Sunday, November 11, 2018

ಕಾಮನಬಿಲ್ಲು (1983)

ಬಾ ಮುತ್ತು ಕೊಡುವೆ

ಚಲನ ಚಿತ್ರ: ಕಾಮನಬಿಲ್ಲು (1983)
ನಿರ್ದೇಶನ: ಚಿ. ದತ್ತರಾಜ್ 
ಸಾಹಿತ್ಯ : ಚಿ.ಉದಯಶಂಕರ್ 
ಸಂಗೀತ : ಉಪೇಂದ್ರ ಕುಮಾರ್ 
ಗಾಯನ : ಡಾ.ರಾಜಕುಮಾರ್
ನಟನೆ: ರಾಜ್ ಕುಮಾರ್, ಅನಂತ್ ನಾಗ್, ಸರಿತಾ

ಬಾ ಮುತ್ತು ಕೊಡುವೆ ಕoದನೆ ನನ್ನ ಮುದ್ದು ರಾಜ
ಬಾ ಮುತ್ತು ಕೊಡುವೆ ಕoದನೆ ನನ್ನ ಮುದ್ದು ರಾಜ
ನಿನ್ನ ಹವಳದಂಥ ತುಟಿಗೆ ಇಂದು ಪ್ ಎಂದು
ಬಾ ಮುತ್ತು ಕೊಡುವೆ ಕoದನೆ ನನ್ನ ಮುದ್ದು ರಾಜ
ಬಾ ಮುತ್ತು ಕೊಡುವೆ ಕoದನೆ ನನ್ನ ಮುದ್ದು ರಾಜ

ನಿನ್ನ ಮೊಗವನ್ನು ಕಂಡಾಗ ನಾಚಿ
ಶಶಿ ಮೋಡದಲಿ ಮರೆಯಾದನು
ನಿನ್ನ ಕಂಡಾಗ ಬೆರಗಾಗಿ
ಕೃಷ್ಣ ಗುಡಿಯಲ್ಲಿ ಶಿಲೆಯಾದನು

ನೀನಾಡೋ ತೊದಲು ನುಡಿ ಅರಗಿಣಿಯ ಮಾತಂತೆ
ನೀನಾಡೋ ತೊದಲು ನುಡಿ ಅರಗಿಣಿಯ ಮಾತಂತೆ
ಸವಿಜೇನ ಹನಿಯಂತೆ ನನ್ನ ಮುದ್ದು ರಾಜ
ಬಾ ಮುತ್ತು ಕೊಡುವೆ ಕoದನೆ ನನ್ನ ಮುದ್ದು ರಾಜ
ಬಾ ಮುತ್ತು ಕೊಡುವೆ ಕoದನೆ ನನ್ನ ಮುದ್ದು ರಾಜ

ನಿನ್ನ ಹವಳದಂಥ ತುಟಿಗೆ ಇಂದು
ಬಾ ಮುತ್ತು ಕೊಡುವೆ ಕoದನೆ ನನ್ನ ಮುದ್ದು ರಾಜ
ಬಾ ಮುತ್ತು ಕೊಡುವೆ ಕoದನೆ ನನ್ನ ಮುದ್ದು ರಾಜ

ನಕ್ಕು ನಲಿವಾಗ ಬೆಳದಿಂಗಳಂತೆ
ನೀನು ಅತ್ತಾಗ ಸಂಗೀತವೂ
ನನ್ನ ಬಂಗಾರದ ಬೊಂಬೆಯಂತೆ
ಕಂದ ಈ ಮನೆಗೆ ನೀ ಪ್ರಾಣವೂ
ನಿನ್ನನ್ನು ಬಣ್ಣಿಸಲು ನನ್ನಲ್ಲಿ ಮಾತಿಲ್ಲ
ನಿನ್ನನ್ನು ಬಣ್ಣಿಸಲು ನನ್ನಲ್ಲಿ ಮಾತಿಲ್ಲ
ನೀ ನನ್ನ ಉಸಿರಂತೆ ನನ್ನ ಮುದ್ದು ರಾಜ
ಬಾ ಮುತ್ತು ಕೊಡುವೆ ಕoದನೆ ನನ್ನ ಮುದ್ದು ರಾಜ
ಬಾ ಮುತ್ತು ಕೊಡುವೆ ಕoದನೆ ನನ್ನ ಮುದ್ದು ರಾಜ

ನಿನ್ನ ಹವಳದಂಥ ತುಟಿಗೆ ಇಂದು
ಬಾ ಮುತ್ತು ಕೊಡುವೆ ಕoದನೆ ನನ್ನ ಮುದ್ದು ರಾಜ
ಬಾ ಮುತ್ತು ಕೊಡುವೆ ಕoದನೆ ನನ್ನ ಮುದ್ದು ರಾಜ
ಚoದಮಾಮನ್ ನೋಡ್ದಾ ಅಲ್ಲಿ ಚoದಮಾಮನ್ನ
ಹಾಲ್ ಕುಡಿತ್ಯಾ ? ಬೆಣ್ಣೆ ತಿನ್ನಿಸ್ಲಾ ?
ಬೇಡಾ ಅoತೀಯಾ ?
ಏನಪ್ಪಾ ಮಾಡ್ಲಿ ನಾನ್ ಈವಾಗ ?

ಬಾ ಮುತ್ತು ಕೊಡುವೆ ಕoದನೆ ನನ್ನ ಮುದ್ದು ರಾಜ
ಬಾ ಮುತ್ತು ಕೊಡುವೆ ಕoದನೆ ನನ್ನ ಮುದ್ದು ರಾಜ
ಬಾ ಮುತ್ತು ಕೊಡುವೆ ಕoದನೆ ನನ್ನ ಮುದ್ದು ರಾಜ
ಬಾ ಮುತ್ತು ಕೊಡುವೆ ಕoದನೆ ನನ್ನ ಮುದ್ದು ರಾಜ
ಬಾ ....ಬಾ...ಬಾ...

*********************************************************************************

ಇಂದು ಆನಂದ

ಸಾಹಿತ್ಯ: ಚಿ.ಉದಯಶಂಕರ್ 
ಗಾಯನ: ಡಾ| ರಾಜ್ ಕುಮಾರ್ ಮತ್ತು ವಾಣಿ ಜಯರಾಂ

ಗಂಡು: ಇಂದು ಆನಂದ ನಾ ತಾಳಲಾರೆ ಚಿನ್ನ ಮಾತಲ್ಲಿ ನಾ ಹೇಳಲಾರೆ
           ನನ್ನ ಕುಣಿಸಲು ಬಯಕೆಗಳು ಕಂಡೆ ಹೊಸ ಹೊಸ ಕನಸುಗಳು
           ನನ್ನ ಕುಣಿಸಲು ಬಯಕೆಗಳು ಕಂಡೆ ಹೊಸ ಹೊಸ ಕನಸುಗಳು
           ನೀನೆಂದೆಂದು ನನ್ನವಳೆss
ಹೆಣ್ಣು: ಇಂದು ಆನಂದ ನಾ ತಾಳಲಾರೆ ನಲ್ಲ ಮಾತಲ್ಲಿ ನಾ ಹೇಳಲಾರೆ
         ನನ್ನ ಕುಣಿಸಲು ಬಯಕೆಗಳು ಕಂಡೆ ಹೊಸ ಹೊಸ ಕನಸುಗಳು
         ನನ್ನ ಕುಣಿಸಲು ಬಯಕೆಗಳು ಕಂಡೆ ಹೊಸ ಹೊಸ ಕನಸುಗಳು
         ನೀನೆಂದೆಂದು ನನ್ನವನೆss
ಗಂಡು: ಬಳಸುತಿದೆ ಲತೆ ಬಳಸುತಿದೆ ಆಸರೆ ಬೇಕೆಂದು ಮರವನ್ನು
           ನಮ್ಮಂತೆ ಅನುರಾಗದಿss
ಹೆಣ್ಣು: ನಲಿಯುತಿದೆ ಹೊಸ ಹೂಗಳಲಿ ಜೇನನು ಹೀರುತ್ತ ದುಂಬಿಗಳು
          ನಮ್ಮಂತೆ ಉಲ್ಲಾಸದಿss
ಗಂಡು: ನೋಡು ಈ ಸಂಜೆಯಲ್ಲಿ, ಬೀಸೋ ತಂಪಾದ ಗಾಳಿ
           ಬಂದು ಸೂಯ್ ಎಂದು ಹಾಡಿ, ನನ್ನ ಬಳಿ ಹೇಳಿದೆ
           ನೀನೆಂದೆಂದು ನನ್ನವಳೆss
ಹೆಣ್ಣು: ಇಂದು ಆನಂದ ನಾ ತಾಳಲಾರೆ ನಲ್ಲ ಮಾತಲ್ಲಿ ನಾ ಹೇಳಲಾರೆ
ಗಂಡು: ನನ್ನ ಕುಣಿಸಲು ಬಯಕೆಗಳು ಕಂಡೆ ಹೊಸ ಹೊಸ ಕನಸುಗಳು
            ನನ್ನ ಕುಣಿಸಲು ಬಯಕೆಗಳು ಕಂಡೆ ಹೊಸ ಹೊಸ ಕನಸುಗಳು
            ನೀನೆಂದೆಂದು ನನ್ನವಳೆss
ಹೆಣ್ಣು: ಹರಿಯುತಿದೆ ನದಿ ಹರಿಯುತಿದೆ ಸಾಗರ ಎಲ್ಲೆಂದು ಹುಡುಕುತಿದೆ
          ನಮ್ಮಂತೆ ಒಂದಾಗಲು
ಗಂಡು: ಕರೆಯುತಿದೆ ಎಲೆ ಮರೆಯಲ್ಲಿ ಕೋಗಿಲೆಯೊಂದು ಹಾಡುತಿದೆ
          ಸಂಗಾತಿಯ ಸೇರಲು
ಹೆಣ್ಣು: ನೋಡು ಬಾನಂಚಿನಲ್ಲಿ, ಸಂಜೆ ರಂಗನ್ನು ಚೆಲ್ಲಿ
          ನಮಗೆ ಶುಭವನ್ನು ಕೋರಿ, ನನ್ನ ಬಳಿ ಹೇಳಿದೆ
          ನೀನೆಂದೆಂದು ನನ್ನವನೇss
ಗಂಡು: ಇಂದು ಆನಂದ ನಾ ತಾಳಲಾರೆ ಚಿನ್ನ ಮಾತಲ್ಲಿ ನಾ ಹೇಳಲಾರೆ
           ನನ್ನ ಕುಣಿಸಲು ಬಯಕೆಗಳು ಕಂಡೆ ಹೊಸ ಹೊಸ ಕನಸುಗಳು
           ನನ್ನ ಕುಣಿಸಲು ಬಯಕೆಗಳು ಕಂಡೆ ಹೊಸ ಹೊಸ ಕನಸುಗಳು
           ನೀನೆಂದೆಂದು ನನ್ನವಳೆss
ಹೆಣ್ಣು: ಇಂದು ಆನಂದ ನಾ ತಾಳಲಾರೆ ನಲ್ಲ ಮಾತಲ್ಲಿ ನಾ ಹೇಳಲಾರೆ
ಇಬ್ಬರು: ನನ್ನ ಕುಣಿಸಲು ಬಯಕೆಗಳು ಕಂಡೆ ಹೊಸ ಹೊಸ ಕನಸುಗಳು
            ನನ್ನ ಕುಣಿಸಲು ಬಯಕೆಗಳು ಕಂಡೆ ಹೊಸ ಹೊಸ ಕನಸುಗಳು
ಹೆಣ್ಣು: ನೀನೆಂದೆಂದು ನನ್ನವನೆss
ಗಂಡು: ನೀನೆಂದೆದು ನನ್ನವಳೆss

*********************************************************************************

ಕಣ್ಣು ಕಣ್ಣು ಕಲೆತಾಗ

ಸಾಹಿತ್ಯ : ಚಿ.ಉದಯಶಂಕರ್ 
ಗಾಯನ : ಡಾ.ರಾಜಕುಮಾರ್ ಮತ್ತು ವಾಣಿಜಯರಾಮ್

ಡಾ.ರಾಜ : ಕಣ್ಣು ಕಣ್ಣು ಕಲೆತಾಗ ಕಣ್ಣು ಕಣ್ಣು ಕಲೆತಾಗ
                ಮನವು ಉಯ್ಯಾಲೆಯಾಗಿದೆ ತೂಗಿ
                ಹೃದಯ ಬಿಡಲಾರೆ ಎಂದಿದೆ ಕೂಗಿ
ವಾಣಿ: ಕಣ್ಣು ಕಣ್ಣು ಕಲೆತಾಗ ಮನವು ಉಯ್ಯಾಲೆಯಾಗಿದೆ ತೂಗಿ
           ಹೃದಯ ಬಿಡಲಾರೆ ಎಂದಿದೆ ಕೂಗಿ
ವಾಣಿ: ಹೊಸ ಸುಖ ಕಾಣುತಿದೆ ಹೊಸ ಕನಸಾಗುತಿದೆ
           ಹೊಸ ಬಯಕೆಯು ಮೂಡುತಿದೆ
ಡಾ.ರಾಜ : ಹೊಸ ಹೊಸ ಭಾವನೆ ಹೊಸ ಹೊಸ ಕಲ್ಪನೆ
                ಹೊಸ ಲೋಕಕೆ ಸೆಳೆಯುತಿದೆ
ವಾಣಿ: ಆಹಾ ಏನೋ ಹೇಳುವಾಸೆ ಆಹಾ ಏನೋ ಕೇಳುವಾಸೆ ನಾಚಿಕೆ ತಡೆಯುತಿದೆ
         ಆಹಾ ಏನೋ ಹೇಳುವಾಸೆ ಆಹಾ ಏನೋ ಕೇಳುವಾಸೆ ನಾಚಿಕೆ ತಡೆಯುತಿದೆ
ಡಾ.ರಾಜ : ಕಣ್ಣು ಕಣ್ಣು ಕಲೆತಾಗ ಮನವು ಉಯ್ಯಾಲೆಯಾಗಿದೆ ತೂಗಿ
ವಾಣಿ: ಹೃದಯ ಬಿಡಲಾರೆ ಎಂದಿದೆ ಕೂಗಿ
ಡಾ.ರಾಜ : ಮೈನವಿರೇಳುತಿದೆ ತನು ಹೂವಾಗುತಿದೆ
               ಮನ ಕವಿತೆಯ ಹಾಡುತಿದೆ
ವಾಣಿ: ನಿನ ಮನ ಹಾಡಿರುವ ಸವಿ ನುಡಿ ಸಾಲುಗಳ
          ಈ ಕಂಗಳು ಹೇಳುತಿವೆ
ಡಾ.ರಾಜ : ಈ ಮಾತು ಎಂಥಾ ಚೆನ್ನ ಈ ನೋಟ ಎಂಥಾ ಚೆನ್ನ
                ಈ ಮಾತು ಎಂಥಾ ಚೆನ್ನ ಈ ನೋಟ ಎಂಥಾ ಚೆನ್ನ
                ನಿನ್ನ ಪ್ರೇಮಕೆ ನಾ ಸೋತೆ
ವಾಣಿ: ಕಣ್ಣು ಕಣ್ಣು ಕಲೆತಾಗ ಮನವು ಉಯ್ಯಾಲೆಯಾಗಿದೆ ತೂಗಿ
ಡಾ.ರಾಜ : ಹೃದಯ ಬಿಡಲಾರೆ ಎಂದಿದೆ ಕೂಗಿ
ಇಬ್ಬರೂ: ಕಣ್ಣು ಕಣ್ಣು ಕಲೆತಾಗ ಮನವು ಉಯ್ಯಾಲೆಯಾಗಿದೆ ತೂಗಿ
             ಹೃದಯ ಬಿಡಲಾರೆ ಎಂದಿದೆ ಕೂಗಿ
*********************************************************************************

ನೀನಾಡದಾ ಮಾತು

ಸಾಹಿತ್ಯ : ಚಿ.ಉದಯಶಂಕರ್ 
ಗಾಯನ : ಎಸ್.ಪಿ.ಬಿ  ಹಾಗೂ ಸುಲೋಚನಾ

ಎಸ್.ಪಿ.ಬಾಲ: ನೀನಾಡದಾ ಮಾತು ಮಾತಲ್ಲ ನೀನಾಡದಾ ಹಾಡು ಹಾಡಲ್ಲ
                     ನೀನಿಲ್ಲದಾ ಮನೆ ಮನೆಯಲ್ಲ ನೀನಿಲ್ಲದೇ ನನಗೆ ಬಾಳಿಲ್ಲ
ಸುಲೋಚನಾ: ನೀನಾಡದಾ ಮಾತು ಮಾತಲ್ಲ ನೀನಾಡದಾ ಹಾಡು ಹಾಡಲ್ಲ
                     ನೀನಿಲ್ಲದಾ ಮನೆ ಮನೆಯಲ್ಲ ನೀನಿಲ್ಲದೇ ನನಗೆ ಬಾಳಿಲ್ಲ
ಎಸ್.ಪಿ.ಬಾಲ: ನಲ್ಲೆ ನೀನು ಮುಡಿಯದ ಹೂವಲ್ಲಿ ಅಂದವಿಲ್ಲ
                     ನಲ್ಲೆ ನೀನು ಮುಡಿಯದ ಹೂವಲ್ಲಿ ಅಂದವಿಲ್ಲ
                     ಚೆಲುವೆ ನೀನು ಸವಿಯದ ಹಣ್ಣಲ್ಲಿ ಸಿಹಿಯು ಇಲ್ಲ
ಸುಲೋಚನಾ: ನಿನ್ನಂಥ ಮಾತುಗಾರನ ಇನ್ನೆಲ್ಲೂ ನಾನು ಕಾಣೆನು ಇನಿಯ ಸೋತೆನು
ಎಸ್.ಪಿ.ಬಾಲ: ನೀನಾಡದಾ ಮಾತು ಮಾತಲ್ಲ ನೀನಾಡದಾ ಹಾಡು ಹಾಡಲ್ಲ
ಸುಲೋಚನಾ: ನೀನಿಲ್ಲದಾ ಮನೆ ಮನೆಯಲ್ಲ ನೀನಿಲ್ಲದೇ ನನಗೆ ಬಾಳಿಲ್ಲ
ಸುಲೋಚನಾ: ನಲ್ಲ ನಿನ್ನ ಕಾಣದ ದಿನವೆಲ್ಲ ಶಾಂತಿಯಿಲ್ಲ
                     ನಲ್ಲ ನಿನ್ನ ಕಾಣದ ದಿನವೆಲ್ಲ ಶಾಂತಿಯಿಲ್ಲ
                     ಚೆಲುವ ನಿನ್ನ ಸೇರದ ಇರುಳಲ್ಲಿ ಸೌಖ್ಯವಿಲ್ಲ
ಎಸ್.ಪಿ.ಬಾಲ: ಮುದ್ದಾಗಿ ಮಾತನಾಡುತ ಮಾತಲ್ಲಿ ನಿನ್ನ ಗೆಲ್ಲುತ ಸರಸ ತುಂಬಿದೆ
ಸುಲೋಚನಾ: ನೀನಾಡದಾ ಮಾತು ಮಾತಲ್ಲ ನೀನಾಡದಾ ಹಾಡು ಹಾಡಲ್ಲ
                     ನೀನಿಲ್ಲದಾ ಮನೆ ಮನೆಯಲ್ಲ ನೀನಿಲ್ಲದೇ ನನಗೆ ಬಾಳಿಲ್ಲ
ಎಸ್.ಪಿ.ಬಾಲ: ನೀನಾಡದಾ ಮಾತು ಮಾತಲ್ಲ ನೀನಾಡದಾ ಹಾಡು ಹಾಡಲ್ಲ
                     ನೀನಿಲ್ಲದಾ ಮನೆ ಮನೆಯಲ್ಲ ನೀನಿಲ್ಲದೇ ನನಗೆ ಬಾಳಿಲ್ಲ
ಸುಲೋಚನಾ: ನೀನಿಲ್ಲದೇ ನನಗೆ ಬಾಳಿಲ್ಲ
ಎಸ್.ಪಿ.ಬಾಲ: ನೀನಿಲ್ಲದೇ ನನಗೆ ಬಾಳಿಲ್ಲ
ಸುಲೋಚನಾ: ನೀನಿಲ್ಲದೇ ನನಗೆ ಬಾಳಿಲ್ಲ
ಎಸ್.ಪಿ.ಬಾಲ: ನೀನಿಲ್ಲದೇ ನನಗೆ ಬಾಳಿಲ್ಲ

*********************************************************************************

ನೇಗಿಲ ಯೋಗಿ

ಸಾಹಿತ್ಯ: ಕುವೆಂಪು 
ಗಾಯಕರು: ಸಿ. ಅಶ್ವಥ್ 

ನೇಗಿಲ ಹಿಡಿದ ಹೊಲದೊಳು ಹಾಡುತ 
ಉಳುವಾ ಯೋಗಿಯ ನೋಡಲ್ಲಿ
ಫಲವನು ಬಯಸದೆ ಸೇವೆಯೆ ಪೂಜೆಯು 
ಕರ್ಮವೆ ಇಹಪರ ಸಾಧನವು
ಕಷ್ಟದೊಳನ್ನವ ದುಡಿವನೆ ತ್ಯಾಗಿ 
ಸೃಷ್ಟಿನಿಯಮದೊಳಗವನೇ ಭೋಗೀ
ಉಳುವಾ ಯೋಗಿಯ ನೋಡಲ್ಲಿ ||

ಲೋಕದೊಳೇನೇ ನಡೆಯುತಲಿರಲಿ ತನ್ನೀ ಕಾರ್ಯವ ಬಿಡನೆಂದೂ
ರಾಜ್ಯಗಳುಳಿಸಲಿ ರಾಜ್ಯಗಳಳಿಯಲಿ ಹಾರಲಿ ಗದ್ದುಗೆ ಮುಕುಟಗಳು
ಮುತ್ತಿಗೆ ಹಾಕಲಿ ಸೈನಿಕರೆಲ್ಲ ಬಿತ್ತುಳುವುದನವ ಬಿಡುವುದೆ ಇಲ್ಲ ||
ಉಳುವಾ ಯೋಗಿಯ ನೋಡಲ್ಲಿ ||
ಯಾರೂ ಅರಿಯದ ನೇಗಿಲ ಯೋಗಿಯೆ ಲೋಕಕೆ ಅನ್ನವನೀಯುವನು
ಹೆಸರನು ಬಯಸದೆ ಅತಿಸುಖ ಗಳಿಸದೆ ದುಡಿವನು ಗೌರವಕಾಶಿಸದೆ
ನೇಗಿಲ ಕುಲದೊಳಗಡಗಿದೆ ಕರ್ಮ ನೇಗಿಲ ಮೇಲೆಯೆ ನಿಂತಿದೆ ಧರ್ಮ ||
ಉಳುವಾ ಯೋಗಿಯ ನೋಡಲ್ಲಿ ||

*********************************************************************************

No comments:

Post a Comment