ಜೊತೆಯಲಿ ಜೊತೆ ಜೊತೆಯಲಿ

ಚಲನಚಿತ್ರ: ಗೀತಾ (1981)
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ಇಳಯರಾಜ
ಗಾಯನ: ಎಸ್ ಪಿ ಬಾಲಸುಬ್ರಹ್ಮಣ್ಯಂ, ಎಸ್. ಜಾನಕಿ
ನಿರ್ದೇಶನ: ಶಂಕರ್ ನಾಗ್
ನಟರು: ಶಂಕರ್ ನಾಗ್, ಪದ್ಮಾವತಿ ರಾವ್
ಜೊತೆಯಲಿ ಜೊತೆ ಜೊತೆಯಲಿ
ಇರುವೆನು ಹೀಗೆ ಎಂದು
ಹೊಸ ಹರುಷವ ತರುವೆನು ಇನ್ನು ಎಂದು
ಓ....ಎಂತ ಮಾತಾಡಿದೆ ಇಂದು
ನೀ ಎಂತ ಮಾತಾಡಿದೆ,
ನನ್ನ ಮನಸಿನ ಭಾವನೆ ನೀನೆ ಹೇಳಿದೆ
ಪ್ರೀತಿಯೆಂದರೇನು ಎಂದು ಈಗ ಅರಿತೆನು
ಸವಿನುಡಿಯಲಿ ತನು ಅರಳಿತು ಸವಿಗನಸಲಿ ಮನ ಕುಣಿಯಿತು
ಒಲವಿನ ಈ ಮಾತಿಗೆ ಕರಗಿ ಹೋದೆ ನೋಟಕೆ
ಕೊಡುವೆ ನಿನಗೆ ಬಾ ಪ್ರೀತಿ ಕಾಣಿಕೆ.....
ಮೋಡದಲ್ಲಿ ಜೋಡಿಯಾಗಿ ತೇಲಿ ನಲಿಯುವ
ಹಾರಾಡುವ ಅರಗಿಳಿಗಳ ಮಾತಾಡಿಸಿ ಮುದ್ದಾಡುವ
ಕಾಮನ ಬಿಲ್ಲೇರುವ ಜಾರುತ ನಾವಾಡುವ
ಹಗಲು ಇರುಳು ಒಂದಾಗಿ ಹಾಡುವ.....
********************************************************************************
ಕೇಳದೆ ನಿಮಗೀಗ ದೂರದಲ್ಲಿ ಯಾರೋ

ಗಾಯನ: ಎಸ್ ಪಿ ಬಾಲಸುಬ್ರಹ್ಮಣ್ಯಂ
ಕೇಳದೆ ನಿಮಗೀಗ ದೂರದಲ್ಲಿ ಯಾರೋ
ಹಾಡು ಹೇಳಿದಂತೆ
ಒಂದು ಹೆಣ್ಣಿನ... ಓ.....
ನೊಂದ ವಿರಹ ಗೀತೆ
ಸಂಪಿಗೆ ಒಂದೂರು ಮಲ್ಲಿಗೆ ಒಂದೂರು,
ನಡುವಲ್ಲಿ ನದಿಯೊಂದು
ಹಗ್ಗದ ಉಯ್ಯಾಲೆ ತೂಗುವ ಹಾಗೊಂದು,
ಸೇತುವೆಯು ಅಲ್ಲೊಂದು
ಈ ಊರ ಚೆಲುವೆ ಆ ಊರ ಚೆಲುವ,
ನದಿಯಂಚಲಿ ಓಡಾಡುತ ಎದುರಾದರು ಒಮ್ಮೆ
ಚೆಲುವೆಯ ಕಂಡಾಗ ಚೆಲುವನ ಮನದಲ್ಲಿ ನೂರಾಸೆ ಬಂದಾಗ
ಚೆಲುವೆಯ ಕಣ್ಣಲ್ಲಿ ಚೆಲುವನು ಮನೆಮಾಡಿ ಶಿಲೆಯಂತೆ ನಿಂತಾಗ
ಹೂವಾಗಿ ಮನಸು ನೂರಾರು ಕನಸು
ಬೆರಗಾದರು ಒಲವಿಂದಲಿ ಒಂದಾದರು ಆಗ........
ಚೆಲುವೆಯ ಮಾವಯ್ಯ ಒಲವಿನ ಕತೆ ಕೇಳಿ ಹುಲಿಯಂತೆ ಎಗರಾಡಿ
ಸೇತುವೆ ಬಳಿ ಬಂದಾಗ ಪ್ರೇಮಿಗಳ ಕಂಡಾಗ ರೋಷದಲಿ ಕೂಗಾಡಿ
ಹಲ್ಲನ್ನು ಮಸೆದ ಸೇತುವೆಯ ಕಡಿದ
ಆ ಜೋಡಿಯ ಕತೆಯಂದಿಗೆ ಕೊನೆಯಾಯಿತು ಹೀಗೆ........
*********************************************************************************
ಗೀತ ಸಂಗೀತ ಏಕೆ ಹೀಗೆ ದೂರವಾದೆ

ಗಾಯನ: ಎಸ್ ಪಿ ಬಾಲಸುಬ್ರಹ್ಮಣ್ಯಂ
ಗೀತ ಸಂಗೀತ ಏಕೆ ಹೀಗೆ ದೂರವಾದೆ....ಎಲ್ಲಿ ಹೋದೆ
ನಯನವ ಸೆಳೆದ ಗೀತ ನನ್ನ ಕನಸಲಿ ಕುಣಿದ ಗೀತ
ನನ್ನ ಮನವನು ಅರಿತ ಗೀತ ನನ್ನ ಉಸಿರಲಿ ಬೆರೆತ ಗೀತ.....
ನಗಲು ನೀನು ಹೂವಂತೆ
ನುಡಿವ ಮಾತು ಹಾಡಂತೆ
ಬಳಿಗೆ ಬಂದೆ ಮಿಂಚಂತೆ
ಮರೆತು ಹೋದೆ ನಾ ಚಿಂತೆ
ಚೆಲುವೆಯ ಸ್ನೇಹವೇನೋ
ಒಲವಿನ ಭಾವವೇನೋ
ಪ್ರಣಯದ ಕವಿತೆ ಏನೋ
ಕಲಿಸಿದೆ ಬಂದು ನೀನು.... ಗೀತ.
ಹರುಷ ಕಂಡೆ ಕಣ್ಣಲ್ಲಿ
ಸರಸ ಕಂಡೆ ಮಾತಲ್ಲಿ
ಸೊಗಸ ಕಂಡೆ ನಿನ್ನಲ್ಲಿ
ಸುಖವ ತಂದೆ ಬಾಳಲ್ಲಿ
ಬೀಸುವ ಗಾಳಿಯಂತೆ
ಓಡಿದೆ ನಿಲ್ಲದಂತೆ
ನೆನಪಲಿ ನೀನು ನಿಂತು
ಆದೆಯ ವಿರಹ ಗೀತೆ.....ಗೀತ
*******************************************************************************
No comments:
Post a Comment