Friday, August 31, 2018

ಎರಡು ಕನಸು (1974)

ಬಾಡಿ ಹೋದ ಬಳ್ಳಿಯಿಂದ


ಸಾಹಿತ್ಯ: ಚಿ. ಉದಯಶಂಕರ್ 
ಗಾಯನ : ಪಿ.ಬಿ.ಶ್ರಿನಿವಾಸ್

ಬಾಡಿ ಹೋದ ಬಳ್ಳಿಯಿಂದ ಹೂವು ಅರಳಬಲ್ಲದೇ
ಬಾಡಿ ಹೋದ ಬಳ್ಳಿಯಿಂದ ಹೂವು ಅರಳಬಲ್ಲದೇ
ತಂತಿ ಹರಿದ ವೀಣೆಯಿಂದ ನಾದ ಹರಿಯಬಲ್ಲದೇ
ಮನಸು ಕಂಡ ಆಸೆ ಎಲ್ಲ ಕನಸಿನಂತೆ ಕರಗಿತಲ್ಲ ಉಲ್ಲಾಸ ಇನ್ನೆಲ್ಲಿದೆ

ಬಾಡಿ ಹೋದ ಬಳ್ಳಿಯಿಂದ ಹೂವು ಅರಳಬಲ್ಲದೆ

ಹಣತೆಯಲ್ಲಿ ದೀಪ ಉರಿಯೇ ಬೆಳಕಿನಲ್ಲಿ ಬಾಳುವೆ
ಹಣತೆಯಲ್ಲಿ ದೀಪ ಉರಿಯೇ ಬೆಳಕಿನಲ್ಲಿ ಬಾಳುವೆ
ಧರೆಯೆ ಹತ್ತಿ ಉರಿಯುವಾಗ ಬದುಕಲೆಲ್ಲಿ ಓಡುವೆ
ಧರೆಯೆ ಹತ್ತಿ ಉರಿಯುವಾಗ ಬದುಕಲೆಲ್ಲಿ ಓಡುವೆ
ತಂತಿ ಹರಿದ ವೀಣೆಯಿಂದ ನಾದ ಹರಿಯಬಲ್ಲದೆ
ಮನಸು ಕಂಡ ಆಸೆ ಎಲ್ಲ ಕನಸಿನಂತೆ ಕರಗಿತಲ್ಲ ಉಲ್ಲಾಸ ಇನ್ನೆಲ್ಲಿದೆ

ಬಾಡಿ ಹೋದ ಬಳ್ಳಿಯಿಂದ ಹೂವು ಅರಳಬಲ್ಲದೆ

ನೀರಿನಲ್ಲಿ ದೋಣಿ ಮುಳುಗೆ ಈಜಿ ದಡವ ಸೇರುವೆ
ನೀರಿನಲ್ಲಿ ದೋಣಿ ಮುಳುಗೆ ಈಜಿ ದಡವ ಸೇರುವೆ
ಸುಳಿಗೆ ದೋಣಿ ಸಿಲುಕಿದಾಗ ಬದುಕಿ ಬರಲು ಸಾಧ್ಯವೆ
ಸುಳಿಗೆ ದೋಣಿ ಸಿಲುಕಿದಾಗ ಬದುಕಿ ಬರಲು ಸಾಧ್ಯವೆ
ಬಾಳ ಪಗಡೆ ಆಟದಲ್ಲಿ ಬರಿಯ ಕಾಯಿ ಎಲ್ಲರೂ
ನಡೆಸುವಾತ ಬೇರೆ ಅವನ ಇಚ್ಚೆ ಯಾರು ಬಲ್ಲರೂ

*******************************************************************************

ಇಂದು ಎನಗೆ ಗೋವಿಂದ


ಸಾಹಿತ್ಯ : ಶ್ರೀ ರಾಘವೇಂದ್ರಸ್ವಾಮಿಗಳು 
ಗಾಯನ : ಎಸ್.ಜಾನಕಿ 

ಇಂದು ಎನಗೆ ಗೋವಿಂದ ನಿನ್ನಯ ಪಾದಾರವಿಂದವ
ತೋರೋ ಮುಕುಂದನೇ....ಮುಕುಂದನೇ
ಸುಂದರ ವದನನೇ ನಂದ ಗೋಪಿಯ ಕಂದ
ಮಂದರೋದ್ಧಾರ ಆನಂದ ಇಂದಿರಾ ರಮಣ....{ಪಲ್ಲವಿ}
ನೊಂದೇನಯ್ಯ ಭವಬಂಧನದೊಳು ಸಿಲುಕಿ
ಮುಂದೆ ದಾರಿ ಕಾಣದೇ ಕುಂದಿದೇ ಜಗದೊಳು
ಕಂದನಂತೆಂದೆನ್ನ ಕುಂದುಗಳ ಎಣಿಸದೇ
ತಂದೆ ಕಾಯೋ ಕೃಷ್ಣ ಕಂದಪ್ಪ..ಜನಕನೇ....{ಪಲ್ಲವಿ}
ಧಾರುಣಿಯೊಳು ಬಲುಭಾರ ಜೀವನನಾಗಿ
ದಾರಿ ತಪ್ಪಿ ನಡೆದೆ...ಸೇರಿದೆ ಕುಜನರಾ
ಆರುಕಾಯುವರಿಲ್ಲ ಸಾರಿದೆ ನಿನಗಯ್ಯ
ಧೀರ ವೇಣುಗೋಪಾಲ ಪಾರುಗಾಣಿಸೋ ಹರಿಯೇ...{ಪಲ್ಲವಿ}

*******************************************************************************

ತಂ ನಂ ತಂ ನಂ 

ಸಾಹಿತ್ಯ: ಚಿ.ಉದಯಶಂಕರ್
ಗಾಯನ : ಪಿ.ಬಿ.ಶ್ರೀನಿವಾಸ್, ಎಸ್.ಜಾನಕಿ.


ತಂ ನಂ ತಂ ನಂ ನನ್ನೀ ಮನಸು ಮಿಡಿಯುತಿದೇ.... ಓ.. ಸೋತಿದೇ....
ಕೈಯಲ್ಲಿ ಕುಣಿವ ಈ ಹೊನ್ನ ಬಳೆಯ  ಘಲ್ ಘಲ್ ಘಲ್ ಘಲ್ ತಾಳಕೆ
ನನ್ನೆದೆಯ ವೀಣೆ ತನ್ನಂತೇ ತಾನೆ  ತನಮ್ ತನಮ್ ತನಮ್ ತನಮ್ ಎಂದಿದೆ
ಘಲ್ ಘಲ್ ಘಲ್ ಘಲ್ ತಾಳಕೆ  ತಂ ನಂ ತಂ ನಂ ಎಂದಿದೆ
ನೀ ಸನಿಹಕೇ ಬಂದರೇ ತನುವಿದೂ
ನಡುಗುತಿದೇ ಏತಕೇ ಎದೆ ಝಲ್ ಎಂದಿದೇ
ಅಹಾಹ.. ಒಲಿದಿಹಾ ಜೀವವೂ ಬೆರೆಯಲೂ
ಮನ ಹೂವಾಗಿ ತನು ಕೆಂಪಾಗಿ ನಿನ್ನಾ ಕಾದಿದೇ
ನೀ ನಡೆಯುವ ಹಾದಿಗೆ ಹೂವಿನಾ ಹಾಸಿಗೆಯಾ ಹಾಸುವೇ ಕೈ ಹಿಡಿದೂ ನಡೆಸುವೇ
ಮೆಲ್ಲಗೇ ನಲ್ಲನೇ ನಡೆಸುಬಾ ಎಂದೂ ಹೀಗೆ ಇರುವಾ ಆಸೆ ನನ್ನೀ ಮನಸಿಗೇ
ತಂ ನಂ ತಂ ನಂ ನನ್ನೀ ಮನಸು ಮಿಡಿಯುತಿದೇ ........   ಓ ಸೋತಿದೇ
ಕೈಯಲ್ಲಿ ಕುಣಿವ ಈ ಹೊನ್ನ ಬಳೆಯ  ಘಲ್ ಘಲ್ ಘಲ್ ಘಲ್ ತಾಳಕೆ
ನನ್ನೆದೆಯ ವೀಣೆ ತನ್ನನ್ತೆ ತಾನೆ  ತಮ್ ನಮ್ ತಮ್ ನಮ್ ಎಂದಿದೆ
ಘಲ್ ಘಲ್ ಘಲ್ ಘಲ್ ತಾಳಕೆ  ತಂ ನಂ ತಂ ನಂ ಎಂದಿದೆ

*******************************************************************************

ಎಂದು ನಿನ್ನ ನೋಡುವೆ

ಸಾಹಿತ್ಯ: ಚಿ.ಉದಯಶಂಕರ್ 
ಗಾಯನ: ಪಿ.ಬಿ.ಶ್ರಿನಿವಾಸ್ 

ಹೆ..ಹೆ..ಹೆಹೇ ... ಆ ಹ ಹಹಾ ಓ.ಹೋ.ಹೊ..ಹೋ..ಲಾ ಲಾಲ ಲ
ಎಂದು ನಿನ್ನ ನೋಡುವೆ ಎಂದು ನಿನ್ನ ಸೇರುವೆ
ಎಂದು ನಿನ್ನ ನೋಡುವೆ ಎಂದು ನಿನ್ನ ಸೇರುವೆ  
ನಿಜ ಹೇಳಲೇನು ನನ್ನ ಜೀವ ನೀನು

ನೂರಾರು ಬಯಕೆ ಆತುರ ತಂದಿದೆ  
ನೂರಾರು ಕನಸು ಕಾತರ ತುಂಬಿದೆ
ಮುಗಿಲಿಗಾಗಿ ಬಾನು ದುಂಬಿಗಾಗಿ ಜೇನು
ನನಗಾಗಿ ನೀನು ನಿನಗಾಗಿ ನಾನು
ನನಗಾಗಿ ನೀನು ನಿನಗಾಗಿ ನಾನು

ಓ..ಓ..ಓ..ಓ ತಣ್ಣನೆ ಗಾಳಿ ಹಿತ ತೋರದಲ್ಲಾ 
ಕೋಗಿಲೆ ಗಾನ ಸುಖ ನೀಡದಲ್ಲಾ
ತಣ್ಣನೆ ಗಾಳಿ ಹಿತ ತೋರದಲ್ಲಾ   
ಕೋಗಿಲೆ ಗಾನ ಸುಖ ನೀಡದಲ್ಲಾ
ಕಾಮನ ಬಿಲ್ಲಿಗೂ ಮನ ಸೋಲಲಿಲ್ಲ
ನಿನ್ನಯ ನೆನಪಲ್ಲೇ ಸೋತೆ ನಾನು
ನನ್ನಾಸೆ ನೀನು ನಿನ್ನಾಸೆ ನಾನು
ನನ್ನಾಸೆ ನೀನು ನಿನ್ನಾಸೆ ನಾನು

ಎಂದು ನಿನ್ನ ನೋಡುವೆ ಎಂದು ನಿನ್ನ ಸೇರುವೆ 
ನಿಜ ಹೇಳಲೇನು ನನ್ನ ಜೀವ ನೀನು
ನಿಜ ಹೇಳಲೇನು ನನ್ನ ಜೀವ ನೀನು
ಕಂಗಳ ಕಾಂತಿ ನೀನಾಗಿರುವೆ ಮೈಮನವೆಲ್ಲಾ ನೀ ತುಂಬಿರುವೆ
ಕಂಗಳ ಕಾಂತಿ ನೀನಾಗಿರುವೆ ಮೈಮನವೆಲ್ಲಾ ನೀ ತುಂಬಿರುವೆ
ನನ್ನೀ ಬಾಳಿಗೆ ಬೆಳಕಾಗಿರುವೆ ಜನುಮ ಜನುಮದ ಜೋಡಿ ನೀನು
ನನಗಾಗಿ ನೀನು ನಿನಗಾಗಿ ನಾನು ಆಹಾ.ಆ ಆ ಆ
ನನಗಾಗಿ ನೀನು ನಿನಗಾಗಿ ನಾನು ಓ..ಹೋ..ಓ

*******************************************************************************

ಪೂಜಿಸಲೆಂದೇ ಹೂಗಳ

ಸಾಹಿತ್ಯ : ಶ್ರೀ ರಾಘವೇಂದ್ರಸ್ವಾಮಿಗಳು 
ಗಾಯನ : ಎಸ್.ಜಾನಕಿ

ಪೂಜಿಸಲೆಂದೇ ಹೂಗಳ ತಂದೆ
ಪೂಜಿಸಲೆಂದೇ ಹೂಗಳ ತಂದೆ
ದರುಶನ ಕೋರಿ ನಾ ನಿಂದೆ
ತೆರೆಯೋ ಬಾಗಿಲನು ರಾಮ
ತೆರೆಯೋ ಬಾಗಿಲನು ರಾಮ
ಪೂಜಿಸಲೆಂದೇ ಹೂಗಳ ತಂದೆ

ಮೋಡದ ಮೇಲೆ ಚಿನ್ನದ ನೀರು , 
ಚೆಲ್ಲುತ ಸಾಗಿದೆ ಹೊನ್ನಿನ ತೇರು
ಮೋಡದ ಮೇಲೆ ಚಿನ್ನದ ನೀರು , 
ಚೆಲ್ಲುತ ಸಾಗಿದೆ ಹೊನ್ನಿನ ತೇರು
ಮಾಣಿಕ್ಯಾದರತಿ ಆಆಆಆ
ಮಾಣಿಕ್ಯಾದರತಿ ಉಷೆ ತಂದಿಹಳೂ
ತಾಮಸವೇಕಿನು ಸ್ವಾಮಿ
ತೆರೆಯೋ ಬಾಗಿಲನು ರಾಮ

ಪೂಜಿಸಲೆಂದೇ ಹೂಗಳ ತಂದೆ
ದರುಶನ ಕೋರಿ ನಾ ನಿಂದೆ
ಪೂಜಿಸಲೆಂದೇ ಹೂಗಳ ತಂದೇ

ಒಲಿದರು ಚೆನ್ನ ,ಮುನಿದರು ಚೆನ್ನ,
ನಿನ್ನ ಆಸರೆಯೇ ಬಾಳಿಗೆ ಚೆನ್ನ
ಒಲಿದರು ಚೆನ್ನ ,ಮುನಿದರು ಚೆನ್ನ,
ನಿನ್ನ ಆಸರೆಯೇ ಬಾಳಿಗೆ ಚೆನ್ನ
ನಾ ನಿನ್ನ ಪಾದದ ಧೂಳಾದರೂ ಚೆನ್ನ
ನಾ ನಿನ್ನ ಪಾದದ ಧೂಳಾದರೂ ಚೆನ್ನ
ಸ್ವೀಕರಿಸು ನನ್ನಾ ಸ್ವಾಮಿ
ತೆರೆಯೋ ಬಾಗಿಲನು ರಾಮ

ಪೂಜಿಸಲೆಂದೇ ಹೂಗಳ ತಂದೆ
ದರುಶನ ಕೋರಿ ನಾ ನಿಂದೆ
ತೆರೆಯೋ ಬಾಗಿಲನು ರಾಮ
ಪೂಜಿಸಲೆಂದೇ ಹೂಗಳ ತಂದೆ

*******************************************************************************

ಎಂದೆಂದೂ ನಿನ್ನನು ಮರೆತು

ಸಾಹಿತ್ಯ: ಚಿ.ಉದಯಶಂಕರ್ 
ಗಾಯನ: ಪಿ.ಬಿ.ಶ್ರಿನಿವಾಸ್,  ವಾಣಿ ಜಯರಾಂ

ಎಂದೆಂದೂ ನಿನ್ನನು ಮರೆತು ಬದುಕಿರಲಾರೆ
ಇನ್ನೆಂದು ನಿನ್ನನು ಅಗಲಿ ನಾನಿರಲಾರೆ
ಒಂದು ಕ್ಷಣ ನೊಂದರು ನೀ ನಾ ತಾಳಲಾರೆ
ಒಂದು ಕ್ಷಣ ವಿರಹವನು ನಾ ಸಹಿಸಲಾರೆ

ಸಾಗರ ಹುಣ್ಣಿಮೆ ಕಂಡು ಉಕ್ಕುವ ರೀತಿ
ನಿನ್ನನು ಕಂಡ ದಿನವೇ ಹೊಮ್ಮಿತು ಪ್ರೀತಿ
ಓಹೋಹೋಹೋ...ನೀ ಕಡಲಾದರೆ ನಾ ನದಿಯಾಗುವೆ
ನಿಲ್ಲದೆ ಓಡಿ ಓಡಿ ನಿನ್ನ ಸೇರುವೆ ಸೇರುವೆ ಸೇರುವೆ.....

ಎಂದೆಂದೂ .. ಎಂದೆಂದೂ ನಿನ್ನನು ಮರೆತು ಬದುಕಿರಲಾರೆ
ಇನ್ನೆಂದು .. ಇನ್ನೆಂದು ನಿನ್ನನು ಅಗಲಿ ನಾನಿರಲಾರೆ

ನೀ ಹೂವಾದರೆ ನಾನು ಪರಿಮಳವಾಗಿ
ಸೇರುವೆ ನಿನ್ನೊಡಲನ್ನು ಬಲು ಹಿತವಾಗಿ
ಓಹೋಹೋಹೋ ನೀ ಮುಗಿಲಾದರೆ ನಾ ನವಿಲಾಗುವೆ
ತೇಲುವ ನಿನ್ನ ನೋಡಿ ನೋಡಿ ಹಾಡುವೆ ಕುಣಿಯುವೆ ನಲಿಯುವೆ.....

ಎಂದೆಂದೂ .. ಎಂದೆಂದೂ ನಿನ್ನನು ಮರೆತು ಬದುಕಿರಲಾರೆ
ಇನ್ನೆಂದು .. ಇನ್ನೆಂದು ನಿನ್ನನು ಅಗಲಿ ನಾನಿರಲಾರೆ

ಸಾವಿರ ಜನುಮವೇ ಬರಲಿ ಬೇಡುವುದೊಂದೇ
ನನ್ನವಳಾಗಿರು ನೀನು ಎನ್ನುವುದೊಂದೇ
ಓಹೋಹೋಹೋ ನೀನಿರುವುದಾದರೆ ಸ್ವರ್ಗವು ಈ ಧರೆ
ನಾನಿನ್ನ ಜೋಡಿಯಾಗಿ ಎಂದು ಬಾಳುವೆ ಬಾಳುವೆ ಬಾಳುವೆ.....

ಎಂದೆಂದೂ .. ಎಂದೆಂದೂ ನಿನ್ನನು ಮರೆತು ಬದುಕಿರಲಾರೆ
ಇನ್ನೆಂದು .. ಇನ್ನೆಂದು ನಿನ್ನನು ಅಗಲಿ ನಾನಿರಲಾರೆ
ಒಂದು ಕ್ಷಣ ನೊಂದರು ನೀ ನಾ ತಾಳಲಾರೆ
ಒಂದು ಕ್ಷಣ ವಿರಹವನು ನಾ ಸಹಿಸಲಾರೆ

********************************************************************************

No comments:

Post a Comment