Sunday, November 11, 2018

ಅಣ್ಣಾವ್ರು (2003)


ಕನ್ನಡಕ್ಕಾಗಿ ಜನನ

ಚಲನ ಚಿತ್ರ: ಅಣ್ಣಾವ್ರು (2003)
ನಿರ್ದೇಶನ: ಓಂ ಪ್ರಕಾಶ್ ರಾವ್  ಸಂಗೀತ: ರಾಜೇಶ್ ರಾಮನಾಥ್ 
ಸಾಹಿತ್ಯ : ಕೆ. ಕಲ್ಯಾಣ್  
ಗಾಯನ : ಎಸ್.ಪಿ.ಬಾಲಸುಬ್ರಹ್ಮಣ್ಯಂ & ಸಂಗಡಿಗರು 
ನಟನೆ: ಅಂಬರೀಷ್, ದರ್ಶನ್, ಕನ್ನಿಕಾ, ಸುಹಾಸಿನಿ 


ಕನ್ನಡಕ್ಕಾಗಿ ಜನನ ಕನ್ನಡಕ್ಕಾಗಿ ಮರಣ
ಕನ್ನಡತನಕೆ ನಮ್ಮ ಉಸಿರೇ ಚಿರಋಣಿ
ಮುತ್ತಂತಿರೋ  ಈ ಮಣ್ಣಲ್ಲಿಯೇ
ನಿಮ್ಮ ಮಗನಾಗಿ ಹುಟ್ಟುವೇ ನಾ ಪ್ರತಿ ಜನ್ಮ.... ಪ್ರತಿ ಜನ್ಮ
ಕನ್ನಡಕ್ಕಾಗಿ ಜನನ ಕನ್ನಡಕ್ಕಾಗಿ ಮರಣ
ಕನ್ನಡತನಕೆ ನಮ್ಮ ಉಸಿರೇ ಚಿರಋಣಿ

ಗಂಡು : ಸ್ನೇಹವಿದೇ ಬಂಧವಿದೆ ನಾವಾಡುವ ಮಾತೊಳಗೆ
            ತ್ಯಾಗವಿದೆ ತಾಳ್ಮೆ ಇದೆ ಈ ಮಣ್ಣ ಮಡಿಲೊಳಗೇ
            ಕೋಟ್ಯಾನು ಕೋಟಿ ಹೃದಯವ ಮೀಟಿ ಅರಳಲಿ ಕರುನಾಡು
            ಈ ನಾಡು ಈ ನುಡಿಗೆ ಜೀವ ಪಣವಿಡುವೇ
           ಕಾವೇರಿ ಎದೆಯನ್ನು ಕಾವು ಆರಿಸುವೆ
ಕೊರಸ್ :  ಅಣ್ಣಾ ಕಣೋ ನೀ ಅಣ್ಣ ಕಣೋ ನಿನ್ನ ನೆರಳಲಿ ನಾವೂ ಕಣೋ
                ಮರೆಯದಿರೂ.. ಮರೆಯದಿರೂ

ಗಂಡು : ಕನ್ನಡಕ್ಕಾಗಿ ಜನನ ಕನ್ನಡಕ್ಕಾಗಿ ಮರಣ
           ಕನ್ನಡತನಕೆ ನಮ್ಮ ಉಸಿರೇ ಚಿರಋಣಿ

ಗಂಡು : ಈ ನಾಡ ಬಾವುಟಕೆ ನೀನೊಂದು ಗುರುತಾಗು
            ಬಸವಳಿದ ಭೂಪಟಕೆ ಕಾಯುವ ದೊರೆಯಾಗು
           ಏಳೇಳು ಜನ್ಮಕೆ ಭರವಸೆಯೇ ಏಳು ಜ್ಞಾನಪೀಠಗಳು
          ಕೈ ತುತ್ತು ಕೊಟ್ಟವರ ಕಂಕಣವಾಗ್ತಿನಿ
          ಕನ್ನಡತಿ ಮಾನಕ್ಕೆ ಪ್ರಾಣ ಕೊಡ್ತೀನಿ
ಕೋರಸ್ : ಅಣ್ಣಾ ಕಣೋ ನೀ ಅಣ್ಣ ಕಣೋ ನೀ ಕೈ ಇಟ್ರೇ ಸೋಲಿಲ್ಲ
               ನಿಮ್ಮ ಉಸಿರೇ ನಮ್ಮ ಉಸಿರೂ

ಗಂಡು :    ಕನ್ನಡಕ್ಕಾಗಿ ಜನನ ಕನ್ನಡಕ್ಕಾಗಿ ಮರಣ
               ಕನ್ನಡತನಕೆ ನಮ್ಮ ಉಸಿರೇ ಚಿರಋಣಿ
               ಮುತ್ತಂತಿರೋ  ಈ ಮಣ್ಣಲ್ಲಿಯೇ
               ನಿಮ್ಮ ಮಗನಾಗಿ ಹುಟ್ಟುವೇ ನಾ
               ಪ್ರತಿ ಜನ್ಮ.... ಪ್ರತಿ ಜನ್ಮ
               ಕನ್ನಡಕ್ಕಾಗಿ ಜನನ ಕನ್ನಡಕ್ಕಾಗಿ ಮರಣ
               ಕನ್ನಡತನಕೆ ನಮ್ಮ ಉಸಿರೇ ಚಿರಋಣಿ

*********************************************************************************

No comments:

Post a Comment