Saturday, October 6, 2018

ಮಿಸ್ಟರ್ ಆಂಡ್ ಮಿಸೆಸ್ ರಾಮಾಚಾರಿ (2014)


ಕಾರ್ಮೋಡ ಸರಿದು

ಮಿಸ್ಟರ್ ಐಂಡ್ ಮಿಸೆಸ್ ರಾಮಾಚಾರಿ (2014)
ನಿರ್ದೇಶನ: ಸಂತೋಷ್ ಆನಂದ್ರಾಮ್ 
ಸಂಗೀತ : ವಿ. ಹರಿಕೃಷ್ಣ 
ಸಾಹಿತ್ಯ : ಗೌಸ್ ಪೀರ್ 
ಗಾಯನ : ರಾಜೇಶ ಕೃಷ್ಣನ್ 
ನಟನೆ: ಯಶ್, ರಾಧಿಕಾ ಪಂಡಿತ್ 


ಕಾರ್ಮೋಡ ಸರಿದು ಬೆಳಕು ಸುರಿದ ಮೇಲು
ಈ ಕಣ್ಣಿನಲ್ಲಿ ಮುಂಚೆ ಇದ್ದ ಮಿಂಚು ಇಲ್ಲ
ಖುಷಿಲೂ ಕೂಡ ಹತಾಶೆ ನಿರಾಳದಲ್ಲೂ ನಿರಾಸೆ
ಇದೆ ತಮಾಷೆ ಗೆದ್ದು ಸೋತಿರುವೆ

ನಾ ಅಳುವ ಮುನ್ನ ಕಣ್ಣೀರು ಜಾರಿತಲ್ಲ
ಈ ಕಂಬನಿಯನು ಒರೆಸು ಕೈಯ್ಯಿ ಜೊತೆಗೆ ಇಲ್ಲ
ಬಿಸಿಲು ನೆತ್ತಿಯ ಸುಡುವಾಗ
ಬಂದಿದೆ ಮಳೆಯ ಶುಭ ಯೋಗ
ಕಂಡೆನು ಅಕ್ಕರೆ ಮಳೆಬಿಲ್ಲ ಸಿಹಿ ವಿಚಾರ

ಒಂದು ತರಹ ಆಗಿದೆ ಬಲಿದಾನ
ಒಂದು ತರಹ ಸಿಕ್ಕಿದೆ ಬಹುಮಾನ
ಮರೆಯುವುದು ಹೇಗೆ ನಿನ್ನ ತುಂಬಾ ಕಠೋರ
ಕಣ್ಣೆರಡು ತುಂಬಿ ಹೋಗಿವೆ
ಖುಷಿಗೊಂದು, ಒಂದು ದುಃಖಕ್ಕೆ
ನಿಶಬ್ಧ ದಲ್ಲೂ ಗಲಾಟೆ ನಿಗೂಢವಾದ ತರಾಟೆ
ಇದೆ ತಮಾಷೆ ಗೆದ್ದು ಸೋತಿರುವೆ

ಕಾರ್ಮೋಡ ಸರಿದು ಬೆಳಕು ಸುರಿದ ಮೇಲು
ಈ ಕಣ್ಣಿನಲ್ಲಿ ಮುಂಚೆ ಇದ್ದ ಮಿಂಚು ಇಲ್ಲ

ಅನುರಾಗದ ಶೋಧನೆ ಅಂದು
ಬದುಕೆನ್ನುವ ಭೋಧನೆ ಇಂದು
ಕಾಲಾ ನಿನ್ನ ಕೈ ಗಡಿಯಾರ ಎಂಥ ವಿಚಿತ್ರ
ಒಂದತರಹ ಹತ್ತಿಯ ಗುಣ ನಿಂದು
ಒಂದತರಹ ಕತ್ತಿಯ ಛಲ ನಂದು
ಇರಿಸು ಮುರಿಸು ಸಹಜ ನೆ ಯಥಾ ಪ್ರಕಾರ
ಹೀಗೆ ಬಂದು ಹಾಗೆ ಹೋಗುವಾ
ಮಂಜಾದೆ ನೀನು ನನಗೆ
ವಿನೋದದಲ್ಲೂ ಅಭಾವ ವಿಭಿನ್ನ ದಲ್ಲೂ ಪ್ರಭಾವ
ಇದೆ ತಮಾಷೆ ಪಡೆದು ಕಳೆದಿರುವೆ

ಕಾರ್ಮೋಡ ಸರಿದು ಬೆಳಕು ಸುರಿದ ಮೇಲು
ಈ ಕಣ್ಣಿನಲ್ಲಿ ಮುಂಚೆ ಇದ್ದ ಮಿಂಚು ಇಲ್ಲ

*********************************************************************************

ಯಾರಲ್ಲಿ ಸೌಂಡು


ಸಾಹಿತ್ಯ: ಸಂತೋಷ್ ಆನಂದ್ರಾಮ್ 

ಗಾಯಕರು: ರಂಜಿತ್ 


ಯಾರಲ್ಲಿ ಸೌಂಡು ಮಾಡೋದು?
ಸುಮ್ನಿರ್ರೀ ಚಾರಿ ಬೈಬೋದು
ಸೈಲೆಂಟಾಗಿದ್ರೆ ಒಳ್ಳೇದೂ
ಯಾರೂ ಕೆಮ್ಮಂಗಿಲ್ಲಾ ಗುರು

ಯಾರಲ್ಲಿ ಲುಕ್ಕು ಕೊಡೋದು?
ಇದನ್ನೇ ಬ್ಯಾಡ ಅನ್ನೋದು
ಸೈಡಲ್ಲಿ ಇದ್ರೆ ಒಳ್ಳೇದೂ
ಅಡ್ಡಾ ಸಿಗಂಗಿಲ್ಲಾ ಗುರು
ರಾಮಾಚಾರಿ......ರಾಮಾಚಾರಿ

ಹಾರ್ಟ್ ಅಂತೂ ಲೋಕಲ್ಲೂ
ರಾಕಿಂಗೂ ಲೇಬಲ್ಲು
ಸ್ಟಾಕೈತೆ ಎಲ್ಲೆಲ್ಲೂ
ಈ ಕಂಟ್ರೀ ಪಿಸ್ತೂಲು
ಸ್ಪೀಡಲ್ಲಿ ಮಿಸೈಲು
ನಿಲ್ಲಲ್ಲ ಇನ್ನೆಲ್ಲೂ

ಈ ಅಂಜದ ಎದೆಯಲಿ ನಂಜೇ ಇಲ್ಲ
ಏಕ್ ಮಾರ್ ದೋ ತುಕುಡಾ
ಅಭಿಮಾನವ ಎಂದೂ ಮರೆಯೋದಿಲ್ಲ
ಕೇರ್ ಆಫ್ ಕನ್ನಡ
ನಾವ್ ನಿಂತ ಕಡೆಯಿಂದಾನೇ ಲೈನು ಶುರು
ಬೆಂಡಾಗೊದಿಲ್ಲ ಕಾಲರ್ ಮೇಲೆ ಗುರು
ನಾವ್ ನಡೆದದ್ದೆ ದಾರಿ, ಹಾಕಿದ್ದೆ ಸ್ಟೆಪ್ಪೂ‌.. ಬ ಬ ಬ ಬ ಬ್ಯಾಂಗ್
ರಾಮಾಚಾರಿ......ರಾಮಾಚಾರಿ

ನುಗ್ಗೋದೆ ಸಿಂಗಲ್ಲು
 ಬೈಬರ್ತೆ ರೆಬೆಲ್ಲೂ
ಕೆಣಕಿದ್ರೆ ಟ್ರಬಲ್ಲು
ರೂಟಂತ್ತೂ ಲೀಗಲ್ಲು
ಕ್ಯಾರೆಕ್ಟರ್ ರಿಯಲ್ಲು
ಸ್ನೇಹಕ್ಕೆ ಸಿಂಬಲ್ಲು
ಈ ರಾಮಾಚಾರಿ ನುಗ್ಗೊ ಕಡೆ
ವಾರ್ ಈಸ್ ಒನ್ ಸೈಡೂ
ಯಾರಂಗೂ ಇಲ್ಲದ ಸಿಂಹ ನಡೆ
ಜನರೇ ನಮ್ ಸೈಡೂ
ನನ್ ಆಟ ಬಲ್ಲೋರಿಲ್ಲಿ ಯಾರೂ ಇಲ್ಲ
ನಾನ್ ಯಾವ ರೂಲ್ಸೂ ಫಾಲೋ ಮಾಡೊದಿಲ್ಲ
ನಾನ್ ನಂಗೇನೆ ಫ್ಯಾನು, ಲೇಟೆಸ್ಟು ಡಾನು.. ಬ ಬ ಬ ಬ ಬ್ಯಾಂಗ್

ರಾಮಾಚಾರಿ....
ರಾಮ ರಾಮ ರಾಮಚಾರಿ
ಯಾರಲ್ಲಿ ಸೌಂಡು ಮಾಡೋದು?

*******************************************************************************

ಉಪವಾಸ ಈ ಕಣ್ಣಿಗೆ

ಸಾಹಿತ್ಯ: ಗೌಸ್ ಪೀರ್
ಗಾಯಕರು: ಸೋನು ನಿಗಮ್, ಶ್ರೇಯಾ ಘೋಷಾಲ್ 


ಉಪವಾಸ ಈ ಕಣ್ಣಿಗೆ ನೀ ಚೂರು ಮರೆಯಾದರೆ
ವನವಾಸ ಕೈಗಳಿಗೆ ಈಗ ಅರೆಘಳಿಗೆ ದೂರ ನೀ ನಿಂತರೆ
ಪ್ರೀತಿ ಎಂದರೆ ಇಂಥ ತೊಂದರೆ ತೀರ ಸಹಜ ಬಿಡು
ನನ್ನಲ್ಲೂ ಹೀಗೆ ಆಗಿದೆ ಏನು ಮಾಡುವುದು
ಎಲ್ಲೆ ಹೋದರು ಎಲ್ಲೆ ಬಂದರು ನಿನ್ನದೇ ಅಮಲು
ವಿರಾಮ ನೀಡುತಿಲ್ಲ ಯಾರಿಗೇಳುವುದು ||ಉಪವಾಸ||

ಸೇರು ನನ್ನ ತೋಳಿಗೆ ಚಿಂತೆ ತೂರಿ ಗಾಳಿಗೆ
ನನ್ನ ನೆರಳಿಗೆ ಈಗ ನಿನ್ನ ನೆರಳು ಅಂಟಿರಬೇಕು
ಕೈಯ್ಯ ಬೆರಳಿಗೆ ಬೇಗ ನಿನ್ನ ಮುಂಗುರುಳು ಸಿಗಬೇಕು
ಪ್ರಣಯದ ಪಯಣವಿದು ನಿನ್ನಿಂದಲೆ ಆರಂಭ
ನಿಂತಲೆ ಕರಗುತ ನಾ ನೀರಾಗೋ ಸಂದರ್ಭ
ನೀ ನನ್ನವಳೆನ್ನುವ ಅಂಶ ಸಾಕು ಹೃದಯಕೆ ಒಣಜಂಭಾ
ಹೇಗೆ ಮೂಡಿತು ಹೇಗೆ ಮಾಗಿತು ಹುಚ್ಚು ಪ್ರೀತಿಯಿದು
ನನ್ನಲ್ಲಿ ನಾನೇ ಇಲ್ಲ ಎಲ್ಲಿ ಹುಡುಕುವುದು
ಮಾತು ಮಾತಿಗು ನಿನ್ನ ಸೆಳೆತವು ಜೀವ ಹಿಂಡಿರಲು
ನಿನ್ನಿಂದ ತುಂಬ ಕಷ್ಟ ದೂರ ಉಳಿಯುವುದು ||ಉಪವಾಸ||

ಒಂಟಿಯಲ್ಲ ನಾ ಎಂದಿಗೂ ಇನ್ನು ಮುಂದೆ ಈ ಬಾಳಲಿ
ತುಂಬಾ ಮುದ್ದು ಮಾಡೋ ಒಂದು ಜೀವ ಈಗ ಸ್ವಂತ
ತಲುಪೀಬಿಟ್ಟೆ ನಾನು ಗಾಳೀಲಿ ತೇಲೋ ಹಂತಾ
ಇದು ಬಹುಜನುಮಗಳ ಅನುಬಂಧವೇ ಸರೀ
ಪ್ರತಿ ಜನುಮಕು ಹೀಗೆ ನೀ ನೀಡು ಹಾಜರಿ
ನವಿರಾದ ಪ್ರೀತಿಸಾಲನು ಹಣೆಯಲಿ ನೀನು ಬಾರಿ
ನೀನು ಇಲ್ಲದೆ ನಾನು ಇರುವುದು ಯಾವ ಸುಖಕಾಗಿ
ಪ್ರೀತಿಸು ಎಂದು ಹೀಗೆ ಲೋಕ ಮರೆತ್ಹೋಗಿ
ಏನೇ ಆಗಲಿ ಏನೇ ಹೋಗಲಿ ನನ್ನ ಹೃದಯವಿದು
ನಿನ್ನದೇ ಇಲ್ಲ ಸಂಶಯ ನಾನು ನಿನಗಾಗಿ ||ಉಪವಾಸ||

*******************************************************************************

ಅಣ್ಣತಮ್ಮ 

ಸಾಹಿತ್ಯ: ಯೋಗರಾಜ್ ಭಟ್ 
ಗಾಯಕರು: ಯಶ್ 


ಯಾರೋ ಯಾರೋ ಯಾರೋ ಯಾರೋ
ಯಾರೋ ಇವನು ಯಾರೋ ಇವನು(೨)
(ಆಲ್ ಅಣ್ತಮ್ಮಾಸ್ ರೆಡಿ)

ಹಂಗೂ ಹಿಂಗೂ ಹೆಂಗೋ ಇದ್ದೆ
ಹಿಂಗಾಗೋದೆ ನೋಡೋ ಅಣ್ತಮ್ಮ ..ಅಣ್ತಮ್ಮ
ಎದೆಯ ಮ್ಯಾಲೆ ಎಳ್ಳು ನೀರು
ಬಿಟ್ಟು ಹೋದ್ಲು ನೋಡೋ ಅಣ್ತಮ್ಮ ...ಅಣ್ತಮ್ಮ
ಬೆಳಗಾಗ್ ಎದ್ದ ಕೂಡ್ಲೆ ಅವಳಿಲ್ಲ ಅನ್ನೊ ನೆನಪು
ರಾತ್ರಿ ಅತ್ತ ಕಣ್ಣು ಒಂದ್ ಬುಟು, ಒಂದು ಕೆಂಪು
ಹೃದಯ ಹೊಡ್ಕೊಂತಿಲ್ಲ......
ಸತ್ ಗಿತ್ತು ಹೋದ್ನಾ ನಾನು.....(ಪ)

ಅವಳ ಫೋಟೋ ಮ್ಯಾಲೆ ಡೈಲಿ ನನ್ನ
ಕಣ್ಣ ನೀರ ಕಲೆಯ ಮಾಲೆ ಅಣ್ತಮ್ಮ
ಉಳಿಯಬೇಕು ಹೆಂಗೆ ನಾವು ಮುತ್ತು ಕೊಟ್ಟ
ಹುಡುಗಿ ಹೋದ ಮ್ಯಾಲೆ ಅಣ್ತಮ್ಮ
ಲವ್ವು ಜಾಸ್ತಿ ..ಆದಾಗಲೆ ನಮ್ಮ್ ಹುಡ್ಗೀರು..ಒಂಟ್ಹೋಯ್ತರೆ
ಕೇಳ್ತು ಕಿವಿಯ ಪಕ್ಕ ಕಿಲ್ ಕಿಲ ನಕ್ಕ ಸದ್ದು
ಕುಂತ್ಕೋಬೇಕು ನಾವು ನಡು ರಾತ್ರಿಯಲ್ಲಿ ಎದ್ದು
ನಗ್ ನಗ್ತ ಅತ್ಬುಡ್ತೀನಿ..ಮೆಂಟಲ್ ಆಗ್ಹೋದ್ನ ನಾನು(ಪ)

(ಆಲಾರೇ ಆಲಾರೇ ಆಲಾರೇ ಆಲಾರೇ
ಆಲಾರೇ ಆಲಾರೇ ಆಲಾರೇ ಆಲೇ)

ಎಲ್ಲೆ ಸೌಂಡು ಬಾಕ್ಸು ಕಂಡ್ರು ಕೇಳುತೈತೆ
ಒಂದು ಪ್ಯಾರಿಸ್ ಸಾಂಗು...ಅಣ್ತಮ್ಮ
ಆಟೋ ಹಿಂದೆ ಬರೆದ ಸಾಲು ಅರ್ಥ ಆಗೋ
ಟೈಮು ಬಂತು ನನ್ಗೂ ...ಅಣ್ತಮ್ಮ
ಸ್ಮೋಕಾಗ್ಹೋತು.. ಲವ್ವು ಸ್ಟೋರಿ
ಸಿಂಗಲ್ ಆದ ರಾಮಾಚಾರಿ
ಫ್ರೆಂಡ್ಸು ಬೈತಾರಪ್ಪೋ ನನ್ ಅಕ್ಕ ಪಕ್ಕ ಕುಂತು
ಕಳ್ಕಂಡ್ವನ ಪೈನು ಪಡ್ಕೊಂಡೋನಿಗೇ ಗೊತ್ತು
ನೋವಲ್ಲೆ ನೆಮ್ಮದಿ ಜಾಸ್ತಿ ..ಹಿಂಗೇ ಇದ್ಬುಡ್ಲ ನಾನು .........

********************************************************************************

ಮಿ. & ಮಿಸೆಸ್ ರಾಮಾಚಾರಿ

ಸಾಹಿತ್ಯ: ಎ. ಪಿ. ಅರ್ಜುನ್ 
ಗಾಯಕರು: ಟಿಪ್ಪು 


ಚೋರಿ ಹಿಂದೆ ಹೊಂಟು ಬಿಟ್ಟ ಲೆಫ್ಟ್ ರೈಟು ಚಾರಿ
ಯಾಕೋ ಏನೋ ಮರೆತುಬಿಟ್ಟ ಅವನ ಮನೆಯ ದಾರಿ
ಬಂಧನಾ ಬಂಧನಾ ಲೇಟೆಸ್ಟು ಬಂಧನಾ
ಕೋಟಬಿಟ್ಟು ಬಾಗಿನಾ ಇಸ್ಕೊಂಡೆ ಹಾರ್ಟ್ನಾ
ಡೇಟ್ ಅದು ಫಿಕ್ಸ್ ಇದೆ ತಿಂಗಳು ಗೊತ್ತಿದೆ
ಬ್ಲೆಸ್ಸಿಂಗ್ ಮಾಡಿಬಿಡ್ರಿ

ಮಿಸ್ಟರ್ ಅಂಡ್ ಮಿಸೆಸ್ ರಾಮಾಚಾರಿ
ಬುಕ್ ಆಗೋಗವರಿ ರಾಮಾಚಾರಿ
ಮಿಸ್ಟರ್ ಅಂಡ್ ಮಿಸೆಸ್ ರಾಮಾಚಾರಿ
ಬುಕ್ ಆಗೋಗವರಿ ರಾಮಾಚಾರಿ

ನೂರಡಿ ಕಟೌಟಿಗೆ ಹಾರ ಬಿದ್ದ ಹಾಗಿದೆ
ಹುಡುಗಿ ನೀನು ಬಂಡ ಮೇಲೆ ಆಯೇ ಆಯೇ
ಸಾರಾಯಿ ಉಪ್ಪಿನಕಾಯಿ ಕಾಂಬಿನೇಷನ್ ಆಗಿದೆ
ಬೆಳಗಿ ನೀನು ಸಿಕ್ಕ ಮೇಲೆ
ಸೈರನ್ ಕೂಗಿದೆ ನನ್ನಾ ಎದೆ ಗೂಡಲಿ
ಸ್ಟೈಲು ಒಂದು ಮೂಡಿದೆ ಕೇಡಿ ನಂಬರ್ ಒನ್ ಫೇಸಲಿ
ಬಂಧನಾ ಬಂಧನಾ ಸ್ವೀಟೆಸ್ಟು ಬಂಧನಾ
ಒಬ್ಬಳನ್ನೇ ಪ್ರೀತಿಸೋ ಹಾನೆಸ್ಟು ಪ್ರೇಮಿ ನಾ
ಜೋಡಿಯು ಜೋರಿದೆ ಜಾತಕ ಮ್ಯಾಚ್ ಇದೆ ಇನ್ನೇನ್ ಹೇಳೋದ್ರಿ
ಮಿಸ್ಟರ್ ಅಂಡ್ ಮಿಸೆಸ್ ರಾಮಾಚಾರಿ
ಬುಕ್ ಆಗೋಗವರಿ ರಾಮಾಚಾರಿ

ಲೈಫ್ ಬಾಯ್ ಎಲ್ಲಿದೆ ಅಲ್ಲಿದೆ ಆರೋಗ್ಯ
ನೀನಸಿಕ್ಕಿದ್ದ ನನ್ನ ಭಾಗ್ಯ
ಫ್ಯಾಮಿಲಿ ಪ್ಲಾನಿಂಗ್ ತುಂಬಾನೇ ಮುಖ್ಯ
ವರುಷಕ್ಕೊಂದು ಪಾಪು ಕೊಡ್ತೀಯಾ
ಡೌರಿ ನಾ ಕೇಳಲ್ಲಾ ದಾರಿ ತಪ್ಪಿ ನಾ ಹೋಗಲ್ಲ
ಫ್ಯೂಚರ್ ನಮ್ಮ ಮಕ್ಳನ್ನ ಇಂಗ್ಲಿಷ್ ಮೀಡಿಯಂಗೆ ಸೇರ್ಸಲ್ಲಾ
ಬಂಧನಾ ಬಂಧನಾ ಲಾಂಗೆಷ್ಟು ಬಂಧನಾ
ಬಿಪಿ ಶುಗರ್ ಬಂದರೂ ಸ್ವೀಟಾಗೆ ಬಾಳೋಣ
ದಿಬ್ಬಣ ಹೊಂಟಿದೆ ವಾಲಗ ಸೌಂಡಿದೆ
ಅಕ್ಷತೆ ಕಾಳ ಹಾಕ್ರಿ
ಮಿಸ್ಟರ್ ಅಂಡ್ ಮಿಸೆಸ್ ರಾಮಾಚಾರಿ
ಬುಕ್ ಆಗೋಗವರಿ ರಾಮಾಚಾರಿ

ಚೋರಿ ಹಿಂದೆ ಹೊಂಟು ಬಿಟ್ಟ ಲೆಫ್ಟ್ ರೈಟು ಚಾರಿ
ಯಾಕೋ ಏನೋ ಮರೆತುಬಿಟ್ಟ ಅವನ ಮನೆಯ ದಾರಿ
ಬಂಧನಾ ಬಂಧನಾ ಲೇಟೆಸ್ಟು ಬಂಧನಾ
ಕೋಟಬಿಟ್ಟು ಬಾಗಿನಾ ಇಸ್ಕೊಂಡೆ ಹಾರ್ಟ್ನಾ
ಡೇಟ್ ಅದು ಫಿಕ್ಸ್ ಇದೆ ತಿಂಗಳು ಗೊತ್ತಿದೆ
ಬ್ಲೆಸ್ಸಿಂಗ್ ಮಾಡಿಬಿಡ್ರಿ

*********************************************************************************

ಏನಪ್ಪಾ ಸಂಗಾತಿ

ಸಾಹಿತ್ಯ: ಗೌಸ್ ಪೀರ್ 
ಗಾಯಕರು: ಟಿಪ್ಪು 


ಏನಪ್ಪಾ ಸಂಗಾತಿ ಕೇಳಿ
ಒಂಚೂರು ಬುದ್ಧಿಯ ಹೇಳಿ
ಲೋಕಾನೇ ಮರ್ತವೇ ನೋಡಿ
ಯಾರನ್ನ ಮಾಡವ್ರ ಮೋಡಿ

ವಿನಯ ಗಿನಯ ಮಂಗಾ ಮಾಯಾ
ಬಿದ್ದ ಮೇಲೆ ಪ್ರೀತಿಗೆ
ಹಗಲು ಇರುಳು ಅರಿವೇ ಇಲ್ಲ
ಹಾಳು ಪ್ರೀತಿ ಜಾತಿಗೆ
ಯು ಆರ್ ಮೈ ಬಾಂಬ್ ಫೈರ್ ಬೇಬಿ
ಯು ಆರ್ ಮೈ ಡಿಜೈರ್ ಬೇಬಿ
ಯು ಆರ್ ಮೈ ಬಾಂಬ್ ಫೈರ್ ಬೇಬಿ
ಯು ಆರ್ ಮೈ ಡಿಜೈರ್ ಬೇಬಿ

ಏನಪ್ಪಾ ಸಂಗಾತಿ ಕೇಳಿ
ಒಂಚೂರು ಬುದ್ಧಿಯ ಹೇಳಿ
ಲೋಕಾನೇ ಮರ್ತವೇ ನೋಡಿ
ಯಾರನ್ನ ಮಾಡವ್ರ ಮೋಡಿ

ಯಾರು ಕೂಡ ಈಗ ಬೇಡ
ಪ್ರೀತಿ ಮುಂದೆ ಎಲ್ಲ ಸಪ್ಪೆ
ಯಾರು ಕೂಡ ಈಗ ಬೇಡ
ಪ್ರೀತಿ ಮುಂದೆ ಎಲ್ಲ ಸಪ್ಪೆ
ಅವಳ ನೋಡೋ ಕೆಲಸದಿಂದ
ಕದಲದ ಇವನ ಕಣ್ಣ ರೆಪ್ಪೆ
ಅಬ್ಬಬ್ಬಾ ಎಂತಾ ಚೆಂಜು
ಬಂತಲ್ಲಾ ಒಂದು ರೇಂಜು
ಕನ್ನಡಿ ಮತ್ತು ಕಲ್ಲು
ಮನಸಾರೆ ಒಂದಾಗಿವೆ

ಇವನು ಸನ್ನು ಅವಳು ಮೂನು
ಇಬ್ರು ಕೂಡ ವೆಲ್ಲು ನೋನು
ಇವನು ಸನ್ನು ಅವಳು ಮೂನು
ಇಬ್ರು ಕೂಡ ವೆಲ್ಲು ನೋನು
ಸಧ್ಯಕ್ಕಿವರೇ ಲೈಲಾ ಮಜನು
ಇವರ ಮೇಲೆ ಊರಾ ಕಣ್ಣು
ಗುದ್ದಾಟದಲ್ಲೂ ಕೂಡ
ಮುದ್ದಾಡುತಾರೆ ನೋಡಿ
ವಿಚಿತ್ರವಾದ ಬಾಂಡು
ಇವರಿಬ್ಬರ ಸೆಂಟ್ರಲ್ಲಿ

ಯು ಆರ್ ಮೈ ಕ್ಯೂಟಿ ನಾಟಿ ಸ್ವೀಟಿ ಬೇಬಿ
ಯು ಆರ್ ಮೈ ಡಾಲಿ ಡ್ಯೂಟಿ ಬ್ಯೂಟಿ ಬೇಬಿ
ಯು ಆರ್ ಮೈ ಕ್ಯೂಟಿ ನಾಟಿ ಸ್ವೀಟಿ ಬೇಬಿ
ಯು ಆರ್ ಮೈ ಡಾಲಿ ಡ್ಯೂಟಿ ಬ್ಯೂಟಿ ಬೇಬಿ



*********************************************************************************

No comments:

Post a Comment