Sunday, November 11, 2018

ಅಪರಿಚಿತ (1978)


ಈ ನಾಡ ಅಂದ

ಚಲನ ಚಿತ್ರ: ಅಪರಿಚಿತ (1978)
ನಿರ್ದೇಶನ:  ಕಾಶೀನಾಥ್ 
ಸಾಹಿತ್ಯ: ಪಿ. ರಾಮದಾಸ್ ನಾಯ್ಡು 
ಸಂಗೀತ: ಎಲ್.ವೈದ್ಯನಾಥನ್ 
ಗಾಯಕರು: ಎಸ್.ಪಿ. ಬಾಲಸುಬ್ರಹ್ಮಣ್ಯಂ 
ನಟನೆ: ಸುರೇಶ್ ಹೆಬ್ಳಿಕರ್, ಶೋಭಾ, ವಾಸುದೇವ್ ರಾವ್


ಈ ನಾಡ ಅಂದ ಈ ತಾಣ ಚಂದ
ಈ ಸೊಬಗ ಅಂದ ಈ ನೋಟ ಚಂದ
ಈ ಬೆಡಗು ಬಿನ್ನಾಣ ಈ ಸುಗಸು ವೈಯಾರ
ಉತ್ಸಾಹ ಉಲ್ಲಾಸ ಚೈತನ್ಯ ಆನಂದ

ಹರಿಯುವ ಝರಿಗಳ ಧಾರೆಯ ದನಿ ಜುಳುಜುಳು
ಕಲರವ ಗುಂಪಿನ ಇಂಪಿನ ದನಿ ಕಲಕಲ
ಇದೇ ಸ್ವರ್ಗ ಸ್ವರ್ಗ ಸ್ವರ್ಗ
ಈ ಬೆಡಗು ಬಿನ್ನಾಣ ಈ ಸೊಗಸು ವೈಯಾರ
ಉತ್ಸಾಹ ಉಲ್ಲಾಸ ಚೈತನ್ಯ ಆನಂದ

ಈ ನಾಡ ಅಂದ ಈ ತಾಣ ಚಂದ
ಈ ಸೊಬಗ ಅಂದ ಈ ನೋಟ ಚಂದ

ಓ ಚೈತ್ರದ ಬೆಡಗು ಕೋಗಿಲೆ ಕಂಠದ ರಾಗದ ಸುಧೆಯು ಆಹಾ
ಹೇ ಸಂಚಿನ ಸುಳಿಯ ಮೋಹಕ ಬಲೆಯ ಎದುರಲಿ ಗೆಲುವನು ನೀ
ನೀಡು ನೀಡು ನೀಡು
ಈ ಬೆಡಗು ಬಿನ್ನಾಣ ಈ ಸೊಗಸು ವೈಯಾರ
ಉತ್ಸಾಹ ಉಲ್ಲಾಸ ಚೈತನ್ಯ ಆನಂದ

ಈ ನಾಡ ಅಂದ ಈ ತಾಣ ಚಂದ
ಈ ಸೊಬಗ ಅಂದ ಈ ನೋಟ ಚಂದ

*********************************************************************************

ಸವಿನೆನಪುಗಳು ಬೇಕು

ಸಾಹಿತ್ಯ: ರಾಮದಾಸ ನಾಯ್ಡು  
ಗಾಯಕರು : ವಾಣಿ ಜಯರಾಂ


ಸವಿನೆನಪುಗಳು ಬೇಕು ಸವಿಯಲೀ ಬದುಕು
ಕಹಿನೆನಪು ಸಾಕೊಂದು ಮಾಸಲೀ ಬದುಕು
ಬೆಂಬಿಡದ ಆ ನೆನಪು ಮರುಕಳಿಸಿ ದಿನವೆಲ್ಲ
ಕಾಡುತಿದೆ ಮನವ
ಸವಿನೆನಪುಗಳು ಬೇಕು ಸವಿಯಲೀ ಬದುಕು

ಪ್ರಿಯತಮನ ಒಲವಿಂದ ಕನಸುಗಳು ಮೂಡಿ
ಇನಿಯನ ಎದೆಗೊರಗಿ ಆಸರೆಯ ಬೇಡಿ
ಸರಸ ಸವಿಯ ಬಯಸಿದೆನು ನಾನು
ವಿರಹ ವಿಫಲ ಫಲಿಸಿದವು ನನಗೆ
ಇನಿಯನ ಎದೆ ಬಡಿತ ಗುಂಡಿನ ದನಿಗಿರಿದು
ಮಾಸುತಿದೆ ಕನಸು

ಸವಿನೆನಪುಗಳು ಬೇಕು ಸವಿಯಲೀ ಬದುಕು

ಬೀಸುತಿಹ ತಂಗಾಳಿ ಬಿಸಿಯಾಗಿ ಕಾಡಿ
ನೆನಪಿನ ಭೀತಿಯಲಿ ನಾ ಬಂಧಿಯಾಗಿ
ಮನಸು ಹೃದಯ ನೊಂದು ನೋವಾಗಿದೆ
ಒಲವು ನಲಿವು ಮೂಡಿ ಮಸುಕಾಗಿದೆ
ಅರಳುವ ಹೂವೊಂದು ಕಮರುವ ಭಯದಲೀ
ಸಾಗುತಿದೆ ಬದುಕು

ಸವಿನೆನಪುಗಳು ಬೇಕು ಸವಿಯಲೀ ಬದುಕು

*********************************************************************************

No comments:

Post a Comment