Friday, December 13, 2013

-: ಸುಮಧುರ ಭಾವಗೀತೆಗಳು :-


ವಿಶ್ವ ವಿನೂತನ

ವಿಶ್ವ ವಿನೂತನ ವಿದ್ಯಾ ಚೇತನ
ಸರ್ವ ಹೃದಯ ಸಂಸ್ಕಾರಿ ಜಯಭಾರತಿ

ಕರುನಾಡ ಸರಸ್ವತಿ ಗುಡಿಗೋಪುರ ಸುರಶಿಲ್ಪ ಕಲಾಕೃತಿ
ಕೃಷ್ಣೆ ತುಂಗೆ ಕಾವೇರಿ ಪವಿತ್ರಿತ ಮನೋಹಾರಿ 

ಗಂಗ ಕದಂಬ ರಾಷ್ಟ್ರಕೂಟ ಚಾಲುಕ್ಯ ಹೊಯ್ಸಳ ಬಲ್ಲಾಳ
ಹಕ್ಕಬುಕ್ಕ ಪುಲಿಕೇಶಿ ವಿಕ್ರಮರ ಚೆನ್ನಮ್ಮಾಜಿಯ ವೀರಶ್ರೀ 

ಅರಿವೇ ಗುರುನುಡಿ ಜ್ಯೋತಿರ್ಲಿಂಗ ದಯವೇ ಧರ್ಮದ ಮೂಲತರಂಗ
ವಿಶ್ವಭಾರತಿಗೆ ಕನ್ನಡದಾರತಿ ಮೊಳಗಲಿ ಮಂಗಳ ಜಯಭೇರಿ 

ಕವಿ:- ಚೆನ್ನವೀರ ಕಣವಿ
   ********************************************************************************* 

ಮೂಡಲ ಮನೆಯ...

ಮೂಡಲ ಮನೆಯ ಮುತ್ತಿನ ನೀರಿನ
ಎರಕಾವ ಹೊಯ್ದ, ನುಣ್ಣನೆ ಎರಕಾವ ಹೊಯ್ದ ||
ಬಾಗಿಲು ತೆರೆದು ಬೆಳಕು ಹರಿದು  ಜಗವೆಲ್ಲಾ ತೊಯ್ದ ,
ದೇವಾನು ಜಗವೆಲ್ಲಾ ತೊಯ್ದ

ಎಲೆಗಳ ಮೇಲೆ ಹೂಗಳ ಒಳಗೆ
ಅಮೃತದ ಬಿಂದು, ಕಂಡವು ಅಮೃತದ ಬಿಂದು
ಯಾರಿರಿಸಿಹರು ಮುಗಿಲಿನ ಮೇಲಿಂದ
ಇಲ್ಲಿಗೆ ಇದ ತಂದು, ಈಗ ಇಲ್ಲಿಗೆ ಇದ ತಂದು
ಗಿಡಗಂಟೆಗಳ ಕೊರಳೊಳಗಿಂದ ಹಕ್ಕಿಗಳ
ಹಾಡು ಹೊರಟಿತು, ಹಕ್ಕಿಗಳ ಹಾಡು

ಗಂಧರ್ವ ಸೀಮೆಯಾಯಿತು ಕಾಡಿನ ನಾಡು
ಕ್ಷಣದೊಳು, ಕಾಡಿನ ನಾಡು 

ಕವಿ:- ದ. ರಾ. ಬೇಂದ್ರೆ 

*******************************************************************************

ಹುಚ್ಚು ಕೊಡಿ ಮನಸು...

ಹುಚ್ಚು ಕೊಡಿ ಮನಸು ಅದು ಹದಿನಾರರ ವಯಸು ||
ಮಾತು ಮಾತಿಗೆಕೋ ನಗು ಮರು ಗಳಿಗೆಯೇ ಮೌನ
ಕನ್ನಡಿ ಮುಂದಷ್ಟು ಹೊತ್ತು ಬರೆಯದಿರುವ ಕವನ
ಸೇರೆಗು ತೀದಿದಷ್ಟು ಸುಕ್ಕು ಹಠ ಮಾಡುವ ಕೂದಲು
ನಿರಿಯೇಕೋ ಸರಿಯಾಗದು ಮತ್ತೆ ಒಳಗೆ ಹೋದಳು
ಕೆನ್ನೆ ಕೊಂಚ ಕೆಂಪಾಯಿತೆ ತುಟಿಗೆ ಬಣ್ಣ ಹೆಜ್ಜೆ
ನಗುತ ಅವಳ ಚೇಡಿಸುತಿದೆ ಗಲ್ಲದ ಕರಿ ಮಚ್ಚೆ
ಬರಿ ಹಸಿರು ಬರಿ ಹೂವು ಎದೆಯಲೆಷ್ಟೋ ಹೆಸರು
ಯಾವ ಮಧುವೆ ದಿಬ್ಬಣವೋ ಸುಮ್ಮನೆ ನಿಟ್ಟುಸಿರು 

ಕವಿ:- ಹೆಚ್. ಎಸ್. ವೆಂಕಟೇಶಮೂರ್ತಿ

***************************************************************************** 

ಕುರುಡು ಕಾಂಚಾಣ... 

ಕುರುಡು ಕಾಂಚಣ ಕುಣಿಯುತ್ತಲಿತ್ತು
ಕಾಲಿಗೆ ಬಿದ್ದವರ ತುಳಿಯುತ್ತಲಿತ್ತು ||
ಬಾಣನ್ತಿಯೆಲುಬ ಸಾ ಬಾನದ ಬಿಳುಪಿನ
ಕಾಣದ ಕಿರುಗೆಜ್ಜೆ ಕಾಲಾಗ ಇತ್ತು
ಸಣ್ಣ ಕಂದಮ್ಮಗಳ ಕಣ್ಣಿನ ಕವಡಿಯ
ತಣ್ಣನ್ನ ಜೋಮಾಲೆ ಕೊರಳೊಳಗಿತ್ತು
ಬಡವರ ಒಡಲಿನ ಬಡಬಾ ನೆಲದಲ್ಲಿ
ಸುಡು ಸುಡು ಪಂಜು ಕೈಯೋಳಗಿತ್ತೋ
ಕಂಬನಿ ಕುಡಿಯುವ ಹುಂಬ ಬಾಯಿಲಿ ಮೈ
ದುಂಬಿಯಂತುಧೋ ಉಧೋ ಎನ್ನುತ್ತಲಿತ್ತೋ
ಕೂಲಿ ಕುಂಬಳಿಯವರ ಪಾಲಿನ ಮೈದೊಗಲ
ಧೂಳಿಯ ಭಂಡಾರ ಹನಿಯೊಳಗಿತ್ತೋ
ಗುಡಿಯೊಳಗೆ ಗಣ ನಾಮ ಹಡಿಯೊಳಗ ತನನ
ಅಂಗಡಿಯೊಳಗೆ ಝಾಣನ ನುಡಿಗೊಡುತಿತ್ತೋ
ಹ್ಯಾಂಗಾರೆ ಕುಣಿಕುಣಿದು ಮಂಗಾಟ ನಡೆದಾಗ
ಅಂಗಾತ ಬಿತ್ತೋ ಹೆಗಲಲ್ಲಿ ಎತ್ತೋ 

ಕವಿ:- ದ.ರಾ. ಬೇಂದ್ರೆ

******************************************************************************* 

ಯುಗ ಯುಗಾದಿ ಕಳೆದರೂ...

ಯುಗ ಯುಗಾದಿ ಕಳೆದರೂ
ಯುಗಾದಿ ಮರಳಿ ಬರುತಿದೆ
ಹೊಸ ವರುಷಕೆ ಹೊಸ ಹರುಷವ
ಹೊಸೆತು ಹೊಸೆತು ತರುತಿದೆ ||

ಹೊಂಗೆ ಹೂವ ತೊಂಗಳಲಿ
ಭೃಂಗದ ಸಂಗೀತ ಕೇಳಿ
ಮತ್ತೆ ಕೇಳ ಬರುತಿದೆ
ಬೇವಿನ ಕಹಿ ಬಾಳಿನಲ್ಲಿ
ಹೂವಿನ ನಸುಗಂಪು ಸೂಸಿ
ಜೀವ ಕಳೆಯ ತರುತಿದೆ

ವರುಷಕೊಂದು ಹೊಸತು ಜನ್ಮ
ಹರುಷಕೊಂದು ಹೊಸತು ನೆಲೆಯು
ಅಖಿಲ ಜೀವ ಜಾತಕೆ
ಒಂದೇ ಒಂದು ಜನ್ಮದಲ್ಲಿ
ಒಂದೇ ಬಾಲ್ಯ ಒಂದೇ ಹರಯ
ನಮಗದಷ್ಟೇ ಏತಕೋ ?

ನಿದ್ದೆಗೊಮ್ಮೆ ನಿತ್ಯ ಮರಣ ಎದ್ದ
ಸಾಲ ನವೀನ ಜನನ
ನಮಗೆ ಏಕೆ ಬಾರದೋ?
ಎಲೆ ಸನತ್ಕುಮಾರ ದೇವ ಎಲೆ
ಸಾಹಸಿ ಚಿರಂಜೀವ
ನಿನಗೆ ಲೀಲೆ ಸೇರದೋ 

ಕವಿ:- ದ.ರಾ. ಬೇಂದ್ರೆ

*******************************************************************************

ಮುಗಿಲ ಮಾರಿಗೆ ರಾಗ...

ಮುಗಿಲ ಮಾರಿಗೆ ರಾಗ ರತಿಯ
ನಂಜ ಏರಿತ್ತ   ಆಗ ಸಂಜೆ ಆಗಿತ್ತ ||

ನೆಲದ ಅಂಚಿಗೆ ಮಂಜಿನ ಮುಸುಕು ಹ್ಯಾಂಗೋ ಬಿದ್ದಿತ್ತ
ಗಾಳಿಗೆ ಮೇಲಕ್ಕೆದ್ದಿತ್ತ
ಬಿದಿಗೆ ಚಂದ್ರನ ಚೊಗಚಿ ನಗಿವು ಮೆಲ್ಲಗ ಮೂಡಿತ್ತ
ಮ್ಯಾಲಕ ಬೆಳ್ಳಿನ ಕೂಡಿತ್ತ
ಇರುಳು ಹರಳಿನ ಅರಳು ಮಲ್ಲಿಗೆ ಜಾಲಿಗೆ ಹಂಗಿತ್ತ
ಸುಸ್ಯಾವ ಚಿಕ್ಕಿ ಅತ್ತಿತ್ತ
ಬೊಗಸಿಗಣ್ಣಿನ ಬಯಕೆಯ ಹೆಣ್ಣು ನೀರಿಗೆ ಹೋಗಿತ್ತ
ತಿರುಗಿ ಮನೀಗೆ ಸಾಗಿತ್ತ
ಕಾಲು ಬೇಕ್ಕಿನ್ಹಾಂಗ ಭಾವಿ ಹಾದಿ ಕಾಳಾಗ ಕುಳಿತಿತ್ತ
ಎರಗಿ ಹಿಂದಕ್ಕುಳಿತಿತ್ತ
ಮಳ್ಳ ಗಾಳಿ ಸುಳಿ ಕಳ್ಳ ಕೈಲೆ ಸೆರಗನು ಹಿಡಿದಿತ್ತ
ಮತ ಮತ ಬೆರಗಿಲೆ ಬಿಡತಿತ್ತ
ಒಂದ ಮನದ ಗಿಳಿ ಹಿಂದ ನೆಳ್ಳಿಗೆ ಬೆನ್ನಿಲೆ ಬರಲಿತ್ತ
ತನ್ನ ಮೈಮನ ಮರೆತಿತ್ತ 

ಕವಿ:- ದ. ರಾ. ಬೇಂದ್ರೆ 

*******************************************************************************

ಬಣ್ಣದ ತಗಡಿನ ತುತ್ತೂರಿ...

ಬಣ್ಣದ ತಗಡಿನ ತುತ್ತೂರಿ
ಕಾಸಿಗೆ ಕೊಂಡನು ಕಸ್ತೂರಿ
ಸ-ರಿ-ಗ-ಮ-ಪ-ಡ-ನಿ-ಸ ಊದಿದನು
ಸ-ನಿ-ದ-ಪ-ಮ-ಗ-ರಿ-ಸ ಊದಿದನು || 

ತನಗೇ ತುತ್ತೂರಿ ಇದೆಯೆಂದ
ಬೇರಾರಿಗೂ ಅದು ಇಲ್ಲೆಂದ
ಕಸ್ತೂರಿ ನಡೆದನು ಬೀದಿಯಲಿ
ಜಂಭದ ಕೋಳಿಯ ರೀತಿಯಲಿ
ತುತ್ತೂರಿ ಊದುತ ಕೊಳದ ಬಳಿ
ನಡೆದನು ಕಸ್ತುರಿ ಸಂಜೆಯಲಿ
ಜಾರಿತು ನೀರಿಗೆ ತುತ್ತೂರಿ
ಗಂಟಲು ಕಟ್ಟಿತು ನೀರೂರಿ
ಸ-ರಿ-ಗ-ಮ ಊದಲು ನೋಡಿದನು
ಗ-ಗ-ಗ-ಗ ಸದ್ದನು ಮಾಡಿದನು
ಬಣ್ಣವು ನೀರಿನ ಪಾಲಾಯ್ತು
ಜಂಭದ ಕೋಳಿಗೆ ಗೋಳಾಯ್ತು 

ಕವಿ:- ಜಿ. ಪಿ. ರಾಜರತ್ನಂ

*******************************************************************************

ಎಲ್ಲಾದಾರು ಇರು

ಗಾಯನ: ಡಾ. ರಾಜ್ ಕುಮಾರ್ 
ಸಂಗೀತ: ಸಿ. ಅಶ್ವಥ್ 

ಎಲ್ಲಾದರು ಇರು ಎಂತಾದರು ಇರು ||೨||    
ಎಂದೆಂದಿಗೂ ನೀ ಕನ್ನಡವಾಗಿರು    
ಕನ್ನಡವೇ ಸತ್ಯ, ಕನ್ನಡವೇ ನಿತ್ಯ     
ಕನ್ನಡ ಗೋವಿನ ಓ ಮುದ್ದಿನ ಕರು ||೨||    
ಕನ್ನಡತನ ಒಂದಿದ್ದರೆ, ಅಮ್ಮಗೆ ಕಲ್ಪತರು    
ಕನ್ನಡವೇ ಸತ್ಯ, ಕನ್ನಡವೇ ನಿತ್ಯ     

ಎಲ್ಲಾದರು ಇರು ಎಂತಾದರು ಇರು    
ಎಂದೆಂದಿಗೂ ನೀ ಕನ್ನಡವಾಗಿರು     

ನೀ ಮೆಟ್ಟುವ ನೆಲ, ಅದೆ ಕರ್ನಾಟಕ    
ನೀನೇರುವ ಮಲೆ ಸಹ್ಯಾದ್ರಿ    
ನೀ ಮೆಟ್ಟುವ ನೆಲ, ಅದೆ ಕರ್ನಾಟಕ    
ನೀನೇರುವ ಮಲೆ ಸಹ್ಯಾದ್ರಿ    

ನೀ ಮುಟ್ಟುವ ಮರ ಶ್ರೀಗಂಧದ ಮರ ||೨||    
ನೀ ಕುಡಿಯುವ ನೀರ್ ಕಾವೇರಿ     

ಪಂಪನ ಓದುವ ನಿನ್ನಾ ನಾಲಗೆ    
ಕನ್ನಡವೇ ಸತ್ಯ    
ಕುಮಾರವ್ಯಾಸನ ಆಲಿಪ ಕಿವಿಯದು    
ಕನ್ನಡವೇ ನಿತ್ಯ     

ಎಲ್ಲಾದರು ಇರು ಎಂತಾದರು ಇರು    
ಎಂದೆಂದಿಗೂ ನೀ ಕನ್ನಡವಾಗಿರು     
ಹರಿಹರ ರಾಘವರಿಗೆ ಎರಗುವ ಮನ    
ಹಾಳಾಗಿಹ ಹಂಪೆಗೆ ಕೊರಗುವ ಮನ    
ಹರಿಹರ ರಾಘವರಿಗೆ ಎರಗುವ ಮನ    
ಹಾಳಾಗಿಹ ಹಂಪೆಗೆ ಕೊರಗುವ ಮನ    
ಬೆಳ್ಗೊಳ ಬೇಲೂರ್‍ಗಳ ನೆನೆಯುವ ಮನ    
ಮಲೆನಾಡಿಗೆ ಹೊಂಪುಳಿ ಹೋಗುವ ಮನ     

ಕಾಜಾಣಕೆ ಗಿಳಿ, ಕೋಗಿಲೆ ಇಂಪಿಗೆ    
ಮಲ್ಲಿಗೆ ಸಂಪಿಗೆ ಕೇದಗೆ ಸೊಂಪಿಗೆ    
ಕಾಜಾಣಕೆ ಗಿಳಿ, ಕೋಗಿಲೆ ಇಂಪಿಗೆ    
ಮಲ್ಲಿಗೆ ಸಂಪಿಗೆ ಕೇದಗೆ ಸೊಂಪಿಗೆ    
ಮಾವಿನ ಹೊಂಗೆಯ ತಳಿರಿನ ತಂಪಿಗೆ     
ರೋಮಾಂಚನಗೊಳುವಾ ತನು ಮನ    
ಕನ್ನಡವೇ ಸತ್ಯ, ಕನ್ನಡವೇ ನಿತ್ಯ     

ಎಲ್ಲಾದರು ಇರು ಎಂತಾದರು ಇರು    
ಎಂದೆಂದಿಗು ನೀ ಕನ್ನಡವಾಗಿರು    
ಎಲ್ಲಿದ್ದರೆ ಏನ್ ಎಂತಿದ್ದರೆ ಏನ್    
ಎಲ್ಲಿದ್ದರೆ ಏನ್ ಎಂತಿದ್ದರೆ ಏನ್    
ಎಂದೆಂದಿಗು ತಾನ್ ಕನ್ನಡವೇ ಸತ್ಯ ಕನ್ನಡವೇ ನಿತ್ಯ    

ಅನ್ಯವೆನಲದೆ ಮಿಥ್ಯ

ಕವಿ:- ಕುವೆಂಪು 
*******************************************************************************

-: ಹಚ್ಚೇವು ಕನ್ನಡದ ದೀಪ :-


ಹಚ್ಚೇವು ಕನ್ನಡದ ದೀಪ ಕರುನಾಡ ದೀಪ
ಸಿರಿ ನುಡಿಯ ದೀಪ ಒಲವೆತ್ತಿ ತೋರುವ ದೀಪ

ಬಹುದಿನಗಳಿಂದ ಮೈಮರೆವೆಯಿಂದ ಕೂಡಿರುವ ಕೊಳೆಯ ಕೊಚ್ಚೇವು
ಎಲ್ಲೆಲ್ಲಿ ಕನ್ನಡದ ಕಂಪು ಸೂಸಲು ಕರಣ ಚಾಚೇವು

ನಡುನಾಡೆ ಇರಲಿ ಗಡಿನಾಡೆ ಇರಲಿ ಕನ್ನಡದ ಕಳೆಯ ಕೆಚ್ಚೇವು
ಮರೇತೇವು  ಮರವ ತರದೇವು ಮನವ ಎರದೇವು ಒಲವ ಹಿರಿನೆನಪಾ
ನರನರವನೆಲ್ಲ ಹುರಿಗೊಳಿಸಿ ಹೊಸದು ಹಚ್ಚೇವು ಕನ್ನಡದ ದೀಪ

ಕಲ್ಪನೆಯ ಕಣ್ಣು ಹರಿವನಕೆ ಸಾಲು ದೀಪಗಳ ಬೆಳಕ ಬೀರೇವು
ಹಚ್ಚಿರುವ ದೀಪದಲಿ ತಾಯರೂಪ ಅಚ್ಚಳಿಯದಂತೆ ತೋರೇವು
ಒಡಲೊಳಲ ಕೆಚ್ಚಿನ ಕಿಡಿಗಳನ್ನು ಗಡಿನಾಡಿನಾಚೆ ತೋರೇವು
ಹಮ್ಮಿರಲು ಪ್ರೀತಿ ಎಲ್ಲಿಹುದು ಭೀತಿ ನಾಡೊಲವ ನೀತಿ ಹಿಡಿನೆನಪಾ
ಮನೆಮನೆಗಳಲ್ಲಿ ಮನಮನಗಳಲ್ಲಿ ಹಚ್ಚೇವು ಕನ್ನಡದ ದೀಪ

ನಮ್ಮವರು ಗಳಿಸಿದ ಹೆಸರುಳಿಸಲು ಎಲ್ಲಾರು ಒಂದುಗೂಡೇವು
ನಮ್ಮೆದೆಯ ಮಿಡಿಯುವೀ ಮಾತಿನಲ್ಲಿ ಮಾತೆಯನು ಪೂಜೆಮಾಡೇವು
ನಮ್ಮುಸಿರು ತೀಡುವೀ ನಾಡಿನಲ್ಲಿ ಮಾಂಗಲ್ಯಗೀತೆ ಹಾಡೇವು
ತೊರೆದೇವು ಮರುಳ ಕಡದೇವು ಇರುಳ ಪಡದೇವು ತಿರುಳ ಹಿರಿನೆನಪಾ
ಕರುಳೆಂಬ ಕುಡಿಗೆ ಮಿಂಚನ್ನೆ ಮುಡಿಸಿ ಹಚ್ಚೇವು ಕನ್ನಡದ ದೀಪ. 

ಕವಿ - ಡಿ. ಎಸ್. ಕರ್ಕಿ 

-: ಅನ್ವೇಷಣೆ :-


ಎಲ್ಲೋ ಹುಡುಕಿದ ಇಲ್ಲದ ದೇವರ
ಕಲ್ಲು ಮುಳ್ಳುಗಳ ಗುಡಿಯೊಳಗೆ,
ಇಲ್ಲೇ ಇರುವ ಪ್ರೀತಿ ಸ್ನೇಹಗಳ
ಗುರುತಿಸದಾದೆನು ನಮ್ಮೊಳಗೆ,

ಎಲ್ಲಿದೆ ಬಂಧನ, ಎಲ್ಲಿದೆ ನಂದನ
ಎಲ್ಲಾ ಇವೆ ಈ ನಮ್ಮೊಳಗೇ,
ಒಳಗಿನ ತಿಳಿಯನು ಕಲಕದೆ
ಇದ್ದರೆ ಅಮೃತದ ಸವಿಯು ನಾಲಿಗೆಗೆ,

ಹತ್ತಿರವಿದ್ದರೂ ದೂರ ನಿಲ್ಲುವೆವು,
ನಮ್ಮ ಹಮ್ಮಿನ ಕೋಟೆಯಲಿ,
ಎಷ್ಟು ಕಷ್ಟವೋ ಹೊಂದಿಕೆಯೆಂಬುದು
 ನಾಲ್ಕು ದಿನದ ಈ ಬದುಕಿನಲಿ

ಕವಿ - ಜಿ. ಎಸ್. ಶಿವರುದ್ರಪ್ಪ 


Thursday, December 12, 2013

ಮೊಗ್ಗಿನ ಮನಸು (2008)

ಮಳೆ ಬರುವ ಹಾಗಿದೆ

ಚಲನಚಿತ್ರ : ಮೊಗ್ಗಿನ ಮನಸು (2008) 
ಗಾಯಕರು : ಶ್ರೇಯಾ ಘೋಷಾಲ್ 
ನಟಿಸಿದವರು : ರಾಧಿಕಾ ಪಂಡಿತ್, ಯಶ್ ಮತ್ತು ಇತರರು 
ಸಂಗೀತ : ಮನೋ ಮೂರ್ತಿ 
ಸಾಹಿತ್ಯ : ಜಯಂತ್ ಕಾಯ್ಕಿಣಿ 
ನಿರ್ದೇಶಕರು : ಶಶಾಂಕ್ 


ಮಳೆ ಬರುವ ಹಾಗಿದೆ ಮನವೀಗ ಹಾಡಿದೆ
ಹೃದಯದಲ್ಲಿ ಕೂತು ನೀನು ನನ್ನ ಕೇಳಬೇಕಿದೆ
ಸವಿಗನಸು ಕಾಡಿದೆ ನಸುನಗುವು ಮೂಡಿದೆ
ಕಾಣದಂತೆ ನಿಂತು ನೀನು ನನ್ನ ನೋಡಬೇಕಿದೆ

ನಿನ್ನ ನಗುವಿನಲ್ಲೇ ನನ್ನ ನಸುಕು
ನಿನ್ನ ರೂಪವಿರಿಸಿ ಬಂದು ನಲಿದಾಡಿದೆ ಬೆಳಕು
ಗೆಳೆಯ ನೀನು ಬಳಿಯೇ ಅನುಕ್ಷಣವು ಬೇಕಾಗಿದೆ
ದಿನಕೆ ನೂರು ಬಾರಿ ನೀನು ಪ್ರೀತಿ ಹೇಳಬೇಕಿದೆ

ಎದೆಯ ಬಾಗಿಲಲ್ಲೇ ನಿನ್ನ ಸುಳಿವು
ಸಣ್ಣ ಆಸೆಯಲ್ಲೇ ನಮ್ಮ ಸಹವಾಸದ ನಲಿವು
ಇನಿಯ ನಮ್ಮ ಒಲವು ಮೆರವಣೆಗೆ ಹೊರಟಾಗಿದೆ
ಮರೆತ ಹಾಗೆ ಚೂರು ನಟಿಸಿ ನಿನ್ನ ಕಾಡಬೇಕಿದೆ....

********************************************************************************


ಐ ಲವ್ ಯೂ

ಸಾಹಿತ್ಯ: ಶಶಾಂಕ್ 
ಗಾಯನ: ಸೋನು ನಿಗಮ್  


I Love You......ಓ....
I Love You......

ನೂರಾರು ಪ್ರೀತಿ ಮಾತು
ನೂರಾರು ಸಾರಿ ಆಡಿ
ನೀನೇನೆ ಜೀವ ಎಂದು
ನೂರಾರು ಆಣೆ ಮಾಡಿ
ಕಾರಣವೇ ಹೇಳದೆ ಏಕೆ
ನನ್ನ ಬಿಟ್ಟು ಹೋದೆ
ನೀನೆಲ್ಲೇ ಹೋದರು ಏನು
ನೀನನ್ನ ಮರೆತರು ಏನು
ನೀನೇನೆ ಮಾಡಿದರೇನು
ನಿನ್ನನ್ನೇ ಮರೆಯುವೆಯೇನು
ನಿನ್ನಲ್ಲೇ ನಾನು ಅವಿತು ಕುಳಿತಿಲ್ಲವೇನು....

ನೀನು ಇರದೇ ಬದುಕುವುದನ್ನು ಕಲಿಯೋ ಸಾಹಸದಲ್ಲಿ
ನಿನ್ನ ನೆನಪೆ ಎದುರು ನಿಂತು ಸೋತಿಹೆ ನಾನು ಇಲ್ಲಿ
ಬಿಟ್ಟು ಹೋದ ಆ ಘಳಿಗೆ ನೆನೆದು ನೆನೆದು ಈ ಘಳಿಗೆ
ಜಾರುವ ಕಂಬನಿ ಜಾರಲು ಬಿಟ್ಟು ಸುಮ್ಮನೆ ಹಾಗೆ ಕೂತಿರುವೆ......

ನನ್ನೆದೆ ಗುಡಿಯ ನಂದಾದೀಪ ಆರಿಸಿ ಹೋದೆ ನೀನು
ಕತ್ತಲೆ ಕೋಣೆಯ ಒಳಗೂ ನಿನ್ನ ನೆನಪಲೆ ಬೆಂದೆ ನಾನು
ದೂರ ಹೋದೆ ನೀನೆಂದು ದೂರಲಾರೆ ನಿನ್ನೆಂದು
ನಿನ್ನ ನೆನಪ ಬಂಧನದಲ್ಲೇ ಸಾಯೋವರೆಗು ಕಾಯುವೆನು.....

*********************************************************************************

ಓ ನನ್ನ ಮನವೇ

ಸಾಹಿತ್ಯ: ವಿ. ನಾಗೇಂದ್ರ ಪ್ರಸಾದ್ 
ಗಾಯಕರು: ಸೋನು ನಿಗಮ್ 

ಓ ನನ್ನ ಮನವೇ ಏನಾದೆ ನೀನು
ಮಾತೆಲ್ಲ ಮರೆತು ಮೂಕಾದೆ ಏನು
ಈ ಕಂಗಳಲ್ಲಿ ನೀರಾದೆಯೇನು
ಈ ಒಂದು ನಿಜವೇ ಸುಳ್ಲಾಗದೆನು
ಎದೆ ಬಿರಿಯೋ ನೋವು ಭ್ರಮೆಯಾಗದೆನು
ಮುನ್ನಡೆದ ಸಮಯ ಹಿಂದಿರುಗದೇನು
 ಓ ನನ್ನ ಮನವೇ ಮಾತಾಡೆಯೇನು

ಸಾಗರದ ಒಡಲೇ ಬರಿದಾಯಿತೇಕೆ
ಇಬ್ಬನಿ ಹೊಳಪೆ ಚೂಪಯಿತೇಕೆ
ಮುಸ್ಸಂಜೆ ಬಾನು ರಂಗಿಲ್ಲವೇಕೆ
ತಂಗಾಳಿ ಸೋಕೆ ತಂಪಿಲ್ಲವೇಕೆ
ಚಂದಿರನ ಮೊಗದಿ ಕಂಬನಿ ಹನಿಯೇಕೆ
ಹೀಗೇಕೆ ಹೀಗೇಕೆ ಭಾವಗಳೇ
ಅದಲು ಬದಲಾಯಿತೇಕೆ
ಓ ನನ್ನ ಮನವೇ ಮಾತಾಡೆಯೇನು

ಕಣ್ಣಳತೆ ದೂರ ಬರಿ ಕವಲುದಾರಿ
ಎದೆಯಾಳದಲ್ಲಿ ತಲ್ಲಣದ ಭೇರಿ
ಆಸೆಗಳ ಮೇಲೆ ಬಿಸಿ ಉಸಿರ ಲಾವ
ಕನಸೇನೆ ಇರದೆ ಕುರುಡಾದ ಭಾವ
ಕತ್ತಲೆಯ ಕಾನನದಿ ನಿಂತಿರುವೆ
ನಾನೀಗ ನಾನೀಗ ನಾನೀಗ
ಹೊರಬರುವ ದಾರಿ ಹುಡುಕೋದು ಹೇಗೆ
 ಓ ನನ್ನ ಮನವೇ ಮಾತಾಡೆಯೇನು

ಓ ನನ್ನ ಮನವೇ ಏನಾದೆ ನೀನು
ಮಾತೆಲ್ಲ ಮರೆತು ಮೂಕಾದೆ ಏನು
ಈ ಕಂಗಳಲ್ಲಿ ನೀರಾದೆಯೇನು
ಈ ಒಂದು ನಿಜವೇ ಸುಳ್ಲಾಗದೇನು
ಎದೆ ಬಿರಿಯೋ ನೋವು ಭ್ರಮೆಯಾಗದೇನು
ಮುನ್ನಡೆದ ಸಮಯ ಹಿಂದಿರುಗದೇನು
ಓ ನನ್ನ ಮನವೇ ಮಾತಾಡೆಯೇನು

*********************************************************************************

ಗೆಳೆಯ ಬೇಕು

ಸಾಹಿತ್ಯ: ಜಯಂತ್ ಕಾಯ್ಕಿಣಿ 
ಗಾಯಕರು: ಕೆ. ಎಸ್. ಚಿತ್ರಾ, ಪ್ರಿಯಾ ಹಿಮೇಶ್ 


ಯಾರಿಗೋ ಏನೇನೋ ನೀಡುವ ದೇವನೆ,
ನನ್ನಯ ಮನವಿ ಸಲ್ಲಿಸಾಲೇನು..
ಬೆಚ್ಚನೆ ಭಾವ ಮೂಡಿಸುತಿರುವ,
ಮನಸಿನ ಆಸೆ ಕೇಳುವೆ ಏನು..
ನಾನು ಈಗ ಪ್ರೀತಿಯಲ್ಲಿ ಬೀಳಬೇಕು..
ನನಗೂ ಒಬ್ಬ ಗೆಳೆಯ ಬೇಕು..
ಇದ್ದಲ್ಲಿ ಇದ್ದಹಾಗೆ ಸದ್ದೇನೆ ಆಗದಂತೆ
ಹೃದಯ ಕದ್ದು ಹೋಗಬೇಕು..
ನಾನು ಈಗ ಪ್ರೀತಿಯಲ್ಲಿ ಬೀಳಬೇಕು..
ನನಗೂ ಒಬ್ಬ ಗೆಳೆಯ ಬೇಕು.. 

ನೆನೆದಾಗೆಲ್ಲ ಹಾಗೇನೇ ಓದಿ ಬರಬೇಕು..
ಕಾಡಾಗೆಲ್ಲ ಮುತ್ತಿನ ಗಂಧ ತೆರಬೇಕು..
ಮತ್ತೆ ಮತ್ತೆ ಬರಬೇಕು ಹುಚ್ಚು ಸಂದೇಶ..
ಕದ್ದು ಮುಚ್ಚಿ ಓದೋಕೆ ಹೆಚ್ಚಿ ಸಂತೋಷ..
ಮುನಿಸು ಬಂದಾಗೆಲ್ಲ ಅವನೇ ಕ್ಷಮಿಸು ಅನಬೇಕು..
ಚಂದಿರನ ತಟ್ಟೆಯಲ್ಲಿ ಸೇರಿ ತಿನಬೇಕು..
ಎಲ್ಲಾರು ಜಾತ್ರೆಯಲ್ಲಿ ತೇರನ್ನೇ ನೋಡುವಾಗ,
ಅವನು ನನ್ನೇ ನೋಡಬೇಕು.. ಕಾಡುವಂತ ಗೆಳೆಯ ಬೇಕು..
ಎಂದು ನನ್ನ, ಹಿಂದೆ ಮುಂದೆ ಸುಲಿಯಬೇಕು..
ನಾನು ಈಗ ಪ್ರೀತಿಯಲ್ಲಿ ಬೀಳಬೇಕು..
ನನಗೂ ಒಬ್ಬ ಗೆಳೆಯ ಬೇಕು.. 

ಇದ್ದಹಾಗೆ ನೀ ನನಗೆ ಚಂದಾ ಅನಬೇಕು..
ಯಾಕೋ ಬೇಜಾರಾದಾಗ ಸುಮ್ಮನಿರಬೇಕು..
ಮುದ್ದು ನಗೆಯ ಹೂವನ್ನು ಮೂಡಿಸಬರಬೇಕು..
ಎಲ್ಲೋ ಮರೆತ ಹಾಡನ್ನು ಹೆಕ್ಕಿ ತರಬೇಕು..
ಮಳೆಯ ತೀರದಲ್ಲಿ ಅವನು ನನಗೆ ಕಾಧಾಂತೆ..
ಕನ್ನಡಿಯಲ್ಲಿ ಬೆನ್ನ ಹಿಂದೆ ಅವನೇ ನಿಂತಂತೆ..
ಗುಟ್ಟಾಗಿ ಹೃದಯದಲ್ಲಿ ಪ್ರೀತಿಯ
ಖಾತೆಯೊಂದ ಜಂಟಿಯಾಗಿ ತೆರೆಯಬೇಕು..
ದೇವರಂಥ ಗೆಳೆಯ ಬೇಕು..
ಹೇಳದೆನೆ ಅವನಿಗೆಲ್ಲ ತಿಳಿಯಬೇಕು.. 

ಯಾರಿಗೋ ಏನೇನೋ ನೀಡುವ ದೇವನೆ,
ನನ್ನಯ ಮನವಿ ಸಲ್ಲಿಸಾಲೇನು..
ಬೆಚ್ಚನೆ ಭಾವ ಮೂಡಿಸುತಿರುವ,
ಮನಸಿನ ಆಸೆ ಕೇಳುವೆ ಏನು..
ನಾನು ಈಗ ಪ್ರೀತಿಯಲ್ಲಿ ಬೀಳಬೇಕು..
ನನಗೂ ಒಬ್ಬ ಗೆಳೆಯ ಬೇಕು..
ಇದ್ದಲ್ಲಿ ಇದ್ದಹಾಗೆ ಸದ್ದೇನೆ ಆಗದಂತೆ
ಹೃದಯ ಕದ್ದು ಹೋಗಬೇಕು..
ನಾನು ಈಗ ಪ್ರೀತಿಯಲ್ಲಿ ಬೀಳಬೇಕು..
ನನಗೂ ಒಬ್ಬ ಗೆಳೆಯ ಬೇಕು..


*********************************************************************************

ಅಮೃತಧಾರೆ (2005)





ಚಲನಚಿತ್ರ : ಅಮೃತಧಾರೆ (2005)
ನಿರ್ದೇಶಕರು : ನಾಗತಿಹಳ್ಳಿ ಚಂದ್ರಶೇಖರ್ 
ಸಾಹಿತ್ಯ: ನಾಗತಿಹಳ್ಳಿ ಚಂದ್ರಶೇಖರ್ 
ಸಂಗೀತ: ಮನೋಮೂರ್ತಿ 
 ಗಾಯಕರು : ಹೆಚ್. ಜಿ. ಚೈತ್ರಾ 
ನಟಿಸಿದವರು : ಧ್ಯಾನ್, ರಮ್ಯಾ


ಹುಡುಗ ಹುಡುಗ ಓ ನನ್ನ ಮುದ್ದಿನ ಹುಡುಗ
ಮುದ್ ಮಾಡೋಕು ಕಂಜೂಸು ಬುದ್ಧಿ ಬೇಕ?
ಹನಿಮೂನಲ್ಲು ಧ್ಯಾನ ಏಕಾಂತದಲ್ಲೂ ಮೌನ
ಏನು ಚೆಂದ ಹತ್ತಿರ ಬಾ ಹುಡುಗಾ....

ಮುತ್ತಿನ ಹೊದಿಕೆ ಸುತ್ತಲು ಹೊದಿಸಿ
ಅಪ್ಪಿಕೋ ಬಾರೋ ನನ್ನನ್ನ
ಚುಮು ಚುಮು ಚಳಿಗೆ ಬಿಸಿ ಬಿಸಿ ಬಯಕೆ
ಬೆಚ್ಚಗೆ ಇರಿಸೋ ನನ್ನನ್ನ
ಕತ್ತಲೆಯೊಳಗೆ ಕಣ್ಣಾಮುಚ್ಚಾಲೆ
ಅಪ್ಪಿಕೋ ಬಾರೋ ನನ್ನನ್ನ
ಉರುಳಿಸು ಬಾರೋ ಕೆರಳಿಸು ಬಾರೋ
ನರಳಿಸು ಬಾರೋ ನನ್ನನ್ನ...

ಶೋ ಮಿ ಲವ್, ಶೋ ಮಿ ಲೈಫ್,
ಶೋ ಮಿ ಎವರಿಥಿಂಗ್ ಇನ್ ಲೈಫ್
ಟೇಕ್ ಮಿ ಆನ್ ಅ ಹಾಲಿಡೇ,
ಶೋ ಮಿ ಸಮಥಿಂಗ್ ಎವರಿಡೇ
ಮೇಕ್ ಮಿ ಸ್ಮೈಲ್ ಅಂಡ್ ಮೇಕ್ ಮಿ ಸ್ಮೈಲ್,
ಮೇಕ್ ಮಿ ಸ್ಮೈಲ್ ಫಾರ್ ಅ ವ್ಹೈಲ್
ಮೇಕ್ ಮೈ ಡ್ರೀಮ್ಸ್ ಕಮ್ ಟು ಲೈಫ್,
ಶೋ ಮಿ ಹೌ ಯು ಲವ್ ಯುವರ್ ವೈಫ್...

ಪೋಲಿಯ ಮಾತು ಯಾರಿಗೆ ಬೇಕು
ಈ ಕ್ಷಣ ಪ್ರೀತಿಯ ಮಾಡೋಣ
ಮಂಚಕೆ ಹಾರಿ ಮಗುವನು ಹೀರಿ
ದಾಹವ ನೀಗಿ ಸುಖಿಸೋಣ
ಊರನು ಬಿಟ್ಟು ಊರಿಗೆ ಬಂದು
ಪ್ರೀತಿಯ ತೇರನು ಎಳೆಯೋಣ
ಮಧುವೆ  ಆಯ್ತು ಮನವೊಂದಾಯ್ತು
ಮುದ್ದಿನ ಮಗುವನು ಪಡೆಯೋಣ....

ಹುಡುಗ ಹುಡುಗ ಓ ನನ್ನ ಮುದ್ದಿನ ಹುಡುಗ
ಮುದ್ದ್ ಮಾಡೋಕು ಕಂಜೂಸು ಬುದ್ಧಿ ಬೇಕಾ...

********************************************************************************

ನೀ ಅಮೃತಧಾರೆ

ಸಾಹಿತ್ಯ: ನಾಗತಿಹಳ್ಳಿ ಚಂದ್ರಶೇಖರ್ 
ಗಾಯನ: ಹರೀಶ್ ರಾಘವೇಂದ್ರ, ಸುಪ್ರಿಯ ಆಚಾರ್ಯ 

ನೀ ಅಮೃತಧಾರೆ ಕೋಟಿ ಜನುಮ ಜೊತೆಗಾತಿ
ನೀ ಅಮೃತಧಾರೆ ಇಹಕು ಪರಕು ಸಂಗಾತಿ
ನೀ ಇಲ್ಲವಾದರೆ ನಾ ಹೇಗೆ ಬಾಳಲೀ?....

ಹೇ! ಪ್ರೀತಿ ಹುಡುಗ ಕೋಟಿ ಜನುಮ ಜೊತೆಗಾರ
ಹೇ! ಪ್ರೀತಿ ಹುಡುಗ ನನ್ನ ಬಾಳ ಕಥೆಗಾರ
ನೀ ಇಲ್ಲವಾದರೆ ನಾ ಹೇಗೆ ಬಾಳಲೀ?
ಹೇ! ಪ್ರೀತಿ ಹುಡುಗಾ...

ನೆನಪಿದೆಯೆ ಮೊದಲ ನೋಟ?
ನೆನಪಿದೆಯೆ ಮೊದಲ ಸ್ಪರ್ಶ?
ನೆನಪಿದೆಯೆ ಮತ್ತನು ತಂದ
ಆ ಮೊದಲ ಚುಂಬನಾ?
ನೆನಪಿದೆಯೆ ಮೊದಲ ಕನಸು?
ನೆನಪಿದೆಯೆ ಮೊದಲ ಮುನಿಸೂ?
ನೆನಪಿದೆಯೆ ಕಂಬನಿ ತುಂಬಿ-
ನೀನಿಟ್ಟ ಸಾಂತ್ವನ?
ನೀ ಇಲ್ಲವಾದರೆ ನಾ ಹೇಗೆ ಬಾಳಲೀ?

ನೀ ಅಮೃತಧಾರೆ, ಕೋಟಿ ಜನುಮ ಜೊತೆಗಾತೀ
ನೀ ಅಮೃತಧಾರೆ, ಇಹಕು ಪರಕು ಸಂಗಾತಿ
ನೀ ಅಮೃತಧಾರೆ ..

ನೆನಪಿದೆಯೆ ಮೊದಲ ಸರಸ?
ನೆನಪಿದೆಯೆ ಮೊದಲ ವಿರಸಾ..?
ನೆನಪಿದೆಯೆ ಮೊದಲು ತಂದ ಸಂಭ್ರಮದ ಕಾಣಿಕೆ?
ನೆನಪಿದೆಯೆ ಮೊದಲ ಕವನ?
ನೆನಪಿದೆಯೆ ಮೊದಲ ಪಯಣಾ?
ನೆನಪಿದೆಯೆ ಮೊದಲ ದಿನದ ಭರವಸೆಯ ಆಸರೆ?
ನೀ ಇಲ್ಲವಾದರೆ ನಾ ಹೆಗೆ ಬಾಳಲೀ?

ಹೇ! ಪ್ರೀತಿ ಹುಡುಗ ಕೋಟಿ ಜನುಮ ಜೊತೆಗಾರ
ನೀ ಅಮೃತಧಾರೆ ಇಹಕು ಪರಕು ಸಂಗಾತಿ
ನೀ ಇಲ್ಲವಾದರೆ ನಾ ಹೇಗೆ ಬಾಳಲೀ?
ನೀ ಅಮೃತಧಾರೆ!

*********************************************************************************

ಗೆಳತಿ ಗೆಳತಿ

ಸಾಹಿತ್ಯ: ನಾಗತಿಹಳ್ಳಿ ಚಂದ್ರಶೇಖರ್
ಗಾಯನ: ರಾಜೇಶ್ ಕೃಷ್ಣನ್, ನಂದಿತಾ


ಗೆಳತಿ ಗೆಳತಿ
ಕ್ಷೇಮವೆ? ಸೌಖ್ಯವೆ?
ಬಾಳು ಪೂರ್ಣವಾಯಿತೆ?
ಜೀವ ಧನ್ಯವಾಯಿತೆ?

ಗೆಳೆಯ ಗೆಳೆಯ
ಬಾಳಿನ ಯಾತ್ರೆಯು..
ದೂರ ದಾರಿಗಂತಕೆ
ದಿವ್ಯವಾಗಿ ಸಾಗಲಿ ಗೆಳೆಯ!
ಜೀವವನ್ನು ತೇಯುವೆ!
ಹೂವಿನಂತೆ ಹಾಸುವೆ!
ನೋಯದಂತೆ ಕಾಯುವೆ!
ನಾಳೆಯೆಂಬ ಮಿಥ್ಯಯೊ
ಕಳೆದುದೂ ಚರಿತ್ರೆಯೊ
ಪ್ರೀತಿಯೊಂದೆ ಸತ್ಯವೋ
ಗೆಳತಿ ಗೆಳತಿ
 ಕ್ಷೇಮವೆೆ? ಸೌಖ್ಯವೆ?
ಬಾಳು ಪೂರ್ಣವಾಯಿತೆ?
ಜೀವ ಧನ್ಯವಾಯಿತೆ?
ಗೆಳೆಯ ಗೆಳೆಯ
ಬಾಳಿನ ಯಾತ್ರೆಯು..
ದೂರ ದಾರಿಗಂತಕೆ
ದಿವ್ಯವಾಗಿ ಸಾಗಲಿ ಗೆಳೆಯಾ!

********************************************************************************

ಗಿಳಿಯು ಪಂಜರದೊಳಿಲ್ಲ

ಸಾಹಿತ್ಯ: ಶ್ರೀ ಪುರಂದರದಾಸರು 
ಗಾಯನ: ಸಿ. ಅಶ್ವಥ್ 


ಗಿಳಿಯು ಪಂಜರದೊಳಿಲ್ಲ ರಾಮ ರಾಮ! |೨|
ಬರಿದೆ ಪಂಜರವಾಯಿತಲ್ಲ ರಾಮ ರಾಮ! |೨|
ಕಿಳಿಯು ಪಂಜರದೊಳಿಲ್ಲ ರಾಮ ರಾಮ! |೨|
ಅತ್ತ ಕೇಳೆ ಎನ್ನ ಮಾತು ಚಿಕ್ಕದೊಂದು ಗಿಳಿಯ ಸಾಕಿ
ಅತ್ತ ನಾನಿಲ್ಲದ ವೇಳೆ ಬೆಕ್ಕು ಕೊಂಡು ಹೋಯಿತಯ್ಯೋ |೨| ರಾಮ! ರಾಮಾ

ಗಿಳಿಯು ಪಂಜರ ದೊಳಿಲ್ಲ ರಾಮ ರಾಮ
ಅ ಅ ಅ ಅ ಅ ಆ
ಒಂಬತ್ತು ಬಾಗಿಲ ಮನೆಯಲ್ಲಿ ತುಂಬಿದ ಸಂದಣಿ ಇರಲು
ಕಂಬ ಮುರಿದು ಡಿಂಬಬದ್ದು ಅಂಬರಕ್ಕೆ ಹಾರಿತಯ್ಯೋ |೨|
ರಾಮ! ರಾಮಾ
ಗಿಳಿಯು ಪಂಜರ ದೊಳಿಲ್ಲಾ
ಅ ಅ ಅ ಅ ಅ ಅ ಅ ಆ

********************************************************************************

ಭೂಮಿಯೆ ಹಾಸಿಗೆ

ಸಾಹಿತ್ಯ: ನಾಗತಿಹಳ್ಳಿ ಚಂದ್ರಶೇಖರ್ 
ಗಾಯನ: ರಾಮ್ ಪ್ರಸಾದ್, ನಂದಿತಾ  


ಭೂಮಿಯೆ ಹಾಸಿಗೆ  ಗಗನವೆ ಹೊದಿಕೆ
ಕಣ್ತುಂಬ ನಿದ್ರೆ ಬಡವನಿಗೆ
ಮೆತ್ತೆನೆ ಹಾಸಿಗೆ ಸುಖದ ಸುಪ್ಪತ್ತಿಗೆ
ಬಾರದೊ ನಿದ್ರೆ ಧನಿಕನಿಗೆ |೨|

ಏಳು ಶ್ರೀ ಸಾಮಾನ್ಯ ಏಳಯ್ಯ ಬೆಳಗಾಯಿತು
ಏಳು ನೀ ಸದ್‍ಗೃಹಿಣಿ ಏಳಮ್ಮ ಬೆಳಗಾಯಿತು
ಹಾಲು, ಪೇಪರ್ ನವರು ನಿನ್ನ ದರುಶನಕೆ ಕಾದಿಹರು
ಸ್ಕೂಲು ವ್ಯಾನು ಬಂದು ನಿನ್ನ ಕಂದನಿಗೆ
ಕಾಯ್ದಿಹುದು ಬೆಳಗಿನಾಟಕೆಂದು!

ನಿಂಗೆ ಥೇಟರ್ ತೆಗೆದಿಹುದು
ದಿನ ಭವಿಷ್ಯದಲ್ಲಿ ನಿನಗೆ ಧನಲಾಭ ಬರದಿಹುದು
ಏಳು ಶ್ರೀ ಸಾಮಾನ್ಯಾ ಎದ್ದೇಳು!

                                                                                                   ಭೂಮಿಯೆ ಹಾಸಿಗೆ ಗಗನವೆ ಹೊದಿಕೆ
ಕಣ್ತುಂಬ ನಿದ್ರೆ ಬಡವನಿಗೆ
ಮೆತ್ತೆನೆ ಹಾಸಿಗೆ ಸುಖದ ಸುಪ್ಪತ್ತಿಗೆ
ಬಾರದೊ ನಿದ್ರೆ ದನಿಕನಿಗೆ

ಕನ್ನಡಾಂಬೆ ಸುಪ್ರಜಾ ನೀರೆ
ಸೂರ್ಯ ಬಂದಾಯ್ತು ಕಣ್ಣು ಬಿಡು

ಬೆಡ್ ಕಾಪಿ ಕುಡಿದಾಯ್ತೆ
ವಾಕಿಂಗು ಮುಗಿಸುಬಿಡು

ಉದ್ದುದ ಕ್ಯೂ ನಿಂತು ಲೈಟ್ ಬಿಲ್ಲು ಕಟ್ಟಿಬಿಡು
ಬಸ್ಸು .... ಅಮೂಲ್ಯ ವೋಟನ್ನು ಹಾಕಿಬಿಡು

ಭೂಮಿಯೆ ಹಾಸಿಗೆ ಗಗನವೆ ಹೊದಿಕೆ
ಕಣ್ತುಂಬ ನಿದ್ರೆ ಬಡವನಿಗೆ
ಮೆತ್ತೆನೆ ಹಾಸಿಗೆ ಸುಖದ ಸುಪ್ಪತ್ತಿಗೆ
ಬಾರದೊ ನಿದ್ರೆ ದನಿಕನಿಗೆ |೨|

********************************************************************************

ಮನೆ ಕಟ್ಟಿ ನೋಡು

ಸಾಹಿತ್ಯ: ನಾಗತಿಹಳ್ಳಿ ಚಂದ್ರಶೇಖರ್ 
ಗಾಯನ: ರಾಜು ಅನಂತಸ್ವಾಮಿ, ನಂದಿತಾ


ಮನೆ ಕಟ್ಟಿ ನೋಡು ಒಮ್ಮೆ ಮನೆ ಕಟ್ಟಿ ನೋಡು
ಮನೆ ಕಟ್ಟಿ ನೋಡು ಒಮ್ಮೆ ಮನೆ ಕಟ್ಟಿ ನೋಡು |ಕೋರಸ್|
ಮದುವೆ ಮಾಡಿ ನೋಡು ಒಂದು ಮದುವೆ ಮಾಡಿ ನೋಡು
ಮನೆ ಕಟ್ಟಿ ನೋಡು ಒಮ್ಮೆ ಮನೆ ಕಟ್ಟಿ ನೋಡು |ಕೋರಸ್|
ಮದುವೆ ಮಾಡಿ ನೋಡು ಒಂದು ಮದುವೆ ಮಾಡಿ ನೋಡು
ಮದುವೆಯಾಗಿ ಮನೆಕಟ್ಟೋದು ಎಲ್ಲಾ ಜನರ ಪಾಡು!

ಮನೆ ಕಟ್ಟಿ ನೋಡು ಒಮ್ಮೆ ಮನೆ ಕಟ್ಟಿ ನೋಡು
ಮಹಾನಗರದಲ್ಲಿ ಒಂದು ಮನೆ ಕಟ್ಟಿ ನೋಡು

ತುಂಡು ಭೂಮಿಗ್ ಇಲ್ಲಿ ಚಿನ್ನಕ್ಕಿಂತ ರೇಟು ರೇಟು!
ಗಲ್ಲಿ ಗಲ್ಲಿಗೊಂದು ರಿಯಲ್ ಎಸ್ಟೇಟು
ತುಂಡು ಭೂಮಿಗ್ ಇಲ್ಲಿ ಚಿನ್ನಕ್ಕಿಂತ ರೇಟು
ಗಲ್ಲಿ ಗಲ್ಲಿಗೊಂದು ರಿಯಲ್ ಎಸ್ಟೇಟು
ಲಕ್ಷ ಕೊಟ್ಟ್ರು ಇಲ್ಲ ಥರ್ಟಿ-ಫಾರ್ಟಿ ಸೈಟೂ
ತೂರಿಬಂತು ಅಂಡರ್ವರ್ಲ್ಡ್ ನ ಗುಂಡಿನೇಟು!

ಮನೆ ಕಟ್ಟಿ ನೋಡು ಒಮ್ಮೆ ಮನೆ ಕಟ್ಟಿ ನೋಡು
ಮನೆ ಕಟ್ಟಿ ನೋಡು ಒಮ್ಮೆ ಮನೆ ಕಟ್ಟಿ ನೋಡು |ಕೋರಸ್|
ಮಹಾನಗರದಲ್ಲಿ ಒಂದು ಮನೆ ಕಟ್ಟಿ ನೋಡು

ಸಾಲ ಸೋಲಾ ಮಾಡಿ ಸೈಟು ಕೊಳ್ಳುತ್ತಾರೆ
ಕಷ್ಟ ಪಟ್ಟು ಕಂತು ಗಿಂತು ಕಟ್ಟುತ್ತಾರೆ |೨|
ನಕಲಿ ಕಾಗ್ದಾ ನಂಬಿ ಮೋಸ ಹೋಗುತ್ತಾರೆ
ನೆತ್ತಿಮೇಲೆ ಸೂರಿಗಾಗಿ ಹುಡ್ಕುತ್ತಾರೆ

ಮನೆ ಕಟ್ಟಿ ನೋಡು ಒಮ್ಮೆ ಮನೆ ಕಟ್ಟಿ ನೋಡು
ಮನೆ ಕಟ್ಟಿ ನೋಡು ಒಮ್ಮೆ ಮನೆ ಕಟ್ಟಿ ನೋಡು |ಕೋರಸ್|
ಮಹಾನಗರದಲ್ಲಿ ಒಂದು ಮನೆ ಕಟ್ಟಿ ನೋಡು

ಮಿಡ್ಲು-ಕ್ಲ್ಯಾಸು ಮನೆ ಕಟ್ಟೊದು ಭಾರಿ ಕಷ್ಟ ಕಷ್ಟ!
ಕಬ್ಣ ಸೀಮೆಂಟ್ ಕಳ್ಳ ಲೆಕ್ಕ ಬರಿ ನಷ್ಟ
ಮಿಡ್ಲು-ಕ್ಲ್ಯಾಸು ಮನೆ ಕಟ್ಟೊದು ಭಾರಿ ಕಷ್ಟ
ಕಬ್ಣ ಸೀಮೆಂಟ್ ಕಳ್ಳ ಲೆಕ್ಕ ಬರಿ ನಷ್ಟ
ಜಲ್ಲಿ ಮರಳು ನಲ್ಲಿ ಸ್ವಿಚ್ಚು ತರ್ಲೇಬೇಕು
ಕಿಟ್ಕಿ ಬಾಗ್ಲು ನಿಲ್ಸೋಹೊತ್ಗೆ ಸಾಕೋ ಸಾಕು!

ಮನೆ ಕಟ್ಟಿ ನೋಡು ಒಮ್ಮೆ ಮನೆ ಕಟ್ಟಿ ನೋಡು
ಮನೆ ಕಟ್ಟಿ ನೋಡು ಒಮ್ಮೆ ಮನೆ ಕಟ್ಟಿ ನೋಡು |ಕೋರಸ್|
ಮದುವೆ ಮಾಡಿ ನೋಡು ಒಂದು ಮದುವೆ ಮಾಡಿ ನೋಡು
ಮನೆ ಕಟ್ಟಿ ನೋಡು ಒಮ್ಮೆ ಮನೆ ಕಟ್ಟಿ ನೋಡು |ಕೋರಸ್|
ಮದುವೆ ಮಾಡಿ ನೋಡು ಒಂದುಮದುವೆ ಮಾಡಿ ನೋಡು
ಮದುವೆಯಾಗಿ ಮನೆಕಟ್ಟೋದು ಎಲ್ಲಾ ಜನರ ಪಾಡು!
ಮನೆ ಕಟ್ಟಿ ನೋಡು ಒಮ್ಮೆ ಮನೆ ಕಟ್ಟಿ ನೋಡು
ಮಹಾನಗರದಲ್ಲಿ ಒಂದು ಮನೆ ಕಟ್ಟಿ ನೋಡೂ!

********************************************************************************

ನಾಗರಹಾವು (1972)


ಕನ್ನಡ ನಾಡಿನ ವೀರರಮಣಿಯ

ಚಲನಚಿತ್ರ: ನಾಗರಹಾವು (1972) 
ಸಾಹಿತ್ಯ: ''ಸಾಹಿತ್ಯರತ್ನ'' ಚಿ॥ ಉದಯಶಂಕರ್.
ಸಂಗೀತ: ವಿಜಯ್ ಭಾಸ್ಕರ್ 
ಗಾಯಕರು: ಡಾ॥ ಪಿ. ಬಿ. ಶ್ರೀನಿವಾಸ್.
ನಿರ್ದೇಶನ: ಪುಟ್ಟಣ್ಣ ಕಣಗಾಲ್ 
ನಟನೆ: ವಿಷ್ಣುವರ್ಧನ್, ಆರತಿ, ಅಂಬರೀಷ್, ಕೆ. ಎಸ್. ಅಶ್ವಥ್ 


ಕನ್ನಡ ನಾಡಿನ ವೀರರಮಣಿಯ,
ಗಂಡು ಭೂಮಿಯ ವೀರ ನಾರಿಯ,
ಚರಿತೆಯ ನಾನು ಹಾಡುವೆ...
ಕನ್ನಡ ನಾಡಿನ ವೀರರಮಣಿಯ,
ಗಂಡು ಭೂಮಿಯ ವೀರ ನಾರಿಯ,
ಚರಿತೆಯ ನಾನು ಹಾಡುವೆ...

ಚಿತ್ರದುರ್ಗದ ಕಲ್ಲಿನ ಕೋಟೆ,
ಸಿಡಿಲಿಗೂ ಬೆಚ್ಚದ ಉಕ್ಕಿನ ಕೋಟೆ...
ಚಿತ್ರದುರ್ಗದ ಕಲ್ಲಿನ ಕೋಟೆ,
ಸಿಡಿಲಿಗೂ ಬೆಚ್ಚದ ಉಕ್ಕಿನ ಕೋಟೆ...
ಮದಿಸಿದ ಕರಿಯ ಮದವಡಗಿಸಿದ,
ಮದಕರಿ ನಾಯಕರಾಳಿದ ಕೋಟೆ...
ಪುಣ್ಯ ಭೂಮಿಯು ಈ ಬೀಡು,
ಸಿದ್ದರು ಹರಸಿದ ಸಿರಿನಾಡು...

ಕನ್ನಡ ನಾಡಿನ ವೀರರಮಣಿಯ,
ಗಂಡು ಭೂಮಿಯ ವೀರ ನಾರಿಯ,
ಚರಿತೆಯ ನಾನು ಹಾಡುವೆ....

ವೀರಮದಕರಿ ಆಳುತಲಿರಲು,
ಹೈದಾರಾಲಿಯು ಯುಧ್ಧಕೆ ಬರಲು...
ಕೋಟೆ ಜನಗಳ ರಕ್ಷಿಸುತಿರಲು,
ಸತತ ದಾಳಿಯು ವ್ಯರ್ಥವಾಗಲು...
ವ್ಯೆರಿ ಚಿಂತೆಯಲಿ ಬಸವಳಿದ,
ದಾರಿಕಾಣದೆ ಮಂಕಾದ...

ಕನ್ನಡ ನಾಡಿನ ವೀರರಮಣಿಯ,
ಗಂಡು ಭೂಮಿಯ ವೀರ ನಾರಿಯ,
ಚರಿತೆಯ ನಾನು ಹಾಡುವೆ...

ಗೂಢಚಾರರು ಅಲೆದು ಬಂದರು,
ಹೈದಾರಾಲಿಗೆ ವಿಷಯ ತಂದರು...
ಚಿತ್ರದುರ್ಗದ ಕೋಟೆಯಲಿ,
ವಾಯುವ್ಯ ದಿಕ್ಕಿನೆಡೆ ನೋಡು ಎಂದರು...
ಕಳ್ಳಗಂಡಿಯ ತೋರಿದರು, ಲಗ್ಗೆ ಹತ್ತಲು ಹೇಳಿದರು....

ಕನ್ನಡ ನಾಡಿನ ವೀರರಮಣಿಯ,
ಗಂಡು ಭೂಮಿಯ ವೀರ ನಾರಿಯ,
ಚರಿತೆಯ ನಾನು ಹಾಡುವೆ...

( ಓ ಸರ್ದಾರ.......)

ಕೈಗೆ ಸಿಕ್ಕಿದ ಓನಕೆ ಹಿಡಿದಳು,
ವೀರ ಗಜ್ಜೇಯ ಹಾಕಿ ನಿಂದಳು...
ದುರ್ಗಿಯನ್ನು ಮನದಲ್ಲಿ ನೆನೆದಳು,
ಕಾಳಿಯಂತೆ ಬಲಿಗಾಗಿ ಕಾದಳು...
ಯಾರವಳು ಯಾರವಳು,  ವೀರ ವನಿತೆ ಆ ಓಬವ್ವಾ...
ದುರ್ಗವು ಮರೆಯದ ಓಬವ್ವಾ....

ಕನ್ನಡ ನಾಡಿನ ವೀರರಮಣಿಯ,
ಗಂಡು ಭೂಮಿಯ ವೀರ ನಾರಿಯ,
ಚರಿತೆಯ ನಾನು ಹಾಡುವೆ...

ತೆವಳುತ ಒಳಗೆ ಬರುತಿದೆ ವೈರೀ,
ಓನಕೆಯ ಬೀಸಿ ಕೊಂದಳು ನಾರಿ...
ಸತ್ತವನನ್ನು ಎಳೆದು ಹಾಕುತಾ,
ಮತ್ತೇ ನಿಂತಳು ಹಲ್ಲು ಮಸೆಯುತಾ...
ವೈರಿ ರುಂಡ ಚೆಂಡಾಡಿದಳು,
ರಕುತದ ಕೋಡಿ ಹರಿಸಿದಳು....



ಕನ್ನಡ ನಾಡಿನ ವೀರರಮಣಿಯ,
ಗಂಡು ಭೂಮಿಯ ವೀರ ನಾರಿಯ,
ಚರಿತೆಯ ನಾನು ಹಾಡುವೆ...

ಸತಿಯ ಹುಡುಕುತ ಕಾವಲಿನವನು,
ಗುಪ್ತಧ್ವಾರದ ಬಳಿಗೆ ಬಂದನೂ....
ಮಾತು ಬರದೆ ಬೆಚ್ಚಿ ನಿಂತನೂ,
ಹೆಣದ ರಾಶಿಯ ಬಳಿಯ ಕಂಡನು....
ರಣಚಂಡಿ ಅವತಾರವನು,
ಕೋಟೆ ಸಲುಹಿದ ತಾಯಿಯನು...

( ಹೈದರಾಲಿಯ ಸೈನ್ಯ ನಮ್ಮ  ಕೋಟೆಯನ್ನು ಮುತ್ತಿದೆ,
ಹೋಗಿ ರಣಕಹಳೆಯನ್ನು ಊದಿ...)

ರಣ ಕಹಳೆಯನು ಊದುತಲಿರಲೂ,
ಸಾಗರದಂತೆ ಸೈನ್ಯ ನುಗ್ಗಲೂ...
ವೈರಿಪಡೆಯು ನಿಷೇಶವಾಗಲೂ,
ಕಾಳಗದಲ್ಲಿ ಜಯವನು ತರಲೂ....
ಅಮರಳಾದಳು ಓಬವ್ವ.. ಅಮರಳಾದಳು ಓಬವ್ವ...

********************************************************************************

ಕರ್ಪೂರದ ಬೊಂಬೆ

ಸಾಹಿತ್ಯ: ಆರ್. ಎನ್. ಜಯಗೋಪಾಲ್ 
ಗಾಯನ: ಪಿ.ಸುಶೀಲಾ 


ಕರ್ಪೂರದ ಬೊಂಬೆ ನಾನು
ಮಿಂಚಂತೆ ಬಳಿ ಬಂದೆ ನೀನು
ನಿನ್ನ ಪ್ರೇಮ ಜ್ವಾಲೆ ಸೋಕಿ ನನ್ನ ಮೇಲೆ
ಕರಗಿ ಕರಗಿ ನೀರಾದೆ ನಾನು

ಹೂವಲಿ ಬೆರೆತ ಗಂಧದ ರೀತಿ
ಶ್ರುತಿಯಲಿ ಕಲೆತ ನಾದದ ರೀತಿ
ದೇಹದಿ ಪ್ರಾಣವು ಕಲೆತಿಹ ರೀತಿ
ನಿನ್ನಲೇ ಬೆರೆತೆ ನನ್ನನೇ ಮರೆತೆ

ಕರ್ಪೂರದ ಬೊಂಬೆ ನಾನು

ದೇವನ ಸೇರಿದ ಹೂವದು ಧನ್ಯ
ಪೂಜೆಯ ಮಾಡಿದ ಕೈಗಳೆ ಧನ್ಯ
ಒಲವನು ಅರಿತ ಹೃದಯವೇ ಧನ್ಯ
ನಿನ್ನನಾ ಪಡೆದೆ ಧನ್ಯ ನಾ ನಿಜದಿ

ಕರ್ಪೂರದ ಬೊಂಬೆ

*******************************************************************************

ಬಾರೆ ......ಬಾರೆ

ಸಾಹಿತ್ಯ: ವಿಜಯ ನಾರಸಿಂಹ 
ಗಾಯನ: ಪಿ. ಬಿ. ಶ್ರೀನಿವಾಸ್ 


ಬಾರೆ ......ಬಾರೆ ......ಚೆಂದದ ಚೆಲುವಿನ ತಾರೆ
ಬಾರೆ ......ಬಾರೆ ......ಒಲವಿನ ಚಿಲುಮೆಯ ತಾರೆ

ಕಣ್ಣೀನ ಸನ್ನೆಯ ಸ್ವಾಗತ ಮರೆಯಲಾರೆ .
ಚೆಂದುಟಿ ಮೇಲಿನ ಹೂ ನಗೆ ಮರೆಯಲಾರೆ
ಕಣ್ಣೀನ ಸನ್ನೆಯ ಸ್ವಾಗತ ಮರೆಯಲಾರೆ .
ಚೆಂದುಟಿ ಮೇಲಿನ ಹೂ ನಗೆ ಮರೆಯಲಾರೆ
ಅಂದದ ಹೇಣ್ಣಿನ ನಾಚಿಕೆ ಮರೆಯಲಾರೆ
ಮೌನ ಗೌರಿಯ ಮೋಹದಾ ಕೈ ಬಿಡಲಾರೆ .......
ಬಾರೆ......ಬಾ....ರೆ.....ಚೆಂದದ ಚೆಲುವಿನ ತಾ.....ರೆ.....
ಒಲವಿನ ಚಿಲುಮೆಯ ತಾರೆ
ಬಾರೆ ......ಬಾರೆ ......ಚೆಂದದ ಚೆಲುವಿನ ತಾರೆ
ಬಾರೆ ......ಬಾರೆ ......ಒಲವಿನ ಚಿಲುಮೆಯ ತಾರೆ

ಕೈ ಬಳೆ ನಾದದ ಗುಂಗನು ಅಳಿಸಲಾರೆ,
ಮೈಮನ ಸೋಲುವ ಮತ್ತನು ಮರೆಯಲಾರೆ,
ಕೈ ಬಳೆ ನಾದದ ಗುಂಗನು ಅಳಿಸಲಾರೆ,
ಮೈಮನ ಸೋಲುವ ಮತ್ತನು ಮರೆಯಲಾರೆ,
ರೂಪಸಿ,ರಂಭೆಯ,ಸಂಗವ ತೊರೆಯಲಾರೆ,
ಮೌನ ಗೌರಿಯ ಮೋಹದಾ ಕೈ ಬಿಡಲಾರೆ .......
ಬಾರೆ......ಬಾ....ರೆ.....ಚೆಂದದ ಚೆಲುವಿನ ತಾ.....ರೆ.....
ಒಲವಿನ ಚಿಲುಮೆಯ ತಾರೆ

*********************************************************************************

ಹಾವಿನ ದ್ವೇಷ ಹನ್ನೆರಡು ವರುಷ

ಸಾಹಿತ್ಯ : ವಿಜಯನಾರಸಿಂಹ 
ಗಾಯನ: ಎಸ್.ಪಿ. ಬಾಲಸುಬ್ರಹ್ಮಣ್ಯಂ 


ಹಾವಿನ ದ್ವೇಷ ಹನ್ನೆರಡು ವರುಷ 
ನನ್ನ ರೋಷ ನೂರು ವರುಷ
ಈ ಅಂಜದ ಎದೆಯಲ್ಲಿ ನಂಜೇ ಇಲ್ಲ 
ಬಗ್ಗುವ ಆಳಲ್ಲ ತಲೆತಗ್ಗಿಸಿ ಬಾಳೊಲ್ಲ
ಆ ಲಂಕೆಯ ಸುಟ್ಟ ಬೆಂಕಿ ಯಾವ ಕೇಡನು ಮಾಡಿಲ್ಲ 
ಆದರೆ ಸೇಡನು ಬಿಡಲಿಲ್ಲ
ಅಭಿಮಾನವ ಬಿಡಲೊಲ್ಲೆ ಅಪಮಾನವ ಸಹಿಸೋಲ್ಲೆ 
ಅನ್ಯಾಯವ ಮಾಡೊಲ್ಲೆ ||ಹಾವಿನ ದ್ವೇಷ||

ಆ ದೇವರನೆಂದಿಗೂ ದೂರೋದಿಲ್ಲ 
ನಂಬಿಕೆ ನೀಗೊಲ್ಲ ನಾ ದಾರಿ ತಪೊಲ್ಲ
ನಾ ಇಟ್ಟರೆ ಶಾಪ ಕೊಟ್ಟರೆ ವರ 
ನೀತಿಯ ಮೀರೋಲ್ಲ ನಾ ಓಲಿದರೆ ಕೇಡಿಲ್ಲ
ಆಕ್ರೊಷದ ಉರಿನಾನು 
ಆವೇಗದ ವಶ ನಾನು 
ಆ ಪ್ರೇಮಕೆ ಓಲಿದೇನು

ಹಾವಿನ ದ್ವೇಷ ಹನ್ನೆರಡು ವರುಷ

ಆ ರಾಮನು ಇಟ್ಟ ಬಾಣದ ಗುರಿಯ 
ಎಂದೂ ತಪಿಲ್ಲ ಎಂದೆಂದೂ ತಪಿಲ್ಲ
ಈ ರಾಮಾಚಾರಿನ ಕೆಣಕೋ ಗಂಡು 
ಇನ್ನು ಹುಟ್ಟಿಲ್ಲ ಆ ಗಂಡೇ ಹುಟ್ಟಿಲ್ಲ
ಆ ಭೀಮನ ಬಲದವನು ಚಾಣಕ್ಯನ ಚಲದವನು 
ಈ ದುರ್ಗದ ಹುಲಿ ಇವನು

ಹಾವಿನ ದ್ವೇಷ ಹನ್ನೆರಡು ವರುಷ

*********************************************************************************

ಕತೆ ಹೇಳುವೆ ನನ್ನ ಕತೆ ಹೇಳುವೆ


ರಚನೆ: ಚಿ. ಉದಯಶಂಕರ್ 
ಗಾಯನ: ಪಿ. ಸುಶೀಲಾ 


ಕತೆ ಹೇಳುವೆ ನನ್ನ ಕತೆ ಹೇಳುವೆ ಬಾಳಿನ ಪುಟಗಳಲ್ಲಿ
ಕಣ್ಣೀರ ಹನಿಗಳಲಿ ಬರೆದಿರುವ ಹೆಣ್ಣಿನಾ ಕತೆ ಹೇಳುವೆ

ನೀ ತಂದ ಅರಿಸಿಣ ಕುಂಕುಮದ ಕಾಣಿಕೆ 
ಸ್ವೀಕರಿಸಿ ನೀನಂದು ನುಡಿದಂತೆ ನೆಡೆದೆ
ಹಿರಿಯರಾಣತಿಯಂತೆ ಹಸೆಮಣೆಯ ಏರಿದೆ 
ನನ್ನಾಸೆಯೆಲ್ಲವನು ನಾನೆ ಕೊಂದೆ ||ಕತೆ ಹೇಳುವೆ||

ಮೊದಲದಿನ ರಾತ್ರಿಯಲಿ ಮುಗುಳುನಗೆ ಮೋಡಿಯಲಿ 
ಮೈಮರೆಸಿ ಮುಳ್ಳಿನ ತೆರೆಯ ಹಾಕಿದರು
ಮುದ್ದಿಸುವ ತುಟಿಗಳಿಗೆ ಮತ್ತೆಂದು ಹೇಳುತಲಿ 
ಮದುಪಾನದಾಹುತಿಗೆ ನನ್ನ ನೂಕಿದರು

ಕತೆ ಹೇಳುವೆ ನನ್ನ ಕತೆ ಹೇಳುವೆ

ಅವರ ಆಸೆ ಮುಗಿದಿರಲು ಹಣದ ಆಸೆ ಏರಿರಲು 
ಕಾಮುಕರ ಕೂಪದಲಿ ನನ್ನ ತಳ್ಳಿದರು
ಬೇಡಿಕೆಗೆ ಬೆಲೆಯಿಲ್ಲ ಕಂಬನಿಗೆ ಕೊನೆಯಿಲ್ಲ 
ಪಶುವಂತೆ ನನ್ನ ಮಾರಾಟ ಮಾಡಿದರು

ಕತೆ ಹೇಳುವೆ ನನ್ನ ಕತೆ ಹೇಳುವೆ

*********************************************************************************

ಸಂಗಮ ಸಂಗಮ

ರಚನೆ: ವಿಜಯನಾರಸಿಂಹ 
ಗಾಯನ: ಪಿ.ಬಿ.ಶ್ರೀನಿವಾಸ್, ಪಿ. ಸುಶೀಲಾ 


ಸಂಗಮ ಸಂಗಮ ಅನುರಾಗ ಸಂಗ ಸಂಗಮ
ಸಂಭ್ರಮ ಸಂಭ್ರಮ ರಾಗ ತಾಳ ಗಾನ ಸಂಭ್ರಮ
ಸಂಗಮ ಸಂಗಮ ಅನುರಾಗ ಸಂಗ ಸಂಗಮ

ನೂರು ಜನ್ಮ ಬಯಸಿ ಬಂದ ಸಂಗಮ
ಚೈತ್ರ ವನದೇ ಚೆಲುವು ಒಲವು ಸಂಭ್ರಮ
ಜೀವ ಜೀವ ಮಿಲನ ದಿವ್ಯ ಸಂಗಮ
ಶರದಿ ನದಿಯ ಪ್ರೇಮ ಘೋಷ ಸಂಭ್ರಮ ||ಸಂಗಮ||

ಜಗವ ಜಯಿಸಿ ನಗುವ ತೀರ ಸಂಗಮ
ಯುಗವ ಬೇರೆ ಮಾಡಬಲ್ಲ ಸಂಭ್ರಮ
ಪ್ರೀತಿಯಲ್ಲಿ ನವ್ಯ ರೀತಿ ಸ್ನೇಹ ಸಂಗಮ
ಪ್ರಳಯ ಮೀರಿ ನಿಂತ ಪ್ರಣಯ ಸಂಭ್ರಮ ||ಸಂಗಮ||

ನವ ನವೀನ ಬಾಳ್ವೆ ಮೆರೆವ ಸಂಭ್ರಮ
ಪ್ರೇಮ ಪೂಜೆ ತಂದ ಪುಣ್ಯ ಸಂಗಮ
ಲಕ್ಷ ಲಕ್ಷದಾರಿ ದೀಪ ಬೆಳಗೋ ಸಂಭ್ರಮ
ಯಕ್ಷ ಲೊಕ ನಕ್ಷೆ ಬರೆದ ರಮ್ಯ ಸಂಗಮ ||ಸಂಗಮ||


*********************************************************************************

ಗಾಳಿಪಟ (2008)


ಮಿಂಚಾಗಿ ನೀನು ಬರಲು

ಚಲನಚಿತ್ರ : ಗಾಳಿಪಟ (2008)
ಸಾಹಿತ್ಯ: ಜಯಂತ್ ಕಾಯ್ಕಿಣಿ 
ಗಾಯಕರು : ಸೋನು ನಿಗಮ್
ಸಂಗೀತ: ವಿ. ಹರಿಕೃಷ್ಣ 
ನಿರ್ದೇಶಕರು : ಯೋಗರಾಜ್ ಭಟ್
ನಟಿಸಿದವರು : ಗಣೇಶ್, ಡೈಸಿ ಬೋಪಣ್ಣ, ದಿಗಂತ್, ನೀತು, ರಾಜೇಶ್ ಕೃಷ್ಣನ್, ಭಾವನಾ 


ಮಿಂಚಾಗಿ ನೀನು ಬರಲು ನಿಂತಲ್ಲಿಯೇ ಮಳೆಗಾಲ
ಬೆಚ್ಚಗೆ ನೀ ಜೊತೆಗಿರಲು ಕೂತಲ್ಲಿಯೆ ಚಳಿಗಾಲ
ವಿರಹದ ಬೇಗೆ ಸುಡಲು ಎದೆಯಲಿ ಬೇಸಿಗೆ ಕಾಲ
ಇನ್ನೇಲ್ಲಿ ನನಗೆ ಉಳಿಗಾಲ?

ನಾ ನಿನ್ನ ಕನಸಿಗೆ ಚಂದಾದಾರನು
ಚಂದಾ ಬಾಕಿ ನೀಡಲು ಬಂದೆ ಬರುವೆನು
ನಾ ನೇರ ಹೃದಯದ ವರದಿಗಾರನು
ನಿನ್ನ ಕಂಡ ಕ್ಷಣದಲೇ ಮಾತೆ ಮರೆವೆನು
ಕ್ಷಮಿಸು ನೀ ಕಿನ್ನರಿ, ನುಡಿಸಲೇ ನಿನ್ನನು
ಹೇಳಿ ಕೇಳಿ ಮೊದಲೇ ಚೂರು ಪಾಪಿ ನಾನು...

ನಿನ್ನ ಮನದ ಕವಿತೆ ಸಾಲ ಪಡೆವ ನಾನು ಸಾಲಗಾರ
ಕಣ್ಣ ತೊರೆದು ದೋಚಿಕೊಂಡ ನೆನಪುಗಳಿಗೆ ಪಾಲುದಾರ
ನನ್ನದೀ ವೇದನೆ, ನಿನಗೆ ನಾ ನೀಡೆನು
ಹೇಳಿ ಕೇಳಿ ಮೊದಲೇ ಚೂರು ಕಳ್ಳ ನಾನು... :-)



********************************************************************************

ನಧೀಂ ಧೀಂತನ ನಧೀಂ ಧೀಂತನ 

ಸಾಹಿತ್ಯ: ಯೋಗರಾಜ್ ಭಟ್ 
ಗಾಯನ: ಕೆ. ಎಸ್. ಚಿತ್ರಾ 

ನಧೀಂ ಧೀಂತನ ನಧೀಂ ಧೀಂತನ
ಮಧುರ ಪ್ರೇಮದ ಮೊದಲ ತಲ್ಲಣ
ಧನ್ಯ ಆಲಿಂಗನ ಮೊದಲ ಹೆಜ್ಜೆಗೆ
ಏನೋ ಕಂಪನ ಏನೀ ರೋಮಾಂಚನ
ತಾಕಿಟ ತರಿಕಿಟ ಎನ್ನುತಿದೆ ಈ ಹೃದಯ ಮೃದಂಗ
ಸುಂದರ ಮಾನಸ ಸರೋವರದಲಿ ಪ್ರೇಮ ತರಂಗ 
ಈ ಕಣ್ಣಿನ ಕವನ ಓದೋ ಓ ಹುಡುಗ...... 

ಪ್ರೇಮದ ಸರಿಗಮ ಸ್ವರ ತಾಳದ ಕೊಳದಲ್ಲಿ
ಹಾಡುತ ತೇಲಾಡುತ ಜ್ವರವೇರಿಸೋ ಮಳೆಯಲ್ಲಿ
ಒಂದೂರಲ್ಲಿ ರಾಜ ರಾಣಿ ನೂರು ಮಕ್ಕಳ ಹೆತ್ತ ಕಥೆಗೆ
ದುಂಡು ಮುಖದ ರಾಜಕುಮಾರ
ಕೋಟೆ ದಾಟಿ ಬಂದ ಕಥೆಗೆ ನಾಯಕ ನೀನೆ......
ಆ ಚಂದಾಮಾಮ ಕಥೆಗೆ ನಾಯಕಿ ನಾ......

ಸುಮ್ಮನೆ ತಿಳಿ ತಿಳಿ ನಾನಾಡದ ಪದಗಳನು
ಸೋಲುವೆ ಪ್ರತಿ ಕ್ಷಣ ನನ್ನ ಮನದಲೆ ನಾನು
ನಿದ್ದೆ ಬರದ ಕಣ್ಣ ಮೇಲೆ ಕೈಯ ಮುಗಿವೆ ಚುಂಬಿಸು ಒಮ್ಮೆ
ನಾನು ನಾಚಿ ನಡುಗೋ ವೇಳೆ
ಮಲ್ಲೆ ಹೂವ ಮುಡಿಸೋ ಒಮ್ಮೆ
ನಾನು ಭೂಮಿ.... ಆವರಿಸು ಸುರಿವ ಮಳೆಯಂತೆ ನನ್ನ.....



********************************************************************************

ಆಕಾಶ ಇಷ್ಟೇ ಯಾಕಿದೆಯೋ

ಸಾಹಿತ್ಯ: ಜಯಂತ್ ಕಾಯ್ಕಿಣಿ 
ಗಾಯನ: ಟಿಪ್ಪು, ಕುನಾಲ್ ಗಾಂಜಾವಾಲ 


ನನೈ ನನನೈ..... ನನೈ ನನನೈ......
ನನೈ ನನನೈನಿ..... ನನೈ ನನನೈ 

ಆಕಾಶ ಇಷ್ಟೇ ಯಾಕಿದೆಯೋ
ಈ ಭೂಮಿ ಕಷ್ಟ ಆಗಿದೆಯೋ
ಹಂಚೋಣ ಈ ಪ್ರೀತಿ ಬೇಕಿಲ್ಲ ರಸೀತಿ
ಮುಗಿಲನ್ನೆ ಮುದ್ದಾಡಿ ರೆಕ್ಕೆ ಬಿಚ್ಚಿ ಹಾರೋ ನಾವೆ.....
ಗಾಳಿಪಟ  ಗಾಳಿಪಟ ಗಾಳಿಪಟ

ಕನಸಿನ ನೋಟಿಗೆ ಚಿಲ್ಲರೆ ಬೇಕೇ 
ನಗುವನ್ನು ಎಲ್ಲೋ ಮರೆತಿರುವೇಕೆ
ಕಿಸೆಯಲ್ಲಿ ಕದ್ದ ಚಂದ್ರನ ಚೂರು
ನಮ್ಮನ್ನು ಪತ್ತೆ ಮಾಡುವರಾರು
ಹೋಳಾಗಿದೆ ಈ ಭೂಪಟ ಹಾರಾಟವೇ ನಮ್ಮ ಹಟ.....
ಗಾಳಿಪಟ ಗಾಳಿಪಟ ಗಾಳಿಪಟ

ಕಾಮನಬಿಲ್ಲು ಬಾಡಿಗೆಗುಂಟೆ
ಸ್ನೇಹಕ್ಕು ಕೂಡ ರೇಶನ್ ಬಂತೆ
ಸಂಭ್ರಮಕಿಲ್ಲ ಸೀಸನ್ ಟಿಕೇಟು
ಏರಿಸಬೇಕು ನಮ್ಮ ರಿಬೇಟು
ಇದು ಪ್ರೀತಿಯ ಚಿತ್ರಪಟ ಈ ದೋಸ್ತಿಯೆ ನಮ್ಮ ಚಟ....
ಗಾಳಿಪಟ ಗಾಳಿಪಟ ಗಾಳಿಪಟ

ಆಕಾಶ ಇಷ್ಟೇ ಯಾಕಿದೆಯೋ
ಈ ಭೂಮಿ ಕಷ್ಟ ಆಗಿದೆಯೋ
ಇಲ್ಲೇನೋ ಸರಿಯಿಲ್ಲ ಇನ್ನೇನೋ ಬೇಕಲ್ಲ
ನಕ್ಷತ್ರ ಲೋಕಕ್ಕೆ ಲಗ್ಗೆ ಇಟ್ಟು ಹಾರೋ ನಾವೆ.....
ಗಾಳಿಪಟ ಗಾಳಿಪಟ ಗಾಳಿಪಟ...


********************************************************************************

ಆಹಾ ಈ ಬೆದರು ಬೊಂಬೆಗೆ

ಸಾಹಿತ್ಯ:ಜಯಂತ್ ಕಾಯ್ಕಿಣಿ 
ಗಾಯಕರು: ಅನುರಾಧ ಶ್ರೀರಾಮ್, ಉದಿತ್ ನಾರಾಯಣ್ 


ಆಹಾ ಈ ಬೆದರು ಬೊಂಬೆಗೆ
ಜೀವ ಬಂದಿರುವ ಹಾಗಿದೆ
ಎಹೆ ಹೆಚ್ಚೇನು ಹೇಳಲಿ
ಹುಚ್ಚು ಹೆಚ್ಚಾಗಿ ಹೋಗಿದೆ
ನೆನಪಿನ ಜಾತ್ರೆಯಲಿ ಅಲೆದು,
ನಾ ಕನಸಿನ ಕನ್ನಡಿಯ ಕೊಳ್ಳಲೆ
ಹೇ ನಿನ್ನಯ ದಾರಿಯಲಿ ಅನುದಿನ,
ಹೃದಯದ ಅಂಗಡಿಯ ತೆರೆಯಲೆ

ಕೆನ್ನೆಯ ಗುಳಿಯೆ ನಿನ್ನ ಕೀರುತಿಯೆ
ಮುಂಗೋಪವೇನು ನಿನ್ನ ಮೂಗುತಿಯೆ
ಸೂರ್ಯನ ಮುಖದಲ್ಲಿ ಮೀಸೆಯ ಬರೆಯುವೆಯ
ಚಂದ್ರನ ಕರೆದಿಲ್ಲಿ ದೋಸೆಯಾ ತಿನಿಸುವೆಯ
ಕುಂಟೋ ಬಿಲ್ಲೆಯಲಿ ಮನಸು ತಲುಪುವೆಯಾ
ಕಳೆದು ಹೋಗಿರುವೆ ದಾರಿ ತಿಳಿಸುವೆಯ

ಪ್ರೀತಿಗೆ ಯಾಕೆ ಈ ಉಪವಾಸ
ಯಾತಕ್ಕು ಇರಲಿ ನಿನ್ನ ಸಹವಾಸ
ಅಂಚೆಯ ಪೆಟ್ಟಿಗೆಗೆ ಹೃದಯವ ಹಾಕಿರುವೆ
ನೆನಪಿನ ಕೊಟ್ಟಿಗೆಗೆ ನಿನ್ನನ್ನೇ ನೂಕಿರುವೆ
ನಂಬಿ ಕೆಟ್ಟಿರುವೆ ಏನು ಪರಿಹಾರ
ನಿನಗೆ ಕಟ್ಟಿರುವೆ ಮನದ ಗಡಿಯಾರ


*********************************************************************************

ಒಂದೇ ಸಮನೇ ನಿಟ್ಟುಸಿರು

ಸಾಹಿತ್ಯ: ಯೋಗರಾಜ್ ಭಟ್ 
ಗಾಯಕರು: ಸೋನು ನಿಗಮ್ 


ಒಂದೇ ಸಮನೇ ನಿಟ್ಟುಸಿರು,
ಪಿಸುಗುಡುವ ತೀರದ ಮೌನ..
ತುಂಬಿ ತುಳುಕೋ ಕಂಗಳಲೀ,
ಕರಗುತಿದೆ ಕನಸಿನ ಬಣ್ಣ..
ಎದೆಯ ಜೋಪಡಿಯ ಒಳಗೆ,
ಕಾಲಿಡದೆ ಕೊಲುತಿದೆ ಒಲವು..
ಮನದ ಕಾರ್ಮುಗಿಲಿನ ತುದಿಗೆ,
ಮಳೆಬಿಲ್ಲಿನಂತೆ ನೋವು..
ಕೊನೆ ಇರದ ಏಕಾಂತವೇ.. ಒಲವೇ..?

ಒಂದೇ ಸಮನೇ ನಿಟ್ಟುಸಿರು, ಪಿಸುಗುಡುವ ತೀರದ ಮೌನ..
ತುಂಬಿ ತುಳುಕೋ ಕಂಗಳಲೀ, ಕರಗುತಿದೆ ಕನಸಿನ ಬಣ್ಣ..
ಜೀವಾ ಕಳೆವಾ ಅಮೃತಕೆ, ಒಲವೆಂದು ಹೆಸರಿಡಬಹುದೇ..
ಪ್ರಾಣಾ ಉಳಿಸೋ ಖಾಯಿಲೆಗೆ, ಪ್ರೀತಿಯೆಂದೆನ್ನಬಹುದೇ..
ಹೊಂಗನಸ ಚಾದರದಲಿ, ಮುಳ್ಳಿನ ಹಾಸಿಗೆಯಲಿ ಮಲಗಿ..
ಯಾತನೆಗೆ ಮುಗುಳ್ನಗು ಬರಲು, ಕಣ್ಣಾ ಹನಿ ಸುಮ್ಮನೆ ಒಣಗಿ..
ಅವಳನ್ನೇ ಜಪಿಸುವುದೇ.. ಒಲವೇ..?

ಜೀವಾ ಕಳೆವಾ ಅಮೃತಕೆ, ಒಲವೆಂದು ಹೆಸರಿಡಬಹುದೇ..
ಪ್ರಾಣಾ ಉಳಿಸೋ ಖಾಯಿಲೆಗೆ, ಪ್ರೀತಿಯೆಂದೆನ್ನಬಹುದೇ..
ನಾಲ್ಕು ಪದದ ಗೀತೆಯಲೀ, ಮಿಡಿತಗಳ ಬಣ್ಣಿಸಬಹುದೇ..
ಮೂರು ಸ್ವರದ ಹಾಡಿನಲಿ, ಹೃದಯವನು ಹರಿಬಿಡಬಹುದೇ..
ಉಕ್ಕಿ ಬರುವ ಕಂಠದಲಿ, ನರಳುತಿದೆ ನಲುಮೆಯ ಗಾನ..
ಬಿಕ್ಕಳಿಸುವಾ ಎದೆಯೊಳಗೆ, ನಗುತಲಿದೆ ಮಡಿದಾ ಕವನ..
ಒಂಟಿತನದಾ ಗುರುವೇ.. ಒಲವೇ..?



********************************************************************************


ಕವಿತೆ ಕವಿತೆ ನೀನೇಕೆ

ಸಾಹಿತ್ಯ: ಹೃದಯಶಿವ 
ಗಾಯನ: ವಿಜಯ್ ಪ್ರಕಾಶ್ 


ಕವಿತೆ ಕವಿತೆ ನೀನೇಕೆ ಪದಗಳಲಿ ಕುಳಿತೆ
ಕವಿತೆ ಕವಿತೆ ನೀನೇಕೆ ರಾಗದಲಿ ಬೆರೆತೆ
ನನ್ನೆದೆಯಾ ಗೂಡಲ್ಲಿ ಕವಿತೆಗಳಾ ಸಂತೆ
ಓ ಒಲವೇ, ನೀ ತಂದ ಹಾಡಿಗೆ ನಾ ಸೋತೆ...

ಅವಳು ಬರಲು ಮನದಲ್ಲಿ ಪದಗಳದೇ ಚಿಲುಮೆ
ಮನದ ಕಡಲ ದಡದಾಟೊ ಅಲೆಗಳಲು ನಲುಮೆ
ಹೊಮ್ಮುತಿದೆ ರಾಗದಲಿ ಸ್ವರಮೀರೋ ತಿಮಿರು
ಚಿಮ್ಮುತಿದೆ ಸುಳ್ಳಾಡುವಾ ಕವಿಯಾದ ಪೊಗರು
ಅವಳು ಬರಲು .....

ಮುಗಿಲಾ ಹೆಗಲಾ ಮೇಲೇರಿ ತೇಲುತಿದೆ ಹೃದಯ
ಮಡಿಲಾ ಹುಡುಕಿ ಎದೆ ಬಾಗಿಲಿಗೆ ಬಂತೋ ಪ್ರಣಯಾ
ಉನ್ಮಾದ ತಾನಾಗಿ ಹಾಡಾಗೋ ಸಮಯಾ
ಏಕಾಂತಾ ಕಲ್ಲನ್ನು ಮಾಡುವುದೋ ಕವಿಯಾ
ಮುಗಿಲಾ ....


*******************************************************************************

ಮುಸ್ಸಂಜೆ ಮಾತು (2008)


ಅನುರಾಗ ಅರಳೋ ಸಮಯ

ಚಲನಚಿತ್ರ: ಮುಸ್ಸಂಜೆ ಮಾತು (2008)
ಸಾಹಿತ್ಯ: ಕವಿರಾಜ್ 
ಸಂಗೀತ: ವಿ. ಶ್ರೀಧರ್ 
ಗಾಯಕ: ಕಾರ್ತಿಕ್ 
ನಿರ್ದೇಶನ: ಮುಸ್ಸಂಜೆ ಮಹೇಶ್ 
ನಟರು: ಸುದೀಪ್, ರಮ್ಯ, ಅನು ಪ್ರಭಾಕರ್ 


ಅನುರಾಗ ಅರಳೋ ಸಮಯ
ಮನಸುಗಳು ಮಾತಾಡೋ ಸಮಯ
ಯಾರೋ ಯಾರ ದಾರಿಯನ್ನು ಕಾಯೋ ಸಮಯ
ಮೊಗ್ಗು ಮೆಲ್ಲ ಹಿಗ್ಗಿ ಹೂವು ಆಗೋ ಸಮಯ
ಕದ್ದು ಕೊಂಡರು ಯಾರೋ ನನ್ನ ಹೃದಯ
ಹಿಂದೆ ಎಂದು ಕಂಡೆ ಇಲ್ಲ ಇಂಥ ಖುಷಿಯ .....
ಪ್ರೀತಿನ ಇದು......ಪ್ರೀತಿನ ಇದು........
ನನ್ನಲ್ಲೇ ನಾನೇ ಇಲ್ಲ ಈಗ
ಯಾಕೋ ಯಾಕೋ ಯಾಕೋ....


ಚಲಿಸೋ ಓ ಬೆಳ್ಳಿ ಮೋಡ ಇಳಿದು ಬಾ ನಿನ್ನ ಕೂಡ
ಕುಳಿತು ಮಾತಾಡೊವಾಸೆ ಆಗಿದೆ
ಅವಳ ಅಂದಾನ ಕುರಿತೆ ಮನಸು ಬರೆದಂತ ಗೀತೆ
ಬಳಿಗೆ ನೀ ಬಂದು ಕೇಳಬಾರದೆ
ಇನ್ನು ಎಂದು ನೆರಳ ಹಾಗೆ ನಾನು ಇವಳ
ಜೊತೆಯಲೇ ಇರಲ ಅನುಗಾಲ
ನಡೆ ನುಡಿ ಸರಳ ಮೆಚ್ಚಿಕೊಂಡೆ ಬಹಳ
ನನಗೆ ಅಂತ ಹುಟ್ಟಿ ಬಂದ ತಾರೆ ಇವಳ

ಪ್ರೀತಿನ ಇದು......ಪ್ರೀತಿನ ಇದು........
ನನ್ನಲ್ಲೇ ನಾನೇ ಇಲ್ಲ ಈಗ
ಯಾಕೋ ಯಾಕೋ ಯಾಕೋ....

ನಮ್ಮ ಈ ಪುಟ್ಟ ಗೂಡು ಇಲ್ಲಿ ಪ್ರೀತಿಯ ಹಾಡು
ಗುನುಗೋ ಈ ಸಮಯ ಹೀಗೆ ಇರಲಿ
ಜೊತೆಗೆ ನಡೆವಾಗ ಹೀಗೆ ಬಾಳು ಒಂದಾದ ಹಾಗೆ
ಅನಿಸೋ ಈ ಸಮಯ ಎಂದು ಸಿಗಲಿ
ಮಾತು ಮರೆತು ಹೋಗಿದೆ ಮನಸು ಕಳೆದು ಹೋಗಿದೆ
ಕಂಗಳಂತೆ ನೋಡಲು ಹೃದಯ ಕಲೆಯಬಾರದೆ
ನಿನ್ನ ನಾನು ನೋಡದೆ ಒಂದು ಕ್ಷಣ ಜಾರದೆ
ಸಮಯ ಮೀರಿ ಹೋಗೊ ಮುನ್ನ ಹೇಳು ಆಸೆಯಾ........


******************************************************************************

 

ನಿನ್ನ ನೋಡಲೆಂತೋ ಮಾತನಾಡಲೆಂತೋ

ಸಾಹಿತ್ಯ: ರಾಮ್ ನಾರಾಯಣ್ 
ಗಾಯಕರು: ಸೋನು ನಿಗಮ್, ಶ್ರೇಯಾ ಘೋಷಾಲ್ 

ನಿನ್ನ ನೋಡಲೆಂತೋ ಮಾತನಾಡಲೆಂತೋ
ಮನಸ ಕೇಳಲೆಂತೋ ಪ್ರೀತಿ ಹೇಳಲೆಂತೋ
ಆಹಾ ಒಂಥರಾ ಥರಾ
ಹೇಳಲೊಂಥರ ಥರ ಕೇಳಲೊಂಥರ ಥರ
ಹೇಳಲೊಂಥರ ಥರ ಕೇಳಲೊಂಥರ ಥರ.......

ಕಣ್ಣಿಗೇನು ಕಾಣದೆ ಸ್ಪರ್ಶವೇನು ಇಲ್ಲದೆ
ಏನೋ ನನ್ನ ಕಾಡಿದೆ ಏನು ಅರ್ಥವಾಗದೆ
ಹಗಲು ರಾತ್ರಿ ನಿನ್ನದೇ ನೂರು ನೆನಪು ಮೂಡಿದೆ
ನನ್ನಲೇನೋ ಆಗಿದೆ ಹೇಳಲೇನು ಆಗದೆ
ಮನಸು ಮಾಯವೆಂತೋ ಮಧುರ ಭಾವವೆಂತೋ
ಪಯಣ ಎಲ್ಲಿಗೆಂತೋ ನಯನ ಸೇರಲೆಂತೋ
ಮಿಲನವಾಗಲೆಂತೋ  ಗಮನ ಎಲ್ಲೋ ಎಂತೋ
ಆಹಾ ಒಂಥರಾ ಥರ
ಹೇಳಲೊಂಥರ ಥರ ಕೇಳಲೊಂಥರ ಥರ
ಹೇಳಲೊಂಥರ ಥರ ಕೇಳಲೊಂಥರ ಥರ

ಮೆಲ್ಲ ಮೆಲ್ಲ ಮೆಲ್ಲುವ ಸನ್ನೆಯಲ್ಲೆ ಕೊಲ್ಲುವ
ಸದ್ದೇ ಇರದ ಉತ್ಸವ ಪ್ರೀತಿಯೊಂದೆ ಅಲ್ಲವ
ಘಲ್ಲು ಘಲ್ಲು ಎನ್ನುವ ಹೃದಯ ಗೆಜ್ಜೆ ನಾದವ
ಪ್ರೀತಿ ತಂದ ರಾಗವ ತಾಳಲೆಂತೋ ಭಾವವ
ಹೃದಯದಲ್ಲಿ ಎಂತೋ ಉದಯವಾಯಿತೆಂತೋ
ಸನಿಹವಾಗಲೆಂತೋ ಕನಸ ಕಾಣಲೆಂತೋ
ಹರುಷ ಏನೋ ಎಂತೋ ಸೊಗಸ ಹೇಳಲೆಂತೋ
ಆಹಾ ಒಂಥರಾ ಥರ
ಹೇಳಲೊಂಥರ ಥರ ಕೇಳಲೊಂಥರ ಥರ
ಹೇಳಲೊಂಥರ ಥರ ಕೇಳಲೊಂಥರ ಥರ


*******************************************************************************

ಆಕಾಶ ಭೂಮಿ ಇಂದು

ಸಾಹಿತ್ಯ: ವಿ. ಶ್ರೀಧರ್ 
ಗಾಯನ: ಶ್ರೇಯಾ ಘೋಷಾಲ್ 


ಆಕಾಶ ಭೂಮಿ ಇಂದು ಒಂದಾದ ಹಾಗಿದೆ
ನನ್ನ ಈ ಚೆಲುವನ್ನು ಹೊಳೆವಂತೆ ಮಾಡಿದೆ
ತಂದಾನೋ ತಂದಾನೋ ತನುವೆಲ್ಲ ತಂದಾನೋ
ಚಂದಾನೋ ಚಂದಾನೋ ಜಗವೆಲ್ಲ ಚಂದಾನೋ
ಮನಸೆಲ್ಲ ಸಮಥಿಂಗ್ ಸಮಥಿಂಗ್ ಉಯ್ಯಾಲೆ ತೂಗಿದೆ


ನಾ ಬರುವ ದಾರಿಯಲ್ಲಿ ಹೂ ಬಳುಕುತಾವ ನೋಡಾ
ನಾಚಿ ನಿಂತೆ ನಾನು ಅವು ಹಾಡಿತೊಂದು ಹಾಡ
ಹಾಡಲು ನಾನು ಜೊತೆಜೊತೆಗೆ ಅರಳಿತು ಮನವು ಒಳಗೊಳಗೇ
ನದಿಯಂತೆ ಹರಿಯುವೆನು ಮಂಜಂತೆ ಮುಸುಕುವೆನು
ತಿರುತಿರುಗೋ ಭೂಮಿಯ ನೋಡಲು ಚಂದ್ರಮಕೆ ಹಾರುವೆನು
ಮನದಲ್ಲೇ ಮುಗಿಲನು ಸೇರಿ ಭುವಿಗೆ ಕೈ ಚಾಚುವೆನು......

ಸೌಂದರ್ಯ ರಾಗ ಲಹರಿ ಬಂತೆನ್ನ ಮನಕೆ ಮರಳಿ
ತಲೆದೂಗುವಂತ ನಾದ ತಂಗಾಳಿ ಬೀಸೊ ರವಳಿ
ಅಲೆ ಅಲೆ ಮೇಲೆ ಮೇಲೆ ಬರುತಿರೋ ಹಾಗೆ
ಸುಖ ದುಃಖವೆರಡು ಜೀವನ ಧಾರೆ
ಮುಸ್ಸಂಜೆ ಮಾತಲ್ಲಿ ಈ ಜೀವ ಹಗುರಾಯ್ತು
ಕೋಗಿಲೆಯ ಹಾಡಂತೆ ಆ ಮಾತು ಇಂಪಾಯ್ತು
ಭಾವಗಳ ಸರಿಗಮ ಸೇರಿ ಸೊಗಸಾದ ಹಾಡಾಯ್ತು.....



******************************************************************************

ಏನಾಗಲಿ ಮುಂದೆ ಸಾಗು

ಸಾಹಿತ್ಯ: ವಿ. ಶ್ರೀಧರ್ 
ಗಾಯನ: ಸೋನು ನಿಗಮ್ 

ಏನಾಗಲಿ ಮುಂದೆ ಸಾಗು ನೀ
ಬಯಸಿದ್ದೆಲ್ಲ ಸಿಗದು ಬಾಳಲಿ
ನನ್ನಾಣೆ ನನ್ನ ಮಾತು ಸುಳ್ಳಲ್ಲ

ಚಲಿಸುವಾ ಕಾಲವು ಕಲಿಸುವ ಪಾಠವ
ಮರೆಯಬೇಡ ನೀ ತುಂಬಿಕೊ ಮನದಲಿ
ಇಂದಿಗೊ ನಾಳೆಗೊ ಒಂದಿನಾ ಬಾಳಲಿ
ಗೆಲ್ಲುವಂತ ಸ್ಪೂರ್ತಿ ದಾರಿ ದೀಪ
ನಿನಗೆ ಆ ಅನುಭವ

ಕರುಣೆಗೆ ಬೆಲೆಯಿದೆ, ಪುಣ್ಯಕೆ ಫಲವಿದೆ
ದಯವ ತೋರುವ ಮಣ್ಣಿನ ಗುಣವಿದೆ
ಸಾವಿನ ಸುಳಿಯಲಿ ಸಿಲುಕಿದ ಜೀವಕೆ
ಜೀವ ನೀಡುವ ಹೃದಯವೇ ದೈವವು
ಹರಸಿದ ಕೈಗಳು ನಮ್ಮನು ಬೆಳೆಸುತ
ವಿಧಿಯ ಬರಹವಾಗಿ ಮೌನದಲ್ಲಿ ನಮ್ಮನು ಕಾಯುತ
ಪ್ರತಿಫಲ ಬಯಸದೆ ತೋರಿದ ಕರುಣೆಯು

ಮೊದಲು ಮನುಜನೆಂಬ ನೆಮ್ಮದಿ ತರುವದು


********************************************************************************

ಮುಸ್ಸಂಜೆ ಮಾತಲಿ

ಸಾಹಿತ್ಯ: ಭಾಸ್ಕರ್ ಗುಬ್ಬಿ 
ಗಾಯನ: ಹೇಮಂತ್ ಕುಮಾರ್ 


ಮುಸ್ಸಂಜೆ ಮಾತಲಿ ಮನಸುಗಳು ಸಾಗಲಿ
ನೊಂದಂತ ಬದುಕಿನಾಸರೆಗೆ
ಹೊಸ ದಾರಿ ತೋರೊ ಈ ರವಿಗೆ...
ನಮನ, ನನ್ನ ನಮನ.....

ನಾ ಹೇಳದ ಮಾತೊಂದು,
ಉಳಿದು ಹೋಗಿದೆ ನನ್ನಲ್ಲಿ
(ಹೆಣ್ಣು:....ಅ ಹ ಅ.....)
ಆ ನಗುವಿನ ದನಿಯನ್ನು,
ಮರೆಯಲಾರೆನು ಬದುಕಲ್ಲಿ
(ಹೆಣ್ಣು:......ಹುಂ.... )
ಒಲವಿನ ಈ ಸಿಂಚನ,
ಹೃದಯಕೆ ಮರುಸ್ಪಂದನ
(ಹೆಣ್ಣು:....ಒ ಒ ಹೊ ಒ ಒ..... )

ಈ ಕವಿತೆ ಸಾಲಳತೆ,
ಹೇಳಲಾಗದು ಪ್ರೀತಿಯ ಅಳತೆ... ಹೇ......
ಮುಸ್ಸಂಜೆ ಮಾತಲಿ ಮನಸುಗಳು ಸಾಗಲಿ...!

*********************************************************************************

ಮಿಲನ (2007)

ಮಳೆ ನಿಂತು ಹೋದ ಮೇಲೆ

ಚಲನಚಿತ್ರ : ಮಿಲನ (2007)
ಸಾಹಿತ್ಯ: ಜಯಂತ್ ಕಾಯ್ಕಿಣಿ 
ಗಾಯಕರು : ಸೋನು ನಿಗಮ್, ಶ್ರೇಯಾ ಘೋಷಾಲ್
ನಟಿಸಿದವರು : ಪುನೀತ್, ಪಾರ್ವತಿ 
ನಿರ್ದೇಶಕರು : ಪ್ರಕಾಶ 
ಸಂಗೀತ : ಮನೋ ಮೂರ್ತಿ


ಮಳೆ ನಿಂತು ಹೋದ ಮೇಲೆ ಹನಿಯೊಂದು ಮೂಡಿದೆ
ಮಾತೆಲ್ಲ ಮುಗಿದ ಮೇಲೆ ಧ್ವನಿಯೊಂದು ಕಾಡಿದೆ
ಹೇಳುವುದು ಏನೋ ಉಳಿದು ಹೋಗಿದೆ
ಹೇಳಲಿ ಹೇಗೆ ತಿಳಿಯದಾಗಿದೆ.........

ನೋವಿನಲ್ಲಿ ಜೀವ ಜೀವ ಅರಿತ ನಂತರ
ನಲಿವು ಬೇರೆ ಏನಿದೆ ಏಕೀ ಅಂತರ
ನಿನ್ನ ಹಾಡಿನಲ್ಲಿ ಇಂದು ಬೆರೆವ ಕಾತರ
ಒಂದೇ ಸಾರಿ ನೀ ಕೇಳೆಯಾ ಈ ಸ್ವರ
ಮನಸಲ್ಲಿ ಚೂರು ಜಾಗ ಬೇಕಿದೆ
ಕೇಳಲಿ ಹೇಗೆ ತಿಳಿಯದಾಗಿದೆ.........

ಕಣ್ಣು ತೆರೆದು ಕಾಣುವ ಕನಸೇ ಜೀವನ
ಸಣ್ಣ ಹಠವ ಮಾಡಿದೆ ಹೃದಯ ಈ ದಿನ
ಎದೆಯ ದೂರವಾಣೆಯ ಕರೆಯ ರಿಂಗಣ
ಕೇಳು ಜೀವವೇ ಏತಕೀ ಕಂಪನ
ಹೃದಯವು ಇಲ್ಲಿ ಕಳೆದುಹೋಗಿದೆ
ಹುಡುಕಲೇ ಬೇಕೆ ತಿಳಿಯದಾಗಿದೆ.........


********************************************************************************

ನಿನ್ನಿಂದಲೇ ನಿನ್ನಿಂದಲೇ 

ಸಾಹಿತ್ಯ: ಜಯಂತ್ ಕಾಯ್ಕಿಣಿ 
ಗಾಯನ: ಸೋನು ನಿಗಮ್  


ನಿನ್ನಿಂದಲೇ ನಿನ್ನಿಂದಲೇ
ಕನಸೊಂದು ಶುರುವಾಗಿದೆ
ನಿನ್ನಿಂದಲೇ ನಿನ್ನಿಂದಲೇ
ಮನಸಿಂದು ಕುಣಿದಾಡಿದೆ
ಈ ಎದೆಯಲ್ಲಿ ಸಿಹಿಯಾದ ಕೋಲಾಹಲ
ನನ್ನೆದುರಲ್ಲೇ ನೀ ಹೀಗೆ ಬಂದಾಗಲೇ
ನಿನ್ನ ತುಟಿಯಲ್ಲಿ ನಗುವಾಗುವ ಹಂಬಲ
ನಾ ನಿಂತಲ್ಲೇ ಹಾಳಾದೆ ನಿನ್ನಿಂದಲೇ....

ಇರುಳಲ್ಲಿ ಜ್ವರದಂತೆ ಕಾಡಿ ಈಗ
ಹಾಯಾಗಿ ನಿಂತಿರುವೆ ಸರಿಯೇನು
ಬೇಕಂತಲೇ ಮಾಡಿ ಏನೋ ಮೋಡಿ
ಇನ್ನೆಲ್ಲೋ ನೋಡುವ ಪರಿಯೇನು
ಈ ಮಾಯೆಗೆ ಈ ಮರುಳಿಗೆ
ನಿನ್ನಿಂದ ಕಳೆ ಬಂದಿದೆ.......

ನಿನ್ನಿಂದಲೆ....

ಹೋದಲ್ಲಿ ಬಂದಲ್ಲಿ ಎಲ್ಲ ನಿನ್ನ
ಸೊಂಪಾದ ಚೆಲುವಿನ ಗುಣಗಾನ
ಕೇದಿಗೆ ಗರಿಯಂಥ ನಿನ್ನ ನೋಟ
ನನಗೇನೋ ಅಂದಂತೆ ಅನುಮಾನ
ನಿನ್ನಿಂದಲೆ ಸದ್ದಿಲ್ಲದೆ ಮುದ್ದಾದ ಕರೆ ಬಂದಿದೆ....

ನಿನ್ನಿಂದಲೆ....

********************************************************************************

ಕದ್ದು ಕದ್ದು ನೋಡೊ

ಸಾಹಿತ್ಯ: ವಿ. ನಾಗೇಂದ್ರ ಪ್ರಸಾದ್ 
ಗಾಯನ: ಸುರೇಶ್ ಪೀಟರ್ಸ್, ಚೈತ್ರಾ , ಪ್ರವೀಣ್ ದತ್ತ್, ಸ್ಟೀಫನ್


ಕದ್ದು ಕದ್ದು ನೋಡೊ ಕಳ್ಳ ಯಾರೊ
ತಂಟೆ ಮಾಡುವಂಥ ತುಂಟಿ ಯಾರೊ
ಮುದ್ದು ಮುದ್ದು ಮಾತು ಆಡೋನ್ಯಾರೊ
ಹದ್ದು ಮೀರಿ ಬಂದ ಮಳ್ಳಿ ಯಾರೊ

ಸವಿಸಮಯ ಸರಸಮಯ
ಹೊಸ ವಿಷಯ ತಿಳಿಸುವೆಯ
ಎದೆಯೊಳಗೆ ಕುಚ್ ಹೋಗಯ
ಏ ಹೋಗೆ ಅಮ್ಮಯ್ಯ ಇದು ಸರಿಯ

ನಿನ್ನಿಂದಲೇ ನಿನ್ನಿಂದಲೇ |೩|

ಎಲ್ಲ ನನ್ನನ್ನು ನೋಡುತ್ತಾರಲ್ಲ
ನಾನೆ ಬೇರೇನೆ ಎಲ್ಲಾರ್ ಹಾಗಲ್ಲ
ನನ್ನ ಮುಟ್ಟೋಕ್ಕೆ ಬೇಡುತ್ತಾರಲ್ಲ
ನಾನು ಏನಂತ ಗೊತ್ತು ಇಲ್ಲಲ್ಲ
ನಿನ ಒಳಗೂ ಒಲವು ಶುರು
ಭ್ರಮೆ ನಿನದು ದೂರ ಇರು
ಒಲವಿರದೆ ಇರಬಹುದೆ
ಪ್ರತಿ ಕಡೆಗೂ ಬರಬಹುದೇ

ನಿನ್ನಿಂದಲೇ ನಿನ್ನಿಂದಲೇ |೨|

ಸಂಜೆ ತಂಗಾಳಿ ಬೀಸಿ ಬಂದಿದೆ
ಮಲ್ಲೆ ಮೊಗ್ಗೆಲ್ಲ ಕಂಪು ತಂದಿದೆ
ಅಂದ ಇಲ್ಲಿದೆ ನೋಡು ಬಾರಯ್ಯ
ಸೋಲೊ ಗಂಡಲ್ಲ ಹೋಗೆ ಅಮ್ಮಯ್ಯ
ಕರೆದಿಹಳು ನಿನ್ನ ರಾಧ
ಕರಗಿದರೆ ಅಪರಾಧ
ನಿನ್ನ ಸತಿಗೆ ವರಪುರುಷ
ನಿಜವೆ ಇದು ದಿನ ಹರುಷ

*******************************************************************************


ಕಿವಿ ಮಾತೊಂದು

ಸಾಹಿತ್ಯ: ಜಯಂತ್ ಕಾಯ್ಕಿಣಿ 
ಗಾಯನ: ಕುನಾಲ್ ಗಾಂಜಾವಾಲ


ಕಿವಿ ಮಾತೊಂದು ಹೇಳಲೆ ನಾನಿಂದು
ದಾರಿ ನಿಂತಾಗ ಸಾಗಲೆ ಬೇಕೆಂದು
ನೆನ್ನೆ ಈಗಿಲ್ಲ ನಾಳೆಯು ತಿಳಿದಿಲ್ಲ
ನೀನು ನೀನಾಗಿ ಬಾಳಲೆ ಬೇಕಿಂದು!

ಹಸಿರಾಗಿದೆ ದೀಪವು ನಿನಗಾಗಿ
ನಸು ನಗುತಲೆ ಸಾಗು ನೀನು ಗೆಲುವಾಗಿ
ಹೊಸ ತಂಗಾಳಿ ಹೇಳಿದೆ ಮೆಲುವಾಗಿ
ಈ ಬಾಳುಂಟು ಬಾಳುವ ಸಲುವಾಗಿ

ಕಿವಿ ಮಾತೊಂದು ಹೇಳಲೆ ನಾನಿಂದು
ದಾರಿ ನಿಂತಾಗ ಸಾಗಲೆ ಬೇಕೆಂದು!

ಬಾಗಿಲಿನಾಚೆಗೆ ತಾ ಬಂದು
ಕೂಗಿದೆ ಬಾಳು ಬಾ ಎಂದು
ಸಂತಸದಿಂದ ಓ ಎಂದು
ಓಡಲೆ ಬೇಕು ನೀನಿಂದು ..
ಸಾವಿರ ಕಣ್ಣಿನ ನವಿಲಾಗಿ
ನಿಂತಿದೆ ಸಮಯ ನಿನಗೆಂದು
ಕಣ್ಣನು ತೆರೆದು ಹಗುರಾಗಿ
ನೊಡಲೆ ಬೇಕು ನೀ ಬಂದು!

ಕಿವಿ ಮಾತೊಂದು ಹೇಳಲೆ ನಾನಿಂದು
ದಾರಿ ನಿಂತಾಗ ಸಾಗಲೆ ಬೇಕೆಂದು
ನೆನ್ನೆ ಈಗಿಲ್ಲ ನಾಳೆಯು ತಿಳಿದಿಲ್ಲ
ನೀನು ನೀನಾಗಿ ಬಾಳಲೆ ಬೇಕಿಂದು!

ಬೆಳ್ಳಿಯ ಅಂಚಿನ ಈ ಮೋಡ
ನಗುವ ಬೀರಿದೆ ಬಾನಲ್ಲಿ
ನಿನ್ನೆಯ ಬಾಳಿನ ಸಂಗೀತ
ಹಾಡಲೆ ಬೇಕು ನೀನಿಲ್ಲಿ ..
ಮಿಂಚುವ ಅಲೆಗಳ ನದಿಯಾಗಿ
ಮುಂದಕೆ ಚಲಿಸು ನೀ ಬೇಗ
ನಿನ್ನೆಯ ಪಾಲಿನ ಈ ಆಟ
ಆಡಲೆ ಬೇಕು ನೀನೀಗ!

ಕಿವಿ ಮಾತೊಂದು ಹೇಳಲೆ ನಾನಿಂದು
ದಾರಿ ನಿಂತಾಗ ಸಾಗಲೆ ಬೇಕೆಂದು
ನೆನ್ನೆ ಈಗಿಲ್ಲ ನಾಳೆಯು ತಿಳಿದಿಲ್ಲ
ನೀನು ನೀನಾಗಿ ಬಾಳಲೆ ಬೇಕಿಂದು!

ಹಸಿರಾಗಿದೆ ದೀಪವು ನಿನಗಾಗಿ
ನಸು ನಗುತಲೆ ಸಾಗು ನೀನು ಗೆಲುವಾಗಿ
ಹೊಸ ತಂಗಾಳಿ ಹೇಳಿದೆ ಮೆಲುವಾಗಿ
ಈ ಬಾಳುಂಟು ಬಾಳುವ ಸಲುವಾಗಿ

ಕಿವಿ ಮಾತೊಂದು ಹೇಳಲೆ ನಾನಿಂದು
ದಾರಿ ನಿಂತಾಗ ಸಾಗಲೆ ಬೇಕೆಂದು
ನೆನ್ನೆ ಈಗಿಲ್ಲ ನಾಳೆಯು ತಿಳಿದಿಲ್ಲ
ನೀನು ನೀನಾಗಿ ಬಾಳಲೆ ಬೇಕಿಂದು!


*********************************************************************************

ಅಂತೂ ಇಂತೂ

ಸಾಹಿತ್ಯ: ಜಯಂತ್ ಕಾಯ್ಕಿಣಿ, 
ಗಾಯನ : ಉದಿತ್ ನಾರಾಯಣ್, ಚಿತ್ರಾ  


ಅಂತೂ ಇಂತೂ ಪ್ರೀತಿ ಬಂತು, 
ಇಂದು ನವಿರಾದ ಮಳೆಬಿಲ್ಲಿನಂತೆ
ಅಂತೂ ಇಂತೂ ಪ್ರೀತಿ ಬಂತು,
ಒಂದು ಸೊಗಸಾದ ಸವಿ ಸೊಲ್ಲಿನಂತೆ
ಮನ ಸೋತೆ ಮನಸಾರೆ, 
ನನ್ನ ಹೊಸ ಲೋಕ ನಿನ್ನಲ್ಲಿ ಈಗ
ಮನ ತುಂಬಿ ಮನಸೂರೆ, 
ಸರಿ ಮುಂದೇನು ನೀ ಹೇಳು ಬೇಗ

ಅಂತೂ ಇಂತೂ ಪ್ರೀತಿ ಬಂತು, 
ಒಂದು ಸೊಗಸಾದ ಸವಿ ಸೊಲ್ಲಿನಂತೆ...

ಕಾಣದ ನಾಡಲ್ಲಿ, ಕೇಳದ ಊರಲ್ಲಿ, 
ಕೈ ಹಿಡಿದು ಹೋಗೋಣ ಕಳೆದು
ನಾ ನಿನ್ನನು, ನೀ ನನ್ನನು, 
ಹುಡುಕೋಣ ಖುಷಿಯಲ್ಲಿ ಅಲೆದು
ಇದ್ದಾಗ ಸಂಗಾತ, ಮುದ್ದಾದ ಸಂಗೀತ, 
ಇನ್ಯಾವ ದನಿ ಕೇಳದಲ್ಲ
ನಮ್ಮೊಲವಲಿ, ನಾವಿಬ್ಬರೇ, 
ಜಗದಲ್ಲಿ ಬೇರಾರೂ ಇಲ್ಲ

ಅಂತೂ ಇಂತೂ ಪ್ರೀತಿ ಬಂತು, 
ಒಂದು ಸೊಗಸಾದ ಸವಿ ಸೊಲ್ಲಿನಂತೆ...

ನೀ ಕೈಗೆ ಸಿಕ್ಕಾಗ, ಕಣ್ಣಲ್ಲೇ ನಕ್ಕಾಗ, 
ಹೃದಯ ಹೂ ಬಿಡುವ ಕಾಲ
ಸುಳಿವಿಲ್ಲದೆ ಸುಳಿದಾಡುತ, 
ಸೆರೆ ಹಿಡಿಯುವ ಮೋಹ ಜಾಲ
ನೋಡುತ್ತಾ ದಂಗಾಗಿ, ಉನ್ಮತ್ತ ಗುಂಗಾಗಿ, 
ದಯವಿಟ್ಟು ನೀ ನನ್ನ ಕಾಡು
ನಿನ್ನುಸಿರಲೇ, ನಾ ಕೇಳುವೆ, 
ನನ್ನೆದೆಯ ಇಂಪಾದ ಹಾಡು

ಅಂತೂ ಇಂತೂ ಪ್ರೀತಿ ಬಂತು, 
ಇಂದು ನವಿರಾದ ಮಳೆಬಿಲ್ಲಿನಂತೆ...


*********************************************************************************