Sunday, March 31, 2019

ಕೆಂಡಸಂಪಿಗೆ (2015)


ಕನಸಲಿ ನಡೆಸು

ಚಲನ ಚಿತ್ರ:- ಕೆಂಡಸಂಪಿಗೆ (2015)
ನಿರ್ದೇಶನ: ಸೂರಿ 
ಸಂಗೀತ: ವಿ. ಹರಿಕೃಷ್ಣ 
ಸಾಹಿತ್ಯ: ಜಯಂತ್ ಕಾಯ್ಕಿಣಿ 
ಗಾಯಕರು: ಶ್ವೇತಾ ಮೋಹನ್ 
ನಟನೆ: ವಿಕ್ಕಿ ವರುಣ್, ಮಾನ್ವಿತಾ ಹರೀಶ್  


ಕನಸಲಿ ನಡೆಸು ಬಿಸಿಲಾದರೆ
ಒಲವನೆ ಬಡಿಸು ಹಸಿವಾದರೆ
ಜಗವಾ ಮರೆಸು ನಗುವ ಉಡಿಸು
ನಿ ನನ್ನ ಪ್ರೇಮಿ..ಯಾದರೆ
ಹೃದಯವು ಹೂವಿನ ಚಪ್ಪರ
ಅದರಲಿ ನಿನ್ನದೇ ಅಬ್ಬರ
ಕನಸಲಿ ನಡೆಸು ಬಿಸಿಲಾದರೆ
ಒಲವನೆ ಬಡಿಸು ಹಸಿವಾದರೆ

ಬೇಕಂತ ಸುಮ್ಮನೆ ಗುದ್ದಾಡುತ
ಕಣ್ಣಲ್ಲಿ ನಿನ್ನನು ಮುದ್ದಾಡುತ
ಆಗಾಗ ಮೂಖಳಾದೆ ಮಾತನಾಡುತ
ನಿನ್ನೆಲ್ಲ ನೋವು ಪ್ರೀತಿಯಿಂದ ಬಾಚಿಕೊಳ್ಳುವೆ
ಕಾಪಾಡು ಮಳ್ಳಿ ಯಾದರೆ
ಹೃದಯವು ಮಾಯದ ದರ್ಪಣ
ಅದರಲಿ ನಿನ್ನದೇ ನರ್ತನ
ಕನಸಲಿ ನಡೆಸು ಬಿಸಿಲಾದರೆ
ಒಲವನೆ ಬಡಿಸು ಹಸಿವಾದರೆ

ಆಕಾಶ ಬುಟ್ಟಿಯು ಕಣ್ಣಲ್ಲಿದೆ
ಅದೃಷ್ಟ ನಮ್ಮದೇ ಜೆಬಲ್ಲಿದೆ
ಸದ್ದಿಲ್ಲದಂತೆ ಊರು ಮಾಯವಾಗಿದೆ
ಒಂದಿಷ್ಟು ಆಸೆಯನ್ನು ಹಾಗೆ ಇಟ್ಟುಕೊಳ್ಳುವೆ
ತಪ್ಪೇನು  ಪ್ರೀತಿ ಆದರೆ
ಹೃದಯವು ಮುತ್ತಿನ ಜೋಳಿಗೆ
ಅದರಲಿ ನಿನ್ನದೇ ದೇಣಿಗೆ
ಕನಸಲಿ ನಡೆಸು ಬಿಸಿಲಾದರೆ
ಒಲವನೆ ಬಡಿಸು ಹಸಿವಾದರೆ

*********************************************************************************

ನೆನಪೇ ನಿತ್ಯ ಮಲ್ಲಿಗೆ

ಸಾಹಿತ್ಯ:- ಜಯಂತ್ ಕಾಯ್ಕಿಣಿ 
ಗಾಯಕರು:- ಕಾರ್ತೀಕ್ 


ನೆನಪೇ ನಿತ್ಯ ಮಲ್ಲಿಗೆ ಕನಸು ಕೆಂಡ ಸಂಪಿಗೆ
ಎಷ್ಟು ಚೆಂದ ಶಿಕ್ಷೆಯೊಂದು ಸಣ್ಣ ತಪ್ಪಿಗೆ
ಸರಸ ಪಾರಿಜಾತವು ವಿರಹ ಚೂಪು ಕೇದಿಗೆ
ಸದಾ ಹೂವು ಬಿಡುವ ಕಾಲ ನನ್ನ ಪ್ರೀತಿಗೆ
ನೆನಪೇ ನಿತ್ಯ ಮಲ್ಲಿಗೆ

ನಿನ್ನ ಕೆನ್ನೆಯಿಂದ ಬಂತೆ ಬಾನಿಗೆ ಕನಕಾಂಬರ
ಬಹಳ ಮುದ್ದು ನಿನ್ನ ಮಾತಿನಲ್ಲಿ ವಿಷಯಾಂತರ
ನಿನ್ನ ನಗುವು ಜೊಂಪೆ ಜೊಂಪೆ ನಂದ ಬಟ್ಟಲು
ಆಸೆ ನನಗೆ ಉಸಿರಿನಲ್ಲೇ ಮಾಲೆ ಕಟ್ಟಲು
ಎಷ್ಟು ಪಕಳೆಯುಂಟು ಹೇಳು  ಸೇವಂತಿಗೆ
ಅಷ್ಟೇ ಬಗೆಯ ಸೆಳೆತ ನನಗೆ ನಿನ್ನೊಂದಿಗೆ
ನೆನಪೇ ನಿತ್ಯ ಮಲ್ಲಿಗೆ

ಹಿಗ್ಗಿನಲ್ಲಿ ಅರಳಿ ನಿನ್ನ ಮುಖವೇ ದಾಸವಾಳವು
ಮತ್ತೆ ಮತ್ತೆ ಚಿಟ್ಟೆ ಹಾರಿ ಬಂದು ಮೊಸಹೊದವು
ಗುಟ್ಟು ಮಾಡುವಾಗ ನೀನು ದಿಟ್ಟ ಕಣಗಿಲೆ
ತೊಟ್ಟು ಜೆನಿಗಾಗಿ ನಿನ್ನ ಮುಂದೆ ಕುಣಿಯಲೇ
ಅಂಟಿಕೊಂಡ ದಿವ್ಯ ಗಂಧ ನೀನು ಸುರಗಿಯೇ
ನಿನ್ನ ಸ್ವಪ್ನ ಕಂಡೆ ನಿನ್ನ ಎದೆಗೆ ಒರಗಿಯೆ

ನೆನಪೇ ನಿತ್ಯ ಮಲ್ಲಿಗೆ ಕನಸು ಕೆಂಡ ಸಂಪಿಗೆ
ಎಷ್ಟು ಚೆಂದ ಶಿಕ್ಷೆಯೊಂದು ಸಣ್ಣ ತಪ್ಪಿಗೆ
ಸರಸ ಪಾರಿಜಾತವು ವಿರಹ ಚೂಪು ಕೇದಿಗೆ
ಸದಾ ಹೂವು ಬಿಡುವ ಕಾಲ ನನ್ನ ಪ್ರೀತಿಗೆ
ನೆನಪೇ ನಿತ್ಯ ಮಲ್ಲಿಗೆ

********************************************************************************

No comments:

Post a Comment