Friday, August 31, 2018

ಗೆಳೆಯ (2007)

ಚಲನಚಿತ್ರ: ಗೆಳೆಯ (2007)

ಸಾಹಿತ್ಯ: ಜಯಂತ್ ಕಾಯ್ಕಿಣಿ 
ಸಂಗೀತ: ಮನೋ ಮೂರ್ತಿ 
ಗಾಯಕರು: ಸೋನು ನಿಗಮ್ 
ನಿರ್ದೇಶನ: ಎ. ಹರ್ಷ 
ನಟನೆ: ಪ್ರಜ್ವಲ್ ದೇವರಾಜ್, ತರುಣ್ ಚಂದ್ರ, 
ಸಿತಾರಾ ವೈದ್ಯ 


 ಈ ಸಂಜೆ ಯಾಕಾಗಿದೆ ನೀನಿಲ್ಲದೆ
ಈ ಸಂಜೆ ಯಾಕಾಗಿದೆ
ಈ ಸಂತೆ ಸಾಕಾಗಿದೆ ನೀನಿಲ್ಲದೆ
ಈ ಸಂತೆ ಸಾಕಾಗಿದೆ
ಏಕಾಂತವೆ ಆಲಾಪವು
ಏಕಾಂಗಿಯ ಸಲ್ಲಾಪವು
ಈ ಮೌನ ಬಿಸಿಯಾಗಿದೆ.....ಓ....
ಈ ಮೌನ ಬಿಸಿಯಾಗಿದೆ.....

ಈ ನೋವಿಗೆ ಕಿಡಿ ಸೋಕಿಸಿ
ಮಜ ನೋಡಿವೆ ತಾರಾಗಣ
ತಂಗಾಳಿಯ ಪಿಸುಮಾತಿಗೆ
ಯುಗವಾಗಿದೆ ನನ್ನ ಕ್ಷಣ
ನೆನಪೆಲ್ಲವು ಹೂವಾಗಿದೆ
ಮೈಯೆಲ್ಲವೂ ಮುಳ್ಳಾಗಿದೆ
ಈ ಜೀವ ಕಸಿಯಾಗಿದೆ....ಓ....
ಈ ಜೀವ ಕಸಿಯಾಗಿದೆ.....

ನೀನಿಲ್ಲದೆ ಆ ಚಂದಿರಾ
ಈ ಕಣ್ಣಲಿ ಕಸವಾಗಿದೆ
ಅದನೂದುವ ಉಸಿರಿಲ್ಲದೆ
ಬೆಳದಿಂಗಳು ಅಸು ನೀಗಿದೆ
ಆಕಾಶದಿ ಕಲೆಯಾಗಿದೆ
ಈ ಸಂಜೆಯ ಕೊಲೆಯಾಗಿದೆ
ಈ ಗಾಯ ಹಸಿಯಾಗಿದೆ.....
ಈ ಗಾಯ ಹಸಿಯಾಗಿದೆ....


No comments:

Post a Comment