Friday, August 31, 2018

ಪಯಣ (2008)


ಮೋಡದ ಒಳಗೆ ಹನಿಗಳ ಬಳಗ

ಚಲನಚಿತ್ರ: ಪಯಣ (2008)
ನಿರ್ದೇಶನ: ಕಿರಣ್ ಗೋವಿ 
ಸಾಹಿತ್ಯ: ವಿ. ನಾಗೇಂದ್ರ ಪ್ರಸಾದ್ 
ಸಂಗೀತ: ವಿ. ಹರಿಕೃಷ್ಣ 
ಗಾಯನ: ಸೋನು ನಿಗಮ್ 
ನಟರು: ರವಿಶಂಕರ್, ರಮನಿತು ಚೌದರಿ  


ಮೋಡದ ಒಳಗೆ ಹನಿಗಳ ಬಳಗ
ಒಂಟಿ ಕಾಲಲಿ ಕಾದು ನಿಂತಿವೆ ಭೂಮಿಗೆ ಬರಲು
ನನ್ನೊಳಗೊಳಗೆ ಒಲವಿನ ಯೋಗ
ತುದಿಗಾಲಲಿ ನಿಂತು ಕಾದಿದೆ ಚಿಮ್ಮುತ ಬರಲು
ಕಾವ್ಯ ಕುಸುರಿ ಗೊತ್ತಿಲ್ಲ ಹಾಡುಗಾರ ನಾನಲ್ಲ
ನಿನ್ನ ಪ್ರೀತಿ ಮಾಡುವೆ ನಾನು ಇಷ್ಟೇ ಹಂಬಲ.....

ನಿಂತಲಿ ನಾ ನಿಲಲಾರೆ ಎಲ್ಲರು ಹೀಗನುತಾರೆ
ಏತಕೋ ನಾ ಕಾಣೆನು ಈ ತಳಮಳ
ಪ್ರೀತಿ ನನ್ನ ಬಲೆಯೊಳಗೊ
ನಾನೆ ಪ್ರೀತಿ ಬಲೆಯೊಳಗೊ
ಕಾಡಿದೆ ಕಂಗೆಡಿಸಿದೆ ಸವಿ ಕಳವಳ
ಖಾಲಿ ಜೇಬಿನ ಮಜುನು ಪ್ರೀತಿ ಒಡೆಯನಾಗುವೆನು
ನಿನ್ನ ಬಿಟ್ಟು ಹೇಗಿರಬೇಕು ಹೇಳೇ ಪ್ರಾಣವೇ 

ನಾನು ನಿನ್ನ ಕಣ್ಣೊಳಗೆ ಮಾಯ ಕನ್ನಡಿ ನೋಡಿರುವೆ
ನನ್ನನು ಬರಸೆಳೆಯುವ ಕಲೆ ನಿನ್ನದು
ಯಾವ ಜನುಮದ ಸಂಗಾತಿ ಈಗಲೂ ಸಹ ಜೊತೆಗಾತಿ
ಅದ್ಭುತ ಈ ಅತಿಶಯ ನಾ ತಾಳೆನು
ನಾನು ಬಡವ ಬದುಕಿನಲಿ ಸಾಹುಕಾರ ಪ್ರೀತಿಯಲಿ
ನೀನೆ ನನ್ನ ನಾಡಿಯಲಿ ಜೀವ ಎಂದಿಗೂ......


********************************************************************************

ಮಾನಸಗಂಗೆ

ಸಾಹಿತ್ಯ: ವಿ. ನಾಗೇಂದ್ರ ಪ್ರಸಾದ್ 
ಗಾಯಕರು: ಸೋನು ನಿಗಮ್ 

ಆ ಆ ಆ ಆಹಾ ಆ ಆ ಆ ಆಹಾ!

ಮಾನಸಗಂಗೆ ಮಾನಸಗಂಗೆ
ಅವಳ ಅಂದ ಹೇಳಲಿ ಹೆಂಗೆ?
ಮಾನಸಗಂಗೆ ಮಾನಸಗಂಗೆ
ಅವಳೇ ನನ್ನ ಅಂತರಗಂಗೆ ನನ್ನಾಣೆ
ಆ ಗೊಂಬೆ ತುಂತುರಿನಂತೆ
ಅವಳೊಂದು ನಿಲ್ಲದ ಕವಿತೆ
ಬಂಗಾರ ಬಂಗಾರ ಧರೆಗಿಳಿದ ಮಂದಾರ..

ಮಾನಸಗಂಗೆ ಮಾನಸಗಂಗೆ
ಅವಳ ಅಂದ ಹೇಳಲಿ ಹೆಂಗೆ?

ಚಂದಮಾಮಾ ಕೈ ಚಾಚಿದ
ಬಾರೇ ಎಂದು ಗೋಳಾಡಿದ
ಇವನ ಬಿಟ್ಟು ಹೋಗಲಾರೆ ಉಹುಂ ಎಂದರೂ
ಹೋ ಅಂತರಂಗ ಹಾಲಾಯಿತು
ಅಂತೂ ಇಂತೂ ಹೆಪ್ಪಾಯಿತು
ಪ್ರತಿ ಜನ್ಮ ಇವಳೇ ಎಂದು ಒಪ್ಪಾಯಿತು
ಅಭಿಮಾನಕೂ ಇವಳೇ ಅನುಬಂಧಕೂ ಇವಳೇ
ಅನುರಾಗವೂ ಇವಳೇ ಅನುಕಾಲವೂ ಇವಳೇನೇ
ಏ ಏ ಏ ಏ ಪಯಣ ಪ್ರೀತಿಯ ಕಡೆಗೆ 
ಪಯಣ ಪ್ರೀತಿಯ ಜೊತೆಗೆ..

ಮಾನಸಗಂಗೆ ಮಾನಸಗಂಗೆ
ಅವಳ ಅಂದ ಹೇಳಲಿ ಹೆಂಗೆ?

ಕಪ್ಪು ಕಣ್ಣಿ ಕಾದಂಬರಿ ಕೆನ್ನೆ ಬಣ್ಣ ಕನಕಾಂಬರಿ
ನಾಚಿ ನೀಲಿಯಾಗುವ ನೀಲಾಂಬರಿ
ಮಳೆಬಿಲ್ಲು ಮಾತಾಡಿತು ಹೊಸ ಬಣ್ಣ ನೀಡೆಂದಿತು
ನನ್ನ ನಲ್ಲೆ ಬಣ್ಣಗಳಿಗೆ ಬಹುರೂಪಸಿ
ನನ್ನ ಪಾಡು ಇವಳೇ ನನ್ನ ಹಾಡು ಇವಳೇ
ನನ್ನ ಜಾಡು ಇವಳೇ ಅನ್ವೇಷಣೆ ಇವಳೇನೇ
ಏ ಏ ಏ ಏ ಪಯಣ ಪ್ರೀತಿಯ ಕಡೆಗೆ 
ಪಯಣ ಪ್ರೀತಿಯ ಜೊತೆಗೆ...

ಮಾನಸಗಂಗೆ ಮಾನಸಗಂಗೆಅವಳ ಅಂದ ಹೇಳಲಿ ಹೆಂಗೆ?
ಮಾನಸಗಂಗೆ ಮಾನಸಗಂಗೆ
ಅವಳೇ ನನ್ನ ಅಂತರಗಂಗೆ ನನ್ನಾಣೆ
ಆ ಗೊಂಬೆ ತುಂತುರಿನಂತೆ
ಅವಳೊಂದು ನಿಲ್ಲದ ಕವಿತೆ
ಬಂಗಾರ ಬಂಗಾರ ಧರೆಗಿಳಿದ ಮಂದಾರ.. 

 *********************************************************************************

No comments:

Post a Comment