ಬೀಸದಿರು ತಂಗಾಳಿ
ಚಲನ ಚಿತ್ರ: ಅನುರಾಗ ಅರಳಿತು (1988)
ನಿರ್ದೇಶನ: ಎಂ. ಎಸ್. ರಾಜಶೇಖರ್
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ಉಪೇಂದ್ರಕುಮಾರ್
ಗಾಯನ: ವಾಣಿ ಜಯರಾಂ
ನಟನೆ: ರಾಜ್ ಕುಮಾರ್, ಗೀತಾ, ಮಾಧವಿ
ಬೀಸದಿರು ತಂಗಾಳಿ ತಂಪನ್ನು ಚೆಲ್ಲಾಡಿ
ಝುಮ್ಮೆಂದು ಮೈಯನ್ನು ಸೋಕುತ್ತ ಕಾಡುತ್ತ
ಬೀಸದಿರು ತಂಗಾಳಿ ತಂಪನ್ನು ಚೆಲ್ಲಾಡಿ
ಝುಮ್ಮೆಂದು ಮೈಯನ್ನು ಸೋಕುತ್ತ ಕಾಡುತ್ತ.. ಬೀಸದಿರು
ಬೀಸದಿರು ತಂಗಾಳಿ ತಂಪನ್ನು ಚೆಲ್ಲಾಡಿ
ಝುಮ್ಮೆಂದು ಮೈಯನ್ನು ಸೋಕುತ್ತ ಕಾಡುತ್ತ.. ಬೀಸದಿರು
ಕಾಡಲ್ಲಿ ಮೊಗ್ಗೊಂದು ಅರಳಿ ಹೂವಾದರೇನಾಯಿತು
ಮುಡಿಯೋರು ಯಾರೆಂದು ಕಾಣೆ
ಧೂಳಲ್ಲಿ ಹೊರಳಾಡಿತು
ಅಂಥ ಹೂವಂತೆ ಆದೆ ನಾನಿಂದು
ಕಣ್ಣೀರು ಬಂದಾಗಲೆ
ಹೊಸ ಆಸೆಗಳ ಸವಿ ತೋರಿಸುತ
ಹೊಸ ಆಸೆಗಳ ಸವಿ ತೋರಿಸುತ
ಸಂತೋಷ ತುಂಬುತ್ತ ಸೋಕುತ್ತ ಕಾಡುತ್ತ
ಮುಡಿಯೋರು ಯಾರೆಂದು ಕಾಣೆ
ಧೂಳಲ್ಲಿ ಹೊರಳಾಡಿತು
ಅಂಥ ಹೂವಂತೆ ಆದೆ ನಾನಿಂದು
ಕಣ್ಣೀರು ಬಂದಾಗಲೆ
ಹೊಸ ಆಸೆಗಳ ಸವಿ ತೋರಿಸುತ
ಹೊಸ ಆಸೆಗಳ ಸವಿ ತೋರಿಸುತ
ಸಂತೋಷ ತುಂಬುತ್ತ ಸೋಕುತ್ತ ಕಾಡುತ್ತ
ಬೀಸದಿರು ತಂಗಾಳಿ ತಂಪನ್ನು ಚೆಲ್ಲಾಡಿ
ಝುಮ್ಮೆಂದು ಮೈಯನ್ನು ಸೋಕುತ್ತ ಕಾಡುತ್ತ ... ಬೀಸದಿರು
ಹೂವಂಥ ಈ ಮೆತ್ತೆ ಇಂದು ಮುಳ್ಳಂತೆ ಏಕಾಯಿತು
ಆ ಚಂದ್ರನ ಕಾಂತಿ ಸೋಕಿ ಮೈಯೆಲ್ಲ ಬಿಸಿಯಾಯಿತು
ಒಂಟಿ ಬಾಳಿಂದು ಸಾಕು ಸಾಕೆಂದು
ನಾನಿನ್ದು ನೊಂದಾಗಲೆ
ಚಳಿ ತುಂಬುತಲಿ ಈ ರಾತ್ರಿಯಲಿ (ಉಶ್..)
ಚಳಿ ತುಂಬುತಲಿ ಈ ರಾತ್ರಿಯಲಿ ಸಂಗಾತಿ
ಒಂಟಿ ಬಾಳಿಂದು ಸಾಕು ಸಾಕೆಂದು
ನಾನಿನ್ದು ನೊಂದಾಗಲೆ
ಚಳಿ ತುಂಬುತಲಿ ಈ ರಾತ್ರಿಯಲಿ (ಉಶ್..)
ಚಳಿ ತುಂಬುತಲಿ ಈ ರಾತ್ರಿಯಲಿ ಸಂಗಾತಿ
ಎಲ್ಲೆಂದು ಕೇಳುತ್ತ ಕಾಡುತ್ತಾ
ಬೀಸದಿರು ತಂಗಾಳಿ ತಂಪನ್ನು ಚೆಲ್ಲಾಡಿ
ಝುಮ್ಮೆಂದು ಮೈಯನ್ನು ಸೋಕುತ್ತ ಕಾಡುತ್ತ.. ಬೀಸದಿರು
*********************************************************************************
ಸಾರ್ಥಕವಾಯಿತು
ಚಿತ್ರಗೀತೆ : ಚಿ. ಉದಯಶಂಕರ್
ಗಾಯನ: ಡಾ ರಾಜ್ ಕುಮಾರ್
ಸಾರ್ಥಕವಾಯಿತು
ಸಾರ್ಥಕವಾಯಿತು ಚಿನ್ನಾ ನಿನ್ನಾ ಹೊನ್ನಾ ನುಡಿ ಕೇಳಿ ಈಗ
ಸಾರ್ಥಕವಾಯಿತು ಚಿನ್ನಾ ನಿನ್ನಾ ಹೊನ್ನಾ ನುಡಿ ಕೇಳಿ ಈಗ
ಸಾರ್ಥಕವಾಯಿತು
ಸಾರ್ಥಕವಾಯಿತು ಚಿನ್ನಾ ನಿನ್ನಾ ಹೊನ್ನಾ ನುಡಿ ಕೇಳಿ ಈಗ
ಸಾರ್ಥಕವಾಯಿತು ಚಿನ್ನಾ ನಿನ್ನಾ ಹೊನ್ನಾ ನುಡಿ ಕೇಳಿ ಈಗ
ಸಾರ್ಥಕವಾಯಿತು
ನಿನ್ನೀ ಕ೦ಗಳು ನೈದಿಲೆಯ೦ತೆ
ಸು೦ದರ ಮೊಗವು ತಾವರೆಯ೦ತೆ
ಮು೦ಗುರುಳೆನೋ ದು೦ಬಿಗಳ೦ತೆ
ಒಳಗೇನಿದೆಯೊ ಎ೦ಬುದು ಚಿ೦ತೆ
ಒಳಗೇನಿದೆಯೊ ಎ೦ಬುದು ಚಿ೦ತೆ
ಸಾರ್ಥಕವಾಯಿತು ಚಿನ್ನಾ ನಿನ್ನಾ ಹೊನ್ನಾ ನುಡಿ ಕೇಳಿ ಈಗ
ಸಾರ್ಥಕವಾಯಿತು
ಆ ಸಾವಿತ್ರಿ ನಿನ್ನ ನೋಡಿದರೆ ಎದೆಯೇ ಓಡೆದು ಸಾಯುತಳಿದ್ದಳು
ಪತಿ ಭಕ್ತಿಯಲಿ ನಿನಗೆಣೆಯಿಲ್ಲ ಓ ಕುಲ ನಾರಿ ಕುಬೇರನ ಕುವರಿ
ಸಾರ್ಥಕವಾಯಿತು ಚಿನ್ನಾ ನಿನ್ನಾ ಹೊನ್ನಾ ನುಡಿ ಕೇಳಿ ಈಗ ಸಾರ್ಥಕವಾಯಿತು
ಪತಿ ಭಕ್ತಿಯಲಿ ನಿನಗೆಣೆಯಿಲ್ಲ ಓ ಕುಲ ನಾರಿ ಕುಬೇರನ ಕುವರಿ
ಸಾರ್ಥಕವಾಯಿತು ಚಿನ್ನಾ ನಿನ್ನಾ ಹೊನ್ನಾ ನುಡಿ ಕೇಳಿ ಈಗ ಸಾರ್ಥಕವಾಯಿತು
ಕವಿ ವಾಲ್ಮೀಕಿ ಇದ್ದರೆ ಈಗ ಹೊಸ ಕಾವ್ಯವನೆ ಬರೆಯುತಲಿದ್ದ
ಭಾರತ ಬರೆದ ವ್ಯಾಸರು ನಿನ್ನ ಕ೦ಡರೆ ಕಾಡಿಗೆ ಓಡುತಲಿದ್ದರು
ಸಾರ್ಥಕವಾಯಿತು ಚಿನ್ನಾ ನಿನ್ನಾ ಹೊನ್ನಾ ನುಡಿ ಕೇಳಿ ಈಗ
ಸಾರ್ಥಕವಾಯಿತು ಚಿನ್ನಾ ನಿನ್ನಾ ಹೊನ್ನಾ ನುಡಿ ಕೇಳಿ ಈಗ ಸಾರ್ಥಕವಾಯಿತು
ಭಾರತ ಬರೆದ ವ್ಯಾಸರು ನಿನ್ನ ಕ೦ಡರೆ ಕಾಡಿಗೆ ಓಡುತಲಿದ್ದರು
ಸಾರ್ಥಕವಾಯಿತು ಚಿನ್ನಾ ನಿನ್ನಾ ಹೊನ್ನಾ ನುಡಿ ಕೇಳಿ ಈಗ
ಸಾರ್ಥಕವಾಯಿತು ಚಿನ್ನಾ ನಿನ್ನಾ ಹೊನ್ನಾ ನುಡಿ ಕೇಳಿ ಈಗ ಸಾರ್ಥಕವಾಯಿತು
*********************************************************************************
ನೀ ನಡೆದರೆ ಸೊಗಸು
ಚಿತ್ರಗೀತೆ : ಚಿ. ಉದಯಶಂಕರ್
ಗಾಯನ: ಡಾ ರಾಜ್ ಕುಮಾರ್
ನೀ ನಡೆದರೆ ಸೊಗಸು...ನೀ ನಡೆದರೆ ಸೊಗಸು...
ನೀ ನಿಂತರೆ ಸೊಗಸು... ನಕ್ಕರೆ ಸೊಗಸು.., ಕೋಪದಿ ಸಿಡಿದರೂ ಸೊಗಸು...
ನೀ ನಿಂತರೆ ಸೊಗಸು... ನಕ್ಕರೆ ಸೊಗಸು.., ಕೋಪದಿ ಸಿಡಿದರೂ ಸೊಗಸು...
ನೀ ನಡೆದರೆ ಸೊಗಸು...
ಕಣ್ಗಳ ಕಾಡುವ ಸೊಗಸು.. ಜೋಡಿಯ ಬೇಡುವ ವಯಸು... -೨
ಹೆಣ್ಣೇ ತೋಳಿಂದ ಬಳಸಿ..,ಹೆಣ್ಣೇ...ತೋಳಿಂದ ಬಳಸಿ,
ನನ್ನನು ಕುಣಿಸು..ಕುಣಿಸು... ನೀ ನಡೆದರೆ ಸೊಗಸು...
ಹೆಣ್ಣೇ ತೋಳಿಂದ ಬಳಸಿ..,ಹೆಣ್ಣೇ...ತೋಳಿಂದ ಬಳಸಿ,
ನನ್ನನು ಕುಣಿಸು..ಕುಣಿಸು... ನೀ ನಡೆದರೆ ಸೊಗಸು...
ನಿನ್ನನು ನೋಡಿದ ಮನಸು... ಕಂಡಿತು ಸಾವಿರ ಕನಸು... -೨
ಚಿನ್ನಾ ನಾ ತಾಳೆನು ವಿರಹ..ಚಿನ್ನಾ..,ನಾ ತಾಳೆನು ವಿರಹ...
ಬೇಗನೆ ಪ್ರೀತಿಸು.., ಪ್ರೀತಿಸು..ನೀ ನಡೆದರೆ ಸೊಗಸು...-೨
ಚಿನ್ನಾ ನಾ ತಾಳೆನು ವಿರಹ..ಚಿನ್ನಾ..,ನಾ ತಾಳೆನು ವಿರಹ...
ಬೇಗನೆ ಪ್ರೀತಿಸು.., ಪ್ರೀತಿಸು..ನೀ ನಡೆದರೆ ಸೊಗಸು...-೨
*********************************************************************************
ಗಂಗಾ ಯಮುನಾ ಸಂಗಮ
ರಚನೆ: ಚಿ. ಉದಯಶಂಕರ್
ಗಾಯಕ: ಡಾ. ರಾಜಕುಮಾರ್, ಎಸ್. ಜಾನಕಿ
ಆಹಾ.... ಲಾಲಾಲಲ... ಅಹಹ... ಒಹೋ... ಒಹೋ
ಗಂಗಾ ಯಮುನಾ ಸಂಗಮ
ಗಂಗಾ ಯಮುನಾ ಸಂಗಮ
ಈ ಪ್ರೇಮ, ಕೆನೆ ಹಾಲು ಜೇನು ಸೇರಿದಂತೆ ಈ ಬದುಕು
ಕೆನೆ ಹಾಲು ಜೇನು ಸೇರಿದಂತೆ ಈ ಬದುಕು

ಹೆ: ಅನುದಿನ ಸಂತೋಷ, ಅನುದಿನ ಉಲ್ಲಾಸ
ಗೆಳೆಯ ನಿನ್ನ ಸೇರಿ ಪ್ರೇಮದ ಆವೇಷ
ಗಂ: ಪ್ರಣಯದ ಕಣ್ಣೋಟ, ಸರಸದ ಚೆಲ್ಲಾಟ
ದಿನವೂ ನೋಡಿ ನೋಡಿ ಒಲವಿನ ತುಂಟಾಟ
ಹೆ: ಅರಿತೂ ಬೆರೆತೂ
ಗಂ: ಕೆನೆ ಹಾಲು ಜೇನು ಸೇರಿದಂತೆ ಈ ಬದುಕು
ಹೆ: ಕೆನೆ ಹಾಲು ಜೇನು ಸೇರಿದಂತೆ ಈ ಬದುಕು
ಗಂ: ಗಂಗಾ ಯಮುನಾ ಸಂಗಮ
ಹೆ: ಗಂಗಾ ಯಮುನಾ ಸಂಗಮ
ಜೊ: ಈ ಪ್ರೇಮ
ಗೆಳೆಯ ನಿನ್ನ ಸೇರಿ ಪ್ರೇಮದ ಆವೇಷ
ಗಂ: ಪ್ರಣಯದ ಕಣ್ಣೋಟ, ಸರಸದ ಚೆಲ್ಲಾಟ
ದಿನವೂ ನೋಡಿ ನೋಡಿ ಒಲವಿನ ತುಂಟಾಟ
ಹೆ: ಅರಿತೂ ಬೆರೆತೂ
ಗಂ: ಕೆನೆ ಹಾಲು ಜೇನು ಸೇರಿದಂತೆ ಈ ಬದುಕು
ಹೆ: ಕೆನೆ ಹಾಲು ಜೇನು ಸೇರಿದಂತೆ ಈ ಬದುಕು
ಗಂ: ಗಂಗಾ ಯಮುನಾ ಸಂಗಮ
ಹೆ: ಗಂಗಾ ಯಮುನಾ ಸಂಗಮ
ಜೊ: ಈ ಪ್ರೇಮ
ಗಂ: ಬಾಳಲಿ ಇನ್ನೆಂದು, ಚಿಂತೆಯ ಮಾತಿಲ್ಲ
ಗೆಳತೀ ಏನೇ ಕೇಳು, ಕೊಡುವೆ ನಾನೆಲ್ಲ
ಹೆ: ಕೇಳೆನು ಏನನ್ನು, ಬಯಸೆನು ಇನ್ನೇನು
ಗೆಳೆಯ ಎಂದೂ ಹೀಗೆ ಪ್ರೀತಿಸು ನನ್ನನು
ಗಂ: ನಿನ್ನಾ ಸೇರೀ
ಹೆ: ಕೆನೆ ಹಾಲು ಜೇನು ಸೇರಿದಂತೆ ಈ ಬದುಕು
ಗಂ: ಕೆನೆ ಹಾಲು ಜೇನು ಸೇರಿದಂತೆ ಈ ಬದುಕು
ಹೆ: ಗಂಗಾ ಯಮುನಾ ಸಂಗಮ
ಗಂ: ಗಂಗಾ ಯಮುನಾ ಸಂಗಮ
ಜೊ: ಈ ಪ್ರೇಮ ಕೆನೆ ಹಾಲು ಜೇನು ಸೇರಿದಂತೆ ಈ ಬದುಕು
ಕೆನೆ ಹಾಲು ಜೇನು ಸೇರಿದಂತೆ ಈ ಬದುಕು
ಗೆಳತೀ ಏನೇ ಕೇಳು, ಕೊಡುವೆ ನಾನೆಲ್ಲ
ಹೆ: ಕೇಳೆನು ಏನನ್ನು, ಬಯಸೆನು ಇನ್ನೇನು
ಗೆಳೆಯ ಎಂದೂ ಹೀಗೆ ಪ್ರೀತಿಸು ನನ್ನನು
ಗಂ: ನಿನ್ನಾ ಸೇರೀ
ಹೆ: ಕೆನೆ ಹಾಲು ಜೇನು ಸೇರಿದಂತೆ ಈ ಬದುಕು
ಗಂ: ಕೆನೆ ಹಾಲು ಜೇನು ಸೇರಿದಂತೆ ಈ ಬದುಕು
ಹೆ: ಗಂಗಾ ಯಮುನಾ ಸಂಗಮ
ಗಂ: ಗಂಗಾ ಯಮುನಾ ಸಂಗಮ
ಜೊ: ಈ ಪ್ರೇಮ ಕೆನೆ ಹಾಲು ಜೇನು ಸೇರಿದಂತೆ ಈ ಬದುಕು
ಕೆನೆ ಹಾಲು ಜೇನು ಸೇರಿದಂತೆ ಈ ಬದುಕು
*********************************************************************************
ಶ್ರೀಕಂಠ ವಿಷಕಂಠ
ರಚನೆ: ಚಿ. ಉದಯಶಂಕರ್
ಗಾಯಕ: ಡಾ. ರಾಜಕುಮಾರ್
ಶ್ರೀಕಂಠ ವಿಷಕಂಠ.... ಶ್ರೀಕಂಠ ವಿಷಕಂಠ
ಲೋಕವನುಳಿಸಲು ವಿಷವನು ಕುಡಿದ ನಂಜುಂಡೇಶ್ವರನೇ
ಲೋಕವನುಳಿಸಲು ವಿಷವನು ಕುಡಿದ ನಂಜುಂಡೇಶ್ವರನೇ
ಲೋಕವನುಳಿಸಲು ವಿಷವನು ಕುಡಿದ ನಂಜುಂಡೇಶ್ವರನೇ
ಲೋಕವನುಳಿಸಲು ವಿಷವನು ಕುಡಿದ ನಂಜುಂಡೇಶ್ವರನೇ
ಗತಿ ನೀನೆಂದರೆ ಓಡುತ ಬರುವ ಕರುಣಾಸಾಗರನೆ
ಗತಿ ನೀನೆಂದರೆ ಓಡುತ ಬರುವ ಕರುಣಾಸಾಗರನೆ
ಗತಿ ನೀನೆಂದರೆ ಓಡುತ ಬರುವ ಕರುಣಾಸಾಗರನೆ
ಶ್ರೀಕಂಠ ವಿಷಕಂಠ.... ಶ್ರೀಕಂಠ ವಿಷಕಂಠ
ಹರಿಯುವ ನದಿಯಲಿ ಕಲರವ ನಾದ ಕೂಡ ಶಿವ ಶಿವ ಎನ್ನುತಿದೇ
ಅರಳಿದ ಸುಮದಲಿ ನಲಿಯುವ ಭ್ರಮರವು ಶಿವ ನಾಮ ಹಾಡುತಿದೆ
ಬೀಸುವ ಗಾಳಿಯು ಪರಿಮಳ ಚೆಲ್ಲುತ ನಿನ್ನನೆ ಸ್ಮರಿಸುತಿದೇ
ಅರಳಿದ ಸುಮದಲಿ ನಲಿಯುವ ಭ್ರಮರವು ಶಿವ ನಾಮ ಹಾಡುತಿದೆ
ಬೀಸುವ ಗಾಳಿಯು ಪರಿಮಳ ಚೆಲ್ಲುತ ನಿನ್ನನೆ ಸ್ಮರಿಸುತಿದೇ
ಬೀಸುವ ಗಾಳಿಯು ಪರಿಮಳ ಚೆಲ್ಲುತ ನಿನ್ನನೆ ಸ್ಮರಿಸುತಿದೇ
ಶ್ರೀಕಂಠ ವಿಷಕಂಠ.... ಶ್ರೀಕಂಠ ವಿಷಕಂಠ
ಶ್ರೀಕಂಠ ವಿಷಕಂಠ.... ಶ್ರೀಕಂಠ ವಿಷಕಂಠ
ಸಾವಿರ ಜನುಮವೆ ಬಂದರು ಹೀಗೆ ನಿನ್ನ ಸನ್ನಿಧಿಯಲ್ಲಿ ಇರಿಸೂ
ಉಸಿರಿನ ಉಸಿರಲು ತಂದೆ ಎಂದು ನಾಮಾವನೂ ಬೆರೆಸು
ಕತ್ತಲಲಿರುವೆ ನೆಮ್ಮದಿ ತುಂಬಿ ಕೈಹಿಡಿದು ನೆಡೆಸು
ಉಸಿರಿನ ಉಸಿರಲು ತಂದೆ ಎಂದು ನಾಮಾವನೂ ಬೆರೆಸು
ಕತ್ತಲಲಿರುವೆ ನೆಮ್ಮದಿ ತುಂಬಿ ಕೈಹಿಡಿದು ನೆಡೆಸು
ಕತ್ತಲಲಿರುವೆ ನೆಮ್ಮದಿ ತುಂಬಿ ಕೈಹಿಡಿದು ನೆಡೆಸು
ಶ್ರೀಕಂಠ ವಿಷಕಂಠ.... ಶ್ರೀಕಂಠ ವಿಷಕಂಠ
ಲೋಕವನುಳಿಸಲು ವಿಷವನು ಕುಡಿದ ನಂಜುಂಡೇಶ್ವರನೇ
ಗತಿ ನೀನೆಂದರೆ ಓಡುತ ಬರುವ ಕರುಣಾಸಾಗರನೆ
ಗತಿ ನೀನೆಂದರೆ ಓಡುತ ಬರುವ ಕರುಣಾಸಾಗರನೆ
ಶ್ರೀಕಂಠ ವಿಷಕಂಠ.... ಶ್ರೀಕಂಠ ವಿಷಕಂಠ
*********************************************************************************
No comments:
Post a Comment