ಅನುರಾಗ ಅರಳೋ ಸಮಯ
ಸಾಹಿತ್ಯ: ಕವಿರಾಜ್
ಸಂಗೀತ: ವಿ. ಶ್ರೀಧರ್
ಗಾಯಕ: ಕಾರ್ತಿಕ್
ನಿರ್ದೇಶನ: ಮುಸ್ಸಂಜೆ ಮಹೇಶ್
ನಟರು: ಸುದೀಪ್, ರಮ್ಯ, ಅನು ಪ್ರಭಾಕರ್
ಅನುರಾಗ ಅರಳೋ ಸಮಯ
ಮನಸುಗಳು ಮಾತಾಡೋ ಸಮಯ
ಯಾರೋ ಯಾರ ದಾರಿಯನ್ನು ಕಾಯೋ ಸಮಯ
ಮೊಗ್ಗು ಮೆಲ್ಲ ಹಿಗ್ಗಿ ಹೂವು ಆಗೋ ಸಮಯ
ಕದ್ದು ಕೊಂಡರು ಯಾರೋ ನನ್ನ ಹೃದಯ
ಹಿಂದೆ ಎಂದು ಕಂಡೆ ಇಲ್ಲ ಇಂಥ ಖುಷಿಯ .....
ಪ್ರೀತಿನ ಇದು......ಪ್ರೀತಿನ ಇದು........
ನನ್ನಲ್ಲೇ ನಾನೇ ಇಲ್ಲ ಈಗ
ಯಾಕೋ ಯಾಕೋ ಯಾಕೋ....
ಚಲಿಸೋ ಓ ಬೆಳ್ಳಿ ಮೋಡ ಇಳಿದು ಬಾ ನಿನ್ನ ಕೂಡ
ಕುಳಿತು ಮಾತಾಡೊವಾಸೆ ಆಗಿದೆ
ಅವಳ ಅಂದಾನ ಕುರಿತೆ ಮನಸು ಬರೆದಂತ ಗೀತೆ
ಬಳಿಗೆ ನೀ ಬಂದು ಕೇಳಬಾರದೆ

ಜೊತೆಯಲೇ ಇರಲ ಅನುಗಾಲ
ನಡೆ ನುಡಿ ಸರಳ ಮೆಚ್ಚಿಕೊಂಡೆ ಬಹಳ
ನನಗೆ ಅಂತ ಹುಟ್ಟಿ ಬಂದ ತಾರೆ ಇವಳ
ಪ್ರೀತಿನ ಇದು......ಪ್ರೀತಿನ ಇದು........
ನನ್ನಲ್ಲೇ ನಾನೇ ಇಲ್ಲ ಈಗ
ಯಾಕೋ ಯಾಕೋ ಯಾಕೋ....
ನಮ್ಮ ಈ ಪುಟ್ಟ ಗೂಡು ಇಲ್ಲಿ ಪ್ರೀತಿಯ ಹಾಡು
ಗುನುಗೋ ಈ ಸಮಯ ಹೀಗೆ ಇರಲಿ
ಜೊತೆಗೆ ನಡೆವಾಗ ಹೀಗೆ ಬಾಳು ಒಂದಾದ ಹಾಗೆ
ಅನಿಸೋ ಈ ಸಮಯ ಎಂದು ಸಿಗಲಿ
ಮಾತು ಮರೆತು ಹೋಗಿದೆ ಮನಸು ಕಳೆದು ಹೋಗಿದೆ
ಕಂಗಳಂತೆ ನೋಡಲು ಹೃದಯ ಕಲೆಯಬಾರದೆ
ನಿನ್ನ ನಾನು ನೋಡದೆ ಒಂದು ಕ್ಷಣ ಜಾರದೆ
ಸಮಯ ಮೀರಿ ಹೋಗೊ ಮುನ್ನ ಹೇಳು ಆಸೆಯಾ........
******************************************************************************
ನಿನ್ನ ನೋಡಲೆಂತೋ ಮಾತನಾಡಲೆಂತೋ
ಸಾಹಿತ್ಯ: ರಾಮ್ ನಾರಾಯಣ್ಗಾಯಕರು: ಸೋನು ನಿಗಮ್, ಶ್ರೇಯಾ ಘೋಷಾಲ್
ನಿನ್ನ ನೋಡಲೆಂತೋ ಮಾತನಾಡಲೆಂತೋ
ಮನಸ ಕೇಳಲೆಂತೋ ಪ್ರೀತಿ ಹೇಳಲೆಂತೋ
ಆಹಾ ಒಂಥರಾ ಥರಾ
ಹೇಳಲೊಂಥರ ಥರ ಕೇಳಲೊಂಥರ ಥರ
ಹೇಳಲೊಂಥರ ಥರ ಕೇಳಲೊಂಥರ ಥರ.......

ಏನೋ ನನ್ನ ಕಾಡಿದೆ ಏನು ಅರ್ಥವಾಗದೆ
ಹಗಲು ರಾತ್ರಿ ನಿನ್ನದೇ ನೂರು ನೆನಪು ಮೂಡಿದೆ
ನನ್ನಲೇನೋ ಆಗಿದೆ ಹೇಳಲೇನು ಆಗದೆ
ಮನಸು ಮಾಯವೆಂತೋ ಮಧುರ ಭಾವವೆಂತೋ
ಪಯಣ ಎಲ್ಲಿಗೆಂತೋ ನಯನ ಸೇರಲೆಂತೋ
ಮಿಲನವಾಗಲೆಂತೋ ಗಮನ ಎಲ್ಲೋ ಎಂತೋ
ಆಹಾ ಒಂಥರಾ ಥರ
ಹೇಳಲೊಂಥರ ಥರ ಕೇಳಲೊಂಥರ ಥರ
ಹೇಳಲೊಂಥರ ಥರ ಕೇಳಲೊಂಥರ ಥರ
ಮೆಲ್ಲ ಮೆಲ್ಲ ಮೆಲ್ಲುವ ಸನ್ನೆಯಲ್ಲೆ ಕೊಲ್ಲುವ
ಸದ್ದೇ ಇರದ ಉತ್ಸವ ಪ್ರೀತಿಯೊಂದೆ ಅಲ್ಲವ
ಘಲ್ಲು ಘಲ್ಲು ಎನ್ನುವ ಹೃದಯ ಗೆಜ್ಜೆ ನಾದವ
ಪ್ರೀತಿ ತಂದ ರಾಗವ ತಾಳಲೆಂತೋ ಭಾವವ
ಹೃದಯದಲ್ಲಿ ಎಂತೋ ಉದಯವಾಯಿತೆಂತೋ
ಸನಿಹವಾಗಲೆಂತೋ ಕನಸ ಕಾಣಲೆಂತೋ
ಹರುಷ ಏನೋ ಎಂತೋ ಸೊಗಸ ಹೇಳಲೆಂತೋ
ಆಹಾ ಒಂಥರಾ ಥರ
ಹೇಳಲೊಂಥರ ಥರ ಕೇಳಲೊಂಥರ ಥರ
ಹೇಳಲೊಂಥರ ಥರ ಕೇಳಲೊಂಥರ ಥರ
*******************************************************************************
ಆಕಾಶ ಭೂಮಿ ಇಂದು
ಸಾಹಿತ್ಯ: ವಿ. ಶ್ರೀಧರ್ ಗಾಯನ: ಶ್ರೇಯಾ ಘೋಷಾಲ್
ಆಕಾಶ ಭೂಮಿ ಇಂದು ಒಂದಾದ ಹಾಗಿದೆ
ನನ್ನ ಈ ಚೆಲುವನ್ನು ಹೊಳೆವಂತೆ ಮಾಡಿದೆ
ತಂದಾನೋ ತಂದಾನೋ ತನುವೆಲ್ಲ ತಂದಾನೋ
ಚಂದಾನೋ ಚಂದಾನೋ ಜಗವೆಲ್ಲ ಚಂದಾನೋ
ಮನಸೆಲ್ಲ ಸಮಥಿಂಗ್ ಸಮಥಿಂಗ್ ಉಯ್ಯಾಲೆ ತೂಗಿದೆ
ನಾ ಬರುವ ದಾರಿಯಲ್ಲಿ ಹೂ ಬಳುಕುತಾವ ನೋಡಾ
ನಾಚಿ ನಿಂತೆ ನಾನು ಅವು ಹಾಡಿತೊಂದು ಹಾಡ
ಹಾಡಲು ನಾನು ಜೊತೆಜೊತೆಗೆ ಅರಳಿತು ಮನವು ಒಳಗೊಳಗೇ
ನದಿಯಂತೆ ಹರಿಯುವೆನು ಮಂಜಂತೆ ಮುಸುಕುವೆನು
ತಿರುತಿರುಗೋ ಭೂಮಿಯ ನೋಡಲು ಚಂದ್ರಮಕೆ ಹಾರುವೆನು
ಮನದಲ್ಲೇ ಮುಗಿಲನು ಸೇರಿ ಭುವಿಗೆ ಕೈ ಚಾಚುವೆನು......
ಸೌಂದರ್ಯ ರಾಗ ಲಹರಿ ಬಂತೆನ್ನ ಮನಕೆ ಮರಳಿ
ತಲೆದೂಗುವಂತ ನಾದ ತಂಗಾಳಿ ಬೀಸೊ ರವಳಿ
ಅಲೆ ಅಲೆ ಮೇಲೆ ಮೇಲೆ ಬರುತಿರೋ ಹಾಗೆ
ಸುಖ ದುಃಖವೆರಡು ಜೀವನ ಧಾರೆ
ಮುಸ್ಸಂಜೆ ಮಾತಲ್ಲಿ ಈ ಜೀವ ಹಗುರಾಯ್ತು
ಕೋಗಿಲೆಯ ಹಾಡಂತೆ ಆ ಮಾತು ಇಂಪಾಯ್ತು
ಭಾವಗಳ ಸರಿಗಮ ಸೇರಿ ಸೊಗಸಾದ ಹಾಡಾಯ್ತು.....
ಏನಾಗಲಿ ಮುಂದೆ ಸಾಗು
ಸಾಹಿತ್ಯ: ವಿ. ಶ್ರೀಧರ್ಗಾಯನ: ಸೋನು ನಿಗಮ್
ಏನಾಗಲಿ ಮುಂದೆ ಸಾಗು ನೀ

ನನ್ನಾಣೆ ನನ್ನ ಮಾತು ಸುಳ್ಳಲ್ಲ
ಚಲಿಸುವಾ ಕಾಲವು ಕಲಿಸುವ ಪಾಠವ
ಮರೆಯಬೇಡ ನೀ ತುಂಬಿಕೊ ಮನದಲಿ
ಇಂದಿಗೊ ನಾಳೆಗೊ ಒಂದಿನಾ ಬಾಳಲಿ
ಗೆಲ್ಲುವಂತ ಸ್ಪೂರ್ತಿ ದಾರಿ ದೀಪ
ನಿನಗೆ ಆ ಅನುಭವ
ಕರುಣೆಗೆ ಬೆಲೆಯಿದೆ, ಪುಣ್ಯಕೆ ಫಲವಿದೆ
ದಯವ ತೋರುವ ಮಣ್ಣಿನ ಗುಣವಿದೆ
ಸಾವಿನ ಸುಳಿಯಲಿ ಸಿಲುಕಿದ ಜೀವಕೆ
ಜೀವ ನೀಡುವ ಹೃದಯವೇ ದೈವವು
ಹರಸಿದ ಕೈಗಳು ನಮ್ಮನು ಬೆಳೆಸುತ
ವಿಧಿಯ ಬರಹವಾಗಿ ಮೌನದಲ್ಲಿ ನಮ್ಮನು ಕಾಯುತ
ಪ್ರತಿಫಲ ಬಯಸದೆ ತೋರಿದ ಕರುಣೆಯು
ಮೊದಲು ಮನುಜನೆಂಬ ನೆಮ್ಮದಿ ತರುವದು
********************************************************************************
ಮುಸ್ಸಂಜೆ ಮಾತಲಿ
ಸಾಹಿತ್ಯ: ಭಾಸ್ಕರ್ ಗುಬ್ಬಿಗಾಯನ: ಹೇಮಂತ್ ಕುಮಾರ್
ಮುಸ್ಸಂಜೆ ಮಾತಲಿ ಮನಸುಗಳು ಸಾಗಲಿ
ನೊಂದಂತ ಬದುಕಿನಾಸರೆಗೆ
ಹೊಸ ದಾರಿ ತೋರೊ ಈ ರವಿಗೆ...
ನಮನ, ನನ್ನ ನಮನ.....
ನಾ ಹೇಳದ ಮಾತೊಂದು,
ಉಳಿದು ಹೋಗಿದೆ ನನ್ನಲ್ಲಿ
(ಹೆಣ್ಣು:....ಅ ಹ ಅ.....)
ಆ ನಗುವಿನ ದನಿಯನ್ನು,
ಮರೆಯಲಾರೆನು ಬದುಕಲ್ಲಿ
(ಹೆಣ್ಣು:......ಹುಂ.... )
ಒಲವಿನ ಈ ಸಿಂಚನ,
ಹೃದಯಕೆ ಮರುಸ್ಪಂದನ
(ಹೆಣ್ಣು:....ಒ ಒ ಹೊ ಒ ಒ..... )
ಈ ಕವಿತೆ ಸಾಲಳತೆ,
ಹೇಳಲಾಗದು ಪ್ರೀತಿಯ ಅಳತೆ... ಹೇ......
ಮುಸ್ಸಂಜೆ ಮಾತಲಿ ಮನಸುಗಳು ಸಾಗಲಿ...!
*********************************************************************************
No comments:
Post a Comment