Friday, August 31, 2018

ಗೀತಾ (1981)


ಜೊತೆಯಲಿ ಜೊತೆ ಜೊತೆಯಲಿ 


ಚಲನಚಿತ್ರ: ಗೀತಾ (1981)
ಸಾಹಿತ್ಯ: ಚಿ. ಉದಯಶಂಕರ್ 
ಸಂಗೀತ: ಇಳಯರಾಜ  
ಗಾಯನ: ಎಸ್ ಪಿ ಬಾಲಸುಬ್ರಹ್ಮಣ್ಯಂ, ಎಸ್. ಜಾನಕಿ 
ನಿರ್ದೇಶನ: ಶಂಕರ್ ನಾಗ್ 
ನಟರು: ಶಂಕರ್ ನಾಗ್, ಪದ್ಮಾವತಿ ರಾವ್ 

ಜೊತೆಯಲಿ ಜೊತೆ ಜೊತೆಯಲಿ
ಇರುವೆನು ಹೀಗೆ ಎಂದು
ಹೊಸ ಹರುಷವ ತರುವೆನು ಇನ್ನು ಎಂದು
ಓ....ಎಂತ ಮಾತಾಡಿದೆ ಇಂದು
ನೀ  ಎಂತ ಮಾತಾಡಿದೆ,
ನನ್ನ ಮನಸಿನ ಭಾವನೆ ನೀನೆ ಹೇಳಿದೆ 

ಪ್ರೀತಿಯೆಂದರೇನು ಎಂದು ಈಗ ಅರಿತೆನು
ಸವಿನುಡಿಯಲಿ ತನು ಅರಳಿತು ಸವಿಗನಸಲಿ ಮನ ಕುಣಿಯಿತು
ಒಲವಿನ ಈ ಮಾತಿಗೆ ಕರಗಿ ಹೋದೆ ನೋಟಕೆ
ಕೊಡುವೆ ನಿನಗೆ ಬಾ ಪ್ರೀತಿ ಕಾಣಿಕೆ.....

ಮೋಡದಲ್ಲಿ ಜೋಡಿಯಾಗಿ ತೇಲಿ ನಲಿಯುವ
ಹಾರಾಡುವ ಅರಗಿಳಿಗಳ ಮಾತಾಡಿಸಿ ಮುದ್ದಾಡುವ
ಕಾಮನ ಬಿಲ್ಲೇರುವ ಜಾರುತ ನಾವಾಡುವ
ಹಗಲು ಇರುಳು ಒಂದಾಗಿ ಹಾಡುವ.....


********************************************************************************


ಕೇಳದೆ ನಿಮಗೀಗ ದೂರದಲ್ಲಿ ಯಾರೋ

ಸಾಹಿತ್ಯ: ಚಿ. ಉದಯಶಂಕರ್ 
ಗಾಯನ: ಎಸ್ ಪಿ ಬಾಲಸುಬ್ರಹ್ಮಣ್ಯಂ 


ಕೇಳದೆ ನಿಮಗೀಗ ದೂರದಲ್ಲಿ ಯಾರೋ
ಹಾಡು ಹೇಳಿದಂತೆ
ಒಂದು ಹೆಣ್ಣಿನ... ಓ.....
ನೊಂದ ವಿರಹ ಗೀತೆ

ಸಂಪಿಗೆ ಒಂದೂರು ಮಲ್ಲಿಗೆ ಒಂದೂರು,
ನಡುವಲ್ಲಿ ನದಿಯೊಂದು
ಹಗ್ಗದ ಉಯ್ಯಾಲೆ ತೂಗುವ ಹಾಗೊಂದು,
ಸೇತುವೆಯು ಅಲ್ಲೊಂದು
ಈ ಊರ ಚೆಲುವೆ ಆ ಊರ ಚೆಲುವ,
ನದಿಯಂಚಲಿ ಓಡಾಡುತ ಎದುರಾದರು ಒಮ್ಮೆ

ಚೆಲುವೆಯ ಕಂಡಾಗ ಚೆಲುವನ ಮನದಲ್ಲಿ ನೂರಾಸೆ ಬಂದಾಗ
ಚೆಲುವೆಯ ಕಣ್ಣಲ್ಲಿ ಚೆಲುವನು ಮನೆಮಾಡಿ ಶಿಲೆಯಂತೆ ನಿಂತಾಗ
ಹೂವಾಗಿ ಮನಸು ನೂರಾರು ಕನಸು
ಬೆರಗಾದರು ಒಲವಿಂದಲಿ ಒಂದಾದರು ಆಗ........

ಚೆಲುವೆಯ ಮಾವಯ್ಯ ಒಲವಿನ ಕತೆ ಕೇಳಿ ಹುಲಿಯಂತೆ ಎಗರಾಡಿ
ಸೇತುವೆ ಬಳಿ ಬಂದಾಗ ಪ್ರೇಮಿಗಳ ಕಂಡಾಗ ರೋಷದಲಿ ಕೂಗಾಡಿ
ಹಲ್ಲನ್ನು ಮಸೆದ ಸೇತುವೆಯ ಕಡಿದ
ಆ ಜೋಡಿಯ ಕತೆಯಂದಿಗೆ ಕೊನೆಯಾಯಿತು ಹೀಗೆ........


*********************************************************************************

ಗೀತ ಸಂಗೀತ ಏಕೆ ಹೀಗೆ ದೂರವಾದೆ

ಸಾಹಿತ್ಯ: ಚಿ. ಉದಯಶಂಕರ್ 
ಗಾಯನ: ಎಸ್ ಪಿ ಬಾಲಸುಬ್ರಹ್ಮಣ್ಯಂ 



ಗೀತ ಸಂಗೀತ ಏಕೆ ಹೀಗೆ ದೂರವಾದೆ....ಎಲ್ಲಿ ಹೋದೆ
ನಯನವ ಸೆಳೆದ ಗೀತ ನನ್ನ ಕನಸಲಿ ಕುಣಿದ ಗೀತ
ನನ್ನ ಮನವನು ಅರಿತ ಗೀತ ನನ್ನ ಉಸಿರಲಿ ಬೆರೆತ ಗೀತ.....


ನಗಲು ನೀನು ಹೂವಂತೆ
ನುಡಿವ ಮಾತು ಹಾಡಂತೆ
ಬಳಿಗೆ ಬಂದೆ ಮಿಂಚಂತೆ
ಮರೆತು ಹೋದೆ ನಾ ಚಿಂತೆ
ಚೆಲುವೆಯ ಸ್ನೇಹವೇನೋ
ಒಲವಿನ ಭಾವವೇನೋ
ಪ್ರಣಯದ ಕವಿತೆ ಏನೋ
ಕಲಿಸಿದೆ ಬಂದು ನೀನು.... ಗೀತ.


ಹರುಷ ಕಂಡೆ ಕಣ್ಣಲ್ಲಿ
ಸರಸ ಕಂಡೆ ಮಾತಲ್ಲಿ
ಸೊಗಸ ಕಂಡೆ ನಿನ್ನಲ್ಲಿ
ಸುಖವ ತಂದೆ ಬಾಳಲ್ಲಿ
ಬೀಸುವ ಗಾಳಿಯಂತೆ
ಓಡಿದೆ ನಿಲ್ಲದಂತೆ
ನೆನಪಲಿ ನೀನು ನಿಂತು
ಆದೆಯ ವಿರಹ ಗೀತೆ.....ಗೀತ


*******************************************************************************

ಆಲೆಮನೆ (1981) - ನಮ್ಮೂರ ಮಂದಾರ ಹೂವೆ

ಚಲನಚಿತ್ರ: ಆಲೆಮನೆ (1981)
ಸಾಹಿತ್ಯ: ದೊಡ್ಡ ರಂಗೇಗೌಡ 
ಸಂಗೀತ: ಎಸ್. ಅಶ್ವಥ್, ಎಲ್. ವೈದ್ಯನಾಥನ್ 
ಗಾಯನ: ಎಸ್ ಪಿ ಬಾಲು
ನಿರ್ದೇಶನ: ಮೋಹನ್ ಕುಮಾರ್ 
ನಟರು: ಸುರೇಶ ಹೆಬ್ಳಿಕರ್, ರೂಪ ಚಕ್ರವರ್ತಿ 


ನಮ್ಮೂರ ಮಂದಾರ ಹೂವೆ
ನನ್ನೊಲುಮೆ ಬಾಂದಳದ ಚೆಲುವೆ
ಬಳಿ ಬಂದು ಬಾಳನ್ನು ಬೆಳಗು
ನನ್ನ ಬರಿದಾದ ಮನದಲ್ಲಿ ಮಿನುಗು

ಕಣ್ಣಲ್ಲೇ ಕರೆದು ಹೊಂಗನಸ ತೆರೆದು
ಸಂಗಾತಿ ಸಂಪ್ರೀತಿ ಸೆಳೆದೆ
ಅನುರಾಗ ಹೊಳೆದು ಅನುಬಂಧ ಬೆಳೆದು
ಸಮ್ಮೋಹ ಸಂಬಂಧ ಮಿಡಿದೆ
ಮೂಡಿದ ಪ್ರೇಮದ ಸೊಗಸಾದ ಕಾರಂಜಿ ಬಿರಿದೆ,
ಸೊಗಸಾದ ಕಾರಂಜಿ ಬಿರಿದೆ.......

ಒಡಲಾಳ ಮೊರೆದು ಒಡನಾಟ ಮೆರೆದು
ಒಡನಾಡಿ ಬಾಂಧವ್ಯ ಕಂಡೆ
ಋತುಮಾನ ಮೀರಿ ಹೊಸಗಾನ ತೋರಿ
ಹಿತವಾದ ಮಾಧುರ್ಯ ಮಿಂದೆ
ತೀರದ ಮೋಹದ ಇನಿದಾದ ಆನಂದ ತಂದೆ,
ಇನಿದಾದ ಆನಂದ ತಂದೆ.......




ಹೊಂಬಿಸಿಲು (1978)


ಜೀವ ವೀಣೆ ನೀಡು

ಚಲನಚಿತ್ರ: ಹೊಂಬಿಸಿಲು (1978)
ನಿರ್ದೇಶನ: ಗೀತಪ್ರಿಯ  
ಸಾಹಿತ್ಯ: ಗೀತಪ್ರಿಯ  
ಸಂಗೀತ: ರಾಜನ್-ನಾಗೇಂದ್ರ  
ಗಾಯನ: ಎಸ್ ಪಿ ಬಾಲು, ಎಸ್ ಜಾನಕಿ  
ನಟರು: ವಿಷ್ಣುವರ್ಧನ್, ಆರತಿ   


ಜೀವ ವೀಣೆ ನೀಡು ಮಿಡಿತದ ಸಂಗೀತ
ಓ...ಭಾವ ಗೀತೆ ಬಾಳಿನೊಲುಮೆಯ ಸಂಕೇತ
ಇಂದು ಮಿಲನದ ಸಂತೋಷ ಸುಖ ಸಂತೋಷ
ಶುಭ ಸಂದೇಶ ಸಂದೇಶ ಸಂದೇಶವು.....

ಮಿಡಿಯುವ ಮನಗಳು ಎರಡು
ಮಿಡಿತದ ರಾಗವು ಒಂದೆ
ಮಿಂಚುವ ಕಣ್ಣಂಚಿನ ಸಂಚು ಇಂದು ಒಂದೇ
ಆ......ಲಲಲ.....ಆ......
ತಪಿಸುವ ಹೃದಯಗಳೆರಡು ತಾಪದ ವೇಗವು ಒಂದೆ
ಸೇರುವ ಶುಭ ಸಮಯದಿ ವಿರಹ ಇರದು ಮುಂದೆ.....

ಭಾವ.......
ಜೀವ.......

ಒಲವಿನ ಬಯಕೆಯು ಅಂದು ಮಿಲನ ಮಹೋತ್ಸವವಿಂದು
ರಚಿಸುವ ನಾವನುದಿನ ಮುದದ ಪ್ರೇಮ ಕವನ.....
ಕನಸಿನ ರಾತ್ರಿಯು ಕಳೆದು ಬಂದಿರೆ ನೆನೆಸಿದ ಹಗಲು
ಕಾಣುವ ಹೊಂಬಿಸಿಲಿನ ಸುಖದ ಸೂರ್ಯ ಕಿರಣ.....

*********************************************************************************

ನೀರ ಬಿಟ್ಟು ನೆಲದ ಮೇಲೆ

ಸಾಹಿತ್ಯ: ಗೀತಪ್ರಿಯ 
ಗಾಯನ: ಎಸ್. ಪಿ. ಬಾಲಸುಬ್ರಹ್ಮಣ್ಯಮ್ 


ಏ ಹೇಹೆ ಹೇ.. ಓ ಓಹೊ ಹೋ
ಆ ಹಾ ಹಾ ಹಾ .. 

ನೀರ ಬಿಟ್ಟು ನೆಲದ ಮೇಲೆ ದೋಣಿ ಸಾಗದು
ನೆಲವ ಬಿಟ್ಟು ನೀರ ಮೇಲೆ ಬಂಡಿ ಹೋಗದು
ನಿನ್ನ ಬಿಟ್ಟು ನನ್ನ, ನನ್ನ ಬಿಟ್ಟು ನಿನ್ನ
ಜೀವನ ಸಾಗದು, ಜೀವನ ಸಾಗದು
ನೀರ ಬಿಟ್ಟು ನೆಲದ ಮೇಲೆ ದೋಣಿ ಸಾಗದು .. 

ಸೂರ್ಯ ಬರದೆ ಕಮಲವೆಂದು ಅರಳದು
ಚಂದ್ರನಿರದೆ ತಾರೆಯೆಂದು ನಲಿಯದು
ಸೂರ್ಯ ಬರದೆ ಕಮಲವೆಂದು ಅರಳದು
ಚಂದ್ರನಿರದೆ ತಾರೆಯೆಂದು ನಲಿಯದು
ಒಲವು ಮೂಡದಿರಲು ಮನವು ಅರಳದು
ಮನವು ಅರಳದಿರಲು ಗೆಲುವು ಕಾಣದು
ಮನವು ಅರಳದಿರಲು ಗೆಲುವು ಕಾಣದು 

ನೀರ ಬಿಟ್ಟು ನೆಲದ ಮೇಲೆ ದೋಣಿ ಸಾಗದು
ನೆಲವ ಬಿಟ್ಟು ನೀರ ಮೇಲೆ ಬಂಡಿ ಹೋಗದು
ನಿನ್ನ ಬಿಟ್ಟು ನನ್ನ, ನನ್ನ ಬಿಟ್ಟು ನಿನ್ನ
ಜೀವನ ಸಾಗದು, ಜೀವನ ಸಾಗದು
ನೀರ ಬಿಟ್ಟು ನೆಲದ ಮೇಲೆ ದೋಣಿ ಸಾಗದು .. 

ಲೋಕದಲ್ಲಿ ಗಂಡು ಹೆಣ್ಣಿಗಾಸರೆ
ಆದರಿಲ್ಲಿ ನಾನು ನಿನ್ನ ಕೈಸೆರೆ
ಲೋಕದಲ್ಲಿ ಗಂಡು ಹೆಣ್ಣಿಗಾಸರೆ
ಆದರಿಲ್ಲಿ ನಾನು ನಿನ್ನ ಕೈಸೆರೆ
ಕೂಡಿ ನಲಿವ ಆಸೆ ಮನದಿ ಕಾದಿದೆ
ಹಿತವು ಎಲ್ಲಿ ನಾವು ಬೇರೆಯಾದರೆ
ಹಿತವು ಎಲ್ಲಿ ನಾವು ಬೇರೆಯಾದರೆ

ನೀರ ಬಿಟ್ಟು ನೆಲದ ಮೇಲೆ ದೋಣಿ ಸಾಗದು
ನೆಲವ ಬಿಟ್ಟು ನೀರ ಮೇಲೆ ಬಂಡಿ ಹೋಗದು
ನಿನ್ನ ಬಿಟ್ಟು ನನ್ನ, ನನ್ನ ಬಿಟ್ಟು ನಿನ್ನ
ಜೀವನ ಸಾಗದು, ಪಾವನ ಆಗದು
ಆಹಹ ಆಹಹ.. ಮ್ ಮ್ ..

ನೀರ ಬಿಟ್ಟು ನೆಲದ ಮೇಲೆ ದೋಣಿ ಸಾಗದು ..
********************************************************************************

ಹೂವಿಂದ ಹೂವಿಗೆ ಹಾರುವ ದುಂಬಿ

ಸಾಹಿತ್ಯ: ಗೀತಪ್ರಿಯ 

ಗಾಯನ: ಎಸ್.ಜಾನಕಿ

ಹೂವಿಂದ ಹೂವಿಗೆ ಹಾರುವ ದುಂಬಿ
ಏನನು ಹಾಡುತಿಹೆ ನೀ ಏನನು ಹಾಡುತಿಹೆ
ಹೂವಿಂದ ಹೂವಿಗೆ ಹಾರುವ ದುಂಬಿ
ಏನನು ಹಾಡುತಿಹೆ ನೀ ಏನನು ಹಾಡುತಿಹೆ
ಹೂವಿನ ಕೋಮಲ ಭಾವನೆ ಕೆಣಕಿ ಏತಕೆ ಕಾಡುತಿಹೇ ನೀ …
ಹೂವಿಂದ ಹೂವಿಗೆ ಹಾರುವ ದುಂಬಿ
ಏನನು ಹಾಡುತಿಹೆ ನೀ ಏನನು ಹಾಡುತಿಹೆ
ಆ…ಆ…ಆ… ಆ…ಆ…ಆ…  ಆ…..ಆ…..ಆ….ಆ…..
ಆಸೆಯ ತುಂಬಿ ಹೂವರಳಿರಲು ಹೂವನು ಕಂಡು ನೀ ಕೆರಳಿರಲು
ಹೂವಿನ ಅಂದ ನಿನಗೇ ಚಂದ ಮಧು ಮಕರಂದ ನಿನಗಾನಂದ
ಒಲಿಸುವ ರಾಗವ ನೀ ಉಲಿಉಲಿದು
ಒಲಿಸುವ ರಾಗವ ನೀ ಉಲಿಉಲಿದು
ಏನನು ಬಯಸುತಿಹೆ ನೀ………
ಹೂವಿಂದ ಹೂವಿಗೆ ಹಾರುವ ದುಂಬಿ
ಏನನು ಹಾಡುತಿಹೆ ನೀ ಏನನು ಹಾಡುತಿಹೆ
ಹೂವಿಂದ ಹೂವಿಗೆ ಹಾರುವ ದುಂಬಿ……

ದುಂಬಿಯೆ ನಿನಗೆ ಮಿಲನಕೆ ಸಂಭ್ರಮ
ಹೂವಿಗೆ ಬೇಕೋ ಪ್ರೇಮ ಸಮಾಗಮ
ಹೂವಿಗು ದುಂಬಿಗು ಇರುವಾ ಬಂಧ
ಸಮರಸವಿದ್ದರೆ ಸವಿರಾಗಬಂಧ
ಈ ಅನುರಾಗವ ಅರಿಯದೆ ಇಂದು
ಈ ಅನುರಾಗವ ಅರಿಯದೆ ಇಂದು
ಏನನು ಬೇಡುತಿಹೆ ನೀ……..
ಹೂವಿಂದ ಹೂವಿಗೆ ಹಾರುವ ದುಂಬಿ
ಏನನು ಹಾಡುತಿಹೆ ನೀ ಏನನು ಹಾಡುತಿಹೆ|
ಹೂವಿನ ಕೋಮಲ ಭಾವನೆ ಕೆಣಕಿ
ಏತಕೆ ಕಾಡುತಿಹೇ ನೀ …
ಹೂವಿಂದ ಹೂವಿಗೆ ಹಾರುವ ದುಂಬಿ……

*********************************************************************************

ಮಾಗಿಯ ಚಳಿಯಲ್ಲಿ

ಸಾಹಿತ್ಯ: ಗೀತಪ್ರಿಯ 

ಗಾಯನ: ಎಸ್.ಪಿ.ಬಿ, ಎಸ್.ಜಾನಕಿ 

ಇಬ್ಬರು : ಅಹ್ಹಹ್ಹಹ... ಅಹ್ಹಹ್ಹಹ
ಹೆಣ್ಣು : ಮಾಗಿಯ ಚಳಿಯಲ್ಲಿ ಈ ಬಿಸಿ ಏಕೋ
ಗಂಡು : ಮಾಗಿದ ಮೈಯಲ್ಲಿ ಮಿಂಚಿದು ಏಕೋ
ಹೆಣ್ಣು : ಮಾಗಿಯ ಚಳಿಯಲ್ಲಿ ಈ ಬಿಸಿ ಏಕೋ
ಗಂಡು : ಮಾಗಿದ ಮೈಯಲ್ಲಿ ಮಿಂಚಿದು ಏಕೋ
ಹೆಣ್ಣು : ಒಂದಾದ ನಮ್ಮಲ್ಲಿ ನೂರಾಸೆ ಕಣ್ಣಲ್ಲಿ
ಗಂಡು : ಒಂದಾದ ನಮ್ಮಲ್ಲಿ ನೂರಾಸೆ ಕಣ್ಣಲ್ಲಿ
ಹೆಣ್ಣು : ಇಣಿಕಿದೆ.. ಕೆಣಕಿದೆ.. ಕುಣಿದಿದೆ.... ಅಹ್..
ಗಂಡು : ಇಣಿಕಿದೆ.. ಕೆಣಕಿದೆ.. ಕುಣಿದಿದೆ..
            ಅಬ್ಬಬ್ಬಾಬ್ಬಾ (ಹ್ಹಹ್ಹಹ್ಹಹ್ಹ) ಹ್ಹಹ್ಹಹ್ಹಹ್ಹಾ (ಹ್ಹಹ್ಹಹ್ಹಹ್ಹಹ್ಹಾ) ಹೇ..ಹೇ..ಹೇ..
ಹೆಣ್ಣು : ಅಹ್ಹಹ್ಹಾ..  ಮಾಗಿಯ ಚಳಿಯಲ್ಲಿ ಈ ಬಿಸಿ ಏಕೋ
ಗಂಡು : ಮಾಗಿದ ಮೈಯಲ್ಲಿ ಮಿಂಚಿದು ಏಕೋ
ಹೆಣ್ಣು : ತಂದಾಗ ಈ ನಮ್ಮ ಸ್ನೇಹ  ಒಂದಾಗಿ ಅಪ್ಪುವ ಮೋಹ 
ಗಂಡು : ನಿನಗಾಗಿ ಸೋತಿದೆ ದೇಹ ಎಂದೆಂದೂ ತೀರದ ದಾಹ 
ಹೆಣ್ಣು : ಸಂಯಮವೆಲ್ಲಿ ಸಂಗಮದಲ್ಲಿ 
ಗಂಡು : ಸ್ವರ್ಗವು ಇಲ್ಲಿ ಸಂಭ್ರಮದಲ್ಲಿ 
ಆ... ಆ... ಆ...  ಲಲಲಲಲಲಲಲಲ
ಗಂಡು : ಅಹ್ಹಹ್ಹ ... ಮಾಗಿಯ ಚಳಿಯಲ್ಲಿ ಈ ಬಿಸಿ ಏಕೋ 
ಹೆಣ್ಣು : ಮಾಗಿದ ಮೈಯಲ್ಲಿ ಮಿಂಚಿದು ಏಕೋ
ಗಂಡು : ಒಂದಾದ ನಮ್ಮಲ್ಲಿ ನೂರಾಸೆ ಕಣ್ಣಲ್ಲಿ
ಹೆಣ್ಣು : ಇಣಿಕಿದೆ.. ಕೆಣಕಿದೆ.. ಕುಣಿದಿದೆ..ಅಹ್ಹಹ್
ಗಂಡು : ಇಣಿಕಿದೆ.. ಕೆಣಕಿದೆ.. ಕುಣಿದಿದೆ..ಅಹ್ಹಹ್
ಹೆಣ್ಣು : ಅಹ್ಹಹ್ಹಾ..  ಮಾಗಿಯ ಚಳಿಯಲ್ಲಿ ಈ ಬಿಸಿ ಏಕೋ
ಗಂಡು : ಮಾಗಿದ ಮೈಯಲ್ಲಿ ಮಿಂಚಿದು ಏಕೋ
ಗಂಡು : ಕಡಲಲ್ಲಿ  ತಲ್ಲಣವೇಕೋ ಕರೆ ಸೇರೋ ಆತುರವೇನೋ.. 
ಹೆಣ್ಣು : ಒಡಲಲ್ಲಿ ಕಂಪನವೇಕೊ ಜೊತೆ ಸೇರೋ ಕಾತುರವೇನೋ 
ಗಂಡು : ಹರೆಯದ ಬಯಕೆ ಅಂಕೆಯು ಬೇಕೇ 
ಹೆಣ್ಣು : ಬೆರೆಯುವ ಮನಕೆ ಅಂಜಿಕೆ ಏಕೆ 
ಗಂಡು : ... ಓ...ರರರರರ ರರರರರ ಆಹ್ಹ್  (ಲಲಲ) ಅಹ್ಹಹ್ಹ
ಇಬ್ಬರು :  ಅಹ್ಹಹ್ಹ ... ಮಾಗಿಯ ಚಳಿಯಲ್ಲಿ ಈ ಬಿಸಿ ಏಕೋ 
               ಮಾಗಿದ ಮೈಯಲ್ಲಿ ಮಿಂಚಿದು ಏಕೋ
                ಒಂದಾದ ನಮ್ಮಲ್ಲಿ ನೂರಾಸೆ ಕಣ್ಣಲ್ಲಿ
                ಒಂದಾದ ನಮ್ಮಲ್ಲಿ ನೂರಾಸೆ ಕಣ್ಣಲ್ಲಿ
                ಇಣಿಕಿದೆ.. ಕೆಣಕಿದೆ.. ಕುಣಿದಿದೆ.. ಅಹ್ಹಹ್
                ಇಣಿಕಿದೆ.. ಕೆಣಕಿದೆ.. ಕುಣಿದಿದೆ.. ಅಬ್ಬಬ್ಬಾ
                ( ಅಹ್ಹಹ್ಹಾ ) ಅಹ್ಹಹ್ಹ ( ಅಹ್ಹಹ್ಹಾ ) ಅಹ್ಹಹ್ಹ  ಹೇಹೇಹೇಹೇ ಓಓಓಓಓ
*********************************************************************************

ಗೆಳೆಯ (2007)

ಚಲನಚಿತ್ರ: ಗೆಳೆಯ (2007)

ಸಾಹಿತ್ಯ: ಜಯಂತ್ ಕಾಯ್ಕಿಣಿ 
ಸಂಗೀತ: ಮನೋ ಮೂರ್ತಿ 
ಗಾಯಕರು: ಸೋನು ನಿಗಮ್ 
ನಿರ್ದೇಶನ: ಎ. ಹರ್ಷ 
ನಟನೆ: ಪ್ರಜ್ವಲ್ ದೇವರಾಜ್, ತರುಣ್ ಚಂದ್ರ, 
ಸಿತಾರಾ ವೈದ್ಯ 


 ಈ ಸಂಜೆ ಯಾಕಾಗಿದೆ ನೀನಿಲ್ಲದೆ
ಈ ಸಂಜೆ ಯಾಕಾಗಿದೆ
ಈ ಸಂತೆ ಸಾಕಾಗಿದೆ ನೀನಿಲ್ಲದೆ
ಈ ಸಂತೆ ಸಾಕಾಗಿದೆ
ಏಕಾಂತವೆ ಆಲಾಪವು
ಏಕಾಂಗಿಯ ಸಲ್ಲಾಪವು
ಈ ಮೌನ ಬಿಸಿಯಾಗಿದೆ.....ಓ....
ಈ ಮೌನ ಬಿಸಿಯಾಗಿದೆ.....

ಈ ನೋವಿಗೆ ಕಿಡಿ ಸೋಕಿಸಿ
ಮಜ ನೋಡಿವೆ ತಾರಾಗಣ
ತಂಗಾಳಿಯ ಪಿಸುಮಾತಿಗೆ
ಯುಗವಾಗಿದೆ ನನ್ನ ಕ್ಷಣ
ನೆನಪೆಲ್ಲವು ಹೂವಾಗಿದೆ
ಮೈಯೆಲ್ಲವೂ ಮುಳ್ಳಾಗಿದೆ
ಈ ಜೀವ ಕಸಿಯಾಗಿದೆ....ಓ....
ಈ ಜೀವ ಕಸಿಯಾಗಿದೆ.....

ನೀನಿಲ್ಲದೆ ಆ ಚಂದಿರಾ
ಈ ಕಣ್ಣಲಿ ಕಸವಾಗಿದೆ
ಅದನೂದುವ ಉಸಿರಿಲ್ಲದೆ
ಬೆಳದಿಂಗಳು ಅಸು ನೀಗಿದೆ
ಆಕಾಶದಿ ಕಲೆಯಾಗಿದೆ
ಈ ಸಂಜೆಯ ಕೊಲೆಯಾಗಿದೆ
ಈ ಗಾಯ ಹಸಿಯಾಗಿದೆ.....
ಈ ಗಾಯ ಹಸಿಯಾಗಿದೆ....


ನವಗ್ರಹ (2008)

ಚಲನಚಿತ್ರ: ನವಗ್ರಹ (2008)

ಸಾಹಿತ್ಯ: ವಿ. ನಾಗೇಂದ್ರ ಪ್ರಸಾದ್ 
ಸಂಗೀತ: ವಿ. ಹರಿಕೃಷ್ಣ 
ಗಾಯನ: ಸೋನು ನಿಗಮ್ 
ನಟರು: ದರ್ಶನ್ ಮತ್ತು ಇತರರು   


ಕಣ್ ಕಣ್ಣ ಸಲಿಗೆ, ಸಲಿಗೆ ಅಲ್ಲ ಸುಲಿಗೆ
ನೀನಿನ್ನು ನನಗೆ, ನನಗೆ ನನ್ನನಗೆ.....
ಥರ ಥರ ಹೊಸ ಥರ, ಒಲವಿನ ಅವಸರ
ಹೃದಯಾನೆ ಜೋಕಾಲಿ.....

ಋತು ಏಳು ಭೂಮಿಯ ಮೇಲೆ
ಪ್ರಣಯಾನೆ ಎಂಟನೆ ಓಲೆ
ತಿಳಿ ತಿಳಿ ಪ್ರೇಮ
ಇರೋದಂತೂ ನಾಲ್ಕೇ ವೇದ
ಪ್ರೀತಿ ತಾನೇ ಪಂಚಮ ವೇದ
ನಿಜ ನಿಜ ಪ್ರೇಮ
ನಾನು ನಿನ್ನಲ್ಲಿ ಮೆಚ್ಚಿದ ಅಂಶವೇ ಪ್ರೀತಿ
ನೀನು ನನ್ನನು ಒಪ್ಪದೆ ಹೋದರೆ ಏನೋ ಭೀತಿ....

ಸಹಿ ಮಾಡು ನನ್ನೆದೆ ತುಂಬ
ನೀನೆ ಅದರ ತುಂಬ ತುಂಬ
ನಂಬು ನನ್ನ ನಲ್ಲೆ
ಒಂದೆ ಒಂದು ಮಾತು ಕೇಳು
ಎಲ್ಲ ಜನುಮ ನನ್ನನೆ ಆಳು
ನೀನೆ ನನ್ನ ಬಾಳು
ಯಾವ ತುದಿಯಲಿ ಇದ್ದರು ಭೂಮಿಯ ಮೇಲೆ
ನಾನು ನಿನ್ನನೆ ಕಾಯುವೆ ಪ್ರೀತಿಸೆ, ಪ್ರೀತಿ ಮಾಡೇ....


ಪಯಣ (2008)


ಮೋಡದ ಒಳಗೆ ಹನಿಗಳ ಬಳಗ

ಚಲನಚಿತ್ರ: ಪಯಣ (2008)
ನಿರ್ದೇಶನ: ಕಿರಣ್ ಗೋವಿ 
ಸಾಹಿತ್ಯ: ವಿ. ನಾಗೇಂದ್ರ ಪ್ರಸಾದ್ 
ಸಂಗೀತ: ವಿ. ಹರಿಕೃಷ್ಣ 
ಗಾಯನ: ಸೋನು ನಿಗಮ್ 
ನಟರು: ರವಿಶಂಕರ್, ರಮನಿತು ಚೌದರಿ  


ಮೋಡದ ಒಳಗೆ ಹನಿಗಳ ಬಳಗ
ಒಂಟಿ ಕಾಲಲಿ ಕಾದು ನಿಂತಿವೆ ಭೂಮಿಗೆ ಬರಲು
ನನ್ನೊಳಗೊಳಗೆ ಒಲವಿನ ಯೋಗ
ತುದಿಗಾಲಲಿ ನಿಂತು ಕಾದಿದೆ ಚಿಮ್ಮುತ ಬರಲು
ಕಾವ್ಯ ಕುಸುರಿ ಗೊತ್ತಿಲ್ಲ ಹಾಡುಗಾರ ನಾನಲ್ಲ
ನಿನ್ನ ಪ್ರೀತಿ ಮಾಡುವೆ ನಾನು ಇಷ್ಟೇ ಹಂಬಲ.....

ನಿಂತಲಿ ನಾ ನಿಲಲಾರೆ ಎಲ್ಲರು ಹೀಗನುತಾರೆ
ಏತಕೋ ನಾ ಕಾಣೆನು ಈ ತಳಮಳ
ಪ್ರೀತಿ ನನ್ನ ಬಲೆಯೊಳಗೊ
ನಾನೆ ಪ್ರೀತಿ ಬಲೆಯೊಳಗೊ
ಕಾಡಿದೆ ಕಂಗೆಡಿಸಿದೆ ಸವಿ ಕಳವಳ
ಖಾಲಿ ಜೇಬಿನ ಮಜುನು ಪ್ರೀತಿ ಒಡೆಯನಾಗುವೆನು
ನಿನ್ನ ಬಿಟ್ಟು ಹೇಗಿರಬೇಕು ಹೇಳೇ ಪ್ರಾಣವೇ 

ನಾನು ನಿನ್ನ ಕಣ್ಣೊಳಗೆ ಮಾಯ ಕನ್ನಡಿ ನೋಡಿರುವೆ
ನನ್ನನು ಬರಸೆಳೆಯುವ ಕಲೆ ನಿನ್ನದು
ಯಾವ ಜನುಮದ ಸಂಗಾತಿ ಈಗಲೂ ಸಹ ಜೊತೆಗಾತಿ
ಅದ್ಭುತ ಈ ಅತಿಶಯ ನಾ ತಾಳೆನು
ನಾನು ಬಡವ ಬದುಕಿನಲಿ ಸಾಹುಕಾರ ಪ್ರೀತಿಯಲಿ
ನೀನೆ ನನ್ನ ನಾಡಿಯಲಿ ಜೀವ ಎಂದಿಗೂ......


********************************************************************************

ಮಾನಸಗಂಗೆ

ಸಾಹಿತ್ಯ: ವಿ. ನಾಗೇಂದ್ರ ಪ್ರಸಾದ್ 
ಗಾಯಕರು: ಸೋನು ನಿಗಮ್ 

ಆ ಆ ಆ ಆಹಾ ಆ ಆ ಆ ಆಹಾ!

ಮಾನಸಗಂಗೆ ಮಾನಸಗಂಗೆ
ಅವಳ ಅಂದ ಹೇಳಲಿ ಹೆಂಗೆ?
ಮಾನಸಗಂಗೆ ಮಾನಸಗಂಗೆ
ಅವಳೇ ನನ್ನ ಅಂತರಗಂಗೆ ನನ್ನಾಣೆ
ಆ ಗೊಂಬೆ ತುಂತುರಿನಂತೆ
ಅವಳೊಂದು ನಿಲ್ಲದ ಕವಿತೆ
ಬಂಗಾರ ಬಂಗಾರ ಧರೆಗಿಳಿದ ಮಂದಾರ..

ಮಾನಸಗಂಗೆ ಮಾನಸಗಂಗೆ
ಅವಳ ಅಂದ ಹೇಳಲಿ ಹೆಂಗೆ?

ಚಂದಮಾಮಾ ಕೈ ಚಾಚಿದ
ಬಾರೇ ಎಂದು ಗೋಳಾಡಿದ
ಇವನ ಬಿಟ್ಟು ಹೋಗಲಾರೆ ಉಹುಂ ಎಂದರೂ
ಹೋ ಅಂತರಂಗ ಹಾಲಾಯಿತು
ಅಂತೂ ಇಂತೂ ಹೆಪ್ಪಾಯಿತು
ಪ್ರತಿ ಜನ್ಮ ಇವಳೇ ಎಂದು ಒಪ್ಪಾಯಿತು
ಅಭಿಮಾನಕೂ ಇವಳೇ ಅನುಬಂಧಕೂ ಇವಳೇ
ಅನುರಾಗವೂ ಇವಳೇ ಅನುಕಾಲವೂ ಇವಳೇನೇ
ಏ ಏ ಏ ಏ ಪಯಣ ಪ್ರೀತಿಯ ಕಡೆಗೆ 
ಪಯಣ ಪ್ರೀತಿಯ ಜೊತೆಗೆ..

ಮಾನಸಗಂಗೆ ಮಾನಸಗಂಗೆ
ಅವಳ ಅಂದ ಹೇಳಲಿ ಹೆಂಗೆ?

ಕಪ್ಪು ಕಣ್ಣಿ ಕಾದಂಬರಿ ಕೆನ್ನೆ ಬಣ್ಣ ಕನಕಾಂಬರಿ
ನಾಚಿ ನೀಲಿಯಾಗುವ ನೀಲಾಂಬರಿ
ಮಳೆಬಿಲ್ಲು ಮಾತಾಡಿತು ಹೊಸ ಬಣ್ಣ ನೀಡೆಂದಿತು
ನನ್ನ ನಲ್ಲೆ ಬಣ್ಣಗಳಿಗೆ ಬಹುರೂಪಸಿ
ನನ್ನ ಪಾಡು ಇವಳೇ ನನ್ನ ಹಾಡು ಇವಳೇ
ನನ್ನ ಜಾಡು ಇವಳೇ ಅನ್ವೇಷಣೆ ಇವಳೇನೇ
ಏ ಏ ಏ ಏ ಪಯಣ ಪ್ರೀತಿಯ ಕಡೆಗೆ 
ಪಯಣ ಪ್ರೀತಿಯ ಜೊತೆಗೆ...

ಮಾನಸಗಂಗೆ ಮಾನಸಗಂಗೆಅವಳ ಅಂದ ಹೇಳಲಿ ಹೆಂಗೆ?
ಮಾನಸಗಂಗೆ ಮಾನಸಗಂಗೆ
ಅವಳೇ ನನ್ನ ಅಂತರಗಂಗೆ ನನ್ನಾಣೆ
ಆ ಗೊಂಬೆ ತುಂತುರಿನಂತೆ
ಅವಳೊಂದು ನಿಲ್ಲದ ಕವಿತೆ
ಬಂಗಾರ ಬಂಗಾರ ಧರೆಗಿಳಿದ ಮಂದಾರ.. 

 *********************************************************************************

ಸವಿ ಸವಿ ನೆನಪು (2007)

ಚಲನಚಿತ್ರ: ಸವಿ ಸವಿ ನೆನಪು (2007)
ಸಾಹಿತ್ಯ: ನಾಗತಿಹಳ್ಳಿ ಚಂದ್ರಶೇಖರ್ 
ಸಂಗೀತ: ಆರ್. ಪಿ. ಪಟ್ನಾಯಕ್ 
ಗಾಯನ: ಸೋನು ನಿಗಮ್, ಶ್ರೇಯಾ ಘೋಷಾಲ್ 
ನಟರು: ಪ್ರೇಮ್, ಮಲ್ಲಿಕಾ ಕಪೂರ್  


ಸವಿಯೋ ಸವಿಯು ಒಲವ ನೆನಪು
ಎದೆಯ ನಿಧಿಯೇ ಅನುರಾಗ
ಪ್ರತಿ ಕ್ಷಣದಲಿ ಪ್ರಾರ್ಥನೆಯಲಿ ಕಾಡುವೆ ಏತಕೆ
ಸೂರ್ಯನಂತೆ ನಾ ಹೊಳೆವಾಗ ಭೂಮಿಯಂತೆ ನೀ ಬಾ
ಭೂಮಿಯಂತೆ ನಾ ಕರೆವಾಗ ಮಳೆಬಿಲ್ಲಂತೆ ನೀ ಬಾ

ನೀ ಬರುವ ದಾರಿಯಲ್ಲಿ ಒಲವೆಂಬ ರಂಗವಲ್ಲಿ
ನಿನಗಾಗಿ ಮೂಡಿದೆ ನೋಡು ಬಾ
ಒಡಲಾಳ ತಂತು ಸ್ನೇಹ ಒಡಮೂಡಿ ಬಂತು ಮೋಹ
ಕಥೆಯಾಗಿ ಕಾಡಿತು ಮೂಡಿತು
ಆ ಗದ್ಯದೊಳದ್ದಿದಾ ಪದ್ಯದ ಮಧ್ಯದ ಅದ್ಭುತ ಭಾವಾರ್ಥವೆ
ನೀ ಗದ್ಯದೊಳದ್ದಿದ ಪದ್ಯದ ಮಧ್ಯದ ಅದ್ಭುತ ಭಾವಾರ್ಥವೆ 

ಮರುಭೂಮಿ ಯಾನದಲ್ಲಿ ಅಮೃತದ ಧಾರೆ ಚೆಲ್ಲಿ
ತಂಪಾಯ್ತು ಜೀವಕೆ ಭಾವಕೆ
ಮುಂಜಾನೆ ಮಂಜಿನಲ್ಲು ಚುಮುಗುಡುವ ಬೆಳಗಿನಲ್ಲು
ಬಿಸಿಯಾಯ್ತು ಮೈಯಿಗು ಮನಸಿಗೂ
ನೀ ಬೆಚ್ಚನೆ ಪ್ರೀತಿಯ ಹುಚ್ಚಿನ ಮೆಚ್ಚಿನ ಇಚ್ಛೆಯ ಹೆಣ್ಣಲ್ಲವೇ
ನೀ ಬೆಚ್ಚನೆ ಪ್ರೀತಿಯ ಹುಚ್ಚಿನ ಮೆಚ್ಚಿನ ಇಚ್ಛೆಯ ಗಂಡಲ್ಲವೇ......


********************************************************************************