Thursday, December 12, 2013

ದುನಿಯಾ (2007)


ಕರಿಯಾ ಐ ಲವ್ ಯೂ

ಚಲನಚಿತ್ರ: ದುನಿಯಾ (2007)
ಸಾಹಿತ್ಯ: ವಿ. ನಾಗೇಂದ್ರ ಪ್ರಸಾದ್ 
ಸಂಗೀತ: ವಿ. ಮನೋಹರ್ 
ಗಾಯನ: ರಾಜೇಶ್ ಕೃಷ್ಣನ್, ನಂದಿತಾ 
ನಿರ್ದೇಶನ: ಸೂರಿ 
ನಟರು: ವಿಜಯ್, ರಶ್ಮಿ  


ಕರಿಯಾ ಐ ಲವ್ ಯೂ, ಕರುನಾಡ ಮೇಲಾಣೆ
ಬೆಳ್ಳಿ ಐ ಲವ್ ಯೂ, ಬಿಳಿಮೋಡದ ಆಣೆ
ನಿನಗೊಂದು ಪ್ರೇಮದ ಪತ್ರ
ಬರೆಯೋದು ನನಗಾಸೆ
ನಾನೇ ಇರುವೆ ಹತ್ರ ಬಿಡು ಆಸೆ ಓ ಕೂಸೇ....

ಓದು ಬರಹ ಬರದು ಬರಿ ಆಡು ಭಾಷೆ ನಂದು
ತಬ್ಬಲಿ ನಾನು ತಾಯಿ ನೀನು ಏಳು ಜನ್ಮದ ಬಂಧು
ನಿನ್ನ ಪ್ರೀತಿ ಎದುರು ನಾನಿನ್ನು ಕೊನೆಯ ಉಗುರು
ಸಾರ್ಥಕವಾಯ್ತು ನನ್ನೀ ಬಾಳು ನಾವೂ ಒಂದೇ ಉಸಿರು....

ಯಾರು ಏನೇ ಅನಲಿ ಇಡೀ ಊರಿಗೂರೇ ಬರಲಿ
ಜೇವವು ನಿನ್ನದೆ ಜೀವನ ನಿನದೆ ನಿನ್ನ ಪ್ರೀತಿ ಸಿಗಲಿ
ಬಾರೆ ಬಾರೆ ಜಮುನಾ ಊರ್ ಮ್ಯಾಲೆ ಯಾಕೆ ಗಮನ
ಒಲವೇ ಜೀವನ ಸಾಕ್ಷಾತ್ಕಾರ ಜೀವ ಕೊಡ್ತಿನಿ ಚಿನ್ನ....


*******************************************************************************

ನೋಡಯ್ಯ ಕ್ವಾಟೆ ಲಿಂಗವೇ 

ಸಾಹಿತ್ಯ: ವಿ. ನಾಗೇಂದ್ರ ಪ್ರಸಾದ್
ಗಾಯನ: ಎಂ. ಡಿ. ಪಲ್ಲವಿ 


ಅಮ್ಮಣ್ಣಿ ಅವ್ನತ್ರ ಇರೋದ್ ಯಾವ್ದೂ  ಔನ್ದಲ್ಲ...
ಎಲ್ಲ ಅವ್ರಪ್ಪ ಕೊಡ್ಸಿರ್ತಾನೆ...
ಬೇಕಾದ್ರೆ ಹೋಗ್ ಕೇಳು...
ಔನು ಹಾಕೊಂಡಿರೋ ಚಡ್ಡಿ ಕೂಡ
ಅವ್ನಪ್ಪಾನೆ ಕೊಡ್ಸಿರೋದು.
ನಾವು ಅಂಗಲ್ಲ....ಅಡಿ ಇಂದ ಮುಡಿವರ್ಗು
ನಮ್ ಸಂಪಾದ್ನೇಲಿ ಬದುಕ್ತಾ ಇರೋರು
ಅದ್ಯಾತ್ರದ್ದೋ ನೆಕ್ತಾ ಇದ್ಯಲ್ಲ ನೆಕ್ಬುಟ್ಟು ಓಗ್ ದಬ್ಬಾಕು......


ನೋಡಯ್ಯ ಕ್ವಾಟೆ ಲಿಂಗವೇ
ಬೆಳ್ಳಕ್ಕಿ ಜೋಡಿ ಕುಂತವೆ
ಅಂಗೈ ಅಷ್ಟಗಲ ಗೂಡು
ಆದ್ರುನು ದರ್ಬಾರ್ ನೋಡು
ಪ್ರೀತಿಲಿ ಲೋಕ ಮರ್ತವೆ....

ಪಾಯಯಿಲ್ಲ ಗ್ವಾಡೆಯಿಲ್ಲ
ನೋಡು ಇವರ ಅರಮನೆ
ರಾಜ ರಾಣಿ ಆಳು ಕಾಳು
ಎಲ್ಲಾನೂ ಇವರೇನೆ
ಸ್ವಾನೆ ಮಳ್ಯೋ ಉರಿಯೋ ಬಿಸಿಲೋ
ಏನೇ ಬಂದ್ರು ಜಗ್ಗಲ್ಲ ಅವಳಿಗೆ ಇವನೇ ಕೊಡೆಯಾಗವ್ನೆ
ಇವ್ರ್ ಬಿಟ್ ಇವ್ರ್ಗೆಯಾರಿಲ್ಲ

ಪೆದ್ದು ಹೈದ ಮನ್ಸು ಸುದ್ದ
ಸುಳ್ಳು ಹೇಳೋ ಕುಲವಲ್ಲ
ಸುಣ್ಣದ ನೀರ್ಗು ಗೋವಿನ ಹಾಲ್ಗು
ಯತ್ವಾಸ ಗೊತ್ತಿಲ್ಲ
ಅ ಆ ಇ ಈ ಓದಿದೋಳು
ಇವ್ನಾ ಮನ್ಸು ಒದವ್ಳೆ
ಕೋಗ್ಲೆ ಬಣ್ಣ ಆದ್ರು ಚಿನ್ನ
ಅಂತ ಇವ್ನಾ ಜೊತೆಗವ್ಳೆ...


*******************************************************************************

ಈ ಪಾಪಿ ದುನಿಯ ಪ್ರೀತಿ ಕಲಿಸಿ

ಸಾಹಿತ್ಯ: ವಿ. ನಾಗೇಂದ್ರ ಪ್ರಸಾದ್ 
ಗಾಯಕರು: ಬದ್ರಿಪ್ರಸಾದ್ 

ಈ ಪಾಪಿ ದುನಿಯ ಪ್ರೀತಿ ಕಲಿಸಿ
ಉಳಿಸೋದು ಕಲಿಸಿಲ್ಲ
ಓ ಗೆಳತಿ ನೀನುನೂ ಉಳಿದಿಲ್ಲ
ಜೊತೇಲಿ ನಡೆದ ಮಾತೆ ಇರದ
ಮುಸ್ಸಂಜೆ ಮರೆತಿಲ್ಲ
ಓ ಹುಡುಗಿ ಆ ನೆನಪು ಅಳಿಯೊಲ್ಲ
ಮುಂಜಾನೆವರೆಗೂ ಸೋನೆ ಸುರಿದ
ದಿನಾಂಕ ಗುರುತಿಡುವೆ
ಮಳೇಲಿ ನೆನೆದದ್ದು ನೆನಪಿಡುವೆ
ವಿಶ್ವಾಸವಿರದ ದ್ರೋಹಿ ದುನಿಯ
ನೀನುನೂ ಹಾಗಿನ
ಓ ಗೆಳತಿ ನಿನ್ನಲ್ಲು ವಿಷವೇನ


********************************************************************************


ಸಾಲ ಮಾಡಿಯಾದ್ರು

ಸಾಹಿತ್ಯ: ವಿ. ಮನೋಹರ್ 
ಗಾಯಕರು: ಅಭಿಮನ್ಯು ಭೂಪತಿ, ಮೈಸೂರು ಜೆನ್ನಿ, ಗುರುರಾಜ್ ಹೊಸಕೋಟೆ 

ಸಾಲ ಮಾಡಿಯಾದ್ರೂ ತುಪ್ಪ ತಿನ್ನು
ಗೋಳು ಪರದಾಟ ಸಾಕಿನ್ನು
ಬದ್ಕೋದ್ ಕಲಿಯೋ ಬಿಕನಾಸಿ
ನಗೋದುಕ್ಕೂ ಯಾಕೆ ಚೌಕಾಸಿ
ನಗಿಸಿ ನಗುವುದೇ ಖುಷಿ //೨ ಸಲ//

ಲಕ್ಷ ರೂಪಾಯಿ ಇದ್ದೋರಿಗೆ ಕೋಟಿಯಾ ಚಿ೦ತೆ ಗುರೂ
ಕೋಟಿ ಕೋಟಿ ಕೂಡಿಟ್ಟರೆ ಮೈತು೦ಬಾ ಕಾಯ್ಲೇ ಶುರು
ಚಿ೦ತೆಗಳೇ ಇಲ್ದೋರಿಗೆ ಸ೦ತೇಲೂ ನಿದ್ದೆ ಗುರೂ
ಒ೦ದೇ ಹೊತ್ತು ನಾವು೦ಡರೂ ತ೦ಪಾಗಿರೋ ಗಾ೦ಪರೂ
ಮೃಷ್ಟಾನ್ನವು ಸೈ ಚಿತ್ರಾನ್ನವು ಸೈ ಸಿಕ್ಕಾಗ ಹೊಡಿ ಲೊಟ್ಟೇ
ಫುಟ್‌ಪಾತಲೂ ಸೈ ಚೌಪಾಟಿಲೂ ಸೈ ಮೈ ಚಾಚಿ ಹೊಡಿ ನಿದ್ದೇ

ಸಾಲ ಮಾಡಿಯಾದ್ರೂ ತುಪ್ಪ ತಿನ್ನು
ಗೋಳು ಪರದಾಟ ಸಾಕಿನ್ನು
ಬದ್ಕೋದ್ ಕಲಿಯೋ ಬಿಕನಾಸಿ
ನಗೋದುಕ್ಕೂ ಯಾಕೆ ಚೌಕಾಸಿ
ನಗಿಸಿ ನಗುವುದೇ ಖುಷಿ

ಕಡಲಾ ಕಡೆ ಎದ್ದು ಬಿದ್ದು ಓಡ್ತಾವೆ ಎಲ್ಲಾ ನದಿ
ತಿಮ್ಮಪ್ಪನ ಹು೦ಡಿ ಒಳ್ಗೆ ಸೇರ್ತಾೆವೆ ಎಲ್ರಾ ನಿಧೀ
ಇದ್ಹಾ೦ಗೆನೆ ಇರೋರು ನಾವ್ ಸುಮ್ನೆ ಬಿಡಲ್ಲಾ ವಿಧೀ
ನಮ್ಮ್ ತ೦ಟೆಗೆ ಬ೦ದ್ರೆ ಅದು ಎದ್ದೆದ್ದು ಝಾಡ್ಸಿ ಒದೀ
ಸನ್ಯಾಸಿಗೂ ಜೈ ಬೇವರ್ಸಿಗೂ ಜೈ ಇಬ್ರಿ೦ದ್ಲೂ ಕಲಿ ಪಾಠ
ಆ ದ್ಯಾವ್ರಿಗೂ ಜೈ ಈ ದ್ಯಾವ್ರಿಗೂ ಜೈ ನಮ್ಮ್ ದ್ಯಾವ್ರೇ ಈ ಊಟ

ಸಾಲ ಮಾಡಿಯಾದ್ರೂ ತುಪ್ಪ ತಿನ್ನು
ಗೋಳು ಪರದಾಟ ಸಾಕಿನ್ನು
ಬದ್ಕೋದ್ ಕಲಿಯೋ ಬಿಕನಾಸಿ
ನಗೋದುಕ್ಕೂ ಯಾಕೆ ಚೌಕಾಸಿ
ನಗಿಸಿ ನಗುವುದೇ ಖುಷಿ

********************************************************************************

No comments:

Post a Comment