Monday, April 29, 2019

ಅಸಂಭವ (1986)

ಅಸಂಭವ (1986)

ಅಸಂಭವ ಚಿತ್ರದ ಹಾಡುಗಳು 
ಜೀವ ಬಂದ ಬೊಂಬೆಯೋ ನಕ್ಕು ನಿಂತ ರಂಭೆಯೋ 

ಯಾರಿಗೆ ಬಂತು ಎಲ್ಲಿಗೆ ಬಂತು ನಲವತ್ತೇಳರ ಸ್ವಾತಂತ್ರ್ಯ

ನಿನ್ನಂಥ ಕತೆಗಾರ ಯಾರಿಲ್ಲ, ನೀ ಬರೆದಂತೇ  ಆಡೋರು  ನಾವೇಲ್ಲಾ 

ಚಿನ್ನ ಚೀನಾ ಬೇಡ ಚಿನ್ನ ಯಾಕೆ ಹೀಗೆ ಕಾಡ್ತಿ ನನ್ನ 

ಹುಬ್ಳಿ ಸೀರೆ ರವಿಕೆ ಖಣ ತಂದೀವ್ನಿ 

ನಿನ್ನ ಹೊತ್ತುವಳು ಹೊತ್ತು ಹೆತ್ತವಳು 

ಅಸಂಭವ (1986) - ಜೀವ ಬಂದ ಬೊಂಬೆಯೊ 
ಸಂಗೀತ: ಶಂಕರ್-ಗಣೇಶ್ ರಚನೆ: ಆರ್.ಎನ್.ಜಯಗೋಪಾಲ್  ಗಾಯನ: ಕೆ.ಜೆ.ಯೇಸುದಾಸ್, ವಾಣಿ ಜಯರಾಂ
ಗಂಡು: ಜೇವ ಬಂದ ಬೊಂಬೆಯೋ ನಕ್ಕು ನಿಂತ ರಂಭೆಯೊ
           ನಿನ್ನ ಕಣ್ಣ ಮಿಂಚಲಿ ನನ್ನೆದೆ  ಹಾಡಿದೆ ಪ್ರೇಮದೆ ಈ ದಿನ
ಹೆಣ್ಣು: ಸುತ್ತಮುತ್ತ ಎಲ್ಲೆಡೆ ನಿನ್ನ ರೂಪ ಕಂಡೇ ನಾ
         ನಿನ್ನ ನಗೆ ಅಲೆಯಲಿ ಈ ಮನ ಹಾಡುತ ತೇಲಿದೆ ಈ ದಿನ
ಗಂಡು: ನೀ ಯಾವುದೋ ಶಿಲ್ಪಿಯ ಕಲ್ಪನೆ ಈ ದೇವಿಗೆ ಮಾಡುವೆ ವಂದನೆ
ಹೆಣ್ಣು: ನೀ ವೈಣಿಕ ನಾ ವೀಣೆಯೊ ನೀ ಮೀಟಿದೆ ನಾ ಹಾಡಿದೆ
ಗಂಡು: ನಂಗಾಗಿ ಹುಟ್ಟಿ ನೀ ಬಂದೆಯೊ ಹೂಮಾಲೆ ಕಟ್ಟಿ ನೀ ತಂದೆಯೊ
ಹೆಣ್ಣು: ತಂದೆ ನಾನು ನನ್ನನೆ
ಗಂಡು: ಜೇವ ಬಂದ ಬೊಂಬೆಯೋ ನಕ್ಕು ನಿಂತ ರಂಭೆಯೊ
ಹೆಣ್ಣು: ನಿನ್ನ ನಗೆ ಅಲೆಯಲಿ ಈ ಮನ  ಹಾಡುತ ತೇಲಿದೆ ಈ ದಿನ
ಹೆಣ್ಣು: ನೀ ಧೈರ್ಯದೆ ಗೆದ್ದೆಯೋ ನನ್ನನೇ ನಾ ಆ ಕ್ಷಣ ಸೇರಿದೆ ನಿನ್ನನೇ
ಗಂಡು: ನಾ ಬಂಧಿಯು ಆ ಕಣ್ಣಲಿ ಮನೆ ಮಾಡಿದೆ ನೀ ನನ್ನಲಿ
ಹೆಣ್ಣು: ನೀನಾದೆ ದೀಪ ಈ ಬಾಳಿಗೆ ನೀತಂದೆ ಗೀತೆ ಈ ಹಾಡಿಗೆ
ಗಂಡು: ನೀನೇ ಪ್ರೀತಿ ಪಲ್ಲವಿ
ಹೆಣ್ಣು: ಸುತ್ತಮುತ್ತ ಎಲ್ಲೆಡೆ ನಿನ್ನ ರೂಪ ಕಂಡೆ ನಾ
ಗಂಡು: ನಿನ್ನ ಕಣ್ಣ ಮಿಂಚಲಿ ನನ್ನೆದೆ ಹಾಡಿದೆ ಪ್ರೇಮದೆ ಈ ದಿನ
------------------------------------------------------------------------------------------------------------------------
ಅಸಂಭವ (1986) - ಯಾರಿಗೆ ಬಂತು? ಎಲ್ಲಿಗೆ ಬಂತು?
ಸಾಹಿತ್ಯ : ಸಿದ್ಧಲಿಂಗಯ್ಯ ಸಂಗೀತ : ಶಂಕರ್-ಗಣೇಶ್ ಗಾಯನ : ರಮೇಶ್, ಕೋರಸ್ 
ಗಂಡು : ಯಾರಿಗೆ ಬಂತು ಎಲ್ಲಿಗೆ ಬಂತು ನಲವತ್ತೇಳರ ಸ್ವಾತಂತ್ರ್ಯ
           ಯಾರಿಗೆ ಬಂತು ಎಲ್ಲಿಗೆ ಬಂತು ನಲವತ್ತೇಳರ ಸ್ವಾತಂತ್ರ್ಯ
           ಜನಗಳ ತಿನ್ನುವ ಬಾಯಿಗೆ ಬಂತು ಲೂಟಿಗಾರರ ಜೇಬಿಗೆ ಬಂತು
           ಜನಗಳ ತಿನ್ನುವ ಬಾಯಿಗೆ ಬಂತು ಲೂಟಿಗಾರರ ಜೇಬಿಗೆ ಬಂತು
           ಮಹಡಿಮನೆಗಳ ಸಾಲಿಗೆ ಬಂತು  ಕೋಟ್ಯಾಧೀಶರ ಕೋಣೆಗೆ ಬಂತು
           ನಲವತ್ತೇಳರ ಸ್ವಾತಂತ್ರ್ಯ
ಕೋರಸ್ : ನಲವತ್ತೇಳರ ಸ್ವಾತಂತ್ರ್ಯ
               ಯಾರಿಗೆ ಬಂತು ಎಲ್ಲಿಗೆ ಬಂತು ನಲವತ್ತೇಳರ ಸ್ವಾತಂತ್ರ್ಯ
                ನಲವತ್ತೇಳರ ಸ್ವಾತಂತ್ರ್ಯ
ಗಂಡು : ಪೋಲೀಸರ ಬೂಟಿಗೆ ಬಂತು  ಮಾಲೀಕರ ಚಾಟಿಗೆ ಬಂತು
            ಪೋಲೀಸರ ಬೂಟಿಗೆ ಬಂತು  ಮಾಲೀಕರ ಚಾಟಿಗೆ ಬಂತು
            ಬಂದೂಕದ ಗುಂಡಿಗೆ ಬಂತು  ನಲವತ್ತೇಳರ ಸ್ವಾತಂತ್ರ್ಯ
ಕೋರಸ್ : ಯಾರಿಗೆ ಬಂತು ಎಲ್ಲಿಗೆ ಬಂತು ನಲವತ್ತೇಳರ ಸ್ವಾತಂತ್ರ್ಯ
               ನಲವತ್ತೇಳರ ಸ್ವಾತಂತ್ರ್ಯ
ಗಂಡು : ಅಧಿಕಾರ ಗದ್ದುಗೆ ಮೇಲೆ ವರ್ಷಗಟ್ಟಲೇ ಚರ್ಚೆಗೇ ಕೂತು  
           ಅಧಿಕಾರ ಗದ್ದುಗೆ ಮೇಲೆ ವರ್ಷಗಟ್ಟಲೇ ಚರ್ಚೆಗೇ ಕೂತು 
           ಬಡವರ ಬೆವರ ರಕ್ತವ ಕುಡಿದು ಹೇಳಲೇ ಇಲ್ಲ ಸ್ವಾತಂತ್ರ್ಯ 
ಕೋರಸ್ : ಯಾರಿಗೆ ಬಂತು ಎಲ್ಲಿಗೆ ಬಂತು ನಲವತ್ತೇಳರ ಸ್ವಾತಂತ್ರ್ಯ ಹ್ಹಾ
               ನಲವತ್ತೇಳರ ಸ್ವಾತಂತ್ರ್ಯ
ಗಂಡು : ಸಾವಿರಾರು ಜನ ಗೋರಿಯಾದರು ಲಕ್ಷ ಲಕ್ಷ ಜನ ಗಲ್ಲಿಗೇರಿದರು
            ರೈತ ಕಾರ್ಮಿಕನು ರಕ್ತವ ಕೊಟ್ಟನು 
           ಬಡವರ ಮನೆಗೆ ಬರಲಿಲ್ಲ ಬೆಳಕಿನ ಕಿರಣ ತರಲಿಲ್ಲ
           ಬಡವರ ಮನೆಗೆ ಬರಲಿಲ್ಲ ಬೆಳಕಿನ ಕಿರಣ ತರಲಿಲ್ಲ
           ಗೋಳಿನ ಕಡಲನು ಬತ್ತಿಸಲಿಲ್ಲ ಸಮತೆಯ ಹೂವನು ಅರಳಿಸಲಿಲ್ಲ
          ನಲವತ್ತೇಳರ ಸ್ವಾತಂತ್ರ್ಯ 
ಕೋರಸ್ : ಯಾರಿಗೆ ಬಂತು ಎಲ್ಲಿಗೆ ಬಂತು ನಲವತ್ತೇಳರ ಸ್ವಾತಂತ್ರ್ಯ
               ನಲವತ್ತೇಳರ ಸ್ವಾತಂತ್ರ್ಯ
-------------------------------------------------------------------------------------------------------------------------
ಅಸಂಭವ (1986) - ನಿನ್ನಂಥ ಕತೆಗಾರ ಯಾರಿಲ್ಲ
ಸಂಗೀತ : ಶಂಕರ್-ಗಣೇಶ್ ಸಾಹಿತ್ಯ : ಆರ್.ಏನ್.ಜಯಗೋಪಾಲ್  ಗಾಯನ : ಕೆ.ಜೆ.ಏಸುದಾಸ್ 
ದೈವ ಎನ್ನುವುರು ಉಂಟು, ಕಲ್ಲು ಎನ್ನವುರು ಉಂಟು
ಕಂಡು ಕಾಣದಂತೆ ತಿಳಿದು ತಿಳಿಯದಂತೆ...ಹೇಹೇ...
ನೀ ಇರುವೇ... ಓ... ಅಹ್ಹಹ  ನೀ  ಬಲು ಜಾಣನು
ನಿನ್ನಂಥ ಕತೆಗಾರ ಯಾರಿಲ್ಲ, ನೀ ಬರೆದಂತೇ  ಆಡೋರು  ನಾವೇಲ್ಲಾ
ನಿನ್ನ ಹುಡುಗಾಟವು ನಮ್ಮ ಹೋರಾಟವು ಕೊನೆ ಏನೋ ಬಲ್ಲೋರು ಇಲ್ಲಾ...
ನಿನ್ನಂಥ ಕತೆಗಾರ ಯಾರಿಲ್ಲ, ನೀ ಬರೆದಂತೇ  ಆಡೋರು  ನಾವೇಲ್ಲಾ
ನಿನ್ನ ಹುಡುಗಾಟವು ನಮ್ಮ ಹೋರಾಟವು ಕೊನೆ ಏನೋ ಬಲ್ಲೋರು ಇಲ್ಲಾ...
ನಿನ್ನಂಥ ಕತೆಗಾರ ಯಾರಿಲ್ಲ, 
ಮೈಮುಚ್ಚೆ ಗೆಣ್ಣೂದ್ದ ಬರೀ ಬಟ್ಟೆಗೆ ಕಡು ಹೆಣುಗಾಟ ಬಾಳೆಲ್ಲಾ ಇಲ್ಲೀ ... 
ಹಸಿದಾಗ ಗತಿಯಿಲ್ಲ ಹಿಡಿ ಕೂಳಿಗೆ ಈ ನಡುಬೀದಿ ಮನೆಯಂತೇ ಇಲ್ಲೀ 
ನಿಂಗೇತಕೆ ಇಂಥ ಚೆಲ್ಲಾಟವೂ ಕಣ್ಣೀರನು ಕಂಡು ಉಲ್ಲಾಸವೂ
ಇದಕ್ಕಿಂತ ಅನ್ಯಾಯ ಬೇರಿಲ್ಲವೋ
ನಿನ್ನಂಥ ಕತೆಗಾರ ಯಾರಿಲ್ಲ, ನೀ ಬರೆದಂತೇ  ಆಡೋರು  ನಾವೇಲ್ಲಾ
ನಿನ್ನ ಹುಡುಗಾಟವು ನಮ್ಮ ಹೋರಾಟವು ಕೊನೆ ಏನೋ ಬಲ್ಲೋರು ಇಲ್ಲಾ...
ನಿನ್ನಂಥ ಕತೆಗಾರ ಯಾರಿಲ್ಲ, 
ಎಲ್ಲಾರು ಕೊನೆಯಲ್ಲಿ ಬರುವಲ್ಲಿಗೆ ನೀ ನನ್ನೇಕೆ ಮೊದಲಿಲ್ಲಿ ಬಿಟ್ಟೇ 
ನಿನ್ನಂತೆ ನನ್ನನ್ನು ಶಿಲೆ ಮಾಡದೇ ನೀ ನಂಗೇಕೇ ಹೃದಯವ  ಕೊಟ್ಟೇ
ತಾಯೆನ್ನುವಾ ಪ್ರೀತಿ ಪ್ರತಿರೂಪವಾ ನಾ ಕಾಣದೇ  ಹೋದೇ ಆ ದೈವವಾ
ನನ್ನಲ್ಲಿ ನಿನಗಿಂತ ಛಲವೇತಕೋ..
ನಿನ್ನಂಥ ಕತೆಗಾರ ಯಾರಿಲ್ಲ, ನೀ ಬರೆದಂತೇ  ಆಡೋರು  ನಾವೇಲ್ಲಾ
ನಿನ್ನ ಹುಡುಗಾಟವು ನಮ್ಮ ಹೋರಾಟವು ಕೊನೆ ಏನೋ ಬಲ್ಲೋರು ಇಲ್ಲಾ...
ಆಆಆಅ.... ಲಲಲಲಲ... ಲಾರರಿರ ಲಲಲಲಲ 
--------------------------------------------------------------------------------------------------------------------------
ಅಸಂಭವ (1986) - ಚಿನ್ನ ಚಿನ್ನ ಬೇಡ ಚಿನ್ನ ಯಾಕೆ ಹೀಗೆ ಕಾಡ್ತಿ ನನ್ನ 
ಸಂಗೀತ: ಶಂಕರ್-ಗಣೇಶ್ ರಚನೆ: ಆರ್.ಎನ್.ಜಯಗೋಪಾಲ್ ಗಾಯನ: ರಮೇಶ ವಾಣಿಜಯರಾಂ 
ಗಂಡು : ಹೊಯ್ ಚಿನ್ನ ಚಿನ್ನ (ಹ್ಹಾ )  ಬೇಡ ಚಿನ್ನ  (ಹ್ಹಾ ) ಯಾಕೆ ಹೀಗೆ (ಹ್ಹೂಂ ) ಕಾಡ್ತಿ ನನ್ನ (ಆಹಾ)
            ಹೃದಯವಿದು ಕರಗದು ಈ ಗೋಳಿನಲಿ ನೆಂಟತನ ಹೇಳದಿರು ನನ್ನ ಬಳಿ 
            ಕೂಲಿ ಕೊಟ್ಟು ತಾಳಿ ಕಟ್ಟು ಅನ್ನೋ ಹೆಣ್ಣು ನೀನೇನಾ 
           ಆಸೆ ಪಟ್ಟು ನೀತಿ ಕೆಟ್ಟು ನೊಂದು ಗಂಡು ನಾನೇನು 
ಹೆಣ್ಣು : ಬೇಡ ಬೇಡ (ಹ್ಹಾ)  ಹಾಗನ್ಬೇಡ (ಹೊಯ್) ನಾನೇ ಹೆಂಡತಿ (ಹ್ಹಹ್ಹ) ನೀನೇ ಗಂಡ (ಹ್ಹ) 
          ಓ ಗೆಳೆಯಾ ಈ ಹೃದಯ ಸೆಳೆದಿರುವೇ ನಿನಗಾಗಿ ಹಗಲಿರುಳು ಜಪಿಸಿರುವೇ 
          ನೆಂಟತನ ಬೇಡವೆನ್ನೋ ತುಂಟತನ ನಿಂಗೇಕೆ 
          ಆಸೆ ಪಡೋ ಹೆಣ್ಣಾ ದೂಡೋ ಕಲ್ಲು ಮನ ಹೀಗೆಕೆ 
ಗಂಡು : ಬೇಡ ನಂಗೇ ಜೋಡಿ ಕೈಗೇ ಹಾಕೋ ಬೇಡಿ..  ಅಹ್ಹಹ್ಹಹ್ಹಾ  
           ಬೇಡ ನಂಗೇ ಜೋಡಿ ಕೈಗೇ ಹಾಕೋ ಬೇಡಿ.
           ಸ್ವಚ್ಛಂದ ಹಾರೋ ಹಕ್ಕಿ ನಾ ನಿನ್ನ ಕಾಟಕ್ಕೆ ಸಿಕ್ಕಿ... ಅಹ್ಹಹ್ಹ      
           ಆಗೋಲ್ಲ ನಿನ್ನಯ ಗಂಡ ಈ ನಿನ್ನ ಯತ್ನವು ದಂಡ 
ಹೆಣ್ಣು : ಸಂಗಾತಿ ನಾ ನಿನ್ನಾ ಬಾಳಿಗೆ (ಅಹ್ಹಹ್ಹ) ನಾ ಕಾದಿಹ ಇದೋ ತಾಳಿಗೇ 
          ಮೀಸೆ ಹೊತ್ತ ಗಂಡೇ ನಿಂಗೆ ಆಸೆ ಇಲ್ಲವೇ 
ಗಂಡು : ಹೇ ಚಿನ್ನ ಚಿನ್ನ (ಹ್ಹಾ )  ಬೇಡ ಚಿನ್ನ  (ಹ್ಹಾ ) ಯಾಕೆ ಹೀಗೆ (ಹ್ಹೂಂ ) ಕಾಡ್ತಿ ನನ್ನ (ಆಹಾ)
ಹೆಣ್ಣು : ಬೇಡ ಬೇಡ (ಹೊಯ್)  ಹಾಗನ್ಬೇಡ (ಹ್ಹಾ ) ನಾನೇ ಹೆಂಡತಿ (ಹ್ಹಹ್ಹ) ನೀನೇ ಗಂಡ (ಹ್ಹಹೊಯ್  ) 
ಹೆಣ್ಣು : ಬ್ರಹ್ಮ ಎಂದೋ ನನ್ನ ನಿನ್ನ ಜೋಡಿ ಮಾಡಿ ಬಿಟ್ಟ ಚೆನ್ನ ಈಗ ಬೇಡ ಎಂದರಾಯಿತೇ.. ಅಹ್ಹಹ್  
 ಗಂಡು : ಗಂಟು ಬಿದ್ದೆಯಲ್ಲೇ ನೀನು ಅಂಟು ಜಾಡ್ಯದಂತೆ ಇನ್ನು ಮದುವೆ  ಅಂದ್ರೆ ಸುಮ್ಮನಾಯಿತೇ .. ಹ್ಹ 
ಹೆಣ್ಣು : ಏಕೇ ಇಂಥ ಕೋಪ ಹ್ಹಾ... ಹೆಣ್ಣೇ ಮನೆಗೇ ದೀಪ 
ಗಂಡು : ಏಕೆ ಆಸೆ ನನ್ನಲ್ಲಿ ಗಂಡೇ ಇಲ್ವೇ ಊರಲ್ಲಿ 
ಹೆಣ್ಣು : ಇದ್ರೇ ಮನಸು ಕಟ್ಟು ತಾಳಿ ಮಾತನಾಡದೇ 
ಗಂಡು : ಚಿನ್ನ ಚಿನ್ನ (ಹ್ಹ) ಆಯ್ತು ಇನ್ನಾ (ಹ್ಹೂಂ) ನೀನೇ ಹೆಂಡ್ತಿ (ಅಹ್ಹಹ್ ) ನಾನೇ ಗಂಡ (ಆಹ್ಹಾ)
ಹೆಣ್ಣು : ಓ ಗೆಳೆಯಾ ಈ ಹೃದಯ ಸೆಳೆದಿರುವೇ (ಅಹ್ಹಹ್ಹ) ನಿನಗಾಗಿ ಹಗಲಿರುಳು ಜಪಿಸಿರುವೇ 
ಗಂಡು : ಮಾತು ಕೊಟ್ಟು ತಾಳಿ ಕಟ್ಟೋ ಮುಗ್ದ ಗಂಡು ನಾನಮ್ಮಾ 
ಹೆಣ್ಣು : ಆಸೆ ಪಟ್ಟು ಹಿಡಿದು ಪಟ್ಟು ಗೆದ್ದ ಹೆಣ್ಣು ನಾನಯ್ಯ
ಹೆಣ್ಣು : ಹ್ಹಾ... (ಹ್ಹಾ)  ಒಹೋ (ಹೇಹೇ)  
--------------------------------------------------------------------------------------------------------------------------
ಅಸಂಭವ (1986) - ಹುಬ್ಳಿ ಸೀರೆ ರವಿಕೆ ಖಣ ತಂದೀವ್ನಿ ಕಣೆ ನೋಡು ಬಾ
ಸಂಗೀತ: ಶಂಕರ್-ಗಣೇಶ್ ರಚನೆ: ಆರ್.ಎನ್.ಜಯಗೋಪಾಲ್ ಗಾಯನ: ರಮೇಶ,  ವಾಣಿಜಯರಾಂ
ಗಂಡು : ಹುಬ್ಳಿ ಸೀರೆ ರವಿಕೆ ಖಣ ತಂದೀವ್ನಿ ಕಣೆ ನೋಡುಬಾ...
           ಮಂಗಳೂರ ಮಲ್ಗೆ ಸೊಂಪಾಗೈತೆ ತಂಪಾಗ ನಕ್ಕು ಹತ್ರಾ ಬಾ..
           ರಾತ್ರಿ ಹೀಗೆ ಜಾರೋಗತೈತೆ...  ರಾಂಗ್ ಮಾಡಬೇಡ ಬೇಗ ಬಾ.. ಅಹ್ಹಹ್ಹ
ಹೆಣ್ಣು : ಹುಬ್ಳಿ ಸೀರೆ ರವಿಕೆ ಖಣ ಯಾಕೆ ತಂದೆ ನಂಗೊತ್ತು...
          ಮಂಗಳೂರು ಮಲ್ಲಿಗೇ ಮೂಡಿಸಿ ನನ್ನಾ ತಾಜಾ ಮಾಡೋ ಮಸಲತ್ತು
          ರಾತ್ರಿಯೆಲ್ಲ ಒಂಟಿಯಾಗಿ...  ಇರಬೇಕು ನೀನು ಈವತ್ತು...
ಗಂಡು : ನಾ ನಿನ್ನ ಕಂಡಾಗ ನನ್ನಾಸೆ ಕರೆದಿದೆ ನಿನ್ನಿಂದ ಒಂದನ್ನ ಕೇಳೋಕೆ ಬಯಸಿದೆ
ಹೆಣ್ಣು : ನೀನಾಡೋ ಮಾತನೆಲ್ಲ ನಾ ಬಲ್ಲೆ...  ಹೀಗೇಕೆ ಕಾದು ನಿಲ್ಲೂ ನೀ ಇಲ್ಲೇ
ಗಂಡು : ಈ ಜೀವ ನಿಲ್ಲೋದಿಲ್ಲ ಈ ದೇಹ ತಾಳೋದಿಲ್ಲ
           ಈ ದೂರ ಬೇಕಾಗಿಲ್ಲ ನೀನಿಲ್ದೆ ಬಾಳೇ ಇಲ್ಲ
ಹೆಣ್ಣು : ಮತ್ತೇಕೆ ನೀನು ಹೀಗೆ ಮಾಡಿದೆ ಮರ್ಯಾದೆ ಹೋಗೋ ಹಾಗೆ ಆಡಿದೆ
ಗಂಡು : ಹುಬ್ಳಿ ಸೀರೆ (ಹ್ಹ) ರವಿಕೆ ಖಣ (ಹ್ಹೂಹೂ ) ತಂದೀವ್ನಿ ಕಣೆ ನೋಡುಬಾ...
           ಮಂಗಳೂರ ಮಲ್ಗೆ ಸೊಂಪಾಗೈತೆ ತಂಪಾಗ ನಕ್ಕು ಹತ್ರಾ ಬಾ..
ಹೆಣ್ಣು : ರಾತ್ರಿಯೆಲ್ಲ ಒಂಟಿಯಾಗಿ...  ಇರಬೇಕು ನೀನು ಈವತ್ತು... ಹೂ....  
ಹೆಣ್ಣು  ನೀ ತಂದ ಮಲ್ಲಿಗೆ ಹೂವು ಇಲ್ಲೆಲ್ಲಾ ಉದುರಿದೆ ನಿನ್ನಾಟ ಕೆನ್ನೇಲಿ ಕೆಂಪನು ತಂದಿದೆ
ಗಂಡು :  ಹೀಗೇನೆ ನಮ್ಮಾಟ ಸಾಗಲಿ ನಮಗಾಗಿ ಕಾಲದೋಟ ನಿಲ್ಲಲಿ
ಹೆಣ್ಣು  :  ಈ ತೋಳು ಕೇಳೋದಿಲ್ಲ ಈ ಹೂವು ತಾಳೋದಿಲ್ಲ
            ಈ ದಾಹ ತಿರೋದಿಲ್ಲ ಇನ್ನಂತೂ ನಿದ್ದೆ ಇಲ್ಲ
ಗಂಡು : ಅಮ್ಮಯ್ಯ ಹೌದು ನಾನು ಒಪ್ಪುವೆ ಬಾ ನೀನು ಒಮ್ಮೆ ನಾ ಅಪ್ಪುವೇ
ಹೆಣ್ಣು : ಹುಬ್ಳಿ ಸೀರೆ (ಹೊಯ್ ಹೊಯ್ )  ರವಿಕೆ ಖಣ (ಹ್ಹಾ ಹ್ಹಾ) ಯಾಕೆ ತಂದೆ ನಂಗೊತ್ತು...
          ಮಂಗಳೂರು ಮಲ್ಲಿಗೇ ಮೂಡಿಸಿ ನನ್ನಾ ತಾಜಾ ಮಾಡೋ ಮಸಲತ್ತು... ಅಹ್ಹಹ್ಹಹ್ಹಹ್ಹ...
ಗಂಡು : ರಾತ್ರಿ ಹೀಗೆ ಜಾರೋಗತೈತೇ ...  ರಾಂಗ್ ಮಾಡಬೇಡ ಬೇಗ ಬಾ..
ಇಬ್ಬರು : ಲಲಲಲ್ಲಲಲಾ  ಲಲಲಲ್ಲಲಲಾ  ಲಲಲಲ್ಲಲಲಾ  ಅಹ್ಹಹ್ಹಹ್ಹ
--------------------------------------------------------------------------------------------------------------------------
ಅಸಂಭವ (1986) - ನಿನ್ನ ಹೊತ್ತವಳು ಹೊತ್ತು ಹೆತ್ತವಳು
ಸಂಗೀತ: ಶಂಕರ್-ಗಣೇಶ್ ರಚನೆ: ಆರ್.ಎನ್.ಜಯಗೋಪಾಲ್ ಗಾಯನ: ಪಿ.ಸುಶೀಲಾ 
ನಿನ್ನ ಹೊತ್ತವಳು ಹೊತ್ತು ಹೆತ್ತವಳು ಹೆಣ್ಣಲ್ಲವೇನೋ ಪಾಪಿ
ತಾಯಿ ತಂಗಿಯಲಿ ಮೋಹ ದಾಹದೇ ಮೃಗವಾದೇ ಕಾಮ ರೂಪಿ
ನಿನ್ನ ಹೊತ್ತವಳು ಹೊತ್ತು ಹೆತ್ತವಳು ಹೆಣ್ಣಲ್ಲವೇನೋ ಪಾಪಿ
ತಾಯಿ ತಂಗಿಯಲಿ ಮೋಹ ದಾಹದೇ ಮೃಗವಾದೇ ಕಾಮ ರೂಪಿ
ಅಬಲೆ ಹೆಣ್ಣಾ ಕೋಪ ನಿನ್ನಾ ಸುಡುವ ಶಾಪ
ಅಬಲೆ ಹೆಣ್ಣಾ ಕೋಪ ನಿನ್ನಾ ಸುಡುವ ಶಾಪ
ಎಚ್ಚರ ಬರದಿರು ಹತ್ತಿರ ಈ ಕಾಳಿಯು ಕುಡಿವಳು ನೆತ್ತರ
ಹೆಣ್ಣಿನ ಮೋಹದಲಿ ಆ ರಾವಣ ಹಾಳಾದ ಕಾಮದ ದಾಹದಲಿ ಆ ಇಂದ್ರನು ತಾ ಬಿದ್ದ
ಹೆಣ್ಣಿನ ಮೋಹದಲಿ ಆ ರಾವಣ ಹಾಳಾದ ಕಾಮದ ದಾಹದಲಿ ಆ ಇಂದ್ರನು ತಾ ಬಿದ್ದ
ನಾರಿ ಒಲಿದರೆ ಸಂಗಾತಿ ಆಗುವಳು ಅವಳು ಮುನಿದರೆ ಹೆಮ್ಮಾರಿ ಆವಳು
ನೀ ಬಯಸೋ ಹೆಣ್ಣಿನ ಅಂಗ ನೀ ಹುಟ್ಟಿದೆ ಅಲ್ಲೇ ತಿಳಿಯೋ
ಆ ಮರ್ಮ ಸ್ಥಾನವೇ ಜಗದಾ ನಿಜ ಜನ್ಮ ಸ್ಥಾನವು ತಿಳಿಯೋ
ಹೆಣ್ಣಿನ ನರ್ತಕೇ ಜ್ವಾಲೇ ಪ್ರಳಯಾಗ್ನಿಯೂ ಆಗಿದೆ ಇಲ್ಲಿ
ಎಚ್ಚರ ಬರದಿರು ಹತ್ತಿರ ಈ ಕಾಳಿಯು ಕುಡಿವಳು ನೆತ್ತರ
ನಿನ್ನ ಹೊತ್ತವಳು ಹೊತ್ತು ಹೆತ್ತವಳು ಹೆಣ್ಣಲ್ಲವೇನೋ ಪಾಪಿ
ತಾಯಿ ತಂಗಿಯಲಿ ಮೋಹ ದಾಹದೇ ಮೃಗವಾದ ಕಾಮ ರೂಪಿ
ಸೊಕ್ಕಿದ ರಕ್ಕಸರ ಕೊಂದಳು ರಣಚೆಂಡಿ ರುಂಡದ  ಮಾಲೆಯನೇ ಅಣಿದಳು ಚಾಮುಂಡಿ 
ಸೊಕ್ಕಿದ ರಕ್ಕಸರ ಕೊಂದಳು ರಣಚೆಂಡಿ ರುಂಡದ  ಮಾಲೆಯನೇ ಅಣಿದಳು ಚಾಮುಂಡಿ 
ಆ ದಿವ್ಯ ಶಕ್ತಿಯ ಪ್ರತಿರೂಪ ನಾನೀಗ ನಿನ್ನಂಥ ಪಾಪಿಯ ಕೊನೆಯೆಂದು ನೋಡಿಕೋ 
ಈ ಶಕ್ತಿಯ ನಿಜ ಅವತಾರ ಲಯ ಸೃಷ್ಟಿಗೆ ಇದು ನಾಂದಿ 
ಈ ಕೋಪದ ತಾಪಕ್ಕೆ ಸಿಕ್ಕಿ ನೀನಾಗುವೆ ಹಿಡಿ ಬೂದಿ  
ಸಾವೋ ಒಂದೇ ಸತ್ಯ ಆಸೆ ಎಂದೂ ಮಿಥ್ಯ 
ಕೊಲ್ಲುವೇ ನಿನ್ನನ್ನೂ ಕೊಲ್ಲುವೇ ಕುಡಿಯುವೆ ನೆತ್ತರ ಕುಡಿಯುವೇ 
--------------------------------------------------------------------------------------------------------------------------
1 comment:
ನಿನ್ನಂಥ ಕತೆಗಾರ ಹಾಡು ಹಾಕಿ .

Powered by Blogger.

ನಾನು ನನ್ನ ಹೆಂಡ್ತೀರು (1999)

ನಾನು ನನ್ನ ಹೆಂಡ್ತೀರು (1999)

ನಾನು ನನ್ನ ಹೆಂಡ್ತಿಯರು ಚಿತ್ರದ ಹಾಡುಗಳು 
ನನ್ನೊಳು ಸಿಕ್ಕರೇ ಸಕ್ಕರೇ ಕಣ್ಣೆದುರು ನಿಂತರೆ ಅಪ್ಸರೆ 

ಈ ಜಗವೇ ನಮದು ನಮದು 

ರೆಡಿ ಒನ್ ಟೂ ತ್ರೀ ಕ್ಕೂ ಕ್ಕೂ ಕ್ಕೂ ಒನ್ ಟ್ರಕ್ಕು ಮ್ಯೂಜಿಕ್ಕು 

ಗಪ್ ಚಿಪ್ ಗಪ್ ಚಿಪ್ ಗಪ್ ಚಿಪ್ ಅಂತ ಬಾರೆ ನನ್ ಪಕ್ಕ್ 

ಈ ಭೂಮಿಗೆ ಮೊದಲು ಮೊದಲು ದೇವರು ಬಂದ 

ನಾನು ನನ್ನ ಹೆಂಡ್ತಿಯರು ನಾನು ನನ್ನ ಡಾರ್ಲಿಂಗ್ಸು  

ನಾನು ನನ್ನ ಹೆಂಡ್ತೀರು (1999) - ನನ್ನೋಳು ನಕ್ಕರೆ
ಸಂಗೀತ: ವಿ ರವಿಚಂದ್ರನ್ ಚಿತ್ರಗೀತೆ : ಕೆ. ಕಲ್ಯಾಣ್  ಹಾಡಿರುವವರು: ಎಸ್.ಪಿ.ಬಾಲಸುಬ್ರಮಣ್ಯಂ, ಚಿತ್ರ
ಗಂಡು : ನನ್ನೋಳು ನಕ್ಕರೆ (ಅಹ್ಹಹ್ಹ) ಸಕ್ಕರೆ ಕಣ್ಣೆದುರು ನಿಂತರೆ ಅಪ್ಸರೆ
            ದಿನ ನಕ್ಕು ನಕ್ಕು ಕನಸಿಕ್ಕುತಾಳೆ ಚತುರೆ ಇವಳಿದ್ದಲ್ಲೆಲ್ಲ ನಾ ಮರೆಯಬೇಕು ನಿದಿರೆ
            ಅರೆರೆರೆ ಮರೆತು ಮರೆತು ಎಲ್ಲ ಮರೆತು ಹಾಯಾಗಿರುವೆ ಮೂರು ಹೊತ್ತು
           ನಿನ್ನ ಹೊರತು ಬೇರೆ ಏನು ನನ್ ಪ್ರೀತೀಗ್ ಗೊತ್ತು
           ಅರೆರೆರ ನಂಗು ನಿಂಗು ಹಂಗು ಹಿಂಗು ಯಾರ ಹಂಗು ಇಲ್ಲ ರಂಗು
           ಸುತ್ತ ಮುತ್ತ ನಿನ್ನ ಹೊರತು ಬೇರೆ ಏನ್ ಗೊತ್ತು
ಹೆಣ್ಣು : ನಮ್ಮೋರು ಎಂದರೆ ದೇವರೆ, ಶ್ರೀರಾಮ ಎಂದರೆ ಅವರೇ 
ಗಂಡು : ಬೊಗಸೆ ಕಣ್ಣೋಳು ಬೊಗಸೇಲಿ ಸಿಕ್ಕರೆ ಜಗವೇ ಸಿಕ್ಕಿದರೂ  ಬಿಡುವಷ್ಟು ಅಕ್ಕರೆ
ಇಬ್ಬರು :   ಹೀಗೆ ತಾನೆ ಪ್ರೀತಿ ಮಾಡೋರ್ ಪ್ರೀತಿಸ್ತಾರೆ
ಹೆಣ್ಣು : ಅದು ಎಷ್ಟು ಕಲೆಗಾರ ಕನಸೊಂದಾದರೆ ನಿನ್ನ ತುಂಟು ಪ್ರೀತೀಗೆ ಸರಿಸಾಟಿ ದೊರೆ
ಗಂಡು : ಅರೆರೆರೆ ತುಂಟಿ ತುಂಟಿ ಮಾತಲ್ ಶುಂಠಿ ಮನಸು ಮಾತ್ರ ಜೇನು ಬುಟ್ಟಿ
            ನಿನ್ನ ಪ್ರೀತಿಗಾಗಿ ಬರುವೆ ಮತ್ತೆ ನಾ ಹುಟ್ಟಿ
ಹೆಣ್ಣು : ನಾವೆ ತುಂಟ ತುಂಟಿ ಯಾರು ಸಾಟಿ ತುಂಟು ತನವೆ ನಮ್ಮ ಜಂಟಿ
          ನಿಮ್ಮ ಪ್ರೀತಿಗಾಗಿ ಬರುವೆ ಮತ್ತೆ ನಾ ಹುಟ್ಟಿ
          ನಮ್ಮೋರು ಎಂದರೆ ತೊಂದರೆ (ಅಹ್ಹಹ್ಹ)  ನಗುವಲ್ಲೆ ಸೋಲಿಸೋ ಚೋರರೆ
ಹೆಣ್ಣು : ಸುಮ್ನೆ ನಿಮ್ಮಿಷ್ಟ ನನಗಿಷ್ಟ ಎಂದರೆ ಒಂದು ನಿಮಿಷಾನು ಬಿಡಲಾರರು ಈ ದೊರೆ
ಇಬ್ಬರ : ಹೀಗೆ ತಾನೆ ಪ್ರೀತಿ ಮಾಡೋರ್ ಪ್ರೀತಿಸ್ತಾರೆ
ಗಂಡು : (ಅಹ್ಹಹ್ಹ) ಅದು ಎಷ್ಟು ಚೆಲುವೇ‍ರ ನಗು ಒಂದಾದರೆ ನಿನ್ನ ಸಣ್ಣ ನಗುವಿಗೆ ಸರಿಸಾಟಿ ಚತುರೆ
ಹೆಣ್ಣು : ಅರೆರೆರೆ ಸಂಡೇ ಮಂಡೇ ಅಂತ ನೋಡ್ದೆ ಮೀನ ಮೇಷ ಅಂತ ಕೂರ್ದೆ
          ರೀ ರೀ ಏನ್ರಿ ಕೊಡ್ತೀರೇನ್ರಿ ಕನಸಲ್ ಕೇಳಿದ್ದು
ಗಂಡು : ಅರೆರೆರೆ ಯಾವ ವಾರ ಯಾವ ಮಾಸ ಯಾವ ಸಮಯ ಆದರೆ ಏನು
            ಲೇ ಲೇ ಲೇ ನೀನು ಅಂದ್ರೆ ಲೋಕಾನೆ ನಿಂದು
           ನನ್ನೋಳು ಒಲಿದರೆ, ಶಾಂತಲೆ ಕುಂತಲ್ಲೆ ಅವಳನು ಕುಣಿಸಲೇ 
--------------------------------------------------------------------------------------------------------------------------
ನಾನು ನನ್ನ ಹೆಂಡ್ತೀರು (1999) - ಈ ಜಗವೇ ನಮದೂ ನಮದೂ
ಸಂಗೀತ: ವಿ ರವಿಚಂದ್ರನ್ ಚಿತ್ರಗೀತೆ : ಕೆ. ಕಲ್ಯಾಣ್ ಹಾಡಿರುವವರು: ಎಲ್.ಏನ್.ಶಾಸ್ತ್ರಿ, ಚಿತ್ರಾ 
ಗಂಡು : ಹೇಹೇಹೇ ... ಓಓಓ ...
            ಈ ಜಗವೇ ನಮದೂ.. ನಮದೂ ಈ ಜೀವ ನಿಮದೂ ನಿಮ್ಮದೂ
            ನಾ ಕಾಣೋ ಕನಸು ನಿಮ್ಮದೂ ಕೊಡುವೇ ಎಲ್ಲಾ ಎಲ್ಲಾ ಹೃದಯದಿಂದ 
ಹೆಣ್ಣು : ನಿಮ್ಮೂರು ಹೇಗಿದೆ ಜಾಣ ನಿಮ್ಮೋರು ನಿನ್ನ ಹಾಗೇನಾ 
ಗಂಡು : ನಮ್ಮೂರು ಕೋಟಿಗೆ ಒಂದು ನಮ್ಮೋರು ಪ್ರೀತಿಲಿ ಮುಂದೂ 
ಹೆಣ್ಣು : ಓಓಓ ... ಮಾತಿಗೆ ನಡೆಯೋರು ಹೆಚ್ಛಂತೆ  ನಿಮ್ಮ ನೆಲದಲ್ಲಿ 
ಗಂಡು : ನಮ್ಮಲ್ಲಿ ಎಲ್ಲಾರು ದಿನ ಹಾಡೋದು ಒಮ್ಮನಸಿನಿಂದಾನೇ... ಓಓಓ  
           ಈ ಜಗವೇ ನಮದೂ.. ನಮದೂ ಈ ಜೀವ ನಿಮದೂ ನಿಮ್ಮದೂ...
ಹೆಣ್ಣು : ರಸಿಕ ರಸಿಕತೆಯಲ್ಲಿ ಏನಾರೂ ಹೊಸತನ ಹೇಳಿ 
ಗಂಡು : ನಮ್ಮಿಂದಲೇ ರಸಿಕತೆಯ ರಸಿಕತೆಯಿಂದಲೇ ನಾವೂ 
ಹೆಣ್ಣು : ಆಅಅ ... ರಸಿಕರ ಯಜಮಾನ ನಿಮ್ಮೂರ ಸಿಟಿ ಎಲ್ಲುಂಟು 
ಗಂಡು : ನಾವೂ ಪ್ರೀತಿಲಿ ಆ ಎವರೆಷ್ಟು ನಮ್ಮೂರು ಸಿಗದಷ್ಟು ಮೇಲುಂಟು 
            ಈ ಜಗವೇ ನಮದೂ.. ನಮದೂ ಈ ಜೀವ ನಿಮದೂ ನಿಮ್ಮದೂ
            ನಾ ಕಾಣೋ ಕನಸು ನಿಮ್ಮದೂ ಕೊಡುವೇ ಎಲ್ಲಾ ಎಲ್ಲಾ ಹೃದಯದಿಂದ 
--------------------------------------------------------------------------------------------------------------------------
ನಾನು ನನ್ನ ಹೆಂಡ್ತೀರು (1999) - ರೆಡಿ ಒನ್ ಟೂ ಥ್ರೀ ಕ್ಕೂ ಕ್ಕೂ ಕ್ಕೂ
ಸಂಗೀತ: ವಿ ರವಿಚಂದ್ರನ್ ಚಿತ್ರಗೀತೆ : ಕೆ. ಕಲ್ಯಾಣ್ ಹಾಡಿರುವವರು: ಗುರುಕಿರಣ, ಎಲ್.ಏನ್.ಶಾಸ್ತ್ರಿ
ಲಾ ಲಾ ಲಾ ಲಾ ಹೇ ಹೇ ಲಾ ಲಾ ಲಾ ಲಾ ಹ್ಹಾಂ
ತುರುತುತು ತುರುತುತು ತುರುತುತು
ರೆಡಿ ಒನ್ ಟೂ ಥ್ರೀ ಕ್ಕೂ ಕ್ಕೂ ಕ್ಕೂಒನ್ ಟ್ರಿಕ್ಕೂ ಮ್ಯೂಸಿಕ್ ಹ್ಯಾಟ್ರಿಕ್
ನನ್ನ ಹಾರ್ಟಿನ್ ಮ್ಯೂಜಿಕ್ ಎಲ್ಲಾ ಹಾರ್ಟಗು ಟಾನಿಕ್ಕು
ನಾ ನೀಡುವ ಕಿಕ್ಕು ಬೌನ್ಸ್ ಆಗದ ಚೆಕ್ಕು ನಾ ಹಾಕುವ ಲುಕ್ಕೂ ಬ್ರೇಕಿಲ್ಲದಾ ಬೈಕೂ
ಈ ರೀಮಿನ ದಿಕ್ಕು ಒಂದಿದ್ದರೇ ಸಾಕು ಸಿಕ್ಕೋರಿಗೆ ಲಕ್ಕು ಈ ಪ್ರೀತಿಯ ಬುಕ್ಕು
ಅಬ್ಬ ಕಾಂತೆಯರ ಕಣ್ಣಿದು ಆಯಸ್ಕಾಂತ ಪಟ
ಎದೆಯಲಿ ತೋಮ್ ತೋಮ್ ತರಿಗಿಡ ತರಿಗಿಡತಾ ತರಿಗಿಡತಾ ತರಿಗಿಡತಾ
ಇವರೇ ಕನಸೇ ಧೀಮ್ ಧೀಮ್ ಕಾಗುಣಿತ
ಮತ್ತ ಧೀಮ್ ಧೀಮ್ ತೋಮ್ ಕುಣಿತ ತಧಿಂತಾ ತಧಿಂತಾ ಹೇ ತಧಿಂತಾ
ಇವರಾ ತಕ್ಕತಕ್ಕ ತಕತಕ ಸೆಳೆತ ತಾತ್ತಾಧಿಮಿ ಧಿಮಿ ಧೀಮ್ ಧನ ಕುಣಿತ
ಬಲಗೈಗೊಬ್ಬಳು ನಾಧೀರ್ ಧಿನ್ನ ನಾಧಿರ ಧಿನ್ನ
ಎಡಗೈಗೊಬ್ಬಳು ನಡುವು ಸಣ್ಣ ನಡಿಗೆ ಸಣ್ಣ
ಕಣ್ಣಿಗಳಿಗೊಬ್ಬಳು ತಳಾಂಗುಧಿನ ತಳಾಂಗುಧಿನ
ತುಟಿಗಳಿಗೊಬ್ಬಳು  ಜೇಣಂಗೇನ ಇದು ನಂಗೇನಾ
ಕಿಂದರಿಗಂತೂ ತಲೆಯೇ ನಿಲಂದು ಹೆಜ್ಜೆಗೊಬ್ಬರು ಸುಂದ್ರಿಯರೂ
ಕಾಮಿಗಳಿಗೂ ಕಣ್ಣೇ ಕಾಣದು ತಪಸಿಗೊಬ್ರು ಮೇನಕೆಯರು
ಇಂಥಾ ಶ್ರೀರಾಮಚಂದ್ರನ ಎಂದೂ ದೇಹ ಮನಸಿಗೆ ಒಬ್ಬಳೇ ಹೆಂಡ್ರು
ನಾಧೀರ್ ಧೀನ್ನ್  ನಾಧೀರ್ ಧೀನ್ನ್  ನಾಧೀರ್ ಧೀನ್ನ್
ನಾಧೀರ್ ಧೀನ್ನ್  ನಾಧೀರ್ ಧೀನ್ನ್  ನಾಧೀರ್ ಧೀನ್ನ್
ತುರುತುತು  ತುರುತುತು ನಾಧೀರ್ ಧೀನ್ನ್
ತುರುತುತು  ತುರುತುತು ನಾಧೀರ್ ಧೀನ್ನ್
ರೆಡಿ ಒನ್ ಟೂ ಥ್ರೀ ಕ್ಕೂ ಕ್ಕೂ ಕ್ಕೂಒನ್ ಟ್ರಿಕ್ಕೂ ಮ್ಯೂಸಿಕ್ ಹ್ಯಾಟ್ರಿಕ್ 
ಇವಳ ಅಂಗ ಒಂದು ಧಿಮಿತಕ್ಕ ಮೃದಂಗ ಇವಳ ಅಂತರಂಗ ನೋಡಿದರೆ ಪತಂಗ 
ಇವಳು ಮೋಹನರಾಗದ ಮೋಹಿನಿ ಸರಿಗಮ ದದ ಪಗರಿದ 
ಹಂಸ ನಂದಿಗೆ ನರ್ತಿನಿ ಸಗಮ ದನಿಸಾ ನಿದ ಮಗರಿಸ 
ರನ್ನ ಜನ್ನ ಕವಿ ಪಂಪನಿಗೂ ಸರ್ವಜ್ಞನಿಗೂ ಸರಸದ ರಾಗವಿದೆ 
ಕಲ್ಯಾಣಿ ರಾಗ ಕಲ್ಯಾಣಿಗೆ ನಿರಿಗಮ ದನಿ ಸನಿದಪ ಮಗರಿಸ 
ಶಿವರಂಜಿನಿ ಈ ರಂಜಿನಿಗೆ ಸರಿಗಪ ಪದ ದದ ಪಗರಿಸ 
ಅಧರಂ ಮಧುರಂ ಮಧುರಾತಿ ಮಧುರಂ 
ಕಾಮ ಮರ್ಧಿನಿ ಕಾಮಿನಿಗೆ ಸರಿಗಮ ಪದನಿಸ ದಪ ಮಗರಿಸ 
ಅಖಿಲಂ ಸಕಲಂ ಚಲಲ ಸಲಲಂ ಈ ರಾಗ ನನ್ನ ಶ್ರೀಮತಿಗೇ 
ರತ್ತಿ ಪದನಿಸ ಮರಿಗರಿಸ ಕರ್ನಾಟಕ ಸಂಗೀತದ ಆಣೆ 
ನನಗೊಬ್ಬಳೇ ಹೆಂಡ್ತಿ ಕನ್ನಡಾದಾಣೆ 
--------------------------------------------------------------------------------------------------------------------------
ನಾನು ನನ್ನ ಹೆಂಡ್ತೀರು (1999) - ಬಾರೇ ಬಾರೇ ಬಾರೇ ಚಿನ್ನ ಬಾರೇ ನನ್ನ ಚಿನ್ನ
ಸಂಗೀತ: ವಿ ರವಿಚಂದ್ರನ್ ಚಿತ್ರಗೀತೆ : ಕೆ. ಕಲ್ಯಾಣ್ ಹಾಡಿರುವವರು: ಎಸ್.ಪಿ.ಬಿ. ಚಿತ್ರಾ
ಗಂಡು : ಗಪ್ ಚಿಪ್ ಗಪ್ ಚಿಪ್ ಗಪ್ ಚಿಪ್ ಅಂತ ಬಾರೇ ನನ್ನ ಪಕ್ಕ
ಹೆಣ್ಣು : ಗಪ್ ಚಿಪ್ ಗಪ್ ಚಿಪ್ ಗಪ್ ಚಿಪ್ ಅಂತ ಬಂದೇ ನಿನ್ ಪಕ್ಕ
ಕೋರಸ್ : ಹೂಂಹೂಂಹೂಂಹೂಂಹೂಂಹೂಂಹೂಂಹೂಂ
ಗಂಡು : ಬಾರೇ.....  ಬಾರೇ ... ಬಾರೇ ಚಿನ್ನ ಬಾರೇ ನನ್ನ ಚಿನ್ನ
           ಅಪ್ಪ ಅಮ್ಮ ಆಗೋಣ ಬಾ ಆಗೋಣ ಬಾ ಅಮ್ಮಮ್ಮಮ್ಮ
ಹೆಣ್ಣು : ಚಂದಮಾಮ ಚಂದಮಾಮ ಕದ್ದು ನೋಡ್ತಾವ್ನೆ
          ಅಯ್ಯೋ ಮಾಮ ದಯಮಾಡಿಸು ದಯಮಾಡಿಸಿ ದಯಮಾಡಿಸು
ಹೆಣ್ಣು : ಹೋಹೋಹೊ ಹೂಂಹೂಂಹೂಂ
ಗಂಡು : ಅಕ್ಕ ಪಕ್ಕ ಯಾರು ಕದ್ದು ನೋಡೋರ್ ಇಲ್ಲ
           ತಕ್ಕ ಥೈಯ್ಯ ಥಕ್ಕ ನಿಂದೇ ರಾತ್ರಿ ಎಲ್ಲಾ ಹೂಂ ...
           ಇಲ್ಲಿ ಯಾರು ಇಲ್ಲ ಈಗಲೇ ಬಾ ಬಾರೇ ಬಾರೇ ತಾರೇ ಮುತ್ತನ್ನು
ಹೆಣ್ಣು : ಇಲ್ಲಿ ಯಾರು ಇಲ್ಲ ಅಂದರೂ ಅಲ್ಲಿ  ಓರೆಯಾಗಿ ತಾರೆ ನಿಂತರೂ
ಗಂಡು :ಓ.. ತಾರೇ ಕಳಚಿಕೋ... ಓ ತಾರೇ  ಬಂದುಕೋ
           ನಮ್ಮ ದಾರಿ ಕಾಯದೇ ನಿನ್ನ ದಾರಿ ನೋಡಿಕೋ
          ಆ ತಾರೆ ಹೊತ್ತ ಜೇನಧಾರೆ ಬೇಗ ತಾರೆ ನನ್ನ ಧ್ರುವತಾರೆ ಮಿನುಗುತಾರೆ
          ತಾರೆ ತಾರೆ ತಾರೆ ತಾರೆ ತಾರೆ ಮನಸಾರೆ
         ಚಂದ್ರ ಇಲ್ಲ ತಾರೆ ಇಲ್ಲ ಒಂದೇ ಸಾರೇ ತಾರೆ ಎಲ್ಲಾ
ಹೆಣ್ಣು : ಹೇಹೇಹೇಹೇ.. ಹೇ  ಹೂಂ
ಗಂಡು : ಅಕ್ಕಪಕ್ಕ ಯಾರು ಕದ್ದು ನೋಡೋರಿಲ್ಲ ಥಕ್ಕ ಥೈಯ್ಯಾ ಥಕ್ಕ ನಮ್ದೇ ರಾತ್ರಿ ಎಲ್ಲಾ
           ಯಾವ್ ತಾರೆ ಇಲ್ಲ ಕಾಯದೆ ಈಗ್ಯಾರು ತಾರೆ ಯಾರು ನೋಡ್ತಿಲ್ಲ   
ಹೆಣ್ಣು : ನೀ ತಾರೆ ಎಂದಾ ಕೂಡಲೇ ಪಾರಿವಾಳ ಬಂತು ಓಡಿಸೋ ನಲ್ಲ
ಗಂಡು : ಪಾರಿವಾಳ ಬಚ್ಚಿಕೋ ಕಣ್ಣೆರಡು ಮುಚ್ಚಿಕೋ
            ಶಿವಪೂಜೆ ಕರಡಿಯೇ ತಾರೇ ಬಾಚಿಕೋ
            ಅಯ್ಯೋ ಪಾಪ ಅನಿಸೋದಿಲ್ವಾ  ನಾವು ಇನ್ನೂ ಪಾಪಾ ಮಾಡಿಲ್ಲ ಹ್ಹಹ್ಹಹ್ಹ ಟೈಮ್ ಬಂದಿಲ್ಲ
ಹೆಣ್ಣು : ಪಾಪಾ ಪಾಪಾ  ಪಬಪಪ್ಪ ಪಬಪಪ್ಪಪಾ   ಪಾರಿವಾಳ ಹೋಯ್ತು
           ಅಪ್ಪ ಅಮ್ಮ ಆಗೋಣ ಬಾ ಆಗೋಣ ಬಾ ಹೊಸ ಲಾಲಿ ಹಾಡೋಣ ಬಾ
ಗಂಡು : ಬಾರೇ ಚಿನ್ನ ಅಪ್ಪ ಅಮ್ಮ ಆಟ ಆಡೋಣ ಅಮ್ಮಮ್ಮ ಆಡೋಣ ಬಾ ಆಡೋಣ ಬಾ ಅಮ್ಮಮ್ಮಮ್ಮ       
--------------------------------------------------------------------------------------------------------------------------
ನಾನು ನನ್ನ ಹೆಂಡ್ತೀರು (1999) - ಈ ಭೂಮಿಗೆ ಮೊದಲು
ಸಂಗೀತ: ವಿ ರವಿಚಂದ್ರನ್ ಚಿತ್ರಗೀತೆ : ಕೆ. ಕಲ್ಯಾಣ್ ಹಾಡಿರುವವರು: ಎಲ್.ಏನ್.ಶಾಸ್ತ್ರಿ
ಹೆಣ್ಣು : ಲಾಲಿ ಲಾಲಿ ಸುವ್ವಲಾಲಿ ಸುವ್ವಲಾಲಿ ಜೋ ಜೋ ಜೋ
         ಲಾಲಿ ಲಾಲಿ  ಸುವ್ವಲಾಲಿ ಸುವ್ವಲಾಲಿ  ಜೋ ಜೋ ಜೋ
          ನನ್ನ ರಾಜ ನೀನೇ ರಾಜ ಅಪ್ಪಿಕೊಳ್ಳು ಓ ರಾಜ
          ನನ್ನ ಕನಸಿನ ರಾಜ ನೀನು ಬಾರೋ ಮಹಾರಾಜ
ಗಂಡು : ಈ ಭೂಮಿಗೆ ಮೊದಲು ಮೊದಲು...
            ಈ ಭೂಮಿಗೆ ಮೊದಲು ಮೊದಲು ದೇವರು ಬಂದ ಆನಂತರ ತನ್ನ ಬದಲು ತಾಯಿಯ ತಂದ
ಹೆಣ್ಣು :  ತಾಯಿಯು ಎಲ್ಲಡೆ ಇರಲು ಸಾಧ್ಯವೇ ಇಲ್ಲ ಅದಕ್ಕೆಂದೇ ದೇವರು ತಂದ ಮಕ್ಕಳನೆಲ್ಲ
ಮಗು : ಏಬಿಸಿಡಿ ಏಬಿಸಿಡಿ ಹೇಳಿಕೊಡಿ ಓ ಮಮ್ಮಿ  ಏಬಿಸಿಡಿ ಕಲಿತ ಮೇಲೆ ಆಟ ಹೇಳಿ ಕೊಡಿ ಮಮ್ಮಿ
ಹೆಣ್ಣು : ಆಟ ಪಾಠ ಊಟ ನೋಟ ಎಲ್ಲಾ ನಿನ್ನ ಇಷ್ಟನೋ ನಿನ್ನ ಎಲ್ಲಾ ಇಷ್ಟಾಗಳೂ ನನಗೆ ಇಷ್ಟನೋ
ಹೆಣ್ಣು : ನಿನ್ನ ಹೆತ್ತವಳು ಯಾರೋ ನಾ ಕಾಣೇ ತಂದೇ ನೆರಳಿಲ್ಲದೆ ಬಂದೋನೆ
ಗಂಡು : ನಿನ್ನಿಂದಲೇ ಮನೆ ಬೆಳದಿಂಗಳು ಎಲ್ಲೋ ಚೆಂದಾಗಿರಲಿ ನಿನ್ನ ಹೆತ್ತವಳು
ಹೆಣ್ಣು : ಲಾಲಿ ತೂಗೋ ಹಾಡಿದು ಯಾವ ಪುಣ್ಯಾನೋ  ನಿನ್ನ ನೆನಪೇ ಜೋ  ನನ್ನಾ ಉಸಿರೇ ಜೋ
ಗಂಡು : ಸಾಕೋಳ ಒಬ್ಬಳು ಹೆತ್ತೋಳ ಒಬ್ಬಳು ಹೀಗೆ ಋಣಾನುಬಂಧನಾವು ಅಂದುಕೊಳ್ಳದೇ
            ತಾನೇ ನಡಿಯೋ ಪ್ರೀತಿ ಸಂಬಂಧ
ಹೆಣ್ಣು : ಇಂಥ ಎಲ್ಲ ಸಂಬಂಧದ ಸುತ್ತ ನಮ್ಮ ಅನುಬಂಧ ಯಾವ ದೈವ ತಂದ ನಮ್ಮ ಇಂಥ ಆನಂದ
ಹೆಣ್ಣು : ಹೆತ್ತು ಹೊತ್ತು ಕೂರುವ ಭಾರವಿಲ್ಲದೇ ತಾಯ್ತನ ಕೊಟ್ಟೇ ನೀ ಏನೂ ಕೇಳದೆ
ಗಂಡು : ಲಾಲಿ ಸುವ್ವಲಾಲಿ ಮನೆ ತುಂಬಿ ಹೋಗಿದೆ ಇದ್ದ ನಿರಾಸೆಯ ಮಾತೆಲ್ಲಿದೆ
ಹೆಣ್ಣು : ಈ ನನ್ನ ಕರುಳ ಹಾಡಿದು        ಗಂಡು : ನೆರಳಾಯ್ತಮ್ಮಾ
ಹೆಣ್ಣು : ಕನಸೇ ಕಂದ ಜೋ ... ಸೊಗಸೇ ಚೆಂದ ಜೋ
          ಸರಿಗಮ ಪದನಿನಿ ನೀನೇ ನನ್ನ ಬಾಳಿಗೆ   ಸನಿದಪ ಮಗರಿಸ ಸರಿಸರಿ ಬಾ ಹೀಗೆ
ಇಬ್ಬರು : ಸರಿ ಸರಿ ಸರಿ ಸಮ ಸಮಗಮ ನಾವಿಲ್ಲಿ ಆನಂದ ನಂದನವನ ನಮ್ಮ ಮನೆಯಲ್ಲಿ
ಗಂಡು : ಈ ಭೂಮಿಗೆ ಮೊದಲು ಮೊದಲು
            ಈ ಭೂಮಿಗೆ ಮೊದಲು ಮೊದಲು ದೇವರು ಬಂದ ಆನಂತರ ತನ್ನ ಬದಲು ತಾಯಿಯ ತಂದ
--------------------------------------------------------------------------------------------------------------------------
ನಾನು ನನ್ನ ಹೆಂಡ್ತೀರು (1999) - ನಾನು ನನ್ನ ಹೆಂಡ್ತೀರು  ನಾನು ನನ್ನ ಡಾರ್ಲಿಂಗ್ಸು
ಸಂಗೀತ: ವಿ ರವಿಚಂದ್ರನ್ ಚಿತ್ರಗೀತೆ : ಕೆ. ಕಲ್ಯಾಣ್ ಹಾಡಿರುವವರು: ಎಸ್.ಪಿ.ಬಿ. ಚಿತ್ರಾ
ಗಂಡು : ನಾನು ನನ್ನ ಹೆಂಡ್ತೀರು  ನಾನು ನನ್ನ ಡಾರ್ಲಿಂಗ್ಸು
            ಡೇ ಅಂಡ್ ನೈಟು ಸಿಂಗಿಂಗ್ಸು ಟಚಿಂಗ್ಸು ತಲೆ ತಿರುಗಿಂಗ್ಸು ಪ್ರೇಮಾ.... ಸೌಂದರ್ಯಾ....
ಹೆಣ್ಣು : ನಾವು ನಮ್ಮ ಯಜಮಾನ್ರು ನಾವು ನಮ್ಮ ಡಾರ್ಲಿಂಗ್ಸು
            ಡೇ ಅಂಡ್ ನೈಟು ಡ್ಯಾನ್ಯಸಿಂಗು  ಟಚಿಂಗ್ಸು ಮೈ ಮರೆಸಿಂಗು
            ರವಿ ಚಂದ್ರ ರಾತ್ರಿ ಹಗಲು ನಿದ್ದೆ ಕೆಡಿಸಿದ್ದು
ಗಂಡು : ರನ್ನ ಪೊನ್ನ ಕವಿ ಸರ್ವಜ್ಞನು ಮಾಸ್ತಿ ದ.ರಾ.ಬೇಂದ್ರೆ ರತ್ನನು
           ಮತ್ತೆ ಹುಟ್ಟಿ ಹಿಡಿಯಬೇಕು ಪೆನ್ನನು ಕಂಡು ನಮ್ಮ ಜೋಡಿಯನ್ನು
ಹೆಣ್ಣು : ನಮ್ಮ ಬಂಧ ಎಲ್ಲೂ ಬೆಲ್ಲ                  ಇಬ್ಬರು : ಕಾಳಿದಾಸ ಹಬ್ಬ ಮಾಡುವ
ಗಂಡು : ಓಹೋಹೋ... ಓಹೋಹೋ ಹೇಹೇಹೇಹೇ ಓಹೋಹೋ...
            ನಾನು ನನ್ನ ಹೆಂಡ್ತೀರು  ನಾನು ನನ್ನ ಡಾರ್ಲಿಂಗ್ಸು
ಇಬ್ಬರು : ಡೇ ಅಂಡ್ ನೈಟು ಸಿಂಗಿಂಗ್ಸು ಟಚಿಂಗ್ಸು ತಲೆ ತಿರುಗಿಂಗ್ಸು
ಗಂಡು :  ಪ್ರೇಮಾ.... ಸೌಂದರ್ಯಾ....
ಗಂಡು : ಅಂಗ ಅಂಗ ಸೇರಿ ಅಂತರಂಗವೇ       ಹೆಣ್ಣು : ನಮ್ಮ ಅಂತರಂಗ ನಿಮ್ಮದಲ್ಲವೇ  
ಗಂಡು : ಕಾಣೋದೆಲ್ಲ ಕೈಗೇ ಸಿಗುವ ಕಾಲವೇ   ಹೆಣ್ಣು : ನಮ್ಮ ಕಾಲ ಮರೆಯೋಲ್ಲವೇ 
ಗಂಡು : ಮುತ್ತು ಹವಳ...      ಹೆಣ್ಣು : ನಾನಾ... ಅವಳಾ 
ಗಂಡು : ನನ್ನೆರಡು ಕಣ್ಗಳು ನೀವು
            ಓಹೋಹೋಹೊಹೋ ಹೊಹೋ  ಹೇಹೇಹೇಹೇ ಓಹೋಹೋಹೊಹೋ  
ಗಂಡು : ನಾನು ನನ್ನ ಹೆಂಡ್ತೀರು  ನಾನು ನನ್ನ ಡಾರ್ಲಿಂಗ್ಸು
ಇಬ್ಬರು :  ಡೇ ಅಂಡ್ ನೈಟು ಸಿಂಗಿಂಗ್ಸು ಟಚಿಂಗ್ಸು ತಲೆ ತಿರುಗಿಂಗ್ಸು
ಗಂಡು : ಪ್ರೇಮಾ.... ಸೌಂದರ್ಯಾ....
ಹೆಣ್ಣು : ನಾವು ನಮ್ಮ ಯಜಮಾನ್ರು ನಾವು ನಮ್ಮ ಡಾರ್ಲಿಂಗ್ಸು
ಇಬ್ಬರು :  ಡೇ ಅಂಡ್ ನೈಟು ಡ್ಯಾನ್ಯಸಿಂಗು  ಟಚಿಂಗ್ಸು ಮೈ ಮರೆಸಿಂಗು
ಹೆಣ್ಣು : ರವಿ ಚಂದ್ರ ರಾತ್ರಿ
ಇಬ್ಬರು : ಹಗಲು ನಿದ್ದೆ ಕೆಡಿಸಿದ್ದು

ಅಣ್ಣಯ್ಯ (1993)

ಅಣ್ಣಯ್ಯ (1993)

ಅಣ್ಣಯ್ಯ ಚಿತ್ರದ ಹಾಡುಗಳು 
ಆಹ್ವಾಗೆ ಪ್ರೇಮಿ ಒಹೋ ಓಹೋಗೆ ಪ್ರೇಮಿ ಆಹಾ 

ಕಮಾನು ಡಾರ್ಲಿಂಗ್ ಸಿಡೌನ್ ಡಾರ್ಲಿಂಗ್  ಇಲ್ಲೇನೂ ಕೆಲಸ 

ರಾಗಿ ಹೊಲದಾಗೆ ಘಾಣಿ ಗುಡಿಸಲು 

ಅಣ್ಣಯ್ಯ ಅಣ್ಣಯ್ಯ ಬಾರೋ (ಎಸ್.ಜಾನಕೀ)

ಅಣ್ಣಯ್ಯ ಅಣ್ಣಯ್ಯ ಬಾರೋ 

ಬೋಂಬೆ ಬೋಂಬೆ ನಿನ್ನ ಮುದ್ದಾಡಬೇಕು 

ಅಣ್ಣಯ್ಯ (1993) - ಅಹಾಗೆ ಪ್ರೇಮಿ ಓಹೋ
ಸಂಗೀತ & ಸಾಹಿತ್ಯ: ಹಂಸಲೇಖ ಹಾಡಿದವರು: ಎಸ್.ಪಿ.ಬಿ, ಚಿತ್ರ
ಅಹ ಅಹ ಅಹ..... ಓಹೋ ಓಹೋ ಓಹೋ.....
ಅಹ.ಅಹ...                     ಓಹೋ.ಓಹೋ...
ಅಹ.ಅಹ...                    ಓಹೋ.ಓಹೋ...
ಅಹಾಗೆ ಪ್ರೇಮಿ ಓಹೋ
ಓಹೋಗೆ ಪ್ರೇಮಿ ಆಹ
ಅಹ ಓಹೋ..ಜೊತೇಲಿ ಸ್ನೇಹವೊ
ಅಹ ಅಹ                      ಓಹೋ ಓಹೋ
ಅಹಾಗೆ ಜೋಡಿ ಓಹೋ
ಓಹೋಗೆ ಜೋಡಿ ಆಹ
ಅಹಾ ಓಹೋ..ಜೊತೆ ವಿವಾಹವೊ
ಅಹ ಅಹ             ಓಹೋ ಓಹೋ
ಆನಂದ ಸೂಚಿ ಆಹ..ಆಶ್ಚರ್ಯ ಸೂಚಿ ಓಹೋ
ಈ ದಿನ ಆನಂದ..ಆಶ್ಚರ್ಯ ಹಾಡಲು ಬಯಸುತಿದೆ
ಹಾಡಿನ ನೆಪದಲ್ಲಿ ವಧುವರರಾಗುತಿವೆ
ಆಹಾಗೆ ಇಲ್ಲ ಭಾಷೆ..ಓಹೋಗೆ ಇಲ್ಲ ಜಾತಿ
ಇಬ್ಬರು ಕಾಮವನು..ಪ್ರೇಮವನು..ಹೊರುವರು ಹೆಗಲಲ್ಲಿ
ಇಬ್ಬರ ಭಾವನೆಯು ಒಂದೇ ಜಗದಲ್ಲಿ
ಅಹಹಹ ಓಹೋಹೋಹೋ...
ಇದೇ ಸುಖ..ಇದೇ ಆ ಪ್ರೇಮದ ಮುಖ
ಸಿಹಿ ಸಿಹಿ   ಕಹಿ ಕಹಿ
ಸಿಹಿ ಸಿಹಿ   ಕಹಿ ಕಹಿ
ಈ ಬಾಳು ಬೇವು ಬೆಲ್ಲವು
ಅಹಾಗೆ ಪ್ರೇಮಿ ಓಹೋ          ಓಹೋಗೆ ಪ್ರೇಮಿ ಆಹ
ಅಹ ಓಹೋ..ಜೊತೇಲಿ ಸ್ನೇಹವೊ
ಅಹ ಅಹ    ಓಹೋ ಓಹೋ
ಕಣ್ಣಲ್ಲಿ ಇಟ್ಟ ಕಾಮ..ಎದೆಯಲ್ಲಿ ಇಟ್ಟ ಪ್ರೇಮ
ಕಣ್ಣಿನ ಕೊಳದಲ್ಲಿ..ಮನಸನ್ನು..ಹಾಕಲು ತೋರಿಸಿದ
ಬಾಳಿಗೆ ಪ್ರೀತಿಯನು..ಪಡೆಯಲು ಸೂಚಿಸಿದ
ಮೇಲಿರುವ ದೊರೆಯು ಜಾಣ..ಹೆಗಲಲ್ಲಿ ಬಿಗಿದ ಗಾಣ
ಛೆ ಛೆ ಛೆ ಅಯ್ಯಯ್ಯೊ..ನಡುವಲ್ಲೂ..ಆಹ ಪಡಿಬೇಕು
ಉಹುಹು ಜೊತೆಯಲ್ಲು ಓಹೋ ಬರಬೇಕು
ಅಹಹಹ ಓಹೋಹೋಹೋ...
ಇದೇ ಸುಖ..ಇದೇ ಆ ಪ್ರೇಮದ ಮುಖ
ಸಿಹಿ ಸಿಹಿ              ಕಹಿ ಕಹಿ
ಸಿಹಿ ಸಿಹಿ              ಕಹಿ ಕಹಿ
ಈ ಬಾಳು ಬೇವು ಬೆಲ್ಲವು
ಅಹ.ಅಹ...    ಓಹೋ.ಓಹೋ...
ಅಹಾಗೆ ಪ್ರೇಮಿ ಓಹೋ
ಓಹೋಗೆ ಪ್ರೇಮಿ ಆಹ
ಅಹ ಓಹೋ..ಜೊತೇಲಿ ಸ್ನೇಹವೊ
ಅಹ ಅಹ     ಓಹೋ ಓಹೋ
ಅಹಾಗೆ ಜೋಡಿ ಓಹೋ
ಓಹೋಗೆ ಜೋಡಿ ಆಹ
ಅಹಾ ಓಹೋ..ಜೊತೆ ವಿವಾಹವೊ
-------------------------------------------------------------------------------------------------------------------------
ಅಣ್ಣಯ್ಯ (1993) - ಕಮಾನು ಡಾರ್ಲಿಂಗ್
ಸಂಗೀತ & ಸಾಹಿತ್ಯ: ಹಂಸಲೇಖ ಹಾಡಿದವರು: ಎಸ್.ಪಿ.ಬಿ, ಚಿತ್ರ
ಕಮಾನು ಡಾರ್ಲಿಂಗ್. ಅಯ್ಯೋ ಅಯ್ಯೋ
ಸಿಡೌನು ಡಾರ್ಲಿಂಗ್. ಅಯ್ಯೋ ಅಯ್ಯೋ
ಇನ್ನೇನು ಕೆಲಸ ನಂಗೂ ನಿಂಗೂ ಸಿಂಗು ಸಾಂಗು ಸಿಂಗು
ಡೈಲಿ ಡಿಂಗು ಡಾಂಗು ಡಿಂಗು
ಕಮಿಂಗು ಡಾರ್ಲಿಂಗ್. ಅಯ್ಯೋ ಅಯ್ಯೋ
ಸಿಟ್ಟಿಂಗು ಡಾರ್ಲಿಂಗ್. ಅಯ್ಯೋ ಅಯ್ಯೋ
ಇನ್ನೇನು ಕೆಲಸ ನಂಗೂ ನಿಂಗೂ
ಸಿಂಗು ಸಾಂಗು ಸಿಂಗು ಡೈಲಿ ಡಿಂಗು ಡಾಂಗು ಡಿಂಗು 
ಮನೆಯಲಿ ಮಾತ್ರ ಹಸ್ಬೆಂಡು ಹೊರಗಡೆ ಕ್ಲೋಜ್ ಪ್ರೆಂಡು
ಸ್ಟಾರ್ಟು ಲವ್ವಿಂಗು ಮನ ಬಂದಕಡೆ ಸ್ಲೀಪಿಂಗು
ಪ್ರತಿದಿನ ಬೇಡ ಪ್ರೀಡಮ್ಮು ವೀಕ್ಲಿ ಒನ್ಸ್ ಜುಮ್ ಜುಮ್
ಸೈಟು ಸೀಯಿಂಗು. ಆ ನೈಟೆ ಲವ್ವಿಂಗು
ಸೇವಿಸು ಗಾಳಿ ಪ್ರೆಶ್ಶು. ಈ ದಿನ ನಿನಗಿದು ಕುಶ್ಶು
ಕುಶ್ಶಿಗೆ ಪ್ಲಸೇ ಕಿಸ್ಸು. ಏನೇ ಕೇಳು ಯೆಸ್ಸು.
ಕೋಟಿ ಕಿಸ್ಸು ಪ್ಲಸ್ಸಿಗೆ ಪ್ಲಸ್ಸು. ಕುಕ್ಕುರುಕೋ. ಕುಕ್ಕುರುಕೋ.
ಕಮಾನು ಡಾರ್ಲಿಂಗ್. ಅಯ್ಯೋ ಅಯ್ಯೋ
ಸಿಡೌನು ಡಾರ್ಲಿಂಗ್. ಅಯ್ಯೋ ಅಯ್ಯೋ
ಇನ್ನೇನು ಕೆಲಸ ನಂಗೂ ನಿಂಗೂ
ಸಿಂಗು ಸಾಂಗು ಸಿಂಗು ಡೈಲಿ ಡಿಂಗು ಡಾಂಗು ಡಿಂಗು
ಕಮಿಂಗು ಡಾರ್ಲಿಂಗ್. ಅಯ್ಯೋ ಅಯ್ಯೋ
ಸಿಟ್ಟಿಂಗು ಡಾರ್ಲಿಂಗ್. ಅಯ್ಯೋ ಅಯ್ಯೋ
ಇನ್ನೇನು ಕೆಲಸ ನಂಗೂ ನಿಂಗೂ ಸಿಂಗು ಸಾಂಗು ಸಿಂಗು
ಡೈಲಿ ಡಿಂಗು ಡಾಂಗು ಡಿಂಗು 
ಅರೆರೆರೆ ಸ್ಟಾರ್ಟು ರೈನಿಂಗು ಮಳೆಯಲಿ ಈಗ ಸಾಂಗು
ಸ್ಪೀಡು ಡಾನ್ಸಿಂಗು. ಎದೆಯೊಳಗಡೆ ಜಂಪಿಂಗು
ಅರೆರೆರೆರೆ ಬಾಡಿ ತ್ರಿಲ್ಲಿಂಗು ಲವ್ವಲಿ ನೀನು ಕಿಂಗು
ಲವ್ವು ಮೇಕಿಂಗು ನಿನಗೊಲಿದಿದೆ ಡಾರ್ಲಿಂಗು
ಈ ದಿನ ನಮಗೆ ಪ್ರೀಡಂ ಲೋಕಕೆ ಮಾರೋ ಡಂ ಡಂ
ತಿಳಿಯದು ಟಾಪು ಬಾಟಂ ಹೃದಯವೆ ನಮ್ಮ ಕಿಂಗಡಂ
ಗಾಡು ಪ್ಲಸ್ಸು ಪ್ಲಸ್ಸಿಗೆ ಪ್ಲಸ್ಸು ಕುಕ್ಕುರುಕೋ. ಕುಕ್ಕುರುಕೋ.
ಕಮಾನು ಡಾರ್ಲಿಂಗ್. ಅಯ್ಯೋ ಅಯ್ಯೋ
ಸಿಡೌನು ಡಾರ್ಲಿಂಗ್. ಅಯ್ಯೋ ಅಯ್ಯೋ
ಇನ್ನೇನು ಕೆಲಸ ನಂಗೂ ನಿಂಗೂ ಸಿಂಗು ಸಾಂಗು ಸಿಂಗು
ಡೈಲಿ ಡಿಂಗು ಡಾಂಗು ಡಿಂಗು
ಕಮಿಂಗು ಡಾರ್ಲಿಂಗ್. ಅಯ್ಯೋ ಅಯ್ಯೋ
ಸಿಟ್ಟಿಂಗು ಡಾರ್ಲಿಂಗ್. ಅಯ್ಯೋ ಅಯ್ಯೋ
ಇನ್ನೇನು ಕೆಲಸ ನಂಗೂ ನಿಂಗೂ
ಸಿಂಗು ಸಾಂಗು ಸಿಂಗು ಡೈಲಿ ಡಿಂಗು ಡಾಂಗು ಡಿಂಗು
-------------------------------------------------------------------------------------------------------------------------
ಅಣ್ಣಯ್ಯ (1993) - ಕಮಾನು ಡಾರ್ಲಿಂಗ್
ಸಂಗೀತ & ಸಾಹಿತ್ಯ: ಹಂಸಲೇಖ ಹಾಡಿದವರು: ಎಸ್.ಪಿ.ಬಿ, ಚಿತ್ರ
ಕುಂಕುಮ ಅರ್ಧವಿದೇ.. ಕೈ ಬಳೆ ಕಮ್ಮಿ ಇದೇ..
ಬೈತಲೆ ಕೆಟ್ಟಿದೆ..  ಗಲ್ಲವ ಕಟ್ಟಿದೆ..  ಎಲ್ಲಿಗೆ ಹೋಗಿದ್ದೀಯೇ...
ಕಾಲುಗಳು ಬೀಗುತಿವೆ... ಕಂಗಳು ತೇಗುತಿವೆ..
ಸೊಂಟವು ಜಗ್ಗದೇ  ಹೆಣ್ಣಿದೆ ಹಿಗ್ಗಿದೇ  ಯಾಂಕಿಂಗೆ ಮಾಗಿದ್ದೀಯೇ...
ರಾಗಿ ಹೊಲದಾಗೆ ಖಾಲಿ ಗುಡಿಸಲು ಓ..ಓ..
ಗುಡಿಸಲಿಗೆ ಹೋದೆ ಮಾತನಾಡಲು ಓ..ಓ..
ನನ್ನ ಪತಿರಾಯರಿಗೆ ತಿನಿಸಲು ಓ..ಓ..
ಜೇನ್ನು ತುಪ್ಪ ತಂದೆ ಮಾತು ಬರಿಸಲು ಓ..ಓ..
ತುಂಬಾ ಹೊಸ ಮಾತು ಕಳಿಸಿ ಕೊಟ್ಟಳಮ್ಮ !!
ಜೇನ್ನು ತುಪ್ಪ ತೊಟ್ಟು ಕೊಡು ಎಂದಳಮ್ಮ!!.ಓ.ಹೇ
ರಾಗಿ ಹೊಲದಾಗೆ ಖಾಲಿ ಗುಡಿಸಲು ಓ..ಓ..
ಗುಡಿಸಲಿಗೆ ಹೋದೆ ಮಾತನಾಡಲು ಓ..ಓ..
ತಾಳಿಯೂ ಬೆತ್ತಲಿದೇ ಸತ್ಯವು ಕಾಣುತಿದೆ
ಕತ್ತಲು ಕಾಯದೇ ಲೋಕವ ನೋಡದೇ ಏನೇನೋ ಮಾಡಿದ್ದೀಯೇ....
ನನ್ನ ಪುಟ್ಟ ಪತಿರಾಯ ಪುಟವಿತ್ತ ಚನಿಗರಾಯ ಕೇಳಿರಿ!!
ಹತ್ತಿರಕೆ ಬಾ ಎಂದರು ಬೇಡ ಅಂದ್ರೆ ಬಿಟ್ಟು ಕೊಟ್ಟರು ತಿಳಿಯಿರೀ ..ಈಈಈಈ .. !!
ನೀನು ತಾನೇ ಅಸೆ ತಂದೆ
ನೀನು ಯಾಕೆ ಜೇನು ತಿಂದೆ
ಹೌದು ತಿಂದೆ ಎನ್ನು ಮುಂದೆ
ನನ್ನ ತಾಯಿ ನೀನು ತಂದೆ
ಕೂಸಿಲ್ಲದೆನೇ ತಾಯಾಸೆ ಏನೇ ಬಾ ಬಿಡಿಸು ಈ ಒಗಟನು
ಓ ಓ ಮುಂದೆನ್ನೋ ನಾ ಅರಿಯನು
ರಾಗಿ ಹೊಲದಾಗೆ ಖಾಲಿ ಗುಡಿಸಲು ಓ..ಓ..
ಗುಡಿಸಲಿಗೆ ಹೋದೆ ಮಾತು ಕೇಳಲು ಓ..ಓ..
ತನ್ನ ಪತಿರಾಯನಿಗೆ ತಿನಿಸಲು ಓ..ಓ..
ತಂದ ಜೇನ್ನು ತಿಂದೆ ಮಾತು ಕಲಿಯಲು ಓ..ಓ.
ತುಂಬಾ ಹೊಸ ಮಾತು ಕಲಿತು ಕೊಂಡರಮ್ಮ
ಜೇನು  ತಿಂದು ನೀನು ತಿನ್ನು ಎಂದರಮ್ಮ .ಓ.ಹೇ
ರಾಗಿ ಹೊಲದಾಗೆ ಖಾಲಿ ಗುಡಿಸಲು ಓ..ಓ..
ಗುಡಿಸಲಿಗೆ ಹೋದೆ ಮಾತು ಕೇಳಲು ಓ..ಓ..
ಪಂಚೆಯ ಅಂಚು ಎಲ್ಲಿ, ಮಂಗನ ಮೂತಿಯಲ್ಲಿ
ಬಟ್ಟೆಗಳೆಲ್ಲವೂ ತಿರುವು ಮುರುವು ಏನೇನು ಕಾದಿತ್ತಲ್ಲಿ...
ದೂರದಿಂದ ನೋಡಿದರು ಸಣ್ಣ ಪದ ಹಾಡಿದರು ಕೇಳಿರಿ !
ಕಣ್ಣುಗಳ ಹೊಗಳಿದರು ತಾಳಿ ನಿದ್ರೆ ನಿಲ್ಲಿಸಿದರು ತಿಳಿಯಿರಿ ಓ...!!
ನಿನ್ನು ತಾನೇ ಹಾಡು ಎಂದೇ
ಯಾಕೆ ನನ್ನ ಪ್ರಾಣ ಎಂದೇ
ಪ್ರೀತಿಯಿಂದ ಹಾಗೇ ಅಂದೇ
ನಾವು ಇನ್ನು ಪ್ರೀತಿ ಇಂದೇ
ಈ ಪ್ರೇಮ ಪಾಠ ಈ ಜೇನಿನೂಟ ಈ ತಲೆಗೆ ಈಗೇರಿತು
ಆ.ಆ.ಓ ಚೆಲುವೆ ಏನಾಯಿತು
ರಾಗಿ ಹೊಲದಾಗೆ ಖಾಲಿ ಗುಡಿಸಲು ಓ..ಓ..
ಗುಡಿಸಲಿಗೆ ಹೋದೆ ಮಾತನಾಡಲು ಓ..ಓ..
ತನ್ನ ಪತಿರಾಯನಿಗೆ ತಿನಿಸಲು ಓ..ಓ..
ತಂದ ಜೇನು ತಿಂದೆ ಮಾತು ಕಲಿಯಲು ಓ..ಓ.
ತುಂಬಾ ಹೊಸ ಮಾತು ಕಲಿತು ಕೊಂಡರಮ್ಮ
ಜೇನ್ನು ತಿಂದು ನೀನು ತಿನ್ನು ಎಂದರಮ್ಮ .ಓ.ಹೇ
ರಾಗಿ ಹೊಲದಾಗೆ ಖಾಲಿ ಗುಡಿಸಲು ಓ..ಓ..
ಗುಡಿಸಲಿಗೆ ಹೋದೆ ಮಾತೂ ಕೇಳಲು ಓ..ಓ..
--------------------------------------------------------------------------------------------------------------------------
ಅಣ್ಣಯ್ಯ (1993) - ಅಣ್ಣಯ್ಯ ಅಣ್ಣಯ್ಯ ಬಾರೋ
ಸಂಗೀತ & ಸಾಹಿತ್ಯ: ಹಂಸಲೇಖ ಹಾಡಿದವರು: ಎಸ್.ಜಾನಕೀ 
ಅಣ್ಣಯ್ಯ ಅಣ್ಣಯ್ಯ ಬಾರೋ ಅಮ್ಮನ ಮಡಿಲ ಸೇರೋ ಜೋಗುಳ ಹಾಡುವೇ  ಜೋಗುಳ ಹಾಡುವೇ
ಅಣ್ಣಯ್ಯ ಅಣ್ಣಯ್ಯ ಬಾರೋ ಅಮ್ಮನ ಮಡಿಲ ಸೇರೋ ಜೋಗುಳ ಹಾಡುವೇ  ಜೋಗುಳ ಹಾಡುವೇ
ಹಸಿವಿಗೂ ಕರುವಿಗೂ ಮೂಕ ನಂಟಿದೆ ಅಮ್ಮನಿಗೂ ಕಂದನಿಗೂ ಲಾಲಿ ನಂಟಿದೆ 
ಅಣ್ಣಯ್ಯ ಅಣ್ಣಯ್ಯ ಬಾರೋ ಅಮ್ಮನ ಮಡಿಲ ಸೇರೋ ಜೋಗುಳ ಹಾಡುವೇ  ಜೋಗುಳ ಹಾಡುವೇ 
ಓ.. ಮಗುವೇ ನೀ ನನ್ನಾ ಜೀವನ ನಾ ನಿನ್ನ ಗಾಯನ 
ರೂಪವೂ ಬೇರೆ ನಾಮವೂ ಬೇರೆ ಉಸಿರೊಂದೇ ಉಸಿರೊಂದೇ 
ಅಮ್ಮಾ.. ನನಗೆಲ್ಲ ಇದ್ದರೂ  ನೀನೇನೆ ದೇವರು 
ಅಣ್ಣಯ್ಯ ಅಣ್ಣಯ್ಯ ಬಾರೋ ಅಮ್ಮನ ಮಡಿಲ ಸೇರೋ ಜೋಗುಳ ಹಾಡುವೇ  ಜೋಗುಳ ಹಾಡುವೇ 
ಓ.. ಅಮ್ಮಾ ನಾ ನಿನ್ನ ಕೂಗಿದೆ ನೀ ನನ್ನಾ ಸೇರಿದೇ 
ಗುರುವು ನೀನೇ ಗುರುಕುಲ ನೀನೇ  ನಿನ್ನಾಣೆ ಪಾಲಿಸುವೇ 
ಕಂದಾ ನೀ ನನ್ನಾ ಭಾಗ್ಯವೋ ಪೂರ್ವದ ಪುಣ್ಯವೋ 
ಅಮ್ಮಯ್ಯ ಅಮ್ಮಯ್ಯ ಬಾರೇ ಅಕ್ಕರೆ ಸಕ್ಕರೆ ತಾರೇ ಜೋಗುಳ ಕೇಳುವೆ ನಿದ್ದೆಯ ಮಾಡುವೇ 
ಅಣ್ಣಯ್ಯ ಅಣ್ಣಯ್ಯ ಬಾರೋ ಅಮ್ಮನ ಮಡಿಲ ಸೇರೋ ಜೋಗುಳ ಹಾಡುವೇ  ಜೋಗುಳ ಹಾಡುವೇ 
--------------------------------------------------------------------------------------------------------------------------
ಅಣ್ಣಯ್ಯ (1993) - ಅಣ್ಣಯ್ಯ ಅಣ್ಣಯ್ಯ ಬಾರೋ
ಸಂಗೀತ & ಸಾಹಿತ್ಯ: ಹಂಸಲೇಖ ಹಾಡಿದವರು: ಎಸ್.ಪಿ.ಬಿ. 
ಅಮ್ಮಾ... ಊರೇನೇ ಅಂದರೂ .. ನೀ ನನ್ನ ದೇವರೂ
ಅಮ್ಮಾ... ಊರೇನೇ ಅಂದರೂ .. ನೀ ನನ್ನ ದೇವರೂ
ಅಮ್ಮಯ್ಯ ಅಮ್ಮಯ್ಯ ಬಾರಿ ಅಕ್ಕರೆ ಸಕ್ಕರೇ ತಾರೇ ಮಕ್ಕಳ ಬಾಯಿಗೇ ಮಕ್ಕಳ ಬಾಯಿಗೇ
ಹೂವಿಗೂ ಹಣ್ಣಿಗೂ ಭೂಮಿ ದೇವರೂ ನೋವಿಗೂ ನಲಿವಿಗೂ ತಾಯಿದೇವರೂ
ಅಮ್ಮಯ್ಯ ಅಮ್ಮಯ್ಯ ಬಾರಿ ಅಕ್ಕರೆ ಸಕ್ಕರೇ ತಾರೇ ಮಕ್ಕಳ ಬಾಯಿಗೇ ಮಕ್ಕಳ ಬಾಯಿಗೇ
ಈ ಜಗವೇ ತಾಯಿಗೇ ತೊಟ್ಟಿಲೂ ನಾವೆಲ್ಲಾ ಮಕ್ಕಳೂ
ಆ.. ಸುರರೂ ತಾಯಿಗೇ ದಾಸರು ಮಾತಿಗೇ ತಪ್ಪರು
ಸತ್ಯಕ್ಕೆ ಸಾಕ್ಷಿ ಸುಳ್ಳಿಗೇ ಶೂಲ ತಾಯಾಣೆ ತಾಯಾಣೆ
ಅಮ್ಮಾ... ಊರೇನೇ ಅಂದರೂ .. ನೀ ನನ್ನ ದೇವರೂ
ಜಗಕೆ ಮುಕ್ಕೋಟಿ ದೇವರು ನೀ ನನ್ನ ದೇವರೂ
ಮಾನಕು ದೊಡ್ಡದು ಮಣ್ಣಿನಾ ಋಣ ಪ್ರಾಣಕು ದೊಡ್ಡದು ತಾಯಿಯಾ ಋಣ
ಅಮ್ಮಯ್ಯ ಅಮ್ಮಯ್ಯ ಬಾರಿ ಅಕ್ಕರೆ ಸಕ್ಕರೇ ತಾರೇ ಮಕ್ಕಳ ಬಾಯಿಗೇ ಮಕ್ಕಳ ಬಾಯಿಗೇ
ಓ..ಜನನೀ.. ಜೀವಕ್ಕೆ ಮೂಲ ನೀ ತ್ಯಾಗಕ್ಕೇ ಕಲಶ ನೀ 
ಓ.. ಜನನೀ ಎಲ್ಲಕ್ಕೂ ಮೊದಲು ನೀ ಪ್ರೇಮಕ್ಕೆ ಕಡಲು ನೀ 
ಮಾನಕೆ ರೂಪ ಮನಸಿಗೆ ದೀಪ ನಿನ್ನ ಮುಖ ಮುಖ 
ಅಮ್ಮಾ... ಯಾರೇನೇ ಅಂದರೂ .. ನೀ ನನ್ನ ದೇವರೂ
ಜಗಕೆ ಮುಕ್ಕೋಟಿ ದೇವರು ನೀ ನನ್ನ ದೇವರೂ
ಬಾನಕು ದೊಡ್ಡದು ಅನ್ನದಾ ಋಣ ಘಾನಕು ದೊಡ್ಡದು ಅಮ್ಮನ ಋಣ
ಅಮ್ಮಯ್ಯ ಅಮ್ಮಯ್ಯ ಬಾರಿ ಅಕ್ಕರೆ ಸಕ್ಕರೇ ತಾರೇ ಮಕ್ಕಳ ಬಾಯಿಗೇ ಮಕ್ಕಳ ಬಾಯಿಗೇ
--------------------------------------------------------------------------------------------------------------------------
ಅಣ್ಣಯ್ಯ (1993) - ಬೋಂಬೆ ಬೋಂಬೆ ಬೋಂಬೆ ನಿನ್ನ ಮುದ್ದಾಡಬೇಕು ನರಬೊಂಬೆ
ಸಂಗೀತ & ಸಾಹಿತ್ಯ: ಹಂಸಲೇಖ ಹಾಡಿದವರು: ಎಸ್.ಪಿ.ಬಿ. ಎಸ್.ಜಾನಕೀ
ಗಂಡು : ಬೋಂಬೆ ಬೋಂಬೆ ಬೋಂಬೆ  ಬೋಂಬೆ ಬೋಂಬೆ ಬೋಂಬೆ
           ನಿನ್ನ ಮುದ್ದಾಡಬೇಕು ನರಬೊಂಬೆ ನಿನ್ನ ಚೆಂಡಾಡಬೇಕು ನರಬೊಂಬೆ
          ನಿನ್ನ ಕೊಂಡಾಡಬೇಕು ನರಬೊಂಬೆ ಜೊತೆ ಉಂಡಾಡಬೇಕು ನರಬೊಂಬೆ
ಹೆಣ್ಣು : ಬೋಂಬೆ ಬೋಂಬೆ ಬೋಂಬೆ  ಬೋಂಬೆ ಬೋಂಬೆ ಬೋಂಬೆ
           ನಿನ್ನ ಮುದ್ದಾಡಬೇಕು ನರಬೊಂಬೆ ನಿನ್ನ ಚೆಂಡಾಡಬೇಕು ನರಬೊಂಬೆ
          ನಿನ್ನ ಕೊಂಡಾಡಬೇಕು ನರಬೊಂಬೆ ಜೊತೆ ಉಂಡಾಡಬೇಕು ನರಬೊಂಬೆ
ಗಂಡು : ಮುತ್ತು ಕೊಟ್ಟರೇ ಮುತ್ತಾಗದಂತದೇ  ಬೋಂಬೆ ಬೋಂಬೆ ಈ ಬೋಂಬೆ ಬೋಂಬೆ
ಹೆಣ್ಣು : ಅಪ್ಪಿಕೊಂಡರೂ ಮಕ್ಕಾಗದಂತೆಯೇ ಬೋಂಬೆ ಬೋಂಬೆ ಈ ಬೋಂಬೆ ಬೋಂಬೆ
ಗಂಡು : ಮಣ್ಣಿಗಿಂತ ಒಳ್ಳೆ ಸೊಗಡು ಇದೆ ಇದೆ ಈ ಬೊಂಬೆಗೆ
ಹೆಣ್ಣು : ಕತ್ತಿಗಿಂತ ಚೆನ್ನ ಮನಸು ಇದೆ ಇದೆ ಈ ಬೊಂಬೆಗೆ
ಗಂಡು : ವಯ್ಯಾರ ಮಾಡುತೈತೆ ರತಿ ಬೋಂಬೆ
ಹೆಣ್ಣು : ಸಲ್ಲಾಪ ಕೇಳುತೈತೆ ಸುಗರ ಬೋಂಬೆ
ಗಂಡು : ಬೋಂಬೆ ಇನ್ನೂ ಹಸಿ ಮುಟ್ಟಿದರೆ ಬಿಸಿ
ಹೆಣ್ಣು : ಬಿಸಿ ಬೋಂಬೆ ಹುಸಿ ಹಾಡಿನಲ್ಲಿ ಮುಸಿ ಆಆಆ....
ಗಂಡು : ಬೋಂಬೆ ಬೋಂಬೆ ಬೋಂಬೆ  ಬೋಂಬೆ ಬೋಂಬೆ ಬೋಂಬೆ
           ನಿನ್ನ ಮುದ್ದಾಡಬೇಕು ನರಬೊಂಬೆ ನಿನ್ನ ಚೆಂಡಾಡಬೇಕು ನರಬೊಂಬೆ
          ನಿನ್ನ ಕೊಂಡಾಡಬೇಕು ನರಬೊಂಬೆ ಜೊತೆ ಉಂಡಾಡಬೇಕು ನರಬೊಂಬೆ
ಹೆಣ್ಣು : ಬೊಂಬೆಯೊಳಗೇ ಬೊಂಬೆಯ ಮಾಡುವೇ ಅನ್ನೋ ಬೋಂಬೆ ಈ ಮಣ್ಣು ಬೋಂಬೆ 
ಗಂಡು : ಬೊಂಬೆಯೊಳಗೆ ರಂಭೆಯ ತೋರುವೇ ಅನ್ನೋ ಬೋಂಬೆ ಈ ಹೆಣ್ಣು ಬೋಂಬೆ 
ಹೆಣ್ಣು : ಮುದ್ದೆ ಕದ್ದು ಹೋಗೋ ಚಾಳಿ ಇದೆ ಇದೆ ಈ ಬೊಂಬೆಗೆ 
ಗಂಡು : ಕದ್ದು ಮುಚ್ಚಿ ಕೊಡೊ ಚಾಳಿ ಇದೆ ಇದೆ ಈ ಬೊಂಬೆಗೆ 
ಹೆಣ್ಣು : ಅಂಗಾಂಗವಾಗುತೈತೆ ಮಳ್ಳ ಬೋಂಬೆ 
ಗಂಡು : ಪಂಚಾಂಗ ಬಿಚ್ಚುತೈತೆ ಮಳ್ಳಿ ಬೋಂಬೆ 
ಹೆಣ್ಣು : ಸೂಜಿ ಬೆಳ್ಳಿ ಬೋಂಬೆ ನಿನ್ನ ಅಂಟಿಕೊಂಬೇ 
ಗಂಡು : ಕಾಂತ ಶಿಲೆ ಬೋಂಬೆ ದೃಷ್ಟಿಗೊಂದು ನಿಂಬೆಆಆಆ.. 
ಹೆಣ್ಣು : ಬೋಂಬೆ ಬೋಂಬೆ ಬೋಂಬೆ  ಬೋಂಬೆ ಬೋಂಬೆ ಬೋಂಬೆ
           ನಿನ್ನ ಮುದ್ದಾಡಬೇಕು ನರಬೊಂಬೆ ನಿನ್ನ ಚೆಂಡಾಡಬೇಕು ನರಬೊಂಬೆ
          ನಿನ್ನ ಕೊಂಡಾಡಬೇಕು ನರಬೊಂಬೆ ಜೊತೆ ಉಂಡಾಡಬೇಕು ನರಬೊಂಬೆ
ಗಂಡು : ಬೋಂಬೆ ಬೋಂಬೆ ಬೋಂಬೆ  ಬೋಂಬೆ ಬೋಂಬೆ ಬೋಂಬೆ
           ನಿನ್ನ ಮುದ್ದಾಡಬೇಕು ನರಬೊಂಬೆ ನಿನ್ನ ಚೆಂಡಾಡಬೇಕು ನರಬೊಂಬೆ
          ನಿನ್ನ ಕೊಂಡಾಡಬೇಕು ನರಬೊಂಬೆ ಜೊತೆ ಉಂಡಾಡಬೇಕು ನರಬೊಂಬೆ
--------------------------------------------------------------------------------------------------------------------------
No comments:
Powered by Blogger.

ಒಲವು ಗೆಲವು (1977)

ಒಲವು ಗೆಲವು (1977)

ಸಂಗೀತವೇ ನೀ ನುಡಿಯುವ ಮಾತೆಲ್ಲಾ 

ಹೇ.. ನನ್ನೆದೆಯ ಕೋಗಿಲೆಯಾ 

ನಾ ಹೇಳಲಾರೆ ನಾ ತಾಳಲಾರೆ 

ಗಿಣಿಯೇ ನನ್ನ ಅರಗಿಣಿಯೇ 

ಒಲವು ಗೆಲವು  (1977)
 ಚಿ. ಉದಯಶಂಕರ್   ಸಂಗೀತ: ಜಿ.ಕೆ.ವೆಂಕಟೇಶ್  ಗಾಯನ: ಡಾ ರಾಜ್, ಎಸ್ ಜಾನಕಿ
ಸ೦ಗೀತವೇ         ನೀ ನುಡಿಯುವ ಮಾತೆಲ್ಲಾ
ಸಲ್ಲಾಪವೇ           ನೀ ಎಲ್ಲಿರೆ ಅಲ್ಲೆಲ್ಲಾ
ಸ೦ಗೀತವೇ         ನೀ ನುಡಿಯುವ ಮಾತೆಲ್ಲಾ
ಸಲ್ಲಾಪವೇ           ನೀ ಎಲ್ಲಿರೆ ಅಲ್ಲೆಲ್ಲಾ
ಸ೦ತೋಷವೇ      ನೀ ಜೊತೆಯಿರೆ ಬಾಳೆಲ್ಲಾ
ಸರಸದಲಿ ಸಮನಾರಿಲ್ಲ    ಸ್ನೇಹದಲ್ಲಿ ಗೆಲ್ಲುವೆಯಲ್ಲ
ಮೌನದಲ್ಲಿ ಹೇಳಿದೆ ಎಲ್ಲ    ನೋಟದಲಿ ಹಾಡಿದೆಯಲ್ಲ
ಮನಸನು ಅರಿಯುವ       ಚತುರನಾದರೂ
ಏತಕೆ ನಿಲ್ಲುವೆ ನೀ ದೂರದೀ
ಅರಳಿದ ಒಲವಿನ            ಸುಮವು ನಗುತಿರೆ
ನೋಡುತ ನಿ೦ತೆನು ಉಲ್ಲಾಸದೀ
ಪ್ರೇಮದಲಿ ನಿನ್ನ ಸೇರಲು   ಹೃದಯದಲಿ ಹರುಷ ತು೦ಬಲು
ಹಾಯಾಗಿದೇ   ಹಾಯಾಗಿದೆ
ಸ೦ಗೀತವೇ       ನೀ ನುಡಿಯುವ ಮಾತೆಲ್ಲಾ
ಸಲ್ಲಾಪವೇ        ನೀ ಎಲ್ಲಿರೆ ಅಲ್ಲೆಲ್ಲಾ
ಸ೦ತೋಷವೇ  ನೀ ಜೊತೆಯಿರೆ ಬಾಳೆಲ್ಲ
ಚೆಲುವೆಯೇ ಛಲದಲಿ ಪಡೆದೆ ಒಲವನು
ಮೋಹದ ಮೋಡಿಗೆ ನಾ ಸೋತೆನು
ಸೋಲುವ ನೆಪದಲಿ ಗೆಲುವೆ ಹೊ೦ದಿದೆ
ನೊ೦ದೆನು ಸೇರಲು ನಾ ನಿನ್ನನು
ಮಾತಿನಲಿ ಮುದ್ದು ಅರಗಿಣಿ
ಅ೦ದದಲಿ ಮುತ್ತಿನಾ ಮಣಿ
ಬಾ ಇಲ್ಲಿಗೆ    ಬಾ ಇಲ್ಲಿಗೇ
ಸ೦ಗೀತವೇ       ನೀ ನುಡಿಯುವ ಮಾತೆಲ್ಲಾ
ಸಲ್ಲಾಪವೇ         ನೀ ಎಲ್ಲಿರೆ ಅಲ್ಲೆಲ್ಲಾ
ಸ೦ತೋಷವೇ    ನೀ ಜೊತೆಯಿರೆ ಬಾಳೆಲ್ಲ
-------------------------------------------------------------------------------------------------------------------------
ಒಲವು ಗೆಲವು (1977) - ಗಿಣಿಯೇ ನನ್ನ ಅರಗಿಣಿಯೇ 
ಸಾಹಿತ್ಯ :  ಚಿ. ಉದಯಶಂಕರ್   ಸಂಗೀತ: ಜಿ.ಕೆ.ವೆಂಕಟೇಶ್   ಗಾಯನ: ಡಾ ರಾಜ್ 

ಗಿಣಿಯೇ ನನ್ನ ಅರಗಿಣಿಯೇ  ಗಿಣಿಯೇ ನನ್ನ ಅರಗಿಣಿಯೇ 
ಸ೦ಜೆಯಲಿ ಈ ಏಕಾ೦ತದಲ್ಲಿ
ಹಿತವಿಲ್ಲವೇನು ಸುಖವಿಲ್ಲವೇನು
ಗಿಣಿಯೇ  ಹೇಯ್ ಗಿಣಿಯೇ
ನನ್ನ ಅರಗಿಣಿಯೇ
ಎ೦ದೂ ನನ್ನನು ನೋಡಿದಾಗ
ನಗುತಲಿ ಬ೦ದು ಮಾತನು ಆಡುವಾಗ
ನಾ ಕ೦ಡ ಹರುಷ   ಆ ನಿನ್ನ ಸರಸ
ಈ ದಿನ ಏನಾಯಿತು  ಏತಕೆ ಹೀಗಾಯಿತು
ಈ ದಿನ ಏನಾಯಿತು  ಏತಕೆ ಹೀಗಾಯಿತು
ಗಿಣಿಯೇ  ಹೇಯ್ ಗಿಣಿಯೇ
ನನ್ನ ಅರಗಿಣಿಯೇ
ಸ೦ಜೆಯಲಿ ಈ ಏಕಾ೦ತದಲ್ಲಿ
ಹಿತವಿಲ್ಲವೇನು ಸುಖವಿಲ್ಲವೇನು
ನಿನ್ನ ಮನಸಿನ ಆಸೆಯ೦ತೆ
ಇರುವೆನು ಚಿನ್ನ
ಜೊತೆಯಲೆ ಜೋಡಿಯ೦ತೆ
ಸ೦ತೋಷ ತಾನೇ   ನೀ ಹೇಳೆ ಜಾಣೇ
ರೋಹಿಣಿ ನೀನಾದರೆ   ಚ೦ದಿರ ನಾನಾಗುವೆ
ಹೇಯ್ ಗಿಣಿಯೇ ನನ್ನ ಅರಗಿಣಿಯೇ
ಗಿಣಿಯೇ ನನ್ನ ಅರಗಿಣಿಯೇ
ಸ೦ಜೆಯಲಿ ಈ ಏಕಾ೦ತದಲ್ಲಿ
ಹಿತವಿಲ್ಲವೇನು ಸುಖವಿಲ್ಲವೇನು
-----------------------------------------------------------------------------------------------------------------------
ಒಲವು ಗೆಲವು (1977) - ನಾ ಹೇಳಲಾರೆ ನಾ ತಾಳಲಾರೆ

ಸಾಹಿತ್ಯ :  ಚಿ. ಉದಯಶಂಕರ್   ಸಂಗೀತ: ಜಿ.ಕೆ.ವೆಂಕಟೇಶ್   ಗಾಯನ: ಡಾ ರಾಜ್ 
ನಾ ಹೇಳಲಾರೆ ನಾ ತಾಳಲಾರೆ  ಹರುಷ ತು೦ಬಿ ಬ೦ದು ಮನದಲಿ೦ದು ಏನೋ ಕಾತುರ
ನಾ ಹೇಳಲಾರೆ ನಾ ತಾಳಲಾರೆ  ಹರುಷ ತು೦ಬಿ ಬ೦ದು ಮನದಲಿ೦ದೂ  ಏನೋ ಕಾತುರ
ಯಾರಿಗು೦ಟು ಇ೦ಥ ಭಾಗ್ಯವಿ೦ದು ಜಗದಲ್ಲಿ ಯಾರಿಗು೦ಟು ಇ೦ಥ ಸೌಖ್ಯವಿ೦ದು
ಈ ಸೋದರಿ ಆ ಸೋದರ  ಈ ಸೋದರಿ ಆ ಸೋದರ  ಹಿತವನ್ನೆ ಕೋರುವ,
ಆನ೦ದ ನೀಡುವ  ಇವರೇ ನನ್ನ ಜೀವ
ನಾ ಹೇಳಲಾರೆ ನಾ ತಾಳಲಾರೆ ಹರುಷ ತು೦ಬಿ ಬ೦ದು ಮನದಲಿ೦ದು ಏನೋ ಕಾತುರ
ಅಣ್ಣ ನಿನ್ನ ರೂಪ ಮರೆಯಲಾರೆ ಎ೦ದಿಗೂ ನಿನ್ನ ಅ೦ತರ೦ಗ ಅರಿಯಲಾರೆ
ಆ ಸ್ನೇಹವ ಆ ಪ್ರೇಮವ ಆ ಸ್ನೇಹವ ಆ ಪ್ರೇಮವ
ಇನ್ನೆಲ್ಲಿ ನೋಡುವೆ ನಿನ್ನಲ್ಲೇ ಕಾಣುವೆ ನೀನು ದೇವರ೦ತೆ
ನಾ ಹೇಳಲಾರೆ ನಾ ತಾಳಲಾರೆ ಹರುಷ ತು೦ಬಿ ಬ೦ದು ಮನದಲಿ೦ದೂ ಏನೋ ಕಾತುರ
-------------------------------------------------------------------------------------------------------------------
ಒಲವು ಗೆಲವು (1977) - ನನ್ನೆದೆ ಕೋಗಿಲೆಯಾ

ಚಿತ್ರಗೀತೆ : ಚಿ. ಉದಯಶಂಕರ್  ಸಂಗೀತ: ಜಿ.ಕೆ.ವೆಂಕಟೇಶ್ ಗಾಯನ: ಎಸ್. ಜಾನಕಿ

ನನ್ನೆದೆ ಕೋಗಿಲೆಯಾ  ಒಲವಿನ ಪಲ್ಲವಿಯಾ
ದನಿಯಲಿ ವಿನೂತನ  ಜೀವ ಭಾವ ನೀ ತ೦ದೆ
ನನ್ನೆದೆ ಕೋಗಿಲೆಯಾ  ಒಲವಿನ ಪಲ್ಲವಿಯಾ
ದನಿಯಲಿ ವಿನೂತನ  ಜೀವ ಭಾವ ನೀ ತ೦ದೆ
ಏಕೋ ಏನೋ ಕಾಣೇ ನಾನು ಎದುರಲಿ ನೀನಿರಲು
ಮನದಲಿ ಸ೦ತೋಷದ  ಹೊನಲು ಹರಿಯಲೂ
ಏಕೋ ಏನೋ ಕಾಣೇ ನಾನು ಎದುರಲಿ ನೀನಿರಲು
ಮನದಲಿ ಸ೦ತೋಷದ  ಹೊನಲು ಹರಿಯಲೂ
ಕಾಣುತ ನಿನ್ನ೦ದ ಕಾಣದ ಆನ೦ದ
ಹೊಸ ಹೊಸ ಬಯಕೆಯು ನಿನ್ನಿ೦ದ
ನನ್ನೆದೆ ಕೋಗಿಲೆಯಾ ಒಲವಿನ ಪಲ್ಲವಿಯಾ
ದನಿಯಲಿ ವಿನೂತನ ಜೀವ ಭಾವ ನೀ ತ೦ದೆ
ತಾಳೂ ತಾಳು ನಲ್ಲ ನಿಲ್ಲು 
ತಾಳೂ ತಾಳು ನಲ್ಲ ನಾನು ಬರುವೆನು ನಿನ್ನೊಡನೆ
ಕಾಡುವೆ ನನ್ನೇಕೆ ಹೀಗೆ ಸುಮ್ಮನೆ
ತಾಳೂ ತಾಳು ನಲ್ಲ ನಾನು ಬರುವೆನು ನಿನ್ನೊಡನೆ
ಕಾಡುವೆ ನನ್ನೇಕೆ ಹೀಗೆ ಸುಮ್ಮನೆ
ಕಾಣದೆ ನಿನ್ನನ್ನು ಬಾಳೆನು ನಾನಿನ್ನು
ತಾಳೆನು ವಿರಹದಾ ನೋವನ್ನು
ನನ್ನೆದೆ ಕೋಗಿಲೆಯಾ ಒಲವಿನ ಪಲ್ಲವಿಯಾ
ದನಿಯಲಿ ವಿನೂತನ ಜೀವ ಭಾವ ನೀ ತ೦ದೆ
No comments:
Powered by Blogger.

ಹೃದಯ ಸಂಗಮ (1972)

ಹೃದಯ ಸಂಗಮ (1972)
ಹೃದಯ ಸಂಗಮ ಚಿತ್ರದ ಹಾಡುಗಳು
ನೀ ತಂದ ಕಾಣಿಕೆ

ನಡೆ ನಡೆ ಮನವೇ

ಏನೋ ಕುರುಡು ಭಾವನೆ

ಯಾರು ನೀ ಯಾರು

ಗಂಧದ ನೀರಿಗ್ಯೋಲೆ

ನೀ ತಂದ ಕಾಣಿಕೆ - ಎಸ್.ಜಾನಕೀ

ಹೃದಯ ಸಂಗಮ (1972)
ಸಾಹಿತ್ಯ: ಗೀತಪ್ರಿಯ ಸಂಗೀತ: ವಿಜಯಭಾಸ್ಕರ್ ಹಾಡಿದವರು: ಪಿ.ಬಿ.ಶ್ರೀನಿವಾಸ್
ನಡೆ ನಡೆ ನಡೆ ನಡೆ ನಡೆ ಮನವೆ
 ನವ ಜೀವನದಾ ಕಡೆಗೆ
ನಮ್ಮಯ ಜೊತೆಯಲಿ ನಡೆ ಜಗವೆ
ನವ ಸಾಧನೆಯಾ ಕಡೆಗೆ
ನಡೆ ನಡೆ ನಡೆ ನಡೆ ನಡೆ ಮನವೆ ನವ ಜೀವನದ ಕಡೆಗೆ
ಆ ದಿನ ಕಂಡೆ, ಬೇರೆ ಪ್ರಪಂಚ
ಆ ದಿನ ಕಂಡೆ ಬೇರೆ ಪ್ರಪಂಚ ಈ ದಿನ ಪ್ರೇಮ ಪ್ರಪಂಚ
ಎಲ್ಲರು ಜೊತೆಯಲಿ ಬಾಳುತಲಿದ್ದರೆ ಮುಳ್ಳೂ ಹೂವಿನ ಮಂಚ
ಆಹಾ, ಮುಳ್ಳೂ ಹೂವಿನ ಮಂಚ
ನಡೆ ನಡೆ ನಡೆ ನಡೆ ನಡೆ ಮನವೆ ನವ ಜೀವನದಾ ಕಡೆಗೆ
ಜೀವನವನ್ನೇ, ಹುಡುಕುತ ಅಂದು
ಜೀವನವನ್ನೇ ಹುಡುಕುತ ಅಂದು ದೂರ ದೂರಕೆ ನಡೆದೆ
ಅದುವೆ ನನ್ನನು ಹುಡುಕಲು ಇಂದು ನಿಜ ಜೀವನ ನಾ ಪಡೆದೆ
ಒಹೊ, ನಿಜ ಜೀವನ ನಾ ಪಡೆದೆ
ನಡೆ ನಡೆ ನಡೆ ನಡೆ ನಡೆ ಮನವೆ  ನವ ಜೀವನದಾ ಕಡೆಗೆ
ಸುಖವೇನಿದ್ದರು, ಪಂಜರದಲ್ಲಿ
ಸುಖವೇನಿದ್ದರು ಪಂಜರದಲ್ಲಿ ಅಲ್ಲಿನ ಬಾಳು ಬಾಳಲ್ಲ
ಕನಸಿನ ಲೋಕವ ನನಸಲಿ ಕಂಡರೆ ಆಗಲೆ ಸುಂದರ ಜಗವೆಲ್ಲ
ಒಹೊ, ಆಗಲೆ ಸುಂದರ ಜಗವೆಲ್ಲ
ನಡೆ ನಡೆ ನಡೆ ನಡೆ ನಡೆ ಮನವೆ ನವ ಜೀವನದಾ ಕಡೆಗೆ
------------------------------------------------------------------------------------------------------------------------
ಹೃದಯ ಸಂಗಮ (೧೯೭೨)
ರಚನೆ: ಆರ್. ಏನ್. ಜಯಗೋಪಾಲ್   ಸಂಗೀತ: ವಿಜಯ್ ಭಾಸ್ಕರ್   ಗಾಯಕರು: ಪಿ. ಬಿ. ಶ್ರೀನಿವಾಸ್, ಎಸ್. ಜಾನಕಿ 
ಗಂ: ನೀ ತಂದ ಕಾಣಿಕೆ ನಗೆಹೂವ ಮಾಲಿಕೆ, ನಗೆ ಹೂವ ಮಾಲಿಕೆ
       ನಾ ತಂದ ಕಾಣಿಕೆ ಅನುರಾಗ ಮಾಲಿಕೆ, ಅದಕಿಲ್ಲ ಹೋಲಿಕೆ
ಹೆ: ನೀ ತಂದ ಕಾಣಿಕೆ ನಗೆಹೂವ ಮಾಲಿಕೆ, ನಗೆ ಹೂವ ಮಾಲಿಕೆ
     ನಾ ತಂದ ಕಾಣಿಕೆ ಅನುರಾಗ ಮಾಲಿಕೆ, ಅದಕಿಲ್ಲ ಹೋಲಿಕೆ 
ಗಂ: ಕಣ್ಣಲ್ಲೆ ಬರೆದೆ ಒಲವಿನ ಪೀಠಿಕೆ, ಪೂರೈಸ ಬಂದ ಮನಸಿನ ಬೇಡಿಕೆ
       ಕಣ್ಣಲ್ಲೆ ಬರೆದೆ ಒಲವಿನ ಪೀಠಿಕೆ, ಪೂರೈಸ ಬಂದ ಮನಸಿನ ಬೇಡಿಕೆ 
ಹೆ: ಮೈಮರೆತು ನಿಂತೇ ಆ ನಿನ್ನ ನೋಟಕೆ
     ಮೈಮರೆತು ನಿಂತೇ ಆ ನಿನ್ನ ನೋಟಕೆ
     ನಾ ಹಾಡಿ ಕುಣಿದೆ ನಿನ್ನೆದೆ ತಾಳಕೆ  ಆ ಆ ಆ ಆ ಹಾ ಹಾ.....
ಗಂ: ನೀ ತಂದ ಕಾಣಿಕೆ ನಗೆಹೂವ ಮಾಲಿಕೆ, ನಗೆ ಹೂವ ಮಾಲಿಕೆ
ಹೆ: ನಾ ತಂದ ಕಾಣಿಕೆ ಅನುರಾಗ ಮಾಲಿಕೆ, ಅದಕಿಲ್ಲ ಹೋಲಿಕೆ 
ಗಂ: ಕರೆದೆ ನನ್ನಾ ಕನಸಿನ ತೀರಕೆ, ಆಸೆಯ ಹೂಗಳು ಅರಳಿಹ ತೋಟಕೆ
       ಕರೆದೆ ನನ್ನಾ ಕನಸಿನ ತೀರಕೆ, ಆಸೆಯ ಹೂಗಳು ಅರಳಿಹ ತೋಟಕೆ
ಹೆ: ಈ ಬಾಳ ಗುಡಿಗೆ ನೀನಾದೆ ದೀಪಿಕೆ 
     ಬೆಳಕಾಗಿ ನಿಂದೇ ನೀ ಎನ್ನ ಜೀವಕೆ ಆ ಆ ಆ ಆ ಹಾ ಹಾ.....
ಗಂ: ನೀ ತಂದ ಕಾಣಿಕೆ ನಗೆಹೂವ ಮಾಲಿಕೆ, ನಗೆ ಹೂವ ಮಾಲಿಕೆ
       ನಾ ತಂದ ಕಾಣಿಕೆ ಅನುರಾಗ ಮಾಲಿಕೆ, ಅದಕಿಲ್ಲ ಹೋಲಿಕೆ
ಹೆ: ನೀ ತಂದ ಕಾಣಿಕೆ ನಗೆಹೂವ ಮಾಲಿಕೆ, ನಗೆ ಹೂವ ಮಾಲಿಕೆ
      ನಾ ತಂದ ಕಾಣಿಕೆ ಅನುರಾಗ ಮಾಲಿಕೆ, ಅದಕಿಲ್ಲ ಹೋಲಿಕೆ
----------------------------------------------------------------------------------------------------------------------
ಹೃದಯ ಸಂಗಮ (೧೯೭೨)
ರಚನೆ: ಆರ್. ಏನ್. ಜಯಗೋಪಾಲ್   ಸಂಗೀತ: ವಿಜಯ್ ಭಾಸ್ಕರ್   ಗಾಯಕರು: ಎಸ್. ಜಾನಕಿ
ಏನೋ ಕುರುಡು ಭಾವನೆ ಯಾವ ಗುರಿಯ ಸಾಧನೆ
ನಾಗರಿಕ ಜನತೆಗೆ ಎಂಥ ಆತ್ಮ ವಂಚನೆ
ಏನೋ ಕುರುಡು ಭಾವನೆ
ಅಂಟು ರೋಗ ಅನುಕರಣೆ ಆಧುನಿಕತೆ ಎನಿಸಿತೇ
ಅಂಟು ರೋಗ ಅನುಕರಣೆ ಆಧುನಿಕತೆ ಎನಿಸಿತೇ
ಭಾರತಾಂಬೆ ಸಂತತಿ ಕಾಣದೇನು ಜಾಗೃತಿ
ಏನೋ ಕುರುಡು ಭಾವನೆ ಯಾವ ಗುರಿಯ ಸಾಧನೆ
ನಾಗರಿಕ ಜನತೆಗೆ ಎಂಥ ಆತ್ಮ ವಂಚನೆ
ಏನೋ ಕುರುಡು ಭಾವನೆ
ಅಂದವಾದ ಹೂವಿಗೆ ರಂಗು ಬಳೆವುದೇತಕೆ
ಅಂದವಾದ ಹೂವಿಗೆ ರಂಗು ಬಳೆವುದೇತಕೆ
ನಮ್ಮತನದ ಹಿರಿಮೆಗೆ ಪರರ ಹಂಗು ಏತಕೆ.. 
ಏನೋ ಕುರುಡು ಭಾವನೆ ಯಾವ ಗುರಿಯ ಸಾಧನೆ
ನಾಗರಿಕ ಜನತೆಗೆ ಎಂಥ ಆತ್ಮ ವಂಚನೆ
ಏನೋ ಕುರುಡು ಭಾವನೆ
ನಮ್ಮ ದಿವ್ಯ ಸಂಸ್ಕೃತಿ ಕಂಡಿತೇ ಅಧೋಗತಿ
ನಮ್ಮ ದಿವ್ಯ ಸಂಸ್ಕೃತಿ ಕಂಡಿತೇ ಅಧೋಗತಿ
ಬೇರೆಯಾಗಿ ರೀತಿ ನೀತಿ ಇದುವೆ ಏನು ಪ್ರಗತಿ 
ಏನೋ ಕುರುಡು ಭಾವನೆ ಯಾವ ಗುರಿಯ ಸಾಧನೆ
ನಾಗರಿಕ ಜನತೆಗೆ ಎಂಥ ಆತ್ಮ ವಂಚನೆ...
------------------------------------------------------------------------------------------------------------------------
ಹೃದಯ ಸಂಗಮ (೧೯೭೨)
ರಚನೆ: ಚಿ.ಉದಯಶಂಕರ ಸಂಗೀತ: ವಿಜಯ್ ಭಾಸ್ಕರ್   ಗಾಯಕರು: ಎಲ್.ಆರ್.ಈಶ್ವರಿ 
ಯಾರು..  ನೀ...  ಯಾರು
ಎಲ್ಲಿದೆ ಮನಸು  ಕಾಣುತಿರುವೆಯಾ ಕನಸು
ನೀ ಯಾರೆಂದು ಯೋಚಿಸು ಯೋಚಿಸು ..
ಯಾರು..  ನೀ...  ಯಾರು
ಬಳಸಿ ನನ್ನನು ತೋಳಿನಲಿ ರಂಗು ತಂದೆ ಈ ಕೆನ್ನೆಯಲಿ
ಬಳಸಿ ನನ್ನನು ತೋಳಿನಲಿ ರಂಗು ತಂದೆ ಈ ಕೆನ್ನೆಯಲಿ
ತುಟಿಗಳ ಮೇಲೆ ತುಟಿಗಳ ಲೀಲೆ 
ಮಿಂಚು ಮೈಯ್ಯಲ್ಲಿ ಸಂಚು ಕಣ್ಣಲ್ಲಿ 
ಮರೆತೇ ಏನು ಎಲ್ಲಾ... 
ಯಾರು..  ನೀ...  ಯಾರು 
ಸೆರೆಯ ವಾಸಕೆ ಬೆದರಿದೆಯಾ
ಚಿಂತೆ ಏನಿದು ಹೇಳುವೆಯಾ
ಸೆರೆಯ ವಾಸಕೆ ಬೆದರಿದೆಯಾ
ಚಿಂತೆ ಏನಿದು ಹೇಳುವೆಯಾ
ಪುರುಷ ಸಿಂಹಕೇ ಹೆದರಿಕೆ ಏಕೇ 
ರೋಷ ಬಂದಾಗ ಕೆರಳಿ ನಿಂತಾಗ 
ದುರುಳರೆಲ್ಲಾ ನಾಶ 
ಯಾರು..  ನೀ...  ಯಾರು
ಎಲ್ಲಿದೆ ಮನಸು  ಕಾಣುತಿರುವೆಯಾ ಕನಸು
ನೀ ಯಾರೆಂದು ಯೋಚಿಸು ಯೋಚಿಸು ..
ಯಾರು..  ನೀ...  ಯಾರು
--------------------------------------------------------------------------------------------------------------------------
ಹೃದಯ ಸಂಗಮ (೧೯೭೨)
ರಚನೆ: ಗೀತಪ್ರಿಯ  ಸಂಗೀತ: ವಿಜಯ್ ಭಾಸ್ಕರ್   ಗಾಯಕರು: ಮಹೇಶ, ಅಂಜಲಿ 
ಗಂಧಾದ  ನೆರಿಗಿಯವಳೇ  ಬೆಂಗಳೂರಿನ ರವಿಕೆಯೊಳೇ
ಗಂಧಾದ  ನೆರಿಗಿಯವಳೇ  ಬೆಂಗಳೂರಿನ ರವಿಕೆಯೊಳೇ
ಕಿರು ಗೆಜ್ಜೆ ಜಾರಯಾವು ಸಣ್ಣ ಮಲಾಲಾಗೆ
ಗಂಧಾದ  ನೆರಿಗಿಯವಳೇ  ಬೆಂಗಳೂರಿನ ರವಿಕೆಯೊಳೇ
ಗಂಧಾದ  ನೆರಿಗಿಯವಳೇ  ಬೆಂಗಳೂರಿನ ರವಿಕೆಯೊಳೇ
ಕಿರು ಗೆಜ್ಜೆ ಜಾರಯಾವು ಸಣ್ಣ ಮಲಾಲಾಗೆ
ದೊಡ್ದಾನೆ ದ್ಯಾವ್ವವ್ವಾ ಅಡ್ಡೆ ಮೇಲೆ ಬರುವಾಗ 
ದೊಡ್ದಾನೆ ದ್ಯಾವ್ವವ್ವಾ ಅಡ್ಡೆ ಮೇಲೆ ಬರುವಾಗ
ಹೂವಿನೊವನ ಮಾರಿಯಂದ ಹೆಗಲೇರಿ
ಗಂಧಾದ  ನೆರಿಗಿಯವಳೇ  ಬೆಂಗಳೂರಿನ ರವಿಕೆಯೊಳೇ
ಗಂಧಾದ  ನೆರಿಗಿಯವಳೇ  ಬೆಂಗಳೂರಿನ ರವಿಕೆಯೊಳೇ
ಕಿರು ಗೆಜ್ಜೆ ಜಾರಯಾವು ಓಹೋಹೋ
-------------------------------------------------------------------------------------------------------------------------
ಹೃದಯ ಸಂಗಮ (೧೯೭೨)
ರಚನೆ: ಆರ್. ಏನ್. ಜಯಗೋಪಾಲ್   ಸಂಗೀತ: ವಿಜಯ್ ಭಾಸ್ಕರ್   ಗಾಯಕರು: ಎಸ್. ಜಾನಕಿ
ನೀ ತಂದ ಕಾಣಿಕೆ ನಗೆಹೂವ ಮಾಲಿಕೆ, ನಗೆ ಹೂವ ಮಾಲಿಕೆ
ನಾ ತಂದ ಕಾಣಿಕೆ ಅನುರಾಗ ಮಾಲಿಕೆ, ಅನುರಾಗ ಮಾಲಿಕೆ
ಕಣ್ಣಲ್ಲೆ ಬರೆದೆ ಒಲವಿನ ಪೀಠಿಕೆ,
ಪೂರೈಸ ಬಂದೇ  ಮನಸಿನ ಬೇಡಿಕೆ
ಕಣ್ಣಲ್ಲೆ ಬರೆದೆ ಒಲವಿನ ಪೀಠಿಕೆ,
ಪೂರೈಸ ಬಂದೇ ಮನಸಿನ ಬೇಡಿಕೆ 
ಮೈಮರೆತು ನಿಂತೇ ಆ ನಿನ್ನ ನೋಟಕೆ
ನಾ ಹಾಡಿ ಕುಣಿದೆ ನಿನ್ನೆದೆ ತಾಳಕೆ
ನೀ ತಂದ ಕಾಣಿಕೆ ನಗೆಹೂವ ಮಾಲಿಕೆ, ನಗೆ ಹೂವ ಮಾಲಿಕೆ
ನಾ ತಂದ ಕಾಣಿಕೆ ಅನುರಾಗ ಮಾಲಿಕೆ, ಅನುರಾಗ ಮಾಲಿಕೆ
ನೆನಪಿನ ಸುಳಿಗೆ ಕವಿಯಿತು ಇರುಳು
ಮರೆಯಿತೇ ನಿನ್ನಾ ಕರದಾ ಕೊರಳು
ನೆನಪಿನ ಸುಳಿಗೆ ಕವಿಯಿತು ಇರುಳು
ಮರೆಯಿತೇ ನಿನ್ನಾ ಕರದಾ ಕೊರಳು
ಬಾರದ ತುಟಿಗೇ ಅಂದಿನ ಹಾಡು 
ನೀನಿಲ್ಲದ ಬಾಳು ಮರಳಿನ ಕಾಡು 
ನೀ ತಂದ ಕಾಣಿಕೆ ನಗೆಹೂವ ಮಾಲಿಕೆ, ನಗೆ ಹೂವ ಮಾಲಿಕೆ
ನಾ ತಂದ ಕಾಣಿಕೆ ಅನುರಾಗ ಮಾಲಿಕೆ, ಅನುರಾಗ ಮಾಲಿಕೆ
ಅನುರಾಗ...  
--------------------------------------------------------------------------------------------------------------------------
No comments:
Powered by Blogger.

ಗೌರಿ ಗಣೇಶ (1991)

ಗೌರಿ ಗಣೇಶ (1991)

ಗೌರಿ ಗಣೇಶ ಚಿತ್ರದ ಹಾಡುಗಳು 
ಮಾತಿನಲ್ಲೇ ಗೆಲ್ಲಬಲ್ಲೆ ಜಗವನ್ನೇ 

ಒಂದು ಊರಲ್ಲಿ ಒಬ್ಬ ಚೆಲುವೆಯು 

ನಿಮ್ಮ ಮಗುವು ನಗುತಿರುವ 

ಡ್ಯಾಡಿ ಡ್ಯಾಡಿ ಡ್ಯಾಡಿ 

ಗೌರಿ ಗಣೇಶ (೧೯೯೧) - ಮಾತಿನಲ್ಲೇ ಗೆಲ್ಲಬಲ್ಲೆ ಜಗವನ್ನೇ 
ಸಂಗೀತ : ರಾಜನ್ ನಾಗೇಂದ್ರ, ಸಾಹಿತ್ಯ : ಶ್ಯಾಮಸುಂದರ ಕುಲಕರ್ಣಿ ಗಾಯನ : ರಾಜೇಶ ಕೃಷ್ಣನ 
ಮಾತಿನಲ್ಲೇ ಗೆಲ್ಲಬಲ್ಲೆ ಜಗವನ್ನೇ
ಚಾಟಿ ಇಲ್ಲದೆ ಆಡಿಸಬಲ್ಲೆ ಬುಗುರಿಯನ್ನೇ
ನನ್ನಯ ಜಾಲಕೆ ಬೀಳುವ ಜನರ ನಾ ಬಿಡುವೆನೆ
ಮಾತಿನಲ್ಲೇ ಗೆಲ್ಲಬಲ್ಲೆ ಜಗವನ್ನೇ
ಚಾಟಿ ಇಲ್ಲದೆ ಆಡಿಸಬಲ್ಲೆ ಬುಗುರಿಯನ್ನೇ
ಮೋಡಿ ಹಾಕಿ ಬದುಕಬಲ್ಲೆ ಬಿತ್ತಿ ಊಟ ಗಿಟ್ಟಿಸಬಲ್ಲೆ
ಸುಳ್ಳಿಗೆ ಸಂಚಿಗೆ ತಕ್ಕ ಕಾಲ ಕಂತ್ರಿ ಜನರ ಬುದ್ದಿ ಬಲ್ಲೆ
ಮಂಕಬೂದಿ ಎರಚಬಲ್ಲೆ ಮಡ್ಡಿಗೆ  ಒಡ್ದುವೆ ನನ್ನ ಗಾಳ
ಮೋಸವು ದ್ವೇಷಕ್ಕೆ ದ್ವೇಷವು ನಿಮ್ಮಾಣೆ ನಾ ಸತ್ಯ ಹೇಳುವೇ
ಮಾತಿನಲ್ಲೇ ಗೆಲ್ಲಬಲ್ಲೆ ಜಗವನ್ನೇ
ಚಾಟಿ ಇಲ್ಲದೆ ಆಡಿಸಬಲ್ಲೆ ಬುಗುರಿಯನ್ನೇ
ಮೋಸವೊಂದೇ ಧ್ಯೇಯವಲ್ಲ ಬಿಟ್ಟಿ ಸಿಕ್ಕರೇ ನಾ ಬಿಡೋದಿಲ್ಲ 
ಬಿಟ್ಟರೆ ಸಿಕ್ಕಾನು ಇಂಥ ಜಾಣ ಲೋಕಕೆಲ್ಲ ಒಬ್ಬನೇ ಧೀರ 
ಬುದ್ದಿವಂತ ಲಂಬೋಧರ ಶೆಟ್ಟಿಗೆ ಬಿಟ್ಟಲೇ ಪಟ್ಟಣ 
ಛಾನ್ಸಗೇ ಕಾಯುವೇ ಬಾಣವ ಹೂಡುವೇ ಸಿಕ್ಕಾಗ ಸಿಕ್ಕಷ್ಟು ನೀಡುವೇ 
ಮಾತಿನಲ್ಲೇ ಗೆಲ್ಲಬಲ್ಲೆ ಜಗವನ್ನೇ
ಚಾಟಿ ಇಲ್ಲದೆ ಆಡಿಸಬಲ್ಲೆ ಬುಗುರಿಯನ್ನೇ
ನನ್ನಯ ಜಾಲಕೆ ಬೀಳುವ ಜನರ ನಾ ಬಿಡುವೆನೆ
ಮಾತಿನಲ್ಲೇ ಗೆಲ್ಲಬಲ್ಲೆ ಜಗವನ್ನೇ
ಚಾಟಿ ಇಲ್ಲದೆ ಆಡಿಸಬಲ್ಲೆ ಬುಗುರಿಯನ್ನೇ
--------------------------------------------------------------------------------------------------------------------------
ಗೌರಿ ಗಣೇಶ (೧೯೯೧) - ಒಂದು ಊರಲ್ಲಿ ಒಬ್ಬ ಚೆಲುವೆಯು
ಸಂಗೀತ : ರಾಜನ್ ನಾಗೇಂದ್ರ, ಸಾಹಿತ್ಯ : ಸು.ರುದ್ರಮೂರ್ತಿ ಶಾಸ್ತ್ರಿ ಗಾಯನ : ಅತ್ರಿ 
ಒಂದು ಊರಲ್ಲಿ ಒಬ್ಬ ಚೆಲುವೆಯು ಆ ಚೆಲುವೇ ಹೆಸರು ಗೌರಿ
ತಾಯಿ ಇಲ್ಲದೆ ಮಲತಾಯಿ ಸೆರೆಯಲಿ ಬೆಳೆಯುತ್ತಿದ್ದಾಳಾ ನಾರಿ
ಪಾಪದ ಹುಡುಗಿಗೆ ರೂಪವಾಯಿತು ಶಾಪ ಹೂವಿಗೆ ತಟ್ಟಿತು ಬೇಸಿಗೆಯ ತಾಪ
ಅಪ್ಪನ ಮುತ್ತಿತು ಬಂದು ಮೃತ್ಯು ಕೂಪ ತೋರಿದಳು ಮಲತಾಯಿ ರಾಕ್ಷಸಿ ರೂಪ
ಗೌರಿ ಪ್ರಾಯ ದುಷ್ಟ ತಾಯ್ ಕಣ್ಣ್ ಕುಕ್ಕಲೂ ಅವಳ ಶೀಲ ಮಾರುವಂಥ ಸಂಚು ನಡೆಯಲು
ಗೌರಿ ಪ್ರಾಯ ದುಷ್ಟ ತಾಯ್ ಕಣ್ಣ್ ಕುಕ್ಕಲೂ ಅವಳ ಶೀಲ ಮಾರುವಂಥ ಸಂಚು ನಡೆಯಲು
ನೀತಿ ತಪ್ಪದ ಹೆಣ್ಣು ಅವಳು ಅನ್ಯಾಯ ತಾಳದೆ ನೊಂದಳು
ಶೀಲವತಿಯ ತನ್ನ ಮನೆಯ ತೊರೆದಳು ಗೂಡು ಸಿಕ್ಕದಂತ ಹಕ್ಕಿಯಾದಳು
ಸ್ನೇಹಿತೆ ಒಬ್ಬಳು ತೋರಿಸಿ ಅಕ್ಕರೆ ಗೌರಿಗೆ ಕೊಟ್ಟಳು ಸ್ನೇಹದ ಆಸರೆ
ಸ್ನೇಹಿತೆ ತೋರಿದ ಕರುಣೆಯಿಂದಲೇ ಸಿಕ್ಕಿತು ಒಂದೆಡೆ ನೌಕರಿ ನೆಲೆ
ಏನು ಹೇಳಲಿ ಅವಳಿದ್ದ ಜಾಗದಿ ಯಜಮಾನನೊಬ್ಬ ಕಾಮಣ್ಣನು
ದಾಹ ಕಂಗಳ ಆನಂದರಾಯನು ಈ ಹಕ್ಕಿ ಕಂಡು ಗಿಡುಗನಾದನು
ಮಾಯೆಯ ದಾಸ ಆನಂದರಾಯ ಮೂಢ ಇರುಳಲಿ ನಡೆದುದು ಎಲ್ಲವೂ ನಿಗೂಢ
ಮಾಯೆಯ ದಾಸ ಆನಂದರಾಯ ಮೂಢ ಇರುಳಲಿ ನಡೆದುದು ಎಲ್ಲವೂ ನಿಗೂಢ
ಕಾಮ ಬಾಣದ ಆ ಗುರಿಯು ತಪ್ಪಿತು ಈ ಹಕ್ಕಿ ದಕ್ಕಲಿಲ್ಲ ಕೊನೆಗೂ
ಯಾರು ತಿಳಿಯದ ಈ ರಹಸ್ಯವೂ ಈ ಡೈರಿಯೊಳಗೆ ದಾಖಾಲಾಯಿತು
ಈ ಕಥೆಗೆ ಒಂದು ಸ್ಫೂರ್ತಿಯಾಯಿತು
ಇಲ್ಲಿಗೂ ಮುಗಿಯಲಿಲ್ಲ ಗೌರಿಯ ಕಥೆ ವಿಧಿಯ ಕೈ ಬರೆಯಿತು ಮುಂದಿನ ವ್ಯಥೆ
ರೋಗದ ರೂಪದಿ ಬಂದಿತು ವಿಧಿ ಸೋತಿತು ಗೌರಿಯ ಹೃದಯದ ಸ್ಥಿತಿ
ಪ್ರಾಣ ಸ್ನೇಹಿತೆ ಪ್ರಾಣ ಉಳಿಸಲು ಸ್ನೇಹಿತೆಯರು ಪಾಡುಪಟ್ಟರು
ಹಣವು ಇಲ್ಲದೇ ಎಲ್ಲ ದಿಕ್ಕಲೂ ಸಹಾಯ ಬೇಡಿ ಪತ್ರ ಬರೆದರು
ತಾಳಿ ಕಟ್ಟದೇ ಸಪ್ತಪದಿಯ ತುಳಿಯದೇ ಗೌರಿ ಜನರ ಮುಂದೆ ವಧುವು ಆದಳು
ಮದುವೆ ಎನ್ನುವ ಕಪಟ ನಾಟಕದಲ್ಲಿ ಗೌರಿ ಒಬ್ಬ ಪಾತ್ರಧಾರಿಯಾದಳು
ಏನೋ ಮಾಡಲೆಂದು ಹೋಗಿ ಏನೋ ಆಯಿತೇ ನಿಂತಿತಲ್ಲೇ ಸುಳ್ಳು ಮದುವೆ ಆರತಕ್ಷತೆ
ತಂದೆಯನ್ನು  ಕಾಣಲೆಂದು ಚಂದ್ರಮೌಳಿಯು ದುಃಖದಿ ವಿಮಾನದಲ್ಲಿ ಪಯಣ ಹೊರಟನು
ಕಾದು ಎರಗಿತೋ ಘೋರ ಧುರ್ವಿಧಿ  ಪಾಶ ಬೀಸಿ ಸಾವ ತಂದು ಸೆಳೆಯಿತವನನು
ಇಲ್ಲಿಯೂ ನಡೆಯಿತು ಒಂದು ವಿಚಿತ್ರ ವಿಧಿಯು ಕೈ ಬರೆಯಿತು ಮೂರನೇ ಪಾತ್ರ
ಮಿತಿಯ ಮೀರುತ ಮಿತ್ರ ಮಧುವು ಕುಡಿದನು ತನ್ನ ಕೋಣೆ ದಾರಿ ಹುಡುಕುತ್ತಿದ್ದನು
ಮದಿರೆ ಅಮಲಿನಲಿ ನವದಂಪತಿ ಗೃಹಕೆ ನುಗ್ಗಿ ಕಂಡನಲ್ಲಿ ಒಂದು ಹೆಣ್ಣನ್ನೂ
ಮದಿರೆಯ ದಾಸ ಮಧುವು ಕೂಡ ಮೂಢ ಇಲ್ಲಿಯೂ ನಡೆದುದು ಎಲ್ಲವೂ ನಿಗೂಢ
ಗಿಣಿಯು ಕಚ್ಚದಂತ ಹೆಣ್ಣು ಗೌರಿ ಆದರೂ ಅದೇ ಹಣ್ಣ ತಿಂದವೆಂದು ಕೊಂಡರೆಲ್ಲರೂ
ಕೆಸರು ಸೋಕದ ಆ ಮುದ್ದು ತಾವರೇ ಗೌರಿ ಕನ್ಯೆಯಾಗಿಯೇ ಉಳಿದಳು
ಕೊನೆಗೂ ಕನ್ಯೆಯಾಗಿಯೇ ಅಳಿದಳು
--------------------------------------------------------------------------------------------------------------------------
ಗೌರಿ ಗಣೇಶ (೧೯೯೧) - ನಿಮ್ಮ ಮಗುವು ನಗುತಿರುವ
ಸಂಗೀತ : ರಾಜನ್ ನಾಗೇಂದ್ರ, ಸಾಹಿತ್ಯ : ಎಂ.ಏನ್.ವ್ಯಾಸರಾವ ಗಾಯನ : ನರಸಿಂಹ ನಾಯಕ್
ನಿಮ್ಮ ಮಗುವು ನಗುತಿರುವ ತೊಟ್ಟಿಲಲ್ಲಿ ಆಡುತಿರುವಾ
ನಿಮ್ಮ ಮಗುವು ನಗುತಿರುವ ತೊಟ್ಟಿಲಲ್ಲಿ ಆಡುತಿರುವಾ
ಗಣೇಶನೆಂಬ ಹೆಸರಿಂದ ಭೂಮಿಗೆ ಬಂದ ಗೌರಿಯ ಕಂದ 
ನಿಮ್ಮ ಮಗುವು ನಗುತಿರುವ ತೊಟ್ಟಿಲಲ್ಲಿ ಆಡುತಿರುವಾ 
ಗೋಪಿಯ ಕಂದ ಕೃಷ್ಣನ ಹಾಗೇ ಈತನ ರೂಪವು ಬಲು ಚೆಂದ 
ಕುಲದ ದೈವಗಳ ಕೃಪೆಯಿಂದ ಬೆಸೆದ ಕರುಳ ಸಂಬಂಧ 
ಮೂರನೇ ತಿಂಗಳು ಟ್ರಿಪಲ್ ಆಂಟಿಜನ್ ಚುಚ್ಚಿಸಿದೇ 
(ಪಾಪ ಎಷ್ಟು ನೋವಾಯಿತೋ ಏನೋ )
ಜೊತೆಯಲ್ಲೇ ಪೋಲಿಯೋ ಡ್ರಾಪನೂ ಕೂಡ ಹಾಕಿಸಿದೇ 
(ಮಗು ರಾತ್ರಿ ಎಲ್ಲಾ ಅಳುತ್ತಾ ಇತ್ತೋ ಏನೋ )
ಸ್ನಾನವ ನಾನೇ ಮಾಡಿಸುವೇ ಜೋಗುಳ ಹಾಡಿ ಮಲಗಿಸುವೇ 
ನಿಮ್ಮಯ ಮುದ್ದಿನ ಕಂದನ ಬೆಳೆಸಲು ಬದುಕನೇ ಮೀಸಲು ಇಟ್ಟಿರುವೇ 
(ನೀನು ಮನುಷ್ಯ ಅಲ್ಲಪ್ಪಾ...  ದೇವರು )
ನಿಮ್ಮ ಮಗುವು ನಗುತಿರುವ ಅಂಬೆಗಾಲನು ಇಡುತಿರುವಾ
ಗಣೇಶನೆಂಬ ಹೆಸರಿಂದ ಭೂಮಿಗೆ ಬಂದ ಗೌರಿಯ ಕಂದ 
ನಿಮ್ಮ ಮಗುವು ನಗುತಿರುವ ಅಂಬೆಗಾಲನು ಇಡುತಿರುವಾ 
ದೀಪವ ಕಂಡು ಮುಟ್ಟಲು ಹೋಗಿ ಈ ದಿನ ಕೈಯನು ಸುಟ್ಟುಕೊಂಡ 
ನಿತ್ಯ ನೀರಿನಲಿ ಇವನಾಟ ಮಣ್ಣು ಕಂಡರೇ ಉರುಳಾಟ 
ಕೂಸುಮರಿ ಬೇಕೇ ಕೂಸುಮರಿ ಎಂದು ಆಡಿಸುವೇ 
(ಅಯ್ಯೋ ನನಗೆ ಆ ಭಾಗ್ಯ ಇಲ್ಲವೇ )
ಅಪ್ಪ ಅಂದರೆ ಸಾಕು ನಿಮ್ಮ ಫೋಟೋ ತೋರಿಸುವೇ 
(ಕರೆಕ್ಟ್ ನಾನ ತಾನೇ ಅವರಪ್ಪ )
ತಿರುಪತಿ ಹರಕೆ ತೀರಿಸಿದೇ ಚೌಲವ ಅಲ್ಲೇ ಮಾಡಿಸಿದೇ 
ಸುತ್ತಮುತ್ತಲ ಮುತ್ತೈದೆಯರ ಕರೆಸಿ ಆರತಿ ಎತ್ತಿಸಿದೇ 
(ಎಷ್ಟು ಶಾಸ್ತ್ರೋಕ್ತವಾಗಿ ಮಾಡಿಸಿದ್ದಾನೆ )
ನಿಮ್ಮ ಮಗುವು ನಗುತಿರುವ ತಪ್ಪು ಹೆಜ್ಜೆ ಇಡುತಿರುವಾ
ಗಣೇಶನೆಂಬ ಹೆಸರಿಂದ ಭೂಮಿಗೆ ಬಂದ ಗೌರಿಯ ಕಂದ 
ನಿಮ್ಮ ಮಗುವು ನಗುತಿರುವ ತಪ್ಪು ಹೆಜ್ಜೆ ಇಡುತಿರುವಾ  
ಸ್ಲೇಟನು ಹಿಡಿದು ಬಳಪವ ಮುರಿದು ಗೀಚುತಾ ಗುನುಗುನು ಅಂತಾನೇ 
ಚಂದಮಾಮನನು ಬರೀತಾನೇ ತಿದ್ದಿ ತೀಡಿ ಕೊಡುತಾನೇ 
ಎ  ಬಿ ಸಿ ಡಿ ಕಲಿಸಲು ಹೋದರೇ ಅಳುತಾನೇ 
(ಅಯ್ಯೋ ಹಾಗಂತ ಆ ಮಗುನ ಹೊಡೆದುಬಿಡಬೇಡಪ್ಪಾ )
ಅ ಆ ಇ ಈ ಅಂದರೇ ಸಾಕು ನಗುತಾನೇ 
(ಭೇಷ್ ! ನನ್ನ ತರನೇ ಕನ್ನಡ ಮೀಡಿಯಂ )
ಕನ್ನಡ ಪ್ರೇಮಿ ಈ ತುಂಟ ಕನ್ನಡ ಮಗ್ಗಿ ಕಂಠಪಾಠ 
ಕೊಟ್ಟರೇ ಕೈಗೇ ಕನ್ನಡ ಬಾವುಟ ಹಾಡಿ ಕುಣಿವ ಕನ್ನಡ ಭಂಟ 
(ಕನ್ನಡ ಚಳುವಳಿಗಾರನೇ ಆಗೋದು )
ನಿಮ್ಮ ಮಗುವು ನಗುತಿರುವ ಎತ್ತಿಕೊಂಡರೇ ಮುತ್ತುಕೊಡುವಾ
ಗಣೇಶನೆಂಬ ಹೆಸರಿಂದ ಭೂಮಿಗೆ ಬಂದ ಗೌರಿಯ ಕಂದ 
ನಿಮ್ಮ ಮಗುವು ನಗುತಿರುವ ಎತ್ತಿಕೊಂಡರೇ ಮುತ್ತುಕೊಡುವಾ 
--------------------------------------------------------------------------------------------------------------------------
ಗೌರಿ ಗಣೇಶ (೧೯೯೧) - ಡ್ಯಾಡಿ ಡ್ಯಾಡಿ ಡ್ಯಾಡಿ
ಸಂಗೀತ : ರಾಜನ್ ನಾಗೇಂದ್ರ, ಸಾಹಿತ್ಯ : ವಿ.ಮನೋಹರ ಗಾಯನ : ಕುಸುಮಾ
ಡ್ಯಾಡಿ ಡ್ಯಾಡಿ ಡ್ಯಾಡಿ ನಾನು ನೀನು ಜೋಡಿ
ನನ್ನ ಮುದ್ದು ಡ್ಯಾಡಿ ಐ ಲವ್ ಯು
ಡ್ಯಾಡಿ ಡ್ಯಾಡಿ ಡ್ಯಾಡಿ ನಾನು ನೀನು ಜೋಡಿ
ನನ್ನ ಮುದ್ದು ಡ್ಯಾಡಿ ಐ ಲವ್ ಯು ನನ್ನ ಮುದ್ದು ಡ್ಯಾಡಿ ಐ ಲೈಕ್ ಯು
ಅಜ್ಜ ನಿನ್ನ ಬೆನ್ನ ಮೇಲೆ ಆನೆ ಅಂಬಾರಿ ಮೈಸೂರು ರಾಜ ನಾನೇ ನೀ ನನ್ನ ಸವಾರಿ 
ಅಜ್ಜ ನಿನ್ನ ಬೆನ್ನ ಮೇಲೆ ಆನೆ ಅಂಬಾರಿ ಮೈಸೂರು ರಾಜ ನಾನೇ ನೀ ನನ್ನ ಸವಾರಿ 
ದಸರ ನಡೆಸೋಣ ದರ್ಬಾರು ಮಾಡೋಣ ಜಂಬೂ ಸವಾರಿ ಮೆರವಣಿಗೆ ಹೋಗೋಣ 
ಚುಕುಬುಕು ಚುಕುಬುಕು ರೈಲು ಬಂತು ಹತ್ತಿಕೊಳ್ಳೋಣ 
ಬೊಂಬಾಯಿ ನ್ಯೂಡೆಲ್ಲಿ ನೋಡಿ ಬರೋಣ 
ಸ್ಟುಡಿಯೋಗೆ ಹೋಗೋಣ ಫೋಟೋ ತಗಿಸೋಣ 
ಪಾರ್ಕಿಗೆ ಹೋಗೋಣ ಜೂಜಾಟ ಆಡೋಣ 
ತೋಟದಲಿ ಆಡುತಲಿ ಕಾಲ ಕಳೆಯೋಣ 
ಅಜ್ಜಿ ಅಜ್ಜಿ ಅಜ್ಜಿ ಬಾಳೆಕಾಯಿ ಬಜ್ಜಿ ಕೆನ್ನೆಗೆ ಕೆನ್ನೆ ಉಜ್ಜಿ ಐ ಲವ್ ಯೂ 
ತಾತ ತಾತ ತಾತ ಅಯ್ಯೋ ತಿಂಡಿ ಪೋತ ತಿನ್ನು ಚೌಚೌ ಭಾತ್ ಐ ಲವ್ ಯೂ
ನನ್ನ ಮುದ್ದು ತಾತ ಐ ಲೈಕ್ ಯೂ 
ಮೈ ಡ್ಯಾಡಿ ಬಾ ನಿಂತುಕೋ ಕಣ್ಣನು ನೀ ಕಟ್ಟಿಕೊ
ನಾನು ಎಲ್ಲಿ ಎಂದು ಈಗ ಪತ್ತೆ ಮಾಡು 
(ಡ್ಯಾಡಿ ಅಲ್ಲಲ್ಲ ಈ ಕಡೆ ಬನ್ನಿ ಈ ಕಡೆ )
ಜ್ಯಾಲಿಗೆ ಟೈಮಪಾಸೀಗೆ ಐಸ್ ಪೈಸ್ ನಾವು ಆಡುವಾ 
ಒಂದು ಎರಡು ಮೂರೂ ಎಣಿಸು ನೀನು ನೂರು
ಅವಿತುಕೊಳ್ಳುವೇ ನಾನು ಲೆಕ್ಕ ಮುಗಿದು ನೀನು ನನ್ನ ಹುಡುಕು ಡ್ಯಾಡಿ ಜ್ಯುಟ್...  
ಡ್ಯಾಡಿ ಡ್ಯಾಡಿ ಡ್ಯಾಡಿ ನಾನು ನೀನು ಜೋಡಿ
ನನ್ನ ಮುದ್ದು ಡ್ಯಾಡಿ ಐ ಲವ್ ಯು
ಡ್ಯಾಡಿ ಡ್ಯಾಡಿ ಡ್ಯಾಡಿ ನಾನು ನೀನು ಜೋಡಿ ನನ್ನ ಮುದ್ದು ಡ್ಯಾಡಿ ಐ ಲೈಕ್ ಯು
ನನ್ನ ಮುದ್ದು ಡ್ಯಾಡಿ ಐ ಲೈಕ್ ಯು
--------------------------------------------------------------------------------------------------------------------------
No comments:
Powered by Blogger.

ಚಿನ್ನದ ಗೊಂಬೆ (1964)

ಸೇವಂತಿಗೆ ಚೆಂಡಿನಂತೆ

ಚಲನ ಚಿತ್ರ: ಚಿನ್ನದ ಗೊಂಬೆ (1964)
ನಿರ್ದೇಶನ: 
ಸಂಗೀತ : ಟಿ.ಜಿ.ಲಿಂಗಪ್ಪ 
ಸಾಹಿತ್ಯ: ವಿಜಯನಾರಸಿಂಹ 
ಗಾಯನ : ಸೂಲಾಮಂಗಲಂ ರಾಜಲಕ್ಷ್ಮೀ
ನಟನೆ: 

ಸೇವಂತಿಗೆ ಚೆಂಡಿನಂತ ಮುದ್ದು ಕೋಳಿ
ತಾಯಿ ಮಡಿಲಿನಲ್ಲಿ  ಬೀಡು  ಬಿಟ್ಟ ಮುದ್ದು ಕೋಳಿ ...
ಸೇವಂತಿಗೆ ಚೆಂಡಿನಂತ ಮುದ್ದು ಕೋಳಿ
ತಾಯಿ ಮಡಿಲಿನಲ್ಲಿ  ಬೀಡು  ಬಿಟ್ಟ ಮುದ್ದು ಕೋಳಿ ... 
ಅಮ್ಮನಿತ್ತದೇ ಅಮೃತ ಎನ್ನುವ ಕೋಳಿ... 
ಅಮ್ಮನಿತ್ತದೇ ಅಮೃತ ಎನ್ನುವ ಕೋಳಿ...  
ಒಳ್ಳೆ ನಲ್ಮೆ ಇಂದ ಬೆಳೆದು ಬಂದ ಮುದ್ದು ಕೋಳಿ  ... 
ಸೇವಂತಿಗೆ ಚೆಂಡಿನಂತ ಮುದ್ದು ಕೋಳಿ
ತಾಯಿ ಮಡಿಲಿನಲ್ಲಿ  ಬೀಡು ಬಿಟ್ಟ ಮುದ್ದು ಕೋಳಿ 
ತಾಯಿ ತೊರೆದು ಘಳಿಗೆ ಕೂಡಾ ಆಗಲಲಾರದು 
ತನ್ನ ಸೋದರರ  ಮರೆತು ಬಿಟ್ಟು ಮೆರೆಯಲಾರದು ..  
ತಾಯಿ ತೊರೆದು ಘಳಿಗೆ ಕೂಡಾ ಆಗಲಲಾರದು 
ತನ್ನ ಸೋದರರ  ಮರೆತು ಬಿಟ್ಟು ಮೆರೆಯಲಾರದು ..  
ಜಾಣ ಮರಿ ಮುದ್ದು ಕೋಳಿ ಮಾತನಾಡದು...  
ಜಾಣ ಮರಿ ಮುದ್ದು ಕೋಳಿ ಮಾತನಾಡದು...  
ತನ್ನ ಸಾಕಿದವರ ಬಿಟ್ಟು ದೂರ ಓಡಿ ಹೋಗದು ... 
ಸೇವಂತಿಗೆ ಚೆಂಡಿನಂತ ಮುದ್ದು ಕೋಳಿ
ತಾಯಿ ಮಡಿಲಿನಲ್ಲಿ  ಬೀಡು ಬಿಟ್ಟ ಮುದ್ದು ಕೋಳಿ ...
ಪ್ರೇಮವಿರುವ ಮನೆಯ ಅದುವೇ ನಿತ್ಯ ಸುಂದರ 
ಆ ಪ್ರೇಮಭರಿತ ಹೃದಯವದು ದೇವಮಂದಿರ ...  
ಪ್ರೇಮವಿರುವ ಮನೆಯ ಅದುವೇ ನಿತ್ಯ ಸುಂದರ 
ಆ ಪ್ರೇಮಭರಿತ ಹೃದಯವದು ದೇವಮಂದಿರ ...  
ದೇವನವನೆ ಪ್ರೇಮರೂಪಾ ದಯಾಸಾಗರ ...  
ದೇವನವನೆ ಪ್ರೇಮರೂಪಾ ದಯಾಸಾಗರ ...  
ಆ ದೈವರಕ್ಷೆ ಕಾವುದೆಲ್ಲಾ ಪ್ರೇಮ ದೀವರ...  
ಸೇವಂತಿಗೆ ಚೆಂಡಿನಂತ ಮುದ್ದು ಕೋಳಿ
ತಾಯಿ ಮಡಿಲಿನಲ್ಲಿ  ಬೀಡು ಬಿಟ್ಟ ಮುದ್ದು ಕೋಳಿ ...
ಸೇವಂತಿಗೆ ಚೆಂಡಿನಂತ ಮುದ್ದು ಕೋಳಿ
ತಾಯಿ ಮಡಿಲಿನಲ್ಲಿ  ಬೀಡು ಬಿಟ್ಟ ಮುದ್ದು ಕೋಳಿ ... 
----------------------------------------------------------------------------------------------------------------------

ಸಂಗೀತ : ಟಿ.ಜಿ.ಲಿಂಗಪ್ಪ 
ಸಾಹಿತ್ಯ:ಆರ್.ಏನ್.ಜಯಗೋಪಾಲ್  
ಗಾಯನ : ಎಸ್.ಜಾನಕೀ 

ಓಓಓ... ಓಓಓ...
ನೋಡಲ್ಲಿ ಮೆರವಣಿಗೆ ನೂತನ ದಂಪತಿಗಳಿಗೆ
ಕಣ್ಣು ಕಣ್ಣು ಒಂದಾಗಿವೇ ಕಾರಣವಾ ನೀ ಬಲ್ಲೆಯಾ
ನೋಡಲ್ಲಿ ಮೆರವಣಿಗೆ ನೂತನ ದಂಪತಿಗಳಿಗೆ
ಕಣ್ಣು ಕಣ್ಣು ಒಂದಾಗಿವೇ ಕಾರಣವಾ ನೀ ಬಲ್ಲೆಯಾ
ಕುಳಿತಿಹಳು ನಾಚುತೆ  ಹೆಣ್ಣು ಕೆನ್ನೆಗಳು ಕೆಂಪನೆ ಹಣ್ಣು
ಕುಳಿತಿಹಳು ನಾಚುತೆ  ಹೆಣ್ಣು ಕೆನ್ನೆಗಳು ಕೆಂಪನೆ ಹಣ್ಣು
ಕುಡಿ ನೋಟ ಬೀರುವ ಕಣ್ಣು ಕಥೆಯೊಂದ ಹೇಳಿದೆ
ಕಾದಿಹಳು ಸುಮಬಾಲೆ ಕಟ್ಟಿಹಳು ಆಸೆಯ ಮಾಲೆ
ಕಾದಿಹಳು ಸುಮಬಾಲೆ ಕಟ್ಟಿಹಳು ಆಸೆಯ ಮಾಲೆ
ಚೆನ್ನಾ ನಿನ್ನಾಸೆ ಏನೋ ಹೇಳಯ್ಯಾ
ನೋಡಲ್ಲಿ ಮೆರವಣಿಗೆ ನೂತನ ದಂಪತಿಗಳಿಗೆ
ಕಣ್ಣು ಕಣ್ಣು ಒಂದಾಗಿವೇ ಕಾರಣವಾ ನೀ ಬಲ್ಲೆಯಾ
ಹನುಮಣ್ಣನ ಪೂಜೆಯೋ  ಬೇಕು ಏಕಾಂಗಿ ಬಾಳಿದು ಸಾಕೋ
ಹನುಮಣ್ಣನ ಪೂಜೆಯೋ  ಬೇಕು ಏಕಾಂಗಿ ಬಾಳಿದು ಸಾಕೋ 
ಆಸೆಯ ತಾರಾಮರ ಕಂಡು ಜೊತೆಯಾಗೇ ಜೋಕೆ 
ಆಸೆಗೆ  ಎಲ್ಲೆಯೂ ಇಲ್ಲ ಪ್ರೇಮದಲಿ ಪಾಪವಿಲ್ಲಾ 
ಆಸೆಗೆ  ಎಲ್ಲೆಯೂ ಇಲ್ಲ ಪ್ರೇಮದಲಿ ಪಾಪವಿಲ್ಲಾ 
ಏಕೋ ಈ ಮೌನ ನೀನೇ ಹೇಳಯ್ಯಾ 
ನೋಡಲ್ಲಿ ಮೆರವಣಿಗೆ ನೂತನ ದಂಪತಿಗಳಿಗೆ
ಕಣ್ಣು ಕಣ್ಣು ಒಂದಾಗಿವೇ ಕಾರಣವಾ ನೀ ಬಲ್ಲೆಯಾ
----------------------------------------------------------------------------------------------------------------------
ಚಿನ್ನದ ಗೊಂಬೆ (೧೯೬೪)
ಸಂಗೀತ : ಟಿ.ಜಿ.ಲಿಂಗಪ್ಪ ಸಾಹಿತ್ಯ: ವಿಜಯನಾರಸಿಂಹ ಗಾಯನ : ಪಿ.ಬಿ.ಎಸ್,  ಎಸ್.ಜಾನಕೀ 
ಗಂಡು : ಓಹೋಹೋ ಹೋ  ಓಹೋಹೋ ಹೋ  ಓಹೋಹೋ ಹೋ  ಹೊಯ್
ಹೆಣ್ಣು :  ಓಹೋಹೋ ಹೋ  ಓಹೋಹೋ ಹೋ  ಓಹೋಹೋ ಹೋ 
ಗಂಡು : ಹೂಂಹೂಂಹೂಂ ಹೂಂಹೂಂಹೂಂ ಹೂಂ    
ಹೆಣ್ಣು :  ಹೂಂಹೂಂಹೂಂ ಹೂಂಹೂಂಹೂಂ ಹೂಂ    
           ತಾವರೆ ಹೂ ಕೆರೆಯಲಿ ಸಂಜೆವೆಣ್ಣ ಚೆಲುವಲಿ 
           ತಾವರೆ ಹೂ ಕೆರೆಯಲಿ ಸಂಜೆವೆಣ್ಣ ಚೆಲುವಲಿ 
           ಮೀಯಲೆಂದು ನಾ ಬಂದೆ ಬಂದನಾರೋ ನನ್ನ ಹಿಂದೆ 
           ಮೀಯಲೆಂದು ನಾ ಬಂದೆ ಬಂದನಾರೋ ನನ್ನ ಹಿಂದೆ 
           ಯಾರವರಾಯ ಆ.. ಚೆನ್ನಿಗರಾಯ 
           ಯಾರವರಾಯ ಆ.. ಚೆನ್ನಿಗರಾಯ 
ಗಂಡು : ಮಲ್ಲಿಗೆಯ ಮೊಗದಲಿ ಮುಖ ಮಲ್ಲಿನ ಆ ತುಟಿಯಲಿ  
           ಮಲ್ಲಿಗೆಯ ಮೊಗದಲಿ ಮುಖ ಮಲ್ಲಿನ ಆ ತುಟಿಯಲಿ  
           ಕೆಂಪ ಬಣ್ಣ ತಂದವನು ಕೊಡುಗೆಯೊಂದ  ಇತ್ತವನು 
           ಕೆಂಪ ಬಣ್ಣ ತಂದವನು ಕೊಡುಗೆಯೊಂದ ಇತ್ತವನು 
           ಆ.. ಚೆಲುವಯ್ಯ ಅವ್ ಪಿಡಿವನಿ  ಕೈಯ್ 
           ಆ.. ಚೆಲುವಯ್ಯ ಅವ್ ಪಿಡಿವನಿ  ಕೈಯ್ 
ಹೆಣ್ಣು : ಮಂದಹಾಸ ಬೀರುವಾ ಬಂದ ನಿದ್ದೆ ಕೆಡಿಸುವಾ
ಗಂಡು : ಓಹೋಹೋ ಓಹೋಹೋ ಓಹೋಹೋ
ಹೆಣ್ಣು : ಮಂದಹಾಸ ಬೀರುವಾ ಬಂದ ನಿದ್ದೆ ಕೆಡಿಸುವಾ
          ಒಂಟಿಯಾದ ಎನಗೆ ತರುವ ಕಣ್ಣೀರ...  
          ಅವ್ ತರುಣಿ ಮನವ ಕಲಕಿ ಬಿಡುವ ಕಣ್ಣಾರ  (ಓ.. ಓಹೋ )        
          ಯಾರವರಾಯ ಆ.. ಚೆನ್ನಿಗರಾಯ 
          ಯಾರವರಾಯ ಆ.. ಚೆನ್ನಿಗರಾಯ 
ಗಂಡು : ಸಮಯ ನೋಡಿ ಬಂದನೇ ಸರಸಕಾಗಿ ಕರೆವನೇ 
ಹೆಣ್ಣು : ಹೂಂ ಹೂಂ ಹೂಂ ಹೂಂ ಹೂಂ ಹೂಂ ಹೂಂ ಹೂಂ           
ಗಂಡು : ಸಮಯ ನೋಡಿ ಬಂದನೇ ಸರಸಕಾಗಿ ಕರೆವನೇ 
           ಅಂಗಲಾಚಿ ನಾಚಿಕೊಂಡು ನಿಂತಿಹನೇ... 
           ನಿನ್ನ ಕೈಯ ಬಳೆ ಝಣದಲ್ಲಿ ಇರುತಾನೇ  (ಹ್ಹಾಂ ಆ..)
           ಆ.. ಚೆಲುವಯ್ಯ ಅವ್ ಪಿಡಿವನಿ  ಕೈಯ್ 
           ಆ.. ಚೆಲುವಯ್ಯ ಅವ್ ಪಿಡಿವನಿ  ಕೈಯ್ 
  
ಇಬ್ಬರು : ಮೇಳ ತಾಳ ವಾದ್ಯಗಳ ವೇದ ಮಂತ್ರ ಘೋಷದಲಿ ...  
            ಮೇಳ ತಾಳ ವಾದ್ಯಗಳ ವೇದ ಮಂತ್ರ ಘೋಷದಲಿ ...  
             ಹಾರ ಹಾಸಿ ದಂಪತಿ ನಾವಾಗೋಣಾ.. 
             ಆ... ಗುಂಗಿನಲ್ಲಿ ಕಾಲ ಚಕ್ರ ತಳ್ಳೋಣ   
            ನಾವು ಹಾರಾಡುವಾ ಎಂದೂ ಒಂದಾಗುವಾ 
            ಹಾರಾಡುವಾ ಎಂದೂ ಒಂದಾಗುವಾ 
           ತಾನಿ ತನ್ನಿ ತಂದಾನಿ  ತಾನಿ ತನ್ನಿ ತಂದಾನಿ
           ತಾನಿ ತನ್ನಿ ತಂದಾನಿ  ತಾನಿ ತನ್ನಿ ತಂದಾನಿ
           ತಾನಿ ತನ್ನಿ ತಂದಾನಿ  ತಾನಿ ತನ್ನಿ ತಂದಾನಿ
----------------------------------------------------------------------------------------------------------------------
ಚಿನ್ನದ ಗೊಂಬೆ (೧೯೬೪)
ಸಂಗೀತ : ಟಿ.ಜಿ.ಲಿಂಗಪ್ಪ ಸಾಹಿತ್ಯ: ವಿಜಯನಾರಸಿಂಹ ಗಾಯನ : ಎಸ್.ಜಾನಕೀ 
ಮಣ್ಣಲಿ ಕಲೆಯಾ ರೂಪಿಸುವೆ
ಏನ್ ಒಲವಿಗೆ ಕಳಶವ ನಾ ನೀಡುವೆ
ಮಣ್ಣಲಿ ಕಲೆಯಾ ರೂಪಿಸುವೆ
ಏನ್ ಒಲವಿಗೆ ಕಳಶವ ನಾ ನೀಡುವೆ
ತಿಂಗಳ ಬೆಳಕನು ನಾಚಿಸುವ
ತಿಂಗಳ ಬೆಳಕನು ನಾಚಿಸುವ ಕಂಗಳ ಕಾಂತಿಯ ಇದಕಿವೆ
ಮಣ್ಣಲಿ ಕಲೆಯಾ ರೂಪಿಸುವೆ....
ಚಂದದ ಚಂದಿರ ವದನವಿರೇ
ಹೊಂದಾವರೆ ಹೋಲುವ ಕಂಗಳಿರೆ 
ಚಂದದ ಚಂದಿರ ವದನವಿರೇ
ಹೊಂದಾವರೆ ಹೋಲುವ ಕಂಗಳಿರೆ 
ನವಿಲಿನ ಗರಿಗಳ ಎಳೆಯಿಂದ
ನವಿಲಿನ ಗರಿಗಳ ಎಳೆಯಿಂದ ಕಣ್ ಎವೆಯನು ನಾ ಕೂಡಿಸುವೆ 
ಕಣ್ ಎವೆಯನು ನಾ ಕೂಡಿಸುವೆ
ಮಣ್ಣಲಿ ಕಲೆಯಾ ರೂಪಿಸುವೆ...
ಗೋಪುರದಲ್ಲಿದೆ ಗುಡಿ ಘಂಟೆ
ಕಿವಿ ಕೇಳಲು ಕಾದಿದೆ ಗುಡಿಸಲಲಿ ಆಆಆ.....
ಗೋಪುರದಲ್ಲಿದೆ ಗುಡಿ ಘಂಟೆ
ಕಿವಿ ಕೇಳಲು ಕಾದಿದೆ ಗುಡಿಸಲಲಿ
ಪ್ರೇಮವ ಮೈತ್ರಿಯ ಕರೆಯಲ್ಲೇ
ಪ್ರೇಮವ ಮೈತ್ರಿಯ ಕರೆಯಲ್ಲೇ ನಾ ಮೈಮನ ಮರೆತೇ ಅವನಲ್ಲೇ 
ನಾ ಮೈಮನ ಮರೆತಿಹೆ ಅವನಲ್ಲೇ
ಮಣ್ಣಲಿ ಕಲೆಯಾ ರೂಪಿಸುವೆ ಏನ್ ಒಲವಿಗೆ ಕಳಶವ ನಾ ನೀಡುವೆ
ಮಣ್ಣಲಿ ಕಲೆಯಾ ರೂಪಿಸುವೆ
-------------------------------------------------------------------------------------------------------------------------
ಚಿನ್ನದ ಗೊಂಬೆ (೧೯೬೪) -ಗೂಡಿನಲ್ಲಿ ಒಂದು ಬಾನಾಡಿ
ಸಂಗೀತ : ಟಿ.ಜಿ.ಲಿಂಗಪ್ಪ ಸಾಹಿತ್ಯ: ಆರ್.ಏನ್.ಜಯಗೋಪಾಲ, ಗಾಯನ :ಪಾಣಿಗ್ರಹಿ 
ಗೂಡಿನಲಿ ಒಂದು ಬಾನಾಡಿ ಅದು ಹಾಡುತಲಿ ಇರೇ ಮರೆದಾಡಿ
ಗೂಡಿನಲಿ ಒಂದು ಬಾನಾಡಿ ಅದು ಹಾಡುತಲಿ ಇರೇ ಮರೆದಾಡಿ
ತನ್ನಯ ಗೂಡಿನಲಿ ಮರಿಗಳ ಜೊತೆಗೂಡಿ ಬಾಳಿತು ಹಾಯಾಗಿ ಹಾರಾಡಿ
ಗೂಡಿನಲಿ ಒಂದು ಬಾನಾಡಿ ಅದು ಹಾಡುತಲಿ ಇರೇ ಮರೆದಾಡಿ
ಹಾಲನು ಹೋಲುವ ಕುಟುಂಬದಲಿ ಬಂದು ನೆಲೆಸಿತಮ್ಮಾ ಒಂದು ಕುಲಗೇಡಿ
ಹಾಲನು ಹೋಲುವ ಕುಟುಂಬದಲಿ ಬಂದು ನೆಲೆಸಿತಮ್ಮಾ ಒಂದು ಕುಲಗೇಡಿ
ಆ ಕುಲಗೇಡಿಯ ಸಂಚಿನಲಿ.. ಇಂದು ನೋಂದಿತಮ್ಮಾ ಸಣ್ಣ ಬಾನಾಡಿ
ಗೂಡಿನಲಿ ಒಂದು ಬಾನಾಡಿ ಅದು ಹಾಡುತಲಿ ಇರೇ ಮರೆದಾಡಿ
ಕಣ್ಣೀರ ಕರೆದು ತೊಳಲಾಡಿ ಗೂಡ ತೋರೆಯತಮ್ಮಾ ತಂಗಿ ಒಡಗೂಡಿ 
ಅಣ್ಣನ ಹಿಂದೆ ಬಾಡಿದ ಸುಮದಂತೆ ನಡೆಯಿತಮ್ಮಾ ಹೆಣ್ಣು ಬಾನಾಡಿ 
ನಡೆಯಿತಮ್ಮಾ ಹೆಣ್ಣು ಬಾನಾಡಿ
ಗೂಡಿನಲಿ ಒಂದು ಬಾನಾಡಿ ಅದು ಹಾಡುತಲಿ ಇರೇ ಮರೆದಾಡಿ
ಗಂಟು ತಾನಿರಲು ಬರುವುದು ನಂಟು ನೆಂಟರು ಬಂದರೆ ಭೇದವು ಉಂಟು 
ಗಂಟು ತಾನಿರಲು ಬರುವುದು ನಂಟು ನೆಂಟರು ಬಂದರೆ ಭೇದವು ಉಂಟು 
ಬೇಧಕು ಮನಸಿನ ಖೇದಕು ಗಂಟು ಓರೆನೋಡೇ ಪ್ರೇಮ ತಾನುಂಟು 
ಗೂಡಿನಲಿ ಒಂದು ಬಾನಾಡಿ ಅದು ಹಾಡುತಲಿ ಇರೇ ಮರೆದಾಡಿ
ಗೂಡಿನಲಿ.....
-------------------------------------------------------------------------------------------------------------------------
ಚಿನ್ನದ ಗೊಂಬೆ (೧೯೬೪)
ಸಂಗೀತ : ಟಿ.ಜಿ.ಲಿಂಗಪ್ಪ ಸಾಹಿತ್ಯ:ಆರ್.ಏನ್.ಜಯಗೋಪಾಲ್  ಗಾಯನ : ಪಿ.ಬಿ.ಎಸ್.
ಓಹೋಹೋ.. ಓಹೋಹೋ..ಓಹೋಹೋಹೋಹೋ..  ಹೊಯ್ ಬುರ್ರಾಆ
ಹೊನ್ನಾಸೆ ಉಳುವಗೇ ದಯೆಯಿಲ್ಲಾ ಕಲ್ಲು ಮನಸೆಲ್ಲಾ
ಎಂದು ಹೆಣ್ಣಾಸೆ ಉಳ್ಳವಂಗೆ ಕಂಗಳಿಲ್ಲಾ ಮೋಹವೊಂದೇ ಬಲ್ಲಾ
ಹೊನ್ನಾಸೆ ಉಳುವಗೇ ದಯೆಯಿಲ್ಲಾ ಕಲ್ಲು ಮನಸೆಲ್ಲಾ
ಎಂದು ಹೆಣ್ಣಾಸೆ ಉಳ್ಳವಂಗೆ ಕಂಗಳಿಲ್ಲಾ ಮೋಹವೊಂದೇ ಬಲ್ಲಾ
ಬಕತಲೇ ಭಾವನಿಗೇ ಹೂವೇತಕೇ... ಒಹೋಹೋ ... 
ಬಕತಲೇ ಭಾವನಿಗೇ ಹೂವೇತಕೇ ಮಲ್ಲೇ ಹೂವೇತಕೆ 
ಚ್ಯುತೆಯೊಳ ಚಿಂತೆಯಾಕೆ ಹುಲಿಗೇತಕೆ ಕೊಲ್ಲು ಹುಲಿಗೇತಕೆ 
ಕೋಗಿಲೆಗೆ ಗಿಡುಗ ಎಣೆಯಾಗದೂ 
ಕೋಗಿಲೆಗೆ ಗಿಡುಗ ಎಣೆಯಾಗದೂ ಪಕ್ಕ ಜೊತೆಯಾಗದೂ 
ನೀಚ ಭಾವನೆ ಮನದಲಿ ಬರಲಾಗದೂ ಅದು ತರವಾಗದು 
ಹೊನ್ನಾಸೆ ಉಳುವಗೇ ದಯೆಯಿಲ್ಲಾ ಕಲ್ಲು ಮನಸೆಲ್ಲಾ
ಎಂದು ಹೆಣ್ಣಾಸೆ ಉಳ್ಳವಂಗೆ ಕಂಗಳಿಲ್ಲಾ ಮೋಹವೊಂದೇ ಬಲ್ಲಾ
ಬಾನಿಗೆ ಚಂದಿರವೇ  ಸೊಬಗಲ್ಲವೇ... ಓಹೋಹೋ..
ಬಾನಿಗೆ ಚಂದಿರವೇ  ಸೊಬಗಲ್ಲವೇ. ಅವ್ ದೊರೆಯಲ್ಲವೇ
ಮಾನವೇ ಸುಂದರಿಗೆ ಮೆರುಗಲ್ಲವೇ ಅದು ಚೆಲುವಲ್ಲವೇ 
ರೆಕ್ಕೆ ಬಲಿತ ಹಕ್ಕಿ ಹಾರಾಡದೇ...  
ರೆಕ್ಕೆ ಬಲಿತ ಹಕ್ಕಿ ಹಾರಾಡದೇ ಹಾಡಿ ನಲಿದಾಡದೇ
ಅದ ಬಂಧಿಸಲು ಪಂಜರದೇ  ತಾ ನೋಯದೇ ನೊಂದು ತಾ ಸಾಯದೇ
ಹೊನ್ನಾಸೆ ಉಳುವಗೇ ದಯೆಯಿಲ್ಲಾ ಕಲ್ಲು ಮನಸೆಲ್ಲಾ
ಎಂದು ಹೆಣ್ಣಾಸೆ ಉಳ್ಳವಂಗೆ ಕಂಗಳಿಲ್ಲಾ ಮೋಹವೊಂದೇ ಬಲ್ಲಾ
ಓಹೋಹೋ ಓಹೋಹೋ ಓಹೋಹೋ ಹೋ .... 
------------------------------------------------------------------------------------------------------------------------
No comments:
Powered by Blogger.