ಚಲನ ಚಿತ್ರ: ಜೋಡಿ ಹಕ್ಕಿ(1997)
ಸಾಹಿತ್ಯ: ವಿ ಮನೋಹರ್
ಗಾಯನ: ಡಾ. ರಾಜ್ ಕುಮಾರ
ನಟನೆ: ಶಿವರಾಜ್ ಕುಮಾರ್, ಚಾರುಲತಾ,
ವಿಜಯಲಕ್ಷ್ಮೀ
ವಿಜಯಲಕ್ಷ್ಮೀ
ಹೇ ಹೇ ಹೇ ಹೇ ಆಆಆಆಆಆ
ಹರ ಹರ ಗಂಗೆ ಹರ ಹರ ಗಂಗೆ
ಕೇಳು ಕೇಳು ಕೇಳು ಕೇಳು
ವಿಧಿ ಬರೆದಂಗೆ ನಡೆದರೆ ಹೆಂಗೆ
ಹೇಳು ಹೇಳು ಹೇಳು ಹೇಳು
ಹರ ಹರ ಗಂಗೆ ಹರ ಹರ ಗಂಗೆ
ಕೇಳು ಕೇಳು ಕೇಳು ಕೇಳು
ವಿಧಿ ಬರೆದಂಗೆ ನಡೆದರೆ ಹೆಂಗೆ
ಹೇಳು ಹೇಳು ಹೇಳು ಹೇಳು
ಹೂವು ಹಾವಾಗೋಯ್ತೊ ಹಾಲು ನಂಜಾಯ್ತೊ
ಹೂವು ಹಾವಾಗೋಯ್ತೊ ಹಾಲು ನಂಜಾಯ್ತೊ ... ೨
ಹೂವು ಹಾವಾಗೋಯ್ತೊ ಹಾಲು ನಂಜಾಯ್ತೊ ... ೨
ಹೇ ಕಂಗಳ ಕೊಟ್ಟೆ ದಿಟ್ಟಿಯ ಕಿತ್ತೆ ಕನಸುಗಳೆಲ್ಲ ಕಪ್ಪಾಯ್ತು
ಗುಂಡಿಗೆ ಕೊಟ್ಟೆ ಪ್ರೀತಿಯ ಕಿತ್ತೆ ಆಸೆಯ ಬಳ್ಳಿ ಸುಟ್ಟೊಯ್ತು
ಚಿನ್ನದ ಸೂಜಿ ಆದ್ರು ಹ್ಯಾಂಗೆ ಕಣ್ಣಿಗೆ ಚುಚ್ಚೊಕಾಗುತ್ತ
ಒಡಲಿನ ಬೆಂಕಿ ಆದ್ರು ಕೂಡ ಮಡಿಲಲ್ಲ್ ಮಡುಗೋಕಾಗುತ್ತ
ಏನೇನು ಕೊಟ್ಟೆ ಶಿವನೇ ಮಾಯ ಬಂಢಾರದವನೆ
ಯಾವ್ದೊ ಜನ್ಮದ ಕೋಪವ ಮರ್ತಿಲ್ಲ ಶಿವ
ಈ ಜನ್ಮಕ್ಕಿಂಗೆ ತೋರ್ಸವ್ನೇ
ಗುಂಡಿಗೆ ಕೊಟ್ಟೆ ಪ್ರೀತಿಯ ಕಿತ್ತೆ ಆಸೆಯ ಬಳ್ಳಿ ಸುಟ್ಟೊಯ್ತು
ಚಿನ್ನದ ಸೂಜಿ ಆದ್ರು ಹ್ಯಾಂಗೆ ಕಣ್ಣಿಗೆ ಚುಚ್ಚೊಕಾಗುತ್ತ

ಏನೇನು ಕೊಟ್ಟೆ ಶಿವನೇ ಮಾಯ ಬಂಢಾರದವನೆ
ಯಾವ್ದೊ ಜನ್ಮದ ಕೋಪವ ಮರ್ತಿಲ್ಲ ಶಿವ
ಈ ಜನ್ಮಕ್ಕಿಂಗೆ ತೋರ್ಸವ್ನೇ
ಹರ ಹರ ಗಂಗೆ ಹರ ಹರ ಗಂಗೆ
ಕೇಳು ಕೇಳು ಕೇಳು ಕೇಳು
ವಿಧಿ ಬರೆದಂಗೆ ನಡೆದರೆ ಹೆಂಗೆ
ಹೇಳು ಹೇಳು ಹೇಳು ಹೇಳು
ಹೇ ರೂಪವ ಕೊಟ್ಟೆ ರೂಪದ ಕೂಡ
ಶಾಪವ ಕೊಟ್ಟೆ ಯಾಕ್ ಹೇಳು
ಚಂದದ ಹೂವು ಸಂಜೆಗೆ ಬಾಡಿ
ಹೋಗೊದ್ ಯಾಕೆ ನೀ ಹೇಳು
ಮುದ್ದಿನ ಮುತ್ತು ಎದೆಯೊಳ್ಗಿಟ್ಟು
ಮಾಡಿದೆ ನಾನು ಜೋಪಾನ
ಅಯ್ಯೊ ವಿಧಿಯೆ ಮುತ್ತೊಡೆದೊಯ್ತು
ಯಾರಿಗೆ ದುಖಃ ಹೇಳೋಣ
ನನ್ನಾಸೆ ಬಳ್ಳಿ ಕುಸುಮಾ ಬೆಂದೋಗಿ ಬೂದಿ ಆಯಿತೆ
ಮನಸಾರೆ ಆತ್ತು ಬಿಡಲೆ ಹ್ಯಾಗಳ್ಳ್ಲಿ
ಶಿವನೆ ಕಣ್ಣೀರೆ ಬತ್ತಿ ಹೋಗೈತೆ
ಹರ ಹರ ಗಂಗೆ ಹರ ಹರ ಗಂಗೆ
ಕೇಳು ಕೇಳು ಕೇಳು ಕೇಳು
ವಿಧಿ ಬರೆದಂಗೆ ನಡೆದರೆ ಹೆಂಗೆ
ಹೇಳು ಹೇಳು ಹೇಳು ಹೇಳು
ಲಾಲಿ ಸುವ್ವಾಲಿ
ಸಾಹಿತ್ಯ: ವಿ ಮನೋಹರ್
ಗಾಯನ: ಎಲ್. ಎನ್. ಶಾಸ್ತ್ರಿ
ಲಾಲಿ ಸುವ್ವಾಲಿ ಹಾಡೆಲ್ಲ ಲಾಲಿ
ನನ್ನ ಚೆಲುವಿಗೆ ಸೊಗಸಾದ ಲಾಲಿ
ಮನಕೆ ಮುಗಿಲಿನ ರಾಜಕುಮಾರಿ
ಮನಕೆ ಮುಗಿಲಿನ ರಾಜಕುಮಾರಿ
ಕನಸಾಗೆ ಬರುವೆ ನಾ ಕೇಳೆ ಚಿಂಗಾರಿ

ಬಾಡದಂಥ ಪ್ರೀತಿಯ ಹೂವು ನೀನು
ನಿನ್ನ ಮನಸಾಗೆ ಎಲ್ಲ ಬರಿ ಜೇನು
ಇನ್ನು ಇದಕಿನ್ನ ದೊಡ್ಡದಲ್ಲ ಏನು
ನನ್ನ ಬಾಳ ಸಂತೋಷವೆಲ್ಲ ನೀನೆ
ನನ್ನ ಹಾಡು ಸಂಗೀತವೆಲ್ಲ ನೀನೆ
ನನ್ನುಸಿರು ಪ್ರಾಣ ಬದುಕು ಎಲ್ಲ ನೀನಮ್ಮ
ನನ್ನಾಸೆ ಕನಸ ಉಳಿಸೊ ಜೀವ ನೀನಮ್ಮ
ನಿದಿರೆಯ ದೇವಿ ಹಾಡ್ಯಾಳೆ ಲಾಲಿ
ಹಾಯಾಗಿ ಮಲಗೆ ಜೋಗುಳ ಕೇಳಿ
ಯಾವ ಜನುಮಾದ ಬಂಧ ನಮ್ಮ ಜೋಡಿ
ನಾನು ನಿನ್ನ ನೀ ನನ್ನ ಜೀವ ನಾಡಿ
ಹೋ.. ಮೇಲೆ ಮುಕ್ಕೋಟಿ ದೈವವೊಮ್ಮೆ ನೋಡಿ
ತುಂಬು ಹಾರೈಸುವರು ಶುಭ ಹಾಡಿ
ಕಣ್ಣ ಮುಂದೆ ಸೌಭಾಗ್ಯ ಅಂದ್ರೆ ನೀನೆ
ಪ್ರೀತಿ ಧಾರೆ ದೇವತೆ ನಂಗೆ ನೀನೆ
ಕೊನೆವರೆಗೂ ಉಳಿಯೊ ಆಸ್ತಿ ಪ್ರೀತಿ ಒಂದೇನೆ
ಅದನೆಂದು ಕಾಯಬೇಕು ನಿತ್ಯ ಹಿಂಗೆನೆ

ನಾನು ನಿನ್ನ ನೀ ನನ್ನ ಜೀವ ನಾಡಿ
ಹೋ.. ಮೇಲೆ ಮುಕ್ಕೋಟಿ ದೈವವೊಮ್ಮೆ ನೋಡಿ
ತುಂಬು ಹಾರೈಸುವರು ಶುಭ ಹಾಡಿ
ಕಣ್ಣ ಮುಂದೆ ಸೌಭಾಗ್ಯ ಅಂದ್ರೆ ನೀನೆ
ಪ್ರೀತಿ ಧಾರೆ ದೇವತೆ ನಂಗೆ ನೀನೆ
ಕೊನೆವರೆಗೂ ಉಳಿಯೊ ಆಸ್ತಿ ಪ್ರೀತಿ ಒಂದೇನೆ
ಅದನೆಂದು ಕಾಯಬೇಕು ನಿತ್ಯ ಹಿಂಗೆನೆ

No comments:
Post a Comment