
ಚಲನ ಚಿತ್ರ : ಮಳೆಯಲಿ ಜೊತೆಯಲಿ (2009)
ನಟರು : ಗಣೇಶ್, ಯುವಿಕಾ ಚೌಧರಿ, ಅಂಜನ ಸುಖಾನಿ
ಗಾಯನ : ಸೋನು ನಿಗಮ್
ಸಾಹಿತ್ಯ: ಜಯಂತ್ ಕಾಯ್ಕಿಣಿ
ನಿರ್ದೇಶಕರು : ಪ್ರೀತಂ ಗುಬ್ಬಿ

ನೀ ಸನಿಹಕೆ ಬಂದರೆ ಹೃದಯದ ಗತಿಯೇನು
ಹೇಳು ನೀನು, ನೀನೆ ಹೇಳು
ಇನ್ನು ನಿನ್ನ ಕನಸಿನಲ್ಲಿ ಕರೆ ನೀನು ಶುರು ನಾನು
ನಿನ್ನೊಲವಿಗೆ ಮಿಡಿಯದ ಹೃದಯದ ಉಪಯೋಗ
ಏನು ಹೇಳು, ಹೇಳು ನೀನು
ಸಮೀಪ ಬಂತು ಬಯಕೆಗಳ ವಿಶೇಷವಾದ ಮೆರವಣಿಗೆ
ಇದೀಗ ನೋಡು ಬೆರಳುಗಳ ಸರಾಗವಾದ ಬರವಣಿಗೆ
ನಿನ್ನ ಬಿಟ್ಟು ಇಲ್ಲ ಜೀವ ಎಂದೂ ಕೂಡ ಒಂದು ಘಳಿಗೆ
ನಿನ್ನ ಮಾತು ಏನೇ ಇರಲಿ ನಿನ್ನ ಮೌನ ನಂದೇ ಏನು
ನೀ ಸನಿಹಕೆ ಬಂದರೆ.......
ನನ್ನ ಎದೆಯ ಸಣ್ಣ ತೆರೆಯ ಧಾರಾವಾಹಿ ನಿನ್ನ ನೆನಪು
ನೆನ್ನೆ ತನಕ ಎಲ್ಲಿ ಅಡಗಿ ಇತ್ತು ನಿನ್ನ ಕಣ್ಣ ಹೊಳಪು
ಉಸಿರು ಹಾರಿ ಹೋಗುವ ಹಾಗೆ ಬಿಗಿದು ತಬ್ಬಿ ಕೊಲ್ಲು ನೀನು
ಮತ್ತೆ ಮತ್ತೆ ನಿನ್ನುಸಿರು ನೀಡುತ ಉಳಿಸು ನನ್ನನು
ದಾರಿಯಲಿ ಬುತ್ತಿ ಹಿಡಿದು ನಿಂತ ಸಾಥಿ ನೀನೆ ಏನು
ನೀ ಸನಿಹಕೆ ಬಂದರೆ.......
********************************************************************************

ಮಳೆಯಲಿ ಜೊತೆಯಲಿ
ಸಾಹಿತ್ಯ:ಗಾಯನ: ಸೋನು ನಿಗಮ್
ಮಳೆಯಲಿ ಜೊತೆಯಲಿ ದಿನವಿಡೀ ನೆನೆಯಲು | ಮಳೆಯಲಿ |
ನನಗೆ ಕುತೂಹಲ.. ಹೋ ಓ ಓ ತುಂಬಾ ಕುತೂಹಲ ||
ಹನೀ ಹನಿಯ ಸವಿ ದುನಿಯಾ ನ ವಿವರಿಸಿ ಹೇಳಲಾ || ಮಳೆಯಲಿ ||
ಅದೇ ಅದೆ ಮೊಡವೀಗ ವಿನೂತನ ರೂಪ ತಾಳಿ ನಿನ್ನಾ ಸೋಕಿದೆನು
ಪದೇ ಪದೇ ಗಂಧ ಗಾಳಿ ವಿಚಾರಿಸಿ ನೂರು ಬಾರಿ ಸುಮ್ಮನಾಗಿದೆ
ಕನಸಿನಾ ಕುಡಿಯನು ಮನಸಲೇ ಬಿಡಿಸಲು ತುಂಬಾ ಕುತೂಹಲ || ಮಳೆಯಲಿ ||
ಇದೇನಿದು ಮೂಕಬಾವ ತಯಾರಿಯೇ ಇಲ್ಲದೇನೆ ನನ್ನಾ ಕಾದಿದೆ
ನಿವೇದನೆ ಆದಮೇಲು ಸತಾಯಿಸ ಬೇಕು ನೀನು ನನ್ನ ನೋಡದೇನೆ
ಸಿದಿಲಿನಾ ಇರುಳಲು ಪಿಸುನುಡಿ ಕೇಳಲು ತುಂಬಾ ಕುತೂಹಲ || ಮಳೆಯಲಿ ||
*******************************************************************************
No comments:
Post a Comment