Saturday, October 6, 2018

ಜೋಡಿ ಹಕ್ಕಿ (1997)


ಹರ ಹರ ಗಂಗೆ

ಚಲನ ಚಿತ್ರ: ಜೋಡಿ ಹಕ್ಕಿ(1997)
ನಿರ್ದೇಶನ: ಡಿ. ರಾಜೇಂದ್ರ ಬಾಬು 
ಸಂಗೀತ: ವಿ ಮನೋಹರ್
ಸಾಹಿತ್ಯ: ವಿ ಮನೋಹರ್
ಗಾಯನ: ಡಾ. ರಾಜ್ ಕುಮಾರ
ನಟನೆ: ಶಿವರಾಜ್ ಕುಮಾರ್, ಚಾರುಲತಾ, 
ವಿಜಯಲಕ್ಷ್ಮೀ 


ಹೇ ಹೇ ಹೇ ಹೇ ಆಆಆಆಆಆ
ಹರ ಹರ ಗಂಗೆ ಹರ ಹರ ಗಂಗೆ
ಕೇಳು ಕೇಳು ಕೇಳು ಕೇಳು
ವಿಧಿ ಬರೆದಂಗೆ ನಡೆದರೆ ಹೆಂಗೆ
ಹೇಳು ಹೇಳು ಹೇಳು ಹೇಳು

ಹೂವು ಹಾವಾಗೋಯ್ತೊ  ಹಾಲು ನಂಜಾಯ್ತೊ
ಹೂವು ಹಾವಾಗೋಯ್ತೊ  ಹಾಲು ನಂಜಾಯ್ತೊ ... ೨

ಹೇ ಕಂಗಳ ಕೊಟ್ಟೆ  ದಿಟ್ಟಿಯ ಕಿತ್ತೆ ಕನಸುಗಳೆಲ್ಲ ಕಪ್ಪಾಯ್ತು
ಗುಂಡಿಗೆ ಕೊಟ್ಟೆ ಪ್ರೀತಿಯ ಕಿತ್ತೆ ಆಸೆಯ ಬಳ್ಳಿ ಸುಟ್ಟೊಯ್ತು
ಚಿನ್ನದ ಸೂಜಿ ಆದ್ರು ಹ್ಯಾಂಗೆ ಕಣ್ಣಿಗೆ ಚುಚ್ಚೊಕಾಗುತ್ತ
ಒಡಲಿನ ಬೆಂಕಿ ಆದ್ರು ಕೂಡ ಮಡಿಲಲ್ಲ್ ಮಡುಗೋಕಾಗುತ್ತ
ಏನೇನು ಕೊಟ್ಟೆ ಶಿವನೇ ಮಾಯ ಬಂಢಾರದವನೆ
ಯಾವ್ದೊ ಜನ್ಮದ ಕೋಪವ ಮರ್ತಿಲ್ಲ ಶಿವ
ಈ ಜನ್ಮಕ್ಕಿಂಗೆ ತೋರ್ಸವ್ನೇ

ಹರ ಹರ ಗಂಗೆ ಹರ ಹರ ಗಂಗೆ
ಕೇಳು ಕೇಳು ಕೇಳು ಕೇಳು
ವಿಧಿ ಬರೆದಂಗೆ ನಡೆದರೆ ಹೆಂಗೆ
ಹೇಳು ಹೇಳು ಹೇಳು ಹೇಳು

ಹೇ ರೂಪವ ಕೊಟ್ಟೆ ರೂಪದ ಕೂಡ
ಶಾಪವ ಕೊಟ್ಟೆ ಯಾಕ್ ಹೇಳು
ಚಂದದ ಹೂವು ಸಂಜೆಗೆ ಬಾಡಿ
ಹೋಗೊದ್ ಯಾಕೆ ನೀ ಹೇಳು
ಮುದ್ದಿನ ಮುತ್ತು ಎದೆಯೊಳ್ಗಿಟ್ಟು
ಮಾಡಿದೆ ನಾನು ಜೋಪಾನ
ಅಯ್ಯೊ ವಿಧಿಯೆ ಮುತ್ತೊಡೆದೊಯ್ತು
ಯಾರಿಗೆ ದುಖಃ ಹೇಳೋಣ
ನನ್ನಾಸೆ ಬಳ್ಳಿ ಕುಸುಮಾ ಬೆಂದೋಗಿ ಬೂದಿ ಆಯಿತೆ
ಮನಸಾರೆ ಆತ್ತು ಬಿಡಲೆ ಹ್ಯಾಗಳ್ಳ್ಲಿ
ಶಿವನೆ ಕಣ್ಣೀರೆ ಬತ್ತಿ ಹೋಗೈತೆ

ಹರ ಹರ ಗಂಗೆ ಹರ ಹರ ಗಂಗೆ
ಕೇಳು ಕೇಳು ಕೇಳು ಕೇಳು
ವಿಧಿ ಬರೆದಂಗೆ ನಡೆದರೆ ಹೆಂಗೆ
ಹೇಳು ಹೇಳು ಹೇಳು ಹೇಳು

*********************************************************************************

ಲಾಲಿ ಸುವ್ವಾಲಿ 

ಸಾಹಿತ್ಯ: ವಿ ಮನೋಹರ್
ಗಾಯನ: ಎಲ್. ಎನ್. ಶಾಸ್ತ್ರಿ


ಲಾಲಿ ಸುವ್ವಾಲಿ ಹಾಡೆಲ್ಲ ಲಾಲಿ 
ನನ್ನ ಚೆಲುವಿಗೆ ಸೊಗಸಾದ ಲಾಲಿ
ಮನಕೆ ಮುಗಿಲಿನ ರಾಜಕುಮಾರಿ 
ಕನಸಾಗೆ ಬರುವೆ ನಾ ಕೇಳೆ ಚಿಂಗಾರಿ

ಒಂದು ಮಾತಾಡೊ ಹೂವ ಕಂಡೆ ನಾನು
ಬಾಡದಂಥ ಪ್ರೀತಿಯ ಹೂವು ನೀನು
ನಿನ್ನ ಮನಸಾಗೆ ಎಲ್ಲ ಬರಿ ಜೇನು
ಇನ್ನು ಇದಕಿನ್ನ ದೊಡ್ಡದಲ್ಲ ಏನು
ನನ್ನ ಬಾಳ ಸಂತೋಷವೆಲ್ಲ ನೀನೆ
ನನ್ನ ಹಾಡು ಸಂಗೀತವೆಲ್ಲ ನೀನೆ
ನನ್ನುಸಿರು ಪ್ರಾಣ ಬದುಕು ಎಲ್ಲ ನೀನಮ್ಮ
ನನ್ನಾಸೆ ಕನಸ ಉಳಿಸೊ ಜೀವ ನೀನಮ್ಮ

ನಿದಿರೆಯ ದೇವಿ ಹಾಡ್ಯಾಳೆ ಲಾಲಿ
ಹಾಯಾಗಿ ಮಲಗೆ ಜೋಗುಳ ಕೇಳಿ
ಯಾವ ಜನುಮಾದ ಬಂಧ ನಮ್ಮ ಜೋಡಿ
ನಾನು ನಿನ್ನ ನೀ ನನ್ನ ಜೀವ ನಾಡಿ
ಹೋ..  ಮೇಲೆ ಮುಕ್ಕೋಟಿ ದೈವವೊಮ್ಮೆ ನೋಡಿ
ತುಂಬು ಹಾರೈಸುವರು ಶುಭ ಹಾಡಿ
ಕಣ್ಣ ಮುಂದೆ ಸೌಭಾಗ್ಯ ಅಂದ್ರೆ ನೀನೆ
ಪ್ರೀತಿ ಧಾರೆ ದೇವತೆ ನಂಗೆ ನೀನೆ
ಕೊನೆವರೆಗೂ ಉಳಿಯೊ ಆಸ್ತಿ ಪ್ರೀತಿ ಒಂದೇನೆ
ಅದನೆಂದು ಕಾಯಬೇಕು ನಿತ್ಯ ಹಿಂಗೆನೆ


*********************************************************************************

ಮಿಸ್ಟರ್ ಆಂಡ್ ಮಿಸೆಸ್ ರಾಮಾಚಾರಿ (2014)


ಕಾರ್ಮೋಡ ಸರಿದು

ಮಿಸ್ಟರ್ ಐಂಡ್ ಮಿಸೆಸ್ ರಾಮಾಚಾರಿ (2014)
ನಿರ್ದೇಶನ: ಸಂತೋಷ್ ಆನಂದ್ರಾಮ್ 
ಸಂಗೀತ : ವಿ. ಹರಿಕೃಷ್ಣ 
ಸಾಹಿತ್ಯ : ಗೌಸ್ ಪೀರ್ 
ಗಾಯನ : ರಾಜೇಶ ಕೃಷ್ಣನ್ 
ನಟನೆ: ಯಶ್, ರಾಧಿಕಾ ಪಂಡಿತ್ 


ಕಾರ್ಮೋಡ ಸರಿದು ಬೆಳಕು ಸುರಿದ ಮೇಲು
ಈ ಕಣ್ಣಿನಲ್ಲಿ ಮುಂಚೆ ಇದ್ದ ಮಿಂಚು ಇಲ್ಲ
ಖುಷಿಲೂ ಕೂಡ ಹತಾಶೆ ನಿರಾಳದಲ್ಲೂ ನಿರಾಸೆ
ಇದೆ ತಮಾಷೆ ಗೆದ್ದು ಸೋತಿರುವೆ

ನಾ ಅಳುವ ಮುನ್ನ ಕಣ್ಣೀರು ಜಾರಿತಲ್ಲ
ಈ ಕಂಬನಿಯನು ಒರೆಸು ಕೈಯ್ಯಿ ಜೊತೆಗೆ ಇಲ್ಲ
ಬಿಸಿಲು ನೆತ್ತಿಯ ಸುಡುವಾಗ
ಬಂದಿದೆ ಮಳೆಯ ಶುಭ ಯೋಗ
ಕಂಡೆನು ಅಕ್ಕರೆ ಮಳೆಬಿಲ್ಲ ಸಿಹಿ ವಿಚಾರ

ಒಂದು ತರಹ ಆಗಿದೆ ಬಲಿದಾನ
ಒಂದು ತರಹ ಸಿಕ್ಕಿದೆ ಬಹುಮಾನ
ಮರೆಯುವುದು ಹೇಗೆ ನಿನ್ನ ತುಂಬಾ ಕಠೋರ
ಕಣ್ಣೆರಡು ತುಂಬಿ ಹೋಗಿವೆ
ಖುಷಿಗೊಂದು, ಒಂದು ದುಃಖಕ್ಕೆ
ನಿಶಬ್ಧ ದಲ್ಲೂ ಗಲಾಟೆ ನಿಗೂಢವಾದ ತರಾಟೆ
ಇದೆ ತಮಾಷೆ ಗೆದ್ದು ಸೋತಿರುವೆ

ಕಾರ್ಮೋಡ ಸರಿದು ಬೆಳಕು ಸುರಿದ ಮೇಲು
ಈ ಕಣ್ಣಿನಲ್ಲಿ ಮುಂಚೆ ಇದ್ದ ಮಿಂಚು ಇಲ್ಲ

ಅನುರಾಗದ ಶೋಧನೆ ಅಂದು
ಬದುಕೆನ್ನುವ ಭೋಧನೆ ಇಂದು
ಕಾಲಾ ನಿನ್ನ ಕೈ ಗಡಿಯಾರ ಎಂಥ ವಿಚಿತ್ರ
ಒಂದತರಹ ಹತ್ತಿಯ ಗುಣ ನಿಂದು
ಒಂದತರಹ ಕತ್ತಿಯ ಛಲ ನಂದು
ಇರಿಸು ಮುರಿಸು ಸಹಜ ನೆ ಯಥಾ ಪ್ರಕಾರ
ಹೀಗೆ ಬಂದು ಹಾಗೆ ಹೋಗುವಾ
ಮಂಜಾದೆ ನೀನು ನನಗೆ
ವಿನೋದದಲ್ಲೂ ಅಭಾವ ವಿಭಿನ್ನ ದಲ್ಲೂ ಪ್ರಭಾವ
ಇದೆ ತಮಾಷೆ ಪಡೆದು ಕಳೆದಿರುವೆ

ಕಾರ್ಮೋಡ ಸರಿದು ಬೆಳಕು ಸುರಿದ ಮೇಲು
ಈ ಕಣ್ಣಿನಲ್ಲಿ ಮುಂಚೆ ಇದ್ದ ಮಿಂಚು ಇಲ್ಲ

*********************************************************************************

ಯಾರಲ್ಲಿ ಸೌಂಡು


ಸಾಹಿತ್ಯ: ಸಂತೋಷ್ ಆನಂದ್ರಾಮ್ 

ಗಾಯಕರು: ರಂಜಿತ್ 


ಯಾರಲ್ಲಿ ಸೌಂಡು ಮಾಡೋದು?
ಸುಮ್ನಿರ್ರೀ ಚಾರಿ ಬೈಬೋದು
ಸೈಲೆಂಟಾಗಿದ್ರೆ ಒಳ್ಳೇದೂ
ಯಾರೂ ಕೆಮ್ಮಂಗಿಲ್ಲಾ ಗುರು

ಯಾರಲ್ಲಿ ಲುಕ್ಕು ಕೊಡೋದು?
ಇದನ್ನೇ ಬ್ಯಾಡ ಅನ್ನೋದು
ಸೈಡಲ್ಲಿ ಇದ್ರೆ ಒಳ್ಳೇದೂ
ಅಡ್ಡಾ ಸಿಗಂಗಿಲ್ಲಾ ಗುರು
ರಾಮಾಚಾರಿ......ರಾಮಾಚಾರಿ

ಹಾರ್ಟ್ ಅಂತೂ ಲೋಕಲ್ಲೂ
ರಾಕಿಂಗೂ ಲೇಬಲ್ಲು
ಸ್ಟಾಕೈತೆ ಎಲ್ಲೆಲ್ಲೂ
ಈ ಕಂಟ್ರೀ ಪಿಸ್ತೂಲು
ಸ್ಪೀಡಲ್ಲಿ ಮಿಸೈಲು
ನಿಲ್ಲಲ್ಲ ಇನ್ನೆಲ್ಲೂ

ಈ ಅಂಜದ ಎದೆಯಲಿ ನಂಜೇ ಇಲ್ಲ
ಏಕ್ ಮಾರ್ ದೋ ತುಕುಡಾ
ಅಭಿಮಾನವ ಎಂದೂ ಮರೆಯೋದಿಲ್ಲ
ಕೇರ್ ಆಫ್ ಕನ್ನಡ
ನಾವ್ ನಿಂತ ಕಡೆಯಿಂದಾನೇ ಲೈನು ಶುರು
ಬೆಂಡಾಗೊದಿಲ್ಲ ಕಾಲರ್ ಮೇಲೆ ಗುರು
ನಾವ್ ನಡೆದದ್ದೆ ದಾರಿ, ಹಾಕಿದ್ದೆ ಸ್ಟೆಪ್ಪೂ‌.. ಬ ಬ ಬ ಬ ಬ್ಯಾಂಗ್
ರಾಮಾಚಾರಿ......ರಾಮಾಚಾರಿ

ನುಗ್ಗೋದೆ ಸಿಂಗಲ್ಲು
 ಬೈಬರ್ತೆ ರೆಬೆಲ್ಲೂ
ಕೆಣಕಿದ್ರೆ ಟ್ರಬಲ್ಲು
ರೂಟಂತ್ತೂ ಲೀಗಲ್ಲು
ಕ್ಯಾರೆಕ್ಟರ್ ರಿಯಲ್ಲು
ಸ್ನೇಹಕ್ಕೆ ಸಿಂಬಲ್ಲು
ಈ ರಾಮಾಚಾರಿ ನುಗ್ಗೊ ಕಡೆ
ವಾರ್ ಈಸ್ ಒನ್ ಸೈಡೂ
ಯಾರಂಗೂ ಇಲ್ಲದ ಸಿಂಹ ನಡೆ
ಜನರೇ ನಮ್ ಸೈಡೂ
ನನ್ ಆಟ ಬಲ್ಲೋರಿಲ್ಲಿ ಯಾರೂ ಇಲ್ಲ
ನಾನ್ ಯಾವ ರೂಲ್ಸೂ ಫಾಲೋ ಮಾಡೊದಿಲ್ಲ
ನಾನ್ ನಂಗೇನೆ ಫ್ಯಾನು, ಲೇಟೆಸ್ಟು ಡಾನು.. ಬ ಬ ಬ ಬ ಬ್ಯಾಂಗ್

ರಾಮಾಚಾರಿ....
ರಾಮ ರಾಮ ರಾಮಚಾರಿ
ಯಾರಲ್ಲಿ ಸೌಂಡು ಮಾಡೋದು?

*******************************************************************************

ಉಪವಾಸ ಈ ಕಣ್ಣಿಗೆ

ಸಾಹಿತ್ಯ: ಗೌಸ್ ಪೀರ್
ಗಾಯಕರು: ಸೋನು ನಿಗಮ್, ಶ್ರೇಯಾ ಘೋಷಾಲ್ 


ಉಪವಾಸ ಈ ಕಣ್ಣಿಗೆ ನೀ ಚೂರು ಮರೆಯಾದರೆ
ವನವಾಸ ಕೈಗಳಿಗೆ ಈಗ ಅರೆಘಳಿಗೆ ದೂರ ನೀ ನಿಂತರೆ
ಪ್ರೀತಿ ಎಂದರೆ ಇಂಥ ತೊಂದರೆ ತೀರ ಸಹಜ ಬಿಡು
ನನ್ನಲ್ಲೂ ಹೀಗೆ ಆಗಿದೆ ಏನು ಮಾಡುವುದು
ಎಲ್ಲೆ ಹೋದರು ಎಲ್ಲೆ ಬಂದರು ನಿನ್ನದೇ ಅಮಲು
ವಿರಾಮ ನೀಡುತಿಲ್ಲ ಯಾರಿಗೇಳುವುದು ||ಉಪವಾಸ||

ಸೇರು ನನ್ನ ತೋಳಿಗೆ ಚಿಂತೆ ತೂರಿ ಗಾಳಿಗೆ
ನನ್ನ ನೆರಳಿಗೆ ಈಗ ನಿನ್ನ ನೆರಳು ಅಂಟಿರಬೇಕು
ಕೈಯ್ಯ ಬೆರಳಿಗೆ ಬೇಗ ನಿನ್ನ ಮುಂಗುರುಳು ಸಿಗಬೇಕು
ಪ್ರಣಯದ ಪಯಣವಿದು ನಿನ್ನಿಂದಲೆ ಆರಂಭ
ನಿಂತಲೆ ಕರಗುತ ನಾ ನೀರಾಗೋ ಸಂದರ್ಭ
ನೀ ನನ್ನವಳೆನ್ನುವ ಅಂಶ ಸಾಕು ಹೃದಯಕೆ ಒಣಜಂಭಾ
ಹೇಗೆ ಮೂಡಿತು ಹೇಗೆ ಮಾಗಿತು ಹುಚ್ಚು ಪ್ರೀತಿಯಿದು
ನನ್ನಲ್ಲಿ ನಾನೇ ಇಲ್ಲ ಎಲ್ಲಿ ಹುಡುಕುವುದು
ಮಾತು ಮಾತಿಗು ನಿನ್ನ ಸೆಳೆತವು ಜೀವ ಹಿಂಡಿರಲು
ನಿನ್ನಿಂದ ತುಂಬ ಕಷ್ಟ ದೂರ ಉಳಿಯುವುದು ||ಉಪವಾಸ||

ಒಂಟಿಯಲ್ಲ ನಾ ಎಂದಿಗೂ ಇನ್ನು ಮುಂದೆ ಈ ಬಾಳಲಿ
ತುಂಬಾ ಮುದ್ದು ಮಾಡೋ ಒಂದು ಜೀವ ಈಗ ಸ್ವಂತ
ತಲುಪೀಬಿಟ್ಟೆ ನಾನು ಗಾಳೀಲಿ ತೇಲೋ ಹಂತಾ
ಇದು ಬಹುಜನುಮಗಳ ಅನುಬಂಧವೇ ಸರೀ
ಪ್ರತಿ ಜನುಮಕು ಹೀಗೆ ನೀ ನೀಡು ಹಾಜರಿ
ನವಿರಾದ ಪ್ರೀತಿಸಾಲನು ಹಣೆಯಲಿ ನೀನು ಬಾರಿ
ನೀನು ಇಲ್ಲದೆ ನಾನು ಇರುವುದು ಯಾವ ಸುಖಕಾಗಿ
ಪ್ರೀತಿಸು ಎಂದು ಹೀಗೆ ಲೋಕ ಮರೆತ್ಹೋಗಿ
ಏನೇ ಆಗಲಿ ಏನೇ ಹೋಗಲಿ ನನ್ನ ಹೃದಯವಿದು
ನಿನ್ನದೇ ಇಲ್ಲ ಸಂಶಯ ನಾನು ನಿನಗಾಗಿ ||ಉಪವಾಸ||

*******************************************************************************

ಅಣ್ಣತಮ್ಮ 

ಸಾಹಿತ್ಯ: ಯೋಗರಾಜ್ ಭಟ್ 
ಗಾಯಕರು: ಯಶ್ 


ಯಾರೋ ಯಾರೋ ಯಾರೋ ಯಾರೋ
ಯಾರೋ ಇವನು ಯಾರೋ ಇವನು(೨)
(ಆಲ್ ಅಣ್ತಮ್ಮಾಸ್ ರೆಡಿ)

ಹಂಗೂ ಹಿಂಗೂ ಹೆಂಗೋ ಇದ್ದೆ
ಹಿಂಗಾಗೋದೆ ನೋಡೋ ಅಣ್ತಮ್ಮ ..ಅಣ್ತಮ್ಮ
ಎದೆಯ ಮ್ಯಾಲೆ ಎಳ್ಳು ನೀರು
ಬಿಟ್ಟು ಹೋದ್ಲು ನೋಡೋ ಅಣ್ತಮ್ಮ ...ಅಣ್ತಮ್ಮ
ಬೆಳಗಾಗ್ ಎದ್ದ ಕೂಡ್ಲೆ ಅವಳಿಲ್ಲ ಅನ್ನೊ ನೆನಪು
ರಾತ್ರಿ ಅತ್ತ ಕಣ್ಣು ಒಂದ್ ಬುಟು, ಒಂದು ಕೆಂಪು
ಹೃದಯ ಹೊಡ್ಕೊಂತಿಲ್ಲ......
ಸತ್ ಗಿತ್ತು ಹೋದ್ನಾ ನಾನು.....(ಪ)

ಅವಳ ಫೋಟೋ ಮ್ಯಾಲೆ ಡೈಲಿ ನನ್ನ
ಕಣ್ಣ ನೀರ ಕಲೆಯ ಮಾಲೆ ಅಣ್ತಮ್ಮ
ಉಳಿಯಬೇಕು ಹೆಂಗೆ ನಾವು ಮುತ್ತು ಕೊಟ್ಟ
ಹುಡುಗಿ ಹೋದ ಮ್ಯಾಲೆ ಅಣ್ತಮ್ಮ
ಲವ್ವು ಜಾಸ್ತಿ ..ಆದಾಗಲೆ ನಮ್ಮ್ ಹುಡ್ಗೀರು..ಒಂಟ್ಹೋಯ್ತರೆ
ಕೇಳ್ತು ಕಿವಿಯ ಪಕ್ಕ ಕಿಲ್ ಕಿಲ ನಕ್ಕ ಸದ್ದು
ಕುಂತ್ಕೋಬೇಕು ನಾವು ನಡು ರಾತ್ರಿಯಲ್ಲಿ ಎದ್ದು
ನಗ್ ನಗ್ತ ಅತ್ಬುಡ್ತೀನಿ..ಮೆಂಟಲ್ ಆಗ್ಹೋದ್ನ ನಾನು(ಪ)

(ಆಲಾರೇ ಆಲಾರೇ ಆಲಾರೇ ಆಲಾರೇ
ಆಲಾರೇ ಆಲಾರೇ ಆಲಾರೇ ಆಲೇ)

ಎಲ್ಲೆ ಸೌಂಡು ಬಾಕ್ಸು ಕಂಡ್ರು ಕೇಳುತೈತೆ
ಒಂದು ಪ್ಯಾರಿಸ್ ಸಾಂಗು...ಅಣ್ತಮ್ಮ
ಆಟೋ ಹಿಂದೆ ಬರೆದ ಸಾಲು ಅರ್ಥ ಆಗೋ
ಟೈಮು ಬಂತು ನನ್ಗೂ ...ಅಣ್ತಮ್ಮ
ಸ್ಮೋಕಾಗ್ಹೋತು.. ಲವ್ವು ಸ್ಟೋರಿ
ಸಿಂಗಲ್ ಆದ ರಾಮಾಚಾರಿ
ಫ್ರೆಂಡ್ಸು ಬೈತಾರಪ್ಪೋ ನನ್ ಅಕ್ಕ ಪಕ್ಕ ಕುಂತು
ಕಳ್ಕಂಡ್ವನ ಪೈನು ಪಡ್ಕೊಂಡೋನಿಗೇ ಗೊತ್ತು
ನೋವಲ್ಲೆ ನೆಮ್ಮದಿ ಜಾಸ್ತಿ ..ಹಿಂಗೇ ಇದ್ಬುಡ್ಲ ನಾನು .........

********************************************************************************

ಮಿ. & ಮಿಸೆಸ್ ರಾಮಾಚಾರಿ

ಸಾಹಿತ್ಯ: ಎ. ಪಿ. ಅರ್ಜುನ್ 
ಗಾಯಕರು: ಟಿಪ್ಪು 


ಚೋರಿ ಹಿಂದೆ ಹೊಂಟು ಬಿಟ್ಟ ಲೆಫ್ಟ್ ರೈಟು ಚಾರಿ
ಯಾಕೋ ಏನೋ ಮರೆತುಬಿಟ್ಟ ಅವನ ಮನೆಯ ದಾರಿ
ಬಂಧನಾ ಬಂಧನಾ ಲೇಟೆಸ್ಟು ಬಂಧನಾ
ಕೋಟಬಿಟ್ಟು ಬಾಗಿನಾ ಇಸ್ಕೊಂಡೆ ಹಾರ್ಟ್ನಾ
ಡೇಟ್ ಅದು ಫಿಕ್ಸ್ ಇದೆ ತಿಂಗಳು ಗೊತ್ತಿದೆ
ಬ್ಲೆಸ್ಸಿಂಗ್ ಮಾಡಿಬಿಡ್ರಿ

ಮಿಸ್ಟರ್ ಅಂಡ್ ಮಿಸೆಸ್ ರಾಮಾಚಾರಿ
ಬುಕ್ ಆಗೋಗವರಿ ರಾಮಾಚಾರಿ
ಮಿಸ್ಟರ್ ಅಂಡ್ ಮಿಸೆಸ್ ರಾಮಾಚಾರಿ
ಬುಕ್ ಆಗೋಗವರಿ ರಾಮಾಚಾರಿ

ನೂರಡಿ ಕಟೌಟಿಗೆ ಹಾರ ಬಿದ್ದ ಹಾಗಿದೆ
ಹುಡುಗಿ ನೀನು ಬಂಡ ಮೇಲೆ ಆಯೇ ಆಯೇ
ಸಾರಾಯಿ ಉಪ್ಪಿನಕಾಯಿ ಕಾಂಬಿನೇಷನ್ ಆಗಿದೆ
ಬೆಳಗಿ ನೀನು ಸಿಕ್ಕ ಮೇಲೆ
ಸೈರನ್ ಕೂಗಿದೆ ನನ್ನಾ ಎದೆ ಗೂಡಲಿ
ಸ್ಟೈಲು ಒಂದು ಮೂಡಿದೆ ಕೇಡಿ ನಂಬರ್ ಒನ್ ಫೇಸಲಿ
ಬಂಧನಾ ಬಂಧನಾ ಸ್ವೀಟೆಸ್ಟು ಬಂಧನಾ
ಒಬ್ಬಳನ್ನೇ ಪ್ರೀತಿಸೋ ಹಾನೆಸ್ಟು ಪ್ರೇಮಿ ನಾ
ಜೋಡಿಯು ಜೋರಿದೆ ಜಾತಕ ಮ್ಯಾಚ್ ಇದೆ ಇನ್ನೇನ್ ಹೇಳೋದ್ರಿ
ಮಿಸ್ಟರ್ ಅಂಡ್ ಮಿಸೆಸ್ ರಾಮಾಚಾರಿ
ಬುಕ್ ಆಗೋಗವರಿ ರಾಮಾಚಾರಿ

ಲೈಫ್ ಬಾಯ್ ಎಲ್ಲಿದೆ ಅಲ್ಲಿದೆ ಆರೋಗ್ಯ
ನೀನಸಿಕ್ಕಿದ್ದ ನನ್ನ ಭಾಗ್ಯ
ಫ್ಯಾಮಿಲಿ ಪ್ಲಾನಿಂಗ್ ತುಂಬಾನೇ ಮುಖ್ಯ
ವರುಷಕ್ಕೊಂದು ಪಾಪು ಕೊಡ್ತೀಯಾ
ಡೌರಿ ನಾ ಕೇಳಲ್ಲಾ ದಾರಿ ತಪ್ಪಿ ನಾ ಹೋಗಲ್ಲ
ಫ್ಯೂಚರ್ ನಮ್ಮ ಮಕ್ಳನ್ನ ಇಂಗ್ಲಿಷ್ ಮೀಡಿಯಂಗೆ ಸೇರ್ಸಲ್ಲಾ
ಬಂಧನಾ ಬಂಧನಾ ಲಾಂಗೆಷ್ಟು ಬಂಧನಾ
ಬಿಪಿ ಶುಗರ್ ಬಂದರೂ ಸ್ವೀಟಾಗೆ ಬಾಳೋಣ
ದಿಬ್ಬಣ ಹೊಂಟಿದೆ ವಾಲಗ ಸೌಂಡಿದೆ
ಅಕ್ಷತೆ ಕಾಳ ಹಾಕ್ರಿ
ಮಿಸ್ಟರ್ ಅಂಡ್ ಮಿಸೆಸ್ ರಾಮಾಚಾರಿ
ಬುಕ್ ಆಗೋಗವರಿ ರಾಮಾಚಾರಿ

ಚೋರಿ ಹಿಂದೆ ಹೊಂಟು ಬಿಟ್ಟ ಲೆಫ್ಟ್ ರೈಟು ಚಾರಿ
ಯಾಕೋ ಏನೋ ಮರೆತುಬಿಟ್ಟ ಅವನ ಮನೆಯ ದಾರಿ
ಬಂಧನಾ ಬಂಧನಾ ಲೇಟೆಸ್ಟು ಬಂಧನಾ
ಕೋಟಬಿಟ್ಟು ಬಾಗಿನಾ ಇಸ್ಕೊಂಡೆ ಹಾರ್ಟ್ನಾ
ಡೇಟ್ ಅದು ಫಿಕ್ಸ್ ಇದೆ ತಿಂಗಳು ಗೊತ್ತಿದೆ
ಬ್ಲೆಸ್ಸಿಂಗ್ ಮಾಡಿಬಿಡ್ರಿ

*********************************************************************************

ಏನಪ್ಪಾ ಸಂಗಾತಿ

ಸಾಹಿತ್ಯ: ಗೌಸ್ ಪೀರ್ 
ಗಾಯಕರು: ಟಿಪ್ಪು 


ಏನಪ್ಪಾ ಸಂಗಾತಿ ಕೇಳಿ
ಒಂಚೂರು ಬುದ್ಧಿಯ ಹೇಳಿ
ಲೋಕಾನೇ ಮರ್ತವೇ ನೋಡಿ
ಯಾರನ್ನ ಮಾಡವ್ರ ಮೋಡಿ

ವಿನಯ ಗಿನಯ ಮಂಗಾ ಮಾಯಾ
ಬಿದ್ದ ಮೇಲೆ ಪ್ರೀತಿಗೆ
ಹಗಲು ಇರುಳು ಅರಿವೇ ಇಲ್ಲ
ಹಾಳು ಪ್ರೀತಿ ಜಾತಿಗೆ
ಯು ಆರ್ ಮೈ ಬಾಂಬ್ ಫೈರ್ ಬೇಬಿ
ಯು ಆರ್ ಮೈ ಡಿಜೈರ್ ಬೇಬಿ
ಯು ಆರ್ ಮೈ ಬಾಂಬ್ ಫೈರ್ ಬೇಬಿ
ಯು ಆರ್ ಮೈ ಡಿಜೈರ್ ಬೇಬಿ

ಏನಪ್ಪಾ ಸಂಗಾತಿ ಕೇಳಿ
ಒಂಚೂರು ಬುದ್ಧಿಯ ಹೇಳಿ
ಲೋಕಾನೇ ಮರ್ತವೇ ನೋಡಿ
ಯಾರನ್ನ ಮಾಡವ್ರ ಮೋಡಿ

ಯಾರು ಕೂಡ ಈಗ ಬೇಡ
ಪ್ರೀತಿ ಮುಂದೆ ಎಲ್ಲ ಸಪ್ಪೆ
ಯಾರು ಕೂಡ ಈಗ ಬೇಡ
ಪ್ರೀತಿ ಮುಂದೆ ಎಲ್ಲ ಸಪ್ಪೆ
ಅವಳ ನೋಡೋ ಕೆಲಸದಿಂದ
ಕದಲದ ಇವನ ಕಣ್ಣ ರೆಪ್ಪೆ
ಅಬ್ಬಬ್ಬಾ ಎಂತಾ ಚೆಂಜು
ಬಂತಲ್ಲಾ ಒಂದು ರೇಂಜು
ಕನ್ನಡಿ ಮತ್ತು ಕಲ್ಲು
ಮನಸಾರೆ ಒಂದಾಗಿವೆ

ಇವನು ಸನ್ನು ಅವಳು ಮೂನು
ಇಬ್ರು ಕೂಡ ವೆಲ್ಲು ನೋನು
ಇವನು ಸನ್ನು ಅವಳು ಮೂನು
ಇಬ್ರು ಕೂಡ ವೆಲ್ಲು ನೋನು
ಸಧ್ಯಕ್ಕಿವರೇ ಲೈಲಾ ಮಜನು
ಇವರ ಮೇಲೆ ಊರಾ ಕಣ್ಣು
ಗುದ್ದಾಟದಲ್ಲೂ ಕೂಡ
ಮುದ್ದಾಡುತಾರೆ ನೋಡಿ
ವಿಚಿತ್ರವಾದ ಬಾಂಡು
ಇವರಿಬ್ಬರ ಸೆಂಟ್ರಲ್ಲಿ

ಯು ಆರ್ ಮೈ ಕ್ಯೂಟಿ ನಾಟಿ ಸ್ವೀಟಿ ಬೇಬಿ
ಯು ಆರ್ ಮೈ ಡಾಲಿ ಡ್ಯೂಟಿ ಬ್ಯೂಟಿ ಬೇಬಿ
ಯು ಆರ್ ಮೈ ಕ್ಯೂಟಿ ನಾಟಿ ಸ್ವೀಟಿ ಬೇಬಿ
ಯು ಆರ್ ಮೈ ಡಾಲಿ ಡ್ಯೂಟಿ ಬ್ಯೂಟಿ ಬೇಬಿ



*********************************************************************************

ತಿರುಗು ಬಾಣ (1983)


ಇದೇ ನಾಡು ಇದೇ ಭಾಷೆ

ಚಲನ ಚಿತ್ರ: ತಿರುಗು ಬಾಣ (1983)
ನಿರ್ದೇಶನ: ಕೆ. ಎಸ್.ಆರ್. ದಾಸ್ 
ಸಂಗೀತ: ಸತ್ಯಂ 
ಸಾಹಿತ್ಯ: ಆರ್.ಎನ್. ಜಯಗೋಪಾಲ್ 
ಗಾಯಕರು: ಡಾ. ಎಸ್.ಪಿ.ಬಾಲಸುಬ್ರಹ್ಮಣ್ಯಂ & ಕೋರಸ್


ಇದೇ ನಾಡು ಇದೇ ಭಾಷೆ ಎಂದೆಂದೂ ನಮ್ಮದಾಗಿರಲಿ
ಎಲ್ಲೇ ಇರಲಿ ಹೇಗೇ ಇರಲಿ ಕನ್ನಡವೆ ನಮ್ಮ ಉಸಿರಲ್ಲಿ
ಇದೇ ನಾಡು ಇದೇ ಭಾಷೆ ಎಂದೆಂದೂ ನಮ್ಮದಾಗಿರಲಿ
ಎಲ್ಲೇ ಇರಲಿ ಹೇಗೇ ಇರಲಿ ಕನ್ನಡವೆ ನಮ್ಮ ಉಸಿರಲ್ಲಿ
ಇದೇ ನಾಡು ಇದೇ ಭಾಷೆ ಎಂದೆಂದೂ ನಮ್ಮದಾಗಿರಲಿ

ಕರುನಾಡು ಸ್ವರ್ಗದ ಸೀಮೆ ಕಾವೇರಿ ಹುಟ್ಟಿದ ನಾಡು
ಕಲ್ಲಲ್ಲಿ ಕಲೆಯನು ಕಂಡ ಬೇಲೂರ ಶಿಲ್ಪದ ಬೀಡು
ಬಸವೇಶ್ವರ ರನ್ನ ಪಂಪರ ಕವಿವಾಣಿಯ ನಾಡು

ಇದೇ ನಾಡು ಇದೇ ಭಾಷೆ ಎಂದೆಂದೂ ನಮ್ಮದಾಗಿರಲಿ

ಚಾಮುಂಡಿ ರಕ್ಷೆಯು ನಮಗೆ ಗೊಮ್ಮಟೇಶ ಕಾವಲು ಇಲ್ಲಿ
ಶೃoಗೇರಿ ಶಾರದೆ ಲೀಲೆ ರಸತುಂಗೆಯಾಗಿದೆ ಇಲ್ಲಿ
ವಿಶ್ವಖ್ಯಾತಿಯ ವಿಶ್ವೇಶ್ವರಯ್ಯ ಜನಿಸಿದ ಈ ನಾಡು

ಇದೇ ನಾಡು ಇದೇ ಭಾಷೆ ಎಂದೆಂದೂ ನಮ್ಮದಾಗಿರಲಿ

ಎಳೇಳು ಜನ್ಮವೇ ಬರಲಿ ಈ ಮಣ್ಣಲಿ ನಾನು ಹುಟ್ಟುವೆ
ಏನೇನು ಕಷ್ಟವೇ ಇರಲಿ ಸಿರಿಗನ್ನಡಕಾಗೆ ದುಡಿಯುವೆ
ತನು ಕನ್ನಡ ನುಡಿ ಕನ್ನಡ ಮನ ಕನ್ನಡವಾಗಿರಲಿ

ಇದೇ ನಾಡು ಇದೇ ಭಾಷೆ ಎಂದೆಂದೂ ನಮ್ಮದಾಗಿರಲಿ
ಎಲ್ಲೇ ಇರಲಿ ಹೇಗೇ ಇರಲಿ ಕನ್ನಡವೆ ನಮ್ಮ ಉಸಿರಲ್ಲಿ
ಇದೇ ನಾಡು ಇದೇ ಭಾಷೆ ಎಂದೆಂದೂ ನಮ್ಮದಾಗಿರಲಿ
ಎಲ್ಲೇ ಇರಲಿ ಹೇಗೇ ಇರಲಿ ಕನ್ನಡವೆ ನಮ್ಮ ಉಸಿರಲ್ಲಿ
ಇದೇ ನಾಡು ಇದೇ ಭಾಷೆ ಎಂದೆಂದೂ ನಮ್ಮದಾಗಿರಲಿ

*********************************************************************************

ಸ್ನೇಹಕ್ಕೆ ಒಂದೇ ಮಾತು 

ಸಾಹಿತ್ಯ: ಆರ್.ಎನ್.ಜಯಗೋಪಾಲ್   
ಗಾಯಕರು: ಎಸ್.ಪಿ.ಬಿ., ಎಸ್.ಪಿ.ಶೈಲಜಾ


ಸ್ನೇಹಕ್ಕೆ ಒಂದೇ ಮಾತು 
ಹೃದಯಗಳು ಆಡೋ ಮಾತು
ಈ ಮೌನ ಇನ್ನು ಏತಕೇ 
ಸೇರು ಬಾ, ಆಡು ಬಾ, ಹಾಡು ಬಾ
ಈ ಸಂಜೆ ಹೊತ್ತಲ್ಲಿ,
ನನ್ನಲ್ಲಿ ನಿನ್ನಲ್ಲಿ, ಮಾತೆಲ್ಲ ಕಣ್ಣಲ್ಲಿ

ಸ್ನೇಹಕ್ಕೆ ಒಂದೇ ಮಾತು 
ಹೃದಯಗಳು ಆಡೋ ಮಾತು
ಈ ಮೌನ ಇನ್ನು ಏತಕೇ 
ಸೇರು ಬಾ, ಆಡು ಬಾ, ಹಾಡು ಬಾ

ಮನತಣಿಯಲು ಸಂಗೀತ ಬೇಕು
ಜೊತೆ ಕುಣಿಯಲು ಸಂಗಾತಿ ಬೇಕು
ಮೈ ಮರೆಯಲು ಸಂತೋಷ ಬೇಕು
ಒಡನಾಟದ ಉಲ್ಲಾಸ ಬೇಕು
ಮನಸುಗಳ ಮಿಲನದಲಿ ಹೊಸ ವೇಗ ತುಂಬಿರಲಿ

ಸ್ನೇಹಕ್ಕೆ ಒಂದೇ ಮಾತು 
ಹೃದಯಗಳು ಆಡೋ ಮಾತು
ಈ ಮೌನ ಇನ್ನು ಏತಕೇ 
ಸೇರು ಬಾ, ಆಡು ಬಾ, ಹಾಡು ಬಾ

ದಾರಿಗಳು ಸೇರೋದು ಒಮ್ಮೆ
ಅಗಲಿಕೆಯು ನೋಡಲ್ಲಿ ಮುಂದೇ
ಜೊತೆಯಿರುವ ಕ್ಷಣಕಾಲ ಹಾಡು
ಉಳಿಯುವುದು ನೆನಪೊಂದೆ ಮುಂದೇ
ಜೀವನವೇ ಸುಖಪಡಲು ಯೌವನವೆ ನಗೆಗಡಲು

ಸ್ನೇಹಕ್ಕೆ ಒಂದೇ ಮಾತು   ಹೃದಯಗಳು ಆಡೋ ಮಾತು
ಈ ಮೌನ ಇನ್ನು ಏತಕೇ  ಸೇರು ಬಾ ಆಡು ಬಾ ಹಾಡು ಬಾ
ಈ ಸಂಜೆ ಹೊತ್ತಲ್ಲಿ, ನನ್ನಲ್ಲಿ ನಿನ್ನಲ್ಲಿ, ಮಾತೆಲ್ಲ ಕಣ್ಣಲ್ಲಿ

ಸ್ನೇಹಕ್ಕೆ ಒಂದೇ ಮಾತು  ಹೃದಯಗಳು ಆಡೋ ಮಾತು
ಈ ಮೌನ ಇನ್ನು ಏತಕೇ  ಸೇರು ಬಾ ಆಡು ಬಾ ಹಾಡು ಬಾ

*********************************************************************************

ಅಂದದ ಚಂದದ ಗಿಣಿಯೇ

ಸಾಹಿತ್ಯ: ಆರ್. ಎನ್. ಜಯಗೋಪಾಲ್   
ಗಾಯಕರು: ಎಸ್.ಪಿ.ಬಿ., ಪಿ.ಸುಶೀಲಾ 


ಅಂದದ ಚಂದದ ಗಿಣಿಯೇ
ಸಿಹಿ ಕನ್ನಡದ ಇಂಪಿನ ನುಡಿಯೇ
ನಗುವಿನ ಚಿನ್ನದ ಗಣಿಯೆ
ನಮ್ಮ ಬಾಳಿನ ಗಂಧದ ಗುಡಿಯೇ
ಅಂದದ ಚಂದದ ಗಿಣಿಯೇ ಸಿಹಿ ಕನ್ನಡದ ಇಂಪಿನ ನುಡಿಯೇ
ನಗುವಿನ ಚಿನ್ನದ ಗಣಿಯೆ ನಮ್ಮ ಬಾಳಿನ ಗಂಧದ ಗುಡಿಯೇ
ಚಿನ್ನ ನಿನ್ನ ಕಣ್ಣಲ್ಲಿನ್ನು ಕಣ್ಣಿರೇತಕೆ ತಾಯಿ ತಂದೆ ಜೀವ ನೀನೆ

ದೈವ ತಂದ ಭಾಗ್ಯ ನೀನೇ .... ಇಲ್ನೋಡು ಇಲ್ನೋಡು 
ಮಾತೆಯ ಮಮತೆಯ ಹೂಬನದಲ್ಲಿ
ಹೂವಿನ ತೊಟ್ಟಿಲ ಹಾಸಿಹುದಿಲ್ಲಿ
ತಂಗಾಳಿ ಮೆಲ್ಲಗೆ ಜೋಗುಳ ಹಾಡೇ
ಕಂಗಳ ರೆಪ್ಪೆಗೆ ಚುಂಬನ ನೀಡೆ
ತೂಗಲು ನಾ ನಿನ್ನ ಮಲಗೋ ಚಿನ್ನ
ಕನಸಿನ ಹೊಂಬಣ್ಣ ತುಂಬಲಿ ಕಣ್ಣ
ಉಸಿರೇ ಹಸಿರೇ ಅಳದಿರು ನೀ
ತಾಯಿ ತಂದೆ ಜೀವ ನೀನೆ 
ದೈವ ತಂದ ಭಾಗ್ಯ ನೀನೇ .... 
ನನ್ ಚಿನ್ನ ನನ್ ಬಂಗಾರ ನೋಡಮ್ಮಾ ಇಲ್ಲಿ ನಗು ಮಗು 
ಚಂದ ಮಾಮ ಬಂಗಾರ ತೇರಾಗಿ ಬರಲಿ
ತಾರೆಗಳ ಕುದುರೆಯ ಜೋಡಿಯ ತರಲಿ ನಿದಿರೆಯ ಹೊಸಲೋಕ...
ಮೋಡಗಳ ಬೆಳ್ಳಿಯ ದಾರಿಗಳಲ್ಲಿ ಬರುತಿರೆ ನೀ ಕುಳಿತು ವೈಭವದಲ್ಲಿ
ನಗುತಿರೆ ನೀನಾಗ ಆನಂದದಲ್ಲಿ ನಲಿವೆ ಮೆರೆವೆ ಮೈ ಮರೆವೆ
ತಾಯಿ ತಂದೆ ಜೀವ ನೀನೆ  ದೈವ ತಂದ ಭಾಗ್ಯ ನೀನೇ .... 

ಅಂದದ ಚಂದದ ಗಿಣಿಯೇ ಸಿಹಿ ಕನ್ನಡದ ಇಂಪಿನ ನುಡಿಯೇ
ನಗುವಿನ ಚಿನ್ನದ ಗಣಿಯೆ ನಮ್ಮ ಬಾಳಿನ ಗಂಧದ ಗುಡಿಯೇ
ಚಿನ್ನ ನಿನ್ನ ಕಣ್ಣಲ್ಲಿನ್ನು ಕಣ್ಣಿರೇತಕೆ
ತಾಯಿ ತಂದೆ ಜೀವ ನೀನೆ  ದೈವ ತಂದ ಭಾಗ್ಯ ನೀನೇ .... 

*********************************************************************************

A (1998)


ಮಾರಿ ಕಣ್ಣು ಹೋರಿ ಮ್ಯಾಗೆ

ಚಲನ ಚಿತ್ರ: A (1998)
ನಿರ್ದೇಶನ: ಉಪೇಂದ್ರ 
ಸಂಗೀತ: ಗುರುಕಿರಣ್  
ಸಾಹಿತ್ಯ: ಉಪೇಂದ್ರ  
ಗಾಯನ: ಎಸ್.ಪಿ.ಬಾಲಸುಬ್ರಹ್ಮಣ್ಯಂ
ನಟನೆ: ಉಪೇಂದ್ರ, ಚಾಂದಿನಿ 


ಮಾರಿ ಕಣ್ಣು ಹೋರಿ ಮ್ಯಾಗೆ, 
ಕಟ್ಕನ್ ಕಣ್ಣು ಕುರಿ ಮ್ಯಾಗೆ,
ಮಾರಿ ಕಣ್ಣು ಹೋರಿ ಮ್ಯಾಗೆ, 
ಕಟ್ಕನ್ ಕಣ್ಣು ಕುರಿ ಮ್ಯಾಗೆ,
ಅವಳ ಕಣ್ಣು ಆಕಾಶದಾಗೆ,
ಇವನ ಕಣ್ಣು ಅವಳ ಮ್ಯಾಗೆ, 
ಊರೋರ್ ಕಣ್ಣು ಇವರ ಮ್ಯಾಗೆ - |೨|

ಶೂರ್ಪಣಖಿ ನಿಂಗ್ ಗೊತ್ತ  ಆ ರಾವಣ ಹೆಂಗ್ ಸತ್ತ
ಹೆಂಗೆಂಗ್ ಇದ್ದೋರ್ ಎಂತೆಂತೋರೆ ಏನೇನಾದ್ರು
ದಿಲ್ಲಿನಾಗೆ ಮೆರೆದೋರೆಲ್ಲ ಜೇಲ್ ಸೇರಿದ್ದ್ರು
ಅತ್ತೆಗೊಂದು ಕಾಲಾನೊ ಸೊಸೆಗೊಂದು ಕಾಲನೊ, 
ನಮಗೂ ಒಳ್ಳೆ ಕಾಲ ಬರ್ತದೆ

ಮಾರಿ ಕಣ್ಣು ಹೋರಿ ಮ್ಯಾಗೆ, ಕಟ್ಕನ್ ಕಣ್ಣು ಕುರಿ ಮ್ಯಾಗೆ,
ಮಾರಿ ಕಣ್ಣು ಹೋರಿ ಮ್ಯಾಗೆ, ಕಟ್ಕನ್ ಕಣ್ಣು ಕುರಿ ಮ್ಯಾಗೆ,
ಅವಳ ಕಣ್ಣು ಆಕಾಶದಾಗೆ, ಇವನ ಕಣ್ಣು ಅವಳ ಮ್ಯಾಗೆ, 
ಊರೋರ್ ಕಣ್ಣು ಇವರ ಮ್ಯಾಗೆ

ಹೆಣ್ಣಿಗ್ ಮೀಸೆ ಬರಕ್ಕಿಲ್ಲ  ಹುಲಿ ಹುಲ್ಲು ತಿನ್ನಕ್ಕಿಲ್ಲ
ಹಾವು ಏಣಿ ಆಟದಂಗೆ ನಮ್ಮ ಬಾಳು
ಜೀವನದಾಗೆ ಇರಲೆ ಬೇಕು ಏಳು ಬೀಳು
ಕೋಟಿ ಕೋಟಿ ಇದ್ದ್ರುನು, ಹೊಟ್ಟೆಗ್ ತಿನ್ನೋದ್ ಅನ್ನನೇ, 
ದೇಹ ಸೇರೋದ್ ಮಣ್ಣಿಗೇನೆ

ಮಾರಿ ಕಣ್ಣು ಹೋರಿ ಮ್ಯಾಗೆ, ಕಟ್ಕನ್ ಕಣ್ಣು ಕುರಿ ಮ್ಯಾಗೆ,
ಮಾರಿ ಕಣ್ಣು ಹೋರಿ ಮ್ಯಾಗೆ, ಕಟ್ಕನ್ ಕಣ್ಣು ಕುರಿ ಮ್ಯಾಗೆ,
ಅವಳ ಕಣ್ಣು ಆಕಾಶದಾಗೆ, ಇವನ ಕಣ್ಣು ಅವಳ ಮ್ಯಾಗೆ, 
ಊರೋರ್ ಕಣ್ಣು ಇವರ ಮ್ಯಾಗೆ

ಮಾರಿ ಕಣ್ಣು ಹೋರಿ ಮ್ಯಾಗೆ, ಕಟ್ಕನ್ ಕಣ್ಣು ಕುರಿ ಮ್ಯಾಗೆ,
ಮಾರಿ ಕಣ್ಣು ಹೋರಿ ಮ್ಯಾಗೆ, ಕಟ್ಕನ್ ಕಣ್ಣು ಕುರಿ ಮ್ಯಾಗೆ,
ಅವಳ ಕಣ್ಣು ಆಕಾಶದಾಗೆ, ಇವನ ಕಣ್ಣು ಅವಳ ಮ್ಯಾಗೆ, 
ಊರೋರ್ ಕಣ್ಣು ಇವರ ಮ್ಯಾಗೆ

*********************************************************************************

ಹೇಳ್ಕೊಳ್ಳೋಕ್ ಒಂದ್

ಸಾಹಿತ್ಯ: ಜಿ. ಪಿ. ರಾಜರತ್ನಂ  
ಗಾಯನ: ಎಲ್. ಎನ್. ಶಾಸ್ತ್ರಿ


ಹೇಳ್ಕೊಳ್ಳಕ್ ಒಂದ್ ಊರು, 
ತಲೆ ಮ್ಯಾಗೆ ಒಂದ್ ಸೂರು,
ಮಲ್ಗಾಕೆ ಭೂಮ್ ತಾಯಿ ಮಂಚ
ಕೈ ಹಿಡ್ದೊಳ್ ಪುಟ್ನಂಜಿ, 
ನಗನಗ್ತಾ ಉಪ್ಪ್ ಗಂಜಿ,
ಕೊಟ್ರಾಯಿತು ರತ್ನಂಪ್ರಪಂಚ
ಚಾಂದಿನಿss, ಚಾಂದಿನಿss

ಹೇಳ್ಕೊಳ್ಳಕ್ ಒಂದ್ ಊರು, 
ತಲೆ ಮ್ಯಾಗೆ ಒಂದ್ ಸೂರು,
ಮಲ್ಗಾಕೆ ಭೂಮ್ ತಾಯಿ ಮಂಚ
ಕೈ ಹಿಡ್ದೊಳ್ ಪುಟ್ನಂಜಿ, 
ನಗನಗ್ತಾ ಉಪ್ಪ್ ಗಂಜಿ,
ಕೊಟ್ರಾಯಿತು ರತ್ನಂಪ್ರಪಂಚ -|೨|

ಏನೋ ಖುಸಿಯಾದಾಗ ಮತ್ ಹೆಚ್ಚಿ ಹೋದಾಗ  ಹಂಗೇನೆ ಪ್ರಪಂಚದಂಚ 
ತೋಟ್ದಲ್ಲಿ ಹಾರಾಡ್ತಾ  ಕನ್ನಡದಲ್ ಪದವಾಡ್ತಾ  
ಹಿಗ್ಗೋದು ರತ್ನಂಪ್ರಪಂಚ  ಹಿಗ್ಗೋದು ರತ್ನಂಪ್ರಪಂಚ

ಹೇಳ್ಕೊಳ್ಳಕ್ ಒಂದ್ ಊರು,  ತಲೆ ಮ್ಯಾಗೆ ಒಂದ್ ಸೂರು,
ಮಲ್ಗಾಕೆ ಭೂಮ್ ತಾಯಿ ಮಂಚ
ಕೈ ಹಿಡ್ದೊಳ್ ಪುಟ್ನಂಜಿ,  ನಗನಗ್ತಾ ಉಪ್ಪ್ ಗಂಜಿ,
ಕೊಟ್ರಾಯಿತು ರತ್ನಂಪ್ರಪಂಚ

ಹಗಲೆಲ್ಲ ಬೆವರ್ ಹರಿಸಿ  ತಂದಿದ್ದ್ರಲ್ಲಿ ಒಸಿ ಮುರಿಸಿ
ಸಂಜೆಲಿ ಹಿಳಿ ಹೆಂಡ ಕೊಂಚ
ಇತ್ತ ಮೈ ಝುಂ ಅಂದ್ರೆ  ವಾಸನೆ ಘಂ ಘಂ ಅಂದ್ರೆ
ತುಂಬ್ ಹೋಯ್ತು ರತ್ನಂಪ್ರಪಂಚ
ತುಂಬ್ ಹೋಯ್ತು ರತ್ನಂಪ್ರಪಂಚ

ಹೇಳ್ಕೊಳ್ಳಕ್ ಒಂದ್ ಊರು,
ತಲೆ ಮ್ಯಾಗೆ ಒಂದ್ ಸೂರು,
ಮಲ್ಗಾಕೆ ಭೂಮ್ ತಾಯಿ ಮಂಚ
ಕೈ ಹಿಡ್ದೊಳ್ ಪುಟ್ನಂಜಿ,  ನಗನಗ್ತಾ ಉಪ್ಪ್ ಗಂಜಿ,
ಕೊಟ್ರಾಯಿತು ರತ್ನಂಪ್ರಪಂಚ

ಲೂಕ್ ಇಲ್ಲ ಗಾಲ್ ಇಲ್ಲ  ನಮಗದ್ರಾಗ್ ಪಾಲಿಲ್ಲ
ನಾವ್ ಕಂಡಿದ್ದ್ ನಾಲ್ಕ್ಅಂಚವಂಚ
ನಮ್ಮಷ್ಟಕ್ ನಾವಾಗಿ ಇದ್ದಿದ್ದ್ರಲ್ ಹಾಯಾಗಿ
ಬಾಳೋದು ರತ್ನಂಪ್ರಪಂಚ  ಬಾಳೋದು ರತ್ನಂಪ್ರಪಂಚ
ಹೇಳ್ಕೊಳ್ಳಕ್ ಒಂದ್ ಊರು,  ತಲೆ ಮ್ಯಾಗೆ ಒಂದ್ ಸೂರು,
ಮಲ್ಗಾಕೆ ಭೂಮ್ ತಾಯಿ ಮಂಚ
ಕೈ ಹಿಡ್ದೊಳ್ ಪುಟ್ನಂಜಿ,  ನಗನಗ್ತಾ ಉಪ್ಪ್ ಗಂಜಿ,
ಕೊಟ್ರಾಯಿತು ರತ್ನಂಪ್ರಪಂಚ

ಚಾಂದಿನಿss, ಚಾಂದಿನಿss

ದೇವ್ರಿಂದ್ರೆ ಕೊಡಲಣ್ನ ಕೊಡ್ದಿದ್ದ್ರೆ ಬುಡಲಣ್ಣ
ನಾವೆಲ್ಲ ಅವನೀಗೆ ಬಚ್ಚಾ
ಅವನ್ಹಾಕಿದ್ ತಾಳ್ದಂಗೆ, ಕಣ್ ಮುಚ್ಕೊಂಡ್ ಹೇಳ್ದಂಗೆ
ಕುಣೀಯಾದೆ ರತ್ನಂಪ್ರಪಂಚ
ಕುಣೀಯಾದೆ ರತ್ನಂಪ್ರಪಂಚ
ಹೇಳ್ಕೊಳ್ಳಕ್ ಒಂದ್ ಊರು,  ತಲೆ ಮ್ಯಾಗೆ ಒಂದ್ ಸೂರು,
ಮಲ್ಗಾಕೆ ಭೂಮ್ ತಾಯಿ ಮಂಚ
ಕೈ ಹಿಡ್ದೊಳ್ ಪುಟ್ನಂಜಿ,  ನಗನಗ್ತಾ ಉಪ್ಪ್ ಗಂಜಿ,
ಕೊಟ್ರಾಯಿತು ರತ್ನಂಪ್ರಪಂಚ

ಹೇಳ್ಕೊಳ್ಳಕ್ ಒಂದ್ ಊರು,  ತಲೆ ಮ್ಯಾಗೆ ಒಂದ್ ಸೂರು,
ಮಲ್ಗಾಕೆ ಭೂಮ್ ತಾಯಿ ಮಂಚ
ಕೈ ಹಿಡ್ದೊಳ್ ಪುಟ್ನಂಜಿ,  ನಗನಗ್ತಾ ಉಪ್ಪ್ ಗಂಜಿ,
ಕೊಟ್ರಾಯಿತು ರತ್ನಂಪ್ರಪಂಚ

*********************************************************************************

ಇಂದ್ರಜಿತ್ (1989)


ಬೆಳ್ಳಿರಥದಲಿ

ಚಲನ ಚಿತ್ರ: ಇಂದ್ರಜಿತ್ (1989)
ನಿರ್ದೇಶನ: ಕೆ.ವಿ. ರಾಜು 
ಸಂಗೀತ & ಸಾಹಿತ್ಯ: ಹಂಸಲೇಖ
ಗಾಯನ : ಎಸ್.ಪಿ.ಬಿ., ಬಿ.ಆರ್.ಛಾಯಾ 
ನಟನೆ: ಅಂಬರೀಷ್, ದೀಪಿಕಾ ಚಿಖಾಲಿಯಾ 


ಹೆಣ್ಣು : ಬೆಳ್ಳಿರಥದಲಿ ಸೂರ್ಯ ತಂದ ಕಿರಣ
          ಬೆಳ್ಳಿರಥದಲಿ ಸೂರ್ಯ ತಂದ ಕಿರಣ
          ಆ ಚಂದ್ರನ ಆಗಮನ ಭೂತಾಯಿಯ ಋತುಗಾನ
          ನಮ್ಮಿಬ್ಬರ ಈ ಮಿಲನ ಬಾನಂಚಿನ ಹೊಸ ಗಾನ
         ನೀ ನನಗೆ ನಾ ನಿನಗೆ ಜೀವನ ನಗುತಲಿದೆ
ಗಂಡು : ಬೆಳ್ಳಿರಥದಲಿ ಸೂರ್ಯ ತಂದ ಕಿರಣ
           ಆ ಚಂದ್ರನ ಆಗಮನ ಭೂತಾಯಿಯ ಋತುಗಾನ
          ನಮ್ಮಿಬ್ಬರ ಈ ಮಿಲನ ಬಾನಂಚಿನ ಹೊಸ ಗಾನ
          ನೀ ನನಗೆ ನಾ ನಿನಗೆ ಜೀವನ ನಗುತಲಿದೆ
ಕೋರಸ್ :  ಜೂಜು..ಜೂಜು..ಜೂಜು..ಜೂಜು..ಜೂಜು..ಜೂಜು..ಜೂಜು..
                 ಜೂಜು..ಜೂಜು..ಜೂಜು..ಜೂಜು..ಜೂಜು..ಜೂಜು..ಜೂಜು..
                 ಹೂಂ.. ಹೂಂ..ಹೂಂ..ಹೂಂ..ಹೂಂ..ಹೂಂ..ಹೂಂ.. 
ಹೆಣ್ಣು : ಮೇಘ ಶಾಮನ ಮುರುಳಿಲೋಲನ ಪ್ರೀತಿ ಒಂದು ಕವನ 
           ನುಡಿಸು ಕೊಳಲನು ನಾ ಬರುವೆ ಹಿಡಿದು ಶೃತಿಯನ್ನ 
           ಹರಿಸು ಹೊನಲನು ಸೇರುತಲಿ ಪ್ರೀತಿ ಕಡಲನ್ನ 
ಗಂಡು :  ಹವಳ ಮುತ್ತನು ಕಡಲ ಅಲೆಯನು ನಿನಗೆ ತರುವೆ ನಾನು 
            ಸೇರಿ ನಿನ್ನನು ಮುತ್ತಲ್ಲೇ ಮನೆಯಾ ಕಟ್ಟುವೆನು 
            ಮುಗಿಲ ಮಿಂಚನೇ ತಂದಿರಿಸೇ ದೀಪಾ ಹಚ್ಚುವೆನೂ 
ಹೆಣ್ಣು : ಕರಗಿದೆ ನಿನ್ನ ಒಲವಿಗೆ ಹೂ ಹಾಸುವೇ ನಿನ್ನ ಹಾದಿಗೇ 
          ನೀ ನನಗೆ ನಾ ನಿನಗೆ ಜೀವನ ನಗುತಲಿದೆ 
ಗಂಡು : ಬೆಳ್ಳಿರಥದಲಿ ಸೂರ್ಯ ತಂದ ಕಿರಣ
           ಆ ಚಂದ್ರನ ಆಗಮನ ಭೂತಾಯಿಯ ಋತುಗಾನ
           ನಮ್ಮಿಬ್ಬರ ಈ ಮಿಲನ ಬಾನಂಚಿನ ಹೊಸ ಗಾನ
          ನೀ ನನಗೆ ನಾ ನಿನಗೆ ಜೀವನ ನಗುತಲಿದೆ 
ಕೋರಸ್: ಆ..ಆ.. ಆ..ಆ.. ಆ..ಆ.. ಆ..ಆ.. ಆ..ಆ.. 
ಹೆಣ್ಣು : ಹಗಲು ಇರುಳಲಿ ಬಿಸಿಲು ಮಳೆಯಲು ಹೊಳೆವ ನಿನ್ನ ನಯನ 
          ಪ್ರೀತಿ ಹರಿಸಿದೆ ತುಂಬೆನ್ನ ತಾಯಿ ಮಡಿಲನ್ನ 

         ಜನುಮ ಜನುಮಕೂ ನಾ ಬಂದು ಸೇರುವೆನು ನಿನ್ನ 
ಗಂಡು : ಭೂಮಿ ಬೀರಿದರೂ ಪ್ರಳಯವಾದರೂ ಇರಲಿ ಎಂದೂ ಮಿಲನ 
           ಭೂಮಿ ಇಲ್ಲವೇ ನಾ ಬರುವೆ ಬಾನಿಗೆ ಓ ಚಿನ್ನಾ 
           ಬಾನು ಇಲ್ಲವೇ ನಿನ್ನುಸಿರ ಕಾಣಲು ಬಲು ಚೆನ್ನ 
ಹೆಣ್ಣು : ಅರಳಿದೇ ಹೂ ಮಲ್ಲಿಗೆ ಉಸಿರಾಡಿದೇ ನಿನಗಾಗಿಯೇ 
ಗಂಡು : ನೀ ನನಗೆ ನಾ ನಿನಗೆ ಜೀವನ ನಗುತಲಿದೆ 
ಇಬ್ಬರು : ಬೆಳ್ಳಿರಥದಲಿ ಸೂರ್ಯ ತಂದ ಕಿರಣ
            ಆ ಚಂದ್ರನ ಆಗಮನ ಭೂತಾಯಿಯ ಋತುಗಾನ
           ನಮ್ಮಿಬ್ಬರ ಈ ಮಿಲನ ಬಾನಂಚಿನ ಹೊಸ ಗಾನ
           ನೀ ನನಗೆ ನಾ ನಿನಗೆ ಜೀವನ ನಗುತಲಿದೆ

*********************************************************************************

ಕಡಲಿಗೆ ಒಂದು ಕೊನೆ ಇದೆ 

ಸಂಗೀತ ಮತ್ತು ಸಾಹಿತ್ಯ : ಹಂಸಲೇಖ, 
ಗಾಯನ : ಎಸ್ಪಿ.ಬಿ., ಚಂದ್ರಿಕಾ ಗುರುರಾಜ 

ಕೋರಸ್ :  ಲಾಲಾಲಲ  ಲಲಲಲಲಾ ಲಲಲ  ಲಾಲಾಲಲ  ಲಲಲಲಲಾ ಲಲಲ
                ಲಾಲಾಲಲ  ಲಲಲಲಲಾ ಲಲಲ  ಲಾಲಾಲಲ  ಲಲಲಲಲಾ ಲಲಲ
ಗಂಡು : ಕಡಲಿಗೆ ಒಂದು ಕೊನೆಯಿದೆ  ಸ್ನೇಹಕೆ ಎಲ್ಲಿದೆ  (ಲಲ್ಲಲ )
            ಸಾವಿಗೂ  ಒಂದು ಮಿತಿ ಇದೆ ಪ್ರೀತಿಗೆ ಎಲ್ಲಿದೇ (ಲಲ್ಲಲ )
            ಸ್ನೇಹ ಎಂಬ ಹೂಬನದಲ್ಲಿ ಬಾ ಓಲಾಡುವಾ
            ಪ್ರೀತಿ ಎಂಬ ಬಾನಂಚಲಿ ಬಾ ತೇಲಾಡುವಾ .. (ಲಲ್ಲಲಲಲ್ಲಲ )
            ನೋಡಲ್ಲಿ ಆ ಬೆಳ್ಳಿ ಸೂರ್ಯನು ಹರಸುತ ಜೊತೆಯಲಿ ಬಂದನು
            ನೋಡಲ್ಲಿ ಆ ಬೆಳ್ಳಿ ಸೂರ್ಯನು ಹರಸುತ ಜೊತೆಯಲಿ ಬಂದನು
            ಕಡಲಿಗೆ ಒಂದು ಕೊನೆಯಿದೆ  ಸ್ನೇಹಕೆ ಎಲ್ಲಿದೆ  (ಲಲ್ಲಲ )
            ಸಾವಿಗೂ  ಒಂದು ಮಿತಿ ಇದೆ ಪ್ರೀತಿಗೆ ಎಲ್ಲಿದೇ (ಲಲ್ಲಲ )
ಕೋರಸ್ :  ಲಾಲಾ ಲಲ  ಲಲ ಲಲ ಲಾಲ ಲಲ ಲಾಲಾ ಲಲ  ಲಲ ಲಲ ಲಾಲ ಲಲ
ಗಂಡು : ಓ..ಹೋ  ಮುಂಜಾವಿನ ಹೂಮೇಲಿನ ಆ ಮಂಜಿನ ನಗು ಇಲ್ಲಿದೇ 
ಹೆಣ್ಣು : ಆ..ಹಾ ಅನುರಾಗದ ಆ ಮೋದದ ಆನಂದದ ಹಾಡಿಲ್ಲಿದೆ 
ಗಂಡು : ಈ ಕಣ್ಣ ಕೊಳದ ಹಂಸವೇ ನೀನು ಹೃದಯ ಮಿಡಿಯುವೇ 
ಹೆಣ್ಣು : ಈ ನನ್ನ ಎದೆಯ ತುಡಿತವೇ ನೀನು ನನ್ನ ನುಡಿಸುವೇ 
ಗಂಡು : ಬಾ ಹೃದಯದೊಲವೇ ಹೊಂಬಿಸಿಲ ಚೆಲುವೇ  ನೀನಿರಲು ಎಲ್ಲ ಗೆಲುವೇ ಗೆಲುವೇ 
           ಈ ಬಾಳಿನಾ ಮುಗಿಯದ ಪಯಣದ ನಡುವೆಯೂ (ಲಲ್ಲಲಲಲ್ಲಲ )  
            ನೋಡಲ್ಲಿ ಆ ಬೆಳ್ಳಿ ಸೂರ್ಯನು ಹರಸುತ ಜೊತೆಯಲಿ ಬಂದನು
            ಕಡಲಿಗೆ ಒಂದು ಕೊನೆಯಿದೆ  ಸ್ನೇಹಕೆ ಎಲ್ಲಿದೆ  (ಲಲ್ಲಲ )
            ಸಾವಿಗೂ  ಒಂದು ಮಿತಿ ಇದೆ ಪ್ರೀತಿಗೆ ಎಲ್ಲಿದೇ (ಲಲ್ಲಲ )
ಗಂಡು : ಓ..ಹೋ  ಇತಿಹಾಸದ ಛಲಗಾರರ ಬೆನ್ನಹಿಂದೆಯೇ ಹೆಣ್ಣೊಂದಿದೇ  
ಹೆಣ್ಣು : ಈ.. ಹೋರಾಟದ ಬಲವೆಲ್ಲವೂ ಈ ನಿನ್ನಯ ಒಲವಲ್ಲಿದೆ 
ಗಂಡು : ಈ ಉಸಿರ ಮೇಲೆಯೇ ನಿನ್ನಯ ಹೆಸರು ನಾನು ಬರೆಯುವೇ 
ಹೆಣ್ಣು : ಈ ಹೆಸರ ನೆನಪು ಮರೆಯದೇ ನಾನು ಹೀಗೆ ಉಳಿಸುವೇ 
ಗಂಡು : ಬಾ ಹೃದಯದೊಲವೇ ಹೊಂಬಿಸಿಲ ಚೆಲುವೇ  ನೀನಿರಲು ಎಲ್ಲ ಗೆಲುವೇ ಗೆಲುವೇ  
           ಈ ಬಾಳಿನಾ ಮುಗಿಯದ ಪಯಣದ ನಡುವೆಯೂ (ಲಲ್ಲಲಲಲ್ಲಲ )  
            ನೋಡಲ್ಲಿ ಆ ಬೆಳ್ಳಿ ಸೂರ್ಯನು ಹರಸುತ ಜೊತೆಯಲಿ ಬಂದನು
            ಕಡಲಿಗೆ ಒಂದು ಕೊನೆಯಿದೆ  ಸ್ನೇಹಕೆ ಎಲ್ಲಿದೆ  (ಲಲ್ಲಲ )
            ಸಾವಿಗೂ  ಒಂದು ಮಿತಿ ಇದೆ ಪ್ರೀತಿಗೆ ಎಲ್ಲಿದೇ (ಲಲ್ಲಲ )
           ಸ್ನೇಹ ಎಂಬ ಹೂಬನದಲ್ಲಿ ಬಾ ಓಲಾಡುವಾ 
           ಪ್ರೀತಿ ಎಂಬ ಬಾನಂಚಲಿ ಬಾ ತೇಲಾಡುವಾ .. (ಲಲ್ಲಲಲಲ್ಲಲ )
           ನೋಡಲ್ಲಿ ಆ ಬೆಳ್ಳಿ ಸೂರ್ಯನು ಹರಸುತ ಜೊತೆಯಲಿ ಬಂದನು
           ರಾಪಾಪಪಪ್ಪಪಪ ಪಪ ರಪಪಪ ಲಲ ಲಲ ಹೇ..ಹೇ.. 

*********************************************************************************

ಬಾರೋ ಬಾರೋ ನನ್ನ ಗೆಳೆಯ 

ಸಂಗೀತ ಮತ್ತು ಸಾಹಿತ್ಯ : ಹಂಸಲೇಖ, 
ಗಾಯನ : ಎಸ್ಪಿ.ಬಿ. 

ಜುಮ್ ಜುಮ್ ಜುಂ ಜುಮ್ ಜುಮ್ ಜುಂ
ಬಾರೋ ಬಾರೋ ಬಾರೋ ನನ್ನ ಗೆಳೆಯಾ
ಹಾಡೋ ಹಾಡೋ ಹಾಡೋ ಕ್ರಾಂತಿ ಗೀತೆಯಾ
ಕೊಂದರಿಲ್ಲಿ ಸುಟ್ಟರಿಲ್ಲಿ ಕ್ರಾಂತಿಯ ಜೊತೆಗೆ ನ್ಯಾಯ ನೀತಿಯನ್ನ
ಜುಮ್ ಜುಮ್ ಜುಂ ಜುಮ್ ಜುಮ್ ಜುಂ
ನೆಟ್ಟರಿಲ್ಲಿ ರಕ್ತದಲ್ಲಿ ಶಾಂತಿಯ ನುಂಗುವ ಧೂಮಕೇತುವನ್ನ 
ಜುಮ್ ಜುಮ್ ಜುಂ ಜುಮ್ ಜುಮ್ ಜುಂ 
ಹಾಡೋ ಹಾಡೋ ಹಾಡೋ ಕ್ರಾಂತಿ ಗೀತೆಯಾ 
ಹುಆ ಹುಆ ಹುಆ ಹುಆ ಹುಆ ಹುಆ ಹುಆ ಹುಆ 
ಹುಆ ಹುಆ ಹುಆ ಹುಆ ಹುಆ ಹುಆ ಹುಆ ಹುಆ 
ಒಲವಿನ ಕಥೆಯ ಬರೆಯುವ ಗೆಳೆಯ 
ಬದುಕಿನ ಕೊಳೆಯ ತೊಳೆಯುವ ಸಮಯ 
ಹಸಿವಿನ ಬೆಂಕಿ ಸುಡುತಿದೆ ಮನೆಯ 
ಹರಿಯುವ ನದಿಗೆ ಇಡು ಒಂದು ತಡೆಯಾ 
ಮಂಚದ ಮೇಲೆ ಲಂಚದ ಒಡೆಯ 
ಎದ್ದರೆ ಮೇಲೆ ಧಡಿಯಾ ತಲೆಯಾ 
ಬಡವನ ಸಾಕುವ  ಕಳ್ಳ ದೊರೆಗಳಾ.. ಹೇ... 
ಹೆಣ್ಣಿನ ಶೀಲವ ಮಾರೋ ಮೃಗಗಳಾ 
ಬೀದಿಯೊಳಗೆ ನೇಣುಗಂಬಕೇರಿಸುತಾ 
ತದಿಯ ಕೋರಿ ಏರಿ ಬೆಳಕು ಮೂಡಿಸುವಾ 
ಕೊಂದರಿಲ್ಲಿ ಸುಟ್ಟರಿಲ್ಲಿ ಕ್ರಾಂತಿಯ ಜೊತೆಗೆ ನ್ಯಾಯ ನೀತಿಯನ್ನ
ಜುಮ್ ಜುಮ್ ಜುಂ ಜುಮ್ ಜುಮ್ ಜುಂ
ಹಾಡೋ ಹಾಡೋ ಹಾಡೋ ಕ್ರಾಂತಿ ಗೀತೆಯಾ... ಆ 
ಪಬಾಪಾಪಪ ಪ (ಹೋ ) ಬಬಬಬಾಪಾಪಪ ಪ (ಹೋ ಹೋ )
ಪಬಾಪಾಪಪ ಪ ಪಬಾಪಾಪಪ ಪ (ಹೋ ಹೋ ಹೋ )
ಪಬಾಪಾಪಪ ಪ (ಹೋ ) ಬಬಬಬಾಪಾಪಪ ಪ (ಹೋ ಹೋ )
ಪಬಾಪಾಪಪ ಪ ಪಬಾಪಾಪಪ ಪ (ಹೋ ಹೋ ಹೋ )
ಹೇ.. ಯಾ ... ಹೋ ಹೋ 
ನಡುಬೀದಿಯಲಿ ಹುಲಿಸಿಂಹಗಳು 
ನಡೆದಾಡುತಿವೆ ಮರಿ ಚಿರತೆಗಳು 
ಮುಂಬಾಗಿಲಲಿ ಆ.. ನರಿ ತೋಳಗಳು.. ಆ 
ಹಿಂಬಾಗಿಲಿನಲಿ ಕರಿಗೂಬೆಗಳೂ 
ಹಂಚಿನ ಮೇಲೆ ರಣಹದ್ದುಗಳು 
ನಡುಮನೆಯೊಳಗೆ ಆ.. ವಿಷಸರ್ಪಗಳು 
ದೇಶವ ನುಂಗಲು ಹೊಂಚು ಹಾಕಿವೆ.. ಹೇ.. 
ಅರಿಯದ ಜನರನು ತಿಂದು ತೆಗಿವೇ 
ಅವರ ಹಿಡಿದು ಸಿಗಿದು ಹೂಳು ನೆಲದಲಿ 
ಮುಳ್ಳಿನಿಂದ ಮುಳ್ಳು ತೆಗೆಯೋ ಜಗದಲಿ    
ಕೊಂದರಿಲ್ಲಿ ಸುಟ್ಟರಿಲ್ಲಿ ಕ್ರಾಂತಿಯ ಜೊತೆಗೆ ನ್ಯಾಯ ನೀತಿಯನ್ನ
ಜುಮ್ ಜುಮ್ ಜುಂ ಜುಮ್ ಜುಮ್ ಜುಂ
ಬಾರೋ ಬಾರೋ ಬಾರೋ ನನ್ನ ಗೆಳೆಯಾ
ಹಾಡೋ ಹಾಡೋ ಹಾಡೋ ಕ್ರಾಂತಿ ಗೀತೆಯಾ

*********************************************************************************

ಓ..ಸುಂದರಿ ಬಾರೇ

ಸಂಗೀತ ಮತ್ತು ಸಾಹಿತ್ಯ : ಹಂಸಲೇಖ, 
ಗಾಯನ : ಎಸ್ಪಿ.ಬಿ. 

ಗಂಡು : ಓ..ಸುಂದರಿ ಬಾರೇ ನೀ ಕಿನ್ನರಿ ತೂಗಿನಡೆಯುವವಳೇ 
            ಬಾಗಿಬಳುಕುವವಳೇ ಹುಸಿ ಕೋಪತುಳುಕುವವಳೇ  
ಹೆಣ್ಣು : ಓ.. ಗಂಡನೇ ನಿನಗಿದು ದಂಡನೇ ನನ್ನ ಬಯಕೆ ಮುರಿದೇ 
          ಈ ಪ್ರೇಮ ಪರದೆ ಹರಿದೇ ನಾ ಆದಕೆ ಹಿಂದೆ ಸರಿದೇ 
ಗಂಡು : ಈ ಅಂದ ನೋಡಿ ನನ್ನಂತರಾಳ ಉಯ್ಯಾಲೆ ಆಡುತಿದೆ 
ಹೆಣ್ಣು : ನೋಡಿಲ್ಲಿ ನನ್ನ ಕಣ್ಣಲ್ಲಿ ಚಿನ್ನ ನಿದ್ದೆಯೂ ತೂಗುತಿದೆ 
ಗಂಡು : ನಿದ್ದೆಯು ಮುನ್ನ ಮುದ್ದಾಡು ನನ್ನ ಪ್ರೀತಿಯ ಮಾಡುವೇನು 
ಹೆಣ್ಣು : ಅಯ್ಯಯ್ಯೋ ನಿನ್ನ ತುಂಟಾಟವನ್ನ ನಾನೆಲ್ಲ ನೋಡಿಹೆನು 
ಗಂಡು :  ಅಹ್ಹಹ್ಹಾ.. ಓ..ಸುಂದರಿ ಬಾರೇ ನೀ ಕಿನ್ನರಿ ತೂಗಿನಡೆಯುವವಳೇ 
            ಬಾಗಿಬಳುಕುವವಳೇ ಅರೇರೆರೆ ಹುಸಿ ಕೋಪತುಳುಕುವವಳೇ      
ಗಂಡು : ಹೂ ಹಾಸಿಗೆ ಬಾ ಕಾದಿದೇ ಮಧುಚಂದ್ರಕೇ ಬಾ ಕರೆದಿದೇ 
ಹೆಣ್ಣು : ಬೆಕ್ಕಣ್ಣ ಅಡುಗೆಮನೆಗೆ ಬಂದಿಹನು ಕೇಳಿಸಿತು ಕಿವಿಗೇ 
          ಅಯ್ಯಯ್ಯೋ ಕಾದಿಹ ಹಾಲು ಆಗುವುದು ಬೆಕ್ಕಿನ ಪಾಲು 
ಗಂಡು :  ಏನಾಯಿತೇ.. ಏಕಾಯಿತೇ.. 
ಹೆಣ್ಣು : ನೋವಾಯಿತೇ... ಸಾಕಾಯಿತೇ.. 
ಗಂಡು : ಈ ಆಸೆಯೇ.. ಹಾಳಾಯಿತೇ.. 
ಹೆಣ್ಣು : ಈ.. ರಾತ್ರಿಯೇ.. ಹೀಗಾಯಿತೇ...       
ಗಂಡು :  ಓ..ಸುಂದರಿ ಬಾರೇ ನೀ ಕಿನ್ನರಿ ತೂಗಿನಡೆಯುವವಳೇ 
            ಬಾಗಿಬಳುಕುವವಳೇ ಅಯ್ಯಯ್ಯೊ ಹುಸಿ ಕೋಪತುಳುಕುವವಳೇ      
ಹೆಣ್ಣು : ಉಪಾಯಗಾರನ ತಂತ್ರಗಳೆಲ್ಲಾ ನನ್ನಲ್ಲಿ ನಡೆಯೋಲ್ಲಾ 
ಗಂಡು : ಅಪಾಯವಾದರೇ ನಿನ್ನಾಣೆ ನಾನು ಎಂದೆಂದೂ ಹೊಣೆಯಲ್ಲಾ 
ಹೆಣ್ಣು : ವಿನೋದ ತುಂಬಿದ ಬಣ್ಣದ ಮಾತಿಗೆ ಎಂದೆಂದೂ ನಾನು ಸೋಲಲ್ಲಾ 
ಗಂಡು : ಚಿನ್ನಾರಿ ನಾನೇ ಸೋತೆನು ಬಾರೇ ಈ ಕೋಪ ಸರಿಯಲ್ಲಾ 
ಹೆಣ್ಣು : ಆ.. ನಲ್ಲಿಯೂ ಕೂ ಎಂದಿದೇ  ನಾ ಹೋಗಲೇ ಬೇಕಾಗಿದೆ 
ಗಂಡು : ಆಮೇಲೆ ಹೋಗುವೆಯಂತೇ ಈಗೇಕೆ ನಲ್ಲಿಯ ಚಿಂತೇ 
ಹೆಣ್ಣು : ಅಯ್ಯಯ್ಯೋ ನಾಳೆಗೆ ಏನೋ ಸ್ನಾನಕ್ಕೆ ಮಾಡುವುದೂ ಏನೋ 
ಗಂಡು : ನೀನಿದ್ದರೂ  ಬಾಯಾರಿದೇ  
ಹೆಣ್ಣು : ನೀರಿಲ್ಲದೇ ಬಾಳೆಲ್ಲಿದೇ        
ಗಂಡು : ಬೆಳಗಾಯಿತೇ...   ಇರುಳು ಒಡಿತೇ ಹೇ.. 
ಹೆಣ್ಣು : ಹೋಳಾಯಿತೇ...  ಹಾಳಾಯಿತೇ 
ಗಂಡು : ಓ..ಸುಂದರಿ ಬಾರೇ ನೀ ಕಿನ್ನರಿ ತೂಗಿನಡೆಯುವವಳೇ 
            ಬಾಗಿಬಳುಕುವವಳೇ ಹುಸಿ ಕೋಪತುಳುಕುವವಳೇ  
ಗಂಡು : ಈ ಅಂದ ನೋಡಿ ನನ್ನಂತರಾಳ ಉಯ್ಯಾಲೆ ಆಡುತಿದೆ 
ಹೆಣ್ಣು : ನೋಡಿಲ್ಲಿ ನನ್ನ ಕಣ್ಣಲ್ಲಿ ಚಿನ್ನ ನಿದ್ದೆಯೂ ತೂಗುತಿದೆ 
ಗಂಡು : ನಿದ್ದೆಯು ಮುನ್ನ ಮುದ್ದಾಡು ನನ್ನ ಪ್ರೀತಿಯ ಮಾಡುವೇನು 
ಹೆಣ್ಣು : ಅಯ್ಯಯ್ಯೋ ನಿನ್ನ ತುಂಟಾಟವನ್ನ ನಾನೆಲ್ಲ ನೋಡಿಹೆನು 

*********************************************************************************

ಭಾರಿ ಸುದ್ದಿಯಲ್ಲಿದೇ 

ಸಂಗೀತ ಮತ್ತು ಸಾಹಿತ್ಯ : ಹಂಸಲೇಖ, 
ಗಾಯನ : ಮಂಜುಳಾ ಗುರುರಾಜ 

ಓ...ಓಓಓಓಓ...
ಭಾರಿ ಸುದ್ದಿಯಲ್ಲಿದೇ ಈ ಅಂದವು ದುಬಾರಿ ಆಗಿ ಹೋಗಿದೇ
ಈ ಅಂದ ಭಾರಿ ಸುದ್ದಿಯಲ್ಲಿದೇ ಈ ಅಂದವು ದುಬಾರಿ ಆಗಿ ಹೋಗಿದೇ
ಯಾರ ಕೈಯಲಿ ನೋಡು ನನ್ನ ಚಿತ್ರವೇ ಎಲ್ಲ ಪತ್ರಿಕೆಯಲ್ಲೂ ನನ್ನ ಬೊಂಬೆಯೇ
ಯಾರ ಕೈಯಲಿ ನೋಡು ನನ್ನ ಚಿತ್ರವೇ ಎಲ್ಲ ಪತ್ರಿಕೆಯಲ್ಲೂ ನನ್ನ ಬೊಂಬೆಯೇ
ಕಾಜಾಣ ಈ ಜಾಣರೂ ಕೊಂಡಾಡಿ ಕೊಂಡೊಯ್ಯೋದರೂ ಶೂಲಕ್ಕೇ ಏರಿಸಿದರೂ 
ಹೊಟ್ಟೆಪಾಡಿಗಾಗಿ ಅರ್ಧ ಬೆತ್ತಲೇ ಕುಣಿಯುವಾಗ ಮೇಲೆ ಅರ್ಧ ಕತ್ತಲೇ
ಕದ್ದು ನೋಡುವಾ ಈ ಕಳ್ಳರ ಕಲೆ ಅರ್ಥವಾದ ಮೇಲೆ ಚಿಂತೆ ಮಾಡಲೇ
ನೀರಿಗಿಳಿದ ಮೇಲೆ ಛಳಿಯ ಚಿಂತೆಯೇ ಕುಣಿಯುತಿರುವೇ ನಾನು ತಾಳದಂತೆಯೇ 
ಈ ವಿಲಾಸದ ವಿನೋದದ ಆ ಸೆರೆಮನೆಯಲ್ಲಿ ( ಬಂಧೀ ) ಬಂಧೀ...
( ಬಂಧೀ ) ಬಂಧೀ..( ಬಂಧೀ ) ಆದ ಸುದ್ದಿ 
ಭಾರಿ ಸುದ್ದಿಯಲ್ಲಿದೇ ಈ ಅಂದವು ದುಬಾರಿ ಆಗಿ ಹೋಗಿದೇ 
ಬುದ್ದಿ ಹೇಳುವಾ ಎಲ್ಲ ಬುದ್ಧಿವಂತರೂ ದುಡ್ಡು ಮಾಡಲೆಂದೇ ಹಿಂದೆ ಬಂದರೂ 
ನೀತಿ ಹೇಳುವಾ ಎಲ್ಲಾ ನ್ಯಾಯವಂತರೂ ನನ್ನ ಚಿತ್ರ ತೋರಿ ಮುಂದೆ ಬಂದರೂ 
ಬೀಜದಲ್ಲಿ ಒಂದು ವೃಕ್ಷವಿಲ್ಲದೇ ಈ ನೋಟದಲ್ಲಿ ಒಂದು ಲಕ್ಷವಿಲ್ಲದೇ 
ಈ ಪ್ರಲೋಪದ ಪ್ರಪಾತದ ಕೆಳಗಡೆ ಇರುವೇ.. (ಇರುವೇ)..ಬರುವೇ... (ಬರುವೇ)
ನಾ ಬರುವೇ (ಬರುವೇ ) ಚುಕ್ಕಿ ತರುವೇ 
ಭಾರಿ ಸುದ್ದಿಯಲ್ಲಿದೇ ಈ ಅಂದವು ದುಬಾರಿ ಆಗಿ ಹೋಗಿದೇ 
ಈ ಅಂದ ಭಾರಿ ಸುದ್ದಿಯಲ್ಲಿದೇ ಈ ಅಂದವು ದುಬಾರಿ ಆಗಿ ಹೋಗಿದೇ
ಯಾರ ಕೈಯಲಿ ನೋಡು ನನ್ನ ಚಿತ್ರವೇ ಎಲ್ಲ ಪತ್ರಿಕೆಯಲ್ಲೂ ನನ್ನ ಬೊಂಬೆಯೇ
ಯಾರ ಕೈಯಲಿ ನೋಡು ನನ್ನ ಚಿತ್ರವೇ ಎಲ್ಲ ಪತ್ರಿಕೆಯಲ್ಲೂ ನನ್ನ ಬೊಂಬೆಯೇ
ಕಾಜಾಣ ಈ ಜಾಣರೂ ಕೊಂಡಾಡಿ  ಕೊಂಡೊಯ್ಯೋದರೂ ಶೂಲಕ್ಕೇ ಏರಿಸಿದರೂ
*********************************************************************************

ವಜ್ರಕಾಯ (2015)


ಯಾಕಪ್ಪ ನಗ್ತಿಯಾ

ಚಲನ ಚಿತ್ರ: ವಜ್ರಕಾಯ (2015)
ನಿರ್ದೇಶನ: ಎ. ಹರ್ಷ
ಸಂಗೀತ: ಅರ್ಜುನ್ ಜನ್ಯ 
ಸಾಹಿತ್ಯ: ಮೋಹನ್
ಗಾಯರು: ಧನುಷ್ 
ನಟನೆ: ಶಿವರಾಜ್ ಕುಮಾರ್, ನಭಾ ನಟೇಶ್, ಕಾರುಣ್ಯ ರಾಮ್ 


ಯಾಕಪ್ಪ ನಗ್ತಿಯಾ ಹಿಂಗ್ಯಾಕೆ ಕೊಲ್ತಿಯ 
ನಿನ್ನಗು ನೋಡ್ಬುಟ್ಟು ಬಲ್ಪ್ ಆಫ್ ಆಗೋಯ್ತು
ಸ್ಟ್ರಾಂಗ್ ಇತ್ತು ನನ್ನ ಬಾಡಿ ವೀಕ್ ಆಯ್ತು ನಿನ್ನೋಡಿ 
ಅಗ್ಬುಟ್ರೆ ನಾವ್ ಜೋಡಿ ಕೊಲವೆರಿ ಡಿ
ಕೇಳೆ ಟ್ವಿಂಕಲ್ ಟ್ವಿಂಕಲ್ ಲೀಟ್ಲ್ ಸ್ಟಾರ್ 
ನೀನೆ ನನ್ನ ಸೂಪರ್ ಸ್ಟಾರ್ ನಾನೇ ನಿನ್ನ ರಾಜಕುಮಾರೇ……
ನೋ ಪ್ರಾಬ್ಲಮ್ ನಿನ್ನ ಹೈಟು ಸ್ವಲ್ಪ ಜಾಸ್ತೀನೆ ನೋ ಪ್ರಾಬ್ಲಮ್ 
ನಿನ್ನ ವೈಟಿಂಗ್ ಲಿಸ್ಟ್ ಲ್ ನಾನಿದ್ರು ನೋ ಪ್ರಾಬ್ಲಮ್
ನಿನ್ನ ಹಾರ್ಟಲ್ಲಿ ಜಾಗ ಕೊಟ್ರೆ ಲೈಫ್ ಲಾಂಗ್ 
ಅಲ್ಲೇ ನಾನು ಝಾಂಡ ಊರ್ತಿನೆ
ಸ್ಟ್ರಾಂಗ್ ಇತ್ತು ನನ್ನ ಬಾಡಿ ವೀಕ್ ಆಯ್ತು ನಿನ್ನೋಡಿ 
ಅಗ್ಬುಟ್ರೆ ನಾವ್ ಜೋಡಿ ಕೊಲವೆರಿ ಡಿ .

ಲವ್ವು ಸ್ಕೂಲಿಗೆ ನೀ  ಟೀಚರ್ ಆದರೆ 
ಫ್ರಂಟು ಬೆಂಚಲಿ ನಾ ಸ್ಟೂಡೆಂಟ್ ಆಗುವೆ
ರಾಮಂಗಾಗಿ ಸೀತ ಶಿವುಗಾಗಿ ಗೀತಾ ನಂಗೆ ನೀನು ಸ್ವಂತ 
ಬಾ ಮಿಲ್ಟ್ರಿ ಹೋಟ್ಲಲ್ಲಿ ಮುದ್ದೆ ತಿನ್ನೋಣ ಹೋಟ್ಲಲ್ಲಿ
ನೋ ಪ್ರಾಬ್ಲಮ್ ನಿಂಗೆ ಫ್ಲಾಶ್ ಬ್ಯಾಕು ಇದ್ರೂನೂ 
ನೋ ಪ್ರಾಬ್ಲಮ್ ನನ್ನ ಎ ಟಿ ಎಂ ಮಾಡ್ಕೊಂಡ್ರು ನೋ ಪ್ರಾಬ್ಲಮ್
ನಿನ್ನ ಮಮ್ಮಿ ಡ್ಯಾಡಿ ನೋ ಅಂದ್ರುನೂ ಅವರ 
ಕಾಲಿಗ್ ಬಿದ್ದಾದ್ರುನೂ ಒಪ್ಪ್ಸಿಕೊಳ್ತಿನೇ..
ಸ್ಟ್ರಾಂಗ್ ಇತ್ತು ನನ್ನ ಬಾಡಿ ವೀಕ್ ಆಯ್ತು ನಿನ್ನೋಡಿ 
ಅಗ್ಬುಟ್ರೆ ನಾವ್ ಜೋಡಿ ——— ಡಿ .

ನಿನ್ನ ಸೆಲ್ಲಿಗೆ ನಾ ಹೆಡ್ ಫೋನ್ ಆಗುವೆ 
ನೀ ಕಟ್ಟೋ ಬಿಲ್ಲಿಗೆ ನಾ ಸಾಲ ಮಾಡುವೆ
ಸಪುನೋಕಿ ರಾಣಿ ಹತ್ತು ನನ್ನ ದೋಣಿ ಬೇಕಿಲ್ಲ 
ಏಣಿ ನೀರ್ ಇಲ್ದೆ ಇರೋ ನದಿ ದಾಟೋಣ್ವೇ…
ನೋ ಪ್ರಾಬ್ಲಮ್ ನಿನ್ನ ಕಲರ್ ಸ್ವಲ್ಪ ಜಾಸ್ತಿನೆ 
ನೋ ಪ್ರಾಬ್ಲಮ್ ನೀನು ಅರೇಬಿಯನ್ ಟಗರಾದ್ರು ನೋ ಪ್ರಾಬ್ಲಮ್
ನೀನು ಒಪ್ಪದೇ ಇದ್ದೆ ಇದ್ದಬುಟ್ರೆ ನಾನ್ ಟಿವಿ ನೈನ್ ಲ್ಲಿ 
ಲೈವಲ್ಲ ಕೂತು ಬಾಯ್ ಬಡ್ಕೊತಿನೆ
ಸ್ಟ್ರಾಂಗ್ ಇತ್ತು ನನ್ನ ಬಾಡಿ ವೀಕ್ ಆಯ್ತು ನಿನ್ನೋಡಿ 
ಅಗ್ಬುಟ್ರೆ ನಾವ್ ಜೋಡಿ ಕೊಲವೆರಿ ಡಿ.

*********************************************************************************
ಸಾಹಿತ್ಯ: 
ಗಾಯಕರು: ಶಂಕರ್ ಮಹಾದೇವನ್ 

ಬೋಂ ಬೋಂ ಬೋಲೋ ಬೋಲೋರೆ
ವಾಯುಪುತ್ರ ಬೋಲೋರೆ
ಬೋಂ ಬೋಂ ಬೋಲೋ ಬೋಲೋರೆ
ಬೋಲೋರೆ ರಾಮ್ ದೇವ್
ಬೋಂ ಬೋಂ ಬೋಲೋ ಬೋಲೋರೆ
ವಾಯುಪುತ್ರ ಬೋಲೋರೆ
ಬೋಂ ಬೋಂ ಬೋಲೋ ಬೋಲೋರೆ
ಬೋಲೋರೆ ರಾಮ್ ದೇವ್
ವಜ್ರಕಾಯ ರಾಮ್ ದೇವ್  ಅಂಜನೆಯ

ಕೈ ಮುಗಿದರೆ ಕೈ ಹಿಡಿಯುವ
ಭಕ್ತರ ಪ್ರಿಯ ವಜ್ರಕಾಯ
ತೋಳ್ಬಲ ಕೊಡು ಬೆಂಬಲ ಕೊಡು
ಕಲಿಗಳ ಕಲಿ ಅಂಜನೆಯ
ಪಾಹಿ ಪಾಹಿ ಹನುಮ ಧನ್ಯ ನಿನ್ನ ಕಂಡ ಜನುಮ
ಕನ್ನಡ ಕುಲ ಕೀರ್ತಿಯಸಿರಿ ನಿನ್ನದು
ಶರ ವೇಗದಗುರಿ ಬಾರೋ ಜಗದೋದ್ದಾರ
ವಜ್ರಕಾಯ ಅಂಜನೆಯ
ವಜ್ರಕಾಯ ಅಂಜನೆಯ
ವಜ್ರಕಾಯ ಅಂಜನೆಯ
ವಜ್ರಕಾಯ ಅಂಜನೆಯ
ಕೈ ಮುಗಿದರೆ ಕೈ ಹಿಡಿಯುವ
ಭಕ್ತರ ಪ್ರಿಯ ವಜ್ರಕಾಯ

ಬೋಂ ಬೋಂ ಬೋಲೋ ಬೋಲೋರೆ
ವಾಯುಪುತ್ರ ಬೋಲೋರೆ
ಬೋಂ ಬೋಂ ಬೋಲೋ ಬೋಲೋರೆ
ಬೋಲೋರೆ ರಾಮ್ ದೇವ್
ಬೋಂ ಬೋಂ ಬೋಲೋ ಬೋಲೋರೆ
ವಾಯುಪುತ್ರ ಬೋಲೋರೆ
ಬೋಂ ಬೋಂ ಬೋಲೋ ಬೋಲೋರೆ
ಬೋಲೋರೆ ರಾಮ್ ದೇವ್

ಧೈರ್ಯದಲಿ ಭಜರಂಗಬಲಿ
ತುಂಬಿರುವೆ ಅಣು ರೇಣುವಲಿ
ನೀನಿರುವ ಧ್ವಜ ಎತ್ತಿದರು
ಬೀಗಿದರು ಗೆದ್ದು ಪಾಂಡವರು
ನೀನೆ ನಮ್ಮ ಆಧಾರ ನೀಗು ಬಾರೋ ಈ ಬಾರ
ಬಾಹು ಬಲಿ ಅಮೋಘ ಸೀತಾ ಪ್ರಿಯ ಪ್ಲವರ್ಗ
ದೈವೊತ್ತಮ ಶುಭಂಗ ಬಾರೋ ಜಗದೋದ್ದಾರ
ವಜ್ರಕಾಯ ಅಂಜನೆಯ
ವಜ್ರಕಾಯ ಅಂಜನೆಯ

–ಬೋಲೋ ರಾಮ ಧೂತ ಹನುಮಂತ–

ಚಿರಂಜೀವಿ ತಂದೆ ಸಂಜೀವಿನಿ
ಪ್ರಾಣ ಕೊಡೊ ಮಹಾ ಮಹಾಧಣಿ
ದಾನವರ ಕುಲ ವಿನಾಶಕ
ನೀನಿರಲು ಕಷ್ಟ ಯಾವ ಲೆಕ್ಕ
ಭಕ್ತರ ಕಾಯೋ ಧೀಮಂತ
ದಾಸರು ನಾವು ಹನುಮಂತ
ಸರ್ವೋತ್ತಮ ಗುಣೆಂದ್ರ
ಜಿವೊತ್ತಮ ಜಿತೇಂದ್ರ
ಲೋಕೋತ್ತಮ ಕಪೇಂದ್ರ
ಬಾರೋ ಜಗದೋದ್ದಾರ
।। ಅಂಜನೆಯ ವಜ್ರಕಾಯ ಅಂಜನೆಯ ।।
ಕೈ ಮುಗಿದರೆ ಕೈ ಹಿಡಿಯುವ
ಭಕ್ತರ ಪ್ರಿಯ ವಜ್ರಕಾಯ

ಬೋಂ ಬೋಂ ಬೋಲೋ ಬೋಲೋರೆ
ವಾಯುಪುತ್ರ ಬೋಲೋರೆ
ಬೋಂ ಬೋಂ ಬೋಲೋ ಬೋಲೋರೆ
ಬೋಲೋರೆ ರಾಮ್ ದೇವ್
ಬೋಂ ಬೋಂ ಬೋಲೋ ಬೋಲೋರೆ
ವಾಯುಪುತ್ರ ಬೋಲೋರೆ
ಬೋಂ ಬೋಂ ಬೋಲೋ ಬೋಲೋರೆ
ಬೋಲೋರೆ ರಾಮ್ ದೇವ್

ಅಂಜನೆಯ ಅಂಜನೆಯ ಅಂಜನೆಯ….

ನಾ ನಿನ್ನ ಬಿಡಲಾರೆ (1979)


ಚಲನ ಚಿತ್ರ: ನಾ ನಿನ್ನ ಬಿಡಲಾರೆ (1979)
ನಿರ್ದೇಶನ: ವಿಜಯ್ 
ಸಂಗೀತ: ರಾಜನ್-ನಾಗೇಂದ್ರ 
ಸಾಹಿತ್ಯ: ಚಿ.ಉದಯಶಂಕರ್ 
ಗಾಯಕರು: ಎಸ್.ಪಿ.ಬಿ, ಎಸ್.ಜಾನಕಿ
ನಟನೆ: ಅನಂತ್ ನಾಗ್, ಲಕ್ಷ್ಮೀ 


ನಾನು ನೀನು ಒಂದಾದ ಮೇಲೆ
ಹೀಗೇಕೆ ನೀ ದೂರ ಹೋಗುವೆ
ನಾನು ನೀನು ಒಂದಾದ ಮೇಲೆ
ಹೀಗೇಕೆ ನೀ ದೂರ ಹೋಗುವೆ
ಮುತ್ತಲ್ಲೆ ನಿನ್ನ ಸಿಂಗಾರ ಮಾಡಿ
ಕಣ್ತುಂಬ ನಾ ನೋಡುವೇ
ನಾನು ನೀನು ಒಂದಾದ ಮೇಲೆ
ಹೀಗೇಕೆ ನನ್ನನ್ನೆ ನೋಡುವೆ
ಕಣ್ಣಲ್ಲು ನೀನೆ ಮನದಲ್ಲು ನೀನೆ
ಎಲ್ಲೆಲ್ಲೂ ನೀ ಕಾಣುವೇ
ನಾನು ನೀನು ಒಂದಾದ ಮೇಲೆ
ಹೀಗೇಕೆ ನನ್ನನ್ನೆ ನೋಡುವೆ

ನನಗಾಗಿ ಹೆಣ್ಣಾಗಿ ಬಂದೆ
ನನ್ನಲ್ಲಿ ನಿನ್ನಾಸೆ ತಂದೆ
ಹಗಲಿಲ್ಲ ಇರುಳಿಲ್ಲ ನಿನ್ನಲ್ಲೆ ಮನವೆಲ್ಲ
ನೆನಪಲ್ಲೆ ನಾ ಸೋತು ಹೋದೆ
ಸಂಗಾತಿ ನೀನಾಗಿ ಬಂದೆ
ಸಂತೋಷ ಬಾಳಲ್ಲಿ ತಂದೆ
ಹಗಲಲ್ಲಿ ಇರುಳಲ್ಲಿ ಮನವೆಲ್ಲ
ನಿನ್ನಲ್ಲಿ ನೆನಪಿಂದ ನಾ ನೊಂದು ಹೋದೆ
ಇನ್ನೆಂದು ಈ ಚಿಂತೆ ನಿನಗಿಲ್ಲವೆ

ನಾನು ನೀನು ಒಂದಾದ ಮೇಲೆ
ಹೀಗೇಕೆ ನೀ ದೂರ ಹೋಗುವೆ
ಮುತ್ತಲ್ಲೆ ನಿನ್ನ ಸಿಂಗಾರ ಮಾಡಿ
ಕಣ್ತುಂಬ ನಾ ನೋಡುವೇ
ನಾನು ನೀನು ಒಂದಾದ ಮೇಲೆ
ಹೀಗೇಕೆ ನನ್ನನ್ನೆ ನೋಡುವೆ

ಲತೆಯಲ್ಲಿ ಹೂವಾಗಿ ನಾನು
ಮರಿದುಂಬಿ ಅಂದಾಗಿ ನೀನು
ಹೂವಲ್ಲಿ ಹೊರಳಾಡಿ ಜೇನಾಟ
ನಾವಾಡಿ ಆನಂದ ಹೊಂದೋಣವೇನು
ಬಾನಾಡಿ ನಾವಾಗಿ ಹಾರಿ
ಬಾನಲ್ಲಿ ಒಂದಾಗಿ ಸೇರಿ
ಹೊಸ ಆಟ ಆಡೋಣ
ಹೊಸ ನೋಟ ನೋಡೋಣ
ಮುಗಿಲಿಂದ ಜಾರೋಣವೇನು
ಎಂದೆಂದು ನೆರಳಾಗಿ ನಾ ಬಾಳುವೆ

ನಾನು ನೀನು ಒಂದಾದ ಮೇಲೆ
ಹೀಗೇಕೆ ನನ್ನನ್ನೆ ನೋಡುವೆ
ಕಣ್ಣಲ್ಲು ನೀನೆ ಮನದಲ್ಲು ನೀನೆ
ಎಲ್ಲೆಲ್ಲೂ ನೀ ಕಾಣುವೇ
ನಾನು ನೀನು ಒಂದಾದ ಮೇಲೆ
ಹೀಗೇಕೆ ನನ್ನನ್ನೆ ನೋಡುವೆ
ಹೀಗೇಕೆ ನನ್ನನ್ನೆ ನೋಡುವೆ



*********************************************************************************