Friday, August 31, 2018

ನಾ ನಿನ್ನ ಮರೆಯಲಾರೆ (1976)



ಎಲ್ಲೆಲ್ಲಿ ನೋಡಲಿ

ಚಲನಚಿತ್ರ: ನಾ ನಿನ್ನ ಮರೆಯಲಾರೆ (1976)
ಸಾಹಿತ್ಯ: ಚಿ. ಉದಯಶಂಕರ್ 
ಸಂಗೀತ: ರಾಜನ್-ನಾಗೇಂದ್ರ 
ಗಾಯಕರು: ಡಾ.ರಾಜ್ ಕುಮಾರ್,  ಎಸ್. ಜಾನಕಿ  
ನಿರ್ದೇಶನ: ವಿಜಯ್ 
ನಟರು: ಡಾ. ರಾಜ್ ಕುಮಾರ್, ಲಕ್ಷ್ಮೀ   


ಎಲ್ಲೆಲ್ಲಿ ನೋಡಲಿ ನಿನ್ನನ್ನೇ ಕಾಣುವೆ
ಕಣ್ಣಲ್ಲಿ ತುಂಬಿರುವೆ ಮನದಲಿ ಮನೆ ಮಾಡಿ ಆಡುವೆ 

ಆ ಕೆಂಪು ತಾವರೆ ಆ ನೀರಿಗಾದರೆ
ಈ ಹೊನ್ನ ತಾವರೆ ನನ್ನಾಸೆಯಾಸರೆ
ಆ.........
ಮಿಂಚೆಂಬ ಬಳ್ಳಿಗೆ ಮೇಘದ ಆಸರೆ
ಈ ಹೆಣ್ಣ ಬಾಳಿಗೆ ನಿನ್ನ ತೋಳಿನಾಸರೆ
ಯುಗಗಳೇ ಜಾರಿ ಉರುಳಿದರೇನು
ನಾನೇ ನೀನು ನೀನೆ ನಾನು
ಆದಮೇಲೆ ಬೇರೆ ಏನಿದೆ.....

ರವಿಯನ್ನು ಕಾಣದೆ ಹಗಲೆಂದು ಆಗದು
ನಿನ್ನನ್ನು ನೋಡದೆ ಈ ಪ್ರಾಣ ನಿಲ್ಲದು
ಕಡಲನ್ನು ಸೇರದ ನದಿಯೆಲ್ಲಿ ಕಾಣುವೆ
ನಿನ್ನನ್ನು ಸೇರದೆ ನಾ ಹೇಗೆ ಬಾಳುವೆ
ವಿರಹದ ನೋವ ಮರೆಯಲಿ ಜೀವ
ಹೂವು ಗಂಧ ಸೇರಿದಂತೆ
ಪ್ರೇಮದಿಂದ ನಿನ್ನ ಸೇರುವೆ.....


********************************************************************************

ನಾ ನಿನ್ನ ಮರೆಯಲಾರೆ

ಸಾಹಿತ್ಯ: ಚಿ. ಉದಯಶಂಕರ್ 
ಗಾಯಕರು: ಡಾ.ರಾಜ್ ಕುಮಾರ್, ವಾಣಿ ಜಯರಾಂ 


ನಿನ್ನ ಮರೆಯಲಾರೆ,
ನಾ ನಿನ್ನ ಮರೆಯಲಾರೆ
ಎಂದೆಂದೂ ನಿನ್ನ ಬಿಡಲಾರೆ ಚಿನ್ನ
ನೀನೆ ಪ್ರಾಣ ನನ್ನಾಣೆಗೂ


ಜೊತೆಗೆ ನೀನು ಸೇರಿ ಬರುತಿರೆ
ಜಗವ ಮೆಟ್ಟಿ ನಾ ನಿಲ್ಲುವೆ
ಒಲಿದ ನೀನು ನಕ್ಕು ನಲಿದರೆ
ಏನೇ ಬರಲಿ ನಾ ಗೆಲ್ಲುವೆ
ಆಹಾ ....ಲಾಲಾ.....ಲಾಲಾ....ತರರ.....
ಚೆಲುವೆ ನೀನು ಉಸಿರು ಉಸಿರಲಿ
ಬೆರೆತು ಬದುಕು ಹೂವಾಗಿದೆ
ಎಂದು ಹೀಗೆ ಇರುವ ಬಯಕೆಯು ಮೂಡಿ ಮನಸು ತೇಲಾಡಿದೆ
ನಮ್ಮ ಬಾಳು, ಹಾಲು ಜೇನು .....

ನೂರು ಮಾತು ಏಕೆ ಒಲವಿಗೆ ನೋಟ ಒಂದೇ ಸಾಕಾಗಿದೆ
ಕಣ್ಣ ತುಂಬ ನೀನೆ ತುಂಬಿಹೆ ದಾರಿ ಕಾಣದಂತಾಗಿದೆ
ಆಹಾ ......
ಸಿಡಿಲೆ ಬರಲಿ ಊರೇ ಗುಡುಗಲಿ ದೂರ ಹೋಗೆ ನಾನೆಂದಿಗೂ
ಸಾವೇ ಬಂದು ನನ್ನ ಸೆಳೆದರು ನಿನ್ನ ಬಿಡೆನು ಎಂದೆಂದಿಗೂ
ನೋವು ನಲಿವು, ಎಲ್ಲ ಒಲವು.....


********************************************************************************



ಸಿಹಿ ಮುತ್ತು ಸಿಹಿ ಮುತ್ತು

ಸಾಹಿತ್ಯ:ಚಿ ಉದಯಶಂಕರ್ 
ಗಾಯಕರು: ಪಿ. ಬಿ. ಶ್ರೀನಿವಾಸ್ & ಎಸ್ ಜಾನಕಿ 


ಸಿಹಿ ಮುತ್ತು ಸಿಹಿ ಮುತ್ತು ಇನ್ನೊಂದು ,
ಕೆನ್ನೆಗೆ ಗಲ್ಲಕೆ ಮತ್ತೊಂದು
ಸಿಹಿ ಮುತ್ತು ಸಿಹಿ ಮುತ್ತು ಇನ್ನೊಂದು ,
ಕೆನ್ನೆಗೆ ಗಲ್ಲಕೆ ಮತ್ತೊಂದು
ಕಂದಾ ಕೊಡುವೆಯಾ ...
ಚಿನ್ನದ ತೋಳಲಿ ನನ್ನಾ ಬಳಸುತಾ.......
ನಿನ್ನ ಚಿನ್ನದ ತೋಳಲಿ ನನ್ನಾ ಬಳಸುತಾ
ಸಿಹಿ ಮುತ್ತು ಸಿಹಿ ಮುತ್ತು ಇನ್ನೊಂದು ,
ಕೆನ್ನೆಗೆ ಗಲ್ಲಕೆ ಮತ್ತೊಂದು
ಕಂದಾ ಕೊಡುವೆಯಾ ...

ಚಿನಕುರಳಿ ಮಾತಿನಲ್ಲಿ ಹೂ ಬಾಣ ನೋಟದಲ್ಲಿ
ಕೋಪದಿ ಸಿಡಿದರೆ ಆನೆ ಪಟಾಕಿ
ನೀ ನಕ್ಕರು ಚೆಂದಾ, ನೀ ಅತ್ತರು ಅಂದ
ಕುಣಿಸುವೆ ತಣಿಸುವೆ ತುಂಟಾಟದಿಂದಾ
ಆ  ಅ ಅ ಆಅ ........ ಓ ಓ ಓ ಹೋ ..... 

ಸಿಹಿ ಮುತ್ತು ಸಿಹಿ ಮುತ್ತು ಇನ್ನೊಂದು ,
ಕೆನ್ನೆಗೆ ಗಲ್ಲಕೆ ಮತ್ತೊಂದು
ಕಂದಾ ಕೊಡುವೆಯಾ ...
ಚಿನ್ನದ ತೋಳಲಿ ನನ್ನಾ ಬಳಸುತಾ.......
ನಿನ್ನ ಚಿನ್ನದ ತೋಳಲಿ ನನ್ನಾ ಬಳಸುತಾ
ಸಿಹಿ ಮುತ್ತು ಸಿಹಿ ಮುತ್ತು ಇನ್ನೊಂದು ,
ಕೆನ್ನೆಗೆ ಗಲ್ಲಕೆ ಮತ್ತೊಂದು
ಕಂದಾ ಕೊಡುವೆಯಾ ...

ಮುತ್ತಂತೆ ನಿನ್ನ ನುಡಿಯೂ, 
ಒಂದೊಂದು ಜೇನ ಹನಿಯು
ಸವಿಯುತ ನಲಿವುದು ಈ ನನ್ನ ಜೀವಾ
ಈ ನಿನ್ನ ಸ್ನೇಹದಲ್ಲಿ, ನಾ ತೇಲಿ ಸ್ವರ್ಗದಲ್ಲಿ
ಮರೆಯುವೆ ಮನಸಿನ ನೂರೆಂಟು ನೋವಾ 
ಆಹಾಹಾ ......... ಆಹಾಹಾ 

ಸಿಹಿ ಮುತ್ತು ಸಿಹಿ ಮುತ್ತು ನಂಗೊಂದು, 
ಕೆನ್ನೆಗೆ ಗಲ್ಲಕೆ ಮತ್ತೊಂದು
ಸಿಹಿ ಮುತ್ತು ಸಿಹಿ ಮುತ್ತು ಇನ್ನೊಂದು ,
ಕೆನ್ನೆಗೆ ಗಲ್ಲಕೆಇನ್ನೊಂದು
ನೀನು ಕೊಡುವೆಯಾ, 
ಚಿನ್ನದ ತೋಳಲಿ ನನ್ನಾ ಬಳಸುತಾ.......
ನಿನ್ನ ಚಿನ್ನದ ತೋಳಲಿ ನನ್ನಾ ಬಳಸುತಾ
ಸಿಹಿ ಮುತ್ತು ಸಿಹಿ ಮುತ್ತು ಇನ್ನೊಂದು ,
ಕೆನ್ನೆಗೆ ಗಲ್ಲಕೆ ಮತ್ತೊಂದು
ಇನ್ನೊಂದು ಮತ್ತೊಂದು, 
ಇನ್ನೊಂದು ಮತ್ತೊಂದು ಹಾ .......   

********************************************************************************

ನನ್ನಾಸೆಯ ಹೂವೇ

ಸಾಹಿತ್ಯ: ಚಿ. ಉದಯಶಂಕರ್ 
ಗಾಯಕರು: ರಾಜ್ ಕುಮಾರ್, ಎಸ್. ಜಾನಕಿ 


ನನ್ನಾಸೆಯ ಹೂವೇ ಬೆಳದಿಂಗಳ ಚೆಲುವೆ 
ಇನ್ನೇತಕೆ ಅಳುವೆ ಏಕಾಂತದಿ ಭಯವೆ 
ನಿನ್ನೊಲವಿಗೆ ಸೋತೆನು ಬಂದೆನು ನಾ 

ಈ ಮೌನವೇನು ನಿನ್ನಲ್ಲಿ
ಈ ಕೋಪವೇಕೆ ನನ್ನಲ್ಲಿ 
ನೀ ದೂರ ಹೋದರೆ ಹೀಗೆ 
ನಾ ತಾಳೆ ಈ ವಿರಹದ ಬೇಗೆ 
ಅಹಹ ಅಹಹ ಆಹಾ..... 

ಕಾಣದಿರೆ ನೋಡುವ ಆಸೆ
ನೋಡುತಿರೆ ಸೇರುವ ಆಸೆ
ಸೇರಿದರೆ ಚಿನ್ನ ನಿನ್ನ
ಕೆಂಪಾದ ಚೆಂದುಟಿಯ ಆಸೆ 

ನನ್ನಾಸೆಯ..... 

ಆಹಾ ....ಲಲಲ...... 

ಬಾನಲ್ಲಿ ನೀಲಿ ಬೆರೆತಂತೆ 
ಹೂವಲ್ಲಿ ಜೇನು ಇರುವಂತೆ
ನನ್ನಲ್ಲಿ ನೀನೊಂದಾಗಿ 
ಇರುವಾಗ ಏಕೆ ಈ ಚಿಂತೆ 
ಕಣ್ಣಲ್ಲಿ ಕಣ್ಣ ನೀ ಬೆರೆಸು 
ಲತೆಯಂತೆ ನನ್ನ ಮೈ ಬಳಸು 
ನೂರೆಂಟು ಸುಂದರ ಕನಸು 
ಆ ನಿಮಿಷ ಬಾಳಿಗೆ ಸೊಗಸು 

ನನ್ನಾಸೆಯ ಹೂವೇ......


********************************************************************************

No comments:

Post a Comment