Sunday, November 11, 2018

ಅಣ್ಣಾಬಾಂಡ್ (2012)

ಏನೆಂದು ಹೆಸರಿಡಲಿ

ಚಲನ ಚಿತ್ರ: ಅಣ್ಣಾಬಾಂಡ್ (2012)
ನಿರ್ದೇಶನ: ಸೂರಿ 
ಸಂಗೀತ : ವಿ.ಹರಿಕೃಷ್ಣ  
ಸಾಹಿತ್ಯ : ಜಯಂತ ಕಾಯ್ಕಿಣಿ  
ಗಾಯನ : ಸೋನು ನಿಗಮ್, ಶ್ರೇಯಾ ಘೋಷಾಲ್  
ನಟನೆ: ಪುನೀತ್ ರಾಜ್ ಕುಮಾರ್, ನಿಧಿ ಸುಬ್ಬಯ್ಯ, ಪ್ರಿಯಾ ಮಣಿ


ಏನೆಂದು ಹೆಸರಿಡಲಿ ಈ ಚಂದ ಅನುಭವಕೆ...
ಈಗಂತೂ ಹೃದಯದಲಿ ನಿಂದೇನೆ ಚಟುವಟಿಕೆ...
ಈ ಮೋಹದ ರೂವಾರಿ ನೀನಲ್ಲವೇ ..  
ಇನ್ನೇತಕೆ ಬೇಜಾರು ನಾನಿಲ್ಲವೇ...

ಏನೆಂದು ಹೆಸರಿಡಲಿ ಈ ಚಂದ ಅನುಭವಕೆ...
ಈಗಂತೂ ಹೃದಯದಲಿ ನಿಂದೇನೆ ಚಟುವಟಿಕೆ...

ಜಾತ್ರೆಲೂ ಸಂತೆಲೂ ನೀ ಕೈಯ ಬಿಡದಿರೂ..
ಆಗಾಗ ಕಣ್ಣಲ್ಲಿ ಸಂದೇಶ ಕೊಡುತಿರು..
ಅದೇ ಪ್ರೀತಿ ಬೇರೆ ರೀತಿ... ಹೆಂಗಂತ ಹೇಳೋದೂ...
ಇದೆ ರಾತ್ರೀ ಕಳೆದೇ ನಿನ್ನ ಬೆಳಕಿಗೇ ಕಾದೂ...
ಈ ಸ್ವಪ್ನದ ಸಂಚಾರ ಸಾಕಲ್ಲವೇ...
ಇನ್ನೇತಕೇ ಬೇಜಾರು ನಾನಿಲ್ಲವೇ...

ಏನೆಂದು ಹೆಸರಿಡಲಿ ಈ ಚಂದ ಅನುಭವಕೆ...
ಈಗಂತೂ ಹೃದಯದಲಿ ನಿಂದೇನೆ ಚಟುವಟಿಕೆ...

ಹೊತ್ತಿಲ್ಲ ಗೊತ್ತಿಲ್ಲ ಬೆನ್ನಲ್ಲೇ ಬರುವೆ ನಾ..
ನೀನಿತ್ತ ಮುತ್ತನ್ನು ಇನ್ನೆಲ್ಲಿ ಬಡತನ
ಗಸ್ತು ಹೊಡೆವ ಚಂದ್ರ ಬಂದ ಕೇಳುತ್ತ ಮಾಮೂಲು
ಕೊಟ್ಟು ಕಳಿಸೋಣ ಒಂದು ಕವಿತೆಯ ಸಾಲು
ನಿನ್ನಾಸೆಯು ನಂದನೂ ಹೌದಲ್ಲವೇ
ಇನ್ನೇತಕೆ ಬೇಜಾರು ನಾನಿಲ್ಲವೇ

ಏನೆಂದು ಹೆಸರಿಡಲಿ ಈ ಚಂದ ಅನುಭವಕೆ...
ಈಗಂತೂ ಹೃದಯದಲಿ ನಿಂದೇನೆ ಚಟುವಟಿಕೆ...

*********************************************************************************

ತುಂಬಾ ನೋಡ್ಬೇಡಿ

ಸಾಹಿತ್ಯ : ಯೋಗರಾಜ್ ಭಟ್   
ಗಾಯನ :ವಿ.ಹರಿಕೃಷ್ಣ 


ತುಂಬಾ ನೋಡ್ಬೇಡಿ ಲವ್-ಉ ಆಯ್ತದೇ
ಲವ್-ಉ  ಮಾಡ್ಬೇಡಿ ನೋವ್ವು ಆಯ್ತದೇ
ಹೂವ್ ಕೊಡ್ಬೇಡಿ ಮದುವೇ ಆಯ್ತದೇ
ಟಡಾಣ್ ಟಾನ್ ಟ ಡಾಂ

ಗಿಫ್ಟ್-ಉ ಕೊಡಬೇಡಿ ಖರ್ಚುಆಯ್ತದೇ
ಲಿಫ್ಟ್-ಉ ಕೊಡಬೇಡಿ ಕಷ್ಟ ಆಯ್ತದೇ
ಜಾಸ್ತಿ ನಗಬೇಡಿ ತುಟಿ ನೋಯ್ತದೆ
ಟಡಾಣ್ ಟಾನ್ ಟ ಡಾಂ 

ಬರುವಾಗ ಬೆತ್ತಲೆ... ಹೋಗುವಾಗ ಬೆತ್ತಲೇ... 
ಸೆಂಟ್ರಲ್ಲಿ ಹೆಣ್ಣು ಹೊನ್ನು ಮಣ್ಣು... 
ಯಾಕಲೇ..  ಯಾಕಲೇ.. ಎತ್ತಲೇ ಎತ್ತಲೇ 

ತುಂಬಾ ನೋಡ್ಬೇಡಿ ಲವ್-ಉ ಆಯ್ತದೇ
ಲವ್-ಉ  ಮಾಡ್ಬೇಡಿ ನೋವ್ವು ಆಯ್ತದೇ
ಹೂವ್ ಕೊಡ್ಬೇಡಿ ಮದುವೇ ಆಯ್ತದೇ
ಟಡಾಣ್ ಟಾನ್ ಟ ಡಾಂ 

ಕನ್ನಡಿಗೆ ನಾನ್ ಕಣ್ಣು ಹೊಡಿತೀನಿ 
ಲೈಟ್-ಉ ಕಂಬಕೆ ಡಿಕ್ಕಿ ಹೊಡಿತೀನಿ 
ಘಂಟೆಗೆ ಒಂದು ಸಲ ತಲೆ ಬಾಚ್ತಿನಿ  
ಟಡಾಣ್ ಟಾನ್ ಟ ಡಾಂ 
ಅವಳು ಕಂಡರೇ ಬ್ರೈಟ್ ಆಯ್ತೀನಿ 
ಕಾಣದಿದ್ದರೇ ಡಲ್ ಹೊಡೀತೀನಿ 
ಖಾಲಿ ರೋಡಿಗೆ ಕಲ್ಲು ಹೊಡಿತೀನಿ  
ಟಡಾಣ್ ಟಾನ್ ಟ ಡಾಂ 
ಪ್ರಿಯಾಮಣಿ ಯಮ್ಮಾರಿ ಒಮ್ಮೆ ತಿರುಗಿ ನೋಡಿದರೆ
ಹೊಟ್ಟೆ ಒಳಗೆ ಚಿಟ್ಟೆನಾ ಬಿಟ್ಟಂಗ್ ಆಯ್ತದೇ
ಇವಳೊಮ್ಮೆ ನಕ್ಕರೆ ಫ್ರೀ ಸೈಟ್-ಉ ಸಿಕ್ಕರೇ
ಸೆಂಟ್ರಲ್ಲಿ ನಾನು ತಾಜುಮಹಲು
ಕಟ್ಟಲೇ .. ಕಟ್ಟಲೇ ಎತ್ತಲೇ..  ಎತ್ತಲೇ

ತುಂಬಾ ನೋಡ್ಬೇಡಿ ಲವ್-ಉ ಆಯ್ತದೇ
ಲವ್-ಉ  ಮಾಡ್ಬೇಡಿ ನೋವ್ವು ಆಯ್ತದೇ
ಹೂವ್ ಕೊಡ್ಬೇಡಿ ಮದುವೇ ಆಯ್ತದೇ
ಟಡಾಣ್ ಟಾನ್ ಟ ಡಾಂ 

ಕೆಲಸಕ್ ಹೋದರೆ ಸಂಬಳ ಕೊಡತಾರೆ
ಬ್ಯಾಂಕಿಗೆ ಹೋದರೆ ಸಾಲ್ ಕೊಡತಾರೇ
ಪ್ರಿತಿಯೊಳಗಡೆ ಏನು ಸಿಗತದೆ 
ಟಡಾಣ್ ಟಾನ್ ಟ ಡಾಂ
ನಗು ಬರ್ತದೆ.. ಅಳು ಬರ್ತದೆ
ಎಚ್ಚರ ಇದ್ದರೂ ಕನಸು ಬೀಳತದೆ
ಕುಣಿಯದ್ದಿದ್ದರೂ ಕಾಲು ನೋಯ್ತದೇ
ಟಡಾಣ್ ಟಾನ್ ಟ ಡಾಂ
ಲವೂ ಕನ್ಫರ್ಮ್ ಆಗದೇನೆ 
ಫ್ರೆಂಡ್ಸು ಹತ್ರ ಮಾತಾಡಿ  ಫೋನಿನಲ್ಲಿ ಕರೆನ್ಸಿ ಖಾಲಿ ಆಯ್ತದೇ 
ಹೇಳ್ತಾನೆ ಹೋದರೇ ಮುಗಿಯಲ್ಲಾ ಮಾನ್ಯರೇ 
ಸೆಂಟ್ರಲ್ಲಿ ನನ್ನ ಹುಡುಗಿ ನಂಗೆ ಬೈತಾಳೆ ಬೈತಾಳೆ..  ಎತ್ತಲೇ..  ಎತ್ತೊಲೇ... 

ತುಂಬಾ ನೋಡ್ಬೇಡಿ ಲವ್-ಉ ಆಯ್ತದೇ
ಲವ್-ಉ  ಮಾಡ್ಬೇಡಿ ನೋವ್ವು ಆಯ್ತದೇ
ಹೂವ್ ಕೊಡ್ಬೇಡಿ ಮದುವೇ ಆಯ್ತದೇ
ಟಡಾಣ್ ಟಾನ್ ಟ ಡಾಂ
ಗಿಫ್ಟ್-ಉ ಕೊಡಬೇಡಿ ಖರ್ಚುಆಯ್ತದೇ
ಲಿಫ್ಟ್-ಉ ಕೊಡಬೇಡಿ ಕಷ್ಟ ಆಯ್ತದೇ
ಜಾಸ್ತಿ ನಗಬೇಡಿ ತುಟಿ ನೋಯ್ತದೆ
ಟಡಾಣ್ ಟಾನ್ ಟ ಡಾಂ 
ಬರುವಾಗ ಬೆತ್ತಲೆ... ಹೋಗುವಾಗ ಬೆತ್ತಲೇ... 
ಸೆಂಟ್ರಲ್ಲಿ ಹೆಣ್ಣು ಹೊನ್ನು ಮಣ್ಣು... 
ಯಾಕಲೇ..  ಯಾಕಲೇ.. ಎತ್ತಲೇ ಎತ್ತಲೇ 

*********************************************************************************

ಬೋಣಿ ಆಗದ ಹೃದಯಾನ


ಸಾಹಿತ್ಯ : ಯೋಗರಾಜ್ ಭಟ್ 
ಗಾಯನ : ಟಿಪ್ಪು  


ಬೋಣಿ ಆಗದ ಹೃದಯಾನ ಹೂವಿನಂಗಡಿ ಮಾಡ್ಕೊಂಡು 
ಕಸ್ಟಮರು ಹುಡುಕುವ ಕ್ಯಾಮೆ ಬೇಕಿತ್ತ
ಅಪ್ಪಿ ತಪ್ಪಿ ನನ್ನನ್ನು ಇವ್ಳು ಅಪ್ಪಿಕೊಂಡಾಗ 
ಒಳ್ಳೆವ್ನಾಗೆ ಉಳ್ಕೊಳ್ಳೊ ಕ್ಯಾಮೆ ಬೇಕಿತ್ತ
ಓಡಿ ಹೋಗೋ ಹೃದಕ್ಕೊಂದು ಬ್ರೇಕು ಬೇಕಿತ್ತ
ಇವ್ಳಾ ನೋಡೋದಕ್ಕೆ ಒಂದು ಎಕ್ಸ್‌ ಟ್ರಾ ಕಣ್ಣು ಬೇಕಿತ್ತ
ಚೆನ್ನಾಗಿದ್ದೆ ನಾನು ಪ್ರೀತಿ ಮಾಡ್ಲೇ ಬೇಕಿತ್ತ 

ಬೋಣಿ ಆಗದ ಹೃದಯಾನ ಹೂವಿನಂಗಡಿ ಮಾಡ್ಕೊಂಡು 
ಕಸ್ಟಮರು ಹುಡುಕುವ ಕ್ಯಾಮೆ ಬೇಕಿತ್ತ 

ತಂಗಾಳಿನ ತಬ್ಕೊಂಡು ನೂರು ಮುತ್ತು ಕೊಟ್ಕೊಂಡು 
ಮೈಕೈ ನೋವು ಮಾಡಿಕೊಂಡ ನಾನು ಲೂಸ
ಹಿಂಗೆ ಇದ್ದ್ರೆ ಯೂಸಾಗಲ್ಲ ನಾಲ್ಕು ಪೈಸ
ಪ್ರೀತಿಯೊಂದು ತಣ್ಣೀರು, ಜಾಸ್ತಿ ಆದ್ರೆ ಬಿಸಿನೀರು, 
ಕುಡಿದು ನೋಡ್ಲ ಸ್ನಾನ ಮಾಡ್ಲ ಯಾರಾನ ಹೇಳಿ
ವಯಸ್ಸಿನ್ನಲ್ಲಿ ಕಂಫ್ಯೂಷನ್ನು ತುಂಬ ಮಾಮೂಲಿ
ಒಂಟಿ ಪಿಟೀಲು ಅಳ್ತಾ ಇದ್ರೆ ಎಂಥ ಸಂಗೀತ
ಬೇಡ ಅಂದ್ರು ಬೀಳೊ ಕನಸಿಗೊಂದು ಕ್ಯಾಮರ ಬೇಕಿತ್ತ
ಚೆನ್ನಾಗಿದ್ದೆ ನಾನು ಪ್ರೀತಿ ಮಾಡ್ಲೆಬೇಕಿತ್ತ 

ಬೋಣಿ ಆಗದ ಹೃದಯಾನ ಹೂವಿನಂಗಡಿ ಮಾಡ್ಕೊಂಡು 
ಕಸ್ಟಮರು ಹುಡುಕುವ ಕ್ಯಾಮೆ ಬೇಕಿತ್ತ 

ಗಂಡು ನವಿಲಿಗೆ ಮಾತ್ರನೇ, ಪುಕ್ಕ ಕೊಟ್ಟ ಭಗವಂತ, 
ಕುಣಿಯೋ ಕೆಲಸ ಗಂಡಸರಿಗೆ ಹೇಳಿ ಮಾಡ್ಸಿದ್ದು
ಹೆಣ್ಣು ಮಕ್ಕಳು ಕುಣಿಸೋದಕ್ಕೆ ವರ್ಲ್ಡ್ ಫೇಮಸ್ಸು
ಫೀಲಿಂಗಲ್ಲಿ ಒಮ್ಮೊಮ್ಮೆ, ವೈನ್ ಶಾಪಿನ ಮುಂದೇನೆ, 
ನಡ್ಕೊಂಡ್ ಹೋದ್ರು ಹಿಡ್ಕೊತಾರೆ ನೈಟು ಪೋಲೀಸು
ಯಾವಾನಿಗೆ ಬೇಕು ಸ್ವಾಮಿ ಪ್ರೀತಿ ತಪಸ್ಸು
ಎಲ್ಲ ಇದ್ದ್ರು ಕೂಡ ನಮ್ಮದು ಖಾಲಿ ಏಕಾಂತ
ಇನ್ನು ಬಿಟ್ಟ್ರೆ ಶುರುವಾಗುತ್ತೆ ನಮ್ಮ್ಮ ಪೋಲಿ ವೇದಾಂತ
ಚೆನ್ನಾಗಿದ್ದೆ ನಾನು ಪ್ರೀತಿ ಮಾಡ್ಲೆಬೇಕಿತ್ತ
ಸೂರ್ಯ ಮುಳುಗೋ ಟೈಂ ಅಲ್ಲಿ ಇವಳು ಕುಂತು ಹೋದಂತ 
ಬೆಂಚು ಮುಟ್ಟಿ ನೋಡುವ ಕ್ಯಾಮೆ ಬೇಕಿತ್ತ

*********************************************************************************

No comments:

Post a Comment