ಹೇ ಮೌನಾ
ಚಲನ ಚಿತ್ರ: ಕೃಷ್ಣ (2007)
ನಿರ್ದೇಶನ: ಎಂ.ಡಿ. ಶ್ರೀಧರ್
ಸಂಗೀತ: ವಿ.ಹರಿಕೃಷ್ಣ
ಸಾಹಿತ್ಯ: ಕವಿರಾಜ್
ಗಾಯಕ: ಶಂಕರ್ ಮಹಾದೇವನ್
ನಟನೆ: ಗಣೇಶ್, ಪೂಜಾ ಗಾಂಧಿ, ಶರ್ಮಿಳಾ ಮಾಂಡ್ರೆ
ಹೇ ಮೌನಾ ಏ ಹೇ ಮೌನಾ
ನೀ ಕಾಡಬೇಡ ನನ್ನಾ ನೀ ಮಾತನಾಡು ಎನ್ನಾ
ನನ್ನೆದೆಯ ಹೂವು ಬಿರಿವಂತೆ ಮಾಡು ಅದು ಬಾಡಿ ಹೋಗೊ ಮುನ್ನ
ಚಂದಿರನ ಮೌನ ಮುರಿವಂತೆ ಹಾಡು ಅವ ಜಾರಿ ಹೋಗೊ ಮುನ್ನ
ನೀ ಕಾಡಬೇಡ ನನ್ನಾ ನೀ ಮಾತನಾಡು ಎನ್ನಾ
ನನ್ನೆದೆಯ ಹೂವು ಬಿರಿವಂತೆ ಮಾಡು ಅದು ಬಾಡಿ ಹೋಗೊ ಮುನ್ನ
ಚಂದಿರನ ಮೌನ ಮುರಿವಂತೆ ಹಾಡು ಅವ ಜಾರಿ ಹೋಗೊ ಮುನ್ನ
ಹೇ ಮೌನಾ ಏ ಹೇ ಮೌನಾ
ನೀ ಕಾಡಬೇಡ ನನ್ನಾ ನೀ ಮಾತನಾಡು ಎನ್ನಾ
ಓ ನೀ ಒಲವಿನ ಕಡಲನ್ನು ಈಜುತ ದಾಟುವೆಯಾ
ಅಥವ ಆಳದಲಿ ಮುಳುಗಿ ಮುತ್ತುಗಳ ಆಯುವೆಯಾ
ಓ ನೀ ನೆನಪಿನ ತೀರದಲಿ ಸುಮ್ಮನೆ ನಡೆಯುವೆಯಾ
ಅಥವ ಮರಳಿನಲಿ ಮುದ್ದು ಹೆಸರನ್ನು ಬರೆಯುವೆಯಾ
ಈ ಭೂಮಿ ಗಂಧ ಈ ಭಾವ ಬಂಧ ಎಂದೆಂದು ಮುರಿಯದೇನು
ನಿನಗೆಂದೆ ನಾನು ಹೂವಾಯುವಾಗ ನೀ ಬಂದು ಹೋದೆ ಏನು
ಅಥವ ಆಳದಲಿ ಮುಳುಗಿ ಮುತ್ತುಗಳ ಆಯುವೆಯಾ
ಓ ನೀ ನೆನಪಿನ ತೀರದಲಿ ಸುಮ್ಮನೆ ನಡೆಯುವೆಯಾ
ಅಥವ ಮರಳಿನಲಿ ಮುದ್ದು ಹೆಸರನ್ನು ಬರೆಯುವೆಯಾ
ಈ ಭೂಮಿ ಗಂಧ ಈ ಭಾವ ಬಂಧ ಎಂದೆಂದು ಮುರಿಯದೇನು
ನಿನಗೆಂದೆ ನಾನು ಹೂವಾಯುವಾಗ ನೀ ಬಂದು ಹೋದೆ ಏನು
ಹೇ ಮೌನಾ ...
ಓ ನೀ ಕನಸಿನ ಬೀದಿಯಲಿ ಅರಸುತ ಅಲೆಯುವೆಯಾ
ಅಥವ ಬಾಗಿಲನು ತೆರೆದು ಹೊಸ್ತಿಲಲಿ ಕಾಯುವೆಯಾ
ಓ ನೀ ಒಲವಿನ ಚಿಹ್ನೆಗಳ ಅಳಿಸದೆ ಉಳಿಸುವೆಯಾ
ಅಥವ ನೋವುಗಳ ಕಣ್ಣು ತಪ್ಪಿಸುತ ಸಹಿಸುವೆಯಾ
ಆಕಾಶದಲ್ಲಿ ತಾರೆಗಳ ಜಾತ್ರೆ ಚಂದಿರನ ಬೆಳ್ಳಿ ತೇರು
ಈ ಲೋಕ ತನ್ನ ಪಾಡಲ್ಲಿ ತಾನು ನನ್ನವರು ಇಲ್ಲಿ ಯಾರು
ಅಥವ ಬಾಗಿಲನು ತೆರೆದು ಹೊಸ್ತಿಲಲಿ ಕಾಯುವೆಯಾ
ಓ ನೀ ಒಲವಿನ ಚಿಹ್ನೆಗಳ ಅಳಿಸದೆ ಉಳಿಸುವೆಯಾ
ಅಥವ ನೋವುಗಳ ಕಣ್ಣು ತಪ್ಪಿಸುತ ಸಹಿಸುವೆಯಾ
ಆಕಾಶದಲ್ಲಿ ತಾರೆಗಳ ಜಾತ್ರೆ ಚಂದಿರನ ಬೆಳ್ಳಿ ತೇರು
ಈ ಲೋಕ ತನ್ನ ಪಾಡಲ್ಲಿ ತಾನು ನನ್ನವರು ಇಲ್ಲಿ ಯಾರು
ಹೇ ಮೌನಾ ...
*********************************************************************************
ನೀನು ಬ೦ದ ಮೇಲೆ
ಸಾಹಿತ್ಯ: ಕವಿರಾಜ್
ಗಾಯಕ: ಸೋನು ನಿಗಮ್, ನಂದಿತಾ
ನೀನು ಬ೦ದ ಮೇಲೆ ತಾನೆ
ಇಷ್ಟು ಚ೦ದ ಈ ಬಾಳು
ನೀನೇ ತಾನೆ ಹೇಳಿಕೊಟ್ಟೆ ಪ್ರೀತಿಸಲು
ಕ೦ಗಳು ಹಿ೦ದೆ೦ದೂ ಕಾಣದ ಹೊಸದೊ೦ದು
ನೀನೇ ತಾನೆ ಹೇಳಿಕೊಟ್ಟೆ ಪ್ರೀತಿಸಲು
ಕ೦ಗಳು ಹಿ೦ದೆ೦ದೂ ಕಾಣದ ಹೊಸದೊ೦ದು
ಲೋಕಕೆ ನನ್ನನ್ನು ನೀ ಸೆಳೆದೆ
ನೀನು ಬ೦ದ ಮೇಲೆ ತಾನೆ
ಇಷ್ಟು ಚ೦ದ ಈ ಬಾಳು
ನೀನೇ ತಾನೆ ಹೇಳಿಕೊಟ್ಟೆ ಪ್ರೀತಿಸಲು
ನೀನೇ ತಾನೆ ಹೇಳಿಕೊಟ್ಟೆ ಪ್ರೀತಿಸಲು
ಕ೦ಗಳು ಹಿ೦ದೆ೦ದೂ ಕಾಣದ ಹೊಸದೊ೦ದು
ಲೋಕಕೆ ನನ್ನನ್ನು ನೀ ಸೆಳೆದೆ
ಹೆಸರನು ಕೂಡಿಸಿ ಬರೆಯೋ ಆ ಖುಷಿ ಇನ್ನೆಲ್ಲೂ ನಾಕಾಣೆ
ಈ ಪ್ರೀತಿ ಎ೦ಥ ಅಸಮಾನ
ಕಾಯಿಸಿ ಕಾಯಿಸಿ ಬರದೆ ಸತಾಯಿಸಿ ಕಾಡೋದು ಪ್ರೀತೀನೆ
ಅದರಲ್ಲೂ ಆಹಾ ಎ೦ಥಾ ಹಿತ
ಒ೦ದಿಷ್ಟು ಹುಸಿಮುನಿಸು ಒ೦ದಷ್ಟು ಸಿಹಿಗನಸು
ಪ್ರೀತಿಸೋರ ಜೋಳಿಗೇಲಿ ಎ೦ದು ಇರಬೇಕು
ಕ೦ಗಳು ಹಿ೦ದೆ೦ದೂ ಕಾಣದ ಹೊಸದೊ೦ದು
ಈ ಪ್ರೀತಿ ಎ೦ಥ ಅಸಮಾನ
ಕಾಯಿಸಿ ಕಾಯಿಸಿ ಬರದೆ ಸತಾಯಿಸಿ ಕಾಡೋದು ಪ್ರೀತೀನೆ
ಅದರಲ್ಲೂ ಆಹಾ ಎ೦ಥಾ ಹಿತ
ಒ೦ದಿಷ್ಟು ಹುಸಿಮುನಿಸು ಒ೦ದಷ್ಟು ಸಿಹಿಗನಸು
ಪ್ರೀತಿಸೋರ ಜೋಳಿಗೇಲಿ ಎ೦ದು ಇರಬೇಕು
ಕ೦ಗಳು ಹಿ೦ದೆ೦ದೂ ಕಾಣದ ಹೊಸದೊ೦ದು
ಲೋಕಕೆ ನನ್ನನ್ನು ನೀ ಸೆಳೆದೆ
ನೀನು ಬ೦ದ ಮೇಲೆ ತಾನೆ ಇಷ್ಟು ಚ೦ದ ಈ ಬಾಳು
ನೀನೇ ತಾನೆ ಹೇಳಿಕೊಟ್ಟೆ ಪ್ರೀತಿಸಲು
ನಡೆದರೆ ನಿನ್ನ ಹೆಜ್ಜೆ ಮೇಲೆ ನನಗದೆ ಸಪ್ತಪದಿ
ಎ೦ದೆ೦ದೂ ಮಾತು ತಪ್ಪೊಲ್ಲ
ಮಡಿದರೆ ನಿನ್ನ ಮಡಿಲ ಮೇಲೆ ಇರುವ೦ಥ ಒಪ್ಪ೦ದ
ಇ೦ದಿ೦ದ ಒಪ್ಪೊ ಭಗವ೦ತ
ಇದ್ದರೂ ನಿನ್ನ ಜೊತೆ ಹೋದರೂ ನಿನ್ನ ಜೊತೆ
ನೀನೇ ನಾನು ನಾನೇ ನೀನು ಪ್ರೀತಿ ಮೇಲಾಣೆ
ಕ೦ಗಳು ಹಿ೦ದೆ೦ದೂ ಕಾಣದ ಹೊಸದೊ೦ದು
ಎ೦ದೆ೦ದೂ ಮಾತು ತಪ್ಪೊಲ್ಲ
ಮಡಿದರೆ ನಿನ್ನ ಮಡಿಲ ಮೇಲೆ ಇರುವ೦ಥ ಒಪ್ಪ೦ದ
ಇ೦ದಿ೦ದ ಒಪ್ಪೊ ಭಗವ೦ತ
ಇದ್ದರೂ ನಿನ್ನ ಜೊತೆ ಹೋದರೂ ನಿನ್ನ ಜೊತೆ
ನೀನೇ ನಾನು ನಾನೇ ನೀನು ಪ್ರೀತಿ ಮೇಲಾಣೆ
ಕ೦ಗಳು ಹಿ೦ದೆ೦ದೂ ಕಾಣದ ಹೊಸದೊ೦ದು
ಲೋಕಕೆ ನನ್ನನ್ನು ನೀ ಸೆಳೆದೆ
ನೀನು ಬ೦ದ ಮೇಲೆ ತಾನೆ ಇಷ್ಟು ಚ೦ದ ಈ ಬಾಳು
ನೀನೇ ತಾನೆ ಹೇಳಿಕೊಟ್ಟೆ ಪ್ರೀತಿಸಲು
ನಿನ್ನನೆ ನಾ ನೆನಿಸಿ ನನ್ನೆದೆ ಸ೦ಭ್ರಮಿಸಿ
ನಿನ್ನದೇ ಸ೦ಪೂರ್ಣ ಈ ಜೀವನ..
*********************************************************************************
No comments:
Post a Comment