ಇದೇ ನಾಡು ಇದೇ ಭಾಷೆ
ಚಲನ ಚಿತ್ರ: ತಿರುಗು ಬಾಣ (1983)
ನಿರ್ದೇಶನ: ಕೆ. ಎಸ್.ಆರ್. ದಾಸ್
ಸಂಗೀತ: ಸತ್ಯಂ
ಸಾಹಿತ್ಯ: ಆರ್.ಎನ್. ಜಯಗೋಪಾಲ್
ಸಾಹಿತ್ಯ: ಆರ್.ಎನ್. ಜಯಗೋಪಾಲ್
ಗಾಯಕರು: ಡಾ. ಎಸ್.ಪಿ.ಬಾಲಸುಬ್ರಹ್ಮಣ್ಯಂ & ಕೋರಸ್
ಇದೇ ನಾಡು ಇದೇ ಭಾಷೆ ಎಂದೆಂದೂ ನಮ್ಮದಾಗಿರಲಿ
ಎಲ್ಲೇ ಇರಲಿ ಹೇಗೇ ಇರಲಿ ಕನ್ನಡವೆ ನಮ್ಮ ಉಸಿರಲ್ಲಿ

ಕರುನಾಡು ಸ್ವರ್ಗದ ಸೀಮೆ ಕಾವೇರಿ ಹುಟ್ಟಿದ ನಾಡು
ಕಲ್ಲಲ್ಲಿ ಕಲೆಯನು ಕಂಡ ಬೇಲೂರ ಶಿಲ್ಪದ ಬೀಡು
ಬಸವೇಶ್ವರ ರನ್ನ ಪಂಪರ ಕವಿವಾಣಿಯ ನಾಡು
ಕಲ್ಲಲ್ಲಿ ಕಲೆಯನು ಕಂಡ ಬೇಲೂರ ಶಿಲ್ಪದ ಬೀಡು
ಬಸವೇಶ್ವರ ರನ್ನ ಪಂಪರ ಕವಿವಾಣಿಯ ನಾಡು
ಇದೇ ನಾಡು ಇದೇ ಭಾಷೆ ಎಂದೆಂದೂ ನಮ್ಮದಾಗಿರಲಿ
ಚಾಮುಂಡಿ ರಕ್ಷೆಯು ನಮಗೆ ಗೊಮ್ಮಟೇಶ ಕಾವಲು ಇಲ್ಲಿ
ಶೃoಗೇರಿ ಶಾರದೆ ಲೀಲೆ ರಸತುಂಗೆಯಾಗಿದೆ ಇಲ್ಲಿ
ವಿಶ್ವಖ್ಯಾತಿಯ ವಿಶ್ವೇಶ್ವರಯ್ಯ ಜನಿಸಿದ ಈ ನಾಡು
ಶೃoಗೇರಿ ಶಾರದೆ ಲೀಲೆ ರಸತುಂಗೆಯಾಗಿದೆ ಇಲ್ಲಿ
ವಿಶ್ವಖ್ಯಾತಿಯ ವಿಶ್ವೇಶ್ವರಯ್ಯ ಜನಿಸಿದ ಈ ನಾಡು
ಇದೇ ನಾಡು ಇದೇ ಭಾಷೆ ಎಂದೆಂದೂ ನಮ್ಮದಾಗಿರಲಿ
ಎಳೇಳು ಜನ್ಮವೇ ಬರಲಿ ಈ ಮಣ್ಣಲಿ ನಾನು ಹುಟ್ಟುವೆ
ಏನೇನು ಕಷ್ಟವೇ ಇರಲಿ ಸಿರಿಗನ್ನಡಕಾಗೆ ದುಡಿಯುವೆ
ತನು ಕನ್ನಡ ನುಡಿ ಕನ್ನಡ ಮನ ಕನ್ನಡವಾಗಿರಲಿ
ಏನೇನು ಕಷ್ಟವೇ ಇರಲಿ ಸಿರಿಗನ್ನಡಕಾಗೆ ದುಡಿಯುವೆ
ತನು ಕನ್ನಡ ನುಡಿ ಕನ್ನಡ ಮನ ಕನ್ನಡವಾಗಿರಲಿ
ಇದೇ ನಾಡು ಇದೇ ಭಾಷೆ ಎಂದೆಂದೂ ನಮ್ಮದಾಗಿರಲಿ
ಎಲ್ಲೇ ಇರಲಿ ಹೇಗೇ ಇರಲಿ ಕನ್ನಡವೆ ನಮ್ಮ ಉಸಿರಲ್ಲಿ
ಇದೇ ನಾಡು ಇದೇ ಭಾಷೆ ಎಂದೆಂದೂ ನಮ್ಮದಾಗಿರಲಿ
ಎಲ್ಲೇ ಇರಲಿ ಹೇಗೇ ಇರಲಿ ಕನ್ನಡವೆ ನಮ್ಮ ಉಸಿರಲ್ಲಿ
ಇದೇ ನಾಡು ಇದೇ ಭಾಷೆ ಎಂದೆಂದೂ ನಮ್ಮದಾಗಿರಲಿ
*********************************************************************************
ಸ್ನೇಹಕ್ಕೆ ಒಂದೇ ಮಾತು
ಸಾಹಿತ್ಯ: ಆರ್.ಎನ್.ಜಯಗೋಪಾಲ್
ಗಾಯಕರು: ಎಸ್.ಪಿ.ಬಿ., ಎಸ್.ಪಿ.ಶೈಲಜಾ
ಸ್ನೇಹಕ್ಕೆ ಒಂದೇ ಮಾತು
ಹೃದಯಗಳು ಆಡೋ ಮಾತು
ಈ ಮೌನ ಇನ್ನು ಏತಕೇ
ಸೇರು ಬಾ, ಆಡು ಬಾ, ಹಾಡು ಬಾ
ಈ ಸಂಜೆ ಹೊತ್ತಲ್ಲಿ,
ನನ್ನಲ್ಲಿ ನಿನ್ನಲ್ಲಿ, ಮಾತೆಲ್ಲ ಕಣ್ಣಲ್ಲಿ
ಹೃದಯಗಳು ಆಡೋ ಮಾತು
ಈ ಮೌನ ಇನ್ನು ಏತಕೇ
ಸೇರು ಬಾ, ಆಡು ಬಾ, ಹಾಡು ಬಾ
ಈ ಸಂಜೆ ಹೊತ್ತಲ್ಲಿ,
ನನ್ನಲ್ಲಿ ನಿನ್ನಲ್ಲಿ, ಮಾತೆಲ್ಲ ಕಣ್ಣಲ್ಲಿ
ಸ್ನೇಹಕ್ಕೆ ಒಂದೇ ಮಾತು
ಹೃದಯಗಳು ಆಡೋ ಮಾತು
ಈ ಮೌನ ಇನ್ನು ಏತಕೇ
ಸೇರು ಬಾ, ಆಡು ಬಾ, ಹಾಡು ಬಾ
ಮನತಣಿಯಲು ಸಂಗೀತ ಬೇಕು
ಜೊತೆ ಕುಣಿಯಲು ಸಂಗಾತಿ ಬೇಕು
ಮೈ ಮರೆಯಲು ಸಂತೋಷ ಬೇಕು
ಒಡನಾಟದ ಉಲ್ಲಾಸ ಬೇಕು
ಮನಸುಗಳ ಮಿಲನದಲಿ ಹೊಸ ವೇಗ ತುಂಬಿರಲಿ
ಜೊತೆ ಕುಣಿಯಲು ಸಂಗಾತಿ ಬೇಕು
ಮೈ ಮರೆಯಲು ಸಂತೋಷ ಬೇಕು
ಒಡನಾಟದ ಉಲ್ಲಾಸ ಬೇಕು
ಮನಸುಗಳ ಮಿಲನದಲಿ ಹೊಸ ವೇಗ ತುಂಬಿರಲಿ
ಸ್ನೇಹಕ್ಕೆ ಒಂದೇ ಮಾತು
ಹೃದಯಗಳು ಆಡೋ ಮಾತು
ಈ ಮೌನ ಇನ್ನು ಏತಕೇ
ಸೇರು ಬಾ, ಆಡು ಬಾ, ಹಾಡು ಬಾ
ದಾರಿಗಳು ಸೇರೋದು ಒಮ್ಮೆ
ಅಗಲಿಕೆಯು ನೋಡಲ್ಲಿ ಮುಂದೇ
ಜೊತೆಯಿರುವ ಕ್ಷಣಕಾಲ ಹಾಡು
ಉಳಿಯುವುದು ನೆನಪೊಂದೆ ಮುಂದೇ
ಜೀವನವೇ ಸುಖಪಡಲು ಯೌವನವೆ ನಗೆಗಡಲು
ಅಗಲಿಕೆಯು ನೋಡಲ್ಲಿ ಮುಂದೇ
ಜೊತೆಯಿರುವ ಕ್ಷಣಕಾಲ ಹಾಡು
ಉಳಿಯುವುದು ನೆನಪೊಂದೆ ಮುಂದೇ
ಜೀವನವೇ ಸುಖಪಡಲು ಯೌವನವೆ ನಗೆಗಡಲು
ಸ್ನೇಹಕ್ಕೆ ಒಂದೇ ಮಾತು ಹೃದಯಗಳು ಆಡೋ ಮಾತು
ಈ ಮೌನ ಇನ್ನು ಏತಕೇ ಸೇರು ಬಾ ಆಡು ಬಾ ಹಾಡು ಬಾ
ಈ ಸಂಜೆ ಹೊತ್ತಲ್ಲಿ, ನನ್ನಲ್ಲಿ ನಿನ್ನಲ್ಲಿ, ಮಾತೆಲ್ಲ ಕಣ್ಣಲ್ಲಿ
ಸ್ನೇಹಕ್ಕೆ ಒಂದೇ ಮಾತು ಹೃದಯಗಳು ಆಡೋ ಮಾತು
ಈ ಮೌನ ಇನ್ನು ಏತಕೇ ಸೇರು ಬಾ ಆಡು ಬಾ ಹಾಡು ಬಾ
*********************************************************************************
ಅಂದದ ಚಂದದ ಗಿಣಿಯೇ
ಸಾಹಿತ್ಯ: ಆರ್. ಎನ್. ಜಯಗೋಪಾಲ್
ಗಾಯಕರು: ಎಸ್.ಪಿ.ಬಿ., ಪಿ.ಸುಶೀಲಾ
ಅಂದದ ಚಂದದ ಗಿಣಿಯೇ
ಸಿಹಿ ಕನ್ನಡದ ಇಂಪಿನ ನುಡಿಯೇ
ನಗುವಿನ ಚಿನ್ನದ ಗಣಿಯೆ
ನಮ್ಮ ಬಾಳಿನ ಗಂಧದ ಗುಡಿಯೇ
ಅಂದದ ಚಂದದ ಗಿಣಿಯೇ ಸಿಹಿ ಕನ್ನಡದ ಇಂಪಿನ ನುಡಿಯೇ
ನಗುವಿನ ಚಿನ್ನದ ಗಣಿಯೆ ನಮ್ಮ ಬಾಳಿನ ಗಂಧದ ಗುಡಿಯೇ
ಸಿಹಿ ಕನ್ನಡದ ಇಂಪಿನ ನುಡಿಯೇ
ನಗುವಿನ ಚಿನ್ನದ ಗಣಿಯೆ
ನಮ್ಮ ಬಾಳಿನ ಗಂಧದ ಗುಡಿಯೇ
ಅಂದದ ಚಂದದ ಗಿಣಿಯೇ ಸಿಹಿ ಕನ್ನಡದ ಇಂಪಿನ ನುಡಿಯೇ
ನಗುವಿನ ಚಿನ್ನದ ಗಣಿಯೆ ನಮ್ಮ ಬಾಳಿನ ಗಂಧದ ಗುಡಿಯೇ
ಚಿನ್ನ ನಿನ್ನ ಕಣ್ಣಲ್ಲಿನ್ನು ಕಣ್ಣಿರೇತಕೆ ತಾಯಿ ತಂದೆ ಜೀವ ನೀನೆ
ದೈವ ತಂದ ಭಾಗ್ಯ ನೀನೇ .... ಇಲ್ನೋಡು ಇಲ್ನೋಡು
ಮಾತೆಯ ಮಮತೆಯ ಹೂಬನದಲ್ಲಿ
ಹೂವಿನ ತೊಟ್ಟಿಲ ಹಾಸಿಹುದಿಲ್ಲಿ
ತಂಗಾಳಿ ಮೆಲ್ಲಗೆ ಜೋಗುಳ ಹಾಡೇ
ಕಂಗಳ ರೆಪ್ಪೆಗೆ ಚುಂಬನ ನೀಡೆ
ತೂಗಲು ನಾ ನಿನ್ನ ಮಲಗೋ ಚಿನ್ನ
ಕನಸಿನ ಹೊಂಬಣ್ಣ ತುಂಬಲಿ ಕಣ್ಣ
ಉಸಿರೇ ಹಸಿರೇ ಅಳದಿರು ನೀ
ಹೂವಿನ ತೊಟ್ಟಿಲ ಹಾಸಿಹುದಿಲ್ಲಿ
ತಂಗಾಳಿ ಮೆಲ್ಲಗೆ ಜೋಗುಳ ಹಾಡೇ
ಕಂಗಳ ರೆಪ್ಪೆಗೆ ಚುಂಬನ ನೀಡೆ
ತೂಗಲು ನಾ ನಿನ್ನ ಮಲಗೋ ಚಿನ್ನ
ಕನಸಿನ ಹೊಂಬಣ್ಣ ತುಂಬಲಿ ಕಣ್ಣ
ಉಸಿರೇ ಹಸಿರೇ ಅಳದಿರು ನೀ
ತಾಯಿ ತಂದೆ ಜೀವ ನೀನೆ
ದೈವ ತಂದ ಭಾಗ್ಯ ನೀನೇ ....
ನನ್ ಚಿನ್ನ ನನ್ ಬಂಗಾರ ನೋಡಮ್ಮಾ ಇಲ್ಲಿ ನಗು ಮಗು
ಚಂದ ಮಾಮ ಬಂಗಾರ ತೇರಾಗಿ ಬರಲಿ
ತಾರೆಗಳ ಕುದುರೆಯ ಜೋಡಿಯ ತರಲಿ ನಿದಿರೆಯ ಹೊಸಲೋಕ...
ಮೋಡಗಳ ಬೆಳ್ಳಿಯ ದಾರಿಗಳಲ್ಲಿ ಬರುತಿರೆ ನೀ ಕುಳಿತು ವೈಭವದಲ್ಲಿ
ನಗುತಿರೆ ನೀನಾಗ ಆನಂದದಲ್ಲಿ ನಲಿವೆ ಮೆರೆವೆ ಮೈ ಮರೆವೆ
ತಾರೆಗಳ ಕುದುರೆಯ ಜೋಡಿಯ ತರಲಿ ನಿದಿರೆಯ ಹೊಸಲೋಕ...
ಮೋಡಗಳ ಬೆಳ್ಳಿಯ ದಾರಿಗಳಲ್ಲಿ ಬರುತಿರೆ ನೀ ಕುಳಿತು ವೈಭವದಲ್ಲಿ
ನಗುತಿರೆ ನೀನಾಗ ಆನಂದದಲ್ಲಿ ನಲಿವೆ ಮೆರೆವೆ ಮೈ ಮರೆವೆ
ತಾಯಿ ತಂದೆ ಜೀವ ನೀನೆ ದೈವ ತಂದ ಭಾಗ್ಯ ನೀನೇ ....
ಅಂದದ ಚಂದದ ಗಿಣಿಯೇ ಸಿಹಿ ಕನ್ನಡದ ಇಂಪಿನ ನುಡಿಯೇ
ನಗುವಿನ ಚಿನ್ನದ ಗಣಿಯೆ ನಮ್ಮ ಬಾಳಿನ ಗಂಧದ ಗುಡಿಯೇ
ನಗುವಿನ ಚಿನ್ನದ ಗಣಿಯೆ ನಮ್ಮ ಬಾಳಿನ ಗಂಧದ ಗುಡಿಯೇ
ಚಿನ್ನ ನಿನ್ನ ಕಣ್ಣಲ್ಲಿನ್ನು ಕಣ್ಣಿರೇತಕೆ
ತಾಯಿ ತಂದೆ ಜೀವ ನೀನೆ ದೈವ ತಂದ ಭಾಗ್ಯ ನೀನೇ ....
*********************************************************************************
No comments:
Post a Comment