ಮಿಂಚಾಗಿ ನೀನು ಬರಲು
ಚಲನಚಿತ್ರ : ಗಾಳಿಪಟ (2008)ಸಾಹಿತ್ಯ: ಜಯಂತ್ ಕಾಯ್ಕಿಣಿ
ಗಾಯಕರು : ಸೋನು ನಿಗಮ್
ಸಂಗೀತ: ವಿ. ಹರಿಕೃಷ್ಣ
ನಿರ್ದೇಶಕರು : ಯೋಗರಾಜ್ ಭಟ್
ನಟಿಸಿದವರು : ಗಣೇಶ್, ಡೈಸಿ ಬೋಪಣ್ಣ, ದಿಗಂತ್, ನೀತು, ರಾಜೇಶ್ ಕೃಷ್ಣನ್, ಭಾವನಾ
ಮಿಂಚಾಗಿ ನೀನು ಬರಲು ನಿಂತಲ್ಲಿಯೇ ಮಳೆಗಾಲ
ಬೆಚ್ಚಗೆ ನೀ ಜೊತೆಗಿರಲು ಕೂತಲ್ಲಿಯೆ ಚಳಿಗಾಲ
ವಿರಹದ ಬೇಗೆ ಸುಡಲು ಎದೆಯಲಿ ಬೇಸಿಗೆ ಕಾಲ
ಇನ್ನೇಲ್ಲಿ ನನಗೆ ಉಳಿಗಾಲ?
ನಾ ನಿನ್ನ ಕನಸಿಗೆ ಚಂದಾದಾರನು
ಚಂದಾ ಬಾಕಿ ನೀಡಲು ಬಂದೆ ಬರುವೆನು
ನಾ ನೇರ ಹೃದಯದ ವರದಿಗಾರನು
ನಿನ್ನ ಕಂಡ ಕ್ಷಣದಲೇ ಮಾತೆ ಮರೆವೆನು
ಕ್ಷಮಿಸು ನೀ ಕಿನ್ನರಿ, ನುಡಿಸಲೇ ನಿನ್ನನು
ಹೇಳಿ ಕೇಳಿ ಮೊದಲೇ ಚೂರು ಪಾಪಿ ನಾನು...
ನಿನ್ನ ಮನದ ಕವಿತೆ ಸಾಲ ಪಡೆವ ನಾನು ಸಾಲಗಾರ
ಕಣ್ಣ ತೊರೆದು ದೋಚಿಕೊಂಡ ನೆನಪುಗಳಿಗೆ ಪಾಲುದಾರ
ನನ್ನದೀ ವೇದನೆ, ನಿನಗೆ ನಾ ನೀಡೆನು
ಹೇಳಿ ಕೇಳಿ ಮೊದಲೇ ಚೂರು ಕಳ್ಳ ನಾನು... :-)
********************************************************************************
ನಧೀಂ ಧೀಂತನ ನಧೀಂ ಧೀಂತನ
ಸಾಹಿತ್ಯ: ಯೋಗರಾಜ್ ಭಟ್ಗಾಯನ: ಕೆ. ಎಸ್. ಚಿತ್ರಾ
ನಧೀಂ ಧೀಂತನ ನಧೀಂ ಧೀಂತನ
ಮಧುರ ಪ್ರೇಮದ ಮೊದಲ ತಲ್ಲಣ
ಧನ್ಯ ಆಲಿಂಗನ ಮೊದಲ ಹೆಜ್ಜೆಗೆ
ಏನೋ ಕಂಪನ ಏನೀ ರೋಮಾಂಚನ
ತಾಕಿಟ ತರಿಕಿಟ ಎನ್ನುತಿದೆ ಈ ಹೃದಯ ಮೃದಂಗ
ಸುಂದರ ಮಾನಸ ಸರೋವರದಲಿ ಪ್ರೇಮ ತರಂಗ
ಈ ಕಣ್ಣಿನ ಕವನ ಓದೋ ಓ ಹುಡುಗ......
ಪ್ರೇಮದ ಸರಿಗಮ ಸ್ವರ ತಾಳದ ಕೊಳದಲ್ಲಿ
ಹಾಡುತ ತೇಲಾಡುತ ಜ್ವರವೇರಿಸೋ ಮಳೆಯಲ್ಲಿ
ಒಂದೂರಲ್ಲಿ ರಾಜ ರಾಣಿ ನೂರು ಮಕ್ಕಳ ಹೆತ್ತ ಕಥೆಗೆ
ದುಂಡು ಮುಖದ ರಾಜಕುಮಾರ
ಕೋಟೆ ದಾಟಿ ಬಂದ ಕಥೆಗೆ ನಾಯಕ ನೀನೆ......
ಆ ಚಂದಾಮಾಮ ಕಥೆಗೆ ನಾಯಕಿ ನಾ......
ಸುಮ್ಮನೆ ತಿಳಿ ತಿಳಿ ನಾನಾಡದ ಪದಗಳನು
ಸೋಲುವೆ ಪ್ರತಿ ಕ್ಷಣ ನನ್ನ ಮನದಲೆ ನಾನು
ನಿದ್ದೆ ಬರದ ಕಣ್ಣ ಮೇಲೆ ಕೈಯ ಮುಗಿವೆ ಚುಂಬಿಸು ಒಮ್ಮೆ
ನಾನು ನಾಚಿ ನಡುಗೋ ವೇಳೆ
ಮಲ್ಲೆ ಹೂವ ಮುಡಿಸೋ ಒಮ್ಮೆ
ನಾನು ಭೂಮಿ.... ಆವರಿಸು ಸುರಿವ ಮಳೆಯಂತೆ ನನ್ನ.....
********************************************************************************
ಆಕಾಶ ಇಷ್ಟೇ ಯಾಕಿದೆಯೋ
ಸಾಹಿತ್ಯ: ಜಯಂತ್ ಕಾಯ್ಕಿಣಿಗಾಯನ: ಟಿಪ್ಪು, ಕುನಾಲ್ ಗಾಂಜಾವಾಲ
ನನೈ ನನನೈ..... ನನೈ ನನನೈ......
ನನೈ ನನನೈನಿ..... ನನೈ ನನನೈ
ಆಕಾಶ ಇಷ್ಟೇ ಯಾಕಿದೆಯೋ
ಈ ಭೂಮಿ ಕಷ್ಟ ಆಗಿದೆಯೋ

ಮುಗಿಲನ್ನೆ ಮುದ್ದಾಡಿ ರೆಕ್ಕೆ ಬಿಚ್ಚಿ ಹಾರೋ ನಾವೆ.....
ಗಾಳಿಪಟ ಗಾಳಿಪಟ ಗಾಳಿಪಟ
ಕನಸಿನ ನೋಟಿಗೆ ಚಿಲ್ಲರೆ ಬೇಕೇ
ನಗುವನ್ನು ಎಲ್ಲೋ ಮರೆತಿರುವೇಕೆ
ಕಿಸೆಯಲ್ಲಿ ಕದ್ದ ಚಂದ್ರನ ಚೂರು
ನಮ್ಮನ್ನು ಪತ್ತೆ ಮಾಡುವರಾರು
ಹೋಳಾಗಿದೆ ಈ ಭೂಪಟ ಹಾರಾಟವೇ ನಮ್ಮ ಹಟ.....
ಗಾಳಿಪಟ ಗಾಳಿಪಟ ಗಾಳಿಪಟ
ಕಾಮನಬಿಲ್ಲು ಬಾಡಿಗೆಗುಂಟೆ
ಸ್ನೇಹಕ್ಕು ಕೂಡ ರೇಶನ್ ಬಂತೆ
ಸಂಭ್ರಮಕಿಲ್ಲ ಸೀಸನ್ ಟಿಕೇಟು
ಏರಿಸಬೇಕು ನಮ್ಮ ರಿಬೇಟು
ಇದು ಪ್ರೀತಿಯ ಚಿತ್ರಪಟ ಈ ದೋಸ್ತಿಯೆ ನಮ್ಮ ಚಟ....
ಗಾಳಿಪಟ ಗಾಳಿಪಟ ಗಾಳಿಪಟ
ಆಕಾಶ ಇಷ್ಟೇ ಯಾಕಿದೆಯೋ
ಈ ಭೂಮಿ ಕಷ್ಟ ಆಗಿದೆಯೋ
ಇಲ್ಲೇನೋ ಸರಿಯಿಲ್ಲ ಇನ್ನೇನೋ ಬೇಕಲ್ಲ
ನಕ್ಷತ್ರ ಲೋಕಕ್ಕೆ ಲಗ್ಗೆ ಇಟ್ಟು ಹಾರೋ ನಾವೆ.....
ಗಾಳಿಪಟ ಗಾಳಿಪಟ ಗಾಳಿಪಟ...
********************************************************************************
ಆಹಾ ಈ ಬೆದರು ಬೊಂಬೆಗೆ
ಸಾಹಿತ್ಯ:ಜಯಂತ್ ಕಾಯ್ಕಿಣಿ ಗಾಯಕರು: ಅನುರಾಧ ಶ್ರೀರಾಮ್, ಉದಿತ್ ನಾರಾಯಣ್
ಆಹಾ ಈ ಬೆದರು ಬೊಂಬೆಗೆ
ಜೀವ ಬಂದಿರುವ ಹಾಗಿದೆ
ಎಹೆ ಹೆಚ್ಚೇನು ಹೇಳಲಿ
ಹುಚ್ಚು ಹೆಚ್ಚಾಗಿ ಹೋಗಿದೆ
ನೆನಪಿನ ಜಾತ್ರೆಯಲಿ ಅಲೆದು,
ನಾ ಕನಸಿನ ಕನ್ನಡಿಯ ಕೊಳ್ಳಲೆ
ಹೇ ನಿನ್ನಯ ದಾರಿಯಲಿ ಅನುದಿನ,
ಹೃದಯದ ಅಂಗಡಿಯ ತೆರೆಯಲೆ
ಕೆನ್ನೆಯ ಗುಳಿಯೆ ನಿನ್ನ ಕೀರುತಿಯೆ
ಮುಂಗೋಪವೇನು ನಿನ್ನ ಮೂಗುತಿಯೆ
ಸೂರ್ಯನ ಮುಖದಲ್ಲಿ ಮೀಸೆಯ ಬರೆಯುವೆಯ
ಚಂದ್ರನ ಕರೆದಿಲ್ಲಿ ದೋಸೆಯಾ ತಿನಿಸುವೆಯ
ಕುಂಟೋ ಬಿಲ್ಲೆಯಲಿ ಮನಸು ತಲುಪುವೆಯಾ
ಕಳೆದು ಹೋಗಿರುವೆ ದಾರಿ ತಿಳಿಸುವೆಯ
ಪ್ರೀತಿಗೆ ಯಾಕೆ ಈ ಉಪವಾಸ
ಯಾತಕ್ಕು ಇರಲಿ ನಿನ್ನ ಸಹವಾಸ
ಅಂಚೆಯ ಪೆಟ್ಟಿಗೆಗೆ ಹೃದಯವ ಹಾಕಿರುವೆ
ನೆನಪಿನ ಕೊಟ್ಟಿಗೆಗೆ ನಿನ್ನನ್ನೇ ನೂಕಿರುವೆ
ನಂಬಿ ಕೆಟ್ಟಿರುವೆ ಏನು ಪರಿಹಾರ
ನಿನಗೆ ಕಟ್ಟಿರುವೆ ಮನದ ಗಡಿಯಾರ
*********************************************************************************
ಒಂದೇ ಸಮನೇ ನಿಟ್ಟುಸಿರು
ಸಾಹಿತ್ಯ: ಯೋಗರಾಜ್ ಭಟ್ಗಾಯಕರು: ಸೋನು ನಿಗಮ್
ಒಂದೇ ಸಮನೇ ನಿಟ್ಟುಸಿರು,
ಪಿಸುಗುಡುವ ತೀರದ ಮೌನ..
ತುಂಬಿ ತುಳುಕೋ ಕಂಗಳಲೀ,
ಕರಗುತಿದೆ ಕನಸಿನ ಬಣ್ಣ..
ಎದೆಯ ಜೋಪಡಿಯ ಒಳಗೆ,
ಕಾಲಿಡದೆ ಕೊಲುತಿದೆ ಒಲವು..
ಮನದ ಕಾರ್ಮುಗಿಲಿನ ತುದಿಗೆ,
ಮಳೆಬಿಲ್ಲಿನಂತೆ ನೋವು..
ಕೊನೆ ಇರದ ಏಕಾಂತವೇ.. ಒಲವೇ..?
ಒಂದೇ ಸಮನೇ ನಿಟ್ಟುಸಿರು, ಪಿಸುಗುಡುವ ತೀರದ ಮೌನ..
ತುಂಬಿ ತುಳುಕೋ ಕಂಗಳಲೀ, ಕರಗುತಿದೆ ಕನಸಿನ ಬಣ್ಣ..
ಜೀವಾ ಕಳೆವಾ ಅಮೃತಕೆ, ಒಲವೆಂದು ಹೆಸರಿಡಬಹುದೇ..
ಪ್ರಾಣಾ ಉಳಿಸೋ ಖಾಯಿಲೆಗೆ, ಪ್ರೀತಿಯೆಂದೆನ್ನಬಹುದೇ..
ಹೊಂಗನಸ ಚಾದರದಲಿ, ಮುಳ್ಳಿನ ಹಾಸಿಗೆಯಲಿ ಮಲಗಿ..
ಯಾತನೆಗೆ ಮುಗುಳ್ನಗು ಬರಲು, ಕಣ್ಣಾ ಹನಿ ಸುಮ್ಮನೆ ಒಣಗಿ..
ಅವಳನ್ನೇ ಜಪಿಸುವುದೇ.. ಒಲವೇ..?
ಜೀವಾ ಕಳೆವಾ ಅಮೃತಕೆ, ಒಲವೆಂದು ಹೆಸರಿಡಬಹುದೇ..
ಪ್ರಾಣಾ ಉಳಿಸೋ ಖಾಯಿಲೆಗೆ, ಪ್ರೀತಿಯೆಂದೆನ್ನಬಹುದೇ..
ನಾಲ್ಕು ಪದದ ಗೀತೆಯಲೀ, ಮಿಡಿತಗಳ ಬಣ್ಣಿಸಬಹುದೇ..
ಮೂರು ಸ್ವರದ ಹಾಡಿನಲಿ, ಹೃದಯವನು ಹರಿಬಿಡಬಹುದೇ..
ಉಕ್ಕಿ ಬರುವ ಕಂಠದಲಿ, ನರಳುತಿದೆ ನಲುಮೆಯ ಗಾನ..
ಬಿಕ್ಕಳಿಸುವಾ ಎದೆಯೊಳಗೆ, ನಗುತಲಿದೆ ಮಡಿದಾ ಕವನ..
ಒಂಟಿತನದಾ ಗುರುವೇ.. ಒಲವೇ..?
********************************************************************************
ಕವಿತೆ ಕವಿತೆ ನೀನೇಕೆ
ಸಾಹಿತ್ಯ: ಹೃದಯಶಿವ ಗಾಯನ: ವಿಜಯ್ ಪ್ರಕಾಶ್
ಕವಿತೆ ಕವಿತೆ ನೀನೇಕೆ ಪದಗಳಲಿ ಕುಳಿತೆ
ಕವಿತೆ ಕವಿತೆ ನೀನೇಕೆ ರಾಗದಲಿ ಬೆರೆತೆ
ನನ್ನೆದೆಯಾ ಗೂಡಲ್ಲಿ ಕವಿತೆಗಳಾ ಸಂತೆ
ಓ ಒಲವೇ, ನೀ ತಂದ ಹಾಡಿಗೆ ನಾ ಸೋತೆ...
ಅವಳು ಬರಲು ಮನದಲ್ಲಿ ಪದಗಳದೇ ಚಿಲುಮೆ
ಮನದ ಕಡಲ ದಡದಾಟೊ ಅಲೆಗಳಲು ನಲುಮೆ
ಹೊಮ್ಮುತಿದೆ ರಾಗದಲಿ ಸ್ವರಮೀರೋ ತಿಮಿರು
ಚಿಮ್ಮುತಿದೆ ಸುಳ್ಳಾಡುವಾ ಕವಿಯಾದ ಪೊಗರು
ಅವಳು ಬರಲು .....
ಮುಗಿಲಾ ಹೆಗಲಾ ಮೇಲೇರಿ ತೇಲುತಿದೆ ಹೃದಯ
ಮಡಿಲಾ ಹುಡುಕಿ ಎದೆ ಬಾಗಿಲಿಗೆ ಬಂತೋ ಪ್ರಣಯಾ
ಉನ್ಮಾದ ತಾನಾಗಿ ಹಾಡಾಗೋ ಸಮಯಾ
ಏಕಾಂತಾ ಕಲ್ಲನ್ನು ಮಾಡುವುದೋ ಕವಿಯಾ
ಮುಗಿಲಾ ....
No comments:
Post a Comment