ಮಾರಿ ಕಣ್ಣು ಹೋರಿ ಮ್ಯಾಗೆ
ಚಲನ ಚಿತ್ರ: A (1998)
ನಿರ್ದೇಶನ: ಉಪೇಂದ್ರ
ಸಂಗೀತ: ಗುರುಕಿರಣ್
ಸಾಹಿತ್ಯ: ಉಪೇಂದ್ರ
ಗಾಯನ: ಎಸ್.ಪಿ.ಬಾಲಸುಬ್ರಹ್ಮಣ್ಯಂ
ನಟನೆ: ಉಪೇಂದ್ರ, ಚಾಂದಿನಿ

ಕಟ್ಕನ್ ಕಣ್ಣು ಕುರಿ ಮ್ಯಾಗೆ,
ಮಾರಿ ಕಣ್ಣು ಹೋರಿ ಮ್ಯಾಗೆ,
ಕಟ್ಕನ್ ಕಣ್ಣು ಕುರಿ ಮ್ಯಾಗೆ,
ಅವಳ ಕಣ್ಣು ಆಕಾಶದಾಗೆ,
ಇವನ ಕಣ್ಣು ಅವಳ ಮ್ಯಾಗೆ,
ಊರೋರ್ ಕಣ್ಣು ಇವರ ಮ್ಯಾಗೆ - |೨|
ಶೂರ್ಪಣಖಿ ನಿಂಗ್ ಗೊತ್ತ ಆ ರಾವಣ ಹೆಂಗ್ ಸತ್ತ
ಹೆಂಗೆಂಗ್ ಇದ್ದೋರ್ ಎಂತೆಂತೋರೆ ಏನೇನಾದ್ರು
ದಿಲ್ಲಿನಾಗೆ ಮೆರೆದೋರೆಲ್ಲ ಜೇಲ್ ಸೇರಿದ್ದ್ರು
ಅತ್ತೆಗೊಂದು ಕಾಲಾನೊ ಸೊಸೆಗೊಂದು ಕಾಲನೊ,
ನಮಗೂ ಒಳ್ಳೆ ಕಾಲ ಬರ್ತದೆ
ಮಾರಿ ಕಣ್ಣು ಹೋರಿ ಮ್ಯಾಗೆ, ಕಟ್ಕನ್ ಕಣ್ಣು ಕುರಿ ಮ್ಯಾಗೆ,
ಮಾರಿ ಕಣ್ಣು ಹೋರಿ ಮ್ಯಾಗೆ, ಕಟ್ಕನ್ ಕಣ್ಣು ಕುರಿ ಮ್ಯಾಗೆ,
ಅವಳ ಕಣ್ಣು ಆಕಾಶದಾಗೆ, ಇವನ ಕಣ್ಣು ಅವಳ ಮ್ಯಾಗೆ,
ಊರೋರ್ ಕಣ್ಣು ಇವರ ಮ್ಯಾಗೆ
ಹೆಣ್ಣಿಗ್ ಮೀಸೆ ಬರಕ್ಕಿಲ್ಲ ಹುಲಿ ಹುಲ್ಲು ತಿನ್ನಕ್ಕಿಲ್ಲ
ಹಾವು ಏಣಿ ಆಟದಂಗೆ ನಮ್ಮ ಬಾಳು
ಜೀವನದಾಗೆ ಇರಲೆ ಬೇಕು ಏಳು ಬೀಳು
ಕೋಟಿ ಕೋಟಿ ಇದ್ದ್ರುನು, ಹೊಟ್ಟೆಗ್ ತಿನ್ನೋದ್ ಅನ್ನನೇ,
ಹಾವು ಏಣಿ ಆಟದಂಗೆ ನಮ್ಮ ಬಾಳು
ಜೀವನದಾಗೆ ಇರಲೆ ಬೇಕು ಏಳು ಬೀಳು
ಕೋಟಿ ಕೋಟಿ ಇದ್ದ್ರುನು, ಹೊಟ್ಟೆಗ್ ತಿನ್ನೋದ್ ಅನ್ನನೇ,
ದೇಹ ಸೇರೋದ್ ಮಣ್ಣಿಗೇನೆ
ಮಾರಿ ಕಣ್ಣು ಹೋರಿ ಮ್ಯಾಗೆ, ಕಟ್ಕನ್ ಕಣ್ಣು ಕುರಿ ಮ್ಯಾಗೆ,
ಮಾರಿ ಕಣ್ಣು ಹೋರಿ ಮ್ಯಾಗೆ, ಕಟ್ಕನ್ ಕಣ್ಣು ಕುರಿ ಮ್ಯಾಗೆ,
ಅವಳ ಕಣ್ಣು ಆಕಾಶದಾಗೆ, ಇವನ ಕಣ್ಣು ಅವಳ ಮ್ಯಾಗೆ,
ಊರೋರ್ ಕಣ್ಣು ಇವರ ಮ್ಯಾಗೆ
ಮಾರಿ ಕಣ್ಣು ಹೋರಿ ಮ್ಯಾಗೆ, ಕಟ್ಕನ್ ಕಣ್ಣು ಕುರಿ ಮ್ಯಾಗೆ,
ಮಾರಿ ಕಣ್ಣು ಹೋರಿ ಮ್ಯಾಗೆ, ಕಟ್ಕನ್ ಕಣ್ಣು ಕುರಿ ಮ್ಯಾಗೆ,
ಅವಳ ಕಣ್ಣು ಆಕಾಶದಾಗೆ, ಇವನ ಕಣ್ಣು ಅವಳ ಮ್ಯಾಗೆ,
ಮಾರಿ ಕಣ್ಣು ಹೋರಿ ಮ್ಯಾಗೆ, ಕಟ್ಕನ್ ಕಣ್ಣು ಕುರಿ ಮ್ಯಾಗೆ,
ಮಾರಿ ಕಣ್ಣು ಹೋರಿ ಮ್ಯಾಗೆ, ಕಟ್ಕನ್ ಕಣ್ಣು ಕುರಿ ಮ್ಯಾಗೆ,
ಅವಳ ಕಣ್ಣು ಆಕಾಶದಾಗೆ, ಇವನ ಕಣ್ಣು ಅವಳ ಮ್ಯಾಗೆ,
ಊರೋರ್ ಕಣ್ಣು ಇವರ ಮ್ಯಾಗೆ
*********************************************************************************
ಹೇಳ್ಕೊಳ್ಳೋಕ್ ಒಂದ್
ಸಾಹಿತ್ಯ: ಜಿ. ಪಿ. ರಾಜರತ್ನಂ
ಗಾಯನ: ಎಲ್. ಎನ್. ಶಾಸ್ತ್ರಿ
ಹೇಳ್ಕೊಳ್ಳಕ್ ಒಂದ್ ಊರು,
ತಲೆ ಮ್ಯಾಗೆ ಒಂದ್ ಸೂರು,
ಮಲ್ಗಾಕೆ ಭೂಮ್ ತಾಯಿ ಮಂಚ
ಕೈ ಹಿಡ್ದೊಳ್ ಪುಟ್ನಂಜಿ,
ನಗನಗ್ತಾ ಉಪ್ಪ್ ಗಂಜಿ,
ಕೊಟ್ರಾಯಿತು ರತ್ನಂಪ್ರಪಂಚ
ಚಾಂದಿನಿss, ಚಾಂದಿನಿss
ಹೇಳ್ಕೊಳ್ಳಕ್ ಒಂದ್ ಊರು,
ತಲೆ ಮ್ಯಾಗೆ ಒಂದ್ ಸೂರು,
ಮಲ್ಗಾಕೆ ಭೂಮ್ ತಾಯಿ ಮಂಚ
ಕೈ ಹಿಡ್ದೊಳ್ ಪುಟ್ನಂಜಿ,
ನಗನಗ್ತಾ ಉಪ್ಪ್ ಗಂಜಿ,
ಕೊಟ್ರಾಯಿತು ರತ್ನಂಪ್ರಪಂಚ -|೨|
ತಲೆ ಮ್ಯಾಗೆ ಒಂದ್ ಸೂರು,
ಮಲ್ಗಾಕೆ ಭೂಮ್ ತಾಯಿ ಮಂಚ
ಕೈ ಹಿಡ್ದೊಳ್ ಪುಟ್ನಂಜಿ,
ನಗನಗ್ತಾ ಉಪ್ಪ್ ಗಂಜಿ,
ಕೊಟ್ರಾಯಿತು ರತ್ನಂಪ್ರಪಂಚ
ಚಾಂದಿನಿss, ಚಾಂದಿನಿss
ಹೇಳ್ಕೊಳ್ಳಕ್ ಒಂದ್ ಊರು,
ತಲೆ ಮ್ಯಾಗೆ ಒಂದ್ ಸೂರು,
ಮಲ್ಗಾಕೆ ಭೂಮ್ ತಾಯಿ ಮಂಚ
ಕೈ ಹಿಡ್ದೊಳ್ ಪುಟ್ನಂಜಿ,
ನಗನಗ್ತಾ ಉಪ್ಪ್ ಗಂಜಿ,
ಕೊಟ್ರಾಯಿತು ರತ್ನಂಪ್ರಪಂಚ -|೨|
ಏನೋ ಖುಸಿಯಾದಾಗ ಮತ್ ಹೆಚ್ಚಿ ಹೋದಾಗ ಹಂಗೇನೆ ಪ್ರಪಂಚದಂಚ
ತೋಟ್ದಲ್ಲಿ ಹಾರಾಡ್ತಾ ಕನ್ನಡದಲ್ ಪದವಾಡ್ತಾ
ಹಿಗ್ಗೋದು ರತ್ನಂಪ್ರಪಂಚ ಹಿಗ್ಗೋದು ರತ್ನಂಪ್ರಪಂಚ
ಹೇಳ್ಕೊಳ್ಳಕ್ ಒಂದ್ ಊರು, ತಲೆ ಮ್ಯಾಗೆ ಒಂದ್ ಸೂರು,
ಮಲ್ಗಾಕೆ ಭೂಮ್ ತಾಯಿ ಮಂಚ
ಕೈ ಹಿಡ್ದೊಳ್ ಪುಟ್ನಂಜಿ, ನಗನಗ್ತಾ ಉಪ್ಪ್ ಗಂಜಿ,
ಕೊಟ್ರಾಯಿತು ರತ್ನಂಪ್ರಪಂಚ
ಹಗಲೆಲ್ಲ ಬೆವರ್ ಹರಿಸಿ ತಂದಿದ್ದ್ರಲ್ಲಿ ಒಸಿ ಮುರಿಸಿ
ಸಂಜೆಲಿ ಹಿಳಿ ಹೆಂಡ ಕೊಂಚ
ಇತ್ತ ಮೈ ಝುಂ ಅಂದ್ರೆ ವಾಸನೆ ಘಂ ಘಂ ಅಂದ್ರೆ
ತುಂಬ್ ಹೋಯ್ತು ರತ್ನಂಪ್ರಪಂಚ
ತುಂಬ್ ಹೋಯ್ತು ರತ್ನಂಪ್ರಪಂಚ
ಸಂಜೆಲಿ ಹಿಳಿ ಹೆಂಡ ಕೊಂಚ
ಇತ್ತ ಮೈ ಝುಂ ಅಂದ್ರೆ ವಾಸನೆ ಘಂ ಘಂ ಅಂದ್ರೆ
ತುಂಬ್ ಹೋಯ್ತು ರತ್ನಂಪ್ರಪಂಚ
ತುಂಬ್ ಹೋಯ್ತು ರತ್ನಂಪ್ರಪಂಚ
ಹೇಳ್ಕೊಳ್ಳಕ್ ಒಂದ್ ಊರು,
ತಲೆ ಮ್ಯಾಗೆ ಒಂದ್ ಸೂರು,
ಮಲ್ಗಾಕೆ ಭೂಮ್ ತಾಯಿ ಮಂಚ
ಕೈ ಹಿಡ್ದೊಳ್ ಪುಟ್ನಂಜಿ, ನಗನಗ್ತಾ ಉಪ್ಪ್ ಗಂಜಿ,
ಕೊಟ್ರಾಯಿತು ರತ್ನಂಪ್ರಪಂಚ
ಲೂಕ್ ಇಲ್ಲ ಗಾಲ್ ಇಲ್ಲ ನಮಗದ್ರಾಗ್ ಪಾಲಿಲ್ಲ
ನಾವ್ ಕಂಡಿದ್ದ್ ನಾಲ್ಕ್ಅಂಚವಂಚ
ನಮ್ಮಷ್ಟಕ್ ನಾವಾಗಿ ಇದ್ದಿದ್ದ್ರಲ್ ಹಾಯಾಗಿ
ಬಾಳೋದು ರತ್ನಂಪ್ರಪಂಚ ಬಾಳೋದು ರತ್ನಂಪ್ರಪಂಚ
ಹೇಳ್ಕೊಳ್ಳಕ್ ಒಂದ್ ಊರು, ತಲೆ ಮ್ಯಾಗೆ ಒಂದ್ ಸೂರು,
ಮಲ್ಗಾಕೆ ಭೂಮ್ ತಾಯಿ ಮಂಚ
ಕೈ ಹಿಡ್ದೊಳ್ ಪುಟ್ನಂಜಿ, ನಗನಗ್ತಾ ಉಪ್ಪ್ ಗಂಜಿ,
ಕೊಟ್ರಾಯಿತು ರತ್ನಂಪ್ರಪಂಚ
ನಾವ್ ಕಂಡಿದ್ದ್ ನಾಲ್ಕ್ಅಂಚವಂಚ
ನಮ್ಮಷ್ಟಕ್ ನಾವಾಗಿ ಇದ್ದಿದ್ದ್ರಲ್ ಹಾಯಾಗಿ
ಬಾಳೋದು ರತ್ನಂಪ್ರಪಂಚ ಬಾಳೋದು ರತ್ನಂಪ್ರಪಂಚ
ಹೇಳ್ಕೊಳ್ಳಕ್ ಒಂದ್ ಊರು, ತಲೆ ಮ್ಯಾಗೆ ಒಂದ್ ಸೂರು,
ಮಲ್ಗಾಕೆ ಭೂಮ್ ತಾಯಿ ಮಂಚ
ಕೈ ಹಿಡ್ದೊಳ್ ಪುಟ್ನಂಜಿ, ನಗನಗ್ತಾ ಉಪ್ಪ್ ಗಂಜಿ,
ಕೊಟ್ರಾಯಿತು ರತ್ನಂಪ್ರಪಂಚ
ಚಾಂದಿನಿss, ಚಾಂದಿನಿss
ದೇವ್ರಿಂದ್ರೆ ಕೊಡಲಣ್ನ ಕೊಡ್ದಿದ್ದ್ರೆ ಬುಡಲಣ್ಣ
ನಾವೆಲ್ಲ ಅವನೀಗೆ ಬಚ್ಚಾ
ಅವನ್ಹಾಕಿದ್ ತಾಳ್ದಂಗೆ, ಕಣ್ ಮುಚ್ಕೊಂಡ್ ಹೇಳ್ದಂಗೆ
ಕುಣೀಯಾದೆ ರತ್ನಂಪ್ರಪಂಚ
ಕುಣೀಯಾದೆ ರತ್ನಂಪ್ರಪಂಚ
ಹೇಳ್ಕೊಳ್ಳಕ್ ಒಂದ್ ಊರು, ತಲೆ ಮ್ಯಾಗೆ ಒಂದ್ ಸೂರು,
ಮಲ್ಗಾಕೆ ಭೂಮ್ ತಾಯಿ ಮಂಚ
ಕೈ ಹಿಡ್ದೊಳ್ ಪುಟ್ನಂಜಿ, ನಗನಗ್ತಾ ಉಪ್ಪ್ ಗಂಜಿ,
ಕೊಟ್ರಾಯಿತು ರತ್ನಂಪ್ರಪಂಚ
ನಾವೆಲ್ಲ ಅವನೀಗೆ ಬಚ್ಚಾ
ಅವನ್ಹಾಕಿದ್ ತಾಳ್ದಂಗೆ, ಕಣ್ ಮುಚ್ಕೊಂಡ್ ಹೇಳ್ದಂಗೆ
ಕುಣೀಯಾದೆ ರತ್ನಂಪ್ರಪಂಚ
ಕುಣೀಯಾದೆ ರತ್ನಂಪ್ರಪಂಚ
ಹೇಳ್ಕೊಳ್ಳಕ್ ಒಂದ್ ಊರು, ತಲೆ ಮ್ಯಾಗೆ ಒಂದ್ ಸೂರು,
ಮಲ್ಗಾಕೆ ಭೂಮ್ ತಾಯಿ ಮಂಚ
ಕೈ ಹಿಡ್ದೊಳ್ ಪುಟ್ನಂಜಿ, ನಗನಗ್ತಾ ಉಪ್ಪ್ ಗಂಜಿ,
ಕೊಟ್ರಾಯಿತು ರತ್ನಂಪ್ರಪಂಚ
ಹೇಳ್ಕೊಳ್ಳಕ್ ಒಂದ್ ಊರು, ತಲೆ ಮ್ಯಾಗೆ ಒಂದ್ ಸೂರು,
ಮಲ್ಗಾಕೆ ಭೂಮ್ ತಾಯಿ ಮಂಚ
ಕೈ ಹಿಡ್ದೊಳ್ ಪುಟ್ನಂಜಿ, ನಗನಗ್ತಾ ಉಪ್ಪ್ ಗಂಜಿ,
ಕೊಟ್ರಾಯಿತು ರತ್ನಂಪ್ರಪಂಚ
*********************************************************************************
No comments:
Post a Comment