Saturday, November 10, 2018

ಚಕ್ರವ್ಯೂಹ (1983)

ಚಳಿ ಚಳಿ ತಾಳೆನು

ಚಲನ ಚಿತ್ರ: ಚಕ್ರವ್ಯೂಹ (1983)
ನಿರ್ದೇಶನ: 
ಸಾಹಿತ್ಯ: ಚಿ.ಉದಯಶಂಕರ್ 
ಸಂಗೀತ: ಶಂಕರ್-ಗಣೇಶ್ 
ಗಾಯನ: ಎಸ್.ಪಿ.ಬಾಲಸುಬ್ರಹ್ಮಣ್ಯಂ, ಎಸ್. ಜಾನಕಿ
ನಟನೆ: ಅಂಬರೀಷ್, 

ಗಂಡು:  ಚಳಿ ಚಳಿ ತಾಳೆನು ಈ ಚಳಿಯ, ಆಹಾ ಆಹಾ             
            ಗೆಳತಿಯ ಬಾರೆಯ ನೀ ಸನಿಹ, ಆಹಾ ಆಹಾ
            ಒಲವಿನ ಕಥೆಯ ಹೇಳುವೆನು   
            ವಿರಹದ ವ್ಯಥೆಯ ನೀಡುವೆನು
            ಚಳಿ ಚಳಿss
ಹೆಣ್ಣು:  ಚಳಿ ಚಳಿ ತಾಳೆನು ಈ ಚಳಿಯ, ಆಹಾ ಓಹೋ
          ಗೆಳಯನೆ ಬಾರೆಯ ನೀ ಸನಿಹ, ಓಹೋ ಆಹಾ
          ನಡುಗುವ ಮೈಯ ನೋಡಿದೆಯ  ರಸಿಕನೆ ಜೀವ ತುಂಬುವೆಯ
          ಚಳಿ ಚಳಿss
ಗಂಡು: ಚಳಿ ಚಳಿ ತಾಳೆನು ಈ ಚಳಿಯ, ಆಹಾ ಆಹಾ
ಹೆಣ್ಣು: ಗೆಳಯನೆ ಬಾರೆಯ ನೀ ಸನಿಹ, ಆಹಾ ಓಹೋ
ಗಂಡು:||ಏಕೆ ಹೀಗೆ ನಾಚುವೆ  ಏಕೆ ಎಲ್ಲೋ ನೋಡುವೆ
            ಕಣ್ಣು ಕಣ್ಣು ಬೆರೆಸಿದರೆ  ನನ್ನ ತೋಳಲಿ ಬಳಸಿದರೆ|| - 2
ಹೆಣ್ಣು:  ನಯನದಿ ಮಿಂಚು ತುಂಬುವೆಯ
          ಮುತ್ತಿನ ಮಳೆಯ ಸುರಿಸಿವೆಯ ಚಳಿ ಚಳಿss
ಗಂಡು:  ಚಳಿ ಚಳಿ ತಾಳೆನು ಈ ಚಳಿಯ, ಆಹಾ ಆಹಾ
           ಗೆಳತಿಯ ಬಾರೆಯ ನೀ ಸನಿಹ, ಆಹಾ ಆಹಾ
ಹೆಣ್ಣು :  ನಡುಗುವ ಮೈಯ ನೋಡಿದೆಯ   
            ರಸಿಕನೆ ಜೀವ ತುಂಬುವೆಯ
            ಚಳಿ ಚಳಿss
ಹೆಣ್ಣು: ಚಳಿ ಚಳಿ ತಾಳೆನು ಈ ಚಳಿಯ, ಆಹಾ ಆಹಾ
ಗಂಡು: ಗೆಳತಿಯ ಬಾರೆಯ ನೀ ಸನಿಹ, ಆಹಾ ಆಹಾ
ಹೆಣ್ಣು : ತನುವು ಹೂವಂತಾಗಿದೆ  ಮನವು ಎಲ್ಲೋ ತೇಲಿದೆ
          ಪ್ರಣಯದ ಮತ್ತು ಏರುತಿದೆ   ತುಟಿಗಳು ತುಟಿಯ ಸೇರುತಿದೆ|| - 2
ಗಂಡು:  ಸುಖದ ಚಿಲುಮೆ ಉಕ್ಕುತಿದೆ  ಇನ್ನೂ ಬೇಕು ಎನ್ನಿಸಿದೆ
           ಚಳಿ ಚಳಿss
ಹೆಣ್ಣು:  ಚಳಿ ಚಳಿ ತಾಳೆನು ಈ ಚಳಿಯ, ಆಹಾ ಆಹಾ
           ಗೆಳಯನೆ ಬಾರೆಯ ನೀ ಸನಿಹ, ಓಹೋ ಓಹೋ
ಗಂಡು:  ಒಲವಿನ ಕಥೆಯ ಹೇಳುವೆನು  ವಿರಹದ ವ್ಯಥೆಯ ನೀಡುವೆನು
            ಚಳಿ ಚಳಿss
ಗಂಡು:  ಚಳಿ ಚಳಿ ತಾಳೆನು ಈ ಚಳಿಯ, ಆಹಾ ಆಹಾ
ಹೆಣ್ಣು:  ಗೆಳಯನೆ ಬಾರೆಯ ನೀ ಸನಿಹ, ಓಹೋ ಆಹಾ

*********************************************************************************

ಚಕ್ರವ್ಯೂಹ

ಸಾಹಿತ್ಯ: ಚಿ.ಉದಯಶಂಕರ್ 
ಗಾಯನ: ಎಸ್.ಪಿ.ಬಾಲಸುಬ್ರಹ್ಮಣ್ಯಂ 


ಚಕ್ರವ್ಯೂಹ ಇದು ಚಕ್ರವ್ಯೂಹ  ಹಣದ ಮೋಹ ಅಧಿಕಾರದ ಧಾಹ 
ಒಬ್ಬನ ಕೊಂದೆ ಒಬ್ಬನು ಬಾಳುವ ಚಕ್ರವ್ಯೂಹ  ಇದು ಚಕ್ರವ್ಯೂಹ .... ।। ಪ ।। 
ಮೋಸ ವಂಚನೆ ದ್ರೋಹಗಳೆಂಬ ಆಯುಧ ಹಿಡಿದವರು 
ಮಾನವ ರಕ್ತವ ಗಟಗಟ ಕುಡಿಯುವ ಕುಡಿಯುವ ತೇಗುವ ರಾಕ್ಷಸರು ... ।। 
ಸುತ್ತಲೂ ಕುಣಿಯುತಲಿರಲು ಕತ್ತಲು ಕಣ್ಣತುಂಬಿರಲು.... ।। 
ದಾರಿ ಎಲ್ಲಿದೇ .. ನಿನಗೆ ದಾರಿ ಎಲ್ಲಿದೇ ... ।।
ಚಕ್ರವ್ಯೂಹ ಇದು ಚಕ್ರವ್ಯೂಹ....                    
ಉಕ್ಕಿನ ಕೋಟೆಯ ನಡುವಲಿ ನಿಂತು ಯಾರನು ಕೂಗುವೆಯೋ 
ಸೊಕ್ಕಿದ ಆನೆಗಳೆದುರಲೀ  ಓರ್ವನೇ ನುಗ್ಗುತ ಸಾಯುವೆಯೋ ... ।।
ಎದುರಿಸಿ ಉಳಿಯುವೆ ಏನೋ.. ಚದುರಿಸಬಲ್ಲೆಯಾ ನೀನು .. ।।
ದಾರಿ ಎಲ್ಲಿದೇ .. ನಿನಗೆ ದಾರಿ ಎಲ್ಲಿದೇ ... ।।
ಚಕ್ರವ್ಯೂಹ ಇದು ಚಕ್ರವ್ಯೂಹ....      
        *********************************************************************************

No comments:

Post a Comment