Sunday, March 31, 2019

ಪ್ರೇಮಾನುಬಂಧ (1981)


ಬೆಳದಿಂಗಳೊಂದು

ಚಲನ ಚಿತ್ರ: ಪ್ರೇಮಾನುಬಂಧ (1981)
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ರಾಜನ್-ನಾಗೇಂದ್ರ
ಗಾಯಕರು: ಎಸ್.ಪಿ. ಬಾಲಸುಬ್ರಹ್ಮಣ್ಯಂ
ನಿರ್ದೇಶನ: ಆರ್.ರಾಮಮೂರ್ತಿ 
ನಟನೆ: ಶ್ರೀನಾಥ್, ಮಂಜುಳಾ, ಕೆ. ವಿಜಯಾ 


ಬೆಳದಿಂಗಳೊಂದು ಹೆಣ್ಣಾಗಿ ಬಂದಂತೆ ಕಂಡೆ
ಕಂಡು ನಿಂತೆ ನಿಂತು ಸೋತೆ ಸೋತು
ಕವಿಯಾಗಿ ಕವಿತೆ ಹಾಡಿದೆ ||2 ಸಲ||

ಹೊಸದಾಗಿ ಮೊಗ್ಗೊಂದು ಹೂವಾಗಿ
ಆ ಹೂವೆ ಈ ಹೆಣ್ಣ ಮೊಗವಾಗಿ
ಸುಳಿದಾಡೋ ಮಿಂಚಿಂದ ಕಣ್ಣಾಗಿ
ಗಿಳಿಮಾತು ಅವಳಾಡೋ ಮಾತಾಗಿ
ತಂಗಾಳಿಗೆ ಓಲಾಡುವ ತಂಗಾಳಿಗೆ ಓಲಾಡುವ
ಲತೆಯೊಂದು ನಡುವಾಯಿತೇನೋ
ನವಿಲೊಂದು ಕುಣಿದಂತೆ ನಡೆವಾಗ ಸಂತೋಷಗೊಂಡೆ.

ಹಗಲಲ್ಲಿ ಕಣ್ಣ್ಮುಂದೆ ನೀನಿರುವೆ
ಇರುಳಲ್ಲಿ ಕನಸಲ್ಲಿ ನೀ ಬರುವೆ
ಜೊತೆಯಾಗಿ ಇರುವಾಸೆ ತಂದಿರುವೆ
ನನಗೆಂದು ಹೊಸ ಬಾಳ ನೀ ತರುವೆ
ಬಂಗಾರಿಯೇ ಸಿಂಗಾರಿಯೆ ಹಾ
ಬಂಗಾರಿಯೇ ಸಿಂಗಾರಿಯೆ
ನನ್ನೊಮ್ಮೆ ನೀ ನೋಡು ಚೆಲುವೆ
ಒಲವಿಂದ ಬಂದೀಗ ನನ್ನನ್ನು ನೀ ಸೇರು ಹೂವೇ

ಬೆಳದಿಂಗಳೊಂದು ಹೆಣ್ಣಾಗಿ ಬಂದಂತೆ ಕಂಡೆ
ಕಂಡು ನಿಂತೆ ನಿಂತು ಸೋತೆ
ಸೋತು ಕವಿಯಾಗಿ ಕವಿತೆ ಹಾಡಿದೆ

********************************************************************************

ಸವಾರಿ 2 (2014)



ಚಲನ ಚಿತ್ರ: ಸವಾರಿ 2 (2014)
ಸಾಹಿತ್ಯ: ಜಯಂತ್ ಕಾಯ್ಕಿಣಿ 
ಸಂಗೀತ: ಮಣಿಕಾಂತ್ ಕದ್ರಿ 
ಗಾಯಕರು: ಕಾರ್ತಿಕ್, ಹಂಸಿಕಾ ಐಯ್ಯರ್, ಯಾಝಿನ್ ನಿಸಾರ್ 
ನಿರ್ದೇಶನ: ಜೇಕಬ್ ವರ್ಗೀಸ್
ನಟನೆ: ಶ್ರೀನಗರ ಕಿಟ್ಟಿ, ಶ್ರುತಿ ಹರಿಹರನ್ 



ನಿನ್ನ ದನಿಗಾಗಿ ನಿನ್ನ ಕರೆಗಾಗಿ
ನಿನ್ನ ಸಲುವಾಗಿ ಕಾಯುವೆ
ತೀರ ಬಳಿ ಬಂದ ನೀನು ನನಗೊಂದು
ಸೋಜಿಗದಂತೆ ಕಾಣುವೆ.


ಒಂಟಿ ಇರುವಾಗ ಕುಂಟು ನೆಪ ತೋರಿ
ಬಂದ ಕನಸೆಲ್ಲ ನಿನ್ನದು
ನಾನೆ ಅನುರಾಗಿ ನೀನು ನನಗಾಗಿ
ಎನ್ನುವ ಭಾವನೆ ನನ್ನದು


ಕಣ್ಣಿನಲ್ಲೇನೆ ಹೊಮ್ಮಿದೆ ಕೋಮಲ ಕೋರಿಕೆ
ಮುತ್ತಿನ ಅಂಕಿತ ಬೇಕಲ್ಲ ಒಪ್ಪಂದಕೆ
||ನಿನ್ನ ದನಿಗಾಗಿ||


ಹೆದರುತ ಅರಳಿವೆ ನಾನಾ ಹಂಬಲ
ನಿನ್ನನ್ನೇ ತಲುಪಲು ಮನಸಲಿ ಸವಿಗನಸಿನ
ಸಾಲೇ ನಿಂತಿದೆ ಅಂಗಡಿ ತೆರೆಯಲು
ಎಲ್ಲೇ ನಾ ಹೋದರೂ ಗಮನ ಇಲ್ಲೇ ಇದೆ
ಸನಿಹವೇ ನೀ ಬೇಕೆನ್ನುವ ಹಠವೂ ಹೆಚ್ಚಾಗಿದೆ
ಈಗ ಚಂದ್ರನ ಒಪ್ಪಿಗೆ ಬೇಕೆನಿಸಿದಾಗ ಸಲ್ಲಾಪಕೆ.


ನೆನಪಿನ ಬೀದಿಯ ಎಲ್ಲಾ ಗೋಡೆಗೂ
ನಿನ್ನದೇ ಮೊಗವಿದೆ
ಸಲಿಗೆಯಿಂದ ತಕರಾರಿನ ಸಣ್ಣ ಕೋಪಕೂ
ಬೇರೆಯೇ ಸುಖವಿದೆ
ಇನ್ನೂ ಇಂಪಾಗಿದೆ ಕರೆವ ನಿನ್ನ ಸ್ವರ
ಹೃದಯದಲಿ ಎಂದೆಂದಿಗೂ ಇರಲೀ ಹಸ್ತಾಕ್ಷರ
ಬೇಗ ಮೂಡಲಿ ಮತ್ಸರ ಈ ಭೂಮಿ ಆಕಾಶಕೆ.


*********************************************************************************

ಕೋಟಿಗೊಬ್ಬ (2001)


ಅಣ್ಣಯ್ಯ ತಮ್ಮಯ್ಯ

ಚಲನ ಚಿತ್ರ: ಕೋಟಿಗೊಬ್ಬ (2001)
ನಿರ್ದೇಶನ: ನಾಗಣ್ಣ 
ಸಂಗೀತ : ದೇವಾ 
ಸಾಹಿತ್ಯ : ಕೆ. ಕಲ್ಯಾಣ್ 
ಗಾಯನ : ಎಸ್.ಪಿ. ಬಾಲಸುಬ್ರಹ್ಮಣ್ಯಂ 
ನಟನೆ: ವಿಷ್ಣುವರ್ಧನ್, ಪ್ರಿಯಾಂಕಾ, ಅಭಿಜಿತ್ 


ಓಂ ಶ್ರೀ ನಂಜುಂಡೇಶ್ವವರಾಯ ನಮಃ
ಓಂ ಶ್ರೀ ನಂಜುಂಡೇಶ್ವವರಾಯ ನಮಃ
ಓಂ ಶ್ರೀ ನಂಜುಂಡೇಶ್ವವರಾಯ ನಮಃ
ಅಹ್.. ಅಣ್ಣಯ್ಯ ತಮ್ಮಯ್ಯ ನಂಜುಂಡೇಶ್ವರ ನಾನಯ್ಯಾ 
ಕನ್ನಡ ಕುಲಕೆ ನಾನೆಂದು ಸ್ವಂತ ಕಣಯ್ಯಾ 
ಅಣ್ಣಯ್ಯ ತಮ್ಮಯ್ಯ ನಂಜುಂಡೇಶ್ವರ ನಾನಯ್ಯಾ 
ಕನ್ನಡ ಕುಲಕೆ ನಾನೆಂದು ಸ್ವಂತ ಕಣಯ್ಯಾ 
ಜಗಕೆ ಶಿವನು ಒಬ್ಬ ...  ಇವನು ಕೋಟಿಗೊಬ್ಬ 
ಜಗಕೆ ಶಿವನು ಒಬ್ಬ ...  ನಿಮ್ಮಲ್ಲಿ ನಾನು ಒಬ್ಬ 
ಉಪ್ಪು ತಿಂದ ಮನೆಗೆ ನನ್ನ ವಂದನೆ, 
ಆದರೆ ತಪ್ಪು ಮಾಡಿದವಗೆ ಕೊಡುವೆ ದಂಡನೇ .. ಆಆಆ 
ಅಣ್ಣಯ್ಯ ತಮ್ಮಯ್ಯ ನಂಜುಂಡೇಶ್ವರ ನಾನಯ್ಯಾ 
ಕನ್ನಡ ಕುಲಕೆ ನಾನೆಂದು ಸ್ವಂತ ಕಣಯ್ಯಾ 
ಈ ಕಂಗಳು ಕಾಪಾಡೋ ರೆಪ್ಪೆಗಳು ನೀನೆ 
ಈ ತೋಳಗಳಿಗೆ ಬಾಳ ಕೊಡುವ ರೆಕ್ಕೆಗಳು ನೀನೆ... 
ನನ್ನೆದೆಯಾ ಗುಂಡಿಗೆಯ ಗಟ್ಟಿತನ ನೀನೇ 
ನಾನಾಡೋ ನುಡಿಗಳಲ್ಲಿ ದಿಟ್ಟತನ ನೀನೆ... 
ಒಹ್..ಒಹ್...   ಒಹ್..ಒಹ್... ಒಹ್..ಒಹ್... ಆಅಅ 
ಉಸಿರಾಡುವ ನನ್ನುಸಿರ ಏರಿಳಿತ ನೀನೆ 
ಹಸುಗೂಸಿನ ಈ ಹೃದಯದ ಎದೆಬಡಿತ ನೀನೆ...ಆಆಆ 
ನೆನೆಯೋ ಪ್ರತಿ ಗುರಿಯನು ನಡೆಸೋನು ನೀನೆ.. 
ಈ ಜೀವದ ಜೊತೆ ಪ್ರತಿ ಹೆಜ್ಜೆ ನಡಿಯೋನು ನೀ.... ನೆ  
ಓಂ ಶ್ರೀ ನಂಜುಂಡೇಶ್ವವರಾಯ ನಮಃ 
ಓಂ ಶ್ರೀ ನಂಜುಂಡೇಶ್ವವರಾಯ ನಮಃ 
ನೆನ್ನೆ ದುಡಿದರೆ ನಾಳೆ ನಿನ್ನದು, ನಿನ್ನೆ ಮರೆತರೆ ನೇರಳೆ ಸಿಕ್ಕದು
ನನಗೂ ನಿನಗೂ ಅರಿಯೋ ರಕ್ತ ಒಂದೇ ಕಣಯ್ಯಾ
ಇಲ್ಲಿ ನನಗೆ ನೀನೆ ನಿನಗೆ ನಾನೇ ಪ್ರಾಣಾ ಕಾಯೋ ಗೆಳೆಯಾ..ಅಹ್..
ಅಣ್ಣಯ್ಯ ತಮ್ಮಯ್ಯ ನಂಜುಂಡೇಶ್ವರ ನಾನಯ್ಯಾ 
ಕನ್ನಡ ಕುಲಕೆ ನಾನೆಂದು ಸ್ವಂತ ಕಣಯ್ಯಾ 
ತಾರತ ತತ್ತರ ತರತ್ತ ತತ್ತರ ತಾರತರತರ ತಾರತ ತತ್ತರ ತರತ್ತ ತತ್ತರ 
 ಅಮ್ಮ ಎಂಬ ನಿಜ ದೈವ ಇರುವಾಗ ಇಲ್ಲಿ
ನೀ ಗುಡಿ ಗೋಪುರ ಗಿರಿ ಶಿಖರ ಅಲೆಯೋದ್ಯಾಕಲ್ಲಿ
ಹೆತ್ತೊಳ ಕಾಲದಡಿಯೇ ಪ್ರತಿ ದೇವರು ಉಂಟು
ಕೈ ಮುಗಿದು ತಲೆ ಬಾಗು ಸ್ವರ್ಗ ನಿನಗುಂಟೂ
ಒಹ್...ಒಹ್... ಒಹ್..ಒಹ್..ಒಹ್..
ಈ ಮುಖವಾಡ ಕಳಚಿಟ್ಟು ಬದುಕೋದೇ ಧರ್ಮ
ಅಧಿಕಾರ ಧನ ಧಾಹವ ಮರಿಯೋದೆ ಧರ್ಮ
ಹಣವಿದ್ದರೇ ನೀ ಕೊಂಚ ಹಂಚೋದೆ ಧರ್ಮಾ
ನೀ ಮಗನಾದರೇ ನಿನ್ನ ತಾಯಿಯ ಕಾಯೋದೇ ಧರ್ಮಾ
ಓಂ ಶ್ರೀ ನಂಜುಂಡೇಶ್ವವರಾಯ ನಮಃ 
ಓಂ ಶ್ರೀ ನಂಜುಂಡೇಶ್ವವರಾಯ ನಮಃ 
ತನಗೆಂದು ಬದುಕೋನು ತವರಿಗೆ ಹತ್ತಿರ ಆಆಆ... 
ಪರರಿಗೆ ಬದುಕೋನು ದೇವರಿಗತ್ತೀರಾ.. 
ನನ್ನ ಬದುಕಿಗೆಂದು ಬಂದು ನೀನೆ ಕಣಯ್ಯಾ 

ಎಂದು ನನ್ನ ಜೀವ ಕಾಯ ದೈವ ನೀನೆ ನೀನೆ ಒಡೆಯಾ ಅಹ್... 
ಅಣ್ಣಯ್ಯ ತಮ್ಮಯ್ಯ ನಂಜುಂಡೇಶ್ವರ ನಾನಯ್ಯಾ 
ಕನ್ನಡ ಕುಲಕೆ ನಾನೆಂದು ಸ್ವಂತ ಕಣಯ್ಯಾ 
ಅಣ್ಣಯ್ಯ ತಮ್ಮಯ್ಯ ನಂಜುಂಡೇಶ್ವರ ನಾನಯ್ಯಾ 
ಕನ್ನಡ ಕುಲಕೆ ನಾನೆಂದು ಸ್ವಂತ ಕಣಯ್ಯಾ 
ಜಗಕೆ ಶಿವನು ಒಬ್ಬ ...  ನಿಮ್ಮಲ್ಲಿ ನಾನು ಒಬ್ಬ 
ಉಪ್ಪು ತಿಂದ ಮನೆಗೆ ನನ್ನ ವಂದನೆ, 
ಆದರೆ ತಪ್ಪು ಮಾಡಿದವಗೆ ಕೊಡುವೆ ದಂಡನೇ .. ಆಆಆ 
ತುತ್ತು ಅನ್ನ ಕೊಟ್ಟ ಕೈಗೆ ನಾನು ಕಂದನೂ 
ಅತ್ತು ನೊಂದವರಿಗೆ ಕೈಯ ನೀಡೋ ಗೆಳೆಯನು...ಉಉಉಉ   
ಅಣ್ಣಯ್ಯ ತಮ್ಮಯ್ಯ ನಂಜುಂಡೇಶ್ವರ ನಾನಯ್ಯಾ 
ಕನ್ನಡ ಕುಲಕೆ ನಾನೆಂದು ಸ್ವಂತ ಕಣಯ್ಯಾ 
ಅಣ್ಣಯ್ಯ ತಮ್ಮಯ್ಯ ನಂಜುಂಡೇಶ್ವರ ನಾನಯ್ಯಾ 
ಕನ್ನಡ ಕುಲಕೆ ನಾನೆಂದು ಸ್ವಂತ ಕಣಯ್ಯಾ

*********************************************************************************

ಕಾವೇರಿಗೆ ಕಾಲುಂಗುರ 

ಸಾಹಿತ್ಯ : ಕೆ.ಕಲ್ಯಾಣ 
ಗಾಯಕರು: ಎಸ್.ಪಿ. ಬಾಲಸುಬ್ರಹ್ಮಣ್ಯಂ, ಚಿತ್ರಾ 


ಕಾವೇರಿಗೆ ಕಾಲುಂಗುರ ತೊಡಿಸಿ 
ಕೊಡಚಾದ್ರಿಗೆ ಕೈ ಬಳೆ ಕೊಡಿಸಿ 
ಮಲೆನಾಡಿಗೆ ಮಲ್ಲೆಯನು ಮುಡಿಸಿ
ಪ್ರೀತಿಸುವೆನು ಈ ಜೀವ ಬೆರೆಸಿ 
ಓ ಕನ್ನಡದ ಹೆಣ್ಣೇ .... ನಿನಗೆ ಕೋಟಿ ನಮನ... 
ನಮ್ಮ ಪ್ರೀತಿಗೆರಡೇ ಅಕ್ಷರ ಅದರಾಳ ಗೌರಿಶಂಕರ 
ಕಾವೇರಿಗೆ ಕಾಲುಂಗುರ ತೊಡಿಸಿ 
ಕೊಡಚಾದ್ರಿಗೆ ಕೈ ಬಳೆ ಕೊಡಿಸಿ ||ಪ|

ಜಾರೋ ಜಾರೋ ಜಾರೋ ಜೋಗದ ಜಡೆಯಲಿ ಜಾರಲೆ 
ಚಿನ್ನಾ ನಿನ್ನ ಕಣ್ಣ ಕೊಡಗಿನ ಕೊಡೆಯಲಿ ಕೂರಲೆ 
ನೀನು ನಿಂತಾಗ ಬೇಲೂರಿನಾ ಬೊಂಬೆಯು 
ಮೆಲ್ಲ ನಡೆವಾಗ ಮೈ ನೆನೆದ ಆಗುಂಬೆಯು 
ನಿನ್ನ ಬಣ್ಣಾನೆ ಬಾದಾಮಿ ಚಿತ್ರಾವಳಿ 
ನಿನ್ನ ಕಣ್ಣೋಟ ಕಣ್ಸೆಳೆಯೋ ಕರಾವಳಿ 
ಪ್ರತಿ ಜನ್ಮ ಪ್ರೀತಿಗಾಗಿ ಹುಟ್ಟಿ ಬರುವೆ ನನ್ನವಳನಾಗಿ 
ಪ್ರತಿ ಜನ್ಮ ಆಸರೆಯಾಗಿ ಹುಟ್ಟಿ ಬರುವೆ ಹಾಯಾಗಿ 
ಓ ಕನ್ನಡದ ಹೆಣ್ಣೇ ನಿನಗೆ ಕೋಟಿ ನಮನ 
ನಮ್ಮ ಪ್ರೀತಿಗೆರಡೇ ಅಕ್ಷರ ಅದರಾಳ ಗೌರಿಶಂಕರ ||೨||

ಕಾವೇರಿಗೆ ಕಾಲುಂಗುರ ತೊಡಿಸಿ 
ಕೊಡಚಾದ್ರಿಗೆ ಕೈ ಬಳೆ ಕೊಡಿಸಿ

ನಿನ್ನ ಆಸೆ ಅನ್ನೋ ರಂಗನಾತಿಟ್ಟು ಹಕ್ಕಿನಾ... 
ನಿನ್ನ ಅಂದ ಅನ್ನೋ ನಾಗರ ಹೊಳೆಯಲಿ ಕವಿತೆ ನಾ 
ನಿನ್ನ ಸ್ಪರ್ಶಾನೇ ಸಹ್ಯಾದ್ರಿ ತಂಗಾಳಿಯೊ 
ನಿನ್ನ ನಗುವೆಲ್ಲಾ ನರ್ತಿಸುವಾ ಕಾರಂಜಿಯೋ 
ನಿನ್ನ ಹೃದಯಾನೆ ಪ್ರತಿಧ್ವನಿಯೊ ಆ ಗುಮ್ಮಟ 
ನಿನ್ನ ಮನಸೊಂದು ಕರುನಾಡಿನ ಭೂಪಟ 
ಪ್ರತಿ ಜನ್ಮ ಪ್ರೀತಿಗಾಗಿ ಹುಟ್ಟಿ ಬರುವೆ ನಿನ್ನವನಾಗಿ 
ಪ್ರತಿ ಜನ್ಮ ಆಸರೆಗಾಗಿ ಹುಟ್ಟಿ ಬರುವೆ ಹಾಯಾಗಿ 
ಓ ಕನ್ನಡದ ಹೆಣ್ಣೇ .... ನಿನಗೆ ಕೋಟಿ ನಮನ... 
ನಮ್ಮ ಪ್ರೀತಿಗೆರಡೇ ಅಕ್ಷರ ಅದರಾಳ ಗೌರಿಶಂಕರ

ಕಾವೇರಿಗೆ ಕಾಲುಂಗುರ ತೊಡಿಸಿ 
ಕೊಡಚಾದ್ರಿಗೆ ಕೈ ಬಳೆ ಕೊಡಿಸಿ 

*********************************************************************************

ಸಾಹಸಸಿಂಹ 

ಸಾಹಿತ್ಯ : ಕೆ. ಕಲ್ಯಾಣ್ 
ಗಾಯಕರು: ಎಸ್.ಪಿ. ಬಾಲಸುಬ್ರಹ್ಮಣ್ಯಂ 


ಸಾಹಸ ಸಿಂಹ ಸಾಹಸ ಸಿಂಹ
ಸಾಹಸ ಸಿಂಹ ಸಾಹಸ ಸಿಂಹ 
ಹೇ.. ಸಾಹಸ ಸಿಂಹ ಸಾಹಸ ಸಿಂಹ

ಮೆಟ್ಟಿ ಬರುವ ಜೋರು ನೋಡು
ದಿಟ್ಟ ವೀರ ಪಡೆಯ ನೋಡು 
ದಂಡು ದಾಳಿಯ ನಡುವೆ ಕೂಡಾ
ಗಂಡು ಗಂಡುಗಲಿಯ ಬೀರುಸು ನೋಡು 
ದಂಗೆ  ಎದ್ದು ದಂಗು ಬಡಿಸೋ
ಬೆಂಕಿ ಚೆಂಡಿನಾಟ ನೋಡು 
ರಕ್ತದಲ್ಲಿ ಬೆವರು ಸುರಿಸಿ ಕೋಟೆ
ಕಟ್ಟೋ ದೊರೆಯ ನೋಡಯ್ಯಾ...ಆಹ್
ಇವನಿದ್ದ ಕಡೆಯಲೆಲ್ಲಾ ಘೋರ ಸಿಂಹ ಘರ್ಜನೆ
ಅದು ಯಾರು ಬಂದರು ಕೊನೆ ಯಾಗದ ಸಿಂಹ ಘರ್ಜನೆ

ಹೇ.. ಸಾಹಸ ಸಿಂಹ ಸಾಹಸ ಸಿಂಹ

ಜಯದ ದಳಪತಿಯ ನೋಡು
ಮುಂಬೈ ಅಧಿಪತಿಯ ನೋಡು ಗುಡ್ಡದಷ್ಟು
ದುಡ್ಡು ನೋಡು ಲೆಕ್ಕ ಸಿಗದ ಹಡಗು ನೋಡು
ಮುಗಿಲ ಮುಟ್ಟೋ ಕಟ್ಟಡವೆಲ್ಲಾ
ಮುಳುಗಿ ಬೀಳುವ ಪರಿಯ ನೋಡು
ಗರಿಗರಿಯ ನೋಟಿನೊಳಗೂ ಸಿಂಹದ ಗುರುತು
ಇವನೇ ನೋಡಯ್ಯಾ ಇವನೆದೆಯಾ
ರೋಮ ರೋಮವೆಲ್ಲಾ ಸಿಡಿಲ ಕಿಡಿಗಳು
ಇವನ ಎಲ್ಲ ಗುರಿಯು ಈಡೇರಿಸಲು
ಎರಡೇ ಕ್ಷಣಗಳು ಓಓಓಓಓಓಓ ...
ನಂಜುಂಡನಿವನು ಪಾಡು ನೋಡು
ನಂಜು ಕುಡಿದು ನಗುವ ನೋಡು
ಎಳೆಯ ಮಗುವ ಮನಸು ನೋಡು
ಉಕ್ಕಿ ಸುರಿವ ರಕ್ತದಲ್ಲೂ ಉಕ್ಕಿ
ಹರಿವ ಒಲುಮೆ ನೋಡು
ಚಿಂದಿ ಚಿಂದಿ ಹರಿದರನೂ ಗಾಂಧಿ
ಎಂಥ ಸಹನೆ ನೋಡು
ತನ್ನವರಿಗೆ ತನ್ನ ತನವ ಕೊಂದು
ಕೊಂಡ ಧೈವ ನೋಡಯಾ
ಈ ಕತ್ತಿ ಮೇಲೆ ನಡೆವ ಬದುಕ ತಂದವನ ಯಾರಯ್ಯಾ
ಇವನ ನೆತ್ತಿ ಮೇಲೆ ಬರೆದ ಬರಹ
ಅಳಿಸೋದು ಯಾರಯ್ಯಾ ... ಆಆಆಅ...

ಹೇ.. ಸಾಹಸ ಸಿಂಹ ಸಾಹಸ ಸಿಂಹ
ಸಾಹಸ ಸಿಂಹ ಸಾಹಸ ಸಿಂಹ

ಸ್ನೇಹ ಜೀವಿ ಸ್ನೇಹ ಜೀವಿ
ಸ್ನೇಹ ಸ್ನೇಹಕೆಂದು ಸೋಲುತ್ತಾನೆ
ಸ್ನೇಹದಿಂದ ಗೆಲ್ಲುತ್ತಾನೆ ಪ್ರೀತಿಗೆ ನೀರ
ಆಗುತ್ತಾನೆ ಪ್ರೀತಿಗೆ ತಲೆ ಬಗ್ಗುತ್ತಾನೆ
ಕೊಟ್ಟ ಮಾತು ಉಳಿಸಲೆಂದು
ಪೆಟ್ಟು ತಿಂದು ಬದುಕುತ್ತಾನೆ
ನೀನೆ ಜೀವ ಎಂದರೆ ಸಾಕು
ಜೀವ ಕೊಟ್ಟು ಕಾಯುತ್ತಾನಯ್ಯಾ
ಇವನ ಮೇಲ ನೋಟದಲಿ ಕಾಣೋ ಸಿಂಹ ಘರ್ಜನೆ
ಆಹ್ಹ್ ... ಕಾಮಧೇನು ಕರೆಯ ಹಾಗೆ
ಸ್ನೇಹ ಪ್ರಾರ್ಥನೆ ಹಾಆಹಾಆ ಓಹ್ಹ್ 

*********************************************************************************

ವರ್ಧನ ವಿಷ್ಣುವರ್ಧನ 

ಸಾಹಿತ್ಯ: ಕೆ. ಕಲ್ಯಾಣ್ 
ಗಾಯಕರು: ಎಸ್.ಪಿ. ಬಾಲಸುಬ್ರಹ್ಮಣ್ಯಂ, ಚಿತ್ರಾ 


ವರ್ಧನ ವಿಷ್ಣುವರ್ಧನಾ
ಯಜಮಾನ ನಂಗೆ ವಿಷ್ಣುವರ್ಧನಾ
ವರ್ಧನ ವಿಷ್ಣುವರ್ಧನಾ...
ನಂಗೆ ಕೋಟಿಗೊಬ್ಬ ವಿಷ್ಣುವರ್ಧನಾ
ಕಣ್ಣಲೇ ಹುಡುಗಿ ಎದೆಗೆ
ಬುಗುರಿ ಬಿಟ್ಟ ಈ ಕರ್ಣ
ಮುಟ್ಟದೇ ನನ್ನ ಒಳಗೆ
ಇಳಿದು ಬಿಟ್ಟ ಈ ಮದನ
ನಡೆಯುವ ಭಂಗಿ ನೋಡಿ
ಪುಂಗಿ ಕಂಡ ಹಾವದೇನ
ಭಾರತೀ.. ವಾ ವಾ ವಾ ವಾ ವ
ಭಾರತಿ ಮುದ್ದು ಭಾರತಿ
ಯಜಮಾನಂತಿ ನಂಗೆ ನೀನೇ ಭಾರತಿ

ನಕ್ಕುನಕ್ಕು ನಾದಿನಿಯ ನಡು
ಉಳುಕಿತು ಗುಡು ಗುಡುಗಿತು
ಏನೇ ಅದರ ಗುಟ್ಟು ತಿಳಿಸೇ
ಮನಸು ಕೊಟ್ಟು.. ಆಹಾ ಆಹಾ ಆಹಾ 
ಓ.. ಬಿಡು ಬಿಡು ಬಿಡುವಿಲ್ಲನಂಗೆ ಬೇಕಿಲ್ಲನಂಗೆ 
ಆದರೂ ನಿಂಗೆ ಹೇಳ್ತಿನೊಂದು ಗುಟ್ಟು ಮೊದಲು ಬಾಜಿ ಕಟ್ಟು 
ಪ್ರೀತಿಗೆ ಯಾಕೆ ಬೇಕು ಬಾಜಿ..
ಆಹಾ ರಾಜಿನಾ ಮಾಡ್ಕೊಳಾಣ ರಾಜೀ..
ಓ… ತುಂಟಾಟ ಇದ್ದರೆ ತಾನೆ ಯೌವನ

ವರ್ಧನ ವಿಷ್ಣುವರ್ಧನಾ.. (ಒಯ್ ಒಯ್..
ಯಜಮಾನ ನಂಗೆ ವಿಷ್ಣುವರ್ಧನಾ.ಆ ಆ.. ಥ್ಯಾಂಕ್ಯೂ

ವ್ಹಾರೆ.. ವ್ಹಾರೆ ಮಾವ ನಿನ್ನ ಮಾತು
ಮೆಚ್ಚಿಕೊಂಡು ಬುತ್ತಿ ಕಟ್ಟಿಕೊಂಡು 
ಊರಾ ಹೊರಗೆ ಹೊಂಟೆ ಆದ್ರೂ  ನಿನದು ತಂಟೆ 
ಓಹೊಯ್ ಓಯ್ ಹೊಯ್ ಹೇ.. ಮಳ್ಳಿ ಮೊರೆ ತಿವಿದು 
ಊರು ಸುತ್ತಿ ಬಾರೆ ಹತ್ತಿ ಜಾರಿ ಬೀಳ್ತಾ ಇದ್ದೆ
ಅದಕೆ ಹಿಡಿಯಾಕ್ ಹೊಂಟೆ 
ಮಾತಲ್ಲಿ ಕುಣಿಸಿಬಿಟ್ಟ ಪ್ರಾಯ ಮುಟ್ಟಿದ
ಕೂಡಲೇ ಮನಸು ಮಾಯಾ 
ಓಯ್ ಮುದ್ದಾಟ ಇದ್ರೆ ತಾನೇ ಸಂತಸ

ಭಾರತೀ.. ವಾ ವಾ ವಾ ವಾ ವ
ಭಾರತಿ ಮುದ್ದು ಭಾರತಿ
ಯಜಮಾನಂತಿ ನಂಗೆ ನೀನೇ ಭಾರತಿ
ವರ್ಧನ ವಿಷ್ಣುವರ್ಧನಾ...
ನಂಗೆ ಕೋಟಿಗೊಬ್ಬ ವಿಷ್ಣುವರ್ಧನಾ
ಯೋಯ್.. ಎದೆಯಲಿ ಝಳಕು
ಝಳಕು  ಹೊಡಿತು ಯಾಕೆ ಅಂತ 
ಕಣ್ಣು ಕುಕ್ಕಿತಪ್ಪ ನಿನ್ನ ವಯ್ಯಾರದ ಶರವಾತಿ
ಆಗಲೇ ಅಂದುಕೊಂಡೆ ನಾನು ನೀನೆ ಸತಿಪತಿ 

*********************************************************************************

ಆ ದಿನಗಳು (2007)



ಚಲನ ಚಿತ್ರ: ಆ ದಿನಗಳು (2007)
ನಿರ್ದೇಶನ: ಕೆ. ಎಂ. ಚೈತನ್ಯ 
ಸಂಗೀತ: ಇಳಯರಾಜ 
ಸಾಹಿತ್ಯ: ಕೆ.  ಕಲ್ಯಾಣ್ 
ಗಾಯಕರು: ಇಳಯರಾಜ, ನಂದಿತಾ
ನಟನೆ: ಚೇತನ್, ಅರ್ಚನಾ, ಶರತ್ ಲೋಹಿತಾಶ್ವ, 
ಅತುಲ್ ಕುಲಕರ್ಣಿ, ಆಶಿಶ್ ವಿದ್ಯಾರ್ಥಿ, ಗಿರೀಶ್ ಕಾರ್ನಾಡ್ 


ಸಿಹಿಗಾಳಿ ಸಿಹಿಗಾಳಿ ಸಹಿ ಹಾಕಿದೆ ಮನಸಿನಲಿ
ಬರಿಮಾತು ಬರಿಮಾತು ಇನ್ಯಾಕೆ ಪ್ರೀತಿಯಲಿ
ಸಿಹಿಗಾಳಿ ಸಿಹಿಗಾಳಿ ಸಹಿ ಹಾಕಿದೆ ಮನಸಿನಲಿ
ಬರಿಮಾತು ಬರಿಮಾತು ಇನ್ಯಾಕೆ ಪ್ರೀತಿಯಲಿ
ನೋಟವೊಂದೆ ಸಾಕು, ದಿನವು ಬೆರೆಯಲೇ ಬೇಕು
ಪ್ರೇಮ ಅಮೃತದ ಗೀತೆ, ಬರೆಯೋಣ ಬಾ...

ಸಿಹಿಗಾಳಿ ಸಿಹಿಗಾಳಿ ಸಹಿ ಹಾಕಿದೆ ಮನಸಿನಲಿ
ಬರಿಮಾತು ಬರಿಮಾತು ಇನ್ಯಾಕೆ ಪ್ರೀತಿಯಲಿ

ಬಾನಾಡಿಗೊಂದು ಸವಿಮಾತು ಕಲಿಸುವ
ಆ ವೀಣೆಗೊಂದು ಎದೆರಾಗ ತಿಳಿಸುವ
ನದಿಗಳಿಗೆ ಅಲೆಗಳಿಗೆ ಕುಣಿವ ಮನಸು ಕೊಡುವ
ಅರಳುತಿರೋ ಹೂಗಳಿಗೆ ಒಲವ ಸುಧೆಯ ಕೊಡುವ
ಬಾಳಿನ ಅರ್ಥವೇ ಪ್ರೇಮವೆಂಬುದಲ್ಲವೇ
ಪ್ರೇಮವೇ ಇಲ್ಲದೆ ನಾನು ನೀನು ಯಾಕೆ....

ಸಿಹಿಗಾಳಿ ಸಿಹಿಗಾಳಿ ಸಹಿ ಹಾಕಿದೆ ಮನಸಿನಲಿ
ಬರಿಮಾತು ಬರಿಮಾತು ಇನ್ಯಾಕೆ ಪ್ರೀತಿಯಲಿ
ನೋಟವೊಂದೆ ಸಾಕು, ದಿನವು ಬೆರೆಯಲೇ ಬೇಕು
ಪ್ರೇಮ ಅಮೃತದ ಗೀತೆ, ಬರೆಯೋಣ ಬಾ...

ಸಿಹಿಗಾಳಿ ಸಿಹಿಗಾಳಿ ಸಹಿ ಹಾಕಿದೆ ಮನಸಿನಲಿ
ಬರಿಮಾತು ಬರಿಮಾತು ಇನ್ಯಾಕೆ ಪ್ರೀತಿಯಲಿ

*********************************************************************************

ಆ ದಿನಗಳು ಪ್ರತಿ ಕ್ಷಣ

ಸಾಹಿತ್ಯ: ಡಿ. ಸುಮನಾ ಕಿತ್ತೂರ್ 
ಗಾಯಕರು: ವಿಜಯ್ ಯೇಸುದಾಸ್ 


ಆ ದಿನಗಳು ಪ್ರತಿ ಕ್ಷಣ ಹೃದಯದೊಳಗೆ
ಹಸಿರಾಗಿದೆ ಅದೇ ಇದೇ ನನ್ನ ಬಿಡದೆ
ಗಾಳಿಯಲ್ಲೂ ಪ್ರೇಮಗೀತೆ ಬರೆದ ಸಂದೇಶವೂ
ಬಳಸಿ ಬಂದು ಹೇಳಲಿಲ್ಲವೇ ನನ್ನ ಈ ಸ್ನೇಹವೋ
ಪ್ರೀತಿಯ ಈ ಹಾದಿಯ ಏಕೆ ಬಿಟ್ಟು ಹೋದೆ

ಆ ದಿನಗಳು ಪ್ರತಿ ಕ್ಷಣ ಹೃದಯದೊಳಗೆ
ಹಸಿರಾಗಿದೆ ಅದೇ ಇದೇ ನನ್ನ ಬಿಡದೆ

ದಿನ ದಿನ ಮುಖವನು ನೋಡಿ ಹೊಗಳುವ ಮಾತೆಲ್ಲಿ
ಮುನಿಯುತ ಜಗಳವ ಆಡಿ ನಟಿಸಿದ ನಗುವೆಲ್ಲಿ
ನನ್ನ ಕಲ್ಪನೆ ಎಲ್ಲೋ ನಿನ್ನ ಹುಡುಕಿ ಹೋಯ್ತು
ಆ ಶಿಲ್ಪದಲಿ ಕಂಡೂ ಮನಸು ಶಾಂತವಾಯಿತು
ನೀನೆಲ್ಲೋ ನಾನೆಲ್ಲೋ ಇನ್ನು ತಾಳೆ ವಿರಹನೋವಾ

ಆ ದಿನಗಳು ಪ್ರತಿ ಕ್ಷಣ ಹೃದಯದೊಳಗೆ
ಹಸಿರಾಗಿದೆ ಅದೇ ಇದೇ ನನ್ನ ಬಿಡದೆ



*********************************************************************************

ಕೆಂಡಸಂಪಿಗೆ (2015)


ಕನಸಲಿ ನಡೆಸು

ಚಲನ ಚಿತ್ರ:- ಕೆಂಡಸಂಪಿಗೆ (2015)
ನಿರ್ದೇಶನ: ಸೂರಿ 
ಸಂಗೀತ: ವಿ. ಹರಿಕೃಷ್ಣ 
ಸಾಹಿತ್ಯ: ಜಯಂತ್ ಕಾಯ್ಕಿಣಿ 
ಗಾಯಕರು: ಶ್ವೇತಾ ಮೋಹನ್ 
ನಟನೆ: ವಿಕ್ಕಿ ವರುಣ್, ಮಾನ್ವಿತಾ ಹರೀಶ್  


ಕನಸಲಿ ನಡೆಸು ಬಿಸಿಲಾದರೆ
ಒಲವನೆ ಬಡಿಸು ಹಸಿವಾದರೆ
ಜಗವಾ ಮರೆಸು ನಗುವ ಉಡಿಸು
ನಿ ನನ್ನ ಪ್ರೇಮಿ..ಯಾದರೆ
ಹೃದಯವು ಹೂವಿನ ಚಪ್ಪರ
ಅದರಲಿ ನಿನ್ನದೇ ಅಬ್ಬರ
ಕನಸಲಿ ನಡೆಸು ಬಿಸಿಲಾದರೆ
ಒಲವನೆ ಬಡಿಸು ಹಸಿವಾದರೆ

ಬೇಕಂತ ಸುಮ್ಮನೆ ಗುದ್ದಾಡುತ
ಕಣ್ಣಲ್ಲಿ ನಿನ್ನನು ಮುದ್ದಾಡುತ
ಆಗಾಗ ಮೂಖಳಾದೆ ಮಾತನಾಡುತ
ನಿನ್ನೆಲ್ಲ ನೋವು ಪ್ರೀತಿಯಿಂದ ಬಾಚಿಕೊಳ್ಳುವೆ
ಕಾಪಾಡು ಮಳ್ಳಿ ಯಾದರೆ
ಹೃದಯವು ಮಾಯದ ದರ್ಪಣ
ಅದರಲಿ ನಿನ್ನದೇ ನರ್ತನ
ಕನಸಲಿ ನಡೆಸು ಬಿಸಿಲಾದರೆ
ಒಲವನೆ ಬಡಿಸು ಹಸಿವಾದರೆ

ಆಕಾಶ ಬುಟ್ಟಿಯು ಕಣ್ಣಲ್ಲಿದೆ
ಅದೃಷ್ಟ ನಮ್ಮದೇ ಜೆಬಲ್ಲಿದೆ
ಸದ್ದಿಲ್ಲದಂತೆ ಊರು ಮಾಯವಾಗಿದೆ
ಒಂದಿಷ್ಟು ಆಸೆಯನ್ನು ಹಾಗೆ ಇಟ್ಟುಕೊಳ್ಳುವೆ
ತಪ್ಪೇನು  ಪ್ರೀತಿ ಆದರೆ
ಹೃದಯವು ಮುತ್ತಿನ ಜೋಳಿಗೆ
ಅದರಲಿ ನಿನ್ನದೇ ದೇಣಿಗೆ
ಕನಸಲಿ ನಡೆಸು ಬಿಸಿಲಾದರೆ
ಒಲವನೆ ಬಡಿಸು ಹಸಿವಾದರೆ

*********************************************************************************

ನೆನಪೇ ನಿತ್ಯ ಮಲ್ಲಿಗೆ

ಸಾಹಿತ್ಯ:- ಜಯಂತ್ ಕಾಯ್ಕಿಣಿ 
ಗಾಯಕರು:- ಕಾರ್ತೀಕ್ 


ನೆನಪೇ ನಿತ್ಯ ಮಲ್ಲಿಗೆ ಕನಸು ಕೆಂಡ ಸಂಪಿಗೆ
ಎಷ್ಟು ಚೆಂದ ಶಿಕ್ಷೆಯೊಂದು ಸಣ್ಣ ತಪ್ಪಿಗೆ
ಸರಸ ಪಾರಿಜಾತವು ವಿರಹ ಚೂಪು ಕೇದಿಗೆ
ಸದಾ ಹೂವು ಬಿಡುವ ಕಾಲ ನನ್ನ ಪ್ರೀತಿಗೆ
ನೆನಪೇ ನಿತ್ಯ ಮಲ್ಲಿಗೆ

ನಿನ್ನ ಕೆನ್ನೆಯಿಂದ ಬಂತೆ ಬಾನಿಗೆ ಕನಕಾಂಬರ
ಬಹಳ ಮುದ್ದು ನಿನ್ನ ಮಾತಿನಲ್ಲಿ ವಿಷಯಾಂತರ
ನಿನ್ನ ನಗುವು ಜೊಂಪೆ ಜೊಂಪೆ ನಂದ ಬಟ್ಟಲು
ಆಸೆ ನನಗೆ ಉಸಿರಿನಲ್ಲೇ ಮಾಲೆ ಕಟ್ಟಲು
ಎಷ್ಟು ಪಕಳೆಯುಂಟು ಹೇಳು  ಸೇವಂತಿಗೆ
ಅಷ್ಟೇ ಬಗೆಯ ಸೆಳೆತ ನನಗೆ ನಿನ್ನೊಂದಿಗೆ
ನೆನಪೇ ನಿತ್ಯ ಮಲ್ಲಿಗೆ

ಹಿಗ್ಗಿನಲ್ಲಿ ಅರಳಿ ನಿನ್ನ ಮುಖವೇ ದಾಸವಾಳವು
ಮತ್ತೆ ಮತ್ತೆ ಚಿಟ್ಟೆ ಹಾರಿ ಬಂದು ಮೊಸಹೊದವು
ಗುಟ್ಟು ಮಾಡುವಾಗ ನೀನು ದಿಟ್ಟ ಕಣಗಿಲೆ
ತೊಟ್ಟು ಜೆನಿಗಾಗಿ ನಿನ್ನ ಮುಂದೆ ಕುಣಿಯಲೇ
ಅಂಟಿಕೊಂಡ ದಿವ್ಯ ಗಂಧ ನೀನು ಸುರಗಿಯೇ
ನಿನ್ನ ಸ್ವಪ್ನ ಕಂಡೆ ನಿನ್ನ ಎದೆಗೆ ಒರಗಿಯೆ

ನೆನಪೇ ನಿತ್ಯ ಮಲ್ಲಿಗೆ ಕನಸು ಕೆಂಡ ಸಂಪಿಗೆ
ಎಷ್ಟು ಚೆಂದ ಶಿಕ್ಷೆಯೊಂದು ಸಣ್ಣ ತಪ್ಪಿಗೆ
ಸರಸ ಪಾರಿಜಾತವು ವಿರಹ ಚೂಪು ಕೇದಿಗೆ
ಸದಾ ಹೂವು ಬಿಡುವ ಕಾಲ ನನ್ನ ಪ್ರೀತಿಗೆ
ನೆನಪೇ ನಿತ್ಯ ಮಲ್ಲಿಗೆ

********************************************************************************

ಕೌರವ (1998)

.
ಚಲನ ಚಿತ್ರ: ಕೌರವ (1998) 
ಸಾಹಿತ್ಯ & ಸಂಗೀತ : ಹಂಸಲೇಖ 
ಗಾಯಕರು: ಬಿ. ಜಯಶ್ರೀ 
ನಿರ್ದೇಶನ: ಎಸ್. ಮಹೇಂದರ್ 
ನಟನೆ: ಬಿ.ಸಿ. ಪಾಟೀಲ್, ಪ್ರೇಮಾ 



ಅವಳ್ಯವಳು ನಕ್ಕು ವನವಾಸ ಪೊಕ್ಕೂ
ಕೌರವನ ಮಂಡಿ ಮೂರುದ್ಳಂತೆ
ಹೇ ಹೇ... ಹೇ...
ಅವಳ್ಯವಳು ಅತ್ತು, ಅಪವಾದ ಹೊತ್ತು
ರಾವಣನ ವಂಶ ತೋಳದ್ಳಂತೆ ಹೇ ಹೇ... ಹೇ
ಹೆಣ್ಣಿನಿಂದ ನಾಕ ಹೆಣ್ಣಿಂದ ನರಕ
ಅಂದೋನು ಯಾವನೋ ಜೋಗಯ್ಯ.
ಇದು ಏನು ಬಾಳುವೆ ಹೋಗಯ್ಯ
ಹೆಣ್ಣಿನಿಂದ ನಾಕ ಹೆಣ್ಣಿಂದ ನರಕ
ಅಂದೋನು ಯಾವನೋ ಜೋಗಯ್ಯ.
ಇದು ಏನು ಬಾಳುವೆ ಹೋಗಯ್ಯ
ಅವಳ್ಯವಳು ನಕ್ಕು ವನವಾಸ ಪೊಕ್ಕೂ
ಕೌರವನ ಮಂಡಿ ಮೂರುದ್ಳಂತೆ ಹೇ ಹೇ... ಹೇ...
ಅವಳ್ಯವಳು ಅತ್ತು ವನವಾಸ ಪೊಕ್ಕೂ
ಕೌರವನ ಮಂಡಿ ಮೂರುದ್ಳಂತೆ ಹೇ ಹೇ... ಹೇ...

ಉಂಗುರ ಮುರುದು ಉದುದಾರ ಹರದು
ಕಡಗ ಕಳೆದರು ತರಬೋದು
ಬೊಕ್ಕಸ ಬಳದು ಬಂಟರು ಅಳಿದು
ರಾಜ್ಯ ಕಳೆದರು ತರಬೋದು
ಜನುಮಕ್ಕೆ ಒಮ್ಮೆ ದಕ್ಕೋನಮ್ಮ
ಅಮ್ಮನ ಕಳೆದು ತರಬೋದೆ ಕಂದ
ಅಮ್ಮನಿಲ್ಲದೆ ಇರಬೋದೆ
ಅವನ್ನ್ಯಾವನು ಪುತ್ರ ಗುರುತಿದ್ರು ಹತ್ರ
ತಾಯಿಯ ತಲೆಯ ಕಡಿದ್ನಂತೆ ಹೇ ಹೇ.ಹೇ
ಮುನಿ ಮಗನ ಮೆಚ್ಚಿ ವರ ಬೇಡು ಅಂದ್ರೆ
ತಾಯಿಯ ತಾರೋ ಅಂದ್ನಂತೆ
 ತಾಯಿ ಇದ್ರೆ ನಾಕ ಇರದಿದ್ರೆ ಶೋಕ
ಅಂದಾನ್ಯವನೋ ಜೋಗಯ್ಯ
ಇದು ಬ್ರಹ್ಮ ಸತ್ಯವೋ ಕಂದಯ್ಯ

ಸಾವನ್ನ ಸೊಲ್ಸಿ ಪಾವಿತ್ರ್ಯಾ ಪಾಲ್ಸಿ
ಗಂಡನ್ನ ಪಡೆದವಳು ಒಂದು ಹೆಣ್ಣೇ
ಪಂಚಭೂತಗಳಂತಾ ಧರ್ಮ ಕಾಯುವಂತ
ವೀರರ ಕೊಟ್ಟೋಳು ಒಂದು ಹೆಣ್ಣೇ
ಶ್ರೀದೇವಿ ಹೆಣ್ಣೇ ಭೂದೇವಿ ಹೆಣ್ಣೇ
ವಿದ್ಯಾ ದೇವತೆ ಒಂದು ಹೆಣ್ಣೇ
ಬುದ್ದಿ ತಿದ್ದಿ ತೀಡೊಳು ಒಂದು ಹೆಣ್ಣೇ
ಇವರ್ಯಾರೋ ಉರು ಜಾಗ ಕಾಯೋಡ್ಯಾವ್ರು
ತಾಯಿಗೆ ಪರೀಕ್ಷೆ ಇಟ್ನಂತೆ
ಹೇ ಹೇ...
ತಾಯಿ ಸುಮ್ಕೆ ನಕ್ರು ದ್ಯವೃರಾದ್ರು ಮಕ್ಳು
ಎತ್ಕೊಂಡು ಎದೆ ಹಾಲು ಕೋಟ್ನಂಳಂತೆ
ಹೇ ಹೇ...

ಹೆಣ್ಣಿನಿಂದ ಸೃಷ್ಠಿ ಹೆಣ್ಣಿಂದ ವೃಷ್ಟಿ
ಅಂದೋನು ಯಾವನೋ ಜೋಗಯ್ಯ
ಇದು ಸುಳ್ಳುಪೊಳ್ಳಲ್ಲಾ ಕೇಳಯ್ಯ

*********************************************************************************

ಏನೈತೋ ಅಂತರಾಳದಾಗೆ

ಸಾಹಿತ್ಯ: ಹಂಸಲೇಖ 
ಗಾಯಕರು: ರಮೇಶ್ ಚಂದ್ರ 


ಏನೈತೋ ಅಂತರಾಳದಾಗೆ ಏನೈತೋ
ಅಂತರಾಳದಾಗೆ ಏನೈತೋ ಚಿಗುರೈತೋ,
ಮಾಗೈತೋ, ಅರಲೈತೋ, ಮುಂದುಡೈತೋ
ಪ್ರೀತಿ ರಸ ಬಳ್ಳಿ ಎಬೋದು ಎಲೈತೋ,
ಅಲ್ಲಿ ಬಳ ಮೊಗ್ಗು ಎಂದು ನಗತೈತೋ.
ಏನೈತೋ ಅಂತರಾಳದಾಗೆ ಏನಾಯಿತೋ.
ಏನೈತೋ ಅಂತರಾಳದಾಗೆ ಏನಾಯಿತೋ .

ಪ್ರೀತಿ ಅಂದ್ರೆ ಗೋಡೆಗೆ ಎಸೀಯೋ
ಚಂಡು ಅಂತಾರೆ ಪುಟಿಯೊ ಚಂಡು ಅಂತಾರೆ
ಪ್ರೀತಿ ಅಂದ್ರೆ ಕೂಸಿಗೆ ಕಲ್ಸೋ
ಮಾತು ಅಂತಾರೆ, ಮುತ್ತಿನಾ ಮಾತು ಅಂತಾರೆ
ಓಹ್ ಓ ಓ ಓ...
ಪ್ರೀತಿ ಅಂದ್ರೆ ಗಿರಿಗೋಳ್ ಮುಂದಿನ
ಕೊನಿಗೊಳ್ ಅಂತಾರೆ ಪ್ರತಿ ದೋನಿಗೋಲ್ ಅಂತಾರೆ
ದೀಪದಿಂದ ದೀಪಾ ಅಚ್ಚೋ
ಜ್ಯೋತಿ ಅಂತಾರೆ ಪ್ರೀತಿ ಜ್ಯೋತಿ ಅಂತಾರೆ
ನಾವು ಕೊಟ್ಟರೆ ತಾನು ಕೊಡುವೇನು ಹಾ ಹಾ ಹಾ
ನಾನು ಕೊಟ್ಟರೆ ತಾನು ಕೊಡುವೇನು ಅಂತದೆ ಮನಸಾರೆ

ಏನಾಯಿತೋ ಅಂತರಾಳದಾಗೆ ಏನಾಯಿತೋ
ಏನಾಯಿತೋ ಅಂತರಾಳದಾಗೆ ಏನಾಯಿತೋ

ಎಲ್ಲರೆಡೆಯಲ್ಲೂ ಇರ್ತಾದೇ ಪ್ರೇಮ ಪರಸಂಗ
ಒಂದು ಪ್ರೇಮ ಪರಸಂಗ
ಕುಗೊದೇನೆ ಹೋಗೋ ಮದುವೆಲಿ ಅಗೋ ಮುಖ ಬಂಗ
ಒಲ್ಲದ ಪ್ರೀತಿ ರಸ ಬಂಗ
ನಾವು ಹುಟ್ಟಿದ ಮ್ಯಾಲೆ ಸಾವು ಬಂದೆ ಬರುತೈತೆ
ಬ್ಯಾಡ ಅಂದ್ರೆ ನಗುತೈತೆ.
ಪ್ರೀತಿ ಹುಟ್ಟಿದ ಮ್ಯಾಲೆ ನಗುತ್ತಾ ಇರುತೈತೆ.
ಸಾಯು ವರೆಗೂ ಕಾಯ್ತೈತೆ
ದಕ್ಕದಿದ್ರು ಪ್ರೀತಿಸೋದೆ ಹ ಹ ಹ
ದಕ್ಕದಿದ್ರು ಪ್ರೀತಿಸೋದೆ ಪ್ರೀತಿಯ ಗುಣವಂತೆ

ಏನೈತೋ ಅಂತರಾಳದಾಗೆ ಏನಾಯಿತೋ
ಏನೈತೋ ಅಂತರಾಳದಾಗೆ ಏನಾಯಿತೋ
ಚಿಗುರೈತೋ, ಮಾಗೈತೋ, ಅರಲೈತೋ,
ಮುಂದುಡೈತೋ ಪ್ರೀತಿ ರಸ ಬಳ್ಳಿ ಎಬೋದು ಎಲೈತೋ,
ಅಲ್ಲಿ ಬಳ ಮೊಗ್ಗು ಎಂದು ನಗತೈತೋ.
ಏನೈತೋ ಅಂತರಾಳದಾಗೆ ಏನೈತೋ.
ಅಂತರಾಳದಾಗೆ ಏನೈತೋ.

********************************************************************************

ತವರಿನ ಸಿರಿ (2006)


ಚಲನ ಚಿತ್ರ: ತವರಿನ ಸಿರಿ (2006)
ಸಂಗೀತ: ಹಂಸಲೇಖ 
ನಿರ್ದೇಶನ: ಓಂ ಸಾಯಿ ಪ್ರಕಾಶ್ 
ಸಾಹಿತ್ಯ: ಹಂಸಲೇಖ 
ಗಾಯಕರು: ಎಸ್.ಪಿ. ಬಾಲಸುಬ್ರಹ್ಮಣ್ಯಂ, ನಂದಿತಾ 
ನಟನೆ: ಶಿವರಾಜ್ ಕುಮಾರ್, ಡೈಸಿ ಬೋಪಣ್ಣ, 


ಹಸಿದಾಗ ಅನ್ನ ದಣಿದಾಗ ನೀರು ಕೊಡದಿದ್ದ ಮೇಲೆ
ಏನ್ ಚಂದವೋ ಏನ್ ಚಂದವೋ
ಮನಸಿದ್ದು ಪ್ರೀತಿ ಕೈ ಇದ್ದು ದಾನ ಕೊಡದಿದ್ದ ಮೇಲೆ
ಏನ್ ಚಂದವೋ ಏನ್ ಚಂದವೋ
ಭೂಮಿ ತಾಯಿ ತಂದ ಬೆವರಿನ ಸಿರಿ
ಹಂಚಿಕೊಂಡು ತಿನ್ನದೇ ಇದ್ರೆ ಏನ್ ಚಂದವೋ

ಹಸಿದಾಗ ಅನ್ನ ದಣಿದಾಗ ನೀರು ಕೊಡದಿದ್ದ ಮೇಲೆ
ಏನ್ ಚಂದವೋ ಏನ್ ಚಂದವೋ
ಭೂಮಿ ತಾಯಿ ತಂದ ಬೆವರಿನ ಸಿರಿ
ಹಂಚಿಕೊಂಡು ತಿನ್ನದೇ ಇದ್ರೆ ಏನ್ ಚಂದವೋ
ಹಸಿದಾಗ ಅನ್ನ ದಣಿದಾಗ ನೀರು ಕೊಡದಿದ್ದ ಮೇಲೆ
ಏನ್ ಚಂದವೋ ಏನ್ ಚಂದವೋ

ಮೋಡ ಮುನಿದು ಚದುರಿದರೆ ಪೈರು ತೆನೆ ಇಲ್ಲಣ್ಣ
ಹೂವು ಮುನಿದು ಮುಚ್ಚಿದರೆ ಜೇನು ಗೂಡೇ ಇಲ್ಲಣ್ಣ
ತನ್ನೆಲ್ಲ ಕೆಚ್ಚಲು ಕರುವಿಗೆ ಅಂದರೆ
ಹಸುವಿನ ಹಾಲೇ ನಮಗಿಲ್ಲ ಹಸುವಿನ ಹಾಲೇ ನಮಗಿಲ್ಲ
ನೀಡೋ ಈ ನಿಯಮ ಪಾಲಿಸದಿದ್ದರೆ
ಏನ್ ಚಂದವೋ ಏನ್ ಚಂದವೋ
ಶಿವನು ಕೊಟ್ಟ ಆಸ್ತಿ ಭೂಮಿಯಾ ಸಿರಿ
ಅವನಾಸ್ತಿ ನನದೆನ್ನೋದು
ಏನ್ ಚಂದವೋ ಏನ್ ಚಂದವೋ

ಹಸಿದಾಗ ಅನ್ನ ದಣಿದಾಗ ನೀರು ಕೊಡದಿದ್ದ ಮೇಲೆ
ಏನ್ ಚಂದವೋ ಏನ್ ಚಂದವೋ

ದೇವರಿಗೆ ಕಾಯಾಗಿ ಗಂಟಲಿಗೆ ನೀರಾಗಿ
ಗುಡಿಸಲಿಗೆ ಸೂರಾಗಿ ಸೇತುವೆಗೆ ಹಾಸಾಗಿ
ಬದುಕೆಲ್ಲಾ ನೀಡುತ್ತಾ ಬಾನೆತ್ತರ ಬಾಳುತ್ತಾ
ಇರಬೇಕು ತೆಂಗಿನ ಮರದಂತೆ
ಇರಬೇಕು ತೆಂಗಿನ ಮರದಂತೆ
ನರನಾಗಿ ಮರೆತು ಕೀಳಾಗಿ ಹೋದರೆ
ಏನ್ ಚಂದವೋ ಏನ್ ಚಂದವೋ

ಮನಸಿದ್ದು ಪ್ರೀತಿ ಕೈ ಇದ್ದು ದಾನ ಕೊಡದಿದ್ದ ಮೇಲೆ
ಏನ್ ಚಂದವೋ ಏನ್ ಚಂದವೋ
ನಮ್ಮ ಅಣ್ಣನೇ ನಮ್ಮ ತವರಿನ ಸಿರಿ
ಈ ದೈವ ಇಲ್ಲದ ಊರು ಏನ್ ಚಂದವೋ

ಹಸಿದಾಗ ಅನ್ನ ದಣಿದಾಗ ನೀರು ಕೊಡದಿದ್ದ ಮೇಲೆ
ಏನ್ ಚಂದವೋ ಏನ್ ಚಂದವೋ

*********************************************************************************