು ತೋರಿಸಿ ಅಕ್ಕರೆ ಗೌರಿಗೆ ಕೊಟ್ಟಳು ಸ್ನೇಹದ ಆಸರೆ
ಸ್ನೇಹಿತೆ ತೋರಿದ ಕರುಣೆಯಿಂದಲೇ ಸಿಕ್ಕಿತು ಒಂದೆಡೆ ನೌಕರಿ ನೆಲೆ
ಏನು ಹೇಳಲಿ ಅವಳಿದ್ದ ಜಾಗದಿ ಯಜಮಾನನೊಬ್ಬ ಕಾಮಣ್ಣನು
ದಾಹ ಕಂಗಳ ಆನಂದರಾಯನು ಈ ಹಕ್ಕಿ ಕಂಡು ಗಿಡುಗನಾದನು
ಮಾಯೆಯ ದಾಸ ಆನಂದರಾಯ ಮೂಢ ಇರುಳಲಿ ನಡೆದುದು ಎಲ್ಲವೂ ನಿಗೂಢ
ಮಾಯೆಯ ದಾಸ ಆನಂದರಾಯ ಮೂಢ ಇರುಳಲಿ ನಡೆದುದು ಎಲ್ಲವೂ ನಿಗೂಢ
ಕಾಮ ಬಾಣದ ಆ ಗುರಿಯು ತಪ್ಪಿತು ಈ ಹಕ್ಕಿ ದಕ್ಕಲಿಲ್ಲ ಕೊನೆಗೂ
ಯಾರು ತಿಳಿಯದ ಈ ರಹಸ್ಯವೂ ಈ ಡೈರಿಯೊಳಗೆ ದಾಖಾಲಾಯಿತು
ಈ ಕಥೆಗೆ ಒಂದು ಸ್ಫೂರ್ತಿಯಾಯಿತು
ಇಲ್ಲಿಗೂ ಮುಗಿಯಲಿಲ್ಲ ಗೌರಿಯ ಕಥೆ ವಿಧಿಯ ಕೈ ಬರೆಯಿತು ಮುಂದಿನ ವ್ಯಥೆ
ರೋಗದ ರೂಪದಿ ಬಂದಿತು ವಿಧಿ ಸೋತಿತು ಗೌರಿಯ ಹೃದಯದ ಸ್ಥಿತಿ
ಪ್ರಾಣ ಸ್ನೇಹಿತೆ ಪ್ರಾಣ ಉಳಿಸಲು ಸ್ನೇಹಿತೆಯರು ಪಾಡುಪಟ್ಟರು
ಹಣವು ಇಲ್ಲದೇ ಎಲ್ಲ ದಿಕ್ಕಲೂ ಸಹಾಯ ಬೇಡಿ ಪತ್ರ ಬರೆದರು
ತಾಳಿ ಕಟ್ಟದೇ ಸಪ್ತಪದಿಯ ತುಳಿಯದೇ ಗೌರಿ ಜನರ ಮುಂದೆ ವಧುವು ಆದಳು
ಮದುವೆ ಎನ್ನುವ ಕಪಟ ನಾಟಕದಲ್ಲಿ ಗೌರಿ ಒಬ್ಬ ಪಾತ್ರಧಾರಿಯಾದಳು
ಏನೋ ಮಾಡಲೆಂದು ಹೋಗಿ ಏನೋ ಆಯಿತೇ ನಿಂತಿತಲ್ಲೇ ಸುಳ್ಳು ಮದುವೆ ಆರತಕ್ಷತೆ
ತಂದೆಯನ್ನು  ಕಾಣಲೆಂದು ಚಂದ್ರಮೌಳಿಯು ದುಃಖದಿ ವಿಮಾನದಲ್ಲಿ ಪಯಣ ಹೊರಟನು
ಕಾದು ಎರಗಿತೋ ಘೋರ ಧುರ್ವಿಧಿ  ಪಾಶ ಬೀಸಿ ಸಾವ ತಂದು ಸೆಳೆಯಿತವನನು
ಇಲ್ಲಿಯೂ ನಡೆಯಿತು ಒಂದು ವಿಚಿತ್ರ ವಿಧಿಯು ಕೈ ಬರೆಯಿತು ಮೂರನೇ ಪಾತ್ರ
ಮಿತಿಯ ಮೀರುತ ಮಿತ್ರ ಮಧುವು ಕುಡಿದನು ತನ್ನ ಕೋಣೆ ದಾರಿ ಹುಡುಕುತ್ತಿದ್ದನು
ಮದಿರೆ ಅಮಲಿನಲಿ ನವದಂಪತಿ ಗೃಹಕೆ ನುಗ್ಗಿ ಕಂಡನಲ್ಲಿ ಒಂದು ಹೆಣ್ಣನ್ನೂ
ಮದಿರೆಯ ದಾಸ ಮಧುವು ಕೂಡ ಮೂಢ ಇಲ್ಲಿಯೂ ನಡೆದುದು ಎಲ್ಲವೂ ನಿಗೂಢ
ಗಿಣಿಯು ಕಚ್ಚದಂತ ಹೆಣ್ಣು ಗೌರಿ ಆದರೂ ಅದೇ ಹಣ್ಣ ತಿಂದವೆಂದು ಕೊಂಡರೆಲ್ಲರೂ
ಕೆಸರು ಸೋಕದ ಆ ಮುದ್ದು ತಾವರೇ ಗೌರಿ ಕನ್ಯೆಯಾಗಿಯೇ ಉಳಿದಳು
ಕೊನೆಗೂ ಕನ್ಯೆಯಾಗಿಯೇ ಅಳಿದಳು
--------------------------------------------------------------------------------------------------------------------------
ಗೌರಿ ಗಣೇಶ (೧೯೯೧) - ನಿಮ್ಮ ಮಗುವು ನಗುತಿರುವ
ಸಂಗೀತ : ರಾಜನ್ ನಾಗೇಂದ್ರ, ಸಾಹಿತ್ಯ : ಎಂ.ಏನ್.ವ್ಯಾಸರಾವ ಗಾಯನ : ನರಸಿಂಹ ನಾಯಕ್
ನಿಮ್ಮ ಮಗುವು ನಗುತಿರುವ ತೊಟ್ಟಿಲಲ್ಲಿ ಆಡುತಿರುವಾ
ನಿಮ್ಮ ಮಗುವು ನಗುತಿರುವ ತೊಟ್ಟಿಲಲ್ಲಿ ಆಡುತಿರುವಾ
ಗಣೇಶನೆಂಬ ಹೆಸರಿಂದ ಭೂಮಿಗೆ ಬಂದ ಗೌರಿಯ ಕಂದ 
ನಿಮ್ಮ ಮಗುವು ನಗುತಿರುವ ತೊಟ್ಟಿಲಲ್ಲಿ ಆಡುತಿರುವಾ 
ಗೋಪಿಯ ಕಂದ ಕೃಷ್ಣನ ಹಾಗೇ ಈತನ ರೂಪವು ಬಲು ಚೆಂದ 
ಕುಲದ ದೈವಗಳ ಕೃಪೆಯಿಂದ ಬೆಸೆದ ಕರುಳ ಸಂಬಂಧ 
ಮೂರನೇ ತಿಂಗಳು ಟ್ರಿಪಲ್ ಆಂಟಿಜನ್ ಚುಚ್ಚಿಸಿದೇ 
(ಪಾಪ ಎಷ್ಟು ನೋವಾಯಿತೋ ಏನೋ )
ಜೊತೆಯಲ್ಲೇ ಪೋಲಿಯೋ ಡ್ರಾಪನೂ ಕೂಡ ಹಾಕಿಸಿದೇ 
(ಮಗು ರಾತ್ರಿ ಎಲ್ಲಾ ಅಳುತ್ತಾ ಇತ್ತೋ ಏನೋ )
ಸ್ನಾನವ ನಾನೇ ಮಾಡಿಸುವೇ ಜೋಗುಳ ಹಾಡಿ ಮಲಗಿಸುವೇ 
ನಿಮ್ಮಯ ಮುದ್ದಿನ ಕಂದನ ಬೆಳೆಸಲು ಬದುಕನೇ ಮೀಸಲು ಇಟ್ಟಿರುವೇ 
(ನೀನು ಮನುಷ್ಯ ಅಲ್ಲಪ್ಪಾ...  ದೇವರು )
ನಿಮ್ಮ ಮಗುವು ನಗುತಿರುವ ಅಂಬೆಗಾಲನು ಇಡುತಿರುವಾ
ಗಣೇಶನೆಂಬ ಹೆಸರಿಂದ ಭೂಮಿಗೆ ಬಂದ ಗೌರಿಯ ಕಂದ 
ನಿಮ್ಮ ಮಗುವು ನಗುತಿರುವ ಅಂಬೆಗಾಲನು ಇಡುತಿರುವಾ 
ದೀಪವ ಕಂಡು ಮುಟ್ಟಲು ಹೋಗಿ ಈ ದಿನ ಕೈಯನು ಸುಟ್ಟುಕೊಂಡ 
ನಿತ್ಯ ನೀರಿನಲಿ ಇವನಾಟ ಮಣ್ಣು ಕಂಡರೇ ಉರುಳಾಟ 
ಕೂಸುಮರಿ ಬೇಕೇ ಕೂಸುಮರಿ ಎಂದು ಆಡಿಸುವೇ 
(ಅಯ್ಯೋ ನನಗೆ ಆ ಭಾಗ್ಯ ಇಲ್ಲವೇ )
ಅಪ್ಪ ಅಂದರೆ ಸಾಕು ನಿಮ್ಮ ಫೋಟೋ ತೋರಿಸುವೇ 
(ಕರೆಕ್ಟ್ ನಾನ ತಾನೇ ಅವರಪ್ಪ )
ತಿರುಪತಿ ಹರಕೆ ತೀರಿಸಿದೇ ಚೌಲವ ಅಲ್ಲೇ ಮಾಡಿಸಿದೇ 
ಸುತ್ತಮುತ್ತಲ ಮುತ್ತೈದೆಯರ ಕರೆಸಿ ಆರತಿ ಎತ್ತಿಸಿದೇ 
(ಎಷ್ಟು ಶಾಸ್ತ್ರೋಕ್ತವಾಗಿ ಮಾಡಿಸಿದ್ದಾನೆ )
ನಿಮ್ಮ ಮಗುವು ನಗುತಿರುವ ತಪ್ಪು ಹೆಜ್ಜೆ ಇಡುತಿರುವಾ
ಗಣೇಶನೆಂಬ ಹೆಸರಿಂದ ಭೂಮಿಗೆ ಬಂದ ಗೌರಿಯ ಕಂದ 
ನಿಮ್ಮ ಮಗುವು ನಗುತಿರುವ ತಪ್ಪು ಹೆಜ್ಜೆ ಇಡುತಿರುವಾ  
ಸ್ಲೇಟನು ಹಿಡಿದು ಬಳಪವ ಮುರಿದು ಗೀಚುತಾ ಗುನುಗುನು ಅಂತಾನೇ 
ಚಂದಮಾಮನನು ಬರೀತಾನೇ ತಿದ್ದಿ ತೀಡಿ ಕೊಡುತಾನೇ 
ಎ  ಬಿ ಸಿ ಡಿ ಕಲಿಸಲು ಹೋದರೇ ಅಳುತಾನೇ 
(ಅಯ್ಯೋ ಹಾಗಂತ ಆ ಮಗುನ ಹೊಡೆದುಬಿಡಬೇಡಪ್ಪಾ )
ಅ ಆ ಇ ಈ ಅಂದರೇ ಸಾಕು ನಗುತಾನೇ 
(ಭೇಷ್ ! ನನ್ನ ತರನೇ ಕನ್ನಡ ಮೀಡಿಯಂ )
ಕನ್ನಡ ಪ್ರೇಮಿ ಈ ತುಂಟ ಕನ್ನಡ ಮಗ್ಗಿ ಕಂಠಪಾಠ 
ಕೊಟ್ಟರೇ ಕೈಗೇ ಕನ್ನಡ ಬಾವುಟ ಹಾಡಿ ಕುಣಿವ ಕನ್ನಡ ಭಂಟ 
(ಕನ್ನಡ ಚಳುವಳಿಗಾರನೇ ಆಗೋದು )
ನಿಮ್ಮ ಮಗುವು ನಗುತಿರುವ ಎತ್ತಿಕೊಂಡರೇ ಮುತ್ತುಕೊಡುವಾ
ಗಣೇಶನೆಂಬ ಹೆಸರಿಂದ ಭೂಮಿಗೆ ಬಂದ ಗೌರಿಯ ಕಂದ 
ನಿಮ್ಮ ಮಗುವು ನಗುತಿರುವ ಎತ್ತಿಕೊಂಡರೇ ಮುತ್ತುಕೊಡುವಾ 
--------------------------------------------------------------------------------------------------------------------------
ಗೌರಿ ಗಣೇಶ (೧೯೯೧) - ಡ್ಯಾಡಿ ಡ್ಯಾಡಿ ಡ್ಯಾಡಿ
ಸಂಗೀತ : ರಾಜನ್ ನಾಗೇಂದ್ರ, ಸಾಹಿತ್ಯ : ವಿ.ಮನೋಹರ ಗಾಯನ : ಕುಸುಮಾ
ಡ್ಯಾಡಿ ಡ್ಯಾಡಿ ಡ್ಯಾಡಿ ನಾನು ನೀನು ಜೋಡಿ
ನನ್ನ ಮುದ್ದು ಡ್ಯಾಡಿ ಐ ಲವ್ ಯು
ಡ್ಯಾಡಿ ಡ್ಯಾಡಿ ಡ್ಯಾಡಿ ನಾನು ನೀನು ಜೋಡಿ
ನನ್ನ ಮುದ್ದು ಡ್ಯಾಡಿ ಐ ಲವ್ ಯು ನನ್ನ ಮುದ್ದು ಡ್ಯಾಡಿ ಐ ಲೈಕ್ ಯು
ಅಜ್ಜ ನಿನ್ನ ಬೆನ್ನ ಮೇಲೆ ಆನೆ ಅಂಬಾರಿ ಮೈಸೂರು ರಾಜ ನಾನೇ ನೀ ನನ್ನ ಸವಾರಿ 
ಅಜ್ಜ ನಿನ್ನ ಬೆನ್ನ ಮೇಲೆ ಆನೆ ಅಂಬಾರಿ ಮೈಸೂರು ರಾಜ ನಾನೇ ನೀ ನನ್ನ ಸವಾರಿ 
ದಸರ ನಡೆಸೋಣ ದರ್ಬಾರು ಮಾಡೋಣ ಜಂಬೂ ಸವಾರಿ ಮೆರವಣಿಗೆ ಹೋಗೋಣ 
ಚುಕುಬುಕು ಚುಕುಬುಕು ರೈಲು ಬಂತು ಹತ್ತಿಕೊಳ್ಳೋಣ 
ಬೊಂಬಾಯಿ ನ್ಯೂಡೆಲ್ಲಿ ನೋಡಿ ಬರೋಣ 
ಸ್ಟುಡಿಯೋಗೆ ಹೋಗೋಣ ಫೋಟೋ ತಗಿಸೋಣ 
ಪಾರ್ಕಿಗೆ ಹೋಗೋಣ ಜೂಜಾಟ ಆಡೋಣ 
ತೋಟದಲಿ ಆಡುತಲಿ ಕಾಲ ಕಳೆಯೋಣ 
ಅಜ್ಜಿ ಅಜ್ಜಿ ಅಜ್ಜಿ ಬಾಳೆಕಾಯಿ ಬಜ್ಜಿ ಕೆನ್ನೆಗೆ ಕೆನ್ನೆ ಉಜ್ಜಿ ಐ ಲವ್ ಯೂ 
ತಾತ ತಾತ ತಾತ ಅಯ್ಯೋ ತಿಂಡಿ ಪೋತ ತಿನ್ನು ಚೌಚೌ ಭಾತ್ ಐ ಲವ್ ಯೂ
ನನ್ನ ಮುದ್ದು ತಾತ ಐ ಲೈಕ್ ಯೂ 
ಮೈ ಡ್ಯಾಡಿ ಬಾ ನಿಂತುಕೋ ಕಣ್ಣನು ನೀ ಕಟ್ಟಿಕೊ
ನಾನು ಎಲ್ಲಿ ಎಂದು ಈಗ ಪತ್ತೆ ಮಾಡು 
(ಡ್ಯಾಡಿ ಅಲ್ಲಲ್ಲ ಈ ಕಡೆ ಬನ್ನಿ ಈ ಕಡೆ )
ಜ್ಯಾಲಿಗೆ ಟೈಮಪಾಸೀಗೆ ಐಸ್ ಪೈಸ್ ನಾವು ಆಡುವಾ 
ಒಂದು ಎರಡು ಮೂರೂ ಎಣಿಸು ನೀನು ನೂರು
ಅವಿತುಕೊಳ್ಳುವೇ ನಾನು ಲೆಕ್ಕ ಮುಗಿದು ನೀನು ನನ್ನ ಹುಡುಕು ಡ್ಯಾಡಿ ಜ್ಯುಟ್...  
ಡ್ಯಾಡಿ ಡ್ಯಾಡಿ ಡ್ಯಾಡಿ ನಾನು ನೀನು ಜೋಡಿ
ನನ್ನ ಮುದ್ದು ಡ್ಯಾಡಿ ಐ ಲವ್ ಯು
ಡ್ಯಾಡಿ ಡ್ಯಾಡಿ ಡ್ಯಾಡಿ ನಾನು ನೀನು ಜೋಡಿ ನನ್ನ ಮುದ್ದು ಡ್ಯಾಡಿ ಐ ಲೈಕ್ ಯು
ನನ್ನ ಮುದ್ದು ಡ್ಯಾಡಿ ಐ ಲೈಕ್ ಯು
--------------------------------------------------------------------------------------------------------------------------
No comments:
Powered by Blogger.

ಚಿನ್ನದ ಗೊಂಬೆ (1964)

ಸೇವಂತಿಗೆ ಚೆಂಡಿನಂತೆ

ಚಲನ ಚಿತ್ರ: ಚಿನ್ನದ ಗೊಂಬೆ (1964)
ನಿರ್ದೇಶನ: 
ಸಂಗೀತ : ಟಿ.ಜಿ.ಲಿಂಗಪ್ಪ 
ಸಾಹಿತ್ಯ: ವಿಜಯನಾರಸಿಂಹ 
ಗಾಯನ : ಸೂಲಾಮಂಗಲಂ ರಾಜಲಕ್ಷ್ಮೀ
ನಟನೆ: 


ಸೇವಂತಿಗೆ ಚೆಂಡಿನಂತ ಮುದ್ದು ಕೋಳಿ
ತಾಯಿ ಮಡಿಲಿನಲ್ಲಿ  ಬೀಡು  ಬಿಟ್ಟ ಮುದ್ದು ಕೋಳಿ ...
ಸೇವಂತಿಗೆ ಚೆಂಡಿನಂತ ಮುದ್ದು ಕೋಳಿ
ತಾಯಿ ಮಡಿಲಿನಲ್ಲಿ  ಬೀಡು  ಬಿಟ್ಟ ಮುದ್ದು ಕೋಳಿ ... 
ಅಮ್ಮನಿತ್ತದೇ ಅಮೃತ ಎನ್ನುವ ಕೋಳಿ... 
ಅಮ್ಮನಿತ್ತದೇ ಅಮೃತ ಎನ್ನುವ ಕೋಳಿ...  
ಒಳ್ಳೆ ನಲ್ಮೆ ಇಂದ ಬೆಳೆದು ಬಂದ ಮುದ್ದು ಕೋಳಿ  ... 
ಸೇವಂತಿಗೆ ಚೆಂಡಿನಂತ ಮುದ್ದು ಕೋಳಿ
ತಾಯಿ ಮಡಿಲಿನಲ್ಲಿ  ಬೀಡು ಬಿಟ್ಟ ಮುದ್ದು ಕೋಳಿ 
ತಾಯಿ ತೊರೆದು ಘಳಿಗೆ ಕೂಡಾ ಆಗಲಲಾರದು 
ತನ್ನ ಸೋದರರ  ಮರೆತು ಬಿಟ್ಟು ಮೆರೆಯಲಾರದು ..  
ತಾಯಿ ತೊರೆದು ಘಳಿಗೆ ಕೂಡಾ ಆಗಲಲಾರದು 
ತನ್ನ ಸೋದರರ  ಮರೆತು ಬಿಟ್ಟು ಮೆರೆಯಲಾರದು ..  
ಜಾಣ ಮರಿ ಮುದ್ದು ಕೋಳಿ ಮಾತನಾಡದು...  
ಜಾಣ ಮರಿ ಮುದ್ದು ಕೋಳಿ ಮಾತನಾಡದು...  
ತನ್ನ ಸಾಕಿದವರ ಬಿಟ್ಟು ದೂರ ಓಡಿ ಹೋಗದು ... 
ಸೇವಂತಿಗೆ ಚೆಂಡಿನಂತ ಮುದ್ದು ಕೋಳಿ
ತಾಯಿ ಮಡಿಲಿನಲ್ಲಿ  ಬೀಡು ಬಿಟ್ಟ ಮುದ್ದು ಕೋಳಿ ...
ಪ್ರೇಮವಿರುವ ಮನೆಯ ಅದುವೇ ನಿತ್ಯ ಸುಂದರ 
ಆ ಪ್ರೇಮಭರಿತ ಹೃದಯವದು ದೇವಮಂದಿರ ...  
ಪ್ರೇಮವಿರುವ ಮನೆಯ ಅದುವೇ ನಿತ್ಯ ಸುಂದರ 
ಆ ಪ್ರೇಮಭರಿತ ಹೃದಯವದು ದೇವಮಂದಿರ ...  
ದೇವನವನೆ ಪ್ರೇಮರೂಪಾ ದಯಾಸಾಗರ ...  
ದೇವನವನೆ ಪ್ರೇಮರೂಪಾ ದಯಾಸಾಗರ ...  
ಆ ದೈವರಕ್ಷೆ ಕಾವುದೆಲ್ಲಾ ಪ್ರೇಮ ದೀವರ...  
ಸೇವಂತಿಗೆ ಚೆಂಡಿನಂತ ಮುದ್ದು ಕೋಳಿ
ತಾಯಿ ಮಡಿಲಿನಲ್ಲಿ  ಬೀಡು ಬಿಟ್ಟ ಮುದ್ದು ಕೋಳಿ ...
ಸೇವಂತಿಗೆ ಚೆಂಡಿನಂತ ಮುದ್ದು ಕೋಳಿ
ತಾಯಿ ಮಡಿಲಿನಲ್ಲಿ  ಬೀಡು ಬಿಟ್ಟ ಮುದ್ದು ಕೋಳಿ ... 
----------------------------------------------------------------------------------------------------------------------

ಸಂಗೀತ : ಟಿ.ಜಿ.ಲಿಂಗಪ್ಪ 
ಸಾಹಿತ್ಯ:ಆರ್.ಏನ್.ಜಯಗೋಪಾಲ್  
ಗಾಯನ : ಎಸ್.ಜಾನಕೀ 

ಓಓಓ... ಓಓಓ...
ನೋಡಲ್ಲಿ ಮೆರವಣಿಗೆ ನೂತನ ದಂಪತಿಗಳಿಗೆ
ಕಣ್ಣು ಕಣ್ಣು ಒಂದಾಗಿವೇ ಕಾರಣವಾ ನೀ ಬಲ್ಲೆಯಾ
ನೋಡಲ್ಲಿ ಮೆರವಣಿಗೆ ನೂತನ ದಂಪತಿಗಳಿಗೆ
ಕಣ್ಣು ಕಣ್ಣು ಒಂದಾಗಿವೇ ಕಾರಣವಾ ನೀ ಬಲ್ಲೆಯಾ
ಕುಳಿತಿಹಳು ನಾಚುತೆ  ಹೆಣ್ಣು ಕೆನ್ನೆಗಳು ಕೆಂಪನೆ ಹಣ್ಣು
ಕುಳಿತಿಹಳು ನಾಚುತೆ  ಹೆಣ್ಣು ಕೆನ್ನೆಗಳು ಕೆಂಪನೆ ಹಣ್ಣು
ಕುಡಿ ನೋಟ ಬೀರುವ ಕಣ್ಣು ಕಥೆಯೊಂದ ಹೇಳಿದೆ
ಕಾದಿಹಳು ಸುಮಬಾಲೆ ಕಟ್ಟಿಹಳು ಆಸೆಯ ಮಾಲೆ
ಕಾದಿಹಳು ಸುಮಬಾಲೆ ಕಟ್ಟಿಹಳು ಆಸೆಯ ಮಾಲೆ
ಚೆನ್ನಾ ನಿನ್ನಾಸೆ ಏನೋ ಹೇಳಯ್ಯಾ
ನೋಡಲ್ಲಿ ಮೆರವಣಿಗೆ ನೂತನ ದಂಪತಿಗಳಿಗೆ
ಕಣ್ಣು ಕಣ್ಣು ಒಂದಾಗಿವೇ ಕಾರಣವಾ ನೀ ಬಲ್ಲೆಯಾ
ಹನುಮಣ್ಣನ ಪೂಜೆಯೋ  ಬೇಕು ಏಕಾಂಗಿ ಬಾಳಿದು ಸಾಕೋ
ಹನುಮಣ್ಣನ ಪೂಜೆಯೋ  ಬೇಕು ಏಕಾಂಗಿ ಬಾಳಿದು ಸಾಕೋ 
ಆಸೆಯ ತಾರಾಮರ ಕಂಡು ಜೊತೆಯಾಗೇ ಜೋಕೆ 
ಆಸೆಗೆ  ಎಲ್ಲೆಯೂ ಇಲ್ಲ ಪ್ರೇಮದಲಿ ಪಾಪವಿಲ್ಲಾ 
ಆಸೆಗೆ  ಎಲ್ಲೆಯೂ ಇಲ್ಲ ಪ್ರೇಮದಲಿ ಪಾಪವಿಲ್ಲಾ 
ಏಕೋ ಈ ಮೌನ ನೀನೇ ಹೇಳಯ್ಯಾ 
ನೋಡಲ್ಲಿ ಮೆರವಣಿಗೆ ನೂತನ ದಂಪತಿಗಳಿಗೆ
ಕಣ್ಣು ಕಣ್ಣು ಒಂದಾಗಿವೇ ಕಾರಣವಾ ನೀ ಬಲ್ಲೆಯಾ
----------------------------------------------------------------------------------------------------------------------
ಚಿನ್ನದ ಗೊಂಬೆ (೧೯೬೪)
ಸಂಗೀತ : ಟಿ.ಜಿ.ಲಿಂಗಪ್ಪ ಸಾಹಿತ್ಯ: ವಿಜಯನಾರಸಿಂಹ ಗಾಯನ : ಪಿ.ಬಿ.ಎಸ್,  ಎಸ್.ಜಾನಕೀ 
ಗಂಡು : ಓಹೋಹೋ ಹೋ  ಓಹೋಹೋ ಹೋ  ಓಹೋಹೋ ಹೋ  ಹೊಯ್
ಹೆಣ್ಣು :  ಓಹೋಹೋ ಹೋ  ಓಹೋಹೋ ಹೋ  ಓಹೋಹೋ ಹೋ 
ಗಂಡು : ಹೂಂಹೂಂಹೂಂ ಹೂಂಹೂಂಹೂಂ ಹೂಂ    
ಹೆಣ್ಣು :  ಹೂಂಹೂಂಹೂಂ ಹೂಂಹೂಂಹೂಂ ಹೂಂ    
           ತಾವರೆ ಹೂ ಕೆರೆಯಲಿ ಸಂಜೆವೆಣ್ಣ ಚೆಲುವಲಿ 
           ತಾವರೆ ಹೂ ಕೆರೆಯಲಿ ಸಂಜೆವೆಣ್ಣ ಚೆಲುವಲಿ 
           ಮೀಯಲೆಂದು ನಾ ಬಂದೆ ಬಂದನಾರೋ ನನ್ನ ಹಿಂದೆ 
           ಮೀಯಲೆಂದು ನಾ ಬಂದೆ ಬಂದನಾರೋ ನನ್ನ ಹಿಂದೆ 
           ಯಾರವರಾಯ ಆ.. ಚೆನ್ನಿಗರಾಯ 
           ಯಾರವರಾಯ ಆ.. ಚೆನ್ನಿಗರಾಯ 
ಗಂಡು : ಮಲ್ಲಿಗೆಯ ಮೊಗದಲಿ ಮುಖ ಮಲ್ಲಿನ ಆ ತುಟಿಯಲಿ  
           ಮಲ್ಲಿಗೆಯ ಮೊಗದಲಿ ಮುಖ ಮಲ್ಲಿನ ಆ ತುಟಿಯಲಿ  
           ಕೆಂಪ ಬಣ್ಣ ತಂದವನು ಕೊಡುಗೆಯೊಂದ  ಇತ್ತವನು 
           ಕೆಂಪ ಬಣ್ಣ ತಂದವನು ಕೊಡುಗೆಯೊಂದ ಇತ್ತವನು 
           ಆ.. ಚೆಲುವಯ್ಯ ಅವ್ ಪಿಡಿವನಿ  ಕೈಯ್ 
           ಆ.. ಚೆಲುವಯ್ಯ ಅವ್ ಪಿಡಿವನಿ  ಕೈಯ್ 
ಹೆಣ್ಣು : ಮಂದಹಾಸ ಬೀರುವಾ ಬಂದ ನಿದ್ದೆ ಕೆಡಿಸುವಾ
ಗಂಡು : ಓಹೋಹೋ ಓಹೋಹೋ ಓಹೋಹೋ
ಹೆಣ್ಣು : ಮಂದಹಾಸ ಬೀರುವಾ ಬಂದ ನಿದ್ದೆ ಕೆಡಿಸುವಾ
          ಒಂಟಿಯಾದ ಎನಗೆ ತರುವ ಕಣ್ಣೀರ...  
          ಅವ್ ತರುಣಿ ಮನವ ಕಲಕಿ ಬಿಡುವ ಕಣ್ಣಾರ  (ಓ.. ಓಹೋ )        
          ಯಾರವರಾಯ ಆ.. ಚೆನ್ನಿಗರಾಯ 
          ಯಾರವರಾಯ ಆ.. ಚೆನ್ನಿಗರಾಯ 
ಗಂಡು : ಸಮಯ ನೋಡಿ ಬಂದನೇ ಸರಸಕಾಗಿ ಕರೆವನೇ 
ಹೆಣ್ಣು : ಹೂಂ ಹೂಂ ಹೂಂ ಹೂಂ ಹೂಂ ಹೂಂ ಹೂಂ ಹೂಂ           
ಗಂಡು : ಸಮಯ ನೋಡಿ ಬಂದನೇ ಸರಸಕಾಗಿ ಕರೆವನೇ 
           ಅಂಗಲಾಚಿ ನಾಚಿಕೊಂಡು ನಿಂತಿಹನೇ... 
           ನಿನ್ನ ಕೈಯ ಬಳೆ ಝಣದಲ್ಲಿ ಇರುತಾನೇ  (ಹ್ಹಾಂ ಆ..)
           ಆ.. ಚೆಲುವಯ್ಯ ಅವ್ ಪಿಡಿವನಿ  ಕೈಯ್ 
           ಆ.. ಚೆಲುವಯ್ಯ ಅವ್ ಪಿಡಿವನಿ  ಕೈಯ್ 
  
ಇಬ್ಬರು : ಮೇಳ ತಾಳ ವಾದ್ಯಗಳ ವೇದ ಮಂತ್ರ ಘೋಷದಲಿ ...  
            ಮೇಳ ತಾಳ ವಾದ್ಯಗಳ ವೇದ ಮಂತ್ರ ಘೋಷದಲಿ ...  
             ಹಾರ ಹಾಸಿ ದಂಪತಿ ನಾವಾಗೋಣಾ.. 
             ಆ... ಗುಂಗಿನಲ್ಲಿ ಕಾಲ ಚಕ್ರ ತಳ್ಳೋಣ   
            ನಾವು ಹಾರಾಡುವಾ ಎಂದೂ ಒಂದಾಗುವಾ 
            ಹಾರಾಡುವಾ ಎಂದೂ ಒಂದಾಗುವಾ 
           ತಾನಿ ತನ್ನಿ ತಂದಾನಿ  ತಾನಿ ತನ್ನಿ ತಂದಾನಿ
           ತಾನಿ ತನ್ನಿ ತಂದಾನಿ  ತಾನಿ ತನ್ನಿ ತಂದಾನಿ
           ತಾನಿ ತನ್ನಿ ತಂದಾನಿ  ತಾನಿ ತನ್ನಿ ತಂದಾನಿ
----------------------------------------------------------------------------------------------------------------------
ಚಿನ್ನದ ಗೊಂಬೆ (೧೯೬೪)
ಸಂಗೀತ : ಟಿ.ಜಿ.ಲಿಂಗಪ್ಪ ಸಾಹಿತ್ಯ: ವಿಜಯನಾರಸಿಂಹ ಗಾಯನ : ಎಸ್.ಜಾನಕೀ 
ಮಣ್ಣಲಿ ಕಲೆಯಾ ರೂಪಿಸುವೆ
ಏನ್ ಒಲವಿಗೆ ಕಳಶವ ನಾ ನೀಡುವೆ
ಮಣ್ಣಲಿ ಕಲೆಯಾ ರೂಪಿಸುವೆ
ಏನ್ ಒಲವಿಗೆ ಕಳಶವ ನಾ ನೀಡುವೆ
ತಿಂಗಳ ಬೆಳಕನು ನಾಚಿಸುವ
ತಿಂಗಳ ಬೆಳಕನು ನಾಚಿಸುವ ಕಂಗಳ ಕಾಂತಿಯ ಇದಕಿವೆ
ಮಣ್ಣಲಿ ಕಲೆಯಾ ರೂಪಿಸುವೆ....
ಚಂದದ ಚಂದಿರ ವದನವಿರೇ
ಹೊಂದಾವರೆ ಹೋಲುವ ಕಂಗಳಿರೆ 
ಚಂದದ ಚಂದಿರ ವದನವಿರೇ
ಹೊಂದಾವರೆ ಹೋಲುವ ಕಂಗಳಿರೆ 
ನವಿಲಿನ ಗರಿಗಳ ಎಳೆಯಿಂದ
ನವಿಲಿನ ಗರಿಗಳ ಎಳೆಯಿಂದ ಕಣ್ ಎವೆಯನು ನಾ ಕೂಡಿಸುವೆ 
ಕಣ್ ಎವೆಯನು ನಾ ಕೂಡಿಸುವೆ
ಮಣ್ಣಲಿ ಕಲೆಯಾ ರೂಪಿಸುವೆ...
ಗೋಪುರದಲ್ಲಿದೆ ಗುಡಿ ಘಂಟೆ
ಕಿವಿ ಕೇಳಲು ಕಾದಿದೆ ಗುಡಿಸಲಲಿ ಆಆಆ.....
ಗೋಪುರದಲ್ಲಿದೆ ಗುಡಿ ಘಂಟೆ
ಕಿವಿ ಕೇಳಲು ಕಾದಿದೆ ಗುಡಿಸಲಲಿ
ಪ್ರೇಮವ ಮೈತ್ರಿಯ ಕರೆಯಲ್ಲೇ
ಪ್ರೇಮವ ಮೈತ್ರಿಯ ಕರೆಯಲ್ಲೇ ನಾ ಮೈಮನ ಮರೆತೇ ಅವನಲ್ಲೇ 
ನಾ ಮೈಮನ ಮರೆತಿಹೆ ಅವನಲ್ಲೇ
ಮಣ್ಣಲಿ ಕಲೆಯಾ ರೂಪಿಸುವೆ ಏನ್ ಒಲವಿಗೆ ಕಳಶವ ನಾ ನೀಡುವೆ
ಮಣ್ಣಲಿ ಕಲೆಯಾ ರೂಪಿಸುವೆ
-------------------------------------------------------------------------------------------------------------------------
ಚಿನ್ನದ ಗೊಂಬೆ (೧೯೬೪) -ಗೂಡಿನಲ್ಲಿ ಒಂದು ಬಾನಾಡಿ
ಸಂಗೀತ : ಟಿ.ಜಿ.ಲಿಂಗಪ್ಪ ಸಾಹಿತ್ಯ: ಆರ್.ಏನ್.ಜಯಗೋಪಾಲ, ಗಾಯನ :ಪಾಣಿಗ್ರಹಿ 
ಗೂಡಿನಲಿ ಒಂದು ಬಾನಾಡಿ ಅದು ಹಾಡುತಲಿ ಇರೇ ಮರೆದಾಡಿ
ಗೂಡಿನಲಿ ಒಂದು ಬಾನಾಡಿ ಅದು ಹಾಡುತಲಿ ಇರೇ ಮರೆದಾಡಿ
ತನ್ನಯ ಗೂಡಿನಲಿ ಮರಿಗಳ ಜೊತೆಗೂಡಿ ಬಾಳಿತು ಹಾಯಾಗಿ ಹಾರಾಡಿ
ಗೂಡಿನಲಿ ಒಂದು ಬಾನಾಡಿ ಅದು ಹಾಡುತಲಿ ಇರೇ ಮರೆದಾಡಿ
ಹಾಲನು ಹೋಲುವ ಕುಟುಂಬದಲಿ ಬಂದು ನೆಲೆಸಿತಮ್ಮಾ ಒಂದು ಕುಲಗೇಡಿ
ಹಾಲನು ಹೋಲುವ ಕುಟುಂಬದಲಿ ಬಂದು ನೆಲೆಸಿತಮ್ಮಾ ಒಂದು ಕುಲಗೇಡಿ
ಆ ಕುಲಗೇಡಿಯ ಸಂಚಿನಲಿ.. ಇಂದು ನೋಂದಿತಮ್ಮಾ ಸಣ್ಣ ಬಾನಾಡಿ
ಗೂಡಿನಲಿ ಒಂದು ಬಾನಾಡಿ ಅದು ಹಾಡುತಲಿ ಇರೇ ಮರೆದಾಡಿ
ಕಣ್ಣೀರ ಕರೆದು ತೊಳಲಾಡಿ ಗೂಡ ತೋರೆಯತಮ್ಮಾ ತಂಗಿ ಒಡಗೂಡಿ 
ಅಣ್ಣನ ಹಿಂದೆ ಬಾಡಿದ ಸುಮದಂತೆ ನಡೆಯಿತಮ್ಮಾ ಹೆಣ್ಣು ಬಾನಾಡಿ 
ನಡೆಯಿತಮ್ಮಾ ಹೆಣ್ಣು ಬಾನಾಡಿ
ಗೂಡಿನಲಿ ಒಂದು ಬಾನಾಡಿ ಅದು ಹಾಡುತಲಿ ಇರೇ ಮರೆದಾಡಿ
ಗಂಟು ತಾನಿರಲು ಬರುವುದು ನಂಟು ನೆಂಟರು ಬಂದರೆ ಭೇದವು ಉಂಟು 
ಗಂಟು ತಾನಿರಲು ಬರುವುದು ನಂಟು ನೆಂಟರು ಬಂದರೆ ಭೇದವು ಉಂಟು 
ಬೇಧಕು ಮನಸಿನ ಖೇದಕು ಗಂಟು ಓರೆನೋಡೇ ಪ್ರೇಮ ತಾನುಂಟು 
ಗೂಡಿನಲಿ ಒಂದು ಬಾನಾಡಿ ಅದು ಹಾಡುತಲಿ ಇರೇ ಮರೆದಾಡಿ
ಗೂಡಿನಲಿ.....
-------------------------------------------------------------------------------------------------------------------------
ಚಿನ್ನದ ಗೊಂಬೆ (೧೯೬೪)
ಸಂಗೀತ : ಟಿ.ಜಿ.ಲಿಂಗಪ್ಪ ಸಾಹಿತ್ಯ:ಆರ್.ಏನ್.ಜಯಗೋಪಾಲ್  ಗಾಯನ : ಪಿ.ಬಿ.ಎಸ್.
ಓಹೋಹೋ.. ಓಹೋಹೋ..ಓಹೋಹೋಹೋಹೋ..  ಹೊಯ್ ಬುರ್ರಾಆ
ಹೊನ್ನಾಸೆ ಉಳುವಗೇ ದಯೆಯಿಲ್ಲಾ ಕಲ್ಲು ಮನಸೆಲ್ಲಾ
ಎಂದು ಹೆಣ್ಣಾಸೆ ಉಳ್ಳವಂಗೆ ಕಂಗಳಿಲ್ಲಾ ಮೋಹವೊಂದೇ ಬಲ್ಲಾ
ಹೊನ್ನಾಸೆ ಉಳುವಗೇ ದಯೆಯಿಲ್ಲಾ ಕಲ್ಲು ಮನಸೆಲ್ಲಾ
ಎಂದು ಹೆಣ್ಣಾಸೆ ಉಳ್ಳವಂಗೆ ಕಂಗಳಿಲ್ಲಾ ಮೋಹವೊಂದೇ ಬಲ್ಲಾ
ಬಕತಲೇ ಭಾವನಿಗೇ ಹೂವೇತಕೇ... ಒಹೋಹೋ ... 
ಬಕತಲೇ ಭಾವನಿಗೇ ಹೂವೇತಕೇ ಮಲ್ಲೇ ಹೂವೇತಕೆ 
ಚ್ಯುತೆಯೊಳ ಚಿಂತೆಯಾಕೆ ಹುಲಿಗೇತಕೆ ಕೊಲ್ಲು ಹುಲಿಗೇತಕೆ 
ಕೋಗಿಲೆಗೆ ಗಿಡುಗ ಎಣೆಯಾಗದೂ 
ಕೋಗಿಲೆಗೆ ಗಿಡುಗ ಎಣೆಯಾಗದೂ ಪಕ್ಕ ಜೊತೆಯಾಗದೂ 
ನೀಚ ಭಾವನೆ ಮನದಲಿ ಬರಲಾಗದೂ ಅದು ತರವಾಗದು 
ಹೊನ್ನಾಸೆ ಉಳುವಗೇ ದಯೆಯಿಲ್ಲಾ ಕಲ್ಲು ಮನಸೆಲ್ಲಾ
ಎಂದು ಹೆಣ್ಣಾಸೆ ಉಳ್ಳವಂಗೆ ಕಂಗಳಿಲ್ಲಾ ಮೋಹವೊಂದೇ ಬಲ್ಲಾ
ಬಾನಿಗೆ ಚಂದಿರವೇ  ಸೊಬಗಲ್ಲವೇ... ಓಹೋಹೋ..
ಬಾನಿಗೆ ಚಂದಿರವೇ  ಸೊಬಗಲ್ಲವೇ. ಅವ್ ದೊರೆಯಲ್ಲವೇ
ಮಾನವೇ ಸುಂದರಿಗೆ ಮೆರುಗಲ್ಲವೇ ಅದು ಚೆಲುವಲ್ಲವೇ 
ರೆಕ್ಕೆ ಬಲಿತ ಹಕ್ಕಿ ಹಾರಾಡದೇ...  
ರೆಕ್ಕೆ ಬಲಿತ ಹಕ್ಕಿ ಹಾರಾಡದೇ ಹಾಡಿ ನಲಿದಾಡದೇ
ಅದ ಬಂಧಿಸಲು ಪಂಜರದೇ  ತಾ ನೋಯದೇ ನೊಂದು ತಾ ಸಾಯದೇ
ಹೊನ್ನಾಸೆ ಉಳುವಗೇ ದಯೆಯಿಲ್ಲಾ ಕಲ್ಲು ಮನಸೆಲ್ಲಾ
ಎಂದು ಹೆಣ್ಣಾಸೆ ಉಳ್ಳವಂಗೆ ಕಂಗಳಿಲ್ಲಾ ಮೋಹವೊಂದೇ ಬಲ್ಲಾ
ಓಹೋಹೋ ಓಹೋಹೋ ಓಹೋಹೋ ಹೋ .... 
------------------------------------------------------------------------------------------------------------------------
No comments:
Powered by Blogger.

Thursday, April 4, 2019

ಕಿಲಾಡಿ ಜೋಡಿ (1978)



ಕನಸಿನಲಿ ನೋಡಿದೆನು

ಚಲನ ಚಿತ್ರ: ಕಿಲಾಡಿ ಜೋಡಿ (1978)
ನಿರ್ದೇಶನ: ರಾಜೇಂದ್ರ ಸಿಂಗ್ ಬಾಬು 
ಸಾಹಿತ್ಯ : ಚಿ. ಉದಯಶಂಕರ್ 
ಸಂಗೀತ : ರಾಜನ್-ನಾಗೇಂದ್ರ 
ಗಾಯನ : ಎಸ್.ಪಿ.ಬಿ. & ಎಸ್.ಜಾನಕೀ 
ನಟನೆ: ವಿಷ್ಣುವರ್ಧನ್, ಶ್ರೀನಾಥ್, ಲಕ್ಷ್ಮೀ, ವಜ್ರಮುನಿ 

ಹೆಣ್ಣು : ಲಾ...ಲ ಲ ಲ ಲ ಲಾ ಲಾ.........
            ಕನಸಿನಲಿ ನೋಡಿದೆನು ಒಲವಿನಲಿ ಸೇರಿದೆನು
            ಕನಸಿನಲಿ ನೋಡಿದೆನು ಒಲವಿನಲಿ ಸೇರಿದೆನು
            ಮನಸನು ಕದ್ದೋನು ಎದೆಯಲಿ ನಿಂತೋನು ಕಾಣದೆ ಎಲ್ಲಿಹನು...........
ಗಂಡು : ಕನಸಿನಲಿ (ಲಾಲಾಲ )ನೋಡಿದೆನು (ಲಾಲಾಲ ) ಕನವರಿಸಿ ಕೂಗಿದೆನು (ಲಾಲಾಲ )
            ಕನಸಿನಲಿ ನೋಡಿದೆನು  ಕನವರಿಸಿ ಕೂಗಿದೆನು
            ಕಾಣಲು ನಿನ್ನನ್ನು ಬೇಡಲು ಒಲವನ್ನು ಹುಡುಕುತ ಬಂದಿಹೆನು.......
ಹೆಣ್ಣು : ಕನಸಿನಲಿ ನೋಡಿದೆನು
ಇಬ್ಬರು : ಒಲವಿನಲಿ ಸೇರಿದೆನು
ಹೆಣ್ಣು : ನಿನ್ನೆಯಿಂದ ನಿದ್ದೆ ಇಲ್ಲ ನಿನ್ನನ್ನು ಊರೆಲ್ಲಾ ಹುಡುಕಿ ನಾನು ನೊಂದೆ
          ಹೇಗೋ ಏನೋ ಅಂತು ಇಂತು ನಿನ್ನನ್ನು ನಾನಿಲ್ಲಿ ಇಂದು ಕಂಡೆ
ಗಂಡು : ತುಂಬಿ ಬಂದ ಆಸೆಯಿಂದ ಓಡೋಡಿ ನಾಬಂದೆ ನಿನ್ನ ನೋಡಲೆಂದು
            ನನ್ನಾ ನಿನ್ನ ಬೇರೆಮಾಡೋರಾರೂಇಲ್ಲ ಇನ್ನು ಎಂದು
            ಬಾ ಬೇಗ ನೀ ನನ್ನ ಸೇರು ಬಂದು....
            ಹೆ ಹೇ....ಲ ಲ ಲ್ಲ ಲ ಲ ಲ್ಲ......
            ತಾಳು ಚಿನ್ನ ಕೇಳು ರನ್ನ ಇಂತ ಕಳ್ಳ ಇಂತ ಸುಳ್ಳ ಬೇರೆ ಎಲ್ಲೂ ಹುಟ್ಟೋದಿಲ್ಲ
            ನಂಬು ನನ್ನ....ನೀ ನಂಬು ನನ್ನ...ಸುಳ್ಳು ಚಿನ್ನ...ಸುಳ್ಳು ರನ್ನ.....
           ಇಂತ ಬಂಡ ಇಂತ ಪುಂಡ ಊರಲ್ಲೆಲ್ಲೂ ಕಾಣೋದಿಲ್ಲ ನಂಬು ನನ್ನ.ಓ ...ನಂಬು ನನ್ನ.....
ಗಂಡು : ಕಳ್ಳನ ದಾರಿ ಕಳ್ಳನೆ ಬಲ್ಲಾ ಕೈಯ್ಯ ಕೊಟ್ಟ ನಿನ್ನ ನಾನು ಉಳಿಸೋಲ್ಲ.. ಅಹ್ಹಹ್ಹಾ
            ಬಲ್ಲೆನು ಎಲ್ಲಾ ಅಳ್ಳದೆ ಇಲ್ಲಾ ಗಟ್ಟಿಯಾಗಿ ಮಾತನಾಡೆ ಹೆದರೋಲ್ಲ
             ನನ್ನನ್ನು ಗೆಲ್ಲಲಾರೆ ನಾನೆಂದು ಸೋಲಲಾರೆ
            ನನ್ನನ್ನು ಗೆಲ್ಲಲಾರೆ ನಾನೆಂದು ಸೋಲಲಾರೆ
           ಹಾಡುವೆಯ .....ಹಾಡುವೆನು  ಆಡುವೆಯಾ .....ಆಡುವೆನು
           ಓಡುವೆಯಾ.... ಓಡುವೆನು ಬಿಡುವೆನೆ ನಾ ನಿನ್ನ
           ನಗಿಸುವೆಯಾ ....ನಗಿಸುವೆನು ಅಳಿಸುವೆಯಾ.....ಅಳಿಸುವೆನು
           ನಮಿಸುವೆಯಾ..ನಮಿಸುವೆನು...ಹಾ.....ವೈರಿಗೆ ನಮಿಸೋಲ್ಲ......ಹಾ ಹಾ......
ಕೋರಸ್ : ಲಾಲಾಲ  ಲಾಲಾಲ  ಲಾಲಾಲ  ಲಾಲಾಲ  ಲಾಲಾಲ
*********************************************************************************

ಕಿಲಾಡಿ ಜೋಡಿ

ಸಾಹಿತ್ಯ: ಚಿ. ಉದಯಶಂಕರ್  
ಸಂಗೀತ: ರಾಜನ್ ನಾಗೇಂದ್ರ 
ಗಾಯನ: ಎಸ್.ಪಿ.ಬಿ, ಕೆ.ಜೆ.ಏಸುದಾಸ್ 

ಇಬ್ಬರು : ಹಿಪ್ ಹಿಪ್ ಹುರ್ರೇ..........
ಕೆಜೆ: ಲ ಲ್ಲ ಲ ಲಾ ಲ........    ಎಸ್ಪಿ: ಲ ಲ್ಲ ಲ ಲಾ ಲ ....
ಕೆಜೆ: ಲ ಲ್ಲ ಲ ಲಾ ಲ........    ಎಸ್ಪಿ: ಲ ಲ್ಲ ಲ ಲಾ ಲ ....
ಇಬ್ಬರು : ಲ ಲ್ಲ ಲ ಲಾ ಲ....ಲ ಲ್ಲ ಲ ಲಾ ಲ........
            ಕಿಲಾಡಿ ಜೋಡಿ......ಕಿಲಾಡಿ ಜೋಡಿ..
            ಕಿಲಾಡಿ ಜೋಡಿ......ಕಿಲಾಡಿ ಜೋಡಿ..
           ಸಮಯವ ನೋಡಿ ಸಂಚನು ಮಾಡಿ ಹಾಕುವೆವು ಮೋಡಿ
           ಸಮಯವ ನೋಡಿ ಸಂಚನು ಮಾಡಿ ಹಾಕುವೆವು ಮೋಡಿ
           ಕಿಲಾಡಿ ಜೋಡಿ...ಕಿಲಾಡಿ ಜೋಡಿ....
ಕೇಜೇ : ತೂರು ....  ಎಸ್ಪಿ : ಪಬಪ ಪಬಪ ಪಬಪ ಪಬಪ ಹೇಹೇ
ಕೆಜೆ : ಲಾಲ ಲಾಲ ಲಾಲ ಲಾಲ ಲಾಲ
ಇಬ್ಬರು : ಹ್ಹಾಹ್ಹಾ .. ಹೇಹೇಹೇ
ಎಸ್ಪಿ : ಅನ್ಯಾಯ ಮಾಡೋಲ್ಲ ಸುಳ್ಳನ್ನು ಹೇಳೋಲ್ಲ
         ಬಚ್ಚಿಟ್ಟ ಹಣವನ್ನು ನಾವೆಂದು ಉಳಿಸೋಲ್ಲ
         ದೋಚಿದ್ದು ಬಾಚಿದ್ದು ಎಲ್ಲಾ fifty...fifty.....
ಕೆಜೆ : ಲ..ಲ್ಲ...ಲ...ಲ........
         ಈ ಮನದ ಆಸೆಯೆ ಆ ಮನದ ಆಸೆಯು
         ಈ ಕೈಯ್ಯ ಭಾಷೆಯೆ ಆ ಕೈಯ್ಯ ಭಾಷೆಯು
        ಎಂದೆಂದು ಹೀಗೆಯೆ ನಮ್ಮ ನೀತಿಯು
ಇಬ್ಬರು : ಹಗಲೇನು ಇರುಳೇನು ಅಗಲದು ಈ ಜೋಡಿ.........
           ಕಿಲಾಡಿ ಕಿಲಾಡಿ ಕಿಲಾಡಿ ಜೋಡಿ...ಕಿಲಾಡಿ ಜೋಡಿ....ಹುರ್ರಾರ್ ಹ್ಹಾ..
ಕೆಜೆ :ನುಡಿಯಲ್ಲಿ ಜಾಣರು ನಡೆಯಲ್ಲಿ ಜಾಣರು
        ಕೃತಿಯಲ್ಲಿ ಜಾಣರು ಯಾತಕ್ಕು ಸೋಲರು
       ನಮ್ಮಾ ಸಮಾನರು ಎಲ್ಲೂ ಕಾಣರು
ಎಸ್ಪಿ : ಲ..ಲ್ಲ. ...ಲ...ಲ್ಲ....ಲ.ಲ...
         ಮೋಸಕ್ಕೆ ಮೋಸವು ರೋಷಕ್ಕೆ ರೋಷವು
         ದ್ವೇಷಕ್ಕೆ ದ್ವೇಷವು ಸ್ನೇಹಕ್ಕೆ ಸ್ನೇಹವು ನಮ್ಮಾ ಮಂತ್ರವು
ಇಬ್ಬರು : ಗುಡುಗೇನೂ ಸಿಡಿಲೇನೋ ನಡುಗದು ಈ ಜೋಡಿ       
            ಕಿಲಾಡಿ ಕಿಲಾಡಿ  ಕಿಲಾಡಿ ಜೋಡಿ.ಜೋಡಿ.ಜೋಡಿ.ಜೋಡಿ.
            ಕಿಲಾಡಿ ಜೋಡಿ.ಜೋಡಿ.ಜೋಡಿ.ಜೋಡಿ.
            ಕಿಲಾಡಿ ಜೋಡಿ.ಕಿಲಾಡಿ ಜೋಡಿ.
           ಸಮಯವ ನೋಡಿ ಸಂಚನು ಮಾಡಿ ಹಾಕುವೆವು ಮೋಡಿ
           ಕಿಲಾಡಿ ಜೋಡಿ...ಅಹ್ಹಹ್ಹಹ್ಹಾ ಕಿಲಾಡಿ ಜೋಡಿ....
*********************************************************************************

ಕೃಷ್ಣಸ್ವಾಮಿ..ರಾಮಸ್ವಾಮಿ..

ಸಾಹಿತ್ಯ: ಚಿ. ಉದಯಶಂಕರ್  
ಸಂಗೀತ: ರಾಜನ್ ನಾಗೇಂದ್ರ 
ಗಾಯನ: ಎಸ್.ಪಿ.ಬಿ & ಎಸ್.ಜಾನಕಿ  

ಹೆಣ್ಣು : ಕೃಷ್ಣಸ್ವಾಮಿ........   ಗಂಡು : yes madam 
ಹೆಣ್ಣು : ರಾಮಸ್ವಾಮಿ.....    ಗಂಡು: ಏನ್ madam
ಹೆಣ್ಣು :  you must obey me....follow me.....
ಹೆಣ್ಣು : ಕೃಷ್ಣಸ್ವಾಮಿ........   ಗಂಡು : yes madam 
ಹೆಣ್ಣು : ರಾಮಸ್ವಾಮಿ.....    ಗಂಡು: ಹೇಳಿ madam
ಹೆಣ್ಣು : ಕೆಲಸವೇನು ನಾ ಹೇಳುವೆ ಎಚ್ಚರ ತಪ್ಪಿ ನೀವ್ ನಡೆದಾಗ
          ಸಂಬಳವಿಲ್ಲ ಉಂಬಳವಿಲ್ಲ ಲಾಯದಲ್ಲೆ ಬಿದ್ದು ಸಾಯಬೇಕು......
ಗಂಡು : ಕೃಷ್ಣಸ್ವಾಮಿ.....ಯಾ...ಯಾ... ರಾಮಸ್ವಾಮಿ.....ಹೋ...ಹೋ
           ಕೆಲಸವನ್ನೂ ಮಾಡೋಣವೇ.....ಕೆಲಸವನ್ನೂ ಮಾಡೋಣವೇ..
ಹೆಣ್ಣು : ಬೆಳ್ಳಿ ಮಿಂಚು ಹೊಳೆಯೋ ಹಾಗೆ ಮಾಲೀಶ್ ಮಾಡಬೇಕು
          ಒಳ್ಳೆ ಹುರುಳಿ ನೋಡಿ ತಂದು ಬೈಸಿ ತಿನ್ಸಬೇಕು......
          ಬೆಳ್ಳಿ ಮಿಂಚು ಹೊಳೆಯೋ ಹಾಗೆ ಮಾಲೀಶ್ ಮಾಡಬೇಕು (ಓಕೇ  ಓಕೇ )
          ಒಳ್ಳೆ ಹುರುಳಿ ನೋಡಿ ತಂದು ಬೈಸಿ ತಿನ್ಸಬೇಕು.....(ಡೆಫೆನೆಟ್ಲಿ ).
          ಹೇಳಿದಂತೆ ಮಾಡಿ ಆಗ ನೀವು ನೋಡಿ ....
          ದುಡಿಯೋತನಕ ಕೆಲಸ ಖಾಯಂ pension ಕೊಡಲ್ಲ......
ಗಂಡು : ರಮ್ ಪಮ್ ಪಮ್ ಪಮ್ ಪಮ್.......ರಮ್ ಪಮ್ ಪಮ್.....
            ಮುಂಜಾವಿಂದ ಸಂಜೆವರೆಗು ಮಾಲೀಷ್ ಮಾಡ್ತೀವಿ
            ಒಳ್ಳೆ ಹುರುಳಿ ನೋಡಿ ತಂದು ಬೈಸಿ ಬಿಸಾಕ್ತೀವಿ....
            advance ಕೇಳೊದಿಲ್ಲ bonus ಬೇಡೋದಿಲ್ಲ
           ಕೆಲಸ ಕಾಯಂ ಮಾಡಿ ಸಾಕು ಬಡ್ತಿ ಬೇಕಿಲ್ಲ................
ಹೆಣ್ಣು : ಕೃಷ್ಣಸ್ವಾಮಿ........   ಗಂಡು : ಸ್ವಾಮಿ madam 
ಹೆಣ್ಣು : ರಾಮಸ್ವಾಮಿ.....    ಗಂಡು: ರೆಡಿ  madam
ಹೆಣ್ಣು :  ಕೆಲಸವೇನು ನಾ ಹೇಳುವೆ
ಗಂಡು : ಕೃಷ್ಣಸ್ವಾಮಿ.....ಯಾ...ಯಾ... ರಾಮಸ್ವಾಮಿ.....ಹೋ...ಹೋ
           ಕೆಲಸವನ್ನೂ ಮಾಡೋಣವೇ.....ಕೆಲಸವನ್ನೂ ಮಾಡೋಣವೇ..
ಗಂಡು : ಲಾಲಾಲಾಲಾಲಾಲಾಲಾಲಾಲಾಲಾಲಾಲಾಲಾಲಾಲಾ 
ಹೆಣ್ಣು : ಅಲ್ಲಿ ಇಲ್ಲಿ ಬಿದ್ದ ಲದ್ದಿ ನೀವೇ ಬಾಚಬೇಕು...
         ಸೊಳ್ಳೆ ಗಿಳ್ಳೆ ಬಾರದಂತೆ ಲಾಯ ತೊಳೆಯಬೇಕು.....
         ಅಲ್ಲಿ ಇಲ್ಲಿ ಬಿದ್ದ ಲದ್ದಿ ನೀವೇ ಬಾಚಬೇಕು...(ಸಾಕಲ್ಲಿ )
         ಸೊಳ್ಳೆ ಗಿಳ್ಳೆ ಬಾರದಂತೆ ಲಾಯ ತೊಳೆಯಬೇಕು. (ನೋ ಪ್ರಾಬ್ಲಮ್)
        ಬಾಲ ನೀವಬೇಕು...ಲಾಳ ಹೊಡೆಯಬೇಕು....
        ರಾತ್ರಿ ಹಗಲು ಮೈಯ್ಯ ಮುರಿದು ಕೆಲಸ ಮಾಡಬೇಕು.....
ಗಂಡು : ರಮ್ ಪಮ್ ಪಮ್ ಪಮ್ .....ರಮ್ ಪಮ್ ಪಮ್.....
          ಲದ್ದಿ ಏನು ಗಿದ್ದಿ ಏನು ಬಾಚಿ ತಳ್ತೀವಿ
          ಚಿಗಟ ಗಿಗಟ ಏನೇ ಇದ್ರೂ ಬಡದು ಬಿಸಾಕ್ತೀವಿ....
          ಮಾಡೋ ಕೆಲ್ಸ ನೋಡಿ ಆಮೇಲ್ ಮಾತನಾಡಿ
         ನೀವೇ ಮೆಚ್ಚುವಂತ ಜೋಡಿ...ಕಿಲಾಡಿ ಜೋಡಿ.......
ಗಂಡು : ಕೃಷ್ಣಸ್ವಾಮಿ.....ಯಾ...ಯಾ... ರಾಮಸ್ವಾಮಿ.....ಹೋ...ಹೋ
           ಕೆಲಸವನ್ನೂ ಮಾಡೋಣವೇ.....ಕೆಲಸವನ್ನೂ ಮಾಡೋಣವೇ..
ಗಂಡು : ಕೃಷ್ಣಸ್ವಾಮಿ.....ಯಾ...ಯಾ... ರಾಮಸ್ವಾಮಿ.....ಹೋ...ಹೋ
           ಲಲಲಲ ಲಲಲಲ ಲಲಲಲ ಲಲಲಲ ಲಲಲಲ
*********************************************************************************

ನಾಚಿಕೆ ಇನ್ನೇಕೆ ಅಂಜಿಕೆ ಇಲ್ಲೇಕೆ ?

ಸಾಹಿತ್ಯ: ಚಿ ಉದಯಶಂಕರ್  
ಸಂಗೀತ: ರಾಜನ್-ನಾಗೇಂದ್ರ  
ಗಾಯನ: ಎಸ್.ಪಿ.ಬಾಲಸುಬ್ರಹ್ಮಣ್ಯಂ, ಎಸ್.ಜಾನಕಿ

ಗಂಡು : ಹೋ..    ಹೆಣ್ಣು : ಓ...
ಗಂಡು : ಹೋ..    ಹೆಣ್ಣು : ಓ...
ಗಂಡು : ಹೋ..    ಹೆಣ್ಣು : ಓ...
ಗಂಡು : ಹೋ..    ಹೆಣ್ಣು : ಓ...
ಗಂಡು : ಹೋ..    ಹೆಣ್ಣು : ಓ...
ಗಂಡು : ಹೋ..    ಹೆಣ್ಣು : ಓ...
ಗಂಡು : ಹೋ..    ಹೆಣ್ಣು : ಓ...
ಗಂಡು : ನಾಚಿಕೆ ಇನ್ನೇಕೆ ಅಂಜಿಕೆ ಇಲ್ಲೇಕೆ ನಾನಿಲ್ಲಿ ಇರುವಾಗ
           ನಾಚಿಕೆ ಇನ್ನೇಕೆ ಅಂಜಿಕೆ ಇಲ್ಲೇಕೆ ನಾನಿಲ್ಲಿ ಇರುವಾಗ
ಹೆಣ್ಣು : ಮಾತನೂ ನಿಲ್ಲಿಸು ಸುಮ್ಮನೇ ಪ್ರೀತಿಸು....ಪ್ರೀತಿಸು...ಪ್ರೀತಿಸು...ಪ್ರೀತಿಸು... .
ಗಂಡು : Kiss Me Kiss Me Kiss Me Kiss Me.............
ಹೆಣ್ಣು : ನಾಚಿಕೆ     ಗಂಡು : ಇನ್ನೇಕೆ
ಹೆಣ್ಣು : ಅಂಜಿಕೆ     ಗಂಡು : ಹ್ಹಹ್ಹಹ್ಹ .. ಇಲ್ಲೇಕೆ  ನಾನಿಲ್ಲಿ ಇರುವಾಗ
ಗಂಡು : ಇಂದು ನಿನ್ನಾಸೆ ಹೆಚ್ಚಾಗಿ ನಾನು ನಿನ್ನಿಂದ ಹುಚ್ಚಾಗಿ
           ನನ್ನಾ ಕಣ್ಣಾಸೆ ನನ್ನಾ ತುಟಿಯಾಸೆ ಅತಿಯಾಗಿ ನಾ ಸೋತು ಹೋದೆ....
ಹೆಣ್ಣು : ಇಂದು ನಿನ್ನನ್ನು ಕಂಡಾಗ ಏಕೋ ನನ್ನಲ್ಲಿ ಆವೇಗ
          ಮೈಯ್ಯಿ ಮೈಯ್ಯನ್ನು ಸೋಕಿ ನಿಂತಾಗ ಎದೆಯಲ್ಲಿ ನೂರಾರು ರಾಗ......
          I love u... 
ಗಂಡು : I love u..  ಹೆಣ್ಣು : ..I love u......)
ಹೆಣ್ಣು : ಹೋ..    ಗಂಡು : ಓ...
ಹೆಣ್ಣು : ಹೋ..    ಗಂಡು : ಓ...
ಹೆಣ್ಣು : ಹೋ..    ಗಂಡು : ಓ...
ಹೆಣ್ಣು : ಹೋ..    ಗಂಡು : ಓ...
ಹೆಣ್ಣು : ಹೋ..    ಗಂಡು : ಓ...
ಹೆಣ್ಣು : ಹೋ..    ಗಂಡು : ಓ...
ಹೆಣ್ಣು : ಹೋ..    ಗಂಡು : ಓ...
ಹೆಣ್ಣು : ಆತುರ ಇನ್ನೇಕೆ ಕಾತರ ಇಲ್ಲೇಕೆ ನಾನಿಲ್ಲಿ ಇರುವಾಗ
ಗಂಡು : ಹೇ...ಪ್ರೀತಿಗೆ ಸೋತೆನು ನನ್ನನೇ ಮರೆತೆನು.......
            ಹೇ..... ಪ್ರೀತಿಗೆ ಸೋತೆನು ನನ್ನನೇ ಮರೆತೆನು....ಮರೆತೆನು. ಮರೆತೆನು....ಮರೆತೆನು.......
ಗಂಡು : ಆತುರ   ಹೆಣ್ಣು : ಇನ್ನೇಕೆ
ಗಂಡು : ಕಾತರ   ಹೆಣ್ಣು : ಇಲ್ಲೇಕೆ ನಾನಿಲ್ಲಿ ಇರುವಾಗ
ಕೋರಸ್ : ಓಓಓಓಓಓಓ ಓಓಓಓಓಓಓ
ಗಂಡು : ಸಾಕು ಸಾಕೆಂಬ ಮಾತಿಲ್ಲ ಏಕೆ ಹೀಗೆಂದು ಗೊತ್ತಿಲ್ಲ
           ಇನ್ನೂ ಬೇಕೆಂಬ ಆಸೆ ಮೈತುಂಬಿ ನಿಂತಲ್ಲೆ ನಿಲಲಾರೆನಲ್ಲ.....
ಹೆಣ್ಣು : ತಾಳು ತಾಳೀಗ ಇಲ್ಲಲ್ಲ ಸೇರೋ ಆಕಾಲ ಬಂದಿಲ್ಲ
          ಇಂತ ಹಗಲಲ್ಲಿ ಹೀಗೆ ದಾರೀಲಿ ಕಂಡೋರು ನಗಬಾರದಲ್ಲ......
ಗಂಡು : I love u  ಹೆಣ್ಣು : I love u....ಗಂಡು : I love u......
ಗಂಡು : ಹೋ..    ಹೆಣ್ಣು : ಓ...
ಗಂಡು : ಹೋ..    ಹೆಣ್ಣು : ಓ...
ಗಂಡು : ಹೋ..    ಹೆಣ್ಣು : ಓ...
ಗಂಡು : ಹೋ..    ಹೆಣ್ಣು : ಓ...
ಗಂಡು : ಹೋ..    ಹೆಣ್ಣು : ಓ...
ಗಂಡು : ಹೋ..    ಹೆಣ್ಣು : ಓ...
ಗಂಡು : ಹೋ..    ಹೆಣ್ಣು : ಓ...
ಗಂಡು : ನಾಚಿಕೆ ಇನ್ನೇಕೆ ಅಂಜಿಕೆ ಇಲ್ಲೇಕೆ ನಾನಿಲ್ಲಿ ಇರುವಾಗ
ಹೆಣ್ಣು : ಮಾತನು ನಿಲ್ಲಿಸು ಸುಮ್ಮನೇ ಪ್ರೀತಿಸು.
ಇಬ್ಬರು : ಪ್ರೀತಿಸು....ಪ್ರೀತಿಸು...ಪ್ರೀತಿಸು
ಗಂಡು : ಕಿಸ್ ಮಿ ಕಿಸ್ ಮಿ ಕಿಸ್ ಮಿ ಕಿಸ್ಸ್ ಮಿ..
           ಕಿಸ್ ಮಿ ಕಿಸ್ ಮಿ ಕಿಸ್ ಮಿ ಕಿಸ್ಸ್ ಮಿ
*********************************************************************************

ಆಡಬೇಕು ಕರಾಟೆ ಆಡಬೇಕು

ಸಾಹಿತ್ಯ: ಚಿ ಉದಯಶಂಕರ್  
ಸಂಗೀತ: ರಾಜನ್-ನಾಗೇಂದ್ರ  
ಗಾಯನ: ಎಸ್.ಪಿ.ಬಾಲಸುಬ್ರಹ್ಮಣ್ಯಂ

ಆ....ಅ.ಅ.ಅ.ಅ............ಆ....ಆ........   ಊ ಊ......ಆ............
ಆಡಬೇಕು ಊ...... ಆ ಆ.....
ಆಡಬೇಕು ಊ.....ಆಡಬೇಕು ಊ ಕರಾಟೆ ಆಡಬೇಕು...
ಎಡಬಿಡದೆ ಊ ಊ....   ನಡೆನುಡಿಯ ಆ...ಆ.....
ಕೆರಳಿಸುವ ಊ ಊ....   ಈ ಕಲೆಯ....ಆ..ಆ....
ನೋಡಬೇಕು .ನೋಡಿ ಕಲಿಯಬೇಕು....
ಸಿಂಹ ನಾದಕೆ....ಸಿಡಿಲ ತಾಳಕೆ
ಸಿಂಹ ನಾದಕೆ....ಸಿಡಿಲ ತಾಳಕೆ
ನಡೆಯಬೇಕು.....ಸಿಡಿಯಬೇಕು...ಊ...... ಆ ಆ.....
ಆಡಬೇಕು ಊ ಕರಾಟೆ ...ಆಡಬೇಕು.....
ಹೊಡೆಯಲು ಬೀಸು ಮಿಂಚಿನಂತೆ...
ಹಿಡಿಯಲು ತೋಳು ಕಂಚಿನಂತೆ.....
ಹೊಡೆಯಲು ಬೀಸು ಮಿಂಚಿನಂತೆ.....ಊ...ಹಾ.....
ಹಿಡಿಯಲು ತೋಳು ಕಂಚಿನಂತೆ.....ಹಾ...ಹಾ....
ಮಸೆಯಲು ಕತ್ತಿ ಅಂಚಿನಂತೆ.....ಊ...ಆ....
ತಡೆಯಲು ಕಾದ ಹೆಂಚಿನಂತೆ....ಹಾ..ಹಾ...
ಎಡ ಬಲ ಕೂಟ ಕುಹಕದಾ ನೋಟ ಅಡಚಣೆ ಮುರಿಯದ ಪಾಟವಾ
ಅನಾದಿಕಾಲದ ಆಟವಾ............
ಆಡಬೇಕು ಊ...... ಆ ಆ.....
ಆಡಬೇಕು ಊ.....ಆಡಬೇಕು ಊ ಕರಾಟೆ ಆಡಬೇಕು...
ಸಿಂಹ ನಾದಕೆ....ಸಿಡಿಲ ತಾಳಕೆ
ನಡೆಯಬೇಕು.....ಸಿಡಿಯಬೇಕು...ಊ...... ಆ ಆ.....
ಆಡಬೇಕು ಊ ಕರಾಟೆ ...ಆಡಬೇಕು.....
ವೈರಿಗೆ ಸಿಂಹ ಸ್ವಪ್ನವಾಗಿ....ಊ ಆ....
ಬಾಳಿಗೆ ಅಭಯ ಅಸ್ತ್ರವಾಗಿ ಆ..ಆ...
ವೈರಿಗೆ ಸಿಂಹ ಸ್ವಪ್ನವಾಗಿ....ಊ ಆ....
ಬಾಳಿಗೆ ಅಭಯ ಅಸ್ತ್ರವಾಗಿ ಆ..ಆ...
ತಿಳಿದರೆ ಸುಲಭ ತಂತ್ರವಾಗಿ.....ಊ...ಆ....
ಕಲಿತರೆ ಕಲೆಯ ಮಂತ್ರವಾಗಿ...ಆ...ಆ...
ಹುರುಪನು ತರುವ ಹರುಷವ ಕೊಡುವ
ಗೆಲುವನು ಕಲಿಸುವ ಪಾಟವಾ....
ಅನಾದಿಕಾಲದ ಆಟವಾ..........
ಆಡಬೇಕು ಊ.
ಆಡಬೇಕು ಊ...... ಆ ಆ.....
ಆಡಬೇಕು ಊ.....ಆಡಬೇಕು ಊ ಕರಾಟೆ ಆಡಬೇಕು...
*********************************************************************************

ಗಿರಿಕನ್ಯೆ (1977)

ನಗುನಗುತಾ ನೀ ಬರುವೆ

ಚಲನ ಚಿತ್ರ: ಗಿರಿಕನ್ಯೆ (1977)
ನಿರ್ದೇಶನ: ಬಿ. ದೊರೈರಾಜ್ 
ಸಾಹಿತ್ಯ : ಚಿ.ಉದಯಶಂಕರ್ 
ಸಂಗೀತ : ರಾಜನ್ - ನಾಗೇಂದ್ರ 
ಗಾಯನ : ಡಾ.ರಾಜಕುಮಾರ್ ಮತ್ತು ಎಸ್.ಜಾನಕಿ
ನಟನೆ: ಡಾ.ರಾಜಕುಮಾರ್, ಜಯಮಾಲಾ 

ಎಸ್.ಜಾನಕಿ:   ನಗುನಗುತಾ ನೀ ಬರುವೆ
                     ನಗುನಗುತಾ ನೀ ಬರುವೆ ನಗುವಿನಲೆ ಮನಸೆಳೆವೆ
                     ಕುಣಿಸಲು ನೀನು ಕುಣಿಯುವೆ ನಾನು  ಮರೆಯುವೆ ಜಗವನ್ನೇ
ಡಾ.ರಾಜ :  ಆ...ಆ...ನಗುನಗುತಾ ನೀ ಬರುವೆ ನಗುವಿನಲೆ ಮನಸೆಳೆವೆ
ಎಸ್.ಜಾನಕಿ:  ನಗುನಗುತಾ ನೀ ಬರುವೆ     ಡಾ.ರಾಜ :  ಹಾಂ
ಎಸ್.ಜಾನಕಿ: ನಗುವಿನಲೆ ಮನಸೆಳೆವೆ        ಡಾ.ರಾಜ : ಹೌದು
ಡಾ.ರಾಜ :  ನಗುವೇ ಮಾತಾಗಿ ಮಾತೇ ಮುತ್ತಾಗಿ  ಆ ಮುತ್ತೆ ಹೆಣ್ಣಾಗಿದೆ
                 ಹೆಣ್ಣೇ ಹೂವಾಗಿ ಹೂವೇ ಹಣ್ಣಾಗಿ ಹಣ್ಣು ಕಣ್ಣಾ ತುಂಬಿದೆ
ಎಸ್.ಜಾನಕಿ:  ಒಲವೇ ಗೆಲುವಾಗಿ ಗೆಲುವೇ ಚೆಲುವಾಗಿ  ಚೆಲುವೆಲ್ಲ ನಿನ್ನಲ್ಲಿದೆ
                    ನಿನ್ನಾ ರೂಪಲ್ಲಿ ನಿನ್ನಾ ಮನದಲ್ಲಿ  ಇಂದೂ ನಾನೂ ಬೆರೆತೆ
ಡಾ.ರಾಜ : ನೀನೇ ನಾನಾಗಿ ನಾನೇ ನೀನಾಗಿ ನನ್ನೇ ನಾ ಮರೆತೆ
ಎಸ್.ಜಾನಕಿ: ನಗುನಗುತಾ ನೀ ಬರುವೆ ನಗುವಿನಲೆ ಮನಸೆಳೆವೆ
ಡಾ.ರಾಜ : ನಗುನಗುತಾ ನೀ ಬರುವೆ ನಗುವಿನಲೆ ಮನಸೆಳೆವೆ  ಆ........ಆ.......
ಎಸ್.ಜಾನಕಿ: ಏಕೋ ಸಂಕೋಚ ಏನೋ ಸಂತೋಷ ನಿಂತಲ್ಲಿ ನಿಲಲಾರೆನು     ಡಾ.ರಾಜ : ನಿಜವಾಗಿ
ಎಸ್.ಜಾನಕಿ:  ನಿನ್ನಾ ಮಾತಿದ ಏನೋ ಆನಂದ ಎಂದೂ ನಿನ್ನಾ ಬಿಡೆನು
ಡಾ.ರಾಜ :  ಊರಾ ಮಾತೇಕೆ ಯಾರಾ ಹಂಗೇಕೆ ಬಾ ಇಲ್ಲಿ ನೀ ಮೆಲ್ಲಗೆ
                 ಯಾರೂ ಇಲ್ಲಿಲ್ಲ ನಾವೇ ಇಲ್ಲೆಲ್ಲ ಬೇಗಾ ಬಾ ಬಾ ಬಳಿಗೆ
ಎಸ್.ಜಾನಕಿ: ಸೋತೆ ನಾನೀಗ ಏನೋ ಅವೇಗ  ಇನ್ನು ನಾ ತಾಳೆನು
ಡಾ.ರಾಜ : ನಗುನಗುತಾ ನೀ ಬರುವೆ ನಗುವಿನಲೆ ಮನಸೆಳೆವೆ
ಎಸ್.ಜಾನಕಿ: ಕುಣಿಸಲು ನೀನು ಕುಣಿಯುವೆ ನಾನು ಮರೆಯುವೆ ಜಗವನ್ನೇ
ಡಾ.ರಾಜ :  ನಗುನಗುತಾ ನೀ ಬರುವೆ
ಎಸ್.ಜಾನಕಿ: ನಗುವಿನಲೆ ಮನಸೆಳೆವೆ
ಡಾ.ರಾಜ : ನಗುನಗುತಾ ನೀ ಬರುವೆ
ಎಸ್.ಜಾನಕಿ: ನಗುವಿನಲೆ ಮನಸೆಳೆವೆ
*********************************************************************************

ಥೈ ಥೈ ಥೈ ಬಂಗಾರಿ

ಸಾಹಿತ್ಯ : ಚಿ.ಉದಯಶಂಕರ್  
ಸಂಗೀತ : ರಾಜನ್-ನಾಗೇಂದ್ರ  
ಗಾಯನ : ಡಾ.ರಾಜಕುಮಾರ್

ಥೈ ಥೈ ಥೈ ಬಂಗಾರಿ  ಅಲಲ  ಸೈ ಸೈ ಸೈ ಎನು ಸಿಂಗಾರಿ
ಥೈ ಥೈ ಥೈ ಬಂಗಾರಿ  ಸೈ ಸೈ ಸೈ ಎನು ಸಿಂಗಾರಿ
ಬೆಟ್ಟಾದ ಮೇಲಿಂದ ಓಡೋಡಿ ಬoದoಥಾ ಕಾವೇರಿ
ವಯ್ಯಾರಿ...! ಆಡಿ ನಲಿನಲಿ ಮಯೂರಿ ಆಡಿ ನಲಿನಲಿ ಮಯೂರಿ
ಥೈ ಥೈ ಥೈ ಬಂಗಾರಿ  ಸೈ ಸೈ ಸೈ ಎನು ಸಿಂಗಾರಿ
ಥೈ ಥೈ ಥೈ ಬಂಗಾರಿ
ಕಾನನದಾ ದೇವತೆಯಂತೆ ಬಂದಿರುವೆ ಎದುರಲ್ಲಿ
ಜೇನಾಗಿ ನೀ ತುಂಬಿರುವೆ ನನ್ನೆದೆಯಾ ಹೂವಲ್ಲಿ
ಮೀನಾಗಿ ಆಡುತಲಿರುವೆ ಮನಸೆಂಬ ಮಡುವಲ್ಲಿ
ಮಿಂಚಾಗಿ ಹರಿದಾಡಿರುವೆ ಈ ನನ್ನ ಮೈಯಲ್ಲಿ
ಈ ನನ್ನ ಮೈಯಲ್ಲಿ
ಥೈ ಥೈ ಥೈ ಬಂಗಾರಿ ಸೈ ಸೈ ಸೈ ಎನು ಸಿಂಗಾರಿ
ಥೈ ಥೈ ಥೈ ಬಂಗಾರಿ
ಹಾರಾಡೊ ಹಕ್ಕಿಗಳಲ್ಲಿ ಅರಗಿಳಿಯೇ ಅoದವು
ನಾ ಕಂಡ ಹೆಣ್ಣುಗಳಲ್ಲಿ ಚೆಲುವೆ ನೀ ಚೆಂದವು ಆ.......ಅಹ......ಅಹ.....ಓಹೋಯ್
ಮುಳ್ಳೆಲ್ಲ ಹೂವಿನ ಹಾಗೆ ನಿನ್ನೊಡನೆ ನಡೆವಾಗ
ಉರಿಬಿಸಿಲು ಹುಣ್ಣಿಮೆಯಂತೆ ಹೆಣ್ಣೇ ನೀ ನಗುವಾಗ
ಹೆಣ್ಣೇ ನೀ ನಗುವಾಗ
ಥೈ ಥೈ ಥೈ ಬಂಗಾರಿ ಸೈ ಸೈ ಸೈ ಎನು ಸಿಂಗಾರಿ
ಥೈ ಥೈ ಥೈ ಬಂಗಾರಿ ಸೈ ಸೈ ಸೈ ಎನು ಸಿಂಗಾರಿ
ಬೆಟ್ಟಾದ ಮೇಲಿಂದ ಓಡೋಡಿ ಬoದoಥಾ ಕಾವೇರಿ
ವಯ್ಯಾರಿ...! ಆಡಿ ನಲಿನಲಿ ಮಯೂರಿ ಆಡಿ ನಲಿನಲಿ ಮಯೂರಿ 
ಆಡಿ ನಲಿನಲಿ ಮಯೂರಿ ಆಡಿ ನಲಿನಲಿ ಮಯೂರಿ
*********************************************************************************

ಏನೆಂದೂ ನಾ ಹೇಳಲಿ

ಸಾಹಿತ್ಯ : ಚಿ.ಉದಯಶಂಕರ್  
ಸಂಗೀತ : ರಾಜನ್-ನಾಗೇಂದ್ರ  
ಗಾಯನ : ಡಾ.ರಾಜಕುಮಾರ್

ಆ........ಆ.........ಆ.........ಏನೆಂದೂ ನಾ ಹೇಳಲಿ.. ಮಾನವನಾಸೆಗೆ ಕೊನೆಯೆಲ್ಲಿ
ಕಾಣೋದೆಲ್ಲ ಬೇಕು ಎಂಬ ಹಠದಲ್ಲಿ  ಒಳ್ಳೇದೆಲ್ಲ ಬೇಕು ಎಂಬ ಛಲದಲ್ಲಿ
ಯಾರನ್ನೂ ಪ್ರೀತಿಸನು ಮನದಲ್ಲಿ  ಏನೊಂದೂ ಬಾಳಿಸನು ಜಗದಲ್ಲಿ
ಯಾರನ್ನೂ ಪ್ರೀತಿಸನು ಮನದಲ್ಲಿ  ಏನೊಂದೂ ಬಾಳಿಸನು ಜಗದಲ್ಲಿ
ಏನೆಂದೂ ನಾ ಹೇಳಲಿ.....ಆ........ಆ. ಮಾನವನಾಸೆಗೆ ಕೊನೆಯೆಲ್ಲಿ
ಜೇನು ಗಳೆಲ್ಲಾ ಅಲೆಯುತ ಹಾರಿ  ಕಾಡೆಲ್ಲ ಕಾಡೆಲ್ಲ ಕಾಡೆಲ್ಲ
ಹನಿಹನಿ ಜೇನು ಸೇರಿಸಲೇನು  ಬೇಕೂ ಎಂದಾಗ ತನದೆನ್ನುವ
ಕೆಸರಿನ ಹೂವು ವಿಷದಾ ಹಾವು  ಭಯವಿಲ್ಲ ಭಯವಿಲ್ಲ ಭಯವಿಲ್ಲ
ಚೆಲುವಿನದೆಲ್ಲ ರುಚಿಸುವುದೆಲ್ಲ ಕಂಡು ಬಂದಾಗ ಬೇಕೆನ್ನುವ
ಏನೆಂದೂ ನಾ ಹೇಳಲಿ ಆ........ಆ. ಮಾನವನಾಸೆಗೆ ಕೊನೆಯೆಲ್ಲಿ
ಪ್ರಾಣಿಗಳೇನು ಗಿಡಮರವೇನು ಬಿಡಲಾರ ಬಿಡಲಾರ ಬಿಡಲಾರ
ಬಳಸುವನೆಲ್ಲ ಉಳಿಸುವುದಿಲ್ಲ ತನ್ನ ಹಿತಕಾಗಿ ಹೋರಾಡುವ
ನುಡಿಯುವುದೊಂದು ನಡೆಯುವುದೊಂದು ಎಂದೆಂದೂ ಎಂದೆಂದೂ ಎಂದೆಂದೂ
ಪಡೆಯುವುದೊಂದು ಕೊಡುವುದುವೊoದು ಸ್ವಾರ್ಥಿ ತಾನಾಗಿ ಮೆರೆದಾಡುವ
ಏನೆಂದೂ ನಾ ಹೇಳಲಿ ಆ........ಆ. ಮಾನವನಾಸೆಗೆ ಕೊನೆಯೆಲ್ಲಿ
ಕಾಣೋದೆಲ್ಲ ಬೇಕು ಎಂಬ ಹಠದಲ್ಲಿ ಒಳ್ಳೇದೆಲ್ಲ ಬೇಕು ಎಂಬ ಛಲದಲ್ಲಿ
ಯಾರನ್ನೂ ಪ್ರೀತಿಸನು ಮನದಲ್ಲಿ  ಏನೊಂದೂ ಬಾಳಿಸನು ಜಗದಲ್ಲಿ
ಯಾರನ್ನೂ ಪ್ರೀತಿಸನು ಮನದಲ್ಲಿ  ಏನೊಂದೂ ಬಾಳಿಸನು ಜಗದಲ್ಲಿ
ಏನೆಂದೂ ನಾ ಹೇಳಲಿ ಆ........ಆ. ಮಾನವನಾಸೆಗೆ ಕೊನೆಯೆಲ್ಲಿ
*********************************************************************************

ಕೂಡಿ ಬಾಳೋಣ ಎಂದೆಂದೂ

ರಚನೆ: ಚಿ. ಉದಯಶಂಕರ್  
ಸಂಗೀತ: ರಾಜನ್ ನಾಗೇಂದ್ರ 
ಗಾಯಕ: ಡಾ.ರಾಜ, ಎಸ್. ಜಾನಕಿ, ಎಸ್. ಪಿ. ಬಾಲು

ರಾಜ: ಕೂಡಿ ಬಾಳೋಣ ಇನ್ನೆಂದು ಸೇರಿ ದುಡಿಯೋಣ
         ದುಡಿಮೆಯೆ ಬಡತನ ಅಳಿಸಲು ಸಾಧನ
         ಕೂಡಿ ಬಾಳೋಣ ಇನ್ನೆಂದು ಸೇರಿ ದುಡಿಯೋಣ
ಎಸ್.ಪಿ: ಎಂದೂ ನಾವು ಒಂದೆಂದು ಕೂಗಿ ಹೇಳುವ
            ಸ್ನೇಹ ನಮ್ಮ ಬಲವೆಂದು ಎಲ್ಲಾ ಹಾಡುವ
ಕೋ : ಎಂದೂ ನಾವು ಒಂದೆಂದು ಕೂಗಿ ಹೇಳುವ
        ಸ್ನೇಹ ನಮ್ಮ ಬಲವೆಂದು ಎಲ್ಲ ಹಾಡುವ
        ಕೂಡಿ ಬಾಳೋಣ ಇನ್ನೆಂದು ಸೇರಿ ದುಡಿಯೋಣ
        ಕೂಡಿ ಬಾಳೋಣ ಇನ್ನೆಂದು ಸೇರಿ ದುಡಿಯೋಣ
ಎಸ್.ಪಿ: ರೋಷವು ಎಂದು ಶಾಂತಿಯನ್ನು ನೀಡುವುದಿಲ್ಲ
        ದ್ವೇಷವು ಎಂದು ಸುಖವನ್ನು ಕೊಡುವುದೆ ಇಲ್ಲ
        ವಿರಸ ವಿಷವು ಸುಳ್ಳಲ್ಲ
ರಾಜ: ಪ್ರೇಮದಿ ನೀನು ಎಲ್ಲಾ ಗೆಲ್ಲುವೆ
         ಸರಸದಿ ಹರುಷವ ನೀ ಪಡೆವೆ
         ಸರಸದಿ ಹರುಷವ ನೀ ಪಡೆವೆ
ಕೋ:  ಕೂಡಿ ಬಾಳೋಣ ಇನ್ನೆಂದು ಸೇರಿ ದುಡಿಯೋಣ
        ಕೂಡಿ ಬಾಳೋಣ ಇನ್ನೆಂದು ಸೇರಿ ದುಡಿಯೋಣ
ರಾಜ್:  ನೆಲವ ನಂಬಿ ಬಾಳೋರು ನಾವುಗಳೆಲ್ಲ
           ಮಳೆಯ ನಂಬಿ ಬದುಕೋದು ಇಲ್ಲಿ ಎಲ್ಲ
           ಹಸಿರೇ ಉಸಿರು ನಮಗೆಲ್ಲ
ಜಾನಕೀ : ಮೆರೆವ ಜನರ ಭೂತಾಯಿ ಮೆಚ್ಚುವುದಿಲ್ಲ
            ದುಡಿವ ಜನರ ಈ ತಾಯಿ ಮರೆಯುವುದಿಲ್ಲ
            ಮಣ್ಣೇ ಹೊನ್ನು ನಮಗೆಲ್ಲ
ರಾಜ್:   ದುಡಿಮೆಗೆ ಫಲವ ಕಂಡೇಕಾಣುವೆ
            ಬೆವರಿಗೆ ಬೆಲೆಯನು ನೀ ಪಡೆವೆ
ಕೋ :ಬೆವರಿಗೆ ಬೆಲೆಯನು ನೀ ಪಡೆವೆ
ಕೋ : ಕೂಡಿ ಬಾಳೋಣ ಇನ್ನೆಂದು ಸೇರಿ ದುಡಿಯೋಣ
         ಕೂಡಿ ಬಾಳೋಣ ಇನ್ನೆಂದು ಸೇರಿ ದುಡಿಯೋಣ
         ದುಡಿಮೆಯೆ ಬಡತನ ಅಳಿಸಲು ಸಾಧನ
         ಎಂದೂ ನಾವು ಒಂದೆಂದು ಕೂಗಿ ಹೇಳುವ
        ಎಂದೂ ನಾವು ಒಂದೆಂದು ಕೂಗಿ ಹೇಳುವ 
        ಸ್ನೇಹ ನಮ್ಮ ಬಲವೆಂದು ಎಲ್ಲಾ ಹಾಡುವ
        ಸ್ನೇಹ ನಮ್ಮ ಬಲವೆಂದು ಎಲ್ಲಾ ಹಾಡುವ
        ಕೂಡಿ ಬಾಳೋಣ ಇನ್ನೆಂದು ಸೇರಿ ದುಡಿಯೋಣ
*********************************************************************************

ಯಾರು ನೀನು ಎಂದು ನನ್ನ

ರಚನೆ: ಚಿ. ಉದಯಶಂಕರ್  
ಸಂಗೀತ: ರಾಜನ್ ನಾಗೇಂದ್ರ 
ಗಾಯಕ: ಡಾ. ರಾಜಕುಮಾರ್ 

ಯಾರು ನೀನು ಎಂದು ನನ್ನ ಕೇಳುವೆಯಲ್ಲ...
ಯಾರು ನೀನು ಎಂದು ನನ್ನ ಕೇಳುವೆಯಲ್ಲ ... ಹೆಣ್ಣೇ... 
ಯಾರ ಕೇಳು ಇಲ್ಲಿ ನೀನು ಹೇಳುವರೆಲ್ಲ
ಯಾರ ಕೇಳು ಇಲ್ಲಿ ನೀನು ಹೇಳುವರೆಲ್ಲ
ಮೊಗವು ಚೆನ್ನ, ನಗುವು ಚೆನ್ನ 
ಮೊಗವು ಚೆನ್ನ, ನಗುವು ಚೆನ್ನ 
ನುಡಿಯು ಚೆನ್ನ ನಡೆಯು ಚೆನ್ನ
ಅಂತಾರೆ ನನ್ನ ನೋಡಿ ಎಲ್ಲ ಇವನ ಗೊತ್ತಿಲ್ಲ ಅನ್ನೋವ್ರೆ ಇಲ್ಲ
ಹೇ..ಹೇ.. ಯಾರು ನೀನು ಎಂದು ನನ್ನ ಕೇಳುವೆಯಲ್ಲ...
ಯಾರೆಂದು ತಿಳಿದಾಗ, ವಿಷಯವ ಅರಿತಾಗ, ನಾಚುತ ನೀನೋಡುವೆ
ತೋಟಕೆ ಬಂದಾಗ, ನನ್ನನು ಕಂಡಾಗ, ಕಣ್ಣಲೇ ನೀ ಕಾಡುವೇ
ಕೆಲಸವು ನಿಂತಾಗ, ನೆರಳಿಗೆ ಬಂದಾಗ, ಎದುರಲಿ ನೀ ನಿಲ್ಲುವೆ
ಹಸಿರೆಲೆ ಕೈಯ್ಯಲ್ಲಿ, ಅಡಿಕೆಯು ಬಾಯಲ್ಲಿ, ಸುಣ್ಣವ ತಾ ಎನ್ನುವೇ
ಹೂ ನಗೆಯ ಚೆಲ್ಲುತಲಿ ನನ್ನೇ ಗೆಲುವೆ
ಏ ಹೇ... ಯಾರು ನೀನು ಎಂದು ನನ್ನ ಕೇಳುವೆಯಲ್ಲ
ಯಾರ ಕೇಳು ಇಲ್ಲಿ ನೀನು ಹೇಳುವರೆಲ್ಲ
ಮೊಗವು ಚೆನ್ನ, ನಗುವು ಚೆನ್ನ  ನುಡಿಯು ಚೆನ್ನ ನಡೆಯು ಚೆನ್ನ
ಅಂತಾರೆ ನನ್ನ ನೋಡಿ ಎಲ್ಲ
ಇವನ ಗೊತ್ತಿಲ್ಲ ಅನ್ನೋವ್ರೆ ಇಲ್ಲ
ಹುಣ್ಣಿಮೆ ರಾತ್ರೀಲಿ, ತಣ್ಣನೆ ಗಾಳೀಲಿ, ಬೇಸರ ನೀ ಹೊಂದುವೆ
ನೋವಲಿ ನೀ ಬೆಂದು, ಆಸರೆ ಬೇಕೆಂದು, ನನ್ನನು ನೀ ಕೂಗುವೇ
ಕಾಣದೆ ಹೋದಾಗ, ತಡೆಯದೆ ನೀನಾಗ, ಹುಡುಕುತ ಹೋಡಾಡುವೆ
ಗಾಳಿಗೆ ತೂರಾಡಿ, ಚಳಿಯಲಿ ಓಲಾಡಿ, ಮಳೆಯಲು ನೀ ಬೆವರುವೇ
ಕಂಡೊಡನೆ ತೋಳಿನಲಿ ಬಳಸೇ ಬಿಡುವೆ
ಏ ಹೇ... ಯಾರು ನೀನು ಎಂದು ನನ್ನ ಕೇಳುವೆಯಲ್ಲ
ಯಾರ ಕೇಳು ಇಲ್ಲಿ ನೀನು ಹೇಳುವರೆಲ್ಲ
ಮೊಗವು ಚೆನ್ನ, ನಗುವು ಚೆನ್ನ 
ಮೊಗವು ಚೆನ್ನ, ನಗುವು ಚೆನ್ನ ನುಡಿಯು ಚೆನ್ನ ನಡೆಯು ಚೆನ್ನ
ಅಂತಾರೆ ನನ್ನ ನೋಡಿ ಎಲ್ಲ
ಇವನ ಗೊತ್ತಿಲ್ಲ ಅನ್ನೋವ್ರೆ ಇಲ್ಲ
*********************************************************************************

Wednesday, April 3, 2019

ಗುರು ಶಿಷ್ಯರು (1981)


ದೊಡ್ಡವರೆಲ್ಲಾ ಜಾಣರಲ್ಲ

ಜಯ ಜಯ ಸಾಂಬಸದಾಶಿವ 

ದೀನಳ ಮೊರೆಯ 

ನಿನಗಾಗಿ ಎಲ್ಲ ನಿನಗಾಗಿ 

ನಾಚಿ ಓಡಿದನು ಮದನಾ 

ದೊಡ್ಡವರೆಲ್ಲ ಜಾಣರಲ್ಲ

ಗುರು ಶಿಷ್ಯರು (1981) - 
ಸಾಹಿತ್ಯ : ಚಿ. ಉದಯಶಂಕರ್ 
ಸಂಗೀತ : ಕೆ.ವಿ.ಮಹಾದೇವನ್ 
ಗಾಯನ : ಎಸ್. ಪಿ.ಬಿ.

ದೊಡ್ಡವರೆಲ್ಲ ಜಾಣರಲ್ಲ ಚಿಕ್ಕವರೆಲ್ಲ ಕೋಣರಲ್ಲ
ಗುರುಗಳು ಹೇಳಿದ ಮಾತುಗಳೆಲ್ಲ
ಎ೦ದೂ ನಿಜವಲ್ಲ ಗೆಳೆಯ ಎ೦ದು ನಿಜವಲ್ಲ
ದೊಡ್ಡವರೆಲ್ಲ ಜಾಣರಲ್ಲ
ದೊಡ್ಡ ಮನುಷ್ಯರು ದೊಡ್ಡವರಲ್ಲ... (ದೊಡ್ಡವರಲ್ಲ)
ರಾತ್ರಿಯ ಹೊತ್ತೆ ನುಗ್ಗುವರೆಲ್ಲ... (ನುಗ್ಗುವರೆಲ್ಲ)
ದೊಡ್ಡ ಮನುಷ್ಯರು ದೊಡ್ಡವರಲ್ಲ... (ದೊಡ್ಡವರಲ್ಲ)
ರಾತ್ರಿಯ ಹೊತ್ತೆ ನುಗ್ಗುವರೆಲ್ಲ... (ನುಗ್ಗುವರೆಲ್ಲ)
ಕೋಟೆಗೆ ಕನ್ನ ಹಾಕುವರಲ್ಲ  ಗ೦ಟನು ಕಟ್ಟಿ ಓಡುವರಲ್ಲ
ತಕದಿಮಿ ತಕದಿಮಿ ತಕದಿಮಿ ತಕದಿಮಿ ಬಡಿದರೆ ಆಗ ತೋಡಿ ರಾಗ ಹಾಡುವರಲ್ಲ
(ಆಆಆ..ಆಆಆ.. )
ದೊಡ್ಡವರೆಲ್ಲ ಜಾಣರಲ್ಲ  ಚಿಕ್ಕವರೆಲ್ಲ ಕೋಣರಲ್ಲ
ದೊಡ್ಡವರೆಲ್ಲ ಜಾಣರಲ್ಲ
(ಆಆಆ... ಸರಿಗಮಪದನಿಸ ಸರಿಗಮಪದನಿಸ ಪದನಿಸ ಪದನಿಸ
ಆಆಆ.. ಕುಡ್ತಕ್ಯಾಕೂ ಕುಡ್ತಕ್ಯಾಕೂ )
ಸರಿಗಮಪದನಿಸ ಹೇಳುವರೆಲ್ಲ ಸ೦ಗೀತವನು ಬಲ್ಲವರಲ್ಲ
(ಸರಿ ಗಮ ಪದ ನಿಸ)
ಸರಿಗಮಪದನಿಸ ನಿಸದಪರಿಗಮಗ  ಹೇಳುವರೆಲ್ಲ ಸ೦ಗೀತವನು ಬಲ್ಲವರಲ್ಲ
ಎರಡಕ್ಷರವ ಕಲಿತವರೆಲ್ಲ ಪ೦ಡಿತರ೦ತೆ ನಟಿಸುವರಲ್ಲ
(ಆ ಏ ಈ ಔ ಊ ಐ ಅ೦)
ಒ೦ದೊ೦ದ್ಲ ಒ೦ದು ಮಗ್ಗಿಯ ಮು೦ದೆ ಬೇರೆ ಸುಲಭದ ಲೆಕ್ಕವೆ ಇಲ್ಲ
ದೊಡ್ಡವರೆಲ್ಲ ಜಾಣರಲ್ಲ  ಚಿಕ್ಕವರೆಲ್ಲ ಕೋಣರಲ್ಲ
ದೊಡ್ಡವರೆಲ್ಲ ಜಾಣರಲ್ಲ
(ಹೂಂ..ಹೂಶ್...   ಹೂಂ ಪೂರರರ್ ದುಂಬತಕ ತಕ ತಕ
ದಿಂಗತಕ ತಕ ತಕ ದಿಂಗತಕ ತಕ ತಕ )
ಅರಗಿಳಿ ನೀರಲಿ ಈಜುವುದಿಲ್ಲ... (ಈಜುವುದಿಲ್ಲ)
ಮೊಸಳೆಯು ಮೇಲೆ ಹಾರುವುದಿಲ್ಲ... (ಹಾರುವುದಿಲ್ಲ)
ಅರಗಿಳಿ ನೀರಲಿ ಈಜುವುದಿಲ್ಲ... (ಈಜುವುದಿಲ್ಲ ಇಲ್ಲಾ )
ಮೊಸಳೆಯು ಮೇಲೆ ಹಾರುವುದಿಲ್ಲ... (ಹಾರೋದಿಲ್ಲಾ ಇಲ್ಲಾ )
ಕಾಗೆಗೆ ಗ೦ಟಲು ಕಟ್ಟುವುದಿಲ್ಲ (ಕಾ ಕಾ ಕಾ ಕಾ ಕಾ )
ಗೂಬೆಯ ಯಾರೂ ಸಾಕುವುದಿಲ್ಲ (ಉಹೂಂ ಉಹೂಂ ಉಹೂಂ)
ಇ೦ಥ ಶಿಷ್ಯರು ಬೇಕು ಎ೦ದರು ಬೇರೆ ಯಾರಿಗು ಸಿಕ್ಕುವುದಿಲ್ಲ (ಇಲ್ಲ ಇಲ್ಲ )
ದೊಡ್ಡವರೆಲ್ಲ ಜಾಣರಲ್ಲ  ಚಿಕ್ಕವರೆಲ್ಲ ಕೋಣರಲ್ಲ
ಗುರುಗಳು ಹೇಳಿದ ಮಾತುಗಳೆಲ್ಲ ಎ೦ದೂ ನಿಜವಲ್ಲ ಗೆಳೆಯ ಎ೦ದು ನಿಜವಲ್ಲ
ದೊಡ್ಡವರೆಲ್ಲ ಜಾಣರಲ್ಲ  ಚಿಕ್ಕವರೆಲ್ಲ ಕೋಣರಲ್ಲ
ದೊಡ್ಡವರೆಲ್ಲ ಜಾಣರಲ್ಲ
-------------------------------------------------------------------------------------------------------------------

ಜಯ ಜಯ ಸಾಂಬಸದಾಶಿವ ಶಂಕರ

ಸಾಹಿತ್ಯ : ಚಿ.ಉದಯಶಂಕರ 
ಸಂಗೀತ :ಕೆ.ವಿ.ಮಹಾದೇವನ್ 
ಗಾಯನ:ಎಸ್.ಜಾನಕಿ ಮತ್ತು ಸಂಗಡಿಗರು

ಓಂ.....ಓಂ.....ಓಂ.....
ಜಯ ಜಯ ಸಾಂಬಸದಾಶಿವ ಶಂಕರ
ಜಯ ಜಯ ಸಾಂಬಸದಾಶಿವ ಶಂಕರ
ಜಯ ಜಗದೀಶ್ವರ ಪಾಪಹರ  ಜಯ ಪರಮೇಶ್ವರ ಯೋಗಸಾಗರ
ಜಯ ನಂದೀಶ್ವರ ಪಾಪಹರ
ಓಂ ನಮಃ ಶಿವಾಯ    ಓಂ ನಮಃ ಶಿವಾಯ    ಓಂ ನಮಃ ಶಿವಾಯ ಶಿವಾಯ ನಮಃ
ಜಯ ಜಯ ಸಾಂಬಸದಾಶಿವ ಶಂಕರ
ಜಯ ಗಂಗಾಧರ ಸೋಮಶೇಖರ ಜಗದಾಧರ ಫಣಿಹಾರ
ಜಯ ಗಂಗಾಧರ ಸೋಮಶೇಖರ ಜಗದಾಧರ ಫಣಿಹಾರ
ರುಂಡಮಾಲಧರ ನೀಲಕಂಠಹರ ಗಜಚರ್ಮಾಂಬರಧರ ಶೂಲಧರ
ರುಂಡಮಾಲಧರ ನೀಲಕಂಠಹರ ಗಜಚರ್ಮಾಂಬರಧರ ಶೂಲಧರ  ಓ......ಓ.....ಓ....
ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಶಿವಾಯ ನಮಃ
ಜಯ ಜಯ ಸಾಂಬಸದಾಶಿವ ಶಂಕರ
ಜಯ ಅಭಯಂಕರ ಸರ್ವಶುಭಂಕರ ಮುನಿಜನಸೇವಿತ ಗಂಭೀರ
ಜಯ ಅಭಯಂಕರ ಸರ್ವಶುಭಂಕರ ಮುನಿಜನಸೇವಿತ ಗಂಭೀರ
ಜಯ ಮೃತ್ಯುಂಜಯ ಜಯ ನಿಟಿಲಾಕ್ಷ ಕರುಣಾಸಾಗರ ಓಂಕಾರ
ಜಯ ಮೃತ್ಯುಂಜಯ ಜಯ ನಿಟಿಲಾಕ್ಷ ಕರುಣಾಸಾಗರ ಓಂಕಾರ
ಜಯ ಜಯ ಸಾಂಬಸದಾಶಿವ ಶಂಕರ  ಜಯ ಜಯ ಸಾಂಬಸದಾಶಿವ ಶಂಕರ
ಜಯ ಜಗದೀಶ್ವರ ಪಾಪಹರ   ಜಯ ಪರಮೇಶ್ವರ ಯೋಗಸಾಗರ
ಜಯ ನಂದೀಶ್ವರ ಪಾಪಹರ
ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಶಿವಾಯ ನಮಃ  ಓ......ಓ.....ಓ....
ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಶಿವಾಯ ನಮಃ  ಓ......ಓ.....ಓ....
---------------------------------------------------------------------------------------------------------------

ನಿನಗಾಗಿ ಎಲ್ಲ ನಿನಗಾಗಿ

ಸಾಹಿತ್ಯ : ಚಿ. ಉದಯಶಂಕರ್  
ಸಂಗೀತ : ಕೆ.ವಿ.ಮಹಾದೇವನ್  
ಗಾಯನ : ಎಸ್.ಜಾನಕಿ ಮತ್ತು ಪಿ.ಸುಶೀಲ

ಎಸ್.ಜಾನಕಿ :  ದೀನಳ ಮೋರೆಯ ಆಲಿಸೆ ಏಕೆ ಸರಿಯೇ ಈ ಮೌನ ಓ ರಮಣ
                     ದೀನಳ ಮೋರೆಯ ಆಲಿಸೆ ಏಕೆ ಸರಿಯೇ ಈ ಮೌನ ಓ ರಮಣ
ಪಿ.ಸುಶೀಲ:     ದೀನರ ಮೋರೆಯ ಆಲಿಸೆ ಏಕೆ ಸರಿಯೇ ಈ ಮೌನ ಭೂ ರಮಣ
                    ದೀನರ ಮೋರೆಯ ಆಲಿಸೆ ಏಕೆ ಸರಿಯೇ ಈ ಮೌನ ಭೂ ರಮಣ
ಎಸ್.ಜಾನಕಿ :  ಆಸರೆ ಕಾಣದೆ ನೊಂದಿದೆ ಪ್ರಾಣ ನಿರಾಸೆಯ ತುಂಬಿದೆ ನನ್ನ
                     ಆಸರೆ ಕಾಣದೆ ನೊಂದಿದೆ ಪ್ರಾಣ ನಿರಾಸೆಯ ತುಂಬಿದೆ ನನ್ನ
                     ಸೇರೇ ಸನಿಹ ಸಂತೈಸೆ ಒಲಿದು ಮನಸಾರ ಬೆರೆತು ಸುಖ ನೀಡಬಾರದೆ
                     ದೀನಳ ಮೋರೆಯ ಆಲಿಸೆ ಏಕೆ ಸರಿಯೇ ಈ ಮೌನ ಓ ರಮಣ
ಪಿ.ಸುಶೀಲ:     ಆಸರೆ ಕಾಣದೆ ನೊಂದಿಹ ಜನರ ನಿರಾಸೆಗೆ ನೂಕುವುದೇನು
                     ಆಸರೆ ಕಾಣದೆ ನೊಂದಿಹ ಜನರ ನಿರಾಸೆಗೆ ನೂಕುವುದೇನು
                     ಹಾಡಿ ಕುಣಿವ ಹೆನ್ಣೊಂದ ಸೇರಿ ನಿಜಕಾರ್ಯ ಮರೆವ ದೊರೆಗೇಕೆ ರಾಜ್ಯವೂ
                     ದೀನರ ಮೋರೆಯ ಆಲಿಸೆ ಏಕೆ ಸರಿಯೇ ಈ ಮೌನ ಭೂ ರಮಣ
-------------------------------------------------------------------------------------------------------------------------

ನಿನಗಾಗಿ ಎಲ್ಲಾ ನಿನಗಾಗಿ 

ಸಾಹಿತ್ಯ : ಚಿ. ಉದಯಶಂಕರ್ 
ಸಂಗೀತ : ಕೆ.ವಿ.ಮಹಾದೇವನ್ 
ಗಾಯನ : ಎಸ್.ಜಾನಕಿ ಮತ್ತು ಎಸ್.ಪಿ.ಬಿ 

ಎಸ್.ಜಾನಕಿ: ನಿನಗಾಗಿ ಎಲ್ಲಾ ನಿನಗಾಗಿ ನಿನಗಾಗಿ ಎಲ್ಲಾ ನಿನಗಾಗಿ
ಎಸ್.ಪಿ.ಬಾಲ: ನಿನಗಾಗಿ ನಲ್ಲೇ ನಿನಗಾಗಿ ನಿನಗಾಗಿ ನಾನೇ ನಿನಗಾಗಿ
ಎಸ್.ಜಾನಕಿ:  ನಿನಗಾಗಿ ಎಲ್ಲಾ ನಿನಗಾಗಿ
ಎಸ್.ಪಿ.ಬಾಲ: ನಿನಗಾಗಿ ನಾನೇ ನಿನಗಾಗಿ
ಎಸ್.ಪಿ.ಬಾಲ: ರಾತ್ರಿಯ ರಾಣಿಯ ಸೆರಗಿನ ನೆರಳು ಹೊನ್ನ ಹೂಗಳು ನಭದಿ ಅರಳಿದಾ ಇರುಳು
ಎಸ್.ಜಾನಕಿ:  ಚಂದ್ರಕಾಂತಿಗೆ ಬೆವರೀ ಸೋತ ಈ ಒಡಲು 
                     ಹೃದಯದೊಳು ತುಂಬಿದ ಬಯಕೆಯಾ ಕಡಲು ಆ ಆ ...ಆ ಆ ...ಆ ಆ ...
ಎಸ್.ಪಿ.ಬಾಲ: ರಾತ್ರಿಯ ರಾಣಿಯ ಸೆರಗಿನ ನೆರಳು ಹೊನ್ನ ಹೂಗಳು ನಭದಿ ಅರಳಿದಾ ಇರುಳು
                     ಹೊನ್ನ ಹೂಗಳು ನಭದಿ ಅರಳಿದಾ ಇರುಳು
ಎಸ್.ಜಾನಕಿ: ಚಂದ್ರಕಾಂತಿಗೆ ಬೆವರೀ ಸೋತ ಈ ಒಡಲು
                    ಚಂದ್ರಕಾಂತಿಗೆ ಬೆವರೀ ಸೋತ ಈ ಒಡಲು ಹೃದಯದೊಳು ತುಂಬಿದ ಬಯಕೆಯಾ ಕಡಲು
ಎಸ್.ಪಿ.ಬಾಲ: ನಿನಗಾಗಿ ನಲ್ಲೇ ನಿನಗಾಗಿ
ಎಸ್.ಜಾನಕಿ: ನಿನಗಾಗಿ ನಲ್ಲಾ ನಿನಗಾಗಿ
ಎಸ್.ಜಾನಕಿ: ತಾವರೆಯ ನಾಚಿಸುವ ಅಂದದಾ ವದನ  ವದನದಲಿ ಅರಳಿರುವ ನೈದಿಲೆಯ ನಯನ
ಎಸ್.ಪಿ.ಬಾಲ: ನಯನದಲಿ ತುಂಬಿರುವ ಈ ರತಿಯ ಧ್ಯಾನ  ನನ್ನೆದೆಗೆ ನಾಟಿರುವ ಮನ್ಮಥನ ಬಾಣ
ಎಸ್.ಜಾನಕಿ: ತಾವರೆಯ ನಾಚಿಸುವ ಅಂದದಾ ವದನ ವದನದಲಿ ಅರಳಿರುವ ನೈದಿಲೆಯ ನಯನ
                   ವದನದಲಿ ಅರಳಿರುವ ನೈದಿಲೆಯ ನಯನ
ಎಸ್.ಪಿ.ಬಾಲ: ನಯನದಲಿ ತುಂಬಿರುವ ಈ ರತಿಯ ಧ್ಯಾನ  
                     ನಯನದಲಿ ತುಂಬಿರುವ ಈ ರತಿಯ ಧ್ಯಾನ   ನನ್ನೆದೆಗೆ ನಾಟಿರುವ ಮನ್ಮಥನ ಬಾಣ
ಎಸ್.ಜಾನಕಿ:ನಿನಗಾಗಿ ಎಲ್ಲಾ ನಿನಗಾಗಿ
ಎಸ್.ಪಿ.ಬಾಲ: ನಿನಗಾಗಿ ನಲ್ಲೇ ನಿನಗಾಗಿ
ಎಸ್.ಜಾನಕಿ:ನಿನಗಾಗಿ ಎಲ್ಲಾ ನಿನಗಾಗಿ
ಎಸ್.ಪಿ.ಬಾಲ: ನಿನಗಾಗಿ ನಾನೇ ನಿನಗಾಗಿ  ನಿನಗಾಗಿ ...ನಿನಗಾಗಿ ...ನಿನಗಾಗಿ ..ನಿನಗಾಗಿ ....
--------------------------------------------------------------------------------------------------------------------------
ನಿನಗಾಗಿ ಎಲ್ಲಾ ನಿನಗಾಗಿ
ಸಾಹಿತ್ಯ : ಚಿ. ಉದಯಶಂಕರ್ 
ಸಂಗೀತ : ಕೆ.ವಿ.ಮಹಾದೇವನ್ 
ಗಾಯನ : ಎಸ್.ಜಾನಕಿ ಮತ್ತು ಎಸ್.ಪಿ.ಬಾಲಸುಬ್ರಹ್ಮಣ್ಯಂ

ಗಂಡು : ಆ...ಆ...ಆ...ಆ..ಆ...ಆ...ಆ...ಆ..ಆಆಆ...
          ಮದನಾ ಓಡಿದನು ಮದನಾ.. ನಾಚಿ ಓಡಿದನು ಮದನಾ...
          ಮದನಾ ಮದನಾ.. ನಾಚಿ ಓಡಿದನು ಮದನಾ...
         ನೋಡಿ ನಿನ್ನ ಈ ಸುಂದರ ವದನಾ..
         ಮದನಾ ಮದನಾ ನಾಚಿ ಓಡಿದನು ಮದನಾ...
ಗಂಡು : ಆ ಸುರಲೋಕದ ಶಿಲ್ಪಿಯ ಕನಸೋ 
           ಹೊನ್ನಿನ ತಾವರೆ ಹೂವಿನ ಸೊಗಸೋ 
ಹೆಣ್ಣು :ಆ ಸುರಲೋಕದ ಶಿಲ್ಪಿಯ ಕನಸೋ 
         ಹೊನ್ನಿನ ತಾವರೆ ಹೂವಿನ ಸೊಗಸೋ
ಗಂಡು : ಪ್ರೇಮದ ರಾಜ್ಯವ ಆಳುವ ಅರಸೊ 
ಹೆಣ್ಣು : ಪ್ರೇಮದ ರಾಜ್ಯವ ಆಳುವ ಅರಸೊ 
ಗಂಡು : ನಿನ್ನ ನೋಡುವನೋ ನೋಡಿ ಕಾಡುವುನೋ 
           ಇವನಾ ಎದುರು ನಿಲ್ಲಲಾರೆ
           ಇವನಾ ಎದುರು ನಿಲ್ಲಲಾರೆ ಎಂದು ಅರಿತು 
           ಮೌನದಿಂದ ಮೆಲ್ಲಗೆ ನಾಚಿ ಓಡಿದನು ಮದನಾ.. 
ಹೆಣ್ಣು :  ಮದನಾ (ಆಆಆ)  ಮದನಾ.. ನಾಚಿ ಓಡಿದನು ಆಹ್ಹಹ್ಹಹ್ಹ..
ಹೆಣ್ಣು : ನೋಟದಿ ಎಸೆಯುತ ಹೂವಿನ ಬಾಣ 
          ಹೆಣ್ಣಿನ ಎದೆಯಲಿ ತುಂಬುತ ತಲ್ಲಣ 
ಗಂಡು : ನೋಟದಿ ಎಸೆಯುತ ಹೂವಿನ ಬಾಣ 
          ಹೆಣ್ಣಿನ ಎದೆಯಲಿ ತುಂಬುತ ತಲ್ಲಣ 
ಹೆಣ್ಣು : ಕಣ್ಣಲ್ಲೇ ಹಾಡುತ ಪ್ರೇಮದ ಗಾನಾ 
ಗಂಡು : ಕಣ್ಣಲ್ಲೇ ಹಾಡುತ ಪ್ರೇಮದ ಗಾನಾ
ಹೆಣ್ಣು : ಕೆಣಕಿ ಈ ತನುವ ಕುಣಿಸಿ ಯೌವ್ವನವ 
          ಮನವ ಸೆಳೆವ ಸನಿಹ ಕರೆವ 
          ಮನವ ಸೆಳೆವ ಸನಿಹ ಕರೆವ ಜಾಣ್ಮೆ ಕಂಡು ಸೋತೆನೆಂದು
        ನಿಲ್ಲದೆ ನಾಚಿ ಓಡಿದನು ಮದನಾ.. 
ಗಂಡು : ಮದನಾ ಮದನಾ.. ನಾಚಿ ಓಡಿದನು ಮದನಾ...
ಹೆಣ್ಣು : ಆಆಆ.. ನೋಡಿ ನಿನ್ನ ಈ ಸುಂದರ ವದನಾ..
          ಮದನಾ (ಹೂಂ ಹೂಂ ) ಮದನಾ..
ಇಬ್ಬರು : ನಾಚಿ ಓಡಿದನು ಮದನಾ... 

ಭಕ್ತ ಕನಕದಾಸ (1960)

ಬಾಗಿಲನು ತೆರೆದು

ಚಲನ ಚಿತ್ರ: ಭಕ್ತ ಕನಕದಾಸ (1960)
ನಿರ್ದೇಶನ: ವೈ. ಆರ್. ಸ್ವಾಮಿ 
ಸಾಹಿತ್ಯ: ಸಂತ ಶ್ರೀ ಕನಕದಾಸರು   
ಸಂಗೀತ : ಎಂ ವೆಂಕಟರಾಜು 
ಗಾಯನ: ಪಿ.ಬಿ. ಶ್ರೀನಿವಾಸ್
ನಟನೆ: ಡಾ.ರಾಜ್ ಕುಮಾರ್,


ದೀನ ನಾನು ಸಮಸ್ತ ಲೋಕಕೆ ದಾನಿ ನೀನು
ವಿಚಾರಿಸಲು ಮತಿಹೀನ ನಾನು ಮಹಾಮಹಿಮ ಕೈವಲ್ಯಪತಿ ನೀನು|
ಏನ ಬಲ್ಲೆನು ನಾನು ನೆರೆಸುಜ್ನಾನಮೂರುತಿ ನೀನು
ನಿನ್ನ ಸಮಾನರುಂಟೇ ದೇವ ರಕ್ಷಿಸು ನಮ್ಮ ಅನವರತ ||
ದೇವ ... ದೇವ.... ದೇವ....
ಬಾಗಿಲನು ತೆರೆದು ಸೇವೆಯನು ಕೊಡೊ ಹರಿಯೇ
ಬಾಗಿಲನು ತೆರೆದು ಸೇವೆಯನು ಕೊಡೊ ಹರಿಯೇ
ಕೂಗಿದರು ಧ್ವನಿ ಕೇಳಲಿಲ್ಲವೇ ನರಹರಿಯೆ ಬಾಗಿಲನು ತೆರೆದು
ಪರಮಪದದೊಳಗೆ ವಿಷಧರನ ತಲ್ಪದಲಿ ನೀ
ಸಿರಿಸಹಿತ ಕ್ಷೀರವಾರಿಧಿಯೊಳಿರಲೂ...
ಕರಿರಾಜ ಕಷ್ಟದಲಿ ಆದಿಮೂಲ ಎಂದು
ಕರೆಯಲಾಕ್ಷಣ ಬಂದು ಒದಗಿದೆಯೋ ನರಹರಿಯೆ ಬಾಗಿಲನು ತೆರೆದು
ಕಡುಕೋಪದಿಂ ಖಳನು ಖಡ್ಗವನೆ ಪಿಡಿದು..
ನಿನ್ನೊಡೆಯ ಎಲ್ಲಿಹನು ಎಂದು ನುಡಿಯೇ..
ಧೃಢ ಭಕುತಿಯಲು ಶಿಶುವು ಬಿಡದೆ ನಿನ್ನನು ಭಜಿಸೆ..
ಸಡಗರದಿ ಸ್ತಂಭದಿಂದೊಡೆದೆ ನರಹರಿಯೆ ಬಾಗಿಲನು ತೆರೆದು...
ಯಮಸುತನ ರಾಣಿಗೆ ಅಕ್ಷಯವಸನವನಿತ್ತೆ
ಸಮಯದಲಿ ಅಜಮಿಳನ ಪೊರೆದೇ...
ಸಮಯಾಸಮಯವುಂಟೆ ಭಕ್ತವತ್ಸಲ ನಿನಗೆ
ಕಮಲಾಕ್ಷ ಕಾಗಿನೆಲೆಯಾದಿಕೇಶವನೇ ಬಾಗಿಲನು ತೆರೆದು...
ಬಾಗಿಲನು ತೆರೆದು
ಬಾಗಿಲನು ತೆರೆದು... ಸೇವೆಯನು ಕೊಡೊ ಹರಿಯೇ
*********************************************************************************

ಬದುಕಿದೆನು ಬದುಕಿದೆನು

ಸಾಹಿತ್ಯ: ಕನಕದಾಸರು  
ಸಂಗೀತ : ಎಂ ವೆಂಕಟರಾಜು 
ಗಾಯನ: ಪಿ.ಬಿ. ಶ್ರೀನಿವಾಸ್

ಬದುಕಿದೆನು ಬದುಕಿದೆನು ಭವವೆನಗೆ ಹಿಂಗಿತು
ಪದುಮನಾಭನ ಪಾದದೊಲುಮೆ ಎನಗಾಯಿತು
ಬದುಕಿದೆನು ಬದುಕಿದೆನು ಭವವೆನಗೆ ಹಿಂಗಿತು
ಪದುಮನಾಭನ ಪಾದದೊಲುಮೆ ಎನಗಾಯಿತು
ಬದುಕಿದೆನು ಬದುಕಿದೆನು ಭವವೆನಗೆ ಹಿಂಗಿತು
ಹರಿ ತೀರ್ಥ ಪ್ರಸಾದವಿಂದೆನಗೆ ದೊರಕಿತು
ಹರಿ ತೀರ್ಥ ಪ್ರಸಾದವಿಂದೆನಗೆ ದೊರಕಿತು
ಹರಿನಾಮೃತವೆನ್ನ ಕಿವಿಗೊದಗಿತೋ
ಹರಿದಾಸರು ಎನ್ನ ಬಂಧು ಬಳಗಾದರು
ಹರಿ ಶ್ರೀ ಮುದ್ರೆ ಎನಗಾಭರಣವಾಯಿತು
ಬದುಕಿದೆನು ಬದುಕಿದೆನು ಭವವೆನಗೆ ಹಿಂಗಿತು
ಮುಕ್ತರಾದರು ಎನ್ನ ನೂರೊಂದು ಕುಲದವರು
ಮುಕ್ತಿ ಮಾರ್ಗಕೆ ಯೋಗ್ಯ ನಾನಾದೆನು
ಅಕಳಂಕ ಶ್ರೀ ಹರಿ ಭಕುತಿಗೆ ಮನ ಬೆಳೆದು
ರುಕ್ಮಿಣಿಯರಸ  ಕೈವಶನಾದನೇನಗೆ
ಬದುಕಿದೆನು ಬದುಕಿದೆನು ಭವವೆನಗೆ ಹಿಂಗಿತು
ಹಿಂದೆನ್ನ ಜೀವಕೆ ಸಕಲ ಸಂಪದವಾಯಿತು
ಮುಂದೆನ್ನ ಜನ್ಮ ಸಫಾಲ್ಯವಾಯಿತು
ತಂದೆ ಶ್ರೀ  ಕಾಗಿನಲೆ  ಆದಿಕೇಶವರಾಯ
ಬಂದೆನ್ನ ಹೃದಯದಲಿ ನೆಲೆಯಾಗಿ ನಿಂತ  
ಬದುಕಿದೆನು ಬದುಕಿದೆನು ಭವವೆನಗೆ ಹಿಂಗಿತು
ಪದುಮನಾಭನ ಪಾದದೊಲುಮೆ ಎನಗಾಯಿತು
ಬದುಕಿದೆನು ಬದುಕಿದೆನು ಭವವೆನಗೆ ಹಿಂಗಿತು
*********************************************************************************

ಕುಲಕುಲವೆಂದು ಹೊಡೆದಾಡದಿರಿ

ಸಾಹಿತ್ಯ: ಕನಕದಾಸರು   
ಸಂಗೀತ : ಎಂ ವೆಂಕಟರಾಜು 
ಗಾಯನ: ಪಿ.ಬಿ. ಶ್ರೀನಿವಾಸ್

ಕುಲ ಕುಲ ಕುಲವೆಂದು ಹೊಡೆದಾಡದಿರಿ
ನಿಮ್ಮ ಕುಲದ ನೆಲೆಯನೆನಾದರೂ ಬಲ್ಲಿರಾ
ಕುಲ ಕುಲ ಕುಲವೆಂದು ಹೊಡೆದಾಡದಿರಿ
ನಿಮ್ಮ ಕುಲದ ನೆಲೆಯನೆನಾದರೂ ಬಲ್ಲಿರಾ
ಕುಲ ಕುಲ ಕುಲವೆಂದು ಹೊಡೆದಾಡದಿರಿ
ಹುಟ್ಟದ ಯೋನಿಗಳಿಲ್ಲ ಮೆಟ್ಟದ ಭುಮಿಗ ಳಿಲ್ಲ
ಅಟ್ಟು ಉಣ್ಣದ ವಸ್ತುಗಳಿಲ್ಲ
ಹುಟ್ಟದ ಯೋನಿಗಳಿಲ್ಲ ಮೆಟ್ಟದ ಭುಮಿಗ ಳಿಲ್ಲ
ಅಟ್ಟು ಉಣ್ಣದ ವಸ್ತುಗಳಿಲ್ಲ
ಗುಟ್ಟುಕಾಣಿಸ ಬಂದು ಹಿರಿದೆನು ಕಿರಿದೆನು
ಗುಟ್ಟುಕಾಣಿಸ ಬಂದು ಹಿರಿದೆನು ಕಿರಿದೆನು 
ನೆಟ್ಟನೆ ಸರ್ವಜ್ಞನ ನೆನೆಕ೦ಡ್ಯಾ ಮನುಜ
ಕುಲ ಕುಲ ಕುಲವೆಂದು ಹೊಡೆದಾಡದಿರಿ
ಜಲವೇ ಸಕಲ ಕುಲಕ್ಕೆ ತಾಯಲ್ಲವೆ
ಜಲದ ಕುಲವನೆನಾದರು ಬಲ್ಲಿರಾ
ಜಲದ ಬಬ್ಬುಳ್ಳಿಯ೦ತೆ ಸ್ಥಿರವಲ್ಲ ಈ ದೇಹ
ಜಲದ ಬಬ್ಬುಳ್ಳಿಯ೦ತೆ ಸ್ಥಿರವಲ್ಲ ಈ ದೇಹ
ನೆಲೆಯ ಅರಿತು ನೀ ನೆನೆಕ೦ಡ್ಯಾ ಮನುಜ
ಕುಲ ಕುಲ ಕುಲವೆಂದು ಹೊಡೆದಾಡದಿರಿ
ಹರಿಯೇ ಸರ್ವೋತ್ತಮ ಹರಿಯೇ ಸರ್ವೇಶ್ವರ
ಹರಿಮಯವೆಲ್ಲವೆನುತ ತಿಳಿದು.. ಓಓಓ
ಹರಿಯೇ ಸರ್ವೋತ್ತಮ ಹರಿಯೇ ಸರ್ವೇಶ್ವರ
ಹರಿಮಯವೆಲ್ಲವೆನುತ ತಿಳಿದು.. ಓಓಓ
ಸಿರಿಕಾಗಿನೆಲೆಯಾದಿ ಕೇಶವರಾಯನ 
ಸಿರಿಕಾಗಿನೆಲೆಯಾದಿ ಕೇಶವ ರಾಯನ
ಚರಣ ಕಮಲವ ಕೀರ್ತಿಸುವನೆ ಕುಲಜ
ಚರಣ ಕಮಲವ ಕೀರ್ತಿಸುವನೆ ಕುಲಜ
ಕುಲ ಕುಲ ಕುಲವೆಂದು ಹೊಡೆದಾಡದಿರಿ
ನಿಮ್ಮ ಕುಲದ ನೆಲೆಯನೆನಾದರೂ ಬಲ್ಲಿರಾ
ಕುಲ ಕುಲ ಕುಲವೆಂದು ಹೊಡೆದಾಡದಿರಿ
ನಾರಾಯಣ ಹರಿ ನಾರಾಯಣ 
ನಾರಾಯಣ ಹರಿ ನಾರಾಯಣ 
ನಾರಾಯಣ ಹರಿ ನಾರಾಯಣ 
ನಾರಾಯಣ ಹರಿ ನಾರಾಯಣ 
ಹರಿ ನಾರಾಯಣ ಹರಿ ನಾರಾಯಣ 
ಹರಿ ನಾರಾಯಣ ಹರಿ ನಾರಾಯಣ 
ಹರಿ ನಾರಾಯಣ ಹರಿ ನಾರಾಯಣ 
*********************************************************************************

ಈತನಿಗ ವಾಸುದೇವನೋ

ಸಾಹಿತ್ಯ: ಕನಕದಾಸರು  
ಸಂಗೀತ : ಎಂ ವೆಂಕಟರಾಜು 
ಗಾಯನ: ಪಿ.ಬಿ. ಶ್ರೀನಿವಾಸ್

ಈತನೀಗ ವಾಸುದೇವನು ಲೋಕದೊಡೆಯ
ಈತನೀಗ ವಾಸುದೇವನು
ಈತನೀಗ ವಾಸುದೇವನ  ಈ ಸಮಸ್ತ ಲೋಕದೊಡೆಯ
ಈತನೀಗ ವಾಸುದೇವನ  ಈ ಸಮಸ್ತ ಲೋಕದೊಡೆಯ
ದಾಸಗೊಲಿದು ತೇರಾ ನೇರಿ ತೇಜಿ ಪಿಡಿದು ನಡೆಸಿದಾತ
ಈತನೀಗ ವಾಸುದೇವನು ಲೋಕದೊಡೆಯ
ಧನುಜೆಯಾಳ್ದನಣ್ಣನಯ್ಯನ ಪಿತನ ಮುoದೆ ಕೌರವೇಂದ್ರನ
ಅನುಜೆಯಾಳಿದವನ ಶಿರವ ಕತ್ತರಿಸುತಾ
ಅನುಜೆಯಾಳಿದವನ ಬೆಂಕಿ ಮುಟ್ಟದoತೆ ಕಾಯ್ದ 
ಅನುಜೆಯಾಳಿದವನ ಬೆಂಕಿ ಮುಟ್ಟದoತೆ ಕಾಯ್ದ ರುಕ್ಮನ
ಅನುಜೆಯಾಳಿದವನ ಮೂರ್ತಿಯನ್ನು ನೋಡಿರೋ
ಈತನೀಗ ವಾಸುದೇವನು 
ಕ್ರೂರನಾದ ಫಣಿಪ ಬಾಣ ತರಣಿಜನು ನಿರೀಕ್ಷಿಸಿ ಆಗ
ವೀರನೆಚ್ಚೆಯಸುಗೆ ಒಪ್ಪುತನ್ನು ವೀಕ್ಷಿಸಿ
ಧಾರಿಣಿಯ ಪದದೊಳoಗಿ ಚರಣ ಭಜಕ ನರನ ಕಾಯ್ದ
ಧಾರಿಣಿಯ ಪದದೊಳoಗಿ ಚರಣ ಭಜಕ ನರನ ಕಾಯ್ದ
ಭಾವಕಲ್ಪನಾದದೇವ ಈತ ನೋಡಿರೋ
ಈತನೀಗ ವಾಸುದೇವನು 
ವ್ಯೋಮಕೇಶ ಇಪ್ಪದೆಸೆಯ ಆ ಮಹಾಮಹಿಮೆಯುಳ್ಳ
ಸಾಮಜವನು ಏರಿ ಬರುವ ಶಕ್ತಿಯನೀಕ್ಷಿಸಿ
ಪ್ರೇಮದಿಂದ ಉರವನೊಡ್ಡಿ ಡಿoಗರಿಗನ ಕಾಯ್ದಾ
ಪ್ರೇಮದಿಂದ ಉರವನೊಡ್ಡಿ ಡಿoಗರಿಗನ ಕಾಯ್ದಾ
ಸಾರ್ವಭೌಮ ಬಡದಾದಿಕೇಶವನ್ನ ನೋಡಿರೋ
ಈತನೀಗ ವಾಸುದೇವನು ಲೋಕದೊಡೆಯ
ಈತನೀಗ ಈತನೀಗ ಈತನೀಗ ವಾಸುದೇವನು
*********************************************************************************

ಬಳ್ಳಿ ಬಳ್ಳಿಯಲ್ಲಿ ಹೂವ

ಸಾಹಿತ್ಯ: ಹುಣುಸೂರು ಕೃಷ್ಣಮೂರ್ತಿ 
ಸಂಗೀತ : ಎಂ ವೆಂಕಟರಾಜು 
ಗಾಯನ: ಎಸ್.ಜಾನಕೀ 

ಓಓಓ....  ಬಳ್ಳಿ ಬಳ್ಳಿಯಲ್ಲಿ ಹೂವ ನೋಡೇ ಹೆಣ್ಣೇ
ಆಹಾ.. ಬೆಳ್ಳಿಯಂತ ಮಲ್ಲಿ ಜಾಜಿ ನೋಡೇ ಹೆಣ್ಣೇ
ಆಹಾ.. ಬೆಳ್ಳಿಯಂತ ಮಲ್ಲಿ ಜಾಜಿ ನೋಡೇ ಹೆಣ್ಣೇ
ಬಳ್ಳಿ ಬಳ್ಳಿಯಲ್ಲಿ ಹೂವ ನೋಡೇ ಹೆಣ್ಣೇ
ಆಹಾ.. ಬೆಳ್ಳಿಯಂತ ಮಲ್ಲಿ ಜಾಜಿ ನೋಡೇ ಹೆಣ್ಣೇ
ಆಹಾ.. ಬೆಳ್ಳಿಯಂತ ಮಲ್ಲಿ ಜಾಜಿ ನೋಡೇ ಹೆಣ್ಣೇ 
ಬಲುಕಿ ಕುಲಕಿ ಆದ ಚಂದ ನೋಡೇ ಹೆಣ್ಣೇ 
ಆಹಾ ಬಳಸಿ ಬಳಸಿ ಬರುವ ದುಂಬಿ ನೋಡೇ ಹೆಣ್ಣೇ 
ಬಲುಕಿ ಕುಲಕಿ ಆದ ಚಂದ ನೋಡೇ ಹೆಣ್ಣೇ 
ಆಹಾ ಬಳಸಿ ಬಳಸಿ ಬರುವ ದುಂಬಿ ನೋಡೇ ಹೆಣ್ಣೇ 
ಬಳ್ಳಿ ಬಳ್ಳಿಯಲ್ಲಿ ಹೂವ ನೋಡೇ ಹೆಣ್ಣೇ
ಆಹಾ.. ಬೆಳ್ಳಿಯಂತ ಮಲ್ಲಿ ಜಾಜಿ ನೋಡೇ ಹೆಣ್ಣೇ 
ಉತ್ತಮ ಹಣ್ಣುಗಳ ನೋಡೇ ಹೆಣ್ಣೇ
ಮುತ್ತನಿಕ್ಕಿ ತಿನ್ನೋ ಹಕ್ಕಿ ಬಂತೇ ಹೆಣ್ಣೇ ... ಓಓಓ
ಉತ್ತಮ ಹಣ್ಣುಗಳ ನೋಡೇ ಹೆಣ್ಣೇ
ಮುತ್ತನಿಕ್ಕಿ ತಿನ್ನೋ ಹಕ್ಕಿ ಬಂತೇ ಹೆಣ್ಣೇ
ಮೋಡ ಕವಿದು ಆಡೋ ನವಿಲು ನೋಡೇ ಹೆಣ್ಣೇ 
ಈ ಗಾಡಸೆಹೆದ ಗುಟ್ಟೆನು ಕೇಳೇ ಹೆಣ್ಣೇ   
ಮೋಡ ಕವಿದು ಆಡೋ ನವಿಲು ನೋಡೇ ಹೆಣ್ಣೇ 
ಈ ಗಾಡಸೆಹೆದ ಗುಟ್ಟೆನು ಕೇಳೇ ಹೆಣ್ಣೇ   
ಬಳ್ಳಿ ಬಳ್ಳಿಯಲ್ಲಿ ಹೂವ ನೋಡೇ ಹೆಣ್ಣೇ
ಆಹಾ.. ಬೆಳ್ಳಿಯಂತ ಮಲ್ಲಿ ಜಾಜಿ ನೋಡೇ ಹೆಣ್ಣೇ 
ಆಹಾ.. ಬೆಳ್ಳಿಯಂತ ಮಲ್ಲಿ ಜಾಜಿ ನೋಡೇ ಹೆಣ್ಣೇ 
ಕೋಗಿಲೆ ಇಂಚರವ ಕೇಳೇ ಹೆಣ್ಣೇ 
ಇದು ಕಲಿಸಿದಂತ ಗುರು ಯಾರು ಕೇಳೇ ಹೆಣ್ಣೇ.. ಓಓಓ  
ಕೋಗಿಲೆ ಇಂಚರವ ಕೇಳೇ ಹೆಣ್ಣೇ 
ಇದು ಕಲಿಸಿದಂತ ಗುರು ಯಾರು ಕೇಳೇ ಹೆಣ್ಣೇ 
ಸುತ್ತ ಮುತ್ತ ಇರುವ ಚಿತ್ರ ನೋಡೇ ಹೆಣ್ಣೇ 
ಇದ ಕೆತ್ತಿದಂತ ರಸಿಕನ್ಯಾರು ಕೇಳೇ ಹೆಣ್ಣೇ 
ಸುತ್ತ ಮುತ್ತ ಇರುವ ಚಿತ್ರ ನೋಡೇ ಹೆಣ್ಣೇ 
ಇದ ಕೆತ್ತಿದಂತ ರಸಿಕನ್ಯಾರು ಕೇಳೇ ಹೆಣ್ಣೇ 
ಬಳ್ಳಿ ಬಳ್ಳಿಯಲ್ಲಿ ಹೂವ ನೋಡೇ ಹೆಣ್ಣೇ
ಆಹಾ.. ಬೆಳ್ಳಿಯಂತ ಮಲ್ಲಿ ಜಾಜಿ ನೋಡೇ ಹೆಣ್ಣೇ 
ಆಹಾ.. ಬೆಳ್ಳಿಯಂತ ಮಲ್ಲಿ ಜಾಜಿ ನೋಡೇ ಹೆಣ್ಣೇ 
*********************************************************************************

ಸಿಂಗಾರ ಶೀಲಾ

ಸಾಹಿತ್ಯ: ಹುಣುಸೂರು ಕೃಷ್ಣಮೂರ್ತಿ 
ಸಂಗೀತ : ಎಂ ವೆಂಕಟರಾಜು 
ಗಾಯನ: ಪಿ.ಬಿ.ಶ್ರೀ,  ಎಸ್.ಜಾನಕೀ 

ಗಂಡು : ಸಿಂಗಾರ ಶೀಲ ಸಂಗೀತ ಲೋಲ
ಹೆಣ್ಣು :   ಆಆಅ ಸಿಂಗಾರ ಶೀಲ ಸಂಗೀತ ಲೋಲ
           ಸಿಂಗಾರ ಶೀಲ ಸಂಗೀತ ಲೋಲ
           ಶ್ರೀರಂಗ ನಿನ್ನ ಲೀಲೆ ಕಂಡು ಧನ್ಯನಾಳ 
           ಸಿಂಗಾರ ಶೀಲ ಸಂಗೀತ ಲೋಲ
ಸರಸ ಸುಮ್ಮಾನ ಸಂತೋಷ ಭಾವ 
ಶರಧಿಯಂತಾಗಿ ತುಂಬಿತೋ ಜೀವಾ 
ಹರಿಯೇ ದೊರೆಯೇ ಈ ನಿನ್ನ ಮಾಯೇ 
ಏನೆಂದು ಹೇಳಲ್ಲಯ್ಯಾ ದೀನಬಂಧು ನೀನಯ್ಯಾ 
ಸಿಂಗಾರ ಶೀಲ ಸಂಗೀತ ಲೋಲ
ಕವಿದ ಗಾಢಾಂಧಕಾರವ ನೀಗಿ 
ಬೆಳಕ ನೀ ತಂದೇ ನನ್ನವನಾಗಿ             
ನಲಿದೆ ಒಲಿದೇ ನಲ್ಮೆಯ ತಂದೇ
ಕಾಪಾಡು ಕಾಮಧೇನು ನೀನೇ ಎಂದು ತೋರಿದೆ 
ಸಿಂಗಾರ ಶೀಲ ಸಂಗೀತ ಲೋಲ
ಮನದೊಳೆಕಿಂತ ಮೋಹದ ವೀಣೆ
ಮಧುರ ಝೇಂಕಾರ ತಂದಿತೋ ಕಾಣೇ
ಕುಣಿವೇ ತಣಿವೆ ಸೇವೆಯ ಗೈವೇ
ಶ್ರೀರಂಗ ನಿನ್ನ ಲೀಲೆ ಹಾಡಿ ಹಾಡಿ ಬಾಳುವೇ 
ಸಿಂಗಾರ ಶೀಲ ಸಂಗೀತ ಲೋಲ
ಶ್ರೀರಂಗ ನಿನ್ನ ಲೀಲೆ ಕಂಡು ಧನ್ಯನಾಳ 
ಸಿಂಗಾರ ಶೀಲ ಸಂಗೀತ ಲೋಲ
*********************************************************************************

ಇರುಳು ಎಲ್ಲೆಲ್ಲೂ 

ಸಾಹಿತ್ಯ: ಹುಣುಸೂರು ಕೃಷ್ಣಮೂರ್ತಿ 
ಸಂಗೀತ : ಎಂ ವೆಂಕಟರಾಜು 
ಗಾಯನ: ಎಸ್.ಜಾನಕೀ 

ಇರುಳು ಎಲ್ಲೆಲೂ ಕಾರಿರಳೂ ಅಳಲು ಬಾಳೆಲ್ಲಾ ಬೆಂದಳಲೂ....
ಅಲೆದು ಅನಾಥಳಾಗಿ ಅಳುವೇ ನೀರಾಶಳಾಗಿ...
ಇರುಳು ಎಲ್ಲೆಲೂ ಕಾರಿರಳೂ ಅಳಲು ಬಾಳೆಲ್ಲಾ  ಬೆಂದಳಲೂ
ಅಲೆದು ಅನಾಥಳಾಗಿ....  ಅಲೆದು ಅನಾಥಳಾಗಿ ಅಣುವೇ ನೀರಾಶಳಾದೆ
ಇರುಳು ಎಲ್ಲೆಲೂ ಕಾರಿರಳೂ ಅಳಲು ಬಾಳೆಲ್ಲಾ  ಬೆಂದಳಲೂ
ಯಾರಿಗೆ ಈ ನೋವ ಹೇಳಿ ಯಾರಡೇ  ನಾ ದಾರಿ ಕೇಳಲಿ
ಯಾರಿಗೆ ಈ ನೋವ ಹೇಳಿ ಯಾರಡೇ  ನಾ ದಾರಿ ಕೇಳಲಿ
ಎಲ್ಲಿದೆ ಸಾಗಲು ಏತರ ಬಾಳಲೋ  
ಇರುಳು ಎಲ್ಲೆಲೂ ಕಾರಿರಳೂ ಅಳಲು ಬಾಳೆಲ್ಲಾ  ಬೆಂದಳಲೂ
ದೇವರೇ ಇಲ್ಲದಂತ ದೇಗುಲ ಈ ದೇಹ ಕಾಂತ
ದೇವರೇ ಇಲ್ಲದಂತ ದೇಗುಲ ಈ ದೇಹ ಕಾಂತ
ಎಂದಿದೆ ಸೇರಲು ಶಾಂತಿಯ ಕಾಣಲು
ಇರುಳು ಎಲ್ಲೆಲೂ ಕಾರಿರಳೂ ಅಳಲು ಬಾಳೆಲ್ಲಾ  ಬೆಂದಳಲೂ
*********************************************************************************

ಸೊಗಸುಗಾರ (2011)

ಸಾವಿರ ಬಣ್ಣದ

ಚಲನ ಚಿತ್ರ: ಸೊಗಸುಗಾರ (೨೦೧೧)
ನಿರ್ದೇಶನ:  ಸಂಗೀತ : ರಾಜೇಶ್ ರಾಮನಾಥ್ 
ಸಾಹಿತ್ಯ: ಕೆ.ಕಲ್ಯಾಣ್  
ಗಾಯನ : ಎಸ್.ಪಿ.ಬಿ. 
ನಟನೆ:

ಸಾವಿರ ಬಣ್ಣದ ಬದುಕು ನಮ್ಮದು ಯಜಮಾನ
ಗಂಡಿಗೂ ಹೆಣ್ಣಿಗೂ ಮಣ್ಣಿಗೂ ನಡುವೆ ಈ ಪಯಣ
ಆ... ಸಾವಿರ ಬಣ್ಣದ ಬದುಕು ನಮ್ಮದು ಯಜಮಾನ
ಗಂಡಿಗೂ ಹೆಣ್ಣಿಗೂ ಮಣ್ಣಿಗೂ ನಡುವೆ ಈ ಪಯಣ
ಪ್ರತಿ ಕಣ್ಣೊಳಗೆ ಒಂದು ಕಥೆಯುಂಟು 
ಪ್ರತಿ ಕ್ಷಣ ಘಳಿಗೆ ಒಂದು ತಿರುವುಂಟು 
ಪ್ರತಿ ಹೃದಯದ ಹಣೆಯಲು ಪ್ರೀತಿಯ ಹೆಸರುಂಟು
(ಒಹೋಹೋ  ಒಹೋಹೋ  ಒಹೋಹೋ  )
ಸಾವಿರ ಬಣ್ಣದ ಬದುಕು ನಮ್ಮದು ಯಜಮಾನ
ಗಂಡಿಗೂ ಹೆಣ್ಣಿಗೂ ಮಣ್ಣಿಗೂ ನಡುವೆ ಈ ಪಯಣ...
ಹೈ  ಹೈ (ಜುಜುಂ... ಜುಜುಂಜುಂ ... ಜುಜುಂಜುಂ)
ಹೈ ಹೈ ಹೈ ಹೈ ಹೈ ಹೈ
ಹಾರುವ ಹಕ್ಕಿಗಳಾಗೋಣ ರೆಕ್ಕೆಯ ಮೇಲೆ ಪದ ಹಾಡೋಣ
ಓಡುವ ಮೋಡವ ಅಡ್ಡಬಂದರೇ ಮುತ್ತಿಟ್ಟು ರಾಜೀ ಆಗೋಣ
ಕಾವೇರಿ ತಾಯ್ ಎದೆಹಾಲು ಕುಡಿದು ಕನ್ನಡ ಬಾವುಟವ ಆಗೋಣ
ಸ್ನೇಹಕ್ಕೆ ಒಂದು ನಾಡನ್ನು ಕಟ್ಟು ಪ್ರೀತಿಗೆ ಒಂದು ಹಾಡನ್ನು ಕಟ್ಟು
ಮನಸಿಗೆ ಬಯಸಿನ ಕೊಡುಗೈಯು ಯಾಕಮ್ಮಾ
ಹೆಣ್ಣಿನ ಸೌಂದರ್ಯ ಒಡವೆನೇ ಸಾಕು
(ಆಆಆಆಅ... )
ಸಾವಿರ ಬಣ್ಣದ ಬದುಕು ನಮ್ಮದು ಯಜಮಾನ
ಗಂಡಿಗೂ ಹೆಣ್ಣಿಗೂ ಮಣ್ಣಿಗೂ ನಡುವೆ ಈ ಪಯಣ...
(ತಂದ ಸೈತಾನು ತಾನು ತಂದ 
ತಂದ ಸೈತಾನು ತಾನು ತಂದ ಓಓ.. ಓಓ.. ಓಓ.. )
ಕಾಮಕು ಪ್ರೇಮಕು ಒಂದೇ ಮುಖ ಆದರೂ ಬೇರೆ ಬೇರೆ ತರದ ಸುಖ
ಆಸೆಗೂ ಕನಸಿಗೂ ಒಂದೇ ಮುಖ ಅಳತೆಗೂ ಸಿಗದು ಕೊನೆತನಕ
ಎತ್ತರ ಜಿಗಿದು ಆಳಕ್ಕೆ ಏರು ಹೊಸತು ಒಗಟಿನ ವಿಷಯವಿದು
ನಾಲಿಗೆಯಿಂದಲೇ ರುಚಿಗೆ ಹೆಸರು
ಪ್ರೇಮಿಗಳಿಂದಲೇ ಬಾಳಿಗೆ ಹೆಸರು
ವಿಷಯಗಳೇ ಹೆಣ್ಣುಗಳು ದುಂಬಿಗಳು ಗಂಡುಗಳು
ಅನ್ನೋದೇ ನಾವು ಹಾಡು ಹೊಸದೊಂದು ಸಾಲು
(   ಆಆಆಆ ಆಆಆಅ ಆಆಆಅ )
ಹೇ.. ಸಾವಿರ ಬಣ್ಣದ ಬದುಕು ನಮ್ಮದು ಯಜಮಾನ
ಗಂಡಿಗೂ ಹೆಣ್ಣಿಗೂ ಮಣ್ಣಿಗೂ ನಡುವೆ ಈ ಪಯಣ
ಆ... ಸಾವಿರ ಬಣ್ಣದ ಬದುಕು ನಮ್ಮದು ಯಜಮಾನ
ಗಂಡಿಗೂ ಹೆಣ್ಣಿಗೂ ಮಣ್ಣಿಗೂ ನಡುವೆ ಈ ಪಯಣ
ಪ್ರತಿ ಕಣ್ಣೊಳಗೆ ಒಂದು ಕಥೆಯುಂಟು 
ಪ್ರತಿ ಕ್ಷಣ ಘಳಿಗೆ ಒಂದು ತಿರುವುಂಟು 
ಪ್ರತಿ ಹೃದಯದ ಹಣೆಯಲು ಪ್ರೀತಿಯ ಹೆಸರುಂಟು
(ಒಹೋಹೋ ) ಶಬರಿಬರಿಬಬಬ  (ಒಹೋಹೋ )ಶಬರಿಬರಿಬಬಬ
ಸಾವಿರ ಬಣ್ಣದ ಬದುಕು ನಮ್ಮದು ಯಜಮಾನ
ಗಂಡಿಗೂ ಹೆಣ್ಣಿಗೂ ಮಣ್ಣಿಗೂ ನಡುವೆ ಈ ಪಯಣ...
*********************************************************************************

ಮನಸೇ ನನ್ನ ಮನಸೇ 

ಸಾಹಿತ್ಯ: ಕೆ.ಕಲ್ಯಾಣ 
ಗಾಯನ : ಹರಿಹರನ
  
ತೂ..ತೂರು ತೂ   ತೂ..ತೂರು ತೂ
ಮನಸೇ ನನ್ನ ಮನಸೇ ಬೆಳಕಾಗಿ ಬಾ
ಮನಸೇ ನನ್ನ ಮನಸೇ ಬೆಳಕಾಗಿ ಬಾ
ಮನಸಾ ಬಿಚ್ಚಿ ಕೊಡುವೇ ಹೂಮಳೆಯಾಗಿ ಬಾ
ನದಿಯಾಗಿ ಅಲೆಯಾಗಿ ಪ್ರತಿ ಅಲೆಯ ಜೋತೆಯಾಗಿ
ಬರುವೇ  ಪ್ರೇಮಗೀತೆಯ ಆಗಿ..
ಮನಸೇ ನನ್ನ ಮನಸೇ ಬೆಳಕಾಗಿ ಬಾ
ಮನಸಾ ಬಿಚ್ಚಿ ಕೊಡುವೇ ಹೂಮಳೆಯಾಗಿ ಬಾ
ಓಓಓಓಓಓಓ.... ಜುಜುಮ್ ಜುಜುಮ್ ಜುಮ್..  ಓಓಓಓಓಓಓ.
ನಮ್ಮ ಪ್ರೀತಿ ಶುರುವಾಗೋದು ಒಂದೆರಡೇ ಕ್ಷಣದಲಿ
ನಮ್ಮ ಪ್ರೀತಿ ಶುರುವಾಗೋದು ಒಂದೆರಡೇ ಕ್ಷಣದಲಿ
ಅನುಬಂಧ ಶುರುವಾಗೋದು ಆ ಕ್ಷಣದ ನೆನಪಲಿ 
ನೆನಪಿನ ಹೂಗಳು ಅರಳುವುದು ಕನಸಿನ ಕಣ್ಣಲ್ಲಿ 
ನಮ್ಮ ಹೃದಯದ ಮಂದಿರದಲಿ 
ಮನಸೇ ನನ್ನ ಮನಸೇ ಬೆಳಕಾಗಿ ಬಾ (ತನನಂ ತನನಂ)
ಮನಸಾ ಬಿಚ್ಚಿ ಕೊಡುವೇ ಹೂಮಳೆಯಾಗಿ ಬಾ (ತನನಂ ತನನಂ)
ಪ್ರತಿ ಸನಿಹ ಪ್ರತಿ ವಿರಹಗಳು ಪ್ರೀತಿಗೆರಡು ಬಾಗಿಲು
ಪ್ರತಿ ಸನಿಹ ಪ್ರತಿ ವಿರಹಗಳು ಪ್ರೀತಿಗೆರಡು ಬಾಗಿಲು
ಈ ಪ್ರೀತಿ ಎಂಬ ಬಾಗಿಲಲಿ ನಂಬಿಕೆಯೇ ಕಾವಲು 
ಕಾಲವೇ ಪ್ರಕೃತಿಯ  ಕೊಡುಗೆ ಬದುಕಿನ ದಾರಿಯಲಿ 
ನಮ್ಮ ಒಲುಮೆಯ ಹಾಡಿನಲಿ 
ಮನಸೇ ನನ್ನ ಮನಸೇ ಬೆಳಕಾಗಿ ಬಾ (ತನನಂ ತನನಂ)
ಮನಸಾ ಬಿಚ್ಚಿ ಕೊಡುವೇ ಹೂಮಳೆಯಾಗಿ ಬಾ (ತನನಂ ತನನಂ)
ನದಿಯಾಗಿ ಅಲೆಯಾಗಿ ಪ್ರತಿ ಅಲೆಯ ಜೋತೆಯಾಗಿ
ಬರುವೇ  ಪ್ರೇಮಗೀತೆಯ ಆಗಿ..   ಓಓಓಓ
(ತನನಂ ತನನಂ)(ತನನಂ ತನನಂ)
*********************************************************************************

ಒಲವೇ ನಿನ್ನ (ಬದರಿನಾಥ)

ಸಾಹಿತ್ಯ: ಕೆ.ಕಲ್ಯಾಣ 
ಗಾಯನ : ಬದರಿಪ್ರಸಾದ 

ಒಲವೇ ನಿನ್ನ ಒಲವಿನ ಮೇಲೆ ಅರಳೋ ಮಲ್ಲಿಗೆಯು ನಾನು 
ಅರಳೋ ಮಲ್ಲಿಗೆ ನಾನು 
ಒಲವೇ ನಿನ್ನ ಒಲವಿನ ಮೇಲೆ ಅರಳೋ ಮಲ್ಲಿಗೆಯು ನಾನು 
ಅರಳೋ ಮಲ್ಲಿಗೆ ನಾನು 
ನಿನ್ನೊಳಗೆ ನಿನ್ನ ಎದೆಯೊಳಗೆ  ಚಿಲಿಪಿಲಿ ಗಿಳಿ ನಾನು
ಗಂಗಾ ಯಮುನಾ ನದಿಗಳಿಗೆ ನಿನ್ನ ಹೆಸರೇ ಇಡುವೇ ನಾನು 
ಹೆಸರ ಇಡುವೇ ನಾನು
ನಿನ್ನ ಅಲೆಯ ಪ್ರೀತಿ ಅಲೆಯ ಎರಿಳಿತವೇ ನಾನು 
ಒಲವೇ ನಿನ್ನ ಒಲವಿನ ಮೇಲೆ ಅರಳೋ ಮಲ್ಲಿಗೆಯು ನಾನು 
ಅರಳೋ ಮಲ್ಲಿಗೆ ನಾನು 
         
ನನ್ನ ಮನಸ್ಸು ಬರೆಯೋ ಬಾಷೆಗಳೆಲ್ಲಾ ನಿನ್ನದೇ ನಿನ್ನದೇ ಪ್ರತಿಬಿಂಬ 
ಬಿಂಬಗಳೇ ನನ್ನ ಕೈ ತುಂಬಾ 
ಗುಂಡಿಗೆಯ ಜೇನ ಗಿಂಡಿಗೆಯಾ ಹನಿ ಹನಿ ನೀನಾಗು 
ನನ್ನದೆಯಾ ನಂಬಿಕೆಯಾ ಪ್ರತಿಧ್ವನಿ ನೀನಾಗು 
ಹೃದಯದಾ....  ವೀಣೆಯ ಮಡಿಲಲಿ ಕುಳಿತಿರು ನಗುತಿರು 
ಗಂಗಾ ಯಮುನಾ ನದಿಗಳಿಗೆ ನಿನ್ನ ಹೆಸರೇ ಇಡುವೇ ನಾನು 
ಹೆಸರ ಇಡುವೇ ನಾನು 
           
ನೆನಪುಗಳೆಲ್ಲಾ ಮೌನಗಳಾಗಿ ಕನಸಿನ ಮಾತು ಶುರುವಾಯಿತು          
ಆ ಕನಸೇ ನನ್ನ ಗುರುವಾಯಿತು 
ಮಾತುಗಳಿರದಾ ಭಾವನೆಯೊಂದೇ ಬಾಳಿನ ಗುರುತಾಯಿತು 
ಆಸರೆ ಇರಲಿ ಅಗಲಿಕೆಯಿರಲಿ ಎಲವೂ ವರವಾಯಿತು  
ಉಸಿರಿನಾ...  ಕೊಳಲಿನಾ  ಸ್ವರದಲಿ ತುಂಬಿರು ನಗುತಿರು
ಒಲವೇ ನಿನ್ನ ಒಲವಿನ ಮೇಲೆ ಅರಳೋ ಮಲ್ಲಿಗೆಯು ನಾನು 
ಅರಳೋ ಮಲ್ಲಿಗೆ ನಾನು 
ನಿನ್ನೊಳಗೆ ನಿನ್ನ ಎದೆಯೊಳಗೆ  ಚಿಲಿಪಿಲಿ ಗಿಳಿ ನಾನು
ಒಲವೇ ನಿನ್ನ ಒಲವಿನ ಮೇಲೆ ಅರಳೋ ಮಲ್ಲಿಗೆಯು ನಾನು 
ಅರಳೋ ಮಲ್ಲಿಗೆ ನಾನು 
ಅರಳೋ ಮಲ್ಲಿಗೆ ನಾನು 
*********************************************************************************

ಒಲವೇ ನಿನ್ನ (ಯುಗಳಗೀತೆ)

ಸಾಹಿತ್ಯ: ಕೆ.ಕಲ್ಯಾಣ 
ಗಾಯನ : ಸುಜಾತ, ಎಸ್.ಪಿ.ಬಿ. 

ಹೆಣ್ಣು : ಒಲವೇ ನಿನ್ನ ಒಲವಿನ ಮೇಲೆ ಅರಳೋ ಮಲ್ಲಿಗೆಯು ನಾನು 
          ಅರಳೋ ಮಲ್ಲಿಗೆ ನಾನು 
          ಒಲವೇ ನಿನ್ನ ಒಲವಿನ ಮೇಲೆ ಅರಳೋ ಮಲ್ಲಿಗೆಯು ನಾನು 
           ಅರಳೋ ಮಲ್ಲಿಗೆ ನಾನು 
          ಒಲವೇ ನಿನ್ನ ಒಲವಿನ ಮೇಲೆ ಅರಳೋ ಮಲ್ಲಿಗೆಯು ನಾನು 
          ಅರಳೋ ಮಲ್ಲಿಗೆ ನಾನು 
         ನಿನ್ನೊಳಗೆ ನಿನ್ನ ಎದೆಯೊಳಗೆ  ಚಿಲಿಪಿಲಿ ಗಿಳಿ ನಾನು
ಗಂಡು : ಗಂಗಾ ಯಮುನಾ ನದಿಗಳಿಗೆ ನಿನ್ನ ಹೆಸರೇ ಇಡುವೇ ನಾನು 
            ಹೆಸರ ಇಡುವೇ ನಾನು
           ನಿನ್ನ ಅಲೆಯ ಪ್ರೀತಿ ಅಲೆಯ ಎರಿಳಿತವೇ ನಾನು 
ಹೆಣ್ಣು :  ಒಲವೇ ನಿನ್ನ ಒಲವಿನ ಮೇಲೆ ಅರಳೋ ಮಲ್ಲಿಗೆಯು ನಾನು 
           ಅರಳೋ ಮಲ್ಲಿಗೆ ನಾನು 
       
ಗಂಡು : ನನ್ನ ಮನಸ್ಸು ಬರೆಯೋ ಆಸೆಗಳೆಲ್ಲಾ ನಿನ್ನದೇ ನಿನ್ನದೇ ಪ್ರತಿಬಿಂಬ 
           ಬಿಂಬಗಳೇ ನನ್ನ ಕೈ ತುಂಬಾ 
ಹೆಣ್ಣು : ಗುಂಡಿಗೆಯ ಜೇನ ಗಿಂಡಿಗೆಯಾ ಹನಿ ಹನಿ ನೀನಾಗು 
ಗಂಡು : ನನ್ನದೆಯಾ ನಂಬಿಕೆಯಾ ಪ್ರತಿಧ್ವನಿ ನೀನಾಗು 
ಹೆಣ್ಣು : ಹೃದಯದಾ....  ವೀಣೆಯಾ ಮಡಿಲಲಿ ಕುಳಿತಿರು ನಗುತಿರು 
ಗಂಡು : ಗಂಗಾ ಯಮುನಾ ನದಿಗಳಿಗೆ ನಿನ್ನ ಹೆಸರೇ ಇಡುವೇ ನಾನು 
            ಹೆಸರ ಇಡುವೇ ನಾನು 
           
ಹೆಣ್ಣು : ನೆನಪುಗಳೆಲ್ಲಾ ಮೌನಗಳಾಗಿ ಕನಸಿನ ಮಾತು ಶುರುವಾಯಿತು        
          ಆ ಕನಸೇ ನನ್ನ ಗುರುವಾಯಿತು 
ಗಂಡು : ಮಾತುಗಳಿರದಾ ಭಾವನೆಯೊಂದೇ ಬಾಳಿನ ಗುರುತಾಯಿತು 
ಹೆಣ್ಣು : ಆಸರೆ ಇರಲಿ ಅಗಲಿಕೆಯಿರಲಿ ಎಲವೂ ವರವಾಯಿತು  
ಗಂಡು : ಉಸಿರಿನಾ...  ಕೊಳಲಿನಾ  ಸ್ವರದಲಿ ತುಂಬಿರು ನಗುತಿರು
ಹೆಣ್ಣು : ಒಲವೇ ನಿನ್ನ ಒಲವಿನ ಮೇಲೆ ಅರಳೋ ಮಲ್ಲಿಗೆಯು ನಾನು 
          ಅರಳೋ ಮಲ್ಲಿಗೆ ನಾನು 
          ನಿನ್ನೊಳಗೆ ನಿನ್ನ ಎದೆಯೊಳಗೆ  ಚಿಲಿಪಿಲಿ ಗಿಳಿ ನಾನು
ಇಬ್ಬರು : ಒಲವೇ ನಿನ್ನ ಒಲವಿನ ಮೇಲೆ ಅರಳೋ ಮಲ್ಲಿಗೆಯು ನಾನು 
            ಅರಳೋ ಮಲ್ಲಿಗೆ ನಾನು  ಅರಳೋ ಮಲ್ಲಿಗೆ ನಾನು 
*********************************************************************************

ಚಂದಿರನಿಲ್ಲದ 

ಸಾಹಿತ್ಯ: ಕೆ.ಕಲ್ಯಾಣ 
ಗಾಯನ : ಕೆ.ಜೆ.ಏಸುದಾಸ  

ಓಓಓಓಓಓಓ....
ಚಂದಿರನಿಲ್ಲದಾ ಆ ಬಾನಿನಲ್ಲಿ ಬೆಳದಿಂಗಳ ಹುಡುಕುವಾ
ಒಬ್ಬ ಕುರುಡನು ನಾನಿಲ್ಲಿ
ಚಂದಿರನಿಲ್ಲದಾ ಆ ಬಾನಿನಲ್ಲಿ ಬೆಳದಿಂಗಳ ಹುಡುಕುವಾ
ಒಬ್ಬ ಕುರುಡನು ನಾನಿಲ್ಲಿ
ಕಂಡಿದ್ದು ಸುಳ್ಳು ಕಾಣದ್ದು ಸುಳ್ಳು ನಿಜ ಹೇಳಲು ಬಾಯಿಲ್ಲ ನನಗಿಲ್ಲಿ...
ದಿಕ್ಕಿಲ್ಲಾ ದೆಸೆಯಿಲ್ಲಾ ಅಳುವ ಕಣ್ಣಿಗೆ ರೆಪ್ಪೆಗಳಿಲ್ಲಾ
ಚಂದಿರನಿಲ್ಲದಾ ಆ ಬಾನಿನಲ್ಲಿ ಬೆಳದಿಂಗಳ ಹುಡುಕುವಾ
ಒಬ್ಬ ಕುರುಡನು ನಾನಿಲ್ಲಿ
ರಾತ್ರಿಗಳೆಲ್ಲಾ ಸುಖದಾ ಕನಸುಗಳಾಗಿ 
ಮತ್ತೇ ಹಗಲುಗಳೆಲ್ಲಾ ದುಃಖದಾ ನೆನಪುಗಳಾಗಿ 
ಪಾಪದ ಎತ್ತಿನ ಬಂಡಿಯ ಚಕ್ಕಡಿಯಾಗಿ 
ಈ ... ಕಾಲವೆಂಬ ಕೈಯಲ್ಲಿ ತಕ್ಕಡಿಯಾಗಿ 
ಬಾಳೋದೇ ಇಲ್ಲಿ ದಿನದಿನಕೂ ಕಥೆಗಳಾಗಿ ಕಾಣುತಮ್ಮಾ 
ಮನುಷ್ಯನ ಆಸೆಗಳೇ ವ್ಯಥೆಗಳಾಗಿ ಉಳಿಯುತಮ್ಮಾ 
ವಿಧಿಯಾಟ ಹುಡುಗಾಟ ಹೆತ್ತವನೆದೆಯಲಿ ಬೆಂಕಿಯ ಊಟ 
ಚಂದಿರನಿಲ್ಲದಾ ಆ ಬಾನಿನಲ್ಲಿ ಬೆಳದಿಂಗಳ ಹುಡುಕುವಾ
ಒಬ್ಬ ಕುರುಡನು ನಾನಿಲ್ಲಿ 
ಅರ್ಥವಿಲ್ಲದಿರುವ ಲೋಕ ನಮ್ಮದು 
ಇಲ್ಲಿ ಸ್ವಾರ್ಥವೊಂದೇ ಬಡವನ ಆಳುವಂತದು 
ಎಲ್ಲಾ ಇಲ್ಲಿ ಒಳ್ಳೆಯದು ಎಲ್ಲಾ ಕೆಟ್ಟದು 
ಬಂದಹಾಗೇ ಪಡೆಯೋದೇ ಆ ದೇವರು ಕೊಟ್ಟಿದ್ದು 
ನಂಬಿಕೆಯೇ.... ಇಂಥ ಊರುಬಿಟ್ಟವರಾ ಕಾಯೋ ಊರುಗೋಲು 
ಆದರೆ ಮೂರೂ ಬಿಟ್ಟವರಾ ಒಂದೇ ಬುಡಮೇಲೂ    
ಅದು ಯಾರೋ ಬರೆದೋರು ಗಾಯದ ಮೇಲೆ ಬರೇ ಎಳೆದೋರು 
ಚಂದಿರನಿಲ್ಲದಾ ಆ ಬಾನಿನಲ್ಲಿ ಬೆಳದಿಂಗಳ ಹುಡುಕುವಾ
ಒಬ್ಬ ಕುರುಡನು ನಾನಿಲ್ಲಿ 
ಚಂದಿರನಿಲ್ಲದಾ ಆ ಬಾನಿನಲ್ಲಿ ಬೆಳದಿಂಗಳ ಹುಡುಕುವಾ
ಒಬ್ಬ ಕುರುಡನು ನಾನಿಲ್ಲಿ
ಕಂಡಿದ್ದು ಸುಳ್ಳು ಕಾಣದ್ದು ಸುಳ್ಳು ನಿಜ ಹೇಳಲು ಬಾಯಿಲ್ಲ ನನಗಿಲ್ಲಿ...
ದಿಕ್ಕಿಲ್ಲಾ ದೆಸೆಯಿಲ್ಲಾ ಅಳುವ ಕಣ್ಣಿಗೆ ರೆಪ್ಪೆಗಳಿಲ್ಲಾ
ಚಂದಿರನಿಲ್ಲದಾ ಆ ಬಾನಿನಲ್ಲಿ ಬೆಳದಿಂಗಳ ಹುಡುಕುವಾ
ಒಬ್ಬ ಕುರುಡನು ನಾನಿಲ್ಲಿ
*********************************************************************************

ಚಂದಿರನಿಲ್ಲದ

ಸಾಹಿತ್ಯ: ಕೆ.ಕಲ್ಯಾಣ 
ಗಾಯನ : ಸುಜಾತ 

ಓಓಓ... ಓಓಓ... ಓ....
ಚಂದಿರನಿಲ್ಲದಾ ಆ ಬಾನಿನಲ್ಲಿ ಬೆಳದಿಂಗಳ ಹುಡುಕುವಾ ಅಲೆಮಾರಿ ನಾನಿಲ್ಲಿ
ಚಂದಿರನಿಲ್ಲದಾ ಆ ಬಾನಿನಲ್ಲಿ ಬೆಳದಿಂಗಳ ಹುಡುಕುವಾ ಅಲೆಮಾರಿ ನಾನಿಲ್ಲಿ
ಕಂಡಿದ್ದು ಸುಳ್ಳು ಕಾಣದ್ದು ಸುಳ್ಳು ನಿಜ ಹೇಳಲು ಬಾಯಿಲ್ಲ ನನಗಿಲ್ಲಿ...
ದಿಕ್ಕಿಲ್ಲಾ ದೆಸೆಯಿಲ್ಲಾ ಅಳುವ ಕಣ್ಣಿಗೆ ರೆಪ್ಪೆಗಳಿಲ್ಲಾ
ಚಂದಿರನಿಲ್ಲದಾ ಆ ಬಾನಿನಲ್ಲಿ ಬೆಳದಿಂಗಳ ಹುಡುಕುವಾ ಅಲೆಮಾರಿಯು ನಾನಿಲ್ಲಿ
ಓಓಓ...  ರಾತ್ರಿಗಳೆಲ್ಲಾ ಸುಖದಾ ಕನಸುಗಳಾಗಿ 
ಮತ್ತೇ ಹಗಲುಗಳೆಲ್ಲಾ ದುಃಖದಾ ನೆನಪುಗಳಾಗಿ 
ಪಾಪದ ಎತ್ತಿನ ಬಂಡಿಯ ಚಕ್ಕಡಿಯಾಗಿ 
ಈ ... ಕಾಲವೆಂಬ ಕೈಯಲ್ಲಿ ತಕ್ಕಡಿಯಾಗಿ 
ಬಾಳೋದೇ ಇಲ್ಲಿ ದಿನದಿನಕೂ ಕಥೆಗಳಾಗಿ ಕಾಣುತಮ್ಮಾ 
ಮನುಷ್ಯನ ಆಸೆಗಳೇ ವ್ಯಥೆಗಳಾಗಿ ಉಳಿಯುತಮ್ಮಾ 
ವಿಧಿಯಾಟ ಹುಡುಗಾಟ ಹೆತ್ತವಳೆದೆಯಲಿ ಬೆಂಕಿಯ ಊಟ 
ಚಂದಿರನಿಲ್ಲದಾ ಆ ಬಾನಿನಲ್ಲಿ ಬೆಳದಿಂಗಳ ಹುಡುಕುವಾ ಅಲೆಮಾರಿಯು ನಾನಿಲ್ಲಿ
ಅರ್ಥವಿಲ್ಲದಿರುವ ಲೋಕ ನಮ್ಮದು 
ಇಲ್ಲಿ ಸ್ವಾರ್ಥವೊಂದೇ ಬಡವನ ಆಳುವಂತದು 
ಎಲ್ಲಾ ಇಲ್ಲಿ ಒಳ್ಳೆಯದು ಎಲ್ಲಾ ಕೆಟ್ಟದು 
ಬಂದಹಾಗೇ ಪಡೆಯೋದೇ ಆ ದೇವರು ಕೊಟ್ಟಿದ್ದು 
ನಂಬಿಕೆಯೇ.... ಇಂಥ ಊರುಬಿಟ್ಟವರಾ ಕಾಯೋ ಊರುಗೋಲು 
ಆದರೆ ಮೂರೂ ಬಿಟ್ಟವರಾ ಒಂದೇ ಬುಡಮೇಲೂ    
ಅದು ಯಾರೋ ಬರೆದೋರು ಗಾಯದ ಮೇಲೆ ಬರೇ ಎಳೆದೋರು 
ಚಂದಿರನಿಲ್ಲದಾ ಆ ಬಾನಿನಲ್ಲಿ ಬೆಳದಿಂಗಳ ಹುಡುಕುವಾ ಅಲೆಮಾರಿಯು ನಾನಿಲ್ಲಿ
ಚಂದಿರನಿಲ್ಲದಾ ಆ ಬಾನಿನಲ್ಲಿ ಬೆಳದಿಂಗಳ ಹುಡುಕುವಾ ಅಲೆಮಾರಿಯು ನಾನಿಲ್ಲಿ
ಕಂಡಿದ್ದು ಸುಳ್ಳು ಕಾಣದ್ದು ಸುಳ್ಳು ನಿಜ ಹೇಳಲು ಬಾಯಿಲ್ಲ ನನಗಿಲ್ಲಿ...
ದಿಕ್ಕಿಲ್ಲಾ ದೆಸೆಯಿಲ್ಲಾ ಅಳುವ ಕಣ್ಣಿಗೆ ರೆಪ್ಪೆಗಳಿಲ್ಲಾ
ಚಂದಿರನಿಲ್ಲದಾ ಆ ಬಾನಿನಲ್ಲಿ ಬೆಳದಿಂಗಳ ಹುಡುಕುವಾ ಅಲೆಮಾರಿಯು ನಾನಿಲ್ಲಿ
*********************************************************************************

 ಜೋಗಯ್ಯ ಜೋಗಯ್ಯ

ಸಾಹಿತ್ಯ: ಕೆ.ಕಲ್ಯಾಣ 
ಗಾಯನ : ಉದಿತ ನಾರಾಯಣ 

ಹೊಯಾರಳಿ ಹೊಯ್ ಹೊಯ್ ಹೊಯಾರಳಿ ಹೊಯ್ ಹೊಯ್ ಹೊಯೇ ಹೋಯೇ
ಹೊಯಾರಳಿ ಹೊಯ್ ಹೊಯ್ ಹೊಯಾರಳಿ ಹೊಯ್ ಹೊಯ್ ಹೊಯೇ ಹೋಯೇ
ಜೋಗಯ್ಯ ಜೋಗಯ್ಯ ಡಂಗುರ ಬಡಿಯಯ್ಯ ನಡೀಬೇಕು ಬಾಳಿನ ಡೊಂಬರಾಟ
ಅಮ್ಮಯ್ಯ ದಮ್ಮಯ್ಯ ನೀನಮ್ಮ ದೇವರಯ್ಯ ಹೊಟ್ಟೆಪಾಡು ಅಂದರನೇ  ಪೀಕಲಾಟ
ಎಗ್ಗಿಲ್ಲ ಸಿಗ್ಗಿಲ್ಲ ನಾವ್ ಹಾಡೋ ಪರಪಂಚಾನೇ ಬೇರೆ
ಊರು ಊರೂರು ಅಲೆಮಾರಿಯಾಗಿ ಸುತ್ತಿ ಬಂದರೂ ನಮ್ಮ ಕಥೆ ನಮ್ಮಕ್ಯಾರಾ ಕ್ಯಾರಾ
ಜೋಗಯ್ಯ ಜೋಗಯ್ಯ ಡಂಗುರ ಬಡಿಯಯ್ಯ ನಡೀಬೇಕು ಬಾಳಿನ ಡೊಂಬರಾಟ
ಅಮ್ಮಯ್ಯ ದಮ್ಮಯ್ಯ ನೀನಮ್ಮ ದೇವರಯ್ಯ ಹೊಟ್ಟೆಪಾಡು ಅಂದರನೇ  ಪೀಕಲಾಟ
ಹೇ.. ಹೇ... ಹೇ... ಹೇ.. ತಮ್ ತನನಂ ತಾನ್ ತಾನ್ ತಮ್ ತನನಂ ತಾನ್ ತಾನ್ 
ದುಡಿಮೆನೇ ದ್ಯಾವರೂ ಶಿವನ ಆಣೆ ಗಂಡಿನ ಕುಡುಕುರುನು ಕುಣೀತಿವೇ ಹಿಂಗೆನೇ 
(ಕುಣೀತಿವೇ ಹಿಂಗೆನೇ ) 
ದುಡಿಮೆನೇ ದ್ಯಾವರೂ ಶಿವನ ಆಣೆ ಗಂಡಿನ ಕುಡುಕುರುನು ಕುಣೀತಿವೇ ಹಿಂಗೆನೇ 
ಧಣಿಗಳ ಎದುರು ದಣಿಯದ ಬೆವರು ಅನಾಥರು ನಾವೂ 
ಎಷ್ಟೊತ್ತು ಕಾಲಘಳಿಗೆ ಕೈಮುಗಿದರನೂ  ನಮ್ಮ ಹಣೆಬರಹ ಅಷ್ಟೇ.. 
ಆದ್ರೂ ತಂತೆಯಿಲ್ಲಾ  ಕಸಯ್ಯನ ಕಂತೆಯಿಲ್ಲ ಎಲ್ಲ ನಮ್ಮ ಖುಷಿಗಷ್ಟೇ 
ಜೋಗಯ್ಯ ಜೋಗಯ್ಯ ಡಂಗುರ ಬಡಿಯಯ್ಯ ನಡೀಬೇಕು ಬಾಳಿನ ಡೊಂಬರಾಟ
ಅಮ್ಮಯ್ಯ ದಮ್ಮಯ್ಯ ನೀನಮ್ಮ ದೇವರಯ್ಯ ಹೊಟ್ಟೆಪಾಡು ಅಂದರನೇ  ಪೀಕಲಾಟ 
ತಮ್ ತನನಂ ತಾನ್ ತಾನ್ ತಮ್ ತನನಂ ತಾನ್ ತಾನ್
ಹಾಡಲ್ಲಿ ತೊಳಿತೀವಿ ಮನಸಿನ ಕೊಳೆ
ಮೋಡವು ಅತ್ತರೆ ತಾನೇ ಭೂಮಿಗೆಂದು ಆ ಮಳೇ
ಭೂಮಿಗೆಂದು ಆ ಮಳೇ
ಹಾಡಲ್ಲಿ ತೊಳಿತೀವಿ ಮನಸಿನ ಕೊಳೆ
ಮೋಡವು ಅತ್ತರೆ ತಾನೇ ಭೂಮಿಗೆಂದು ಆ ಮಳೇ
ಹರಕಲು ಬಟ್ಟೆ ಮುರುಕಲು ಗುಡಿಸಲೂ ನಮಗಾವ ಚಿಂತೆಯಿಲ್ಲಾ... ಆಆಆ... 
ನಮ್ಮ ಬಾಳು ಎಂದೂ ಪಕ್ಕಾ ಬಯಲುಗಳು ಹುಟ್ಟಾಕಿದರೇ ಬರಿ ಗೋಳು 
ತುಂಡು ಬಟ್ಟೆಗಾಗಿ ಗೇಣು ಹೊಟ್ಟೆಗಾಗಿ ಎಲ್ಲಾರ ಡ್ರಾಮ ಇದು ಕೇಳು  
ಜೋಗಯ್ಯ ಜೋಗಯ್ಯ ಡಂಗುರ ಬಡಿಯಯ್ಯ ನಡೀಬೇಕು ಬಾಳಿನ ಡೊಂಬರಾಟ
ಅಮ್ಮಯ್ಯ ದಮ್ಮಯ್ಯ ನೀನಮ್ಮ ದೇವರಯ್ಯ ಹೊಟ್ಟೆಪಾಡು ಅಂದರನೇ  ಪೀಕಲಾಟ
ಎಗ್ಗಿಲ್ಲ ಸಿಗ್ಗಿಲ್ಲ ನಾವ್ ಹಾಡೋ ಪರಪಂಚಾನೇ ಬೇರೆ
ಊರು ಊರೂರು ಅಲೆಮಾರಿಯಾಗಿ ಸುತ್ತಿ ಬಂದರೂ ನಮ್ಮ ಕಥೆ ನಮ್ಮಕ್ಯಾರಾ ಕ್ಯಾರಾ
ಜೋಗಯ್ಯ ಜೋಗಯ್ಯ ಡಂಗುರ ಬಡಿಯಯ್ಯ ನಡೀಬೇಕು ಬಾಳಿನ ಡೊಂಬರಾಟ
ಅಮ್ಮಯ್ಯ ದಮ್ಮಯ್ಯ ನೀನಮ್ಮ ದೇವರಯ್ಯ ಹೊಟ್ಟೆಪಾಡು ಅಂದರನೇ  ಪೀಕಲಾಟ 
*********************************************************************************