Sunday, November 11, 2018

ನಾಗರಹೊಳೆ (1977)

ಇಲ್ಲೇ ಸ್ವರ್ಗ ಇಲ್ಲೇ ನರಕ

ಚಲನ ಚಿತ್ರ: ನಾಗರಹೊಳೆ (1977)
ನಿರ್ದೇಶನ: ಎಸ್.ವಿ. ರಾಜೇಂದ್ರ ಸಿಂಗ್ ಬಾಬು 
ಸಂಗೀತ : ಚೆಲ್ಲಾಪಿಳ್ಳ ಸತ್ಯಂ
ಸಾಹಿತ್ಯ : ಚಿ.ಉದಯಶಂಕರ್ 
ಗಾಯನ : ರವಿ 
ನಟನೆ: ವಿಷ್ಣುವರ್ಧನ್, ಭಾರತಿ


ಇಲ್ಲೇ ಸ್ವರ್ಗ ಇಲ್ಲೇ ನರಕ  ಮೇಲೇನಿಲ್ಲ ಸುಳ್ಳು. 
ಹುಟ್ಟು ಸಾವು ಎರಡರ ಮಧ್ಯೆ ಮೂರು ದಿನದ ಬಾಳು.

ಇಲ್ಲೇ ಸ್ವರ್ಗ ಇಲ್ಲೇ ನರಕ ಮೇಲೇನಿಲ್ಲ ಸುಳ್ಳು. 
ಹುಟ್ಟು ಸಾವು ಎರಡರ ಮಧ್ಯೆ ಮೂರು ದಿನದ ಬಾಳು
 ಹೇ.. ಮೂರು ದಿನದ ಬಾಳು.  

ಕಪ್ಪು ಬಿಳುಪು ಬಣ್ಣ ಹೇಗೊ ಹಗಲು ರಾತ್ರಿ ಹಾಗೆ 
ನಗುವು ಅಳುವು ಎರಡು ಉಂಟು ಬೇಡ ಅಂದರೆ ಹೇಗೆ? 
ಬಂದಾಗ ನಗುವೆ ಹೋದಾಗ ಮಾತ್ರ ಕಣ್ಣೀರೇಕೊ ಕಾಣೆ? 
ಕಸಿದುಕೊಳ್ಳುವ ಹಕ್ಕು ಎಂದು ಕೊಟ್ಟೋನ್ಗೇನೇ ತಾನೆ.

ಇಲ್ಲೇ ಸ್ವರ್ಗ ಇಲ್ಲೇ ನರಕ ಮೇಲೇನಿಲ್ಲ ಸುಳ್ಳು. 
ಹುಟ್ಟು ಸಾವು ಎರಡರ ಮಧ್ಯೆ ಮೂರು ದಿನದ ಬಾಳು
ಹೇ.. ಮೂರು ದಿನದ ಬಾಳು.   

ಬಿಸಿಲಿಗೆ ಕರಗೋ ಮಂಜೇನಲ್ಲ ಕಷ್ಟ ನಷ್ಟ ಎಲ್ಲ 
ಎದುರಿಸಬೇಕು ಧೈರ್ಯದಿಂದ ಬೇರೆ ದಾರಿಯಿಲ್ಲ 
ಬೆಟ್ಟ ಕೊರೆದು ದಾರಿ ಮಾಡಿ ನೀರು ನುಗ್ಗೋ ಹಾಗೆ 
ಮುಂದೆ ನುಗ್ಗಿ ಹೋದ್ರೆ ತಾನೆ ದಾರಿ ಕಾಣೋದ್ ನಂಮ್ಗೆ 

ಇಲ್ಲೇ ಸ್ವರ್ಗ ಇಲ್ಲೇ ನರಕ  ಮೇಲೇನಿಲ್ಲ ಸುಳ್ಳು. 
ಹುಟ್ಟು ಸಾವು ಎರಡರ ಮಧ್ಯೆ ಮೂರು ದಿನದ ಬಾಳು
ಹೇ.. ಮೂರು ದಿನದ ಬಾಳು.

*********************************************************************************

ಈ ನೋಟಕೆ


ಸಾಹಿತ್ಯ : ಚಿ. ಉದಯಶಂಕರ್, 
ಗಾಯನ : ವಿಷ್ಣುವರ್ಧನ್, ಭಾರತಿ 


ಈ ನೋಟಕೆ ಮೈ ಮಾಟಕೆ ನಾ ಸೋತೆ ಈ ಸ್ನೇಹಕೆ 
ಬಿಡಲಾರೆ ಬಳಿ ಬಾರೇ ಈ ದೂರ ಇನ್ನೇತಕೆ 
ಈ ನೋಟಕೆ ಸವಿಮಾತಿಗೆ ನಾ ಸೋತೆ 
ಈ ಸ್ನೇಹಕೆ ನಿನಗಾಗಿ ಹೊಸದಾಗಿ ನಾ ತಂದೆ  ಈ ಕಾಣಿಕೆ 

ನಿಜವಾಯ್ತು ನಾ ಕಂಡ ನಿನ್ನಾ ತೋಳಿಂದ ಬಳಸಿದ ನನ್ನ 
ಹೇ ಬಿಡಲಾರೆ ಇನ್ನೆಂದು ನಿನ್ನಾ ನಿನಗಿಂತ ಯಾರಿಲ್ಲ ಚಿನ್ನ 
ಹೊಸದಾದ ಆನಂದ ನಿನ್ನಿಂದ ನಾ ಕಂಡೆನು 

ಈ ನೋಟಕೆ ಮೈ ಮಾಟಕೆ ನಾ ಸೋತೆ ಈ ಸ್ನೇಹಕೆ 

ಎಲ್ಲಿಂದಲೋ ನೀನು ಬಂದೆ ಅನುರಾಗ ತಾನೇನು ತಂದೆ 
ನನಗಾಗಿ ಏನೇನು ತಂದೆ ನಿನ್ನಲ್ಲಿ ನೂರಾಸೆ ತಂದಿ 
ಹೇ.. ನನ್ನನ್ನೇ ನಾ ಮರೆತು ನಿನ್ನಲ್ಲಿ ಒಂದಾದನೇ 

ಈ ನೋಟಕೆ ಮೈ ಮಾಟಕೆ ನಾ ಸೋತೆ ಈ ಸ್ನೇಹಕೆ 
ಬಿಡಲಾರೆ ಬಳಿ ಬಾರೇ ಈ ದೂರ ಇನ್ನೇತಕೆ 
ಈ ನೋಟಕೆ ಸವಿಮಾತಿಗೆ ನಾ ಸೋತೆ 
ಈ ಸ್ನೇಹಕೆ ನಿನಗಾಗಿ ಹೊಸದಾಗಿ ನಾ ತಂದೆ  ಈ ಕಾಣಿಕೆ

*********************************************************************************

No comments:

Post a Comment