ವಿಶ್ವ ವಿನೂತನ
ವಿಶ್ವ ವಿನೂತನ ವಿದ್ಯಾ ಚೇತನಸರ್ವ ಹೃದಯ ಸಂಸ್ಕಾರಿ ಜಯಭಾರತಿ
ಕರುನಾಡ ಸರಸ್ವತಿ ಗುಡಿಗೋಪುರ ಸುರಶಿಲ್ಪ ಕಲಾಕೃತಿ
ಕೃಷ್ಣೆ ತುಂಗೆ ಕಾವೇರಿ ಪವಿತ್ರಿತ ಮನೋಹಾರಿ
ಗಂಗ ಕದಂಬ ರಾಷ್ಟ್ರಕೂಟ ಚಾಲುಕ್ಯ ಹೊಯ್ಸಳ ಬಲ್ಲಾಳ
ಹಕ್ಕಬುಕ್ಕ ಪುಲಿಕೇಶಿ ವಿಕ್ರಮರ ಚೆನ್ನಮ್ಮಾಜಿಯ ವೀರಶ್ರೀ
ಅರಿವೇ ಗುರುನುಡಿ ಜ್ಯೋತಿರ್ಲಿಂಗ ದಯವೇ ಧರ್ಮದ ಮೂಲತರಂಗ
ವಿಶ್ವಭಾರತಿಗೆ ಕನ್ನಡದಾರತಿ ಮೊಳಗಲಿ ಮಂಗಳ ಜಯಭೇರಿ
ಕವಿ:- ಚೆನ್ನವೀರ ಕಣವಿ
*********************************************************************************
ಮೂಡಲ ಮನೆಯ...
ಮೂಡಲ ಮನೆಯ ಮುತ್ತಿನ ನೀರಿನಎರಕಾವ ಹೊಯ್ದ, ನುಣ್ಣನೆ ಎರಕಾವ ಹೊಯ್ದ ||
ಬಾಗಿಲು ತೆರೆದು ಬೆಳಕು ಹರಿದು ಜಗವೆಲ್ಲಾ ತೊಯ್ದ ,
ದೇವಾನು ಜಗವೆಲ್ಲಾ ತೊಯ್ದ
ಎಲೆಗಳ ಮೇಲೆ ಹೂಗಳ ಒಳಗೆ
ಅಮೃತದ ಬಿಂದು, ಕಂಡವು ಅಮೃತದ ಬಿಂದು
ಯಾರಿರಿಸಿಹರು ಮುಗಿಲಿನ ಮೇಲಿಂದ
ಇಲ್ಲಿಗೆ ಇದ ತಂದು, ಈಗ ಇಲ್ಲಿಗೆ ಇದ ತಂದು
ಗಿಡಗಂಟೆಗಳ ಕೊರಳೊಳಗಿಂದ ಹಕ್ಕಿಗಳ
ಹಾಡು ಹೊರಟಿತು, ಹಕ್ಕಿಗಳ ಹಾಡು
ಗಂಧರ್ವ ಸೀಮೆಯಾಯಿತು ಕಾಡಿನ ನಾಡು
ಕ್ಷಣದೊಳು, ಕಾಡಿನ ನಾಡು
ಕವಿ:- ದ. ರಾ. ಬೇಂದ್ರೆ
*******************************************************************************
ಹುಚ್ಚು ಕೊಡಿ ಮನಸು...
ಹುಚ್ಚು ಕೊಡಿ ಮನಸು ಅದು ಹದಿನಾರರ ವಯಸು ||ಮಾತು ಮಾತಿಗೆಕೋ ನಗು ಮರು ಗಳಿಗೆಯೇ ಮೌನ
ಕನ್ನಡಿ ಮುಂದಷ್ಟು ಹೊತ್ತು ಬರೆಯದಿರುವ ಕವನ
ಸೇರೆಗು ತೀದಿದಷ್ಟು ಸುಕ್ಕು ಹಠ ಮಾಡುವ ಕೂದಲು
ನಿರಿಯೇಕೋ ಸರಿಯಾಗದು ಮತ್ತೆ ಒಳಗೆ ಹೋದಳು
ಕೆನ್ನೆ ಕೊಂಚ ಕೆಂಪಾಯಿತೆ ತುಟಿಗೆ ಬಣ್ಣ ಹೆಜ್ಜೆ
ನಗುತ ಅವಳ ಚೇಡಿಸುತಿದೆ ಗಲ್ಲದ ಕರಿ ಮಚ್ಚೆ
ಬರಿ ಹಸಿರು ಬರಿ ಹೂವು ಎದೆಯಲೆಷ್ಟೋ ಹೆಸರು
ಯಾವ ಮಧುವೆ ದಿಬ್ಬಣವೋ ಸುಮ್ಮನೆ ನಿಟ್ಟುಸಿರು
ಕವಿ:- ಹೆಚ್. ಎಸ್. ವೆಂಕಟೇಶಮೂರ್ತಿ
*****************************************************************************
ಕುರುಡು ಕಾಂಚಾಣ...
ಕುರುಡು ಕಾಂಚಣ ಕುಣಿಯುತ್ತಲಿತ್ತುಕಾಲಿಗೆ ಬಿದ್ದವರ ತುಳಿಯುತ್ತಲಿತ್ತು ||
ಬಾಣನ್ತಿಯೆಲುಬ ಸಾ ಬಾನದ ಬಿಳುಪಿನ
ಕಾಣದ ಕಿರುಗೆಜ್ಜೆ ಕಾಲಾಗ ಇತ್ತು
ಸಣ್ಣ ಕಂದಮ್ಮಗಳ ಕಣ್ಣಿನ ಕವಡಿಯ
ತಣ್ಣನ್ನ ಜೋಮಾಲೆ ಕೊರಳೊಳಗಿತ್ತು
ಬಡವರ ಒಡಲಿನ ಬಡಬಾ ನೆಲದಲ್ಲಿ
ಸುಡು ಸುಡು ಪಂಜು ಕೈಯೋಳಗಿತ್ತೋ
ಕಂಬನಿ ಕುಡಿಯುವ ಹುಂಬ ಬಾಯಿಲಿ ಮೈ
ದುಂಬಿಯಂತುಧೋ ಉಧೋ ಎನ್ನುತ್ತಲಿತ್ತೋ
ಕೂಲಿ ಕುಂಬಳಿಯವರ ಪಾಲಿನ ಮೈದೊಗಲ
ಧೂಳಿಯ ಭಂಡಾರ ಹನಿಯೊಳಗಿತ್ತೋ
ಗುಡಿಯೊಳಗೆ ಗಣ ನಾಮ ಹಡಿಯೊಳಗ ತನನ
ಅಂಗಡಿಯೊಳಗೆ ಝಾಣನ ನುಡಿಗೊಡುತಿತ್ತೋ
ಹ್ಯಾಂಗಾರೆ ಕುಣಿಕುಣಿದು ಮಂಗಾಟ ನಡೆದಾಗ
ಅಂಗಾತ ಬಿತ್ತೋ ಹೆಗಲಲ್ಲಿ ಎತ್ತೋ
ಕವಿ:- ದ.ರಾ. ಬೇಂದ್ರೆ
*******************************************************************************
ಯುಗ ಯುಗಾದಿ ಕಳೆದರೂ...
ಯುಗ ಯುಗಾದಿ ಕಳೆದರೂಯುಗಾದಿ ಮರಳಿ ಬರುತಿದೆ
ಹೊಸ ವರುಷಕೆ ಹೊಸ ಹರುಷವ
ಹೊಸೆತು ಹೊಸೆತು ತರುತಿದೆ ||
ಹೊಂಗೆ ಹೂವ ತೊಂಗಳಲಿ
ಭೃಂಗದ ಸಂಗೀತ ಕೇಳಿ
ಮತ್ತೆ ಕೇಳ ಬರುತಿದೆ
ಬೇವಿನ ಕಹಿ ಬಾಳಿನಲ್ಲಿ
ಹೂವಿನ ನಸುಗಂಪು ಸೂಸಿ
ಜೀವ ಕಳೆಯ ತರುತಿದೆ
ವರುಷಕೊಂದು ಹೊಸತು ಜನ್ಮ
ಹರುಷಕೊಂದು ಹೊಸತು ನೆಲೆಯು
ಅಖಿಲ ಜೀವ ಜಾತಕೆ
ಒಂದೇ ಒಂದು ಜನ್ಮದಲ್ಲಿ
ಒಂದೇ ಬಾಲ್ಯ ಒಂದೇ ಹರಯ
ನಮಗದಷ್ಟೇ ಏತಕೋ ?
ನಿದ್ದೆಗೊಮ್ಮೆ ನಿತ್ಯ ಮರಣ ಎದ್ದ
ಸಾಲ ನವೀನ ಜನನ
ನಮಗೆ ಏಕೆ ಬಾರದೋ?
ಎಲೆ ಸನತ್ಕುಮಾರ ದೇವ ಎಲೆ
ಸಾಹಸಿ ಚಿರಂಜೀವ
ನಿನಗೆ ಲೀಲೆ ಸೇರದೋ
ಕವಿ:- ದ.ರಾ. ಬೇಂದ್ರೆ
*******************************************************************************
ಮುಗಿಲ ಮಾರಿಗೆ ರಾಗ...
ಮುಗಿಲ ಮಾರಿಗೆ ರಾಗ ರತಿಯನಂಜ ಏರಿತ್ತ ಆಗ ಸಂಜೆ ಆಗಿತ್ತ ||
ನೆಲದ ಅಂಚಿಗೆ ಮಂಜಿನ ಮುಸುಕು ಹ್ಯಾಂಗೋ ಬಿದ್ದಿತ್ತ
ಗಾಳಿಗೆ ಮೇಲಕ್ಕೆದ್ದಿತ್ತ
ಬಿದಿಗೆ ಚಂದ್ರನ ಚೊಗಚಿ ನಗಿವು ಮೆಲ್ಲಗ ಮೂಡಿತ್ತ
ಮ್ಯಾಲಕ ಬೆಳ್ಳಿನ ಕೂಡಿತ್ತ
ಇರುಳು ಹರಳಿನ ಅರಳು ಮಲ್ಲಿಗೆ ಜಾಲಿಗೆ ಹಂಗಿತ್ತ
ಸುಸ್ಯಾವ ಚಿಕ್ಕಿ ಅತ್ತಿತ್ತ
ಬೊಗಸಿಗಣ್ಣಿನ ಬಯಕೆಯ ಹೆಣ್ಣು ನೀರಿಗೆ ಹೋಗಿತ್ತ
ತಿರುಗಿ ಮನೀಗೆ ಸಾಗಿತ್ತ
ಕಾಲು ಬೇಕ್ಕಿನ್ಹಾಂಗ ಭಾವಿ ಹಾದಿ ಕಾಳಾಗ ಕುಳಿತಿತ್ತ
ಎರಗಿ ಹಿಂದಕ್ಕುಳಿತಿತ್ತ
ಮಳ್ಳ ಗಾಳಿ ಸುಳಿ ಕಳ್ಳ ಕೈಲೆ ಸೆರಗನು ಹಿಡಿದಿತ್ತ
ಮತ ಮತ ಬೆರಗಿಲೆ ಬಿಡತಿತ್ತ
ಒಂದ ಮನದ ಗಿಳಿ ಹಿಂದ ನೆಳ್ಳಿಗೆ ಬೆನ್ನಿಲೆ ಬರಲಿತ್ತ
ತನ್ನ ಮೈಮನ ಮರೆತಿತ್ತ
ಕವಿ:- ದ. ರಾ. ಬೇಂದ್ರೆ
*******************************************************************************
ಬಣ್ಣದ ತಗಡಿನ ತುತ್ತೂರಿ...
ಬಣ್ಣದ ತಗಡಿನ ತುತ್ತೂರಿಕಾಸಿಗೆ ಕೊಂಡನು ಕಸ್ತೂರಿ
ಸ-ರಿ-ಗ-ಮ-ಪ-ಡ-ನಿ-ಸ ಊದಿದನು
ಸ-ನಿ-ದ-ಪ-ಮ-ಗ-ರಿ-ಸ ಊದಿದನು ||
ತನಗೇ ತುತ್ತೂರಿ ಇದೆಯೆಂದ
ಬೇರಾರಿಗೂ ಅದು ಇಲ್ಲೆಂದ
ಕಸ್ತೂರಿ ನಡೆದನು ಬೀದಿಯಲಿ
ಜಂಭದ ಕೋಳಿಯ ರೀತಿಯಲಿ
ತುತ್ತೂರಿ ಊದುತ ಕೊಳದ ಬಳಿ
ನಡೆದನು ಕಸ್ತುರಿ ಸಂಜೆಯಲಿ
ಜಾರಿತು ನೀರಿಗೆ ತುತ್ತೂರಿ
ಗಂಟಲು ಕಟ್ಟಿತು ನೀರೂರಿ
ಸ-ರಿ-ಗ-ಮ ಊದಲು ನೋಡಿದನು
ಗ-ಗ-ಗ-ಗ ಸದ್ದನು ಮಾಡಿದನು
ಬಣ್ಣವು ನೀರಿನ ಪಾಲಾಯ್ತು
ಜಂಭದ ಕೋಳಿಗೆ ಗೋಳಾಯ್ತು
ಕವಿ:- ಜಿ. ಪಿ. ರಾಜರತ್ನಂ
*******************************************************************************
ಎಲ್ಲಾದಾರು ಇರು
ಗಾಯನ: ಡಾ. ರಾಜ್ ಕುಮಾರ್ಸಂಗೀತ: ಸಿ. ಅಶ್ವಥ್
ಎಲ್ಲಾದರು ಇರು ಎಂತಾದರು ಇರು ||೨||
ಎಂದೆಂದಿಗೂ ನೀ ಕನ್ನಡವಾಗಿರು
ಕನ್ನಡವೇ ಸತ್ಯ, ಕನ್ನಡವೇ ನಿತ್ಯ
ಕನ್ನಡ ಗೋವಿನ ಓ ಮುದ್ದಿನ ಕರು ||೨||
ಕನ್ನಡತನ ಒಂದಿದ್ದರೆ, ಅಮ್ಮಗೆ ಕಲ್ಪತರು
ಕನ್ನಡವೇ ಸತ್ಯ, ಕನ್ನಡವೇ ನಿತ್ಯ
ಎಲ್ಲಾದರು ಇರು ಎಂತಾದರು ಇರು
ಎಂದೆಂದಿಗೂ ನೀ ಕನ್ನಡವಾಗಿರು
ನೀ ಮೆಟ್ಟುವ ನೆಲ, ಅದೆ ಕರ್ನಾಟಕ
ನೀನೇರುವ ಮಲೆ ಸಹ್ಯಾದ್ರಿ
ನೀ ಮೆಟ್ಟುವ ನೆಲ, ಅದೆ ಕರ್ನಾಟಕ
ನೀನೇರುವ ಮಲೆ ಸಹ್ಯಾದ್ರಿ
ನೀ ಮುಟ್ಟುವ ಮರ ಶ್ರೀಗಂಧದ ಮರ ||೨||
ನೀ ಕುಡಿಯುವ ನೀರ್ ಕಾವೇರಿ
ಪಂಪನ ಓದುವ ನಿನ್ನಾ ನಾಲಗೆ
ಕನ್ನಡವೇ ಸತ್ಯ
ಕುಮಾರವ್ಯಾಸನ ಆಲಿಪ ಕಿವಿಯದು
ಕನ್ನಡವೇ ನಿತ್ಯ
ಎಲ್ಲಾದರು ಇರು ಎಂತಾದರು ಇರು
ಎಂದೆಂದಿಗೂ ನೀ ಕನ್ನಡವಾಗಿರು
ಹರಿಹರ ರಾಘವರಿಗೆ ಎರಗುವ ಮನ
ಹಾಳಾಗಿಹ ಹಂಪೆಗೆ ಕೊರಗುವ ಮನ
ಹರಿಹರ ರಾಘವರಿಗೆ ಎರಗುವ ಮನ
ಹಾಳಾಗಿಹ ಹಂಪೆಗೆ ಕೊರಗುವ ಮನ
ಬೆಳ್ಗೊಳ ಬೇಲೂರ್ಗಳ ನೆನೆಯುವ ಮನ
ಮಲೆನಾಡಿಗೆ ಹೊಂಪುಳಿ ಹೋಗುವ ಮನ
ಕಾಜಾಣಕೆ ಗಿಳಿ, ಕೋಗಿಲೆ ಇಂಪಿಗೆ
ಮಲ್ಲಿಗೆ ಸಂಪಿಗೆ ಕೇದಗೆ ಸೊಂಪಿಗೆ
ಕಾಜಾಣಕೆ ಗಿಳಿ, ಕೋಗಿಲೆ ಇಂಪಿಗೆ
ಮಲ್ಲಿಗೆ ಸಂಪಿಗೆ ಕೇದಗೆ ಸೊಂಪಿಗೆ
ಮಾವಿನ ಹೊಂಗೆಯ ತಳಿರಿನ ತಂಪಿಗೆ
ರೋಮಾಂಚನಗೊಳುವಾ ತನು ಮನ
ಕನ್ನಡವೇ ಸತ್ಯ, ಕನ್ನಡವೇ ನಿತ್ಯ
ಎಲ್ಲಾದರು ಇರು ಎಂತಾದರು ಇರು
ಎಂದೆಂದಿಗು ನೀ ಕನ್ನಡವಾಗಿರು
ಎಲ್ಲಿದ್ದರೆ ಏನ್ ಎಂತಿದ್ದರೆ ಏನ್
ಎಲ್ಲಿದ್ದರೆ ಏನ್ ಎಂತಿದ್ದರೆ ಏನ್
ಎಂದೆಂದಿಗು ತಾನ್ ಕನ್ನಡವೇ ಸತ್ಯ ಕನ್ನಡವೇ ನಿತ್ಯ
ಅನ್ಯವೆನಲದೆ ಮಿಥ್ಯ
ಕವಿ:- ಕುವೆಂಪು
*******************************************************************************