Friday, August 31, 2018

ನಾ ನಿನ್ನ ಮರೆಯಲಾರೆ (1976)



ಎಲ್ಲೆಲ್ಲಿ ನೋಡಲಿ

ಚಲನಚಿತ್ರ: ನಾ ನಿನ್ನ ಮರೆಯಲಾರೆ (1976)
ಸಾಹಿತ್ಯ: ಚಿ. ಉದಯಶಂಕರ್ 
ಸಂಗೀತ: ರಾಜನ್-ನಾಗೇಂದ್ರ 
ಗಾಯಕರು: ಡಾ.ರಾಜ್ ಕುಮಾರ್,  ಎಸ್. ಜಾನಕಿ  
ನಿರ್ದೇಶನ: ವಿಜಯ್ 
ನಟರು: ಡಾ. ರಾಜ್ ಕುಮಾರ್, ಲಕ್ಷ್ಮೀ   


ಎಲ್ಲೆಲ್ಲಿ ನೋಡಲಿ ನಿನ್ನನ್ನೇ ಕಾಣುವೆ
ಕಣ್ಣಲ್ಲಿ ತುಂಬಿರುವೆ ಮನದಲಿ ಮನೆ ಮಾಡಿ ಆಡುವೆ 

ಆ ಕೆಂಪು ತಾವರೆ ಆ ನೀರಿಗಾದರೆ
ಈ ಹೊನ್ನ ತಾವರೆ ನನ್ನಾಸೆಯಾಸರೆ
ಆ.........
ಮಿಂಚೆಂಬ ಬಳ್ಳಿಗೆ ಮೇಘದ ಆಸರೆ
ಈ ಹೆಣ್ಣ ಬಾಳಿಗೆ ನಿನ್ನ ತೋಳಿನಾಸರೆ
ಯುಗಗಳೇ ಜಾರಿ ಉರುಳಿದರೇನು
ನಾನೇ ನೀನು ನೀನೆ ನಾನು
ಆದಮೇಲೆ ಬೇರೆ ಏನಿದೆ.....

ರವಿಯನ್ನು ಕಾಣದೆ ಹಗಲೆಂದು ಆಗದು
ನಿನ್ನನ್ನು ನೋಡದೆ ಈ ಪ್ರಾಣ ನಿಲ್ಲದು
ಕಡಲನ್ನು ಸೇರದ ನದಿಯೆಲ್ಲಿ ಕಾಣುವೆ
ನಿನ್ನನ್ನು ಸೇರದೆ ನಾ ಹೇಗೆ ಬಾಳುವೆ
ವಿರಹದ ನೋವ ಮರೆಯಲಿ ಜೀವ
ಹೂವು ಗಂಧ ಸೇರಿದಂತೆ
ಪ್ರೇಮದಿಂದ ನಿನ್ನ ಸೇರುವೆ.....


********************************************************************************

ನಾ ನಿನ್ನ ಮರೆಯಲಾರೆ

ಸಾಹಿತ್ಯ: ಚಿ. ಉದಯಶಂಕರ್ 
ಗಾಯಕರು: ಡಾ.ರಾಜ್ ಕುಮಾರ್, ವಾಣಿ ಜಯರಾಂ 


ನಿನ್ನ ಮರೆಯಲಾರೆ,
ನಾ ನಿನ್ನ ಮರೆಯಲಾರೆ
ಎಂದೆಂದೂ ನಿನ್ನ ಬಿಡಲಾರೆ ಚಿನ್ನ
ನೀನೆ ಪ್ರಾಣ ನನ್ನಾಣೆಗೂ


ಜೊತೆಗೆ ನೀನು ಸೇರಿ ಬರುತಿರೆ
ಜಗವ ಮೆಟ್ಟಿ ನಾ ನಿಲ್ಲುವೆ
ಒಲಿದ ನೀನು ನಕ್ಕು ನಲಿದರೆ
ಏನೇ ಬರಲಿ ನಾ ಗೆಲ್ಲುವೆ
ಆಹಾ ....ಲಾಲಾ.....ಲಾಲಾ....ತರರ.....
ಚೆಲುವೆ ನೀನು ಉಸಿರು ಉಸಿರಲಿ
ಬೆರೆತು ಬದುಕು ಹೂವಾಗಿದೆ
ಎಂದು ಹೀಗೆ ಇರುವ ಬಯಕೆಯು ಮೂಡಿ ಮನಸು ತೇಲಾಡಿದೆ
ನಮ್ಮ ಬಾಳು, ಹಾಲು ಜೇನು .....

ನೂರು ಮಾತು ಏಕೆ ಒಲವಿಗೆ ನೋಟ ಒಂದೇ ಸಾಕಾಗಿದೆ
ಕಣ್ಣ ತುಂಬ ನೀನೆ ತುಂಬಿಹೆ ದಾರಿ ಕಾಣದಂತಾಗಿದೆ
ಆಹಾ ......
ಸಿಡಿಲೆ ಬರಲಿ ಊರೇ ಗುಡುಗಲಿ ದೂರ ಹೋಗೆ ನಾನೆಂದಿಗೂ
ಸಾವೇ ಬಂದು ನನ್ನ ಸೆಳೆದರು ನಿನ್ನ ಬಿಡೆನು ಎಂದೆಂದಿಗೂ
ನೋವು ನಲಿವು, ಎಲ್ಲ ಒಲವು.....


********************************************************************************



ಸಿಹಿ ಮುತ್ತು ಸಿಹಿ ಮುತ್ತು

ಸಾಹಿತ್ಯ:ಚಿ ಉದಯಶಂಕರ್ 
ಗಾಯಕರು: ಪಿ. ಬಿ. ಶ್ರೀನಿವಾಸ್ & ಎಸ್ ಜಾನಕಿ 


ಸಿಹಿ ಮುತ್ತು ಸಿಹಿ ಮುತ್ತು ಇನ್ನೊಂದು ,
ಕೆನ್ನೆಗೆ ಗಲ್ಲಕೆ ಮತ್ತೊಂದು
ಸಿಹಿ ಮುತ್ತು ಸಿಹಿ ಮುತ್ತು ಇನ್ನೊಂದು ,
ಕೆನ್ನೆಗೆ ಗಲ್ಲಕೆ ಮತ್ತೊಂದು
ಕಂದಾ ಕೊಡುವೆಯಾ ...
ಚಿನ್ನದ ತೋಳಲಿ ನನ್ನಾ ಬಳಸುತಾ.......
ನಿನ್ನ ಚಿನ್ನದ ತೋಳಲಿ ನನ್ನಾ ಬಳಸುತಾ
ಸಿಹಿ ಮುತ್ತು ಸಿಹಿ ಮುತ್ತು ಇನ್ನೊಂದು ,
ಕೆನ್ನೆಗೆ ಗಲ್ಲಕೆ ಮತ್ತೊಂದು
ಕಂದಾ ಕೊಡುವೆಯಾ ...

ಚಿನಕುರಳಿ ಮಾತಿನಲ್ಲಿ ಹೂ ಬಾಣ ನೋಟದಲ್ಲಿ
ಕೋಪದಿ ಸಿಡಿದರೆ ಆನೆ ಪಟಾಕಿ
ನೀ ನಕ್ಕರು ಚೆಂದಾ, ನೀ ಅತ್ತರು ಅಂದ
ಕುಣಿಸುವೆ ತಣಿಸುವೆ ತುಂಟಾಟದಿಂದಾ
ಆ  ಅ ಅ ಆಅ ........ ಓ ಓ ಓ ಹೋ ..... 

ಸಿಹಿ ಮುತ್ತು ಸಿಹಿ ಮುತ್ತು ಇನ್ನೊಂದು ,
ಕೆನ್ನೆಗೆ ಗಲ್ಲಕೆ ಮತ್ತೊಂದು
ಕಂದಾ ಕೊಡುವೆಯಾ ...
ಚಿನ್ನದ ತೋಳಲಿ ನನ್ನಾ ಬಳಸುತಾ.......
ನಿನ್ನ ಚಿನ್ನದ ತೋಳಲಿ ನನ್ನಾ ಬಳಸುತಾ
ಸಿಹಿ ಮುತ್ತು ಸಿಹಿ ಮುತ್ತು ಇನ್ನೊಂದು ,
ಕೆನ್ನೆಗೆ ಗಲ್ಲಕೆ ಮತ್ತೊಂದು
ಕಂದಾ ಕೊಡುವೆಯಾ ...

ಮುತ್ತಂತೆ ನಿನ್ನ ನುಡಿಯೂ, 
ಒಂದೊಂದು ಜೇನ ಹನಿಯು
ಸವಿಯುತ ನಲಿವುದು ಈ ನನ್ನ ಜೀವಾ
ಈ ನಿನ್ನ ಸ್ನೇಹದಲ್ಲಿ, ನಾ ತೇಲಿ ಸ್ವರ್ಗದಲ್ಲಿ
ಮರೆಯುವೆ ಮನಸಿನ ನೂರೆಂಟು ನೋವಾ 
ಆಹಾಹಾ ......... ಆಹಾಹಾ 

ಸಿಹಿ ಮುತ್ತು ಸಿಹಿ ಮುತ್ತು ನಂಗೊಂದು, 
ಕೆನ್ನೆಗೆ ಗಲ್ಲಕೆ ಮತ್ತೊಂದು
ಸಿಹಿ ಮುತ್ತು ಸಿಹಿ ಮುತ್ತು ಇನ್ನೊಂದು ,
ಕೆನ್ನೆಗೆ ಗಲ್ಲಕೆಇನ್ನೊಂದು
ನೀನು ಕೊಡುವೆಯಾ, 
ಚಿನ್ನದ ತೋಳಲಿ ನನ್ನಾ ಬಳಸುತಾ.......
ನಿನ್ನ ಚಿನ್ನದ ತೋಳಲಿ ನನ್ನಾ ಬಳಸುತಾ
ಸಿಹಿ ಮುತ್ತು ಸಿಹಿ ಮುತ್ತು ಇನ್ನೊಂದು ,
ಕೆನ್ನೆಗೆ ಗಲ್ಲಕೆ ಮತ್ತೊಂದು
ಇನ್ನೊಂದು ಮತ್ತೊಂದು, 
ಇನ್ನೊಂದು ಮತ್ತೊಂದು ಹಾ .......   

********************************************************************************

ನನ್ನಾಸೆಯ ಹೂವೇ

ಸಾಹಿತ್ಯ: ಚಿ. ಉದಯಶಂಕರ್ 
ಗಾಯಕರು: ರಾಜ್ ಕುಮಾರ್, ಎಸ್. ಜಾನಕಿ 


ನನ್ನಾಸೆಯ ಹೂವೇ ಬೆಳದಿಂಗಳ ಚೆಲುವೆ 
ಇನ್ನೇತಕೆ ಅಳುವೆ ಏಕಾಂತದಿ ಭಯವೆ 
ನಿನ್ನೊಲವಿಗೆ ಸೋತೆನು ಬಂದೆನು ನಾ 

ಈ ಮೌನವೇನು ನಿನ್ನಲ್ಲಿ
ಈ ಕೋಪವೇಕೆ ನನ್ನಲ್ಲಿ 
ನೀ ದೂರ ಹೋದರೆ ಹೀಗೆ 
ನಾ ತಾಳೆ ಈ ವಿರಹದ ಬೇಗೆ 
ಅಹಹ ಅಹಹ ಆಹಾ..... 

ಕಾಣದಿರೆ ನೋಡುವ ಆಸೆ
ನೋಡುತಿರೆ ಸೇರುವ ಆಸೆ
ಸೇರಿದರೆ ಚಿನ್ನ ನಿನ್ನ
ಕೆಂಪಾದ ಚೆಂದುಟಿಯ ಆಸೆ 

ನನ್ನಾಸೆಯ..... 

ಆಹಾ ....ಲಲಲ...... 

ಬಾನಲ್ಲಿ ನೀಲಿ ಬೆರೆತಂತೆ 
ಹೂವಲ್ಲಿ ಜೇನು ಇರುವಂತೆ
ನನ್ನಲ್ಲಿ ನೀನೊಂದಾಗಿ 
ಇರುವಾಗ ಏಕೆ ಈ ಚಿಂತೆ 
ಕಣ್ಣಲ್ಲಿ ಕಣ್ಣ ನೀ ಬೆರೆಸು 
ಲತೆಯಂತೆ ನನ್ನ ಮೈ ಬಳಸು 
ನೂರೆಂಟು ಸುಂದರ ಕನಸು 
ಆ ನಿಮಿಷ ಬಾಳಿಗೆ ಸೊಗಸು 

ನನ್ನಾಸೆಯ ಹೂವೇ......


********************************************************************************

ಎರಡು ಕನಸು (1974)

ಬಾಡಿ ಹೋದ ಬಳ್ಳಿಯಿಂದ


ಸಾಹಿತ್ಯ: ಚಿ. ಉದಯಶಂಕರ್ 
ಗಾಯನ : ಪಿ.ಬಿ.ಶ್ರಿನಿವಾಸ್

ಬಾಡಿ ಹೋದ ಬಳ್ಳಿಯಿಂದ ಹೂವು ಅರಳಬಲ್ಲದೇ
ಬಾಡಿ ಹೋದ ಬಳ್ಳಿಯಿಂದ ಹೂವು ಅರಳಬಲ್ಲದೇ
ತಂತಿ ಹರಿದ ವೀಣೆಯಿಂದ ನಾದ ಹರಿಯಬಲ್ಲದೇ
ಮನಸು ಕಂಡ ಆಸೆ ಎಲ್ಲ ಕನಸಿನಂತೆ ಕರಗಿತಲ್ಲ ಉಲ್ಲಾಸ ಇನ್ನೆಲ್ಲಿದೆ

ಬಾಡಿ ಹೋದ ಬಳ್ಳಿಯಿಂದ ಹೂವು ಅರಳಬಲ್ಲದೆ

ಹಣತೆಯಲ್ಲಿ ದೀಪ ಉರಿಯೇ ಬೆಳಕಿನಲ್ಲಿ ಬಾಳುವೆ
ಹಣತೆಯಲ್ಲಿ ದೀಪ ಉರಿಯೇ ಬೆಳಕಿನಲ್ಲಿ ಬಾಳುವೆ
ಧರೆಯೆ ಹತ್ತಿ ಉರಿಯುವಾಗ ಬದುಕಲೆಲ್ಲಿ ಓಡುವೆ
ಧರೆಯೆ ಹತ್ತಿ ಉರಿಯುವಾಗ ಬದುಕಲೆಲ್ಲಿ ಓಡುವೆ
ತಂತಿ ಹರಿದ ವೀಣೆಯಿಂದ ನಾದ ಹರಿಯಬಲ್ಲದೆ
ಮನಸು ಕಂಡ ಆಸೆ ಎಲ್ಲ ಕನಸಿನಂತೆ ಕರಗಿತಲ್ಲ ಉಲ್ಲಾಸ ಇನ್ನೆಲ್ಲಿದೆ

ಬಾಡಿ ಹೋದ ಬಳ್ಳಿಯಿಂದ ಹೂವು ಅರಳಬಲ್ಲದೆ

ನೀರಿನಲ್ಲಿ ದೋಣಿ ಮುಳುಗೆ ಈಜಿ ದಡವ ಸೇರುವೆ
ನೀರಿನಲ್ಲಿ ದೋಣಿ ಮುಳುಗೆ ಈಜಿ ದಡವ ಸೇರುವೆ
ಸುಳಿಗೆ ದೋಣಿ ಸಿಲುಕಿದಾಗ ಬದುಕಿ ಬರಲು ಸಾಧ್ಯವೆ
ಸುಳಿಗೆ ದೋಣಿ ಸಿಲುಕಿದಾಗ ಬದುಕಿ ಬರಲು ಸಾಧ್ಯವೆ
ಬಾಳ ಪಗಡೆ ಆಟದಲ್ಲಿ ಬರಿಯ ಕಾಯಿ ಎಲ್ಲರೂ
ನಡೆಸುವಾತ ಬೇರೆ ಅವನ ಇಚ್ಚೆ ಯಾರು ಬಲ್ಲರೂ

*******************************************************************************

ಇಂದು ಎನಗೆ ಗೋವಿಂದ


ಸಾಹಿತ್ಯ : ಶ್ರೀ ರಾಘವೇಂದ್ರಸ್ವಾಮಿಗಳು 
ಗಾಯನ : ಎಸ್.ಜಾನಕಿ 

ಇಂದು ಎನಗೆ ಗೋವಿಂದ ನಿನ್ನಯ ಪಾದಾರವಿಂದವ
ತೋರೋ ಮುಕುಂದನೇ....ಮುಕುಂದನೇ
ಸುಂದರ ವದನನೇ ನಂದ ಗೋಪಿಯ ಕಂದ
ಮಂದರೋದ್ಧಾರ ಆನಂದ ಇಂದಿರಾ ರಮಣ....{ಪಲ್ಲವಿ}
ನೊಂದೇನಯ್ಯ ಭವಬಂಧನದೊಳು ಸಿಲುಕಿ
ಮುಂದೆ ದಾರಿ ಕಾಣದೇ ಕುಂದಿದೇ ಜಗದೊಳು
ಕಂದನಂತೆಂದೆನ್ನ ಕುಂದುಗಳ ಎಣಿಸದೇ
ತಂದೆ ಕಾಯೋ ಕೃಷ್ಣ ಕಂದಪ್ಪ..ಜನಕನೇ....{ಪಲ್ಲವಿ}
ಧಾರುಣಿಯೊಳು ಬಲುಭಾರ ಜೀವನನಾಗಿ
ದಾರಿ ತಪ್ಪಿ ನಡೆದೆ...ಸೇರಿದೆ ಕುಜನರಾ
ಆರುಕಾಯುವರಿಲ್ಲ ಸಾರಿದೆ ನಿನಗಯ್ಯ
ಧೀರ ವೇಣುಗೋಪಾಲ ಪಾರುಗಾಣಿಸೋ ಹರಿಯೇ...{ಪಲ್ಲವಿ}

*******************************************************************************

ತಂ ನಂ ತಂ ನಂ 

ಸಾಹಿತ್ಯ: ಚಿ.ಉದಯಶಂಕರ್
ಗಾಯನ : ಪಿ.ಬಿ.ಶ್ರೀನಿವಾಸ್, ಎಸ್.ಜಾನಕಿ.


ತಂ ನಂ ತಂ ನಂ ನನ್ನೀ ಮನಸು ಮಿಡಿಯುತಿದೇ.... ಓ.. ಸೋತಿದೇ....
ಕೈಯಲ್ಲಿ ಕುಣಿವ ಈ ಹೊನ್ನ ಬಳೆಯ  ಘಲ್ ಘಲ್ ಘಲ್ ಘಲ್ ತಾಳಕೆ
ನನ್ನೆದೆಯ ವೀಣೆ ತನ್ನಂತೇ ತಾನೆ  ತನಮ್ ತನಮ್ ತನಮ್ ತನಮ್ ಎಂದಿದೆ
ಘಲ್ ಘಲ್ ಘಲ್ ಘಲ್ ತಾಳಕೆ  ತಂ ನಂ ತಂ ನಂ ಎಂದಿದೆ
ನೀ ಸನಿಹಕೇ ಬಂದರೇ ತನುವಿದೂ
ನಡುಗುತಿದೇ ಏತಕೇ ಎದೆ ಝಲ್ ಎಂದಿದೇ
ಅಹಾಹ.. ಒಲಿದಿಹಾ ಜೀವವೂ ಬೆರೆಯಲೂ
ಮನ ಹೂವಾಗಿ ತನು ಕೆಂಪಾಗಿ ನಿನ್ನಾ ಕಾದಿದೇ
ನೀ ನಡೆಯುವ ಹಾದಿಗೆ ಹೂವಿನಾ ಹಾಸಿಗೆಯಾ ಹಾಸುವೇ ಕೈ ಹಿಡಿದೂ ನಡೆಸುವೇ
ಮೆಲ್ಲಗೇ ನಲ್ಲನೇ ನಡೆಸುಬಾ ಎಂದೂ ಹೀಗೆ ಇರುವಾ ಆಸೆ ನನ್ನೀ ಮನಸಿಗೇ
ತಂ ನಂ ತಂ ನಂ ನನ್ನೀ ಮನಸು ಮಿಡಿಯುತಿದೇ ........   ಓ ಸೋತಿದೇ
ಕೈಯಲ್ಲಿ ಕುಣಿವ ಈ ಹೊನ್ನ ಬಳೆಯ  ಘಲ್ ಘಲ್ ಘಲ್ ಘಲ್ ತಾಳಕೆ
ನನ್ನೆದೆಯ ವೀಣೆ ತನ್ನನ್ತೆ ತಾನೆ  ತಮ್ ನಮ್ ತಮ್ ನಮ್ ಎಂದಿದೆ
ಘಲ್ ಘಲ್ ಘಲ್ ಘಲ್ ತಾಳಕೆ  ತಂ ನಂ ತಂ ನಂ ಎಂದಿದೆ

*******************************************************************************

ಎಂದು ನಿನ್ನ ನೋಡುವೆ

ಸಾಹಿತ್ಯ: ಚಿ.ಉದಯಶಂಕರ್ 
ಗಾಯನ: ಪಿ.ಬಿ.ಶ್ರಿನಿವಾಸ್ 

ಹೆ..ಹೆ..ಹೆಹೇ ... ಆ ಹ ಹಹಾ ಓ.ಹೋ.ಹೊ..ಹೋ..ಲಾ ಲಾಲ ಲ
ಎಂದು ನಿನ್ನ ನೋಡುವೆ ಎಂದು ನಿನ್ನ ಸೇರುವೆ
ಎಂದು ನಿನ್ನ ನೋಡುವೆ ಎಂದು ನಿನ್ನ ಸೇರುವೆ  
ನಿಜ ಹೇಳಲೇನು ನನ್ನ ಜೀವ ನೀನು

ನೂರಾರು ಬಯಕೆ ಆತುರ ತಂದಿದೆ  
ನೂರಾರು ಕನಸು ಕಾತರ ತುಂಬಿದೆ
ಮುಗಿಲಿಗಾಗಿ ಬಾನು ದುಂಬಿಗಾಗಿ ಜೇನು
ನನಗಾಗಿ ನೀನು ನಿನಗಾಗಿ ನಾನು
ನನಗಾಗಿ ನೀನು ನಿನಗಾಗಿ ನಾನು

ಓ..ಓ..ಓ..ಓ ತಣ್ಣನೆ ಗಾಳಿ ಹಿತ ತೋರದಲ್ಲಾ 
ಕೋಗಿಲೆ ಗಾನ ಸುಖ ನೀಡದಲ್ಲಾ
ತಣ್ಣನೆ ಗಾಳಿ ಹಿತ ತೋರದಲ್ಲಾ   
ಕೋಗಿಲೆ ಗಾನ ಸುಖ ನೀಡದಲ್ಲಾ
ಕಾಮನ ಬಿಲ್ಲಿಗೂ ಮನ ಸೋಲಲಿಲ್ಲ
ನಿನ್ನಯ ನೆನಪಲ್ಲೇ ಸೋತೆ ನಾನು
ನನ್ನಾಸೆ ನೀನು ನಿನ್ನಾಸೆ ನಾನು
ನನ್ನಾಸೆ ನೀನು ನಿನ್ನಾಸೆ ನಾನು

ಎಂದು ನಿನ್ನ ನೋಡುವೆ ಎಂದು ನಿನ್ನ ಸೇರುವೆ 
ನಿಜ ಹೇಳಲೇನು ನನ್ನ ಜೀವ ನೀನು
ನಿಜ ಹೇಳಲೇನು ನನ್ನ ಜೀವ ನೀನು
ಕಂಗಳ ಕಾಂತಿ ನೀನಾಗಿರುವೆ ಮೈಮನವೆಲ್ಲಾ ನೀ ತುಂಬಿರುವೆ
ಕಂಗಳ ಕಾಂತಿ ನೀನಾಗಿರುವೆ ಮೈಮನವೆಲ್ಲಾ ನೀ ತುಂಬಿರುವೆ
ನನ್ನೀ ಬಾಳಿಗೆ ಬೆಳಕಾಗಿರುವೆ ಜನುಮ ಜನುಮದ ಜೋಡಿ ನೀನು
ನನಗಾಗಿ ನೀನು ನಿನಗಾಗಿ ನಾನು ಆಹಾ.ಆ ಆ ಆ
ನನಗಾಗಿ ನೀನು ನಿನಗಾಗಿ ನಾನು ಓ..ಹೋ..ಓ

*******************************************************************************

ಪೂಜಿಸಲೆಂದೇ ಹೂಗಳ

ಸಾಹಿತ್ಯ : ಶ್ರೀ ರಾಘವೇಂದ್ರಸ್ವಾಮಿಗಳು 
ಗಾಯನ : ಎಸ್.ಜಾನಕಿ

ಪೂಜಿಸಲೆಂದೇ ಹೂಗಳ ತಂದೆ
ಪೂಜಿಸಲೆಂದೇ ಹೂಗಳ ತಂದೆ
ದರುಶನ ಕೋರಿ ನಾ ನಿಂದೆ
ತೆರೆಯೋ ಬಾಗಿಲನು ರಾಮ
ತೆರೆಯೋ ಬಾಗಿಲನು ರಾಮ
ಪೂಜಿಸಲೆಂದೇ ಹೂಗಳ ತಂದೆ

ಮೋಡದ ಮೇಲೆ ಚಿನ್ನದ ನೀರು , 
ಚೆಲ್ಲುತ ಸಾಗಿದೆ ಹೊನ್ನಿನ ತೇರು
ಮೋಡದ ಮೇಲೆ ಚಿನ್ನದ ನೀರು , 
ಚೆಲ್ಲುತ ಸಾಗಿದೆ ಹೊನ್ನಿನ ತೇರು
ಮಾಣಿಕ್ಯಾದರತಿ ಆಆಆಆ
ಮಾಣಿಕ್ಯಾದರತಿ ಉಷೆ ತಂದಿಹಳೂ
ತಾಮಸವೇಕಿನು ಸ್ವಾಮಿ
ತೆರೆಯೋ ಬಾಗಿಲನು ರಾಮ

ಪೂಜಿಸಲೆಂದೇ ಹೂಗಳ ತಂದೆ
ದರುಶನ ಕೋರಿ ನಾ ನಿಂದೆ
ಪೂಜಿಸಲೆಂದೇ ಹೂಗಳ ತಂದೇ

ಒಲಿದರು ಚೆನ್ನ ,ಮುನಿದರು ಚೆನ್ನ,
ನಿನ್ನ ಆಸರೆಯೇ ಬಾಳಿಗೆ ಚೆನ್ನ
ಒಲಿದರು ಚೆನ್ನ ,ಮುನಿದರು ಚೆನ್ನ,
ನಿನ್ನ ಆಸರೆಯೇ ಬಾಳಿಗೆ ಚೆನ್ನ
ನಾ ನಿನ್ನ ಪಾದದ ಧೂಳಾದರೂ ಚೆನ್ನ
ನಾ ನಿನ್ನ ಪಾದದ ಧೂಳಾದರೂ ಚೆನ್ನ
ಸ್ವೀಕರಿಸು ನನ್ನಾ ಸ್ವಾಮಿ
ತೆರೆಯೋ ಬಾಗಿಲನು ರಾಮ

ಪೂಜಿಸಲೆಂದೇ ಹೂಗಳ ತಂದೆ
ದರುಶನ ಕೋರಿ ನಾ ನಿಂದೆ
ತೆರೆಯೋ ಬಾಗಿಲನು ರಾಮ
ಪೂಜಿಸಲೆಂದೇ ಹೂಗಳ ತಂದೆ

*******************************************************************************

ಎಂದೆಂದೂ ನಿನ್ನನು ಮರೆತು

ಸಾಹಿತ್ಯ: ಚಿ.ಉದಯಶಂಕರ್ 
ಗಾಯನ: ಪಿ.ಬಿ.ಶ್ರಿನಿವಾಸ್,  ವಾಣಿ ಜಯರಾಂ

ಎಂದೆಂದೂ ನಿನ್ನನು ಮರೆತು ಬದುಕಿರಲಾರೆ
ಇನ್ನೆಂದು ನಿನ್ನನು ಅಗಲಿ ನಾನಿರಲಾರೆ
ಒಂದು ಕ್ಷಣ ನೊಂದರು ನೀ ನಾ ತಾಳಲಾರೆ
ಒಂದು ಕ್ಷಣ ವಿರಹವನು ನಾ ಸಹಿಸಲಾರೆ

ಸಾಗರ ಹುಣ್ಣಿಮೆ ಕಂಡು ಉಕ್ಕುವ ರೀತಿ
ನಿನ್ನನು ಕಂಡ ದಿನವೇ ಹೊಮ್ಮಿತು ಪ್ರೀತಿ
ಓಹೋಹೋಹೋ...ನೀ ಕಡಲಾದರೆ ನಾ ನದಿಯಾಗುವೆ
ನಿಲ್ಲದೆ ಓಡಿ ಓಡಿ ನಿನ್ನ ಸೇರುವೆ ಸೇರುವೆ ಸೇರುವೆ.....

ಎಂದೆಂದೂ .. ಎಂದೆಂದೂ ನಿನ್ನನು ಮರೆತು ಬದುಕಿರಲಾರೆ
ಇನ್ನೆಂದು .. ಇನ್ನೆಂದು ನಿನ್ನನು ಅಗಲಿ ನಾನಿರಲಾರೆ

ನೀ ಹೂವಾದರೆ ನಾನು ಪರಿಮಳವಾಗಿ
ಸೇರುವೆ ನಿನ್ನೊಡಲನ್ನು ಬಲು ಹಿತವಾಗಿ
ಓಹೋಹೋಹೋ ನೀ ಮುಗಿಲಾದರೆ ನಾ ನವಿಲಾಗುವೆ
ತೇಲುವ ನಿನ್ನ ನೋಡಿ ನೋಡಿ ಹಾಡುವೆ ಕುಣಿಯುವೆ ನಲಿಯುವೆ.....

ಎಂದೆಂದೂ .. ಎಂದೆಂದೂ ನಿನ್ನನು ಮರೆತು ಬದುಕಿರಲಾರೆ
ಇನ್ನೆಂದು .. ಇನ್ನೆಂದು ನಿನ್ನನು ಅಗಲಿ ನಾನಿರಲಾರೆ

ಸಾವಿರ ಜನುಮವೇ ಬರಲಿ ಬೇಡುವುದೊಂದೇ
ನನ್ನವಳಾಗಿರು ನೀನು ಎನ್ನುವುದೊಂದೇ
ಓಹೋಹೋಹೋ ನೀನಿರುವುದಾದರೆ ಸ್ವರ್ಗವು ಈ ಧರೆ
ನಾನಿನ್ನ ಜೋಡಿಯಾಗಿ ಎಂದು ಬಾಳುವೆ ಬಾಳುವೆ ಬಾಳುವೆ.....

ಎಂದೆಂದೂ .. ಎಂದೆಂದೂ ನಿನ್ನನು ಮರೆತು ಬದುಕಿರಲಾರೆ
ಇನ್ನೆಂದು .. ಇನ್ನೆಂದು ನಿನ್ನನು ಅಗಲಿ ನಾನಿರಲಾರೆ
ಒಂದು ಕ್ಷಣ ನೊಂದರು ನೀ ನಾ ತಾಳಲಾರೆ
ಒಂದು ಕ್ಷಣ ವಿರಹವನು ನಾ ಸಹಿಸಲಾರೆ

********************************************************************************

ದೇವತಾ ಮನುಷ್ಯ (1988)




ಹಾಲಲ್ಲಾದರು ಹಾಕು

ಚಲನಚಿತ್ರ: ದೇವತಾ ಮನುಷ್ಯ (1988)  
ಸಾಹಿತ್ಯ: ಚಿ. ಉದಯಶಂಕರ್ 
ಸಂಗೀತ: ಉಪೇಂದ್ರ ಕುಮಾರ್ 
ನಿರ್ದೇಶನ: ಸಿಂಗೀತಂ ಶ್ರೀನಿವಾಸ ರಾವ್ 
ಹಾಡಿದವರು: ರಾಜ್ ಕುಮಾರ್, ಬಿ ಆರ್ ಛಾಯ  
ನಟರು: ರಾಜ್ ಕುಮಾರ್, ಸುಧಾ ರಾಣಿ, ಗೀತಾ 

ಆ..ಆ.. ಆ.. ಆ..ಹಾಲಲ್ಲಾದರು ಹಾಕು  
ನೀರಲ್ಲಾದರು ಹಾಕು ರಾಘವೇಂದ್ರಾ..
ಹಾಲಲ್ಲಿ ಕೆನೆಯಾಗಿ  ನೀರಲ್ಲಿ ಮೀನಾಗಿ
ಹಾಯಾಗಿರುವೇ ರಾಘವೇಂದ್ರ..
ಹಾಲಲ್ಲಾದರು ಹಾಕು  ನೀರಲ್ಲಾದರು ಹಾಕು
ರಾಘವೇಂದ್ರಾ..
ಹಾಲಲ್ಲಿ ಕೆನೆಯಾಗಿ ನೀರಲ್ಲಿ ಮೀನಾಗಿ
ಹಾಯಾಗಿರುವೇ.. ರಾಘವೇಂದ್ರ..
ಹಾಲಲ್ಲಾದರು ಹಾಕು ನೀರಲ್ಲಾದರು ಹಾಕು ರಾಘವೇಂದ್ರಾ||

ಮುಳ್ಳಲ್ಲಾದರು ನೂಕು  ಕಲ್ಲಲ್ಲಾದರು ನೂಕು
ರಾಘವೇಂದ್ರಾ.. ಆ.. ಆ.. ಆ..
ಮುಳ್ಳಲ್ಲಾದರು ನೂಕು  ಕಲ್ಲಲ್ಲಾದರು ನೂಕು
ರಾಘವೇಂದ್ರಾ
ಮುಳ್ಳಲ್ಲಿ ಮುಳ್ಳಾಗಿ  ಕಲ್ಲಲ್ಲಿ ಕಲ್ಲಾಗಿ
ಒಂದಾಗಿರುವೇ ರಾಘವೇಂದ್ರ
ಬಿಸಿಲಲ್ಲೆ ಒಣಗಿಸು ನೆರಳಲ್ಲೆ ಮಲಗಿಸು
ರಾಘವೇಂದ್ರಾ..
ಬಿಸಿಲಲ್ಲಿ ಕೆಂಪಾಗಿ ನೆರಳಲ್ಲಿ ತಂಪಾಗಿ
ನಗುನಗುತ ಇರುವೇ.. ರಾಘವೇಂದ್ರಾ||

ಹಾಲಲ್ಲಾದರು ಹಾಕು  ನೀರಲ್ಲಾದರು ಹಾಕು
ರಾಘವೇಂದ್ರಾ ಆ.. ಆ.. ಆ..
ಸುಖವನ್ನೆ ನೀಡೆಂದು  ಎಂದೂ ಕೇಳೆನು ನಾನು
ರಾಘವೇಂದ್ರಾ.. ಆ.. ಆ.. ಆ..
ಸುಖವನ್ನೆ ನೀಡೆಂದು  ಎಂದೂ ಕೇಳೆನು ನಾನು
ರಾಘವೇಂದ್ರಾ..

ಮುನ್ನ ಮಾಡಿದ ಪಾಪ, ಯಾರ ತಾತನ ಗಂಟು
ಮುನ್ನ ಮಾಡಿದ ಪಾಪ, ಯಾರ ತಾತನ ಗಂಟು
ನೀನೇ ಹೇಳೂ ರಾಘವೇಂದ್ರ..
ಎಲ್ಲಿದ್ದರೇನು ನಾ, ಹೇಗಿದ್ದರೇನು ನಾ
ರಾಘವೇಂದ್ರಾ..
ನಿನ್ನಲ್ಲಿ ಶರಣಾಗಿ, ನೀ ನನ್ನ ಉಸಿರಾಗಿ
ಬಾಳಿದರೆ ಸಾಕೂ.. ರಾಘವೇಂದ್ರ..

ಹಾಲಲ್ಲಾದರು ಹಾಕು  ನೀರಲ್ಲಾದರು ಹಾಕು
ರಾಘವೇಂದ್ರಾ..
ಹಾಲಲ್ಲಿ ಕೆನೆಯಾಗಿ  ನೀರಲ್ಲಿ ಮೀನಾಗಿ
ಹಾಯಾಗಿರುವೇ ರಾಘವೇಂದ್ರ..
ಹಾಲಲ್ಲಾದರು ಹಾಕು  ನೀರಲ್ಲಾದರು ಹಾಕು
ರಾಘವೇಂದ್ರಾ..

********************************************************************************

ಹೃದಯದಲಿ ಇದೇನಿದು

ಸಾಹಿತ್ಯ :ಚಿ.ಉದಯಶಂಕರ್
ಗಾಯನ:  ಡಾ.ರಾಜ, ಮಂಜುಳ ಗುರುರಾಜ್

ಡಾ.ರಾಜ : ಆಹಹಾ.. ಆಹಾ ಹೂಂ.. ಹೂಂ... ಹೂಂ
                ಹೃದಯದಲಿ ಇದೇನಿದು ನದಿಯೊಂದು ಓಡಿದೆ
                ಹೃದಯದಲಿ ಇದೇನಿದು ನದಿಯೊಂದು ಓಡಿದೆ
                ಕಲಕಲನೇ ಕಲರವ ಕೇಳಿ ಹೊಸ ಬಯಕೆ ಹೂವು ಅರಳಿ
                ಜೊತೆಯಲ್ಲಿ ಪ್ರೇಮಗೀತೆ ಹಾಡುವಾಸೆ ಈಗ
ಮಂಜುಳ : ಹೃದಯದಲಿ ಇದೇನಿದು ನದಿಯೊಂದು ಓಡಿದೆ
                ಹೃದಯದಲಿ ಇದೇನಿದು ನದಿಯೊಂದು ಓಡಿದೆ
                ಕಲಕಲನೇ ಕಲರವ ಕೇಳಿ ಹೊಸ ಬಯಕೆ ಹೂವು ಅರಳಿ
                 ಜೊತೆಯಲ್ಲಿ ಪ್ರೇಮಗೀತೆ ಹಾಡುವಾಸೆ ಈಗ
ಡಾ.ರಾಜ : ಹೃದಯದಲಿ ಇದೇನಿದು
ಮಂಜುಳ ಗುರುರಾಜ್: ನದಿಯೊಂದು ಓಡಿದೆ
ಡಾ.ರಾಜ : ಸುಯ್ ಎನ್ನುತಾ ಬೀಸುವ ತಣ್ಣನೆ ಗಾಳಿಗೆ
ಮಂಜು : ಗುಯ್ ಎನ್ನುವಾ ದುಂಬಿಯ ಹಾಡಿನ ಮೋಡಿಗೆ
ಡಾ.ರಾಜ:  ಈ ಮನಸು ಸೋಲುತಿದೆ
ಮಂಜು: ಹೊಸ ಕನಸು ಕೆಣಕುತಿದೆ
ಡಾ.ರಾಜ : ಮಾಡುವುದೇನೀಗಾ.....
ಮಂಜು: ಹೃದಯದಲಿ ಇದೇನಿದು
ಡಾ.ರಾಜ :ನದಿಯೊಂದು ಓಡಿದೆ
ಮಂಜು:ಘಮ್ ಎನ್ನುವಾ ತಾವರೆ ಹೂವಿನ ಕಂಪಿಗೆ
ಡಾ.ರಾಜ :ಜುಮ್ ಎನ್ನಿಸಿ ತನುವಲಿ ಓಡುವಾ ಮಿಂಚಿಗೆ
ಮಂಜು: ಮೈ ಬಿಸಿಯು ಏರುತಿದೆ
ಡಾ.ರಾಜ : ಈ ಬೆಸುಗೆ ಹೇಳುತಿದೆ
ಮಂಜು: ತುಂಬಿತು ಆನಂದಾ.......
ಡಾ.ರಾಜ : ಹೃದಯದಲಿ ಇದೇನಿದು ನದಿಯೊಂದು ಓಡಿದೆ
ಮಂಜು: ಹೃದಯದಲಿ ಇದೇನಿದು ನದಿಯೊಂದು ಓಡಿದೆ
ಡಾ.ರಾಜ : ಕಲಕಲನೇ ಕಲರವ ಕೇಳಿ
ಮಂಜು: ಹೊಸ ಬಯಕೆ ಹೂವು ಅರಳಿ
ಇಬ್ಬರೂ : ಜೊತೆಯಲ್ಲಿ ಪ್ರೇಮಗೀತೆ ಹಾಡುವಾಸೆ ಈಗ
              ಹೃದಯದಲಿ ಇದೇನಿದು ನದಿಯೊಂದು ಓಡಿದೆ
              ಹೃದಯದಲಿ ಇದೇನಿದು ನದಿಯೊಂದು ಓಡಿದೆ

********************************************************************************

ಈ ಸೊಗಸಾದ ಸಂಜೆ

ಸಾಹಿತ್ಯ : ಚಿ.ಉದಯಶಂಕರ್ 
ಗಾಯನ : ಡಾ.ರಾಜಕುಮಾರ್ ಮತ್ತು ವಾಣಿ ಜಯರಾಂ 

ಡಾ.ರಾಜ : ಈ ಸೊಗಸಾದ ಸಂಜೆ
                  ಈ ಸೊಗಸಾದ ಸಂಜೆ ನಿನ್ನನ್ನು ನೋಡುತಾ ನನ್ನನ್ನೇ ಮರೆತೆ
                   ಎಂದೆಂದೂ ಜೊತೆಯಿರುವಾ ಬಯಕೆ ಇನ್ನೂ ಏಕೆ
ವಾಣಿ : ಈ ಸೊಗಸಾದ ಸಂಜೆ ನಿನ್ನನ್ನು ನೋಡುತಾ ನನ್ನನ್ನೇ ಮರೆತೆ
          ಎಂದೆಂದೂ ಜೊತೆಯಿರುವಾ ಬಯಕೆ ಇನ್ನೂ ಏಕೆ
ಡಾ.ರಾಜ : ಈ ಸೊಗಸಾದ ಸಂಜೆ
ಡಾ.ರಾಜ :ನಲ್ಲೆಯು ಮುಡಿದ ಮಲ್ಲಿಗೆ ಹೂವು
               ಪ್ರೇಮದ ಗೀತೆ ಹಾಡಿದೆ ಇಂಪಾಗಿ
               ಕಂಪನ್ನು ಚೆಲ್ಲಿದೆ ಹಿತವಾಗಿ
ವಾಣಿ : ನಲ್ಲನ ನುಡಿಯೂ ಕೊಳಲಿನ ದನಿಯೊ
           ಕಾಣೆನು ನಾನು ಕೇಳುತ ಬೆರಗಾಗಿ
           ಸಂಕೋಚ ತುಂಬಿತು ತಾನಾಗಿ
ಡಾ.ರಾಜ :  ಓ...ಓ....ಪ್ರೇಮದ ಗಂಗೆ ಪ್ರಣಯದ ತುಂಗೆ  ನಲ್ಲೆಯ ಮಾತುಗಳೆಲ್ಲ
ವಾಣಿ :  ಈ ಸೊಗಸಾದ ಸಂಜೆ ನಿನ್ನನ್ನು ನೋಡುತಾ ನನ್ನನ್ನೇ ಮರೆತೆ
ಇಬ್ಬರೂ: ಎಂದೆಂದೂ ಜೊತೆಯಿರುವಾ ಬಯಕೆ ಇನ್ನೂ ಏಕೆ  ಈ ಸೊಗಸಾದ ಸಂಜೆ
ವಾಣಿ: ಗೆಳೆಯನೆ ನಿನ್ನ ಕಣ್ಣಲೆ ಇಂದು
          ಪ್ರೇಮದ ಲೋಕ ನೋಡಿದೆ ನಾನೀಗ
          ನನ್ನಲ್ಲೀ ಮೂಡಿತು ಅನುರಾಗ
ಡಾ.ರಾಜ :    ಅರಗಿಣಿ ಕೂಡ ನಾಚಿತು ನಿನ್ನ
                   ಮಾತಾನು ಕೇಳಿ ಕಾದಿದೆ ಓ ಜಾಣೆ
                  ನಿನ್ನಂತೆ ಯಾರನು ನಾ ಕಾಣೆ
ವಾಣಿ :  ಓ......ಓ...... ಬಾಳಲಿ ಸರಸ ತುಂಬಿದ ಕಳಸ  ಪ್ರೇಮವು ತುಂಬಿರುವಾಗ
ಡಾ.ರಾಜ : ಈ ಸೊಗಸಾದ ಸಂಜೆ ನಿನ್ನನ್ನು ನೋಡುತಾ ನನ್ನನ್ನೇ ಮರೆತೆ
ವಾಣಿ :  ಈ ಸೊಗಸಾದ ಸಂಜೆ ನಿನ್ನನ್ನು ನೋಡುತಾ ನನ್ನನ್ನೇ ಮರೆತೆ
ಇಬ್ಬರೂ: ಎಂದೆಂದೂ ಜೊತೆಯಿರುವಾ ಬಯಕೆ ಇನ್ನೂ ಏಕೆ
              ಈ ಸೊಗಸಾದ ಸಂಜೆ

********************************************************************************

ನಿನ್ನಂಥ ಅಪ್ಪ ಇಲ್ಲಾ

ಸಾಹಿತ್ಯ : ಚಿ.ಉದಯಶಂಕರ್ 
ಗಾಯನ :ಡಾ.ರಾಜಕುಮಾರ್, ಬಿ.ಆರ್.ಛಾಯಾ 

ಬಿ.ಆರ್.ಛಾಯಾ: ನಿನ್ನಂಥ ಅಪ್ಪ ಇಲ್ಲಾ (ಆಹಾ) ಒಂದೊಂದು ಮಾತು ಬೆಲ್ಲ (ಒಹೋ)
                        ನಿನ್ನಂಥ ಅಪ್ಪ ಇಲ್ಲಾ (ಆಹಾ) ಒಂದೊಂದು ಮಾತು ಬೆಲ್ಲ (ಒಹೋ)
                        ನೀನೇ ನನ್ನ ಜೀವ ನೀನೇ ನನ್ನ ಪ್ರಾಣ
                       ಯಾವ ದೇವ ತಂದ ವರವೋ ಇನ್ನು ನಾನು ಅರಿಯೆನು
ಡಾ.ರಾಜ: ನಿನ್ನಂಥ ಮಗಳು ಇಲ್ಲಾ (ಆಹಾ) ಬಾಳಲ್ಲಿ ನೀನೇ ಎಲ್ಲಾ (ಒಹೋ)
                ನಿನ್ನಂಥ ಮಗಳು ಇಲ್ಲಾ ಬಾಳಲ್ಲಿ ನೀನೇ ಎಲ್ಲಾ
                ನಿನ್ನ ಕಂಡ ಮೇಲೆ ಬೆಳಕ ಕಂಡೆ ಬಾಲೆ
               ಯಾವ ದೇವ ತಂದ ವರವೋ ಇನ್ನು ನಾನು ಅರಿಯೆನು
ಬಿ.ಆರ್.ಛಾಯಾ: ನಿನ್ನಂಥ ಅಪ್ಪ ಇಲ್ಲಾ (ಆಹಾ..)
ಡಾ.ರಾಜ : ನಿನ್ನಂಥ ಮಗಳು ಇಲ್ಲಾ (ಹ್ಹಹ್ಹಹ್ಹ.. )  
ಬಿ.ಆರ್.ಛಾಯಾ:  ನೀ ಹೀಗೇ ನಡೆಯಲು ನಡು ಹೀಗೇ ಕುಣಿಯಲು
                          ಹದಿನೆಂಟು ವಯಸಿನ ಹುಡುಗನ ಹಾಗಿದೆ
ಡಾ.ರಾಜ: ಹೇ... ಹೇ... ನೀ ಹೀಗೆ ನಗುತಿರೆ ಜೊತೆಯಾಗಿ ಬರುತಿರೆ
               ಆನಂದ ತರುತಿರೆ ಹುಡುಗನೇ ಎಂದಿಗೂ
ಇಬ್ಬರೂ : ರಂಪಂ ರಪಂಪ ಪಂಪ ರಂಪಂ ರಪಂಪ ಪಂಪ
ಬಿ.ಆರ್.ಛಾಯಾ:  ಮಾತಿನಾ ಮೋಡಿಗೆ ನಿನ್ನಾಣೆ ನಾನು ಮೆಚ್ಚಿದೆ
ಡಾ.ರಾಜ: ನಿನ್ನಂಥ ಮಗಳು ಇಲ್ಲಾ
ಬಿ.ಆರ್.ಛಾಯಾ: ನಿನ್ನಂಥ ಅಪ್ಪ ಇಲ್ಲಾ
ಡಾ.ರಾಜ: ಸಂತೋಷವೆಂದರೆ ಉಲ್ಲಾಸವೆಂದರೆ ಸಂಗೀತವೆಂದರೆ ನಿನ ಜೊತೆ ನಡೆದರೆ
ಬಿ.ಆರ್.ಛಾಯಾ:  ಮುದ್ಡಾದ ಮಾತನೆ ಹಿತವಾದ ರಾಗದಿ ದಿನವೆಲ್ಲ ಹಾಡಲು ಹೇಗೇ ನೀ ಅರಿತೆಯೋ
ಇಬ್ಬರೂ : ರಂಪಂ ರಪಂಪ ಪಂಪ ರಂಪಂ ರಪಂಪ ಪಂಪ
ಡಾ.ರಾಜ: ನನ್ನ ಈ ಅರಗಿಣಿ ಮಾತಾಡೇ ನೋಡಿ ಕಲಿತೆನೋ
ಬಿ.ಆರ್.ಛಾಯಾ: ನಿನ್ನಂಥ ಅಪ್ಪ ಇಲ್ಲಾ ಒಂದೊಂದು ಮಾತು ಬೆಲ್ಲ
ಡಾ.ರಾಜ: ನಿನ್ನಂಥ ಮಗಳು ಇಲ್ಲಾ ಬಾಳಲ್ಲಿ ನೀನೇ ಎಲ್ಲಾ
ಬಿ.ಆರ್.ಛಾಯಾ:  ನೀನೇ ನನ್ನ ಜೀವ
ಡಾ.ರಾಜ: ನೀನೇ ನನ್ನ ಪ್ರಾಣ
ಇಬ್ಬರೂ : ಯಾವ ದೇವ ತಂದ ವರವೋ ಇನ್ನು ನಾನು ಅರಿಯೆನು
ಬಿ.ಆರ್.ಛಾಯಾ: ನಿನ್ನಂಥ ಅಪ್ಪ ಇಲ್ಲಾ
ಡಾ.ರಾಜ:ನಿನ್ನಂಥ ಮಗಳು ಇಲ್ಲಾ
ಬಿ.ಆರ್.ಛಾಯಾ: ನಿನ್ನಂಥ ಅಪ್ಪ ಇಲ್ಲಾ
ಡಾ.ರಾಜ:ನಿನ್ನಂಥ ಮಗಳು ಇಲ್ಲಾ
ಬಿ.ಆರ್.ಛಾಯಾ: ನಿನ್ನಂಥ ಅಪ್ಪ ಇಲ್ಲಾ
ಡಾ.ರಾಜ:ನಿನ್ನಂಥ ಮಗಳು ಇಲ್ಲಾ
ಬಿ.ಆರ್.ಛಾಯಾ: ನಿನ್ನಂಥ ಅಪ್ಪ ಇಲ್ಲಾ
ಡಾ.ರಾಜ:ನಿನ್ನಂಥ ಮಗಳು ಇಲ್ಲಾ
ಬಿ.ಆರ್.ಛಾಯಾ: ನಿನ್ನಂಥ ಅಪ್ಪ ಇಲ್ಲಾ
ಡಾ.ರಾಜ:ನಿನ್ನಂಥ ಮಗಳು ಇಲ್ಲಾ
ಬಿ.ಆರ್.ಛಾಯಾ: ನಿನ್ನಂಥ ಅಪ್ಪ ಇಲ್ಲಾ
ಡಾ.ರಾಜ:ನಿನ್ನಂಥ ಮಗಳು ಇಲ್ಲಾ

********************************************************************************

ಬಿಸಿಲಲ್ಲೇ ಒಣಗಿಸು ನೆರಳಲ್ಲೇ

ಸಾಹಿತ್ಯ : ಚಿ.ಉದಯಶಂಕರ್
ಗಾಯನ : ಬಿ.ಆರ್.ಛಾಯಾ 

ಬಿಸಿಲಲ್ಲೇ ಒಣಗಿಸು ನೆರಳಲ್ಲೇ ಮಲಗಿಸು ರಾಘವೇಂದ್ರ
ಬಿಸಲಲ್ಲಿ ಕೆಂಪಾಗಿ ನೆರಳಲ್ಲಿ ತಂಪಾಗಿ ನಗುನಗುತಾ ಇರುವೆ ರಾಘವೇಂದ್ರ
ಹಾಲಲ್ಲಾದರೂ ಹಾಕು ನೀರಲ್ಲಾದರೂ ಹಾಕು ರಾಘವೇಂದ್ರ

********************************************************************************

ಇದೇ ಜೀವನ 

ಸಾಹಿತ್ಯ : ಚಿ.ಉದಯಶಂಕರ್ 
ಗಾಯನ :ಎಸ್.ಪಿ.ಬಿ,. 

ಇದೇ ಜೀವನ... ಇದೇ ಜೀವನ
ಅರಿತಾಗ ಬಾಳು ಸುಮಧುರ ಗಾನಾ
ದೇವರು ಬೇರೆ ಇಲ್ಲ ಕಾಣದೆಯೇ ಅಡಗಿಲ್ಲ
ಅರಿಯುವ ಜಾಣ್ಮೆಯು ಬೇಕು
ನೋಡುವ ಕಣ್ಣಿರಬೇಕು
ಪ್ರೇಮವೂ ತುಂಬಿದ ಜೀವ
ಮಾನವನಾದರು ದೈವ

********************************************************************************

ಆಕಾಶ್ (2005)

ಚಲನಚಿತ್ರ: ಆಕಾಶ್ (2005)
ಸಾಹಿತ್ಯ: ಕೆ. ಕಲ್ಯಾಣ್ 
ಸಂಗೀತ: ಆರ್. ಪಿ. ಪಟ್ನಾಯಕ್ 
ನಿರ್ದೇಶನ: ಮಹೇಶ್ ಬಾಬು 
ಗಾಯನ: ಕುನಾಲ್ ಗಾಂಜಾವಾಲ 
ನಟರು: ಪುನೀತ್ ರಾಜ್ ಕುಮಾರ್, ರಮ್ಯ   


ನೀನೆ ನೀನೆ ನನಗೆಲ್ಲ ನೀನೆ
ಮಾತು ನೀನೆ ಮನಸೆಲ್ಲ ನೀನೆ
ನನ್ನ ಎದೆಯ ತುಂಬಾ
ನಿನ್ನ ಪ್ರೀತಿ ತಾನೇ
ನೀನು ಇರದ ಮೇಲೆ ಹೇಗೆ ಇರಲಿ
ನಾ ಹೇಳೇ ಜಾಣೆ 

ಮಳೆಯಲ್ಲುನಾ ಬಿಸಿಲಲ್ಲುನಾ
ಚಳಿಯಲ್ಲುನಾ ಜೊತೆ ನಡೆಯುವೆ
ಹಸಿವಲ್ಲುನಾ ನೋವಲ್ಲುನಾ
ಸಾವಲ್ಲುನಾ ಜೊತೆ ನಿಲ್ಲುವೆ
ನಾನಾದೇಶ ನಾನಾವೇಷ
ಯಾವುದಾದರೇನು ಒಪ್ಪಿಕೊಂಡ
ಈ ಮನಸುಗಳೆರಡು ಎಂದು ಹಾಲು ಜೇನು.... 

ಕ್ಷಣವಾಗಲಿ ದಿನವಾಗಲಿ ಯುಗವಾಗಲಿ ನಾ ಕಾಯುವೆ
ಕಲ್ಲಾಗಲಿ ಮುಳ್ಳಾಗಲಿ ನಿನ್ನ ಬದುಕಲಿ ಬೆಳಕಾಗುವೆ
ಏನೇ ಆಗಲಿ ಪ್ರಾಣ ಹೋಗಲಿ ನನಗೆ ನೀನೆ ಬೇಕು
ನಿನ್ನ ನನ್ನ ಈ ಪ್ರೀತಿಯ ಕಂಡು ಲೋಕ ಮೆಚ್ಚಬೇಕು.....


********************************************************************************

ಗಂಧದ ಗುಡಿ (1973)



ಚಲನಚಿತ್ರ: ಗಂಧದ ಗುಡಿ (1973)
ಸಾಹಿತ್ಯ: ಚಿ. ಉದಯಶಂಕರ್ 
ಸಂಗೀತ: ರಾಜನ್-ನಾಗೇಂದ್ರ 
ಗಾಯನ: ಪಿ. ಬಿ. ಶ್ರೀನಿವಾಸ್  
ನಿರ್ದೇಶನ: ವಿಜಯ್ 
ನಟನೆ: ರಾಜ್ ಕುಮಾರ್, ವಿಷ್ಣುವರ್ಧನ್, 
ಕಲ್ಪನಾ, ಎಂ. ಪಿ. ಶಂಕರ್ 


ನಾವಾಡುವ ನುಡಿಯೇ ಕನ್ನಡ ನುಡಿ
ಚಿನ್ನದ ನುಡಿ ಸಿರಿಗನ್ನಡ ನುಡಿ
ನಾವಿರುವ ತಾಣವೇ ಗಂಧದ ಗುಡಿ
ಅಂದದ ಗುಡಿ ಚೆಂದದ ಗುಡಿ 

ನಾವಾಡುವ ನುಡಿಯೇ ಕನ್ನಡ ನುಡಿ
ನಾವಿರುವ ತಾಣವೇ ಗಂಧದ ಗುಡಿ
ಅಂದದ ಗುಡಿ ಗಂಧದ ಗುಡಿ
ಚಂದದ ಗುಡಿ ಶ್ರೀಗಂಧದ ಗುಡಿ...
ಅಹಹ ಅಹಹ ಅಹಹ.....

ಹಸಿರಿನ ಬನಸಿರಿಗೇ ಒಲಿದು
ಸೌಂದರ್ಯ ಸರಸ್ವತಿ ಧರೆಗಿಳಿದು
ಹರಿಯುವ ನದಿಯಲಿ ಈಜಾಡಿ
ಹೂಬನದಲಿ ನಲಿಯುತ ಓಲಾಡಿ
ಚೆಲುವಿನ ಬಲೆಯ ಬೀಸಿದಳೋ
ಈ ಗಂಧದ ಗುಡಿಯಲಿ ನೆಲೆಸಿಹಳೋ
ಇದು ಯಾರ ತಪಸಿನ ಫಲವೋ
ಈ ಕಂಗಳು ಮಾಡಿದ ಪುಣ್ಯವೋ....
ಅಹಹಹ ಓ.....

ಚಿಮ್ಮುತ ಓಡಿವೆ ಜಿಂಕೆಗಳು
ಕುಣಿದಾಡುತ ನಲಿದಿವೆ ನವಿಲುಗಳು
ಮುಗಿಲನು ಚುಂಬಿಸೋ ಆಸೆಯಲಿ
ತೂಗಾಡುತ ನಿಂತ ಮರಗಳಲಿ
ಹಾಡುತಿರೆ ಬಾನಾಡಿಗಳು
ಎದೆಯಲ್ಲಿ ಸಂತಸದಾ ಹೊನಲು
ಇದು ವನ್ಯ ಮೃಗಗಳ ಲೋಕವೋ
ಈ ಭೂಮಿಗೆ ಇಳಿದ ನಾಕವೋ.....
ಅಹಹಹ ಓ....

******************************************************************************

ಎಲ್ಲೂ ಹೋಗಲ್ಲ ಮಾಮ

ಸಾಹಿತ್ಯ : ಚಿ.ಉದಯಶಂಕರ್ 
ಗಾಯಕರು: ಪಿ.ಬಿ.ಶ್ರೀನಿವಾಸ್, ಎಸ್. ಜಾನಕಿ 


ಎಲ್ಲೂ ಹೋಗಲ್ಲ ಮಾಮ ಎಲ್ಲೂ ಹೋಗಲ್ಲ
ಎಂದಿಗೂ ನಾನು ನಿನ್ನನು ಬಿಟ್ಟು ದೂರ ಹೋಗಲ್ಲ
ಎಲ್ಲೂ ಹೋಗಲ್ಲ ಮಾಮ ಎಲ್ಲೂ ಹೋಗಲ್ಲ
ಚಂದಮಾಮ ಚಕ್ಕುಲಿಮಾಮ 
ನನ್ನನು ನೋಡಿ ನಗುತಿರುವ
ಚಂದಮಾಮ ಚಕ್ಕುಲಿಮಾಮ 
ನನ್ನನು ನೋಡಿ ನಗುತಿರುವ
ಮುತ್ತನು ಕೊಟ್ಟು ಕಚಗುಳಿ ಇಟ್ಟು 
ನಿನ್ನನು ನಗಿಸು ಎನುತಿರುವ
ಕೋಪ ಬಿಟ್ಟು ಚುಕ್ಕಿಗಳೆಷ್ಟು?
ಕೋಪ ಬಿಟ್ಟು ಚುಕ್ಕಿಗಳೆಷ್ಟು 
ಎಣಿಸಿ ಹೇಳು ಬಾ ಮಾಮ
ಎಣಿಸಿ ಹೇಳು ಬಾ ಮಾಮ
ಹುಂ ಹುಂ ಹೇಳಲ್ಲ ಹೋಗು
ಉಂ ಉಂ (ಅಳು) 

ಎಲ್ಲೂ ಹೋಗಲ್ಲ ಮಾಮ ಎಲ್ಲೂ ಹೋಗಲ್ಲ
ಅಮ್ಮ ಇಲ್ಲ ಅಪ್ಪ ಇಲ್ಲ ನೀನೇ ನನಗೆಲ್ಲ

ಆ ಹಾ ಆಹಾಹಾಹಾ...
ಕೋಪ ನನಗಿಲ್ಲ ಕಂದ ಕೋಪ ನನಗಿಲ್ಲ
ಎಂದಿಗು ನಾನು ನಿನ್ನ ಮೇಲೆ ಕೋಪ ಮಾಡೋಲ್ಲ

ಎಲ್ಲೂ ಹೋಗಲ್ಲ ಮಾಮ ಎಲ್ಲೂ ಹೋಗಲ್ಲ

ಮದುವೆಯು ಬೇಕು ಗಂಡನು ಬೇಕು
ಪುಟಾಣಿ ಮಕ್ಕಳು ಇರಬೇಕು
ಮದುವೆಯು ಬೇಕು ಗಂಡನು ಬೇಕು
ಪುಟಾಣಿ ಮಕ್ಕಳು ಇರಬೇಕು
ಮಡಿಲಲಿ ಒಂದು ತೊಟ್ಟಿಲಲೊಂದು
ಪುಟ್ಟಿಯ ಕಾಡುತ ಅಳಬೇಕು 

ಆಂ ಆಂ ಆಂ ಆಂ...

ಆ ನೋಟವ ಕಂಡು ಸಂತಸಗೊಂಡು
ಆ ನೋಟವ ಕಂಡು ಸಂತಸಗೊಂಡು
ನಾನು ನಗು ನಗುತಿರಬೇಕು  
ನಾನು ನಗು ನಗುತಿರಬೇಕು
ಇಲ್ಲೇ ಇರಬೇಕು ನನ್ನ ಜೊತೆಯಲೇ ಇರಬೇಕು
ಎಂದಿಗು ನಾನು ನಿನ್ನನು ಬಿಟ್ಟು ದೂರ ಹೋಗಲ್ಲ

ಎಲ್ಲೂ ಹೋಗಲ್ಲ ಮಾಮ ಎಲ್ಲೂ ಹೋಗಲ್ಲ
ಎಂದಿಗೂ ನಾನು ನಿನ್ನ ಬಿಟ್ಟು ದೂರ ಹೋಗಲ್ಲ
ಎಲ್ಲೂ ಹೋಗಲ್ಲ ಮಾಮ ಎಲ್ಲೂ ಹೋಗಲ್ಲ

*********************************************************************************

ಅರೆರೇರೆ ಗಿಣಿರಾಮ

ಸಾಹಿತ್ಯ : ಚಿ.ಉದಯಶಂಕರ್ 
ಗಾಯಕರು : ಪಿ.ಸುಶೀಲಾ 


ಅರೆರೇರೆ ಗಿಣಿರಾಮ...
ಅರೆರೇರೆರೆರೇರೆ ಗಿಣಿರಾಮ 
ಹೊಯ್ ಪಂಚರಂಗಿ ರಾಮ 
ಅರೆರೇರೆರೆರೇರೆ ಗಿಣಿರಾಮ 
ಹೊಯ್ ಪಂಚರಂಗಿ ರಾಮ 

ಮಾತಾಡೋ....  ಮಾತಾಡೋ ಮುದ್ದು ಗಿಣಿರಾಮ 
ಅಹ್  ಮಾತಾಡೋ ನನ್ನ ಪುಟ್ಟ ರಾಮ 
ನಿನ್ನಾಸೆ ನನಗೈತೆ ನಿನ್ನ ಮೇಲೆ ಮನಸೈತೆ
ನಿನ ಕಂಡು ನಾ ಸೋತೆ ರಾಮ 
ನನ  ಬಿಟ್ ಓಡ್ ಬೇಡಯ್ಯಾ ರಾಮ 

ಅರೆರೇರೆ ಗಿಣಿರಾಮ 
ಹೊಯ್ ಪಂಚರಂಗಿ ರಾಮ 
ಮಾತಾಡೋ ಮುದ್ದು ಗಿಣಿರಾಮ 
ಪೊನ್ನ ಮಾತಾಡೋ ನನ್ನ ಪುಟ್ಟ ರಾಮ 

ಹ್ಹಹ್ಹಹ್ಹಹ್ಹ...  ಹ್ಹಹ್ಹಹ್ಹಹ್ಹ...  

ನಿನೆತನಕ ಹಿಂಗಿಲ್ಲಾ ನಾನು ನಾನಾಗಿಲ್ಲಾ 
ನಿನೆತನಕ ಹಿಂಗಿಲ್ಲಾ ನಾನು ನಾನಾಗಿಲ್ಲಾ 
ನಿಂತಲ್ಲೇ ನಿಲ್ಲಲಾರೆ ನಲ್ಲಾ  
ಈ ತಳಮಳವ ನಾ ತಾಳೆನಲ್ಲಾ 
ಮನ ಹಿಗ್ಗಿ ಹಗುರಾಗೆ ತನುಕಾದೊ ಕೆಂಪಾಗಿ 
ಮೈ ಬಟ್ಟೆ ಬಿಗಿಯಾಗಿ ರಾಮ,  
ನನ್ನ ಎದೆ ಭಾರವಾಯಿತ್ತಲ್ಲ ರಾಮ 
ಅಹ್ ಇರಲಾರೇ,  
ಇನ್ನು ಇರಲಾರೇ ನಿನ್ನ ಬಿಟ್ಟು ರಾಮ 
ಪೊನ್ನ ಮಾತಾಡು ನನ್ನ ಪುಟ್ಟ ರಾಮ 

ತಣ್ಣಾದ ನಡು ಹಿಂಗೇ ಅಡ್ಯಾಡಿ ಕುಣಿದಂಗೆ  
ತಣ್ಣಾದ ನಡು ಹಿಂಗೇ ಅಡ್ಯಾಡಿ ಕುಣಿದಂಗೆ 
ಮೈ ಎಲ್ಲಾ ಜುಮ್ ಎಂದು ನಂಗೆ 
ನಿನ್ನ ತಬ್ಬಿ ಕುಂತಿರುವಾಸೆ ಹಿಂಗೇ
ಮುಂಜಾನೆ ಮಂಜಿನಲಿ ನೀರಲ್ಲಿ ಮುಳುಗಿರಲಿ 
ಬಿಸಿಯುಸಿರ ಕಾವಿಂದ ರಾಮ 
ಮೈ ಬಾಡಿದ ಹೂವಾಯಿತು ರಾಮ 
ಉಹುಂ... ಬಿಡಲಾರೆ...  
ನಿನ್ನ ಬಿಡಲಾರೆ ಬಂಗಾರ ರಾಮಾ 
ಹೊನ್ನ ಮಾತಾಡೋ ನನ್ನ ಪುಟ್ಟ ರಾಮಾ 
ನಿನ್ನಾಸೆ ನನಗೈತೆ ನಿನ್ನ ಮೇಲೆ ಮನಸೈತೆ
ನಿನ ಕಂಡು ನಾ ಸೋತೆ ರಾಮ 
ನನ  ಬಿಟ್ ಓಡ್ ಬೇಡಯ್ಯಾ ರಾಮ 

ಅರೆರೇರೆರೆರೇರೆ ಗಿಣಿರಾಮ....  
ಹೊಯ್ ಪಂಚರಂಗಿ ರಾಮ...  
ಅರೆರೇರೆರೆರೇರೆ ಗಿಣಿರಾಮ 
ಹೊಯ್ ಪಂಚರಂಗಿ ರಾಮ 
ಮಾತಾಡೋ.. ಮಾತಾಡೋ ಮುದ್ದು ಗಿಣಿರಾಮ 
ಪೊನ್ನ ಮಾತಾಡೋ ನನ್ನ ಪುಟ್ಟ ರಾಮಾ 
 ಆಹ್ಹಾ ಲಲ್ಲಲ್ಲಲ್ಲಲ್ಲಲ್ಲಾಲಲಲಲಾ 

*********************************************************************************

ಗೀತಾ (1981)


ಜೊತೆಯಲಿ ಜೊತೆ ಜೊತೆಯಲಿ 


ಚಲನಚಿತ್ರ: ಗೀತಾ (1981)
ಸಾಹಿತ್ಯ: ಚಿ. ಉದಯಶಂಕರ್ 
ಸಂಗೀತ: ಇಳಯರಾಜ  
ಗಾಯನ: ಎಸ್ ಪಿ ಬಾಲಸುಬ್ರಹ್ಮಣ್ಯಂ, ಎಸ್. ಜಾನಕಿ 
ನಿರ್ದೇಶನ: ಶಂಕರ್ ನಾಗ್ 
ನಟರು: ಶಂಕರ್ ನಾಗ್, ಪದ್ಮಾವತಿ ರಾವ್ 

ಜೊತೆಯಲಿ ಜೊತೆ ಜೊತೆಯಲಿ
ಇರುವೆನು ಹೀಗೆ ಎಂದು
ಹೊಸ ಹರುಷವ ತರುವೆನು ಇನ್ನು ಎಂದು
ಓ....ಎಂತ ಮಾತಾಡಿದೆ ಇಂದು
ನೀ  ಎಂತ ಮಾತಾಡಿದೆ,
ನನ್ನ ಮನಸಿನ ಭಾವನೆ ನೀನೆ ಹೇಳಿದೆ 

ಪ್ರೀತಿಯೆಂದರೇನು ಎಂದು ಈಗ ಅರಿತೆನು
ಸವಿನುಡಿಯಲಿ ತನು ಅರಳಿತು ಸವಿಗನಸಲಿ ಮನ ಕುಣಿಯಿತು
ಒಲವಿನ ಈ ಮಾತಿಗೆ ಕರಗಿ ಹೋದೆ ನೋಟಕೆ
ಕೊಡುವೆ ನಿನಗೆ ಬಾ ಪ್ರೀತಿ ಕಾಣಿಕೆ.....

ಮೋಡದಲ್ಲಿ ಜೋಡಿಯಾಗಿ ತೇಲಿ ನಲಿಯುವ
ಹಾರಾಡುವ ಅರಗಿಳಿಗಳ ಮಾತಾಡಿಸಿ ಮುದ್ದಾಡುವ
ಕಾಮನ ಬಿಲ್ಲೇರುವ ಜಾರುತ ನಾವಾಡುವ
ಹಗಲು ಇರುಳು ಒಂದಾಗಿ ಹಾಡುವ.....


********************************************************************************


ಕೇಳದೆ ನಿಮಗೀಗ ದೂರದಲ್ಲಿ ಯಾರೋ

ಸಾಹಿತ್ಯ: ಚಿ. ಉದಯಶಂಕರ್ 
ಗಾಯನ: ಎಸ್ ಪಿ ಬಾಲಸುಬ್ರಹ್ಮಣ್ಯಂ 


ಕೇಳದೆ ನಿಮಗೀಗ ದೂರದಲ್ಲಿ ಯಾರೋ
ಹಾಡು ಹೇಳಿದಂತೆ
ಒಂದು ಹೆಣ್ಣಿನ... ಓ.....
ನೊಂದ ವಿರಹ ಗೀತೆ

ಸಂಪಿಗೆ ಒಂದೂರು ಮಲ್ಲಿಗೆ ಒಂದೂರು,
ನಡುವಲ್ಲಿ ನದಿಯೊಂದು
ಹಗ್ಗದ ಉಯ್ಯಾಲೆ ತೂಗುವ ಹಾಗೊಂದು,
ಸೇತುವೆಯು ಅಲ್ಲೊಂದು
ಈ ಊರ ಚೆಲುವೆ ಆ ಊರ ಚೆಲುವ,
ನದಿಯಂಚಲಿ ಓಡಾಡುತ ಎದುರಾದರು ಒಮ್ಮೆ

ಚೆಲುವೆಯ ಕಂಡಾಗ ಚೆಲುವನ ಮನದಲ್ಲಿ ನೂರಾಸೆ ಬಂದಾಗ
ಚೆಲುವೆಯ ಕಣ್ಣಲ್ಲಿ ಚೆಲುವನು ಮನೆಮಾಡಿ ಶಿಲೆಯಂತೆ ನಿಂತಾಗ
ಹೂವಾಗಿ ಮನಸು ನೂರಾರು ಕನಸು
ಬೆರಗಾದರು ಒಲವಿಂದಲಿ ಒಂದಾದರು ಆಗ........

ಚೆಲುವೆಯ ಮಾವಯ್ಯ ಒಲವಿನ ಕತೆ ಕೇಳಿ ಹುಲಿಯಂತೆ ಎಗರಾಡಿ
ಸೇತುವೆ ಬಳಿ ಬಂದಾಗ ಪ್ರೇಮಿಗಳ ಕಂಡಾಗ ರೋಷದಲಿ ಕೂಗಾಡಿ
ಹಲ್ಲನ್ನು ಮಸೆದ ಸೇತುವೆಯ ಕಡಿದ
ಆ ಜೋಡಿಯ ಕತೆಯಂದಿಗೆ ಕೊನೆಯಾಯಿತು ಹೀಗೆ........


*********************************************************************************

ಗೀತ ಸಂಗೀತ ಏಕೆ ಹೀಗೆ ದೂರವಾದೆ

ಸಾಹಿತ್ಯ: ಚಿ. ಉದಯಶಂಕರ್ 
ಗಾಯನ: ಎಸ್ ಪಿ ಬಾಲಸುಬ್ರಹ್ಮಣ್ಯಂ 



ಗೀತ ಸಂಗೀತ ಏಕೆ ಹೀಗೆ ದೂರವಾದೆ....ಎಲ್ಲಿ ಹೋದೆ
ನಯನವ ಸೆಳೆದ ಗೀತ ನನ್ನ ಕನಸಲಿ ಕುಣಿದ ಗೀತ
ನನ್ನ ಮನವನು ಅರಿತ ಗೀತ ನನ್ನ ಉಸಿರಲಿ ಬೆರೆತ ಗೀತ.....


ನಗಲು ನೀನು ಹೂವಂತೆ
ನುಡಿವ ಮಾತು ಹಾಡಂತೆ
ಬಳಿಗೆ ಬಂದೆ ಮಿಂಚಂತೆ
ಮರೆತು ಹೋದೆ ನಾ ಚಿಂತೆ
ಚೆಲುವೆಯ ಸ್ನೇಹವೇನೋ
ಒಲವಿನ ಭಾವವೇನೋ
ಪ್ರಣಯದ ಕವಿತೆ ಏನೋ
ಕಲಿಸಿದೆ ಬಂದು ನೀನು.... ಗೀತ.


ಹರುಷ ಕಂಡೆ ಕಣ್ಣಲ್ಲಿ
ಸರಸ ಕಂಡೆ ಮಾತಲ್ಲಿ
ಸೊಗಸ ಕಂಡೆ ನಿನ್ನಲ್ಲಿ
ಸುಖವ ತಂದೆ ಬಾಳಲ್ಲಿ
ಬೀಸುವ ಗಾಳಿಯಂತೆ
ಓಡಿದೆ ನಿಲ್ಲದಂತೆ
ನೆನಪಲಿ ನೀನು ನಿಂತು
ಆದೆಯ ವಿರಹ ಗೀತೆ.....ಗೀತ


*******************************************************************************

ಆಲೆಮನೆ (1981) - ನಮ್ಮೂರ ಮಂದಾರ ಹೂವೆ

ಚಲನಚಿತ್ರ: ಆಲೆಮನೆ (1981)
ಸಾಹಿತ್ಯ: ದೊಡ್ಡ ರಂಗೇಗೌಡ 
ಸಂಗೀತ: ಎಸ್. ಅಶ್ವಥ್, ಎಲ್. ವೈದ್ಯನಾಥನ್ 
ಗಾಯನ: ಎಸ್ ಪಿ ಬಾಲು
ನಿರ್ದೇಶನ: ಮೋಹನ್ ಕುಮಾರ್ 
ನಟರು: ಸುರೇಶ ಹೆಬ್ಳಿಕರ್, ರೂಪ ಚಕ್ರವರ್ತಿ 


ನಮ್ಮೂರ ಮಂದಾರ ಹೂವೆ
ನನ್ನೊಲುಮೆ ಬಾಂದಳದ ಚೆಲುವೆ
ಬಳಿ ಬಂದು ಬಾಳನ್ನು ಬೆಳಗು
ನನ್ನ ಬರಿದಾದ ಮನದಲ್ಲಿ ಮಿನುಗು

ಕಣ್ಣಲ್ಲೇ ಕರೆದು ಹೊಂಗನಸ ತೆರೆದು
ಸಂಗಾತಿ ಸಂಪ್ರೀತಿ ಸೆಳೆದೆ
ಅನುರಾಗ ಹೊಳೆದು ಅನುಬಂಧ ಬೆಳೆದು
ಸಮ್ಮೋಹ ಸಂಬಂಧ ಮಿಡಿದೆ
ಮೂಡಿದ ಪ್ರೇಮದ ಸೊಗಸಾದ ಕಾರಂಜಿ ಬಿರಿದೆ,
ಸೊಗಸಾದ ಕಾರಂಜಿ ಬಿರಿದೆ.......

ಒಡಲಾಳ ಮೊರೆದು ಒಡನಾಟ ಮೆರೆದು
ಒಡನಾಡಿ ಬಾಂಧವ್ಯ ಕಂಡೆ
ಋತುಮಾನ ಮೀರಿ ಹೊಸಗಾನ ತೋರಿ
ಹಿತವಾದ ಮಾಧುರ್ಯ ಮಿಂದೆ
ತೀರದ ಮೋಹದ ಇನಿದಾದ ಆನಂದ ತಂದೆ,
ಇನಿದಾದ ಆನಂದ ತಂದೆ.......